Saturday, 6 May 2017

--: ಕುಜ, ಮಂಗಳ :--

ಶ್ರೀ ಗುರುಭ್ಯೋನಮಃ
ಹರಿಃ  ಓಂ
ಶ್ರೀ  ಮಹಾ ಗಣಪತಯೇ ನಮಃ

--: ಕುಜ,  ಮಂಗಳ :--

" ಸತ್ವಂ  ಕುಜೋಃ "   ಎನ್ನುವಂತೆ  ಕಾಲಪುರುಷನ   ಸತ್ವ/ ಶಕ್ತಿ   ಕಾರಕನಾಗಿದ್ದಾನೆ.

ಅಕ್ಷಯ  ನಾಮ  ಸಂವತ್ಸರ   ಶ್ರಾವಣ ಮಾಸ  ಶುಕ್ಲಪಕ್ಷದ   ತ್ರಯೋದಶಿಯಂದು   ಜನನ,   ಜನ್ಮ  ನಕ್ಷತ್ರ  -- ಪೂರ್ವಾಷಾಡ,   ಗೋತ್ರ -- ಭಾರದ್ವಾಜ,   ಜಮದಗ್ನಿಯ   ಪರಂಪರೆ,   ಅವಂತಿ  ದೇಶಕ್ಕೆ  ರಾಜ,  ರಕ್ತವರ್ಣ  ಶರೀರ,   ಹಸ್ತಸಂಖ್ಯೆ -- ,    ಗ್ರಹ ಮಂಡಲದಲ್ಲಿ   ದಕ್ಷಿಣ  ಸ್ಥಾನ,   ದಕ್ಷಿಣ  ದಿಕ್ಕಿಗೆ  ಅಧಿಪತಿ,  ಧಾನ್ಯ --  ತೊಗರಿ,   ವಸ್ತ್ರ --  ಕೆಂಪು ( ಅರೆಕೆಂಪು) ,   ರತ್ನ -  ಹವಳ,  ಆಯುಧಗಳು -- ನದಾ,  ಶಕ್ತಿ,  ಶೂಲ,  ಖಡ್ಗ,   ಕಾಂಚನ ರಥ,  ತ್ರಿಕೋನಾಕಾರ,   ಪತ್ನಿ -- ಶಕ್ತಿ,   ದೇವತೆ --  ಷಣ್ಮುಖ,     ಅಧಿದೇವತೆ --  ಭೂಮಿ,   ಅಭಿಮಾನಿ  ದೇವತೆ --  ಸುಬ್ರಹ್ಮಣ್ಯ,    ವಾಹನ. -- ಟಗರು,  ಪೂಜಪುಷ್ಪ --  ಕೆಂಪು  ಕಣಿಗೆಲೆ ( ಕರವೀರ  ಪುಷ್ಪ ),   ಕ್ರೂರ ಸ್ವಭಾವ,  ವಾಸಸ್ಥಾನ  -- ಪಾಕಶಾಲೆ,   ಶೌರ್ಯಕಾರಕನು,  ಬ್ರಾತೃ ಕಾರಕನು,  ಸೇನಾಧಿಪತಿ,  ಪುರುಷಗ್ರಹ,  ಪಾಪಗ್ರಹ,  ರಕ್ತಕೆಂಪು  ಬಣ್ಣ,  ಪ್ರದೇಶಗಳಿಗೆ  ಹೋಗುವುದು,   ಸ್ವಾಭಿಮಾನಿ,   ವಾದವಿವಾದದ  ಪ್ರವೀಣನು,   ಜಗಳಕ್ಕೆ  ಕಾರಕನು,  ಯುದ್ಧ ಪ್ರಿಯನು,  ಚಪಲನು,  ಉಗ್ರಸ್ವಭಾವ,  ತಮೋಗುಣ,  ಚತುಷ್ಪಾದ  ಗ್ರಹನು,  ಕ್ರೂರದೃಷ್ಟಿ,  ಪಿತ್ತಪ್ರಕೃತಿ,    ಎಲುಬಿನಲ್ಲಿರುವ  ಮಜ್ಜೆ  ಧಾತು ವಿಗೆ  ಕಾರಕನು,  ಸಾಹಸಿ,  ಉದಾರವಾದ  ಮನಸ್ಸು,  ಕೀರ್ತಿ ಪ್ರಿಯನು,  ಗ್ರೀಷ್ಮ  ಋತುವಿಗೆ  ಅಧಿಪತಿ,   ಅರಣ್ಯಾಧಿಕಾರಿ,  ಅಕ್ಕಸಾಲಿಗ,   ಕಳ್ಳ ,  ಸರ್ಪನು,  ಅಪಕೀರ್ತಿ,  ಯಂತ್ರ - ಮಂತ್ರ  ಬಲ್ಲವನು,  ಸುತ್ತಬಟ್ಟೆ  ಇಷ್ಟಪಡುವವನು,  ಗುಂಗುರು ಕೂದಲು,  ಭಲಾಢ್ಯ,  ಚುರುಕು ದೃಷ್ಟಿ,  ತೆಳುವಾದ  ಸೊಂಟ,  ಅಧಿಕಉಷ್ಣ,  ಶಸ್ತ್ರ ಕ್ರಿಯಾತಜ್ಞನು,  ಸ್ವಚ್ಛ ಉಚ್ಚಾರಣೆ,  ಧೈರ್ಯ,  ಆಸೆಗಳು,  ಆತ್ಮಸ್ಟೈರ್ಯ, ದೇಶಪ್ರೇಮ,  ಡಮರುಗದಾಕಾರ,  ಜಗಳ ಗಂಟಿ,  ಕ್ಷತ್ರಿಯ  ಜಾತಿ,  ಶೀಘ್ರಕೋಪ,  ಹಠಮಾರಿತನ,  ದುಡುಕು ಸ್ವಭಾವ,  ಸಿಂಹದಂತೆ  ಪ್ರಭಾವ  ಬೀರುವವನು,   ಕುಜನ  ದಶಾವರ್ಷ -- 7,   ಸೋದರಕಾರಕ,  ಕ್ರೂ ರಿ,  ಕೊಳೆತಪದಾರ್ಥ,  ಎಲ್ಲಾ ರೀತಿಯ  ಸಸ್ಯವರ್ಗ,  ಯುದ್ಧ,  ದ್ವೇಷಾಸೂಯೆ,   ಬಂಗಾರ,  ಶತ್ರುಗಳು,  ಸುಳ್ಳುಮಾತು,  ಪರಸ್ರ್ತೀಯರಲ್ಲಿ  ಆಸಕ್ತಿ,  ಶರೀರದ  ಮೇಲಿನ  ಗಾಯಗಳು,  ಶರೀರದಲ್ಲಿನ  ಮಜ್ಜಾಧಾತು,  ರಾಯಭಾರಿಗಳು,  ಮಿಲಿಟರಿ  ಅಧಿಕಾರಿಗಳು,  ವಿಶೇಶವಾಗಿ  ದೇಶ  ಕಾಯುವವರು,  ಹಾಗೂ  ವೈದ್ಯರು,  ಸೈನ್ಯ  ಹಾಗೂ  ಸೈನ್ಯಾಧಿಕಾರಿಗಳು,   ಪೊಲೀಸ್ ಇಲಾಖೆ,  ದಂಡ ವಸೂಲಿ ಮಾಡುವ ವರು,  ವ್ಯಾಪಾರ  ವಾಣಿಜ್ಯ,  ಭೂಮಿಗೆ  ಸಭಂಧಿಸಿದ  ವ್ಯವಹಾರ,  ರಿಯಲ್ ಎಸ್ಟೇಟ್ ಏಜೆನ್ಸಿ,  ವಾಯು ಯಾನ,  ನೇಯ್ಗೆ,  ಭಾಷಣಕಾರರು,  ಸಂಗೀತಗಾರರು,  ಅಹಂಭಾವ,  ಅಧಿಕಾರ,  ಧೈರ್ಯ  ಸ್ಥೈರ್ಯ,  ಹೊಡೆದಾಟ  ಬಡಿದಾಟಗಳು,  ಬೆಂಕಿಯಲ್ಲಿ  ಕಾರ್ಯನಿರ್ವಹಿಸುವವರು,  ಮದ್ದುಗುಂಡು  ತಯಾರಿಕಾ ಸ್ಥಳ,   ಅಡಿಗೆಯವರು,  ಆಕ್ರಮಣ  ಬುದ್ಧಿ,  ಭಯೋತ್ಪಾದಕರು,  ಭೀಕರತೆ,  ಸ್ಪೋಟಗಳು,  ಮುಂತಾದವುಗಳಿಗೆ  ಕಾರಕ.
ಕುಜನ  ಭಾಗ್ಯೋದಯದ  ಕಾಲ  28 ರಿಂದ  60  ವರ್ಷಗಳವರೆಗೆ,   ಮೇಷ  ವೃಶ್ಚಿಕ  ರಾಶಿಗೆ  ಅಧಿಪತಿ,   ಮೇಶರಾಶಿಯಲ್ಲಿ  ಮೂಲತ್ರಿಕೋನನು,  ಲಗ್ನದಿಂದ  10  ನೆ  ಮನೆಯಲ್ಲಿ  ದಿಗ್ ಬಲ  ಹೊಂದುವನು,  4ರಲ್ಲಿ  ಹೀನಬಲನು,  ಒಂದು  ರಾಶಿಯಲ್ಲಿ  45  ದಿನಗಳ ವರೆಗೆ  ಸಂಚಾರ  ಮಾಡುತ್ತಾನೆ,  ಸಂಚಾರ  ಕಾಲದಲ್ಲಿ  ವಕ್ರತ್ವ  ಪಡೆದಾಗ  ಸುಮಾರು  72  ದಿನಗಳ  ವರೆಗೆ  ವಕ್ರೀ  ಆಗುತ್ತಾನೆ.  ಕುಜನು  ತಾನಿರುವ  ಮನೆಯಿಂದ  4,  7,  8 ನೆ  ಮನೆಯನ್ನು  ದೃಷ್ಟಿಸುತ್ತಾನೆ,  ಎಲ್ಲ  ಕಾರ್ಯಗಳಲ್ಲೂ  ಮುಖ್ಯಸ್ಥನು,  ಋಣಭಾಧೆ,  ಇದ್ದಕ್ಕಿದ್ದ ಹಾಗೆ  ಪ್ರವೃತ್ತಿ  ಬಡಲಾಯಿಸಿಕೊಳ್ಳುವ  ಸ್ವಭಾವ,    ಮಕರ  ರಾಶಿಯಲ್ಲಿ  ಉಚ್ಚಸ್ಥಾನ,  27°  ಯಲ್ಲಿ  ಪರಮೋಚ್ಚ,  ಕಟಕ  ರಾಶಿಯಲ್ಲಿ  ನೀಚ ಸ್ಥಾನ,  27°  ಯಲ್ಲಿ  ಪರಮ ನೀಚ,   ಮೃಗಶಿರ,  ಚಿತ್ತ  ಧನಿಷ್ಠ ನಕ್ಷತ್ರಗಳಿಗೆ   ಅಧಿಪತಿ.
ಕುಜನು  ಬಲಹೀನನಾದರೆ,  ಅಪಘಾತ,  ಸಿಡುಬು,  ಹೊಟ್ಟೆಹುಣ್ಣು,  ಗಾಯಗಳು,  ಎಲ್ಲಾ ರೀತಿಯ  ಜ್ವರ,  ರಕ್ತಪಾತ,  ಅಪಕೀರ್ತಿ  ಮುಂತಾದವುಗಳು  ಘಟಿಸುತ್ತವೆ.
ಯುದ್ಧಭೂಮಿ,  ಕಳ್ಳರು ಹಾಗೂ  ಕಳ್ಳಸಾಗಣಿಕೆ,  ಭಯೋತ್ಪಾದನೆ,  ಬೆಂಕಿ  ಉರಿಯುವ  ಸ್ಥಳ,  ದಕ್ಷಿಣ  ದಿಕ್ಕಿನಲ್ಲಿ  ಕುಜನು  ಸಂಚಾರ  ಮಾಡುತ್ತಾನೆ.

