Saturday, 8 April 2017

ಜ್ಯೋತಿಷ್ಯದ ಮೂಲಭೂತ ಅಂಶಗಳು

ಹರಿಃ  ಓಂ
ಶ್ರೀ  ಗುರುಭ್ಯೋ ನಮಃ
ಶ್ರೀ ಮಹಗಣಪತಯೇ ನಮಃ

ಜ್ಯೋತಿಷ್ಯದ  ಪ್ರೇರಣಾಂಶಗಳು
           ಆಕಾಶದಲ್ಲಿರುವ ಸೂರ್ಯ,  ಚಂದ್ರ,  ನಕ್ಷತ್ರ, ಗ್ರಹಗಳು,  ಇವು ಜ್ಯೋತಿಷ್ಯ  ಶಾಸ್ತ್ರಕ್ಕೆ  ಪ್ರೇರನೇಯನ್ನು  ನೀಡಿವೆ. ಹಗಲು-  ರಾತ್ರಿ,  ಋತುಗಳ  ಬದಲಾವಣೆ, ಅಮಾವಾಸ್ಯೆ,  ಹುಣ್ಣಿಮೆಗಳಲ್ಲಿ  ಚಂದ್ರನಲ್ಲಿ  ಆಗುವ  ಕ್ಷೀಣತೆ  ಹಾಗೂ  ವೃದ್ಧಿ,  ಗ್ರಹಣ  ಪಂಚಭೂತಗಳೂ ಇತ್ಯಾದಿಗಳ ಪ್ರಭಾವವು  ವಿಶ್ವದ  ಜೀವಕೋಟಿಯ ಮೇಲಾಗುತ್ತದೆ.  ಹಾಗಾಗಿ  ಖಗೋಳ  ಶಾಸ್ತ್ರದ  ಅದ್ಯಯನ ವೇ  ಜ್ಯೋತಿಷ್ಯ ಶಾಸ್ತ್ರಕ್ಕೆ  ಪ್ರಪ್ರಥಮವಾದ  ಬುನಾದಿ  ಅಥವಾ  ಅಡಿಪಾಯವೆಂದರೆ  ತಪ್ಪಾಗಲಾರದು.  ಪ್ರತಿಯೊಂದನ್ನು  ನಾವಿರುವ ಭೂಮಿಯನ್ನೇ   ಕೇಂದ್ರವಾಗಿಸಿಕೊಂಡು  ಅನುಭವಿಸುತ್ತೇವೆ.  ಮೇಲಿನ  ಎಲ್ಲಾ ರೀತಿಯ ಬಡಲಾವಣೆಗಳಿಗೂ ಭೂಮಿಯ  ಚಲನೆಯೇ  ಕಾರಣ. ಭೂಮಿಯು ಎರಡು  ರೀತಿಯಾದ  ಚಲನೆಯನ್ನು ಹೊಂದಿದೆ.  ಮೊದಲನೆಯದಾದ  ದೈನಂದಿನ  ಚಲನೆಯಿಂದ  ಹಗಲು  ರಾತ್ರಿಗಳಾದರೆ,  ಎರದನೆಯದಾದ  ವಾರ್ಷಿಕ  ಚಲನೆಯಿಂದಾಗಿ ಋತುಗಳೇ  ಮುಂತಾದ ಬದಲಾವಣೆಗಳಾಗುತ್ತವೆ.  ಭೂಮಿಯ  ಪ್ರಥಮ  ಆದ್ಯತೆ  ಸೂರ್ಯ  ಚಂದ್ರರು,  ಮುಂದು ವರಿದಂತೆ ಗ್ರಹ  ನಕ್ಷತ್ರಗಳು,  ಪ್ರತಿಯೊಂದು ಗ್ರಹವು ತನ್ನ  ಅಕ್ಷದ ಮೇಲೆ ಹಾಗೂ  ಸೂರ್ಯನ ಸುತ್ತ ಸುತ್ತುತ್ತಿರುತ್ತವೆ  ಎಂಬುವುದನ್ನು  ಗಮನಿಸಬೇಕು.
