ಹರಿಃ ಓಂ
ಶ್ರೀ ಮಹಾಗಣಪತಯೇ ನಮಃ
ಶ್ರೀ ಗುರುಭ್ಯೋ ನಮಃ
ಶ್ರೀ ಮಹಾಗಣಪತಯೇ ನಮಃ
ಶ್ರೀ ಗುರುಭ್ಯೋ ನಮಃ
ವಿದ್ಯಾಭ್ಯಾಸ
***********
***********
ವಿದ್ಯಾರ್ಜನೆಗೆ ಲಗ್ನದಿಂದ ಚತುರ್ಥ ಸ್ಥಾನವನ್ನೂ, ಜ್ಞಾನಾರ್ಜನೆಗೆ ಪಂಚಮ ಸ್ಥಾನವನ್ನೂ ಪರಿಶೀಲಿಸಬೇಕು. ಆದ್ರೆ ಯಾವುದೇ ವಿದ್ಯೆಗೆ ಪ್ರಾಥಮಿಕ ವಿದ್ಯಾರ್ಜನೆಗೆ 2ನೇ ಮನೆಯನ್ನು ನೋಡಬೇಕು. ಏಕೆಂದರೆ ವಾಕ್ ಸ್ಥಾನವಾದ ಧನಸ್ಥಾನವು ಮಗುವಿನ ತೊದಲ್ನುಡಿಗಳಿಂದಿಡಿದು ಹೇಳಿಕೊಟ್ಟದ್ದನ್ನು ಕಲಿತು ಮತ್ತೆ ನೆನಪಿಸಿಕೊಂಡು ಹೇಳುವುದನ್ನು ಸೂಚಿಸುತ್ತೆ. ಎಲ್ಲಾ ವಿದ್ಯೆಗೂ ಮೂಲ ಸ್ಥಾನ ಧನಭಾವ ( 2ನೇ ಮನೆ ) ವೇ ಆಗಿದೆ. ಅಕ್ಷರದ ಪರಿಚಯವಿಲ್ಲದೆ ವಿದ್ಯಾವಂತನಾಗಲು ಸಾಧ್ಯವಿಲ್ಲ. ಧನಭಾವ ಚನ್ನಾಗಿದ್ದರೆ ಅಕ್ಷರಜ್ಞಾನ ಹೊಂದಿ ಪ್ರಾಥಮಿಕ ಶಿಕ್ಷಣವನ್ನು ಗಳಿಸಿರುತ್ತಾನೆ.
ಧನಭಾವ ಬಲವಿಲ್ಲದೆ 5, 9 ನೇ ಸ್ಥಾನಗಳು ಪ್ರಭಲವಾಗಿದ್ದರೂ ವಿದ್ಯಾವಂತರಾಗಲಾರರು, ಧನಭಾವ ಪ್ರಬಲವಾಗಿದ್ದು 5, 9th ಬಲಹೀನವಾಗಿದ್ರೆ ಪೂರ್ಣಪ್ರಮಾಣದಲ್ಲಿ ವಿದ್ಯಾವಂತನಾಗದಿದ್ದರೂ, ಅಕ್ಷರಸ್ಥರಾಗಿ ವ್ಯಾವಹಾರಿಕ ಜ್ಞಾನವನ್ನು ಪಡೆಯಬಹುದು. ಹಾಗಾಗಿ ಜಾತಕದಲ್ಲಿ ವಿದ್ಯಾಭ್ಯಾಸವನ್ನು ಪರಿಶೀಲಿಸಬೇಕಾದರೆ... ಮೊದಲು 2, 5 ನೇ ಭಾವಗಳನ್ನು, ಅದರ ಭಾವಾಧಿಪತಿಗಳನ್ನ, ಮತ್ತವುಗಳ ಬಲಾಬಲಗಳನ್ನು ತಿಳಿಯಬೇಕಾಗುತ್ತದೆ.
■ ಬುಧ, ಗುರು, ಶುಕ್ರರು ವಿದ್ಯಾಕಾರಕರು.
