ಹರಿಃ ಓಂ
ಶ್ರೀ ಗುರುಭ್ಯೋ ನಮಃ
ಶ್ರೀ ಮಹಗಣಪತಯೇ ನಮಃ
ನಮ್ಮ ಋಷಿಗಳು ತಮ್ಮ ಆಳವಾದ ಅಧ್ಯಯನ ದ ಮೂಲಕ ಹಾಗೂ ತಪಸ್ಸಿನ ಮೂಲಕ ರಾಶಿಗಳು 12 ಎಂದು ಕಂಡು ಕೊಂಡಿದ್ದಾರೆ, ಅದೇ ಅಲ್ಲದೆ ಪ್ರತಿ ರಾಶಿಗೂ ಸಂಬಂದಿಸಿದಂತೆ ವಿಶಿಷ್ಟವಾದ ಗುಣಧರ್ಮಗಳನ್ನು ಹೇಳಿರುತ್ತಾರೆ. ಭಚಕ್ರ ದಲ್ಲಿ ಈ ಪ್ರಕಾರವಾಗಿ ನೋಡಿದಾಗ ಹನ್ನೆರಡು ರಾಶಿಗಳು ಕ್ರಮವಾಗಿ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ, ಮೀನಾ
ಎಂಬ ಹೆಸರಿನಿಂದ ಪ್ರಖ್ಯಾತಿ ಆಗಿದೆ, ಜಾತಕದಲ್ಲಿ ಇದನ್ನೇ ಕುಂಡಲಿ ಎನ್ನುತ್ತಾರೆ.
ಆಯಾ ರಾಶಿ ಯಲ್ಲಿನ ನಕ್ಷತ್ರಗಳ ಗುಂಪಿನ ಆಕೃತಿಯನ್ನು ಗಮನಿಸಿ ರಾಶಿಗಳಿಗೆ ಹೆಸರುಗಳನ್ನು ಕೊಟ್ಟಿರುತ್ತಾರೆ. ವೃತ್ತಾಕಾರದ ಭಚಕ್ರದ ವ್ಯಾಪ್ತಿಯು 360° ಗಳಾಗಿದ್ದು, ಇದನ್ನು ಕ್ರಮವಾಗಿ ಹನ್ನೆರಡು ಮನೆಗಳಿಗೆ ಹಂಚಿದಾಗ...
360÷12= 30° ಗಳಾಗುತ್ತದೆ.
ಇನ್ನೊಂದು ರೀತಿಯಲ್ಲಿ ಅರ್ಥೈಸಿದಾಗ...........
ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಅಮಾವಾಸ್ಯೆ ಆಗುವುದು, ಇದನ್ನು ಪ್ರಾರಂಭದ ಬಿಂದುವನ್ನಾಗಿ ಗುರ್ತಿಸಿದರೆ, ಇಲ್ಲಿಂದ ಭೂಮಿ ಮತ್ತು ಚಂದ್ರ ರು ತಮ್ಮದೇ ಆದ ವೇಗದಲ್ಲಿ ಚಲಿಸುತ್ತಾ ತಮ್ಮ ಪಥದಲ್ಲಿ .ಮುಂದುವರಿ ಯುವರು. ಹೀಗೇ ಚಲಿಸುವಾಗ ಮತ್ತೆ ಮತ್ತೆ ಸೂರ್ಯ ಚಂದ್ರ ಮತ್ತು ಭೂಮಿಗಳು ಒಂದೇ ಸರಳ ರೇಖೆಯಲ್ಲಿ ಸೇರಿ ಅಮವಾಸ್ಯೆಯನ್ನು ಉಂಟುಮಾಡುವುವು, ಹೀಗೆ ವರ್ಷದಲ್ಲಿ ಅಥವಾ 360°ಗಳ ಧೀರ್ಘ ವೃತ್ತದ ಚಲನೆಯಲ್ಲಿ 12 ಅಮಾವಾಸ್ಯೆ ಗಳು ಉಂಟಾಗುತ್ತವೆ. ಒಂದು ಅಮಾವಾಸ್ಯೆ ಯಿಂದ ಮತ್ತೊಂದು ಅಮಾವಾಸ್ಯೆ ಯ ಅಂತರ 30°ಗಳು ಆಗುತ್ತವೆ. ಇದನ್ನೇ ಜ್ಯೋತಿಶಾಸ್ತ್ರದಲ್ಲಿ ರಾಶಿ ಎಂದು ಕರೆಯುತ್ತಾರೆ.
ಭಚಕ್ರದ ಪ್ರಮಾಣ 360°ಗಳು.
ಒಂದು ಭಾಗ ಅಥವಾ ಒಂದು ರಾಶಿಗೆ 30°ಗಳು.
ಈ ಭಾಚಕ್ರದಲ್ಲಿ ಸೂರ್ಯನು ಕೇಂದ್ರ ಬಿಂದುವಾಗಿದ್ದಾನೆ. ಭೂಮಿ, ಚಂದ್ರ ಸಕಲ ಗ್ರಹಗಳು ಸೂರ್ಯನ ಸುತ್ತಲೂ ನಿರ್ಧಿಷ್ಟವಾದ ಮತ್ತು ನಿಖರವಾದ ಪಥಗಳಲ್ಲಿ ಚಲಿಸುತ್ತವೆ. ನಾವು ಭೂಮಿಯಿಂದ ನಿಂತು ನೋಡಿದರೆ ಸೂರ್ಯ, ಚಂದ್ರ, ಸಕಲ ಗ್ರಹಗಳು ಈ ರಾಶಿ ಚಕ್ರದಲ್ಲಿನ ವಿವಿಧ ನಕ್ಷತ್ರ ಮತ್ತು ನಕ್ಶತ್ರಪುಂಜಗಲ್ ಆಕಾರದ ಮೇಲೆ ಹಾದು ಹೋಗುವಂತೆ ಕಾಣುತ್ತದೆ, ಈ ಆಕಾರಗಳು ಕೆಲವು ಪ್ರಾಣಿಗಳ ಆಕಾರವನ್ನು ಮತ್ತು ಕೆಲವು ವಿಶೇಷ ಚಿಹ್ನೆಗಳ ಆಕಾರವನ್ನು ಹೋಲುವುದರಿಂದ, ನಮ್ಮ ಪೂರ್ವಜರು ಅದೇ ಹೆಸರುಗಳಿಂದ ರಾಶಿಗಳನ್ನು ಕರೆದರು..... ಅದೇ
ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ, ಮೀನಾ.
