ಗ್ರಹಿಸುವ ಹಾಗೂ ಪ್ರಭಾವ ಬೀರುವ ಶಕ್ತಿ ಇರುವುದೇ ಗ್ರಹ. ಗ್ರಹಗಳು ಹಾಗೂ ನಕ್ಷತ್ರಗಳು ಆಕಾಶದಲ್ಲಿ ಮೈದಳೆದ ಶಕ್ತಿಸ್ವರೂಪ. ಭೂಮಿಯಲ್ಲಿನ ಸಮಸ್ತ ವ್ಯವಹಾರದ ಮೇಲೆ ಗ್ರಹಗಳ ಪ್ರಭಾವ ನಿಚ್ಚಳವಾಗಿದೆ. ಜ್ಯೋತಿಷ್ಯಕ್ಕೆ ಜೀವಾಳವೇ ಗ್ರಹಗಳು. ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಪ್ರಮುಖ ಸ್ಥಾನವನ್ನು ವಹಿಸುತ್ತದೆ.
ಗ್ರಹಣ ಎಂದರೆ ಹಿಡಿಯುವುದು ಎಂದರ್ಥ, “ ಗೃಹ್ನಂತಿ ಇತಿ ಗ್ರಹಃ “ ಸೂರ್ಯ ಚಂದ್ರರನ್ನು
ಹಿಡಿಯುವ ರಾಹುಕೇತುಗಳೇ ಗ್ರಹರಲ್ಲ, ತಮ್ಮ ಪ್ರಭಾವ ಪೂರಿತ ಶಕ್ತಿಯಿಂದ ಇಡೀ ಚರಾಚರ ಜಗತ್ತನ್ನೇ ಹಿಡಿದಿಟ್ಟಿರುವ ಆದಿತ್ಯಾದಿಗಳೂ ಗ್ರಹರೇ. ಈ ಗ್ರಹರು ಸಕಲ ಪ್ರಾಣಿಜಾತದ ಜೀವನದಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದು ತಮ್ಮ ಪ್ರಭಾವವನ್ನು ಬೀರುತ್ತದೆ, ಪರಮೋತ್ಕರ್ಷವನ್ನು ಹೊಂದಿ ಸಿಂಹಾಸನ ಏರುವುದಕ್ಕೂ, ನೆಲಕಚ್ಚಿ ಪ್ರಪಾತಕ್ಕೆ ಬೀಳುವುದಕ್ಕೂ ಗ್ರಹದ ಸ್ಥಿತಿಗತಿಗಳು ಕಾರಣವಾಗುತ್ತವೆ.
ಒಂದು ಸುಭಾಷಿತ ಹೀಗೆ ಹೇಳುತ್ತದೆ.
“” ಗ್ರಹಾಗಾವೋ ನರೇಂದ್ರಶ್ಚ ಬ್ರಾಹ್ಮನಶ್ಚ ವಿಶೇಷತಃ
ಪೂಜಿತಾಃ ಪೂಜಯಷ್ಯಂತಿ ನಿರ್ದಹಂತ್ಯ ನಮಾನಿತಾಃ “”
ಗ್ರಹಗಳು ಗೋವುಗಳು ರಾಜ ಮತ್ತು ಬ್ರಾಹ್ಮಣರು ಈ ನಾಲ್ವರು ಪೂಜಿತರಾದರೆ ಸರ್ವಾಭೀಷ್ಟಪ್ರದರು, ಅವಮಾನಿತರಾದರೆ ಸರ್ವನಾಶಕರು ಎಂದಿದೆ.
ಜ್ಯೋತಿಷ್ಯ ಶಾಸ್ತ್ರಕ್ಕೆ ಸಭಂದಿಸಿದಂತೆ ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ , ಶನಿ, ರಾಹು, ಕೇತುಗಳನ್ನು ಗ್ರಹಗಳೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ,
ಸೂರ್ಯ, ಚಂದ್ರರು --- ಪ್ರಕಾಶ ಗ್ರಹರೆಂತಲು ,
ಕುಜ, ಬುಧ, ಗುರು, ಶುಕ್ರ, ಶನಿ ಇವರನ್ನು ತಾರಾಗ್ರಹರೆಂತಲೂ,
ರಾಹು, ಕೇತುಗಳನ್ನು ಛಾಯಾ ಗ್ರಹರೆಂತಲೂ ಕರೆಯುತ್ತಾರೆ.
ಈ ಗ್ರಹಗಳು ತಾವಿರುವ ರಾಶಿಯ ಲಕ್ಷಣವನ್ನು ಪಡೆಯುತ್ತಾರೆ .ಭಚಕ್ರದಲ್ಲಿ ಇವರ ಸ್ಥಾನವನ್ನು ಕೆಳಕಂಡಂತೆ ಗುರುತಿಸಬಹುದು, ರವಿ ಮತ್ತು ಚಂದ್ರರನ್ನು ಹೊರತುಪಡಿಸಿ ಉಳಿದ ತಾರಾಗ್ರಹರಿಗೆ ಎರಡೆರಡು ಆದಿಪಠ್ಯವನ್ನು ಕೊಡಲಾಗಿದೆ.