--:  ಪುರಾಣದಲ್ಲಿ  ಕುಜ  :--



Picture source: Internet/ social media

ಕುಜ,  ಅಂಗಾರಕ,  ಮಂಗಳ,  ಭೌಮ,  ಭೂಮಿಪುತ್ರ  ಎಂಬುದು  ಈತನ  ಪ್ರಸಿದ್ಧ  ಹೆಸರುಗಳು.
ಕೆಂಪು  ಮಾಲೆಯನ್ನು  ಧರಿಸಿರುವ,  ಕೆಂಪು  ಬಟ್ಟೆಯ  ಚತುರ್ಭುಜಿ  ಈತ,  ಗಧಾ ಶಕ್ತಿ ಖಡ್ಗ ಶೂಲಗಳನ್ನು  ಧರಿಸಿದ್ದಾನೆ.   ಕುಳ್ಳ  ಶರೀರ,  ಪಿಂಗಳ  ಕಂಗಳು,  ಮಸ್ತಾದ  ಮೈಕಟ್ಟು,  ಕಾಂತಿಯುತ  ಮುಖ,   ಚಂಚಲ  ಸ್ವಭಾವ,  ಚುರುಕುತನ,  ಶೌರ್ಯ,  ಪ್ರತಿಭಾ ಪೂರ್ಣ  ಮಾತುಗಳು,  ಗುಂಗುರು  ಗುಂಗುರಾದ  ಹೆರಳು,  ತಾಮಸ  ಸ್ವಭಾವ,  ಸಾಹಸಪ್ರಿಯತೆ,  ಹಿಂಸಾತತ್ಪರತೆ,  ಕೆಂಪಾದ  ಮೈಬಣ್ಣ,  ಇದು  ಕುಜನ  ಸ್ವರೂಪದ  ಚಿತ್ರ.
ವಿಷ್ಣುವಿನ  ಅನುಗ್ರಹದಿಂದ  ಭೂದೇವಿಯಲ್ಲಿ  ಹುಟ್ಟಿದ,  ಭೂಮಿಯ  ಮಗನಾದ್ದರಿಂದಲೇ  ಈತ  ಭೌಮ,   ಅವಿರತ  ತಪಸ್ಸಿನಿಂದ  ನವಗ್ರಹಗಳಲ್ಲಿ  ಒಬ್ಬನಾದ.

