ಹರಿಃ ಓಂ
ಓಂ ಶ್ರೀ ಮಹಾಗಣಪತಯೇ ನಮಃ
ಓಂ ಶ್ರೀ ಗುರುಭ್ಯೋನಮಃ
*ಗುರುಗ್ರಹವು ಧನಸ್ಸು ರಾಶಿಗೆ ಪ್ರವೇಶದಿಂದ ಅನುಕೂಲವಾಗುವ ರಾಶಿಗಳು:--*
ಓಂ ಶ್ರೀ ಮಹಾಗಣಪತಯೇ ನಮಃ
ಓಂ ಶ್ರೀ ಗುರುಭ್ಯೋನಮಃ
*ಗುರುಗ್ರಹವು ಧನಸ್ಸು ರಾಶಿಗೆ ಪ್ರವೇಶದಿಂದ ಅನುಕೂಲವಾಗುವ ರಾಶಿಗಳು:--*
ಗುರು ಗ್ರಹ ನಮ್ಮ ಸೌರವ್ಯೂಹದಲ್ಲಿ ಅತಿ ದೊಡ್ಡ ಗ್ರಹ, ಗುರು ಎಂದರೆ ದೊಡ್ಡದು ಜ್ಞಾನವುಳ್ಳದ್ದು ಎಂದರ್ಥ. ಗುರುಗ್ರಹ ತನ್ನ ಶಕ್ತಿಯಿಂದ ಪಾಪಗ್ರಹಗಳ ದೃಷ್ಟಿಯನ್ನು ಕಡಿಮೆಮಾಡುತ್ತದೆ ಗುರುಗ್ರಹವು ದ್ವಾದಶ ರಾಶಿಗಳಲ್ಲಿ ಸಂಚಾರ ಮಾಡುವಾಗ ಎಲ್ಲಾ ರಾಶಿಯಲ್ಲಿ ಒಂದು ವರ್ಷದ ಕಾಲ ಇರುತ್ತದೆ , ಒಬ್ಬ ವ್ಯಕ್ತಿಯ ಜಾತಕ ಚಕ್ರದಲ್ಲಿ ಗುರುವು ಶುಭ ಸ್ಥಾನದಲ್ಲಿರುವವರಿಗೆ ಕೀರ್ತಿ ಯಶಸ್ಸು ವಿದ್ಯೆ ಸಂಪತ್ತು ಮತ್ತು ವೈವಾಹಿಕ ಜೀವನ ಉತ್ತಮ ಇರುವಂತೆ ಮಾಡುತ್ತದೆ ಮತ್ತು ಒಳ್ಳೆಯ ಅದೃಷ್ಟವನ್ನು ತಂದುಕೊಡುತ್ತದೆ. ಗುರು ಗ್ರಹವನ್ನು ಸಂಪೂರ್ಣವಾದ ಶುಭಗ್ರಹ ಅಂತಾನೆ ಹೇಳಬಹುದು ದೇವರ ಮೇಲೆ ಭಕ್ತಿ ಹೆಚ್ಚಾಗುವಂತೆ ಮಾಡುತ್ತದೆ ಉಳಿದ ಗ್ರಹಗಳ ಗೋಚಾರದ ಫಲಾಫಲಗಳು ಗುರುಗ್ರಹದ ಮೇಲೆ ಆಧಾರವಾಗಿರುತ್ತದೆ. ಅಂತಹ ಗುರು ಗ್ರಹವು ಶುಭಸ್ಥಾನದಲ್ಲಿದ್ದರೆ ಅನುಕೂಲ ಫಲಿತಾಂಶಗಳನ್ನು ಕಾಣಬಹುದು. ನಮ್ಮ ಕೆಲಸಗಳು ನಿಧಾನವಾಗುವುದು ಇನ್ನಿತರ ಕೆಲಸಕಾರ್ಯಗಳಲ್ಲಿ ತಡೆ ಮತ್ತು ಮದುವೆ ಕಾರ್ಯದಲ್ಲಿ ತಡವಾಗುವುದು ಆಗುತ್ತಿದ್ದರೆ ಜಾತಕದಲ್ಲಿ ಗುರುವಿನ ಸ್ಥಾನವು ಅನುಕೂಲವಾಗಿಲ್ಲ ಎಂದು ತಿಳಿಯಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2019ರ ನವೆಂಬರ್ 5ನೆ ತಾರೀಖು ಬೆಳಿಗ್ಗೆ 2 - 45 ರಿಂದ 3 ಗಂಟೆಯ ಮಧ್ಯದಲ್ಲಿ , ಅಂದರೆ ಇಂದು ಬೆಳಗಿನ ಜಾವ ಗುರು ಗ್ರಹವು ವೃಶ್ಚಿಕ ರಾಶಿಯಿಂದ ತನ್ನ ಸ್ವಸ್ಥಾನವಾದ ಧನಸ್ಸುವಿಗೆ ಪ್ರವೇಶಿಸಿದೆ.