ಮೀನಾ
ಗುರು
|
ಮೇಷ
ಕುಜ
|
ವೃಷಭ
ಶುಕ್ರ
|
ಮಿಥುನ
ಬುಧ
|
ಕುಂಭ
ಶನಿ
|
ಗ್ರಹಗಳಆಧಿಪತ್ಯಗಳು
|
ಕಟಕ
ಚಂದ್ರ
|
|
ಮಕರ
ಶನಿ
|
ಸಿಂಹ
ರವಿ
|
||
ಧನಸ್ಸು
ಗುರು
|
ವೃಶ್ಚಿಕ
ಕುಜ
|
ತುಲಾ
ಶುಕ್ರ
|
ಕನ್ಯಾ
ಬುಧ
|
ಇನ್ನು
ಗ್ರಹಗಳ ಸ್ವರೂಪ , ಸ್ವಭಾವ, ಕಾರಕತ್ವ
ಗಳನ್ನ ತಿಳಿಯೋಣ
---:ರವಿ :---
Picture source: Internet/ social media
ನವಗ್ರಹದಲ್ಲಿ
ರಾಜನಾದ ಸೂರ್ಯಗ್ರಹವು ಕಾಶ್ಯಪ ಹಾಗೂ ಅದಿತಿ ಪುತ್ರನಾಗಿದ್ದು ಜಗತ್ತಿನ ಪ್ರತ್ಯಕ್ಷ ದೈವವಾಗಿದೆ. ಈ ಗ್ರಹವು
ಸಾಕ್ಷಾತ್ವಿಷ್ಣು ರೂಪಿಯಾಗಿದ್ದು, ಶ್ರೀ ಚಕ್ರದಲ್ಲಿ ವಾಸಿಸುವ ಸೂರ್ಯನು ಶ್ರೀಚಕ್ರ ದೇವತೆ ಯಾದ ಲಲಿತಾ ದೇವಿಯ ಆದೇಶದ ಮೇರೆಗೆ ಜಗತ್ತಿನ ಎಲ್ಲಾ ಜೀವಸಂಕುಲವನ್ನು ತನ್ನ ತೇಜಸ್ಸಿನಿಂದ ಕಾಪಾಡುತ್ತಿದ್ದಾನೆ.
ಪ್ರಭವ
ಸಂವತ್ಸರ ಮಾಘಮಾಸ ಶುಕ್ಲಪಕ್ಷ ರಥಸಪ್ತಮಿ ಯಂದು ಜನನ.
ಜನ್ಮನಕ್ಷತ್ರ ವಿಶಾಖ, ಕಾಶ್ಯಪಗೋತ್ರ, ವಿಶ್ವಾಮಿತ್ರ ಪರಂಪರೆ, ಶರೀರ..... ಪದ್ಮವರ್ಣ, ಹಸ್ತಸಂಖ್ಯಾ 1 , ಕಳಿಂಗದೇಶಕ್ಕೆ
ಅಧಿಪತಿ, ಗ್ರಹಮಂಡಲದಲ್ಲಿ ಕೇಂದ್ರಸ್ಥಾನ, ಪೂರ್ವಾಭಿಮುಖ, ಧಾನ್ಯ - ಗೋಧಿ, ಕೆಂಪುವಸ್ತ್ರ, ಮಾಣಿಕ್ಯರತ್ನ, ಆಯುಧಗಳು - ಸಪ್ತರಜ್ಜುಗಳು, ಏಕಚಕ್ರರಥಸ್ಥ, ವರ್ತುಲಾಕಾರಮಂಡಲ, ಸಂಜ್ಞಾ
ಮತ್ತು ಛಾಯಾ ಪತ್ನಿಯರು, ದೇವತೆ– ರುದ್ರ, ಸಿಂಹರಾಶಿಗೆ
ಅಧಿಪತಿ, ಸಿಂಹರಾಶಿಯಲ್ಲಿಯೇ ಮೂಲತ್ರಿಕೋಣತ್ವ, ಮೇಷರಾಶಿಯಲ್ಲಿ ಉಚ್ಚಸ್ಥಾನ, 10° ಯಲ್ಲಿ ಪರಮೋಚ್ಚ, ತುಲಾದಲ್ಲಿ
ನೀಚ, 10° ಯಲ್ಲಿ
