Wednesday, 29 March 2017

ಜ್ಯೋತಿಷ್ಯ ಶಾಸ್ತ್ರದ ಮಹತ್ವ ಮತ್ತು ಅವಶ್ಯಕತೆ

ಹರಿಃ ಓಂ
ಶ್ರೀಗುರುಭ್ಯೋನಮಃ
ಓಂ ಮಹಾ ಗಣಪತ ಯೇ ನಮಃ


ಜ್ಯೋತಿಷ್ಯ ಶಾಸ್ತ್ರವನ್ನು ಬಿಟ್ಟು ಉಳಿದ ಎಲ್ಲಾ ಶಾಸ್ತ್ರಗಳೂ ಸಮಸ್ಯೆ ವಿವಾದಗಳನ್ನು ಸೃಷ್ಟಿಸುತ್ತದೆ. ಆದರೆ ಜ್ಯೋತಿಷ್ಯ ಶಾತ್ತ್ರವು ಮಾತ್ರ ಪ್ರತ್ಯಕ್ಷ ಫಲಕಾರಿಯಾಗದೆ. ಉದಾ:- ಸೂರ್ಯ, ಚಂದ್ರರ ಗ್ರಹಣ , ಹುಣ್ಣಿಮೆ , ಅಮಾವಾಸ್ಯೆ ಮತ್ತು ಸೂರ್ಯ ಚಂದ್ರರ ಉದಯಾಸ್ತಗಳೇ ಪ್ರತ್ಯಕ್ಷ ಸಾಕ್ಷೀ ಗಳಾಗಿರುತ್ತದೆ.

ಭೂತ, ಭವಿಷ್ಯ, ವರ್ತಮಾನದ ಬಗೆಗೆ ನಿಖರವಾಗಿ ತಿಳಿಸುವ ಜ್ಞಾನವಿರುವಿದು ಜ್ಯೋತಿಷ್ಯ ಶಾಸ್ತ್ರಕ್ಕೆ ಮಾತ್ರ. ಜ್ಯೋತಿಷ್ಯ ಶಾಸ್ತ್ರವು ಭವಿಷ್ಯದ ಅಂತರಾಳಕ್ಕಿಳಿದು ಮುಂದಾಗುವುದನ್ನು ನುಡಿಯುವುದರ ಮೂಲಕ ಸಮಸ್ಯೆಗಳನ್ನು ನಿರ್ವಹಿಸಲು ಯಾವ ರೀತಿಯಿಂದ ಮನಸ್ಟೈರ್ಯವನ್ನು ಬೆಳೆಸಿಕೊಳ್ಳ ಬೇಕೆಂಬುದನ್ನು ತಿಳಿಸುತ್ತದೆ. ಮಾನವನ ಇತಿಹಾಸ , ರಾಷ್ಟ್ರಗಳ ಯುದ್ಧ, ಕ್ರಾಂತಿ, ಕ್ಷಾಮ, ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಉತ್ಪಾತಗಳು ಮುಂತಾದವುಗಳಿಂದ ಭೂಮಿಯ ಜೀವಿಗಳ ಮೇಲಾಗುವ ಪರಿಣಾಮವನ್ನು ಮುಂದಾಗಿಯೇ ತಿಳಿಸುತ್ತದೆ.

ಜನ್ಮಲಗ್ನ ಅಥವಾ ರಾಶಿಯನ್ನು ಹಿಡಿದು ಜೀವನದ ಆಗುಹೋಗುಗಳನ್ನು ಹೇಳುವುದು ಕೇವಲ ಊಹಾ ಪೋಹದಿಂದಲ್ಲ. ಗಣಿತ ಶಾಸ್ತ್ರದ ಲೆಕ್ಕಾಚಾರದ ಆಧಾರದಿಂದ ಪರಿಶೀಲನೆ ಮಾಡಿ, ಗ್ರಹಚಾರ, ಮುಂತಾದವುಗಳೊಂದಿಗೆ ಎಲ್ಲಾ ವಿವರಗಳನ್ನು ಹೋಲಿಸಿ ಕಂಡು ಕೊಂಡು ನುಡಿಯುವುದಾಗಿದೇ. ಈ ಸಾಮರ್ಥ್ಯವನ್ನು ಇತರೆ ಯಾವುದೇ ಶಾಸ್ತ್ರವು ಹೊಂದಿಲ್ಲದಿರುವುದೇ ಜ್ಯೋತಿಷ್ಯ ಶಾಸ್ತ್ರದ ವಿಶೇಷ.

ಜ್ಯೋತಿಷ್ಯ ನಿಗದಿತವಾದ ಕ್ರಮಕ್ಕೊಳಪಟ್ಟಿಯುವ ವೈಜ್ಞಾನಿಕ ಅಧ್ಯಯನ. ಈ ಶಾಸ್ತ್ರ ವು ಕಾಲಪ್ರಭಾವವನ್ನು ಕುರಿತು ಅಧ್ಯಯನ ಮಾಡುತ್ತದೆ, ಜ್ಯೋತಿಷ್ಯ ಶಾಸ್ತ್ರ ಮತ್ತು ಅದರ ಅಂಗ ಶಾಸ್ತ್ರಗಳಾದ ವೈದ್ಯಶಾಸ್ತ್ರ, ಯಂತ್ರಮಂತ್ರ ಶಾಸ್ತ್ರಗಳು ತಮ್ಮ ವಿದ್ಯಾಶಕ್ತಿಯಿಂದ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತವೆ.
ಜ್ಯೋತಿಷ್ಯ ಅತೀಂದ್ರಿಯ ವಿದ್ಯೆಯಲ್ಲ. ಮೂಢತ್ವಕ್ಕಂತೂ ಅವಕಾಶವೇ ಇಲ್ಲ. ಪರಾಶರರು ಹೇಳುವಂತೆ "ಶಾಸ್ತ್ರಮಾಜ್ಞಾತ್ವ" ದಿಂದ ಜ್ಯೋತಿಷ್ಯ ದ ಬಗೆಗೆ ತೆಗೆಸುಕೊಳ್ಳುವ ಪೊಳ್ಳು ನಿರ್ಣಯ ಗಳಿಂದಾಗಿ ಜ್ಯೋತಿಷ್ಯದ ಬಗೆಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವವರು ಅಧಿಕವಾಗಿದ್ದಾರೆ, ಇದರಿಂದ ಅವರವರ ವ್ಯಕ್ತಿತ್ವಕ್ಕೆ ಹಾನಿಯೇ ಹೊರತು ಇದರಿಂದ ಶಾಸ್ತ್ರ ಮರ್ಯಾದೆಗೆ ಕುಂದುಂಟಾಗುವುದಿಲ್ಲ.
✍ಡಾ: ಶೈಲಜಾ ರಮೇಶ್

2 comments:

  1. ಜ್ಯೋತಿಷ್ಯ ಕೇವಲ ಜನರನ್ನು ದಿಕ್ಕು ತಪ್ಪಿಸುವ/ಸುಲಿಗೆ ಮಾಡುವ ಜನರನ್ನು ಭಯದಲ್ಲಿಡುವ ಸಾಧನ

    ReplyDelete
  2. ಜ್ಯೋತಿಷ್ಯ ಕೇವಲ ಜನರನ್ನು ದಿಕ್ಕು ತಪ್ಪಿಸುವ/ಸುಲಿಗೆ ಮಾಡುವ ಜನರನ್ನು ಭಯದಲ್ಲಿಡುವ ಸಾಧನ

    ReplyDelete