ಹರಿಃ ಓಂ
ಶ್ರೀ ಗಣೇಶಾನಮಃ
ಶ್ರೀ ಗುರುಭ್ಯೋನಮಃ
ಬಲಹೀನ ಗ್ರಹಗಳು ಹಾಗೂ ಪರಿಹಾರಗಳು ಭಾಗ 5 ..
ಗುರು ಗ್ರಹ :--
Picture source: internet/ social media
ಗುರುಗ್ರಹವು ಜಾತಕದಲ್ಲಿ ಬಲಹೀನವಾದಾಗ ನೀಡುವ ಕೆಟ್ಟ ಫಲಗಳು :--
ನಿರುತ್ಸಾಹ, ಚಂಚಲತೆ, ನಾಸ್ತಿಕತೆ, ನಿರಾಸೆ, ದುಗುಡ, ದುಃಖ ಆರ್ಥಿಕ ತೊಂದರೆಗಳು, ಅನುಕಂಪ ರಹಿತವರ್ತನೆ, ದಬ್ಬಾಳಿಕೆ, ಸಂತಾನ ಇಲ್ಲದಿರುವಿಕೆ, ಇದ್ದರೂ ಅವರಿಗೆ ಕಷ್ಟಗಳು, ನಿರ್ವೀರ್ಯತೆ, ದೇಹವು ಕೃಷಗೊಳ್ಳುವುದು, ನರಗಳು ಮತ್ತು ಕೋಶಗಳು ಸಮರ್ಪಕವಾಗಿ ಕೆಲಸಮಾಡದಿರುವಿಕೆ, ಸದಾರೋಗಿ, ಮನೆಯಲ್ಲಿಟ್ಟ ಬಂಗಾರವು ಕಳವಾಗುವುದು ಅಥವ ಆಭರಣಗಳನ್ನು ಮಾರುವುದು, ಅನಿರೀಕ್ಷಿತವಾಗಿ ವಿದ್ಯಾಬ್ಯಾಸವು ನಿಂತುಹೋಗುವುದು, ಧರ್ಮದಲ್ಲಿ ಅನಾಸಕ್ತಿ, ಪತ್ನಿ ಅಥವ ಮಕ್ಕಳಿಗೆ ಅನಾರೋಗ್ಯ, ಸಂಪತ್ತು ಬರುವುದರಲ್ಲಿ ಅಡಚಣೆ, ಸಂತಾನದಿಂದ ಸುಖವಿಲ್ಲದಿರುವಿಕೆ, ಮದುವೆಯು ತಡವಾಗುವಿಕೆ, ಶೀಘ್ರ ಸ್ಖಲನ, ವಿಧವೆ ಅಥವ ಕೀಳು ಹೆಂಗಸಿನ ಸಂಪರ್ಕ, ಜಾತಕರ ತಂದೆಗೆ ಉಸಿರಾಟದ ತೊಂದರೆ ಅಥವ ಮಾನಸಿಕ ತೊಳಲಾಟ. ಕಿವಿನೋವು, ಮಧುಮೇಹ ತೊಂದರೆ, ಕಾಮಾಲೆ ಅಥವ ಮೂತ್ರ ಪಿಂಡತೊಂದರೆ, ಮಗಳ ಮದುವೆಗೆ ಅಡಚಣೆಗಳು. ವ್ಯಾಪಾರದಲ್ಲಿ ನಷ್ಟವಾಗುವಿಕೆ.
ದ್ವಾದಶ ಭಾವದಲ್ಲಿ ಗುರು ಸ್ಥಿತನಾದಾಗ ಉಂಟಾಗುವ ಶುಭಶುಭ ಫಲಗಳು :--
ಪ್ರಥಮ ಭಾವ :--
ಪ್ರಥಮ ಭಾವದ ಗುರುವು ಶುಭನಾಗಿದ್ದರೆ, ಜಾತಕನು ಭಾಗ್ಯಶಾಲಿ, ಆರೋಗ್ಯ ವಂತ, ದಷ್ಟ - ಪುಷ್ಟ ಶರೀರಿ, ಬುದ್ಧಿವಂತ, ಜ್ಞಾನಿ, ಪ್ರಾಮಾಣಿಕ, ಅನ್ಯರಿಂದಲೂ ಪ್ರಾಮಾಣಿಕತೆಯನ್ನು ಬಯಸುವವ, ಉಚ್ಛಮಟ್ಟದ ನ್ಯಾಯಮೂರ್ತಿ, ವೈದ್ಯ, ಲೆಕ್ಕಾಧಿಕಾರಿ, ಸಂಪಾದಕ, ದೀನರಿಗಾಗಿ ಮಿಡಿವ ಹೃದಯದವ, ಸಮಾಜ ಸೇವಕ, ಪವಿತ್ರಾತ್ಮ.
