Tuesday, 27 March 2018

ಬಲಹೀನ ಗ್ರಹಗಳು ಮತ್ತು ಪರಿಹಾರಗಳು ಭಾಗ - 6.

                              ಹರಿಃ ಓಂ
                        ಶ್ರೀ ಗಣೇಶಾನಮಃ
                      ಶ್ರೀ ಗುರುಭ್ಯೋನಮಃ

ಬಲಹೀನ ಗ್ರಹಗಳಿಂದಾಗುವ ತೊಂದರೆಗಳು  ಮತ್ತು  ಪರಿಹಾರಗಳು  -  ಭಾಗ , 6.

         ಶುಕ್ರ ಗ್ರಹ :--    

ಶುಕ್ರ ಗ್ರಹವು  ಜಾತಕದಲ್ಲಿ  ಬಲಹೀನವಾದಾಗ  ಉಂಟಾಗುವ  ತೊಂದರೆಗಳು  :--

         ಕುರೂಪಿ, ಕಳಾಹೀನತೆ, ಪ್ರೀತಿ ವಾತ್ಸಲ್ಯಗಳಿರುವುದಿಲ್ಲ, ಒರಟುತನ,  ನೀಚತ್ವ,  ವೈವಾಹಿಕ  ಅಥವ  ದಾಂಪತ್ಯ ಸಮಸ್ಯೆಗಳು, ಪುರುಷರಿಗೆ  ಸ್ತ್ರೀಯೊಡನೆ ವಿರಸ, ಸಂಬಂದಗಳು, ಸ್ತ್ರೀಯರಲ್ಲಿ  ಕೋಮಲತೆಯ  ಗುಣಗಳು ಇಲ್ಲದಿರುವುದು, ದೈಹಿಕ, ಮೂತ್ರಪಿಂಡ ತೊಂದರೆಗಳು,  ಅತಿಯಾದ ಲೈಂಗಿಕತೆ,  ಮಿತಿಮೀರಿದ  ತಿನ್ನುವಿಕೆ, ಕುಡಿತ, ವಯಸ್ಸಾದ ನಂತರವೂ  ಇತರ  ಹೆಂಗಸ ರೊಡನೆ ಸಂಬಂದಗಳು, ಪತ್ನಿ  ಅಥವ  ಪರಸ್ತ್ರೀಯರಿಂದ  ಸಂಪತ್ತಿನ ಹಾನಿ, ಜಾತಕರಿಗೆ  ಹೆಚ್ಚಾಗಿ  ಹೆಣ್ಣು ಸಂತಾನ, ಮಾದಕ  ದ್ರವ್ಯ  ವ್ಯಸನಿ, ತಕ್ಕ ಮಟ್ಟಿಗೆ ಸಂಪಾದನೆ  ಇದ್ದರೂ  ಸದಾ  ಸಾಲಗಾರರು, ಲೈಂಗಿಕ  ವ್ಯಾಧಿಗಳು, ತಮ್ಮ ಸ್ಥಾನ ಮಾನಗಳು, ಮತ್ತು  ಅಧಿಕಾರಿಗಳಿಂದ  ಎಂದೂ ತೃಪ್ತರಲ್ಲ, ಶುಭಸಮಾರಂಭಗಳಲ್ಲಿ  ಅನಿರೀಕ್ಷಿತ ಅಪಘಾತಗಳು, ಕಲೆಗಳಲ್ಲಿ  ಅಡಚಣೇಗಳು.

