ಹರಿಃ ಓಂ
ಶ್ರೀ ಗುರುಭ್ಯೋನಮಃ
ಶ್ರೀ ಗಣಪತಯೇ ನಮಃ
ಜಾತಕದಲ್ಲಿ ಧನಯೋಗ
*********************
ಮಾನವನ ಜೀವನವಿರುವುದು 'ಧರ್ಮಾರ್ಥ ಕಾಮ ಮೋಕ್ಷಾಯ' ಎಂಬ ಉಕ್ತಿಯ ಮೇಲೆ. ಅಂದರೆ ಚತುರ್ವಿಧ ಪುರುಷಾರ್ಥಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಈ ಪುರುಷಾರ್ಥಗಳಲ್ಲಿ ಪ್ರಧಾನವಾದುದು ಅರ್ಥ. ಉಳಿದ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಸಾಧನೆಗಳಿಗೆ ಹಣ ಸಂಪಾದನೆ ಮುಖ್ಯ ಪಾತ್ರ ವಹಿಸುತ್ತದೆ.
ಧನವಿಲ್ಲದೇ ಏನನ್ನೂ ಸಾಧಿಸಲಾಗುವುದಿಲ್ಲ. ಅವರವರ ಯೋಗ್ಯತೆಗೆ ಅನುಸಾರವಾಗಿ ಧನ ಸಂಪಾದನೆ ಆಗುತ್ತದೆ. ಆದ್ದರಿಂದ ಧನಾಗಮನ ಯೋಗವನ್ನು ಪ್ರತಿಯೊಬ್ಬರೂ ಜಾತಕ ಪರಿಶೀಲಿಸಿ ತಿಳಿಯಬಹುದು.
ಧನಭಾವ ಲಗ್ನದಿಂದ 2ನೇ ಮನೆ. ಇದು ಮುಖ್ಯ. ಧನಯೋಗವನ್ನು ತಿಳಿಯಲು ಇದರ ಜೊತೆಗೆ 5, 9, 10, 11ನೇ ಭಾವಗಳೂ ಪ್ರಧಾನವಾಗುತ್ತದೆ. ಈ ಭಾವಗಳಿಗೆ ಹೆಚ್ಚಿನ ಸಂಬಂಧ ಉಂಟಾದಲ್ಲಿ ಧನಪ್ರಾಪ್ತಿಯಾಗುವ ಸಂಭವವಿರುತ್ತದೆ.
ಈ ಧನಪ್ರಾಪ್ತಿಯ ಯೋಗಯೋಗಗಳನ್ನು ಪರಿಶೀಲಿಸಬೇಕಾದರೆ..
ಮೊದಲನೆಯದಾಗಿ...
1) ಭಾವ
2) ಭಾವಾಧಿಪತಿ
3) ಭಾವಾಧಿಪತಿ ಸ್ಥಿತ ಸ್ಥಾನ
4) ಭಾವಾಧಿಪತಿಯನ್ನು ದೃಷ್ಟಿಸುವ ಗ್ರಹ
5) ಯುತಿ
6) ಧನಕಾರಕ
7) ಧನಯೋಗ...
ಇವಿಷ್ಟನ್ನೂ ಪರಿಶೀಲಿಸಬೇಕಾಗುತ್ತದೆ.
★ 2ನೇ ಭಾವಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ .. ಏಕೆಂದರೆ 80% ರಿಸಲ್ಟ್ ಬಾವದಿಂದ ಸಿಗುತ್ತೆ.
★ ನಂತರ ಧನಕಾರಕ(ಗುರು) ವನ್ನು ನೋಡಬೇಕು, ಗುರು ಉತ್ತಮ ಸ್ಥಾನದಲ್ಲಿ ಸ್ಥಿತನಾಗಿದ್ರೆ ಒಳ್ಳೆಯ ಫಲ... ಇಲ್ಲದಿದ್ದರೆ ಫಲದಲ್ಲಿ ವ್ಯತ್ಯಾಸ.
★ ನಂತರ ಧನಭಾವ ಯಾವ ಸ್ವಭಾವ ಅನ್ನೋದನ್ನ ತಿಳಿಬೇಕು.
★ಧನಭಾವ ಚರರಾಶಿಯಾದರೆ.. ಒಮ್ಮೆಗೇ ಧಿಡೀರ್ ಹಣದ ಹರಿವು, ಉತ್ತಮ ಸಂಪಾದನೆ.
