Monday, 21 July 2025

ನಕ್ಷತ್ರಗಳ ಬಗೆಗೆ ಅಧ್ಯಯನ

          ಹರಿಃ ಓಂ
              ಶ್ರೀ ಗಣೇಶಾಯ ನಮಃ
                --: ಕ್ಷತ್ರಗಳ   ಬಗೆಗೆ  ಅಧ್ಯಯನ :--
               ಮುಂದುವರೆದ ಭಾಗ..........

Picture source: Internet/ social media
          ಪ್ರತಿಯೊಂದೂ  ಪಂಚಭೂತಾತ್ಮಕ ವಾಗಿರುವುದರಿಂದಲೇ  ಈ  ಜಗತ್ತಿಗೆ  ಪ್ರಪಂಚ ಎಂಬ ಹೆಸರು  ಬಂದಿರುವುದು.
ಭೂಮಿ ಅಥವಾ ಪೃಥ್ವಿತತ್ವ
ಜಲತತ್ವ
ತೇಜೋತತ್ವ ಅಥವಾ ಅಗ್ನಿತತ್ವ
ವಾಯುತತ್ವ
ಆಕಾಶತತ್ವ...
ಇವು   ಪಂಚತತ್ವಗಳು.
          ನಕ್ಷತ್ರಗಳೂ  ಸಹ ತತ್ವ ಪ್ರಧಾನವಾಗಿವೆ.   ಪ್ರತಿ ನಕ್ಷತ್ರವೂ ಒಂದಲ್ಲ  ಒಂದು  ತತ್ವಕ್ಕೆ  ಸೇರಿದವಾಗಿದೆ.  ಇವುಗಳ  ಪ್ರಭಾವವು  ಸದಾ  ಭೂಮಿಯ  ಜೀವಿಗಳ ಮೇಲಾಗುವುದರಿಂದ  ಆಯಾ ತತ್ವದ  ಪ್ರಭಾವಕ್ಕನುಸಾರವಾಗಿ  ವ್ಯಕ್ತಿತ್ವವನ್ನು  ಹೇಗೆ ರೂಪಿಸಿಕೊಳ್ಳಬೇಕು  ಹಾಗೂ  ಯಾವ  ಕಾರಣದಿಂದ  ರೋಗಗಳು  ಭಾಧಿಸಬಹುದೆಂದು  ತಿಳಿಯಲು  ಅನುಕೂಲವಾಗುತ್ತದೆ.  ವಿಶೇಷವಾಗಿ  ಪ್ರಶ್ನಾಶಾಸ್ತ್ರದಲ್ಲಿ   ಕಳವು/ಸಾವು  ಇತ್ಯಾದಿಗಳ  ವಿಷಯಕ್ಕೆ  ಸಂಬಂಧಿಸಿದಂತೆ  ತಿಳಿಯಬಹುದು.  ಏಕತತ್ವ  ಗ್ರಹಗಳು  ಸ್ವನಕ್ಷತ್ರದಲ್ಲಿದ್ದಾಗ  ಅವುಗಳಿಗೆ  ಸಂಬಂಧಿಸಿದ  ತತ್ವಗುಣಗಳು  ವೃದ್ಧಿಸುತ್ತದೆ. ಹಾಗೂ ವಿವಾಹಕ್ಕೆ  ಸಂಬಂಧಿಸಿದಂತೆ  ವಧೂವರರ  ಸಾಲಾವಳಿ ಯನ್ನು  ನೋಡುವಾಗ  ತತ್ವಗಳಿಂದಲೂ  ಹೊಂದಾಣಿಕೆ  ಮಾಡಬಹುದು.
        ಈಗ  ನಕ್ಷತ್ರಗಳ  ತತ್ವಗಳನ್ನು  ತಿಳಿಯೋಣ.

ಪೃಥ್ವಿ/ ಭೂತತ್ವ  :-- ಆಶ್ವಿನಿ,  ಭರಣಿ, ಕೃತ್ತಿಕ,  ರೋಹಿಣಿ  , ಮೃಗಶಿರ .
   ಗ್ರಹಗಳಲ್ಲಿ  ಬುಧ  ಭೂತತ್ವ  ಗ್ರಹ.

