Saturday, 31 March 2018

ಬಲಹೀನ ಗ್ರಹಗಳು ಹಾಗೂ ಪರಿಹಾರಗಳು.. ಭಾಗ - 7

                              ಹರಿಃ ಓಂ
                     ಶ್ರೀ ಗಣೇಶಾಯ ನಮಃ
                      ಶ್ರೀ ಗುರುಭ್ಯೋನಮಃ

ಬಲಹೀನ ಗ್ರಹಗಳು  ಹಾಗೂ  ಪರಿಹಾರಗಳು  ಭಾಗ - 7,

          ಶನಿ   ಗ್ರಹ  :---
Picture source: internet/social media

 
           ಕಳವಳ,  ಆಂದೋಲನೆ,  ಒತ್ತಡಗಳನ್ನು ನಿಬಾಯಿಸುವಲ್ಲಿ   ಅನರ್ಹತೆ,  ಸರ್ಕಾರ  ಅಥವ ಇತರೆ  ಸಂಸ್ಥೆಗಳಿಂದ  ಆರ್ಥಿಕ  ತೊಂದರೆಗಳಿಗೆ ಸಿಲುಕುವುದು, ಆಲಸಿಕೆ, ನಿದಾನ,  ನಿರಾಸೆ,  ನಿರುತ್ಸಾಹ,  ನರ  ಮತ್ತು  ಮೂಳೆಗಳ ದುರ್ಬಲತೆ,  ಸಾಂಕ್ರಾಮಿಕ  ರೋಗಗಳಿಗೆ ತುತ್ತಾಗುವಿಕೆ,  ಜ್ವರ, ಕುಷ್ಟ,  ಕಾಮಾಲೆ,  ಕಿವುಡುತನ,  ದಡಾರ,  ಮೂರ್ಛೆ,  ಕ್ಯಾನ್ಸರ್(ಅರ್ಬುದ)  ಪೆರಾಲಿಸೀಸ್.  ಇತ್ಯಾದಿಗಳಿಂದ ಬಾದಿತರು,  ವಿದ್ಯಾಭಂಗ,  ಕುಟುಂಬದಿಂದ  ದೂರ ಹೋಗುವಿಕೆ,
ನರಗಳದೌರ್ಬಲ್ಯತೆ  ,ಕೀಲುಗಳನೋವು,  ಹೊಟ್ಟೆಯ  ತೊಂದರೆಗಳು,  ದೀರ್ಘಕಾಲಿಕ ಕಾಯಿಲೆಗಳಾದ   ಪೆರಾಲಿಸಿಸ್,  ಮೂತ್ರಕೋಶದ ವೈಪಲ್ಯತೆ,  ಇತ್ಯಾದಿಗಳಿಂದ   ಬಾಧಿತರು,  ಅಗ್ನಿ ಮತ್ತು   ಇತರ   ಅಪಘಾತಗಳಿಂದ   ಮನೆಗೆ ಅಪಾಯ,  ರಾತ್ರಿ  ಕುರುಡು,  ಕಾಲುಗಳಲ್ಲಿ ನೋವು,  ಕೂದಲು  ಉದರುವಿಕೆ,  ಸರ್ಕಾರದಿಂದ,  ಅಧಿಕಾರಿಗಳಿಂದ   ಅಥವ   ನ್ಯಾಯಾಲಯಗಳಿಂದ ಅನಿರೀಕ್ಷಿತ  ತೊಂದರೆಗಳು,  ಮದ್ಯ ವ್ಯಸನಿ   ಮತ್ತು ಪತ್ನಿಗೆ ತೀರಾ ಅನಾರೋಗ್ಯ, ಹಳೆಯ  ಮನೆಯನ್ನು ಅಥವ  ಯಂತ್ರಗಳನ್ನು  ಕೊಳ್ಳುವಿಕೆ. ಪಶುಗಳ ನಷ್ಟ,  ವ್ಯಾಪಾರ  ವ್ಯವಹಾರಗಳಲ್ ಲಿ ಅನಿರೀಕ್ಷಿತ ತೊಡಕುಗಳು   ತೀವ ್ರಪ್ರತೀಕಾರದ ಮನೋಭಾವ,  ಶನಿಯು  ೫  ಮತ್ತು  ೮ನೇ ಸ್ಥಾನಗಳಲ್ಲಿ   ಕಲುಶಿತನಾಗಿದ್ದರ  ೆ ಮಕ್ಕಳು ಹೇಳಿದ ಮಾತು  ಕೇಳದೆ  ತಮ್ಮ  ದಾರಿಯಲ್ಲಿ ಸಾಗುತ್ತಾರೆ,  ಶನಿಯು  ೨  ಅಥವ  ೭ರಲ್ಲಿ  ಕಲುಶಿತನಾಗಿದ್ದರೆ ಪತ್ನಿ/ಪತಿಯರಲ್ಲಿ  ಸಾಮರಸ್ಯದ  ಕೊರತೆ ಉಂಟಾಗುತ್ತದೆ.  ಶನಿಯು  ೨,೫,೭,೮ ರಲ್ಲಿ  ಬಲಹೀನನಾಗುತ್ತಾನೆ.

