ಹರಿಃ ಓಂ
ಶ್ರೀಗುರುಭ್ಯೋನಮಃ
ಶ್ರೀ ಮಹಾಗಣಪತಯೇ ನಮಃ
ಜ್ಯೋತಿಷ್ಯ ಶಾಸ್ತ್ರದ ವಿಭಾಗಗಳು
ಜ್ಯೋತಿಷ್ಯ ಶಾಸ್ತ್ರದ ವಿಭಾಗಗಳು
ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ಕ್ರಮವನ್ನು ಮೂಲದಿಂದ ಲು ಗಮನಿಸಿದಾಗ, ಮುಖ್ಯವಾಗಿ ಮೂರು ವಿಭಾಗಗಳನ್ನು ಕಾಣಬಹುದು. ಇವುಗಳಿಗೆ ತಮ್ಮದೇ ಆದ ಪ್ರಾಮುಖ್ಯತೆಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾಣಬಹುದು......
ಅವುಗಳೆಂದರೆ.......
೧) ಸಿದ್ದಾಂತ
2) ಸಂಹಿತಾ
3) ಹೋರಾ
ನಾರದ ಸಂಹಿತೆಯಲ್ಲಿ ಇದರ ಬಗೆಗೆ ಚರ್ಚಿ ಸ ಲಾಗಿದ್ದು ಇವುಗಳನ್ನು " ತ್ರಿಸ್ಕಂದ" ಎಂದು ಹೇಳಲಾಗಿದೆ.
- :ಸಿದ್ಧಾಂತ:-
ಸಿದ್ಧಾಂತ ವೆಂದರೆ, ಆಂಗ್ಲ ಭಾಷೆಯ ಥಿಯರಿ (theory) . ಎಲ್ಲಾ ಶಾಸ್ತ್ರ್ತ್ರದಲ್ಲೂ ಒಂದು ವಿಚಾರದ ಬಗೆಗೆ ಎಲ್ಲಾ ರೀತಿಯಾದ ಚರ್ಚೆ ಯಾಗ ನಂತರ ಒಂದು ನಿರ್ಣಯಕ್ಕೆ ಬರುತ್ತಾರೆ. ಅಂತಿಮ ನಿರ್ಣಯವೇ ಸಿದ್ದಂತ ವಾಗುತ್ತದೇ. ವೇದಾಂಗವೆಂದು. ಕರೆಯಲ್ಪಡುವ ಜ್ಯೋತಿಷ್ಯವು ಸಿದ್ಧಾಂತ ರೂಪದಲ್ಲಿಯೇ ಮುಂದುವರೆದಿದೆ ಎಂಬುದು ಗಮನಾರ್ಹ ಸಂಗತಿಯಾಗಿದೇ.
ಸಿದ್ಧಾಂತವು ಅಂತರಿಕ್ಷದಲ್ಲಿನ ಗ್ರಹಗಳ ಮತ್ತು ನಕ್ಷತ್ರಗಳ ಚಲನೆ ಯಿಂದ ಉಂಟಾಗುವ ಕಾಲ ( ಹಗಲು, ಇರುಳು, ತಿಂಗಳು, ವರ್ಷ) ಗ್ರಹಣಗಳ ಕಾಲ ಪಂಚಾಂಗದ ಲೆಕ್ಕಾಚಾರವನ್ನು ತಿಳಿಸುತ್ತದೆ. ಸಿದ್ಧಾಂತದಲ್ಲಿ ಖಗೊಳ ಗಣಿತ ಶಾಸ್ತ್ರದ ಉಪಯೋಗ ಹೆಚ್ಚಾ ಗಿದೆ. ಸೂಕ್ಷ್ಮವಾದ ಹಾಗೂ ಅತ್ಯಂತ ಗಹನವಾದ ಲೆಕ್ಕಾಚಾರಗಳನ್ನೊಳಗೊಂಡಿದೆ. ಗ್ರಹವೇಧಕ್ಕೊಸ್ಕರ ಯಂತ್ರ ನಿರ್ಮಾಣ ನಿಯಮಗಳ ಬಗೆಗೆ ಮಾಹಿತಿಗಳು ಲಭ್ಯವಾಗುತ್ತವೆ.
ಮುಖ್ಯವಾಗಿ ಒಂಬತ್ತು ಸಿದ್ಧಾಂತಗಳನ್ನು ಗಮನಿಸಬಹುದು.
1. ಬ್ರಹ್ಮಸಿದ್ಧಾಂತ
2. ಬೃ ಹಸ್ಪತಿ ಸಿದ್ಧಾಂತ
3. ಸೂರ್ಯ ಸಿದ್ಧಾಂತ
4. ಸೋ ಮಸಿದ್ದಾಂತ
5. ಗರ್ಗ್ಯಾ ಸಿದ್ಧಾಂತ
6. ನಾರದ ಸಿದ್ಧಾಂತ
7. ಪರಾಶರ ಸಿದ್ಧಾಂತ
8. ಪೌಲಸ್ಯ ಸಿದ್ಧಾಂತ
9. ವಸಿಷ್ಠ ಸಿದ್ಧಾಂತ
ಸಿದ್ಧಾಂತದ ಪ್ರಕಾರ ಅಂತರಿಕ್ಷ ದಲ್ಲಿನ ಗ್ರಹಗಳ ಚಲನೆಯು, ಕಾಲಗಣನೆ, ಗ್ರಹಣಗಳಿಂದುಟಾಗುವ ಕಾಲ ಹಾಗೂ ವಿಶೇಷವಾಗಿ ಪಂಚಾಂಗದ ಲೆಕ್ಕಾಚಾರಗಳನ್ನು ತಿಳಿಸುತ್ತದೆ.
