ಹರಿಃ ಓಂ
ಶ್ರೀ ಗುರುಭ್ಯೋ ನಮಃ
ಶ್ರೀ ಮಹಗಣಪತಯೇ ನಮಃ
ಜ್ಯೋತಿಷಿಯ ಗುಣಲಕ್ಷಣ ಗಳು
ಕರ್ತವ್ಯ ಮತ್ತು ಜವಾಬ್ದಾರಿಗಳು" ಸರ್ವ ಜನ ಸುಖಾಯ ಸರ್ವ ಜನ ಹಿತಾಯ " ಎಂಬುದೇ ವೇದಾಂಗ ಜ್ಯೋತಿಷ್ಯದ ಮೂಲ ಉದ್ದೇಶ. ಈ ಮೂಲೋದ್ದೇ ಶದಿಂದಲೇ ಜ್ಯೋತಿಷ್ಯದ ಜನನವಾಗಿದೆ.
" ಅನೇಕ ಹೋರಾತತ್ವಜ್ಞಹ " "ಪಂಚಸಿದ್ದಾಂತ ಕೋವಿದಃ " "ಊಹಾಪೋಹ ಪಟುಹು" "ಸಿದ್ದಮಂತ್ರೋ ಜಾನಾನಿ ಜಾಟಕಮ್" ಇದು ಲೋಕ ಪ್ರಸಿದ್ದ ವಾದ ಮಾತಾಗಿದ್ದು ದೈವಜ್ಞ ನಿಗಿರಬೇಕಾದ ಯೋಗ್ಯತೆಯನ್ನು ಹೇಳಿ ಈ ಶಾಸ್ತ್ರವು " ಅಪ್ರತ್ಯಕ್ಷಾ ಣಿ ಶಾಸ್ತ್ರಾಣಿ ವಿವಾದಷ್ಟೇಷು ಕೇವಲಂ , ಪ್ರತ್ಯಕ್ಷ ಜ್ಯೋತಿಶಮ್ ಶಾಸ್ತ್ರಂ ಚಂದ್ರಾರ್ಕೌ ಯತ್ರ ಸಾಕ್ಷಿನೌ" ಎಂದು ಶಾಸ್ತ್ರ ಮರ್ಯಾದೆಯನ್ನು ಸಾರಿದೆ.
ವೇದಕಾಲದಲ್ಲಿ ಯಜ್ಞ ಯಾಗಾದಿ ಕಾರ್ಯಗಳನ್ನೇ ಮೂಲೋದ್ದೇಶವಾಗ ಹೊಂದಿ ಮಹೂರ್ತವನ್ನು ನಿಗದಿಪಡಿಸಲು ಲೆಕ್ಕಾಚಾರದ ದೃಷ್ಟಿಯಿಂದ ಜ್ಯೋತಿಷ್ಯವು ಬಹುಮಾನ್ಯತೆ ಪಡೆದಿತ್ತು, ಮುಂದುವರಿದಂತೆ ಪ್ರತಿಯೊಂದು ಕರ್ಮಕ್ಕೂ ಜ್ಯೋತಿಷ್ಯದ ಅವಶ್ಯಕತೆ ಹೆಚ್ಚಾಯಿತು, ಸುಮುಹೂರ್ತದಲ್ಲಿ ನಿರ್ವಹಿಸುವ ಕರ್ಮದಿಂದ ಬಯಸಿದ ಫಲ ಸಿಗುವುದೆಂಬ ವೇದಕಾಲೀನರ ಆಶಯದಲ್ಲೇ ಫಲಜ್ಯೋತಿಷ್ಯದ ಬೇರುಗಳನ್ನು ಕಾಣಬಹುದು.
ಶೋಡ ಶ ಕರ್ಮಗಳಲ್ಲಿ ಜ್ಯೋತಿಷ್ಯ ಶಾಸ್ತ್ರ ವು ಸ್ಥಾನ ಪಡೆ ಯಿತು, ಆದ್ದರಿಂದಲೇ ಇಂದು ಜ್ಯೋತಿಷಿಯು ಸಮಾಜಕ್ಕೆ ಅನಿವಾರ್ಯವಾಗಿದ್ದಾನೆ. ಸಾಮಾಜಿಕ ಕಟ್ಟಲೆಯ ಹಿನ್ನೆಲೆಯಲ್ಲಿ ಸುವ್ಯವಸ್ಥೆಯನ್ನು ಕಾಪಾಡಲು ಮಾನಸಿಕ ಸ್ವಾಸ್ಥ್ಯವ ನ್ನು ಕಾಪಾಡುವುದು ಆದ್ಯ ಕರ್ತವ್ಯವಾಗಿದೆ. " ಮನಮೇವ ಮನುಶ್ಯಾನಾಮ್ ಕಾರಣಂ ಬಂಧ ಮೋ ಕ್ಷ್ಯಯೋಹೊ " ಎಂಬ ಅಮೃತೋಪನಿಷತ್ತಿನ ವಾಕ್ಯದಂತೆ ಪ್ರತಿಯೊಂಡಕ್ಕೂ ಕಳಂಕ ರಹಿತವಾದ ಮನಸ್ಸೇ ಕಾರಣವಾಗಿದೆ. ಯಾವುದೇ ಕ್ಷೇತ್ರದಲ್ಲಾ ಗಲಿ ಮಾರ್ಗದರ್ಶನ ಕೊಡುವ ಗುರುವಿನ ಸ್ಥಾನ ಅತ್ಯಂತ ಜವಾಬ್ದಾರಿ ಯುತವಾಗಿದೆ, ಯಾವುದನ್ನೇ ಹೇಳಬೇಕಾದರೂ ಮೊದಲು ತಾನು ಆ ವಿಚಾರದ ಬಗೆಗೆ ಆಳವಾದ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡು ಸತ್ಯಾಸತ್ಯತೆಯ ಅರಿವಿನ ನಂತರವೇ ಉಪದೇಶಿಸಬೇಕು.