ದ್ವಾದಶ  ಭಾವದಲ್ಲಿ  ಸ್ಥಿತ   ಶುಕ್ರನ  ಶುಭಾಶುಭ  ಫಲಗಳು:--

          ಪ್ರಥಮ ಭಾವ  :---

          ಪ್ರಥಮ ಭಾವಸ್ಥಿತ  ಶುಕ್ರನು ಶುಭನಾಗಿದ್ದರೆ,  ಜಾತಕರು  ಭಾಗ್ಯಶಾಲಿ,  ಧನವಂತ,  ಬುದ್ಧಿವಂತರು, ವಿನೋದ ಪ್ರಿಯ,  ಉತ್ತಮವಾಗಿ  ವ್ಯವಹಾರ  ಮಾಡುವವರು,  ಚೂಪಾದ ಮೂಗು, ಸುರದ್ರೂಪಿಗಳು,  ತನ್ನ ಕಾರ್ಯ ಕ್ಷೇತ್ರದಲ್ಲಿ ಶ್ರೇಷ್ಠ,  ಸಾಹಿತ್ಯ ಕ್ಷೇತ್ರದಲ್ಲಿ ಬೆಳಕಿಗೆ  ಬರುವವರು,  ಉತ್ತಮ  ಆರೋಗ್ಯವಂತ, ಆರ್ಥಿಕವಾಗಿ  ಉತ್ತಮ  ಸ್ಥಿತಿಯಲ್ಲಿ ಇರುವವ, ಸ್ವಾವಲಂಬಿ,  ವೈಭವಯುಕ್ತ  ಜೀವನ, ಉತ್ತಮ  ದಾಂಪತ್ಯ.

               ಪ್ರಥಮ ಭಾವಸ್ಥಿತ  ಶುಕ್ರನು ಆಶುಭನಾಗಿದ್ದರೆ,   ಜಾತಕನು ಭಾಗ್ಯಹೀನ,  ಕುಟುಂಬದವರಿಗೆ ಕಂಟಕಪ್ರಾಯನಾಗುತ್ತಾನೆ,  ಅನಾರೋಗ್ಯ,  ದಾಂಪತ್ಯ ಜೀವನ ಉತ್ತಮವಿರುವುದಿಲ್ಲ, ರೋಗಗ್ರಸ್ತ  ಸಂಗಾತಿ ಹಾಗೂ  ತಾನೂ  ಸ್ವತಃ  ರೋಗಿಷ್ಟ.

          ದ್ವಿತೀಯ ಭಾವ  :--

               ದ್ವಿತೀಯ ಭಾವಸ್ಥಿತ  ಶುಕ್ರನು ಶುಭನಾಗಿದ್ದರೆ,  ಜಾತಕನು, ಸುಂದರಾಕಾರ,  ತಿಳುವಳಿಕೆ ಉಳ್ಳವ,  ಧನವಂತ,  ಭಾಗ್ಯಶಾಲಿ,  ಸಮಾಜ ಸೇವಕ,  ಸನ್ಮಾನಿತ,  ಉತ್ತಮ  ವಸ್ತ್ರ
ಗಳ  ಧಾರಣೆ,  ವೈಭವದ ವಿವಾಹ,  ಅಧಿಕಾರಿಗಳಿಂದ  ಪ್ರಶಂಸೆ ಗೆ  ಒಳಗಾಗುವರು, ಉತ್ತಮ  ಚಾರಿತ್ರ್ಯ ದವರು, ಸ್ನೇಹ ಪ್ರವೃತ್ತಿ,  ಶುಕ್ರನ  ಸಂಬಂಧಿತ  ವಸ್ತುಗಳ  ವ್ಯಾಪಾರವಿದ್ದರೆ  ಸಫಲನಾಗುವವ,   ಉತ್ತಮ  ಸಾಂಸಾರಿಕ  ಜೀವನ .

               ದ್ವಿತೀಯಭಾವಸ್ಥಿತ  ಶುಕ್ರನು ಆಶುಭನಾಗಿದ್ದರೆ,  ಜಾತಕರು  ಭಾಗ್ಯಹೀನ,  ಚಾರಿತ್ರ್ಯ ಹೀನ,  ಅನೈತಿಕ ಸಂಬಂಧ, ಇವರ ಕೆಟ್ಟ ಕಾರ್ಯಗಳ ಫಲವಾಗಿ  ಪತ್ನಿ ರೋಗಗ್ರಸ್ಥೆ,  ಸಂತಾನ ಸುಖವಿಲ್ಲ,  ಕಾನೂನು ಬಾಹಿರ ಕೆಲಸಗಳಲ್ಲಿ  ತೊಡಗಿರುತ್ತಾರೆ.

