ಹರಿಃ ಓಂ
ಶ್ರೀ ಗಣೇಶಾನಮಃ
ಶ್ರೀ ಗುರುಭ್ಯೋನಮಃ
ಬಲಹೀನ ಗ್ರಹಗಳಿಂದಾಗುವ ತೊಂದರೆಗಳು ಹಾಗೂ ಪರಿಹಾರಗಳು ( ಲಾಲ್ ಕಿತಾಬ್ ಪರಿಹಾರಗಳು )
ಬುಧ ಗ್ರಹ :--
(Picture source: internet/ social media)
ಬುದ್ದಿಮಾಂದ್ಯತೆ, ವಿಚಾರಗಳನ್ನು ತಿಳಿಸುವಲ್ಲಿ ಅಸಹಾಯಕತೆ, ಮೂರ್ಖತನ, ಅಪ್ರಬುದ್ದತೆ, ವಾಕ್ ತೊಂದರೆ, ನೆನಪಿನ ಶಕ್ತಿ ಕೊರತೆ, ತಮ್ಮ ಮೇಲೆಯೇ ಹತೋಟಿಯಿಲ್ಲದಿರುವಿಕೆ, ಹಗಲು ಗನಸು ಗಾರರು, ತಾರ್ಕಿಕತೆಯ ಕೊರತೆ, ಸಂಸಾರದಲ್ಲಿ ಹುಡುಗಿಯರಿಗೆ ಸಮಸ್ಯೆಗಳು, ನರದೌರ್ಬಲ್ಯತೆ, ಕ್ಷಯ, ನಿದ್ರಾಹೀನತೆ, ತಲೆಸುತ್ತುವಿಕೆ, ಚರ್ಮದ ತುರಿಕೆ, ಅಲರ್ಜಿ, ಹೃದಯ ಮತ್ತು ಶ್ವಾಸಕೋಶಗಳ ದುರ್ಬಲತೆ, ವ್ಯಾಪಾರ ವ್ಯವಹಾರ ,ಷೇರು ಪೇಟೆ ವ್ಯವಹಾರಗಳಲ್ಲಿ ನಷ್ಟ, ಹಲ್ಲಿನ ತೊಂದರೆ ವಿದ್ಯಾಬ್ಯಾಸದಲ್ಲಿ ಅಡಚಣೆ, ಏಕಾಂತತೆ, ಮಾನಸಿಕ ತೊಳಲಾಟ, ಮದುವೆಯ ನಂತರವೂ ಹೆಣ್ಣಿನ ತಾಯಿಯ ಮನೆಯವರಿಗೆ ತೊಂದರೆಗಳು, ನಾದಿನಿಯಿಂದ ಕೆಟ್ಟ ಹೆಸರು, ಕಛೇರಿಯಲ್ಲಿ ಸ್ವಾರ್ಥತೆ, ಜಾತಕರು ಸುಳ್ಳುಗಾರರು, ಮೋಸಗಾರರು, ಮದ್ಯವ್ಯಸನಿ, ಬಂದುಗಳ ಅಥವ ದಾಂಪತ್ಯದ ಹೊರಗಿನ ಸಂಬಂದದಿಂದ ಕೆಟ್ಟ ಹೆಸರು .

ದ್ವಾದಶ ಭಾವಗಳಲ್ಲಿ ಸ್ಥಿತನಾದ ಬುಧನ ಶುಭಾಶುಭ ಫಲಗಳು :--
ಪ್ರಥಮಭಾವ :--
ಪ್ರಥಮ ಭಾವಸ್ಥ ಬುಧ ಶುಭನಾಗಿದ್ದರೆ, ಜಾತಕನು ಗಣಿತಜ್ಞ, ಜ್ಯೋತಿಷಿ, ಮೃಧುಭಾಷಿ, ಸಭ್ಯಸ್ಥ, ಪಂಡಿತ, ಧನವಂತ, ಉತ್ತಮ ಸಂಸ್ಕಾರಗಳುಳ್ಳವ, ಜನರಿಂದ ಸನ್ಮಾನಿತ, ಕಲೆಗಳಲ್ಲಿ ಅಭಿರುಚಿ.