★ಧನಭಾವ ಸ್ಥಿರರಾಶಿಯದರೆ..ಜೀವನ ಪೂರ್ತಿ ನಿಶ್ಚಿತ ಹಣದ ಹರಿವು .
★ದ್ವಿಸ್ವಭಾವ ರಾಶಿಯಾದರೆ.. ಧನದ ಹರಿವಿನಲ್ಲಿ ಏರಿಳಿತವಿರುತ್ತದೆ.
★ ನಂತರ ಧನಸ್ಥಾನ ಅಥವಾ ಧನಾಧಿಪತಿ ಇರುವ ದಿಕ್ಕು.. ತತ್ವ.. ಇವುಗಳ ಆಧಾರದ ಮೇಲೆ ಧನದ ಮೂಲ ಯಾವುದರಿಂದ ಅನ್ನುವುದನ್ನು ತಿಳಿಯಬಹುದು.
★12 ಭಾವಗಳಿಂದಲೂ ಹಣದ ಹರಿವನ್ನು ತಿಳಿಯಬಹುದು. ಆದ್ರೆ 1, 2, 9, 10, 11 , 12 ನೇ ಭಾವಗಳು ಮುಖ್ಯ.
ದಾರಿದ್ರ್ಯಭಾವ.. 3, 6, 8, 12.
ಇಲ್ಲಿ ..ಧನ - ಹಾಗೂ ದಾರಿದ್ರ್ಯಭಾವಗಳೆರಡರಲ್ಲೂ 12ನೇ ಮನೆಯನ್ನು ಪರಿಗಣಿಸಬೇಕು.
★ 12ನೇ ಮನೆ ಧನಭಾವಗಳ ಜೊತೆ ಸಂಬಂಧ ಬಂದರೆ ಧನಭಾವ...
★ 12ನೇ ಮನೆ ದರಿದ್ರಭಾವಗಳ ಜೊತೆ ಸಂಬಂಧ ಬಂದರೆ ದರಿದ್ರಭಾವ.
( 12 ನೇ ಭಾವ ದೂರಪ್ರಯಾಣ - ವಿದೇಶಿಪ್ರಯಾಣವನ್ನು ಸೂಚಿಸುತ್ತೇ)
★ನಕ್ಷತ್ರ ಗಳೂ... ಎಷ್ಟು ಪ್ರಮಾಣದಲ್ಲಿ ಧನಲಾಭವಾಗುತ್ತೆ ಅನ್ನುವುದನ್ನು ತಿಳಿಸುತ್ತೆ, ಯಾವರೀತಿಯ ಧನಾಗಮ... ಶೀಘ್ರ, ಲಘು, ಚರ, ಸ್ಥಿರ ಫಲಗಳು ..ಯಾವ ಸಮಯದಲ್ಲಿ ಅನ್ನುವುದನ್ನು ನಕ್ಷತ್ರ ಗಳಿಂದಲೂ ತಿಯಬಹುದು.
★ಧನಭಾವಾಧಿಪತಿಗಳು ಕೆಲವೊಮ್ಮೆ ಎರಡು ರೀತಿಯಲ್ಲಿ ವರ್ತಿಸುತ್ತೆ
ಉತ್ಪತ್ತಿ ಇಲ್ಲ
ಉತ್ಪತ್ತಿ ನಿಲ್ಲುತ್ತಿಲ್ಲ..
★ ಧನಭಾವಾಧಿಪತಿಗಳು ದಾರಿದ್ರ್ಯ ಭಾವದಲ್ಲಿದ್ದರೆ. ಅಥವಾ ದಾರಿದ್ರ್ಯಭಾವಾಧಿಪತಿಗಳು ಧನಭಾವದಲ್ಲಿದ್ದರೆ, ಹಣದ ಹರಿವು ಇರೋಲ್ಲ.
★ ಧನಭಾವಾಧಿಪತಿಗಳ ಸಂಬಂಧ ಧನಭಾವದಲ್ಲೇ ಇದ್ದರೆ ಹಣದ ಉತ್ಪತ್ತಿ ಚೆನ್ನಾಗಿರುತ್ತೆ
ಭಾಗ್ಯಾಧಿಪತಿ 12ನೇ ಭಾವಕ್ಕೆ ಹೋಗಬಹುದು. ಆದರೆ 3, 6, 8 ಕ್ಕೆ ಹೋಗಬಾರದು.
