*ಹರಿಃ ಓಂ*
*ಶ್ರೀ ಗಣೇಶಾಯ ನಮಃ*
*ಶ್ರೀ ಗುರುಭ್ಯೋನಮಃ*
*ಶ್ರೀ ಗಣೇಶಾಯ ನಮಃ*
*ಶ್ರೀ ಗುರುಭ್ಯೋನಮಃ*
*ಜಾತಕನ ಕುಂಡಲಿಯಲ್ಲಿ ಗ್ರಹಗಳು ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು* *ಮತ್ತು ಇವುಗಳ ಪರಿಹಾರಗಳು* ( ಲಾಲ್ ಕಿತಾಬ್ ಪರಿಹಾರಗಳು)
*ಗ್ರಹಗಳು*
೧)ನೀಚತ್ವದಲ್ಲಿ
೨)ಶತೃಕ್ಷೇತ್ರಗಳಲ್ಲಿ
೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ
೪)ಅಸ್ತಂಗತರಾಗಿದ್ದರೆ
5) ೬, ೮೧೨ನೇ ಸ್ಥಾನಗಳಲ್ಲಿದ್ದರೆ.
೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ.
೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ.
ರವಿ :--
ರವಿ :--
*ರವಿಯಿಂದ ಉಂಟಾಗುವ ತೊಂದರೆಗಳು ಮತ್ತು ಅದಕ್ಕೆ ಪರಿಹಾರಗಳು*
Picture source : Internet/ social media
*ತೊಂದರೆಗಳು* :-
ಆತ್ಮ ವಿಶ್ವಾಸದ ಗೌರವದ ಕೊರತೆ, ದೈರ್ಯ, ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು, ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ, ಬಲಗಣ್ಣಿನಲ್ಲಿ ತೊಂದರೆ, ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಳ ತನ ಅಥವ ಸರ್ಕಾರದಿಂದ ಶಿಕ್ಷೆ, ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನಸಿಕನೋವು, ಉತ್ಸಾಹಹೀನತೆ,ಅಶಕ್ತತೆ,
ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ, ರಕ್ತ ಚಲನೆಯಲ್ಲಿ ಕೊರತೆ, ನರದೌರ್ಬಲ್ಯ, ದೃಷ್ಟಿದೋಷ, ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ.
ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ, ರಕ್ತ ಚಲನೆಯಲ್ಲಿ ಕೊರತೆ, ನರದೌರ್ಬಲ್ಯ, ದೃಷ್ಟಿದೋಷ, ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ.
ರವಿಯು ದ್ವಾದಶ ಭಾವಗಳಲ್ಲಿ ಸ್ಥಿತ ಫಲ:--
ಪ್ರಥಮ ಭಾವ :--
ಪ್ರಥಮ ಭಾವದಲ್ಲಿ ರವಿ ಸ್ಥಿತನಿದ್ದರೆ, ಜಾತಕನು ಧೀರ್ಘಆಯು ಆಗುತ್ತಾನೆ, ಕುಟುಂಬದಲ್ಲಿ ಸಹೋದರಿ , ಸಹೋದರರ ಅಸಹಕಾರ ಇದ್ದರೂ ಪ್ರಗತಿ ಸಾಧಿಸುತ್ತಿರುತ್ತಾನೆ, ಪರೋಪಕಾರಿಯಾದರೂ ಪ್ರೀತಿಯಿಂದ ದೂರವಿರುತ್ತಾನೆ, ಗೃಹಸ್ಥ ಜೀವನ ಚನ್ನಾಗಿದ್ದು ಮೊದಲು ಪುತ್ರಸಂತಾನ ಆಗುತ್ತದೆ, ನಿರ್ಧನರಿಗೆ ಸಹಾಯ ಮಾಡುವವನಾದರೂ ಅಧಿಕ ಕೋಪ ಇರುತ್ತದೆ, ಯಾವುದನ್ನೇ ಆದರೂ ಸಾರಾ ಸಾರಾ ವಿವೇಚಿಸಿ ವಿಶ್ವಾಸ ಇಡುವ ವ್ಯಕ್ತಿ ಆಗುತ್ತಾನೆ, ಈತ ಅಗಲವಾದ ಹಣೆ ಹೊದಿರುವವನು, ಸ್ವಾಭಿಮಾನಿ, ಅಧಿಕಾರ ಚಲಾಯಿಸುವವನು ಆಗಿರುತ್ತಾನೆ.
