Sunday, 2 July 2017

---: ಕೇತು ಗ್ರಹ :---


   ---:  ಕೇತು ಗ್ರಹ   :---

ಹರಿಃ ಓಂ
ಓಂ ಶ್ರೀ ಗಣೇಶಾಯ ನಮಃ
ಓಂ ಶ್ರೀ ಗುರುಭ್ಯೋ ನಮಃ

ಕೇತು ಗ್ರಹ  :--
Picture source: Internet/ social media

     " ಕೇತು ಕುಲಸ್ಯೋನ್ನತಿಮ್ ಕುರು ಸರ್ವದಾ "
     ಕುಲವನ್ನುಉದ್ದಾರ ಮಾಡುವವನು,  ಅಂದರೆ ವಂಶಾಭಿವೃದ್ಧಿ ,ಇದ್ದ ಜಾಗದಲ್ಲಿ ಪತಾಕೆ ಹಾರಿಸುವುದು /  ಅಭಿವೃದ್ಧಿ ಪಡಿಸುವುದು, ಪಿತಾಮಹ ,  ಮೋಕ್ಷ, ಸನ್ಯಾಸಿಗಳು, ದಿಗಂಬರರು, ಧಾರ್ಮಿಕತೆ, ದೈವೀಕತೆಗೆ ಕಾರಕ ಕೇತುಗ್ರಹ.
        ಕೀಲಕ ಸಂವತ್ಸರದ ಮಾರ್ಗಶಿರ ಮಾಸದ ಅಮಾವಾಸ್ಯೆ ಯಂದು ಜನನ, ಜನ್ಮ ನಕ್ಷತ್ರ ಮೂಲ, ಗೋತ್ರ - ಜೈಮಿನಿ( ಪಾರ್ಥಿವ ಸಂವತ್ಸರದ, ಫಾಲ್ಗುಣ ಮಾಸದ ಪೌರ್ಣಮಿ ಅಭಿಜಿತ್ ನಕ್ಷತ್ರದಲ್ಲಿ ಜನನ , ಜನ್ಮದೇಶ - ಅಂತರ್ವೇದಿ,  ಎಂಬುದು  ಕೆಲವರ  ಅಭಿಮತ), ಚಿತ್ರವರ್ಣ ಶರೀರ, ಹಸ್ತಸಂಖ್ಯೆ -  7, ಗ್ರಹಮಂಡಲದಲ್ಲಿ  ವಾಸಸ್ಥಾನ -  ದಕ್ಷಿಣಾಭಿಮುಖ, ಧಾನ್ಯ - ಹುರುಳಿ,  ವಸ್ತ್ರ - ಚಿತ್ರ ವಿಚಿತ್ರ ಬಣ್ಣ,  ರತ್ನ - ವೈಡೂರ್ಯ,  ಆಯುಧಗಳು - ಗಧೆ, ವರದ,  ಚಿತ್ರರಥವುಳ್ಳವನು, ದ್ವಜಾಕಾರ ಮಂಡಲ, ಪತ್ನಿ - ಚಿತ್ರಲೇಖ,  ವಾಹನ -  ಗೃದ್ರ,  ಶಕ್ತಿ ದೇವತೆ - ಧೂಮ್ರ, ಅಧಿದೇವತೆ - ಚಿತ್ರಗುಪ್ತ,  ಪ್ರತ್ಯಧಿದೇವತೆ - ಬ್ರಹ್ಮ,  ಅಭಿಮಾನ ದೇವತೆ  -  ವಿನಾಯಕ, ಬರ್ಬರ ದೇಶಕ್ಕೆ  ಅಧಿಪತಿ,  ಛಾಯಾಗ್ರಹನು,  ಜ್ಞಾನಕಾರಕನು,  ಮೋಕ್ಷಕಾರಕನು, ಗೂಢವಿದ್ಯೆಯಲ್ಲಿ ಪರಿಣಿತನು,  ವೇದಾಂತಿ, ಮಂತ್ರಶಾಸ್ತ್ರ  ಬಲ್ಲವನು, ರಹಸ್ಯಪ್ರಿಯನು, ವ್ಯಯ, ಗಂಗಾಸ್ನಾನ,  ಮಹಾತಪಸ್ವಿ,ಸ್ನೇಹ,  ಚಂಚಲನು, ನೀಚಸಂಗ,  ಮೂರ್ಖ,  ಬ್ರಹ್ಮಜ್ಞಾನ,  ಪಾದಗಳಿಗೆ  ಅಧಿಪತಿ,  ಅಂತ್ಯಜಾತಿ,  ವಿಷಕಾರಿ,  ಅಜೀರ್ಣ, ದುಃಸ್ವಪ್ನ,  ಹಸ್ತಸಾಮುದ್ರಿಕನು,  ವಶೀಕರಣ,  ವಿದ್ಯಾಬಂಗ,  ಅಪಘಾತ,  ಕೀಳುಜಾತಿ, ಕೃಷ್ಣ ಮತ್ತು  ಧೀರ್ಘ ಶರೀರವುಳ್ಳವನು,  ವಿಷಮಯ  ನಾಲಿಗೆ, ರಕ್ತವರ್ಣ  ಉಗ್ರದೃಷ್ಠಿ  ಮತ್ತು  ಮಾತುಗಳು,  ಕ್ರೂರಗ್ರಹ, ರಜೋಗುಣ,  ವಾಸಸ್ಥಳ  ಬಿಲ, ಕತ್ತಲೆಯ ಪ್ರದೇಶ, ಮಣ್ಣಿನ ಪಾತ್ರೇ, ಚಿಕ್ಕವೃಕ್ಷಗಳು, ಆಧ್ಯಾತ್ಮಿಕ ಚಿಂತಕ, ವೇದಾಂತ  ಪ್ರಚಾರನು, ಶತ್ರುಪೀಡೆ, ಜ್ವಾಲಾಮುಖಿ,  ಅಗ್ನಿತತ್ವ, " ಕುಜವತ್ ಕೇತುಃ"‌ , ಕುಜನಂತೆ ಕಾರಕತ್ವ, ಹೊಗೆಯನ್ನು ಕಾರುವವನು, ಅಂಗಹೀನತ್ವ, ವ್ರಣ, ಹಿಂಸಕ ಸ್ವಭಾವ,  ಚಿತ್ರ ವಿಚಿತ್ರ ವಾದ ಆಲೋಚನೆಗಳು, ಸ್ವಾರ್ಥ ಹಿಂಜರಿಕೆಯ ಸ್ವಭಾವ, ಭಿಕ್ಷುಗಳು, ಭಿಕ್ಷಾಟನೆ, ಇಂದ್ರಜಾಲ, ಮಾಟ , ಅಭಿಚಾರ ಮುಂತಾದ ರಹಸ್ಯ ವಿದ್ಯೆ, ವಸ್ತ್ರ  ತಯಾರಿಕೆ ಮತ್ತು  ಅದಕ್ಕೆ  ಸಂಬಂಧಿಸಿದ ಪರಿಕರಗಳು, ಆಟಿಕೆ, ಬೊಂಬೆಗಳ ತಯಾರಿಕೆ, ವೈರಾಗ್ಯ  ಇವು  ಕೇತುವಿನ ಕಾರಕತ್ವಗಳು.
