ಹರಿಃ
ಓಂ
ಶ್ರೀ ಗಣೇಶಾಯ
ನಮಃ
ಶ್ರೀ
ಗುರುಭ್ಯೋ ನಮಃ
---: ಗುರು ಗ್ರಹ
:---
" ಗುರುರ್ ಗೌರವಂ
" ಎನ್ನುವಂತೆ ಎಲ್ಲಾ ರೀತಿಯಿಂದ ಸಲ್ಲುವ ಗೌರವಕ್ಕೆ ಗುರು ಕಾರಕರಾಗುತ್ತಾರೆ.
ಅಂಗೀರಸ ಸಂವತ್ಸರದ ವೈಶಾಖ ಮಾಸ ಶುಕ್ಲಪಕ್ಷದ ಏಕಾದಶಿಯಲ್ಲಿ
ಜನನ. ಜನ್ಮ ನಕ್ಷತ್ರ -- ಉತ್ತರ ಫಲ್ಗುಣಿ, ಅಂಗೀರಸ -- ಗೋತ್ರ, ವಸಿಷ್ಠ ಪರಂಪರೆ, ಹೇಮವರ್ಣ, ಹಸ್ತಸಂಖ್ಯೆ -- 3, ಗ್ರಹಮಂಡಲದಲ್ಲಿ ಉತ್ತರದಿಕ್ಕು, ಧಾನ್ಯ -- ಕಡಲೆ, ಹಳದಿ -- ವಸ್ತ್ರ, ರತ್ನ -- ಕನಕ ಪುಷ್ಯರಾಗ, ಆಯುಧಗಳು -- ದಂಡ , ಅಕ್ಷಮಾಲ, ಕಮಂಡಲ, ಕಾಂಚನ ರಥ, ಧೀರ್ಘ ಚತುರಷ್ರಾಕಾರ,
ಪತ್ನಿ -- ತಾರಾದೇವಿ, ಸಿಂಧು ದೇಶಕ್ಕೆ ಅಧಿಪತಿಯು, ಶಕ್ತಿ ದೇವತೆ -- ಶಂಕರಿ, ಅಧಿದೇವತೆ -- ಬ್ರಹ್ಮ, ಜ್ಞಾನಕಾರಕ ಮತ್ತು ಸುಖಕಾರಕ, ಪುತ್ರಕಾರಕ , ಧನಕಾರಕ, ತರ್ಕ ಶಾಸ್ತ್ರಬಲ್ಲವನು,
ಜ್ಯೋತಿಷ್ಯ ಶಾಸ್ತ್ರ, ಧಾರ್ಮಿಕ ಹಾಗೂ ಅಧ್ಯಾತ್ಮಿಕ ವ್ಯವಹಾರಗಳಿಗೆ ಮಂತ್ರಿ, ಯಾಗಾಯಜ್ಞಗಳಲ್ಲಿ
ಪ್ರವರ್ಥಕನು, ಬಂಗಾರದ ಬಣ್ಣ, ಹಳದಿಯ ಕಣ್ಣು, ಸ್ವಲ್ಪ ಸ್ಥೂಲದೇಹ, ಅಗಲವಾದ ಎದೆ, ನ್ಯಾಯ ನೀತಿ ಧರ್ಮದಲ್ಲಿ ನಡೆಯುವವ, ತಾರಾಗ್ರಹ, ಪುರುಷಗ್ರಹ, ಶುಭಗ್ರಹ, ಸತ್ವಗುಣ, ಮೃದುಸ್ವಭಾವ, ಆಕಾಶತತ್ವ, ಈಶಾನ್ಯದಿಕ್ಕಿಗೆ
ಅಧಿಪತಿ, ಪಿಂಗಳವರ್ಣದವನು,
ಬ್ರಾಹ್ಮನಜಾತಿ, ಮೆದುಳಿಗೆ ಅಧಿಪತಿ, ಋಗ್ವೇದಕ್ಕೆ ಅಧಿಪತಿ, ಹೇಮಂತ ಋತುವಿಗೆ ಅಧಿಪತಿ, ವಿಶಾಲವಾದ ನೇತ್ರ, ದೇಹಪುಷ್ಟಿಯು,
ರಾಜಗೌರವ, ವಯಸ್ಸು -- 30 ವರ್ಷಗಳು, ಎತ್ತರವಾದ ದೇಹ, ಪ್ರಾಮಾಣಿಕನು, ಬುದ್ಧಿಶಾಲಿಯು, ಅಹಂಕಾರವಿಲ್ಲದವನು,
