ಹರಿಃ ಓಂ
ಶ್ರೀ ಗಣೇಶಾಯನಮಃ
ಶ್ರೀ ಗುರುಭ್ಯೋನಮಃ
ಶ್ರೀ ಗಣೇಶಾಯನಮಃ
ಶ್ರೀ ಗುರುಭ್ಯೋನಮಃ
----: ಬುಧ ಗ್ರಹ
:----
" ಸುಧಾಂಶುತನಯೋ ಪ್ರಜ್ಞಾಮ್ " ಎಂಬಂತೆ ಬುದ್ಧಿ/ ಪ್ರಜ್ಞೆಗೆ ಕಾರಕನಾಗಿದ್ದಾನೆ
ಬುಧ.
ಸೌಮ್ಯ ಸಂವತ್ಸರದ ಜ್ಯೇಷ್ಟ ಮಾಸ ಕೃಷ್ಣಪಕ್ಷ ಏಕಾದಶಿ, ಭರಣಿ ನಕ್ಷತ್ರದಲ್ಲಿ ಜನನ. ಆತ್ರೇಯಸ ಗೋತ್ರ, ಭಾರದ್ವಾಜ ಪರಂಪರೆ, ಪೀತ
ವರ್ಣ , ಹಸ್ತ ಸಂಖ್ಯೆ - 5, ಗ್ರಹಮಂಡಲದಲ್ಲಿ ಈಶಾನ್ಯ ಸ್ಥಾನ, ಉತ್ತರಾಭಿಮುಖಿ, ಮಗಧ ದೇಶಾಧಿಪತಿಯು, ಧಾನ್ಯ - ಹೆಸರು ಕಾಳು, ವಸ್ತ್ರ - ಹಸಿರು ಬಣ್ಣದ್ದು, ರತ್ನ - ಪಚ್ಚೆ ( ಮರಕತ ) , ಆಯುಧಗಳು - ಖಡ್ಗ, ಗಧೆ, ಚರ್ಮಕಾರಕ, ಶಕ್ತಿಪೀತ ರಥ, ಬಾಣಾಕಾರ ಮಂಡಲ, ಪತ್ನಿ - ಜ್ಞಾನಿ ( ಇಳಾ ದೇವಿ ), ವಾಹನ ಸಿಂಹ , ಶಕ್ತಿ ದೇವತೆ - ಯಶಸ್ವಿನಿ, ಅಧಿದೇವತೆ - ಮಹಾವಿಷ್ಣು, ವಾಸ - ಕ್ರೀಡಾಸ್ಥಳ, ರಜೋಗುಣ, ಪಕ್ಷಿರೂಪ, ಧಾತು - ಹಿತ್ತಾಳೆ, ಲೋಹ - ಕಂಚು, ಭೂತತ್ವಕ್ಕೆ ಅಧಿಪತಿ, ವೈಶ್ಯ, ಸನ್ನಿಪಾತ ಪ್ರಕೃತಿಯುಳ್ಳವನು,
ತ್ರಿದೋಷಾತ್ಮಕ, ಶರದೃತುವಿಗೆ ಅಧಿಪತಿ, ಮಿಶ್ರ ರಸ, ನಪುಂಸಕ ಗ್ರಹ, ವಾಕ್ಚಾತುರ್ಯ ಉಳ್ಳವನು, ಒದ್ದೆಬಟ್ಟೆ, ಉತ್ತರದಿಕ್ಕಿಗೆ
ಅಧಿಪತಿ, ಜ್ಯೋತಿಷ್ಯಶಾಸ್ತ್ರ
ಬಲ್ಲವನು, ಯಾತ್ರಾಸ್ಥಳಗಳಿಗೆ
ಹೋಗುವುದು, ವ್ಯಾಪಾರ - ವ್ಯವಹಾರಗಳಲ್ಲಿ ಚತುರ, ಕೆತ್ತನೆಯ ಕೆಲಸ, ಹಾಸ್ಯಪ್ರಕೃತಿ, ತಾಯಿಯಕಡೆ ಸಂಭಂದ, ಸೋದರಮಾವ, ರಾಜಸಗುಣ, ವೇಷಧಾರಿ, ಡೊಂಕಾದ ನೋಟ, ನಾಟ್ಯಶಾಲೆ, ವಿನಾಯಭಾವ, ಶ್ರದ್ಧೆ, ನಾಭಿ, ಧರ್ಮಸಮ್ಮತವಾದ ಕೆಲಸಗಳು, ಗೋಪುರ, ಉದ್ಯಾನವನ, ಗ್ರಾಮಗಳಲ್ಲಿ ಸಂಚಾರ ಮಾಡುವುದು, ಉತ್ತರ - ಪಶ್ಚಿಮ ಪ್ರಾಂತ್ಯಗಳಲ್ಲಿ ಆಸಕ್ತಿ , ನಿಪುಣ, ಚತುರ, ಒಳ್ಳೆವಿದ್ಯಾವಂತ,
