: ಹರಿಃ ಓಂ
ಶ್ರೀ ಮಹಗಣಪ ತಯೇ ನಮಃ
ಶ್ರೀ ಗುರುಭ್ಯೋನಮಃ
ಶ್ರೀ ಮಹಗಣಪ ತಯೇ ನಮಃ
ಶ್ರೀ ಗುರುಭ್ಯೋನಮಃ
ರಾಶಿಗಳ ಗುಣಧರ್ಮಗಳು
ಮುಂದುವರೆದ ಭಾಗ.......
ಜಾತಕದ ಮೇಲೆ ರಾಶಿಗಳ ಗುಣಧರ್ಮಗಳ ಪ್ರಭಾವ
ರಾಶಿಗಳ ತತ್ವಗಳು :--
ಅಗ್ನಿತತ್ವ :-- 1 , 5, 9, ಮೇಷ, ಸಿಂಹ, ಧನಸ್ಸು
ಅಗ್ನಿತತ್ವದವರು ಸಹಜವಾಗಿ ಕ್ರಿಯಾಶೀಲರಾಗಿರುತ್ತಾರೆ, ಧೈರ್ಯ ಸ್ಥೈರ್ಯ ವಂತರಾಗಿರುತ್ತಾರೆ. ಉತ್ಸಾಹ, ಹುರುಪು , ನಾಯಕತ್ವದ ಗುಣವಿರುತ್ತದೆ. ಸಂಘರ್ಷಗಳು, ವಿವಾದ, ಕಲಹ, ಅತಿಯಾದ ಕೋಪ, ಮಿತಿ ಮೀರಿದ ಕಾಮ, ವಿಪರೀತ ಜ್ವರದಿಂದ ನರಳುವುದು, infection ಆಗ್ತಾಯಿರುತ್ತೆ, ಸದಾ ಹೊಸತನ್ನು ಬಯಸುವವರು, ಅಗ್ನಿಗೆ ಸಂಬಂಧಿಸಿದ ಕೆಲಸಗಳಲ್ಲಿ, ಮದ್ದು, ಗುಂಡು ತಯಾರಿಕಾ ಘಟಕ... ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ತಾಂತ್ರಿಕ , ಇಂಜಿನಿಯರ್ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಈ ತತ್ವದಲ್ಲಿ ಸ್ಥಿತರಾಗಿರುವ ಗ್ರಹಗಳು ತಮ್ಮ ದಶಾಕಾಲದಲ್ಲಿ ಈ ಫಲಗಳನ್ನು ನೀಡಲು ಶಕ್ತರಾಗಿರುತ್ತಾರೆ. ಈ ತತ್ವಕ್ಕೆ ಸೇರಿದ ಗ್ರಹಗಳಾದ ಕುಜ, ರವಿ ಉತ್ತಮ ಸ್ಥಿತಿಯಲ್ಲಿರಬೇಕಾಗುತ್ತದೆ. ಇದಾರಿಂದ ಜಾತಕರ ಬುದ್ಧಿವಂತಿಕೆ, ಜ್ಞಾನ ಎಷ್ಟರಮಟ್ಟಿಗೆ ಹಿಡಿದ ಕೆಲಸವನ್ನು ಸಾಧಿಸಲು ದೇಹ ಮತ್ತು ಮನಸ್ಸು ಸಹಕರಿಸುತ್ತದೆಂಬುದನ್ನು ತಿಳಿಸುತ್ತದೆ.

ಪೃಥ್ವಿ/ ಭೂತತ್ವ :-- 2, 6, 10, ವೃಷಭ, ಕನ್ಯಾ, ಮಕರ.
ವಿಷಯ ಸುಖಗಳನ್ನು ಅನುಭವಿಸುವುದಕ್ಕಾಗಿಯೇ ಇರುವುದು ಈ ಭೂ ತತ್ವ......
ಹಾಗಾಗಿ, ಪ್ರಾಪಂಚಿಕ ವಿಷಯಗಳಿಗೆ ಭೂತತ್ವ ಕೇಂದ್ರವಾಗಿದೆ, ಅಂದರೆ ಅಧಿಕಾರ, ಅಂತಸ್ತು, ಗೌರವ ಪಡೆಯುವುದು, ಮಿತ್ರರಲ್ಲಿ ಬೇಗ ಒಂದಾಗದಿರುವುದು, ಸಂಶಯಾ ಸ್ಪದ ಸ್ವಭಾವ, ವಿಮರ್ಶಾತ್ಮಕ ದೃಷ್ಟಿಯಿಂದ ಆಲೋಚಿಸಿ ನಿರ್ಣಯಿಸುವುದೇ ಭೂತತ್ವದ ವಿಶೇಷ, ಬಡಪಟ್ಟಿಗೆ ಸೋಲನ್ನೊಪ್ಪದ ಸ್ವಭಾವ, ಶ್ರಮಪಡದೇ ಜೀವನ ನಡೆಸುವವರು, ಯಾವುದನ್ನು ಬೇಡದೆನ್ನಡಿರುವ ಸ್ವಭಾವ, ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವವರು, ಹೇಗಾದರೂ ಸುಖಪಡಬೇಕೆಂಬ ಛಲ, ಮಾನವ ಜನ್ಮ ಬಂದಿರುವುದೇ ಪೂರ್ವಪುಣ್ಯ ವಿಶೇಷವೆಂದು ತಿಳಿದು ಎಲ್ಲಾ ಸುಖವನ್ನು ಅನುಭವಿಸಲು ಹಾತೊರೆಯುತ್ತಾ ರೆ.