ಪರಮನೀಚ, ದಶಾವರ್ಷಗಳು - ಆರುವರ್ಷ, ಪುರುಷಲಿಂಗ, ಆತ್ಮಕಾರಕ, ಪಿತೃಕಾರಕ, ಗೋಚಾರದಲ್ಲಿ 3,
6, 10, 11ರಲ್ಲಿಶುಭ, ಉಳಿದ ಸ್ಥಾನಗಳಲ್ಲಿ ಅಶುಭ, ತಾಮ್ರಧಾತು, ಕೆಂದಾವರೆಪುಷ್ಪ, ಸಾತ್ವಿಕ
ಗುಣವುಳ್ಳವನು, ಅಗ್ನಿತತ್ವ ಗ್ರಹ, ಚೌಕಾಕಾರ, ಅಗಲವಾದ
ಭುಜಗಳು,ದಷ್ಟಪುಸ್ತ
ಅಂಗ, ಬಿಳಿ
ಮಿಶ್ರಿತ ರಕ್ತಕೆಂಪು, ರುಚಿ – ಖಾರ ಪದಾರ್ಥ, ಸರ್ಕಾರಿ ಸೇವೆ, ಉನ್ನತವಾದ
ಅಧಿಕಾರಿ, ಸಾಮಾನ್ಯವಾದ
ಎತ್ತರ, ಹಠ, ಜ್ಞಾನವಂತ, ಗ್ರೀಷ್ಮ ಋತುವಿಗೆ ಅಧಿಪತಿ, ರಾಜಗ್ರಹ, ಸಾಹಸಿ, ಧಾರಾಳ, ಅಹಂಕಾರಿ, ಬಲಗಣ್ಣಿಗೆ ಕಾರಕ, ಕಿರುಪ್ರವಾಸ, ಉಷ್ಣದೇಹ, ಅಕ್ಕಸಾಲಿಗ, ಪಾಪಗ್ರಹ, ಸ್ಥಿರಸ್ವಭಾವ, ಪ್ರತಾಪ, ಧೀರ, ಶೂರ, ಧೈರ್ಯವಂತ, ಗಂಭೀರ, ಆಕಾಶದೆಡೆಗೆ ನೋಟ,
ದೇವಸ್ಥಾನ, ಬೆಟ್ಟಗುಡ್ಡಗಳಲ್ಲಿ ವಾಸ,
ಚತುರ, ಪಿತೃಕಾರಕ, ಶರೀರದ ಎಲುಬುಗಳಿಗೆ ಕಾರಕ, ಬಲವಾದ ಮೂಳೆಗಳು,
ತೀಕ್ಷ್ಣತೆ, ಉತ್ಸಾಹ ಕಾರಕ,
ದಪ್ಪವಸ್ತ್ರ, ಪಕ್ಷಿರೂಪ, ಅಗ್ನಿ ಅಧಿದೇವತೆ, ಹೋಮ ಕಾರ್ಯಗಳಲ್ಲಿ ಆಸಕ್ತಿ, ಹಗಲಿನಲ್ಲಿ ಬಲಉಳ್ಳವನು, ಕ್ಷತ್ರಿಯಜಾತಿ, ತಲೆಕೂದಲು
ಕಡಿಮೆ, ವೈದ್ಯಶಾಸ್ತ್ರ ಬಲ್ಲವನು,ಉಷ್ಣಶರೀರ, ವಿದ್ಯುತ್ಕೆಲಸಗಳಲ್ಲಿ
ಆಸಕ್ತಿ, ರವಿಯ ಜೊತೆಯಲ್ಲಿ ಬೇರೆ ಗ್ರಹಗಳಿದ್ದರೆ ಅಸ್ತಂಗತರಾಗುವರು, ಒಂದು ರಾಶಿಯಲ್ಲಿ 30 ದಿನಗಳು
ಸಂಚಾರ ಮಾಡುವನು, ತಾನಿರುವ ಸ್ಥಳದಿಂದ 7 ನೇ ಮನೆಗೆ ದೃಷ್ಟಿ, ಪ್ರತಿ ರಾಶಿಯನ್ನು ಪ್ರವೇಶಿಸುವ ಸಮಯಕ್ಕೆ ಸಂಕ್ರಮಣ ಎನ್ನುತ್ತಾರೆ, 4 ನೇಮನೆಯಲ್ಲಿ
ಬಲಹೀನ, ಹತ್ತನೇ ಮನೆಯಲ್ಲಿ ದಿಗ್ಬಲ ಪಡೆಯುತ್ತಾನೆ, ಕೃತಿಕಾ, ಉತ್ತರ, ಉತ್ತರಾಷಾಡ
ನಕ್ಷತ್ರಗಳ ಅಧಿಪತಿ.