ಜ್ಯೋತಿಷ್ಯ ಶಾಸ್ತ್ರದ ಫಲಜ್ಯೋತಿಷ್ಯ ವಿಭಾಗಕ್ಕೆ ಸಂಬಂಧಿಸಿದಂತೆ, ಫಲವಿಮರ್ಶೆಯಲ್ಲಿ ರಾಶಿ, ಗ್ರಹ ಹಾಗೂ ನಕ್ಷತ್ರಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತದಾದ್ದರಿಂದ ಇವುಗಳ ಗುಣ ಸ್ವಭಾವ, ಹಾಗೂ ಕಾರಕತ್ವಗಳು ನಿರ್ಣಾಯಕವಾಗಿರುತ್ತದೆ. ಆದ್ದರಿಂದ ರಾಶಿಗಳ ಗುಣಧರ್ಮ ಗಳತ್ತ ಗಮನ ಹರಿಸೋಣ
-: ರಾಶಿಗಳ ಗುಣಧರ್ಮಗಳು :-
ಮೇಷ :--- ರಾಶಿ ಚಕ್ರದಲ್ಲಿ ಮೊದಲನೆಯ ರಾಶಿ, ಭಚಕ್ರದ ಲ್ಲಿ 0° ಯಿಂದ 30° ವರೆಗೆ ವ್ಯಾಪಿಸಿದೆ. ಇದು ಕಾಲ ಪುರುಷನೆಂದು ಸೂಚಿತವಾಗಿರುವ ಪರಮ ಪುರುಷನ ಶಿರ ಅಥವಾ ತಲೆಯನ್ನು ಸೂಚಿಸುತ್ತದೆ
ಈ ರಾಶಿಯ ಚಿನ್ಹೆ ಯು ಟಗರು, ಈ ಚಿಹ್ನೆಯ ಗುಣವು ಸಹರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಇದು ಚರ ರಾಶಿ, ಅಗ್ನಿತತ್ವ ರಾಶಿ, ವಿಷಮರಾಶಿ, ಪುರುಷರಾಶಿ, ಪೃಷ್ಟೋ ದಯ ರಾಶಿ, ಕುಜನ ಅಧಿಪಠ್ಯಕ್ಕೊಳಪಟ್ಟಿದ್ದು, ಕುಜನಿಗೆ ಸ್ವಕ್ಷೇತ್ರ, ಹಾಗೂ ಮೂಲತ್ರಿಕೋನ ರಾಶಿಯಾಗಿದೆ. ಕ್ಷತ್ರಿಯ ವರ್ಣ, ರಕ್ತಬಣ್ಣ, ರಜೋಗುಣ, ಧಾತು( ಖನಿಜ) ರಾಶಿ, ಪೂರ್ವದಿಕ್ಕನ್ನು ಸೂಚಿ ಸುತ್ತದೆ, ಚತುಷ್ಪಾದರಾಶಿ, ಪಿತ್ತ ಪ್ರಕೃತಿ, ಸೃಸ್ಟಿರಾಶಿ, ಕೃತಯುಗಕ್ಕೆ ಸೇರಿದೆ, ಹಾಗೂ ಗ್ರಹನಾಶಕ್ತಿಯನ್ನು ಹೊಂದಿದೆ, ಹಗಲಿನಲ್ಲಿ ಬಲ, ತಿರುಗಾಟ ಹೆಚ್ಚು, ನೀರನ್ನು ಕಂಡರೆ ಭಯ, ಮೊಣಕಾಲಿನಲ್ಲಿ ಬಲ ಕಡಿಮೆ, ದೈರ್ಯಶಾಲಿಗಳು, ಯುದ್ಧ ಸಾಹಸಿಗಳು, ತಲೆಯಲ್ಲಿ ಗಾಯದ ಗುರುತನ್ನು ಕಾಣಬಹುದು, ಕಠಿಣವಾದ ಮಾತುಗಳು, ಅಲ್ಪಸಂತಾನವುಳ್ಳ ರಾಶಿ , ಅಗ್ನಿಗಂಡ, ಆಯುಡಗಂಡ, ವೈಜ್ಞಾನಿಕ ಪ್ರಿಯ ರಾಶಿ, ಸೂರ್ಯನು ಈ ರಾಶಿಯ 10°ಯಲ್ಲಿ ಉಚ್ಚನಾಗುತ್ತಾನೆ, ಶನಿಯು, 20°ಯಲ್ಲಿ ನೀಚನಾ ಗುತ್ತಾನೆ, ಈ ರಾಶಿಯ ವಾಸಸ್ಥಾನ ಗುಡ್ಡಗಾಡುಗಳು.