ದ್ವಿತೀಯ ಭಾವ :--
ರವಿಯು ದ್ವಿತೀಯದಲ್ಲಿ ಸ್ಥಿತನಾಗಿದ್ದರೆ, ಪತ್ನಿ ( ಸ್ತ್ರೀ) ಕಾರಣದಿಂದ ಸಂಭಂಧಿಗಳೊಡನೆ ವಿವಾದ - ಜಗಳ ಉಂಟಾಗುತ್ತದೆ, ಒಂದು ವೇಳೆ ಜಾತಕರ ಪತ್ನಿಯ ( ಶುಕ್ರ) ಜಗಳದಿಂದ ದೂರವಿದ್ದರೆ ನಿರಂತರವಾಗಿ ಪ್ರಗತಿಯನ್ನು ಕಾಣುತ್ತಾನೆ, ಈ ಜಾತಕರು ತನ್ನ ಭುಜಬಲದ ಮೇಲೆ ವಿಶ್ವಾಸವಿಟ್ಟು ಯಶಸ್ಸು - ಗೌರವ ಪ್ರಾಪ್ತಿ ಹೊಂದುವವರೂ ಮತ್ತು ಅನ್ಯರಿಗೆ ಸಹಾಯ ಮಾಡುವವರೂ ಆಗುತ್ತಾರೆ.
ತೃತೀಯ ಭಾವ :--
ತೃತೀಯದಲ್ಲಿ ರವಿ ಸ್ಥಿತನಿದ್ದರೆ, ಜಾತಕನು ಜೀವನ ನಿರ್ವಹಣೆ ಮಾಡಲು ಸಮರ್ಥ, ವ್ಯವಹಾರ ಕುಶಲ, ಮತ್ತು ತೀರ್ಥಯಾತ್ರೆ ಮಾಡುವ ಮನಸ್ಸುಳ್ಳವನಾಗಿರುತ್ತಾನೆ, ಇವರಿಗೆ ಸಹೋದರ ಸಹೋದರಿಯರಿರುತ್ತಾರೆ, ತಾಯಿಗೆ ಧೀರ್ಘಾಯಸ್ಸು, ಈತ ಯಾವುದೇ ದುರಾಚಾರಗಳನ್ನ ಮಾಡದಿದ್ದರೆ ಎಲ್ಲಾ ಪ್ರಕಾರಗಳಿಂದಲೂ ಸಂತೃಪ್ತಿ, ಸತ್ಸಂತಾನವಿರುತ್ತದೇ, ದುರಾಚಾರದ್ಲಲಿ ತೊಡಗಿದರೆ ಸೂರ್ಯ ಅಶುಭ ಫಲ ಪ್ರಧಾನಿಸುತ್ತಾನೆ.
ಚತುರ್ಥ ಭಾವ :--
ರವಿಯು ಚತುರ್ಥದಲ್ಲಿ ಸ್ಥಿತವಿದ್ದರೆ, ಜಾತಕರು ಸ್ವಕ್ಷೇತ್ರ ಬಿಟ್ಟು ದೂರದಲ್ಲಿ ಅಥವಾ ವಿದೇಶದಲ್ಲಿ ವಾಸಿಸುತ್ತಾರೆ, ತಾಯಿ ಮತ್ತು ಸಹೋದರರಿಗೆ ಕಷ್ಟ, ಪೂರ್ವಜರಿಗಿಂತ ಬೇರೆಯೇ ಆದ ವ್ಯವಹಾರಗಳನ್ನು ಮಾಡುತ್ತಾರೆ,
ಪಂಚಮಭಾವ :--
ಇಲ್ಲಿನ ರವಿಯು ಜಾತಕನ ಭಾಗ್ಯೋದಯಕ್ಕೆ
ಕಾರಣನಾಗುತ್ತಾನೆ, ಜಾತಕನು ವಿದ್ಯಾವಂತನಾಗಿ ಸರ್ಕಾರದಲ್ಲಿ ಗೌರವಾದರಗಳನ್ನು ಹೊಂದುತ್ತಾನೆ, ವೃದ್ಧಾಪ್ಯದಲ್ಲಿ ಉತ್ತಮ ಜೀವನ, ಯಾತ್ರೆಗಳು, ಆಕಸ್ಮಿಕ ಧನದ ಪ್ರಾಪ್ತಿ ಆಗುತ್ತದೆ.
ಕಾರಣನಾಗುತ್ತಾನೆ, ಜಾತಕನು ವಿದ್ಯಾವಂತನಾಗಿ ಸರ್ಕಾರದಲ್ಲಿ ಗೌರವಾದರಗಳನ್ನು ಹೊಂದುತ್ತಾನೆ, ವೃದ್ಧಾಪ್ಯದಲ್ಲಿ ಉತ್ತಮ ಜೀವನ, ಯಾತ್ರೆಗಳು, ಆಕಸ್ಮಿಕ ಧನದ ಪ್ರಾಪ್ತಿ ಆಗುತ್ತದೆ.
