Thursday, 30 March 2017

--:ವೇದಾಂಗದಲ್ಲಿ ಜ್ಯೋತಿಷ್ಯ:--

ಹರಿಃ  ಓಂ
ಶ್ರೀಗುರುಭ್ಯೋನಮಃ
ಶ್ರೀ ಮಹಾಗಣಪತಯೇ ನಮಃ
--:ವೇದಾಂಗದಲ್ಲಿ  ಜ್ಯೋತಿಷ್ಯ:--

ಬ್ರಹ್ಮ ವಾಣಿಯಾಗಿರುವ   ವೇದಗಳನ್ನು ಪರಾಶರ ಮಹರ್ಷಿಯ ಪುತ್ರರಾದ ವ್ಯಾಸರು ನಾಲ್ಕು ಭಾಗಮಾಡಿ ವಿಂಗಡಿಸಿ  ಅವುಗಳಿಗೆ  ಋಗ್ವೇದ,  ಯಜುರ್ವೇದ,  ಸಾಮವೇದ,  ಅಥರ್ವಣ  ವೇದವೆಂದು  ಹೆಸರಿಸಿದರು. ಇದರಿಂದಲೇ ಅವರಿಗೆ  ವೇದವ್ಯಾಸ ರೆಂದು  ಪ್ರಖ್ಯಾತಿಯಾಯ್ತು.  ಆ  ನಂತರದಲ್ಲಿ ಆರಣ್ಯಕ,  ಬ್ರಾಹ್ಮಣ,  ಉಪನಿಷತ್ತುಗಳು,  ಇದೆಲ್ಲದರ  ಪ್ರಭಾವವನ್ನು  ಹೊಂದಿರುವ   ಪುರಾಣಗಳು  ಹಾಗೂ  ಉಪಪುರಾಣಗಳು  ರಚಿಸಲ್ಪಟ್ಟವು.  ವೇದಗಳು  ಮಂತ್ರದಿಂದಲೂ  ,  ಶಾಸ್ತ್ರಗಳು  ಶಬ್ದಗಲಿನ್ದಳೂ ಪ್ರಚಾರಕ್ಕೆ  ಬಂದವು.
      ಸೃಷ್ಟಿ ಯ  ಉದ್ದೇಶವನ್ನು  ಹೊಂದಿದ  ಬ್ರಹ್ಮನು  ಮಹಾತಾಪಸ್ಸ್ಸಿನ  ಮೂಲಕ  ಮಹಾಯಾಗವನ್ನು ಆಚರಿಸಿದನು,  ಯಾಗದ  ಪರಿಣಾಮವಾಗಿ ಮೊದಲು  ಜಲವನ್ನು ಸೃಷ್ಠಿಸಿ  ಅದರಲ್ಲಿ  ತನ್ನ ತೇಜಸ್ಸನ್ನು  ತುಂಬಿದನು.  ಅದರಿಂದ  ಸುವರ್ಣಮಯ  ಅಂಡಾಕಾರದ  ಕೆಲವು. ಆಕೃತಿಗಳನ್ನು  ಪ್ರಕಟಿಸಿದನು. ಅಂಡಾಕಾರಾಕೃತಿಗಳನ್ನು ಎರಡು ಭಾಗಮಾಡಿ ಒಂದನ್ನು  ಭೂಲೋಕದಲ್ಲೂ  ಮತ್ತೊಂದನ್ನು  ದ್ಯುಲೋಕದಲ್ಲೂ ಸ್ಥಾಪಿಸಿದನು.  ಎರಡು  ಅಂಡಗಳ  ನಡುವೆ ಖಾಲಿ ಇರುವ  ಸ್ಥ ಲವು ಶೂನ್ಯವಾಗಿತ್ತು,  ಅದುವೇ  ಆಕಾಶ.  ಈ  ಆಕಾಶದಲ್ಲಿ  ಸೃಷ್ಟಿಕರ್ತನ  ಕಣ್ಣುಗಳಾಗಿ  ಗೋಚ ರವಾದುವೇ  ಸೂರ್ಯ  ಚಂದ್ರರು.   ಈ  ವಿಚಾರವು  ಋಗ್ವೇದ,  ಹಾಗೂ ಕೆಲವು ಸ್ಮೃ ತಿಗಳಿಂದ  ತಿಳಿದು ಬರುತ್ತದೆ.  ಜಗತ್ತಿನ  ಸೃಷ್ಟಿಗೆ  ಸಂಬಂಧಿಸಿದಂತೆ  ಆನೇಕ  ಅಭಿಪ್ರಾಯಗಳಿವೆ.  ಋಗ್ವೇದದ  ಪುರುಷಸೂಕ್ತವೂ  ಹಿಚ್ಚಿನ  ಬೆಳಕನ್ನು ಚೆಲ್ಲುತ್ತದೆ.
