ಹರಿಃ ಓಂ
ಓಂ ಶ್ರೀ ಮಹಾಗಣಪತಯೇ ನಮಃ
ಓಂ ಶ್ರೀ ಗುರುಭ್ಯೋನಮಃ
ಸೂರ್ಯ ಗ್ರಹಣ ... ಒಂದು ಪಕ್ಷಿನೋಟ
*********************************
ದಿನಾಂಕ 26 ಡಿಸೆಂಬರ 2019 ಗುರುವಾರ (ಬೆಳಿಗ್ಗೆ)
ಶ್ರೀಶಕೆ 1941 ಶ್ರೀವಿಕಾರಿ ನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಅಮಾವಾಸ್ಯೆ
ಕರ್ನಾಟಕ,ತಮಿಳನಾಡು ಹಾಗೂ ಕೇರಳದ ಕೆಲವು ಪ್ರದೇಶದಲ್ಲಿ ಮಾತ್ರ ಕಂಕಣಾಕೃತಿಯು ಅಂದರೆ ವಜ್ರದ ಉಂಗುರದಂತೆ ಕಾಣಿಸುವ ಈ ಸೂರ್ಯ ಗ್ರಹಣವು, ಉಳಿದಂತೆ ಭಾರತದಾದ್ಯಂತ ಖಂಡಗ್ರಾಸವಾಗಿ ಕಾಣಿಸುವದು.
ಸೂರ್ಯಗ್ರಹಣ ಹೇಗೆ ಜರಗುತ್ತದೆ?
ಇದೊಂದು ನೈಸರ್ಗಿಕ ಸಹಜ ಪ್ರಕ್ರಿಯೆ. ಭೂಮಿ, ಸೂರ್ಯ ಹಾಗೂ ಚಂದ್ರನ ಮಧ್ಯೆ ನಡೆಯುವಂತಹ ಪ್ರಕ್ರಿಯೆ. ಸೂರ್ಯ ಚಂದ್ರ ಭೂಮಿ ಇವು ಒಂದೇ ಸಮತಲ ರೇಖೆಯಲ್ಲಿ ಬಂದಾಗ ಮಾತ್ರಾ ಸೂರ್ಯ ಗ್ರಹಣ ಸ೦ಭವಿಸುತ್ತದೆ. ಈ ಮೂರು ಗ್ರಹಗಳು ಒಂದೇ ರೇಖೆಗೆ ಸಮನಾಗಿ ಬಂದು ತಲುಪುತ್ತದೆ. ಈ ವೇಳೆ ಸೂರ್ಯನ ಕಿರಣಗಳು ಭೂಮಿಯನ್ನ ಸ್ಪರ್ಶಿಸದಂತೆ ಚಂದ್ರ ತಡೆಯುತ್ತದೆ. ಈ ಸಂದರ್ಭದಲ್ಲಿ ಸೂರ್ಯಗ್ರಹಣ ಉಂಟಾಗುತ್ತದೆ. ಶೇಕಡಾ 85ರಷ್ಟು ಸೂರ್ಯ ಗ್ರಹಣ ಗೋಚರವಾಗಲಿದೆ.
ಸರಿಸುಮಾರು ಬೆಳಗ್ಗೆ 8 ಗಂಟೆ 5 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ. ಬೆಳಗ್ಗೆ 9 ಗಂಟೆ 26 ನಿಮಿಷಕ್ಕೆ ಗ್ರಹಣದ ಮಧ್ಯ ಕಾಲ ಇರಲಿದೆ. ಅಂದರೆ, ಈ ಕಾಲದಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಲಿದೆ. ಬೆಳಗ್ಗೆ ಸುಮಾರು 11 ಗಂಟೆ 6 ನಿಮಿಷಕ್ಕೆ ಗ್ರಹಣ ಅಂತ್ಯವಾಗಲಿದೆ.
ಗ್ರಹಣದ ಆರಂಭ ಕಾಲ, ಮಧ್ಯ ಕಾಲ ಹಾಗೂ ಅಂತ್ಯ ಕಾಲ ಜಿಲ್ಲೆಯಿಂದ ಜಿಲ್ಲೆಗೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಆದ್ರೆ, ಕೆಲವೇ ಸೆಕೆಂಡ್‌ಗಳ ವ್ಯತ್ಯಾಸದಲ್ಲಿ ಎಲ್ಲರಿಗೂ ಗ್ರಹಣ ಗೋಚರವಾಗಲಿದೆ. ಗ್ರಹಣದ ದಿನ ಆಗಸದಲ್ಲಿ ಮೋಡ ಕವಿಯುವ ಸಾಧ್ಯತೆಯೂ ಇರುತ್ತದೆ. ಮೋಡಗಳು ಇಲ್ಲವಾದಲ್ಲಿ ಗ್ರಹಣದ ವೀಕ್ಷಣೆ ಸುಲಭವಾಗಲಿದೆ.