ಷಷ್ಟಮ ಭಾವ:--
ಇಲ್ಲಿ ರವಿಯು ಶುಭ ನಾಗಿದ್ದರೆ, ಜಾತಕನು ರಾಜನೀತಿಯಲ್ಲಿ ಸಕ್ರಿಯನಾಗಿರುತ್ತಾನೆ, ಶ್ರೇಷ್ಠ ಕುಟುಂಬದಲ್ಲಿ ಜನನ, ಕೋರ್ಟು ವ್ಯವಹಾರಗಳಲ್ಲಿ ಜಯ, ಸಮಾಜದಲ್ಲಿ ಸನ್ಮಾನಿತರು, ಸರ್ಕಾರಿ ನೌಕರಿಯಲ್ಲಿ ಪ್ರತಿಷ್ಠಿತ ಹುದ್ದೆ ಇರುತ್ತದೆ,
ಅಶುಭ ವಾದರೆ, ಪತ್ನಿಯಿಂದ ದುಃಖಿತ, ಕೋರ್ಟ್ ವ್ಯವಹಾರದಲ್ಲಿ ಸೋಲು, ಧನಹಾನಿ, ಎಲ್ಲರಿಂದಲೂ ಉಪೇಕ್ಷಿತನಾಗಿ, ಆರೋಗ್ಯ, ಧನ, ಸಮಯ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ.
ಅಶುಭ ವಾದರೆ, ಪತ್ನಿಯಿಂದ ದುಃಖಿತ, ಕೋರ್ಟ್ ವ್ಯವಹಾರದಲ್ಲಿ ಸೋಲು, ಧನಹಾನಿ, ಎಲ್ಲರಿಂದಲೂ ಉಪೇಕ್ಷಿತನಾಗಿ, ಆರೋಗ್ಯ, ಧನ, ಸಮಯ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ.
ಸಪ್ತಮ ಭಾವ :--
ರವಿಯು ಶುಭನಾಗಿದ್ದರೆ, ಜಾತಕನು ಸುಂದರ, ಬಲಿಷ್ಠ ಹಾಗೂ ವಿವಾಹದ ನಂತರ ಭಾಗ್ಯೋ ದಯ, ತನ್ನ ವಂಶಜರಿ ಗೆ ಲಾಭದಾಯಕನಾಗುತ್ತಾನೆ,
ಅಶುಭನಾಗಿದ್ದರೆ ವಿವಾಹ ವಿಳಂಬ, ಕೋಪಗ್ರಸ್ಥ ಪತ್ನಿ, ಪತ್ನಿಗೆ ದಾಸ, ಚಾರಿತ್ರ್ಯಹೀನ ಸ್ತ್ರೀ ಯರೊಂದಿಗೆ ಸಂಬಂಧ, ಕಲಹದ ದಾಂಪತ್ಯ, ನೇತ್ರ ರೋಗ.
ಅಶುಭನಾಗಿದ್ದರೆ ವಿವಾಹ ವಿಳಂಬ, ಕೋಪಗ್ರಸ್ಥ ಪತ್ನಿ, ಪತ್ನಿಗೆ ದಾಸ, ಚಾರಿತ್ರ್ಯಹೀನ ಸ್ತ್ರೀ ಯರೊಂದಿಗೆ ಸಂಬಂಧ, ಕಲಹದ ದಾಂಪತ್ಯ, ನೇತ್ರ ರೋಗ.
ಅಷ್ಟಮ ಭಾವ :--
ಶುಭ ರವಿಯಾದರೆ, ಜಾತಕನು ನಿರೋಗಿ, ಸ್ತ್ರೀಯರಿಂದ ಧನಲಾಭ, ಪಾಲುದಾರಿಕೆಯಲ್ಲಿ ಲಾಭ, ಗುಪ್ತವಿದ್ಯಗಳನ್ನು ಬಲ್ಲವ ಹಾಗೂ ದಕ್ಷ ನಾಗುತ್ತಾನೆ.
ಅಶುಭ ರವಿಯಾದರೆ, ಸದಾ ಜಗಳ, ಅನೇಕ ಸ್ತ್ರೀಯರೊಡನೆ ಅನೈತಿಕ ಸಂಬಂಧ, ನಪುಂಸಕ ಕೂಡ ಆಗಬಹುದು.