ಆಶುಭನಾಗಿದ್ದರೆ, ಜಾತಕನು ಕೃಶ ಶರೀರದವ, ಮಂದಬುದ್ಧಿ, ಜಗಳಗಂಟಿ, ಪ್ರಾಯಶಃ ನಪುಂಸಕ, ಪತ್ನಿಯೊಡನೆ ಉತ್ತಮ ಸಂಬಂಧವಿಲ್ಲ, ವಿಚ್ಛೇದನ ವೂ ಆಗಬಹುದು.
ದ್ವಿತೀಯ ಭಾವ :--
ದ್ವಿತೀಯ ಭಾವಸ್ಥ ಬುಧ ಶುಭನಾಗಿದ್ದರೆ, ಜಾತಕನು , ಮೃಧುಭಾಷಿ, ತಿಳುವಳಿಕೆಯುಕ್ತ, ಹಾಸ್ಯ ಪ್ರವೃತ್ತಿ, ಕುಶಾಗ್ರಬುದ್ಧಿ, ವಾಕ್ಪಟು, ಶ್ರೀಮಂತ,
ಸುಖ ಸಂವೃದ್ಧಿ ಉಳ್ಳವನು, ವಿದ್ಯಾವಂತ, ಧಾರ್ಮಿಕ ಹಾಗೂ ಜ್ಯೋತಿಷ್ಯ ದಲ್ಲಿ ಅಭಿರುಚಿ, ಬರವಣಿಗೆ ಯಲ್ಲಿ ಆಸಕ್ತಿ, ಉತ್ತಮ ಸಂಗಾತಿ, ಸುಂದರ ದಾಂಪತ್ಯ.
ಸುಖ ಸಂವೃದ್ಧಿ ಉಳ್ಳವನು, ವಿದ್ಯಾವಂತ, ಧಾರ್ಮಿಕ ಹಾಗೂ ಜ್ಯೋತಿಷ್ಯ ದಲ್ಲಿ ಅಭಿರುಚಿ, ಬರವಣಿಗೆ ಯಲ್ಲಿ ಆಸಕ್ತಿ, ಉತ್ತಮ ಸಂಗಾತಿ, ಸುಂದರ ದಾಂಪತ್ಯ.
ಅಶುಭನಾದರೆ, ವ್ಯಾಪಾರ - ವ್ಯವಹಾರದಲ್ಲಿ ಹಾನಿ, ಕೃಶಕಾಯ, ಜೂಜು - ಲಾಟರಿ - ಸಟ್ಟಾ ಗಳಿಂದ ಧನಹಾನಿ, ಸಹೋದರ ಸಂಬಂಧದಲ್ಲಿ ಉತ್ತಮ ಸಂಬಂಧವಿರುವುದಿಲ್ಲ, ಸಾಮಾನ್ಯ ದಾಂಪತ್ಯ.
ತೃತೀಯಭಾವ :--
ತೃತೀಯ ಭಾವಸ್ಥ ಬುಧ ಶುಭನಾಗಿದ್ದರೆ, ಜಾತಕನು ಧೀರ್ಘಆಯು, ಉಚ್ಚಶಿಕ್ಷಣ, ಧನವಂತ, ಶಿಕ್ಷಕ ವೃತ್ತಿಯಿಂದ ಲಾಭ, ಯಾತ್ರೆಗಳಲ್ಲಿ ಆಸಕ್ತಿ, ಸುಂದರ ಕೌಟುಂಬಿಕ ಜೀವನ.
ತೃತೀಯ ಭಾವಸ್ಥ ಬುಧ ಶುಭನಾಗಿದ್ದರೆ, ಜಾತಕನು ಧೀರ್ಘಆಯು, ಉಚ್ಚಶಿಕ್ಷಣ, ಧನವಂತ, ಶಿಕ್ಷಕ ವೃತ್ತಿಯಿಂದ ಲಾಭ, ಯಾತ್ರೆಗಳಲ್ಲಿ ಆಸಕ್ತಿ, ಸುಂದರ ಕೌಟುಂಬಿಕ ಜೀವನ.