ಅಶುಭ ಗುರುವಾದರೆ, ಜಾತಕನು ರೋಗಿ, ನಿರ್ಧನ, ಅವಿದ್ಯಾವಂತ, ಉಪಕಾರವನ್ನು ಸ್ಮರಿಸದವ, ಆಶಿಸ್ತು, ಮೂರ್ಖ, ತಂದೆಯ ವಿರೋಧಿ, ಅಸ್ತಮಾ, ಹೃದಯರೋಗ, ರಕ್ತಸಂಭಂಧಿ, ಕ್ಯಾನ್ಸರ್ ರೋಗಗಳಿಂದ ಬಳಲುವವ, ಸುಖಹೀನ.
ದ್ವಿತೀಯ ಭಾವ :--
ದ್ವಿತೀಯ ಭಾವ ಗುರು ಶುಭನಾಗಿದ್ದರೆ, ಜಾತಕರು ಆಸ್ತಿಕರು, ಸಭ್ಯರು, ಸಮಾಜ ಸುಧಾರಕರು, ಮಹಾತ್ವಾಕಾಂಕ್ಷಿ, ನಿರ್ಭೀತ, ಉತ್ತಮ ಶಿಕ್ಷಕರು, ಸುಂದರ ಸಂಸಾರ, ಆಕಸ್ಮಿಕ ಧನ ಪ್ರಾಪ್ತಿ.
ಗುರು ಅಶುಭನಾದರೆ, ತನ್ನ ಕುಲಕ್ಕೆ ಕಳಂಕ ತರುವವರು, ಮಾತಿನ ಮಲ್ಲರು, ಭಾಗ್ಯಹೀನ, ಸಂಸಾರ ಸುಖವಿಲ್ಲ.
ತೃತೀಯಭಾವ :--
ಶುಭ ಗುರುವಾಗಿದ್ದರೆ, ಜಾತಕರು ಸೌಭಾಗ್ಯ ಶಾಲಿ, ಧೀರ್ಘಆಯು, ಸಿರಿವಂತ, ಲೇಖಕ, ಸಂಪಾದಕ, ದೀನ ಜನರ ಮೇಲೆ ದಯಾ ದೃಷ್ಟಿ ಇರುವವರಾಗುತ್ತಾರೆ.
ಅಶುಭ ಗುರುವಾದರೆ, ಜಾತಕರು ಕಲಹಪ್ರಿಯ, ಕಠೋರ ಸ್ವಭಾವ, ಸ್ವಾರ್ಥಿ, ಬಂಧುಗಳನ್ನು ವಂಚಿಸುವವ, ತಂದೆ ತಾಯಿಯ ರನ್ನು ಅಪಮಾನಿಸುವವರಾಗುತ್ತಾರೆ.
ಚತುರ್ಥಭಾವ :--
ಶುಭ ಗುರುವು ಚತುರ್ಥಭಾವದಲ್ಲಿ ಜಾತಕರನ್ನು , ಧನವಂತ, ಭಾಗ್ಯವಂತ, ಉಚ್ಛಮಟ್ಟದ ಶಿಕ್ಷಿತ, ಉತ್ತಮ ವಕೀಲ, ನ್ಯಾಯಾಧೀಶ, ರಾಜನೀತಿಜ್ಞ, ರಾಜಯೋಗ, ಆಕಸ್ಮಿಕ ಧನಪ್ರಾಪ್ತಿ, ತಾಯ್ತನ್ದ ಯರ ಪ್ರೀತಿಯನ್ನು ಹೊಂದುವವ, ಸುಂದರ ಸುಶೀಲ ಸುಸಂಸ್ಕುತ ಪತ್ನಿ ಮುಂತಾದ ಶುಭ ಫಲ ನೀಡುತ್ತಾನೆ.