     ಋಗ್ವೇದದಲ್ಲಿ 720  ಗ್ರಹಗಳಿವೆ  ಎಂಬ  ಉಲ್ಲೇಖವಿದೆ.  ಆದರೆ ಭೂಮಿಯ ಮೇಲೆ  ಮಂಡಲ ಗ್ರಹಗಳಾದ  ರವಿ ,  ಚಂದ್ರ,  ತಾರಾಗ್ರಹಗಳಾದ  ಕುಜ,  ಬುಧ,  ಗುರು,  ಶುಕ್ರ,  ಶನಿ  ಹಾಗೂ ಛಾಯಾ  ಗ್ರಹಗಳಾದ ರಾಹು ಕೇತು ಗಳ ಪ್ತಭಾವವೆಷ್ಟೇ  ಆಗುತ್ತದೆ
           ಈ ಗ್ರಹಗಳೆಲ್ಲಾ ಸೂರ್ಯನಿನ್ದಲೇ  ಸಿಡಿದು ಬೇರಾಗಿರುವ  ಭಾಗಗಳೇ, ಎಲ್ಲ  ಗ್ರಹಗಳು ಸೂರ್ಯನ  ಗುರುತ್ವಾಕರ್ಷಣೆಗೆ  ಒಳಪಟ್ಟು, ಸೂರ್ಯನನ್ನೇ ಸುತ್ತುತ್ತದೆ, ಭೂಮಿಯೂ.ಸೂರ್ಯನ  ಅಂಶವೇ  ಆಗಿರುವುದರಿಂದ  ಈ ಗ್ರಹಗಳ  ಪರಿಣಾಮಗಳು ನಿಚ್ಚಲವಾಗಿರುತ್ತವೆ  ಎಂದು  ತಿಳಿಯಬೇಕು.
     ಜ್ಯೋತಿಷ್ಯದ  ಜೀವನಾಡಿ  ಇರುವುದೇ ಹನ್ನೆರಡು  ರಾಶಿ,  ಒಂಬತ್ತು  ಗ್ರಹಗಳು,  ಇಪ್ಪತ್ತೇಳು  ನಕ್ಷತ್ರಗಳಲ್ಲಿ,  ಯಾವುದೇ  ಶಾಸ್ತ್ರವನ್ನು  ಅಧ್ಯಯನ ಮಾಡಬೇಕಾದರು  ಮೊದಲು  ಆ  ಶಾಸ್ತ್ರದ  ಬಗೆಗಿನ ಪರಿಚಯ  ಅತ್ಯಾವಶ್ಯಕ.   ಈ  ನಿಟ್ಟಿನಲ್ಲಿ  ಮೊದಲು  ತಿಳಿದುಕೊಳ್ಳ  ಬೇಕಾಗಿರುವುದು   ಭಚಕ್ರದ  ಬಗೆಗೆ.
     ---: ಭಚಕ್ರ :---
ಕಾಂತಿವೃತ್ತ,  ಅರ್ಥಾತ್ ಸೂರ್ಯನ  ಪಥದ  ಎರಡೂ ಕಡೆಗಳಲ್ಲಿ  9° ಗಳಷ್ಟು ಹಬ್ಬಿರುವ  ಪಟ್ಟಿಗೆ  ಅಥವಾ  ವಲಯಕ್ಕೆ ಭಚಕ್ರ(zodiak) , ಜ್ಯೋತಿಶ್ಚಕ್ರ  ಎಂದು  ಹೆಸರು.   ಭಚಕ್ರದ ಉದ್ದಕ್ಕೂ  ನಡುವಿನ  ಭಾಗದಲ್ಲಿ  ಸೂರ್ಯನ  ಪಥವಾದ ಕಾಂತಿವೃತ್ತ  ಹರಿಯುತ್ತದೆ,  ಇದೊಂದು  ಕಾಲ್ಪನಿಕ  ವೃತ್ತವಾಗಿದ್ದು ಇದರ  ವ್ಯಾಪ್ತಿ 360° ಗಳಾಗಿರುತ್ತದೆ.   ಇದನ್ನು  12  ವಿಭಾಗಗಳಾಗಿ  ವಿಂಗಡಿಸಲಾಗಿದ್ದು  ಅವುಗಳನ್ನು  ರಾಶಿ  ಎಂದು  ಕರೆದಿದ್ದಾರೆ. ಪ್ರತಿ  ರಾಶಿಯ  ವ್ಯಾಪ್ತಿಯು   30°.  ಭಚಕ್ರವು  ಆದಿ  ಅಂತ್ಯಗಲಿಲ್ಲದ  ವೃತ್ತಕಾರ.  ಅಂತರವನ್ನು  ಕಂಡುಕೊಳ್ಳುವ  ದೃಷ್ಟಿಯಿಂದ  ಒಂದು  ನಿಗದಿತ  ಬಿಂದುವನ್ನು ಗುರುತಿಸ ಬೇಕಾಗುತ್ತದೆ.   ಈ  ಬಿಂದುಗಳೇ  ರಾಶಿಗಳು.  ಪ್ರತೊಯೊಂದು  ರಾಶಿಯ  ಗುಣಧರ್ಮವು  ಏಕಪ್ರಕಾರವಾಗಿಲ್ಲ.   ನಕ್ಷತ್ರ ಸಮೂಹಗಳು  ಕಂಡುಬರುವ  ಆಕೃತಿಯನ್ನು  ಆಧರಿಸಿ  ರಾಶಿಗಳನ್ನು  ಗುರುತಿಸಿದ್ದಾರೆ.  ಅವುವೇ   ಮೇಷ,   ವೃಷಭ...........
