ಸಂಖ್ಯಾಶಾಸ್ತ್ರ : 4
ಹರಿಃ ಓಂ
ಶ್ರೀ ಗುರುಭ್ಯೋನಮಃ
ಶ್ರೀ ಮಹಾಗಣಪತಯೇ ನಮಃ
ಶ್ರೀ ಗುರುಭ್ಯೋನಮಃ
ಶ್ರೀ ಮಹಾಗಣಪತಯೇ ನಮಃ
ಸಂಖ್ಯೆ : 4
Picture source: internet/ social media
ದಿನಾಂಕ ೪,೧೩,೨೨,೩೧ ರಂದು ಜನಿಸಿದವರು ಈ ನಾಲ್ಕು ಸಂಖ್ಯೆಯಲ್ಲಿ ಬರುತ್ತಾರೆ. ಭಾರತೀಯ ಸಂಖ್ಯಾಶಾಸ್ತ್ರಜ್ಞರು ರಾಹು ಗ್ರಹ ಇದರ ಅಧಿಪತಿ ಎಂದು ನಿಗದಿಪಡಿಸಿದ್ದಾರೆ. ಪಾಶ್ಚಾತ್ಯ ಸಂಖ್ಯಾಶಾಸ್ತ್ರ ಪ್ರಕಾರ ಯುರೇನಸ್ ರೂಲಿಂಗ್ ಪ್ಲಾನೆಟ್. ಎರಡೂ ಗ್ರಹಗಳು ವಿಲಕ್ಷಣವನ್ನು ತೋರಿಸುತ್ತದೆ ಮತ್ತು ಅಸ್ತವ್ಯಸ್ತವಾಗಿದೆ. ನಾಲ್ಕು, ಅನಿರೀಕ್ಷಿತ ಸ್ವರೂಪ. ನಾಲ್ಕು ನಂಬರಿನ ವ್ಯಕ್ತಿಗಳು ಮನಸ್ಸಿನಲ್ಲಿ ಬಲಶಾಲಿಯಾಗಿದ್ದಾರೆ. ಆದರೆ ದೈಹಿಕವಾಗಿ ದುರ್ಬಲರಾಗಿರುತ್ತಾರೆ. .
Picture source: internet/ social media
ಈ ಸಂಖ್ಯೆಯವರು ಜೀವನದಲ್ಲಿ ಮಾನಸಿಕ ತೊಂದರೆಗಳನ್ನು, ಆರ್ಥಿಕ ತೊಂದರೆಗಳನ್ನೂ ಎದುರಿಸಿ ತಡವಾಗಿ ಜೀವನದಲ್ಲಿ ಸ್ಥಿರನೆಲೆ ಕಂಡುಕೊಳ್ಳುತ್ತಾರೆ. ಈ ಸಂಖ್ಯೆಯವರು ಭಾನುವಾರ ಜನಿಸಿದ್ದು ಅದೃಷ್ಟ ಸಂಖ್ಯೆಯೂ 4 ಆಗಿದ್ದರೆ ಶುಭಫಲ ನಿರೀಕ್ಷಿಸಬಹುದು. ಹಾಗೆಯೇ ನಾಲ್ಕು ಎಂಬುದು ಭದ್ರತೆಯ ಗುರುತಾಗಿದೆ. ಹಾಗಾಗಿ ಈ ಸಂಖ್ಯೆಯಲ್ಲಿ ಜನಿಸಿದವರು ತಡವಾಗಿಯಾದರೂ ಸುಭದ್ರವಾದ ಸ್ಥಿತಿಯನ್ನು ತಲುಪುತ್ತಾರೆ.
ರೂಪ ಮತ್ತು ಆಕಾರ :- ಸಾದಾರಣ ಎತ್ತರ ವಿಶಾಲವಾದ ಭುಜಗಳು, ಕೊಬ್ಬಿದ ಶರೀರದವರಾಗಿರುತ್ತಾರೆ. ಸೊಂಪಾಗಿ ಬೆಳೆದ ಕೂದಲು, ಸಣ್ಣದಾಗಿ ಕಪ್ಪಾದ ಆಕರ್ಷಕ ನೇತ್ರಗಳು, ದೊಡ್ಡಕಿವಿಗಳು ಉಳ್ಳವರಾಗಿರುತ್ತಾರೆ. ಕಪ್ಪು ಅಥವ ಎಣ್ಣೆಗೆಂಪಿನಂತೆ ಇರುವರು. ಇವರ ಕಾಲುಗಳು ದೇಹಕ್ಕೆ ಸರಿಯಾಗಿ ಇರದೆ ಚಿಕ್ಕದಾಗಿ ಇರುವುವು. ವಿಚಿತ್ರವಾದ ದೇಹರಚನೆಯಿಂದ ಎಲ್ಲರನ್ನೂ ತಮ್ಮ ಕಡೆಗೆ ಆಕರ್ಷಿಸುವರು. ನಗುತ್ತಾ ನಗುವಿನಲ್ಲಿ ಸಂತೋಷ ಪಡುವವರಾಗಿರುತ್ತಾರೆ.
