ಹರಿಃ ಓಂ
ಶ್ರೀಗುರುಭ್ಯೋನಮಃ
ಶ್ರೀ ಮಹಾಗಣಪತಯೇ ನಮಃ
--: ವೇದಾಂಗಗಳು :--ವೇದಾಂಗಗಳು ಆರು
1) ಶಿಕ್ಷ ( phonetics)
2) ಛಂದಸ್ಸು (prosody)
3) ವ್ಯಾಕರಣ ( grammar)
4)ನಿರುಕ್ತ ( entomology)
5) ಜ್ಯೋತಿಷ (astronomy)
6) ಕಲ್ಪ (religious practice)
ಇವುಗಳ ವಿವರಣೆಯನ್ನು ಗಮನಿಸಿದಾಗ ವೇದಾಂಗ ವೆಂದು ಕರೆಯಲ್ಪಡುವ ಜ್ಯೋತಿಷ್ಯದ ಅಧ್ಯಯನಕ್ಕೆ ಎಷ್ಟರಮಟ್ಟಿಗೆ ಪೂರಕವಾಗುತ್ತದೆಂಬುದನ್ನು ತಿಳಿಯಬಹುದು. ಈ ಷದಂಗ್ ಗಳ ಬಗೆಗಿನ ಲೇಖನವು ಶಾದ್ವಿಂಶಬ್ರಾಹ್ಮಣ, ಅಪಸ್ತಾಂಭ ಸೂತ್ರಗಳು, ಮಂಡಕೋಪನಿಷತ್, ಮನು ಸ್ಮೃತಿಗಳಲ್ಲಿ ಕಂಡುಬರುತ್ತದೆ.
1) ಶಿಕ್ಷ--- ಯಾವುದೇ ವಿಚಾರವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಆ ಭಾಷೆಯ ಪದಗಳನ್ನು ಯಾವ ರೀತಿಯಾಗಿ ಉಚ್ಚರಿಸಬೇಕೆಂಬುದನ್ನು ತಿಳಿದು ಕೊಳ್ಳಬೇಕಾಗುತ್ತದೆ. ಇದರ ಜ್ಞಾನವಿಲ್ಲದಾಗ ಅಪಾರ್ಥಕ್ಕೆಡೆಮಾಡಿಕೊಡುತ್ತದೆ. ಬರವಣಿಗೆ ಇಲ್ಲದ ಕಾಲದಲ್ಲಿ ಮೌಖಿಕ ಸಂಪ್ರದಾಯವೇ ಪ್ರಮುಖ ಪಾತ್ರವಹಿಸಿದ್ದು, ಗುರುವು ಹೇಳಿಕೊಟ್ಟಂತೆಯೇ ಅದನ್ನು ಮನದಟ್ಟು ಮಾಡಿಕೊಂಡು ಪರಂಪರೆಯನ್ನುಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ವಿಧ್ಯಾರ್ಥಿ ಯದಾ ಗಿರುತ್ತಿತ್ತು. ಪ್ರತಿಯೊಂದು ಗುರುಕುಲದಲ್ಲಿಯೂ ಸಹ ಪದಪಾಠ, ಕ್ರಮಪಾಠ, ಜಠ ಪಾಠ ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರು. ಜ್ಯೋತಿಷ್ಯ ವೂ ಇದರಿಂದ ಹೊರತಾಗಿರಲಿಲ್ಲ.
2) ಛಂದಸ್ಸು --- ಇದೊಂದು ವೇದ ಮಂತ್ರಗಳನ್ನು ರಚಿಸಲು ಅನುಸರಿಸುವ ಕ್ರಮ, ಪ್ರತಿಯೊಂದು ವೇದಮಂತ್ರಗಳನ್ನು ಪಠಣ ಮಾಡುವ ಮೊದಲು ಆ ಮಂತ್ರದ ಋಷಿ, ಛಂದಸ್ಸು, ಮಂತ್ರವು ಯಾವ ದೇವತೆಗೆ ಸಂಬಂಧಿಸಿದೆ ಎಂಬುದನ್ನು ಪಠಿಸುತ್ತಾರೆ.