ಗುರುವು ಧನುರ್ ರಾಶಿಗೆ ಪ್ರವೇಶಿಸಿರುವುದರಿಂದ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಲಾಭದಾಯಕವಾಗಿದೆ.... ಆ ರಾಶಿಗಳು ಯಾವುದೆಂದು ತಿಳಿಯೋಣ.
*ಗುರುಗ್ರಹವು ಗೋಚಾರದಲ್ಲಿ ಎರಡನೇ ಸ್ಥಾನ 5 ನೇ ಸ್ಥಾನ ಏಳನೇ ಸ್ಥಾನ 9ನೇ ಸ್ಥಾನ ಮತ್ತು 11ನೇ ಸ್ಥಾನದಲ್ಲಿ ಸಂಚರಿಸುವಾಗ ಒಳ್ಳೆಯ ಫಲಿತಾಂಶ ನೀಡುತ್ತದೆ . ಗುರುವು ಈ ಸ್ಥಾನಗಳಲ್ಲಿ ಸಂಚರಿಸುವಾಗ ಗುರುಬಲ ಇದೆಯೆಂದು ತಿಳಿಯಬೇಕು.*
ಮೊದಲಿಗೆ *ಮೇಷ ರಾಶಿಗೆ* ಗುರುವು 9ನೇ ಸ್ಥಾನದಲ್ಲಿ ಸಂಚರಿಸುವುದರಿಂದ ಈ ಸಮಯದಲ್ಲಿ ಮೇಷ ರಾಶಿಯವರಿಗೆ ಅದ್ಭುತವಾದ ಫಲಿತಾಂಶ ಸಿಗುತ್ತದೆ. ಮುಖದಲ್ಲಿ ಶಾಂತಿ ಹೆಚ್ಚಾಗುತ್ತದೆ. ವೇದಶಾಸ್ತ್ರಗಳು ಕಲಿಯಬೇಕು ಎಂಬ ಆಸೆಗಳು ಹೆಚ್ಚಾಗುತ್ತದೆ . ವ್ಯಾಪಾರದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣುತ್ತಾರೆ. ಮದುವೆ ಪ್ರಯತ್ನ ಮಾಡುವವರಿಗೆ ಇದು ಒಳ್ಳೆಯ ಸಮಯ . ಶತ್ರುಗಳ ಮೇಲೆ ಜಯಭೇರಿಯನ್ನು ಸಾಧಿಸಬಹುದು, 9 ನೇ ಸ್ಥಾನದಲ್ಲಿ ಅದೂ ತನ್ನ ಸ್ವಸ್ಥಾನದಲ್ಲಿ ಗುರು ಇರುವಾಗ ಕಾರ್ಯಸಿದ್ದಿ ,ಕುಟುಂಬ ಸೌಖ್ಯ ,ಅಧಿಕಾರವಿರುತ್ತದೆ .ಮತ್ತು ಅಭಿವೃದ್ಧಿಯನ್ನು ಕಾಣಲು ಅನುಕೂಲವಾಗಿರುವುದು ರಿಂದ ಇದು ಒಳ್ಳೆಯ ಯೋಗ ಅಂತಾನೆ ಹೇಳಬಹುದು.
*ಮಿಥುನ ರಾಶಿ :* ನಿಮಗೆ ಗುರು ಏಳನೇ ಸ್ಥಾನದಲ್ಲಿ ಇರುವುದರಿಂದ ಆರೋಗ್ಯವನ್ನು ಸುಧಾರಿಸುತ್ತದೆ. ಮತ್ತು ಪ್ರಶಾಂತತೆಯಿಂದ ಸಂತಸದಿಂದ ಇರುವ ಯೋಗ, ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣಬಹುದು, ವಿದೇಶ ಪ್ರಯಾಣಕ್ಕೆ ಅನುಕೂಲವಾಗುತ್ತದೆ. ವಿವಾಹ ಪ್ರಯತ್ನ ಮಾಡುವವರಿಗೆ ಒಳ್ಳೆಯ ಸಮಯ ಅಂತಾನೆ ಹೇಳಬಹುದು ವಿದ್ಯಾರ್ಥಿಗಳಿಗೆ ಅನುಕೂಲವಾದ ಸಮಯ ಇರುತ್ತದೆ. ಪುಣ್ಯಕ್ಷೇತ್ರ ತೀರ್ಥಕ್ಷೇತ್ರ ದರ್ಶನ. ಧನಲಾಭ, ಕುಟುಂಬ ಸೌಖ್ಯ, ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು,ದೈವಾನುಗ್ರಹದಿಂದ ಇದು ಒಳ್ಳೆಯ ಸಮಯ ಅಂತಾನೆ ಹೇಳಬಹುದು.
