ಹರಿಃ
ಓಂ
ಶ್ರೀ
ಗಣೇಶಾಯ ನಮಃ
ಶ್ರೀ ಗುರುಭ್ಯೋನಮಃ
---: ಚಂದ್ರ
:---
ಚಂದ್ರ ಗ್ರಹವು ವಿಜ್ಞಾನದಲ್ಲಿ ಉಪಗ್ರಹವಾದರು ಜ್ಯೋತಿಷ್ಯ ಶಾಸ್ತ್ರದಲ್ಲಿ , ನವಗ್ರಹಗಳಲ್ಲಿ ಇದು ಒಂದು ಗ್ರಹ.
" ರಾಜಾನೌ ರವಿ ಶೀತಗು" ಎಂಬಂತೆ ಸೂರ್ಯ ಚಂದ್ರರು ಗ್ರಹ ರಾಜರು. ಸೂರ್ಯ ಬೆಳಕನ್ನು ಕೊಡುವ ದೇವತೆಯಾದರೆ, ತಾಪದಿಂದ ಬೆಂದವನಿಗೆ ತಂಪು ಕೊಡುವ ದೇವತೆ ಚಂದ್ರ.
ಕೆಲವರ ಅಭಿಪ್ರಾಯದಂತೆ
ನಂದನ ಸಂವತ್ಸರದ ಕಾರ್ತೀಕ ಮಾಸ ಪೂರ್ಣಿಮೆಯಂದು
ಜನನ, ಜನ್ಮನಕ್ಷತ್ರ -- ಕೃತಿಕಾ , ಜನ್ಮಸ್ಥಳ-- ಯಮುನಾ ದೇಶ, ಆತ್ರೇಯ ಗೋತ್ರ, ಶ್ವೇತ ರೂಪ, ಹಸ್ತಸಂಖ್ಯೆ --- 2, ಗ್ರಹ ಮಂಡಲದಲ್ಲಿ ಆಗ್ನೇಯ ಸ್ಥಾನ, ಪಶ್ಚಿಮಾಭಿಮುಖನು, ಧಾನ್ಯ -- ಅಕ್ಕಿ, ಬಿಳಿವಸ್ತ್ರ, ರತ್ನ -- ಮುತ್ತು, ಆಯುಧಗಳು -- ಅಭಯ , ಗಧೆ, ತ್ರಿಚಕ್ರ ರಥ ವುಳ್ಳವನು, ಚತುರನು, ರೋಹಿಣಿ ಪ್ರಿಯನು, ದೇವತೆ -- ಪಾರ್ವತಿ ದೇವಿ, ಪೂಜಪುಷ್ಪ - - ಬಿಳಿತಾವರೆ, ಕಟಕ ರಾಶಿಗೆ ಅಧಿಪತಿ, ವೃಷಭದಲ್ಲಿ ಉಚ್ಚ ಸ್ಥಾನ, ೦ - 3°ಯ ವರೆಗೆ ಪರಮೋಚ್ಚ, ಮತ್ತು ಮೂಲ ತ್ರಿಕೋಣನು, ವೃಶ್ಚಿಕದಲ್ಲಿ ನೀಚಸ್ಥಾನ, 0 - ೩° ಪರಮ ನೀಚ, ಸೌಮ್ಯ ಸ್ವಭಾವ, ಸತ್ವಗುಣ ಉಳ್ಳವನು, ಸ್ರೀಗ್ರಹನು, ಮನೋಕಾರಕನು, ಮಾತೃಕಾರಕನು, ಗೋಚಾರದಲ್ಲಿ ಶುಭಸ್ಥಾನ 1, 3, 6, 7, 10, 11,
ಉಳಿದವು ಅಶುಭಸ್ತಾನಗಳು,
ವಾಯುವ್ಯ ದಿಕ್ಕಿಗೆ ಅಧಿಪತಿ, ಯಜುರ್ವೇದದ ರೀತಿಯಾಗಿ ಆಗ್ನೇಯದಿಕ್ಕಿಗೆ ಅಧಿಪತಿ, ರುಚಿ-- ಉಪ್ಪು, ದುಂಡನೆ ಶರೀರ, ಸಿಹಿಮಾತು, ಆಕರ್ಷಕ ಕಣ್ಣು, ಕಫ, ವಾಯು, ವ್ಯಾಪಾರಿ, ಶ್ವಾಸಕೋಶಕ್ಕೆ ಅಧಿಪತಿ, ಎಡಗಣ್ಣಿಗೆ ಕಾರಕ, ವರ್ಷ ಋತುವಿಗೆ ಅಧಿಪತಿ, ಕುಳ್ಳು