ದ್ವಾದಶ ಭಾವಗಳಲ್ಲಿ ಸ್ಥಿತನಾದ  ಶನಿಯ  ಶುಭಾಶುಭ ಫಲಗಳು :--

          ಪ್ರಥಮ ಭಾವ :--

          ಪ್ರಥಮ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು  ಧೀರ್ಘಆಯು,  ಬಲಶಾಲಿ, ಸತ್ಯನಿಷ್ಠ, ವಿದ್ವಾಂಸ, ನಿರ್ಭೀತ, ನ್ಯಾಯಪ್ರಿಯ, ಧನವಂತ,  ರಾಜನೀತಿಯಲ್ಲಿ  ಪರಿಣಿತ, ಭಾಗ್ಯವೃದ್ಧಿಗಾಗಿ ಪರಿಶ್ರಮ ವಹಿಸುವವ, ಶತ್ರುಗಳನ್ನು  ಜಯಿಸುವವ, ಯಾತ್ರೆಗಳಿಂದ  ಲಾಭ.
        
          ಪ್ರಥಮ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ದರಿದ್ರನು, ಆಲಸಿ,  ದುಃಖಿ, ಅನಾರೋಗ್ಯದಿಂದ  ಪೀಡಿತ, ಕೀಲುಗಳ ನೋವು  , ಮಲಬದ್ಧತೆ,  ದಂತರೋಗ ಹಾಗೂ  ನೇತ್ರ ರೋಗದಿಂದ  ಭಾದಿತ, ಪಿತ್ರಾರ್ಜಿತ ಧನದಿಂದಲೂ  ವಂಚಿತ, ಮಾದಕವಸ್ತುಗಳ ವ್ಯಸನಿ, ಸಾಮಾನ್ಯ ಮಟ್ಟದ  ದಾಂಪತ್ಯ ಹಾಗೂ  ಸಂತಾನದಿಂದ ವ್ಯಸನಿ.

          ದ್ವಿತೀಯ ಭಾವ :--
         
          ದ್ವಿತೀಯ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಭಾಗ್ಯಶಾಲಿ, ಸಿರಿವಂತರು, ಸತ್ಯವಾದಿ,  ಪರೋಪಕಾರಿ, ಗುರುಭಕ್ತ,  ನ್ಯಾಯವಾದಿ, ತಾಯ್ತನ್ಡೆಯರ ಸಂಪೂರ್ಣ ಪ್ರೀತಿ ಪಡೆದವ, ವ್ಯಾಪಾರ ದಲ್ಲೂ ಉನ್ನತಿ, ಪರಿಶ್ರಮಿ.
         
          ದ್ವಿತೀಯ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು  ಸಂದೇಹ ಪ್ರವೃತ್ತಿ ಯವ, ಅಪೂರ್ಣ ವಿದ್ಯೆ, ಅಧಿಕ ಪರಿಶ್ರಮ ವಹಿಸಿದರೂ  ಪೂರ್ಣ ಲಾಭ ಸಿಗುವುದಿಲ್ಲ, ಧನಹಾನಿ.