ಪುಣ್ಯಕ್ಷೇತ್ರಗಳ ದರ್ಶನ, ಮಠಾಧಿಪತಿಗಳ ಕೆಲಸ, ರುಚಿ -- ಸಿಹಿಯು, ಕಿವಿ ( ಶ್ರವಣ ) ಅಂಡಾಕಾರ, ಕಾನೂನು, ವೇದಾಂತ, ಉಪಾಧ್ಯಾಯರು, ಪ್ರಾಮಾಣಿಕತನ, ವಿನಯ ಒಡವೆ, ವ್ಯಾಪಾರ, ಕಫ, ನಿಷ್ಪಕ್ಷಪಾತಿ, ದೇವಾಲಯ, ಗುರುಭಕ್ತಿ, ಆಚಾರ , ಸುಖ ಸಂತೋಷ, ಪರರ ಆಲೋಚನೆಯನ್ನು ಊ ಹಿಸು ವುದು, ಖಜಾನೆ, ಭಾಗ್ಯವಂತನು, ಎಲ್ಲಾ ರೀತಿಯ ಶುಭಕಾರ್ಯಗಳು, ದೇವರು ಧರ್ಮ, ಆಧ್ಯಾತ್ಮ, ಪುತ್ರ, ಧನ, ನ್ಯಾಯ, ನೀತಿ, ಜೀವ, ಶ್ರದ್ಧೆ, ಸ್ವರ್ಗ, ಉನ್ನತ ಸಂಸ್ಕಾರ, ವೇದಪಂಡಿತರು, ಮಂತ್ರದ್ರಷ್ಟಾರರು,
ಚತುರ್ವೇದಗಳನ್ನೊಳಗಂಡಂತೆ ಉಪನಿಷತ್ತು, ಶ್ರುತಿ, ಸ್ಮೃತಿ, ಪುರಾಣಾದಿಗಳು,
ಧಾರ್ಮಿಕ ಗ್ರಂಥಗಳು, ಪಾಂಡಿತ್ಯ, ಬಂಗಾರ, ಸ್ವರ್ಗಸುಖ, ಬ್ರಹ್ಮಜ್ಞಾನ, ಪೌರೋಹಿತರು
ಧಾರ್ಮಿಕ ಮುಖಂಡರು, ಸಾತ್ವಿಕ, ಮತೀಯ ಶ್ರದ್ಧೆ, ಧಡೂತಿ ಶರೀರ, ತ್ಯಾಗ, ಕೋಶಾಗಾರ, ಜಿತೇಂದ್ರಿಯತ್ವ, ಇವು ಗುರುಗ್ರಹದ ಕಾರಕತ್ವಗಳು.
ಒಂದು ರಾಶಿಯಲ್ಲಿ ಗುರುವು ಒಂದು ವರ್ಷದ ವರೆಗೆ ಸಂಚಾರ ಮಾಡುತ್ತಾ ನೆ, ರಾಶಿಚಕ್ರವನ್ನು ಒಂದು ಸುತ್ತು ಬರಲು 12 ವರ್ಷಗಳು ಬೇಕು, ಗೋಚಾರದಲ್ಲಿ 2, 5, 7, 9, 10, 11 ಶುಭಸ್ತಾನಗಳು, ಇನ್ನುಳಿದವು ಅಶುಭ ಸ್ಥಾನ. ಧನಸ್ಸು ಮೀನಾ ರಾಶಿಗಳಿಗೆ ಅಧಿಪತಿ, ಧನಸ್ಸು ಮೂಲತ್ರಿಕೋಣ ರಾಶಿ, ಕಟಕ ರಾಶಿಯು ಗುರುವಿನ ಉಚ್ಚಕ್ಷೇತ್ರ,
5° ಯಲ್ಲಿ ಪರಮೋಚ್ಚ, ಮಕರ ರಾಶಿಯು ಗುರುವಿನ ನೀಚಕ್ಷೇತ್ರ, 5° ಯಲ್ಲಿ ಪರಮನೀಚನು, ಪುನರ್ವಸು - ವಿಶಾಖ - ಪೂರ್ವಬಾದ್ರ ನಕ್ಷತ್ರಗಳಿಗೆ ಅಧಿಪತಿಯು, ಗುರುವಿನ ದಶಾವರ್ಷಗಳು - 16 ವರ್ಷ, ಗುರುವು ದುಸ್ಥಿ ತಿಯಲ್ಲಿದ್ದರೆ
ಸಂತಾನ ತೊಂದರೆ, ಹಣಕಾಸಿನ ಮುಗ್ಗಟ್ಟು, ನಾಸ್ತಿಕ ತನಗಳು ಬರುತ್ತವೆ.
ದೇವಗುರುವು ಅಶ್ವತ್ಥಮರ, ಬ್ಯಾಂಕುಗಳು, ವಿದ್ವತ್ಸಭೆ, ವೇದಪಠನ, ವೇದಶಾಲೆಗಳು, ಶುಭಕರ್ಮ ಸ್ಥಾನ, ಈಶಾನ್ಯದಿಕ್ಕು ಇವನ ಸಂಚಾರ ಸ್ಥಳಗಳಾ ಗಿವೆ.