ವಿನೋದಪ್ರಿಯ, ಉಪಾಯಗಾರ, ದೂರದೃಷ್ಠಿ, ಅಗಲವಾದ ನೇತ್ರ, ದತ್ತುಪುತ್ರ, ವಾಣಿಜ್ಯ, ಗಣಕಯಂತ್ರ, ವಕೀಲ, ವೇದಾಂಗ ಮಂತ್ರ, ಗಣಿತಜ್ಞ, ವೈಷ್ಣವರ ಪೂಜೆ- ಜಪ - ತಪಗಳು, ದೇವತಾ ಉಪಾಸನೆ, ವಿಹಾರ ಸ್ಥಳ, ಬಂಧು - ಬಾಂಧವರು, ಮಿತ್ರರು, ದಲ್ಲಾಳಿಗಳು, ಮಧ್ಯಸ್ಥಿಕೆ, ಗಣಿತ, ಕಂಪ್ಯೂಟರ್, ಟ್ರಾಫಿಕ್ ನಂತಹ ಎಲ್ಲಾ ರೀತಿಯ ಸಂಜ್ಞೆಗಳು, ಸಂಪರ್ಕ, ಮುದ್ರಣ, ವಿರಹಿಗಳು, ಭೂಮಿ, ವಿನೋದ , ಮಾತಿನಲ್ಲಿ ಚತುರತೆ, ವಾತ- ಪಿತ್ತ - ಕಫ ಪ್ರಕೃತಿ, ವಿಶೇಷವಾಗಿ ಶೀತ, ಪತ್ರಕರ್ತರು, ವಿಮರ್ಶಕರು, ಸಾಹಿತಿಗಳು, ವಿಚಾರಪರರು, ಇವೆಲ್ಲಕ್ಕೂ ಬುಧ ಕಾರಕನಾಗಿದ್ದಾನೆ.
ಬುಧನು ಲಗ್ನದಲ್ಲಿ ಸರ್ವಕಾಲದಲ್ಲೂ
ಬಲಿಷ್ಠನು, ಲಗ್ನದಲ್ಲಿ ದಿಗ್ ಬಲನು, ಒಂದು ರಾಶಿಯಲ್ಲಿ 30 ದಿನಗಳ ಕಾಲ ಸಂಚಾರ ಮಾಡುತ್ತಾನೆ. ತನ್ನ ಸ್ಥಿತರಾಶಿಯಿಂದ 7 ನೆ ಮನೆಗೆ ದೃಷ್ಟಿ ಹಾಯಿಸುತ್ತಾನೆ. ಇವನ ಭಾಗ್ಯೊದಯಾಕಾಲ 35 ರಿಂದ 60 ವರ್ಷಗಳ ವರೆವಿಗೆ. ಮಿಥುನ ಹಾಗೂ ಕನ್ಯಾ ರಾಶಿಗಳು ಬುಧನ ಸ್ವಕ್ಷೇತ್ರಗಳು, ಕನ್ಯಾ ರಾಶಿಯು ಬುದನ ಮೂಲತ್ರಿಕೋನ ಹಾಗೂ ಉಚ್ಚರಾಶಿ, 0° ಯಿಂದ 15° ಯಲ್ಲಿ ಪರಮೋಚ್ಚ, ಮೀನರಾಶಿಯಲ್ಲಿ ನೀಚತ್ವ, 0° ಯಿಂದ 15° ಯಲ್ಲಿ ಪರಮ ನೀಚತ್ವವನ್ನು ಹೊಂದಿದ್ದಾನೆ, ಗೋಚಾರದಲ್ಲಿ 2 , 4, 6, 8,
10, 11, ಶುಭಸ್ಥಾನ, ಉಳಿದ ಸ್ಥಾನಗಳಲ್ಲಿ ಅಶುಭ. ಆಶ್ಲೇಷ - ಜ್ಯೇಷ್ಠ - ರೇವತಿ ನಕ್ಷತ್ರಗಳಿಗೆ
ಅಧಿಪತಿಯು, ಬುಧನ ದಶಾವರ್ಷ - 17 ವರ್ಷಗಳು, ಬುಧನು ನೀಚ / ಪೀಡಿತನಾಗಿದ್ದರೆ... ನರಗಳ ತೊಂದರೆ , ಮಾನಸಿಕ ವ್ಯಾಧಿ, ವಿದ್ಯಾಭಂಗ, ಅನಿಮಿಯಾ, ಚರ್ಮವ್ಯಾಧಿ , ತ್ರಿದೋಷಗಳ ತೊಂದರೆಗಳು ಬರುತ್ತದೆ.