          ತೃತೀಯ ಭಾವ :--

         ತೃತೀಯ ಭಾವಸ್ಥಿತ  ಶುಕ್ರನು ಶುಭನಾಗಿದ್ದರೆ,  ಜಾತಕನು,   ಸರ್ವಜನಪ್ರಿಯ,  ತನ್ನ  ಸೌಂದರ್ಯ ಹಾಗೂ ಉತ್ತಮ ನಡವಳಿಕೆಯಿಂದ ಎಲ್ಲರ ಮನಸ್ಸನ್ನು  ಗೆಲ್ಲುವವರಾಗಿರುತ್ತಾರೆ,  ಉತ್ಯಮ  ವಿದ್ಯಾವಂತ,  ಆರೋಗ್ಯವಂತ, ಉದ್ದೇಶಿತ ಯಾತ್ರೆಗಳಲ್ಲಿ  ಸಫಲ, ಆನಂದಮಯ ವೈವಾಹಿಕ ಜೀವನ.

          ತೃತೀಯ ಭಾವಸ್ಥಿತ  ಶುಕ್ರನು ಆಶುಭನಾಗಿದ್ದರೆ,  ಜಾತಕನು,  ಜಗಳಗಂಟಿ, ಪತ್ನಿಯಮೇಲೆ ಅವಲಂಬಿತ,  ಅಲೆಮಾರಿ,  ಭಾಗ್ಯಹೀನ, ಕುಟುಂಬಕರಿಗೆ,  ಬಂಧುಗಳಿಗೆ,  ನೆತೆಹೊರೆಯವರಿಗೆ  ಎಲ್ಲರಿಗೂ ಕಂಟಕಪ್ರಾಯ ನಾಗಿರುವವ, ಎಲ್ಲರಿಂದಲೂ  ಅಪಮಾನಕ್ಕೆ ಒಳಗಾಗುವವ.

          ಚತುರ್ಥ ಭಾವ :--

               ಚತುರ್ಥ  ಭಾವಸ್ಥಿತ  ಶುಕ್ರನು ಶುಭನಾಗಿದ್ದರೆ,  ಜಾತಕನು, ಭಾಗ್ಯಶಾಲಿ, ಪಿತ್ರಾರ್ಜಿತ ಧನ ಸಂಪತ್ತನ್ನು ಹೊಂದಿದವನು,  ಸಕಲ ಪ್ರಕಾರದ  ಸುಖವನ್ನು  ಹೊಂದಿದವನು, ವೈಭವಯುತ  ಮನೆ, ಅನೇಕ ಕ್ಷೇತ್ರದಲ್ಲಿ ಸಫಲನು,  ಉಚ್ಚಶಿಕ್ಷಣ , ಸುಖ ಸಂತೋಷದ ವೈವಾಹಿಕ  ಜೀವನ, ತಾಯಿಗೆ ಅತ್ಯಂತ ಪ್ರಿಯನಾದವ ಹಾಗೂ  ತಾಯಿಯನ್ನು  ಆದರಿಸುವವ.
         
               ಚತುರ್ಥ ಭಾವಸ್ಥಿತ  ಶುಕ್ರನು ಆಶುಭನಾಗಿದ್ದರೆ,  ಜಾತಕನು,  ಕುಟುಂಬದವರ  ದ್ವೇಷಕ್ಕೆ  ಒಳಗಾಗುವವ,  ಸಕಲರಿಂದ ಉಪೇಕ್ಷೆ ಗೆ ಒಳಗಾಗುವನು ಹಾಗೂ ಅಪಮಾನಕ್ಕೀಡಾಗುವವನು,  ದಾಂಪತ್ಯ ದಲ್ಲಿ  ಸುಖವಿಲ್ಲ,  ಸಂತಾನದ ಸುಖದ  ಕೊರತೆ,  ಮಾದಕ ವಸ್ತುಗಳ ವ್ಯಸನಿ.