ವಾಯುತತ್ವ :-- 3, 7, 11, ಮಿಥುನ, ತುಲಾ, ಕುಂಭ
ಕಲ್ಪನಾ ಸಾಮ್ರಾಜ್ಯದಲ್ಲಿ ವಿಹರಿಸಿ ಕನಸಿನ ಗೋಪುರವನ್ನೇ ಕಟ್ಟಿಕೊಂಡಿರುತ್ತಾರೆ. ದೈಹಿಕ ಬಲಕ್ಕಿಂತ ಮನೋಬಲವೇ ಅಧಿಕ ವಾಗಿರುತ್ತದೆ, ಎಲ್ಲರಲ್ಲೂ ಉತ್ತಮವಾದ ಸಾಮರಸ್ಯವನ್ನು ಹೊಂದಿರುತ್ತಾರೆ. ಮಾನವೀಯ ಗುಣಗಳು (ದಯೆ, ಸದ್ವರ್ತನೆ, ಸುಸಂಸ್ಕೃತಿ ) , ಉತ್ತಮವಾದ ಕಲಾಪ್ರಜ್ಞೆ, ಉತ್ತಮವಾದ ಸಂಸ್ಕಾರ, ಸಾಹಿತ್ಯ ಸಂಗೀತಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದವರಾಗಿರುತ್ತಾರೆ, ಸ್ವತಃ ಕಲಾವಿದರಾಗಿರುತ್ತಾರೆ. ತಮ್ಮ ಅನಿಸಿಕೆಗಳನ್ನು ಯಾರ ಮೇಲೂ ಹೇರುವುದಿಲ್ಲ, ಉತ್ತಮವಾದ ಸಲಹೆಗಾರರು ಹಾಗೂ ಸೇವಾನಿರತ ರು, ಆಲೋಚಿಸಿ ಮಾತನಾಡುವವರು, ಇದರಿಂದಾಗಿ ವರದಿಗಾರರು, ವಿಜ್ಞಾನಿಗಳು, ವಿಷಯ ನಿರೂಪಕರು, ಕವಿಗಳು, ಲೇಖಕರು, ವಕೀಲರು, ನ್ಯಾಯವಾದಿಗಳು, ಪ್ರಾಧ್ಯಾಪಕರು, ಉಪನ್ಯಾಸಕರು ಆಗುವ ಸಾಧ್ಯತೆಗಳು ಜಾಸ್ತಿ ಇರುತ್ತದೆ. ಮಾನಸಿಕ ಸ್ಥಿತಿಯು ಉತ್ತಮವಾಗಿರುವುದರಿಂದ, ಉತ್ತಮ ಸಮಾಜವನ್ನು ಸೃಷ್ಟಿಮಾಡಬಲ್ಲರು, ಮನಸ್ಸು ಮುಟ್ಟು ವಂತೆ ಮಾತನಾಡುವುದರಿಂದ ಮಾನಸಿಕ ತಜ್ಞರಾಗಬಹುದು, ಆದ್ದರಿಂದ ವಾಯುತತ್ವದಲ್ಲಿ ಹೆಚ್ಚು ಗ್ರಹಗಳಿದ್ದರೆ ತಮ್ಮ ಬುದ್ಧಿ ಸಾಮರ್ಥ್ಯದಿಂದ ಕೀರ್ತಿ, ಅಂತಸ್ತು, ಗೌರವ, ಅಧಿಕಾರ, ಧನ ಮುಂತಾದವುಗಳನ್ನು ಪಡೆಯುವುದರಲ್ಲಿ ಯಶಸ್ವಿಗಳಾಗುತ್ತಾರೆ.
