ಹರಿಃ ಓಂ
ಶ್ರೀ ಗಣೇಶಾನಮಃ
ಶ್ರೀ ಗುರುಭ್ಯೋನಮಃ
ಶ್ರೀ ಗಣೇಶಾನಮಃ
ಶ್ರೀ ಗುರುಭ್ಯೋನಮಃ
ಜಾತಕನ ಕುಂಡಲಿಯಲ್ಲಿ ಗ್ರಹಗಳು ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಮತ್ತು ಇವುಗಳ ಪರಿಹಾರಗಳು ( ಲಾಲ್ ಕಿತಾಬ್ ಪರಿಹಾರಗಳು)
ಗ್ರಹಗಳು
೧) ನೀಚತ್ವದಲ್ಲಿ
೨) ಶತೃಕ್ಷೇತ್ರಗಳಲ್ಲಿ
೩) ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ
೪) ಅಸ್ತಂಗತರಾಗಿದ್ದರೆ
5) ೬, ೮೧೨ನೇ ಸ್ಥಾನಗಳಲ್ಲಿದ್ದರೆ.
೬) ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ.
೭) ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ.
ಚಂದ್ರ:---
Image source: Internet
ಚಂದ್ರ ನಿಂದ ಉಂಟಾಗುವ ತೊಂದರೆಗಳು :--
ಜನನ ಕುಂಡಲಿಯಲ್ಲಿ ಚಂದ್ರನು ರಾಹು ಮತ್ತು ಶನಿಗಳ ಸಂಪರ್ಕದಲ್ಲಿ ಮತ್ತು ಕ್ಷೀಣನಾಗಿದ್ದರೆ,
ಬಾವನಾತ್ಮಕತೆಯಲ್ಲಿ ಅಸಮತೋಲನ,
ಇತರರಬಗ್ಗೆ ಆತ್ಮೀಯತೆಯಿಂದಿರಲು ಹೆದರಿಕೆ, ಜೀವನದಲ್ಲಿ ತುಮುಲಗಳನ್ನು ಸಹಿಸಲಾರರು
ಸಂತೃಪ್ತಿ ಇರುವುದಿಲ್ಲ ರಹಸ್ಯಗಳನ್ನು ಕಾಪಾಡಲಾರರು, ಋಣಾತ್ಮಕತೆ, ಮಂಕು ಮುಚ್ಚಿದ ಮನಸ್ಸು, ತಾಯಿಯು ಸಹ ಜೀವನದಲ್ಲಿ ಹಲವಾರು ರೀತಿಯಲ್ಲಿ ಕಷ್ಟಗಳನ್ನುಅನುಭವಿಸಿರುವರು,
ಅಶಕ್ತತೆ, ದೇಹದಲ್ಲಿ ದ್ರವಗಳ ಕೊರತೆ, ತೂಕನಷ್ಟ,ಒಣಗಿದ ಚರ್ಮ,ಮಲಬದ್ದತೆ, ನರಗಳ ಊತ,ಮೂತ್ರಕೋಶದ ತೊಂದರೆ, ಶ್ವಾಸಕೋಶಗಳ ನಿರ್ಬಲತೆ, ತಾಪವನ್ನು ತಾಳಲಾರರು, ಔಷದಿಗಳು ಉಪಯೋಗವಾಗುವುದಿಲ್ಲ, ಹೃದಯ ಅಥವ ಸ್ತನಗಳಲ್ಲಿ ತೊಂದರೆ, ಮದ್ಯವ್ಯಸನಿಗಳಾಗುವರು, ಸೊಸೆಯೊಂದಿಗೆ ವಿನಾಕಾರಣ ಕಲಹಗಳು, ಮಗಳು ಅತ್ತೆಮನೆಯಲ್ಲಿ ಅಸುಖಿ, ಮಕ್ಕಳವಿದ್ಯಾಬ್ಯಾಸದಲ್ಲಿ ತೊಂದರೆಗಳು, ಹಾಲುಕೊಡುವ ಹಸುಗಳು ಸಾಯುತ್ತವೆ, ಕೊಳವೆಬಾವಿ ಒಣಗುತ್ತದೆ, ಸಂಸಾರದಲ್ಲಿ ಒಡಕು ಹೆಚ್ಚಾಗುತ್ತದೆ, ಪರಸ್ತ್ರೀಯರ ಮೇಲೆ ಹಣವನ್ನು ವ್ಯೆಚ್ಚಮಾಡುವಿರಿ, ಅನಿರೀಕ್ಷಿತ ಅನಾರೋಗ್ಯ, ಹಣಕಾಸು ತೊಂದರೆ ಒಳ್ಳೆಕೆಲಸ ಮಾಡಿದರು ಕೆಟ್ಟಹೆಸರು ತಪ್ಪುವುದಿಲ್ಲ, ಆಗಿ ಹೋದದ್ದನ್ನು ಚಿಂತಿಸಿ ಅತಿಯಾಗಿ ಮರುಗುವಿಕೆ, ಸ್ತ್ರೀಯರಲ್ಲಿ ಬಂಜೆತನ ಮತ್ತು ಋತುಚಕ್ರದ ತೊಂದರೆಗಳು.

