Friday, 28 April 2017

ರಾಶಿಗಳ ಗುಣಧರ್ಮಗಳು (ಮುಂದುವರೆದ ಭಾಗ)

                            : ಹರಿಃ  ಓಂ
                   ಶ್ರೀ  ಗುರುಭ್ಯೋ ನಮಃ
             ಶ್ರೀ  ಮಹಗಣಪತಯೇ  ನಮಃ
ಮುಂದುವರೆದ  ಭಾಗ..........
--: ರಾಶಿ ಕುಂಡಲಿಯ  ವಿಶೇಷ  ಸ್ಥಾನಗಳು :--
ರಾಶಿ  ಕುಂಡಲಿಯು  ಹೊಂದಿರುವ  ವಿಶೇಷ  ಸ್ಥಾನಗಳು,  ಜ್ಯೋತಿಷ್ಯದಲ್ಲಿ  ಅವುಗಳ  ಪಾರಿಭಾಷಿಕ ಹೆಸರುಗಳು,  ಮತ್ತು  ಅವುಗಳ  ವಿಶೇಷತೆಯನ್ನು  ತಿಳಿಯುವುದು  ಅತ್ಯವಶ್ಯಕ.
ಅವುಗಳೆಂದರೆ............
ಕೇಂದ್ರ ಸ್ಥಾನಗಳು  --  1, 4, 7, 10
ಫಣಫರ                 --  ೨, 5, ೮, 11
ಅಪೋಕ್ಲಿಮ.          --   3, 6, 9, 12
ಉಪಚಯ.            --   3, 6, 10,11
ಧರ್ಮ ತ್ರಿಕೋಣ.   --   1  5, 9
ಅರ್ಥ  ತ್ರಿಕೋಣ    --   2,  6,  10
ಕಾಮ  ತ್ರಿಕೋಣ.   --   3,  7,  11
ಮೋಕ್ಷ  ತ್ರಿಕೋಣ  --   4,  8,  12
ದುಃಸ್ಥಾನಗಳು        --   ೬ , ೮,  12
ಮಾರಕ  ಸ್ಥಾನಗಳು --   2,  7
ಆಯುಸ್ತಾನಗಳು      --   3,  8
ಚತುರಸ್ರಗಳು.         --  4, 8
ಮತ್ತು   ಭಾಧಕ  ಸ್ಥಾನಗಳು.

ಕೇಂದ್ರ ಸ್ಥಾನಗಳು  :-- 1, 4, 7, 10
    ಇವುಗಳನ್ನು  ಕಂಟಕ  ಸ್ಥಾನಗಳು  ಎಂದೂ  ಕರೆಯುತ್ತಾರೆ.
     ಜಾತಕದಲ್ಲಿನ  ಕೇಂದ್ರ  ಸ್ಥಾನಗಳು  ಜಾಟಕನ  ಗುಣ ಮಟ್ಟವನ್ನು  ನಿರ್ಧರಿಸುತ್ತದೆ,  ಇವು  ಒಂದಕ್ಕಿಂತ ಒಂದು  ಬಲಿಷ್ಠವಾಗಿವೆ.  ಒಂದನೇ  ಸ್ಥಾನವು  ಜಾತಕ ನ  ಹುಟ್ಟು,  ಆರೋಗ್ಯ, ರೂಪ  ಗೌರವ  ಇತ್ಯಾದಿಗಳನ್ನು  ನಿರ್ಧರಿಸಿದರೆ,  ಚತುರ್ಥವು  ವಿದ್ಯೆ,  ಸುಖ,  ವಾಹನ,  ಭೂಮಿ...
ಸಪ್ತಮವು  ಎಲ್ಲಾ ರೀತಿಯಾದ  ವ್ಯವಹಾರ,  ಜೀವನ  ಸಂಗಾತಿ...
ದಶಮ  ಕೇಂದ್ರವು  ಅತ್ಯಂತ  ಬಲಯುತವಾದದ್ದು  ಇದು  ಕರ್ಮಗಳು,   ಅಧಿಕಾರ,  ಸನ್ಮಾನವನ್ನು  ನಿರ್ಧರಿಸುತ್ತೆ.