ಜಲತತ್ವ :-- 4, 8, 12, ಕಟಕ ವೃಶ್ಚಿಕ, ಮೀನ
ಜಲದ ಗುಣವು ಏರಿಳಿತಗಳನ್ನು ಸೂಚಿಸುವುದಾದ್ದರಿಂದ ಜೀವನವು ಸಹ ಏರಿಳಿತಗಳಿಂದ ಕೂಡಿರುತ್ತದೆ ಭಾವನಾ ಜೀವಿಗಳಾಗಿರುತ್ತಾರೆ, ಯಾವುದೇ ವಿಚಾರವನ್ನಾದರು ಬಹಳ ಬೇಗ ಗ್ರಹಿಸಿಕೊಳ್ಳುತ್ತಾರೆ, ಹಾಗೆಯ್ಯೇ ಎಲ್ಲರಲ್ಲೂ ಬಹುಬೇಗ ಬೆರೆಯುತ್ತಾರೆ, ಜನರೊಂದಿಗೆ ಬೆರೆತರೂ ಸಹ ಅವರವರ ಆಂತರ್ಯವನ್ನು ತಿಳಿದು ಅದಕ್ಕೆ ತಕ್ಕನಾಗಿ ವರ್ತಿಸುತ್ತಾರೆ. ಯಾರಲ್ಲೂ ದ್ವೇಷ ಕಟ್ಟಿಕೊಳ್ಳಲು ಇಷ್ಟಪಡುವುದಿಲ್ಲ, ನಿಗೂಢ ವಿಷಯವನ್ನು ತಿಳಿದುಕೊಳ್ಳಲು ಆಸಕ್ತಿ, ಸ್ವಲ್ಪ ಹಿಂಜರಿಕೆ ಸ್ವಭಾವ, ನಾಚಿಕೆ ಸ್ವಭಾವ, ಜಲತತ್ವವಾದ್ದರಿಂದ ಜಲಸಂಭಂದಿ ರೋಗಗಳಿಂದ ನರಳುವ ದೇಹಪ್ರಕೃತಿ, ಶರೀರದಲ್ಲಿ ಹುಣ್ಣುಗಳು ಬಹುಬೇಗ ಕಾಣಿಸಿಕೊಳ್ಳುತ್ತವೆ, ಗಂಟಲು ಬೇನೆ ಗಳಗಂಡ, ಹೊಟ್ಟೆಗೆ ಸಂಬಂದಿಸಿದ ರೋಗಗಳು, ನಿಶ್ಯಕ್ತಿ, ಶ್ವಾಸಕೋಶದ ತೊಂದರೆ, ಗ್ಯಾಸ್ಟ್ರಿಕ್ ಸಮಸ್ಯೆ. ಮುಂತಾದವುಗಳು ತಲೆದೋರುತ್ತದೆ. ಜಲಸಂಬಂಧಿ. ವ್ಯಾಪಾರ ವ್ಯವಹಾರ. ಹಾಗೂ ನೌಕಾಪಡೆ, ನೌಕಯಾನದಲ್ಲಿ ಕಾರ್ಯ ನಿರ್ವಹಿಸಲು ಇಷ್ಟಪಡುತ್ತಾರೆ, ಮಾನಸಿಕವಾಗಿ ಪ್ರಬಲವಾಗಿದ್ದು, ಭಾವನಾ ಜೀವಿಗಳಾದ್ದರಿಂದ ನಾಟಕ, ಚಿತ್ರರಂಗದಲ್ಲಿ ಆಸಕ್ತರಾಗಿದ್ದು, ಸ್ವತಃ ನಾಟಕಕಾರರು, ನಟರು, ಚಿತ್ರಕಲಾವಿದರು, ಚಿತ್ರನಟ ರು ನೃತ್ಯ, ಸಂಗೀತ ನಿರೂಪಕರು ನಿರ್ದೇಶಕರು ಆಗಬಹುದು, ಜಲತತ್ವದಲ್ಲಿ ಸ್ಥಿತರಾಗಿರುವ ಗ್ರಹಗಳಿಗೆ ತಕ್ಕಂತೆ ಆಯಾ ದಶಾಕಾಲದಲ್ಲಿ ಫಲಗಳು ಅನುಭವಕ್ಕೆ ಬರುತ್ತದೆ, ಜಲಗ್ರಹಗಳಾದ ಶುಕ್ರ ಹಾಗೂ ಚಂದ್ರರ ಸ್ಥಿತಿಯನ್ನೂ ಪ್ರಧಾನವಾಗಿ ನೋಡಬೇಕು.
ಜಲತತ್ವಕ್ಕೆ ಸಂಬಂಧಿಸಿದಂತೆ ಅತಿ ಮುಖ್ಯವಾದ ವಿಚಾರವನ್ನು ಗಮನಿಸಬೇಕಾಗುತ್ತದೆ, ಬೇರಾವ ತತ್ವವೂ ಸಹ ಒಂದರೊಡನೊಂದು ಸಂಬಂಧವನ್ನು ಹೊಂದಿರುವುದಿಲ್ಲ, ಆದರೆ ಜಲತತ್ವ ದೊಂದಿಗೆ ಇತರ ತತ್ವದ ರಾಶಿಗಳು ಸಂಭಂದ ಹೊಂದಿರುವುದನ್ನು ಗಮನಿಸಬಹುದು.