ಚಂದ್ರನು ದ್ವಾದಶ ಭಾವಗಳಲ್ಲಿ ಸ್ಥಿತ ಫಲಗಳು :--
ಪ್ರಥಮ ಭಾವ :--
ಪ್ರಥಮ ಭಾವದಲ್ಲಿ ಸ್ಥಿತನಾದ ಚಂದ್ರನು ಶುಭನಾಗಿದ್ದರೆ, ಜಾತಕನು ಆಕರ್ಷಕ ವ್ಯಕ್ತಿತ್ವ ದವರು, ಅತ್ಯಂತ ರೂಪವಂತರು, ಗೌರವವರ್ಣ, ದುಂಡನೆಯ ಮುಖ, ಉತ್ತಮ ವಿಚಾರದವರು, ಶ್ರೀಮಂತ ರು , ದೊಡ್ಡ ಕುಟುಂಬದವರು, ಬುದ್ಧಿವಂತರು, ಸಾಂಸಾರಿಕ ಜೀವನದ ಲ್ಲಿ ಸುಖಿ, ದಯಾಳು, ಪರೋಪಕಾರಿ, ಸ್ತ್ರೀಯರ ಕುರಿತು ವಿಶೇಷ ಭಕ್ತಿ ಭಾವ ವಿರುವವರೂ, ತಾಯಿಯ ಕುರಿತು ವಿಶೇಷ ಗೌರವವಿರುವವರೂ ಆಗಿರುತ್ತಾರೆ.
ಅಶುಭ ನಾಗಿದ್ದರೆ, ಜಾತಕರು ದೈಹಿಕ ಹಾಗೂ ಮಾನಸಿಕ ಅನಾರೋಗ್ಯ ದಿಂದ ಭಾಧಿತರು, ಸದಾ ಒಂದಿಲ್ಲೊಂದು ಚಿಂತೆ ಭಾಧಿಸುತ್ತವೆ, ಉನ್ಮಾದತೆ, ಸ್ತ್ರೀಯರಿಂದ ಅಪಮಾನ - ತಿರಸ್ಕಾರ ಉಂಟಾಗುತ್ತದೆ
.
ದ್ವಿತೀಯ ಭಾವ :--
ಶುಭ ಚಂದ್ರ ನಾಗಿದ್ದರೆ, ಜಾತಕರು ವಿಶೇಷ ಆಕರ್ಷಕ ರು, ವಾಕ್ಚಾತುರ್ಯವುಳ್ಳವರೂ, ವಾಕ್ಚಾತುರ್ಯ ಬಲದಿಂದ ಎಲ್ಲರನ್ನೂ ಪ್ರಭಾವಿತ ಗೊಳಿಸುವವರೂ, ವ್ಯವಹಾರ ನಿಪುಣರೂ, ವಿನೋದ ಪ್ರವೃತ್ತಿ ಯವರು, ಅವಕಾಶ ಗಳ ಪೂರ್ಣ ಲಾಭ ಪಡೆಯುವವರು, ದೊಡ್ಡ ಕುಟುಂಬದವರು.