ವೃಷಭ :--- ವೃಷಭವೆಂದರೆ , ಎತ್ತು, ಗೂಳಿ, ವೃಷ ಎಂದರೆ ಮಾನವನ ಬಯಕೆಗಳನ್ನೆಲ್ಲ ಪೂರೈಸುವ ಸಂಕೇತ, ಇದು ರಾಶಿ ಚಕ್ರದ ಎರಡನೆಯ ರಾಶಿ. ಇದು ಕಾಲಪುರುಷಣ ಗಂಟಲು, ಮುಖವನ್ನು ಸೂ ಚಿಸುತ್ತದೆ. ಭಚಕ್ರದ ಲ್ಲಿ 30° ಯಿಂದ 60° ವರೆಗೆ ವ್ಯಾಪಿಸಿದೆ. ಇದು ಸ್ಥಿರರಾಶಿ, ಪೃಷ್ಟೋದಯ ರಾಶಿ, ಸಮರಾಶಿ, ಪೃತ್ವಿ ತತ್ವರಾಶಿ, ದಕ್ಷಿಣದಿಕ್ಕು, ಸ್ತ್ರೀ ರಾಶಿ, ಶೂದ್ರ ಜಾತಿ, ಅರ್ಧ ಜಲರಾಶಿ, ಬಿಳಿಬಣ್ಣ, ಕಫಪ್ರಕೃತಿ, ಮೂಲರಾಶಿ, ಸಸ್ಯರಾಶಿ, ರಜೋ ಗುಣ ಪ್ರಧಾನ, ತ್ರೇತಾಯುಗವನ್ನ ಸೂಚಿಸುತ್ತದೆ. ಧಾರಣರಾಶಿ, ಸ್ನೇಹಪರ ರಾಶಿ, ಸಾಧಾರಣ ಎತ್ತರ, ಸ್ತ್ರೀ ಸಂತಾನ ಅಧಿಕ, ಸುಖ/ ಭೋಗರಾಶಿ, ಕೃಷಿ ಮತ್ತು ಧನ ಶೇಕರಣೆಯ ರಾಶಿ, ಈ ರಾಶಿಗೆ ಶುಕ್ರ ಅಧಿಪತಿ, ಚಂದ್ರನಿಗೆ 3°ಯಲ್ಲಿ ಉಚ್ಚಸ್ಥಾನ, ಕೆಲವರ ಪ್ರಕಾರ ರಾಹುವಿಗೂ ಕೂಡ ಉಚ್ಚಕ್ಷೇತ್ರ, ಕೇತುವಿಗೆ ನೀಚಕ್ಷೇತ್ರ, ಈ ರಾಶಿ ಕಾಲಪುರುಷ ನ ಬಲಗಣ್ಣನ್ನು ಸೂಚಿಸುತ್ತದೆ.
ಮಿಥುನ :--- ರಾಶಿ ಚಕ್ರದಲ್ಲಿ ಮೂರನೇ ರಾಶಿಯಾಗಿದ್ದು , ಬುದ್ಧಿ ಸೂಚಕನಾದ ಬುಧನು ಈ ರಾಶಿಯ ಅಧಿಪತಿಯಾಗಿದ್ದಾನೆ. ಇದು ಕಾಲಪುರುಷ ನ ಭುಜ ಮತ್ತು ತೋಳುಗಳನ್ನು ಸೂಚಿಸುತ್ತದೆ. ಈ ರಾಶಿಯ ಚಿಹ್ನೆಯು ಗಂಡು ಹೆಣ್ಣಿನ ಮಿಲನವಾಗಿದೆ. ಕೆಲವು ಗ್ರಂಥಗಳ ಪ್ರಕಾ ರ ಗಧೆಯನ್ನು ಹಿಡಿದಿರುವ ಪುರುಷ ಹಾಗೂ ವೀಣೆಯನ್ನು ನುಡಿಸುತ್ತಿರುವ ಸ್ತ್ರೀಯ ರೂಪವಾಗಿದೆ. ಈ ರಾಶಿಯ ವ್ಯಾಪ್ತಿಯು 60° ಯಿಂದ 90° ಯಾಗಿದೆ. ರಾತ್ರಿ ಹಾಗೂ ಹಗಲಿನಲ್ಲಿ ಬಲಯುತವಾಗಿದ್ದರು , ಹಗಲಿನಲ್ಲೇ ಹೆಚ್ಚು ಬಲಶಾಲಿಯಾಗಿರುತ್ತದೆ. ವಾತ, ಪಿತ್ತ, ಕಫ ತ್ರಿದೋಷ ಪೂರಿತ ರಾಶಿ, ದ್ವಿಸ್ವಭಾವರಾಶಿ, ಶಿರೋದಯ ರಾಶಿ, ವಾಯುತತ್ವ, ವಿಷಮರಾಶಿ, ಪುರುಷ ರಾಶಿ, ಹಸಿರುಬಣ್ಣ, ವಿಶೇಶವಾಗಿ ಪಚ್ಚೆಹಸಿರು, ನರ ಚಿನ್ಹೆ ಸೂಚಕರಾಶಿಯಾದ್ದರಿಂದ, ನರರಾಶಿ, ಬಂಜೆರಾಶಿ, ಪಾಶ್ಚಿಮ ದಿಕ್ಕನ್ನು ಸೂಚಿಸುತ್ತಾದೆ. ಜೀವರಾಶಿ, ವೈಶ್ಯರಾಶಿ, ದ್ವಿಪಾದರಾಶಿ, ಸತಿಪತಿಗಳನ್ನು ಸೂಚಿಸುತ್ತದೆ. ಲಯರಾಶಿ, ದ್ವಾಪರಯುಗ ಸೂಚಕರಾಶಿ, 30° ವ್ಯಾಪ್ತಿಯಲ್ಲಿ 15° ಧಾರಣ, ಹಾಗೂ 15° ಗ್ರಹವ ಶಕ್ರಿಯನ್ನು
ಹೊಂದಿದೇ. ಈ ರಾಶಿಯಲ್ಲಿ ಯಾವುದೇ ಗ್ರಹಗಳ ನೀಚೊಚ್ಚ ವಿಲ್ಲ. ಮಲಗುವ ಮನೆ, ವಿಹಾರಸ್ಥಳಗಳು, ರಮಣೀಯ ವಾದ ಸ್ಥಳಗಳು( ಪಾರ್ಕು, ಏಕಾಂತ ಸ್ಥಳಗಳು) ಇದ್ರ ವಾಸಸ್ಥಾನವಾಗಿದೆ. ವನಚಾರಿ
ರಾಶಿ , ನಗೆಮೊಗವುಳ್ಳ ರಾಶಿ, ಸಾಹಸಿಗರು, ನಿಪುಣರು, ಉದ್ಯೋಗ, ವ್ಯವಹಾರ, ಕಲೆ, ಮುದ್ರಣ ಬರವಣಿಗೆ, ಸಂಗೀತಕಲೆ, ಹಾಡುಗಾರಿಕೆ, ಕ್ರೀಡೆ, ಮತ್ತು ಬಹುಕಾರ್ಯಗಳಲಿ ಆಸಕ್ತಿ.