ಕಟಕ, ವೃಶ್ಚಿಕ, ಮಕರ, ಮೀನಗಳು ಪೂರ್ಣ ಜಲತತ್ವ ರಾಶಿಯಾಗಿರುವುದು ತಿಳಿದ ವಿಷಯವೇ, ಉಳಿದ ರಾಶಿಗಳಾದ ಮೇಷ ೧/೨, ವೃಷಭ 1/2, ತುಲಾ 1/4, ಧನಸ್ಸು 1/2, ಕುಂಬ 1/2 ಭಾಗಗಳಷ್ಟು ಜಲತತ್ವವನ್ನು ಹೊಂದಿದ್ದು, ಈ ವಿಚಾರವು ಮೇಧಿನಿ ಜ್ಯೋತಿಷ್ಯದ ಫಲ ನಿರೂಪಣೆಯಲ್ಲಿ ವಿಶೇಷವಾದ ಪಾತ್ರವನ್ನು ವಹಿಸುತ್ತದೆ.

ದಿಕ್ಕುಗಳು:--
ಮನೆಗೆ ಬಾಗಿಲಿಡಲು, ಪ್ರಯಾಣ ಮಾಡಲು, ಗಂಡು/ ಹೆಣ್ಣುಗಳು, ಕಳುವಿನ ಪ್ರಶ್ನೆ, ಮುಂತಾದವುಗಳಲ್ಲಿ ಹೆಚ್ಚಿನ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ವಿಶೇಷವಾಗಿ ಯಾವಾದಿಕ್ಕು ಹೆಚ್ಚಿನ ಗ್ರಹಗಳನ್ನು ಹೊಂದಿದ್ದು, ಶುಭ ಗ್ರಹಗಳ ಸ್ಥಿತ ದೃಷ್ಟಿಯನ್ನು ಹೊಂದಿದ್ದು ಬಲಯುತವಾಗಿ ಇರುತ್ತದೆಯೋ, ಆ ರಾಶಿಯು 9-(ಭಾಗ್ಯ), 10-( ಕರ್ಮ), 11- ( ಲಾಭ) ಆದರೆ ಆ ದಿಕ್ಕಿನಿಂದ ಭಾಗ್ಯೋದಯವನ್ನು ಹೊಂದುತ್ತಾರೆ, ಇದಕ್ಕೆ ವಿರುದ್ಧವಾದರೆ ಆ ದಿಕ್ಕಿನಿಂದ ಹಾನಿ ಉಂಟಾಗುತ್ತದೆ.
ಯುಗಗಳು :-- ಧನಾರ್ಜನೆಯ ಮೇಲೆ ಯುಗಗಳ ಪ್ರಭಾವಗಳು...
ಕೃತಯುಗ :-- 1, 5, 9 ಮೇಷ, ಸಿಂಹ, ಧನಸ್ಸು
ದೈವಬಲದಿಂದ ಧನಾರ್ಜನೆ
ದೈವಬಲದಿಂದ ಧನಾರ್ಜನೆ
ತ್ರೇತಾಯುಗ :-- 2, 6, 10 ವೇಷಭ, ಕನ್ಯಾ, ಮಕರ
ಸಂಚಾರದಿಂದ ಧನ ಸಂಗ್ರಹ,
ಸಂಚಾರದಿಂದ ಧನ ಸಂಗ್ರಹ,
ದ್ವಾಪರಯುಗ :-- 3, 7, 11 ಮಿಥುನ, ತುಲಾ, ಕುಂಬ
ವ್ಯಾಪಾರ ವ್ಯವಹಾರದಿಂದ ಧನಾರ್ಜನೆ
ವ್ಯಾಪಾರ ವ್ಯವಹಾರದಿಂದ ಧನಾರ್ಜನೆ
ಕಲಿಯುಗ :-- 4, 8, 12 ಕಟಕ, ವೃಶ್ಚಿಕ, ಮೀನಾ
ಬಹುಕಷ್ಟದಿಂದ ದುಡಿದೇ ಸಂಪಾದಿ ಸಬೇಕು.
ಬಹುಕಷ್ಟದಿಂದ ದುಡಿದೇ ಸಂಪಾದಿ ಸಬೇಕು.
ಚಿಹ್ನೆಯ ಉದಯ :-
ಶಿರೋದಯ :-- 3, 6, 7, 8, 11
ಮಿಥುನ, ಕನ್ಯಾ, ತುಲಾ, ವೃಶ್ಚಿಕ, ಕುಂಭ, ದಶಾಕಾಲದ ಪ್ರಾರಂಭದಲ್ಲೂ ( 0°-10°)........
ಮಿಥುನ, ಕನ್ಯಾ, ತುಲಾ, ವೃಶ್ಚಿಕ, ಕುಂಭ, ದಶಾಕಾಲದ ಪ್ರಾರಂಭದಲ್ಲೂ ( 0°-10°)........
ಪೃಷ್ಟೋದಯ :-- 1, 2, 4, 5, 9, 10, ಮೇಷ, ವೃಷಭ, ಕಟಕ, ಸಿಂಹ, ಧನಸ್ಸು, ಮಕರ, ದಶೆಯ ಅಂತ್ಯದಲ್ಲೂ (10°-20°)........