“ಆರೋಗ್ಯಮ್ಪ್ರದಾದಾತುನೋದಿನಕರ “
ಎಂಬಂತೆ ಜಾತಕನ ಆರೋಗ್ಯ, ಬಲಗಣ್ಣು
,ಜಗತ್ಸಾಕ್ಷಿ, ಪಾರಮಾರ್ಥಿಕ ಗುಣ, ಈ ಗ್ರಹವು ಬಲಹೀನವಾದರೆ ತಲೆಶೂಲೆ ,ಪಿತ್ತಕೋಶದ ತೊಂದರೆ, ಹೃದಯಸಂಬಂಧಿ ತೊಂದರೆ, ಕಣ್ಣು ಮತ್ತು ಹಲ್ಲಿಗೆ ತೊಂದರೆಯನ್ನು ಕೊಡುತ್ತಾನೆ.
---: ಪುರಾಣದಲ್ಲಿ ಸೂರ್ಯ :---
“” ಗ್ರಹಣಾಮಾದಿರಾದಿತ್ಯೋ “”ಎಂಬಂತೆ ಈತ ಗ್ರಹಗಳಲ್ಲಿ ಮೊದಲಿಗ, ಆರೋಗ್ಯ, ಜ್ಞಾನವನ್ನು ದಯಪಾಲಿಸುವ ದೇವತೆ, ಎರಡೂ ಕೈಯಲ್ಲಿ ಕೆಂಪು ಕಮಲಗಳು, ಕೆಂಪು ರಥದಲ್ಲಿ ಆಸೀನ, ಸಾರಥಿ–ಅರುಣ, ರಥಕ್ಕೆಕಟ್ಟಿರುವ ಕುದುರೆಗಳು – 7, ಸೂಕ್ಷ್ಮ ಗುಂಗುರು ಕೂದಲುಗಳಿಂದ ಒಪ್ಪುವ ತಲೆ, ಆಕರ್ಷಕರೂಪ, ಚೇತೋಹಾರಿಯಾದ ಗಂಭೀರ ದ್ವನಿ, ಹೆಚ್ಚು ಎತ್ತರ ವಿಲ್ಲದ ನಿಲುವು, ಅನುಪಮ ಬುದ್ಧಿಸಾಮರ್ಥ್ಯ, ಕೆಂಪು ಬೆರೆತ ಸುಂದರ ಕಣ್ಣುಗಳು, ಧೈರ್ಯಶಾಲಿ, ಪ್ರಚಂಡ, ಪಿತ್ತಪ್ರಕೃತಿ, ಉನ್ನತ ವ್ಯಕ್ತಿತ್ವ ,ದೊಡ್ಡ ಕೈಗಳು, ಕೆಂಪು ಉಡುಗೆ.........
ಇದು ಶಾಸ್ರಕಾರರುರವಿಯನ್ನು ಗುರುತಿಸಿರುವ ಬಗೆ.
ಆದಿತ್ಯ, ಮಾರ್ತಾಂಡ, ಭಾನುರವಿ, ದಿವಾಕರ, ಪ್ರಭಾಕರ
ಇವು ಸೂರ್ಯನ
ಪ್ರಸಿದ್ಧ ಹೆಸರುಗಳು.
ಸೂರ್ಯನು
ಅದಿತಿಪಶ್ಯಪರ ಮಗ..... ಅದೊಂದು
ದಿನ ಕಶ್ಯಪರು
ಮನೆಯಲ್ಲಿ ಇರಲಿಲ್ಲ. ಅದಿತಿದೇವಿ
ತುಂಬುಗರ್ಭಿಣಿ, ದೇವರ
ಧ್ಯಾನದಲ್ಲಿದ್ದಾಗ..... ಭವತೀಮ್ಭಿಕ್ಷಾಂದೇಹಿ
ಎಂಬ ದ್ವನಿ...... ಬುಧನು
ಭಿಕ್ಷೆಗಾಗಿ ಬಂದಿದ್ದ, ಧ್ಯಾನದಲ್ಲಿ
ಮುಳುಗಿದ್ದ ಅದಿತಿ........