ಅಶುಭನಾದರೆ, ಅನ್ಯ ಜನರಲ್ಲಿ ವಿಶ್ವಾಸ, ಮನೆಯ ಬದಲು ವಸತಿ ಪ್ರದೇಶ ಗಳಲ್ಲಿ ಇರಲು ಇಷ್ಟ, ಬಂಧು ಮಿತ್ರರ ಸಂಬಂಧಗಳಿಂದ ವಂಚಿತ, ವ್ಯಾಪಾರದಲ್ಲಿ ಹಾನಿ, ಸಂಸಾರದಲ್ಲಿ ವೈಮನಸ್ಸು.
ಚತುರ್ಥ ಭಾವ :--
ಚತುರ್ಥ ಭಾವಸ್ಥ ಬುಧ ಶುಭನಾಗಿದ್ದರೆ, ಜಾತಕನು ಆರೋಗ್ಯವಂತ, ಉಚ್ಚಶಿಕ್ಷಣ, ಧೀರ್ಘಆಯು, ಸುಸಂಕೃತ, ಸಭ್ಯ, ಪತ್ರಿಕಾರಂಗದಲ್ಲಿ ಉತ್ತಮ ಹಾಗೂ ಯಶಸ್ವೀ ಬರಹಗಾರ, ಸಂಪಾದಕ ಅಥವಾ ಸಂಬಂಧಿತ ಕಾರ್ಯಗಳನ್ನು ಮಾಡುವವರು. ಹೆತ್ತವರನ್ನು ಆಧರಿಸುವವ, ಮಧುರ ದಾಂಪತ್ಯ.
ಅಶುಭನಾದರೆ, ಶಿಕ್ಷಣ ಅಪೂರ್ಣ, ತಾಯಿಯ ಪ್ರೀತಿಯ ಕೊರತೆ, ತಂದೆಯಿಂದ ಪೋಷಿತ, ವ್ಯಾಪಾರ ದಲ್ಲಿ ಹಾನಿ, ಪತ್ನಿಯೊಡನೆ ಭಿನ್ನಾಭಿಪ್ರಾಯ.
ಪಂಚಮಭಾವ :--
ಪಂಚಮಭಾವ ಸ್ಥಿತ ಬುಧನು ಶುಭನಾಗಿದ್ದರೆ, ಜಾತಕನು ದೂರದರ್ಶಿ, ಮೇಧಾವಿ, ನ್ಯಾಯಪ್ರಿಯ, ವಿವೇಕವಂತ, ಚಿಂತನಶೀಲ, ಉಚ್ಛಮಟ್ಟದ ಸರ್ಕಾರಿ ಅಧಿಕಾರಿ, ಸಂಗೀತ ಮುಂತಾದ ಕಲೆಗಳಲ್ಲಿ. ಅಭಿರುಚಿ, ಸಿರಿವಂತ.
ಪಂಚಮಭಾವ ಸ್ಥಿತ ಬುಧನು ಶುಭನಾಗಿದ್ದರೆ, ಜಾತಕನು ದೂರದರ್ಶಿ, ಮೇಧಾವಿ, ನ್ಯಾಯಪ್ರಿಯ, ವಿವೇಕವಂತ, ಚಿಂತನಶೀಲ, ಉಚ್ಛಮಟ್ಟದ ಸರ್ಕಾರಿ ಅಧಿಕಾರಿ, ಸಂಗೀತ ಮುಂತಾದ ಕಲೆಗಳಲ್ಲಿ. ಅಭಿರುಚಿ, ಸಿರಿವಂತ.