     ಕೇಂದ್ರ  ಸ್ಥಾನದಲ್ಲಿ ಶುಭ  ಗ್ರಹಗಳಿದ್ದರೆ  ಜಾತಕ ವು  ಬಲಿಷ್ಠವಾಗಿರುತ್ತದೆ,  ಕೇಂದ್ರ  ಸ್ಥಾನದ  ಫಲದಿಂದಾಗಿ  ಬಾಲ್ಯದಿಂದಲೇ  ಜಾತಕನನ್ನು  ಅಭಿವೃದ್ಧಿಗೆ  ತರುತ್ತದೆ.  ಗ್ರಹಗಳ  ಬಲಾಬಲಗಳಿಗೆ  ಅನುಸಾರವಾಗಿ  ಜಾತಕನ  ಯೌವನದ ವರೆಗೆ  ಶುಭಾಶುಭ  ಫಲಗಳನ್ನು  ಕೊಡುತ್ತದೆ.
ಫಣಫರ  ಸ್ಥಾನಗಳು :-- ೨,  ೫,  ೮, ೧೧
     ಫಣಫರ ವು  ಜೀವನದ  ಮಧ್ಯಭಾಗದಲ್ಲಿ  ಫಲವನ್ನು  ಕೊಡುತ್ತದೆ,  ಈ  ಸ್ಥಾನಗಳು  ಮಧ್ಯಮ ಬಲವನ್ನು  ಹೊಂದಿದೆ.  ಜೀವನದಲ್ಲಿನ  ಏರುಪೇರುಗಳು  ಸೂಚಿಸುತ್ತದೆ.  ಧನಸಂಪತ್ ನ್ನು ಸೂಚಿಸುವ  ಎರಡನೇ  ಭಾವ,  ಬುದ್ಧಿ ಹಾಗೂ  ಪೂರ್ವಪುಣ್ಯವನ್ನು  ಸೂಚಿಸುವ  ಪಂಚಮಭಾವ,  ಸಂಪತ್ತಿ ನಲ್ಲಾಗುವ  ಏರುಪೇರನ್ನು  ಆಯುಪ್ರಮಾಣವನ್ನು  ಸೂಚಿಸುವ  ಅಷ್ಟಮ ಭಾವ,  ಇವುಗಳಿಂದ  ಉಂಟಾಗುವ  ಲಾಭಗಳನ್ನು ಏಕಾದಶ  ಸ್ಥಾನವು  ಪ್ರತಿನಿಧಿಸುತ್ತದೆ.
ಅಪೋಕ್ಲಿಮ :--  3,  6,  9,  12
ಅಪೋಕ್ಲಿಮ  ಎಂದರೆ  ಬಲವಿಲ್ಲದ್ದು  ಎಂದರ್ಥ.  ಆದ್ದರಿಂದ  ಈ  ಸ್ಥಾನಗಳು  ಯಾವುದೇ ರೀತಿಯಿಂದಲೂ  ಅನುಕೂಲವನ್ನುಂಟು  ಮಾಡುವುದಿಲ್ಲ.  ಈ  ಸ್ಥಾನದಲ್ಲಿರುವ  ಗ್ರಹಗಳು ಸಹ  ನಿರ್ಭಲರಾಗಿರುತ್ತಾರೆ.   ಇವುಗಳ  ಫಲಗಳು  ಜೀವನದ  ಅಂತ್ಯ  ಭಾಗದಲ್ಲಿ  ಅನುಭವಕ್ಕೆ  ಬರುತ್ತದೆ.  3 ನೆ  ಭಾವವು ಪ್ರಯತ್ನ  ಮತ್ತು  ಏಳಿಗೆಯನ್ನು  ಸೂಚಿಸುತ್ತದೆ.   6ನೇ  ಭಾವವು ಕರ್ಮ ಸ್ಥಾನಕ್ಕೆ  ಭಾಗ್ಯಭಾವವಾಗಿದೆ.  ಭಾಗ್ಯಭಾವವು  ಪುಣ್ಯವನ್ನು  ಸೂಚಿಸುತ್ತದೆ,  ವ್ಯಯಭಾವವು  ಮೋಕ್ಷವನ್ನು  ಸೂಚಿಸುತ್ತದೆ.
ಉಪಚಯ :--  3,  6,  10,  11
ಉಪಚಯವೆಂದರೆ  ಬೆಂಬಲ,  ಜಾತಕನು  ಹಿಡಿದ  ಕೆಲಸಕ್ಕೆ,  ಅಥವಾ  ಅಭಿವೃದ್ಧಿ  ಹೊಂದುವುದಕ್ಕೆ  ಒದಗುವ  ಎಲ್ಲಾ  ರೀತಿಯ  ಬೆಂಬಲವನ್ನು  ಈ  ಉಪಚಯ  ಸ್ಥಾನವು  ಸೂಚಿಸುತ್ತದೇ.