ನಿಧಾನವಾಗಿ ಭಿಕ್ಷೆ
ತಂದಿದ್ದಕ್ಕೆ ಕ್ರೋಧಗೊಂಡ
ಬುಧ ( ಮಾಣನಕ )
“ ಏನು
ಗರ್ಭಿಣಿ ಎಂಬ ಅಹಂಕಾರವೋ “ ಎಂದು ಗರ್ಭದಲ್ಲಿರುವ
ಶಿಶು ಸತ್ತುಹೋಗಲಿ ಎಂದು
ಶಾಪವನ್ನಿತ್ತ. ತತ್ತರಿಸಿ ಹೋದ
ಅದಿತಿ ಮೃತ
ಶಿಶುವನ್ನು ಹೆತ್ತಳು, ಶ್ರೀಹರಿಯ
ಮಹಿಮೆ ಮತ್ತು
ಕಶ್ಯಪರ ಪ್ರಭಾವದಿಂದ
ಆ ಶಿಶುವು
ಸತ್ತು ಬದುಕಿತು, ಆ
ಮಗುವೇ ಸೂರ್ಯ. ಆದಕಾರಣವೇ
ಮಾರ್ತಾಂಡ ಆದಿತ್ಯ
ಎಂಬುದು ಈತನ
ಮತ್ತೊಂದು ಹೆಸರು, ಅದಿತಿಯ
ಮಗನೆಂಬುವುದಕ್ಕೆ ಮಾತ್ರ
ಈ ಹೆಸರಲ್ಲ. ( ಆದಿತ್ಯ ) ದಿನವೂ
ಉದಾಯಿಸುತ್ತಾ , ಜೀವಿಗಳ 24 ಗಂಟೆಗಳ
ಆಯುಷ್ಯವನ್ನು ಕಿತ್ತು
ಸಾಗುವುದರಿಂದ ಈತನಿಗೆ
ಈ ಹೆಸರು ( ಆಯುರ್ದಾಯ
ಯಾತೀತಿ ಆದಿತ್ಯಹ ).
ಸಂಜ್ಞಾ ಮತ್ತು
ಛಾಯಾ ಸೂರ್ಯನ
ಹೆಂಡತಿಯರು, ಸಂಜ್ಞೆಯಲ್ಲಿ
ಯಮ, ಯಮುನೆ
ಮತ್ತು ಮನು
ಹುಟ್ಟಿದರು, ಛಾಯಾದೇವಿಯಲ್ಲಿ
ಸಾವರ್ಣಿ ಮತ್ತು
ಶನೈಶ್ಚರ ಹುಟ್ಟಿದರು. ಈ
ಮನ್ವಂತರದ ಅಧಿಪತಿಯಾದ
ವೈವಸ್ವತಮನು ಸೂರ್ಯನ
ಮಗ. ಗ್ರಹಗಳಲ್ಲಿ ಭಯಂಕರ
ಎನಿಸುವ ಶನಿಯೂ
ಕೂಡ ಸೂರ್ಯನ
ಪುತ್ರ. ಕರ್ಣ
ಮತ್ತು ಸುಗ್ರೀವರು
ಸೂರ್ಯಅಂಶ ಸಂಭೂತರು.
ಸೂರ್ಯ
ಗ್ರಹವನ್ನು ಸ್ತುತಿಸುವ
ಸ್ತೋತ್ರ ಹೀಗಿದೆ......
ಜಪಾಕುಸುಮಸಂಕಾಶಂ
ಕಾಶ್ಯಪೆಯೋಮಹಾದ್ಯುತಿಃ
ತಮೋರಿ ಸರ್ವಪಾಪಘ್ನಮ್ಪ್ರಣತೊಸ್ಮಿದಿವಾಕರಂ
ಅರ್ಥ :- ಕೆಂಪು ದಾಸವಾಳದ
ಪುಷ್ಪದ ಕಾಂತಿಯನ್ನು
ಹೊಂದಿರುವ ಕಶ್ಯಪನ
ಪುತ್ರನಾದ ಮಹಾತೇಜಸ್ವಿ
ಕತ್ತಲ ಕಡುವೈರಿ
ಸರ್ವ ಪಾಪನಾಶಕನಾದ
ದಿವಾಕರನಿಗೆ ನಮಿಸುವೆ.
ಈ
ಶ್ಲೋಕದ ಪ್ರತಿನಿತ್ಯದ
ಪಠಣೆಯಿಂದ ರವಿಗ್ರಹ
ದೋಷವನ್ನು ಪರಿಹರಿಸಿ ಕೊಳ್ಳಬಹುದು.