*ಸಿಂಹ ರಾಶಿ:* ಈ ರಾಶಿಗೆ ಗುರುವು ಐದನೇ ಸ್ಥಾನದಲ್ಲಿ ಇರುವುದರಿಂದ ಮಾಡುವ ಕೆಲಸದಲ್ಲಿ ವ್ಯಾಪಾರದಲ್ಲಿ ಒಳ್ಳೆಯ ಅದ್ಭುತವಾದ ಫಲಿತಾಂಶ ಕಾಣುವುದು. ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಾಗುತ್ತದೆ. ವ್ಯಾಪಾರ ವಿಸ್ತಾರವಾಗಿ ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಮತ್ತು ತುಂಬಾ ದಿನದಿಂದ ಅನುಭವಿಸುತ್ತಿರುವ ಸಮಸ್ಯೆಗಳು ದೂರವಾಗುತ್ತದೆ. ಮಾನಸಿಕ ಚಿಂತೆ ದೂರವಾಗುತ್ತದೆ . ಪ್ರತಿಭೆಗಳಿಗೆ ಪ್ರಶಾಂತತೆ ಸಿಗುತ್ತದೆ. ಸಿಂಹ ರಾಶಿಗೆ ಗುರುವು ಶುಭ ಸ್ಥಾನದಲ್ಲಿರುವುದರಿಂದ ಧನಲಾಭ, ಶತ್ರುನಾಶ , ಶುಭಕಾರ್ಯ ನಡೆಯುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತಿದೆ.
*ವೃಶ್ಚಿಕ ರಾಶಿಗೆ :* ಗುರುವು ಎರಡನೇ ಸ್ಥಾನದಲ್ಲಿ ಇರುವುದರಿಂದ ಆರ್ಥಿಕವಾಗಿ ಒಳ್ಳೆಯ ಫಲಿತಾಂಶ ಕಾಣಲಿದೆ. ಅದೃಷ್ಟ ಒಲಿದು ಬಂದು ಗೌರವ ಪ್ರಾಪ್ತಿಯಾಗುತ್ತದೆ. ಆಕಸ್ಮಿಕ ಧನಲಾಭ ಸಿಗುತ್ತದೆ. ಉದ್ಯೋಗದಲ್ಲಿ ಅದ್ಭುತವಾದ ಫಲಿತಾಂಶವನ್ನು ಕಾಣಬಹುದು. ಬಾಳಸಂಗಾತಿಯ ಜೊತೆ ಬಾಂಧವ್ಯ ಹೆಚ್ಚಾಗುತ್ತದೆ. ಋಣಬಾಧೆ ತೀರುತ್ತದೆ. ಅನಾರೋಗ್ಯ ಸಮಸ್ಯೆಯಿಂದ ಹೊರ ಬರುಬಹುದು. ಗುರುವು ಅನುಕೂಲ ವಾಗಿರುವುದರಿಂದ ಈಗ ಒಳ್ಳೆಯ ಕಾಲ ಅಂತನೇ ಹೇಳಬಹುದು.
*ಕುಂಭ ರಾಶಿ:* ಈ ರಾಶಿಗೆ ಗುರು 11 ನೆ ಸ್ಥಾನದಲ್ಲಿರುವುದರಿಂದ ಉದ್ಯೋಗ ಹುಡುಕುವವರಿಗೆ ಇದು ಒಳ್ಳೆಯ ಸಮಯ. ಮತ್ತು ವ್ಯಾಪಾರದಲ್ಲಿ ಒಳ್ಳೆಯ ಲಾಭವನ್ನು ಕಾಣುಬಹುದು. ಆತ್ಮವಿಶ್ವಾಸದಿಂದ ತೆಗೆದುಕೊಳ್ಳುವ ನಿರ್ಣಯದಿಂದ ವೃತ್ತಿ ವ್ಯಾಪಾರದಲ್ಲಿ ವಿಜಯವನ್ನು ಸಾಧಿಸಬಹುದು, ಆರೋಗ್ಯ ಚೆನ್ನಾಗಿರುತ್ತದೆ. ಹೊಸ ವಾಹನ ಖರೀದಿಯಿಂದ ಒಳ್ಳೆಯ ಲಾಭವಾಗುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಕಾಣುಬಹುದು. ಮಾನಸಿಕವಾಗಿ ಪ್ರಶಾಂತತೆಯಿಂದ ಕುಟುಂಬ ಸದಸ್ಯರ ಜೊತೆ ಸಂತೋಷದಿಂದ
ಇರಬಹುದು. ಗುರುವು ಈ ರಾಶಿಗೆ 11ನೇ ಸ್ಥಾನದಲ್ಲಿ ಸಂಚರಿಸುತ್ತಿರುವುದರಿಂದ ಧನಲಾಭ ಕೀರ್ತಿ ಯಶಸ್ಸು ಕುಟುಂಬ ಸೌಖ್ಯ ಸಿಗುತ್ತದೆ.
✍️ *ಡಾ: B.N. ಶೈಲಜಾ ರಮೇಶ್*
Beautiful
ReplyDeleteTq for good information
Delete