ಇದೊಂದು ರೀತಿಯ ಗೌರವವನ್ನು ಸೂಚಿಸುವ ಕ್ರಮವಾಗಿದೆ. ಈ ರಚನಾ ಕ್ರಮವನ್ನು ತಿಳಿಸುವುದೇ ಛಂದಸ್ಸು. ( ಕ್ರಿ, ಪೂ 2 ರಲ್ಲಿ ಪಿಂಗಳನ ರಚನೆಯೇ ಪ್ರಾಚೀನವಾದುದು.) ಗಾಯತ್ರಿ, ಉಸ್ನಿಕ್, ಅನುಷ್ಟುಪ್, ತ್ರಿಷ್ಟುಪ್, ಜಗತಿ, ಛಂದಸ್ಸು ಪ್ರಕಾರಗಳು ಮುಖ್ಯವಾದುವು. ಪ್ರತಿಯೊಂದೂ ಸಹ ದೈವ ಪ್ರಧಾನವಾಗಿದ್ದು, ಇವುಗಳ ಕ್ರಮಬದ್ಧವಾದ ಬಳಕೆಯಿಂದ ಉನ್ನತಿಯನ್ನು, ತಪ್ಪಿದ್ದಲ್ಲಿ ಅವನತಿಯನ್ನು ಬಯಸಬಹುದಾಗಿದೆ.
3) ವ್ಯಾಕರಣ --- ವ್ಯಾಕರಣದಿಂದಾಗಿ ಭಾಷೆಯು ಪರಿಪೂರ್ಣತೆಯನ್ನು ಪಡೆಯುತ್ತದೆ ಯಾವುದೇ ಭಾಷೆಯನ್ನು ಅರ್ಥಮಾಡಿ ಕೊಳ್ಳಬೇಕಾದರೆ ವ್ಯಾಕರಣ ಜ್ಞಾನ ಅತೀ ಮುಖ್ಯ. ವೇದಾಂಗದಲ್ಲಿ ವ್ಯಾಕರಣ ಪ್ರಮುಖ ಸ್ಥಾನವನ್ನು ಹೊಂದಿದ್ದು, ಇದನ್ನು ವೇದ ಪುರುಷನ ಮುಖ ಅಥವಾ ಬಾಯಿ ಎಂದೇ ಪರಿಗಣಿಸಲಾಗಿದೆ. ಋಗ್ ವೇದದ ಮಂತ್ರದಲ್ಲಿ ವ್ಯಾಕರಣವನ್ನು ವೃಷಭಕ್ಕೆ ಹೋಲಿಸಿದ್ದಾರೆ. ವೇದವನ್ನು ಅಧ್ಯಯನ ಮಾಡಲು ಹಾಗೂ ಅವುಗಳ ಆರ್ಥವನ್ನು ತಿಳಿಯಲು ವ್ಯಾಕರಣವೆ ಅಡಿಪಾಯವಾಗಿದೆ.
4) ನಿರುಕ್ತ --- ಹಿಂದೂ ಧರ್ಮವು ವೇ ದ ಮೂಲವಾಗಿದ್ದು , ವೇಧಗಳೇ ಆಧಾರವಾಗಿದೆ. ವೇಧ ಪಠಣ ಹಾಗೂ ಅಧ್ಯಯನದಿಂದ ವೇದಾತತ್ವಗಳನ್ನ ಅರಿಯಬಹುದು ಆದರೆ, ಯಜ್ಞ ಯಾಗದಿಗಳ ಆಚರಣೆಗೆ ಸಂಬಂಧಿಸಿದಂತೆ ತಿಳಿಸಿ ಕೊಡುವುದೇ ನಿರುಕ್ತ. ನಿರುಕ್ತವೆಂದರೆ ' ನಿಘಂಟು ' ಎಂದೂ ತಿಳಿಯಬಹುದು. ಹಾಗೂ ವಿಶೇಶವಾಗಿ ವೇದಗಳಲ್ಲಿ ಬಳಕೆಯಾಗುವ ಪದಗಳಿಗೆ ಪರಿಪೂರ್ಣ ವಾದ ವಿವರಣೆಯನ್ನು ಕೊಡುವುದೇ ನಿರುಕ್ತ.