ಉಭಯೋದಯ :-- 12, ಮೀನಾ(20°-30°) ಎಲ್ಲಾ ಕಾಲದಲ್ಲಿಯೂ ಫಲಕೊಡಲು ಶಕ್ತವಾಗಿರುತ್ತದೆ.
(ವಿಶೇಷವಾಗಿ ಪ್ರಶ್ನಾಲಗ್ನದಲ್ಲಿ ರಾಶಿ ಚಿಹ್ನೆಗಳ ಉದಯವನ್ನು ಗಮನಿಸಬೇಕು)
(ವಿಶೇಷವಾಗಿ ಪ್ರಶ್ನಾಲಗ್ನದಲ್ಲಿ ರಾಶಿ ಚಿಹ್ನೆಗಳ ಉದಯವನ್ನು ಗಮನಿಸಬೇಕು)
ಮನುಷ್ಯ ರಾಶಿಗಳಾದ ಕನ್ಯಾ, ತುಲಾ, ಕುಂಭ ಹಾಗೂ ಧನಸ್ಸಿನ ಮೊದಲಭಾಗ (0-15°) ಪೂರ್ವದಿಕ್ಕಿನಲ್ಲೂ.........
ಮೇಷ, ವೃಷಭ, ಸಿಂಹ ಧನಸ್ಸಿನ ಎರಡನೇ ಭಾಗ (15°-30°) ದಕ್ಷಿಣಾದಿಕ್ಕಿನಲ್ಲೂ.......
ಕಟಕ, ಮೀನ, ಮಕರದ ಎರಡನೇ ಭಾಗ( ೧5°-೩0°) ಜಲರಾಶಿಯಾಗಿದ್ದು ಪಶ್ಚಿಮ ದಿಕ್ಕಿನಲ್ಲೂ........
ವೃಶ್ಚಿಕ ರಾಶಿಯು ಕೀಟರಾಶಿಯಾಗಿದ್ದು ಉತ್ತರ ದಿಕ್ಕಿನಲ್ಲೂ, ಬಲಿಷ್ಠವಾಗಿರುತ್ತದೆ
ವೃಶ್ಚಿಕ ರಾಶಿಯು ಸಾಯಂಕಾಲದಲ್ಲೂ, ಚತುಷ್ಪಾದ ರಾಶಿಗಳು ರಾತ್ರಿಯಲ್ಲೂ, ನರರಾಶಿಗಳು ಹಗಲಿನಲ್ಲಿಯು ಬಲಿಷ್ಠವಾಗಿರುತ್ತದೆ.
ಮೇಷ, ವೃಷಭ, ಧನಸ್ಸು, ಮಕರ, ಕಟಕ ಲಗ್ನ ಮತ್ತು ರಾಶಿಗಳಾದಾಗ ರಾತ್ರಿಯ ಕಾಲ ದಲ್ಲಿ ಬಲಿಷ್ಠವಾಗಿರುತ್ತದೆ.
ಸಿಂಹ, ಕನ್ಯಾ, ತುಲಾ ವೃಶ್ಚಿಕ, ಕುಂಭ, ಮೀನಾ ರಾಶಿಗಳು ಲಗ್ನ ಮತ್ತು ರಾಶಿ ಗಳಾದಾಗ ಹಗಲಿನಲ್ಲಿ ಬಲಿಷ್ಠವಾಗಿರುತ್ತದೆ.

--: ಸ್ತ್ರೀ, ಪುರುಷ ರಾಶಿಗಳು:--
ಪುರುಷ ಜಾತಕದಲ್ಲಿ ಸಮರಾಶಿ ಅಥವಾ ಸ್ತ್ರೀ ರಾಶಿಯಲ್ಲಿ ಹೆಚ್ಚಿನ ಗ್ರಹಗಳು ಸ್ಥಿತರಾದರೆ, ಜಾತಕರು ಕೋಮಲತೆ ಹಾಗೂ ಸೌಮ್ಯ ಸ್ವಭಾವವನ್ನು ಹೊಂದಿರುತ್ತಾರೆ.
ಸ್ತ್ರೀ ಜಾತಕದಲ್ಲಿ, ಬೆಸರಾಶಿ ಅಥವಾ ಪುರುಷ ರಾಶಿಯಲ್ಲಿ ಹೆಚ್ಚಿನ ಗ್ರಹಗಳು ಸ್ಥಿತರಾದರೆ ಧೈರ್ಯ, ಸ್ಥೈರ್ಯ, ಪ್ರತಿಯೊಂದು ಕೆಲಸದಲ್ಲೂ ಮುಂದಾಳತ್ವ, ನಾಯಕತ್ವ, ಕಠೋ ರತೆಯನ್ನು ಹೊಂದಿರುತ್ತಾರೆ.
