ಹರಿಃ ಓಂ
ಶ್ರೀಗುರುಭ್ಯೋನಮಃ
ಶ್ರೀ ಮಹಾಗಣಪತ ಯೇ ನಮಃ
ಜ್ಯೋತಿಷ್ಯ ಪದ್ಧತಿಗಳ ಪರಿಚಯ(ಪರಾಶರ, ಜೈಮಿನಿ, ತಾಜಕ)
ಜ್ಯೋತಿಷ್ಯದ ಪರಿಕಲ್ಪನೆ ಅಸದೃಶ ವಾದುದು, ಏಕೆಂದರೆ ವೇದಾಂಗ ಜ್ಯೋತಿಷ್ಯದಲ್ಲಿ ಗುರುತಿಸಿರುವ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಯಾವುದೇ ರೀತಿಯಾದ, ಪ್ರಸಕ್ತದಲ್ಲಿರುವಂತೆ ವೈಜ್ಞಾನಿಕ ಉಪಕರಣಗಳ ಸಹಾಯವಿಲ್ಲದೆ ತಮ್ಮ ದಿವ್ಯದೃಷ್ಟಿಯಿಂದ ಪ್ರತಿಯೊಂದನ್ನು ನಿಖರವಾಗಿ ಕಂಡುಕೊಂಡು ಖಗೋಲಶಾಸ್ತ್ರ್ತ್ರಕ್ಕೊಂದು ಆಯಾಮವನ್ನು ಒದಗಿಸಿರುವುದು ಪ್ರಶಂಸನೀಯ ವೇ ಸರಿ.
ಭಾರತೀಯ ಜ್ಯೋತಿಷ್ಯ ವೆಂದಾಕ್ಷಣ ಪರಾಶರೀಯವೆಂದೇ ಪರಿಗಣಿಸುವಸ್ಟ ರ ಮಟ್ಟದಲ್ಲಿ ಪರಾಶರ ಹೋರಾಶಾಸ್ತ್ರವು ತನ್ನ ಸ್ಥಾನವನ್ನು ಗಳಿಸಿಕೊಂಡಿದೆ. ಅದಲ್ಲದೆ "gospel of astrology " ಎಂದೇ ಗುರುತಿಸಲ್ಪಟ್ಟಿದೆ. ಸದರಿ ಪರಿಸ್ಥಿತಿಯಲ್ಲಿ ಲಭ್ಯವಿರುವ ಪರಾಶರ ಹೋರಾಶಾಸ್ತ್ರವು, ಪರಾಶರ ಹೊರೆಯಲ್ಲ. ಏಳು ಅಥವಾ. ಎಂಟ ನೆ ಶತಮಾನದಲ್ಲಿ ಲಗ್ನದ ಪರಿಕಲ್ಪನೆಯಲ್ಲಿ ಪರಿಸ್ಕರಿಸಲ್ಪಟ್ಟ ಆವೃತ್ತಿ. ಈ ಬಗೆಗೆ ವಿದ್ವಾಮ್ಸರು ತಮ್ಮದೇ ಆದ ಅಭಿಪ್ರಾಯಗಳನ್ನು ಆಳವಾದ ಅಧ್ಯಯನದ ಮೂಲಕ ಭಿನ್ನರೀತಿಯಲ್ಲಿ ವ್ಯಕ್ತಪಡಿಸಿರುತ್ತಾರೆ. ಪರಾಶರ ಹೋರಾ ಸಂಹಿತೆಯೂ ಮೂಲ ಸ್ವರೂಪವನ್ನು ಹೊಂದಿರದೆ ಕಾಲಕಾಲಕ್ಕೆ ಇತರರಿಂದ ಸೇರ್ಪಡೆ ಗೊಂಡು ತಾವು ಕಂಡುಕೊಂಡ ವಿಚಾರಗಳನ್ನು ತಿಳಿಸಿರುತ್ತಾರೆ. ಮುಂದೆ ಬಂದ ಆನೇಕ ಜ್ಯೋತಿಷಿ ಗ್ರಂಥಕಾರರು ತಮ್ಮ ತಮ್ಮ ಆಭಿರುಚಿ ಗೆ ತಕ್ಕಂತೆ ಪರಾಶರಿಯಲ್ಲಿನ ವಿಚಾರಗಳನ್ನು ಅಳ ವಡಿಸಿ ಕೊಂಡಿದ್ದಾರೆ. ನಾರದ ಸಂಹಿತಾ , ಗಾರ್ಗ್ಯಸಂಹಿತಾ, ಸಾರಾವಳಿ, ಜಾತಕ ಪಾರಿಜಾತ, ಪ್ರಶ್ನಾಮಾರ್ಗ, ಹೋರಾಕೃಶನೀಯ ಹಾಗೂ ಹಲವು ನಾಡೀ ಗ್ರಂಥಗಳು ಈ ಪದ್ಧತಿ ಯನ್ನೇ ಅಳವಡಿಸಿಕೊಂಡು ರಚಿತವಾಗಿದೆ.