3 -  ಧೈರ್ಯ  ಸ್ಥೈರ್ಯ,  6 -  ಬೆಂಬಲ,  10 -   ಕರ್ಮಸ್ಥಾನದಲ್ಲಿ  ಏಳಿಗೆ,   ಇವುಗಳಿಂದ  ಪಡೆಯುವ  ಲಾಭವನ್ನು  11  ಸೂಚಿಸುತ್ತದೆ.   ಈ  ಸ್ಥಾನಗಳೆಲ್ಲವೂ  ಜಾಟಕನ  ಜೀವನದಲ್ಲಿ  ಏಳಿಗೆಯನ್ನು  ಉಂಟುಮಾಡುತ್ತವೆ,  ಜಾತಕನ  ಅಭಿವೃದ್ಶಿ  ಹಾಗೂ  ಬೆಂಬಲವೇ  ಈ. ಸ್ಥಾನಗಳ  ಮೂಲಮಂತ್ರವಾದ್ದರಿಂದ  ಗ್ರಹಗಳು  ಶುಭಾಶುಭ  ಬೇಧವಿಲ್ಲದೇ  ಸಹಕರಿಸುತ್ತದೆ.  ತೃತೀಯ  ಹಾಗೂ ಷಷ್ಟ  ಸ್ಥಾನವು ಅಶುಭ  ಫಲವನ್ನು,  ದಶಮ  ಹಾಗೂ  ಏಕಾದಶ  ಸ್ಥಾನವು  ಶುಭ  ಫಲವನ್ನು  ನೀ ಡುತ್ತದೆ.  3,  6 ರಲ್ಲಿ  ಸ್ಥಿತರಾದ  ಶುಭಗ್ರಹಗಳು  ಮಿಶ್ರಫಲವನ್ನು,  ಪಾಪ ಗ್ರಹಗಳು  ಶುಭಫಲವನ್ನು  ನೀಡುತ್ತಾರೆ.
ತ್ರಿಕೋಣಗಳು :--
1 ,  ೫,  9, ------ಧರ್ಮ  ತ್ರಿಕೋಣ
2,  6,  10,------ಅರ್ಥ  ತ್ರಿಕೋಣ
3,  7,  11 ------ ಕಾಮ ತ್ರಿಕೋಣ
4,  8,  12 ------ಮೋಕ್ಷ  ತ್ರಿಕೋಣ
ತ್ರಿಕೋಣಗಳು  ಜಾತಕನ  ಜ್ಞಾನ  ವಿಶೇಷತೆಯನ್ನು  ತಿಳಿಸುತ್ತದೆ.
    ಪೂರ್ವ ಪುಣ್ಯವಾದ  ಪಂಚಮವು  ಇಹದ  ಸುಖವನ್ನು,  ನವಮವು  ಭಾಗ್ಯ  ಸ್ಥಾನವಾಗಿದ್ದು  ಪರದಲ್ಲಿನ  ಸದ್ಗತಿಯನ್ನು  ತಿಳಿಸುತ್ತದೆ.  ಇದು  ಪೂರ್ಣ ಬಲವುಳ್ಳ  ತ್ರಿಕೋನವಾಗಿದೆ.   ಭಾವಾಧಿಪತಿಗಳು  ಬಲಿಷ್ಠವಾಗಿದ್ದರೆ  ಜಾತಕನು  ಉತ್ತಮವಾದ  ಜೀವನವನ್ನು  ಸಾಗಿಸುತ್ತಾನೆ,  ಇದು  ಜೀವನ ಪರ್ಯಂತ   ಮುಂದುವರೆಯುತ್ತದೆ.