ದೇಹ, ಒಳ್ಳೆಯ ದೃಷ್ಟಿ, ಬುದ್ಧಿವಂತ, ಚಂಚಲ ಸ್ವಭಾವ, ರಾಣಿಗ್ರಹ, ನೀರಿನ ಸ್ಥಳಗಳು, ವ್ಯವಸಾಯ, ದನದ ಕೊಟ್ಟಿಗೆಗಳಲ್ಲಿ ವಾಸ, ಶುಕ್ಲಪಕ್ಷದಲ್ಲಿ ಬಲವುಳ್ಳವನು (ವೃದ್ಧಿಚಂದ್ರ), ಕೃಷ್ಣಪಕ್ಷದಲ್ಲಿ ಬಲಹೀನ ( ಕ್ಷೀಣಚಂದ್ರ ), ಕಪ್ಪಾದ ಕೂದಲು, ನಿಷ್ಪಕ್ಷಪಾತಿ,
ಬೆಳ್ಳಿಗೆ ಅಧಿಪತಿ, ವಾಸಸ್ಥಾನ ನದಿಗಳು, ಸಮುದ್ರ, ಕೆರೆ, ಭಾವಿ, ಜಲಪ್ರದೇಶಗಳು, ಚರ ಸ್ವಭಾವ, ದಯೆ ಉಳ್ಳವನು, ದೇವ ಬ್ರಾಹ್ಮಣ ಭಕ್ತಿ, ಹಾಸ್ಯಪ್ರವೃತ್ತಿ ಉಳ್ಳವನು, ವಯಸ್ಸು 70 ವರ್ಷಗಳು, ಪ್ರಖ್ಯಾತಿ, ಸೌಂದರ್ಯವಂತನು, ರಾತ್ರಿಯಲ್ಲಿ ಬಲಶಾಲಿಯು, ಚಂದ್ರನ ಜೊತೆ ಯಾವುದೇ ಗ್ರಹ ಯುತಿ ಹೊಂದಿದರೆ ಸಮಾಗಮ ಎನ್ನುತ್ತಾರೆ, ಸ್ತ್ರೀಯರಲ್ಲಿ
ಗರ್ಭಧಾರಣಾ ಶಕ್ತಿ ನೀಡುವವ, ಮಧ್ಯಮ ವಯಸ್ಸು, ದೂರದೇಶಗಳ ಪ್ರಯಾಣ, ಸ್ತ್ರೀಲೋಲನು, ಚಪಲ ಗ್ರಹನು, ವಸ್ತ್ರಾಭರಣಗಳ
ಮೇಲೆ ಆಸೆ, ಚಂದ್ರನು ತಾನಿದ್ದ ಮನೆಯಿಂದ 7 ನೆ ಮನೆಯನ್ನು ನೋಡುತ್ತಾನೆ, 4 ನೇ ಮನೆಯಲ್ಲಿ ದಿಗ್ ಬಲ ಪಡೆಯುತ್ತಾನೆ, 10ನೇ ಮನೆಯಲ್ಲಿ ಬಲಹೀನನು, ಮಂಗಳ ಕಾರ್ಯಗಳಲ್ಲಿ ಆಸಕ್ತಿ, 14 ರಿಂದ 28 ವರ್ಷದ ವರೆಗೆ ಭಾಗ್ಯೋದಯ
ಕಾಲ, ಪ್ರತಿ ರಾಶಿಯಲ್ಲಿ, ಎರಡೂ ಕಾಲು ದಿನಗಳು ಇರುತ್ತಾನೆ, ಈತನ ವಾಹನ ಜಿಂಕೆ, ಸುಖ ಭೋಜನ ಉಳ್ಳವನು, ಶಾಂತಿ ಸಮಾಧಾನ ಉಳ್ಳವನು. ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳಿಗೆ
ಅಧಿಪತಿಯು, ದಶಾವರ್ಷ - 10 ವರ್ಷ.
" ಚಂದ್ರೋರ್ಯಶೋ ನಿರ್ಮಲಮ್ " ಎಂಬಂತೆ, ಯಾವುದೇ ರೀತಿಯಾದ ಯಶಸ್ಸನ್ನು ಸಾಧಿಸಲು ಮನಸ್ಸು ನಿರ್ಮಲವಾಗಿರಬೇಕು.
ಆದ್ದರಿಂದ ಮನಸ್ಸಿಗೆ ಹಾಗೂ ಯಶಸ್ಸಿಗೆ ಕಾರಕನಾಗಿದ್ದಾನೆ.