ಬ್ರಹ್ಮ ವೈವರ್ತ  ಪುರಾಣದಲ್ಲಿ,   ಶಿವನು  ದಾಕ್ಷಾಯಿಣಿ  ವಿರಹ  ಪೀಡಿತನಾಗಿ,  ಗಾಢ  ತಪಸ್ಸಿನಲ್ಲಿದ್ದಾಗ,  ಶಿವನ  ಮುಖದ  ಬೆವರು  ಭೂಮಿಯ  ಮೇಲೆ  ಬಿದ್ದಾಗ  ಉದ್ಭವವಾದ  ಕಣಗಳಿಂದ  ಹುಟ್ಟಿದವನಾಗಿದ್ದಾನೆ,    ಸಮಯದಲ್ಲಿ  ಶಿವನು  ಗಾಢ  ತಪಸ್ನಲ್ಲಿದ್ದ  ಕಾರಣ  ಭುದೇವಿಯೇ    ಮಗುವನ್ನು  ತನ್ನ  ಸ್ವಂತ  ಮಗುವಿನಂತೆ  ಲಾಲಿಸಿ  ಬೆಳೆಸುತ್ತಾಳೆ.  ತಪಸ್ಸಿನ  ಬಳಿಕ  ಎಚ್ಛೆತ್ತ ಶಿವನಿಗೆ     ಬಗ್ಗೆ  ತಿಳಿದು  ಬಂದು  ಅತ್ಯಂತ  ಪ್ರಸನ್ನ್ಣನಾಗುತ್ತಾನೆ.   ಮಗುವನ್ನು  ಕಾಳಜಿಯಿಂದ  ನೋಡಿಕೊಂಡ  ಭೂದೇವಿಯ  ಶ್ರದ್ಧೆಯನ್ನು  ಮೆಚ್ಚಿ  ಮಗುವಿಗೆ  ' ಭೌಮ '  ಎಂದು  ನಾಮಕರಣ  ಮಾಡುತ್ತಾನೆ.

ಇನ್ನೊಂದು  ಪುರಾಣದ  ಕಥೆ  ಹೀಗಿದೆ......
ಗಾಢ  ತಪಸ್ಸಿನಲ್ಲಿದ್ದ  ವೇಳೆಯಲ್ಲಿ  ಶಿವನ  ಎಡೆಯಿಂದ  ಹೊರಟ  ಅತ್ಯಂತ  ಪ್ರಬಲ,  ಪ್ರಖರ  ಕಿರಣವೊಂದು  ಭೂಮಿಯ  ಮೇಲ್ಬಾಗಕ್ಕೆ  ತಗುಲಿತು,    ಸಂಗಮದಿಂದ  ಜನಿಸಿದ  ಮಗುವೇ  ಕುಜ,  ಕುಜನನ್ನು  ಕಬ್ಬಿಣದ  ಅಧಿಪತಿ  ಎಂದೂ ಕರೆಯಲಾಗುತ್ತದೆ (  ಭೂಗರ್ಭ ದಲ್ಲಿರುವ  ಲೋಹಗಳ  ಅಧಿಪತಿ),  ಬಳಿಕ  ಈತ  ಭೂಮಿಯಿಂದ  ಹೊರಹೋಗಿ  ಆಕಾಶದಲ್ಲಿ  ಮಂಗಳ ಗ್ರಹ  ರೂಪ  ತಾಳಿದ  ಎಂದೂ  ಹೇಳಲಾಗುತ್ತದೆ.

ಗಣೇಶ ಪುರಾಣದ  ಕಥೆ  ಹೀಗಿದೆ........
ಹಿರಣ್ಯಾಕ್ಷ  ಭುದೇವಿಯನ್ನು  ಕದ್ದೊಯ್ದು ನೀರಿನಲ್ಲಿ ( ಸಾಗರದಲ್ಲಿ)  ಅಡಗಿಸಿಟ್ಟಾಗ  ವಿಷ್ಣು  ವರಾಹ  ರೂಪ  ತಾಳಿ ಬಂದು  ಭೂಮಿಯನ್ನು  ಮೇಲಕ್ಕೆತ್ತುತ್ತಾನೆ,  ಆಗ  ಭೂದೇವಿ ಯು  ವಿಷ್ಣುವನ್ನು  ಮದುವೆಯಾಗಲು  ಇಚ್ಛಿಸುತ್ತಾಳೆ,  ಆಗ  ವಿಷ್ಣುವು  ಭುದೇವಿಯೊಡನೆ  ಒಂದು  ವರ್ಷಕಾಲ  ಸಂಸಾರ  ನಡೆಸುತ್ತಾನೆ,  ಆಗ  ಹುಟ್ಟಿದ  ಬಾಲಕನೇ  ಕುಜ.