ಗುರುವು ಅಶುಭನಾದರೆ, ಜಾತಕರು ಜಗಳಗಂಟಿ, ಉದ್ಧಟ ಪ್ರಕೃತಿಯವರು, ಅಹಂ, ಅನೇಕ ಸ್ತ್ರೀಯರೊಡನೆ ಸಂಭಂದ, ವಾಹನ ದುರ್ಘಟನೆ ಮುಂತಾದ ಅಶುಭ ಫಲಗಳು.
ಪಂಚಮಭಾವ :--
ಶುಭಗುರುವು ಪಂಚಮಭಾವ ದಲ್ಲಿದ್ದರೆ, ಜಾತಕರು ಭಾಗ್ಯಶಾಲಿ, ಧೀರ್ಘಆಯು, ಧನವಂತ, ವಿನಮ್ರ ಸ್ವಭಾವದವರೂ, ಕುಶಾಗ್ರ ಬುದ್ಧಿ, ಉತ್ತಮ ಸಲಹೆಗಾರರು, ಕುಲದ ಪ್ರತಿಷ್ಠೆಯನ್ನು ವೃದ್ಧಿಸುವವರು, ಸಮಾಜದ ಲ್ಲಿ ಸನ್ಮಾನಿತರು, ಪ್ರೇಮ ಪ್ರಸಂಗದಲ್ಲಿ ಸಫಲರು.
ಅಶುಭಗುರುವು ಪಂಚಮದಲ್ಲಿದ್ದರೆ, ಜಾತಕರು ಭಾಗ್ಯಹೀನ, ಒಣ ಪ್ರತಿಷ್ಠೆ ಯವ, ಜೂಜು, ಸಟ್ಟಾ, ಲಾಟರಿಯಲ್ಲಿ ಧನಹಾನಿ, ಸಂತಾನದ ದುಃಖ, ಅಯೋಗ್ಯ ಸಂತಾನ.
ಷಷ್ಟ ಬಾವ :--
ಷಷ್ಟ ಭಾವದ ಗುರುವು ಶುಭನಾದರೆ, ಜಾತಕನು ಧನವಂತ, ಭಾಗ್ಯವಂತ, ಆರೋಗ್ಯವಂತ, ಧೀರ್ಘ ಆಯು, ದಯಾಳು, ವ್ಯಾಯಾಮ ಪ್ರಿಯ, ಪರೋಪಕಾರಿ, ವೈಭವಯುತ ಜೀವನ, ವೈರಿಗಳ ಪರಾಭವ, ಬಂಧುಗಳಿಂದ ಸಹಕಾರ
.
ಗುರು ಅಶುಭನಾದರೆ, ಜಾತಕರು ಭಾಗ್ಯಹೀನ, ಸದಾ ಚಿಂತೆ, ಮಾನಸಿಕ ಉದ್ವೇಗ, ನೇತ್ರ ರೋಗಿ, ತಂದೆಗೆ ಅಶುಭ, ವ್ಯರ್ಥ ಅಲೆದಾಟ.
ಸಪ್ತಮಭಾವ :--
ಸಪ್ತಮ ಭಾವಸ್ಥ ಗುರು ಶುಭನಾದರೆ ಜಾತಕರು. ಸದಾಚಾರಿ, ಪರೋಪಕಾರಿ, ತ್ಯಾಗಿ, ಸತ್ಯವಾದಿ, ಉತ್ತಮ ಗುಣಗಳಿಂದ ಪ್ರಸಿದ್ಧಿ ಹೊಂದುವವ, ಸರ್ವರಿಂದಲೂ ಸನ್ಮಾನಿತ, ಸಫಲ ರಾಜನೀತಿಜ್ಞ, ಉತ್ತಮ ವ್ಯಾಪಾರಿ, ಸಭ್ಯ, ಸುಕ್ಷಿತ ಗುಣವಂತ ಪತ್ನಿ, ಉತ್ತಮ ಸಾಂಸಾರಿಕ ಜೀವನ.