★ದುಸ್ಥಾನಾಧಿಪತಿಗಳು ದುಸ್ಥಾನದಲ್ಲೇ ಇದ್ದರೂ ಸಹ ಧನಲಾಭವಿರುತ್ತೆ( ವಿಪರೀತ ರಾಜಯೋಗ).
ಗ್ರಹಗಳಿಂದ ಧನಲಾಭ :---
********************
★ ಶುಭ ಗ್ರಹಗಳಾದ ಗುರು, ಶುಕ್ರ, ಬುಧ, ಗ್ರಹಗಳು ಕೂಡಾ ಧನಲಾಭ ಅಥವಾ ಧನಗಳಿಕೆಯ ವಿಚಾರದಲ್ಲಿ ಮಹತ್ವದ ಪಾತ್ರ ನಿರ್ವಸುತ್ತದೆಯಾದರೂ ಚಂದ್ರ,ಕುಜ ಹಾಗೂ ಶನಿ ಗ್ರಹಗಳು ಜನ್ಮಕುಂಡಲಿಯ ಮೂಲಕ ಒಬ್ಬ ವ್ಯಕ್ತಿಯ ಜಾತಕದಲ್ಲಿ ನಿರ್ವಹಿಸುವ ಭೂಮಿಕೆಗೆ ಪ್ರತ್ಯೇಕವಾದದ್ದೊಂದು ತೂಕವೇ ಇದೆ. ರವಿ, ರಾಹು ಮತ್ತು ಕೇತುಗಳು ಕೂಡಾ ಆರ್ಥಿಕ ವಿಚಾರದಲ್ಲಿ ಸಕಾರಾತ್ಮಕವಾದ ಬಲವನ್ನು ನೀಡಬಲ್ಲವಾದರೂ ಈ ಗ್ರಹಗಳು ಬೇರೊಂದು ಗ್ರಹಗಳ ಜತೆಗೂಡಿದಾಗ, ಧನಹಾನಿಯನ್ನು ಸೃಷ್ಟಿಸಿ, ದುಡಿದು ಹಣ ಗಳಿಸಿದರೂ ಉಳಿಸಲಾಗದ ಪರದಾಟಗಳನ್ನು ಸೃಷ್ಟಿಸಿಬಿಡುತ್ತದೆ. ಚಂದ್ರ, ಕುಜ ಹಾಗೂ ಶನಿಗ್ರಹಗಳು ವಿಪತ್ತುಗಳನ್ನು ಸೃಷ್ಟಿಸಬಲ್ಲವಾದರೂ ಆರ್ಥಿಕವಾಗಿ ಒಬ್ಬ ವ್ಯಕ್ತಿಯನ್ನು ಬಲಾಡ್ಯವಾಗಿಸುವಲ್ಲಿ ಹಲವು ರೀತಿಯ , ಸ್ಥೈರ್ಯ ಮುನ್ನುಗ್ಗುವಿಕೆಗೆ ಪ್ರೇರಣೆ ನೀಡಿ ಮುಂದಡಿ ಇಡಲು ಸಹಕರಿಸುತ್ತದೇ. ಹಾಗೆಯೇ ಈ ಗ್ರಹಗಳ ಕೆಟ್ಟ ಪ್ರಭಾವ ಬಹು ದೊಡ್ಡ ಹೊಡೆತವನ್ನು ನೀಡುತ್ತದೆ.
★ ಜಾತಕದಲ್ಲಿ ರವಿ ಚೆನ್ನಾಗಿದ್ದರೆ ತಂದೆ ಅಥವಾ ಸರ್ಕಾರದಿಂದ ಅಥವಾ ದೇವಸ್ಥಾನದಿಂದ ಹಣಗಳಿಕೆ.
★ ಹಾಗೆಯೇ ಯಾವ ಭಾವದಿಂದ ಧನಾಗಮ ಎಂಬುದನ್ನೂ ತಿಳಿಯಬೇಕು,
ಭಾಗ್ಯಾಧಿಪತಿ ಲಗ್ನದಲ್ಲಿದ್ದರೆ ತಂದೆಯಿಂದ ಧನಲಾಭ,
ಭಾಗ್ಯಭಾವಕ್ಕೆ ಗುರುಸಂಬಂಧ ಬಂದರೆ ದೇವಸ್ಥಾನದಿಂದ ಧನಲಾಭ,
3 - 11 ನೇ ಭಾವಕ್ಕೆ ಸಂಬಂದವಿದ್ದರೆ ಅಣ್ಣತಮ್ಮಂದಿರಿಂದ ಧನಲಾಭ.