ಅಶುಭ ಚಂದ್ರನಾದರೆ, ಜಾತಕರು ವಿಪರೀತ ಮಾನಸಿಕ ವ್ಯಥೆಯಿಂದ ಬಳಲುವವರೂ, ವಿದ್ಯಾಧ್ಯಯನದಲ್ಲಿ ತೊಂದರೆಗಳು, ಪಿತ್ರಾರ್ಜಿತ ಸ್ವತ್ತಿನಿಂದ ವಂಚಿತರು, ಸಣ್ಣ - ಪುಟ್ಟ ಕೆಲಸಗಳಿಗೂ ವಿಪರೀತ ಶ್ರಮ ಪಡುವವರು, ಹಣ ಸಂಪಾದನೆ ಯಲ್ಲಿ ಅಸಮರ್ಥರು, ಬಹುಶಃ ಅಲ್ಪಾಯುಷ್ಯವಿರುವ ಸತಿ, ಅಥವಾ ರೋಗಪೀಡಿತ ಸತಿ, ಮಾದಕವಸ್ತು ವ್ಯಸನಿ, ಕಠೋರ ಮಾತುಗಳನ್ನಾಗುವವರು.
ತೃತೀಯ ಭಾವ :--
ಶುಭ ಚಂದ್ರನಾದರೆ, ಜಾತಕನು ಉತ್ತಮ ಆರೋಗ್ಯವಂತ, ಶ್ರೀಮಂತ, ಸಮಾಜದಲ್ಲಿ ಸನ್ಮಾನಿತ ಹಾಗೂ ಪ್ರತಿಷ್ಠಿತರು, ಸ್ಥಿರ ಮನಸ್ಕರೂ, ಪರಿಶ್ರಮ ಕ್ಕೆ ತಕ್ಕ ಫಲವನ್ನು ಹೊಂದುವವರೂ, ಬುದ್ಧಿವಂತರು, ವ್ಯಾಪಾರ ದಲ್ಲಿ ಕುಶಲರು, ಸಂಚಾರದಲ್ಲಿ ಅಭಿರುಚಿ.
ಅಶುಭ ನಾಗಿದ್ದರೆ, ಜಾತಕರು ಚಿಂತೆ ಯಿಂದಾವೃತ , ಮತಿಭ್ರಮಣೆ, ಯಾತ್ರೆಗಳಲ್ಲಿ ದುರ್ಘಟನೆ ಉಂಟಾಗುವ ಸಂಭವ, ತಂದೆಗೆ ಅಲ್ಪಾಯು, ಸೋದರರೊಂದಿಗೆ ವೈರತ್ವ ಹಾಗೂ ಅಪಮಾನ, ಅಲೆದಾಟ, ಅನೇಕ ಶತ್ರುಗಳು.
ಚತುರ್ಥ ಭಾವ :--
ಶುಭ ಚಂದ್ರನಾಗಿದ್ದರೆ, ಜಾತಕರು ಶ್ರೀಮ0ತರು, ಸಮಾಜದಲ್ಲಿ ಪ್ರತಿಷ್ಠಿತ ರು, ಗುಣವಂತರು, ಸರಳ ಸ್ವಭಾವದ ತಾಯಿ, ತಾಯಿ ತಂದೆಯ ಸೇವಕ, ಅನೇಕ ವಾಹನಗಳು, ಉನ್ನತ ವಿದ್ಯಾವಂತ, ಸುಖೀ ಹಾಗೂ ವೈಭವಯುತ ಜೀವನ, ಜಲ - ಪದಾರ್ಥ ಸಂಬಂಧಿ ವ್ಯಾಪಾರ, ಉತ್ಯಮ ದಾಂಪತ್ಯ.
ಅಶುಭನಾದರೆ, ಪಿತ್ರಾರ್ಜಿತ ಧನ ನಷ್ಟ, ಅಲ್ಪ ಸಂಪಾದನೆ, ದಾಂಪತ್ಯ ಜೀವನದಲ್ಲಿ ಸುಖವಿಲ್ಲ, ಮನೆ ಬದಲಾವಣೆ, ತಾಯಿಯೊಡನೆ ವಾದ - ವಿವಾದ, ವಾಹನ ದುರ್ಘಟನೆ, ಯಾತ್ರೆಗಳಲ್ಲಿ ಕಷ್ಟ, ದುಃಖ ,ಕಷ್ಟ, ದಾರಿದ್ರ್ಯ, ವ್ಯಾಧಿ ಇರುವವರಾಗುತ್ತಾರೆ.