ಮುಂತಾದುವು ,  ರಾಶಿಗಳು  ಹೊಂದಿರುವ  ನಕ್ಷತ್ರಗಳಲ್ಲಿ  ವ್ಯತ್ಯಾಸವಿದ್ದರು,  ರಾಶಿಗಳ  ನಡುವೆ  ಅವಿನಾಭಾವ  ಸಂಬಂಧವಿದೆ  ಎಂಬುದು  ಗಮನಾರ್ಹ.   ಈ   ಭಚಕ್ರವು  ದಿನಕ್ಕೊಂದು  ಬಾರಿ ತನ್ನ  ಅಕ್ಷದ  ಮೇಲೆ  ಪೂರ್ವದಿಂದ ಪಶ್ಚಿಮಕ್ಕೆ  ತಿರುಗುತ್ತದೆ
ಸ್ಥಿರ ಮತ್ತು  ಚರ  ಭಚಕ್ರ :--

     ಮೇಷಾದಿಯು  ತನ್ನ  ಮೂಲ  ಸ್ಥಾನದಿಂದ..... ರೇವತಿ  ನಕ್ಷತ್ರದಿಂದ  ಹಿಂದಕ್ಕೆ  ಚಲಿಸುತ್ತದೆ  ಎಂಬುದನ್ನು  ಭಾರತೀಯ  ವಿಜ್ಞಾನಿಗಳು ಕಂಡುಕೊಂಡಿದ್ದರು. ವಿಷುವತ್  ಬಿಂದುವು  ಎಲ್ಲಿದ್ದರೆ  ಅಲ್ಲಿಂದ್ಲೇ  ಮೇಶವನ್ನೊಳಗೊಂಡಂತೆ  ಎಣಿಸುವ ಆಯನಂಶ   ಪರಿಗಣನೆಯಿಂದ  ಕೂಡಿದ ಭಚಕ್ರಕ್ಕೆ  " ಚರ ಭಚಕ್ರ " ಎಂದು  ಹೆಸರು( movable zodiac).  ರೇವತಿ ನಕ್ಷತ್ರ ಮಂಡಲದಲ್ಲಿರುವ  ನಿಖರವಾಸ  ನಕ್ಷತ್ರವೇ  ಮೇಷಾದಿಯೆಂದು  ತಿಳಿದಿರುವ  ಭಚಕ್ರಕ್ಕೆ   " ಸ್ಥಿರ ಭಚಕ್ರ " ( fixed zodiac),  ಎಂದು ಹೆಸರು.  ಚರ  ಬಚಕ್ರಕ್ಕೆ  ರಾಶಿಗಳ  ಭಚಕ್ರ (zodiac sign)  ಹಾಗೂ ಸ್ಥಿರ ಭಚಕ್ರಕ್ಕೆ ನಕ್ಷತ್ರ ಮಂಡಲಗಳ  ಭಚಕ್ರ (  zodiac of constellation)  ಎಂದು ಕರೆಯುತ್ತಾರೆ.      ಚರ ಭಾಚಕ್ರವನ್ನು   ಆಧರಿಸಿದ  ಖಗೋಳ  ವಿಜ್ಞಾನ  ಪದ್ದತಿಗೆ  ಸಾಯನ  ಪದ್ದತಿ ,  ಸ್ಥಿರ  ಭಚಕ್ರ ವನ್ನು  ಆಧರಿಸಿದ  ಪದ್ದತಿಗೆ  ನಿರಾಯನ  ಪದ್ದತಿ  ಎನ್ನುತ್ತಾರೆ.  ಭಾರತೀಯರು   ನಿರಾಯಣ  ಪದ್ದತಿ  ಅನುಸರಿಸಿದರೆ   ಪಾಶ್ಚ್ಯಾತ್ಯರು  ಸಾಯನ  ಪದ್ದತಿಯನ್ನು  ಅನುಸರಿಸುತ್ತಾರೆ.  ನಿರಾಯನ ಪದ್ದತಿಯನ್ನು  ನಾಕ್ಷತ್ರಿಕ  ಭಚಕ್ರ ( siderial  zodiac )  ಎಂದು  ಕರೆಯುತ್ತಾರೆ.