        ಆಶ್ವಿನಿ, ಮಖಾ, ಮೂಲ ನಕ್ಷತ್ರಕ್ಕೆ ಅಧಿಪತಿ, ಕೇತುವಿಗೆ  ಯಾವುದೇ  ಸ್ವಂತ  ಮನೆಗಳಿಲ್ಲ,  ಆದರೂ,  ಮೀನರಾಶಿ  ಸ್ವಕ್ಷೇತ್ರ,  ಕುಂಬ  ರಾಶಿ ಮೂಲತ್ರಿಕೋನ, ವೃಷಭದಲ್ಲಿ ನೀಚ,ವೃಶ್ಚಿಕದಲ್ಲಿ ಉಚ್ಚಸ್ಥಾನ ವೆನ್ನುತ್ತಾರೆ, ( ಇದರಲ್ಲೂ  ಸ್ವಲ್ಪ  ಗೊಂದಲವಿದೆ ).
        ಗೋಚಾರದಲ್ಲಿ 3,  6,  11 ನೆ ಸ್ಥಾನದಲ್ಲಿ  ಶುಭನು, ಇನ್ನುಳಿದ ಸ್ಥಾನಗಳಲ್ಲಿ  ಅಶುಭನು,  ಲಗ್ನ ಮತ್ತು  ಎಲ್ಲ  ಗ್ರಹಗಳು ರಾಹು  ಕೇತುಗಳ  ನಡುವೆ  ಇದ್ದರೆ ಕಾಳಸರ್ಪ ಯೋಗ/ ದೋಷ ಎನ್ನುತ್ತಾರೆ.  ಕೇತುವಿನ  ದಶಾವರ್ಷ  7 ವರ್ಷಗಳು.
        ವಿಶಾಲವಾದ ಪ್ರದೇಶ,  ಸ್ಮಶಾನ,  ಹಾವಿರುವ  ಹುತ್ತಗಳು, ಬಿಲ,  ಕತ್ತಲೆ ಇರುವ  ಪ್ರದೇಶ,  ಮಾಟ  ಮಾಯ,ಇಂದ್ರಜಾಲ,  ಅಭಿಚಾರ ನಡೆಯುವ  ಪ್ರದೇಶ,  ಈಶಾನ್ಯ ದಿಕ್ಕು ಕೇತುವಿನ  ಸಂಚಾರ  ಸ್ಥಳಗಳಾಗಿವೆ.  ನೈಋತ್ಯ ದಿಕ್ಕಿನಲ್ಲಿ ಒಟ್ಟಾಗಿ  ರಾಹು ಕೇತುಗಳ  ಸಂಚಾರವೆಂಬ  ಅಭಿಪ್ರಾಯವೂ  ಇದೆ.
        ಕೇತುವಿನಿಂದ,  ಅಜ್ಜ ಅಜ್ಜಿ ಚಿಕ್ಕಮ್ಮ, ದೊಡ್ಡಮ್ಮ, ಸಾಕುಪ್ರಾಣಿಗಳು,  ಹುಚ್ಚು ಭ್ರಮೆ, ಹುಚ್ಚುಹಿಡಿದಂತೆ  ತಲೆ  ಕೆಡಿಸಿಕೊಳ್ಳುವುದು, ಡಕಾಯತಿ, ಮೊಸಮಾಡುವುದು,  ಮಾಟ ಮಂತ್ರ, ಮೋಡಿ,  ಸಿದ್ದಿ,  ಘೋರಪೂಜೆ,ಅನ್ಯಸಂಸ್ಕೃತಿ,  ಮತ್ತು  ಅನ್ಯ ಸಂಸ್ಕಾರದವರೊಡನೆ ಪ್ರೀತಿ ಪ್ರೇಮ,   ಇವುಗಗಳನ್ನು  ತಿಳಿಯಬಹುದು.   ಕೇತುವೂ  ಸಹ ರಾಹುವಿನಂತೆ  ಶನಿ , ಶುಕ್ರ ರೊಂದಿಗೆ  ಮಿತ್ರತ್ವ,  ರವಿ  ಚಂದ್ರ,  ಕುಜ,  ಗುರು ಇವರುಗಳೊಡನೆ ಶತ್ರುತ್ವ  ಹೊಂದಿದ್ದಾನೆ.  ಕೇತುವೂ ಜಾತಕದಲ್ಲಿ  ಯಾವ ಸ್ಥಾನದಲ್ಲಿರುವನೋ ಆ  ಸ್ಥಾನದ  ಫಲಗಳು  ಸ್ವಲ್ಪ  ಚಿಂತೆಗೀಡಾಗಿ  ನಂತರ  ಶುಭವಾಗುತ್ತದೆ,
ಕೇತು ಹೀನ ಸ್ಥಾನ ದಲ್ಲಿದ್ದರೆ  ನೋವು ,ಜ್ವರ,  ಗಾಯ, ಹೊಟ್ಟೆ ಕಣ್ಣುಗಳಿಗೆ ತೊಂದರೆ. ಇಂತಹ  ಕೇತುವಿನಿಂದ  ಶುಭ ಫಲ ಪಡೆಯಲು  ಗಣೇಶನ  ಪ್ರಾರ್ಥನೆಯಿಂದ  ಮಾತ್ರ ಸಾಧ್ಯ,  ಕೇತುವೂ ಗಣೇಶನಿಗೆ  ಗರಿಕೆ  ಮೋದಕ   ನೀಡಿ ಯಾರು ಪೂಜಿಸುತ್ತಾರೋ  ಅವರಿಗೆ  ಶುಭಫಲ  ನೀಡುತ್ತಾನೆ.
            ---:  ಪುರಾಣದಲ್ಲಿ   ಕೇತು  :---

