Tuesday, 6 March 2018

ಬಲಹೀನ ಗ್ರಹಗಳಿಂದಾಗುವ ತೊಂದರೆಗಳು ಭಾಗ 3

                    ಹರಿಃ ಓಂ 
                        ಶ್ರೀ ಗಣೇಶಾನಮಃ
                      ಶ್ರೀ ಗುರುಭ್ಯೋನಮಃ
ಬಲಹೀನ ಗ್ರಹಗಳಿಂದಾಗುವ  ತೊಂದರೆಗಳು  ಹಾಗೂ  ಪರಿಹಾರಗಳು  ಭಾಗ  : 3
ಕುಜನಿಂದ  ಉಂಟಾಗುವ  ತೊಂದರೆಗಳು. :--
(Image source: Internet)

          ಉತ್ಸಾಹ ರಹಿತರು,  ಯಾವುದೇ ಕೆಲಸವನ್ನು ಮಾಡಲು ಅನರ್ಹತೆ,  ನಿರ್ಬೀತಿಯಿಂದ ಇರಲಾರರು,   ಹಾಗು ತಮ್ಮ ಸ್ವಂತ ಬಲದ ಮೇಲೆ ನಿಲ್ಲರಾರರು,   ಇತರರ ಅಧಿಕಾರಕ್ಕೆ ದಬ್ಬಾಳಿಕೆಗೆ ಸುಲಭವಾಗಿ   ಒಳಗಾಗುವವರು,  ಕೋರ್ಟು ವ್ಯವಹಾರಗಳಲ್ಲಿ  ಸಿಲುಕುವವರು,  ಇದರಿಂದ ನಷ್ಟಗಳನ್ನು  ಅನುಭವಿಸಿವವರು.   ಅನಿರೀಕ್ಷಿತವಾಗಿ ಸ್ಥಿರಾಸ್ಥಿಯು  ಮಾರಾಟಕ್ಕೆ  ಬರುತ್ತದೆ,  ಅಥವ ಇತರರ   ಅನುಬೋಗಕ್ಕೆ ಒಳಗಾಗುತ್ತದೆ,   ಅಗ್ನಿ,  ಕಳ್ಳರು   ಮತ್ತು   ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ,  ರೋಗ   ನಿರೋದಕಶಕ್ತಿ ಇರುವುದಿಲ್ಲ.  ಹಸಿವಿಲ್ಲದಿರುವಿಕೆ  ,ದೇಹ ತೂಕವನ್ನು ಕಳೆದುಕೊಳ್ಳುತ್ತದೆ,  ಬಲಹೀನ   ಜಠರ-ಕರುಳಿನ ತೊಂದರೆಗಳು,  ರಕ್ತಸೋರುವ ಗಾಯಗಳು,  ರಕ್ತಹೀನತೆಯಿಂದ   ಗಾಯಗಳು  ವಾಸಿಯಾಗುವುದು   ನಿದಾನವಾಗುತ್ತದೆ. ಪುರುಷರಲ್ಲಿ  ನಿರ್ವೀರ್ಯತೆ ಕಿವಿ,  ಕೀಲು,  ಮಂಡಿ,  ಕಾಲುಗಳು   ನೋವಿರುತ್ತದೆ,  ಪತ್ನಿಗೆ ಅನಾರೋಗ್ಯವಿರುತ್ತದೆ,  ದಾಂಪತ್ಯ ಸುಖವಿರುವುದಿಲ್ಲ,  ಗರ್ಭಪಾತ  ಅಥವ  ಹುಟ್ಟಿದ ಮಕ್ಕಳೆಲ್ಲಾ   ಸಾಯುವುದು,  ಕುಟುಂಬದಲ್ಲಿ   ಹೆಚ್ಚಿನ   ಸಾವು  ದಾಂಪತ್ಯದ ಹೊರಗೂ ಸಂಬಂದಗಳು  ಮಗನ   ತಪ್ಪಿನಿಂದ ಬಾಧೆ,  ಸುಖವಿರುವುದಿಲ್ಲ   ಹಿರಿಯ   ಸೋದರ   ಅಥವ ಭಾವನಿಂದ   ಸಮಸ್ಯೆಗಳು,  ಇವರ  ತಾಯಿ  ಅಥವ ಸೋದರಿಯೊಡನೆ   ಸೋದರರ   ಬಂದುಗಳು   ಅಥವ   ಸ್ನೇಹಿತರ   ಸಂಬಂದಗಳು ಹಿತವಾಗಿರುವುದಿಲ್ಲ   ಶತೃಗಳು   ಹೆಚ್ಚಾಗುವಿಕೆ.