ಗುಣ ನಡತೆ:- ಈ ಸಂಖ್ಯೆಯವರು ಬಹು ವಿದೇಯರು ಅಷ್ಟೇಅಲ್ಲ ಕುಟುಂಬದಲ್ಲಿರುವ ಎಲ್ಲರೊಡನೆ ವಿಶ್ವಾಸದಿಂದ ಇರುವವರು. ಮೇಲಾಧಿಕಾರಿಗಳೊಂದಿಗೆ ವಿನಯದಿಂದ ವರ್ತಿಸುವರು, ಇವರಲ್ಲಿ ನಡತೆಯಿಂದಲೂ ಮಾತಿನಿಂದಲೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಆಕರ್ಷಣಾ ಶಕ್ತಿಯು ಸ್ವಭಾವ ಸಿದ್ದವಾಗಿದೆ. ಯಾವುದನ್ನಾದರೂ ಒಡನೆಯೇ ನಂಬಿ ಇವರು ಕಾರ್ಯದಲ್ಲಿ ಪ್ರವರ್ತಿಸುವವರಲ್ಲ ಪ್ರತಿಯೊಂದನ್ನೂ ಇವರು ಸಂದೇಹಾತ್ಮಕವಾಗಿ ನೋಡುವರು, ಆದರೆ ಯಾವುದರಲ್ಲೂ ಹಿಂಜರಿಯುವ ಸ್ವಭಾವವುಳ್ಳವರಲ್ಲ. ಇವರ ಅದೃಷ್ಟ ಅಷ್ಟಾಗಿ ಸರಿ ಇರುವುದಿಲ್ಲ, ತುಂಬಾ ಕಷ್ಟಪಟ್ಟು ದುಡಿದರೂ ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ, ಇವರ ಕಷ್ಟಗಳಿಗೆ ಯಾರೂ ಸ್ಪಂದಿಸುವುದಿಲ್ಲ, ಮನ್ನಣೆ ಕೊಡುವುದಿಲ್ಲ, ಆದರೂ ಸಮಾಜ ಇವರನ್ನು ಉಪಯೋಗಿಸಿಕೊಳ್ಳುತ್ತದೆ, ಇವರು ಸಮಾಜದಲ್ಲಿ ಗಣ್ಯರಾಗಿಯೇ ಉಳಿಯುತ್ತಾರೆ. ಇವರು ಹೆಚ್ಚು ಭರವಸೆ ಕೊಡುವುದಿಲ್ಲ, ನ್ಯಾಯವಾದುದಕ್ಕೆ ಇವರ ಸಹಾಯ ಇರುತ್ತದೆ, ಎಲ್ಲಾ ಪ್ರಮುಖ ಕಾರ್ಯಗಳಿಗೆ ಇವರ ಸಹಾಯ ಹಾಗೂ ಮುಂದಾಳತ್ವ ಇರುತ್ತದೆ. ಅದೃಷ್ಟಕ್ಕಿಂತಲೂ ಸ್ವಪ್ರಯತ್ನದಿಂದಲೇ ಮುಂದುವರಿಯಬೇಕೆಂಬ ಸ್ವತಂತ್ರವಾದ ಮನೋಧರ್ಮವುಳ್ಳವರು. ನೀತಿನಿಯಮಗಳ ಜಾತಿ ನಿಯಮಗಳ ಬಂಧನಕ್ಕೆ ಒಳಗಾಗಿರಬೇಕೆಂಬ ಶ್ರೇಷ್ಟವಾದ ಮನೋಭಾವನೆಯುಳ್ಳವರು. ಇವ್ರು ಎಲ್ಲಾ ಕೆಲಸ ಗಳಲ್ಲಿಯೂ ನಿಪುಣರು. ಇವರಿಗೆ ಐಡಿಯಾಗಳು ಸಮೃದ್ಧವಾಗಿರುತ್ತದೆ, ಆದರೆ ನಂಬರ್ 4 ಗೊಂದಲವನ್ನುಂಟು ಮಾಡುತ್ತದೆ. ಇವರಿಗೆ ಮನಸ್ಸಿನಲ್ಲಿ ಅನೇಕ ಅಲೋಚನೆಗಳು ಇರುತ್ತವೆ. ಆದರೆ ಗೊಂದಲ ಹೆಚ್ಚು. ಇವರು ಇದ್ದಕ್ಕಿದ್ದಂತೆ ಪ್ರತಿಕ್ರಿಯಿಸುತ್ತಾರೆ. ಅವರು ಕ್ರಾಂತಿಕಾರಿಗಳು ಮತ್ತು ಸಮಾಜದ ನಿಯಮಗಳನ್ನು ಬದಲಾಯಿಸಲು ಬಯಸುತ್ತಾರೆ. ಇವರಿಗೆ ತಮ್ಮ ಕೆಲಸದ ಮೇಲೆ ನಂಬಿಕೆ ಮತ್ತು ಯಾರು ಸಮಯ ವೇಸ್ಟ್ ಮಾಡುತ್ತಾರೆ ಅವರನ್ನು ಟೀಕಿಸುತ್ತಾರೆ. ಇವರು ಉತ್ತಮ ನಿರ್ವಾಹಕರಾಗಿ ಕೆಲಸ ಮಾಡುತ್ತಾರೆ ಮತ್ತು ಅದನ್ನು ನಿಯೋಜಿಸುವರೆಗೆ ಅಲ್ಲಿಗೆ ಅಂಟಿಕೊಂಡಿರುತ್ತಾರೆ. ಪ್ರಮಾಣಿಕ ಮತ್ತು ಹಾರ್ಡ್‌ವರ್ಕಿಂಗ್ ವ್ಯಕ್ತಿಗಳು. ನಾಲ್ಕನೇ ಸಂಖ್ಯೆಯಲ್ಲಿ ಶ್ರೀಮಂತರೂ ಹಾಗೆಯೇ ಬಡವರೂ ಸಹ ಇದ್ದಾರೆ. ಇವರು ಎಲ್ಲವನ್ನೂ ಮೀರಿ ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ವಭಾವದವರು. ಆತ್ಮವಿಶ್ವಾಸ, ಧೈರ್ಯ, ಕೋಪ ಜೊತೆಗೆ ದುಡುಕುತನ ಹೆಚ್ಚು. ಇತರರ ಅಭಿಪ್ರಾಯಕ್ಕೆ ಸಮ್ಮತಿಸುವವರಲ್ಲ, ತಮ್ಮದೇ ಆದ ಆಲೋಚನೆ, ನಿರ್ಧಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇವರ ಚಿಂತನೆಗಳು ಸ್ವಲ್ಪಮಟ್ಟಿಗೆ ಹೊಸದಾಗಿರುತ್ತದೆ.