ಜಲತತ್ವ :-- ಆರಿದ್ರ,  ಪುನರ್ವಸು,  ಪುಷ್ಯ,  ಆಶ್ಲೇಷ,  ಮಖಾ, ಪುಬ್ಬ.
    ಗ್ರಹಗಳಲ್ಲಿ  ಚಂದ್ರ,  ಶುಕ್ರ  ಜಲತತ್ವ  ಗ್ರಹಗಳು.

ತೇಜೋ/ ಅಗ್ನಿತತ್ವ :--  ಉತ್ತರ,  ಹಸ್ತ, ಚಿತ್ತ, ಸ್ವಾತಿ,  ವಿಶಾಖ,  ಅನೂರಾಧ.
     ಗ್ರಹಗಳಲ್ಲಿ  ರವಿ  ಕುಜ  ಅಗ್ನಿತತ್ವ  ಗ್ರಹಗಳು.

ವಾಯುತತ್ವ  :--  ಜ್ಯೇಷ್ಠ,  ಮೂಲ,  ಪೂರ್ವಾಷಾಢ, ಉತ್ತರಾಷಾಢ,  ಶ್ರವಣ.
     ಗ್ರಹಗಳಲ್ಲಿ   ಶನಿ  ವಾಯುತತ್ವ  ಗ್ರಹ.

ಆಕಾಶತತ್ವ :--  ಧನಿಷ್ಠ,  ಶತಭಿಷ,  ಪೂರ್ವಾಬಾದ್ರ,  ಉತ್ತರಾಬಾದ್ರ,  ರೇವತಿ.
     ಗ್ರಹಗಳಲ್ಲಿ  ಗುರು  ಆಕಾಶತತ್ವ  ಗ್ರಹ.

          ಗ್ರಹ,  ರಾಶಿಗಳಲ್ಲಿ   ಚಾತುರ್ವರ್ಣಗಳಾದ  ಬ್ರಾಹ್ಮಣ,  ಕ್ಷತ್ರಿಯ, ವೈಶ್ಯ, ಶೂದ್ರ  ವೆಂಬ ಜಾತಿ  ವಿಭಾಗಗಳಿರುವಂತೆ  ನಕ್ಷತ್ರಗಳಲ್ಲಿಯೂ ಕಾಣಬಹುದಾಗಿದೆ.

ಚಾತುರ್ವಣ್ಯಂ ಮಯಾ  ದೃಷ್ಠ್ಯಮ್ ಗುಣಕರ್ಮ  ವಿಭಾಗಶಃ"  ಎನ್ನುವಂತೆ ಜಾತಿಯು  ಗುಣಧರ್ಮಗಳನ್ನು  ಸೂಚಿಸುತ್ತದೆ.

ಈ  ದಿಸೆಯಲ್ಲಿ  ನಕ್ಷತ್ರಗಳ  ಜಾತಿಯು  ಈ  ಕೆಳಕಂಡಂತೆ ಇದೆ.

ಬ್ರಾಹ್ಮಣ  ಜಾತಿ  :--  ಕೃತಿಕಾ,  ಪುಬ್ಬ,  ಪೂರ್ವಾಷಾಢ,  ಪೂರ್ವಾಬಾದ್ರ.
ಕ್ಷತ್ರಿಯ ಜಾತಿ  :--  ಪುಷ್ಯ,  ಉತ್ತರ,  ಉತ್ತರಾಷಾಢ,  ಉತ್ತರಾಬಾದ್ರ.
ವೈಶ್ಯಜಾತಿ :--  ಆಶ್ವಿನಿ,  ಪುನರ್ವಸು,  ಹಸ್ತ, 
ಶೂದ್ರಜಾತಿ. :-- ಮಖಾ,  ಅನೂರಾಧ,  ರೇವತಿ.
ಸಂಕರ ಜಾತಿ  :--  ಚಿತ್ತ,  ಮೃಗಶಿರ,  ಧನಿಷ್ಠ.
ಕಂಟಕ ಜಾತಿ  :--  ಆರಿದ್ರ,  ಸ್ವಾತಿ,  ಶತಭಿಷ,  ಮೂಲ
ಚಾಂಡಾಲ  ಜಾತಿ  :--  ಭರಣಿ,  ಅಶ್ಲೇಷ, ವಿಶಾಖ,  ಶ್ರವಣ.