ಬುಧನು ಉತ್ತಮನಾಗಿದ್ದರೆ... ಕಲಾಕೌಶಲ್ಯ, ವಿದ್ಯಾವಂತರಿಂದ ಗೌರವ, ಮುಂತಾದ ಶುಭಫಲಗಳು.
ಸೌಮ್ಯ ಸ್ವಭಾವದ ತಾರಾಗ್ರಹನಾದ ಬುಧನು ನೈಸರ್ಗಿಕವಾಗಿ ಶುಭಗ್ರಹ, ಸಮಾಯಾನುಸಾರ ಕ್ರೂರಗ್ರಹವೂ ಆಗುತ್ತಾನೆ, ಪ್ರತಿಯೊಂದು ಕಾರ್ಯ ನಿರ್ವಹಿಸಲು ಬುದ್ಧಿಯ ಅವಶ್ಯಕತೆ ಇರುವುದರಿಂದ ಯಾವ ಗ್ರಹದ ಜೊತೆಯಲ್ಲಿರುತ್ತಾನೋ
ಆ ಗ್ರಹದ ಕಾರಕತ್ವಕ್ಕೆ ತಕ್ಕಂತೆ ಬುದ್ಧಿ, ಸಂದರ್ಭಕ್ಕೆ ತಕ್ಕಂತೆ ಮಾರ್ಪಾಡಾಗುತ್ತದೆ.
ಪಾಪಗ್ರಹ ಯುತಿಯಲ್ಲಿ ಪಾಪಗ್ರಹ ( ಪಾಪಫಲ ), ಶುಭಗ್ರಹ ಯುತಿಯಲ್ಲಿ ಶುಭಗ್ರಹ ( ಶುಭಫಲ ).
--: ಪೌರಾಣಿಕವಾಗಿ
ಬುಧ :--
Picture source: Internet/ social media
ಸೋಮ ( ಚಂದ್ರನ ) ಮಗನಾದ್ದರಿಂದ ಸೌಮ್ಯನೆಂದು ಹೆಸರು , ಹಸಿರು ಬಟ್ಟೆಯನ್ನುಟ್ಟ ಚತುರ್ಭುಜನು, ಖಡ್ಗ - ಗುರಾಣಿ - ಗಧೆ - ವರಮುದ್ರೆಯನ್ನು
ಧರಿಸಿರುವ ಸಿಂಹವಾಹನ, ಕೆಂಪಾದ ಸುಂದರ ಕಣ್ಣುಗಳು, ಸ್ವಚ್ಛವಾದ ಚತುರತೆಯಿಂದ ಕೂಡಿದ ಒಳ್ಳೆಯ ಮಾತುಗಳು, ಹಾಸ್ಯ ಪ್ರಜ್ಞೆ ಹಾಗೂ ಆಕರ್ಷಣೀಯವಾದ ಸಮಕಟ್ಟಾದ ಗರಿಕೆಯ ದಳದಂತೆ ಹಸಿರು ಮೈಬಣ್ಣದ ಶರೀರದವನು, ರಾಜ ಸ್ವಭಾವ, ಸದಾ ಸಂತೋಷ, ಮಧ್ಯಮ ರೂಪದವನು, ನಿಪುಣ, ಉಡುಗೆ- ನಡಿಗೆ ಗಳಿಂದ ಎಲ್ಲರನ್ನು ಅನುಕರಿಸುವ ಸ್ವಭಾವ, ಪಲಾಶದಂತೆ ಹಸಿರು ಬಣ್ಣದ ಉಡುಗೆಗಳು.... ಇವು ಬುಧನಲ್ಲಿ ಕಾಣುವ ಲಕ್ಷಣಗಳು.