ಧರ್ಮ,  ಅರ್ಥ,  ಕಾಮ,  ಮೋಕ್ಷ......  ಹೆಸರೇ  ಸೂಚಿಸುವಂತೆ  ಸ್ಥಿತಗ್ರಹರ  ಬಲಾಬಲದ ಮೇರೆಗೆ  ಜಾತಕನನ್ನು  ಧಾರ್ಮಿಕ,  ಜ್ಞಾನ,  ವಿನಯ,  ಸಾತ್ವಿಕತೆ,  ಧನ ಸಂಪನ್ನ,  ಬಯಸಿದ್ದೆಲ್ಲ  ಕೈಗೂಡುವುದು,  ಕಾರ್ಯ  ಕ್ಷೇತ್ರದಲ್ಲಿ  ಜಯ,  ಅತ್ಯುನ್ನತವಾದ  ದಾಂಪತ್ಯ  ಸುಖ, ವ್ಯವಹಾರದಲ್ಲಿ  ಜಯ,  ಧಾನಧರ್ಮ  ಬುದ್ಧಿ,  ತ್ಯಾಗ  ಮನೋಭಾವ,  ಜೀವನಾದ್ಯಂತದಲ್ಲಿ  ಸದ್ಗತಿ/ ಮೋಕ್ಷ...........  ಈ  ರೀತಿ  ತ್ರಿಕೋಣದಲ್ಲಿ  ಸ್ಥಿತರಾದ  ಗ್ರಹಗಳ  ಬಲಾಬಲದ  ಮೇರೆಗೆ  ಶುಭಾಶುಭಗಳು  ಲಭಿಸುತ್ತದೆ.
ದುಃಸ್ಥಾನ ಗಳು :--
     ದುಃಸ್ಥಾನವೆಂದು  ಜ್ಯೋತಿಷ್ಯದಲ್ಲಿ  ಪ್ರಖ್ಯಾತಿ  ಹೊಂದಿರುವ  6,  8,  12 ರ ಭಾವಗಳು  ಕ್ರಮವಾಗಿ 
   6 ರಿಂದ --  ರೋಗ,  ಋಣ,  ಶತೃ, ದಾರಿದ್ರ್ಯ,  ಅಪ ಮೃತ್ಯ್ ಯು, ಭಯ,  ಶೋಕ,  ಮನಸ್ತಾಪ ; 
   8ರಿಂದ --  ಸಾವು,  ಅಫಘಾತ,  ಸೆರೆವಾಸ,  ದುಃಖ, ವಿರೋಧ, ಅನವಶ್ಯಕ  ಚಿಂತೆ,  ರಂಧ್ರ ಸ್ಥಾನವಾದ್ದರಿಂದ  ಗುಪ್ತ ವಿಚಾರದಲ್ಲಿನ  ಭಾಧೆ ( ಪರರಿಗೆ  ಹೇಳಿಕೊಳ್ಳಲಾರದ  ಬಾಧೆ),
    12 ರಿಂದ  ಎಲ್ಲ  ಭಾವಗಳಿಂದಾಗುವ  ವ್ಯಯ,  ಮುಕ್ತಿ,  ವೈರಾಗ್ಯ,  ಬಂಧನ,  ಹಿಡಿದ ಕೆಲಸಗಳನ್ನು  ಸಾಧಿಸಲಾರದೆ  ಸೋಲುವುದು,  ವಿದೇಶವಾಸ,  ವಿಷಯ ಸುಖದಿಂದ ಬಂಧಿತರಾಗುವುದು/  ಮುಕ್ತಿ ದೊರೆಯುವುದು.
    ಅತಿ ಮುಖ್ಯವಾಗಿ  ಗಮನಿಸಬೇಕಾದ  ಅಂಶವೆಂದರೆ  8 ನೆ  ಸ್ಥಾನವು  ರಂಧ್ರ ಸ್ಥಾನವಾಗಿರುವುದರಿಂದ  ಅತ್ಯಂತ ದೋಷಯುಕ್ತವಾಗಿದೆ,  ಈ ದೆಸೆಯಲ್ಲಿ  ನೋಡಿದಾಗ 12 ನೆ  ಸ್ಥಾನವು 6 , 8, ಕ್ಕಿಂತ  ಕಡಿಮೆ  ದೋಷವನ್ನು  ಹೊಂದಿದೆ.  ಭಾವದಲ್ಲಿ  ಸ್ಥಿತ  ಗ್ರಹರ  ಬಲಾಬಲದ  ಮೇರೆಗೆ  ತೊಂದರೆಗಳಿಂದ  ಮುಕ್ತಿ  ಅಥವಾ ತೊಂದರೆಗೆ  ಸಿಲುಕುವುದು ಎಂಬುದನ್ನು  ತಿಳಿಯಬಹುದು.  8,  12  ರಲ್ಲಿ ಶುಭಗ್ರಹಗಳು  ಮಿಶ್ರ  ಫಲವನ್ನು,  ಪಾಪಗ್ರಹಗಳು  ಅಶುಭ ಫಲವನ್ನು  ನೀಡುತ್ತಾರೆ.