ಅತಿಥಿ ಸತ್ಕಾರ, ಸ್ತ್ರೀಯರು, ದೋಣಿ ನಡೆಸುವ ನಾವಿಕರು, ಕೃಷಿ, ಪುಷ್ಕಳವಾದ ಭೋಜನ, ದೇಹ ಸುಖ, ಸಮುದ್ರ ಸ್ನಾನ, ಮುತ್ತುರತ್ನ, ನೀರು ಹಾಗೂ ಹಾಲಿಗೆ ಸಂಭಂದಿಸಿದ ಎಲ್ಲಾ ಉದ್ಯಮ, ಮೀನುಗಾರರು, ಚಲವಾದಿತನ, ಪ್ರೇಮಪ್ರಸಂಗಗಳು,
ಪ್ರಣಯ ಲೀಲೆ, ರಕ್ತ, ಜನರ ಪ್ರೀತಿ, ಪ್ರೇಮ, ವಿಶ್ವಾಸ , ಮಾನವೀಯ ಜವಾಬ್ದಾರಿಗಳು, ಪ್ರಯಾಣ, ಜೀವಿಗಳ ಪೋಷಣೆ, ಮನಸ್ಸಿನ ಚಂಚಲತೆ, ವಾತ ಕಫ ಮುಂತಾದುವಕ್ಕೆ
ಕಾರಕನು, ನಿರ್ಮಲವಾದ ಮನಸ್ಸು, ಉಪಚಾರಪ್ರಿಯ, ಮುದುಸ್ವಭಾವ, ಸ್ತ್ರಿದೇವತಾಮಂದಿರಗಳು, ಔಷಧ ಜೇನುತುಪ್ಪ ದೊರೆಯುವ ಸ್ಥಳ, ವಾಯುವ್ಯದಿಕ್ಕು, ನೀರಿರುವ ಸ್ಥಳ ಚಂದ್ರನ ಸಂಚಾರ ಸ್ಥಳಗಳಾಗಿವೆ.
ಚಂದ್ರನು ಬಲಹೀನನಾದರೆ - ಶ್ವಾಸಕೋಶದ ತೊಂದರೆ, ಮಾನಸಿಕ ತೊಂದ್ರೆ, ಶೀತ, ರಕ್ತದಲ್ಲಿ ಮಾಲಿನತೆ, ಅನಿಮಿಯಾ, ಅಸ್ತಮಾ, ಭಾವುಕತೆ , ಮೂರ್ಛೆ ರೋಗಗಳು ಬರುವ ಸಾಧ್ಯತೆಗಳು ಇವೆ.
---: ಪುರಾಣದಲ್ಲಿ
ಚಂದ್ರ :---
Picture source: Internet/ social media
ಸೌಮ್ಯ ಸ್ವಭಾವದ , ಸುಂದರ ಕಣ್ಗಳ, ಮಧುರ ಮಾತುಗಳ, ಬಿಳಿ ಬಣ್ಣದ, ಎತ್ತರದ ನಿಲುವು, ಕಪ್ಪು ಗುಂಗುರು ಕೂದಲು, ಬಿಳಿ ಉಡುಗೆಯ ಚೆಲುವ, ಚಂದ್ರ.....
ಎರಡು ಕೈಗಳು, ಒಂದರಲ್ಲಿ ಗಧೆ, ಇನ್ನೊಂದರಲ್ಲಿ
ಅಭಯಮುದ್ರೆ, ಬಿಳಿಯ ಸ್ವಚ್ಛವಾದ ಉಡುಗೆಯನ್ನು ಧರಿಸಿದ ಸುಂದರವಾದ ಹತ್ತು ಕುದುರೆಗಳ, ಬಿಳಿಯ ರಥದಲ್ಲಿ ಆಸೀನ, ಬುದ್ಧಿವಂತಿಕೆ, ಸಾತ್ವಿಕತೆ, ಬಹುಜನ ಮೈತ್ರಿ, ದಯಾಳುತ್ವ, ಚಾಂಚಲ್ಯ, ಸೌಭಾಗ್ಯಾ, ಇವು ಚಂದ್ರನ ಗುಣಗಳು
ಸಮುದ್ರ ಮಥನ ಕಾಲದಲ್ಲಿ, ಕ್ಷೀರೋರ್ದಾರ್ಣವ ಸಂಭೂತನು ಹೌದು, ಸ್ವಾಯಂಭುವ ಮನ್ವಂತರದಲ್ಲಿ