ಯಾವುದೇ ಜಾತಕದಲ್ಲಿ ರವಿ, ಚಂದ್ರ, ಲಗ್ನಗಳು ಮುಖ್ಯವಾಗಿ ಸಮರಾಶಿಯಲ್ಲಿದ್ದರೆ, ಸೌಮ್ಯತೆ , ಕೋಮಲತೆ, ಅನುಸರಿಸಿಕೊಂಡು ಹೋಗುವ ಗುಣವನ್ನು ಹೊಂದಿರುತ್ತಾರೆ. ಇದಕ್ಕೆ ವಿರುದ್ಧವಾಗಿ ಅಧಿಕ ಗ್ರಹಗಳು ಬೆಸ ಅಥವಾ ಪುರುಷರಾಶಿಯಲ್ಲಿ ಸ್ಥಿತರಾದಾಗ, ಪುರುಷತ್ವಕ್ಕೆ ಒಪ್ಪುವ ಗುಣಗಳೇ ಪ್ರಧಾನವಾಗುತ್ತವೆ.
ಯಾವುದೇ ಜಾತಕದಲ್ಲಿ ಪಂಚಮ ಸ್ಥಾನ ಹಾಗೂ ಪಂಚಮಾದಿಪತಿಯು ಸ್ಥಿತರಾಗಿರುವುದು ಸಮ ರಾಶಿಯಾದರೆ ಅವರ ಸಂತಾನಕ್ಕೆ ಸಂಭಂದಿಸಿದಂತೆ ಗಂಡು ಸಂತಾನಕ್ಕಿಂತ ಹೆಣ್ಣು ಸಂತಾನವೆ ಅಧಿಕವಾಗಿರುತ್ತದೆ.
ಇದೇ ರೀತಿ ಸಹೋದರ, ಸಹೋದರಿಯರನ್ನು ಆಯಾ ಭಾವಗಳನ್ನು, ಭಾವಾಧಿಪತಿ ಸ್ಥಿತ ರಾಶಿಗಳನ್ನು ನೋಡಿ ನಿರ್ಧರಿಸ ಬೇಕಾಗುತ್ತದೆ.
--: ರಾಶಿಗಳ ಸ್ವಭಾವ:--
ಚರ ರಾಶಿಗಳು :-- 1, 4, 7, 10
ಮೇಷ, ಕಟಕ, ತುಲಾ, ಮಕರ.
ಈ ರಾಶಿಗಳು ಲಗ್ನ ಅಥವಾ ರಾಶಿಯಾದಾಗ, ನಿರಂತರ ಬದಲಾವಣೆ, ರಾಜಸಿಕ .ಸ್ವಭಾವ, ಒರಟು ಸ್ವಭಾವ, ಸ್ವಾಭಾವಿಕ ಗುಣದಂತೆ ನಡೆಯುವರು, ಸದಾ ಕ್ರಿಯಾಶೀಲತೆ ಹೊಂದಿರುವುದು, ಬಲಿಷ್ಠತೆ, ಗುರಿಯನ್ನು ಮುಟ್ಟುವವರೆಗೆ ಶ್ರಮಿಸುವರು, ಸ್ವತಂತ್ರ ಮನೋಭಾವ, ನಾಯಕತ್ವ, ಜಿಗುಟುತನ, ತಾವು ತಾವು ಬರಲು, ಇತರರನ್ನು ತುಳಿಯಲು ಸಿದ್ಧರಾಗಿರುತ್ತಾರೆ . ಬದಲಾವಣೆಯೇ ಜೀವನದ ಮುಖ್ಯ ಗುರಿಯಾಗಿರುತ್ತದೆ, ಜನರ ಸಂಪರ್ಕವಿರುವ ಕಾರ್ಯಕ್ಷೇತ್ರದಲ್ಲಿರುತ್ತಾರೆ, ತಮ್ಮ ಕೆಲಸದ ಮೂಲಕವೇ ಗುರುತಿಸಲ್ಪಡುವವರು, ಸಂಶೋಧನಾ ಕ್ಷೇತ್ರದಲ್ಲೂ ಆಸಕ್ತಿ, ಕ್ರಿಯಾಶೀಲತೆಗೆ ತಕ್ಕಂತೆ ಕೀರ್ತಿ ಐಶ್ವರ್ಯ ಇವರದಾಗುತ್ತದೆ, ಸದಾ ಕ್ರಿಯಾಶೀಲರಾಗಿರುವುದರಿಂದ ಹೆಚ್ಚು ಶಕ್ತಿಯ ಹಾಗೂ ಚೈತನ್ಯದ. ಅವಶ್ಯಕತೆ ಇರುತ್ತದೆ, ಆದ್ದರಿಂದ ಶರೀರದಲ್ಲಿ ಚೈತನ್ಯ್ ನೀಡುವ ಅಂಗಗಳಾದ ಹೊಟ್ಟೆ , ಕಿಡ್ನಿ, ಕೀಲುಗಳು ವಿಶೇಷವಾಗಿ ತಲೆ ಭಾದಿತವಾಗುತ್ತದೆ.