Picture source: Internet/ social media
       ಉಗ್ರವಾದ  ಕೆಂಪು ಕಣ್ಣುಗಳು,  ವಿಷಕಾರುವ  ಮಾತು,  ಧೀರ್ಘಶರೀರ,  ಶಾಸ್ತ್ರಧಾರಿ ಕೈಗಳು,  ಆಚಾರಹೀನ,  ಕಂದು ಬಣ್ಣ,   ಧೂಮಸೇವನೆ,  ಕಜ್ಜಿ ಬೇನೆಗಳುಳ್ಳ  ಶರೀರ, ಕ್ರೂರ  ಸ್ವಭಾವ,  ನಾಲ್ಕು ಕೈಗಳು,  ಗಧಾ,  ವರದಾ,  ಆಯುಧಗಳು,  ಚಿತ್ರ ಗೃದ್ರ ವಾಹನ,  ಚಿತ್ರರಥ,  ತಮೋಗುಣ  ಪ್ರಧಾನ  ಉಗ್ರವಾದ  ರೂಪ,  ಇವು  ಕೇತುವಿನ  ಬಗ್ಗೆ  ಶಾಸ್ತ್ರ  ಕೊಡುವ  ಮಾಹಿತಿ.
        ಈತ  ಛಾಯಾಗ್ರಹ,  ಮಲಿನ ರೂಪದವ ,  ಶಾಸ್ತ್ರಗಳಿಗೆ  ಅಧಿನಾಯಕ,  ಗುಪ್ತ ಷಡ್ಯಂತ್ರಗಳು,  ಕ್ರೂರತ್ವ,  ಗುಪ್ತಶಕ್ತಿ,  ಬಲ,  ಕಠಿಣ ಭಯ,  ಕೊರತೆಯ  ಕಾರಣನಾಗಿದ್ದಾನೆ.  "  ಕುಜವತ್  ಕೇತುಹು "   ಕುಜನ  ಗುಣದಂತೆ  ಕೇತುವಿನ  ಗುಣಗಳೂ ಒಂದೇ ತೆರನಾಗಿರುತ್ತದೆ.
ಕೇತು  ಮೋಕ್ಷದಾಯಕನೂ  ಆಗುತ್ತಾನೆ.
         ರಾಹು  ಕೇತುಗಳು  ಇಬ್ಬರೂ  ಸೇರಿ ಮೊದ್ಲು ಒಬ್ಬ  ದೈತ್ಯನಾಗಿದ್ದನು,  ಅವನ  ಹೆಸರೇ  ಸ್ವರ್ಬಾನು.  ಇವನು  ಸಿಂಹಿಕಾ ಮತ್ತು  ವಿಪ್ರಚಿತ್ತನ ಮಗನಾಗಿ ಮಹಾಪರಾಕ್ರಮಶಾಲಿಯಾದ ದೈತ್ಯರ  ನಾಯಕನಾಗಿ  ಶುಕ್ರಾಚಾರ್ಯರ  ಶಿಷ್ಯನಾಗಿದ್ದ.
         