ಸೂರ್ಯ ಜಗತ್ತಿನ ಆತ್ಮ, ಸೂರ್ಯನ ಕಿರಣ ಇಲ್ಲ ಎಂದಾದರೆ ಭೂಮಿಯ ಮೇಲೆ ಹಗಲು-ರಾತ್ರಿ ಎನ್ನುವ ಸಂಗತಿಯೇ ಇರುವುದಿಲ್ಲ. ಸೂರ್ಯನ ಬೆಳಕು ಇಲ್ಲದೆ ಹೋದರೆ ಭೂಮಿಯ ಮೇಲೆ ಸಾಕಷ್ಟು ಅನಾರೋಗ್ಯಗಳು ಹಾಗೂ ಅಂಧಕಾರವು ತುಂಬಿಕೊಳ್ಳುವುದು. ಸೂರ್ಯನ ಒಂದು ಕಿರಣದಿಂದ ಇಂದು ಪ್ರಕೃತಿಯಲ್ಲಿರುವ ಜೀವ ಸಂಕುಲವು ಆರೋಗ್ಯಕರ ಜೀವನವನ್ನು ಕಾಣುತ್ತಿದ್ದಾರೆ. ಭೌಗೋಳಿಕವಾಗಿ ಸೂರ್ಯನು ಬಾಹ್ಯಾಕಾಶದಲ್ಲಿ ಗೋಚರಿಸುವ ಒಂದು ಕಾಯ ಅಂತಾದರೂ...... ಹಿಂದೂ ಧರ್ಮದ ಪ್ರಕಾರ ಸೂರ್ಯನು ನಮ್ಮ ಬದುಕನ್ನು ಹಸನಾಗಿಸುವ ದೇವರು. ಹಾಗಾಗಿ ನಿತ್ಯ ಸೂರ್ಯೋದಯವಾಗುತ್ತಿದ್ದಂತೆ ಸೂರ್ಯನಿಗೆ ನಮಸ್ಕರಿಸಿ, ದಿನದ ಆರಂಭವನ್ನು ಮಾಡುತ್ತೇವೆ. ನಮ್ಮ ರಕ್ಷಕನಾದ ಸೂರ್ಯನ ಮೇಲೆ ಉಂಟಾಗುವ ಕೆಲವು ಕಾಯಗಳ ಪ್ರಭಾವದಿಂದ ಗ್ರಹಣ ಉಂಟಾಗುವುದು. ಗ್ರಹಣವನ್ನು ಸಾಮಾನ್ಯವಾಗಿ ಸೂತಕ, ಅಶೌಚ, ಅಮಂಗಳ ಎಂದು ಪರಿಗಣಿಸಲಾಗುವುದು. ಜೀವ ಕುಲವನ್ನು ಸಂರಕ್ಷಿಸುವ ದೇವನಿಗೆ ಗ್ರಹಣ ಉಂಟಾದರೆ ಆಗ ಪ್ರಕೃತಿಯಲ್ಲಿ ಮಾಲಿನ್ಯ ಉಂಟಾಗುವುದು. ಜೊತೆಗೆ ಅಹಿತಕರ ಘಟನೆಗಳು ಸಂಭವಿಸುತ್ತವೆ. ಗ್ರಹಣದ ಪ್ರಭಾವ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೂ ಗಂಭೀರವಾದ ಪ್ರಭಾವವನ್ನು ಉಂಟುಮಾಡುವುದು ಎನ್ನಲಾಗುತ್ತದೆ.
ಹಿಂದೂ ಸಂಪ್ರದಾಯದ ಪ್ರಕಾರ ಗ್ರಹಣ ಕಾಲದ ಆಚರಣೆಗಳೇನು..?
ಗ್ರಹಣ ಕಾಲದಲ್ಲಿ ಗ್ರಹಣ ಆರಂಭದಿಂದ ಹಿಡಿದು ಅಂತ್ಯದವರೆಗೂ ಅನ್ನಾಹಾರ ಸೇವನೆ ನಿಷಿದ್ಧ. ಗ್ರಹಣಕ್ಕೂ ಮುನ್ನ ಮನೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳನ್ನು ಉಳಿಸಿ ಇಟ್ಟಿದ್ದರೆ ಅದನ್ನು ಬಳಸಬಾರದು. ಗ್ರಹಣ ಮೋಕ್ಷದ ಬಳಿಕ ಸ್ನಾನ, ಶುದ್ಧೀಕರಣ, ಜಪ-ತಪದ ಬಳಿಕ ಅಡುಗೆ ಮಾಡಿಕೊಂಡು ಊಟ ಮಾಡಬೇಕು. ಗರ್ಭಿಣಿಯರಿಗೆ ಸೂರ್ಯ ಗ್ರಹಣದ ವೇಳೆ ಬೆಳಕು ಬೀಳದಂತೆ ನೋಡಿಕೊಳ್ಳಬೇಕು. ಅತಿನೇರಳೆ ಕಿರಣಗಳು ಗರ್ಭಿಣಿಯರಿಗೆ ತಾಗಬಾರದು ಎಂಬ ವೈಜ್ಞಾನಿಕ ಹಿನ್ನೆಲೆಯೂ ಈ ನಂಬಿಕೆಗೆ ಇದೆ.
ಈ ವರ್ಷದಲ್ಲಿ ನಡೆಯುತ್ತಿರುವ ಕೊನೆಯ ಸೂರ್ಯಗ್ರಹಣ
2019ರ ಸಾಲಿನ ಕೊನೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸೂರ್ಯಗ್ರಹಣವು ಸಾಕಷ್ಟು ಗಂಭೀರ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ 26 ರಂದು ಸಂಭವಿಸುವ ಈ ಸೂರ್ಯ ಗ್ರಹಣವು ಗುರುವಾರ ಮೂಲಾ ನಕ್ಷತ್ರ, ಧನುರಾಶಿಯಲ್ಲಿ ಸೂರ್ಯನಿಗೆ ಕಂಕಣಾಕೃತಿಯಲ್ಲಿ ಕೇತು ಗ್ರಹಣವು ಸಂಭವಿಸುವುದು
ಸೂರ್ಯ ಗ್ರಹಣಕ್ಕೆ ಒಳಗಾಗುವ ನಕ್ಷತ್ರ ಮತ್ತು ರಾಶಿಗಳು
ಸೂರ್ಯಗ್ರಹಣ ಉಂಟಾದಾಗ ದ್ವಾದಶ ರಾಶಿಗಳು ಹಾಗೂ ನಕ್ಷತ್ರಗಳ ಮೇಲೆ ವಿಶೇಷವಾದ ಪ್ರಭಾವ ಉಂಟಾಗುವುದು. ಸೂರ್ಯ ಮತ್ತು ಗ್ರಹಣದ ಕಾರಣಗಳಿಂದಾಗಿ ವೈಯಕ್ತಿಯ ಜೀವನದಲ್ಲೂ ಸಾಕಷ್ಟು ಬದಲಾವಣೆ ಹಾಗೂ ಪ್ರಭಾವ ಉಂಟಾಗುವ ಸಾಧ್ಯತೆಗಳಿವೆ. ಅದರಲ್ಲೂ ಗ್ರಹಣವು ಯಾವ ರಾಶಿ ಮತ್ತು ನಕ್ಷತ್ರಗಳ ಮೇಲೆ ಹಿಡಿದಿದೆ? ಹಾಗೂ ಗ್ರಹಣದ ದುಷ್ಪರಿಣಾಮ ಯಾವ ಗ್ರಹ ಮತ್ತು ನಕ್ಷತ್ರಗಳ ಮೇಲೆ ಉಂಟಾಗುವುದು ಎನ್ನುವುದನ್ನು ಮೊದಲು ಗ್ರಹಿಸಬೇಕು. ಹಿಂದೂ ಪಂಚಾಂಗಗಳ ಪ್ರಕಾರ ಡಿಸೆಂಬರ್ 26ರಂದು ಕಾಣಿಸಿಕೊಳ್ಳುವ ಗ್ರಹಣವು ಮೂಲಾ, ಮಖ, ಅಶ್ವಿನಿ, ಜೇಷ್ಠಾ ಮತ್ತು ಪೂರ್ವಾಷಾಢಾ ನಕ್ಷತ್ರಗಳ ಮೇಲೆ ಹಾಗೂ ಧನುಸ್ಸು, ಮಕರ, ವೃಶ್ಚಿಕ, ವೃಷಭ ಮತ್ತು ಕರ್ಕಾಟಕ ರಾಶಿಗಳ ಮೇಲೆ ಗಮನಾರ್ಹ ಋಣಾತ್ಮಕ ಪ್ರಭಾವ ಬೀರುವುದು.