5) ಜ್ಯೋತಿಷ ( ಜ್ಯೋತಿರವಿಜ್ಞಾನ - ಖಗೋಳ, ಮತ್ತು ಜ್ಯೋತಿಷ್ಯ)
ಇದನ್ನು ಜ್ಯೋತಿಷ ಹಾಗೂ ಜ್ಯೋತಿಷ್ಯ ಶಾಸ್ತ್ರ ವೆಂದು ಪರಿಗಣಿಸಬಹುದು. ಅಧ್ಯಯನ ದೃಷ್ಟಿಯಿಂದ ವೇದ ಕಾಲ ಹಾಗೂ ವೇದನಂತರಾದ ಕಾಲವೆಂದು ವಿಭಾಗಿಸಿಕೊಳ್ಳಬಹುದು. ಮೊದಲನೆಯದು ವೇದಾಂಗ ವಾದ ಜ್ಯೋತಿರವಿಜ್ಞಾನ, ವೇದಕಾಲ ದಲ್ಲಿನ ಯಜ್ಞಯಾಗಾದಿಯಾಗಿ ಎಲ್ಲ ಕ್ರಿಯೆಗಳಲ್ಲಿ ಬಳಕೆಯಲ್ಲಿತ್ತು. ಪ್ರತಿಯೊಂದು ಕ್ರಿಯೆಗೂ ಅತ್ಯಂತ ಶುಭವಾದ ಸಮಯವನ್ನು ನಿಗದಿಪಡಿಸುವುದು ಜ್ಯೋತಿಷ್ಯದ ಮೂಲೋದ್ದೇಶವಾಗಿತ್ತು, ಇದರಿಂದ ಮಾತ್ರ ದೇವತೆಗಳು ತೃಪ್ತರಾಗಿ ಕರ್ಮಕ್ಕೆ ತಕ್ಕಂತೆ ಫಲವನ್ನು ಕೊಡುತ್ತಿದ್ದರು.
6) ಕಲ್ಪ -- ಸೃಷ್ಟಿಕರ್ತನಾದ ಬ್ರಹ್ಮನ ಆಯಸ್ಸನ್ನು ನೂರು ದೇವಮಾನದ ವರ್ಷವೆಂದು ನಿಗಧಿ ಪಡಿಸಲಾಗಿದೆ. ಇದರಲ್ಲಿನ ಒಂದು ದಿನವನ್ನು ಕಲ್ಪ ಎನ್ನುತ್ತಾರೆ. ಈ ಒಂದು ದಿನದಲ್ಲಿನ ಹಗಲಿನಲ್ಲಿ ಬ್ರಹ್ಮನಿಂದ ಸೃಷ್ಟಿಯಾದದ್ದು ಅದೇ ದಿನ ರಾತ್ರಿ ಪ್ರಲಯವಾಗುತ್ತದೆ. ಇದನ್ನು ನೈಮಿತ್ತಿಕ ಪ್ರಲಯವೆಂದು ಕರೆಯುತ್ತಾರೆ. ಈ ಕಾಲದಲ್ಲಿ ಯಾವುದೇ ಸೃಷ್ಠಿ ಯಾಗುವುದಿಲ್ಲ. ಪ್ರತಿಯೊಂದು ಕಲ್ಪವನ್ನು 14 ಮನ್ವo ತರ ಗಳನ್ನಾಗಿ ವಿಭಾಗಿಸಲಾಗಿದ್ದು, ಪ್ರತಿಯೊಂದು ಮನ್ವಂತರವೂ ಒಬ್ಬೊಬ್ಬ ಮನುವಿನ. ಆಡಲಿತಕ್ಕೊಳಪಟ್ಟಿರುತ್ತದೆ. ಸದರಿ ಈಗ ನಡೆಯುತ್ತಿರುವ ಶ್ವೇತವರಾಹಕಲ್ಪವು ಬ್ರಹ್ಮನ 51 ನೇ ವರ್ಷವಾಗಿದ್ದು, ಹಾಗೆಯೇ ಹದಿನಾಲ್ಕು ಮನ್ವಂತರಗಳಲ್ಲಿ ವೈವಸ್ವತ ಮನ್ವಂತರವೂ ಎಳನೆಯದಾಗಿದೇ. ಒಂದು ಕಲ್ಪವೆಂಬುದು ನಾಲ್ಕು ಯುಗಗಳಿಂದ ಕೂಡಿರುತ್ತದೆ. ಮಾನವನ ಜೀವಿತದ ಪ್ರಕಾರ ಒಂದು ಕಲ್ಪವು 4.32 ಬಿಲಿಯನ್ ವರ್ಷಗಳಾಗುತ್ತದೆ.
✍ ಡಾ. ಶೈಲಜಾ ರಮೇಶ್
No comments:
Post a Comment