    ವೇದಕಾಲದಲ್ಲಿ  ಭೂಲೋಕ,  ಅಂತರಿಕ್ಷ,  ಹಾಗೂ  ಅಕಾಶ ಅಥವಾ  ದ್ಯುಲೋಕದ ಸ್ಪಷ್ಟವಾದ  ಚಿತ್ರಣವಿತ್ತು,  ಅಂತರಿಕ್ಷ ವೆಂದರೆ ಮೇಘಲೋಕ  ಮತ್ತು  ಅದಕ್ಕಿಂತ  ಮೇಲಿರುವ  ಬ್ರಹ್ಮಾನ್ದ ರೂಪವನ್ನು  ಆಕಾಶವೆಂದು  ಪರಿಚಯಿಸಲಾಗಿದೆ.  ಈ ಮೂರುಲೋಕಗಳ  ಪರಿಪೂರ್ಣ  ಜ್ಞಾನವನ್ನು ನಮ್ಮ  ಪೂರ್ವಿಕರು  ಹೊಂದಿದ್ದರು.  ಯಜುರ್ವೇದದ ಮಂತ್ರವೊಂದು  ಮೂರುಲೋಕಗಳ  ಸ್ಥಿತಿಯನ್ನು  ವಿವರಿಸುತ್ತದೆ.  ಹಾಗೆಯೇ  ಋಗ್ವೇದದ ಮಂತ್ರದಲ್ಲಿ ( ಚಕ್ರಾಣಾ ಸಃ ಪರೀಣಹಂ  ಪೃಥಿವ್ಯಾ ಹಿರಣ್ಯೇ ನ ಮಣಿನಾ ಶಂಭ ಮಾನಾಃ)   ಸೂರ್ಯನೆಂದೂ  ಉದಯಿಸುವುದಿಲ್ಲ  ಹಾಗೂ  ಅಸ್ತನಾ ಗುವುದಿಲ್ಲ,  ಈ  ಅನುಭವವು  ಭೂಭ್ರಮಣ ದಿಂದಾಗುತ್ತದೆ  ಎಂಬ ಉಲ್ಲೇಖವಿದೆ.
      ಋಗ್ವೇದದ  ಮಂತ್ರದಲ್ಲಿ(1.164) ಸೂರ್ಯ,  ಅವನ  ಚಲನೆ,  ಕಿರಣಗಳು ಮತ್ತು  ಪ್ರಭಾವಗಳ  ವಿವರ  ದೊರೆಯುತ್ತದೆ ವಿಶ್ವದ  ನಿರ್ಮಾಣ, ಇತರ ಮೂಲಗಳಿಗೆ  ಸೂರ್ಯನೇ  ಮೂಲವೆಂಬುದನ್ನು  ಶತಪಥ  ಬ್ರಾಹ್ಮಣದಲ್ಲಿ  ಉಲ್ಲೇಖಿಸಿದೆ. ಸೂರ್ಯನು  ಋತು ಗಳ  ನಿರ್ಣಾಯಕನಾಗಿದ್ದಾನೆ, ( ಋತೂಂ ಪ್ರಶಾಸತ್)  ಸೂರ್ಯನ  ಉತ್ಪತ್ತಿ ಹಾಗೂ  ಅವನಿಂದ ಬೇರ್ಪಟ್ಟ  ಗ್ರಹಗಳು,  ಹಾಗೆಯೇ  ಮಂತ್ರದಲ್ಲಿ, ಸೂರ್ಯನೂ  ಸೇರಿ  ಚಂದ್ರ,  ಕುಜ,  ಬುಧ,  ಗುರು,  ಶುಕ್ರ,  ಶನಿ  ಈ  ಏಳು  ಗ್ರಹಗಳೇ  ಆಕಾಶದಲ್ಲಿನ  ದೇವರುಗಳೆಂಬ  ವಿಚಾರ (ಋಗ್ವೇದ 1.19.6) ವಾಗಿ ವಿವರ  ತಿಳಿದು ಬರುತ್ತದೆ. ಆಕಾಶದಲ್ಲಿರುವ  ಈ  ಗ್ರಹಗಳು  ಮಾನವನ  ಶರೀರದ ಮೇಲೆ ಪಂಚೇಂದ್ರಿಯಗಳ  ಮೂಲಕ ಯಾವಾಗಲೂ  ಪ್ರಭಾವ  ಬೀರುತ್ತದೆ.
     ಆಕಾಶದಲ್ಲಿ  ಸೂರ್ಯನು  ಹೇಗೆ  ಪ್ರತಿಷ್ಠಿತ ನಾಗಿದ್ದನೋ  ಹಾಗೆಯೇ  ಭೂಮಿಯಲ್ಲಿ  ಅಗ್ನಿಯು ಪ್ರತಿಷ್ಠಿ ತ ವಾಗಿದೆ,  ಪ್ರತಿ ಜೀವಿಯಲ್ಲೂ ಅಗ್ನಿಯು ಪ್ರಾಣವಾಯುವಿನ  ರೂಪದಲ್ಲಿ  ಸೇರಿದೆ (ಪ್ರಾಣೋ ವೈ ನೃಷದಗ್ನಿ)  ಮಾನವ  ಶರೀರದಲ್ಲಿ  ನಡೆಯುವ ಎಲ್ಲಾ  ಕ್ರಿಯೆಗಳಿಗೆ ಕೇಂದ್ರ,  ಅವನ  ತಲೆಯಲ್ಲಿದೆ.