ಪೌರಾಣಿಕ ಕಥೆಗಳ ಪ್ರಕಾರ
ಪ್ರಾಚೀನ ಗ್ರಂಥಗಳು ಹಾಗೂ ಪುರಾಣಗಳ ಪ್ರಕಾರ ರಾಕ್ಷಸರ ಹಾಗೂ ದೇವತೆಗಳ ನಡುವೆ ಜಗಳ ಹಾಗೂ ವೈಮನಸ್ಸು ಉಂಟಾದಾಗ ಗ್ರಹಣಗಳು ಸಂಭವಿಸಿದವು ಎನ್ನುವ ಪುರಾಣಕಥೆಗಳು ಇರುವುದನ್ನು ಕಾಣಬಹುದು.
ಗ್ರಹಣಕ್ಕೆ ಕಾರಣವಾಗುವ ರಾಹು-ಕೇತು
ವಿಷ್ಣು ಪುರಾಣದ ಪ್ರಕಾರ, ಅಮರತ್ವವನ್ನು ಪಡೆಯಲು ಅಮೃತವನ್ನು ಕುಡಿಯಬೇಕು. ಅಮೃತವನ್ನು ಪಡೆಯಲು ಸಮುದ್ರ ಮಂಥನ ಮಾಡಬೇಕು ಎಂದಾಯಿತು. ಆಗ ಒಂದು ಭಾಗದಲ್ಲಿ ರಾಕ್ಷಸರು ಇನ್ನೊಂದು ಭಾಗದಲ್ಲಿ ದೇವತೆಗಳು ನಿಂತು ಸಮುದ್ರ ಮಂಥನ ಮಾಡಿದರು. ಆಗ ಅಮೃತವು ದೊರೆಯಿತು. ಅದನ್ನು ದೇವತೆಗಳಿಗೆ ನೀಡುವಾಗ, ಸ್ವರ್ಭಾನು ಎನ್ನುವ ರಾಕ್ಷಸನು ದೇವತೆಗಳ ವೇಷವನ್ನು ಧರಿಸಿ ಸೂರ್ಯ ಮತ್ತು ಚಂದ್ರನ ನಡುವೆ ಕುಳಿತನು. ಅಪ್ಸರೆಯ ರೂಪದಲ್ಲಿ ಬಂದ ವಿಷ್ಣು ದೇವನು ಅಮೃತವನ್ನು ಸೂರ್ಯ ಮತ್ತು ಚಂದ್ರನಿಗೆ ನೀಡಿದನು. ಆಗ ಅವರು ತಮ್ಮ ಮಧ್ಯದಲ್ಲಿ ಕುಳಿತಿರುವವನು ರಾಕ್ಷಸ ಎಂದು ಹೇಳಿದರು. ಆಗ ಅವನು ಅಮೃತವನ್ನು ಕುಡಿಯುವಷ್ಟರಲ್ಲಿ ವಿಷ್ಣು ಅವನ ತಲೆಯನ್ನು ಕತ್ತರಿಸಿದನು. ಆದರೆ ಸ್ವಲ್ಪ ಅಮರತ್ವವು ಅವನ ದೇಹದ ಒಳಗೆ ಹೋಗಿತ್ತು. ಹಾಗಾಗಿ ಅವನ ರುಂಡ ಮತ್ತು ಮುಂಡವು ಬೇರೆಯಾದರೂ ಅವನು ಅಮರನಾಗಿ ಉಳಿದನು. ಆ ರುಂಡ ಮತ್ತು ಮುಂಡವನ್ನು ರಾಹು ಮತ್ತು ಕೇತು ಎಂದು ಪರಿಗಣಿಸಿದರು. ಸೂರ್ಯ ಮತ್ತು ಚಂದ್ರನ ಕಾರಣದಿಂದಾಗಿ ಅಮೃತವನ್ನು ಕುಡಿಯಲು ಸಾಧ್ಯವಾಗಲಿಲ್ಲ ಎಂದು ರಾಹು ಮತ್ತು ಕೇತುವಿಗೆ ಅತ್ಯಂತ ಕೋಪ ಬಂದಿತ್ತು. ಅದಕ್ಕಾಗಿ ಪ್ರತಿಕಾರವನ್ನು ತೀರಿಸಿಕೊಳ್ಳಲು ಆಗಾಗ ರಾಹು ಸೂರ್ಯ ಚಂದ್ರನನ್ನು ಹಿಡಿಯುತ್ತಲೇ ಇರುತ್ತಾನೆ. ನಂತರ ಅವರನ್ನು ನುಂಗಲು ಪ್ರಯತ್ನಿಸುತ್ತಾನೆ. ಆದರೆ ರಾಹುವಿಗೆ ಕೈಗಳು ಇಲ್ಲದೆ ಇರುವುದರಿಂದ ಅವರನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಹೋಗುವುದು. ಅದನ್ನೇ ಸೂರ್ಯ ಮತ್ತು ಚಂದ್ರ ಗ್ರಹಣ ಎಂದು ಪರಿಗಣಿಸಲಾಗುವುದು. ಹಾಗಾಗಿಯೇ ಗ್ರಹಣಗಳು ಅಲ್ಪ ಅವಧಿಯವರೆಗೆ ಮಾತ್ರ ಇರುತ್ತದೆ ಎನ್ನಲಾಗುವುದು.
ಗ್ರಹಣದ ಪರಿಣಾಮ
ರಾಹುವು ಸೂರ್ಯ ಮತ್ತು ಚಂದ್ರನನ್ನು ಅತ್ಯಂತ ದುರುದ್ದೇಶದಿಂದಲೇ ಹಿಡಿಯುತ್ತಾನೆ. ಹಾಗಾಗಿ ಪರಿಸರದಲ್ಲಿಯೂ ಅತಿಯಾಗಿ ಮಾಲಿನ್ಯ ಹಾಗೂ ಅಶುಚಿ ಉಂಟಾಗುವುದು. ಅದಕ್ಕಾಗಿ ಆ ಸಮಯದಲ್ಲಿ ಊಟ-ತಿಂಡಿಯನ್ನು ತಿನ್ನಬಾರದು ಎನ್ನುವ ಪದ್ಧತಿ ಇದೆ. ಸೂರ್ಯನ ಅನುಪಸ್ಥಿತಿಯಲ್ಲಿ ಪರಿಸರದಲ್ಲಿ ಸಾಕಷ್ಟು ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮ ಜೀವಿಗಳು ಹುಟ್ಟಿಕೊಳ್ಳುತ್ತವೆ. ಅವು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುತ್ತವೆ ಎಂದು ಹೇಳಲಾಗುವುದು.