ಕಟಕ :--- ರಾಶಿಚಕ್ರದಲ್ಲಿ ನಾಲ್ಕನೆಯ ರಾಶಿಯಾಗಿದ್ದು, ಕಾಲಪುರುಷ ನ ಎದೆ ಹಾಗೂ ಶ್ವಾಸ ಕೋಶ ವನ್ನು ಸೂಚಿಸುತ್ತದೆ, ಈ ರಾಶಿಯ ವ್ಯಾಪ್ತಿಯು 90° ಯಿಂದ 120° ಯ ವರೆಗೆ ವ್ಯಾಪಿಸಿದೆ. ಜಲಚರವಾದ ಎಡಿಯು ಇದರ ಚಿನ್ಹೆ. ಚರ ರಾಶಿ, ಸಮರಾಶಿ, ಜಲತತ್ವರಾಶಿ, ಸ್ತ್ರೀ ರಾಶಿ, ಪೃಸ್ಟಾದಯರಾಶಿ, ರಾತ್ರಿಬಲವನ್ನು ಹೊಂದಿರುವ ರಾಶಿ, ಉತ್ತರದಿಕ್ಕು , ಬಿಳಿಯ ಬಣ್ಣ, ಕೆಲವರ ಅಭಿಪ್ರಾಯದಂತೆ ಬಿಳಿ ಮಿಶ್ರಿತ ಕೆಂಪು ಬಣ್ಣ( PINK), ನದಿ ಹರಿಯುವ ನೀರು, ಬ್ರಾಹ್ಮಣ ಜಾತಿ, ಧಾತು ರಾಶಿ, ಶೀತ ಪ್ರಕೃತಿ,
ಕಫ, ಬಹುಪಾದರಾಶಿ, ಸೃಸ್ಟಿರಾಶಿ, ಕಲಿಯುಗರಾಶಿ, ಬ್ರಹ್ಮಣರಾಶಿ, ಕೆರೆ ಕುಂಟೆ , ಕಲ್ಯಾಣಿ, ಕಲ್ಲುಸಂದಿಯಲ್ಲಿ ಇದರ ವಾಸ, ಚಂಚಲ ಮನಸ್ಸು, ಧೈರ್ಯ ಕಡಿಮೆ, ನೌಕವಿಹಾರ, ನೀರಿರುವ ಕ್ಷೇತ್ರ ಬಹುಪ್ರಿಯ, ಬಹು ಸಂತತಿ ರಾಶಿ, ಗಂಭೀರ ಸ್ವಭಾವ, ಮಿತಭಾಷಿ, ಈ ರಾಶಿ ಗೆ ಅಧಿಪತಿ ಚಂದ್ರ, ಕಟಕದಲ್ಲಿ ಗುರು 5°ಯಲ್ಲಿಉಚ್ಚತ್ವವನ್ನು ಪಡೆಯುತ್ತಾರೆ, ಕುಜನಿಗೆ 28° ಯಲ್ಲಿ ನೀಚತ್ವ. ಈ ರಾಶಿಯು ಭೋಧಕವರ್ಗ, ಭೂತಕಾಲವನ್ನು ತಿಳಿಸುತ್ತದೆ.
ಸಿಂಹ :--- ರಾಶಿ ಚಕ್ರದಲ್ಲಿ ಐದನೆಯ ರಾಶಿಯಾಗಿದ್ಫು, ಕಾಲಪುರುಷನ್ ಹೊಟ್ಟೆಯನ್ನು ಸೂಚಿಸುತ್ತದೆ, ಗ್ರಹಗಳಲ್ಲಿ ರಾಜನೆನಿಸುವ ಸೂರ್ಯ ಗ್ರಹ ಇದರ ಆಧಿಪತಿ, ಇದರಂತೆಯೇ ಕಾಡಿನ ರಾಜನಾದ ಸಿಂಹ ಇದರ ಚಿಹ್ನೆಯಾಗಿದೆ. ಈ ರಾಶಿಯ ವ್ಯಾಪ್ತಿಯು, 120° ಇಂದ 150°ವರೆಗೆ, ಸ್ಥಿರರಾಶಿ, ಬೆಸರಾಶಿ, ಪುರುಷರಾಶಿ, ಶಿರೋದಯ ರಾಶಿ, ಅಗ್ನಿತತ್ವ ರಾಶಿ, ಪಿತ್ತಪ್ರಕೃತಿ, ಪೂರ್ವದಿಕ್ಕು, ಕ್ಷತ್ರಿಯ ಜಾತಿ, ಸತ್ವಗುಣ, ಅಲ್ಪಸಂತಾನ ( ಬಂಜೆ) ರಾಶಿ, ಶೀಘ್ರ ಕೋಪಿ, ಧೃಢಸಂಕಲ್ಪ, ಗಂಭೀರ, ಅಧಿಕಾರರಾಶಿ, ಮೂಲರಾಶಿ( ಜೀವಿಗಳಿಗೆ ಆಹಾರ ಪೂರೈಸುವ), ಚತುಷ್ಪಾದ ರಾಶಿ, ಕೇಸರಿ ಹಾಗೂ ಕೆಂಪುಬಣ್ಣ, ಕೃತಯುಗರಾಶಿ, ಧಾರಣರಾಶಿ, ಸ್ಥಿತಿ ರಾಶಿ, ಇದು ವರ್ತಮಾನ ಕಾಲವನ್ನು ಸೂಚಿಸುತ್ತದೆ, ಘೋರಾರಣ್ಯ, ಎತ್ತರದ ಪ್ರದೇಶ, ಪರ್ವತ ಗುಹೆಗಳಲ್ಲಿ ವಾಸ, ರವಿಗೆ ಮೂಲತ್ರಿಕೋಣಾಧಿಪತ್ಯವಿದೆ, ಈ ರಾಶಿಯಲ್ಲಿ ಯಾವುದೇ ನೀಚೊಚ್ಚವಿಲ್ಲ.