     ಉಪನಿಷತ್ತುಗಳ. ಪ್ರಕಾರ  ಸೃ ಸ್ಟಿ ಚಕ್ರವು  ಹನ್ನೆರಡು  ಕೈ ಗಳನ್ನು ಹೊಂದಿದೆ,  ಅವೆ  ಹನ್ನೆರಡು  ರಾಶಿಗಳು " ಸೂರ್ಯೋಬೃಹ ತಿ  ಮಧ್ಯೂ ಡ ಸ್ತಪತಿ ಸವಾ ಏಶ ಸಂವತ್ಸರೋ ಬೃಹತೀಮಾಭಿಸಂಪಂನಃ"  ಈ  ಮಂತ್ರದ  ಪ್ರಕಾರ  ಭೂಮದ್ಯ ರೇಖೆಯ ಉತ್ತರದಲ್ಲಿ  ಮೂರು  ಪ್ರಮುಖ  ಸಮಾನಾಂತರ  ಅಕ್ಷಅಂಶ  ರೇಖೆಗಳಾಗಿ  ತ್ರಿಸ್ತೂಪ, ಪಂಕ್ತಿ, ಮತ್ತು  ಜಗತಿಗಳಿದೆ ಎಂದೂ ಅದೇ ರೀತಿ ದಕ್ಷಿಣದಲ್ಲಿ  ಅನುಷ್ಟುಪ್ , ಉಸ್ನಿಕ,  ಗಾಯತ್ರಿ ಇರುವುದೆಂದು  ತಿಳಿದುಕೊಳ್ಳಬಹುದು.  ಆಧುನಿಕ  ಭೂಪಠದಲ್ಲಿರುವ   ಅಕ್ಷಾಂಶ ,  ರೇಖಾಅಂಶ ರೇಖೆಗಳು  ಮತ್ತು  ವೃತ್ತಗಳ  ಪರಿಚಯವೂ ಮೇಲಿನ  ಮಂತ್ರದ  ಆಧಾರ ವಾಗಿದೆ.
     ಸೂರ್ಯನಿಂದ   ಉತ್ಪನ್ನ ವಾಗಿರುವ ಪಂಚಗ್ರಹಗಳು ನಿರ್ಮಾಣ ಹಾಗೂ ನಿರ್ನಾಮ  ಕ್ರಿಯೆಯನ್ನು  ಹೊಂದಿದೆ ಎಂಬ  ದೈವೀಕವಾದ  ವಿಚಾರವು  ಜ್ಯೋತಿಷ್ಯ  ಶಾಸ್ರ್ರಕ್ಕೆ  ಪ್ರಭಲವಾದ  ಬುನಾದಿಯಾಗಿದ.   ಪಂಚಗ್ರಹಗಳ ದ್ವಿವಿದ  ಕ್ರಿಯೆಯಿಂದಾಗಿ  ದಶರಾಶಿಗಳೂ  ಸೂರ್ಯ  ಚಂದ್ರರು ಸೇರಿ  ಒಟ್ಟು ಹನ್ನೆರಡು  ರಾಶಿಗಳಾದವು. ಇವೆ  ಜ್ಯೋತಿಷ್ಯದಲ್ಲಿ   ಬಳಕೆಯಾಗುತ್ತಿರುವ  ರಾಶಿಗಳು  ಮತ್ತು  ಅದರ  ಅಧಿಪತಿಗಳು.
      ಅಥರ್ವಣ  ವೇದದ  (೬.೧೧0)  ಋಗ್ವೇದದ( 10, 19, 1) ತೈತ್ತರೀಯ  ಮಹಾಬ್ರಹ್ಮಣದ ( 1,1,2) ಹಾಗೂ( ೧,5,2,  ) ಮಂತ್ರಾಗಳು ಯಾವ  ನಕ್ಷತ್ರಗಳು  ಶುಭಫಲ ಮತ್ತು  ಅಶುಭಫಲವನ್ನು  ಕೊಡುತ್ತದೆ  ಎಂಬು ದನ್ನು ತಿಳಿಸಿದೆ.
  ಮೇಲಿನ  ಎಲ್ಲಾ  ವಿಚಾರದಿಂದಾಗಿ  ಜ್ಯೋತಿಷ್ಯವೂ ವೇದಗಳಷ್ಟೇ  ಪ್ರಾಚೀನವಾದುದು  ವೇದಾಂಗವೂ  ಆಗಿದೆ  ಎಂದು  ತಿಳಿಯುತ್ತದೆ.
✍ ಡಾ: ಶೈಲಜಾ  ರಮೇಶ್

No comments:

Post a Comment