ಪುರಾಣದ್ಲಲಿ
ಗುರು :--
" ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ " ಎಂಬಂತೆ, " ಗುರವೇ ಸರ್ವ ಲೋಕಾನಾಂ ಭೀಷಜೆ ಭವ ರೋಗೀಣಾಂ ನಿಧಯೇ ಸರ್ವ ವಿದ್ಯಾನಾಂ ದಕ್ಷಿಣಾಮೂರ್ತಯೇ
ನಮಃ " ಗುರುಗ್ರಹವು ಶಿವನ ಒಂದು ಅಂಶವಾಗಿದೆ. ಗುರುವು ವಿಷ್ಣು ಮತ್ತು ರುದ್ರ ಪ್ರಿಯ.
ಪೌರಾಣಿಕರು ಕಂಡಂತೆ ಗುರುವಿನದು ಬಂಗಾರದಂತೆ ಹೊಳೆಯುವ ಹಳದಿಬಣ್ಣದ ಶರೀರ, ನೀಲಿ ಮತ್ತು ಹಳದಿ ಮಿಶ್ರಿತ ಕಣ್ಣು ಮತ್ತು ಕೂದಲು, ಸ್ಥೂಲ ದೇಹ, ಸರ್ವಾವಿಧ್ಯಪ್ರವೀಣ, ಬ್ರಹ್ಮಜ್ಞಾನಿ,
ಸಿಂಹನಾದದಂತೆ ಸ್ವರ, ದೇವತೆಗಳಿಗೆ ಗುರುವಾದ್ದರಿಂದ ಈ ಬೃಹಸ್ಪತಿಗೆ ಗುರು ಎಂದು ಹೆಸರು. ಉಳಿದ ಗ್ರಹಗಳಿಗಿಂತ
ದೊಡ್ಡಗಾತ್ರದ ಗ್ರಹವಾದ ಕಾರಣದಿಂದಲೂ ಗುರು ಎಂದು ಹೆಸರು. ಹಳದಿಬಣ್ಣದ ಬಟ್ಟೆಯನ್ನುಟ್ಟ ಬಂಗಾರದ ಬಣ್ಣದ ಮೈಕಾಂತಿ ಹೊಂದಿದ ಚತುರ್ಭುಜಿ ಈತ, ಕೈಯಲ್ಲಿ ದಂಡ, ವರಮುದ್ರೆ, ಜಪಮಾಲೆ, ಕಮಂಡಲುಗಳನ್ನು ಧರಿಸಿದ್ದಾನೆ,
ಪಿಂಗಳ ಬಣ್ಣದ ಕಂಗಳು, ವೇದವಿದ್ಯಾ ಪ್ರವೀಣ, ಗಂಭೀರ ಹಾಗೂ ಸ್ಪಷ್ಟವಾದ ಸ್ವರ, ಪುಟಕ್ಕಿಟ್ಟ ಬಂಗಾರದಂತೆ ಹೊಳೆಯುವ ಮೈಬಣ್ಣ, ಉಬ್ಬಿದ ವಿಶಾಲವಾದ ಎದೆ, ಗಿಡ್ಡ ಶರೀರ, ಧಾರ್ಮಿಕ, ವಿನಯಶೀಲ, ನಿಪುಣ, ಸ್ಥಿ ರವಾಗಿ ನೆಟ್ಟ ದೃಷ್ಟಿ ಉಳ್ಳವ, ಸಾಹಸ ಶೀಲ, ಪೀತವಸ್ತ್ರಧಾರಿ........
ಇವು ಗುರುವಿನ ಸ್ವರೂಪ.
ಆಂಗೀರಸ ಮಹರ್ಷಿಯ ಮಗ, ಪತ್ನಿ -- ತಾರೆ, ಇವಳಲ್ಲಿ ಸ್ವಿಷ್ಣಕೃತ್ , ವಡವಾಗ್ನಿ, ಮೊದಲಾದ ಆರುಜನ ಮಕ್ಕಳು, ಏಳನೆಯವಳು ಮಗಳು ಸ್ವಾಹಾ, ಕಚ ಕೂಡ ಗುರುವಿನ ಮಗನೇ, ಅಸುರರನ್ನು ಸೋಲಿಸಿ ಸುರರನ್ನು ರಕ್ಷಿಸುವುದರಲ್ಲಿ ಈತನದೇ ಬಹು ಮುಖ್ಯ ಪಾತ್ರ, ಶುಕ್ರಾಚಾರ್ಯರು
" ಧೂಮ್ರವ್ರತ " ಎಂಬ ತಪಸ್ಸಿನಲ್ಲಿದ್ದಾಗ. ಗುರುವು ಶುಕ್ರನ ವೇಶದಿಂದ ರಾಕ್ಷಸ ರಾಜನಲ್ಲಿಗೆ ಹೋಗಿ ನಾಸ್ತಿಕತ್ವವನ್ನು ಬೋಧಿಸಿದ, ಇದರ ಫಲವಾಗಿ ರಾಕ್ಷಸಕುಲ ತಪಸ್ಸು ಮುಗಿಸಿದ ಶುಕ್ರಾಚಾರ್ಯರಿಂದ
ಶಾಪಗ್ರಸ್ಥವಾಯಿತು.