ಗ್ರಹಣ ಹಿಡಿದಾಗ ಕೈಗೊಳ್ಳಬೇಕಾದ ಕ್ರಮಗಳು
ಗ್ರಹಣದ ಸಮಯದಲ್ಲಿ ದೇವರನ್ನು ಸ್ಪರ್ಶಿಸುವುದು ಮತ್ತು ಪೂಜಿಸುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ದೇವಾಲಯದ ಬಾಗಿಲು ಸಹ ಗ್ರಹಣದ ಸಮಯದಲ್ಲಿ ಮುಚ್ಚಲಾಗುವುದು. ಗ್ರಹಣದ ನಂತರ ದೇವರನ್ನು ಶುದ್ಧೀಕರಿಸಿ ಗಂಗಾಜಲದಲ್ಲಿ ತೊಳೆಯಲಾಗುವುದು.
ಗ್ರಹಣದ ಸಮಯದಲ್ಲಿ ಜಪ, ಧ್ಯಾನ, ದೇವರ ನಾಮ ಸ್ಮರಣೆ, ದೇವರ ಪ್ರಾರ್ಥನೆ, ಸ್ತುತಿ, ಗೀತೆಗಳನ್ನು ಹಾಡುವುದರಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಪ್ರಭಾವವನ್ನು ಕಡಿಮೆ ಮಾಡಬಹುದು.
ಗ್ರಹಣ ಕಾಲದಲ್ಲಿ ತುಳಸಿ ಹಾಗೂ ಧರ್ಭೆ
ಗ್ರಹಣದ ಕಾಲದಲ್ಲಿ ಪರಿಸರವು ಸಂಪೂರ್ಣವಾಗಿ ಮಲೀನಗೊಂಡಿರುತ್ತದೆ. ಆ ಸಮಯದಲ್ಲಿ ಊಟ-ತಿಂಡಿಯನ್ನು ಮಾಡಬಾರದು. ಹಾಗೆ ಮಾಡಿದರೆ ಅನಾರೋಗ್ಯ ಕಾಡುವುದು. ಬೇಯಿಸಿದ ಆಹಾರ ಪದಾರ್ಥಗಳಿದ್ದರೆ ಅವುಗಳಿಗೆ ತುಳಸಿ ಎಲೆ ಹಾಗೂ ಧರ್ಭೆ ಹಾಕಿ ಇಡಲಾಗುವುದು. ಅದು ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕು . ಗ್ರಹಣ ಮುಗಿದ ನಂತರ ಪವಿತ್ರ ನೀರು ಅಥವಾ ಗಂಗಾ ನೀರಿನಲ್ಲಿ ಸ್ನಾನ ಮಾಡಿ ಶುದ್ಧವಾಗಬೇಕು. ಮತ್ತು ಶುದ್ಧ ಬಟ್ಟೆಯನ್ನು ಧರಿಸಬೇಕು. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಆಚೆ ಹೋಗಬಾರದು. ಯಾವುದೇ ಆಹಾರವನ್ನು ಸೇವಿಸಬಾರದು. ಅದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಗ್ರಹಣ ದೋಷ ಪರಿಹಾರ ಕ್ರಮಗಳು
ಗ್ರಹಣ ದೋಷಕ್ಕೆ ಒಳಗಾದ ನಕ್ಷತ್ರ ಮತ್ತು ರಾಶಿಯವರು ಈಶ್ವರ ದೇವಸ್ಥಾನಕ್ಕೆ ದೀಪದ ಎಣ್ಣೆಯನ್ನು ನೀಡಬೇಕು. ದೇವಾಲಯಕ್ಕೆ ಭೇಟಿ ನೀಡಿ ಕನಿಷ್ಠ 21 ಪ್ರದಕ್ಷಿಣೆಯನ್ನು ಹಾಕಬೇಕು. ಗ್ರಹಣಕ್ಕೆ ಸಂಬಂಧಿಸಿದ ಧಾನ್ಯಗಳನ್ನು ದಾನ ಮಾಡಬೇಕು. ಸೂರ್ಯನಿಗೆ ಸಂಬಂಧಿಸಿದ ಗೋಧಿ ಧಾನ್ಯವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ದಾನ ಮಾಡಬೇಕು.ಕೇತುವಿಗೆ ಸಂಬಂಧಿಸಿದ ಹುರುಳಿ ಧಾನ್ಯವನ್ನು ಚಿತ್ರದಿಂದ ಕೂಡಿರುವ ಬಟ್ಟೆಯಲ್ಲಿ ಸುತ್ತಿ ದಾನ ಮಾಡಬೇಕು.
* ವೇಧಕಾಲ :*
ಖಂಡಗ್ರಾಸ ಗ್ರಹಣವು ಗುರುವಾರ ಬೆಳಿಗ್ಗೆ ಮೊದಲನೇ ಪ್ರಹರದಲ್ಲಿ ಆಗುವದರಿಂದ ಅದರ ಹಿಂದಿನ ದಿನವಾದ ಬುಧವಾರ ರಾತ್ರಿ 08.05 ರಿಂದ ವೇಧಕಾಲವಿದೆ. ಬುಧವಾರ ರಾತ್ರಿ 08.05ರ ನಂತರ ವೇಧಕಾಲದ ಉಪವಾಸಾದಿ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಗರ್ಭಿಣಿಯರು, ಬಾಲಕರು, ವೃದ್ಧರು ಹಾಗೂ ಅಶಕ್ತರು ಅರ್ಧಯಾಮ ಅಂದರೆ ಬುಧವಾರ ರಾತ್ರಿ 02.05 ನಿಮಿಷದವರೆಗೂ ಉಪಹಾರವನ್ನು ಅಥವಾ ಔಷಧೋಪಚಾರವನ್ನು ಮಾಡಬಹುದು. ಅದೂ ಕೂಡ ಸಾಧ್ಯವಾಗದರು ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಮುಹೂರ್ತ ಮಾತ್ರ ಅಂದರೆ ಗುರುವಾರ ಬೆಳಿಗ್ಗೆ 07.17ರ ಒಳಗೆ ಔಷಧಿ ಅಥವಾ ಅಲ್ಪ ಆಹಾರವನ್ನು ತೆಗೆದುಕೊಳ್ಳಬಹುದು. ಗ್ರಹಣಕಾಲದಲ್ಲಿ ಎಲ್ಲರೂ ಉಪವಾಸಾದಿ ನಿಯಮಗಳನ್ನು ಪಾಲಿಸಬೇಕು.