ಕನ್ಯಾ:--- ರಾಶಿಚಕ್ರದಲ್ಲಿ. ಆರನೆಯ ರಾಶಿಯಾಗಿದ್ದು, ಕಾಲಪುರುಷ ನ ಕಿಬ್ಬೊಟ್ಟೆ, ಸೊಂಟ/ ಕಟಿಯನ್ನು ಸೂಚಿಸುತ್ತದೆ. ಹಾಗೆಯೇ ರೋಗವನ್ನು ಸೂಚಿಸುವ ರಾಶಿಯು ಆಗಿದೆ, ಭೂತತ್ವ, ಸ್ತ್ರೀ ರಾಶಿ, ಜೀವರಾಶಿ, ದ್ವಿಪಾದರಾಶಿ, ರಾತ್ರಿಬಲರಾಶಿ , ಶಿರೋದಯ ರಾಶಿ, ದಕ್ಷಿಣ ದಿಕ್ಕು, ಈ ರಾಶಿಯ ವ್ಯಾಪ್ತಿಯು150° ಇಂದ 180° ವರೆಗಿದೆ, ಮಿಶ್ರ ಬಣ್ಣ, ( ಹೊಗೆ/ ಬೂದಿ ಬಣ್ಣ) ( ಪಿಂಗಳವರ್ಣ) ಶೂದ್ರರಾಶಿ, ದ್ವಿಸ್ವಭಾವರಾಶಿ, ಮೊದಲಾರ್ಧ 15° ಧಾರಣ, ಉಳಿದಂತೆ ಗ್ರಹಣ ಶಕ್ತಿಯನ್ನು ಹೊಂದಿದೆ, ನರ ರಾಶಿ, ಲಯರಾಶಿ, ತ್ರೇತಾಯುಗಕ್ಕೆ ಸೇರಿದ ರಾಶಿ, ಇದರ ಚಿನ್ಹೆ ಕನ್ಯೆ, ಕೆಲವು ಗ್ರಾ ತಕರ್ತರ ಅಭಿಪ್ರಾಯದಂತೆ, ಒಂದು ಕೈಯಲ್ಲಿ ಭತ್ತದ ತೆನೆಯನ್ನು, ಇನ್ನೊಂದು ಕೈಯಲ್ಲಿ ಪಂಜನ್ನು ಹಿಡಿದು ದೋಣಿಯಲ್ಲಿ ಕುಳಿತಿರುವುದಾಗಿದೆ. ವಿಹಾರ ಸ್ಥಳ, ವ್ಯಪಾರ ವಾಣಿಜ್ಯ ಪ್ರದೇಶ, ರಂಜನಿಯವಾದ ಪ್ರದೇಶಗಳು, ಹುಲ್ಲುಗಾವಲು, ಪಾರ್ಕು, ಏಕಾಂತ ಸ್ಥಳ ವಾಸಸ್ಥಾನವಾಗಿದೆ. ಈ ರಾಶಿಯು ಭುಧನ ಆದಿಪತ್ಯಕ್ಕೊಳಪಟ್ಟಿದ್ದು, ಬುಧನು 15°ಯಲ್ಲಿ ಪರಮೋಚ್ಛನಾಗುತ್ತಾನೆ
ಹಾಗೆಯೇ ಶುಕ್ರನು 22° ಯಲ್ಲಿ ಪರಮ ನೀಚ ನಾಗುತ್ತಾನೆ. ಸೌಮ್ಯರಾಶಿ, ಧೀರ್ಘರಾಶಿ, ಶೀತಸ್ವಭಾವ, ವಾಯುಪ್ರಕೃತಿ, ಅಲ್ಪಸಂಘ, ಎತ್ತರವಾದ ಆಕಾರ, ಭೂತಕಾಲವನ್ನು ಸೂಚಿಸುತ್ತದೆ, ಬಂಜೆರಾಶಿ, ತ್ರಿಧಾತುಗಳು ಸಮನಾಗಿರುವುವು. ಸಂತತಿ ಕಡಿಮೆ, ಪುಕ್ಕುಲು ಸ್ವಭಾವ.
ತುಲಾ :--- ಭಚಕ್ರದ ಲ್ಲಿ ಏಳನೆಯ ರಾಶಿ, ಕಾಲಪುರುಷ ನ ಅಂಗ ಭಾಗದಲ್ಲಿ ಗುಪ್ತಅಂಗ/ ಬಸ್ತಿಯನ್ನು ಸೂಚಿಸುತ್ತದೆ, ಈ ರಾಶಿಯ ವ್ಯಾಪ್ತಿಯು 180° ಇಂದ 210° ವರೆಗಿದೆ. ಇದು ಚರರಾಶಿ, ಪುರುಷರಾಶಿ, ವಾಯುತತ್ವರಾಶಿ, ದ್ವಿಪಾದರಾಶಿ, ನರರಾಶಿ, ಪಶ್ಚಿಮದಿಕ್ಕನ್ನು ಸೂಚಿಸುತ್ತದೆ. ಶಿರೋದಯರಾಶಿ, ಚರರಾಶಿ, ಒಜೋರಾಶಿ, ಬೆಸರಾಶಿ, ವಾತ ಮತ್ತು ಕಫ ಪ್ರಕೃತಿಯಿಂದ ಕೂಡಿದೆ, ಹಗಲಿನ ವೇಳೆಯಲ್ಲಿ ಬಲಿಷ್ಠ, ಧಾತುರಾಶಿ, ಸೃಸ್ಟಿರಾಶಿ, ದ್ವಾಪರಯುಗವನು ಸೂಚಿಸುತ್ತದೆ. ಗ್ರಹಣ ಶಕ್ತಿಯನ್ನು ಹೊಂದಿದೆ, ಇದರ ಚಿಹ್ನೆಯು ತಕ್ಕಡಿಯಾಗಿದ್ದು ನ್ಯಾಯ , ನೀತಿ , ಧರ್ಮವನ್ನು ಸೂಚಿಸುತ್ತದೆ. ವೈಶ್ಯಜಾತಿ, ಪಟ್ಟಣ ಸಂಚಾರಿ, ಗಂದುಜಾತಿ, ವ್ಯಾಪಾರ, ಶಬ್ದರಾಶಿ, ಶೀತ ವಾತ ಪ್ರಕೃತಿ, ಧೀರ್ಘರಾಶಿ, ಈ ರಾಶಿಗೆ ಅಧಿಪತಿ ಶುಕ್ರನಾಗಿದ್ದು, ಶನಿಯು 20° ಯಲ್ಲಿ ಪರಾಮೋಚನಾಗುತ್ತಾನೆ. ಹಾಗೆಯೇ ರವಿಯು 10° ಯಲ್ಲಿ ಪರಮ ನೀಚನಾಗುತ್ತಾನೆ. ಶುಕ್ರನಿಗೆ ಮೂಲತ್ರಿಕೋನ ರಾಶಿ, ಶುಕ್ರನು ವಿಶೇಷವಾಗಿ ಕಲತ್ರ( ಹೆಂಡತಿ) ಕಾರಕನಾಗಿದ್ದಾನೆ, ಈ ರಾಶಿಯನ್ನು ಕಲತ್ರ ಭಾವ ಹಾಗೂ ವ್ಯಾಪಾರ ವ್ಯವಹಾರ ಭಾವ ಎನ್ನುತ್ತಾರೆ, ನಗರ ಪ್ರದೇಶಗಳು, ವಾಹನ ಸಂಚಾರ , ನ್ಯಾಯಪರ ಹೋರಾಟ, ಶೃಂಗಾರ, ವಿಲಾಸ ಭೋಗಪ್ರಿಯತೆ, ಸೌಂದರ್ಯವನ್ನು ಸೂಚಿಸುತ್ತದೆ.