Picture source: Internet/ social media
          ಅಮೃತದ  ಶೋಧನೆಗಾಗಿ  ದೇವ ದಾನವರು  ಕ್ಷೀರ ಸಾಗರವನ್ನು  ಮಂಥನ  ಮಾಡುವಾಗ ಉದ್ಭವಿಸಿದ  ಅಮೃತವನ್ನು  ಮೋಹಿನೀ ರೂಪದ  ಮಹಾವಿಷ್ಣುವು  ದೇವ ದಾನವರಿಗೆ  ಹಂಚುವ  ಸಂದರ್ಭದಲ್ಲಿ,  
Picture source: Internet/ social media

 ದೇವತೆಗಳಿಗೆ  ಹಂಚುತ್ತಿರುವಾಗ,  ರಾಕ್ಷಸ  ಸ್ವರ್ಭಾನುವು  ಮಾಯಾರೂಪ ತಾಳಿ  ದೇವತೆಗಳೊಡನೆ   ಕುಳಿತು  ಅಮೃತಪಾನ  ಮಾಡುವಾಗ  ಸೂರ್ಯ  ಚಂದ್ರರು  ಇದನ್ನು ನೋಡಿ  ಮೋಹಿನಿಗೆ  ತಿಳಿಸಿದಾಗ  ಮೋಹಿನಿಯು  ಚಕ್ರದಿಂದ  ಅವನ  ಶಿರಶ್ಚೇದನ  ಮಾಡಿದಳು, 