ಇವರ ಭಕ್ತಿ ಆಡಂಬರಪೂರ್ಣವಾಗಿಯೂ ಕೃತಕವಾಗಿಯೂ ಇರದೆ ಸದಾ ದೈವನಂಬಿಕೆಯುಳ್ಳವರಾಗಿ ಇರುವರು. ಆತ್ಮಗೌರವವನ್ನು ಕಾಪಾಡಿಕೊಳ್ಳುವ ಪ್ರವೃತ್ತಿಯು ಇವರಲ್ಲಿ ತುಂಬಿ ತುಳುಕುತ್ತಿರುತ್ತದೆ. ಅಹಂಕಾರವಿಲ್ಲದೆ ಸಾದಾರಣ ಉಡುಪನ್ನೇ ಧರಿಸುವರು.
ಗೃಹಸ್ಥ ಜೀವನ:- ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ವಿವಾಹವು ನಡೆಯುವುದು. ಆದುದರಿಂದ ಕುಟುಂಬವನ್ನು ಸುಸೂತ್ರವಾಗಿ ನಿರ್ವಹಿಸುವ ಭಾರವು ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ಸಂಭವಿಸುತ್ತದೆ. ಸತಿಪತಿಗಳ ಮಧ್ಯೆ ಪ್ರೇಮ ಬಂಧನವು ಸ್ವಾಭಾವಿಕವಾಗಿ ಇರುವಂತೆ ಕಂಡುಬಂದರೂ ಆಗಾಗ್ಗೆ ಇವರ ಮದ್ಯೆ ಮನಸ್ಥಾಪವು, ಬಿನ್ನಾಬಿಪ್ರಾಯವು ಉಂಟಾದರೂ ಕೂಡಲೇ ಎಲ್ಲವೂ ಸರಿಹೋಗುತ್ತದೆ. ಇವರಿಗೆ ಸೂಕ್ತ ಜೋಡಿ ಎಂದರೆ ಒಂದನೇ ತಾರೀಖಿನಲ್ಲಿ ಹುಟ್ಟಿರುವವರು. 2, 6 ನೇ ತಾರೀಖಿನಲ್ಲಿ ಜನಿಸಿದ ಸಂಗಾತಿಯೂ ಸಹ ಸೂಕ್ತವಾಗಿರುತ್ತಾರೆ. ನಂಬರ್ 4 ಮತ್ತು 8 ಚೆನ್ನಾಗಿ ಇರುವುದಿಲ್ಲ: ಇವರು 1, 2, 4, 7 ಮತ್ತು 8 ದಿನಾಂಕದಲ್ಲಿ ಜನಿಸಿದವರೊಂದಿಗೆ ಚೆನ್ನಾಗಿ ಸಂವಹನ ನಡೆಸಬಲ್ಲರು. 8 ಸಂಖ್ಯೆಯು 4 ಸಂಖ್ಯೆಯವರನ್ನು ಅತಿಯಾಗಿ ಆಕರ್ಷಿಸುತ್ತದೆ. ಆದರೆ ಇವರಿಬ್ಬರು ಸ್ವಲ್ಪಮಟ್ಟಿನ ವೈರಿಗಳೂ ಹೌದು. ಇವರಿಬ್ಬರೂ ತಂದೆಯೊಂದಿಗೆ ಕೆಟ್ಟ ಸಂಬಂಧವನ್ನು ಹೊಂದಿರುತ್ತಾರೆ. ಒಂದೋ ಇವರ ತಂದೆ ಜೀವಂತ ಇರುವುದಿಲ್ಲ ಅಥವಾ ತಂದೆ-ಮಗನಲ್ಲಿ ಕಾಂಪ್ಲೆಕ್ಸ್ ರಿಲೇಶನ್‌ಶಿಪ್ ಇರುತ್ತದೆ. ಮಹಿಳೆಯರಾದರೆ ಕುಟುಂಬದ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವರಿಗೆ ಯಾವುದೇ ಮನ್ನಣೆ ಸಿಗುವುದಿಲ್ಲ.