ಕುಜನು  ದ್ವಾದಶ ಭಾವಗಳಲ್ಲಿ  ಸ್ಥಿತ ಫಲಗಳು :--
ಪ್ರಥಮ  ಭಾವ :--
          ಪ್ರಥಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ದಷ್ಟ ಪುಷ್ಟ ಶರೀರಿ,  ಪರಿಶ್ರಮಿ,  ಆರೋಗ್ಯವಂತ,  ಭಯರಹಿತ,  ಧೀರ್ಘಆಯು,  ಧನವಂತ,  ದಯಾಳು,  ಯಶಸ್ವೀ ದಾಂಪತ್ಯ  ಹಾಗೂ  ಸುಖಿ.
         ಅಶುಭನಾದರೆ, ಜಾತಕನು  ಕ್ರೂರಿ,  ನಿರ್ದಯಿ, ಆಧರ್ಮಿ,  ಕ್ರೋಧಿ,  ಆರ್ಥಿಕ  ಸಂಕಷ್ಟ,  ಅಲ್ಪಾಯು  ಸಂಗಾತಿ,  ಜೀವನ ಪರ್ಯಂತ  ದುಃಖಿ,  ನೇತ್ರ ರೋಗಿ.
ದ್ವಿತೀಯ ಭಾವ  :--
          ದ್ವಿತೀಯ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸಾಹಸಿ, ಬುದ್ಧಿವಂತ,  ಭಯರಹಿತ,  ದಯಾಳು,  ಸ್ಪಷ್ಟ ಮಾತಿನವರು,  ಸಹೋದರರಲ್ಲಿ  ಜೇಷ್ಠ ಹಾಗೂ ಕುಟುಂಬದ  ಸಂರಕ್ಷಣೆ ಮಾಡುವವರು, ಮಿಷಿನರಿ,  ಹಾರ್ಡ್ವೇರ್ ಮುಂತಾದುವುಗಳ  ಆವಿಷ್ಕಾರಗಳನ್ನು  ಮಾಡುವ ಈತನ ದಾಂಪತ್ಯ ಜೀವನವೂ  ಸುಖಮಯವಾಗಿರುತ್ತದೆ.
          ಅಶುಭನಾದರೆ,  ಜಾತಕರ ವಿದ್ಯಾಭ್ಯಾಸ  ಅಪೂರ್ಣವಾಗುತ್ತದೆ,  ವ್ಯಾಪಾರದಲ್ಲೂ  ಸಫಲತೆ ಇಲ್ಲ,  ಜಗಳಗಂಟಿ,  ಈತನ ಮರಣಕ್ಕೆ ಜಗಳ ಅಥವಾ  ದುರ್ಘಟನೆ  ಕಾರಣವಾಗುತ್ತದೆ.
ತೃತೀಯ ಭಾವ :--
          ತೃತೀಯ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸಹೋದರರಲ್ಲಿ  ಜೇಷ್ಠ, ಆದರ್ಶ ಗಳನ್ನು  ಅನುಸರಿಸಿ ನಡೆಯುವವ,  ಮಾರ್ಗದರ್ಶಕ,  ಧನವಂತ,  ಪ್ರತಿಷ್ಠಿತ,   ಕೌಟುಂಬಿಕ ಜೀವನ ಚನ್ನಾಗಿರುತ್ತದೆ.
           ಅಶುಭನಾದರೆ,  ಜಾತಕರು  ಭಾಗ್ಯಹೀನ,  ಅಪ್ರಾಮಾಣಿಕ,  ವ್ಯಭಿಚಾರಿ, ವಂಚಕ,  ಅನ್ಯ ಸ್ತ್ರೀಯರೊಂದಿಗೆ  ಸಂಪರ್ಕ,  ಸಂತಾನ ಸುಖವಿಲ್ಲ,  ರಕ್ತ ಸಂಬಂಧಿ  ರೋಗಗಳು.