ವೃಶ್ಚಿಕ :--- ರಾಶಿಚಕ್ರದಲ್ಲಿ ಎಂಟನೆಯ ರಾಶಿಯಾಗಿದ್ದು, ಚೇಳು ಇದರ ಚಿಹ್ನೆಯಾಗಿದೆ. ಕಾಲಪುರುಷ ನ ಗುದ ಸ್ಥಾನವನ್ನು ಸೂಚಿಸುತ್ತದೆ, ಕೆಲವರ ಅಭಿಪ್ರಾಯದಂತೆ ಗುಪ್ತಅಂಗವನ್ನು ಸೂಚಿಸುತ್ತದೆ. ಇದನ್ನು ರಂದ್ರರಾಶಿ ಎನ್ನುತ್ತಾರೆ. ರಾಶಿಚಕ್ರದಲ್ಲಿ ಇದರ ವ್ಯಾಪ್ತಿಯು 210° ಇಂದ 240° ಯವರೆಗೆ ಇದೆ. ಸ್ಥಿರರಾಶಿ, ಬ್ರಾಹ್ಮಣರಾಶಿ, ಉತ್ತರದಿಕ್ಕು, ಸಮರಾಶಿ, ಸ್ರೀರಾಶಿ, ಚೇಳು ಚಿಹ್ನೆಯನ್ನು ಹೊಂದಿರುವುದರಿಂದ ಕೀಟ ರಾಶಿ, ಶಿರೋದಯರಾಶಿ, ಬಿಳಿ ಮಿಶ್ರಿತ ಹಳದಿ ಅಥವಾ ಬಂಗಾರ ಬಣ್ಣ, ಜಲತತ್ವರಾಶಿ, ಗುಪ್ತರಾಶಿ, ಕಫ ಪ್ರಕೃತಿ, ಕಲಿಯುಗರಾಶಿ, ಮೂಲರಾಶಿ, ಸ್ಥಿತಿರಾಶಿ, ಧಾರಣ ಶಕ್ತಿಯ ರಾಶಿ, ಈ ರಾಶಿಯು ಕುಜನ ಅಧಿಪಠ್ಯಕ್ಕೊಳಪಟ್ಟಿದ್ದು, ಈ ರಾಶಿಯ 3° ಯಲ್ಲಿ ಚಂದ್ರನು ಪರಮನೀಚನಾಗುತ್ತಾನೆ, ಬಿಲಗಳು, ನೀರು, ಕೆರೆ, ಕಾಲುವೆ, ಹಳೆ ಕಟ್ಟಡಗಳು, ಪೊಟರೆ, ಆಳವಾದ ರಂಧ್ರಗಳು ವಾಸಸ್ಥಾನವಾಗಿದೆ. ಬಹು ಸ್ರೀಸಂಗ, ಸೌಮ್ಯ, ಕಫಪ್ರಕೃತಿ, ರಾತ್ರಿಬಲ, ಭೋಧಕವರ್ಗ, ಹೆಣ್ಣುಜಾತಿ, ಬಹುಸಂತತಿ ಉಳ್ಳವರು, ಈ ರಾಶಿಯು ಆಯುಸ್ತಾನ. ವ್ಯಾಧಿಗ್ರಸ್ತರಾಶಿ, ರಜೋಗುಣ, ಅಧಿಕ ಶತ್ರುಗಳು, ಗುಪ್ತವಾದ ಪಾಪಚಾರಣೆ ಉಳ್ಳರಾಶಿ, ಬಹು ಎತ್ತರದ ರಾಶಿ, ಅಫಘಾತಗಳನ್ನು ಸೂಚಿಸುತ್ತದೆ, ಶೀಘ್ರಕೋಪಯುಳ್ಳವರು, ವೈದ್ಯ, ಪೊಲೀಸ್, ಕೆಲಸವನ್ನು ಸೂಚಿಸುತ್ತದೆ, ಸಟ್ಟ-- ಲಾಟರಿಯಲ್ಲಿ ಆಕಸ್ಮಿಕ ಧನಯೋಗವನ್ನು ಉಂಟುಮಾಡುವ ರಾಶಿ.