ಆರ್ಥಿಕ ಪರಿಸ್ಥಿತಿ:- ಈ ಸಂಖ್ಯೆಯವರಲ್ಲಿ ಹಲವರು ಲಕ್ಷ್ಮಿಪುತ್ರರಂತೆ ಇರುತ್ತಾರೆ, ಪಿತ್ರಾರ್ಜಿತವಾದ ಆಸ್ತಿಯೊಂದಿಗೆ ಸ್ವಯಾರ್ಜಿತವೂ ಬೇಕಾದಷ್ಟಿದ್ದರೂ ಕೈಗಳು ಮನಸ್ಸು ಧಾರಾಳವಾಗಿರುವುದರಿಂದ ಧನವನ್ನು ಕೂಡಿಡುವ ಅವಕಾಶವೇ ಇವರಿಗೆ ಒದಗದು. ಆದರೆ ಇವರುಗಳು ಮಾಡುವ ಖರ್ಚುವ್ಯರ್ಥ ಖರ್ಚಾಗಿರದೆ ಪರೋಪಕಾರಕ್ಕಾಗಿಯೇ ಖರ್ಚಾಗುವುದು.
ಒಂದು ದಿನದಲ್ಲಿ ರಾಜನಾಗಬಹುದು ಮತ್ತು ಮರುದಿನವೇ ದಿವಾಳಿಯಾಗಬಹುದು. ಇವರ ಆರ್ಥಿಕತೆಯಲ್ಲಿ ಏರುಪೇರು ಇರುತ್ತದೆ , ಮತ್ತು ಮಳೆಗಾಲದ ಸಂದರ್ಭಕ್ಕಾಗಿ ಎಂದು ಉಳಿತಾಯ ಮಾಡುವ ಹವ್ಯಾಸವನ್ನು ಹೊಂದಿರುತ್ತಾರೆ. ಇವರು ಸಾಂದರ್ಭಿಕ ಸಾಲ ಕೊಡುವುದನ್ನು ಕೂಡ ತಪ್ಪಿಸಿಕೊಳ್ಳುತ್ತಾರೆ. ಇವರಿಗೆ ಇದ್ದಕ್ಕಿದ್ದಂತೆ ದುಡ್ಡು ಬರುತ್ತದೆ ಮತ್ತು ಕಳೆದುಕೊಳ್ಳುತ್ತಾರೆ. ಇವರು ಅಸಾಮಾನ್ಯ ರೀತಿಯಲ್ಲಿ ಹಣ ಖರ್ಚು ಮಾಡುತ್ತಾರೆ. ಮನೆಯಲ್ಲಿ ಎಲ್ಲ ಅನುಕೂಲಗಳು ಇರುತ್ತವ,ೆ ಮತ್ತು ಲಕ್ಷುರಿ ವಾಹನ ತೆಗೆದುಕೊಳ್ಳುವುದು ಎಂದರೆ ಬಹಳ ಇಷ್ಟ.
ಚೀನಾದ ಸಂಖ್ಯಾಶಾಸ್ತ್ರ ಪ್ರಕಾರ ಸಂಖ್ಯೆ 4 ಎಂದರೆ ಆರ್ಥಿಕತೆ ಎಂದರ್ಥ.
ಒಂದು ದಿನದಲ್ಲಿ ರಾಜನಾಗಬಹುದು ಮತ್ತು ಮರುದಿನವೇ ದಿವಾಳಿಯಾಗಬಹುದು. ಇವರ ಆರ್ಥಿಕತೆಯಲ್ಲಿ ಏರುಪೇರು ಇರುತ್ತದೆ , ಮತ್ತು ಮಳೆಗಾಲದ ಸಂದರ್ಭಕ್ಕಾಗಿ ಎಂದು ಉಳಿತಾಯ ಮಾಡುವ ಹವ್ಯಾಸವನ್ನು ಹೊಂದಿರುತ್ತಾರೆ. ಇವರು ಸಾಂದರ್ಭಿಕ ಸಾಲ ಕೊಡುವುದನ್ನು ಕೂಡ ತಪ್ಪಿಸಿಕೊಳ್ಳುತ್ತಾರೆ. ಇವರಿಗೆ ಇದ್ದಕ್ಕಿದ್ದಂತೆ ದುಡ್ಡು ಬರುತ್ತದೆ ಮತ್ತು ಕಳೆದುಕೊಳ್ಳುತ್ತಾರೆ. ಇವರು ಅಸಾಮಾನ್ಯ ರೀತಿಯಲ್ಲಿ ಹಣ ಖರ್ಚು ಮಾಡುತ್ತಾರೆ. ಮನೆಯಲ್ಲಿ ಎಲ್ಲ ಅನುಕೂಲಗಳು ಇರುತ್ತವ,ೆ ಮತ್ತು ಲಕ್ಷುರಿ ವಾಹನ ತೆಗೆದುಕೊಳ್ಳುವುದು ಎಂದರೆ ಬಹಳ ಇಷ್ಟ.
ಚೀನಾದ ಸಂಖ್ಯಾಶಾಸ್ತ್ರ ಪ್ರಕಾರ ಸಂಖ್ಯೆ 4 ಎಂದರೆ ಆರ್ಥಿಕತೆ ಎಂದರ್ಥ.
