ಹರಿಃ ಓಂ
ಶ್ರೀ ಗುರುಭ್ಯೋ ನಮಃ
ಶ್ರೀ ಮಹಗಣಪತಯೇ ನಮಃ
----: ಕರ್ಮ ಸಿದ್ಧಾಂತ :----ಪ್ರತಿಯೊಂದು ಸಂದರ್ಬದಲ್ಲೂ " ಕರ್ಮ " ಎಂಬ ಪದವು ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಪದ. ಹಾಗಾದರೆ ಈ ಕರ್ಮ ಎನ್ನುವುದರ ಮೂಲ ಯಾವುದು ಎಂದಾಗ.......... ಮೂಲ ' ಕೃ' ಎಂಬುದಾಗಿದ್ದು ಮಾಡು ಎನ್ನುವುದನ್ನು ಸೂಚಿಸುತ್ತದೆ. ಇದರ ಸಾಮಾನ್ಯ ಅರ್ಥ ಕೆಲಸ, ಕ್ರಿಯಾ, ಕರ್ತವ್ಯ, ವೃತ್ತಿ.
ಹಿಂದೂ ತತ್ವಶಾಸ್ತ್ರದ ಪ್ರಕಾರ " ಕರ್ಮ" ಎನ್ನುವ ಪದವು ವಿಶಾಲಾರ್ಥವನ್ನು ಹೊಂದಿದ್ದು ಪ್ರತಿ ಜೀವಿಯ ಹುಟ್ಟಿಗೆ ಈ ಕರ್ಮವೇ ಕಾರಣವಾಗಿದೇ. ಕರ್ಮ ಎಂಬುದು ಯಾವ ರೀತಿಯಾಗೂ ಆಗಿರಬಹುದು, ಶರೀರ, ಮಾತು, ಮನಸ್ಸು ಇದನ್ನೇ ಕಾಯಾ ವಾಚಾ ಮಾನಸಿಕ ಕರ್ಮವಿನ್ನುತ್ತೇವೆ.
----: ಕರ್ಮದ ವಿಧಗಳು :----
(ಸಂಚಿತ, ಪ್ರಾರಬ್ಧ, ಆಗಾಮಿ )
ಕರ್ಮಕ್ಕೆ ತಕ್ಕಂತ ಫಲಗಳನ್ನು ಪ್ರತಿ ಜೀವಿಯೂ ಅನುಭವಿಸಲೀಬೇಕು, ಇದು ನಿಯಮ. ಈ ಕರ್ಮವು ಮೂರು ತೆರನಾಗಿದ್ದು ಸಂಚಿತ, ಪ್ರಾರಬ್ಧ, ಆಗಾಮಿ ಎಂಬುದಾಗಿದೇ.
ಅನೇಕ ಜನ್ಮಗಳಿಂದ ಕೂಡಿಕೊಂಡು ಬಂದಿರುವ ಕರ್ಮ ಸಂಚಿತವಾದರೆ , ಈ ಸಂಚಿತದಲ್ಲಿ ಯಾವ ಕರ್ಮವನ್ನು ಅನುಭವಿಸಲು ಜೀವಿಯ ಜನ್ಮವಾಗಿದೆಯೋ, ಅದು ಯಾವ ಕರ್ಮದಿಂದ ಪ್ರಾರಂಭವಾಗುವುದೋ ಅದು ಪ್ರಾರಬ್ಧ ಕರ್ಮ, ಜೀವಿಯು ಬದುಕಿರುವವರೆಗೆ ಮಾಡುವ ಕರ್ಮವೇ ಆಗಾಮಿ ಕರ್ಮ.