" ರುತಂಚ ಸ್ವಾಧ್ಯಾಯ ಪ್ರವಚನೆನ ಸತ್ಯಂಚ ಸ್ವಾಧ್ಯಾಯ ಪ್ರವಾಚನೆನ" ಮೊದಲು ಸ್ವಾಧ್ಯಾಯ ನಂತರ ಪ್ರವಚನ, ಆಗ ಮಾತ್ರ ಪ್ರವಚನ ಹೇಳಲು ಯೋಗ್ಯತೆ ಬರುತ್ತದೆ. ಈ ದಿಸೆಯಲ್ಲಿ ವಿವೇಚಿಸಿದಾಗ ಜ್ಯೋತಿಷಿಗೆ/ ದೈವಜ್ಞನಿಗೆ ಯಾವ ಯೋಗ್ಯತೆ ಇರಬೇಕೆಂದು ವಿವೇಚಿಸಬೇಕಾಗುತ್ತದೆ.
ಬಾಹ್ಯಗುಣ ಹಾಗೂ ಆಂತರಿಕ ಗುಣಗಳೆಂದು ನೋಡಿದಾಗ , ಮೊದಲು ಬಾಹ್ಯಗುಣದಲ್ಲಿ, ಜ್ಯೋತಿಷಿಯು ಉತ್ತಮ ಕುಲದಲ್ಲಿ ಹುಟ್ಟಿರಬೇಕು( ಉತ್ತಮ ಸಂಸ್ಕಾರ) ಜ್ಯೋತಿಷ್ಯದ ಬಗೆಗೆ ಅತ್ಯಂತ ಪರಿಶ್ರಮವಿರಬೇಕು, ವೇದ, ವೇದಾಂಗ ಹಾಗೂ ಪುರಾಣೋಪಾನಿಷತ್ತು , ಧರ್ಮಸ ಬಗೆಗೆ ಅರಿತವರಾಗಿರಬೇಕು, ದೇಶ ಕಾಲ, ಪರಿಸ್ಥಿತಿ ಅದರಲ್ಲೂ ತಾನಿರುವ ದೇಶದ ಬಗೆಗೆ ಪರಿಜ್ಞಾನವಿರಬೇಕು. ಉತ್ತಮವಾದ ವಾಕ್ಸಿದ್ದಿಯನ್ನು ಹೊಂದಿದ್ದು, ಸಂಯಮಶೀಲತೆಯನ್ನು ಯಾವ ಸಂದರ್ಭದಲ್ಲೂ ಪಾಲಿಸಬೇಕು, ಹಲವು ವಿಷಯದ ಬಗ್ಗೆ ಪಾಂಡಿತ್ಯ ಹೊಂದಿರಬೇಕು. ಹಲವು ಬಾಷಾಜ್ಞಾನ ಹೊಂದಿರುವುದೂ ಕೂಡ ಈ ಕಾಲಕ್ಕೆ ಅತ್ಯಂತ ಸೂಕ್ತ. ಪಂಚಾಂಗಾನುಸ್ಟಾ ನ ಜ್ಯೋತಿಷಿಯಾದವನ ಮೂಲಭೂತವಾದ್ ಜ್ಞಾನವಾಗುತ್ತದೆ, ಆದ್ದರಿಂದ ಪಂಚಾಂಗದ ಜ್ಞಾನ ಕಡ್ಡಾಯ. ವಿನ್ಯಾಯಾಶೀಲತೆ, ಸತ್ಯಶೀಲತೆ, ಎಲ್ಲರಲ್ಲೂ ಸಮಾನ ದೃಷ್ಟಿ, ಸರ್ವಾಂಗ ಸುಂದರತೆ, ಪ್ರಿಯಕರವಾದ ವ್ಯಕ್ತಿತ್ವ, ಗಾಂಭೀರ್ಯದ ಪರಿಪಾಲನೆ, ಯಾರನ್ನೂ ನೋಯಿಸದಿರುವ ವರ್ತನೆ, ಅಪ್ಪಿತಪ್ಪಿಯೂ ಅಪ್ರಿಯವಾದುದನ್ನು ಹೇಳದಿರುವುದು, ಮುಂತಾದ ಗುಣವನ್ನು ರೂಢಿಸಿಕೊಳ್ಳಬೇಕು.