ಗೃಹ ನಿರ್ಮಾಣ, ಮುಂತಾದ ಮಹೂರ್ತಗಳಿಗೆ, ಚರ ಲಗ್ನವನ್ನು ಆಯ್ಕೆ ಮಾಡಿಕೊಂಡಾಗ ಹಿಡಿದ ಕಾರ್ಯವು ಬಹಳ ಬೇಗ ಮುಕ್ತಾಯವಾಗುತ್ತದೆ.
"" ಸತ್ವಂ ಕುಜೋಹೊ"" ಎಂಬಂತೆ ಕ್ರಿಯಾಶೀಲತೆಗೆ ಪ್ರಧಾನವಾದ ಗ್ರಹ, ಕುಜ ಜಾತಕದಲ್ಲಿ ಉತ್ತಮನಾಗಿರಬೇಕು.
"" ಸತ್ವಂ ಕುಜೋಹೊ"" ಎಂಬಂತೆ ಕ್ರಿಯಾಶೀಲತೆಗೆ ಪ್ರಧಾನವಾದ ಗ್ರಹ, ಕುಜ ಜಾತಕದಲ್ಲಿ ಉತ್ತಮನಾಗಿರಬೇಕು.
: ಸ್ಥಿರ ರಾಶಿಗಳು :-- 2, 5, 8, 11,
ವೃಷಭ, ಸಿಂಹ, ವೃಶ್ಚಿಕ, ಕುಂಬ,
ವೃಷಭ, ಸಿಂಹ, ವೃಶ್ಚಿಕ, ಕುಂಬ,
ನಿಂತಲ್ಲೇ ನಿಂತು ಬೆಳವಣಿಗೆಯನ್ನು ಕಾಣುತ್ತ್ತದೆ. ಈ ರಾಶಿಯಲ್ಲಿ ಹೆಚ್ಚಿನ ಗ್ರಹಗಳಿದ್ದರೆ ಸೋಂಬೇರಿಗಳಾಗುತ್ತಾರೆ. ಯಾವ ಕೆಲಸದಲ್ಲೂ ಮುನ್ನುಗ್ಗುವ ಸ್ವಭಾವ ಇರುವುದಿಲ್ಲ. ಯಾವುದೇ ಹೊಸತನಕ್ಕೆ ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ, ಸದಾ ಶಾಂತತೆಯಿಂದಿದ್ದು ಸಂಶೋಧನಾ ಮನೋಭಾವದವರಾಗಿರುತ್ತಾರೆ. ಪ್ರತಿಯೊಂದನ್ನು ವಿಮರ್ಶೆಯ ದೃಷ್ಟಿಯಿಂದಲೇ ನೋಡುತ್ತಾರೆ. ವಿಷಯ ಸುಖಗಳಿಗೆ, ಘನತೆ ಗೌರವ ಗಳಿಗಾಗಿಯೇ ಸದಾ ಶ್ರಮಿಸುತ್ತಾರೆ. ಜ್ಞಾಪಕ ಶಕ್ತಿ ಉತ್ತಮವಾಗಿರುತ್ತದೆ. ಸೋಲೊಪ್ಪಿಕೊಳ್ಳದ ಸ್ವಭಾವ, ಇತರರ ಚಿಂತನೆಗೆ ಬೆಲೆ ಕೊಡುವುದಿಲ್ಲ, ಸಾಧಾರಣವಾಗಿ ಕಾಯಿಲೆಗಳು ಬರುವುದಿಲ್ಲ, ಬಂದರೆ ಬಹಳ ಕಾಲ ನರಳಿಸುತ್ತದೆ. ಇವರಿಗೆ ತೊಂದರೆ ಕೊಡುವ ಅಂಗಗಳು ..... ಹೃದಯ, ಬೆನ್ನುಮೂಳೆ ಹಾಗೂ ಜನನಾಂಗಗಳು. ಹಂತ ಹಂತವಾಗಿ, ಭೂಮಿ, ಹಣ ಮುಂತಾದವುಗಳನ್ನು ಸಂಗ್ರಹಿಸಿಕೊಂಡು ಮೇಲೇರುತ್ತಾರೆ. ಸಂಪಾದನೆಗಿಂತ job seccurity ಯನ್ನು ಬಯಸುತ್ತಾರೆ, ಸೈರಣೆ, ಸಂಯಮ ಇವರ ಗುಣ.
ಸ್ಥಿರವಾದ ಕೆಲಸ ಕಾರ್ಯಗಳಿಗೆ ( ವಿವಾಹ ) ಸ್ಥಿರ ಲಗ್ನ ಮಹೂರ್ತವನ್ನು ಆಯ್ಕೆ ಮಾಡಿಕೊಳ್ಳಬೇಕು.
ಸ್ಥಿರವಾದ ಕೆಲಸ ಕಾರ್ಯಗಳಿಗೆ ( ವಿವಾಹ ) ಸ್ಥಿರ ಲಗ್ನ ಮಹೂರ್ತವನ್ನು ಆಯ್ಕೆ ಮಾಡಿಕೊಳ್ಳಬೇಕು.