          ಪಂಚಮಭಾವ :--

          ಪಂಚಮಭಾವ ಸ್ಥಿತ  ಶುಕ್ರ  ಶುಭನಾದರೆ, ಜಾತಕನು, ಉಚ್ಚ ಶಿಕ್ಷಿತ, ಸರ್ಕಾರದಲ್ಲಿ  ಉತ್ತಮ  ಶ್ರೇಣಿಯ  ಅಧಿಕಾರವನ್ನು  ಹೊಂದಿದವರು, ಉತ್ತಮ  ಸಲಹಾಗಾರ, ಸಟ್ಟಾ- ಜೂಜು  ಇವುಗಳಿಂದ  ಲಾಭ, ಸಂಗೀತದಲ್ಲಿ  ಆಸಕ್ತಿ, ಹಾಗೂ  ಉತ್ತಮ  ಸಂಗೀತಗಾರರಾಗುತ್ತಾರೆ,    ಸಫಲ ಪ್ರೇಮ ವಿವಾಹ.

          ಪಂಚಮಭಾವ ಸ್ಥಿತ  ಶುಕ್ರ  ಆಶುಭನಾದರೆ, ಜಾತಕನು,  ಬಂಧುಗಳಿಗೆ  ಹಾನಿಕಾರಕ,  ಧನನಾಶ, ಧೂರ್ತ, ಚಾರಿತ್ರ್ಯ ಹೀನ,  ಪ್ರೇಮವಿವಾಹವಾದರೂ,  ಪರಸ್ತ್ರೀ ಯರೊಡನೆ  ಸಂಬಂಧ,  ಮೊಸಗಾರ.

          ಷಷ್ಟ ಭಾವ :---

          ಷಷ್ಟ ಭಾವಸ್ಥಿತ  ಶುಕ್ರನು  ಶುಭನಾದರೆ, ಜಾತಕನು ಪ್ರಾಣಿಗಳನ್ನು  ಸಾಕುವ  ಅಭಿರುಚಿಯನ್ನು  ಹೊಂದಿರುವವ, ಆರೋಗ್ಯವಂತ, ದಷ್ಟ - ಪುಷ್ಟ ದೇಹದವ,  ಸುಂದರ, ಧನವಂತ,  ರಾಜನೀತಿಯಲ್ಲೂ ಸಫಲತೆ  ಹೊಂದುವವ, ವಿರೋಧಿಗಳ  ಪರಾಜಯ, ಸಂತಾನ  ಸುಖ  ಹೊಂದಿರುವವನಾಗುತ್ತಾನೆ.

          ಷಷ್ಟ ಭಾವಸ್ಥಿತ ಶುಕ್ರ ನು  ಅಶುಭನಾದರೆ,  ಜಾತಕನು  ಭಾಗ್ಯಹೀನ,  ಆಲಸಿ,  ದುರ್ಬಲ  ಮಧುಮೇಹ, ಮೂತ್ರಪಿಂಡ  ಹಾಗೂ  ಚರ್ಮ ರೋಗಗಳಿಂದ  ಭಾಧಿತರು,  ಚಾರಿತ್ರ್ಯ ಹೀನ,  ಅನೇಕ ಸ್ತ್ರೀಯರೊಡನೆ  ಸಮಾಗಮ,  ಧನನಷ್ಟ,  ಬಂಧುವಿರೋಧಿ,  ನ್ಯಾಯಾಲಯದಲ್ಲಿ  ಪರಾಜಯ.