ವೇದಾಂಗ ಜ್ಯೋತಿಷ್ಯದಲ್ಲಿ ನಮೂ ದಿತ ವಾಗಿರುವುದು ಖಗೋಲದ ನಿಗದಿ ತ ಲೆಕ್ಕಾಚಾರವೇ ಹೊರತು ಫಲಜ್ಯೋತಿಷ್ಯವಲ್ಲ. ರಾಮಾಯಣ, ಮಹಾಭಾರತದಲ್ಲಿಯೂ ಸಹ ಲಭ್ಯ ವಿರುವುದು ಖಗೋಳ ಶಾಸ್ತ್ರದ ಬಗೆಗಿನ ವಿಚಾರಗಳೇ ಹೊರತು ಫಲಜ್ಯೋತಿಷ್ಯದ ಬಗೆಗಲ್ಲ. ಈ ಫಲಜ್ಯೋತಿಷ್ಯವು ಯಾವಾಗ ಆರಂಭವಾಯಿತೇನ್ನುವುದರ ಬಗೆಗೆ ಯಾವುದೇ ರೀತಿಯ ನಿಖರವಾದ ಮಾಹಿತಿಯು ಲಭ್ಯವಾಗಿಲ್ಲ. ವೈದಿಕ ಜ್ಯೋತಿಷ್ಯದ ಆಧಾರದ ಮೇಲೆ ಫಲಜ್ಯೋತಿಷ್ಯ ಅನಾವರಣಗೊಂಡಿರಬಹುದೆಂದು ಊ ಹಿಸಬಹುದು. ಕ್ರಿ. ಶ. 2ನೇ ಶತಮಾನದ ನಂತರ ಗ್ರೀಕರಿಂದ ಪ್ರಾರಂಭವಾಗಿರಬಹುದೆಂಬ ವಾದವಿದೆ. ಯಾವ ರೀತಿಯಿಂದ ಫಲಜ್ಯೋತಿಃಯಾದ ಪದ್ದತಿಯು ಭಾರತೀಯ ಪದ್ದತಿಗೆ ಅಳ ವಡಿಸಲಾಯಿತೆಂದು ಹೇಳುವ ಯಾವುದೇ ಗ್ರಂಥವೂ ಲಭ್ಯವಿಲ್ಲ.
ಪ್ರಸಕ್ತದಲ್ಲಿ ಪರಾಶರ, ಜೈಮಿನಿ , ಹಾಗೂ ತಾಜಕಗಳ ಪದ್ದತಿಗಳು ಚಾಲ್ತಿಯಲ್ಲಿದೆ. ಪರಾಶರ ಪದ್ದತಿಯು ಇದಮಿಥಂ ಎಂದು ಹೇಳುವ ಸಿದ್ದಾಂತ ರೂಪವಾದ್ರೆ, ಜೈಮಿನಿ ಪದ್ದತಿಯು ಸೂತ್ರ ರೂಪವಾದುದು, ಹಾಗೂ ತಾಜಕ ಪದ್ದತಿಯು ಪ್ರಶ್ನ ಪದ್ದತಿಯಾಗಿದೆ.