*ಸೂರ್ಯಗ್ರಹಣದಿಂದ ದ್ವಾದಶ ರಾಶಿಗಳ ಫಲ*
*ಶುಭ ಫಲ : ಕರ್ಕ ತುಲಾ ಕುಂಭ ಮೀನ ರಾಶಿಯವರಿಗೆ
*ಮಿಶ್ರ ಫಲ : ಮೇಷ ಮಿಥುನ ತುಲಾ ವೃಶ್ಚಿಕ* ರಾಶಿಯವರಿಗೆ
*ಅನಿಷ್ಟ ಫಲ : ವೃಷಭ ಕನ್ಯಾ ಧನು ಮಕರ* ರಾಶಿಯವರಿಗೆ.
ಸೂರ್ಯ, ಚಂದ್ರ, ಬುಧ, ಗುರು, ಶನಿ ಮತ್ತು ಕೇತುಗಳು ಧನುಸ್ಸು ರಾಶಿಯಲ್ಲಿ ಇದ್ದು, ಗ್ರಹಣವು ಧನುಸ್ಸು ರಾಶಿಯಲ್ಲಿ ನಡೆಯುವುದರಿಂದ ಈ ಆರೂ ಗ್ರಹಗಳು ಪ್ರತಿಯೊಂದು ಜೀವಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರಲಿದೆ. ಹೀಗಾಗಿ ಪ್ರತಿಯೊಂದು ರಾಶಿಯ ಮೇಲೆ ಸೂರ್ಯಗ್ರಹಣದಿಂದ ಉಂಟಾಗುವ ಪರಿಣಾಮವೇನು? ಆಯಾಯ ರಾಶಿಯವರು ಯಾವ ಪರಿಹಾರ ಕ್ರಮ ಮಾಡಬೇಕು ಎನ್ನುವುದರ ಬಗ್ಗೆ ಒಂದು ಅವಲೋಕನ...
ಯಾವ ಯಾವ ರಾಶಿಗೆ ಯಾವ ರೀತಿಯ ಫಲ :-
ಮೇಷ ರಾಶಿ :-- ಮೇಷ ರಾಶಿಯವರಿಗೆ ಸೂರ್ಯಗ್ರಹಣವು ಅಶುಭವಾಗಿರುವುದು. ಮೇಷ ರಾಶಿಗೆ ತ್ರಿಕೋಣದಲ್ಲಿ, ಮೇಷ ರಾಶ್ಯಾಧಿಪ ಕುಜನ ಸ್ನೇಹಿತ ರವಿಗೆ ಈ ರಾಶಿಯ ಒಂಭತ್ತನೇ ಮನೆಯ ಭಾಗ್ಯಸ್ಥಾನದಲ್ಲಿ ಸಂಭವಿಸುತ್ತಿರುವುದರಿಂದ . ಆರು ಗ್ರಹಗಳ ಸಂಯೋಜನೆಯು ಮೇಷ ರಾಶಿಯ ಅದೃಷ್ಟಗಳು ಕಡಿಮೆಯಾಗಲಿದೆ. ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಇನ್ನಿತರ ಸಮಸ್ಯೆಗಳೂ ಹೆಚ್ಚಾಗಬಹುದು. ಹಾಗಾಗಿ ಸಮಯ ಹಾಗೂ ಸಂದರ್ಭಗಳನ್ನು ನೋಡಿ ಕೆಲಸ ಮಾಡುವುದು ಉತ್ತಮ. ಯಾವುದೇ ಹೊಸ ಕೆಲಸವನ್ನು ಆರಂಭಿಸುವುದರಿಂದ ಸಮಸ್ಯೆಯುಂಟಾಗಬಹುದು. ವೈವಾಹಿಕ ಜೀವನದಲ್ಲಿ ಸಾಕಷ್ಟು ಒತ್ತಡಗಳು ಉಂಟಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಏರಿಳಿತಗಳು ಕಂಡುಬರಬಹುದು.
ಪರಿಹಾರ: ಆದಿತ್ಯ ಹೃದಯ ಹಾಗೂ ''ಓಂ ಅಂಗಾರಕಾಯ ನಮಃ'' ಮಂತ್ರವನ್ನು 108 ಬಾರಿ ಪಠಿಸುವುದು ಒಳ್ಳೆಯದು
ವೃಷಭ ರಾಶಿ : ಈ ರಾಶಿಯವರಿಗೆ ಸೂರ್ಯಗ್ರಹಣವು ಅಷ್ಟಮ ಸ್ಥಾನದಲ್ಲಿ ನಡೆಯುತ್ತದೆ. ಅಷ್ಟಮವು ಆಯುಷ್ಯವನ್ನು ತೋರಿಸುವುದರಿಂದ ಈ ರಾಶಿಯವರು ಎಚ್ಚರಿಕೆಯಿಂದಿರುವುದು ಒಳಿತು. ಈ ಸಮಯದಲ್ಲಿ ಅನೇಕ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ವಾಹನ ಚಾಲನೆಯಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು . ಆರೋಗ್ಯದಲ್ಲಿ ಏರುಪೇರು ಕಂಡುಬರಬಹುದು. ಆದರೆ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬರುವುದು.
ಪರಿಹಾರ:ಸೂರ್ಯಗ್ರಹಣದ ಕೆಟ್ಟ ಪ್ರಭಾವವನ್ನು ಕಡಿಮೆಗೊಳಿಸಲು ದುರ್ಗಾಸಪ್ತಶತಿ ಪಾರಾಯಣ, " ಓಂ ದುಂ ದುರ್ಗಾಯೈ " ಈ ಮಂತ್ರ ಪಠಣದಿಂದ ಒಳಿತಾಗುತ್ತದೆ.