ದೈತ್ಯ ನಾಶಕ್ಕಾಗಿ ಸರಸ್ವತಿ ನದಿತೀರದಲ್ಲಿ
ಬೃಹಸ್ಪಥ್ಯಾಚಾರ್ಯರು ಮಹಾಯಾಗವೊಂದನ್ನು ಆಚರಿಸಿದ ಬಗ್ಗೆ ಮಹಾಭಾರತದಲ್ಲಿ
ಉಲ್ಲೇಖವಿದೆ. ದೇವಾಗುರುವಾದ
ಈತ ಸ್ವಾಭಿಮಾನಿ, ಅವಮಾನ ಅಗೌರವಗಳನ್ನು ಸಹಿಸಲಾರ , ಅದೊಂದು ದಿನ ದೇವಸಭೆ ಗೆ ಗುರು ಆಗಮಿಸಿದಾಗ ದೇವೇಂದ್ರ ಎದ್ದು ನಿಲ್ಲಲಿಲ್ಲ, ಈ ಘಟನೆ ಗುರುವಿಗೆ ಸಹನೆಯಾಗಲಿಲ್ಲ, ಯಾವ ಮಾತು ಆಡದೆ ಜಾಗ ಖಾಲಿ ಮಾಡಿದರು, ಬೃಹಸ್ಪತಿ ಎಲ್ಲಿ ಹೋದರೆಂದು ಯಾರಿಗೂ ತಿಳಿಯಲಿಲ್ಲ, ಪುರೋಹಿತರ ಮಂತ್ರಬಲವಿಲ್ಲದ ಕಾರಣ ದೇವಗಣ ಸುಲಭವಾಗಿ ರಾಕ್ಷಸರಿಗೆ ಸೋತಿತು.
ಶುಕ್ರ ರಾಕ್ಷಸರ ಗುರುವಾದ್ದರಿಂದ
ದೇವದಾನವರು ಯಾವಾಗಲೂ ಯುದ್ಧದಲ್ಲಿ ತಂತ್ರ ಪ್ರತಿ ತಂತ್ರ ಹೂಡುವ ಸಲುವಾಗಿ ಗುರುವಿಗೆ ಶುಕ್ರ ಶತ್ರುವಾಗಿದ್ದಾನೆ.
ಕೆಲವು ಪುರಾಣಗಳ ಪ್ರಕಾರ.... ಗುರುವಿನ ಪತ್ನಿಯನ್ನು ಬುಧ ಮೋಹಿಸಿದ ಪರಿಣಾಮ ಬುಧ ಗುರುವಿಗೆ ಶತ್ರುವಾದ.
ಗುರುಗ್ರಹದ ಶುಭದೃಷ್ಟಿ ಪಡೆದವರು ಧೀರ್ಘದೇಹದ, ಎತ್ತರದ, ನೀಳಕಾಯರು, ಬೀಳುಪಾಗಿಯೂ ಹಣೆ ಉಬ್ಬಾಗಿಯೂ, ಇರುತ್ತಾರೆ. ಧರ್ಮ ಕಾರ್ಯ ನಿರತರು, ಸಮಾಜ ಸುಧಾರಕರು, ದೇವರ ಕೆಲಸ ಮಾಡಲು ಸದಾ ಮುಂದೆ ನಿಲ್ಲುತ್ತಾರೆ.
ಇವರ ಮುಖದಲ್ಲಿ ದೈವಕಳೆ ಇರುತ್ತದೆ, ಎಂಥಾಪರಿಸ್ಥಿತಿಯಲ್ಲೂ ಹಿಂದೆ ಸರಿಯುವವರಲ್ಲ,
ಶಿಕ್ಷಕವೃತ್ತಿ, ನ್ಯಾಯಾಧೀಶರು,
ದೇವಸ್ಥಾನದ ಧರ್ಮ ದರ್ಶಿಗಳು, ವೇಧಾಧ್ಯಯನ ಮಾಡುವವರು, ಕರುಣೆ ವಾತ್ಸಲ್ಯ ಇರುವವರು, ಮನೆಯಲ್ಲಿ ಯಾವಾಗಲೂ ಮಂಗಳ ಕಾರ್ಯಗಳು, ಉತ್ತಮ ಸಂಸಾರ ಪಡೆಯುವ ಅವಕಾಶ, ಆದರೆ ದುರಾದೃಷ್ಟವೆಂದರೆ ಇವರಿಗೆ ಸ್ವಾರ್ಥ ಮನೋಭಾವ ಇಲ್ಲದ ಕಾರಣ ಇವರಿಂದ ಬೇರೆಯವರಿಗೆ ಉಪಯೋಗವೇ ವಿನಃ ಇವರ ಸ್ವಂತ ಜೀವನ ಅತೀ ಸರಳ ಹಾಗೂ ಐಶ್ವರ್ಯ ರಹಿತವಾಗಿರುತ್ತದೆ.