          ಸಪ್ತಮಭಾವ  :--

          ಸಪ್ತಮ ಭಾವಸ್ಥಿತ  ಶುಕ್ರನು  ಶುಭನಾಗಿದ್ದರೆ,   ಜಾತಕರು,  ಭಾಗ್ಯಶಾಲಿ, ಕುಟುಂಬದವರೆಲ್ಲರ ಪ್ರೀತಿಪಾತ್ರದವರು ಹಾಗೂ  ಕುಟುಂಬವನ್ನು ಪ್ರೀತಿಸುವವರು,  ವ್ಯಾಪಾರದಲ್ಲಿ  ಅಧಿಕಲಾಭ,  ಧನಧಾನ್ಯ ಲಾಭ, ಸುಂದರ  ಸುಖೀ  ಸಂಸಾರ, ಯಾತ್ರೆಗಳಿಂದ  ಲಾಭ.

          ಸಪ್ತಮ ಭಾವಸ್ಥಿತ ಶುಕ್ರ ನು  ಅಶುಭನಾದರೆ, ಜಾತಕರು, ಅಲ್ಪಾಯು,  ಕಮ್ಮಿ, ವಿಲಾಸ ಜೀವನ  ನಡೆಸುವವರೂ,  ಗುಪ್ತಅಂಗಗಳ  ರೋಗ,  ಧನಕ್ಕಾಗಿ  ಪತ್ನಿಯನ್ನು  ಅಶ್ರಯಿಸುವವ,  ಕಲಹಪ್ರಿಯ, ಪತ್ನಿಯೊಡನೆ  ಜಗಳ,  ಪತ್ನಿಯ ಹಣವನ್ನು  ಬೇರೆ ಸ್ತ್ರೀಯರ ಸುಖಕ್ಕಾಗಿ  ಖರ್ಚು ಮಾಡುವವ.

          ಅಷ್ಟಮಭಾವ ;--

          ಅಷ್ಟಮಭಾವ ಸ್ಥಿತ  ಶುಕ್ರನು  ಶುಭನಾದರೆ,  ಜಾತಕರು, ಶ್ರೀಮಂತ, ಬಂಧುಗಳಿಂದ  ಧನಲಾಭ, ಸ್ವಂತಮನೆ ಹಾಗೂ  ವಾಹನಗಳಿರುತ್ತವೆ,  ವ್ಯಾಪಾರ ವೃತ್ತಿಯಲ್ಲಿ ಧನಲಾಭ,  25 ನೆ ವರ್ಷದಲ್ಲಿ  ವಿವಾಹವಾದರೆ  ಶುಭ,  ಸುಸಂಸ್ಕೃತ,  ರೂಪವತಿ  ಪತ್ನಿ, ಅನೇಕ  ಸಂತಾನ.

          ಅಷ್ಟಮಭಾವ ಸ್ಥಿತ ಶುಕ್ರನು  ಅಶುಭನಾದರೆ,  ಜಾತಕರು,  ಆರ್ಥಿಕವಾಗಿ  ದುರ್ಬಲರು, ಕ್ರೂರಿ,  ಕಲಹಪ್ರಿಯ, ಬಂಧು ದ್ವೇಷಿ,  ಕುಟುಂಬದವರೊಡನೆ  ವೈರತ್ವ, ಒಳಿತು ಮಾಡಿದವರಿಗೆ  ಕೆಡಕನ್ನು  ಬಯಸುವವ,  ಅನ್ಯ ಸ್ತ್ರೀಯೊಡನೆ  ಸಂಬಂಧ,  ಗುಪ್ತರೋಗದಿಂದ  ಬಾಧಿತ,  ನಪುಂಸಕನಾಗುವ  ಸಂಭವವೂ ಇರುತ್ತದೆ.