ಅಶುಭ ರವಿಯಾದರೆ, ಸದಾ ಜಗಳ, ಅನೇಕ ಸ್ತ್ರೀಯರೊಡನೆ ಅನೈತಿಕ ಸಂಬಂಧ, ನಪುಂಸಕ ಕೂಡ ಆಗಬಹುದು.
ನವಮ ಭಾವ :--
ನವಮದಲ್ಲಿ ರವಿಯಿದ್ದರೆ ಜಾತಕನು ಉನ್ನತ ಮಟ್ಟದ ವ್ಯವಹಾರ ಕುಶಲ ಹಾಗೂ ದೊಡ್ಡ ಶ್ರೀಮಂತ ನಾಗುತ್ತಾನೆ, ಪರೋಪಕಾರಿ, ಕುಟುಂಬಕ್ಕಾಗಿ ಜೀವ ಸವೆಸುವವ, ಧಾರ್ಮಿಕ ಮನೋಭಾವ, ತೀರ್ಥಯಾತ್ರೆ ಮಾಡುವವ, ಪಾತ್ರಾರ್ಜಿತ ವ್ಯವಹಾರದಲ್ಲಿ ಉನ್ನತಿ.
ದಶಮ ಭಾವ :--
ದಶಮ ಭಾವದ ರವಿ.. ಜಾತಕನಿಗೆ ಮಹತ್ವಾಕಾಂಕ್ಷೆ, ಕಲೆ ಸಾಹಿತ್ಯ ಸಂಗೀತದಲ್ಲಿ ಅಭಿರುಚಿ, ದಯಾಳು ಹಾಗೂ ವ್ಯಾಪಾರದಲ್ಲಿ ಸಫಲತೆಯನ್ನು ಕೊಡುತ್ತಾನೆ.
ಅಶುಭನಾದರೆ, ರಾಜನೀತಿಯಲ್ಲಿ, ಕುಟುಂಬದಲ್ಲಿ, ಸಫಲತೆಯಿಲ್ಲ, ವ್ಯಾಪಾರ ದಲ್ಲಿ ವಿಫಲ, ತಂದೆಗೆ ಅಶುಭ.
ಅಶುಭನಾದರೆ, ರಾಜನೀತಿಯಲ್ಲಿ, ಕುಟುಂಬದಲ್ಲಿ, ಸಫಲತೆಯಿಲ್ಲ, ವ್ಯಾಪಾರ ದಲ್ಲಿ ವಿಫಲ, ತಂದೆಗೆ ಅಶುಭ.
ಏಕಾದಶ ಭಾವ :--
ಶುಭ ರವಿಯಾದರೆ, ರಾಜಕೀಯ ( ರಾಜನೀತಿಯಲ್ಲಿ) ಸಫಲ, ಪ್ರಾಮಾಣಿಕ ಪ್ರವೃತ್ತಿ, ಶ್ರೀಮಂತ, ಮಿತ್ರರ ಶುಭಚಿಂತಕ, ಧನ ಸಂಚಯ ಮಾಡುವವನು ಆಗುತ್ತಾನೆ.
ಅಶುಭನಾದರೆ, ಸಂತಾನದಿಂದ ವಂಚಿತ, ವ್ಯಾಪಾರದಲ್ಲಿ ಸದಾ ಹಾನಿ, ಅನಾರೋಗ್ಯ.
ಅಶುಭನಾದರೆ, ಸಂತಾನದಿಂದ ವಂಚಿತ, ವ್ಯಾಪಾರದಲ್ಲಿ ಸದಾ ಹಾನಿ, ಅನಾರೋಗ್ಯ.
ದ್ವಾದಶ ಭಾವ :--
ಇಲ್ಲಿ ರವಿಯು ಶುಭನಾದರೆ, ಜಾತಕನು ವಿದೇಶ ಯಾತ್ರಾಯೋಗ, ವಿದೇಶದಲ್ಲಿ ಸಫಲತೆ ಹೊಂದುವವ, ವ್ಯಾಪಾರದಲ್ಲಿ ಲಾಭ, ಶ್ರೇಷ್ಠ ಚಿಕಿತ್ಸಕ ಆಗುತ್ತಾನೆ.
ಅಶುಭ ರವಿಯಾದರೆ, ವಿದೇಶದಲ್ಲಿ ಅಸಫಲತೆ, ಮೆದುಳು ಮತ್ತು ನೇತ್ರರೊಗದಿಂದ ಪೀಡಿತ, ಧನ ನಾಶ, ಅಪ್ರಾಮಾನಿಕ, ಪದಾರ್ಥಗಳನ್ನು ದುರುಪಯೋಗ ಮಾಡುವವ ಆಗುತ್ತಾನೆ.