ಅತ್ರಿಋಷಿಯ ಕಣ್ಣಿನಿಂದ ಜನಿಸಿದವನೂ ಹೌದು, ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಲ್ಲಿ
ಧರ್ಮ ಪ್ರಜಾಪತಿಗೆ ವಸುಘ್ನೇ ಎಂಬ ಹೆಂಡತಿಯಲ್ಲಿ ಹುಟ್ಟಿದವನು. ದಕ್ಷ ಪ್ರಜಾಪತಿಯು ತನ್ನ ಅರವತ್ತು ಜನ ಹೆಣ್ಣು ಮಕ್ಕಳ ಲ್ಲಿ, ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ. ಈ ಚಂದ್ರ ಪತ್ನಿಯರೇ ಇಪ್ಪತ್ತೇಳು ನಕ್ಷತ್ರಗಳು, ಚಂದ್ರನು ರೋಹಿಣಿ ಎಂಬುವವಳಲ್ಲಿ ಮಾತ್ರ ಅತಿಶಯವಾಗಿ ಅನುರಕ್ತನಾದಾಗ ಉಳಿದವರು ಅಪ್ಪನಾದ ದಕ್ಷಪ್ರಜಾಪತಿಯಲ್ಲಿ ದೂರಿದರು, ಆಗ ಪ್ರಜಾಪತಿಯು ಚಂದ್ರನಿಗೆ ಕ್ಷಯ ರೋಗ ಬರುವಂತೆ ಶಪಿಸಿದ ಎಂದು, ಪರಮೇಶ್ವರನು ಚಂದ್ರನನ್ನು ತನ್ನ ಶಿಖೆಯಲ್ಲಿ ಧರಿಸಿ ದನು ಎಂದೂ ಪ್ರತೀತಿಯಿದೆ.
ಚಂದ್ರನು ವಿದ್ಯಾಭ್ಯಾಸಕ್ಕಾಗಿ
ದೇವಾಗುರುವಾದ ಬೃಹಸ್ಪತಿಯಲ್ಲಿ
ಹೋಗಿದ್ದನು, ಸುಂದರಾಂಗನಾದ ಇವನನ್ನು ನೋಡಿ ಗುರುವಿನ ಪತ್ನಿಯಾದ ತಾರೆಯು ಮೋಹಿಸಿದಳು, ಆಕೆಯನ್ನು ಚಂದ್ರನು ಬಲಾತ್ಕಾರದಿಂದ
ಅಪಹರಿಸಿ ಬುಧ ನನ್ನು ಪಡೆದನು.
ಮತ್ತೊಮ್ಮೆ ಸಮುದ್ರ ಮಥನ ಕಾಲದಲ್ಲಿ ಸಾಗರದಿಂದ ಆವಿರ್ಭವಿಸಿದೆ ಚಂದ್ರನನ್ನು , ಸಮುದ್ರ ಮಥನ ಕಾಲದಲ್ಲಿ ಉದ್ಭವಿಸಿದ ಹಾಲಹಲವನ್ನು ಕುಡಿದ ತಾಪ ನಿವಾರಣೆ ಗೋಸ್ಕರ ಪರಶಿವನು ತಲೆಯಲ್ಲಿ ಧರಿಸಿ ಚಂದ್ರಶೇಖರ ಎನಿಸಿಕೊಂಡ.
ಅಮೃತಪಾನದ ಸಂದರ್ಭದಲ್ಲಿ ಚಂದ್ರನು ಸೂರ್ಯನೊಡನೆ ಸೇರಿ, ಮಾಯಾವಿಯಾದ ರಾಹುವು ಮೋಸದಿಂದ ಅಮೃತಪಾನ ಮಾಡುವುದನ್ನು ಮೋಹಿನಿ ರೂಪಿ ವಿಷ್ಣುವಿಗೆ ತಿಳಿಸಿ ರಾಹು ಕೇತುಗಳ ದ್ವೇಷವನ್ನು ಪಡೆದ, ಆ ಕಾರಣಕ್ಕಾಗಿಯೇ
ಗ್ರಹಣ ವೇರ್ಪಡುವುದು.
ಪ್ರಥಮ ಪೂಜಿತನಾದ ಗಣಪತಿಯನ್ನು ನೋಡಿ ಅಪಹಾಸ್ಯ ಮಾಡಿದ್ದಕ್ಕಾಗಿ ಗಣಪತಿಯ ಶಾಪಕ್ಕೊಳಗಾದ.