ಗುರುವಿನ ಅಶುಭ ದೃಷ್ಟಿಯಿಂದ ( ಗುರುವು ಅಶುಭ ನಾಗಿದ್ದಾಗ) ಕಳಾಹೀನನು, ವಿದ್ಯೆಯಿದ್ದರೂ ಅದರಿಂದ ಇತರರಿಗೆ ಉಪಯೋಗ ಆಗಲಾರದು, ರಾಜಕೋಪಕ್ಕೆ ಗುರಿಯಾಗುವುದು, ತೊಂದರೆಗಳಲ್ಲಿ
ಸರಿಯಾದ ಮಾರ್ಗದರ್ಶನ ಸಿಗದೆ ಇರುವುದು, ತಿಳುವಳಿಕೆ ಇದ್ದರು ಹೆಡ್ಡನಂತೆ ವರ್ತಿಸುವುದು,
ಬಡತನ, ಮಲಿನತೆಯಿಂದಿರುವುದು , ಸದಾ ಮೇಲಿಂದ ಮೇಲೆ ದುಃಖ ಕಷ್ಟಗಳನ್ನೆದುರಿಸುವುದು, ದುಡಿತಕ್ಕೆ ತಕ್ಕ ಪ್ರತಿಫಲ ಇಲ್ಲದಿರುವುದು ಮುಂತಾದವು ಘಟಿಸುತ್ತವೆ.
ಗುರುವಿನ ಶುಭತ್ವಕ್ಕಾಗಿ ಶಿವ ಹಾಗೂ ವಿಷ್ಣುವಿನ ಪ್ರಾರ್ಥನೆ, ಕಾರ್ತಿಕ ಮಾಸದ ಸೋಮವಾರ ಶಿವನಿಗೆ ಬಿಲ್ವ, ಭಸ್ಮದೊಂದಿಗೆ
ರುದ್ರಾಭಿಷೇಕ, ಕಡಲೆ ನೈವೇದ್ಯಮಾಡಿ ಇತರರಿಗೆ ಹಂಚುವುದು, 48 ದಿನಗಳ ಕಾಲ ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಮಾಡುವುದರಿಂದ
ಗುರುವಿನ ಅನುಗ್ರಹ ಪಡೆಯಬಹುದು.
ಗುರುಲತ್ತಾಕಾಲದ ಲ್ಲಿ :-- ಪುತ್ರರಿಗೆ ಪೀಡೆ, ಅಧಿಕಾರ ನಾಶ, ಸ್ಥಾನ ಚಲನೆ ಮುಂತಾದ ಅನಿಷ್ಟ ಫಲಗಳು ಜರುಗುತ್ತವೆ.
ಶಾಂತಿ :-- ರುದ್ರಜಪ, ಸುವರ್ಣ ಪ್ರತಿಮಾಧಾನ ಮಾಡುವುದರಿಂದ
ಶಾಂತಿ ಹೊಂದಬಹುದು.
ಗುರುಗ್ರಹವನ್ನು ಸ್ತುತಿಸುವ
ಮಂತ್ರ :--
" ದೇವಾನಾಂಚ ಋಷೀಣಾ0ಚ ಗುರು0 ಕಾಂಚನ ಸನ್ನಿಭಂ
ಬುದ್ಧಿಭೂತಮ್ ತ್ರೈಲೋಕೇಶಮ್ ತಂ ನಮಾಮಿ ಬೃಹಸ್ಪತಿಮ್"
ಈ ಶ್ಲೋಕ ಪಠಣೆಯಿಂದ ಗುರುಗ್ರಹದ ದೋಷವನ್ನು ಪರಿಹರಿಸಿಕೊಳ್ಳಬಹುದು.