ಭಾರತೀಯ ಜ್ಯೋತಿಷ್ಯ ಪದ್ಧತಿಎಂದು ಪ್ರಸಿದ್ಧವಾಗಿರುವ ಈ ಮೂರು ಪದ್ಧತಿಗಳನ್ನು ಕುರಿತಂತೆ ಸ್ವಲ್ಪ ಕಣ್ಣಾ ಡಿಸಿದಾಗ ಮಹತ್ತರ ವಿಚಾರಗಳು ಗರಿಗೆದರಿ
ನಿಲ್ಲುತ್ತದೆ, ಪರಾಶರಿಯ ಪದ್ದತಿ ಪ್ರಕಾರ ಜಾತಕಗಳಲ್ಲಿ ಗ್ರಹಗಳದ್ದೇ ಪ್ರಾಬಲ್ಯ, ಹಾಗಾಗಿ ಗ್ರಹಗಳು ದೃಷ್ಠಿ ಯನ್ನು ಹೊಂದಿದೆ. ಆದರೆ. ಜೈಮಿನಿಯ ಪ್ರಕಾರ ರಾಶಿಗಳು ದ್ರುಷ್ಟಿಯನ್ನು ಹೊಂದಿದೆ, ಅಲ್ಲದೆ ಪರಾಶರಿಯ ಕ್ರಮಕ್ಕಿಂತ ತೀರಾ ಭಿನ್ನವಾಗಿದೆ, ಕಾರಕತ್ವಗಳು ಗ್ರಹಗಳ ಮೇಲೆ ಅವಲಂಬಿತವಾಗಿದೆ.
ಪರಾಶರೀ ಪದ್ದತಿಯ ಪ್ರಕಾರ, ಎಲ್ಲಾ ಸಂದರ್ಭದಲ್ಲೂ ರವಿಯೇ ಆತ್ಮ ಕಾರಕ, ಪಿತೃಕಾರಕ, ಶನಿ- ಆಯುಷ್ಯ ಕಾರಕ, ಕರ್ಮಕಾರಕ, ಗುರು- ಪುತ್ರಕಾರಕ, ಜೀವಕಾರಕ, ಧನಕಾರಕ. ಅದರೆ ಜೈಮಿನಿಯಲ್ಲಿ ಯಾವ ಗ್ರೆಹಕ್ಕು ಈ ರೀತಿಯ ನಿಗದಿ ತ ಕಾರಕತ್ವವಿಲ್ಲ. ಅಲ್ಲಿ ಯಾವಗ್ರಹವು ವೃದ್ಧಗ್ರಹವೋ ಆ ಗ್ರಹವೆ ಆತ್ಮಕಾರಕ ( ವೃದ್ಧ ಗ್ರಹವೆಂದ್ರೆ ಹೆಚ್ಚಿನ ಡಿಗ್ರಿ ಯಲ್ಲಿರುವ ಗ್ರಹ) ಮುಂದಿನದು ಅಮಾತ್ಯಕಾರಕ, ಅಂದರೆ ಜಾತಕದಲ್ಲಿ ಯಾವ ಗ್ರಹಗಳು ಹಿಚ್ಚಿನ ಡಿಗ್ರಿ ಯನ್ನು ಹೊಂದಿರುತ್ತದೋ ಅದರ ಮೇಲೆ ಕಾರಕತ್ವಗಳು ಅವಲಂಬಿತ ವಾಗಿರುತ್ತದೆ. Ex-- ಶನಿಯು 27 ನೆ ಡಿಗ್ರಿ ಯಲ್ಲಿದ್ದು ಅದೇ ಗರಿಷ್ಠವಾದರೆ , ಆಗ ಶನಿಯೇ ಆತ್ಮಕಾರಕನಾಗುತ್ತಾನೆ. ಈ ರೀತಿಯಲ್ಲಿ ಜೈಮಿನಿ ಪದ್ದತಿಯು ಕೇವಲ ಸೂತ್ರಗಳಿಂದ ಕೂಡಿದ್ದು