  
 Picture source: Internet/ social media

ಆಗ  ಅಮೃತವು  ಗಂಟಲಲ್ಲಿ  ಇಳಿಯುತ್ತಿತ್ತು.  ರುಂಡ  ಮುಂಡಗಳಿಗೆ ಅಮೃತ .ಸ್ಪರ್ಶವಾದ  ಕಾರಣ  ಶಿರಶ್ಚೇದನ ವಾದರೂ  ಮರಣವಿಲ್ಲದಂತಾಯಿತು,  ಮುಂದೆ  ರುಂಡದ  ಭಾಗಕ್ಕೆ   ರಾಹುವೆಂತಲೂ,  ಮುಂಡ ದ  ಭಾಗಕ್ಕೆ  ಕೇತುವೆಂತಲೂ  ನಾಮಕರಣವಾಯ್ತು.  ಇದನ್ನು  ನೋಡಿದ ಸ್ವರ್ಭಾನುವಿನ  ಮಗ ಗುಡುಗಿದ,  ಸೂರ್ಯ  ಚಂದ್ರರ  ಪಿತೂರಿಯಿಂದ  ತನ್ನ  ತಂದೆಗೆ  ಇಂತಹ  ಗತಿಯಾಯಿತೆಂದು ಸಿಟ್ಟಿಗೆದ್ದ  ದೇವತೆಗಳು  ಕುಡಿದ ಅಮೃತ  ಒಬ್ಬ  ದೈತ್ಯ  ಕುಡಿದ್ದಿದ್ದರಿಂದ  ತಪ್ಪೆನಾಯಿತು, ದೇವತೆಗಳಿಂದ  ಇದು  ಅಸುರರಿಗೆ  ಆದ  ಮೋಸ,  ದೇವತೆಗಳಿಗೆ  ತಕ್ಕ ಪಾಠ  ಕಲಿಸೇ ತೀರಬೇಕು ಎಂದು ಗೌತಮೀ ನದೀ ತೀರದಲ್ಲಿ  ತಪಸ್ಸಿಗೆ  ಕುಳಿತ.  ದೇವಲೋಕ  ಮುಟ್ಟಿದ ಆತನ  ಘೋರ  ತಪಸ್ಸಿಗೆ  ಹೆದರಿ,  ದೇವತೆಗಳೂ,  ಮುನಿಗಳೂ  ಮೇಘಹಾಸನ  ಬಳಿಗೆ  ಬಂದು ತಪಸ್ಸನ್ನು  ನಿಲ್ಲಿಸಿ  ನಿನಗೇನು ಬೇಕೆಂದು  ತಿಳಿಸು ಎಂದರು.   ನನ್ನ  ತಂದೆಯ  ಇಂತಹ  ದುರವಸ್ಥೆಗೆ  ಕಾರಣರಾದ  ನೀವು  ನನಗೆ  ಮತ್ತು  ನನ್ನ ತಂದೆಗೆ  ಸಂತೋಷವಾಗುವ  ಹಾಗೆ  ಮಾಡಿರಿ  ಎಂದನು.  ಆಗ  ದೇವತೆಗಳು  ಬುದ್ದಿ  ಉಪಯೋಗಿಸಿ,  ಸ್ವರ್ಭಾನುವು  ಅಮೃತ  ಸ್ಪರ್ಶದಿಂದ  ಅಮರನಾಗಿದ್ದಾನೆ,  ಅವನು  ದೈತ್ಯರ  ಪರ  ಸೇರಿ .ಅವರ  ನಾಯಕನಾದರೆ  ತಮಗೆ  ಉಳಿಗಾಲವಿಲ್ಲವೆಂದರಿತು ,  ಇವನನ್ನು  ನಮ್ಮಲ್ಲೇ  ಸೇರಿಸಿಕೊಂಡು  ಗ್ರಹಗಳ  ಸ್ಥಾನಮಾನ ನೀಡಿದರೆ  ಒಳ್ಳೆಯದು  ಎಂದರಿತು,  ಬ್ರಹ್ಮನು  ರುಂಡದ  ಭಾಗಕ್ಕೆ  ಸರ್ಪದ  ದೇಹವನ್ನು ಸೃಷ್ಟಿಸಿ  ಸೇರಿಸಿದನು,  ಮುಂಡದ  ಭಾಗಕ್ಕೆ  ಸರ್ಪದ  ತಲೆಯನ್ನು  ಸೃಷ್ಟಿಸಿ  ಸೇರಿಸಿ  ಅವರಿಗೆ  ಭೌತಿಕ  ಶರೀರವನ್ನು  ನೀಡಿ,  ರುಂಡ  ಭಾಗಕ್ಕೆ  ರಾಹುವೆಂತಲೂ  ಮುಂಡದ   ಭಾಗಕ್ಕೆ  ಕೇತುವೆಂತಲೂ ಹೆಸರಿಸಿ,  ದೇವತೆಗಳ  ಸ್ಥಾನಮಾನ ನೀಡಿ,  ನವಗ್ರಹಗಳಲ್ಲಿ  ಗ್ರಹಗಳ  ಸ್ಥಾನಮಾನ ,  ಅಧಿಕಾರ  ನೀಡಿದರು.  ಸ್ವರ್ಭಾನುವಿನ  ಮಗನಾದ  ಮೇಘಹಾಸನನ್ನು  ದೈತ್ಯರ  ರಾಜನನ್ನಾಗಿ  ಮಾಡಿದರು.
Picture source: Internet/ social media