          ನವಮಭಾವ  :--

          ನವಮಭಾವ ಸ್ಥಿತ  ಶುಕ್ರನು  ಶುಭನಾದರೆ,  ಜಾತಕರು,  ಉಚ್ಚ ಶಿಕ್ಷಿತ, ಸರ್ಕಾರಿ ನೌಕರಿಯಲ್ಲಿ  ಉನ್ನತಾಧಿಕಾರಿ,  ದಯಾಳು,  ಧನವಂತ,  ರೂಪವಂತ,  ಆದರ್ಶ ವ್ಯಕ್ತಿ,  ವಿದೇಶ ವಾಸಯೋಗ, ಸುಂದರ , ಸುಶೀಲ,  ಬುದ್ಧಿವಂತ  ಸತಿ.

          ನವಮಭಾವ ಸ್ಥಿತ  ಶುಕ್ರನು,  ಅಶುಭನಾದರೆ,  ಜಾತಕರು,  ಧನಹೀನ,  ಭಾಗ್ಯಹೀನ, ಉತ್ತಮ ಶಿಕ್ಷಣ ವಿಲ್ಲ, ಪರಪೀಡಕ, 25 ನೆ ವರ್ಷದಲ್ಲಿ  ವಿವಾಹವಾದರೆ  ಅಶುಭ, ಕಲಹಪ್ರಿಯ ಪತ್ನಿ,  ಅಲ್ಪ ಸಂತಾನ,  ವ್ಯಾಪಾರದಿಂದ ಹಾನಿ, ಧನ ಅಪವ್ಯಯ ಮಾಡುವವರಾಗುತ್ತಾರೆ.

          ದಶಮ ಸ್ಥಾನ  :--

          ದಶಮ ಸ್ಥಾನ ಸ್ಥಿತ ಶುಕ್ರನು ಶುಭನಾದರೆ, ಜಾತಕರು, ಸಭ್ಯ,  ಶಿಸ್ತಾಚಾರದ  ವ್ಯಕ್ತಿ,  ಉಚ್ಚಶಿಕ್ಷಣದ ಪಡೆದವರು,  ಬುದ್ಧಿವಂತ, ನ್ಯಾಯಪ್ರಿಯ,  ಹಸನ್ಮುಖಿ,  ತನ್ನ  ರೂಪ ಹಾಗೂ  ಒಳ್ಳೆ  ಗುಣಗಳಿಂದಾಗಿ ಅನೇಕರಿಂದ  ಪ್ರಶಂಸೆಗೆ  ಒಳಗಾಗುತ್ತಾರೆ.

          ದಶಮಸ್ಥ  ಶುಕ್ರ  ಅಶುಭನಾದರೆ,  ದುಃಖ ಮಯ ಜೀವನ, ಚಾರಿತ್ರ್ಯ ಹೀನ,  ಧನಹೀನ, ಭಾಗ್ಯಹೀನ,  ಧರ್ಮವನ್ನು  ಅವಹೇಳನ ಮಾಡುವವ, ರೋಗಗಳಿಂದ  ಪೀಡಿತ,  ಪತ್ನಿಯೂ  ರೋಗಗ್ರಸ್ಥೆ, ಧನಹಾನಿ.

          ಏಕಾದಶ  ಭಾವ  :--

          ಏಕಾದಶ ಭಾವಸ್ಥ  ಶುಕ್ರನು ಶುಭನಾದರೆ, ಜಾತಕನು, ಉತ್ತಮ  ಸ0ಸ್ಕಾರವಂತ, ಧನವಂತ, ಪ್ರಸಿದ್ಧಿ ಪಡೆದವ, ಸಕಲರಿಂದ  ಸನ್ಮಾನಿತ, ಕುಟುಂಬದವರಿಗೆ  ಶುಭ ವನ್ನುಂಟು ಮಾಡುವವ,  ಸಕಲ ಸುಖವನ್ನೂ  ಪಡೆಯುವವ,  ಉತ್ತಮ  ಮಿತ್ರರು, ,  ಕುಟುಂಬಕ್ಕೆ ಕೀರ್ತಿಯನ್ನು ತರುವವ, ಪತ್ನೀಪುತ್ರ ರೊಡನೆ  ಸಂತುಷ್ಟ ಜೀವನ.