ಇಂಗ್ಲೀಷಿ ನಲ್ಲಿ ಹೇಳುವಂತೆ " first appearance is the best appearance" , ಜ್ಯೋತಿಷಿಯ ಬಾಹ್ಯ ವ್ಯಕ್ತಿತ್ವ ದಿಂದಲೇ ಗೌರವ ಮೂಡುವಂತಿರಬೇಕು.
ಆಂತರಿಕ ಗುಣಗಳೆಂ ದಾಗ ಋಷಿವಾಕ್ಯವನ್ನು ( ಅರ್ಥವನ್ನು) ಪರಿಪೂರ್ಣವಾಗಿ ತಿಳಿದವನಾಗಿರಬೇಕು, ಅವುಗಳ ಬಗೆಗೆ ಯಾವುದೇ ಅನುಮಾನವಿರಬಾರದು, ಬಂದ ಅನುಮಾನವನ್ನು ಅರಿತವರಿಂದ ತಿಳಿಯಲು ಉತ್ಸುಕನಾಗಿರಬೇಕು, ಯಾವ ಕಾಲಕ್ಕೂ " ಜ್ಞಾನಪಿಪಾಸು" ವಾಗಿರಬೇಕು. ತಾನೇ ಉತ್ತಮೊತ್ತಮನೆಂಬ ಭಾವನೆಯು ಜ್ಯೋತಿಷಿಯನ್ನು. ಅದಃಪಾತನಕ್ಕೆ ತಳ್ಳುತ್ತದೆ.
ಕಾಯಾ, ವಾಚಾ, ಮನಸಾ ಆರಿಷಡ್ವರ್ಗಗಳ ದಮನ, ಸದಾಚಾರ, ಹೇಳುವ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲದಿರುವಿಕೆ, ಉತ್ತಮವಾದ ಮಾತುಗಾರಿಕೆ, ಸಾತ್ವಿಕ ಜೀವನ, ಯಾವುದೇ ಸಂದರ್ಭವನ್ನೂ ನಿರ್ಭೀತಿಯಿಂದ ನಿರ್ವಹಿಸುವ ತಾಳ್ಮೆ, ಜಾಣ್ಮೆ, ಕಲಿಯಲು ಹಾಗೂ ಕಲಿಸಲು ಉತ್ಸಾಹದಿಂದಿರುವುದು, ಪ್ರತಿಯೊಂದರಲ್ಲೂ ನೇಮನಿಷ್ಠೆಯನ್ನು ಅನುಸರಿಸುವುದು, ದುರಭ್ಯಾಸದಿಂದ ದೂರ ಇರುವುದು, ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳ ನಿರಂತರ ಅಧ್ಯಯನ, ಮುಖ್ಯವಾಗಿ ದೇವೋಪಾಸನೆ, ದೈವದಲ್ಲಿ ನಂಬಿಕ ಇರಬೇಕು. ಇನ್ನೊಂದು ಮುಖ್ಯ ಅಂಶವೆಂದರೆ ಜ್ಯೋತಿಷಿಯ ಬಳಿಗೆ ಬರುವವ್ರೆಲ್ಲಾ ಒಂದಿಲ್ಲೊಂದು ಸಮಸ್ಯೆಯನ್ನು ಹೊತ್ತುತರುವವರೇ , ಆ ಸಮಸ್ಯೆಗೆ ಪರಿಹಾರ ನೀಡುವುದು ಜ್ಯೋತಿಷಿಯ ಜಾಣ್ಮೆಗೆ ಸವಾಲಾಗಿರುತ್ತದ, ಆದ್ದರಿಂದ ಸಮಯ, ಸಂದರ್ಭ ಬಂದ ವ್ಯಕ್ತಿಗಳ ಪರಿಸ್ಥಿತಿಗೆ ( ಆರ್ಥಿಕ, ದೈಹಿಕ,, ಮಾನಸಿಕ ) ಅನುಗುಣವಾಗಿ ಪರಿಹಾರವನ್ನು ಹೇಳಬೇಕು, ಏ ಕೆಂದರೆ ಮಾಡಿಕೊಳ್ಳುವ ಪರಿಹಾರವೇ ಒಂದು ಸಮಸ್ಯೆಯಾಗಬಾರದು...
✍ ಡಾ: ಶೈಲಜಾ ರಮೇಶ್
All informations are really nice
ReplyDelete