ಮಿಥುನ ರಾಶಿ:--- ಈ ರಾಶಿಯ ಏಳನೇ ಮನೆಯಲ್ಲಿ ಗ್ರಹಣವು ಸಂಭವಿಸುವುದರಿಂದ ಹಾಗೂ ಆರು ಗ್ರಹಗಳ ಸಂಯೋಜನೆಯಿಂದಾಗಿ ಮೇಷ ರಾಶಿಯವರ ಆರೋಗ್ಯ ಹಾಗೂ ಸಂಗಾತಿಯ ಆರೋಗ್ಯವು ಹದಗೆಡಬಹುದು. ವೈವಾಹಿಕ ಜೀವನದಲ್ಲಿ ಸಣ್ಣ ಮನಃಸ್ತಾಪದಿಂದ ಕುಟುಂಬದ ವಾತಾವರಣವೂ ಹದಗೆಡಬಹುದು... ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿಯೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ವಿನಾಕಾರಣ ಮಾನಸಿಕ ಒತ್ತಡ ಉಂಟಾಗಬಹುದು.
ಪರಿಹಾರ: ವಿಷ್ಣುಸಹಸ್ರನಾಮ ಪಾರಾಯಣ ಮಾಡುವುದು ಒಳ್ಳೆಯದು.
ಕಟಕ ರಾಶಿ:- ಕಟಕ ರಾಶಿಯ ಆರನೇ ಮನೆಯಲ್ಲಿ ಗ್ರಹಣವು ಆರು ಗ್ರಹಗಳ ಸಂಯೋಜನೆಯೊಂದಿಗೆ ನಡೆಯುವುದರಿಂದ ಶತ್ರು ನಿಗ್ರಹ. ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವ ಯೋಗ ಕಟಕ ರಾಶಿಯವರಿಗೆ, ನ್ಯಾಯಾಲಯದಲ್ಲಿ ಯಾವುದೇ ವ್ಯಾಜ್ಯ ದಾವೆಗಳು ನಡೆಯುತ್ತಿದ್ದಲ್ಲಿ ಯಶಸ್ಸನ್ನು ಸಾಧಿಸುವ ಯೋಗವಿದ್ದಾಗ್ಯೂ. ಆರೋಗ್ಯದಲ್ಲಿ ಏರುಪೇರಾಗಬಹುದು. ಮುಖ್ಯವಾಗಿ ಹೊಟ್ಟೆಯ ಸಮಸ್ಯೆ, ವಿಷ ಪ್ರಯೋಗಗಲಾಗುವ ಸಾಧ್ಯತೆ. ಹಾಗಾಗಿ ಆಹಾರದಲ್ಲಿ ಜಾಗ್ರತೆಯಾಗಿರಬೇಕಾಗುತ್ತದೆ.
ಪರಿಹಾರ: ಅಕ್ಕಿ, ಬಿಳಿ ಬಟ್ಟೆ, ಸಕ್ಕರೆ, ಮೊಸರು, ಹಾಲು, ಮುತ್ತು, ದಕ್ಷಿಣೆಯ ಸಮೇತ ದಾನ ಮಾಡಿ . ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಒಳಿತು.
ಸಿಂಹ ರಾಶಿ:--
ಸೂರ್ಯಗ್ರಹಣದ ನಕಾರಾತ್ಮಕ ಪ್ರಭಾವವು ಸಿಂಹ ರಾಶಿಯವರಿಗೆ ಹೆಚ್ಚು. ರಾಶಿಯ ಐದನೇ ಮನೆಯಲ್ಲಿ ಗ್ರಹಣವು ನಡೆಯುವುದರಿಂದ ಆರು ಗ್ರಹಗಳ ಸಂಯೋಜನೆಯಿಂದಾಗಿ ಸಮಸ್ಯೆಗಳೇ ಹೆಚ್ಚು. ಗೌರವ ಮತ್ತು ಖ್ಯಾತಿ ಕುಸಿಯುವ ಸಂಭವ . ಕೋಪವನ್ನು ಆದಷ್ಟು ನಿಯಂತ್ರಿಸಿಕೊಳ್ಳುವುದು ಉತ್ತಮ ಇಲ್ಲದಿದ್ದಲ್ಲಿ ವ್ಯವಹಾರಕ್ಕೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆ. ಸಂವಹನದಲ್ಲಿ ತೊಂದರೆ, ಮಾತಿನ ಮೇಲೆ ನಿಗಾ ಇರಲಿ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
ಪರಿಹಾರ: ಗ್ರಹಣ ಮೋಕ್ಷಾನಂತರ ಹಸುವಿಗೆ ಬೆಲ್ಲವನ್ನು ನೀಡಿದರೆ ಒಳ್ಳೆಯದು.
'ಆದಿತ್ಯ ಹೃದಯ ಸ್ತೋತ್ರ'ವನ್ನು ಪಾರಾಯಣ ಮಾಡಬೇಕು.
[ ಕನ್ಯಾ ರಾಶಿ :- ಕನ್ಯಾ ರಾಶಿಯ ಚತುರ್ಥ ಕೇಂದ್ರದಲ್ಲಿ ಆರು ಗ್ರಹಗಳ ಸಂಯೋಜನೆಯಲ್ಲಿ ಗ್ರಹಣ ನಡೆಯುವುದರಿಂದ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಂಡುಬರಬಹುದು. ಯಾವುದೇ ಸ್ಥಿರಾಸ್ತಿ, ಚರಾಸ್ತಿಯ ಖರೀದಿಗೆ ಉತ್ತಮ ಕಾಲವಲ್ಲ. . ನಿಮ್ಮ ಪ್ರೀತಿಯ ಜೀವನ ಹಾಗೂ ದಾಂಪತ್ಯ ಜೀವನ, ಕುಟುಂಬದ ವಾತಾವರಣದ ಬಗ್ಗೆಯೂ ಜಾಗರೂಕರಾಗಿರಬೇಕು. ಆರ್ಥಿಕ ಸಮಸ್ಯೆ ಗಳು ಉದ್ಭವಿಸುತ್ತವೇ. ಅತಿಯಾದ ಕೋಪವನ್ನು ತಡೆಯಬೇಕು
ಪರಿಹಾರ:- ಹಸುವಿಗೆ ಹಸಿರು ಹುಲ್ಲನ್ನು ನೀಡಿ ಅಥವಾ ಹಸಿರು ವಸ್ತ್ರವನ್ನು ದಾನ ನೀಡಿದರೆ ಒಳ್ಳೆಯದು. ಹಾಗೆಯೇ ವಿಷ್ಣು ಸಹಸ್ತ್ರನಾಮ ಪಾರಾಯಣ ಹಾಗೂ ಬುಧ ಮಂತ್ರವನ್ನು ಜಪಿಸಿದರೆ ಉತ್ತಮ.