ದ್ವಿಸ್ವಭಾವ/ ಉಭಯ ರಾಶಿಗಳು:--
3, 6, 9, 12, ಮಿಥುನ, ಕನ್ಯಾ, ಧನಸ್ಸು, ಮೀನ
3, 6, 9, 12, ಮಿಥುನ, ಕನ್ಯಾ, ಧನಸ್ಸು, ಮೀನ
ಈ ರಾಶಿಗಳ ವಿಶೇಷವೆಂದರೆ ಬುಧ, ಗುರುಗಳು ದ್ವಿಸ್ವಭಾವ ರಾಶ್ಯಾಧಿಪತಿಗಳು, ಬುಧ ಬುದ್ಧಿ ಸೂಚಕ ಗ್ರಹವಾದರೆ..... ಗುರು ಪಾಂಡಿತ್ಯ ಗ್ರಹ, ಎರಡೂ ಶುಭ ಗ್ರಹಗಳೇ.
ದ್ವಿಸ್ವಭಾವದ ಜಾತಕರು, ಬಹುಮುಖ ಪ್ರತಿಭೆ ಉಳ್ಳವರು, ಒಂದಕ್ಕಿಂತ ಹೆಚ್ಚಿನ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಕನಸುಗಾರರು, ಕಲ್ಪನೆಯಲ್ಲಿ ಸುಖ ಕಾಣುವವರು, ಸಮಯ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ, ಮಾಹಿತಿ ಸಂಗ್ರಹದಲ್ಲಿ ಅಭಿರುಚಿ, ಅನೇಕ ವಿಚಾರದ ಬಗೆಗೆ ಆಳವಾದ ಚಿಂತನೆ ನಡೆಸುವವರು, ಭಾವುಕ ಜೀವಿಗಳು, ಹಾಗಾಗಿ ಇತರರ ಟೀಕೆಗೆ ಒಳಗಾಗುತ್ತಾರೆ, ಉತ್ತಮವಾದ ಅವಕಾಶಗಳು ಹುಡುಕಿ ಬಂದರೂ ಅವುಗಳನ್ನು ಉಪಯೋಗಿಸಿಕೊಳ್ಳುವುದರಲ್ಲಿ ವಿಫಲರಾಗುತ್ತಾರೆ, ಇತರರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ. ನಾಜೂಕಿನ ಆರೋಗ್ಯ, ನರಗಳ ದೌರ್ಬಲ್ಯ, ಶ್ವಾಸಕೋಶ ಹಾಗೂ ಹೊಟ್ಟೆಗೆ ಸಂಬಂದಿಸಿದ ತೊಂದರೆಗಳಿಂದ ಆಗಾಗ ನರಳುತ್ತಾರೆ. ಉದಾಸೀನ ಮನೋಭಾವವಿದ್ದರಿಂದ ಕಾಯಿಲೆಗಳು ಹೆಚ್ಚು ಕಾಲ ಭಾಧಿಸುತ್ತದೆ. ಭಾವನಾ ಜೀವಿಗಳು, ಪರೋಪಕಾರಿಗಳು, ಒಗ್ಗಟ್ಟನ್ನು ಇಷ್ಟಪಡುವವರು, ಬೋಧನೆಯಲ್ಲಿ ಆಸಕ್ತಿ, ಬುದ್ಧಿ ಹಾಗೂ ಪಾಂಡಿತ್ಯವಿರುವ ಕ್ಷೇತ್ರದಲ್ಲಿ, ಬರವಣಿಗೆಯಲ್ಲಿ ತೊಡಗಿಸಿಕೊಂಡು ಲೇಖಕರು, ಸಾಹಿತಿಗಳು, ಪತ್ರಕರ್ತರು, ದೂರದರ್ಶನ ದಂತಹ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವ ವರಾಗುತ್ತಾರೆ.
ಈ ರಾಶಿಯವರಿಗೆ ಬುಧ, ಗುರುಗಳು ಉತ್ತಮವಾಗಿರಬೇಕು, ಇಲ್ಲವಾದಲ್ಲಿ ಸಾಧಿಸುವ ಕೆಲಸದಲ್ಲಿ ಸೋಲು, ಹಿಂಜರಿಕೆ, ಅಪಮಾನಗಳು ಉಂಟಾಗಬಹುದು.
ಈ ರಾಶಿಯವರಿಗೆ ಬುಧ, ಗುರುಗಳು ಉತ್ತಮವಾಗಿರಬೇಕು, ಇಲ್ಲವಾದಲ್ಲಿ ಸಾಧಿಸುವ ಕೆಲಸದಲ್ಲಿ ಸೋಲು, ಹಿಂಜರಿಕೆ, ಅಪಮಾನಗಳು ಉಂಟಾಗಬಹುದು.
ಮುಂದುವರೆಯುವುದು.............
✍ ಡಾ|| ಶೈಲಜಾ ರಮೇಶ್
✍ ಡಾ|| ಶೈಲಜಾ ರಮೇಶ್
Good information
ReplyDelete