          ಏಕಾದಶ  ಭಾವಾಸ್ತ  ಶುಕ್ರ  ಅಶುಭನಾದರೆ,  ಜಾತಕರು  ತಮ್ಮ  ಕಾರ್ಯ ಕ್ಷೇತ್ರದಲ್ಲಿ ಸಫಲತೆ ಇಲ್ಲದವ,  ಮಿತ್ರರಿಂದ  ವಂಚನೆಗೆ  ಒಳಗಾಗುವವ, ದುಷ್ಟ ಜನರ  ಸಹವಾಸ, ಅಲ್ಪಧನ, ಪತ್ನಿಯೊಡನೆ ವೈಮನಸ್ಯ, ಅಲ್ಪ ಸಂತಾನ.

          ದ್ವಾದಶ ಭಾವ :--

          ಶುಕ್ರ  ಶುಭನಾಗಿ  ದ್ವಾದಶ  ಭಾವದಲ್ಲಿದ್ದರೆ, ಜಾತಕನು,  ಸುಶಿಕ್ಷಿತ ,  ಸಫಲ ವಿಜ್ಞಾನಿ,  ತಂತ್ರ - ಯಂತ್ರ - ಮಂತ್ರ  ವಿದ್ಯೆಗಳಲ್ಲೂ  ನಿಪುಣ, ರೂಪವಂತ,  ಧನವಂತ,  ಧೀರ್ಘಆಯು,  ಸ್ವಂತ ಮನೆ -  ವಾಹನಗಳುಳ್ಳವನು,  ಸಕಲ  ಭೋಗಗಳನ್ನೂ  ಪಡೆಯುವವ,  ಯಾತ್ರೆಗಳಿಂದ ಲಾಭ, ವಿದೇಶ ಯಾತ್ರಾಯೋಗ,  ಜನರ ಮಧ್ಯದಲ್ಲಿರಲು   ಇಷ್ಠಪಡುತ್ತಾವೆ, ಉತ್ತಮ  ಪತ್ನಿ. ಸುಖ  ಸಂಸಾರ.

          ದ್ವಾದಶ  ಭಾವಸ್ಥ  ಶುಕ್ರ  ಅಶುಭನಾದರೆ, ಜಾತಕನು,  ದುರ್ಬಲ,  ಕುಲನಾಶಕ,  ದುಷ್ಟ,  ಕಪಟಿ, ಉತ್ತಮ  ನಡತೆಯಿಲ್ಲದವನು ,  ಅನೈತಿಕ  ಸಂಬಂಧಗಳು, ಪ್ರಾಣಂತಿಕ  ರೋಗಗಳ  ಭಯ.

ಪರಿಹಾರಗಳು:-

1 ). ಶಚಿದೇವಿ ಅಥವ ಲಕ್ಷ್ಮಿಯನ್ನು ಪೂಜಿಸಿರಿ.

2 ). ಸದಾ ಶುಭ್ರರಾಗಿರಿ.

3 ). ಪತ್ನಿಯನ್ನು ಸಂತೋಷದಿಂದ ಇರಿಸಿಕೊಳ್ಳಿ. 

4 ). ೮ಕಿಲೋ ಮೂಲಂಗಿಯನ್ನು ದೇವಾಲಯಕ್ಕೆ ದಾನ ಮಾಡಿ.

5 ). ೨೫ ನೇ ವಯಸ್ಸಿನ ನಂತರ ವಿವಾಹ ಮಾಡಿಕೊಳ್ಳಿ.