        ಹೀಗೆ  ದೈತ್ಯರಾದ  ರಾಹು ಕೇತುಗಳು ಗ್ರಹಗಳಲ್ಲಿ  ಸ್ಥಾನಮಾನ  ಪಡೆದರೂ,  ಸೂರ್ಯ ಚಂದ್ರರ  ಕಾರಣದಿಂದ  ಶಿರಷ್ಛೇದನ ವಾಯಿತಾದ್ದರಿಂದ ಅವರಿಗೆ  ವೈರಿ,  ಹಾಗಾಗಿ  ಸೂರ್ಯ  ಚಂದ್ರರನ್ನು  ಗ್ರಹಣಕಾಲದಲ್ಲಿ. ಹಲವು ಗಂಟೆಗಳ  ಕಾಲ  ಪೀಡಿಸುತ್ತಾರೆ.
        ಪುರಾಣದ  ಪ್ರಕಾರ  ಕೇತುಗಳು ನೂರು ಜನ.  ಬ್ರಹ್ಮನ  ಮಕ್ಕಳು,  ಎರಡು ಕೈ ,  ವಿಚಿತ್ರಾಯುಧ ಧಾರಿಗಳು,  ಗೃದ್ರಾಸನಸ್ಥಿತರು.
        ಆದರೆ  ರಾಹುವಿನ  ಮುಂಡವೇ  ಕೇತುವಾದರೆ  ನೂರುಜನ  ಕೇತುಗಳೆನ್ನುವುದು  ಹೇಗೆ,  " ಯೇ ಬ್ರಹ್ಮ ಪುತ್ರಾಃ ಬ್ರಹ್ಮ ಸಮಾನ ವಕ್ರಾಃ  " ಎಂಬುದಾಗಿ ಕೇತುಗಳನ್ನು  ಬ್ರಹ್ಮಪುತ್ರರು, ಬ್ರಹ್ಮನಂತಹ  ಮುಖದವರು ಎಂದು  ಸ್ತುತಿಸುವುದು  ಹೇಗೆ ಸಾಧ್ಯ,  ನವಗ್ರಹ  ಪ್ರತಿಮೆಗಳ  ಬಗ್ಗೆ  ಹೇಳುತ್ತಾ  " ಸರ್ವೆಕಿರೀಟಿನಹ ಕಾರ್ಯಾಹ"   ಎಲ್ಲಾಗ್ರಹಗಳಿಗೂ  ಕಿರೀಟವಿರುವಂತೆ ಪ್ರತಿಮೆಯನ್ನು  ಮಾಡಬೇಕೆಂದು  ಹೇಳುತ್ತದೆ, ತಲೆಯಿಲ್ಲದೆ  ಕಿರೀಟವಿಡುವುದು  ಹೇಗೆ?  ,  ಹೀಗೆ  ನೂರೆಂಟು  ಪ್ರಶ್ನೆಗಳು  ಉದ್ಭವಿಸುತ್ತವೆ.


Picture source: Internet/ social media

        "  ರಾಹು ಜ್ಯೇಷ್ಠ0 ಕೇತುಕ0 "   ಎಂಬ  ವಚನಾನುಸಾರ  ರಾಹುವಿನ  ಶಿರದಲ್ಲೇ  ಸನ್ನಿಹಿತರಾದ  ಕೇತುಗಳೆಂಬ  ನೂರು  ದೇವತೆಗಳು,  ಕೇತುಗ್ರಹಕ್ಕೆ  ಅರ್ಪಿಸಿದ  ಪೂಜೆ,  ಆಹುತಿಗಳನ್ನು ಸ್ವೀಕರಿಸುತ್ತಾರೆ,  ಈ  ದೇವತೆಗಳು  ಬ್ರಹ್ಮಪುತ್ರರು,  ಬ್ರಹ್ಮಸಮಾನರರು,  ಬ್ರಹ್ಮಜ್ಞಾನಿಗಳು,    ಇವರೇ  ಕೇತುಗಳು.  ರಾಹುವಿನ  (ಸ್ವರ್ಭಾನು )  ದೇಹವೇ  ಕೇತುಗ್ರಹ ಎನ್ನುವುದಕ್ಕೆ  ಪ್ರಮಾಣವಿಲ್ಲ.  ರಾಹು  ಪುಚ್ಛವೆನಿಸಿದ  ಅದೂ  ಒಂದು  ಕೇತುವೆ, ಸಾವಿರಾರು  ಧೂಮಕೇತುಗಳಲ್ಲಿ  ಅದೂ  ಒಂದು  ಕೇತುವೆ,  ಆದರೆ  ಗ್ರಹವಲ್ಲ, ಈ  ರಾಹು ಕೇತುಗಳ  ಜೊತೆ  ಸೂರ್ಯ ಚಂದ್ರರನ್ನು  ದ್ವೇಷಿಸುವ  ರಾಹು / ಕೇತುಗಳೆಂಬ  ರಾಕ್ಷಸರೂ   ಹರಿಯ  ಅನುಗ್ರಹದಿಂದ  ಇದ್ದಾರೆ,  ಈ  ತತ್ವವನ್ನು  ತಿಳಿಯದೆ   ಪೂಜಿಸಿದಲ್ಲಿ ಆ  ಪೂಜಾಫಲ  ರಾಕ್ಷಸರ  ಪಾಲಾಗುತ್ತದೆ,  ಹಾಗಾಗಿ  ತಿಳಿದು  ಪೂಜಿಸಬೇಕು,  ಆಗ  ಕೇತುವಿನ  ಆರಾಧನೆಯ  ಫಲ  ಸಿಗುತ್ತದೆ.
        ರಾಹು ಕೇತುಗಳನ್ನು  ಕಪ್ಪು ಬಣ್ಣದ  ನೆರಳು,  ಕತ್ತಲೆ  ಎಂಬ  ಭಾವದಿಂದಲೇ  ಛಾಯಾಗ್ರಹ,  ತಮಃ ಎಂದು  ಕರೆಯಲಾಗುತ್ತದೆ.
        ಕೇತುವು  ಹೀನ  ಸ್ಥಾನದಲ್ಲಿದ್ದರ ೆ.   ಜ್ವರ ನೋವು ಗಾಯ  ,  ಎಲ್ಲಾ ಗ್ರಂಥಿಗಳ  ದೋಷಗಳು( ಕ್ಯಾನ್ಸರ್ ) , ಜೀವಾಣುಗಳಿಂದ  ಬರುವ  ವ್ಯಾಧಿಗಳು ,  ಮಾಂಸ ಕಣಗಳಿಂದ  ಬರುವ  ವ್ಯಾಧಿಗಳು  ಕಾಡಬಹುದು.
        ಗಣೇಶ  ದೇವರ  ಪ್ರಾರ್ಥನೆಯಿಂದ  ಕೇತುವಿನ  ಶುಭಫಲವನ್ನು  ಪಡೆಯಬಹುದು.
ಕಾರಣ........