          ತೃತೀಯಭಾವ :--
         
          ತೃತೀಯ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧೀರ್ಘಆಯು,  ಧಾರ್ಮಿಕ ಪ್ರವೃತ್ತಿ ಯವ, ಸತ್ಯವಾದಿ,  ಧನವಂತ,  ಪ್ರಾಮಾಣಿಕ,  ಪರಿಶ್ರಮಿ,  ನ್ಯಾಯಪ್ರಿಯ, ಸಭ್ಯಸ್ಥ,  ಸಜ್ಜನವ್ಯಕ್ತಿ, ವಿದ್ಯಾವಂತ,  ವೈದ್ಯಕೀಯ ಹಾಗೂ  ರಾಜನೀತಿ ಯ  ಕ್ಷೇತ್ರದಲ್ಲಿ ಸಫಲತೆಯನ್ನು  ಪಡೆಯುವವ, ಸಹನಶೀಲ,  ಸಹೋದರರಿಗೆ  ಶುಭ, ಅವರಿಂದ  ಅನೇಕ ಪ್ರಕಾರದ ಸಹಕಾರ  ಪಡೆಯುತ್ತಾನೆ.
         
          ತೃತೀಯ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಭಾಗ್ಯಹೀನ, ಚಾರಿತ್ರ್ಯಹೀನ,  ಜಗಳಗಂಟಿ,  ಅಲ್ಪಾಯು, ರೋಗಿ, ಕುರೂಪಿ,  ಸಹೋದರರಿಗೆ ಅನಿಷ್ಟ,  ಯಾತ್ರೆಗಳಲ್ಲಿ ನಷ್ಟ,  ದುಃಖಿತ.

          ಚತುರ್ಥ ಭಾವ  :--
         
          ಚತುರ್ಥ  ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಸ್ವಂತ ಮನೆ, ವಾಹನ , ಸೇವಕರುಳ್ಳವನಾಗಿರುತ್ತಾನೆ,  ಭಾಗ್ಯವಂತ,  ಧನವಂತ, ದಾನವಂತ,  ಶನಿಯು 2, 7, 11, ನೇ  ಅಧಿಪತಿಯರೊಂದಿಗೆ  ಶುಭರೂಪದಲ್ಲಿ  ಸ್ಥಿತನಿದ್ದರೆ,  ಪಿತ್ರಾರ್ಜಿತ ಸಂಪತ್ತು  ಪ್ರಾಪ್ತಿಯಾಗುತ್ತೆ,  ವಿದೇಶಯಾತ್ರೆ ಯೋಗವಿದ್ದು ಯಶಸ್ಸು  ದೊರೆಯುತ್ತದೆ,  ಎಲ್ಲರಿಗೂ  ಪ್ರಿಯನಾದವನಾಗಿ  ಎಲ್ಲರಿಂದ  ಸಹಕಾರ  ಪಡೆಯುತ್ತಾನೆ.
         
         ಚತುರ್ಥ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಶಿಕ್ಷಣ ಅಪೂರ್ಣ,  ಜೀವನ ನಿರ್ವಹಣೆ ಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ,  ಪಿತ್ರಾರ್ಜಿತ ಸ್ಥಾನದಲ್ಲಿ  ವಾಸಮಾಡುವುದು ಒಳ್ಳೆಯದಲ್ಲ  ಅದರಿಂದ  ದುಃಖ,  ಸ್ವಂತ ಮನೆ  ನಿರ್ಮಿಸುವುದರಿಂದ  ತಾಯಿಗೆ  ಅಶುಭ,  ತಾಯಿ  ಧೀರ್ಘ ತಮ  ಕಾಯಿಲೆಯಿಂದ  ನರಳುತ್ತಾರೆ.
  
         ಪಂಚಮಭಾವ :--
         
         ಪಂಚಮಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧಾರ್ಮಿಕ,  ನ್ಯಾಯವಾದಿ, ಪರೋಪಕಾರಿ,  ಸಂಯಮಿ,  ಸಭ್ಯ,  ಸನ್ಮಾನಿತ, ಮಾತೇ  ದುರ್ಗೆಯ ಭಕ್ತ,  ಉತ್ತಮ  ಲೇಖಕ,  ಹೊಸ ಹೊಸ  ಆವಿಷ್ಕಾರ ಗಳಲ್ಲಿ  ಆಸಕ್ತಿ,  ಹಿರಿಯರ  ಸಂಗದಲ್ಲಿರಲು  ಆಸೆ, ಅವರ  ಅನುಭವದ ಜ್ಞಾನವನ್ನು  ಪಡೆಯಲು  ಉತ್ಸುಕನಾಗುತ್ತಾನೆ,  ಚಿತ್ರರಂಗ ಹಾಗೂ ಛಾಯಾಚಿತ್ರ ಕ್ಷೇತ್ರದಲ್ಲಿ  ಸಫಲನಾಗುತ್ತಾನೆ.
         
          ಪಂಚಮಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಜೂಜು,  ಸಟ್ಟಾ,  ಲಾಟರಿ,  ಅಭಿನಯ,  ಚಲನಚಿತ್ರರಂಗ,  ಮುಂತಾದ ಕ್ಷೇತ್ರದಲ್ಲಿ  ಹಾನಿಯನ್ನು ಹೊಂದುತ್ತಾನೆ,  ಪ್ರೇಮಪ್ರಕರಣಗಳು ಅಸಫಲವಾಗುತ್ತವೆ  ಅಲ್ಪ ಸಂತಾನ,  ಅನ್ಯ ಸ್ತ್ರೀ ಸಂಗ,  ವಿಶೇಷವಾಗಿ ವಿಧವೆಯರೊಡನೆ ವ್ಯಭಿಚಾರ,  ವಿರೋಧಿ ಗಳಿಂದ  ಹಾನಿ.

          ಷಷ್ಟ ಭಾವ  :---
         
          ಷಷ್ಟ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧನವಂತ,  ಕರ್ಮಠ,  ಕಾನೂನಿನಲ್ಲಿ ಪರಿಣಿತ,  ರಾಜಕೀಯದಲ್ಲಿ  ಮುಂದಾಳು,  ಜೀವನದಲ್ಲಿ  ಸಫಲತೆ ಯನ್ನು ಪಡೆಯುವವ, ಸರ್ಕಾರಿ ನೌಕರಿಯಲ್ಲಿ  ಉನ್ನತ ಪದವಿ,  ಯಾತ್ರೆಗಳಲ್ಲಿ ಲಾಭ, ಭೌತಿಕ ಸುಖ ಸಾಧನಗಳು  ಹಾಗೂ ಸಂತಾನ  ಸುಖವನ್ನು  ಪಡೆಯುವವನಾಗುತ್ತಾನೆ.
         
          ಷಷ್ಟಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು  ಕೋರ್ಟ್ ಕೇಸ್ ಗಳಲ್ಲಿ  ಸೋಲು,  ಧನ ಹಾಗೂ  ಯಶಸ್ಸಿನ  ಹಾನಿ, ನೌಕರಿ. ಮಾಡುವುದೂ ಕೂಡ  ಹಾನಿ, ಕಾನೂನು ರೀತ್ಯಾ  ಮನೆಯನ್ನು  ನಿರ್ಮಿಸಿದರೆ  ತೊಂದರೆ ಇಲ್ಲ,  ಸೋದರಮಾವ ಹಾಗೂ  ಆತನ ಪತ್ನಿ,  ತಾಯಿ ಹಾಗೂ  ಆಕೆಯ  ಸೋದರಿಗೆ  ಅಶುಭ,  ಸಂತಾನ ಹಾಗೂ  ಕೌಟುಂಬಿಕ ಜೀವನ  ಸಾಧಾರಣ.
 
          ಸಪ್ತಮ ಭಾವ  :--
         
          ಸಪ್ತಮಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಭಾಗ್ಯಶಾಲಿ,  ಶ್ರೀಮಂತ, ಆದರ್ಶ ವಾದಿ,  ಸತ್ಯವಾದಿ,  ಒಳ್ಳೆಯ  ರಾಜಕೀಯ  ಮುಖಂಡ,  ನ್ಯಾಯಪ್ರಿಯ,  ಸ್ವಾಭಿಮಾನಿ,  ಸುಖಿ,  ವಿವಾಹ ಬಿಳಂಬ,  ಸುಂದರ , ಸುಶೀಲ,  ಸುಸಂಸ್ಕೃತ ಹಾಗೂ ವಿಶೇಷ ಕಾಳಜಿಯುಕ್ತ ಪತ್ನಿ.
         