ಗುರು ಗಾಯತ್ರೀ
ಮಂತ್ರ :--
ಓಂ ಸುರಾಚಾರ್ಯಾಯ
ವಿದ್ಮಹೇ
ವಾಚಸ್ಪತಾಯ ಧೀಮಹಿ
ತನ್ನೋ ಗುರು ಪ್ರಚೋದಯಾತ್
ಗುರು ಪೀಡಾ
ಪರಿಹಾರ ಸ್ತೋತ್ರ
:--
ದೇವಮಂತ್ರಿ ವಿಶಾಲಾಕ್ಷ ಸದಾ ಲೋಕಹಿತೇ ರತಃ
ಅನೇಕ ಶಿಷ್ಯ ಸಂಪೂರ್ಣಮ್ ಪೀಡಾಂ ಹರತು ಮೇ ಗುರುಃ
ಏಕಾಕ್ಷರಿ ಬೀಜಮಂತ್ರ
:--
ಓಂ ಬೃಂ ಬೃಹಸ್ಪತಯೇ ನಮಃ
ಅನುಕೂಲ ಮಂತ್ರ
:--
ಹ್ರೀ0 ಕ್ಲೀ0 ಸೌಃ
( ಜಪ ಸಂಖ್ಯೆ ಒಂದೂ ಕಾಲು ಲಕ್ಷ )
ತಾಂತ್ರಿಕ ವಿಧಾನ
ಮಂತ್ರ :--
ಓಂ ಗ್ರಾ0 ಗ್ರೀ0 ಗ್ರೌ0 ಸಃ ಗುರವೇ ನಮಃ
( ಜಪ ಸಂಖ್ಯೆ 19,000 )
ಗುರುವಿನ ಕ್ಷೇತ್ರವಾದ ಧನುರ್ ಲಗ್ನ ದವರು ಪೂಜಿಸಿ ಧರಿಸ ಬಹುದಾದ ಯಂತ್ರ
ಪಂಚದಶಾಯಂತ್ರ
6
|
7
|
2
|
1
|
5
|
9
|
8
|
3
|
4
|
ಬೀಸಾಯಂತ್ರ
10
|
5
|
12
|
11
|
9
|
7
|
6
|
13
|
8
|
ಓಂ ಹ್ರೀಂ ಕ್ಲೀ0 ಸೌಃ
ಗುರುವಿನ ಕ್ಷೇತ್ರವಾದ ಮೀನಾ ಲಗ್ನದವರು ಪೂಜಿಸಿ ಧರಿಸ ಬಹುದಾದ ಯಂತ್ರ
ಪಂಚ ದಶಾ ಯಂತ್ರ
4
|
9
|
2
|
7
|
5
|
3
|
8
|
1
|
6
|
ಬೀಸಾಯಂತ್ರ
10
|
5
|
12
|
11
|
9
|
7
|
6
|
13
|
8
|
ಓಂ ಹ್ರೀಂ ಕ್ಲೀ0 ಸೌಃ
ನಮ್ಮ ಸೌರಮಂಡಲದ ಅತೀ ದೊಡ್ಡ ಗ್ರಹ ಗುರು. ನಾವು ಭಾರತೀಯರು ಗುರುವನ್ನು ಬೃಹಸ್ಪತಿ ಎಂದೂ ಕರೆಯುತ್ತೇವೆ.
ರೋಮನ್ ಪುರಾಣದಲ್ಲಿ ಗುರುವನ್ನು ದೇವತೆಗಳ ರಾಜ ಎಂದು ಕರೆಯುತ್ತಾರೆ. ಈ ಗುರುಗ್ರಹವು ಎಷ್ಟು ದೊದ್ಸದೆಂದರೆ
ಸೌರಮಂಡಲದ ಉಳಿದ ಎಲ್ಲಾ ಗ್ರಹಗಳನ್ನು ಸೇರಿಸಿದ್ರೂ , ಅದು ಗುರುಗ್ರಹದ ಅರ್ಧದಷ್ಟು ಮಾತ್ರವೇ ಆಗುತ್ತದೆ. ಅಂದರೆ ಊಹಿಸಿಕೊಳ್ಳಿ.... ಗುರುಗ್ರಹವು ಇನ್ನೆಷ್ಟು ದೊಡ್ಡ ಗ್ರಹವಾಗಿರಬಹುದು. ನಮ್ಮ ಸೌರಮಂಡಲದಲ್ಲಿ ಹೆಚ್ಚು ಬಲವಾದ ಗುರುತ್ವಾಕರ್ಷಣೆಯನ್ನು ಹೊಂದಿರುವ ಗ್ರಹ ಕೂಡ ಗುರುಗ್ರಹವೇ. ಇದರ ಗುರುತ್ವಾಕರ್ಷಣೆಯು ಭೂಮಿಯ ಗುರುತ್ವಾಕರ್ಷಣೆಗಿಂತ 2.5 ರಷ್ಟು ಹೆಚ್ಚು. ಗುರುಗ್ರಹವು ಸೌರಮಂಡಲದ ಒಳಗೆ ನುಸುಳಿ ಬರುವ ಆಕಾಶ ಕಾಯಗಳನ್ನು ಹಾಗೂ ಚಿಕ್ಕ ಚಿಕ್ಕ ಉಪಗ್ರಹಗಳನ್ನು ತನ್ನತ್ತ ಸೆಳೆದುಕೊಳ್ಳುತ್ತದೆ, ಹಾಗೂ ಗುರು ಗ್ರಹದ ಬೃಹತ್ ಪ್ರಮಾಣದ ಗುರುತ್ವದಿಂದಾಗಿ ಗುರುವಿನತ್ತ ನುಸುಳಿ ಬರುವ ಆಕಾಶಕಾಯಗಳು ಚೂರು ಚೂರಾಗಿ ಹೋಗುತ್ತವೆ, ಇದರಿಂದಾಗಿ ನಮ್ಮ ಭೂಮಿಗೆ ಗುರುಗ್ರಹವು ಒಂದು ರೀತಿಯ ರಕ್ಷಣೆಯನ್ನು
ನೀಡುತ್ತದೆ.