ಬುಧ ಅಶುಭನಾದರೆ, ಅಪೂರ್ಣ ವಿದ್ಯಾಭ್ಯಾಸ, ವ್ಯಾಪಾರ -ವ್ಯವಹಾರದಲ್ಲಿ ಹಾನಿ, ತಂದೆಗೆ. ಅಶುಭ, ಪತ್ನಿ ಯೊಡನೆ ಒಳ್ಳೆಯ ಬಾಂಧವ್ಯವಿಲ್ಲ, ಉದರರೋಗ, ರಕ್ತ ದೊತ್ತಡ ಮುಂತಾದ ರೋಗಗಳಿಂದ ಭಾದಿತ, ಸಂತಾನದ ಚಿಂತೆ.
ಷಷ್ಟ ಭಾವ :--
ಷಷ್ಟ ಭಾವಸ್ಥಿತ ಬುಧನು. ಶುಭನಾಗಿದ್ದರೆ, ಜಾತಕನು, ಪ್ರಾಮಾನಿಕನು, ಪರಿಶ್ರಮದಿಂದ ವಿಧ್ಯೆ, ಉನ್ನತ ಮಟ್ಟದ ಶ್ರೇಷ್ಠ ವೈದ್ಯ, ಆರೋಗ್ಯದ ಕುರಿತು ಜಾಗೃತನಾಗಿರುವವ, ಧಾರ್ಮಿಕ, ಧನ, ವಾಹನ ಸಂಪತ್ತು ಗಳಿಂದ ಸುಖಿ, ಸುಂದರ ಸಾಂಸಾರಿಕ ಜೀವನ.
ಬುಧ ಅಶುಭನಾದರೆ, ಜಾತಕರು ಕ್ರೋಧಿ, ಜಗಳಗಂಟಿ, ಅನಗತ್ಯ ಖರ್ಚು, ಚಿಂತೆ, ಅಪೂರ್ಣ ವಿಧ್ಯೆ, ಸಂಘರ್ಷದ ಜೀವನ, ತಾಯಿ ಅಥವಾ ಚಿಕ್ಕಮ್ಮ ರೊಂದಿಗೆ ವಿವಾದ, ಧನಹಾನಿ, ಆತ್ಮಹತ್ಯೆಯ ಸಂಭವನೀಯತೆಯೂ ಇರುತ್ತದೆ, ಚರ್ಮ ರೋಗ, ಹೃದಯರೋಗ, ನರದೌರ್ಬಲ್ಯ ದಿಂದ ಬಾಧಿತನಾಗುತ್ತಾನೆ, ಇವರ ಬಗ್ಗೆ ವಿಶೇಷ ಗಮನ ಕೊಡುವುದು ಅಗತ್ಯ.
ಸಪ್ತಮ ಭಾವ :--
ಸಪ್ತಮಭಾವಸ್ಥಿತ ಬುಧನು ಶುಭನಾಗಿದ್ದರೆ, ಜಾತಕರು ಕುಶಾಗ್ರ ಮತಿಗಳು, ಜ್ಯೋತಿಷಿ, ತಿಳುವಳಿಕೆ ಉಳ್ಳವ, ತಾಯಿಯೊಡನೆ ಪರಸ್ಪರ ಪ್ರೀತಿ - ವಿಶ್ವಾಸ ಇರುವವ, ಉನ್ನತ ಮಟ್ಟದ ಅಧಿಕಾರಿಗಳು, ಉಚ್ಚಶಿಕ್ಷಣ, ಬುದ್ಫ್ಹಿವಂತ ಸಂಗಾತಿ, ಸಿರಿವಂತ.
ಬುಧ ಅಶುಭನಾದರೆ, ಕೋಪವುಳ್ಳವನು, ಮಾನಸಿಕ ರೋಗ, ಮನೆಯಲ್ಲಿ ಸದಾ ಜಗಳ, ವಿಚ್ಛೇದನವೂ ಆಗಬಹುದು, ಅಪೂರ್ಣ ವಿದ್ಯಾಭ್ಯಾಸ, ಅನೈತಿಕ ಸಂಬಂಧ.