          ಸಪ್ತಮಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಹಣವನ್ನು. ದುರುಪಯೋಗ ಮಾಡುವವ, ಧೂರ್ತ, ಸಂಗಾತಿಯ ವಿಷಯದಲ್ಲಿ  ಅಪ್ರಾಮಾಣಿಕ,  ದುರ್ಗುಣಗಳಿಂದ  ಕೂಡಿದವ  ಅಲ್ಪ ಸಂತಾನ.

          ಅಷ್ಟಮಭಾವ  :--
         
          ಅಷ್ಟಮಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧೀರ್ಘಆಯು,  ಸಭ್ಯ, ಧಾರ್ಮಿಕತೆ,  ಭಾಗ್ಯಶಾಲಿ, ಸ್ವಾಭಿಮಾನಿ, ರಾಜನೀತಿಜ್ಞ,  ಶ್ರೇಷ್ಠ ತತ್ವಜ್ಞಾನಿ,  ಗುಣವಂತ, ದಯಾಳು,  ಶನಿಗೆ  ಸಂಬಂಧ ಪಟ್ಟ  ವ್ಯಾಪಾರ ದಿಂದ  ಅತ್ಯಧಿಕ ಲಾಭ,ಸುಖ ದಾಂಪತ್ಯ.
         
          ಅಷ್ಟಮ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು  ಭಾಗ್ಯಹೀನ,  ಧನಹೀನ,  ಚಾರಿತ್ರ್ಯ ಹೀನ, ಮೊಸಗಾರ,  ದುಷ್ಟ, ಎಲ್ಲರಿಂದಲೂ  ಉಪೇಕ್ಷೆ ಗೋಳಪಟ್ಟವನು,  ವ್ಯಾಪಾರ ದಲ್ಲಿ  ವಿಫಲ,  ಶನಿಯು ಎಷ್ಟು ಗ್ರಹಗಳೊಡನೆ ಸ್ಥಿತನಿರುತ್ತಾನೋ  ಅಷ್ಟು ಸದಸ್ಯರ  ಮರಣ  ಸಂಭವ,  ಇವರ  ವೈವಾಹಿಕ  ಜೀವನ  ದುಃಖಮಯ.

          ನವಮಭಾವ :---
          
          ನವಮಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಜನ್ಮದಿಂದಲೇ  ಭಾಗ್ಯವಂತ, ದಾರ್ಶನಿಕ,  ವಿಜ್ಞಾನಿ,  ಮಾತೇ ದುರ್ಗೆಯ ಭಕ್ತ,  ಜ್ಯೋತಿಷ್ಯ ಶಾಸ್ತ್ರದ ಲ್ಲಿ  ಪಂಡಿತ,  ಧಾರ್ಮಿಕ ವಿಚಾರಧಾರೆಯುಳ್ಳವ,  ಭವ್ಯ ಮನೆ,  ವಾಹನ  ಸೇವಕರುಳ್ಳವ,  ವಿದೇಶ ಯಾತ್ರಾಯೋಗ,  ಉತ್ತಮ ತಂದೆತಾಯಿಯರನ್ನು  ಪಡೆದವನಾಗಿರುತ್ತಾನೆ.
         
          ನವಮ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು  ಅಪೂರ್ಣ ವಿದ್ಯೆ,  ಭಾಗ್ಯಹೀನ, ಅಧರ್ಮಿ, ಅಪ್ರಾಮಾಣಿಕ ,  ಲೋಭಿ, ಕಲಹಪ್ರಿಯ, ಕೃಶ ಕಾಯ, ಯಾತ್ರೆಗಳಲ್ಲಿ  ನಷ್ಟ.
   