ಪಂಚಮಭಾವ :--
ಶುಭ ಚಂದ್ರನಾಗಿದ್ದರೆ, ಜಾತಕರು ಭಾಗ್ಯವಂತರು, ನ್ಯಾಯಪ್ರಿಯ, ಅನ್ಯಾಯದ ವಿರುದ್ಧ ಹೋರಾಡುವವರು, ಕಲೆಗಳಲ್ಲಿ ಆಸಕ್ತಿ, ಸುಂದರ ಪತ್ನಿ, ಪತ್ನಿಯಿಂದ ಪೂರ್ಣ ಸಹಕಾರ, ಸ್ತ್ರೀ ಸಂತಾನ, ಆಕಸ್ಮಿಕ ಧನಲಾಭ, ಜ್ಯೋತಿಷ್ಯ ಹಾಗೂ ಗುಪ್ತ ವಿದ್ಯೆಯಲ್ಲಿ ಆಸಕ್ತಿ.

ಅಶುಭನಾದರೆ, ಮಾನಸಿಕವಾಗಿ ತೊಂದರೆ, ಸ್ತ್ರೀ ಸಂತಾನ, ಅಹಂಕಾರಿ, ಗರ್ವದ ಪತ್ನಿ, ಪ್ರೀತಿ - ಪ್ರಣಯದ ಕಾರಣಕ್ಕಾಗಿ ಸಾರ್ವಜನಿಕವಾಗಿ ಅವಮಾನ ಅನುಭವಿಸುವವರು.
ಷಷ್ಟ ಭಾವ :--
ಶುಭ ಚಂದ್ರನಾಗಿದ್ದರೆ, ಜಾತಕರು ಭಾಗ್ಯಶಾಲಿ, ಆದರೆ ಕೃಶ ಶರೀರ, ದನ ಸಂಪತ್ತು, ಯಶಸ್ವೀ ವ್ಯಕ್ತಿ, ಮಾತೃ ಸಂಬಂಧದಿಂದ ಲಾಭ, ಒಂದು ಸ್ಥಾನದಲ್ಲಿ ಸ್ಥಿರವಾಗಿ ನಿಲ್ಲದವರು.
ಚಂದ್ರ ಅಶುಭನಾದರೆ, ಜಾತಕನು ಅನಾರೋಗ್ಯದಿಂದ ಪೀಡಿತ, ಹೊಟ್ಟೆ ಹಾಗೂ ಮೂತ್ರ ರೋಗಗಳಿಂದ ಭಾಧಿತರು, ಮಾನಸಿಕ ಅಸಮತೋಲನ, ವಿವಾಹದ ಸಂದರ್ಭದಲ್ಲಿ ಅಶುಭ ಘಟನೆಗಳು , ಶತ್ರುಗಳಿಂದ ಭಾಧಿತರು, ಅಲ್ಪಾಯು.
ಸಪ್ತಮ ಭಾವ :--
ಶುಭ ಚಂದ್ರನಾಗಿದ್ದರೆ, ಜಾತಕರು ಸಮಾಜದಲ್ಲಿ ಸನ್ಮಾಮಿತರು, ಶೀಘ್ರ ವಿವಾಹ ಯೋಗ, ಸುಶೀಲ ಸುಂದರ ಪತ್ನಿ, ಸಾಹಿತ್ಯಾಸಕ್ತರು, ಜ್ಯೋತಿಶ್ಯ ಪ್ರವೀಣರು, ವಿಚಾರವಂತರೂ, ಯಾತ್ರೆಗಳನ್ನು ಮಾಡುವವರು, ವ್ಯಾಪಾರ ದಲ್ಲಿ ಪ್ರಗತಿ.
ಅಶುಭ ಚಂದ್ರನಾದರೆ, ಜಾತಕರು ಕೃಶ ಶರೀರಿ, ಬೇರೆಯವರ ಪ್ರಗತಿಯ ಬಗ್ಗೆ ಅಸೂಯೆ, ಮಾದಕ ವಸ್ತುಗಳ ವ್ಯಸನಿ, ಎರಡು ವಿವಾಹಗಳ ಸಾಧ್ಯತೆ, ಹೆಂಡತಿ ಮತ್ತು ತಾಯಿಯ ಮಧ್ಯೆ ಜಗಳ.