   6,  8,  12,  ರ  ಈ  ದುಃಸ್ಥಾನ ದ  ವಿಷಯದಲ್ಲಿ  ""ವಿಪರೀತ  ರಾಜಯೋಗ "" ಎಂಬ  ಒಂದು  ಯೋಗದ  ಮಾತು  ಕೇಳಿಬರುತ್ತದೆ.  ಒಂದು  ದುಃಸ್ಥಾನಧಿಪತಿಯು  ಇನ್ನೊಂದು  ದುಃಸ್ಥಾನ ದಲ್ಲಿ  ಸ್ಥಿತನಾದಾಗ  ಈ  ವಿಪರೀತ  ರಾಜಯೋಗ  ಉಂಟಾಗುತ್ತದೆ.  ಈ  ಯೋಗದಿಂದ  ದೀರ್ಘಕಾಲೀನ  ರೋಗವು  ಗುಣಮುಖವಾಗುವುದು,  ಬಯಸದೇ  ಭಾಗ್ಯ  ಪ್ರಾಪ್ತಿ,  ಆಕಸ್ಮಿಕ  ಧನಲಾಭ,  ಪರರಿಂದ  ಅನುಕೂಲ,  ಜೀವವಿಮಾದಂತಹ  ಮೂಲಗಳಿಂದ  ಧನಪ್ರಾಪ್ತಿ,  ಧಿಡೀರ್  ವಿದೇಶ ಪ್ರಯಾಣ , ಧೀರ್ಘ ಕಾಲದ  ತೊಂದರೆಗಳಿಂದ  ಮುಕ್ತಿ, ಇವೆಲ್ಲಾ  ವಿಪರೀತ  ರಾಜಯೋಗವನ್ನುಂಟು  ಮಾಡುವ ಗ್ರಹದ  ದಶಾ  ಅವಧಿಯಲ್ಲಿ  ನಡೆಯುತ್ತದೆ.  ಈ  ಫಲವು  ಒಂದು  ರೀತಿ  ಮರಳು ಗಾಡಿನ  ಓಯಸಿಸ್ ಇದ್ದಂತೆ.
ಮಾರಕ  ಸ್ಥಾನಗಳು :-  2,  7,
     ಮಾರಕ  ಸ್ಥಾನಗಳು  ಮರಣಕ್ಕೆ  ಕಾರಣವನ್ನು  ನಿರ್ಣಯಿಸುತ್ತದೆ.  2ನೆ ಸ್ಥಾನವು  ಧನ,  ಕುಟುಂಬ ಸ್ಥಾನವಾಗಿದ್ದು,  ಆಹಾರ ಸೇವನೆ ಯನ್ನು  ಸಹ ಸೂಚಿಸುತ್ತದೇ.  7 ನೆ  ಸ್ಥಾನವು  ಕಲತ್ರ ಹಾಗೂ  ಎಲ್ಲಾ ರೀತಿಯ  ವ್ಯವಹಾರ ವನ್ನು  ಸೂಚಿಸುತ್ತದೆ,  ಈ. ಭಾವಗಳಲ್ಲಿ  ಸ್ಥಿತರಾಗಿರುವ  ಗ್ರಹಗಳ  ಭಲಾಢ್ಯ ತೆಯ  ಮೇರೆಗೆ ಶುಭಾಶುಭ  ಫಲಗಳು  ಅನುಭವಕ್ಕೆ  ಬರುತ್ತದೆ.  ಕಲತ್ರ ಭಾವಕ್ಕೆ ( 7ನೇ ಭಾವಕ್ಕೆ )  2 ನೆ ಭಾವವು  ಆಯುಸ್ಥಾನ ವಾಗುತ್ತದೆ,  8ನೆ  ಸ್ಥಾನವು  ಜಾತ ಕನ  ಆಯುಸ್ತಾನವಾಗಿದೆ,  ಹಾಗೆಯೇ 3  ನೆ  ಸ್ಥಾನವು  ಅಷ್ಟಮಕ್ಕೆ,  ಅಷ್ಟ ಮ  ಸ್ಥಾನವಾಗಿದೆ (ಅಷ್ಟಮಾತ್  ಅಷ್ಟಮ)  .  8 ರಿಂದ ವ್ಯಯಸ್ಥಾನ 7 ನೆ  ಭಾವ,  ಹಾಗೆಯೇ 3  ರಿಂದ ವ್ಯಯಸ್ಥಾನ  2 ನೆ  ಭಾವ ಆದ್ದರಿಂದ  2,  7,  ಮಾರಕ  ಸ್ಥಾನವಾಗಿದೆ.