ಆರೋಗ್ಯ:- ನಾಲ್ಕನೇ ಸಂಖ್ಯೆಯವರಲ್ಲಿ ಪಿತ್ತದ ತೊಂದರೆ ಹೆಚ್ಚಾಗಿ ಇರುವುದು. ಆದುದರಿಂದ ಇದನ್ನು ಉದ್ರೇಕಿಸುವ ಹಸಿರು ಪದಾರ್ಥಗಳನ್ನು ಅಥವ ಅದಕ್ಕೆ ಸಂಬಂದಿಸಿದ ಆಹಾರವಸ್ತುಗಳನ್ನು ಉಪಯೋಗಿಸದಿರುವುದು ಒಳ್ಳೆಯದು. ಮೆದುಳಿಗೆ ಸಂಬಂದಿಸಿದ ಕಾಯಿಲೆ, ಅನೀಮಿಯಾ ಮೊದಲಾದ ಕಾಯಿಲೆಗಳು .ಮತ್ತು ಅರಿಸಿನ ಕಾಮಾಲೆಯೂ ಇವರಿಗೆ ಬರುತ್ತದೆ. ಇವರಿಗಿರುವ ರೋಗವನ್ನು ಪತ್ತೆ ಮಾಡುವುದು ಕಷ್ಟ. ಇವರು ಶ್ವಾಸನಾಳ ಕಾಯಿಲೆ, ಪಾರ್ಶ್ವವಾಯು, ಕಣ್ಣು ನೋವು, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ಮಾಂಸಾಹಾರವನ್ನು ತಪ್ಪಿಸಿ ಒಳ್ಳೆಯ ತರಕಾರಿ ಸೇವಿಸಬೇಕು ಮತ್ತು ಯೋಗ ಮಾಡಬೇಕು. ಜೊತೆಗೆ ಗಣೇಶನನ್ನು ಪೂಜಿಸಬೇಕು.
ಮಾನಸಿಕ ಆರೋಗ್ಯ: -- ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಮೃತ್ಯುಂಜಯ ಮಂತ್ರವನ್ನು ಹೇಳಬೇಕು. ಕುಂಡಲಿಯಲ್ಲಿಯೂ ಸಂಖ್ಯೆ 4 ಆಕ್ಟಿವ್ ಆಗಿದ್ದರೆ ಇವರು ತಂತ್ರ, ಮಂತ್ರ ಮತ್ತು ಯೋಗದಲ್ಲಿ ಆಸಕ್ತಿ ಹೊಂದಿರುತ್ತಾರೆ. ಸರಿಯಾದ ಮಾರ್ಗದರ್ಶನದಲ್ಲಿ ಇವರ ಕುಂಡಲಿಯನ್ನು ಸಕ್ರಿಯಗೊಳಿಸಬಹುದು. ಇವರ ಆರೋಗ್ಯವು ಸಾಮಾನ್ಯವಾಗಿ ಜನವರಿ, ಫೆಬ್ರವರಿ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ದುರ್ಬಲವಾಗಿರುತ್ತದೆ.
ಉದ್ಯೋಗ ಮತ್ತು ವ್ಯಾಪಾರ:- ಈ ಸಂಖ್ಯೆಯುಳ್ಳವರಲ್ಲಿ ಕೆಲವರನ್ನುಳಿದು ಇತರರು ಪರಾಧೀನರಾಗಿದ ಕೆಲಸ ಮಾಡುತ್ತಾರೆ, ತಾವು ಮಾಡುವ ಕೆಲಸವನ್ನು ಎಲ್ಲರೂ ಮೆಚ್ಚುವಂತೆ ತೃಪ್ತಿಕರವಾಗಿ ಮಾಡಿ ಸತ್ಯ ಸಂದರೆನಿಸಿಕೊಳ್ಳುವರು. ಕೆಲವರು ಸರ್ಕಾರದ ಉದ್ಯೋಗದಲ್ಲಿ ಸೇರಿದವರಾಗಿಯೂ ವಕೀಲರಾಗಿಯೂ ಮಧ್ಯವರ್ತಿಗಳಾಗಿಯೂ ಕೇಲಸ ಮಾಡುತ್ತಾರೆ. ಹಾಸ್ಟೆಲ್,ಹೋಟೆಲ್ ಗಳನ್ನು ನಡೆಸುವವರು, ಹಾಲ್ಕೋಹಾಲ್ ಮೊದಲಾದವುಗಳನ್ನು ಬೆರೆಸಿದ ಔಷಧಗಳನ್ನು ಮಾರುವವರು ಕೂಡ ಈ ನಾಲ್ಕನೇ ಸಂಖ್ಯೆಯವರಾಗಿರುತ್ತಾರೆ. ಈ ಸಂಖ್ಯೆಯವರು ಹೆಚ್ಚಿನ ವಿಶ್ಲೇಷಣಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹಾರ್ಡ್‌ವರ್ಕ್ ಮಾಡುತ್ತಾರೆ. ಆದರೆ ಅರ್ಹತೆಗೆ ತಕ್ಕಂತೆ ಗುರುತಿಸುವಿಕೆ ಇರುವುದಿಲ್ಲ. ಕಂಪ್ಯೂಟರ್, ಸಾಫ್ಟ್‌ವೇರ್ ತಂತ್ರಜ್ಞಾನ, ಮಾಧ್ಯಮ, ಸಂಶೋಧನೆ, ಜ್ಯೋತಿಷ್ಯ, ಕ್ರಿಮಿನಲ್ ಲಾಯರ್, ಸರ್ಜನ್, ಅಸಮಾನ್ಯ ವೃತ್ತಿ, ಆನ್‌ಲೈನ್ ವರ್ಕ್, ಎಂಜಿನಿಯರ್ ವೃತ್ತಿ ಚೆನ್ನಾಗಿ ಹಿಡಿಸುತ್ತದೆ.