ಅಷ್ಟಮ ಭಾವ :--
ಶುಭ ಚಂದ್ರನಾಗಿದ್ದರೆ, ಜಾತಕರು ಸುಂದರ, ಆಕರ್ಷಕ, ಶ್ರೀಮಂತ, ಪಿತ್ರಾರ್ಜಿತ ಆಸ್ತಿ ಹೊಂದಿರುವವರು, ಸ್ತ್ರೀ ಧನವನ್ನು ಹೊಂದುವವರೂ, ಉದ್ಯೋಗಸ್ಥ ಪತ್ನಿ, ಉತ್ತಮ ದಾಂಪತ್ಯ, ವಿದೇಶ ಪ್ರಯಾಣ, ಉಚ್ಚ ಶಿಕ್ಷಣ, ಸುಖೀ ಜೀವನ.
ಶುಭ ಚಂದ್ರನಾಗಿದ್ದರೆ, ಜಾತಕರು ಸುಂದರ, ಆಕರ್ಷಕ, ಶ್ರೀಮಂತ, ಪಿತ್ರಾರ್ಜಿತ ಆಸ್ತಿ ಹೊಂದಿರುವವರು, ಸ್ತ್ರೀ ಧನವನ್ನು ಹೊಂದುವವರೂ, ಉದ್ಯೋಗಸ್ಥ ಪತ್ನಿ, ಉತ್ತಮ ದಾಂಪತ್ಯ, ವಿದೇಶ ಪ್ರಯಾಣ, ಉಚ್ಚ ಶಿಕ್ಷಣ, ಸುಖೀ ಜೀವನ.
ಅಶುಭನಾದರೆ, ಜಾತಕನು ಕೃಶ ಶರೀರದವ, ಅಕಾಲ ಮರಣ, ಅನೇಕ ಸ್ತ್ರೀಯರ ಸಹವಾಸದಿಂದ ತೊಂದರೆ, ಜಲಗಂಡ, ಸದಾ ಹಣದ ತೊಂದರೆ.
ನವಮ ಭಾವ :--
ಶುಭ ಚಂದ್ರನಾಗಿದ್ದರೆ, ಜಾತಕರು ನ್ಯಾಯಪರರು, ಸದಾಚಾರ, ಸಾಮಾಜಿಕ ಕಾರ್ಯ ನಿರತರೂ, ಧಾರ್ಮಿಕತೆ, ದಯೆ ಧರ್ಮದಲ್ಲಿ ಆಸಕ್ತಿ, ತನ್ನ ಜಾತಿವರ್ಗದಲ್ಲಿ ಪ್ರಸಿದ್ಧರು, ಭಾಗ್ಯವಂತರು, ಅನ್ಯರ ಸಮಸ್ಯೆ ಗಳಿಗೆ ಸ್ಪಂದಿಸುವವರು, ಉಚ್ಛಮಟ್ಟದ ಮನೋವಿಜ್ಞಾನಿ.
ಶುಭ ಚಂದ್ರನಾಗಿದ್ದರೆ, ಜಾತಕರು ನ್ಯಾಯಪರರು, ಸದಾಚಾರ, ಸಾಮಾಜಿಕ ಕಾರ್ಯ ನಿರತರೂ, ಧಾರ್ಮಿಕತೆ, ದಯೆ ಧರ್ಮದಲ್ಲಿ ಆಸಕ್ತಿ, ತನ್ನ ಜಾತಿವರ್ಗದಲ್ಲಿ ಪ್ರಸಿದ್ಧರು, ಭಾಗ್ಯವಂತರು, ಅನ್ಯರ ಸಮಸ್ಯೆ ಗಳಿಗೆ ಸ್ಪಂದಿಸುವವರು, ಉಚ್ಛಮಟ್ಟದ ಮನೋವಿಜ್ಞಾನಿ.