           ದಶಮಭಾವ :---
         
         ದಶಮ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಬಲಶಾಲಿ, ಗುಣಶಾಲಿ, ಆಯುಷ್ಯವಂತ, ಧಾರ್ಮಿಕ, ಎಲ್ಲಾ ವಿಷಯದಲ್ಲೂ  ಸಫಲತೆಯನ್ನು  ಪಡೆಯುವವ,  ಉಚ್ಛಮಟ್ಟದ  ರಾಜನೀತಿಜ್ಞ,  ಸಫಲ ಯಾತ್ರಾಫಲ, ನೀತಿವಂತ  ಹೆತ್ತವರು,  ಮಧುರ  ದಾಂಪತ್ಯ,
         
          ದಶಮ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ವ್ಯಾಪಾರ ದಲ್ಲಿ  ಹಾನಿ,  ರೋಗಪೀಡಿತ  ತಾಯಿ,  ನೌಕರಿ ಯಿಂದ  ಲಾಭ, ಮಾದಕ ವಸ್ತುಗಳ ವ್ಯಸನಿ,  ದುಃಖಮಯ ದಾಂಪತ್ಯ.

          ಏಕಾದಶ ಭಾವ  :---
         
          ಏಕಾದಶ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧೀರ್ಘಆಯು,  ಭಾಗ್ಯಶಾಲಿ, ಅಪಾರ ಧನ - ಸಂಪತ್ತಿನ  ಒಡೆಯ,  ಪಿತ್ರಾರ್ಜಿತ  ಆಸ್ತಿಯನ್ನು ಹೊಂದಿರುವವ,  ವ್ಯಾಪಾರದಲ್ಲಿ  ನಿರಂತರ ಪ್ರಗತಿ,  ಕುಟುಂಬದಲ್ಲಿ  ಗೌರವಾನ್ವಿತ, ಹಾಗೂ  ಗೌರವಾನ್ವಿತ ಕುಟುಂಬದವ,  ಶ್ರೇಷ್ಠ ಮಿತ್ರರು,  ಸುಖ ಸುಂದರ  ದಾಂಪತ್ಯ.
         
          ಏಕಾದಶಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ನಿರ್ಧನ, ಅಲ್ಪಾಯು, ವಿದ್ಯೆಯಿಲ್ಲದವ, ಕುಟುಂಬದವರೊಡನೆ ಸಾಮರಸ್ಯ ವಿಲ್ಲದವ, ಸಂಸಾರ ಸುಖವಿಲ್ಲ ಹಾಗೂ ಸ್ನೇಹಿತರಿಂದ  ತೊಂದರೆಗಳು.

          ದ್ವಾದಶ ಭಾವ  :--
         
          ದ್ವಾದಶ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು  ವಿದ್ವಾಂಸ, ದಯೆಯುಳ್ಳವ,  ಭಾಗ್ಯವಂತ, ಪ್ರಸಿದ್ಧಿ ಪಡೆಯುವವ,  ಅಂತಾರಾಷ್ಟ್ರೀಯ ಮಟ್ಟದಲ್ಲಿ  ವ್ಯಾಪಾರ ವ್ಯಾವಹಾರ ಇರುವವ,  ಸುಂದರ ಸುಮಧುರ  ದಾಂಪತ್ಯ.
         
          ದ್ವಾದಶ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಕೃಶಕಾಯ,  ಏಕಾಂತಪ್ರಿಯ,  ವಿರೋಧಿಗಳಿಂದ  ಪರಾಜಯ  ಹೊಂದುವವ,  ವಿದೇಶೀ ಯಾತ್ರೆಗಳಲ್ಲಿ  ಅಶುಭ,  ನಷ್ಟ,  ಅಲ್ಪ ಸಂತಾನ.

ಪರಿಹಾರ:-

1 ).ಹನುಮಂತನನ್ನು ಆರಾಧಿಸಿರಿ. 

2 ).ಆಹಾರ ಸೇವನೆ ಮುಂಚೆ ಸ್ವಲ್ಪ ಆಹಾರವನ್ನು ನಾಯಿ ಅಥವ ಕಾಗೆಗಳಿಗೆ ನೀಡಿ .

3 ). ಉದ್ದು,ಎಳ್ಳಿನ ಎಣ್ಣೆ,ಚರ್ಮ,ಬಾದಾಮಿ ಇವುಗಳನ್ನು ನಿರ್ಗತಿಕರಿಗೆ ನೀಡಿ.

4 ). ಎಮ್ಮೆಗೆ ಮೇವನ್ನು ನೀಡಿ,

5 ). ಸೂರ್ಯಾಸ್ತದ ನಂತರ ಕಪ್ಪು ಇರುವೆಗಳಿಗೆ ಧಾನ್ಯ ನೀಡಿ .