ಜ್ಯೋತಿಷ್ಯ ಶಾಸ್ತೆಕ್ಕೊಂದು ನವೀನ ಆಯಾಮವನ್ನು ಒದಗಿಸಿದೆ ಎಂಬುದರಲ್ಲಿ ಸಂಶಯವಿಲ್ಲ. ಜೈಮಿನಿ ಪದ್ದತಿಯು ಪಾರಾಶ ರಿಗಿಂತ ಭಿನ್ನವಾಗಿದ್ದರು, ಜೈಮಿನಿಯ ಮೇಲೆ ಪರಾಶರರ ಪ್ರಭಾವ ಇದ್ದೇ ಇದೆ. ಇದಕ್ಕೆ ಜೈಮಿನಿ ರಾಜಯೋಗಗಳು ನಿದರ್ಶನವಾಗುತ್ತವೆ. ಜೈಮಿನಿಯಲ್ಲಿ ಕಾರಕಾಂಶ, ನವಾಂಶಲಗ್ನ, ಉಪಪಾದ, ಆರೂ ಢ ಲಗ್ನಗಳು ಮುಖ್ಯವಾಗುತ್ತವೆ, ಪರಾಶರಿಯಲ್ಲಿ ನವಗ್ರಹದ ಜೊತೆಗೆ ಮಾಂದಿ, ಗುಲಿಕರೂ ಮುಖ್ಯರಾಗುತ್ತಾರೆ.
ಈ ಎರಡೂ ಪದ್ಧತಿಗಿಂತ ಇನ್ನೂ ಭಿನ್ನವಾದದ್ದು ತಾಜಕ ಪದ್ದತಿ. " ಪ್ರಶ್ನ ತಂತ್ರ " ವೆಂದೇ ಜ್ಯೋತಿಷ್ಯ ಪ್ರಪಂಚದಲ್ಲಿ ಖ್ಯಾತಿಹೊಂದಿರುವ ಗ್ರಂಥ ನೀಲಕಂಠ ದೈ ವಜ್ಞನಿಂದ ರಚಿತವಾಗಿದೆ. ಈ ಪ್ರಶ್ನತಂತ್ರವು ' ತಾಜಕ ನೀಲಂಕ ಟೀಯ' ಎಂಬ ಗ್ರಂಥದ ಮೂರು ಭಾಗದ ಲ್ಲಿನ ಕೊನೆಯ ಭಾಗ, ಉಳಿದೆರಡು ಭಾಗಗಳು ' ಸುಜ್ಞಾನತಂತ್ರ' ಮತ್ತು ' ವರ್ಷತಂತ್ರ'. ಪ್ರಶ್ನಾಮಾರ್ಗ ಜ್ಯೋತಿಷ್ಯಶಾಸ್ತ್ರದ ಈ ಮೂರು ವಿಭಾಗಗಳು ಜಾತಕ, ಮಹೂರ್ತ ಪ್ರಶ್ನ ದಲ್ಲಿ ಪ್ರಮುಖವಾಗಿದೆ. ಪ್ರಶ್ನಾಕಾಲವನ್ನೇ ಅನುಸರಿಸಿ ಭವಿಷ್ಯ ನುಡಿಯುವುದಾಗಿದೇ. ಜ್ಯೋತಿಷ್ಯದಲ್ಲಿ ಇದೊಂದು ಅತ್ಯಂತ ನಿಖರವಾದ ಮಾರ್ಗವಾಗಿದೆ. ತಾಜಕನ ಪ್ರಶ್ನಾತಂತ್ರವು ನಾಲ್ಕು ಪರಿಚ್ಛೇದಗಳಿಂದ ಕೂಡಿದ್ದು ಅವು ಪ್ರಶ್ನ ವಿಚಾರ, ಭಾವಪ್ರಶ್ನೆ, ವಿಶೇಷಪ್ರಶ್ನೆ, ಪ್ರಕೀರ್ಣಧ್ಯಾಯಗಳಾಗಿವೆ.