ಎಲ್ಲ ಹಿಂದೂ ತತ್ವಗಳು ಹಾಗೂ ದರ್ಶನಗಳು ಕರ್ಮ ಸಿದ್ದಂತವನ್ನು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಪ್ಪಿಕೊಂಡಿದೆ. " ಅವಶ್ಯಮನು ಭೋಕ್ತವ್ಯಮ್ ಕೃತಕೃತ್ಯ ಶುಭಾಶುಭಂ " ಎನ್ನುವುದೇ ಕರ್ಮ ಸಿದ್ದಾಂತ. ಕರ್ಮ ಸಿದ್ದಾಂತದ ಪ್ರಕಾರ, ಜೀವಿಯು ಒಂದೇ ಜನ್ಮದಲ್ಲಿ ಮಾಡಿದ ಎಲ್ಲಾ ಕರ್ಮಗಳನ್ನು ಅನುಭವಿಸುವುದಕ್ಕೆ ಅಥವಾ ಕರ್ಮ ಮುಕ್ತನಾಗುವುದಕ್ಕೆ ಸಾಧ್ಯ ವಿಲ್ಲದ ಕಾರಣ ಪುನರ್ಜನ್ಮವನ್ನು ಪಡೆಯುತ್ತಾನೆ. ಎಲ್ಲಿಯವರೆವಿಗೆ ಜೀವಿಗೆ ಆತ್ಮಜ್ಞಾನವಾಗುವುದಿಲ್ಲವೋ ಅಲ್ಲಿಯವರೆವಿಗೂ ಈ ಹುಟ್ಟು ಸಾವಿನ ಚಕ್ರದಿಂದ ಮುಕ್ತನಾಗಳು ಸಾಧ್ಯವಿಲ್ಲ. ಹುಟ್ಟಿದ ಪ್ರತಿ ಜೀವಿಯೂ ಮೋಕ್ಷವನ್ನು ಪಡೆಯಲೆಬೇಕು, ಆತ್ಮಜ್ಞಾನದಿಂದಲೇ ಸಂಚಿತಕರ್ಮ್ ಕ್ಷವಾಗಳು ಸಾಧ್ಯ, ಇದರಿಂದ ಆಗಾಮಿ ಕರ್ಮಕ್ಕೆ ಅವಕಾಶ ಇರುವುದಿಲ್ಲ, ಹೇಗೆ ಒಣ ಮರವು ಚಿಗುರಲು ಸಾಧ್ಯವಿಲ್ಲವೋ ಹಾಗೆ ಕರ್ಮ ಬಂಧನದಿಂದ ಮುಕ್ತವಾಗುತ್ತದೆ, ಆಗಾಮಿ ಕರ್ಮವು ಕ್ಷವಾದಾಗ ಪ್ರಾರಬ್ಧ ಕರ್ಮವು ಮೊಳಕೆ ಒಡೆಯಲು ಅವಕಾಶ ಇರುವುದಿಲ್ಲ
ಕರ್ಮಸಿದ್ದಾಂತದ ಪ್ರಕಾರ ಯಾವುದೇ ಜನ್ಮದಲ್ಲಿ ಮಾಡಿದ ಕರ್ಮವು ಸೇರುತ್ತಾಹೋಗಿ ಸಂಚಿತವಾಗುತ್ತದೆ, ಅದು ಫಲವನ್ನು ಕೊಡಲು ಪ್ರಾರಂಭವಾಗುವುದೇ ಪ್ರಾರಬ್ಧ ಕರ್ಮ, ಇದೇ ಪುನರ್ಜನ್ಮಕ್ಕೂ ಕಾರಣವಾಗುತ್ತದೆ. ಪತಂಜಲಿ(ಕ್ರಿ.ಪೂ 200) ಯೋಗ ಸೂತ್ರದ ಮೇಲಿನ ವ್ಯಾಖ್ಯಾನ "ವ್ಯಾಸಭಾಷ್ಯ" ದ ಪ್ರಕಾರ ಅನೇಕ ಕರ್ಮಗಳ ಸಂಚಿತದಲ್ಲಿ ಯಾವ ಕರ್ಮವನ್ನು ಅನುಭವಿಸುವುದಕ್ಕೆ ಜನ್ಮ ಪಡೆದಿರುತ್ತಾನೋ, ಸಂಬಂದಿಸಿದ ಕರ್ಮ ಮಾತ್ರ ಪ್ರಧಾನವಾಗಿ ಉಳಿದ ಕರ್ಮಗಳು ಗೌಣವಾಗುತ್ತವೆ, ಈ ಪ್ರಾರಬ್ಧವೇ ಹುಟ್ಟಬೇಕಾದ ಜಾತಿ( ಮನುಷ್ಯ, ಕ್ರಿಮಿ, ಕೀಟ ) ಜನ್ಮಕ್ಕೆ ತಕ್ಕಂತೆ ಆಯುಷ್ಯ, ಭೋಗ ಭಾಗ್ಯಗಳನ್ನು ನಿರ್ಧರಿಸುತ್ತದೆ.