ಹಿಮಾಂಷು, ಚಂದ್ರಮ, ಇಂಧು, ಕುಮುಧ ಬಾಂಧವ, ವಿಧು, ಸುಧಾಮ್ಷು, ಶುಬ್ರಾಂಷು, ಓಷಧೀಶ, ನಿಶಾಪತಿ, ಅಬ್ಜ, ಜೈವಾಕೃತ, ಸೋಮ, ಗ್ಲೌಮೃಗಅಂಕ, ಕಲಾನಿಧಿ, ದ್ವಿಜರಾಜ, ಶಶದರ, ನಕ್ಷತ್ರೇ ಶ, ಕ್ಷಪಾಕರ ಇವು ಚಂದ್ರನ ಹೆಸರುಗಳು.
" ಧಧಿಶಂಖತುಷಾರಾಭಮ್
ಕ್ಷೀರೋರ್ದಾರ್ಣವ ಸಂಭಾವಂ
ನಮಾಮಿ ಶಶಿನಮ್ ಸೋಮಮ್
ಶಂಭೋರ್ಮುಕುಟ ಭೂಷಣಂ "
ಅರ್ಥ :-- ಮೊಸರು, ಶಂಖ, ಹಿಮದಂತೆ ಶ್ವೇತಕಾಂತಿಯನ್ನು ಹೊಂದಿದ, ಕ್ಷೀರ ಸಾಗರದಲ್ಲಿ ಆವಿರ್ಭವಿಸಿದೆ ಶಿವನ ತಲೆಯ ಅಲಂಕಾರವಾದಂತಹ ಶಶಾಂಕನಿಗೆ ಭಕ್ತಿಯಿಂದ ವಂದಿಸುವೆ.
ಈ ಶ್ಲೋಕ ಪಠಣೆಯಿಂದ ಚಂದ್ರನ ಶುಭ ಫಲವನ್ನು ಪಡೆಯಬಹುದು.
ಚಂದ್ರ ಗಾಯತ್ರಿ
ಮಂತ್ರ :--
" ಓಂ ಸುಧಾಕರಾಯ ವಿದ್ಮಹೇ
ಒಷಧೀಷಾಯ ಧೀಮಹಿ
ತನ್ನೋ ಸೋಮ ಪ್ರಚೋದಯಾತ್ "
ಚಂದ್ರ ಪೀಡಾ ಪರಿಹಾರ ಸ್ತೋತ್ರ:-
" ರೋಹಿಣೀಶ ಸುಧಾಮೂರ್ತಿಹಿ
ಸುಧಾಗಾತ್ರಹ ಸುಧಾಶನಃ
ವಿಷಮಸ್ಥಾನ ಸಂಭೂತಾಮ್
ಪೀಡಾಂ ಹರತು ಮೇ ವಿಧುಹು "
ಚಂದ್ರ ಗ್ರಹ ಪ್ರೀತ್ಯರ್ಥವಾಗಿ
ಅಕ್ಕಿ, ಹಾಲು, ಮೊಸರು, ಬಿಳಿಯವಸ್ತ್ರ ದಾನ ಮಾಡಬೇಕು.
ಚಂದ್ರ ಗ್ರಹವನ್ನು ಬಲಪಡಿಸಲು ಚಂದ್ರನ ರತ್ನವಾದ ಮುತ್ತನ್ನು ಧರಿಸಬಹುದು.
ಆಶುಭ ಸ್ಥಾನದಲ್ಲಿ ಚಂದ್ರನಿದ್ದು ಪ್ರತಿಕೂಲವಾಗಿದ್ದರೆ ...........
ಚಂದ್ರನು ಶಿವನ ತಲೆಯ ಮೇಲೆ ಇರುವುದರಿಂದ, ಶಿವನಿಂದ ಚಂದ್ರನ ಶಾಪ ವಿಮೋಚನೆ ಆಗಿದ್ದರಿಂದ ( ದಕ್ಷ ಪ್ರಜಾಪತಿಯ ಶಾಪ ), ಶಿವನ ಪ್ರಾರ್ಥನೆಯಿಂದ ಕೂಡ ಚಂದ್ರನ ಶುಭಫಲವನ್ನು ಪಡೆಯಬಹುದು. ಜಗನ್ಮಾತೆಯಾದ ಪಾರ್ವತಿ ದೇವಿಯು ಚಂದ್ರನ ಆರಾಧ್ಯ ದೈವವಾದ್ದರಿಂದ ದುರ್ಗಾಪೂಜೆಯಿಂದ
ಕೂಡ ಚಂದ್ರನ ಶುಭಫಲ ಪಡೆಯಬಹುದು.