ಚತುರ್ಥ ಭಾವ  :--
          ಚತುರ್ಥ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸತ್ಯವಂತ,  ನ್ಯಾಯಮಾರ್ಗದಲಿ  ನಡೆಯುವವನು,  ಸಾಹಸಿ,  ಭಯರಹಿತ,  ಪಿತ್ರಾರ್ಜಿತ ಸಂಪತ್ತು ಉಳ್ಳವ,  ವ್ಯಾಪಾರ - ವ್ಯವಹಾರಗಳಲ್ಲಿ  ಯಶಸ್ವಿಯಾಗಿ ಮುನ್ನಡೆಯುವವನು,  ಸುಂದರ ಸುಖದ  ಸಂಸಾರ.
          ಅಶುಭನಾದರೆ,  ತಾಯಿ ತಂದೆಯರಿಗೆ ಅಶುಭ,  ಪತ್ನೀಪೀಡಕ,  ಕ್ರೂರಿ,  ದುರ್ವ್ಯವಹಾರಿ,  ಸ್ವತಂತ್ರವಾಗಿ  ನಿರ್ಣಯ ಕೈಗೊಳ್ಳಲು  ಅಸಮರ್ಥ,  ದುರ್ಘಟನೆಯಿಂದ , ಗಾಯಗೊಳ್ಳುವ ಅಥವಾ  ಮರಣಹೊಂದುವ  ಯೋಗ.
ಪಂಚಮ  ಭಾವ  :--
            
          ಪಂಚಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು, ದಷ್ಟಪುಷ್ಟ ಶರೀರಿ,  ಧೀರ್ಘಆಯು,  ಆರೋಗ್ಯವಂತ,  ಕ್ರೀಡಾಪಟು,  ಕ್ರೀಡೆಯಲ್ಲಿ  ರಾಷ್ಟ್ರ ಮಟ್ಟದಲ್ಲಿ  ಸಫಲನಾಗುವವ,  ಆಧುನಿಕತೆಯಲ್ಲಿ  ಆಸಕ್ತಿ,  ಧನವಂತ,  ವೈದ್ಯಕೀಯ ಕ್ಷೇತ್ರದಲ್ಲಿ ಯೂ ಯಶಸ್ವಿಯಾಗುತ್ತಾನೆ,  ಉತ್ತಮ  ದಾಂಪತ್ಯ.
          ಅಶುಭನಾದರೆ,   ಕಪಟ ಯೋಜನೆಗಳನ್ನು  ಮಾಡುವವ,  ಲೋಭಿ,  ಅಲ್ಪಾಯು  ಸಂತಾನ,  ಸಟ್ಟಾ,  ಲಾಟರಿ,  ಜೂಜು ಇವುಗಳಲ್ಲೂ  ಆಸಕ್ತಿ,  ಜೈಲುವಾಸ.
ಷಷ್ಟ ಭಾವ  :--
         
          ಷಷ್ಟ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಆದರ್ಶವಾದಿ, ಸತ್ಯನಿಷ್ಠ, ಲೇಖಕ,  ಸಂಗೀತ ಕ್ಷೇತ್ರದಲ್ಲಿ ಯೂ ಕೂಡ  ಸಫಲ,  ಧನ ವಾಹನಗಳುಳ್ಳವನು, ಸುಖಕರ  ದಾಂಪತ್ಯ.
          ಅಶುಭನಾದರೆ, ಜಾತಕನು  ಆಲಸಿ,  ಹೊಣೆಗೇ ಡಿ,  ಶೀಘ್ರ ಕೋಪಕ್ಕೊಳಗಾಗುವವ,   ವಿವಾದದಲ್ಲಿ ಸಿಲುಕಿ ಧನಹಾನಿ, ದುರ್ಘಟನೆ ಯಿಂದ  ಗಾಯಕ್ಕೊಳಗಾಗುವವರು,  ಅಲ್ಪಾಪುತ್ರರು.
