Wednesday, 29 March 2017

ಪ್ರಸ್ತಾವನೆ

ಜ್ಯೋತಿಷ್ಯ  ಶಾಸ್ತ್ರ ಪ್ರವೇಶ

ಓಂ
ಶ್ರೀ  ಮಹಾ ಗಣಪತಯೇ ನಮಃ
ಶ್ರೀ ಗುರುಭ್ಯೋನಮಃ

ಪ್ರಸ್ತಾವನೆ

ಸರ್ವವಸ್ತುಗಳ ಕಾರಕನಾದ, ಈಶ್ವರನು ತನ್ನ ಶಕ್ತಿಯ ಬಲದಿಂದ ಸಕಲ ಚರಾಚರ ಜಗತ್ತನ್ನು ಸೃಷ್ಟಿಸಿದನು. ತನ್ನ ಸಕಲ ಚೈತನ್ಯವನ್ನು ಈ ಸೃಷ್ಠಿಗೆ ನೀಡಿದನು. ಈ ಸೃಷ್ಟಿಯನ್ನು ಕಂಡ ಪಾರ್ವತಿಯು ಶಿವನನ್ನು, ನೀವು ಸೃಷ್ಟಿಸಿದ ಈ ಅತ್ಯದ್ಭುತ ಜಗತ್ತಿನ ಸೃಷ್ಟಿಯ ರಹಸ್ಯವನ್ನು ತಿಳಿಸಬೇಕೆಂದು ಪ್ರಾರ್ಥಿಸಿದಾಗ ಈಶ್ವರನು ತನ್ನ ಸೃಷ್ಟಿಯ ರಹಸ್ಯವನ್ನು ವಿಷದವಾಗಿ ವಿವರಿಸುತ್ತಿರುವಾಗ ಇವರಿಬ್ಬರ ಸಂವಾದವನ್ನು ಆಲಿಸಿದ ಬ್ರಹ್ಮದೇವರು ಆ ರಹಸ್ಯವನ್ನು ನಾಲ್ಕು ವೇದಾಗಳನ್ನಾಗಿ ಸೃಜಿಸಿದರು. ಈ ವೇದಗಳನ್ನು ನೋಡಿದ ಸರಸ್ವತಿದೇವಿಯು, ವೇದಗಳ ರಹಸ್ಯವನ್ನು ತಿಳಿಸುವಂತೆ ಬ್ರಹ್ಮದೇವರನ್ನು ಪ್ರಾರ್ಥಿಸಿದಾಗ, ಸರಸ್ವತಿದೇವಿಗೆ ಬ್ರಹ್ಮನು ವೇದಗಳ ರಹಸ್ಯವನ್ನು ವಿಷದವಾಗಿ ವಿವರಿಸುತ್ತಿರುವ ಸಂದರ್ಭ, ಅತೀಂದ್ರಿಯ ಸಂಪನ್ನರಾದ ಋಷಿವರೇಣ್ಯರು ಈ ರಹಸ್ಯಗಳನ್ನು ಆಲಿಸಿ, ಆ ವಿಷಯಗಳನ್ನು ಲೋಕಕಲ್ಯಾಣಾರ್ಥಕಾಗಿ, ತಮ್ಮ ದೃಷ್ಟಿ ಕೋನಗಳ ಶಕ್ತಿಗನುಸಾರವಾಗಿ ಗ್ರಂಥಸ್ಥಗೊಳಿಸಿದರು.