ಸಪ್ತಮ ಭಾವಸ್ಥ ಗುರು ಅಶುಭನಾದರೆ, ಜಾತಕರು ಚಾರಿತ್ರ್ಯಹೀನ, ದುಷ್ಟ, ಧರ್ಮ ಲಂಪಟ, ಅಲೆಮಾರಿ, ಅನ್ಯ ಸ್ತ್ರೀ ಯರೊಂದಿಗೆ ಸಂಬಂಧ, ಅಲ್ಪಾಯು ಸಂಗಾತಿ, ಸಾಲಗಾರ, ಗೃಹಸ್ಥ ಜೀವನದಲ್ಲಿ ಸುಖವಿಲ್ಲ, ಸಹೋದರನ ಕೃಪೆಯಿಂದ ಸಂಸಾರ ಪಾಲಿಸಬೇಕಾಗುತ್ತದೆ.
ಅಷ್ಟಮಭಾವ :--
ಶುಭಗುರುವಾದರೆ, ಜಾತಕರು ಧೀರ್ಘಆಯು, ಸದಾಚಾರಿ, ಪರಿಶ್ರಮಿ, ಪ್ರತಿಷ್ಠಿತ, ವಿವಾಹಾತ್ಪರ ಭಾಗ್ಯ, ನೌಕರಿಯಲ್ಲಿ ಇರುವ ಪತ್ನಿ, ಪತ್ನಿಯ ತಂದೆಯ ಮನೆಯಿಂದ ಧನಾಗಮ.
ಗುರು ಅಶುಭನಾದರೆ, ಜಾತಕನು, ಹೇಡಿ, ವಂಚಕ, ದುಷ್ಟ, ಅಪ್ರಾಮಾಣಿಕ, ಮೊಸಗಾರ, ಅಜ್ಞಾನಿ, ರೋಗಿ, ರಕ್ತ ಸಂಬಂದಿ ರೋಗದಿಂದ ಪೀಡಿತ, ಕುಟುಂಬ ಸೌಖ್ಯವಿಲ್ಲ, ಅನ್ಯ ಸ್ತ್ರೀ ಸಂಬಂಧ, ವ್ಯಾಪಾರದಲ್ಲಿ ನಷ್ಟ.
ನವಮ ಭಾವ :--
ನವಮಭಾವ ಗುರು ಶುಭನಾಗಿದ್ದರೆ, ಜಾತಕರು ಬಹುಮುಖ ಪ್ರತಿಭೆ ಯುಳ್ಳವರು, ಸಾಹಿತ್ಯ ಪ್ರೇಮಿ, ಲೇಖಕ, ವೈದ್ಯ, ವಿಜ್ಞಾನಿ, ಅಧ್ಯಾಪಕ, ಭಾಗ್ಯಶಾಲಿ, ಧನವಂತ, ಧಾನ - ಧರ್ಮಗಳನ್ನು ಮಾಡುವವ, ಧಾರ್ಮಿಕತೆ, ತಾಯ್ತ0ದಗೆ ಅನುಕೂಲವಂತ, ಸುಖವಾದ ಅನುಕೂಲಕರ ದಾಂಪತ್ಯ, ಉತ್ತಮ ಸಂತಾನ.
ನವಮಭಾವದ ಗುರು ಅಶುಭನಾದರೆ, ಜಾತಕರು ಕ್ರೂರಿ, ನಿರ್ಧನ, ಅಧರ್ಮಿ, ಜಗಳಗಂಟಿ, ದುಃಖಿ, ತಂದೆಗೆ ಅಶುಭ, ಪತ್ನಿ - ಸಂತಾನದಿಂದ ಸುಖವಿಲ್ಲ, ಮಾವನ ಮನೆಯವರೊಡನೆ ಭಿನ್ನಾಭಿಪ್ರಾಯ ಹಾಗೂ ಹೃದಯ ಸಂಬಂಧಿ ರೋಗ.
ದಶಮಭಾವ:--
ದಶಮ ಭಾವಸ್ಥ ಗುರು ಶುಭಾನಾಗಿದ್ದರೆ, ಜಾತಕನು, ಸಕಲ ಸುಖ ಸಾಧನಗಳಿಂದ, ವೈಭವಯುತ ಜೀವನ ನಡೆಸುವವನು, ಉತ್ತಮ ರಾಜನೀತಿಜ್ಞ, ಉತ್ತಮ ಮಂತ್ರಿಯಾಗಬಲ್ಲರು, ಉತ್ತಮ ವ್ಯಾಪಾರಿ, ವಿನಮ್ರ, ದಯಾಳು, ಸಭ್ಯ.