ನವಗ್ರಹಗಳಲ್ಲಿ ನಾಲ್ಕನೆಯವನು ಬುಧ, ಚಂದ್ರನ ಮಗನಾದ ಬುಧನು ಆತೀ ಬುದ್ಧಿಶಾಲಿ, ಯುಕ್ತಿಯನ್ನು ಪ್ರದರ್ಶಿಸಲು ಕಾರಕ ಗ್ರಹ,
ದೇವಗುರು ಬೃಹಸ್ಪತಿಯ ಹೆಂಡತಿಯಾದ ತಾರೆಯು ಮುಗ್ಧ ಸ್ವಭಾವದ ಅಬಲೆ, ಸುಂದರಾಂಗನಾದ ಚಂದ್ರ ಆಕೆಯನ್ನು ಮೋಹಿಸಿ, ಅಪಹರಿಸಿ, ಬಲಾತ್ಕರಿಸಿ ಪರಿಗ್ರಹಿಸಿದ, ಬ್ರಹ್ಮನ ಆದೇಶದ ಮೇರೆಗೆ ಚಂದ್ರ ತಾರೆಯನ್ನು ಬಿಟ್ಟುಕೊಟ್ಟ, ಗರ್ಭಿಣಿಯಾದ ಆಕೆಗೆ ದೇವಗುರು ಬೃಹಸ್ಪತಿಯು " ಬೇರೆಯವರಿಂದ ಧರಿಸಿದ ಈ ಗರ್ಭವನ್ನು ತ್ಯಜಿಸು, ಇಲ್ಲವಾದರೆ ಸುಟ್ಟು ಬಿಡುತ್ತೇನೆ " ಎಂದು ಹೇಳಿದ. ತಾರೆಯು ನಾಚಿಕೆಯಿಂದ ಗರ್ಭವನ್ನು ತ್ಯಜಿಸಿದಳು , ಪಚ್ಚೆವರ್ಣದ ಸುಂದರವಾದ ಮಗುವು ಜನಿಸಿತು, ಬೃಹಸ್ಪತಿಯು ಮನಸ್ಸು ಬದಲಿಸಿ ಇದು " ನನ್ನದೇ ಮಗು " ಎಂದ, ಇಲ್ಲ " ಈ ಮಗು ನನ್ನದು " ಎಂದ ಚಂದ್ರ, ವಿವಾದ ಗಗನಕ್ಕೇ ರಿತು, ಋಷಿ ಮುನಿಗಳು ತಾರೆಯಲ್ಲಿ ಸತ್ಯಹೇಳು ಇದು ಯಾರ ಮಗು ಎಂದರು, ನಾಚಿಕೆಯಿಂದ ತಲೆ ತಗ್ಗಿಸಿದ ತಾರೆ ಬಾಯಿ ಬಿಡಲಿಲ್ಲ, ಆಗ ಮಗುವೇ " ಛೀ ದುರಾಚಾರೆ, ತೆರೆಯ ಹಿಂದೆ ಮಾಡಿದ ಆತ್ಮಾಘಾತವನ್ನು ಮರೆ ಮಾಚುವೆ ಏಕೆ ? ನಾಚಿಕೆಯಾಗುವುದಿಲ್ಲವೇ ? ಬಾಯಿ ಬಿಟ್ಟು ಹೇಳು " ಎಂದು ಆರ್ಭಟಿಸಿತು. ಆಗ ಈ ಮಗು ಚಂದ್ರನದೆಂದು ಸಾಬೀತಾಯಿತು, ನಂತರ ಮಗುವನ್ನು ಚಂದ್ರನಿಗೆ ಒಪ್ಪಿಸಲಾಯಿತು,
ಹುಟ್ಟಿನಿಂದಲೇ ಅಸಾಧಾರಣ ಬೌದ್ಧಿಕತೆಯನ್ನು ತೋರಿದ ಈ ಅಸಾಧಾರಣ ಮಗುವಿಗೆ " ಬುಧ " ನೆಂದು ಆ ಚತುರ್ಮುಖ ಬ್ರಹ್ಮನೇ ನಾಮಕರಣ ಮಾಡಿದರು.
ಗುರುವಿನ ಹೆಂಡತಿ ತಾರೆಯಲ್ಲಿ ಚಂದ್ರ್ರನಿಂದ ಬುಧನು ಹುಟ್ಟಿದ ನಾದ್ದರಿಂದ ಗುರುವಿಗೆ ಬುಧನಲ್ಲಿ ದ್ವೇಷ.
ಮತ್ತೊಂದು ಪುರಾಣದ ಪ್ರಕಾರ ಬುಧನು ಚಂದ್ರ ಹಾಗೂ ರೋಹಿಣಿ ಮಗನು,
ಬುಧನಿಗೆ ತಂದೆಯಾದ ಚಂದ್ರನೇ ಶತ್ರು, ಕಾರಣ... ಈತನು ದೇವತಾ ಸ್ತ್ರೀಯರನ್ನು ಕಾಮಿಯಾಗಿ ಪೀಡಿಸುತ್ತಿದ್ದಾಗ, ಎಷ್ಟು ಬುದ್ಧಿ ಹೇಳಿದರೂ ಕೇಳದೆ ಇದ್ದಾಗ ಚಂದ್ರನು ಬುಧನಿಗೆ ಷಂಡ ನಾಗು ಎಂದು ಶಾಪ ಕೊಟ್ಟನು, ಆದ್ದರಿಂದ ಚಂದ್ರನ ಮೇಲೆ ಬುಧನಿಗೆ ಶತ್ರುತ್ವ. ಸ್ತ್ರೀಯರನ್ನು ಗೌರವದಿಂದ ಕಾಣುವ ಕುಜನೂ ಬುಧನನ್ನು ಶತ್ರುತ್ವದಿಂದಲೇ
ಕಾಣುತ್ತಾನೆ.