ಗುರುಗ್ರಹವು ಅಂದಾಜು 63 ಉಪಗ್ರಹಗಳನ್ನು
( moons ) ಹೊಂದಿದೆ, ಈ ಉಪಗ್ರಹಗಳಿಗೆ ರೋಮನ್ ದೇವರಿಗಳ ಹೆಸರನ್ನು ಇಡಲಾಗಿದೆ, ಗುರುಗ್ರಹದ ನಾಲ್ಕು ದೊಡ್ಡ ಉಪಗ್ರಹಗಳೆಂದರೆ
ಐ ಯೋ ( I O ) , ಯುರೋಪಾ ( Europa) , ಗೈನಿಮೆಡ್ ( Ganymede) ,ಹಾಗೂ ಕ್ಯಾಲಿಷ್ಟೋ ( Callisto ). ಈ ನಾಲ್ಕೂ ಉಪಗ್ರಹಗಳನ್ನು
ಪತ್ತೆ ಹಚ್ಚಿದ್ದು ಗೆಲಿಲಿಯೋ ಗೆಲಿಲೈ, ಹಾಗಾಗಿ ಈ ನಾಲ್ಕೂ ಉಪಗ್ರಹಗಳನ್ನು
Galilean moons ಎಂದೇ ಕರೆಯಲಾಗುತ್ತಿದೆ. ಇವುಗಳಲ್ಲಿ ಗೈನಿಮೇ ಡ್ ನಮ್ಮ ಸೌರಮಂಡಲದ ಅತಿ ದೊಡ್ಡ ಉಪಗ್ರಹ, ಈ ಉಪಗ್ರಹವು ಬುಧ ಹಾಗೂ ಪ್ಲೂಟೊ ಗ್ರಹಗಳಿಗಿಂತಲೂ
ದೊಡ್ಡದು ಹಾಗೂ ಆಯಾಸ್ಕಾ0ತೀಯ ಶಕ್ತಿಯನ್ನು ಹೊಂದಿರುವ ಏಕೈಕ ಉಪಗ್ರಹ. 1979 ರಲ್ಲಿ ನಾಸಾದ ವಾಜೆಯರ್ 1 ವ್ಯೋಮನೌಕೆ ಗುರುಗ್ರಹಕ್ಕೂ 3 ರಿಂಗ್ ಗಳಿವೆಯೆಂದು ಪತ್ತೆ ಹಚ್ಚಿದೆ, ಈ ಮೂರು ರಿಂಗ್ ಗಳು ಬಹಳ ಅಸ್ಪಷ್ಟವಾಗಿದೆ.
ಗುರುಗ್ರಹವು ತನ್ನ ಅಕ್ಷದಲ್ಲಿ ತನ್ನ ಸುತ್ತ ಅತ್ಯಂತ ವೇಗದಲ್ಲಿ ಸುತ್ತುತ್ತದೆ, ಅದು ತನ್ನ ಸುತ್ತ ಒಂದು ಸುತ್ತು ಸುತ್ತಲೂ ತೆಗೆದುಕೊಳ್ಳುವ
ಸಮಯ 9 ಗಂಟೆ 56 ನಿಮಿಷಗಳು, ಅಂದರೆ ಗುರುಗ್ರಹದಲ್ಲಿ
ಒಂದು ದಿನದ ಸಮಯ 9 ಗಂಟೆ 56 ನಿಮಿಷಗಳು. ಭೂಮಿಗಿಂತ ಗಾತ್ರದಲ್ಲಿ ಸಾವಿರ ಪಟ್ಟು ದೊಡ್ಡದಾಗಿರುವ ಗುರು ತನ್ನ ಸುತ್ತ ಗಿರಕಿ ಹೊಡೆಯಲು ತೆಗೆದುಕೊಳ್ಳುವ ಕಾಲ ಭೂಮಿ ತೆಗೆದುಕೊಳ್ಳುವುದಕ್ಕಿಂತಲೂ ಕಡಿಮೆ, ಗುರು ಗ್ರಹದಲ್ಲಿ ಒಂದು ವರ್ಷ ಸುಮಾರು 4,300 ಭೂ ದಿನಗಳು, ಅಂದ್ರೆ ಗುರುವು ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ ಕಾಲ 11.8 ಭೂ ವರ್ಷಗಳು. ಅತ್ಯಂತ ವೇಗದಲ್ಲಿ ಗುರು ತನ್ನ ಸುತ್ತ. ಸುತ್ತುತ್ತಿರುವುದರಿಂದ ಗುರುಗ್ರಹದ ಭೂಮದ್ಯ ( equator ) ಉಬ್ಬಾಗಿದೆ ಹಾಗೂ ದ್ರುವಗಳು ( poles ) ಸಮತಟ್ಟಾಗಿದೆ.
ಗುರುವು ಪ್ರಮುಖವಾಗಿ ಒಂದು ಅನಿಲ ದೈತ್ಯ ( gas gaint ) .