ದಶಮ ಭಾವಸ್ಥ ಗುರು ಆಶುಭಾನಾಗಿದ್ದರೆ,
ಜಾತಕನು ಮೂರ್ಖ, ಅಜ್ಞಾನಿ, ದುಷ್ಟ, ಕಲಹಪ್ರಿಯ, ಕ್ರೂರ ಪ್ರವೃತ್ತಿಯುಳ್ಳವರೂ, ಜಂಬದ ಮಾತು, ಆಲಸಿ, ಧನಹೀನ, ವೈವಾಹಿಕ ಜೀವನದಲ್ಲಿ ಸುಖವಿಲ್ಲ ಉಸಿರಾಟದ ಹಾಗೂ ರಕ್ತ ದ ತೊಂದರೆಗಳು.
ದಶಮ ಭಾವಸ್ಥ ಗುರು ಆಶುಭಾನಾಗಿದ್ದರೆ,
ಜಾತಕನು ಮೂರ್ಖ, ಅಜ್ಞಾನಿ, ದುಷ್ಟ, ಕಲಹಪ್ರಿಯ, ಕ್ರೂರ ಪ್ರವೃತ್ತಿಯುಳ್ಳವರೂ, ಜಂಬದ ಮಾತು, ಆಲಸಿ, ಧನಹೀನ, ವೈವಾಹಿಕ ಜೀವನದಲ್ಲಿ ಸುಖವಿಲ್ಲ ಉಸಿರಾಟದ ಹಾಗೂ ರಕ್ತ ದ ತೊಂದರೆಗಳು.
ಏಕಾದಶ ಭಾವ :--
ಏಕಾದಶ ಭಾವಸ್ಥ ಗುರು ಶುಭಾನಾಗಿದ್ದರೆ,
ಜಾತಕನು ಉಚ್ಚಶಿಕ್ಷಣದ ಪಡೆದವನು, ಯಶಸ್ವೀ ಜೀವನ, ಕುಶಾಗ್ರಾಮತಿ, ಪರೋಪಕಾರಿ, ಉತ್ತಮ ರಾಜನೀತಿಜ್ಞ, ಕೊಟ್ಟ ಮಾತಂತೆ ನಡೆಯುವವ, ವೈಭವದ ಜೀವನ, ಶ್ರೀಮಂತ ಹಾಗೂ ಶ್ರೇಷ್ಠ ಮಿತ್ರರನ್ನುಳ್ಳವನು.
ಏಕಾದಶ ಭಾವಸ್ಥ ಗುರು ಅಶುಭಾನಾಗಿದ್ದರೆ, ಜಾತಕನು ಆಲಸಿ, ಭಾಗ್ಯಹೀನ, ಸಾಲಗಾರ, ವಂಚಕ, ಧೂರ್ತ, ವ್ಯಾಪಾರದಲ್ಲಿ ಹಾನಿ, ಸಂತಾನ ಸುಖವಿಲ್ಲ, ಅನೇಕ ಪ್ರಕಾರದ ರೋಗಗಳು.
ಏಕಾದಶ ಭಾವಸ್ಥ ಗುರು ಶುಭಾನಾಗಿದ್ದರೆ,
ಜಾತಕನು ಉಚ್ಚಶಿಕ್ಷಣದ ಪಡೆದವನು, ಯಶಸ್ವೀ ಜೀವನ, ಕುಶಾಗ್ರಾಮತಿ, ಪರೋಪಕಾರಿ, ಉತ್ತಮ ರಾಜನೀತಿಜ್ಞ, ಕೊಟ್ಟ ಮಾತಂತೆ ನಡೆಯುವವ, ವೈಭವದ ಜೀವನ, ಶ್ರೀಮಂತ ಹಾಗೂ ಶ್ರೇಷ್ಠ ಮಿತ್ರರನ್ನುಳ್ಳವನು.
ಏಕಾದಶ ಭಾವಸ್ಥ ಗುರು ಅಶುಭಾನಾಗಿದ್ದರೆ, ಜಾತಕನು ಆಲಸಿ, ಭಾಗ್ಯಹೀನ, ಸಾಲಗಾರ, ವಂಚಕ, ಧೂರ್ತ, ವ್ಯಾಪಾರದಲ್ಲಿ ಹಾನಿ, ಸಂತಾನ ಸುಖವಿಲ್ಲ, ಅನೇಕ ಪ್ರಕಾರದ ರೋಗಗಳು.