★ ಚಂದ್ರ ಭಲಾಢ್ಯ ನಾಗಿದ್ದರೆ, ತಾಯಿಯ ಮೂಲಕ ಧನಾಗಮ
★ ಬುಧ ಚನ್ನಾಗಿದ್ದರೆ ( ಭಲಾಢ್ಯ ) ಮಾತಿನ ಮೂಲಕ, ಮಾತಿನ ಚಾಕಚಕ್ಯತೆ ಯಿಂದ, L. I. C ಮೂಲಕ ಹಣ ಬರುತ್ತೆ ( L. I C ಅಂದ್ರೆ 6th ಗೆ ಸಂಬಂಧ ಬಂದಿರಬೇಕು). 8th ಸಂಬಂಧ ಬಂದಿದ್ರೆ ಗುಪ್ತನಿಧಿ ಸಿಗುತ್ತದೆ. ಭಚಕ್ರದ 6 ನೆ ಮನೆ ಅಧಿಪತಿ ಬುಧ ಸೇವೆಯನ್ನೂ ( service) ಸೂಚಿಸುತ್ತಾನೆ.
ಪ್ರತಿಯೊಂದು ಜಾತಕದಲ್ಲಿ ಹಣ ಸಂಪಾದನೆಯನ್ನು ಪ್ರತಿಪಾದಿಸುವ ಸ್ಥಾನಗಳು ಲಗ್ನಾತ್ 2-8-11.
★ ದ್ವಿತೀಯ ಭಾವ:-- ಸ್ವಯಾರ್ಜಿತ, ಶ್ರಮದ ದುಡಿಮೆಯಿಂದ ಬರುವ ಹಣವನ್ನು
★ ಅಷ್ಟಮ ಭಾವ:-- ಕಳತ್ರ (ಪತಿ, ಪತ್ನಿ) ಮೂಲದ ಹಣವನ್ನು
ಹಾಗೂ ....
★ ಲಾಭ ಸ್ಥಾನವೆನಿಸಿರುವ 11ನೇ ಮನೆಯು ನಿರಾಯಾಸವಾಗಿ ಉಂಟಾಗುವ ಲಾಭವನ್ನು ಸೂಚಿಸುತ್ತದೆ.
★ ಇದರೊಂದಿಗೆ ಆಕಸ್ಮಿಕ ಧನಾಗಮನವನ್ನು ಜಾತಕದಲ್ಲಿ ಸೂಚಿ ಸುವ ಸ್ಥಾನಗಳು ಎಂದರೆ, ಐದು ಹಾಗೂ ಎಂಟು.
★ ಈ ಪಂಚಮ ಅಷ್ಟಮ ಭಾವಾಧಿಪತಿಗಳು ಯುತಿ ಅಥವಾ ಪರಸ್ಪರ ದೃಷ್ಟಿಯಲ್ಲಿಯೋ ಇದ್ದಲ್ಲಿ ದಶಾಭುಕ್ತಿ ಕಾಲದಲ್ಲಿ ಖಂಡಿತ ಆಕಸ್ಮಿಕ ಧನ ಯೋಗ ಉಂಟಾಗುತ್ತದೆ. ಈ ಧನಯೋಗವು ಗ್ರಹಗಳ ಬಲಾಬಲಗಳು ಹಾಗೂ ಶತ್ರು ಮಿತ್ರತ್ವವನ್ನು ಆಧರಿಸಿರುತ್ತದೆ.
.★ ಪಂಚಮ ಹಾಗೂ ಅಷ್ಟಮಾಧಿಪತಿಗಳು ಶುಭಗ್ರಹಗಳಾದಲ್ಲಿ ಒಳ್ಳೆಯ ರೀತಿಯ ಧನ ಸಂಪಾದನೆಯೂ, ಅಶುಭರಾದಲ್ಲಿ ಅಶುಭ ರೀತಿಯಿಂದಲೂ ಉಂಟಾಗುವುದು.
★ ಅಷ್ಟಮವು ಮರಣಪತ್ರ (ಉಯಿಲು), ಕೋರ್ಟು ಕಚೇರಿಗಳಿಂದ ಉಂಟಾಗುವ ಲಾಭ ಹಾಗೂ ಭೂಮ್ಯಾಂತರ್ಗತ ನಿಧಿ ಇವುಗಳಿಂದಾಗುವ ಧನಲಾಭವನ್ನು ಸೂಚಿಸುತ್ತದೆ.