ಅಷ್ಟಮಭಾವ :--
ಅಷ್ಟಮಭಾವದ ಬುಧ ಶುಭನಾಗಿದ್ದರೆ, ಜಾತಕರು ಉನ್ನತ ವಿದ್ಯಾವಂತ ರು, ಸತ್ಯನಿಷ್ಠ, ನ್ಯಾಯಪ್ರಿಯ, ಭಾಗ್ಯಶಾಲಿ, ಪ್ರಾಮಾಣಿಕ ವ್ಯಕ್ತಿ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಉತ್ತಮ ಸಂಗಾತಿ, ಪತಿ ಪತ್ನಿ ಇಬ್ಬರೂ ಭಾಗ್ಯಶಾಲಿ ಗಳು.
ಅಷ್ಟಮಭಾವದ ಬುಧ ಶುಭನಾಗಿದ್ದರೆ, ಜಾತಕರು ಉನ್ನತ ವಿದ್ಯಾವಂತ ರು, ಸತ್ಯನಿಷ್ಠ, ನ್ಯಾಯಪ್ರಿಯ, ಭಾಗ್ಯಶಾಲಿ, ಪ್ರಾಮಾಣಿಕ ವ್ಯಕ್ತಿ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಉತ್ತಮ ಸಂಗಾತಿ, ಪತಿ ಪತ್ನಿ ಇಬ್ಬರೂ ಭಾಗ್ಯಶಾಲಿ ಗಳು.
ಅಶುಭ ಬುಧನಾದರೆ, ಜಾತಕನು ಅಲ್ಪಾಯು, ಭಾಗ್ಯಹೀನ, ಜಗಳಗಂಟಿ, ಪಾಲುದಾರಿಕೆ ವ್ಯವಹಾರಗಲ್ಲಿ ಹಾನಿ, ನಪುಂಸಕತ್ವ, ಅಲ್ಪ ಸಂತಾನ , ನರದೌರ್ಬಲ್ಯ ಕ್ಕೆ ಸಂಬಂಧಿಸಿದ ರೋಗಗಳಿಂದ ಬಾಧಿತ.
ನವಮಭಾವ :--
ಬುಧ ಶುಭನಾಗಿದ್ದಾಗ, ಜಾತಕರು ವಿದ್ಯಾವಂತ, ಭವಿಷ್ಯ ವನ್ನು ಬಲ್ಲವರು, ಮೇಧಾವಿ ಭಾಗ್ಯಶಾಲಿ, ಉನ್ನತ ಪದವಿ, ಸದಾ ವಿದ್ಯಾಧ್ಯಯನದಲ್ಲಿ ಆಸಕ್ತಿ, ಪಿತೃಭಕ್ತ, ಪೂರ್ಣ ಸುಖ ಸಂವೃದ್ಧಿ ಇರುವವರು, ಸುಂದರ ಸುಶೀಲ ಪತ್ನಿ.
ಬುಧ ಅಶುಭನಾದರೆ, ಅಪೂರ್ಣ ವಿಧ್ಯೆ, ಹಾಗಾಗಿ ಒಳ್ಳೆ ಕೆಲಸವಿಲ್ಲ, ಅಸತ್ಯ, ದುರಾಚಾರಿ, ಲಜ್ಜಾಹೀನ, ನುಡಿದಂತೆ ನಡೆಯಿಲ್ಲ, ಸುಖವಿಲ್ಲ, ಕಲಹಯುಕ್ತ ಕುಟುಂಬ.
ದಶಮಭಾವ :--
ದಶಮ ಭಾವಸ್ಥ ಬುಧನು ಶುಭನಾದರೆ, ಜಾತಕನು ಬಹುಮುಖ ಪ್ರತಿಭೆಯುಳ್ಳವನು, ಜ್ಯೋತಿಷ್ಯ ಬಲ್ಲವ, ಸಂಪಾದನೆಯ ಕಲೆಯಲ್ಲಿ ನಿಪುಣ, ಹೊಸವಿಷಯಗಳಲ್ಲಿ ಸಂಶೋಧನೆ ಮಾಡುವವ, ಜ್ಞಾನಿ, ಅನೇಕ ವಿದ್ಯೆಗಳು, ಅಧಿಕ ಧನ ಹಾಗೂ ಯಶಸ್ಸನ್ನು ಹೊಂದಿದವನು.