ಅಶುಭ ಚಂದ್ರನಾದರೆ, ಅಲ್ಪಬುದ್ಧಿ, ಧರ್ಮದ ಬಗ್ಗೆ ಅವಹೇಳನ ಮಾತು, ಸುಳ್ಳು ಹೇಳುವವ, ಚಿಕ್ಕಂದಿನಲ್ಲೇ ತಂದೆಯ ವಿಯೋಗ, ಚಿಕ್ಕ ವಯಸ್ಸಿನಲ್ಲಿ ಕುಟುಂಬದ ಹೊಣೆ, ಇಚ್ಛಾಶಕ್ತಿ ಯ ಕೊರತೆ, ಅನಾರೋಗ್ಯ ಪೀಡಿತ ತಾಯಿ.
ದಶಮ ಭಾವ :--
ಶುಭ ಚಂದ್ರನಾಗಿದ್ದರೆ, ಜಾತಕರು ಸಂವೇದನಾ ಶೀಲತೆ, ಪರೋಪಕಾರಿ, ದಯಾಳು, ವೃದ್ಧರನ್ನು ವಿಶೇಷವಾಗಿ ಆದರಿಸುವವರು, ಭೂ ಸಂಪತ್ತು, ಜಲೀಯ ಪದಾರ್ಥಗಳ ವ್ಯಾಪಾರದಲ್ಲಿ ಯಶಸ್ಸು, ಇಚ್ಛಿತ ಕಾರ್ಯಗಳಲ್ಲಿ ಯಶಸ್ವಿ.
ಶುಭ ಚಂದ್ರನಾಗಿದ್ದರೆ, ಜಾತಕರು ಸಂವೇದನಾ ಶೀಲತೆ, ಪರೋಪಕಾರಿ, ದಯಾಳು, ವೃದ್ಧರನ್ನು ವಿಶೇಷವಾಗಿ ಆದರಿಸುವವರು, ಭೂ ಸಂಪತ್ತು, ಜಲೀಯ ಪದಾರ್ಥಗಳ ವ್ಯಾಪಾರದಲ್ಲಿ ಯಶಸ್ಸು, ಇಚ್ಛಿತ ಕಾರ್ಯಗಳಲ್ಲಿ ಯಶಸ್ವಿ.
ಚಂದ್ರನು ಅಶುಭನಾದರೆ, ಅನಾರೋಗ್ಯ, ಚಂಚಲ ಮನಸ್ಸಿನವರು, ವೃತ್ತಿಯಲ್ಲಿ ಪದೇ ಪದೇ ಬದಲಾವಣೆ, ಪತ್ನಿಯಿಂದ ಅಸಹಕಾರ, ತಾಯಿ ಸುಖದ ಕೊರತೆ, ಜೀವನದಲ್ಲಿ ಏರಿಳಿತ.
ಏಕಾದಶ ಭಾವ. :--
ಶುಭ ಚಂದ್ರನಾಗಿದ್ದರೆ, ಜಾತಕರು ಭಾಗ್ಯಶಾಲಿ, ಶ್ರೀಮಂತ, ಸಮಾಜಸೇವಕರು, ಜೀವನದಲ್ಲಿ ಸಿದ್ಧಾಂತಗಳಿಗೆ ಮಹತ್ವ ಕೊಡುವವರು, ಪ್ರತಿಷ್ಠಿತ ವ್ಯಕ್ತಿ, ದೂರ ದರ್ಶಿತ್ವ ಉಳ್ಳವರೂ, ಬುದ್ಧಿವಂತರು, ಸಾತ್ವಿಕ ಸ್ನೇಹಿತರುಳ್ಳವರು, ಸುಖೀ ವೈವಾಹಿಕ ಜೀವನ, ಸುಸಂಸ್ಕೃತ ಸಂತಾನ.

ಅಶುಭನಾದರೆ, ಭಾಗ್ಯಹೀನರು, ಮುಂದಾಲೋಚನೆ ಇಲ್ಲದವರು, ಸ್ವಾರ್ಥಿ, ಉತ್ತಮ ಸ್ನೇಹಿತರಿಲ್ಲದವರು, ಹಣದ ಅಪವ್ಯಯ, ಸಂತಾನ ಸುಖವಿಲ್ಲ, ಅಲ್ಪಾಯು ತಾಯಿ, ಅಪಕೀರ್ತಿ, ಅಧಿಕ ಸ್ತ್ರೀ ಸಂತಾನ.