     --: ಆಯಾನಾಂಶ :--
     ನಿರಾಯನ  ಮೇಷಾದಿಗೂ,  ಸಾಯನ  ಮೇಷಾದಿಗೂ  ಇರುವ  ವ್ಯತ್ಯಾಸದ  ಅಂತರವೇ  ಆಯಾನಾಂಶ.  ಪ್ರತಿ  ವರ್ಷವೂ  ಸೂರ್ಯನು  ಮೇಷ  ಸಂಕ್ರಾಂತಿ ಯಂದು ವಿಷುವತ್ ಬಿಂದುವನ್ನು  ತಲುಪುವಾಗ  ಪ್ರಪಂಚದಲ್ಲೆಲ್ಲ  ಹಗಲು  ರಾತ್ರಿಗಳು  ಸಮಾನವಾಗಿದ್ರು  ,  ಭೂಮಿಯ  ಸ್ಥಾನವು  ಹಿಂದಿನವರ್ಷ  ಅದೇ  ವಿಷುವತ್  ಬಿಂದುವಿನಲ್ಲಿ  ಇದ್ದುದಕ್ಕಿಂತ  50. 1/3  ಗಳಷ್ಟು  ಪಾಶ್ಚಿಮಕ್ಕಿರುತ್ತದೆ.   ಈ  ಪಶ್ಚಿಮ ಗತಿಗೆ  ಈಡಾಗುವುದು  ಭೂಮಿಯೊಂದೇ  ಅಲ್ಲ ;  ಇಡೀ  ಭಚಕ್ರವೆ  ಹೀಗೆ  ಪಶ್ಚಿಮದ  ಕಡೆಗೆ  ಸರಿಯುತ್ತದೆ,  ಈ  ಸ್ವಲ್ಪ  ಸರಿಕೆಗೆ  ವಿಷುವತ್  ಬಿಂದುಗಳ  ವಕ್ರಗ ತಿ ಗೆ   ಆಯಾನಾಂಶ  ಎಂದು  ಹೆಸರು.  ( ಬಿ. ವಿ.  ರಾಮನ್ಸ್  ಜ್ಯೋತಿಷ್ಯ  ಕೈಪಿಡಿ).
     --:  ವಿಷುವತ್  ಬಿಂದು :--
(ಭೂಮಿಯ  ಸಮಭಾಜಕ್  ವೃತ್ತ)
     ಕ್ರಾಂತಿ  ವೃತ್ತವು  ಎರಡು  ಬಿಂದುಗಳಲ್ಲಿ ಪರಸ್ಪರ  ಛೇದಿಸುತ್ತದೆ. ಎಕೆಂದ ರೆ  ಸೂರ್ಯನು  ವರ್ಷಕ್ಕೆ  ಎರಡು ಬಾರಿ  ಸಮಭಾಜಕ  ವೃತ್ತವನ್ನು  ದಾಟುತ್ತಾನೆ.  ಈ  ಎರಡು ದಿನಗಳ ಲ್ಲೂ  ಪ್ರಪಂಚದಲ್ಲೆಲ್ಲ  ಹಗಲು ರಾತ್ರಿಯೂ  ಸಮಾನ  ಕಾಲಾವಧಿ ಇರುತ್ತದೆ.  ಇವೆರಡು  ಬಿಂದುಗಳು  ವಿಶುವತ್  ಬಿಂದುಗಳು ಎಂದೂ ,  ಮೇಷ  ಸಂಕ್ರಾಂತಿ,  ತುಲಾ ಸಂಕ್ರಾಂತಿ  ಎಂದೂ  ಕರೆಯುತ್ತಾರೆ.