ಧನಸ್ಸು :--- ರಾಶಿಚಕ್ರದಲ್ಲಿ ಒಂಬತ್ತ ನೆಯದಾಗಿದ್ದು , ಈ ರಾಶಿಯು ಕಾಲಪುರುಷ ನ ತೊಡೆಗಳನ್ನು ಸೂಚಿಸುತ್ತದೆ. ಇದು ಭಾಗ್ಯಾರಾಶಿ, ರಾಶಿ ಚಕ್ರದಲ್ಲಿ ಇದರ ವ್ಯಾಪ್ತಿಯು 240° ಇಂದ 270° ಯಾಗಿದೆ. ಈ ರಾಶಿಯ ಚಿಹ್ನೆಯು ಬಿಲ್ಲು ಬಾಣ , ಪೂರ್ವಾರ್ಧದಲ್ಲಿ ಕುದುರೆ ಹಾಗೂ ಉತ್ತರಾರ್ಧವು ಬಾಣ ಹಿಡಿದ ಮನುಷ್ಯನ ಆಕಾರವನ್ನು ಸೂಚಿಸುತ್ತದೆ. ಇದು ದ್ವಿಸ್ವಭಾವ ರಾಶಿ, ಪಿತ್ತಪ್ರಕೃತಿ, ಅಗ್ನಿತತ್ವ, ಪೂರ್ವದಿಕ್ಕು, ಕ್ಷತ್ರಿಯ ಜಾತಿ, ಹಗಲಿನಲ್ಲಿ ಬಲ, ಬಂಗಾರದ ಬಣ್ಣ, ಪೃಷ್ಟೋದಯ ರಾಶಿ, ಜೀವರಾಶಿ, ಲಯರಾಶಿ, ಮೊದಲ 15° ಗ್ರಹಣ ಹಾಗೂ ಎರಡನೆಯ 15° ಧಾರಣ ಶಕ್ತಿಯನ್ನು ಹೊಂದಿದೆ ಈ ರಾಶ್ಯಾಧಿಪತಿಯು ಗುರು ಗ್ರಹವಾಗಿದ್ದು, ಇಲ್ಲಿ ಮೂಲತ್ರಿಕೋಣಾಧಿಪತ್ಯವನ್ನು ಹೊಂದಿದೆ. ನ್ಯಾಯಸ್ಥಾನ, ಕೋಟೆ ಕೊತ್ತಲಗಳು, ರಾಜ ಸಭಾಂಗಣ ಯುದ್ಧಭೂಮಿ, ದೊಡ್ಡ ಮೈದಾನಗಳು ಈ ರಾಶಿಯ ವಾಸಸ್ಥಾನವಾಗಿದೆ, ಅತಿಶಬ್ದ, ಉಗ್ರತ್ವ, ಅಧಿಕಾರವರ್ಗ, ಎತ್ತರವಾದ ಆಕಾರ, ಸಮರಾಶಿ, ಭವಿಷ್ಯ ಸೂಚಕರಾಶಿ, ಸರಳ ಜೀವನ , ಸೌಜನ್ಯಾತ್ಮಕ ರಾಶಿ, ಅತಿ ಧೀರ್ಘವಾದ ಮುಖ ಜ್ಞಾನ ಭಂಡಾರದ ರಾಶಿ, ಮಂತ್ರ ಶಾಸ್ತ್ರ, ಪಿತೃಸ್ಥಾನ, ಶಾಂತಗುಣ, ದೈವಿಕ ವಿಚಾರದಲ್ಲಿ ಆಸಕ್ತಿ, ಧೃಢವಾದ ನಂಬಿಕೆ, ಈ ರಾಶಿಯು ಲಗ್ನವಾದಾಗ ಅಥವಾ ದಶಮ ಸ್ಥಾನವಾದಾಗ ಬಲಯುತವಾಗಿರುತ್ತದೆ.
ಮಕರ :--- ರಾಶಿ ಚಕ್ರದಲ್ಲಿ ಹತ್ತನೆಯ ರಾಶಿಯಾಗಿದ್ದು, ಕಾಲಪುರುಷ ನ ಮೊಣಕಾಲ ನ್ನು ಸೂಚಿಸುತ್ತದೆ, ಮೊಸಳೆ ಇದರ ಚಿನ್ಹೆ, ಪೃಷ್ಟೋದಯ ರಾಶಿ, ಸಮರಾಶಿ, ಸ್ರೀರಾಶಿ, ಶೂದ್ರಜಾತಿ, ಧಾತುರಾಶಿ, ತ್ರೇತಾಯುಗ ರಾಶಿ, ಸೃಸ್ಟಿರಾಶಿ, ಗ್ರಹನಾಶಕ್ತಿಯ ರಾಶಿ, ದಕ್ಷಿಣಾದಿಕ್ಕು, ತಮೋಗುಣ ಪ್ರಧಾನ. ವಾತ ಹಾಗೂ ಶೀತ ಪ್ರಕೃತಿ, ಪೂರ್ಣ ಜಲತತ್ವ, ಸಂಧರ್ಭಿಕ ವಾಗಿ ಭೂತತ್ವ, ಬಿಳಿಬಣ್ಣ, ಜಲಪಾತ, ನದೀತೀರದಲ್ಲಿರುವ ಬೆಟ್ಟಗುಡ್ಡಗಳ, ಇಳಿಜಾರು ಪ್ರದೇಶ ವಾಸಸ್ಥಾನವಾಗಿದೆ. ಇದು ರಾತ್ರಿಯಲ್ಲಿ ಬಲಿಷ್ಟ, ಈ ರಾಶಿಯ ವ್ಯಾಪ್ತಿಯು ಭಚಕ್ರದ ಲ್ಲಿ 270° ಇಂದ 300° ಯಾಗಿದೆ, ಈ ರಾಶಿಯ ಅಧಿಪತಿ ಶನಿಮಹಾರಾಜ್, ಈ ರಾಶಿಯಲ್ಲಿ, ಕುಜನಿಗೆ 28°ಯಲ್ಲಿ ಉಚ್ಚ ಕ್ಷೇತ್ರವಾಗಿದ್ದು, 5°ಯಲ್ಲಿ ಗುರುವಿಗೆ ನೀಚಕ್ಷೇತ್ರವಾಗಿದೆ.