ಅಶುಭ ಬುಧನಾದರೆ, ಮಾದಕ ವಸ್ತುಗಳ ವ್ಯಸನಿ, ಸದಾ ಯಾವುದಾದರೊಂದು ರೋಗಗಳಿಂದ ಪೀಡಿತ, ಬಡತನ, ಮಾನಸಿಕ ಉದ್ವೇಗ.
ಏಕಾದಶ ಭಾವ :--
ಶುಭ ಬುಧನಾದರೆ, ಜಾತಕನು ಶ್ರೇಷ್ಠ ಮಟ್ಟದ ಗಣಿತಜ್ಞ, ಯಾವುದೇ ವಿಚಾರದಲ್ಲೂ ಪರಾಮರ್ಶಿಸಿ ಕಾರ್ಯ ನಿರ್ವಹಿಸುವ ವ, ಮಹತ್ವಾಕಾಂಕ್ಷೆ, ಚಿಂತನಶೀಲ, ಶ್ರೀಮಂತ, ಉತ್ತಮ ಪತ್ನಿ, ಪುತ್ರರು.
ಅಶುಭ ಬುಧನಾದರೆ, ವಂಚಕ ವಿಶ್ವಾಸಹೀನ, ಜಗಳಗಂಟಿ, ಆಲಸಿ, ನಿರ್ಧನ, ಕ್ರೂರಿ, ವಿದ್ಯಾವಿಹೀನ, ಬಂಧುಗಳೊಂದಿಗೆ ಉತ್ತಮ ಸಂಬಂಧವಿಲ್ಲ, ರೋಗಗ್ರಸ್ತ, ಸಂಸಾರ ಪಾಲನೆಯ ಚಿಂತೆ.
ದ್ವಾದಶ ಭಾವ :--
ದ್ವಾದಶ ಭಾವದಲ್ಲಿರುವ ಬುಧ ಶುಭನಾಗಿದ್ದರೆ, ಜಾತಕನು ಧನವಂತ, ದಯಾಳು, ತ್ಯಾಗಿ, ಅನೇಕ ವಿದ್ಯೆಗಳಲ್ಲಿ ಪ್ರವೀಣ, ಯಂತ್ರ - ಮಂತ್ರ - ತಂತ್ರ ವಿದ್ಯೆಗಳಲ್ಲಿ ಪರಿಣಿತ, ಬುದ್ಧಿವಂತ, ಯಶಸ್ದು ಹಾಗೂ ವಿದೇಶಯಾತ್ರೆ ಗಳಲ್ಲಿ ಯಶಸ್ಸು.
ಬುಧ ಅಶುಭನಾದರೆ, ಜಾತಕನು ಚಾರಿತ್ರ್ಯಹೀನ, ಭಾಗ್ಯಹೀನ, ಮಾನಸಿಕ ಹಾಗೂ ದೈಹಿಕ ರೋಗಗಳಿಂದ ಬಾಧಿತ, ಆಲಸ್ಯ, ಉನ್ಮಾದ, ಹುಚ್ಚು, ಸಂಬಂಧಿಕಾರಲ್ಲಿ ವಿಶ್ವಾಸ ವಿಲ್ಲ, ವಿದೇಶಯಾತ್ರೆ ಶುಭವಲ್ಲ, ವ್ಯಾಪಾರದ್ಲಲಿ ಧನ ಹಾನಿ, ಲಾಟರಿ , ಸಟ್ಟಾ, ಜೂಜು ಇವುಗಳಲ್ಲಿ. ಧನಹಾನಿ.
ಪರಿಹಾರಗಳು:-
1 ). ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.
2 ). ಹಲ್ಲುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ.
2 ). ಹಲ್ಲುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ.
3 ). ಹೆಣ್ಣು ಮಕ್ಕಳು ಮೂಗನ್ನು ಚುಚ್ಚಿಕೊಂಡು ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ.