ಸರಕಾರಿ ಕೆಲಸ ಇವರಿಗೆ ಅಷ್ಟಾಗಿ ಸೂಟ್ ಆಗುವುದಿಲ್ಲ. ಸಾಮಾನ್ಯವಾಗಿ ಹಗರಣಗಳಲ್ಲಿ ತೊಡಗಿಸಿಕೊಂಡಿರುತ್ತಾರೆ , ಮತ್ತು ಲಂಚದ ಆರೋಪವಿರುತ್ತದೆ. ವ್ಯಾಪಾರಸ್ಥರಾಗಿದ್ದರೂ ಸರಕಾರಿ ಟೆಂಡರ್ ಅನ್ನು ತಿರಸ್ಕರಿಸುತ್ತಾರೆ. ಇನ್ಷೂರೆನ್ಸ್, ಪ್ರಾಪರ್ಟಿ ಡೀಲರ್ಸ್ ವರ್ಕ್, ಮ್ಯಾಟ್ರಿಮೋನಿಯಲ್ ಸರ್ವಿಸಸ್, ಷೇರು ಬ್ರೋಕರ್ ಮೊದಲಾದ ಕಮಿಷನ್ ಆಧಾರಿತ ಕೆಲಸವನ್ನು ಚೆನ್ನಾಗಿ ನಿಭಾಯಿಸಬಲ್ಲರು. ಇವರು ಷೇರಿನಲ್ಲಿ ಹಣ ತೊಡಗಿಸಿಕೊಂಡರೆ ಕಳೆದುಕೊಳ್ಳುತ್ತಾರೆ. ಆದರೆ ಇವರ ಸಲಹೆ ಮೇರೆಗೆ ಇತರರು ಹಣ ಹೂಡಿಕೆ ಮಾಡಿದರೆ ಲಾಭ ಪಡೆಯುತ್ತಾರೆ.
ಸರಕಾರಿ ಕೆಲಸ ಇವರಿಗೆ ಅಷ್ಟಾಗಿ ಸೂಟ್ ಆಗುವುದಿಲ್ಲ. ಸಾಮಾನ್ಯವಾಗಿ ಹಗರಣಗಳಲ್ಲಿ ತೊಡಗಿಸಿಕೊಂಡಿರುತ್ತಾರೆ , ಮತ್ತು ಲಂಚದ ಆರೋಪವಿರುತ್ತದೆ. ವ್ಯಾಪಾರಸ್ಥರಾಗಿದ್ದರೂ ಸರಕಾರಿ ಟೆಂಡರ್ ಅನ್ನು ತಿರಸ್ಕರಿಸುತ್ತಾರೆ. ಇನ್ಷೂರೆನ್ಸ್, ಪ್ರಾಪರ್ಟಿ ಡೀಲರ್ಸ್ ವರ್ಕ್, ಮ್ಯಾಟ್ರಿಮೋನಿಯಲ್ ಸರ್ವಿಸಸ್, ಷೇರು ಬ್ರೋಕರ್ ಮೊದಲಾದ ಕಮಿಷನ್ ಆಧಾರಿತ ಕೆಲಸವನ್ನು ಚೆನ್ನಾಗಿ ನಿಭಾಯಿಸಬಲ್ಲರು. ಇವರು ಷೇರಿನಲ್ಲಿ ಹಣ ತೊಡಗಿಸಿಕೊಂಡರೆ ಕಳೆದುಕೊಳ್ಳುತ್ತಾರೆ. ಆದರೆ ಇವರ ಸಲಹೆ ಮೇರೆಗೆ ಇತರರು ಹಣ ಹೂಡಿಕೆ ಮಾಡಿದರೆ ಲಾಭ ಪಡೆಯುತ್ತಾರೆ.
ಇವರಿಗೆ ಸಂಗೀತದಲ್ಲಿ ಆಸಕ್ತಿ, ಹಳೆಯ ಚಿತ್ರಗೀತೆ, ದುಃಖದ ಹಾಡು ಮತ್ತು ಸ ಅರ್ಥಗರ್ಭಿತವಾದ ಮ್ಯೂಸಿಕ್ ಅನ್ನು ಬಹಳ ಇಷ್ಟಪಡುತ್ತಾರೆ.
ರಾಹುವಿನ ಕಾಲ:- ರಾಹುವಿಗೆ ಪ್ರತ್ಯೇಕವಾದ ಕಾಲವಿಲ್ಲ ಆದರೆ ಶನಿವಾರ ರಾಹುವಿಗೆ ಸೂಕ್ತವಾದ ವಾರ,ರಾಹುಕಾಲ ಪ್ರತಿದಿನದಲ್ಲಿಯೂ ಇರುತ್ತದೆ. ಆ ಒಂದು ಕಾಲವನ್ನು ಅಂದರೆ ೧.೧/೨(ಒಂದುವರೆಗಂಟೆ)ರಾಹುಕಾಲದಲ್ಲಿ ಮಾಡುವ ಎಲ್ಲಕಾರ್ಯಗಳು ಫಲಿಸುವುದಿಲ್ಲ.