ಕುಜ  ಒಂದು  ಅದ್ಭುತವಾದ  ಗ್ರಹ,  ಕ್ರೂರತ್ವದ  ಪ್ರತೀಕ,  ಸಿಡುಕು ಸ್ವಭಾವ,  ಹಟವಾದಿ, ಧರ್ಮದ  ವಿಷಯದಲ್ಲಿ  ಶ್ರದ್ಧೆ  ಕಡಿಮೆ,  ನೇರ  ಮಾತು , ಭವಿಷ್ಯದ  ಮೇಲೆ  ವಿಶ್ವಾಸವಿಲ್ಲ,   ಇವು  ಕುಜನ  ಪ್ರಭಾವದಿಂದ  ಬರುವ  ಗುಣಗಳು,   ಶುಭಸ್ಥಾನದಲ್ಲಿದ್ದು  ನೀಡುವ  ಯೋಗ  ಅಮೋಘವಾದದ್ದು,  ಹಾಗೆಯೇ  ಅಶುಭನಾದರೆ  ಜೀವನವನ್ನು  ಅಲ್ಲೋಲಕಲ್ಲೋಲ  ಮಾಡುವ  ಶಕ್ತಿ    ಗ್ರಹಕ್ಕಿದೆ,    ಕುಜನು  ಸಹೋದರ,  ಭೂಮಿ,  ಮನೆ,  ವಾಹನ,  ರಕ್ತ,  ಮಂಗಳ ಕಾರ್ಯಗಳು,  ಸೈನಿಕ,  ಪೊಲೀಸ್, ದ್ವಿವಿವಾಹ,  ವಿರಸ  ಇವುಗಳ  ಕಾರಕ ನಾಗಿರುವುದರಿಂದ, ಕುಜನು  ಶುಭನಾದರೆ  ಇವೆಲ್ಲವುಗಳಲ್ಲಿಯೂ  ಭಾಗ್ಯಶಾಲಿಗಳು ಆಗಬಹುದು.

ಕುಜನಿಗೆ  ರವಿ,  ಚಂದ್ರ,  ಗುರು  ಮಿತ್ರರು,  ಶುಕ್ರ,  ಶನಿ  ಸಮರು,  ಬುದ  ಶತ್ರು.
ಈತನ  ಬಣ್ಣ  ಕೆಂಪು.....  ಹಾಗಾಗಿ,  ಪೊಲೀಸ್ ನಾಮಫಲಕ,  ಆಸ್ಪತ್ರೆ,  ವಿದ್ಯುತ್,  ಅಗ್ನಿಶಾಮಕ  ಇವೆಲ್ಲದರ  ಸೂಚಕ  ಕೆಂಪು  ಬಣ್ಣವೇ  ಆಗಿದೆ.
ಕುಜನು  ಪಂಚಭೂತಗಳಿಗೆ  ಅಧಿಪತಿ......  ಶಸ್ತ್ರ ಚಿಕಿತ್ಸೆ,  ರಕ್ತಕ್ಕೆ  ನಂಜು,  ಅಧಿಕ ರಕ್ತದೊತ್ತಡ,  ರಕ್ತದ  ಕ್ಯಾನ್ಸರ್ ಗೆ. ಈತನ  ಅಶುಭದೃಷ್ಟಿಯೇ  ಕಾರಣವಾಗುತ್ತದೆ.  ಮದುವೆ  ನಿಧಾನ,  ಸ್ತ್ರೀಯರ  ಮಾಂಗಲ್ಯಕ್ಕೆ  ಕುಜನೆ  ಕಾರಕನಾಗುತ್ತಾನೆ.
ಜಾತಕದಲ್ಲಿ  ಕುಜನು ಚೆನ್ನಾಗಿದ್ದರೆ,  ಸಹೋದರರು  ರಾಮ ಲಕ್ಷ್ಮಣ ರಂತಿರುತ್ತಾರೆ,  ಅಶುಭನಾದರೆ  ಸಹೋದರರಲ್ಲಿ  ವೈಮನಸ್ಯವಿರುತ್ತದೆ,  ದಾಯಾದಿ  ಕಲಹವಿರುತ್ತದೇ.   ರವಿ - ಕುಜರು ಉಚ್ಚಸ್ತಾನದಲ್ಲಿ  ಜೊತೆಗಿದ್ದರೆ  ಪ್ರಭಾವಿ  ರಾಜಕೀಯ  ವ್ಯಕ್ತಿಗಳಾಗಬಹುದು.
ಮಂಗಳವಾರ,  ಸುಬ್ರಹ್ಮಣ್ಯ  ನಾಗಪೂಜೆ   ನರಸಿಂಹ ಸ್ವಾಮಿಯ  ಪೂಜೆ ಮಾಡುವುದರಿಂದ  ಕುಜನ  ಶುಭಫಲ  ಪಡೆಯಬಹುದು.