4 ). ಗಂಡಸರು ಎಡಕೈಗೆ ಬೆಳ್ಳಿಯ ಕಡಗವನ್ನು ಧರಿಸಿ.
5 ). ಸರಸ್ವತಿ ಅಥವ ಗಾಯತ್ರಿಯನ್ನು ಆರಾಧಿಸಿ ಗಾಯತ್ರಿ ಜಪವನ್ನು ಸದಾ ಮಾಡುತ್ತಿರಿ.
6 ). ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡಿ
7 ). ಹಸಿಹುಲ್ಲನ್ನು ಹಸುಗಳಿಗೆ ತಿನ್ನಿಸಿ.
8 ). ಮದ್ಯ,ಮಾಂಸ,ಮೊಟ್ಟೆಗಳನ್ನು ಸೇವಿಸಬೇಡಿ.
9 ). ಊಟಕ್ಕೆ ಮುಂಚೆ ಸ್ವಲ್ಪ ಆಹಾರವನ್ನು ಹಸು,ನಾಯಿ,ಕಾಗೆಗಳಿಗೆ ಹಾಕಿರಿ.
10). ರಾತ್ರಿ ಉಪ್ಪುನೀರಲ್ಲಿ ನೆನೆಸಿದ ಹೆಸರುಬೇಳೆಯನ್ನು ಮಾರನೆ ದಿನ ಬೆಳಗ್ಗೆ ಪಕ್ಷಿಗಳಿಗೆ ನೀಡಿರಿ.
11 ). ಹಸಿ ಮಣ್ಣಿನ ಕಲಶವನ್ನು ಹರಿಯುವ ನೀರಲ್ಲಿ ಹಾಕಿ.
12) ಯಾರಿಂದಲೂ ಯಂತ್ರಗಳನ್ನು (ತಾಯಿತ,ಕುಡಿಕೆ.ಇತರೆ) ತಗೆದುಕೊಳ್ಳಬೇಡಿ.
13 ). ಸ್ವಲ್ಪ ಶುದ್ದವಾದ ತುಪ್ಪ ಸಕ್ಕರೆ, ಕರ್ಪೂರಗಳನ್ನು ಹಿತ್ತಾಳೆ ಬಕೇಟಿನ ನೀರಲ್ಲಿ ಹಾಕಿ.
14 ). ಬುಧವಾರದಿಂದ ೮ದಿನಗಳ ಕಾಲ ತೂತಿರುವ ತಾಮ್ರದ ಸಣ್ಣ ಬಿಲ್ಲೆಗಳನ್ನು ಹರಿಯುವ ನೀರಲ್ಲಿಹಾಕಿ.
15 ). ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪ ಕಲ್ಲುಸಕ್ಕರೆಯನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿರಿ.
16 ). ಮಾದಕ ವಸ್ತುಗಳಿಂದ ದೂರವಿರಿ.
17 ). ಹೆಸರುಕಾಳು ದಾನಮಾಡಿ.
18 ). ತಾಯಿ, ಸಹೋದರಿ, ಸೋದರತ್ತೆ, ಸೋದರ ಸಂಬಂಧವನ್ನು ಗೌರವದಿಂದ ಕಾಣಿ.
19 ). ಶುಭಕಾರ್ಯವನ್ನು. ಮಾಡುವ ಮೊದಲು ಕನ್ಯೆಯರಿಂದ ಆಶೀರ್ವಾದ ಪಡೆಯಿರಿ.
20 ). ಕಟುವಾದ ಮಾತುಗಳನ್ನಾಡದೆ, ನಾಲಿಗೆಯ ಮೇಲೆ ನಿಯಂತ್ರಣ ವಿದ್ದರೆ ಬುಧನ ಅಶುಭತ್ವದಿಂದ ರಕ್ಷಣೆ ದೊರೆಯುತ್ತದೆ.
✍ ಡಾ : B. N. ಶೈಲಜಾ ರಮೇಶ್
No comments:
Post a Comment