ರಾಹುವಿನ ದಿಕ್ಕು ಮತ್ತು ಪ್ರದೇಶ:-
ತೆಂಕಣ ದಿಕ್ಕು(ದಕ್ಷಿಣ)ರಾಹುವಿಗೆ ಸೇರಿದ್ದು,ಗುಹೆಗಳು,ಸ್ಮಶಾನಗಳು,ಸುರಂಗಗಳು ಹೆಂಚಿನಮನೆಗಳು ಹಾಳುಬಿದ್ದ ಕಟ್ಟಡಗಳು, ಶುಷ್ಕಕ್ಷೇತ್ರಗಳು ರಾಹುವಿನ ಸ್ಥಳವಾದ್ದರಿಂದ ನಾಲ್ಕನೇ ಸಂಖ್ಯೆಯವರು ವಾಸಿಸುವ ಅಥವ ಸಂಚರಿಸುವ ಸ್ಥಳಗಳು ಸಾಮಾನ್ಯವಾಗಿ ಈ ರೀತಿಯ ಸ್ಥಳಗಳೇ ಆಗಿರುತ್ತವೆ.
ತೆಂಕಣ ದಿಕ್ಕು(ದಕ್ಷಿಣ)ರಾಹುವಿಗೆ ಸೇರಿದ್ದು,ಗುಹೆಗಳು,ಸ್ಮಶಾನಗಳು,ಸುರಂಗಗಳು ಹೆಂಚಿನಮನೆಗಳು ಹಾಳುಬಿದ್ದ ಕಟ್ಟಡಗಳು, ಶುಷ್ಕಕ್ಷೇತ್ರಗಳು ರಾಹುವಿನ ಸ್ಥಳವಾದ್ದರಿಂದ ನಾಲ್ಕನೇ ಸಂಖ್ಯೆಯವರು ವಾಸಿಸುವ ಅಥವ ಸಂಚರಿಸುವ ಸ್ಥಳಗಳು ಸಾಮಾನ್ಯವಾಗಿ ಈ ರೀತಿಯ ಸ್ಥಳಗಳೇ ಆಗಿರುತ್ತವೆ.
ಅದೃಷ್ಟದ ರತ್ನ:- ರಾಹುವಿಗೆ ಗೋಮೇಧಕ ಶುಭರತ್ನವಾಗಿದೆ, ಹಳದಿ ಬಣ್ಣದ ರತ್ನವನ್ನು ಉಂಗುರದಲ್ಲಾಗಲಿ ಕೊರಳಲ್ಲಾಗಲಿ ಧರಿಸುವುದರಿಂದ ಇವರುಗಳಿಗೆ ಬರಬಹುದಾದ ರೋಗಗಳನ್ನು ತಡೆದು ಕಾಪಾಡುತ್ತದೆ. ಜಯವನ್ನುತರುತ್ತದೆ.
ಅದೃಷ್ಟದ ಬಣ್ಣ :-- ಬೂದುಬಣ್ಣ(ಗ್ರೇಕಲ್ಲರ್) ಸಾದಾರಣ ಹಳದಿ ಬಣ್ಣವು ನಾಲ್ಕನೇ ಸಂಖ್ಯೆಯವರಿಗೆ ಶುಭ ತರುತ್ತವೆ. ಐಶ್ವರ್ಯ ವನ್ನು ಕೊಡುವಂಥದು
ಅನುಕೂಲ ದಿನಾಂಕಗಳು:-೧,೧೦.೧೯. 2, 11,20 ದಿನಾಂಕಗಳು ಲಾಭತರುತ್ತವೆ,ಯಾವುದೇ ಶುಭಕಾರ್ಯ ಆರಂಭ ಮತ್ತು ಹೊಸ ಉದ್ಯೋಗಾರಂಭಕ್ಕೆ ಈ ದಿನಾಂಕದಂದು ಆರಂಬಿಸುವುದು ಅನುಕೂಲವುಂಟಾಗುತ್ತದೆ. ಹಾಗೆಯೇ ಭಾನುವಾರ ಯಾವ ಕೆಲಸ ಪ್ರಾರಂಭಿಸಿದರೂ ಶುಭವಾಗುವುದು.
ಉಳಿದ ದಿನಾಂಕಗಳು ಶುಭಕಾರ್ಯಾರಂಭಕ್ಕೆ ಶುಭಪ್ರದವಲ್ಲ.
ಗ್ರಹಪ್ರೀತಿ :---
ರಾಹುಗ್ರಹದ ಅಧಿದೇವತೆ ದುರ್ಗಾಮಾತೆ, 4 ಸಂಖ್ಯೆಯವರಿಗೆ ಕಷ್ಟ ಬಂದ ಕಾಲದಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡಬಹುದು.