(ಬಿ.ವಿ. ರಾಮನ್ಸ್  ಜ್ಯೋತಿಷ್ಯ ಕೈಪಿಡಿ)
--: ಲಗ್ನ :--
     ಭೂಮಿಯು  ಅಂಡಾ ಕಾರದಲ್ಲಿದ್ದು,  ತನ್ನ  ಆಕ್ಷದ ಮೇಲೆ ದಿನಕ್ಕೊಂದು  ಬಾರಿ  ಸುತ್ತುತ್ತದೆ,  ಇದರಿಂದಾಗಿ  ಖಗೋಳ  ರಾಶಿಗಳೆಲ್ಲಾ  ಸೂರ್ಯನ  ಪ್ರಭಾವಕ್ಕೆ  ತಪ್ಪದೆ  ಒಳಗಾಗುತ್ತದೆ.  ಭೂಮಿಯ  ಆಕಾರವನ್ನು  ಅನುಸರಿಸಿ  ಕೆಲವು  ರಾಶಿಗಳು  ಹೆಚ್ಚುಕಾಲ  ಸೂರ್ಯನ  ಪ್ರಭಾವಕ್ಕೆ ಒಳಗಾಗುತ್ತದೆ. ಪೂರ್ವದಿಕ್ಕಿನಲ್ಲಿ  ಖಗೋಲದ  ಯಾವ  ನಿರ್ಧಿಷ್ಟ  ಭಾಗವು, ಯಾವ  ಕಾಲಕ್ಕೆ ಸೂರ್ಯನ  ಪಥದಲ್ಲಿ  ಉದಯಿಸುತ್ತದೆಯೋ ಅದಕ್ಕೆ  ಲಗ್ನ ಎಂದು ಹೆಸರು.  ಪ್ರತಿಯೊಂದು  ರಾಶಿಯು  ನಿರ್ದಿಷ್ಠ ಕಾಲದಲ್ಲಿ  ಉದಯಿಸುವುದರಿಂದ  ಅವುಗಳ  ಕಾಲವಧಿಯು  ಆ  ಸ್ಥಳದ  ಉತ್ತರ  ಅಕ್ಷಾಂಶಕ್ಕೆ   ಅನುಗುಣವಾಗಿರುತ್ತದೆ,  ರಾಶಿಗಳ  ಅವಧಿಯು  ಅಕ್ಷಾಂಶ ವನ್ನು  ಅನುಸರಿಸಿ  ಅವುಗಳಿಗೆ  ಅನುಗುಣವಾಗಿ ಬದಲಾವಣೆ  ಹೊಂದುತ್ತದೆ.
ಬೆಂಗಳೂರಿಗೆ ದ್ವಾದಶ ಲಗ್ನ ಪ್ರಮಾಣಗಳು ( ಗಂಟೆ, ನಿಮಿಷಗಳಲ್ಲಿ )
ಮೇಷ.          1 - 47
ವೃಷಭ.        2 - 01
ಮಿಥುನ       2 - 11
ಕಟಕ.           2 - 09
ಸಿಂಹ.           2 - 03
ಕನ್ಯಾ.           2 -02
ತುಲಾ.          2 - 06
ವೃಶ್ಚಿಕ          2 - 12
ಧನಸ್ಸು.        2 - 08
ಮಕರ.          1 -54
ಕುಂಭ.          1 -42
ಮೀನ.          1 - 40
   ಜ್ಯೋತಿಷ್ಯ ಶಾಸ್ತ್ರದ ಉದ್ದೇಶವಾದ  ಭೂತ,  ಭವಿಷ್ಯ,  ವರ್ತಮಾನ ದ  ವಿಚಾರಗಳನ್ನು  ನುಡಿಯಲು  ಕ್ರಮಬದ್ಧವಾದ  ಲೆಕ್ಕಾಚಾರ ದೊಂದಿಗೆ  ರಾಶಿ,  ಗ್ರಹ,  ನಕ್ಷತ್ರಗಳ  ಗುಣಧರ್ಮದ  ಬಗೆಗಿನ  ಅಧ್ಯಯನ ಪ್ರಮುಖವಾಗುತ್ತದೆ.
ಮುಂದುವರೆಯುವುದು...............
✍  ಡಾ.  ಶೈಲಜಾ  ರಮೇಶ್

No comments:

Post a Comment