ಸೂರ್ಯ
ಗಾಯತ್ರಿ ಮಂತ್ರ :--
ಓಂ
ಭಾಸ್ಕರಾಯ ವಿದ್ಮಹೇ
ಮಹಾದ್ಯುತಿಕರಾಯ ಧೀಮಹಿ
ತನ್ನೋ
ಆದಿತ್ಯ ಪ್ರಚೋದಯಾತ್
ಸೂರ್ಯ
ಪೀಡಾ ಪರಿಹಾರ ಸ್ತೋತ್ರ :-
ಗ್ರಹಣಾಮಾದಿರಾದಿತ್ಯೋ
ಲೋಕರಕ್ಷಣ ಕಾರಕಃ
ವಿಷಮಸ್ಥಾನ ಸಂಭೂತಾಮ್ಪೀಡಾಂ ಹರತುಮೇ
ರವಿಹಿ
ರವಿಯ ಏಕಾಕ್ಷರಿ ಬೀಜಮಂತ್ರ :--
ಓಂ
ಘೃಣಿಃ ಸೂರ್ಯಾಯನಮಃ ( ಜಪಸಂಖ್ಯೆ 7000)
ಅನುಕೂಲ
ಮಂತ್ರ :--
ಓಂ ವ್ಹಿಮ್ಶ್ರೀಮ್ಸೌಹು
(Om vheem shreem souhu
) ಜಪಸಂಖ್ಯೆ ಒಂದೂಕಾಲು ಲಕ್ಷ
ಸೂರ್ಯ ಕ್ಷೇತ್ರವಾದ ಸಿಂಹ ಲಗ್ನದವರು ಪೂಜಿಸಿ ಧರಿಸಬೇಕಾದ ಯಂತ್ರ
ಪಂಚದಶಾ ಯಂತ್ರ
6
|
7
|
2
|
1
|
5
|
9
|
8
|
3
|
4
|
ಬೀಸಾ ಯಂತ್ರ
6
|
1
|
8
|
7
|
5
|
3
|
2
|
9
|
4
|
ಜಪಿಸ
ಬೇಕಾದ ಮಂತ್ರ
ಓಂ ಹ್ರೀಂ ಐಮ್ಸೌಹು
ಸೂರ್ಯಗ್ರಹ
ಸಂಭಂದಿ ದಾನಗಳು:--
ಸೂರ್ಯನ
ಬಣ್ಣ ಕೆಂಪು
ಹಾಗಾಗಿ, ಕೆಂಪಾದ
ತಾಮ್ರ ಅವನ
ಲೋಹ, ಕೆಂಪಾದ
ಮಾಣಿಕ್ಯವೇ ಅವನ
ರತ್ನ, ರವಿಯ
ಪ್ರೀತ್ಯರ್ಥವಾಗಿ ಕೆಂಪುವಸ್ತ್ರವನ್ನು, ಕೆಂಪು
ಗೋಧಿಯನ್ನು ದಾನಮಾಡಬೇಕು.
ರವಿ
ಲತ್ತಾ ಕಾಲದಲ್ಲಿ : ಸೂರ್ಯ ಪ್ರಾರ್ಥನೆ, ಸುವರ್ಣ
ಪದ್ಮ ದಾನ ಕೆಂಪು ಹಸುದಾನ ಮಾಡಬೇಕು.
ಸೂರ್ಯನು
ನಮಸ್ಕಾರ ಪ್ರಿಯನು
ಆಗಿರುವುದರಿಂದ ಬೆಳಿಗ್ಗೆ
ಸೂರ್ಯೋದಯದ ಸಂದರ್ಭದಲ್ಲಿ
ಆದಿತ್ಯಹೃದಯ ಪಾರಾಯಣಮಾಡಿ
ಸೂ ರ್ಯನಮಸ್ಕಾರ
ಮಾಡುವುದರೊಂದಿಗೆ ಈತನ
ಕೃಪೆಗೆ ಪಾತ್ರರಾಗಬಹುದು. ಸೂರ್ಯಾ
ಲೋಕದಲ್ಲಿ ನೀರು ಇಲ್ಲವಾದ್ದರಿಂದ
ಗಾಯತ್ರಿದೇವಿ ಪ್ರಾರ್ಥನೆಯಿಂದ
ಅರ್ಘ್ಯ ನೀಡುವುದರಿಂದ ಸೂರ್ಯನಿಗೆ ಪ್ರಿಯವಾಗುತ್ತದೆ.
--: ವೈಜ್ಞಾನಿಕವಾಗಿ
ಸೂರ್ಯ:--
Picture source: Internet/ social media
ಸೂರ್ಯನು
ಸೌರಮಂಡಲದ ಮಧ್ಯದಲ್ಲಿರುವ
ಒಂದು ನಕ್ಷತ್ರ,
ಭೂಮಿ ಮತ್ತು ಬೇರೆ ಕಾಯಗಳು ಸೂರ್ಯನನ್ನು ಪರಿಭ್ರಮಿಸುತ್ತದೆ. ಸೂರ್ಯನೊಂದೆ ಸೌರಮಂಡಲದ 99% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಬೆಳಕು ದ್ಯುತಿಸಂಶ್ಲೇಷನೆಯ ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು ಭೂಮಿಯ ಹವಾಮಾನದ ಮೇಲೂ ಪ್ರಭಾವ ಬೀರುತ್ತದೆ.
ಭೂಮಿ ಮತ್ತು ಬೇರೆ ಕಾಯಗಳು ಸೂರ್ಯನನ್ನು ಪರಿಭ್ರಮಿಸುತ್ತದೆ. ಸೂರ್ಯನೊಂದೆ ಸೌರಮಂಡಲದ 99% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಬೆಳಕು ದ್ಯುತಿಸಂಶ್ಲೇಷನೆಯ ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು ಭೂಮಿಯ ಹವಾಮಾನದ ಮೇಲೂ ಪ್ರಭಾವ ಬೀರುತ್ತದೆ.