★ ರಾಹು-ಕೇತುಗಳಂತ ಅಶುಭ ಹಾಗೂ ಭಯವನ್ನುಂಟು ಮಾಡುವ ಗ್ರಹಗಳು ಲಾಭ ಸ್ಥಾನದಲ್ಲಿ ಸ್ಥಿತರಾದಲ್ಲಿ ಅನಿರೀಕ್ಷಿತ ಧನ ಪ್ರಾಪ್ತಿಯಾದರೂ, ಒಮ್ಮೆಲೆ ಅನಿರೀಕ್ಷಿತ ತೊಂದ್ರೆಯಾಗಿ, ಎಲ್ಲ ಹಾಳಾಗುವ ಸಂಭವವುಂಟು. ಅದರಲ್ಲಿಯೂ ರಾಹು ಗ್ರಹವು ಸಟ್ಟಾ, ಜೂಜುಗಳಿಂದ ಉಂಟಾಗುವ ನಷ್ಟಕ್ಕೆ ಕಾರಕನಾಗುತ್ತಾನೆ. ರಾಹು - ಕೇತುಗಳು ಭಲಾಢ್ಯ ರಾಗಿ 11 ರ ಸಂಬಂದವಿದ್ದರೇ ತಾತನ ಆಸ್ತಿ ಸಿಗುತ್ತದೆ.
.
ಜ್ಯೋತಿಷ್ಯದಲ್ಲಿ ಹಲವು ಪ್ರಧಾನ ಧನಯೋಗಗಳನ್ನು ಗುರುತಿಸಬಹುದು...
ಅವುಗಳೆಂದರೆ...
ತ್ರಿಲೋಚನಾ ಯೋಗ:---
*******************
★ ಸೂರ್ಯ, ಅಂಗಾರಕ, ಚಂದ್ರ ಪ್ರಸ್ಪರ ಕೋಣದಲ್ಲಿದ್ದು, ಬಲಶಾಲಿಗಳಾಗಿ ಒಂದರ ನಂತರ ಒಂದರಂತಿದ್ದರೆ ತ್ರಿಲೋಚನಾ ಯೋಗ ಉಂಟಾಗಿ ಜಾತಕನು ಮಹದೈಶ್ವರ್ಯವಂತನಾಗಿ, ಬುದ್ಧಿಶಾಲಿಯಾಗಿ ಚಿರಕಾಲ ಬಾಳುವನು.
ಧನಾಕರ್ಷಣಾ ಯೋಗ:---
********************
★ ಲಗ್ನಾಧಿಪತಿಯು ಧನಭಾವದಲ್ಲಿದ್ದು, ನವಮಾಧಿಪತಿ ಲಾಭದಲ್ಲಿದ್ದು, ಸಪ್ತಮಾಧಿಪತಿ ಪಂಚಮದಲ್ಲಿದ್ದು, ಪಂಚಾಮಾಧಿಪತಿ ತೃತೀಯಾಧಿಪತಿ ಲಗ್ನದಲ್ಲಿದ್ದರೆ ಧನಾಕರ್ಷಣ ಯೋಗ ಉಂಟಾಗಿ ಜಾತಕ ಯಾರ ಮನೆಯಲ್ಲಿರುತ್ತಾನೋ ಆ ಮನೆಯವರು ಧನವಂತರಾಗುತ್ತಾರೆ.
ರಸಾತಲ ಯೋಗ:---
****************
★ ದ್ವಾದಶಾಧಿಪತಿಯು ಪರಮೋಚ್ಚದಲ್ಲಿದ್ದು, ದ್ವಾದಶದಲ್ಲಿ ಶುಕ್ರನಿದ್ದು, ನಾಲ್ಕನೇ ಸ್ಥಾನಾಧಿಪತಿಯಿಂದ ನೋಡಲ್ಪಟ್ಟರೆ ರಸಾತಲ ಯೋಗ ಉಂಟಾಗಿ ಜಾತಕರು ಭೂಮಿಯಲ್ಲಿ ಬಚ್ಚಿಟ ಧನವನ್ನು ಹೊಂದಿ ಶ್ರೀಮಂತರಾಗಿ ಬಾಳುತ್ತಾರೆ.