ಸಪ್ತಮ ಭಾವ  :--
         ಸಪ್ತಮ ಭಾವದ  ಕುಜನು  ಶುಭನಾಗಿದ್ದರೆ  ಜಾತಕ ರು, ಧರ್ಮಪ್ರಿಯ,  ಉಚ್ಛಮಟ್ಟದ  ವ್ಯಾಪಾರಿ,  ರಾಜಕೀಯ  ಮುಂದಾಳು,  ಬುದ್ಧಿವಂತರು,  ಧನ, ಧಾನ್ಯ, ವಾಹನಗಳುಳ್ಳವರು, ಪರರ ಹಿತಕ್ಕಾಗಿ  ಶ್ರಮಿಸಿವವರು.
          ಅಶುಭನಾದರೆ,  ಜಾತಕನು  ಜಗಳಗಂಟನು,   ಕೋರ್ಟ್ ವ್ಯವಹಾರಗಳಲ್ಲಿ  ಧನನಷ್ಟ,  ಆಪತ್ತು, ದಾಂಪತ್ಯ ದಲ್ಲಿ  ತೃಪ್ತಿ ಇಲ್ಲ,  ವಿಧವೆ ಅಥವಾ  ವ್ಯಭಿಚಾರಿಣಿ  ಸ್ತ್ರೀಯರಲ್ಲಿ  ಆಸಕ್ತಿ,  ದ್ವಿಕಳತ್ರ,  ಮೂಲವ್ಯಾಧಿ.
ಅಷ್ಟಮ  ಭಾವ  :--
          ಅಷ್ಟಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,   ನ್ಯಾಯದ ಪಕ್ಷದ,  ಸಮಾಜದಲ್ಲಿ  ಸನ್ಮಾನಿತ,  ನಿರ್ಭಯಿ,  ಸಾಹಸಿ,  ಧನವಂತ,  ಉತ್ತಮವ್ಯಕ್ತಿ,  ಶತ್ರುಗಳ ಮೇಲೆ ವಿಜಯ,  ಉತ್ತಮ ಪತ್ನಿ.
          ಅಶುಭನಾದರೆ,  ಅಲ್ಪಾಯು, ಅಫಘಾತಗಳು,  ನೇತ್ರರೊಗಿ,  ಕಳತ್ರ ನಾಶ, ಗುಪ್ತರೋಗಗಳು,
ನವಮ ಭಾವ  :--
          ನವಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,   ಭಾಗ್ಯಶಾಲಿ,  ಮಹಾಯೋಧ,  ಧೀರ್ಘಆಯು,  ಯುದ್ಧ ಕಲೆಯಲ್ಲಿ  ನಿಪುಣ,  ದೇಶಕ್ಕೆ  ಗೌರವ  ತರುವವ,  ಅಂತಾರಾಷ್ಟ್ರೀಯ ಮಟ್ಟದಲ್ಲಿ  ವ್ಯಾಪಾರ,  ಅತ್ಯಧಿಕ  ಧನವಂತ,  ಕುಟುಂಬದವರೆಲ್ಲರ  ಸಹಕಾರವಿರುತ್ತದೆ.
         ಅಶುಭನಾದರೆ,  ಜಾತಕನು  ನಾಸ್ತಿಕ,  ಪರಪೀಡಕ, ಜಗಳಗಂಟಿ,  ಕ್ರೂರಪ್ರವೃತ್ತಿಯವ,  ಭಾಗ್ಯಹೀನ,  ತಂದೆಗೆ  ಅಶುಭ.
ದಶಮ ಭಾವ :--
          ದಶಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಬುದ್ಧಿವಂತ,  ಪರಿಶ್ರಮಿ,  ಧನವಂತ,  ಭಯರಹಿತ,  ಕಠಿಣ  ಕಾರ್ಯಗಳ  ನೇತೃತ್ವದಲ್ಲಿ  ಸಮರ್ಥನಾದವ,  ಎಲ್ಲಾ ಕ್ಷೇತ್ರದಲ್ಲಿ ಯೂ  ಸಫಲ,  ಉತ್ಸಾಹಿ,  ರಾಜನೀತಿ  ಬಲ್ಲವ, ಪ್ರಸಿದ್ಧ ಮಂತ್ರಿ,   ಎಲ್ಲೆಡೆಯೂ  ಸಫಲತೆ, ಎಲ್ಲರಿಂದಲೂ  ಸನ್ಮಾನಿತ,  ಸುಮಧುರ ದಾಂಪತ್ಯ.
