Thursday, 18 April 2019

ಕರಣದಿಂದ ಕಾರ್ಯಸಿದ್ಧಿ

                             ಹರಿಃ ಓಂ

                   ಶ್ರೀ ಗುರುಭ್ಯೋನಮಃ

             ಶ್ರೀ ಮಹಾಗಣಪತಯೇ ನಮಃ
*ಕರಣದಿಂದ ಕಾರ್ಯಸಿದ್ಧಿ.*
*****************
          ನಾವು ಮಾಡುವ ಪ್ರತಿ ಶುಭ ಕಾರ್ಯಕ್ಕೆ  ಗುರುಬಲ,  ತಾರಾಬಲ,  ಚಂದ್ರಬಲ, ಪಂಚಾಂಗ ಶುದ್ಧಿ ನೋಡಿ  ಕಾರ್ಯ ಶುರು ಮಾಡುತ್ತೇವೆ.   ಹಾಗೆಯೇ ಪ್ರತಿ ಹೊಸ ಕೆಲಸ ಪ್ರಾರಂಭಿಸುವಾಗ  ಗುರುಬಲದ ಹೊರತಾಗಿಯೂ  ತಾರಾಬಲ ಚಂದ್ರಬಲ ನೋಡಿ ಕಾರ್ಯಾರಂಭ ಮಾಡುತ್ತೇವೆ..  ಆದರೂ ಒಮ್ಮೊಮ್ಮೆ ಕಾರ್ಯವಿಘ್ನವಾಗಿ ಮಾನಸಿಕವಾಗಿ ಬಳಲುತ್ತೇವೆ. ಕೆಲವು ವೇಳೆ ಶತ್ರುಗಳಿಂದ  ಮಾಂತ್ರಿಕ ರೀತಿಯಿಂದಲೂ ಅಡ್ಡಿ ಆತಂಕಗಳು ಬರಬಹುದು ನಮ್ಮ ಪ್ರಯತ್ನ ವಿಫಲವಾದಾಗ,  ನಮ್ಮ ಏಳಿಗೆಗೆ ಅಡ್ಡಿ ಆತಂಕಗಳು ಬಂದಾಗ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನಂಬಿಕೆ ಕಳೆದುಕೊಳ್ಳುವುದು ಸಹಜ.
         ಕೇವಲ   ತಾರಾಬಲ, ಚಂದ್ರಬಲ,  ತಿಥಿವಾರ ನಕ್ಷತ್ರ ಗಳಷ್ಟೇ ಅಲ್ಲ  ನಾವು ಕರಣಗಳಿಗೂ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. 
ಯಾವ ಯಾವ ಕರಣಗಳಲ್ಲಿ ಯಾವ ಕೆಲಸ ಶುಭವಾಗುವುದೆಂದು  ನೋಡೋಣ.
ಕರಣಗಳು ಒಟ್ಟು ಹನ್ನೊಂದು
ಅವುಗಳೆಂದರೆ 1, ಭವ.     2,  ಬಾಲವ.    3,  ಕೌಲವ.    4,  ತೈತುಲ.   5,  ಗರಜ.    6,  ವಣಿಜ.    7,  ಭದ್ರ.    8,   ಶಕುನಿ.   9,  ಚತುಶ್ಮಾನ್.   10  ನಾಗವಾನ್.   11,  ಕಿಂಸ್ತುಜ್ಞ

        ಯಾವ ಕರಣಗಳಲ್ಲಿ  ಯಾವ ಕಾರ್ಯ ಮಾಡಬಹುದು, ಫಲಗಳೇನೆಂದು ತಿಳಿಯೋಣ.

*1.  ಭವ*   ಈ ಕರಣದಲ್ಲಿ ಯಾವುದೇ ಹೊಸ ಕೆಲಸ ಪ್ರಾರಂಭಿಸಿದರೆ  ಶುಭ.  ಉತ್ತಮ ಫಲಿತಾಂಶ ವನ್ನು ನಿರೀಕ್ಷಿಸಬಹುದು.

*2,  ಬಾಲವ :*  ಈ  ಕರಣದಲ್ಲಿ  ಬ್ಯಾಂಕು,  ವಿದ್ಯಾಸಂಸ್ಥೆ,  ಒಪ್ಪಂದ ಮುಂತಾದ ಕೆಲಸಗಳು  ಪ್ರಾರಂಭಿಸಬಹುದು.   ಶುಭ

*3,  ಕೌಲವ :*  ಸರಕಾರದ ಕೆಲಸ,  ಪಾರ್ಟ್ನರ್ಶಿಪ್  ವ್ಯಾಪಾರ,  ಹೊಸ ವ್ಯವಹಾರಕ್ಕೆ ಮಾತುಕತೆಗೆ  ಉತ್ತಮ.

*4,  ತೈತುಲ :*   ಶುಭಕಾರ್ಯಕ್ಕೆ ಅಷ್ಟು ಸಮಂಜಸವಲ್ಲ  ಯಾವುದೇ ಸಂಸ್ಥೆ ಯಾಗಲೀ,  ಮನೆ ಕಟ್ಟಡ ನಿರ್ಮಾಣ,  ಭೂಮಿ ಅಗೆಯುವ ಕೆಲಸ ಮಾಡಬಾರದು.   ಮಿಶ್ರಫಲ.

*5,  ಗರಜ:*  ಭೂಮಿ ಕ್ರಯ - ವಿಕ್ರಯ,  ರಸ್ತೆ ನಿರ್ಮಾಣ, ಮನೆ ಕಟ್ಟಲು ಭೂಮಿ ಅಗೆಯುವುದು,  ಕಟ್ಟಡ ನಿರ್ಮಾಣಕ್ಕೆ,  ಫ್ಯಾಕ್ಟರಿ ನಿರ್ಮಾಣಕ್ಕೆ ಉತ್ತಮವಾದುದು.. ಶುಭ.