ಬುಧನು ಹಸಿರು ಬಣ್ಣದವನಾದ್ದರಿಂದ
ಈತನಿಗೆ ಪಚ್ಚೆ ರತ್ನ ಪ್ರಿಯ, ಹೆಸರುಕಾಳು ಧಾನ್ಯ, ಉತ್ತರಾಣಿ ಗಿಡ ಪ್ರಿಯವಾಗಿದೆ. ಬುಧನು ಮಿಥುನ , ಕನ್ಯಾ ರಾಶಿಗೆ ಅಧಿಪತಿಯಾದ್ದರಿಂದ,
ಈ ರಾಶಿಯವರು ಸಾಮಾನ್ಯವಾಗಿ ಗುಂಡು ಮುಖ, ಎಣ್ಣೆಗೆಂಪು ಬಣ್ಣ, ಎತ್ತರವಿಲ್ಲ, ಬೊಜ್ಜು ಶರೀರ, ವ್ಯಾಪಾರಸ್ಥರಾಗಿರುತ್ತಾರೆ.
" ಬುಧ " ಹೆಸರೇ ಸೂಚಿಸುವಂತೆ ಮನುಷ್ಯನಿಗೆ ಯುಕ್ತಿಯಿಂದ ಕಾರ್ಯ ಗೆಲ್ಲುವ ಚಮತ್ಕಾರ ಮಾಡಬಲ್ಲ ಬುದ್ಧಿ ನೀಡುವ ಗ್ರಹವಾಗಿದೆ, ಮಕ್ಕಳು ವಿದ್ಯಾವಂತರಾಗಲು, ಉನ್ನತ ವಿದ್ಯಾಭ್ಯಾಸ ಪಡೆದು ಯಶಸ್ವಿಯಾಗಲು, ವ್ಯಾಪಾರಸ್ಥರು ದೊಡ್ಡಮಟ್ಟಕ್ಕೆ ಬೆಳೆಯಲು, ದೊಡ್ಡ ಸಂಗೀತಗಾರನಾಗಲು, ಒಳ್ಳೆಯ ವಾಕ್ಚಾತುರ್ಯತೆ ಪಡೆಯಲು, ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯನಾಗು, ಮಾಯಾಜಾಲ ವಿದ್ಯೆಯಲ್ಲಿ ನೈಪುಣ್ಯತೆ ಪಡೆಯಲು, ಬುಧ ಗ್ರಹದ ಕೃಪೆ ಅವಶ್ಯವಾಗಿದೆ. ಬುಧನ ಅವಕೃಪೆ ಉಂಟಾದರೆ ಮೇಲ್ಕಂಡ ಕ್ಷೇತ್ರಗಳಲ್ಲಿ ಸಾಧನೆಗಳು ವಿಫಲವಾಗಿ , ಮಾನಸಿಕವಾಗಿ ಖಿನ್ನತೆ ಉಂಟಾಗಿ, ಬುದ್ಧಿ ವೈಫಲ್ಯವೂ ಉಂಟಾಗುವ ಸಾಧ್ಯತೆಗಳಿರುತ್ತವೆ.
ಬುಧನ ಶುಭಫಲಗಳು ಪಡೆಯಬೇಕಾದರೆ, ಬುಧವಾರದಂದು ಲಕ್ಷ್ಮೀ ನಾರಾಯನನನ್ನು ಪೂಜಿಸಿ ಹೆಸರುಕಾಳು ನಿವೇದನೆ ಮಾಡಿ ಹಂಚಬೇಕು. ಮನೆಯ ಹಾಗೂ ಅಂಗಡಿಯ ಮುಂದೆ ಹಸಿರು ಗಿಡವನ್ನಿಡ ಬೇಕು. ಪಚ್ಚೆಯ ಉಂಗುರ ಬುಧವಾರ ಧರಿಸಬೇಕು, ಮೀನುಗಳಿಗೆ ಆಹಾರ ಹಾಕಬೇಕು, ವಿಷ್ಣುವಿಗೆ ತುಲಸಿಯಿಂದ ಅರ್ಚಿಸಬೇಕು.