Picture source: Internet/ social media

        ಗಣೇಶನ  ಜನ್ಮವೃತ್ತಾಂತ   ಕಥೆಯಲ್ಲಿ, ,,,,,,, ಪಾರ್ವತಿಯ  ಮೈಯ  ಬೆವರಿನಿಂದ  ಜನಿಸಿದ    ಗಣೇಶನು  ಶಿವನನ್ನು  ಕೈಲಾಸದ ದ್ವಾರದಲ್ಲೇ  ತಡೆದ,  ಅತೀವ  ಕೋಪೋದ್ರಿಕ್ತನಾದ  ಶಿವನಿಂದ  ಗಣೇಶನಶಿರಷ್ಛೇದನವಾಯ್ತು,  ನಂತರ  ಪಾರ್ವತಿಯ  ಅತೀವ  ದುಃಖವನ್ನು ನೋಡಲಾರದೆ ಆನೆಯ  ಮುಖವಿರಿಸಿ ಗಜಮುಖನನ್ನಾಗಿ  ಮಾಡಿದ  ಶಿವ.
          ಕೇತುವಿನ ಕಥೆಯಲ್ಲ್ಲೂ ............  ರಾಹುವಿನ  ಮುಂದಕ್ಕೆ  ಸರ್ಪದ  ತಲೆಯನ್ನಿರಿಸಿ  ಕೇತುವನ್ನಾಗಿಸಲಾಗಿದೆ.
     ಹಾಗಾಗಿ ಕೇತುವಿಗೆ  ಗಣೇಶ  ಅಭಿಮಾನಿ ದೇವತೆ.

  ಕೇತುಗ್ರಹವನ್ನು  ಸ್ತುತಿಸುವ  ಸ್ತೋತ್ರ  ಹೀಗಿದೆ,
" ಯೇ ಬ್ರಹ್ಮಪುತ್ರಾಃ ಬ್ರಹ್ಮಮಾನಸ ವಕ್ರಾಃ ಬ್ರಹ್ಮೋದೃವಾಃ
ಬ್ರಹ್ಮವಿದಃ ಕುಮಾರಾಃ ಬ್ರಹ್ಮೋತ್ತಮಾ ವರದಾ ಜಾಮದಜ್ನ್ಯಾಃ
ಕೇತೂನ್ ಸದಾ ಶರಣ ಮಹಂ ಪ್ರಪದ್ಯೇ"

"ಪಾಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕ0
ರೌದ್ರ0 ರೌದ್ರಾತ್ಮಕ0 ಘೋರಂ ತಂ ಕೇತುಂ ಪ್ರನಾಮಾಂಯಹಂ"

ಕೇತು ಪೀಡಾ ಪರಿಹಾರ  ಸ್ತೋತ್ರ :--

"ಅನೇಕ ರೂಪ ವರ್ನೈಶ್ಚ ಶತಶೋಥ ಸಹಸ್ತ್ರಶಃ
ಉತ್ಪಾತ ರೂಪೋ ಜಗತಾಂ ಪೀಡಾಂ ಹರತು ಮೇ ತಮಃ"

ಕೇತು ಗಾಯತ್ರೀ ಮಂತ್ರ :--

" ಚಿತ್ರಾಂಗದಾಯ  ವಿದ್ಮಹೇ
ಧೂಮ್ರವರ್ಣಾಯ  ಧೀಮಹಿ
ತನ್ನೋ  ಕೇತು ಪ್ರಚೋದಯಾತ್ "