-- :ಸಂಹಿತಾ: --
ಪರಿಪೂರ್ಣವಾಗಿ ಜ್ಯೋತಿಷ್ಯ ಶಾಸ್ತ್ರದ ವಿವರಣೆ ಹಾಗೂ ಗ್ರಹಗಳ ನೀರೀಕ್ಷೆ ಯಿಂದ ವಿಶ್ವವ್ಯಾಪೀ ಪ್ರಕೃತಿ ಯಲ್ಲಿ ಜರುಗುವ ವಿಶೇಷವಾದ ಘಟನೆಗಳು , ಮತ್ತು ವಸ್ತುಗಳ ಬಗೆಗಿನ ಎಲ್ಲಾ ವಿಚಾರವನ್ನು ತಿಳಿಸುವುದಾದರೆ, ಗ್ರಹಗಳ ಉದಯಾಸ್ತಕಾಲ , ಗ್ರಹಚಾರಫಲ, ಗ್ರಹಣಗಳ ಫಲ, ಗಣಿತ , ಮಹೂರ್ತ, ಭೂಗರ್ಭ ಮತ್ತು ಶಕುನಶಾಸ್ತ್ರದ ಮಿಶ್ರರೂಪವಾಗಿದೆ.
-- :ಹೋರಾ: ---
ಹೋರಾ .... ಪದವು ಗ್ರೀಕರಿಂದ ಬಂದಿರುವುದಾಗಿದ್ದು, ಈ ವಿಷಯವಾಗಿ ಮೊದಲಬಾರಿಗೆ ಪ್ರಸ್ತಾಪಿಸಿದ ಕೀರ್ತಿ " ವರಾಹ ಮಿಹಿರಾಚಾರ್ಯರಿಗೆ" ಸಲ್ಲುತ್ತದೆ.
ಹಿಂದೂ ಜ್ಯೋತಿಷ್ಯವು ಮೂರು ವಿಭಾಗಗಳನ್ನು ಹೊಂದಿದ್ದು ತಂತ್ರ, ಹೋರಾ ಹಾಗೂ ಸ್ಕಂದ, ಈ ಮೂರನ್ನು ಒಟ್ಟುಗೂಡಿಸಿದರೆ ಸಂಹಿತವಾಗುತ್ತದೆ. ಹೋರಾ ಎನ್ನುವುದಕ್ಕೆ ಲಗ್ನವೆಂದು ಭಾವಿಸಲಾಗಿದೆ. ಇದು ಹಗಲು ಮತ್ತು ರಾತ್ರಿಯನ್ನು ಅನುಸರಿಸುವ ಲಗ್ನದ ಸ್ಥಿತಿ. ಲಗ್ನದಲ್ಲಿ ಸುತ್ತುವರಿದಿರಿವ ಗೆಹಗಳು ಜಾತ ಕನ ಮೇಲೆ ಬೀರುವ ಪರಿಣಾಮ, ಪ್ರತಿಷ್ಠೆ, ಯಾತ್ರೆ, ವಿವಾಹ ಮುಂತಾದ ವಿಷಯಗಳ ಪರಿಚಯವನ್ನು ಮಾಡಿಸುತ್ತದ. ಫಲಜ್ಯೋತಿಷ್ಯ, ಹಾಗೂ ಹೋರಾಶಾಸ್ತ್ರ ಮಹೂರ್ತದ ಬಗೆಗಿನ ಜ್ಯೋತಿಷ್ಯಶಾಸ್ತ್ರದ ಮೇಲೆ ಹೆಚ್ಚಿನ ಬೆಳಕನ್ನು ಬೀರುತ್ತದೆ.
" " ಜನನ ಕಾಲದಲ್ಲಿನ ಗ್ರಹಸ್ತಿತಿಯ ಆಧಾರದ ಮೇಲೆ ಗ್ರಹಗಳ ಶುಭಾಶುಭಗಳು, ಅವುಗಳ ಪ್ರಭಾವ, ನಕ್ಷತ್ರಗಳ ಪ್ರಭಾವ ಮನುಷ್ಯ ಮತ್ತು ಪ್ರಪಂಚದ ಮೇಲೆ ಪ್ರಭಾವಗಳ ಲೆಕ್ಕಾಚಾರ, ಫಲಜ್ಯೋತಿಷ್ಯ, ಮಹೂರ್ತ ಜ್ಯೋತಿಷ್ಯ ಇದನ್ನು ಹೇಳುವ ಶಾಸ್ತ್ರವೇ ಹೋರಾಶಾಸ್ತ್ರ.
✍ ಶೈಲಜಾ ರಮೇಶ್
No comments:
Post a Comment