ತುಲಾ ರಾಶಿ:-- ತುಲಾ ರಾಶಿಯವರಿಗೆ ಈ ಗ್ರಹಣ.ಅಷ್ಟೇನೂ ಕೆಟ್ಟ ಪರಿಣಾಮ ಬೀರುವುದಿಲ್ಲ... ಆದರೂ ಮೂರನೇ ಮನೆಯಲ್ಲಿ ನಡೆಯಲ್ಲಿ ಗ್ರಹಣವಾಗುತ್ತಿರುವುದರಿಂದ, ಮೂರನೆ ಮನೆಯು ಶಕ್ತಿ ಹಾಗೂ ಒಡಹುಟ್ಟಿದವರಿಗೆ ಸಂಬಂಧಿಸಿರುವುದರಿಂದ ಶಕ್ತಿ ಕುಗ್ಗುವ ಸಾಧ್ಯತೆ ಹಾಗೂ ಸಹೋದರ ಸಹೋದರಿಯೊಂದಿಗಿನ ಸಂಬಂಧವು ಹದಗೆಡಬಹುದು. ಕೋಪ ಹೆಚ್ಚಾಗಬಹುದು. ಅನವಶ್ಯಕ ವಾದವಿವಾದಗಳಲ್ಲಿ ತೊಡಗಬಹುದು.. ಹಾಗಾಗಿ ಈ ರಾಶಿಯವರು ಮೌನವಾಗಿದ್ದರೆ ಉತ್ತಮ. ಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಗ್ರಹಣದ ದಿನದಂದು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು.
ಪರಿಹಾರ: ಶುಕ್ರ ಮಂತ್ರಜಪ ( : ಓಂ ಹ್ರೀಂ ಶ್ರೀಂ ಶುಕ್ರಾಯ ನಮಃ ) ಮಾಡಬೇಕು ಹಾಗೂ ಆಹಾರ ಸೇವನೆಗೂ ಮುನ್ನ ಪ್ರಾಣಿಗಳಿಗೆ ಆಹಾರ ಕೊಡುವುದು ಉತ್ತಮ.
ವೃಶ್ಚಿಕ ರಾಶಿ : -- ಈ ಸೂರ್ಯಗ್ರಹಣವು ವೃಶ್ಚಿಕ ರಾಶಿಯವರಿಗೆ ಅಶುಭವಾಗಿರುತ್ತದೆ. ಈ ರಾಶಿಯ ಎರಡನೇ ಮನೆಯಲ್ಲಿ ಗ್ರಹಣವು ಸಂಭವಿಸಲಿದೆ. ಜನ್ಮಕುಂಡಲಿಯಲ್ಲಿ ಎರಡನೇ ಮನೆಯು ಹಣಕ್ಕೆ ಸಂಬಂಧಿಸಿರುವುದರಿಂದ ಆರು ಗ್ರಹಗಳ ಸಂಯೋಜನೆಯು ಹಣಕಾಸಿನ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಈ ಕಾರಣದಿಂದಾಗಿ ಕೆಲವು ಆರ್ಥಿಕ ಸಮಸ್ಯೆಗಳನ್ನು ಎದುರಾಗಬಹುದು. ಬರಬೇಕಾಗಿದ್ದ ಹಣ ಕೈಸೇರದಿರಬಹುದು. ಕುಟುಂಬದ ಸದಸ್ಯರೊಂದಿಗೆ ಜಗಳವಾಡುವ ಸಂದರ್ಭ ಬರಬಹುದು. ಇದರಿಂದಾಗಿ ಮಾನಸಿಕ ಅಸಮತೋಲನ ಉಂಟಾಗಬಹುದು. ಆದ್ದರಿಂದ ಮನಸ್ಸನ್ನು ಆದಷ್ಟೂ ಶಾಂತವಾಗಿರಿಸಿಕೊಳ್ಳಬೇಕು.ಅನಾವಶ್ಯಕ ಚರ್ಚೆಯನ್ನು ಮಾಡದಿರುವುದೇ ಉತ್ತಮ .
ಪರಿಹಾರ: ಕುಜ ಗ್ರಹಾರಾಧನೆ ಮಾಡಬೇಕು.
ಮಂತ್ರ: ಓಂ ಕ್ಷಿತಿ ಪುತ್ರಾಯ ವಿದ್ಮಯೇ ಲೋಹಿತಾಂಗಯೇ ಧೀಮಹೀ,ತನ್ನೋ ಭೌಮಃ ಪ್ರಚೋದಯಾತ್ ಈ ಮಂತ್ರ ಜಪವನ್ನು ಮಾಡಿದರೆ ಉತ್ತಮ.
ಧನುಸ್ಸು ರಾಶಿ:-- ಧನಸ್ಸು ರಾಶಿಯಲ್ಲಿಯೇ ಸೂರ್ಯಗ್ರಹಣವು ನಡೆಯುವುದರಿಂದ ಗ್ರಹಣವು ಈ ರಾಶಿಯವರಿಗೆ ಹೆಚ್ಚಿನ ಪ್ರಭಾವ ಬೀರಲಿದೆ. ಮಾನಸಿಕ ಚಿಂತೆಗಳು ಕಾಣಿಸಿಕೊಳ್ಳುತ್ತವೆ. ಇನ್ನೊಂದೆಡೆ ಆರೋಗ್ಯದ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ತಲೆ, ಹೃದಯ, ಹೊಟ್ಟೆ ಹಾಗೂ ತೊಡೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡಬಹುದು. ಜೊತೆಗೆ ಸಂಗಾತಿಯ ಆರೋಗ್ಯದಲ್ಲೂ ಸಮಸ್ಯೆಗಳು ಕಂಡುಬರಬಹುದು. , ಆದಷ್ಟು ಶಾಂತರೀತಿಯಲ್ಲಿ ವರ್ತಿಸಿದರೆ ಒಳ್ಳೆಯದು. .
ಪರಿಹಾರ: ತುಪ್ಪದ ದೀಪವನ್ನು ಹಚ್ಚಿ ವಿಷ್ಣುವನ್ನು ಆರಾಧಿನೆ ಮಾಡಬೇಕು, ಗುರುವಿನ ಹಾಗೂ ತಂದೆತಾಯಿಯ ಆಶೀರ್ವಾದದೊಂದಿಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು
ಓಂ ನಮೋ ಭಗವತೇ ವಾಸುದೇವಾಯ ಈ ಮಂತ್ರ ವನ್ನು 108 ಬಾರಿ ಜಪಿಸಬೇಕು.