ಸೋಮವಾರ ದುರ್ಗಾ ದೇವಿಗೆ ( ಪಾರ್ವತಿ ) ಕ್ಷೀರಾಭಿಷೇಕ ಮಾಡಿಸಿ, ಬೆಲ್ಲದನ್ನ ನೈವೇದ್ಯ, ಹಾಗೂ ಶಿವನಿಗೆ ಭಸ್ಮಾಭಿಷೇಕ ಮಾಡಿಸುವುದರಿಂದ ಕೂಡ ಚಂದ್ರ ಗ್ರಹದ ಶುಭಫಲ ವನ್ನು ಪಡೆಯಬಹುದು.
ಚಂದ್ರನ ಏ ಕಾಕ್ಷರಿ
ಬೀಜಮಂತ್ರ :--
ಓಂ ಸೋಂ ಸೋಮಾಯ ನಮಃ
ಅನುಕೂಲ ಮಂತ್ರ
:--
ಓಂ ವ್ಹೀಮ್ ಕ್ಲೀಮ್ ಶ್ರೀಮ್
( ಜಪ ಸಂಖ್ಯೆ ಒಂದೂ ಕಾಲು ಲಕ್ಷ )
ತಾಂತ್ರಿಕ ವಿಧಾನ
ಮಂತ್ರ :--
ಓಂ ಶ್ರೌಮ್ ಶ್ರೀಮ್ ಶ್ರೌಮ್ ಚಂದ್ರಮಸೇ ನಮಃ
(ಜಪಸಂಖ್ಯೆ ಹನ್ನೊಂದು ಸಾವಿರ )
ಚಂದ್ರ ಕ್ಷೇ ತ್ರವಾದ ಕಟಕ ಲಗ್ನ ದವರು ಪೂಜಿಸಿ ಧರಿಸ ಬೇಕಾದ ಯಂತ್ರ....
PANCHA DASHA YANTRA
8
|
1
|
6
|
3
|
5
|
7
|
4
|
9
|
2
|
BEESA YANTRA
7
|
2
|
9
|
8
|
6
|
2
|
3
|
10
|
5
|
ಓಂ ಐಮ್ ಕ್ಲೀಮ್ ಶ್ರೀ ಮ್
--: ವೈಜ್ಞಾನಿಕವಾಗಿ
ಚಂದ್ರ :--
Picture source: Internet/ social media
ಕಣ್ಣಿಗೆ ಕಾಣುವ , ಕೈಗೆಟುಕದ, ಭೂಮಿಗೆ ಹತ್ತಿರವಾದ, ನಿರ್ಜೀವವಾದರೂ ಭೂಮಿಯನ್ನು ಸುತ್ತುವ ಜವೆವಶಕ್ತಿಯನ್ನು ಪಡೆದಿರುವ ಚಂದ್ರ ಸೌರವ್ಯೂಹದ ಎಲ್ಲಾ ಗ್ರಹಗಳಿಗಿಂತಲು
ಆಕರ್ಶಕವಾಗಿದ್ದಾನೆ. ಭೂಮಿಯ್ ಏಕೈಕ ಉಪಗ್ರಹ ಚಂದ್ರ. ಚಂದ್ರನ ಬಗೆಗೆ ಮೊದಲಿನಿಂದಲೂ ಸಾಕಷ್ಟು ಕುತೂಹಲ ಬೆಳೆಸಿಕೊಂಡ ಮಾನವ ಈ ಗ್ರಹದ ಮೇಲೆ ಪಾದಾರ್ಪಣೆ ಮಾಡಿ ಚಂದ್ರನ ಬಗ್ಗೆ ಇದ್ದ ಮಾನವನ ಅನೇಕ ಕಲ್ಪನೆ, ನಂಬಿಕೆಗೆ ಹೊಸತಿರುವು ಕೊಟ್ಟಂತಾಗಿದೆ,
ಚಂದ್ರನ ಬಗೆಗೆ ವೈಜ್ಞಾನಿಕವಾಗಿ ಹಾಗೂ ಸೈದ್ಧಾಂತಿಕವಾಗಿ
ನಡೆದಿರುವ ಅಧ್ಯಯನ ತುಂಬಾ ಪರಿಣಾಮಕಾರಿಯಾಗಿದೆ.
ಭೂಮಿ ಮತ್ತು. ಚಂದ್ರನ ನಡುವಿನ ಸರಾಸರಿ ದೂರ----------- 384,399 ಕಿ ಮೀ, ಈ ದೂರದಲ್ಲಿ ಚಂದ್ರನಿಂದ ಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು 1.3 ಕ್ಷಣಗಳು ಹಿಡಿಯುತ್ತದೆ.