ಕ್ಷೀರಪಥ ತಾರಾಗಣ ಕೇಂದ್ರದಿಂದ ಸುಮಾರು 25,000 –
28000 ಜ್ಯೋತಿರವರ್ಷಗಳ ದೂರದಲ್ಲಿ ಸೂರ್ಯವು ಪರಿಬ್ರಮಿಸುತ್ತದೆ. ಇದರ ಒಂದು ಪರಿಭ್ರಮಣಕ್ಕೆ ಸುಮಾರು 22525 ಕೋಟಿ
ವರ್ಷಗಳು
ಬೇಕಾಗುತ್ತದೆ. ಇದರ 217ಕಿಮೀ/ ಕ್ಷಣದ
ಪರಿಭ್ರಮಣ
ವೇಗವು
ಪ್ರತಿ 1,400 ವರ್ಷಗಳಿಗೊಂದು
ಜ್ಯೋತೀರ್ವರ್ಷ
ಮತ್ತು
ಪ್ರತಿ 8 ದಿನಗಳಿಗೊಮ್ಮೆ ಒಂದು ಖಗೋಲ ಮಾನದ ಪ್ರಮಾಣಗಳಿಗೆ ಸಮಾನವಾಗಿದೆ. ಸೂರ್ಯನು ಮೂರನೇ ಪೀಳಿಗೆಯ ಒಂದು ನಕ್ಷತ್ರ, ಹತ್ತಿರದಲ್ಲುಂಟಾದ ತಾರಾಸ್ಪೋಟದಿಂದ (supernova) ಹೊರಬಂದ
ಆಘಾತ
ತರಂಗಗಳು
ಸೂರ್ಯನ
ಉದ್ಭವಕ್ಕೆ
ಚಾಲನೆ ಕೊಟ್ಟಿದ್ದಿರಬಹುದು. ಸೌರಮಂಡಲದಲ್ಲಿ
ಹೇರಳವಾಗಿ
ಕಂಡುಬರುವ
ಚಿನ್ನ , ಯುರೆನಿಯಂ
ಗಳಂತ ಭಾರವಸ್ತುಗಳ
ಅಸ್ತಿತ್ವವು
ಈ
ರೀತಿಯ
ಉಡ್ಭವವನ್ನು
ಸೂಚಿಸುತ್ತದೆ. ಈ ಮೂಲವಸ್ತುಗಳು
ತಾರಾಸ್ಪೋಟದ
ಸಮಯದಲ್ಲಿ
ಉಂಟಾದ
ಪರಮಾಣು ಕ್ರಿಯೆಯಿಂದ ಅಥವಾ ಒಂದು ಬೃಹತ್ ಎರಡನೇ ಪೀಳಿಗೆಯ
ನಕ್ಷತ್ರದಲ್ಲಿ ನ್ಯೂಟ್ರಾ ನ್ಹೀರುವಿಕೆಯಿಂದ
ಉಂಟಾದ
ರೂಪ
ಬದಲಾವಣೆಯಿಂದ
ಸೃಷ್ಟಿಯಾಗಿದ್ದಿರಬಹುದು.
ಭೂಮಿಯ ಮೇಲ್ಮೈಗೆ ಸೂರ್ಯನ ಬೆಳಕೇ ಶಕ್ತಿಯ ಮೂಲ, ಸೂರ್ಯಪ್ರಕಾಶವು ಹಲವು ಆಸಕ್ತಿಕರ ಜೈವಿಕ ಗುಣಗಳನ್ನು ಹೊಂದಿದೆ, ಸೂರ್ಯನ ಅತಿನೇರಳೆ ಕಿರಣಗಳು ನಂಜು ನಿವಾರಕಗುಣಗಳನ್ನು ಹೊಂದಿದೆ ಇದನ್ನು ಕ್ರಿಮಿ ನಿವಾರಣೆಗೆ
ಬಳಸಬಹುದು, ಇದು
ಚರ್ಮದ
ಮೇಲೆ
ಸುಡುಗಾಯಗಳನ್ನು
ಮಾಡುವುದಲ್ಲದೆ
ವಿಟಮಿನ್ D ಉತ್ಪಾದನೆ ಯಂತಹ ಕೆಲವು ವೈದ್ಯಕೀಯ ಗುಣಗಳನ್ನು ಹೊಂದಿದೆ.
--: ವೀಕ್ಷಣಾ ಮಾಹಿತಿ :--
ಭೂಮಿಯಿಂದ 149.6×10^6ಕಿಮೀ
ಸರಾಸರಿದೂರ ( 92.95×10^6 ಮೈಲಿ)
ಬೆಳಕಿನವೇಗಡಲ್ಲಿ 8.31 ನಿಮಿಷಗಳು
ಗೋಚರ ಪ್ರಮಾಣ -26.8m
Absolute magnitude.