ಈ ಗ್ರಹದಲ್ಲಿ ಯಾವುದೇ ರೀತಿಯ ಜಲ ಮೂಲವಿಲ್ಲ, ಹಾಗಾಗಿ ಯಾವುಸೆ ಜೀವಿಗಳು ಇಲ್ಲಿ ಬದುಕಲು ಸಾಧ್ಯವಿಲ್ಲ, ಆದರೆ ಗುರುಗ್ರಹದ ಉಪಗ್ರಹ " ಯುರೋಪಾ " ದ ಮೇಲೆ ಜೀವಸಂಕುಲ ಇರುವ. ಸಾಧ್ಯತೆ ಇದೆ ಎಂಬ ಪ್ರಸ್ತಾವನೆ ಇದೆ. ಯುರೋಪಾ ಡಾ ಮೇಲೆ ನೀ ರು ಮಂಜುಗಡ್ಡೆಯ ರೂಪದಲ್ಲಿದೆ, ಹಾಗಾಗಿ ಜೀವಿಸಲು ಸಾಧ್ಯವಿರಬಹುದು
ಎಂಬ ಚರ್ಚೆ ಹಾಗೂ ಊಹಾಪೋಹಗಳು ನಡೆದಿದೆ.
--:ಭೌತಿಕ
ಗುಣ ಲಕ್ಷಣಗಳು
:--
ಸಮಭಾಜಕ ರೇಖೆಯ ವ್ಯಾಸ -- 142,984
km [1]
(11.209 earths )
ದೃವಗಳ. ಮೂಲಕ ವ್ಯಾಸ -- 133,709 km ( 10.517 Earths )
ಮೇಲ್ಮೈ ವಿಸ್ತೀರ್ಣ -- 6.14×10^10
km(120.5 ಈರ್ತ್ಸ್)
ಗಾತ್ರ -- 1.431 × 10^15 km (
1321.3 Earths)
ದ್ರವ್ಯ ರಾಶಿ -- 1.899
× 10 ^29 kg ( 317.8 Earths)
ಸರಾಸರಿ ಸಾಂದ್ರತೆ -- 1.326
g/cm^3
ಸಮಭಾಜಕದ ಬಳಿ ಗುರುತ್ವ -- 23.12 m/s^2 ( 2.358 gee )
ಮುಕ್ತಿ ವೇಗ -- 59.54 km / ಪ್ರತಿ ಕ್ಷಣ
ಅಕ್ಷೀಯ ಪರಿಬ್ರಮಣ ಕಾಲ -- 0.413 538 021 d
ಅಕ್ಷೀಯ ಪರಿಭ್ರಮಣ ವೇಗ -- 12.6km / ಪ್ರತಿ ಕ್ಷಣ
(ಕಕ್ಷೆಯ ಗುಣಗಳು)
ಧೀರ್ಘಅರ್ಧ ಅಕ್ಷ -- 778,412,027
km
ಕಕ್ಷೆಯ ಪರಿಧಿ --
4.888Tm
ಕಕ್ಷೀಯ ಕೇಂದ್ರ ಚ್ಯುತಿ -- 0.048 392 66
Perihelion --
740,742,598 km
Aphelion --.
816,081,455,km
ಕಕ್ಷೀಯ ಪರಿಭ್ರಮನ ಕಾಲ 4333.2867d
Synodic period. --
398.88 d
ಸರಾಸರಿ ಕಕ್ಷಾ ವೇಗ -- 13.712 km/ ಪ್ರತಿಕ್ಷಣ
ಓರೆ -- 1.305 30° ( ಸೂರ್ಯನ ಸಮಭಾಜಕದ ರೇಖೆಗೆ 6.09°)
ನೈಸರ್ಗಿಕ ಉಪಗ್ರಹದ ಸಂಖ್ಯೆ -- 63
Longitude of the
ascending node -- 100.556 15°
(ಸಮಭಾಜಕದಲ್ಲಿ)
ಅಕ್ಷದ ಒರೆ -- 3.13°
Right ascension of
North Pole -- 268.05 ° (17 h 52min 12 s)
Declination. --.
64.49°
ಪ್ರತಿಫಲನಾಂಶ -- 0.52
ಮೇಲ್ಮೈ ತಾಪಮಾನ -- min -- 110k
mean -- 152 k
max -- N/A
Adjective -- Jovian
--:Atmosphere characteristics :--
ವಾತಾವರಣದ ಒತ್ತಡ -- 70 k P a
ಜಲಜನಕ -- ~86%
ಹೀಲಿಯಂ -- ~14%
ಮೀಥೇನ್ -- 0.1%
ನೀರಾವಿ -- 0.1%
ಅಮೋನಿಯಾ -- 0.02%
ಈಥೇನ್ -- 0.0002 %
ಪೋಸ್ಫಿನ್ -- 0.0001%
ಹೈಡ್ರೋಜನ್ ಸಲ್ಫಾಯ್ಡ್ -- <0.00010%
**************************
✍ ಡಾ||
B. N. ಶೈಲಜಾ ರಮೇಶ್...
Wonderful madam
ReplyDeletethank you
ReplyDelete