" ಪ್ರಿಯಾಂಗೂ ಕಲಿಕಾಶ್ಯಾಮಮ್
ರೂಪೇಣಾ ಪ್ರತಿಮಮ್ ಬುಧಮ್
ಸೌಮ್ಯಮ್ ಸೌಮ್ಯಗುಣೋಪೇತಂ
ತಂ ಬುಧಮ್
ಪ್ರಣಮಾಂಯಹಂ"
ಈ ಸ್ತೋತ್ರ ಪಠಣೆಯಿಂದ ಬುಧಗ್ರಹದ ದೋಷವನ್ನು ಪರಿಹರಿಸಿಕೊಳ್ಳಬಹುದು.
ಬುಧ ಗಾಯತ್ರಿ ಮಂತ್ರ
ಓಂ ಸೋಮಾತ್ಮಜಾಯ
ವಿದ್ಮಹೇ
ಸಿಂಹಾರೂ ಢಾ ಯ
ಧೀಮಹಿ
ತನ್ನೋ ಸೌಮ್ಯ
ಪ್ರಚೋದಯಾತ್
-: ಬುಧ ಪೀಡಪರಿಹಾರಕ ಸ್ತೋತ್ರ :-
ಉತ್ಪಾತರೂಪೋ ಜಗತಾಂ
ಚಂದ್ರಪುತ್ರೋ ಮಹಾದ್ಯುತಿಹಿ
ಸೂರ್ಯಪ್ರಿಯಕರೋ ವಿದ್ವಾನ್
ಪೀಡಾಂ ಹರತು ಮೇ ಬುಧಃ
-: ಏಕಾಕ್ಷರಿ ಬೀಜ ಮಂತ್ರ :-
ಓಂ ಬೃಂ ಬುಧಾಯ
ನಮಃ
-: ಅನುಕೂಲ ಮಂತ್ರ :-
ಓಂ ಕ್ಲೀಮ್ ಐಮ್
ಸೌಃ
( ಜಪ ಸಂಖ್ಯೆ ಒಂದೂ ಕಾಲು ಲಕ್ಷ )
-: ತಾಂತ್ರಿಕ ಮಂತ್ರ :-
ಓಂ ಬ್ರಾಂ
ಬ್ರೀ0 ಬ್ರೌo
ಸಃ ಬುಧಾಯ
ನಮಃ
( ಜಪಸಂಖ್ಯೆ 9000 )
ಬುಧನ ಕ್ಷೇತ್ರವಾದ ಮಿಥುನ ಲಗ್ನದವರು ಪೂಜಿಸಿ ಧರಿಸ ಬೇಕಾದ ಯಂತ್ರ
ಪಂಚದಶಾ ಯಂತ್ರ
2
|
7
|
6
|
9
|
5
|
1
|
4
|
3
|
8
|
ಬೀಸಾಯಂತ್ರ
4
|
9
|
11
|
10
|
8
|
6
|
5
|
12
|
17
|
ಓಂ ಐಮ್ ಕ್ಲೀಮ್ ಸೌಃ
ಬುಧನ ಕ್ಷೇತ್ರವಾದ ಕನ್ಯಾಲಗ್ನ ದವರು ಪೂಜಿಸಿ ಧರಿಸ ಬೇಕಾದ ಯಂತ್ರ
ಪಂಚದಶಾ ಯಂತ್ರ
8
|
1
|
6
|
3
|
5
|
7
|
4
|
9
|
2
|
ಬೀಸಾಯಂತ್ರ
9
|
4
|
11
|
10
|
8
|
6
|
5
|
12
|
7
|
ಶ್ರೀಮ್ ಐಮ್
ಸೌಃ
-: ವೈಜ್ಞಾನಿಕವಾಗಿ ಬುಧ :-
Picture source: Internet/ social media
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಸೌಮ್ಯ ಗ್ರಹನಾದ ಬುಧವು ಸೌರಮಂಡಲದಲ್ಲಿ