4.8m
ವರ್ಣಪಟಲ ವಿಂಗಡಣೆ G2V
ಕಕ್ಷೆಯ
ಗುಣ ಲಕ್ಷಣಗಳು
ಕ್ಷೀರಪಥದ
ಕೇಂದ್ರದಿಂದ ಸರಾಸರಿ ದೂರ–26,ooo -28ooo ಜ್ಯೋತಿರವರ್ಷಗಳು
ತಾರಾಗಣ
ಕಾಲ - 2. 25 -2.50×10^8 a
ವೇಗ. 217ಕಿ. ಮೀ/ ಕ್ಷಣ ( ಕ್ಷೀರಪಥದ
ಕೇಂದ್ರದಿಂದ ಪರಿಭ್ರಮನೆ )
--: ಬೌತಿಕ
ಗುಣ ಲಕ್ಷಣಗಳು :--
ಸರಾಸರಿ
ವ್ಯಾಸ 1.392×10^6 ಕಿಮೀ
( ಭೂಮಿಯ 109 ಪಟ್ಟು)
ಪರಿಧಿ.
4.373×10^6 ಕಿಮೀ
ಹ್ರಸ್ವಾಕ್ಷತೆ.
9×10^6
ಮೇಲ್ಮೈ ವಿಸ್ತೀರ್ಣ
6.09×10^18 ಮೀ ( ಬೂಮಿಯ 11,900 ಪಟ್ಟು)
ಗಾತ್ರ
1.41 ×10^27 ಮೀ ( ಭೂಮಿಯ 1,300,000 ಪಟ್ಟು)
ದ್ರವ್ಯರಾಶಿ 1.988435×10^30 ಕಿ . ಗ್ರಾಮ್
(ಭೂಮಿಯ 332.946
ಪಟ್ಟು)
ಸಾಂದ್ರತೆ.
1.408 ಕಿ ಗ್ರಾಮ್/ ಮೀ
ಮೇಲ್ಮೈ ಗುರುತ್ವ. 273.95
ಮೀಕ್ಷ^3 (27.9 ಜೀ)
ಮೇಲ್ಮೈನಿಂಸ ಮುಕ್ತಿವೇಗ
617.54 ಕಿ.ಮೀ/ಕ್ಷ (ಭೂಮಿಯ 55 ಪಟ್ಟು)
ಮೇಲ್ಮೈ
ತಾಪಮಾನ 5785 ಕೆ
ಪ್ರಭಾವಲಯದ
ತಾಪಮಾನ 0.5 ಕೋಟಿ
ಕೆ
ಒಳ
ತಾಪಮಾನ ~1.36
ಕೋಟಿ ಕೆ
--: ಪರಿಭ್ರಮನೆಯ ಗುಣಲಕ್ಷಣಗಳು
:--
Obliquity 7.25° (
to the ecliptic)
67.23 (to
the galactic plane)
ಉತ್ತರದ್ರುವದ ವಿಷುದಂಶ[1] 286.13
19 ಘಂ 4 ನಿ 30 ಕ್ಷ
ಉತ್ತರದ್ರುವದ ಘಂಟಾ ವೃತ್ತಾಂಶ. +63.87
(6352’ ಉತ್ತರ)
ಸಮಭಾಜಕದಲ್ಲಿ ಅಕ್ಷೀಯ ಪರಿಭ್ರಮಣ ಕಾಲ
25.38 ದಿನಗಳು (25 ದಿ 9 ಘಂ 13 ಕ್ಷ )
ಸಮಭಾಜಕದಲ್ಲಿ ಪರಿಭ್ರಮನದ ವೇಗ 7174ಕಿಮೀ / ಪ್ರತಿ ಘಂ
ದ್ಯುತಿಗೋಳದ
ರಚನೆ (ದ್ರವ್ಯರಾಶಿಯ
ದೃಷ್ಟಿಯಿಂದ)
ಜಲಜನಕ.
73.46%
ಹೀಲಿಯಮ್
24.85%
ಆಮ್ಲಜನಕ.
0.77%
ಇಂಗಾಲ
0.96%
ಕಬ್ಬಿಣ. 0.16%
Neon.
0.02%
ಸಾರಜನಕ.
9.09 %
Silicon.
0.07%
ಮ್ಯಾಗ್ನೆಸಿಯಂ. 0.05%
Sulphar.
0.02%
✍ಡಾ: ಶೈಲಜಾ ರಮೇಶ್....
Very useful information madam 👌👌👍💐
ReplyDeleteThank you very much sir
DeleteMadam shatabhisha nakshatarada info yelli sigutte
DeleteI'll get you soon
DeleteVery useful info
ReplyDeleteThank you sir
Deleteನಮಸ್ತೆ, ಲತ್ತಾ ಕಾಲ ಎಂದರೇನು? ದಯಮಾಡಿ ತಳಿಸಿ ಮಾ
ReplyDelete