ಅಶುಭ ರವಿಯಾದರೆ, ವಿದೇಶದಲ್ಲಿ ಅಸಫಲತೆ, ಮೆದುಳು ಮತ್ತು ನೇತ್ರರೊಗದಿಂದ ಪೀಡಿತ, ಧನ ನಾಶ, ಅಪ್ರಾಮಾನಿಕ, ಪದಾರ್ಥಗಳನ್ನು ದುರುಪಯೋಗ ಮಾಡುವವ ಆಗುತ್ತಾನೆ.
ರವಿಯ ಶುಭಾಶುಭ ಭಾವಗಳು. :--
ರವಿಯು ಪ್ರಥಮ, ಪಂಚಮ, ಅಷ್ಟಮ, ನವಮ, ದಶಮ , ಏಕಾದಶ, ದ್ವಾದಶ ಭಾವಗಳಲ್ಲಿ ಶುಭ ಫಲಗಳನ್ನೂ...
ಷಷ್ಟ, ಸಪ್ತಮ ಭಾವಗಳಲ್ಲಿ. ಅಶುಭ ಫಲಗಳನ್ನೂ ಪ್ರಸಾದಿಸುತ್ತಾನೆ, ರವಿಯು ಏಕಾಂಗಿಯಾಗಿ ಯಾವುದೇ ಭಾವದಲ್ಲಿ ಸ್ಥಿತನಿದ್ದರೂ ಸ್ವಪ್ರಯತ್ನದಿಂದ ಲೇ ಶ್ರೀಮಂತ ರಾಗುತ್ತಾರೆ,
ರವಿಯು ಅಶುಭನಾದರೆ ಪ್ರಥಮ ಭಾವ ಕೂಡ ಹಾಳಾಗುತ್ತೆ, ಚಂದ್ರನೊಡನೆ ಸಂಬಂಧವಿದ್ದರೆ ಚತುರ್ಥ ಭಾವದ ಅಶುಭ ಫಲ ಪ್ರಾಪ್ತಿಯಾಗುತ್ತೆ, ರಾಹುವಿನೋಡನೆ ಸಂಭಂದ ವಿದ್ದರೆ ಪಂಚಮ ಭಾವದ ಫಲ ನಾಶವಾಗುತ್ತೆ, ರವಿಯು ಷಷ್ಟ ಭಾವದಲ್ಲಿ ಸ್ಥಿತನಿದ್ದರೆ ಪುತ್ರಪ್ರಾಪ್ತಿಯ ನಂತರವೇ ಶುಭಫಲ ಪ್ರಾಪ್ತಿ.

ರವಿಯ ಅಶುಭತ್ವದ ಲಕ್ಷಣ :--
ರವಿಯು ಅಶುಭನಾಗಿದ್ದರೆ, ಜಾತಕನ ಶರೀರ ಒಣಗಿ ಬಿರುಸಾಗಿರುತ್ತದೆ, ಅತ್ಯಂತ ಕಠಿಣತೆಯಿಂದ ಶರೀರದ ಅಂಗಗಳ ಚಲನೆ ಸಂಭವ, ಬಾಯಿಯಲ್ಲಿ ಸದಾ ಜೊಲ್ಲು ಸುರಿಸುತ್ತಿರುತ್ತಾರೆ, ಮನೆಯಲ್ಲಿ ಕೆಂಪು ಬಣ್ಣದ ಹಸು ಅಥವಾ ಎಮ್ಮೆ ಸಾಕಿದ್ದರೆ ಅದು ಮರಣ ಹೊಂದುತ್ತದೆ ಅಥವಾ ಕಳೆದು ಹೋಗುತ್ತದೆ.
ಹೃದಯರೋಗ, ಉದರಸಂಭಂದಿ ವಿಕಾರ, ನೇತ್ರರೋಗ, ಧನನಾಶ, ಸಾಲದ ಹೊರೆ, ಮಾನ ನಷ್ಟ, ಅಪಯಶಸ್ಸು, ಮುಂತಾದ ಆನಿಷ್ಠ ಫಲಗಳು.
*ಪರಿಹಾರಗಳು:-*
ಶಿವಮತ್ತು ರವಿಯನ್ನು ಆರಾಧಿಸಿ,
೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ,
ರವಿಗೆ ಸಂಬಂದಿಸಿದ ಇತರರು ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ ದಾನಮಾಡಿ,
ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ,
ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ.
ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ.
ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ.
ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ.
ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ.
ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ.
ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ
ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ.
ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ.
ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ.
ಸುಳ್ಳು ಸಾಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ.
ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ.
ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ.
✍ ಡಾ: ಶೈಲಜಾ ರಮೇಶ್
Ashwini naksathra 2pada pl.suggest future of this
ReplyDelete