ಉಪಚಯ ಯೋಗ:---
*****************
★ ತೃತೀಯ, ಷಷ್ಠ, ಏಕಾದಶಗಳಲ್ಲಿ (3,6,11) ಶುಭಗ್ರಹಗಳು ಸ್ಥಿರರಾದರೆ, ಶುಭಾಶುಭವನ್ನು ಉಂಟುಮಾಡುವ ಈ ಯೋಗ ಉಂಟಾಗಿ ಜಾತಕನು ಶುಕ್ಲಪಕ್ಷದ ಚಂದ್ರನಂತೆ ವೃದ್ಧಿಹೊಂದಿ ಧನವಂತನಾಗಿ ಸುಖದಿಂದ ಬಾಳುತ್ತಾನೆ.
ಲಕ್ಷ್ಮೀಯೋಗ:---
************
★ ಭಾಗ್ಯಾಧಿಪತಿಯು ಭಾಗ್ಯದಲ್ಲಿ ಉಚ್ಚನಾಗಿದ್ದು, ಪಂಚಮಾಧಿಪತಿಯೊಂದಿಗಿದ್ದರೆ ಜಾತಕನಿಗೆ ಲಕ್ಷ್ಮೀಯೋಗ ಉಂಟಾಗಿ, ಬಹಳ ಧನಿಕನಾಗಿ, ಕೀರ್ತಿವಂತನಾಗಿ ಬಾಳುತ್ತಾನೆ.
ಕುಲಸಂವರ್ಧನ ಯೋಗ:---
*********************
★ ಚಂದ್ರನಿಗೆ, ಸೂರ್ಯನಿಗೆ, ಲಗ್ನಕ್ಕೆ ಪಂಚಮದಲ್ಲಿ ಸರ್ವಶುಭಗ್ರಹಗಳು ಬಲವಂತರಾಗಿದ್ದರೆ ಕುಲವರ್ಧನ ಯೋಗ ಉಂಟಾಗಿ, ಈ ಜಾತಕನು ಮಕ್ಕಳು, ಮೊಮ್ಮಕ್ಕಳನ್ನು, ಆರೋಗ್ಯಾದಿಗಳನ್ನು ಹೊಂದಿ, ಧನಿಕನಾಗಿ ಸೌಖ್ಯದಿಂದ ಬಾಳುವನು.
ಅಮೋಘ ಯೋಗ,:---
*****************
★ ಅನೇಕ ಶುಭ ಗ್ರಹಗಳು ಉಚ್ಚ, ಮೂಲ ತ್ರಿಕೋಣಗಳಲ್ಲಿದ್ದರೆ, ರಾಜನ ಮೂಲಕ (ಸರ್ಕಾರದ ಮೂಲಕ) ಮಹಾಧನವನ್ನೀಯುವ ಅಮೋಘವಾದ ಧನಯೋಗ ಉಂಟಾಗಿ ಜಾತಕನು ಸುಖದಿಂದ ಬಾಳುವನು.
ಅರ್ಥಯೋಗ:---
*************
★ನವಮದಲ್ಲಿ ದ್ವಿತೀಯಾಧಿಪತಿಯು ಚತುರ್ಥ ಆಧಿಪತಿಯೊಂದಿಗಿದ್ದು, ನವಮಾಧಿಪತಿಯು ಬಲಾಢ್ಯನಾಗಿ ದ್ವಿತೀಯ ಸ್ಥಾನದಲ್ಲಿದ್ದು, ಲಾಭಾಧಿಪತಿ ಲಾಭ ಭಾವದಲ್ಲಿದ್ದು, ಆ ಭಾವವು ಲಗ್ನಾಧಿಪತಿಗೆ ಉಚ್ಚಸ್ಥಾನವಾಗಿದ್ದರೆ ಅರ್ಥಯೋಗ ಉಂಟಾಗಿ ಜಾತಕ ಅತ್ಯಧಿಕ ಧನವನ್ನು ಹೊಂದಿ ರಾಜನಂತೆ ಬಾಳುವನು.
ದೇವೇಂದ್ರ ಯೋಗ:---
*****************
★ ಲಗ್ನಾಧಿಪತಿ ಹಾಗೂ ಲಾಭಾಧಿಪತಿ ಪರಿವರ್ತನೆ ಯಲ್ಲಿದ್ದು, ದ್ವಿತೀಯಾಧಿಪತಿ ಹಾಗೂ ದಶಮಾಧಿಪತಿ ಪರಿವರ್ತನೆ ಯಲ್ಲಿದ್ದರೆ ಜಾತಕನು ದೇವೇಂದ್ರನಂತೆ ವೈಭವೋಪೇತ ಜೀವನವಿದ್ದು ಕೀರ್ತಿವಂತನಾಗಿ ಬಾಳುವನು.