ಮಕರ ರಾಶಿ:-- ಮಕರ ರಾಶಿಗೆ ಹನ್ನೆರಡನೇ ಮನೆಯಲ್ಲಿ ಸೂರ್ಯಗ್ರಹಣವು ನಡೆಯುವುದರಿಂದ ಆರು ಗ್ರಹಗಳ ಸಂಯೋಜನೆಯು ಖರ್ಚುಗಳನ್ನು ಹೆಚ್ಚಾಮಾಡುತ್ತವೆ . ದಾಂಪತ್ಯದಲ್ಲಿ ವಿರಸ, ಅನಾವಶ್ಯಕ ಖರ್ಚು, ಆಸ್ಪತ್ರೆ ಅಥವಾ ನ್ಯಾಯಾಲಯಕ್ಕೂ ಹೋಗುವಂತಹ ಸಂದರ್ಭ ಬರಬಹುದು. ಶತ್ರು ಹಾನಿ ಉಂಟಾಗಬಹುದು. ಪ್ರತಿಯೊಂದು ಕಾರ್ಯವನ್ನೂ ಯೋಚಿಸಿ ಮಾಡಿದರೆ ಒಳಿತು.
ಪರಿಹಾರ: - ಕಪ್ಪು ಕಂಬಳಿ ದಾನ . ಎಳ್ಳು , ಎಳ್ಳೆಣ್ಣೆ ದಾನ, ಶನೈಶ್ಚರ ಮಂತ್ರ ಪಠಣ, ( ಓಂ ಶಂ ಶನೈಶ್ಚರಾಯ ನಮಃ ) ಹನುಮಾನ್ ಚಾಲೀಸಾ ಪಠಣ ಒಳ್ಳೆಯದು.
ಕುಂಭರಾಶಿ :-- ಸೂರ್ಯಗ್ರಹಣವು ಕುಂಭ ರಾಶಿಯವರಿಗೆ ಅಷ್ಟೇನೂ ದುಷ್ಪರಿಣಾಮ ಬೀರುವುದಿಲ್ಲ. ಗ್ರಹಣವು ಈ ರಾಶಿಯ ಹನ್ನೊಂದನೇ ಮನೆಯಲ್ಲಿ ನಡೆಯುವುದರಿಂದ ಇದು ಈ ರಾಶಿಯವರಿಗೆ ಹೆಚ್ಚಿನ ಫಲವನ್ನು ನೀಡಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ಹಿರಿಯ ಸಹೋದರರಿಂದ ಅನುಕೂಲ, ಆಸೆಗಳು ಈಡೇರುವ ಸಮಯ, ಆದರೂ ಆರೋಗ್ಯದ ಕಡೆಗೆ ಗಮನ ಹರಿಸುವುದು ಉತ್ತಮ. ಮಕ್ಕಳು, ಹಾಗೂ , ಸ್ನೇಹ ಸಂಬಂಧಗಳಿಂದ ಸಮಸ್ಯೆಯು ಒದಗಿಬರಬಹುದು.
ಪರಿಹಾರ: ಶನೈಶ್ಚರ ಮಂತ್ರ ಪಠಣ , ಸುಂದರಕಾಂಡವನ್ನು ಓದುವುದರಿಂದ ಶುಭ.
ಮೀನ ರಾಶಿ:-- ಮೀನ ರಾಶಿಯ ಹತ್ತನೇ ಮನೆಯಲ್ಲಿ ಗ್ರಹಣವು ನಡೆಯಲಿದೆ. ಈ ಮನೆಯು ಕರ್ಮವನ್ನು( ಕೆಲಸ,.ವೃತ್ತಿ ) ಪ್ರತಿನಿಧಿಸುವುದರಿಂದ, ವೃತ್ತಿ ಯಲ್ಲಿ ಸಮಸ್ಯೆ ಗಳಾಗುವ ಸಾಧ್ಯತೆ. ಮೇಲಧಿಕಾರಿಕಾರಿಗಳೊಂದಿಗೆ ಕಿರಿಕಿರಿ, ಸ್ಥಾನಪಲ್ಲಟ, ದೂಷಣೆ, ಹಿಂಬಡ್ತಿ ಆಗುವ. ಸಂಭವ. ಅನಾವಶ್ಯಕ ಚರ್ಚೆಯಿಂದ ದೂರವಿದ್ದರೆ ಒಳಿತು. . ಕುಟುಂಬದ ಸಮಸ್ಯೆಯಿಂದ ಮಾನಸಿಕ ಒತ್ತಡಗಳು ಹೆಚ್ಚಾಗಬಹುದು.
ಪರಿಹಾರ: ಗುರುಮಂತ್ರ( ಓಂ ಬೃಂ ಬೃಹಸ್ಪತಯೇ ನಮಃ ) ಜಪ, ಕಡಲೆ ದಾನ, ಶಿವನ ಆರಾಧನೆ, ಗುರುಗಳ ಆರಾಧನೆ ಒಳಿತನ್ನು ಮಾಡುತ್ತದೆ.
ಸೂರ್ಯನಿಗಷ್ಟೇ ಗ್ರಹಣವಾದರೂ.. ಒಂದೇ ರಾಶಿಯಲ್ಲಿ ಇರುವ ಇನ್ನೈದು ಗ್ರಹಗಳು ಗ್ರಹಣದ ಪ್ರಭಾವದಿಂದ ತಮ್ಮ ಸಾತ್ವಿಕ ಶಕ್ತಿಯನ್ನು ಕಳೆದುಕೊಳ್ಳುತ್ತವೆ, ಹಾಗಾಗಿ ರವಿ, ಚಂದ್ರ, ಗುರು, ಬುಧ, ಶನಿ, ಕೇತು ಈ ಗ್ರಹಗಳ ಕುಃಪ್ರಭಾವ ಕಡಿಮೆ ಆಗಿ ಸಾತ್ವಿಕ ಶಕ್ತಿತಯನ್ನು ಅನಾವರಣ ಗೊಳಿಸಲು ಗ್ರಹಾರಾಧನೆಯನ್ನು ಮಾಡಬೇಕಾಗುತ್ತದೆ... ಆಯಾ ಗ್ರಹಗಳ ಮಂತ್ರ ಪಠನೆಯಿಂದ ಆಯಾ ಗ್ರಹಗಳ.ಶುಭ ಶಕ್ತಿಯನ್ನು ಪಡೆಯಬಹುದಾಗಿದೆ.
✍️ ಡಾ : B.N. ಶೈಲಜಾ ರಮೇಶ್
✍️ ಡಾ : B.N. ಶೈಲಜಾ ರಮೇಶ್
No comments:
Post a Comment