ಸೂರ್ಯನ ಅತಿ ಸಮೀಪದಲ್ಲಿರುವ ಚಿಕ್ಕ ಗ್ರಹ. ಬುಧನು ಸೂರ್ಯನ ಸುತ್ತ ಪ್ರತಿ 88 ದಿನಗಳಿಗೊಮ್ಮೆ ಪ್ರದಕ್ಷಿಣೆ ಹಾಕುತ್ತದೆ. ಅತ್ಯಂತ ಸಮೀಪದಲ್ಲಿರುವ
ಕಾರಣದಿಂದಾಗಿ ಸೂರ್ಯನ ಪ್ರಖರತೆಯಿಂದ ಬುಧವು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಬುಧದ ಗೋಚರ ಪ್ರಮಾಣವು 2.0 ಯಿಂದ 5.5 ವರೆಗೆ ಇದ್ದರೂ, ನಸುಕಿನಲ್ಲಿ ಮಾತ್ರ ಇದನ್ನು ಬರಿಗಣ್ಣಿನಿಂದ
ನೋಡಬಹುದು. ಬುಧ ಗ್ರಹದ ಬಗ್ಗೆ ಇದುವರೆಗೂ ಬಹಳಷ್ಟು ವಿಷಯಗಳು ತಿಳಿದು ಬಂದಿಲ್ಲ. ಬುಧವನ್ನು ಸಮೀಪಿಸಿದ ಒಂದೇ ಒಂದು ನೌಕೆಯೆಂದರೆ 1974 ಮತ್ತು 1975 ರಲ್ಲಿ ಬುಧನ ಮೇಲ್ಮೈನ ನಕ್ಷೆಯನ್ನು ತಯಾರಿಸಿದ ""
ಮ್ಯಾರಿನರ್ 10""
ಸೌರಮಂಡಲದಲ್ಲಿರುವ ನಾಲ್ಕು ಘನರೂಪಿ ಗ್ರಹಗಳಲ್ಲಿ ಬುಧವೂ ಒಂದು, ಅರ್ಥಾತ್ ಭೂಮಿಯಂತೆಯೇ ಬುಧವು ಶಿಲೆ/ ಖನಿಜ ಗಳಿಂದ ರಚಿತವಾಗಿದೆ. ಸಮಭಾಜಕದಲ್ಲಿ 4879 km ವ್ಯಾಸ ವನ್ನು ಹೊಂದಿರುವ ಬುಧವು ಈ ನಾಲ್ಕು ಘನರೂಪಿ ಗ್ರಹಗಳಲ್ಲಿ ಅತಿ ಸಣ್ಣದಾಗಿದೆ. ಬುಧವು 70% ಲೋಹ ಮತ್ತು 30% ಸಿಲಿಕೆಟ್ ವಸ್ತುಗಳನ್ನು ಒಳಗೊಂಡಿದೆ. ಪ್ರತಿ ಘನ ಸೆ, ಮೀ ಗೆ 5.43 ಗ್ರಾಮ್ ಪ್ರಮಾಣದಲ್ಲಿ ಬುಧವು ಸೌರಮಂಡಲದಲ್ಲಿ
ಎರಡನೇ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ಗ್ರಹವಾಗಿದೆ. ಇದು ಭೂಮಿಯ ಸಾಂದ್ರತೆಗಿಂತ ಸ್ವಲ್ಪವೇ ಕಡಿಮೆಯಿದೆ. ಗುರುತ್ವ ಸಂಕ್ಷೇಪಣೆಗೆ ತಿದ್ದುಪಡಿ ಮಾಡಿದಾಗ ಬುಧವು ಭೂಮಿಗಿಂತ ಹೆಚ್ಚು ಸಾಂದ್ರತೆ ಹೊಂದಿರುವುದು ಕಂಡುಬರುತ್ತದೆ. ಬುಧನ ಅಸಂಕ್ಷೇಪಿತ ಸಾಂದ್ರತೆ 5.3 ಗ್ರಾಮ್/ ಪ್ರತಿ ಘನ ಸೆ. ಮೀ ಮತ್ತು ಭೂಮಿಯ ಸಾಂದ್ರತೆ 4.4ಗ್ರಾಮ್/ ಪ್ರತಿ ಘನ ಸೆ. ಮೀ.