ಚಂದ್ರನ ವ್ಯಾಸವು 3.474 km ಗಳಿದ್ದು (2159 ಮೈಲಿ ) (ಭೂಮಿಗಿಂತ 3.7 ಪಟ್ಟು ಕಡಿಮೆ). ಇದು ಸೌರಮಂಡಲದ 5 ನೇ ಅತಿ ಭಾರಿಯಾದ ಉಪಗ್ರಹವಾಗಿದೆ. ಭೂಮಿಯ ಮೇಲಿನ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ, ಚಂದ್ರನು ಭೂಮಿಯ ಸುತ್ತ 27.3 ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಭೂಮಿ - ಚಂದ್ರ - ಸೂರ್ಯ ವ್ಯವಸ್ಥೆಯಲ್ಲಿ
ಆವರ್ತಿಸುವ ಬದಲಾವಣೆಗಳ ಕಾರಣದಿಂದ ಚಂದ್ರನ ಕಲೆಗಳು ಉಂಟಾಗುತ್ತದೆ, ಈ ಪಕ್ಷಗಳು 29.5 ದಿನಗಳಿಗೊಮ್ಮೆ ಆವರ್ತಿಸುತ್ತದೆ.
ಚಂದ್ರವು ಬಹಳ ವಿರಳವಾದ, ಸುಮಾರು ನಿರ್ವಾತದಂತಹ ವಾಯುಮಂಡಲವನ್ನು ಹೊಂದಿದೆ. ಈ ವಾಯು ಮಂಡಲದ ಒಂದು ಮೂಲವೆಂದರೆ ಅನಿಲಗಳ ಬಿಡುಗಡೆ, ಚಂದ್ರನ ಒಳಭಾಗದಲ್ಲಿ ಉಂಟಾಗುವ ವಿಕಿರಣ ಕ್ಷಯದಿಂದ ರೇಡಾನ್ ಮತ್ತಿತರ ಅನಿಲಗಳು ಉದ್ಭವವಾಗಿ ಹೊರ ಬರುತ್ತದೆ. ಸೂಕ್ಷ್ಮ ಉಲ್ಕೆ, ಸೌರಮಾರುತದ ಆಯಾನುಗಳು, ಎಲೆಕ್ಟ್ರಾನುಗಳು ಮತ್ತು ಸೂರ್ಯನ ಬೆಳಕಿನ ಸುರಿಮಳೆಗಳಿಂದಲೂ ಸ್ವಲ್ಪ ಪ್ರಮಾಣದಲ್ಲಿ ಅನಿಲಗಳು ಸೃಷ್ಟಿಯಾಗುತ್ತವೆ.
ಭೂಮಿಗೆ ಹೋಲಿಸಿದರೆ ಚಂದ್ರನ ಬಾಹ್ಯ ಕಾಂತ ಕ್ಷೇತ್ರವು ಬಹಳ ದುರ್ಬಲವಾಗಿದೆ,
ಇದಲ್ಲದೆ ಈ ಎರಡು ಕಾಂತ ಕ್ಷೇತ್ರಗಳ ನಡುವೆಯಿಂದ ಬೇರೆ ದೊಡ್ಡ ವ್ಯತ್ಯಾಸಗಳೆಂದರೆ , ಚಂದ್ರನು ದ್ವಿದ್ರುವ ಕಾಂತಕ್ಷೇತ್ರವನ್ನು ಹೊಂದಿಲ್ಲ. ಅದರ ಒಳಭಾಗದಲ್ಲಿ ಉತ್ಪಾದಕ ವಿದ್ದಿದ್ದರೆ ದ್ವಿದ್ರುವವು ಉಂಟಾಗುತ್ತಿತ್ತು. ಚಂದ್ರನ ಪ್ರಸಕ್ತದ ಕಾಂತಕ್ಷೇತ್ರವು ಸಂಪೂರ್ಣವಾಗಿ ಚಂದ್ರನ ಹೊರಮೈನಿಂದಲೇ ಉದ್ಭವವಾಗಿದೆ. ಚಂದ್ರನ ಗುರುತ್ವ ಕೇಂದ್ರದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ
ಕೆಲವು ಅಪ್ಪಳಿಕೆ ಕುಳಿಗಳಿಗೆ ಸಂಭಂಧಿಸಿದ ಗಮನಾರ್ಹ ಗುರುತ್ವ ಅಸಮಂಜಸತೆಗಳು, ಇವುಗಳನ್ನು ' ಮ್ಯಾಸ್ಕಾನ್ ' ಗಳೆಂದು ಕರೆಯುತ್ತಾರೆ.