          ಅಶುಭನಾದರೆ,  ಜಾತಕರು  ಕ್ರೋಧ ಪ್ರವೃತ್ತಿ ಯುಳ್ಳವರೂ, ಹಾಗಾಗಿ  ಅಪಮಾನ, ವ್ಯಾಪಾರದಲ್ಲಿ  ಹಾನಿ,  ಕುಟುಂಬದಲ್ಲಿ  ಮೃತ್ಯು.
ಏಕಾದಶ  ಭಾವ  :--
          ಏಕಾದಶ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸ್ವಯಂ ತನ್ನ  ಭಾಗ್ಯವನ್ನು ತಾನೇ  ನಿರ್ಮಿಸಿಕೊಳ್ಳುವವ,  ಉಚ್ಚಶಿಕ್ಷಣ,  ಧನವಂತ,  ರಾಜನೀತಿ  ಬಲ್ಲವ,  ಅಂತಾರಾಷ್ಟ್ರೀಯ ಮಟ್ಟದಲ್ಲಿ  ವ್ಯಾಪಾರ,  ಐಷಾರಾಮಿ  ಜೀವನ,  ಧರ್ಮದಲ್ಲಿ  ಆಸಕ್ತಿ,  ಮಿತ್ರರಿಂದ  ಲಾಭ,  ಸುಖಮಯ  ದಾಂಪತ್ಯ.
          ಅಶುಭನಾದರೆ,  ಜಾತಕನು  ಅಲ್ಪಾಯು,  ಭಾಗ್ಯಹೀನ,  ಕುಟುಂಬ ಕ್ಕೆ  ಕಂಟಕಪ್ರಾಯ,  ಅಲ್ಪ ಸಂತಾನ,  ಸಂಭಂಧಿಕರೊಡನೆ  ಭಿನ್ನಾಭಿಪ್ರಾಯ,  ಪಿತ್ರಾರ್ಜಿತ  ಆಸ್ತಿ  ನಷ್ಟ.
ದ್ವಾದಶ  ಭಾವ :--
         
          ದ್ವಾದಶ ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸಂಮೃದ್ಧ  ಕುಟುಂಬದಲ್ಲಿ  ಜನಿಸಿದವರು, ಪ್ರತಿಷ್ಠೆ,  ಉಚ್ಚಶಿಕ್ಷಣ,  ಧನವಂತ, ವಿದೇಶ ಯಾತ್ರಾಯೋಗ, ಆಶ್ರಯ ಹೀನರಿಗೆ  ಆಶ್ರಯದಾತ.
          ಅಶುಭನಾದರೆ,  ಜಾತಕರು  ಜಗಳಗಂಟಿ, ಭಾಗ್ಯಹೀನ,  ಕ್ರೂರ,  ವಿಕಾರ  ದೃಷ್ಟಿ,  ಅಧಿಕ ಕಷ್ಟ,  ಜೈಲುವಾಸ ಯೋಗ,
ಪರಿಹಾರಗಳು:- ( ಲಾಲ್ ಕಿತಾಬ್ ಪರಿಹಾರಗಳು )
1 ). ಸುಬ್ರಮಣ್ಯ,ಹನುಮಂತರನ್ನು ಬೆಸ ರಾಶಿಯವರು/ಚಾಮುಂಡಿ  ಅಥವ   ಭದ್ರಕಾಳಿಯನ್ನು ಸಮರಾಶಿಯವರು  ಆರಾಧಿಸಿ.
2 ). ಮಂಗಳವಾರಗಳಂದು  ಉಪವಾಸವನ್ನು  ಮಾಡಿ ಸಿಹಿಯನ್ನು ಹಂಚಿ.
3 ). ಕರ್ಪೂರ,  ಮೊಸರು, ಸುಗಂಧ  ದ್ರವ್ಯಗಳನ್ನು ಕೆಂಪು  ವಸ್ತ್ರದಲ್ಲಿ  ಇರಿಸಿ  ನಿರ್ಜನ  ಪ್ರದೇಶದಲ್ಲಿ ನೆಲದಲ್ಲಿ  ಹುದುಗಿಸಿ.