ನಕ್ಷತ್ರ ಗಳಿಗೆ  ಕ್ಷಿಪ್ರಾದಿ  ಸಂಜ್ಞೆಗಳಿದ್ದು  ಆಯಾ  ಸಂಜ್ಞೆಗಳಿಗೆ  ಅನುಸಾರವಾಗಿ  ಫಲಗಳನ್ನು  ಕೊಡುತ್ತದೆ.

ಕ್ಷಿಪ್ರ ನಕ್ಷತ್ರ  :--   ಆಶ್ವಿನಿ,  ಹಸ್ತ,  ಪುಷ್ಯ.
    ಇವು ತ್ವರಿತವಾಗಿ  ಫಲಕೊಡುತ್ತದೆ.
ದಾರುಣ  ನಕ್ಷತ್ರ :--  ಮೂಲ,  ಆರಿದ್ರ, ಜ್ಯೇಷ್ಠ, ಆಶ್ಲೇಷ
     ಇವು ಕಾರ್ಯಗಳಲ್ಲಿ  ಭಯವನ್ನುಂಟು ಮಾಡುತ್ತದೆ.
ಮೃದು ನಕ್ಷತ್ರ  :--   ಚಿತ್ತ,  ರೇವತಿ,  ಮೃಗಶಿರ,  ಅನೂರಾಧ.
     ಮಂದ ಗತಿಯಲ್ಲಿ  ಅಂದ್ರೆ ನಿಧಾನವಾಗಿ ಫಲಕೊಡುತ್ತವೆ.
ಉಗ್ರ ನಕ್ಷತ್ರ :-- ಭರಣಿ,  ಮಖಾ, ಪುಬ್ಬ, ಪೂರ್ವಾಷಾಢ,  ಪೂರ್ವಾಬಾದ್ರ.
     ಇವು ಘೋರ ಫಲಗಳನ್ನು  ಕೊಡುತ್ತದೇ.
ಸಾಧಾರಣ  ನಕ್ಷತ್ರ  :-- ಕೃತಿಕಾ,  ವಿಶಾಖ.
     ಹೆಸರಿನಂತೆಯೇ  ಸಾಧಾರಣ  ಫಲಗಳನ್ನು  ಕೊಡುತ್ತದೆ.
ಚರ ನಕ್ಷತ್ರ  :-- ಸ್ವಾತಿ, ಪುನರ್ವಸು,  ಶ್ರವಣ, ಧನಿಷ್ಠ, ಶತಭಿಷ.
     ಇವು  ಶಾಶ್ವತವಲ್ಲದ  ಚಂಚಲ ಫಲವನ್ನುಂಟುಮಾಡುತ್ತದೆ.
ಸ್ಥಿರ ನಕ್ಷತ್ರ :---  ರೋಹಿಣಿ,  ಉತ್ತರ,  ಉತ್ತರಾಷಾಢ, ಉತ್ತರಾಬಾದ್ರ.
      ಇವು  ಶಾಶ್ವತ ಫಲವನ್ನುಂಟು  ಮಾಡುತ್ತವೆ.
        ಪ್ರತಿಯೊಂದಕ್ಕೂ  ರವಿಯೇ  ಕೇಂದ್ರವಾಗಿರುವುದರಿಂದ  ಸೂರ್ಯನ ಚಲನೆಯನ್ನೇ  ಅನುಸರಿಸಿ  ಕೆಲವು ನಕ್ಷತ್ರಗಳು ಜೀವ  ಹಾಗೂ  ನಿರ್ಜೀವವಾಗುತ್ತದೆ.
      ಅದು  ಹೇಗೆ  ಎಂದು ತಿಳಿಯೋಣ.....
       ಸೂರ್ಯನಿರುವ  ನಕ್ಷತ್ರ  ಹಾಗೂ ಸೂರ್ಯನಿರುವ  ನಕ್ಷತ್ರ ದ ಹಿಂದಿನ  ಹಾಗೂ  ಮುಂದಿನ ಮೂರು  ನಕ್ಷತ್ರಗಳು  ನಿರ್ಜೀವ  ನಕ್ಷತ್ರಗಳಾಗುತ್ತವೆ.
        ನಂತರದ  ಏಳು  ನಕ್ಷತ್ರ ಗಳು  ಅರ್ಧ ಜೀವ  ನಕ್ಷತ್ರಗಳು.
         ನಂತರದ ಒಂದು ನಕ್ಷತ್ರ  ಮೃತನಕ್ಷತ್ರ
ಮತ್ತು  ನಂತರದ  8 ನಕ್ಷತ್ರಗಳು ಪೂರ್ಣಜೀವ ವಿರುವ ನಕ್ಷತ್ರಗಳು. ಹಾಗೂ  ನಂತರದ  ನಕ್ಷತ್ರಗಳು  ಪಾದ  ಜೀವವಿರುವ   ನಕ್ಷತ್ರಗಳು.