ಕರ್ಮ ಸಿದ್ಧಾಂತದ ಪ್ರಕಾರ, ಪುನರ್ಜನ್ಮದ ನಂಬಿಕೆಯು ಹಿಂದೂ ಧರ್ಮದಲ್ಲಸ್ಟೇ ಅಲ್ಲದೆ ಜೈನ, ಬೌದ್ಧ, ಸಿಖ್ ಧರ್ಮದಲ್ಲೂ ಕಂಡು ಬರುತ್ತದೆ. ಮಾಡಿದ ಕರ್ಮಕ್ಕೆ ಅನುಸಾರವಾಗಿ ಜನ್ಮ ಪಡೆದು ಅದನ್ನು ಅನುಭವಿಸಿಯೇ ತೀರಬೇಕು, ಜೀ ವಿತ ಕಾಲದಲ್ಲಿ ಮಾಡುವ ಕೆಲಸವೆಲ್ಲಾ ಆಗಾಮಿ ಕರ್ಮಗಳೇ, ಇವುಗಳ ಜನ್ಮಾಂತರದ ಮೊತ್ತವೇ ಸಂಚಿತ ಕರ್ಮ. ಈ ಸಂಚಿತ ಕ್ರಮದಲ್ಲಿ ಆಯಾ ಜನ್ಮಕ್ಕೆ ಅನುಸಾರವಾಗಿ ಜೀವಿಯ ಜನ್ಮವು ಯಾವ ಕರ್ಮವನ್ನು ಅನುಭವಿಸಲು ಪ್ರಾರಂಭವಾಗುತ್ತದೆಯೋ ಅದೇ ಪ್ರಾರಬ್ಧಕರ್ಮ. ಜೀವನದಲ್ಲಿ ಕಾಣದೆ ಬರುವುದೇ ಅದೃಷ್ಠ, ಏಳುಬೀಳುಗಳು ಕರ್ಮನುಸಾರವಾಗಿರುತ್ತದೆ, ಇದಕ್ಕೂ ಜನ್ಮಾಂತರದ ಮಾಡಿದ ಕರ್ಮವೇ ಕಾರಣವಾಗುತ್ತದೆ. ಯಾವ ಜನ್ಮದಲ್ಲಿ ಅನುಭವಿಸುವ ಯೋಗವಿದೆಯೋ ಆ ಜನ್ಮದಲ್ಲಿಯೇ ಅದೃಷ್ಠ ಫಲವನ್ನು ಕೊಡುತ್ತದೆ.
ಕರ್ಮಗಳಲ್ಲಿ ನಿಷಿದ್ಧ ಕರ್ಮ ಮತ್ತು ವಿಹಿತ ಕರ್ಮ ಎಂಬ ವಿಭಾಗಗಳಿವೆ, ವೇದದಲ್ಲಿ ವಿಧಿಸಿರುವಂತೆ ಪಾಪಕರ್ಮ ಅಥವಾ ಯಾವುದನ್ನು ಮಾಡಬಾರದು ಎಂದು ನಿಷೇಧಿಸಿದೆಯೋ ಅದು ನಿಷಿದ್ಧ ಕರ್ಮ, ಯಾವುದನ್ನು ಮಾಡಲೇಬೇಕು ಎಂದು ವಿಧಿಸಿದೆಯೋ ಅದು ವಿಹಿತ ಕರ್ಮ, ಮುಂದುವರಿದಂತೆ ಕರ್ಮದಲ್ಲಿ ಕಾಮ್ಯಕರ್ಮ, ನಿತ್ಯಕರ್ಮ, ನೈಮಿತ್ತಿಕ ಕರ್ಮ ಎಂಬ ವಿಭಾಗವಿದ್ದು, ಜೀವಿಯು ತಾನು ಬಯಸಿದ ಆಸೆ ಆಕಾಂಕ್ಷೆ ಗಳನ್ನು ಈಡೇರಿಸಿ ಕೊಳ್ಳಲು ಮನುಷ್ಯಪ್ರಯತ್ನದಿಂದ ಸಾಧ್ಯವಿಲ್ಲದಾಗ ದೈವಸಹಾಯ ಪಡೆಯುವುಡ್ಕ್ಕಾಗಿ ಮಾಡುವ ಕರ್ಮಗಳು ಕಾಮ್ಯ ಕರ್ಮಗಳಾಗುತ್ತವೆ. ಉ ದಾ:- ಪುತ್ರ ಕಾಮೇಷ್ಠಿ ಯಾಗ,ಇನ್ನು ಕೆಲವು ಯಜ್ಞ ಯಾಗದಿಗಳು, ವ್ರತ ನಿಯಮಗಳು, ಹರಿಕಥೆ, ದೇವರಿಗರ್ಪಿಸುವ ಸಂಗೀತ, ನಾಟ್ಯಸೇವೆ ಮುಂತಾದುವು.