ಕೇತು  ಬೀಜಾಕ್ಷರಿ ಮಂತ್ರ. :--

ಓಂ ಪ್ರಾ0 ಪ್ರೀ0 ಪ್ರೌ0 ಸಃ ಶ್ರೀ  ಕೇತವೇ ನಮಃ

ಕೇತುಗ್ರಹದ  ಪ್ರೀತ್ಯರ್ಥವಾಗಿ  ಶ್ರೀ  ಗಣಪತಿ ಮಂತ್ರ:--

ಓಂ ಗಂ ಗಣಪತಯೇ ನಮಃ

ಕೇತು ಯಂತ್ರ  :--


14
9
16
15
13
11
10
17
12


ಈ  ಯಂತ್ರವನ್ನು  ಅಷ್ಟಧಾತು ಲೋಹದಲ್ಲಿ ,  ಉಂಗುರ ಅಥವಾ  ತಾಯತದ ರೂಪದಲ್ಲಿ  ಬರೆದು,  ಕೇತುಮಂತ್ರವನು  108  ಬಾರಿ ಪಠಿಸಿ ಮಂಗಳವಾರದಂದು  ಧರಿಸಬೇಕು.

ವೈಜ್ಞಾನಿಕವಾಗಿ  ರಾಹು  --  ಕೇತು  :--


    Picture source: Internet/ social media

 ವೈಜ್ಞಾನಿಕವಾಗಿ  ವಿಶ್ಲೇಷಿಸಿದಾಗ  ವಾಸ್ತವವಾಗಿ  ನಭೋಮಂಡಲದಲ್ಲಿ  ಸೂರ್ಯನ  ಸುತ್ತ  ಭೂಮಿ  ಸುತ್ತುತ್ತಿದೆ,  ಭೂಮಿಯ  ಸುತ್ತ  ಚಂದ್ರ  ಸುತ್ತುತ್ತಿದೆ,  ಈ  ಅಂಡಾಕಾರದ  ಪರಿಕ್ರಮದ  ಮಾರ್ಗವನ್ನು  ಮಧ್ಯದಿಂದ  ವಿಭಜಿಸುವ  ಒಂದು  ಸರಳ  ರೇಖೆಯುಂಟು,  ಆ ಸರಳ  ರೇಖೆಯ  ತುದಿಗಳೇ  ರಾಹು - ಕೇತು  ಎಂಬ  ಎರಡು  ಬಿಂದುಗಳು.   ಸೂರ್ಯ ಚಂದ್ರರ  ಚಲನೆಯ  ಮಾರ್ಗದಲ್ಲಿ  ಉಂಟಾಗುವ  ಎರಡು  ಛೇದಕ  ಬಿಂದುಗಳು,  ಹಾಗಾಗಿ  ರಾಹು  ಹಾಗೂ  ಕೇತುವನ್ನು ಕ್ರಮವಾಗಿ ಉತ್ತರ  ಹಾಗೂ  ದಕ್ಷಿಣ  ಚಾಂದ್ರ  ಸಂಪಾತ ಗಳೆಂದು  ಕರೆಯಲಾಗುತ್ತದೆ.   ಸೂರ್ಯ  ಮತ್ತು  ಚಂದ್ರರು  ಈ  ಎರಡರಲ್ಲಿ  ಒಂದು  ಬಿಂದುವಿನಲ್ಲಿದ್ದಾಗ  ಗ್ರಹಣಗಳು  ಉಂಟಾಗುತ್ತದೆ.
ರಾಶಿಚಕ್ರದಲ್ಲಿ  ರಾಹು  ಕೇತುಗಳು  ಎರಡು  ಬಿಂದುಗಳು,  ಪರಸ್ಪರ  ವಿರುದ್ಧ  ದಿಕ್ಕಿನಲ್ಲಿರುವ  ಎರಡು  ಕಪ್ಪು  ಬಿಂದುಗಳು,  ರಾಹು ಕೇತುಗಳ  ಮದ್ಯೆ  ಸರಿಯಾಗಿ  ಆರು ರಾಶಿಯ  ಅಂತರವಿರುತ್ತದೆ.
*************************

✍ ಡಾ:  B N  ಶೈಲಜಾ  ರಮೇಶ್.

2 comments:

  1. Excellent explanation.No one can get all informations about this planet in a single chapter like this. It covers details pertaining to astronomy, astrology & mythological explanation of this planet,in this single article. Thank You for giving this useful information.

    ReplyDelete
  2. Excellent explanation.No one can get all informations about this planet in a single chapter like this. It covers details pertaining to astronomy, astrology & mythological explanation of this planet,in this single article. Thank You for giving this useful information.

    ReplyDelete