          ದುಷ್ಟ  ನಕ್ಷತ್ರದ ಬಗೆಗೆ  ವಿಚಾರ ಮಾಡಿದಾಗ  ಮೊದಲು ಎದುರಾಗುವುದೇ " ವೈನಾಶಿಕ  ನಕ್ಷತ್ರ " .
ವೈನಾಶಿಕವೆಂದರೆ  ನಾಶ  ಮಾಡುವುದೆಂದು. ಅರ್ಥವಾಗುತ್ತದೆ. ಅಂದರೆ  ಈ  ನಕ್ಷತ್ರಗಳಲ್ಲಿ  ಯಾವುದೇ. ಶುಭ ಕೆಲಸಗಳನ್ನು  ಮಾಡಬಾರದು.
ಇದರಲ್ಲಿ,
ಕರ್ಮಸಂಜ್ಞೆ,  ಸಾಮುದಾಯಿಕ,  ವಿನಾಶ, ಹಾಗೂ  ಮಾನಸ ಎಂಬ ನಾಲ್ಕು  ವಿಭಾಗಗಳಿವೆ.
ಇವುಗಳ  ಎಣಿಕೆಯಲ್ಲಿ  ಪ್ರತಿಯೊಂದೂ  ಜನ್ಮಲಗ್ನವನ್ನು ಆಧರಿಸುತ್ತಿರುತ್ತದೆ  ಅಂದರೆ  ಜನ್ಮ ಲಗ್ನ ನಕ್ಷತ್ರದಿಂದಲೇ  ಎಣಿಸಬೇಕು.
     ಜನ್ಮ  ಲಗ್ನ ನಕ್ಷತ್ರದಿಂದ  ಹತ್ತನೇ  ನಕ್ಷತ್ರವು  ಕರ್ಮಸಂಜ್ಞೆ  --  ಅಂದರೆ  ಯಾವುದೇ ರೀತಿಯಾದ  ಕರ್ಮ  ಮಾಡಲೂ  ಸಹ  ಈ  ನಕ್ಷತ್ರವು  ನಿಷಿದ್ಧ.
     ಜನ್ಮ ಲಗ್ನ  ನಕ್ಷತ್ರದಿಂದ  16 ನೆ  ನಕ್ಷತ್ರವು  ಸಾಂಘಿಕ --  ಸಮುದಾಯದಲ್ಲಿ,  ಸಾರ್ವಜನಿಕರ  ಹಿತಕ್ಕಾಗಿ ಮಾಡುವ  ಕೆಲಸಗಳಿಗೆ  ನಿಷಿದ್ಧ.
     ಜನ್ಮ ಲಗ್ನ ನಕ್ಷತ್ರದಿಂದ  23 ನೆ  ನಕ್ಷತ್ರವು  ವಿನಾಶ---   ಮಾಡುವ  ಕಾರ್ಯಕ್ಕೆ  ವಿಘ್ನಗಳನ್ನು  ತಂದೊಡ್ಡಿ  ನಾಶಮಾಡುತ್ತದೆ.
     ಜನ್ಮ ಲಗ್ನ ನಕ್ಷತ್ರದಿಂದ  25 ನೇ  ನಕ್ಷತ್ರವು  ಮಾನಸ  --  ಪ್ರತಿ  ಕೆಲಸಗಳನ್ನು  ನಿರ್ವಹಿಸಲು  ಇರಬೇಕಾದ  ಮಾನಸಿಕ  ಸ್ಥಿತಿಯನ್ನೇ  ಹಾಳುಮಾಡುತ್ತದೇ.
ಸೃಷ್ಟಿ  ಸ್ಥಿತಿ  ಲಯ  ನಕ್ಷತ್ರಗಳು  :--  ಸೃಷ್ಟಿ,  ಸ್ಥಿತಿ,  ಲಯಗಳಿಗೂ  ನಕ್ಷತ್ರವೇ  ಕಾರಣವಾಗಿದೆ.
ವೃದ್ಧಿಯಾಗಬೇಕಾದ  ಕೆಲಸಗಳಿಗೆ  ಸೃಷ್ಟಿ ನಕ್ಷತ್ರವನ್ನೂ,  ಮಾಡಿದ  ಕೆಲಸವು ಮುಂದಿನ  ತಲೆಮಾರಿಗೂ  ಉಳಿಯುವಂತೆ  ಮಾಡಬೇಕಾದ  ಕೆಲಸಗಳಿಗೆ ಸ್ಥಿತಿ  ನಕ್ಷತ್ರಗಳನ್ನೂ,  ಹಳೆಯ  ಕೆಲಸ  ಮುಗಿದು  ಹೊಸ  ಕೆಲಸದ  ಪ್ರಾರಂಭಕ್ಕೆ ಲಯ ನಕ್ಷತ್ರವನ್ನೂ  ಉಪಯೋಗಿಸ  ಬೇಕು.