ಓಂ ಹ್ರೀಂ ದುಂ ದುರ್ಗಾಯೈ ನಮಃ
ಈ ದುರ್ಗಾಮಂತ್ರವನ್ನು ಜಪಿಸುವುದರಿಂದ ಕೂಡ ರಾಹುವಿನ ಕೃಪೆಗೆ ಪಾತ್ರರಾಗಬಹುದು.
ಬೀಜಾಕ್ಷರಿ ಮಂತ್ರ :---
ಓಂ ಬ್ರಾಂ ಬ್ರೀಮ್ ಬ್ರೌಮ್ ನಮಃ ಶ್ರೀ ರಾಹವೇ ನಮಃ
( ಜಪ ಸಂಖ್ಯೆ 18,000 )
( ಜಪ ಸಂಖ್ಯೆ 18,000 )
" ಯೋ ವಿಷ್ಣುನೈವಾಮೃತಮ್ ಪೀಯಮಾನ0
ಶಿರಶ್ಚಿತ್ವಾಗ್ರಹಭಾವೇನಾಯುಕ್ತಃ
ಯಶ್ಚಂದ್ರಸೂರ್ಯೋಗ್ರಸತೇ ಪರ್ವಕಾಲೇ
ರಾಹುಂ ಸದಾ ಶರಣಮಹಂ ಪ್ರಪದ್ಯೇ"
ಶಿರಶ್ಚಿತ್ವಾಗ್ರಹಭಾವೇನಾಯುಕ್ತಃ
ಯಶ್ಚಂದ್ರಸೂರ್ಯೋಗ್ರಸತೇ ಪರ್ವಕಾಲೇ
ರಾಹುಂ ಸದಾ ಶರಣಮಹಂ ಪ್ರಪದ್ಯೇ"
" ಅರ್ಧಕಾಯಮ್ ಮಹಾವೀರ್ಯಂ
ಚಂದ್ರಾದಿತ್ಯ ವಿಮರ್ಧನಮ್
ಸಿಂಹಿಕಾ ಗರ್ಭ ಸಂಭೂತಮ್
ತಂ ರಾಹುಂ ಪ್ರಣಮಾಂಯಹಂ "
ಚಂದ್ರಾದಿತ್ಯ ವಿಮರ್ಧನಮ್
ಸಿಂಹಿಕಾ ಗರ್ಭ ಸಂಭೂತಮ್
ತಂ ರಾಹುಂ ಪ್ರಣಮಾಂಯಹಂ "
ರಾಹು ಪೀಡಾ ಪರಿಹಾರ ಸ್ತೋತ್ರ :--
ಮಹಾಶಿರಾ ಮಹಾವಕ್ರೋ
ಧೀರ್ಘದಂಸ್ಟ್ರೋ ಮಹಾಬಲಃ
ಆತನುಶ್ಚೊರದ್ವಕೇಶಶ್ಚ
ಪೀಡಾಂ ಹರತು ಮೇ ಶಿಖೀ
ಧೀರ್ಘದಂಸ್ಟ್ರೋ ಮಹಾಬಲಃ
ಆತನುಶ್ಚೊರದ್ವಕೇಶಶ್ಚ
ಪೀಡಾಂ ಹರತು ಮೇ ಶಿಖೀ
ರಾಹು ಗಾಯತ್ರಿ ಮಂತ್ರ :--
ಓಂ ನಾಗದ್ವಜಾಯ ವಿದ್ಮಹೇ
ಪದ್ಮಹಸ್ತಾಯ ಧೀಮಹಿ
ತನ್ನೋ ರಾಹು ಪ್ರಚೋದಯಾತ್
ಪದ್ಮಹಸ್ತಾಯ ಧೀಮಹಿ
ತನ್ನೋ ರಾಹು ಪ್ರಚೋದಯಾತ್
ಈ ಮಂತ್ರಗಳ ಪಠಣೆಯಿಂದ ರಾಹುವಿನ ಕೃಪೆಗೆ ಪಾತ್ರರಾಗ ಬಹುದು.
ರಾಹು : ಸಹೋದರತ್ವ, ಮಮತೆಯ ಸಂಕೇತ.
ಗುರು, ಹಿರಿಯರನ್ನು ಗೌರವಿಸಿ. ಕ್ಯಾನ್ಸರ್‌ನಂತ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕವಾಗಿ ಸಹಾಯ ಮಾಡಿ. ಅವರನ್ನೂ ನಿಮ್ಮ ಮಕ್ಕಳಂತೆ ಉಪಚರಿಸಿ, ಆಗ ರಾಹು ಗ್ರಹ ಖಂಡಿತ ಒಳ್ಳೆಯದನ್ನು.ಮಾಡುತ್ತದೆ.
ಗುರು, ಹಿರಿಯರನ್ನು ಗೌರವಿಸಿ. ಕ್ಯಾನ್ಸರ್‌ನಂತ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕವಾಗಿ ಸಹಾಯ ಮಾಡಿ. ಅವರನ್ನೂ ನಿಮ್ಮ ಮಕ್ಕಳಂತೆ ಉಪಚರಿಸಿ, ಆಗ ರಾಹು ಗ್ರಹ ಖಂಡಿತ ಒಳ್ಳೆಯದನ್ನು.ಮಾಡುತ್ತದೆ.
✍ ಡಾ: B.N. ಶೈಲಜಾ ರಮೇಶ್
No comments:
Post a Comment