ದೈನಂದಿನ ಬದುಕಿನಲ್ಲಿ ಮಾಡಲೇ ಬೇಕಾ ದ ಕರ್ಮಗಳು ನಿತ್ಯಕರ್ಮಗಳು, ದೇವತಾರ್ಚನೆ, ಮಂತ್ರಜಪ, ನಾಮಜಪ, ಸಂಧ್ಯಾವಂದನ , ಅಗ್ನಿಹೋತ್ರ ಇತ್ಯಾದಿಗಳು.
ಕೆಲವು ಸಂದರ್ಭಗಳನ್ನು ಅನುಸರಿಸಿ ಮಾಡಲೇಬೇಕಾದ ಕರ್ಮಗಳು ನೈಮಿತ್ತಿಕ ಕರ್ಮವಾಗುತ್ತದೆ, ಮೃತಕಾಲ, ಶ್ರಾದ್ಧಾಕಾಲ, ಗ್ರಹಣಕಾಲದಲ್ಲಿ ಅನುಸರಿಸಬೇಕಾದ ವಿಧಿಗಳು ನೈಮಿತ್ತಿಕ ವಾಗುತ್ತದೆ.
ಕರ್ಮಗಳನ್ನು ಅವುಗಳ ಗುಣಗಳಿಗೆ ತಕ್ಕಂತೆ ಸತ್ವಕರ್ಮ, ರಾಜಸಿಕ ಕರ್ಮ, ತಾಮಸಿಕ ಕರ್ಮ ಎಂದು ವಿಂಗಡಿಸಬಹುದು. ಸ್ವಾರ್ಥಇಲ್ಲದ , ಪರಾರ್ಥಕ್ಕಾಗಿ ಲೋಕೋದ್ಧಾರಕ್ಕಾಗಿ ಮಾಡುವ ಕರ್ಮಗಳು ಸಾತ್ವಿಕ ಕರ್ಮ. ಸ್ವಾರ್ಥಕ್ಕಾಗಿ ಮಾಡುವ ಕರ್ಮ ರಾಜಸಿಕ ಕರ್ಮ. ಲೋಕಕಂಟಕರಾಗಿ ಮಾಡುವ ನಿಷಿದ್ಧ ಕರ್ಮ ಗಳೇ ತಾಮಸಿಕ ಕರ್ಮ.
" ಮಾಡಿದ್ದು ಣ್ಣೋ ಮಾರಾಯ" ಎಂಬಂತೆ ಒಳ್ಳೆಯ ಅಥವಾ ಕೆಟ್ಟ ಕರ್ಮಗಳಿಗನುಸಾರವಾಗಿ ಅದರ ಫಲವನ್ನು ಅನುಭವಿಸಲೀ ಬೇಕು, ಇದನ್ನು ಕರ್ಮ ವಿಪಾಕ ಎನ್ನುತ್ತಾರೆ. ಜೀವನ್ಮುಕ್ತಿಗಾಗಿ ಮಾಡಬೇಕಾದ ಕರ್ಮದ ವಿವರ " "ಕರ್ಮಯೋಗ" " ಕರ್ಮಮಾರ್ಗ" ಮುಂತಾಡುವುಗಳಲ್ಲಿ ವಿಷದ ವಾಗಿ ವಿವರಿಸಿದ್ದಾರೆ.
ಆತ್ಮನೊಬ್ಬನೇ ಅಮರ, ದೇವನ ಸೃಷ್ಟಿಯಲ್ಲಿ ಪ್ರತಿಯೊಂದು ಕರ್ಮಸಿದ್ದಾಂತಕ್ಕೆ ಅನುಗುಣವಾಗಿಯೇ ಕರ್ಮಗಳನ್ನು ಅನುಭವಿಸಬೇಕು, ದೈವವೇ ಇದರಿಂದ ಹೊರತಾಗಿಲ್ಲ, ರಾಮಾವತಾರ, ಕೃಷ್ಣಾವತಾರಗಳು ಇದಕ್ಕೆ ನಿದರ್ಶನವಾಗುತ್ತವೆ.
✍ ಡಾ. ಶೈಲಜಾ ರಮೇಶ್