೪ ). ಹಾಲನ್ನು  ಆಲದ  ಮರದ  ಬುಡಕ್ಕೆ  ಹಾಕಿ  ಹಸಿಯ ಮಣ್ಣನ್ನು  ತಿಲಕದಂತೆ   ಹಚ್ಚಿಕೊಳ್ಳಿ .
5 ). ಬೇವಿನ ಮರವನ್ನು ನೆಟ್ಟು ನೀರನ್ನು ಹಾಕುತ್ತಿರಿ.
6 ). ಸೋದರ  ಮತ್ತು  ಸೋದರ ಮಾವನನ್ನು ಸತ್ಕರಿಸಿ.
7 ).  ನಾಯಿಗಳಿಗೆ  ತಂದೂರಿ  ಸಿಹಿರೊಟ್ಟಿಯನ್ನು  ೪೫ ದಿನಗಳ  ಕಾಲ  ಕೊಡಿ.
8 ). ಸದಾ  ಗಾಯತ್ರಿ  ಮಂತ್ರ  ಅಥವ  ಹನುಮಾನ್ ಚಾಲೀಸವನ್ನು ಪಠಿಸುತ್ತಿರಿ.
9 ). ರಕ್ತ ದಾನ ಮಾಡಿ.
10 ). ಮಂಗಳವಾರ  ಮದ್ಯಾಹ್ನಗಳಂದು  ಹರಿಯುವ ನೀರಲ್ಲಿ  ಬತ್ತಾಸು  ಹಾಕಿ .
11) . ಚಪಾತಿಯನ್ನು ಬೇಯಿಸುವ  ಮುಂಚೆ ಕಾದ ಹೆಂಚಿನ ಮೇಲೆ ನೀರನ್ನು ಚುಮುಕಿಸಿ.
೧೨ ). ಬಂಗಾರ, ಬೆಳ್ಳಿ, ತಾಮ್ರದ ಉಂಗುರವನ್ನು ಧರಿಸಿ.
13 ).  ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ.
14 ). ಕೆಂಪು ವಸ್ತ್ರಗಳನ್ನು ಸೋದರತ್ತೆ,ಸೋದರಿ,ತಾಯಿಗೆ ಹಾಗು ಹೆಂಡತಿಗೆ ಕೊಡಿ.
15 ). ಪಕ್ಷಿಗಳಿಗೆ ಸಿಹಿಯನ್ನು ತಿನ್ನಿಸಿ.
16 ). ರೋಗಗಳಿಂದ ಮುಕ್ತರಾಗಲು ಜಿಂಕೆ ಚರ್ಮದ ಮೇಲೆ ಮಲಗಿ.
17 ). ಅಗ್ನಿ ಅಪಘಾತಗಳ ತಡೇಗಟ್ಟಲು ಸಕ್ಕರೆಯ ಖಾಲಿ ಚೀಲಗಳನ್ನು ಸಜ್ಜೆಯ ಮೇಲೆ ಇಡಿ.
18 ). ಬಾವ,ಬಾಮೈದುನ ನೊಂದಿಗೆ ಬಾಗಸ್ಥವ್ಯವಹಾರ ಮಾಡದಿರಿ.
19 ). ಪತ್ನಿ ಅಥವ ಮಕ್ಕಳಿಗೆ ತೊಂದರೆ ಇದ್ದರೆ ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪವನ್ನು ಇಟ್ಟು ರುದ್ರಭೂಮಿಯಲ್ಲಿ ಹುದುಗಿಸಿ.
20 ) . ೮ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ಆನೆಗೆ ಸಂಬಂದಿಸಿದ ದಂತದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
21 ). ೬ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ೬ ಮಂದಿ ಕನ್ಯಾ ಮುತ್ತೈದೆಯರ ಅಶೀರ್ವಾದವನ್ನು ೬ ದಿನಗಳ ಕಾಲ ಪಡೆಯಿರಿ.
    
         ✍   ಡಾ : B. N.  ಶೈಲಜಾ  ರಮೇಶ್.

No comments:

Post a Comment