ಕುಂಭ :--- ಇದು ರಾಶಿಚಕ್ರದ ಹನ್ನೊಂದನೆಯ ರಾಶಿ, ಕಾಲಪುರುಷ ನ ಕಣಕಾಲ ನ್ನು ಸೂಚಿಸುವುದರೊಂದಿಗೆ ಲಾಭಸ್ಥಾನವನ್ನು ಸೂಚಿಸುತ್ತದೆ. ಇದರ ವ್ಯಾಪ್ತಿಯು, 300° ಇಂದ 330° ವರೆಗೆ ವ್ಯಾಪಿಸಿದೆ, ಈ ರಾಶಿಯ ಚಿನ್ಹೆ ಕೊಡವನ್ನು ಹೊತ್ತ ಮನುಷ್ಯನ ಆಕಾರ, ಬೆಸರಾಶಿ, ಪುರುಷರಾಶಿ,, ವೈಶ್ಯಜಾತಿ, ವಾಯುತತ್ವರಾಶಿ, ಸ್ಥಿರರಾಶಿ, ನರರಾಶಿ, ಪಶ್ಚಿಮದಿಕ್ಕು , ಅರ್ಧಜಲರಾಶಿ, ಸ್ಥಿತಿರಾಶಿ, ದ್ವಾಪರ್ಯುಗರಾಶಿ, ಧಾರಣಶಕ್ತಿ, ಚರಣಹೀನ, ಉಷ್ಣದೇಹ, ಹಗಲು ಬಲ, ತ್ರಿದೋಷ, ಶಿರೋದಯರಾಶಿ, ಮಿಶ್ರಬಣ್ಣ (ಕಪ್ಪು ಹಾಗೂ ಕೆಂಪು ಮಿಶ್ರ), ಶುಭಫಲಿತಾಂಶ, ವಕ್ರಾಕಾರ, ವರ್ತಮಾನ ಸೂಚಕರಾಶಿ, ಕುಂಬಾರರು, ಮಡಿಕೆ ಮಾಡುವ ಜಾಗ, ಸನ್ಯಾಸಿಗಳು, ಮರಗಳು, ತಪಸ್ವಿಗಳಿರುವ ಜಾಗ, ಮೂಲರಾಶಿ, ಈ ರಾಶಿಗೆ ಅಧಿಪತಿ, ಶನಿಮಹಾರಾಜ್ ಮತ್ತು ಶನಿಯು ಈ ರಾಶಿಯಲ್ಲಿ, ಮೂಲತ್ರಿಕೋಣಾಧಿಪತ್ಯ ವನ್ನು ಹೊಂದಿರುತ್ತಾರೆ. ಈ ರಾಶಿಯಲ್ಲಿ ಯಾವ ಗ್ರಹವೂ ಉಚ್ಚ ನೀ ಚತ್ವವನ್ನು ಹೊಂದಿರುವುದಿಲ್ಲ.
ಮೀನ :--- ರಾಶಿಚಕ್ರದ ಹನ್ನೆರಡನೆಯ ಹಾಗೂ ಕೊನೆಯ ರಾಶಿ, ಕಾಲಪುರುಷ ನ ಪಾದವನ್ನು ಸೂಚಿಸುತ್ತದೆ, ಹಾಗೂ ವ್ಯಯಸ್ಥಾನವಾಗಿದೆ. ಉತ್ತರದಿಕ್ಕು, ದ್ವಿಸ್ವಭಾವರಾಶಿ, ಜಲತತ್ವ, ಸಮರಾಶಿ, ಸ್ರೀರಾಶಿ, ಜೀವರಾಶಿ, ಲಯರಾಶಿ, ಕಲಿಯುಗದ ರಾಶಿ, ಮೊದಲ ಅರ್ಧ 15° ಧಾರಣ , ಉಳಿದ 15° ಗ್ರಹಣ ಶಕ್ತಿಯನ್ನು ಹೊಂದಿದೆ. ಇದು ಉಭಯೋದಯ ರಾಶಿ, ರಾಶಿ ಚಕ್ರದಲ್ಲಿ, ಇದು330° ಇಂದ 360 ° ವರೆಗೆ ವ್ಯಾಪಿಸಿದೆ. ರಾತ್ರಿ ಬಲಯುತ ರಾಶಿ, ಶೀತ ಹಾಗೂ ಕಫ ಪ್ರಕೃತಿ, ಬ್ರಾಹ್ಮಣ ಜಾತಿ, ಹಳದಿ ಮಿಶ್ರಿತ ಬಿಳಿ ಬಣ್ಣ, ಋಕ್ಷ ಸಂಧಿ ರಾಶಿ, ಪುಣ್ಯಸ್ಥಳ, ನದಿ ಸಮುದ್ರ, ರಾತ್ರಿ ಬಲ, ಕುಬ್ಜಕಾರ, ಭೋಧಕವರ್ಗ, ಭವಿಷ್ಯ ಸೂಚಕ ರಾಶಿ, ಮೋಕ್ಷಸ್ಥಾನ, ಈ ರಾಶಿಯ ಸ್ವರೂಪವು, ಎರಡು ಮೀನುಗಳು, ಒಂದರ ಬಾಯಲ್ಲಿ ಇನ್ನೊಂದರ ಬಾಲ ಇರುವಂತೆ ಕಾಣುತ್ತದೆ. ಸ್ವಭಾವತಃ ಮೃದುರಾಶಿ, ಸೌಜನ್ಯಾತ್ಮಕ ರಾಶಿ, ಶಾಸ್ತ್ರದಲ್ಲಿ ಆಸಕ್ತಿ, ಈ ರಾಶಿಗೆ ಅಧಿಪತಿ ದೇವಗುರು, ಈ ರಾಶಿಯಲ್ಲಿ ಶುಕ್ರನಿಗೆ 27° ಯಲ್ಲಿ ಪರಾಮೋಚ್ಛಸ್ತಾನ, ಹಾಗೂ ಬುಧನಿಗೆ 15°ಯಲ್ಲಿ ಪರಮ ನೀಚಸ್ತಾನವಾಗಿದೆ, ಈ ರಾಶಿಯ ವಾಸಸ್ಥಾನವು ಪುಣ್ಯಕ್ಷೇತ್ರ, ನದೀತತೀರ, ದೇವಾಲಯ, ಸಾಗರ ಸಮುದ್ರ ವಾಗಿದೆ.
✍ ಡಾ. ಶೈಲಜಾ ರಮೇಶ್.
ಮುಂದುವರೆಯುವುದು..............
ವಿವರಣೆ ಉತ್ತಮವಾಗಿದೆ
ReplyDeleteಒಂದು ಅತ್ಯುತ್ತಮ ಪ್ರಯತ್ನ, ಶುಭವಾಗಲಿ
ReplyDelete