ತಾಜಕ ಪ್ರಶ್ನಾಶಾಸ್ತ್ರದ ಪ್ರಕಾರ ಮುಖ್ಯದೃಸ್ಟಿಗಳು ಸರಳವಾಗಿ, .ಅರ್ಧತ್ರಿ ಕೋಣ (60 ಡಿಗ್ರಿ), ಕೇಂದ್ರ (೯೦ ಡಿಗ್ರಿ), ಸಮಾಸಪ್ತಕ (೧೮೦ ಡಿಗ್ರಿ), ಸಮಾಗಮ ಅಥವಾ ಯುತಿ (೦ ಡಿಗ್ರಿ) , ಯಾವ ದೃಷ್ಟಿಗೂ ಸ್ವತಃ ಒಂದು ಕಕ್ಷ ವಿಲ್ಲ, ಆದರೆ ಗ್ರಹಗಳಿಗೆ ದೀಪ್ತಅಂಶ ವಿದೆ. ( ರವಿ- 15 ಡಿಗ್ರಿ, ಚಂದ್ರ- 12 ಡಿಗ್ರಿ, ಕುಜ- 7 ಡಿಗ್ರಿ, ಬುಧ- 7 ಡಿಗ್ರಿ, ಗುರು- 9 ಡಿಗ್ರಿ, ಶುಕ್ರ- 7 ಡಿಗ್ರಿ, ಶನಿ- 7 ಡಿಗ್ರಿ ) , ಇಲ್ಲಿ ರಾಶಿ ದೃಷ್ಠಿ ಗಳನ್ನು ಪರಿಗಣ ನೆಗೆ ತೆಗೆದುಕೊಳ್ಳುವುದಿಲ್ಲ. ದೃಷ್ಟಿಯ ಸಮಾಗಮದ ಸ್ವರೂಪವು ದೃಷ್ಟಿಗೆ ಒಳಪಟ್ಟ ಗ್ರಹದ ಸ್ವಭಾವಕ್ಕೆ ಅನುಗುಣವಾಗಿದ್ದರು, ಕೇಂದ್ರ ಮತ್ತು ಸಮಾಸಪ್ತಕ ಅಶುಭವೆಂದು, ತ್ರಿಕೋನ ದೃಷ್ಠಿ ಶುಭವೆಂದು ಭಾವಿಸಿದೆ. ಸೌಮ್ಯಗ್ರಹರ ಸಮಾಗಮ ಶುಭ, ಕ್ರೂರಗ್ರಹಗಳ ಸಮಾಗಮ ಅಶುಭ.
ತಾಜಕ ಯೋಗಗಳು ಜೈಮಿನಿ ಶೈಲಿಯಲ್ಲಿ, ಗ್ರಹಗಳು ರಾಶಿಯಲ್ಲಿ ಕ್ರಮಿಸಿದ ದೂರದ ನಿರ್ದೇಶನದಲ್ಲಿಯೇ ನಿರೂಪಿತವಾಗಿದೆ. ಗ್ರಹಗಳ ಶುಭಾಶುಭ ಯೋಗಫಲಗಳು ವೇಗವಾಗಿ ಚಲಿಸುವ ಗ್ರಹಗಳು, ನಿಧಾನವಾಗಿ ಚಲಿಸುವ ಗ್ರಹಗಳು ಯಾವ ಭಾವದಲ್ಲಿದ್ದಾರೆ ಎಂಬುದರಿಂದಲೇ ನಿರ್ಣಯಿಸಲ್ಪಡುತ್ತದೆ. ಇದರಿಂದಾಗಿ ಇತ್ತಶಾಲಾಯೋಗ, ಈಸರಫ ಯೋಗ, ನಕ್ತಯೋಗ, ಯಮಮಯೋಗ ಮುಂತಾದ ಯೋಗಗಲುಂಟಾಗುತ್ತದೆ, ಮುಖ್ಯವಾಗಿ ವರ್ಷ ಫಲ, ವಿಶೇಷವಾಗಿ " ಪ್ರಶ್ನೆ" ಯನ್ನು ನೋಡಲು ತಾಜಕ ಪದ್ದತಿಯು ಹೆಚ್ಚು ಉಪಯೋಗವಾಗುತ್ತದೆ....
✍ ಡಾ. ಶೈಲಜಾ ರಮೇಶ್
No comments:
Post a Comment