ಹಾಗಾದರೆ  ಈ  ನಕ್ಷತ್ರ ಗಳಾವುವು  ತಿಳಿಯೋಣ  ಬನ್ನಿ...
     ಸೃಷ್ಟಿ  ನಕ್ಷತ್ರಗಳು  :--  ಆಶ್ವಿನಿ,  ರೋಹಿಣಿ,  ಪುನರ್ವಸು,  ಮಖಾ,  ಹಸ್ತ,  ವಿಶಾಖ,  ಮೂಲ,  ಶ್ರವಣ,  ಪೂರ್ವಾಬಾದ್ರ.
     ಸ್ಥಿತಿ ನಕ್ಷತ್ರಗಳು  :--  ಭರಣಿ,  ಮೃಗಶಿರ,  ಪುಷ್ಯ,  ಪುಬ್ಬ, ಚಿತ್ತ,  ಅನೂರಾಧ,  ಪೂರ್ವಾಷಾಢ, ಧನಿಷ್ಠ, ಉತ್ತರಾಬಾದ್ರ.
     ಲಯ ನಕ್ಷತ್ರಗಳು  :--  ಕೃತಿಕಾ,  ಆರಿದ್ರ,  ಆಶ್ಲೇಷ,  ಉತ್ತರ,  ಸ್ವಾತಿ,  ಜ್ಯೇಷ್ಠ,  ಉತ್ತರಾಷಾಢ,  ಶತಭಿಷ,  ರೇವತಿ.
     ದುರಿತಾಂಶ  ನಕ್ಷತ್ರಗಳು  :--  ಲಯ  ನಕ್ಷತ್ರಗಳೆಂದು  ಗುರುತಿಸಿರುವ  ನಕ್ಷತ್ರಗಳ  ಮೂರು  ಮತ್ತು  ನಾಲ್ಕನೇ  ಪಾದಗಳನ್ನು  ದುರಿತಾಂಶ  ಎನ್ನುತ್ತಾರೆ.  ಇದು  ಅತ್ಯಂತ  ಅಶುಭ ಫಲವನ್ನು  ನೀಡುವುದಾಗಿದ್ದು,  ಎಲ್ಲಾ  ಶುಭ ಕಾರ್ಯಗಳಿಗೂ  ವ್ಯರ್ಜ್ಯ.  ವಿಶೇಷವಾಗಿ  ಮಹೂರ್ತ ಲಗ್ನಗಳಲ್ಲಿ  ಪರಿಗಣಿಸಲೇ  ಬೇಕು.  ಜನನವು ನಮ್ಮ  ಕೈಯಲ್ಲಿರುವುದಿಲ್ಲವಾದ್ದರಿಂದ  ಜನನಕ್ಕೆ  ಮಾತ್ರ  ಸೂಕ್ತವಾದ  ಶಾಂತಿ ಪರಿಹಾರಗಳನ್ನು  ಮಾಡಬೇಕಾಗುತ್ತದೆ.