         ಈ ಗ್ರಂಥಗಳ  ಆಧಾರದಿಂದಲೇ, ಲೋಕಕಲ್ಯಾಣಕ್ಕಾಗಿ ಉಪಯೋಗವಾಗುತ್ತಿರುವ  ಅನೇಕ ಶಾಸ್ತ್ರಗಳು  ಉಗಮವಾದವು.  ಅದರಲ್ಲಿ ಖಗೋಳ ಶಾಸ್ತವು ಒಂದು. ಇದರ  ಆಧಾರದಿಂದಲೇ  ನಮ್ಮ ಜ್ಯೋತಿಷ್ಯ  ಶಾಸ್ತ್ರವೂ  ಹುಟ್ಟಿದ್ದು.  ಇದು  ಮೂಲತಃ ವೇದಗಳಿಂದ  ತಿಳಿದು ಬಂದಿ ದ್ದರಿಂದಲೇ  ಇದನ್ನು ವೇದಾಂಗ  ಎಂದು ಕರೆಯುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ  ಎಲ್ಲಾ  ರಹಸ್ಯಗಳನ್ನು  ಗ್ರಂಥಸ್ಥ ಗೊಳಿಸಿದ ಹದಿನೆಂಟು ಋಷಿಗಳನ್ನು  ಜ್ಯೋತಿಷ್ಯ ಶಾಸ್ತ್ರ  ಪ್ರವ‌‌ರ್ತಕರು  ಎನ್ನುತ್ತಾರೆ.   ಇವರು  ಆಕಾಶದಲ್ಲಿರುವ  ಸೂರ್ಯ,  ಚಂದ್ರ, ಇನ್ನಿತರ ಗ್ರಹರ ಚಲನೆ,   ಜೀವಿಗಳ  ಮೇಲೆ ಇದರ  ಪ್ರಭಾವ, ನಕ್ಷತ್ರಗಳಿಂದ  ಉಂಟಾಗುವ  ಅದ್ಬುತ  ಪ್ರಭಾವ  ಫಲಗಳನ್ನು  ವಿವರಿಸಿದ್ದಾರೆ.