--: ಭೂಮಿಯಿಂದ
ಕಾಣುವಂತೆ ಚಂದ್ರ
:--
ಕಕ್ಷೆಯ ಗುಣಲಕ್ಷಣಗಳು
ಪುರಭೂಮಿ -- 363,104 k. m
ಅಪಭೂಮಿ -- 405,696 k. m
ದೀರ್ಘರ್ಧ ಅಕ್ಷ -- 384,399 k m
ಕಕ್ಷೆಯ ಪರಿಧಿ -- 2,413,402 k
m
ಕಕ್ಷಿಯ ಕೇಂದ್ರ ಚ್ಯುತಿ -- 0,0549
ನಾಕ್ಷತ್ರಿಕ ಅವಧಿ -- 27 ದಿ 7ಘಂ 43,1 ನಿ
ಯುತಿಮಾಸ -- 29 ದಿ 12 ಘಂ 44,0 ನಿ
ಅಸಂಗತ ಮಾಸ -- 27, 554,550 ದಿನ
ಸಾಯನ ಮಾಸ -- 27,321 582 ದಿನ
ಸರಾಸರಿ ಕಕ್ಷಾ ವೇಗ -- 1,022 ಕಿ ಮೀ/ಕ್ಷಣ
ಓ ರೆ -- ಸೌರಮಂಡಲದ ಸಮತಲಕ್ಕೆ 5, 145° ( ಭೂಮಿಯ ಸಮಭಾಜಕಕ್ಕೆ 18,29° ಮತ್ತು 28, 58° ಗಳ ನಡುವೆ )
ಭೌತಿಕ ಗುಣಲಕ್ಷಣಗಳು
ಸಮಭಾಜಕದ ತ್ರಿಜ್ಯ -- 1,738,14 ಕಿ ಮೀ ( ಭೂಮಿಯ 27,3%)
ಸರಾಸರಿ ತ್ರಿಜ್ಯ -- 1,737,103 ಕಿ ಮೀ (ಭೂಮಿಯ 27,3%)
ಪರಿಧಿ -- 4,373 ×10^೬ ಕಿ ಮೀ
ಹ್ರಸ್ವಅಕ್ಷತೆ -- 0,00125
ಮೇಲ್ಮೈ ವಿಸ್ತೀರ್ಣ -- 3,793×10^7 ಕಿ ಮೀ ( ಭೂಮಿಯ 7.4% )
ಗಾತ್ರ -- 2,1958×10^10 ಕಿ ಮೀ (ಭೂಮಿಯ 2%)
ದ್ರವ್ಯ ರಾಶಿ -- 7,3477×10^22 ಕಿ. ಗ್ರಾಮ್
ಸಾಂದ್ರತೆ -- 3,346.4 ಕಿ ಗ್ರಾಂ
ಮೇಲ್ಮೈ ಗುರುತ್ವ -- 1,622 ಮೀ/ಕ್ಷಣ
ಅಕ್ಷೀಯ ಪರಿಭ್ರಮನ ವೇಗ -- 4,627 ಮೀ / ಕ್ಷಣ
ಅಕ್ಷೀಯ ಓರೆ -- 1,5424° ( ಕಾಂತಿ ವೃತ್ತದ ಸಮತಲಕ್ಕೆ)
ಪ್ರತಿಫಲನಾಂಶ -- 0.12
ಗೋಚರ ಪ್ರಮಾಣ -- _12.74 ರ ವರೆಗೆ
ಮೇಲ್ಮೈ ತಾಪಮಾನ (ಸಮಭಾಜಕದಲ್ಲಿ )--
ಕನಿಷ್ಠ -- 100 k
ಸರಾಸರಿ -- 220 k
ಗರಿಷ್ಠ -- 390 k
ವಾಯುಮಂಡಲದ ಸಾಂದ್ರತೆ
ಪ್ರತಿ ಸೆಂ. ಮೀ ಗೆ10^7 ಕಣಗಳು(ಹಗಲಿನಲ್ಲಿ)
ಪ್ರತಿ ಸೆಂ ಮೀ ಗೆ 10^5 ಕಣಗಳು(ರಾತ್ರಿಯಲ್ಲಿ)
****************************
✍ ಡಾ||
ಶೈಲಜಾ ರಮೇಶ್
कन्नड़ बश्यास्या उत्तमास्य: विसायह:। दनयवाद:
ReplyDeleteಧನ್ಯವಾದಗಳು ಸರ್
ReplyDeleteಧನ್ಯವಾದಗಳು
Deleteಮಾಹಿತಿಗಾಗಿ ತುಂಬಾ ಧನ್ಯವಾದಗಳು
ReplyDelete