 ಗ್ರಹವನ್ನು  ಸ್ತು ತಿ ಸುವ  ಸ್ತೋತ್ರ  ಹೀಗಿದೆ.......

" ಧರಣೀ ಗರ್ಭ ಸಂಭೂತಮ್
ವಿದ್ಯುತ್ಕಾಂತಿ  ಸಮಪ್ರಭಂ
ಕುಮಾರಂ  ಶಕ್ತಿಹಸ್ತಂಚ
ಮಂಗಳಂ  ಪ್ರಣಮಾಮ್ಯಹಂ"

ಅರ್ಥ  :-  ಭೂದೇವಿಯ  ಗರ್ಭದಲ್ಲಿ  ಜನಿಸಿದ ವಿದ್ಯುತ್ಕಾಂತಿಯ (ಮಿಂಚು) ಸಮಾನವಾದ  ಪ್ರಭೆಯುಳ್ಳ  ಎಳೆಯ ಪ್ರಾಯದವನಾದ  ಶಕ್ತ್ಯಾಯುಧ ಧಾರಿಯಾದ  ಮಂಗಳನಿಗೆ  ನಮ್ಮ  ನಮಸ್ಕಾರ.

ಕುಜಪೀಡಾ ಪರಿಹಾರ  ಸ್ತೋ ತ್ರ :--

ಭೂಮಿಪುತ್ರೋ  ಮಹಾತೇಜೋ
ಜಗತಾಂ ಭಯಕೃತ್ಸದಾ
ವೃಷ್ಟಿ ಕ್ರದೃಷ್ಠಿ  ಹರ್ತಾಚ
ಪೀಡಾಂ ಹರತು  ಮೇ  ಕುಜಃ

ಕುಜ  ಗಾಯತ್ರೀ  ಮಂತ್ರ :--

ಓಂ  ಅಂಗಾರಕಾಯ  ವಿದ್ಮಹೇ
ಶಕ್ತಿಹಸ್ತಾಯ  ಧೀಮಹಿ
ತನ್ನೋ ಭೌಮ  ಪ್ರಚೋದಯಾತ್

ಏಕಾಕ್ಷರಿ  ಬೀಜ ಮಂತ್ರ :--

ಓಂ  ಅಂ  ಅಂಗಾರಕಾಯ ನಮಃ

ಅನುಕೂಲ  ಮಂತ್ರ :--

ಓಂ  ಐಮ್  ಕ್ಲೀಮ್  ಸೌಃ
(ಜಪ ಸಂಖ್ಯೆ ಒಂದೂಕಾಲು ಲಕ್ಷ)

ತಂತ್ರ  ವಿಧಾನ  ಮಂತ್ರ :--

ಓಂ   ಕ್ರಾಂ  ಕ್ರೀಂ   ಕ್ರೌಮ್  ಸಹ  ಭೌಮಾಯ  ನಮಃ
, (ಜಪಸಂಖ್ಯೆ  10,000)

ಕುಜಲತ್ತಾ ಕಾಲದಲ್ಲಿ :-  ಉಷ್ಣವ್ಯಾಧಿ,  ಬ್ರಾತೃ ಪೀಡೆಯಿಂದ  ಭಾಧಿತರಾಗುವರು...
ತಾಮ್ರಪದ್ಮ  ದಾನ  ಹಾಗೂ  ಕೆಂಪು ಎತ್ತಿನ  ದಾನದಿಂದ  ಲತ್ತಾಕಾಲದ  ಪೀಡೆಯಿಂದ  ನಿವೃತ್ತರಾಗಬಹುದು.
,
ಕುಜನ ಕ್ಷೇತ್ರವಾದ  ಮೇಷ ಲಗ್ನದವರು  ಪೂಜಿಸಿ  ಧರಿಸ ಬೇಕಾದ  ಯಂತ್ರ

ಪಂಚದಶಾ  ಯಂತ್ರ
 6
 1
 8


ಬೀಸಾಯಂತ್ರ



 8
10 
 9
 4
11 

ಓಂ  ಐಮ್  ಕ್ಲೀಮ್ ಸೌಃ


ಕುಜನ  ಕ್ಷೇತ್ರವಾದ  ವೃಶ್ಚಿಕ  ಲಗ್ನದವರು  ಪೂಜಿಸಿ  ಧರಿಸ ಬೇಕಾದ  ಯಂತ್ರ

ಪಂಚದಶಾ  ಯಂತ್ರ
 4
 3
 8


ಬೀಸಾ ಯಂತ್ರ

 8
10 
 9
 4
11 

ಓಂ  ಐಮ್  ಕ್ಲೀಮ್ ಶ್ರೀಮ್

ವೈಜ್ಞಾನಿಕವಾಗಿ  ಕುಜ  ( ಮಂಗಳ )