ಆಯುಸ್ಥಾನ :-- 3,  8
    
     ಈ ಭಾವಗಳು  ಜೀವಿಯ  ಅಂತ್ಯದ  ವಿಚಾರವನ್ನು  ಹೇಳುತ್ತದೆ.   ಅಂದರೆ  ಮರಣಕ್ಕೆ  ಕಾರಣ  ಹಾಗೂ  ಮರಣದ  ಸ್ವರೂಪವನ್ನು  ತಿಳಿಸುತ್ತದೆ.  ಮೂರನೇ  ಸ್ಥಾನವು  ಮರಣ  ಸ್ಥಾನವಾದ  ಅಷ್ಟಮ  ಭಾವಕ್ಕೆ  ಅಷ್ಟಮ  ಸ್ಥಾನವಾಗುತ್ತೆ,  ಇದು  ಉಪ  ಆಯುಸ್ಥಾನ,  ಜಾತಕರಿಗೆ  ಆಕಸ್ಮಿಕವಾಗಿ  ಎದುರಾಗುವ  ರೋಗ,  ಅಫಘಾತಗಳು,  ವೈ ಮನಸ್ಯ ,  ದೇಹಕ್ಕಾಗುವ  ನೋವುಗಳನ್ನು  ಸೂಚಿಸುತ್ತದೆ.   ಮೂರನೇ  ಸ್ಥಾನವು  ಕಿವಿ  ಹಾಗೂ  ಬಾಹುಗಳನ್ನು  ಸೂಚಿಸುವುದರಿಂದ,  ಕಿವಿಯ  ಸಮಸ್ಯೆ  ಬಲಹೀನತೆ/  ಭುಜಬಲವನ್ನು  ತೋರಿಸುತ್ತದೆ.
ಚತುರಸ್ರಗಳು :--  4,  8
ಈ  ಭಾವದಲ್ಲಿ  ಸ್ಥಿತರಾಗಿರುವ  ಗ್ರಹಗಳು  ಜಾತಕನ  ಸುಖ - ದುಃಖ ಕ್ಕೆ  ಸಂಬಂಧಿಸಿದಂತೆ  ಮಿಶ್ರಫಲವನ್ನು  ನೀಡುತ್ತದೆ.  4  ನೇ  ಸ್ಥಾನವು  ಸುಖಸ್ಥಾನ ಹಾಗೂ  8 ನೇ  ಸ್ಥಾನವು  ಮರಣ / ಆಯುಸ್ತಾನವಾಗಿದೆ.  ಈ  ಸ್ಥಾನದಲ್ಲಿ  ಸ್ಥಿತರಾದ  ಶುಭ / ಪಾಪ ಗ್ರಹಗಳ  ಬಲಾಬಲದ  ಮೇರೆಗೆ  ಜಾತಕನಿಗೆ ನೆಮ್ಮದಿ,  ಸೌಖ್ಯ,  ಧನ,  ವಸ್ತು  ವಾಹನ,  ಪಿತ್ರಾರ್ಜಿತವಾದ  ಆಸ್ತಿ,  ಅಂತಸ್ತುಗಳನ್ನು  ಕೊಡುತ್ತದೆ. ಪಾಪಗ್ರಹಗಳು  ಸ್ಥಿತರಾದರೆ  ಇದಕ್ಕೆ  ವಿರುದ್ಧ  ಫಲಗಳನ್ನು  ಕೊಡುತ್ತಾರೆ.
ಬಾಧಕ  ಸ್ಥಾನಗಳು  :-- 
ಚರ ರಾಶಿಗೆ. --  ಹನ್ನೊಂದನೇ  ಸ್ಥಾನ
ಸ್ಥಿರ  ರಾಶಿಗೆ --  ಒಂಬತ್ತನೇ  ಸ್ಥಾನ
ದ್ವಿಸ್ವಭಾವ  ರಾಶಿಗೆ --   ಏಳನೇ  ಸ್ಥಾನವು  ಬಾಧಕ  ಸ್ಥಾನವಾಗುತ್ತೆ.
✍ ಶೈಲಜಾ  ರಮೇಶ್...

1 comment:

  1. Very nice inputs of houses madam. The planets in respective houses gives results accordingly as said.

    ReplyDelete