■ ಬುಧ ---- ವಿದ್ಯಾಗ್ರಹಣ ಶಕ್ತಿ
■ ಗುರು ---- ಜ್ಞಾನಾರ್ಜನಾ ಶಕ್ತಿ
■ ಶುಕ್ರ ---- ಮೇಧಾ ಶಕ್ತಿ.
■ ಬುಧ ---- ವಿದ್ಯಾಗ್ರಹಣ ಶಕ್ತಿ
■ ಗುರು ---- ಜ್ಞಾನಾರ್ಜನಾ ಶಕ್ತಿ
■ ಶುಕ್ರ ---- ಮೇಧಾ ಶಕ್ತಿ.
ಜಾತಕದಲ್ಲಿ ಈ ವಿದ್ಯಾಸಂಬಂಧ ಗ್ರಹಗಳಾದ ಬುಧ , ಗುರು, ಶುಕ್ರರು ಪೀಡಿತರಾದಾಗ ವಿದ್ಯಾರ್ಜನಗೆ ಅಡಚಣೆ, ತೊಂದರೆಗಳಾಗುತ್ತವೆ.
★ ಧನ, ಚತುರ್ಥ, ಪಂಚಮಭಾವಗಳು --- ವಿದ್ಯಾಭಾವಗಳು.
★ ಧನಭಾವ ---- ಗ್ರಹಣಶಕ್ತಿ, ಬರವಣಿಗೆ.
★ ಚತುರ್ಥ ಭಾವ ---- ಮನಸ್ಸಿಟ್ಟು ಕಲಿಕೆ, ಮಧ್ಯಮ ಹಾಗೂ ಉನ್ನತ ಶಿಕ್ಷಣ
★ ಪಂಚಮಭಾವ ---- ಬುದ್ಧಿಶಕ್ತಿ, ಜ್ಞಾನ ಸಂಪಾದನಾ ದಾಹ.
★ ನವಮಭಾವ --- ಉನ್ನತವಿದ್ಯೆ.
★ ದಶಮ ಭಾವ ---- ವಿದ್ಯಾವರ್ಗ ( ಶ್ರೇಣಿ).
★ ಧನಭಾವ ---- ಗ್ರಹಣಶಕ್ತಿ, ಬರವಣಿಗೆ.
★ ಚತುರ್ಥ ಭಾವ ---- ಮನಸ್ಸಿಟ್ಟು ಕಲಿಕೆ, ಮಧ್ಯಮ ಹಾಗೂ ಉನ್ನತ ಶಿಕ್ಷಣ
★ ಪಂಚಮಭಾವ ---- ಬುದ್ಧಿಶಕ್ತಿ, ಜ್ಞಾನ ಸಂಪಾದನಾ ದಾಹ.
★ ನವಮಭಾವ --- ಉನ್ನತವಿದ್ಯೆ.
★ ದಶಮ ಭಾವ ---- ವಿದ್ಯಾವರ್ಗ ( ಶ್ರೇಣಿ).
ವಿದ್ಯೆಗೆ ತೊಂದರೆ ಮಾಡುವ ಗ್ರಹಗಳು ****************************
★ ಕುಜ, ರವಿ, ಶನಿ, ರಾಹು, ಕೇತು ಮತ್ತು ಬಲಹೀನ ಶುಕ್ರ, ಪೀಡಿತ ಬುಧ.
★ ಕುಜ -- ಮರೆವು
★ ರವಿ -- ವಿದ್ಯಾಕಾಲದಲ್ಲಿ ದೈಹಿಕ ತೊಂದರೆ
★ ಶುಕ್ರ ಹಾಗೂ ಪೀಡಿತ ಬುಧ -- ಬುದ್ಧಿ ಮಾಂದ್ಯತೆ, ಅಲ್ಪಗ್ರಹಣಶಕ್ತಿ.
★ ಶನಿ -- ಸೋಮಾರಿತನ, ನಿಧಾನ, ಗಮನ ನೀಡದೆ ಇರುವುದು.
★ ರಾಹು - ಕೇತುಗಳು -- ವಿಷಯದಲ್ಲಿ ಅಲ್ಪಜ್ಞಾನ
★ ಕುಜ, ರವಿ, ಶನಿ, ರಾಹು, ಕೇತು ಮತ್ತು ಬಲಹೀನ ಶುಕ್ರ, ಪೀಡಿತ ಬುಧ.