ದ್ವಾದಶ ಭಾವ :--
ಶುಭ ಚಂದ್ರನಾಗಿದ್ದರೆ, ಜಾತಕರು ಭಾಗ್ಯವಂತರು, ಏಕಾಂತಪ್ರಿಯರು, ಉಚ್ಚಶಿಕ್ಷಣದ ಯೋಗ, ವಿದೇಶಿ ನೌಕರಿ, ವ್ಯವಹಾರದಲ್ಲಿ ಸಫಲತೆ, ಜ್ಯೋತಿಷ್ಯ ದಲ್ಲಿ ವಿಶೇಷ ಅಭಿರುಚಿ, ಮಹತ್ವಾಕಾಂಕ್ಷಿ, ಪತ್ನಿಯ ಸಹಕಾರ, ದಯಾಳು, ಇಂದ್ರಿಯ ನಿಗ್ರಹ.
ಶುಭ ಚಂದ್ರನಾಗಿದ್ದರೆ, ಜಾತಕರು ಭಾಗ್ಯವಂತರು, ಏಕಾಂತಪ್ರಿಯರು, ಉಚ್ಚಶಿಕ್ಷಣದ ಯೋಗ, ವಿದೇಶಿ ನೌಕರಿ, ವ್ಯವಹಾರದಲ್ಲಿ ಸಫಲತೆ, ಜ್ಯೋತಿಷ್ಯ ದಲ್ಲಿ ವಿಶೇಷ ಅಭಿರುಚಿ, ಮಹತ್ವಾಕಾಂಕ್ಷಿ, ಪತ್ನಿಯ ಸಹಕಾರ, ದಯಾಳು, ಇಂದ್ರಿಯ ನಿಗ್ರಹ.
ಚಂದ್ರ ಅಶುಭನಾದರೆ, ಭಾಗ್ಯಹೀನ, ನೇತ್ರರೊಗಿ, ಅಶಾಂತ ಜೀವನ, ವೈವಾಹಿಕ ಜೀವನದಲ್ಲಿ ಅಶಾಂತಿ, ಧನವ್ಯಯ, ವಿದೇಶ ಪ್ರಯಾಣದಲ್ಲಿ ತೊಂದರೆ, ನೀಚ ಜನರ ಸಂಗದಲ್ಲಿ ಸಾರ್ವಜನಿಕ ವಾಗಿ ಅಪಮಾನ
.
ಪರಿಹಾರಗಳು:-
1) ದುರ್ಗೆ ಅಥವ ಚಾಮುಂಡಿಯನ್ನು ಆರಾಧಿಸಿ,
2) ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ(ಚಂದ್ರನು ಮೇಷ ಅಥವ ವೃಶ್ಚಿಕಗಳಿಇದ್ದರೆ)
3) ಹಾಲು ಮತ್ತು ನೀರನ್ನು ಕುಡಿಯಲು ಬೆಳ್ಳಿಯ ಲೋಟವನ್ನು ಉಪಯೋಗಿಸಿ.
4) ನಿಮ್ಮ ತಾಯಿಯ ಕೈಯಿಂದ ಹಳೆಯ ಅಕ್ಕಿ ಮತ್ತು ಬೆಳ್ಳಿಯ ನಾಣ್ಯವನ್ನು ತಗೆದುಕೊಂಡು ಒಂದು ಬಿಳಿಯ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿಟ್ಟಿರಿ.
5) ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ ಸೋಮವಾರಗಳಂದು ಹರಿಯುವ ನೀರಲ್ಲಿ ಹಾಕಿ.
6) ೪೦ದಿನಗಳಕಾಲ ಮಲಗುವಾಗ ತಲೆಯ ಬಳಿ ಒಂದುಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಅಶ್ವತ್ತ ಮರದ ಬುಡಕ್ಕೆ ಹಾಕಿ.
7) ರಾತ್ರಿಯ ಹೊತ್ತು ಹಾಲನ್ನು ಕುಡಿಯಬೇಡಿ.
8) ಮಗನ ಜೊತೆ ಪ್ರಯಾಣಿಸುವಾಗ ಹರಿಯುವ ನೀರಿನಲ್ಲಿ ತಾಮ್ರದ ನಾಣ್ಯವನ್ನು ಹಾಕಿ.