      ಆ  ಜ್ಯೋತಿಷ್ಯ  ಪ್ರವರ್ತಕ ರೆಂದರೆ,  ಸೂರ್ಯ,  ಪಿತಾಮಹ,  ವ್ಯಾಸ,  ವಸಿಷ್ಠ,   ಅತ್ರಿ,   ಪರಾಶರ,  ಕಾಶ್ಯಪ,   ನಾರದ,  ಗರ್ಗ್ಯಾ,  ಮರೀಚಿ,  ಮನು,   ಅಂಗೀರಸ,  ಲೋಮಶ,   ಪೌಲಸ, ಚ್ಯವನ,  ಯವನ,  ಭೃಗು,  ಶೌನಕ.
       ಇವರಲ್ಲದೆ,  ಮಾಂಡವ್ಯ,  ಮಾರ್ಕಂಡೇಯ,  ಇವರ  ನಂತರ  ಆರ್ಯಭಟ,  ಲಲ್ಲ,  ವರಾಹಮಿಹಿರ,  ಶ್ರೀಪತಿ,  ಕೇಶವ,  ಕಲ್ಯಾಣವರ್ಮ,  ಭಾಸ್ಕರ,  ವೈದ್ಯನಾಥ,  ಗಣೇಶ,  ಜೀತನಾಥ,  ಕೃಷ್ಣಮಿತ್ರ,  ಮಂತರೇಶ್ವರ,  ಆರ್ಪೆಯ,  ಇವರುಗಳು  ಜ್ಯೋತಿಷ್ಯ  ಗ್ರಂಥಗಳನ್ನು  ರಚಿಸಿದ್ದಾರೆ.
        ಜ್ಯೋತಿಷ್ಯ ಶಾಸ್ತ್ರ ದ ಮೂಲವನ್ನು  ಗಮನಿಸಿದಾಗ,  ವಿಶ್ವದಲ್ಲಿ. ಎಷ್ಟು  ಸಂಸ್ಕೃತಿ  ಹಾಗೂ  ನಾಗರೀಕತೆಗಳು  ಆಗಿಹೋಗಿದೆಯೋ,  ಅವರವರ  ಜ್ಞಾನ ಮಟ್ಟ  ಹಾಗೂ  ವೈಚಾರಿಕತೆ ಗೆ  ಅನುಗುಣವಾಗಿ  ವಿವಿಧ  ಸ್ತರಗಳಲ್ಲಿ  ತನ್ನ ರೂಪವನ್ನು  ಕಂಡುಕೊಂಡು  ಪ್ರಕಟಿಸುತ್ತಾ   ಮುಂದುವರೆದಿದ.
      ಜ್ಯೋತಿಷ್ಯಶಾತ್ತ್ರದ   ಬಗೆಗೆ ರಚಿತವಾಗಿರುವ   ಗ್ರಂಥಗಳ  ಆಧಾರದ  ಮೇಲೆ  ಹೇಳುವುದಾದರೆ  ಭಾರತ  ದಲ್ಲಿ   ಕ್ರಿ. ಪೂ,  3700 ವರ್ಷಗಳ ಹಿಂದೆಯೇ ಜ್ಯೋತಿಷ್ಯ ವು  ನೆಲೆಯನ್ನು  ಕಂಡುಕೊಂಡಿದೆ.  ಭಾರತೀಯರ  ದುರದೃಷ್ಟವೆಂದರೆ   ಜ್ಯೋತಿಷ್ಯದಂತೆ   ಅನೇಕ  ವಿಚಾರಗಳು,  ಜರುಗಿದ  ಘಟನೆಗಳು,  ಪ್ರಮುಖ  ಗ್ರಂಥ ಗಳ  ರಚನಾಕಾಲ,  ಯಾವಕಾಲಕ್ಕೆ  ಸೇರಿದವೆಂಬುದರ  ಬಗೆಗೆ  ನಿಖರವಾಗಿ  ದಾಖಲಾಗಿಲ್ಲ.  ಅನೇಕ  ಗ್ರಂಥಗಳ  ರಚನಾಕಾರರು  ತಮ್ಮ  ಹೆಸರನ್ನು  ಉಲ್ಲೇಖಿಸಿಲ್ಲ.
         ವೇದಗಳ  ಕಾಲವು 6000  ವರ್ಷಗಳಷ್ಟು  ಪ್ರಾಚೀನತೆಯನ್ನು  ಹೊಂದಿರುತ್ತದೆಂದು  ಅನೇಕ   ವಿದ್ವಾಮ್ಸರ  ಅಭಿಪ್ರಾಯವಾಗಿದೆ.  ತ್ರೇತಾಯುಗದ   ಶ್ರೀ ರಾಮ ,   ದ್ವಾಪರದ  ಶ್ರೀ  ಕೃಷ್ಣರ  ಜಾತಕ ಗಳು ಇಂದಿಗೂ  ಲಭ್ಯವಿರುವುದನ್ನು  ಗಮನಿಸಿದರೆ  ಯುಗ- ಯುಗಗಳಿಂದಲೂ  ಜ್ಯೋತಿಷ್ಯ  ಪದ್ದತಿಯು  ಮುಂದುವರಿದುಕೊಂಡು  ಬಂದಿದೆ  ಎಂದು  ಸಾಬೀತಾಗುತ್ತದೆ.
     ಜ್ಯೋತಿಷ್ಯವು  ವೇದಾದಷ್ಟೇ  ಪುರಾತನತೆಯನು  ಹೊಂದಿರುವ ಜ್ಯೋತಿರವಿಜ್ಞಾನವಾಗಿದೆ.  ಇದರ  ಅಧ್ಯಯನವು ,  ಭೌತಶಾಸ್ತ್ರ,  ಖಗೋಲಶಾಸ್ತ್ರ  ಹಾಗೂ  ಗಣಿತ ವಿಭಾಗವನ್ನು ಹೊಂದಿರುವುದಾಗಿದ್ದು,  ವೇದಗಳ  ಷಡಂಗಗಳಲ್ಲಿ  ಪ್ರಧಾನವಾದ  ಸ್ಥಾನವನ್ನು  ಪಡೆದಿದೆ.