Picture source: Internet/ social media

ಸೂರ್ಯ ಗ್ರಹ  ಮಂಡಲದಲ್ಲಿನ   ನಾಲ್ಕನೇ  ಗ್ರಹ.    ಸೂರ್ಯನಿಗೆ  ಭೂಮಿಗಿಂತ  ದೂರದಲ್ಲಿದ್ದು  ಗುರುಗ್ರಹಕ್ಕಿಂತ  ಹತ್ತಿರದಲ್ಲಿದೆ.  ಕುಜನನ್ನು  ಆಂಗ್ಲ ಭಾಷೆಯಲ್ಲಿ "MARS" ಎಂದು  ಕರೆಯುತ್ತಾರೆ.  ಸುಮಾರು  ಭೂಮಿಯ  ಅರ್ಧದಷ್ಟು  ವ್ಯಾಸವುಳ್ಳ    ಗ್ರಹ  ತನ್ನ  ಅಕ್ಷವನ್ನು   ಸುಮಾರು  24  ಗಂಟೆಗಳಲ್ಲಿ  ಸುತ್ತುತ್ತದೆ.     ಆದರೆ  ಸೂರ್ಯನ  ಸುತ್ತ  ಪ್ರದಕ್ಷಿನೆ  ಹಾಕಲು ಸುಮಾರು ಎರಡು  ವರ್ಷಗಳು  ಬೇಕಾಗುತ್ತವೆ (೬೮೬-98  ದಿನ) ,  ಗ್ರಹದ  ವ್ಯಾಸ  6,790 ಕಿ ಮೀ,  ಸೂರ್ಯನಿಂದ  ಸುಮಾರು 228,000,000 ಕಿಮೀ  ದೂರದಲ್ಲಿರುವ  ಮಂಗಳನ  ವಾತಾವರಣದಲ್ಲಿ  ಇಂಗಾಲಾಮ್ಲ  ದೊಂದಿಗೆ  ಸ್ವಲ್ಪ  ನೀರೂ  ಕೂಸ  ಇದೆ. ( ಮಂಗಳ  ಗ್ರಹದಲ್ಲಿ ನೀರು  ಇರುವ  ಬಗ್ಗೆ  ನಾಸಾ  ಅಧಿಕೃತವಾಗಿ  ಸೆಪ್ಟಂಬರ್ 28, 2015 ರಂದು  ಘೋಷಿಸಿದೆ ) ಮಂಗಳ ಗ್ರಹ  ಕೆಂಪು ಬಣ್ಣ ದ್ದಾಗಿರುವುದರಿಂದ  ಇದನ್ನು  red planet  ಎಂದೂ  ಕರೆಯುತ್ತಾರೆ.   ಮಂಗಳ ಗ್ರಹ ಕ್ಕೆ  ಫೋಬೋಸ್ (phobos),  ಮತ್ತು  ಡಿ ಮೋಸ್ (deimos)  ಎಂಬ  ಎರಡು ನೈಸರ್ಗಿಕ  ಉಪಗ್ರಹಗಳಿವೆ.  ಚಿಕ್ಕದಾಗಿ  ವಿಲಕ್ಷಣ  ರೂಪದಲ್ಲಿರುವ    ಉಪಗ್ರಹಗಳು  ಮಂಗಳದ  ಗುರುತ್ವದಿಂದ  ಸೆರೆಹಿಡಿಯಲ್ಪಡುವ  ಮುನ್ನ  asteroid  ಗಳಾಗಿದ್ದಿರಬಹುದು.  ಭೂಮಿಯಿಂದ  ಮಂಗಳನನ್ನು  ಬರಿಗಣ್ಣಿನಿಂದ  ನೋಡಬಹುದು.   ಮಂಗಳನ  ಮೇಲ್ಮೈ  ಕಂದು  ಬಣ್ಣದ  ಅಗ್ನಿಶಿಲಾ ಧೂಳಿನಿಂದಾಗಿದೇ.( ಫೆರ್ರಿಕ್- ಆಕ್ಸೈಡ್ )

ಹಬೆಲ್  ಬಾಹ್ಯಾಕಾಶ  ದೂರದರ್ಶಕಕ್ಕೆ  ಕಾಣಿಸಿದಂತೆ  ಮಂಗಳ ಗ್ರಹ........