*6,  ವಣಿಜ :* ಹೊಸ ವ್ಯಾಪಾರ - ವ್ಯವಹಾರ ಪ್ರಾರಂಭ,  ಅಂಗಡಿ  ಪ್ರಾರಂಭ,  ಬ್ಯಾಂಕಿನ  ವಹಿವಾಟು,  ಸಾಲ ಕೊಡುವುದು - ಪಡೆಯುವುದು,  ಬಂಡವಾಳ ಹೂಡುವುದು,  ಹಣ ಶೇಖರಣೆ ಮುಂತಾಡುವಕ್ಕೆ ಈ ಕರಣವು ಸೂಕ್ತ.    ಶುಭ.

*7,  ಭದ್ರ :*  ಯಾವುದೇ ಕೆಲಸವಾದರೂ ಪೂರ್ತಿ ಆಗುವುದಿಲ್ಲ,  ಅರ್ಧಕ್ಕೇ ನಿಲ್ಲುವುದು,  ನ್ಯಾಯಾಲಯದ ಮೆಟ್ಟಲೇರಬೇಕಾಗುವುದು,  ನೆರೆಹೊರೆಯರಲ್ಲಿ ಜಗಳ ಆಗುವುದು,  ಒಂದುವೇಳೆ ಬಲವಂತವಾಗಿ ಕಾರ್ಯ ಸಾಧಿಸಿದರೆ  ಮರಣದಲ್ಲಿ ಪರ್ಯಾವಸಾನವಾಗುವುದು.
         ವಿವಾಹವಾದರೆ ನೆಮ್ಮದಿ ಜೀವನವಿಲ್ಲ, ಗೃಹಾರಂಭ,  ಗೃಹಪ್ರವೇಶ  ಮಾಡಿದರೆ ಆ ಮನೆಯು ಅನ್ಯರ ವಶವಾಗುವುದು,  ದೇವತಾ ಪ್ರತಿಷ್ಟಾಪನೆ  ಮಾಡಿದರೆ ಮಾಡಿದ ವ್ಯಕ್ತಿಗೆ ತೊಂದರೆ.     ಅಶುಭ.

*8, ಶಕುನಿ :*   ಈ ಕರಣದಲ್ಲಿ ಪ್ರಾರಂಭಿಸಿದ  ಯಾವುದೇ ಕೆಲಸವು  ಪುನಃ ಪುನಃ ಪ್ರಾರಂಭಿಸುವ ಹಾಗೆ ಆಗುತ್ತದೆ , ಕೆಲಸ ಪೂರ್ತಿಯಾಗುವುದಿಲ್ಲ,  ವಿಪರೀತ ಖರ್ಚು,  ಮನಃಶಾಂತಿ ಇರುವುದಿಲ್ಲ.     ಅಶುಭ.

*9, ಚತುಶ್ಮಾನ್ :* ಇದೊಂದು ಕ್ರೂರ ಕರಣ,  ಅಶಾಂತಿಯ ವಾತಾವರಣ  ನಿರ್ಮಾಣ ವಾಗುತ್ತದೆ,  ವಿಪರೀತ ಧನಹಾನಿ, ಕೋರ್ಟು ವ್ಯವಹಾರದಲ್ಲಿ ಅಪಜಯ,  ದುಷ್ಟ ಜನರಿಂದ.ಮಾನಸಿಕ ಹಿಂಸೆ, ಚಿಂತೆ.     ಅಶುಭ.

*10,  ನಾಗವಾನ್*: ಈ ಕರಣದಲ್ಲಿ  ಯಾವ ಕೆಲಸ ಮಾಡಿದರೂ  ಜಗಳ, ಕದನ,  ಅಪಘಾತ,  ಕಾರ್ಯವಿಘ್ನ,  ಶತ್ರುಭಯ,  ಅಶಾಂತಿಯ ವಾತಾವರಣ,  ಮಾಂತ್ರಿಕ ಭಾಧೆ ಉಂಟಾಗುತ್ತದೆ.

*11,  ಕಿಂಸ್ತುಜ್ಞ :* ಈ ಕರಣದಲ್ಲಿ ಪ್ರಾರಂಭಿಸಿದ  ಯಾವುದೇ ಕೆಲಸವು ಪರರ ಪಾಲಾಗುತ್ತದೆ,  ಸ್ವಾತಂತ್ರ್ಯ ದಿಂದ  ವಂಚಿತರಾಗುತ್ತಾರೆ, ಭ್ರಮಾಜೀವನ.   ಅಶುಭ.
          
          ಆದಕಾರಣ  ಯಾವುದೇ ಕೆಲಸ ಪ್ರಾರಂಭಿಸುವಾಗ  ತಾರಾಬಲ,  ಚಂದ್ರಬಲ, ದಿನಶುದ್ಧಿಯ ಜೊತೆಗೆ  ಕರಣ ಶುದ್ಧಿಯೂ ನೋಡಿ ಮಾಡಿದರೆ ಒಳಿತು.

✍  *ಡಾ: B.N. ಶೈಲಜಾ ರಮೇಶ್*

3 comments:

  1. ಅತ್ಯುತ್ತಮವಾದ ಲೇಖನ

    ReplyDelete
  2. ಅತ್ಯುತ್ತಮವಾದ ಲೇಖನ ಮತ್ತು ಪಾಲಿಸಬೇಕಾದ ಅಂಶ ನಮಸ್ತೆ

    ReplyDelete