: ಬುಧದ ಭೌತಿಕ ಗುಣಲಕ್ಷಣಗಳು
ಸಮಭಾಜಕ ರೇಖೆಯ ವ್ಯಾಸ --- 4879.4 ಕಿ ಮೀ
ಮೇಲ್ಮೈ ವಿಸ್ತೀರ್ಣ ---
7.5×10^7 ಕಿಮೀ ( ಭೂಮಿಯ 14.7% )
ಗಾತ್ರ --- 6.083 × 10^10 ಕಿಮೀ ( ಭೂಮಿಯ 5.6% )
ದ್ರವ್ಯರಾಶಿ --- 3.302 ×10^23 ಕಿಗ್ರಾಮ್ ( ಭೂಮಿಯ 5.5% )
ಸರಾಸರಿ ಸಾಂದ್ರತೆ --- 5.427 ಗ್ರಾಮ್/ ಸೆಂ ಮೀ
ಸಮಭಾಜಕದ ಬಳಿ ಗುರುತ್ವ --- 3.701 ಮೀ/ಕ್ಷ
ಮುಕ್ತಿವೇಗ --- 4.435 ಕಿಮೀ / ಪ್ರತಿ ಕ್ಷಣ
ಕಕ್ಷೆಯ ಗುಣಗಳು
ಧೀರ್ಘಅರ್ಧ ಅಕ್ಷ --- 57,909,176 ಕಿಮೀ
ಕಕ್ಷೆಯ ಪರಿಧಿ --- 360,000,000
ಕಿಮೀ
ಕಕ್ಷೀಯ ಕೇಂದ್ರ ಚ್ಯುತಿ --- 0.205 620 69
ಪುರರವಿ --- 46,001,272 ಕಿಮೀ
ಅಪರವಿ --- 69,817,079 ಕಿಮೀ
ಕಕ್ಷೀಯ ಪರಿಭ್ರಮನ ಕಾಲ --- 87.969 34 ದಿನ
ಯುತಿ ಅವಧಿ --- 115.8776 .ದಿನಗಳು
ಸರಾಸರಿ ಕಕ್ಷಾವೇಗ --- 47.36 ಕಿಮೀ/ಸೆ
ಗರಿಷ್ಠ ಕಕ್ಷಾವೇಗ --- 58.98 ಕಿಮೀ/ ಸೆ
ಕನಿಷ್ಠ ಕಕ್ಷಾ ವೇಗ --- 38.86 ಕಿಮೀ/ ಸೆ
ಒರೆ --- 7.004 87°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ --- 0
ವಾಯು ಮಂಡಲದ ಗುಣಲಕ್ಷಣಗಳು
ಪೊಟಾಶಿಯಂ --- 31.7 %
ಸೋಡಿಯಂ --- 24.9 %
ಮೂಲ ಆಮ್ಲಜನಕ ---
9.5 %
ಆರ್ಗಾನ್. --- 7.0 %
ಹೀಲಿಯಂ --- 5.9 %
ಆಮ್ಲಜನಕ. --- 5.6 %
ಸಾರಜನಕ. --- 5.2 %
ಇಂಗಾಲದ ಡೈ ಆಕ್ಸೈಡ್ --- 3.6 %
ನೀರು.
--- 3.4 %
ಜಲಜನಕ ---3.2 %
✍ ಡಾ||
B N ಶೈಲಜಾ ರಮೇಶ್
thank you sir
ReplyDeleteಮೇಡಂ,
ReplyDeleteನಾನೊಬ್ಬ ಜ್ಯೋತಿಷ್ಯವಿದ್ಯಾರ್ಥಿಯಾಗಿದ್ದು ನಿಮ್ಮ ಎಲ್ಲ ಈ ಉಪಯುಕ್ತ ಲೇಖನಗಳನ್ನೂ ಓದಿದ್ದೇನೆ. ಇದರಲ್ಲಿ ತಿಳಿಸಿರುವ ಶ್ಲೋಕಗಳು,ಗಾಯತ್ರೀ,ಪೀಡಾಪರಿಹಾರಕ ಸ್ತೋತ್ರ,ಏಕಾಕ್ಷರೀಬೀಜಮಂತ್ರ,ಅನುಕೂಲಮಂತ್ರ,ತಾಂತ್ರಿಕಮಂತ್ರ ಮುಂತಾದುವುಗಳನ್ನು ಯಾವ ಯಾವ ಸಂದರ್ಭಗಳಲ್ಲಿ ಯಾವ ಯಾವ ಮಂತ್ರವನ್ನು ಬಳಸಬೇಕು ?. ಹಾಗೆಯೇ ಪಂಚದಶಾಯಂತ್ರ ಮತ್ತು ಬೀಸಾಯಂತ್ರಗಳ ವ್ಯತ್ಯಾಸ ಮತ್ತು ಉಪಯೋಗ ಸಂದರ್ಭಗಳನ್ನು ತಿಳಿಸಬೇಕಾಗಿ ವವಿನಂತಿ
ಬಹಳ ಆಳವಾದ ಅಧ್ಯಯನ....ಶಿರಸಾ ನಮಾಮಿ. Am waiting for shatabhisha nakshatra vishaya...Madam.
ReplyDeleteಧನ್ಯವಾದಗಳು ಸರ್,
Deleteನಕ್ಷತ್ರ ಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದೇನೆ ಸರ್ , ಒಂದಾದ ಮೇಲೆ ಒಂದರಂತೆ ನಕ್ಷತ್ರ ಗಳ ಬಗ್ಗೆ ಲೇಖನಗಳು ಬರುತ್ತದೆ, ಆದಷ್ಟೂ ಬೇಗ ಶತಭಿಷ ನಕ್ಷತ್ರ ದ ಬಗ್ಗೆ ತಿಳಿಸುತ್ತೇನೆ,