ದ್ವಾದಶ ಭಾವ :--
ದ್ವಾದಶ. ಭಾವಸ್ಥ ಗುರು ಶುಭನಾಗಿದ್ದರೆ, ಜಾತಕನು, 24 ನೆ ವರ್ಷದ ನಂತರ ಭಾಗ್ಯೋದಯ
ಜೀವನದ ಉತ್ತರಾರ್ಧ ಸುಖ, ಪರಿಶ್ರಮಿ, ಎಲ್ಲಾ ಕ್ಷೇತ್ರದಲ್ಲಿ ಸಫಲತೆ ಹೊಂದುವವ, ಉತ್ತಮ ವೈದ್ಯ ( ಶಸ್ತ್ರ ಚಿಕಿತ್ಸಕ ), ಕೆಮಿಷ್ಟ್, ಪ್ರಸಿದ್ಧ ನ್ಯಾಯವಾದಿ, ನ್ಯಾಯಾಧೀಶ, ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿ, ವೈಭವದ ಜೀವನ, ಸಂಪೂರ್ಣ ಕುಟುಂಬ ಸೌಖ್ಯ.
ದ್ವಾದಶ. ಭಾವಸ್ಥ ಗುರು ಶುಭನಾಗಿದ್ದರೆ, ಜಾತಕನು, 24 ನೆ ವರ್ಷದ ನಂತರ ಭಾಗ್ಯೋದಯ
ಜೀವನದ ಉತ್ತರಾರ್ಧ ಸುಖ, ಪರಿಶ್ರಮಿ, ಎಲ್ಲಾ ಕ್ಷೇತ್ರದಲ್ಲಿ ಸಫಲತೆ ಹೊಂದುವವ, ಉತ್ತಮ ವೈದ್ಯ ( ಶಸ್ತ್ರ ಚಿಕಿತ್ಸಕ ), ಕೆಮಿಷ್ಟ್, ಪ್ರಸಿದ್ಧ ನ್ಯಾಯವಾದಿ, ನ್ಯಾಯಾಧೀಶ, ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿ, ವೈಭವದ ಜೀವನ, ಸಂಪೂರ್ಣ ಕುಟುಂಬ ಸೌಖ್ಯ.
ದ್ವಾದಶ ಭಾವಸ್ಥ ಗುರು ಆಶುಭನಾಗಿದ್ದರೆ,
ಜಾತಕರು ವಾಚಾಳಿ, ಜಗಳಗಂಟಿ, ಅಸತ್ಯವಾದಿ, ವಂಚಕ, ಜನರ ವಿರುದ್ಧ ಷಡ್ಯಂತ್ರ ರಚಿಸುವವ, ದುಃಖಮಯ ದಾಂಪತ್ಯ, ರೋಗಿ, ಸಂತಾನ ಸುಖವಿಲ್ಲ.
ಜಾತಕರು ವಾಚಾಳಿ, ಜಗಳಗಂಟಿ, ಅಸತ್ಯವಾದಿ, ವಂಚಕ, ಜನರ ವಿರುದ್ಧ ಷಡ್ಯಂತ್ರ ರಚಿಸುವವ, ದುಃಖಮಯ ದಾಂಪತ್ಯ, ರೋಗಿ, ಸಂತಾನ ಸುಖವಿಲ್ಲ.
ಪರಿಹಾರಗಳು:-
1 ). ಇಂದ್ರನನ್ನು ಆರಾಧಿಸಿ.
೨ ). ಸಂತರನ್ನು, ಹಿರಿಯರನ್ನು, ಹೆಂಗಸರನ್ನು, ಹೆಣ್ಣುಮಕ್ಕಳನ್ನು ಆದರಿಸಿ,
3 ). ಬಂಗಾರದ ಸರವನ್ನು ಕೊರಳಲ್ಲಿ ಹಾಕಿಕೊಳ್ಳಿರಿ.
4 ). ದೇವಾಲಯಗಳಿಗೆ ನಿತ್ಯವೂ ಹೋಗಿಬನ್ನಿ.