6 ). ಹಸುವಿನ ತುಪ್ಪ ಮೊಸರು, ಕರ್ಪೂರ, ಮುತ್ತು, ಬಿಳಿಯ  ಬಟ್ಟೆ  ಅಥವ  ಸೌಂದರ್ಯ ಸಾಧನಗಳನ್ನು ದಾನಮಾಡಿ.

7 ). ಕರಿ ಹಸುವಿಗೆ ಜೋಳ,ಹಸಿಹುಲ್ಲು,೨ಕಿಲೋ ಆಲೂಗಡ್ಡೆ ಅಥವ ಅರಿಸಿನ ಮಿಶ್ರಿತ ಹಿಟ್ಟನ್ನು ತಿನ್ನಿಸಿ.

8 ). ಚಿಕ್ಕ ಬೆಳ್ಳಿಯ ಗುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಿ.

9 ). ಮನೆಗೆ ಪಶ್ಚಿಮ ದಿಕ್ಕಿನಲ್ಲಿ ಕಸಕ್ಕಾಗಿ ಒಂದು ಬುಟ್ಟಿಯನ್ನು ಇಡಿ.

10 ). ಮಗುವನ್ನು ದತ್ತು ತೆಗೆದುಕೊಳ್ಳಬೇಡಿ.

11 ). ಪತ್ನಿಗೆ ಅನಾರೋಗ್ಯವಾಗಿದ್ದರೆ ಆಕೆಯ ತೂಕದಷ್ಟು ಬೆಲ್ಲವನ್ನು ದೇವಾಲಯಕ್ಕೆ ದಾನ ಮಾಡಿ.

12 ). ೬ದಿನಗಳ ಕಾಲ ಕನ್ಯಾಮುತೈದೆಯರಿಗೆ ಹಾಲು ಮತ್ತು ಜೇನು ನೀಡಿರಿ.

13 ). ಯಾವುದೇ ಕೆಲಸದ ಪ್ರಾರಂಭದಲ್ಲಿಯೂ ಸ್ವಲ್ಪ ಸಿಹಿ ಮತ್ತು ನೀರನ್ನು ಸೇವಿಸಿರಿ.

14 ). ಬೆಳ್ಳಿಯ ಚಿಕ್ಕ ಫಲಕವನ್ನು ಬೇವಿನ ಮರದಡಿ ಹುದುಗಿಸಿ.

15 ). ಬೆಳ್ಳಿಯ ಚೂರನ್ನು ಜೇನಿನೊಂದಿಗೆ ನೆಲದಲ್ಲಿ ಹುದುಗಿಸಿ,

16 ). ಮಗಳ ಮದುವೆಯಕಾಲದಲ್ಲಿ ಅಳಿಯನಿಗೆ ೨
ಬಂಗಾರದ ಚೂರುಗಳನ್ನು ಸಂಕಲ್ಪಿಸಿಕೊಡಬೇಕು.

17 ).  ಪರಸ್ತ್ರೀಯರಲ್ಲಿ  ಅನುರಕ್ತರಾಗದಿರಿ.

18 ).  ಮದ್ಯ,  ಮಾಂಸ ಸೇವನೆಯಿಂದ  ದೂರವಿರಿ.

19 ). ಮಾವನ  ಮನೆಯ  ಯಾವುದೇ  ಸದಸ್ಯರನ್ನು ಜೊತೆಯಲ್ಲಿರಿಸಿಕೊಳ್ಳಬೇಡಿ.

20 ).  ತಾಯಿ  ತಂದೆಗೆ  ವಿಧೇಯರಾಗಿ, ಚನ್ನಾಗಿ  ನೋಡಿಕೊಳ್ಳಿ ಮತ್ತು  ಪ್ರತಿದಿನ  ಅವರ  ಆಶೀರ್ವಾದ ಪಡೆದುಕೊಳ್ಳಿ.
     
        ✍  ಡಾ|| B. N.  ಶೈಲಜಾ ರಮೇಶ್...

No comments:

Post a Comment