ಜ್ಯೋತಿಷ ಶಾಸ್ತ್ರವೆಂದರೇನು?
              ಬೆಳಕು  ಜ್ಞಾನದ  ಸಂಕೇತ,  ಹಾಗೂ  ಕತ್ತಲು  ಅಜ್ಞಾನದ  ಸಂಕೇತ,  ಜ್ಞಾನ  ಪ್ರಚೋದಕವಾದ  ಬೆಳಕು   "ಜ್ಯೋತಿ"  ಶಬ್ದದಿಂದಲೇ  ಜ್ಯೋತಿಷ್ಯ  ಆವಿರ್ಭವಿಸಿದೆ,  ಹಾಗಿದ್ದರೆ  ಈ ಜ್ಯೋತಿಷ್ಯ ಶಾಸ್ತ್ರ  ಎಂದರೇನು  ಎನ್ನುವ  ಪ್ರೆಶ್ನೆಗೆ  ಉತ್ತರವನ್ನು  ಕಂಡುಕೊಂಡಾಗ  ಶಾಸ್ತ್ರದ  ವ್ಯಾಪ್ತಿಯ  ಅರಿವಾಗುತ್ತದೆ.
  ಆಕಾಶದಲ್ಲಿರುವ ಗ್ರಹ ,  ನಕ್ಷತ್ರ,  ಪ್ರಧಾನವಾಗಿ , ಸೂರ್ಯ,  ಚಂದ್ರ  ಮುಂತಾದುವುಗಳ  ಸ್ಥಿತಿಗತಿಗಳನ್ನು  ಅನುಸರಿಸಿ,  ಅದರಿಂದ  ಭೂಮಿಯ  ಮೇಲಿರುವ  ಜೀವಿಗಳ ಮೇಲಾಗುವ  ಪ್ರಭಾವವನ್ನು  ಅಧ್ಯಯನವನ್ನು  ಮಾಡುವ  ಶಾಸ್ತ್ರವೇ  " ಜ್ಯೋತಿಷ್ಯ ಶಾಸ್ತ್ರ"
   ಜ್ಯೋತಿ  ಎಂದರೆ  ಬೆಳಕು,  ಶಾಸ್ತ್ರ  ಎಂದರೆ  ಜ್ಞಾನ  ಸಂಪಾದನೆ   ಅಂದರೆ ಕಾಲವನ್ನು  ಕುರಿತ  ವಿಜ್ಞಾನ  ಎಂದರ್ಥ.  ಮತ್ತು ಇದಕ್ಕೆ ವೇದಗಳ  ಕಣ್ಣು  ಎಂಬುವ ಅರ್ಥವು  ಇದೆ,  ಈ ಶಾಸ್ತ್ರವು   ವೇದಗಳಿಂದ ಉಗಮವಾದದ್ದು,   ಮುಖ್ಯವಾಗಿ  ಅಥರ್ವಣ  ವೇದ ದಿಂದ  ಬಂದಿದೆ.
    ಒಂದು  ದಿವ್ಯ  ಬೆಳಕಿನ  ಸಹಾಯದಿಂದ  ಅಂದರೆ  ಸುಜ್ಞಾನದ  ಅವಲಂಬನೆ ಯಿಂದ  ಶಾಸ್ತ್ರೀಯವಾಗಿ  ಗ್ರಹಗಳ  ಚಲನ ವಲನ ದಿಂದ  ಮಾನವನ ಜೀವಿತದ ಮೇಲೆ  ಆಗುವ ಪರಿಣಾಮವನ್ನು  ಗಣಿತಶಾಸ್ತ್ರ ದ  ಆಧಾರದಮೇಲೆ  ನಿಷ್ಕರ್ಷಿಸುವುದೇ   "ಜ್ಯೋತಿಷ್ಯ ಶಾಸ್ತ್ರ".    ಇದು  ಒಂದು  ಅದ್ಭುತ  ಜಿಜ್ಞಾಶಾಸ್ತ್ರವಾಗಿದೆ.
  ಮುಂದುವರೆಯುವುದು............
 ✍ ಡಾ. ಶೈಲಜಾ  ರಮೇಶ್

1 comment:

  1. I am beginner of astrology so please inform which Kannada books are better for learning

    ReplyDelete