8) ರುದ್ರಭೂಮಿಯಲ್ಲಿನ ಬಾವಿಯ ನೀರನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಿ.
9) ಎರಡು ಜೊತೆ ಬೆಳ್ಳಿ ಮತ್ತು ಮುತ್ತಿನ ಚೂರುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಜೊತೆಯನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ.
10) ತಾಯಿಯನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ.
11) ಮಗ ಮತ್ತು ಮೊಮ್ಮೊಗನೊಡನೆ ದೇವಸ್ಥಾನಕ್ಕೆ ಹೋಗಿ,
12) ಪಿತೃಕಾರ್ಯವನ್ನು ಮಾಡಿ
13) ಸರಿಯಾಗಿ ನಿದ್ರೆ ಬರದಿದ್ದರೆ ಮಂಚದ ನಾಲ್ಕು ಕಾಲುಗಳಿಗು ತಾಮ್ರದ ಮೊಳೆಯನ್ನು ಹೊಡೆಯಿರಿ
.
14) ೨೪ನೇ ವಯಸ್ಸಿಗೆ ಮುಂಚೆ ವಿವಾಹವಾಗಬಾರದು.
೧೫) ಮೊದಲಬಾರಿಗೆ ಪತ್ನಿಯನ್ನು ಅವರ ಮನೆಯಿಂದ ಕರೆತರುವಾಗ ಸ್ವಲ್ಪ ಬೆಳ್ಳಿಯನ್ನು ಸಹ ಜೊತೆಯಲ್ಲಿ ತಗೆದುಕೊಂಡು ಬನ್ನಿ.
16) ಆಸ್ಪತ್ರೆ ಅಥವ ರುದ್ರಭೂಮಿಯಲ್ಲಿ ಬಾವಿಯನ್ನು ತೆಗೆಯಿಸಿ.
17) ಹಾಲು ತುಂಬಿದ ಪಾತ್ರೆ ಅಥವ ಬಾಟಲನ್ನು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ.
18) ಅನಾಥ ಮಕ್ಕಳೀಗೆ ಹಾಲನ್ನು ಕೊಡಿ.
19) ಸ್ವಲ್ಪ ಬೆಳ್ಳಿಯನ್ನು ಮನೆಯ ತಳಪಾಯದಲ್ಲಿ ಹುದುಗಿಸಿ ಅದರಲ್ಲಿನ ಸ್ವಲ್ಪಬಾಗವನ್ನು ಮನೆಯಲ್ಲಿ ಇರಿಸಿ
.
20) ಚಂದ್ರಗ್ರಹಣದಲ್ಲಿ ಸ್ವಲ್ಪ ಇದ್ದಿಲು,ಬಾರ್ಲಿ,ಬಿಳಿಸಾಸಿವೆಕಾಳುಗಳನ್ನು ಹರಿಯುವ ನೀರಲ್ಲಿ ಹಾಕಿ.
21) ಹಸಿರು ವಸ್ತ್ರವನ್ನು ಕನ್ಯೆಗೆ ದಾನಮಾಡಿ.
22) ಬಿಳಿಯ ಮೊಲವನ್ನು ಸಾಕಿ.
23) ಕೆಲಸಕ್ಕೆ ಮೊದಲು ಹಾಲು ಅಥವ ನೀರು ಕುಡಿಯಿರಿ
.
24) ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಹಾಕಿ ಉಂಗುರದ ಬೆರಳಿಗೆ ಹಾಕಿಕೊಳ್ಳಿ ಮತ್ತು ಸೋಮವಾರಗಳಂದು ಉಪವಾಸ ಮಾಡಿ.
25) ನಿರ್ವೀರ್ಯತೆಗೆ ಬಂಗಾರದ ಕಡ್ಡಿಯನ್ನು ಕೆಂಪಗೆ ಕಾಯಿಸಿ ೧೧ ಸಲ ನೀರಲ್ಲಿ ಅದ್ದಿ ನಂತರ ಆ ನೀರನ್ನು ಕುಡಿಯಿರಿ.
✍ ಡಾ: ಶೈಲಜಾ ರಮೇಶ್
No comments:
Post a Comment