★ ಕುಜ -- ಮರೆವು
★ ರವಿ -- ವಿದ್ಯಾಕಾಲದಲ್ಲಿ ದೈಹಿಕ ತೊಂದರೆ
★ ಶುಕ್ರ ಹಾಗೂ ಪೀಡಿತ ಬುಧ -- ಬುದ್ಧಿ ಮಾಂದ್ಯತೆ, ಅಲ್ಪಗ್ರಹಣಶಕ್ತಿ.
★ ಶನಿ -- ಸೋಮಾರಿತನ, ನಿಧಾನ, ಗಮನ ನೀಡದೆ ಇರುವುದು.
★ ರಾಹು - ಕೇತುಗಳು -- ವಿಷಯದಲ್ಲಿ ಅಲ್ಪಜ್ಞಾನ
ವಿದ್ಯೆ ಪರಿಶೀಲನೆಗೆ ನಿಯಮಗಳು
*****************************
◆ 2, 5 ನೇ ಅಧಿಪತಿಗಳು ವಕ್ರೀ, ಅಸ್ತ, ನೀಚ, ಪಾಪಕರ್ತರಿ, ಪಾಪಗ್ರಹ ಯುತಿ, ದೃಷ್ಟಿ, ಹಾಗೂ ದುಸ್ಥಾನ ಗಳಲ್ಲಿ ಸ್ಥಿತರಾದಲ್ಲಿ ವಿದ್ಯಾದೋಷ.
*****************************
◆ 2, 5 ನೇ ಅಧಿಪತಿಗಳು ವಕ್ರೀ, ಅಸ್ತ, ನೀಚ, ಪಾಪಕರ್ತರಿ, ಪಾಪಗ್ರಹ ಯುತಿ, ದೃಷ್ಟಿ, ಹಾಗೂ ದುಸ್ಥಾನ ಗಳಲ್ಲಿ ಸ್ಥಿತರಾದಲ್ಲಿ ವಿದ್ಯಾದೋಷ.
◆ ವಿದ್ಯಾಕಾರಕ ಬುಧ, ಗುರುಗಳು ದುಸ್ಥಾನ ಸ್ಥಿತ, ಬಲಹೀನ, ಪಾಪಗ್ರಹಗಳಿಂದ ಪೀಡಿತರಾದಾಗ ವಿದ್ಯೆಯಲ್ಲಿ ಕುಂಠಿತ ( ಬುಧ - ಗ್ರಹಣಶಕ್ತಿ, ಗುರು - ಶ್ರದ್ಧೆ ).
,◆ ವಿದ್ಯಾಸ್ಥಾನದಲ್ಲಿ ರಾಹುಕೇತುಗಳು ಸ್ಥಿತರಾಗಿ ಪಾಪಗ್ರಹಗಳ ಸಂಬಂಧ ಬಂದಾಗ ವಿದ್ಯಾಹೀನ.
◆ ಕೇಂದ್ರಾದಿಪತ್ಯ ದೋಷ, ದುಸ್ಥಾನಾಧಿಪತ್ಯ, ವಕ್ರ, ನೀಚ, ಅಸ್ತ, ರಾಶಿ - ಭಾವ ಸಂಧಿಸ್ಥಿತ ನೈಸರ್ಗಿಕ ಶುಭಗ್ರಹಗಳಾದರೂ ವಿದ್ಯೆಗೆ ಅಡಚಣೆ.
◆ ನೈಸರ್ಗಿಕ ಪಾಪಗ್ರಹನಾದರೂ ಯೋಗಕಾರಕನು ವಿದ್ಯಾಸ್ಥಾನದಲ್ಲಿದ್ದಾಗ ವಿದ್ಯಾಭಿವೃದ್ಧಿ.
ಡಾ : ಶೈಲಜಾ ರಮೇಶ್
Medam 3,4,5,ege ulida sankeyalli huttidavara gunagalannu upload madi
ReplyDelete