5 ). ಸಿ0ಧೂರವನ್ನು ಹಣೆಗೆ ತಿಲಕವಾಗಿ ಇಟ್ಟುಕೊಳ್ಳಿ.
6 ). ಕೊಟ್ಟ ಮಾತನ್ನು ಉಳಿಸಿಕೊಳ್ಳೀ.
7 ). ಗುರುವಾರಗಳಂದು ಪತ್ನಿಯು ಉಪವಾಸವನ್ನು ಮಾಡಬೇಕು.
8 ). ಮಕ್ಕಳಿಂದ ತೊಂದರೆ ಇದ್ದಲ್ಲಿ ವಿಷ್ಣುವನ್ನು ಪೂಜಿಸಿ.
9 ). ತಂದೆಗೆ ಅನಾರೋಗ್ಯ ಇದ್ದರೆ ಹರಿಯುವ ನೀರಲ್ಲಿ ೪೫ ದಿನಗಳ ಕಾಲ ತಾಮ್ರದ ನಾಣ್ಯವನ್ನು ಹಾಕಿರಿ. *
10 ). ದಾಂಪತ್ಯದಿಂದ ಹೊರಗೆ ಸಂಬಂದಗಳನ್ನು ಇಟ್ಟುಕೊಳ್ಳಬೇಡಿ.
11 ). ಅಶ್ವತ್ತ ವೃಕ್ಷಕ್ಕೆ ೮ ಗುರುವಾರಗಳು ಅರಿಸಿನದ ದಾರವನ್ನು ೮ ಸುತ್ತು ಕಟ್ಟಿ.
12 ). ಗುರುವು ೭ರಲ್ಲಿ ಅಶುಭನಾಗಿದ್ದರೆ ಹಳದಿ ವಸ್ತ್ರವನ್ನು ಅರ್ಚಕರಿಗೆ ದಾನಮಾಡಿ
13 ).ಸೂರ್ಯ ಗ್ರಹಣದಲ್ಲಿ,ಬಾದಾಮಿ,ಸಿಪ್ಪೆ ಸಹಿತ ತೆಂಗಿನಕಾಯಿ ಮತ್ತು ಕಪ್ಪು ಉದ್ದಿನಕಾಳು ದಾನ ಮಾಡಿ.
14 ). ಮಗಳ ಮದುವೆಯಲ್ಲಿ ೨ ಒಂದೇ ಸಮನಾದ ಬಂಗಾರದ ನಾಣ್ಯಗಳನ್ನು ಮಾಡಿಸಿ ಒಂದನ್ನು ಹರಿಯುವ ನೀರಲ್ಲಿ ಹಾಕಿ,ಮತ್ತೊಂದನ್ನು ಮಗಳಿಗೆ ನೀಡಿ ಸದಾ ಕಾಲ ಜೋಪಾನವಾಗಿ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತೆ ಮಾಡಿರಿ.
15 ). ಗುರುವು ಅಸ್ತನಾಗಿದ್ದರೆ ೪೦೦ಗ್ರಾಂ ಬೆಲ್ಲ ಅಥವ ಗೋಧಿಯನ್ನು ಭಾನುವಾರ ಹರಿಯುವ ನೀರಲ್ಲಿ ಹಾಕಿ.
16 ). ಬುಧನೊಡನೆ ಗುರುವಿದ್ದರೆ ಬುಧನಿಗೆ ಸಂಬಂದಿಸಿದ ವಸ್ತುಗಳನ್ನು ದಾನಮಾಡಿ.
17 ). ಗುರುಗಳ ಸೇವೆಯನ್ನು ಮಾಡಿರಿ.
18 ) . ಓದುವ ಮಕ್ಕಳಿಗೆ ಉಚಿತ ಪಠ್ಯ, ಪಾಠ ಪ್ರವಚನಗಳನ್ನು ಮಾಡಿ.
19 ). ಗುರುಕುಲ,ಮಠಗಳಲ್ಲಿ ಪುಸ್ತಕ, ಪೆನ್ನು ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ
.
✍ ಡಾ|| B. N. ಶೈಲಜಾ ರಮೇಶ್..
How To Make Money At Betway Casinos
ReplyDeleteBetway's mobile app, which includes slots, table games, poker, keno and casino games, offers a variety of หารายได้เสริม Betway Casino - $1000 Bonus!