ನಕ್ಷತ್ರಗಳ  ದಿಕ್ಕು  :--  
ದಿಕ್ಕುಗಳು  ಎಂಟು  ಎಂದು ನಮ್ಮ ಪ್ರಾಜ್ಞರಾದ  ಋಷಿಗಳು  ಗುರುತಿಸಿರುತ್ತಾರೆ.
ಅವುಗಳು ,   ಪೂರ್ವ , ಪಶ್ಚಿಮ, ಉತ್ತರ  ದಕ್ಷಿಣ
ಈಶಾನ್ಯ,  ಆಗ್ನೇಯ,  ನೈಋತ್ಯ ಮತ್ತು  ವಾಯುವ್ಯ.
ಇವುಗಳಿಗೆ  ಅನುಸಾರವಾಗಿ....
ಕೃತಿಕಾ,  ರೋಹಿಣಿ, ಮೃಗಶಿರ  --  ಕೇಂದ್ರ  ಅಥವಾ  ಮದ್ಯಭಾಗ.
ಆರಿದ್ರ, ಪುನರ್ವಸು, ಪುಷ್ಯ,  --  ಪೂರ್ವ
ಆಶ್ಲೇಷ,  ಮಖಾ,  ಪುಬ್ಬ   --  ಆಗ್ನೇಯ
ಉತ್ತರ ,  ಹಸ್ತ,  ಚಿತ್ತ.  --  ದಕ್ಷಿಣ
ಸ್ವಾತಿ,  ವಿಶಾಖ,  ಅನೂರಾಧ --  ನೈಋತ್ಯ
ಜ್ಯೇಷ್ಠ,  ಮೂಲ,  ಪೂರ್ವಾಷಾಢ  --  ಪಶ್ಚಿಮ
ಉತ್ತರಾಷಾಢ,  ಶ್ರವಣ  ಧನಿಷ್ಠ  --  ವಾಯುವ್ಯ
ಶತಭಿಷ,  ಪೂರ್ವಾಬಾದ್ರ,  ಉತ್ತರಾಬಾದ್ರ  -- ಉತ್ತರ
ರೇವತಿ,  ಆಶ್ವಿನಿ,  ಭರಣಿ. --  ಈಶಾನ್ಯ
ಮುಂದಿನ  ಭಾಗದಲ್ಲಿ ನಕ್ಷತ್ರಗಳ  ಬಗ್ಗೆ  ಇನ್ನೂ  ಹೆಚ್ಚಿನ  ಮಾಹಿತಿಯನ್ನು  ತಿಳಿಯೋಣ....
ಮುಂದುವರೆಯುತ್ತದೇ...........  
✍  ಡಾ :  B N  ಶೈಲಜಾ ರಮೇಶ್........

2 comments:

  1. ಈ ಸಂಚಿಕೆಯೂ ಎಲ್ಲ ನಕ್ಷತ್ರಗಳ ವಿಷಯಗಳನ್ನೊಳಗೊಂಡು ಬಹಳ ಚೆನ್ನಾಗಿ ಮೂಡಿಬಂದಿದೆ.ನಕ್ಷತ್ರಗಳ ವಿವಿಧ ವಿಂಗಡನೆ,ಗುಣಗಳು, ಗುಂಪುಗಳ ವಿವರಣೆಗಳು ಎಲ್ಲರಿಗೂ ಉಪಯುಕ್ತವಾಗಿವೆ.
    ಧನ್ಯವಾದಗಳು

    ReplyDelete
  2. ಬಹಳ ಉತ್ತಮವಾದ ವಿಸ್ತಾರವಾದ ವಿಶಯ ನಕ್ಷತ್ರಗಳ ಬಗ್ಗೆ ನೀಡಿದ್ದೀರಿ. ಧನ್ಯವಾದಗಳು ಮೇಡಂ.

    ReplyDelete