ಹೋರಾ ವರ್ಗ ಕುಂಡಲಿಯಲ್ಲಿ ಧನಯೋಗ
************************************
30° ಯ ರಾಶಿಯನ್ನು ಸಮಭಾಗ ಮಾಡಿದಾಗ ಪ್ರತಿ ಭಾಗ ಒಂದೊಂದು ಹೋರೆಯಾಗುತ್ತದೆ. ಅಂದರೆ ಒಂದು ರಾಶಿಯಲ್ಲಿ ಎರಡು ಹೋರೆಗಳು.
ಸಮರಾಶಿಯಲ್ಲಿ ಮೊದಲ 15° ಯ ವರೆಗಿನದ್ಧು ಚಂದ್ರಹೋರೆ, ನಂತರದ 15° (15° -30°) ವರೆಗೆ ರವಿಹೋರೆ.
ಬೆಸರಾಶಿಗಳಲ್ಲಿ ಮೊದಲ 15° ಯವರೆಗೆ ರವಿ ಹೋರೆ, ನಂತರದ 15° (15° -30°) ವರೆಗೆ ಚಂದ್ರ ಹೋರೆ.
ಚಂದ್ರ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ, ಕಡಿಮೆ ಪ್ರಯತ್ನ ಕ್ಕೇ ಹೆಚ್ಚು ಸಂಪಾದನೆ.
ರವಿ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ ಪ್ರಯತ್ನಕ್ಕೆ ತಕ್ಕಂತೆ ಫಲ. ಒಳ್ಳೇ ಗ್ರಹಗಳಿದ್ದರೆ ಒಳ್ಳೇ ದಾರಿಯಲ್ಲಿ ಸಂಪಾದನೆ.
ಇದು ಮೇಲ್ನೋಟಕ್ಕೆ ಕಾಣುವ ವಿಚಾರ, ಆಳ ಅಧ್ಯಯನದ ಮೂಲಕ ಯಾವ ಪ್ರಮಾಣದಲ್ಲಿ ಧನ ಸಂಪಾದನೆ ಅಥವಾ ಧನಲಾಭ ಅನ್ನುವ ವಿಚಾರವನ್ಮು ತಿಳಿಯಬಹುದು..
ಅವುಗಳೆಂದರೆ....
★ ಪುರುಷ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ....
★ ಸ್ತ್ರೀ ರಾಶಿಯಲ್ಲಿನ ಸ್ರೀಗ್ರಹಗಳು ಚಂದ್ರಹೋರೆಯಲ್ಲಿದ್ದರೆ 100% ಶುಭಫಲ ( ಅನಾಯಾಸ ಧನಲಾಭ ).
★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ...
★ ಪುರುಷ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..75% ಫಲ ( ಕಡಿಮೆ ಪರಿಶ್ರಮದಿಂದ ಅಧಿಕ ಧನಲಾಭ ).
★ ಪುರುಷ ರಾಶಿಯಲ್ಲಿನ ಪುರುಷ ಗ್ರಹ ಚಂದ್ರ ಹೋರೆ ಯಲ್ಲಿದ್ದರೆ...
★ ಸ್ತ್ರೀ ರಾಶಿಯಲ್ಲಿನ ಸ್ತ್ರೀ ಗ್ರಹ ರವಿ ಹೋರೆ ಯಲ್ಲಿದ್ದರೆ.. 50% ಫಲ ( ಶ್ರಮಕ್ಕೆ ತಕ್ಕಂತೆ ಧನಲಾಭ ).
★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ ...
★ ಪುರುಶ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..25% ಫಲ ( ಅಧಿಕ ಶ್ರಮ ಅಲ್ಪಲಾಭ ).
ಜಾತಕದಲ್ಲಿ ಈ ರೀತಿಯ ಗ್ರಹ ಸಂಯೋಜನೆ ಯಿಂದ ನಮ್ಮ ಧನ ಸಂಪಾದನೆಯನ್ನು ನಿರ್ಧರಿಸಬಹುದು.
ಡಾ: ಶೈಲಜಾ ರಮೇಶ್