ಧೀರ್ಘಾರ್ಧ  ಅಕ್ಷ -- 227,936,637  ಕಿಮೀ
ಕಕ್ಷೆಯ  ಪರಿಧಿ  --  1,429,000,000 ಕಿಮೀ
ಕಕ್ಷೀಯ  ಕೇಂದ್ರ  ಚ್ಯುತಿ -- 0,093,412,33
ಪುರರವಿ -- 206,644,545 ಕಿಮೀ
ಅಪರವಿ -- 249,228, 730 ಕಿಮೀ
ಕಕ್ಷೀಯ  ಪರಿಭ್ರಮನ  ಕಾಲ -- 686,98 ದಿನ
ಯುತಿ  ಅವಧಿ -- 779,96 d
ಸರಾಸರಿ  ಕಕ್ಷಾವೇಗ -- 53,859 ಮೈಲಿ/ ಪ್ರತಿ ಘಂಟೆ
ಓರೆ -- 1.850 61° ( ಸೂರ್ಯನ  ಸಮಭಾಜಕ  ರೇಖೆಗೆ 5.65° )
ನೈಸರ್ಗಿಕ  ಉಪಗ್ರಹಗಳು -- 2
ಸಮಭಾಜಕ  ರೇಖೆಯ  ವ್ಯಾಸ --  6,804.9 ಕಿಮೀ (4228.4 ಮೈಲಿ)   (ಭೂಮಿಯ 53.3 %)
ಹ್ರಸ್ವಅಕ್ಷತೆ -- 0.007 36
ಮೇಲ್ಮೈ  ವಿಸ್ತೀರ್ಣ 1.448 ×10^8  ಚದರ  ಕಿಮೀ ( ಭೂಮಿಯ  28.4%)
ಗಾತ್ರ -- 1.6318×10^11 ಘನ ಕಿಮೀ
ದ್ರವ್ಯ ರಾಶಿ -- 6.4185×10^23 ಕಿಗ್ರಾಂ (ಭೂಮಿಯ 10.7%)
ಸರಾಸರಿ  ಸಾಂದ್ರತೆ -- 3.934ಗ್ರಾಂ/ಪ್ರತಿ ಘನ  ಸೆಂ ಮೀ
ಸಮಭಾಜಕಾದ  ಬಳಿ  ಗುರುತ್ವ --  3.69 ಮಿ/ಸೆ^2
ಅಕ್ಷೀಯ ಪರಿಭ್ರಮನ  ಕಾಲ -- 1.025 957 ದಿನ
ಅಕ್ಷದ  ಓರೆ -- 25.19°
ಉತ್ತರ ದ್ರುವದ  ವಿಷುವದಂಶ -- 317.681 43° (21h 10 m 44s)
ಮೇಲ್ಮೈ  ತಾಪಮಾನ....
ಕನಿಷ್ಠ --    _140
ಸರಾಸರಿ --   63
ಗರಿಷ್ಠ  --  87
ವಾತಾವರಣದ  ಒತ್ತಡ -- 0.7 -0.9 k p a
ಇಂಗಾಲದ  ಡೈ - ಆಕ್ಸೈಡ್ -- 95.72%
ಸಾರಜನಕ -- 2.7%
ಆರ್ಗಾನ್ -- 1.6%
ಆಮ್ಲಜನಕ -- 0.13%
ಇಂಗಾಲದ  ಮಾನಾಕ್ಸೈಡ್ -- 0.07%.

ಮಂಗಳನು  60,000  ವರ್ಷಗಳಿಗೊಮ್ಮೆ ಪೃಥ್ವಿಯ  ಅತಿ  ಹತ್ತಿರಕ್ಕೆ  ಬರುತ್ತದೆ.  ಕ್ರಿ. 2208 ರಲ್ಲಿ  ಭೂಮಿಯ .ಅತಿ  ಹತ್ತಿರಕ್ಕೆ  ಬರುವವನಿದ್ದಾನೆ  ಎಂದು  ವೈಜ್ಞಾನಿಕ  ಖಗೋಳ  ಮಾಹಿತಿ  ಇದೆ.


ಡಾ|| ಶೈಲಜಾ  ರಮೇಶ್....

6 comments:

  1. Significations of Mars are well described. Thank you for wonderful write up in Kannada 💐👍👌

    ReplyDelete
  2. Madamd your explanation is excellent,but it is only andfor kuja Chandra, it would be helpful if you can publish for remaining grahas.

    ReplyDelete
  3. Plz your number send me..
    Or cell me 9380945045

    ReplyDelete
  4. Mam serial numbers alli gap ide example after 18 to 42 serial numbers illa please upload all

    ReplyDelete
  5. Deep Exaltation & Deep Debilitation is 28 Degree in Makara & Kataka Respectively, please Correct.

    ReplyDelete