6 ). ನಡುವಿನ ಬೆರಳಿಗೆ ಕಬ್ಬಿಣದ ಸ್ಟೀಲ್ ಕುದುರೆ ಲಾಳದ ಉಂಗುರವನ್ನು ಧರಿಸಿರಿ.

7 ). ಹರಿಯುವ ನೀರಲ್ಲಿ ೬ ಬಾದಾಮಿ ೬ ಸಿಪ್ಪೆ ಸಹಿತ ತೆಂಗಿನಕಾಯಿ೬ಶನಿವಾರದ ದಿನಗಳ ಕಾಲ ಹಾಕಿರಿ.

8 ). ಮನೆಯ ಕತ್ತಲೆಯ ಕೋಣೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ೧೨ ಬಾದಾಮಿಗಳನ್ನು ಅಥವ ಜೇನುತುಪ್ಪ ಅಥವ ತಾಮ್ರವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನೆಲದಲ್ಲಿ ಹುದುಗಿಸಿರಿ.

9 ). ಮಾಂಸ,ಮೀನು ಅಥವ ಮದ್ಯವನ್ನು ದೂರವಿಡಿ.

1೦ ). ಶನಿವಾರಗಳಂದು ಉಪವಾಸವನ್ನು ಮಾಡಿ

11 ). ಆಲದಮರದ ಬುಡಕ್ಕೆ ಹಾಲನ್ನು ಹಾಕಿ ಆ ಹಸಿಯ ಮಣ್ಣನ್ನು ತಿಲಕದಂತೆ ಹಣೆಗೆ ಹಚ್ಚಿಕೊಳ್ಳಿ.

12 ). ಮಕ್ಕಳಿಗೆ ತೊಂದರೆಯ ನಿವಾರಣೆಗೆ ಕಪ್ಪು ನಾಯಿಯನ್ನು ಸಾಕಿರಿ.

13 ). ಮಣ್ಣಿನ ಕುಡಿಕೆಯಲ್ಲಿ ಎಳ್ಳಿನ ಎಣ್ಣೆಯನ್ನು ಹಾಕಿ ನದಿಯ ಅಥವ ಕೊಳದ ದಡದ ಬಳಿ ನೀರಲ್ಲಿ ಮುಳುಗುವಂತೆ ಹುದುಗಿಸಿರಿ.

೧4). ಮುಖ್ಯವಾದ ಕೆಲಸಗಳನ್ನು ರಾತ್ರಿಗಳಲ್ಲಿ ಅಥವ ಕೃಷ್ಣಪಕ್ಷದಲ್ಲಿ ಮಾಡಿರಿ.

15 ). ಬೆಳ್ಳಿಯ ಚೌಕಾಕಾರದ ತುಂಡನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಂಡಿರಿ .

16 ). ೮೦೦ಗ್ರಾಂ ಉದ್ದು ಶನಿವಾರದಿಂದ ಆರಂಭಿಸಿ ೮ ದಿನಗಳ ಕಾಲ ಹರಿಯುವ ನೀರಿಗೆ ಹಾಕಿರಿ.

17 ). ಸ್ವಲ್ಪ ಎಣ್ಣೆಯನ್ನು ೪೩ ದಿನಗಲ ಕಾಲ ನೆಲದ ಮೇಲೆ ಹಾಕುತ್ತಿರಿ. ಮದ್ಯ ವನ್ನು ಸಹ ಹಾಕಬುದು. 

18 ). ೨ನೇ ಸ್ಥಾನದಲ್ಲಿ ಅಶುಭಗ್ರಹಗಳಿದ್ದರೆ ೧೦ ಬಾದಾಮಿಗಳನ್ನು ದೇವಾಲಯಕ್ಕೆ ಕೊಟ್ಟು ಅದರಲ್ಲಿ ೫ಅನ್ನು ಮನೆಗೆ ಹಿಂದಕ್ಕೆ ತಂದು ಮನೆಯಲ್ಲಿಟ್ಟಿರಿ ಆದರೆ ಅವುಗಳನ್ನು ನೀವು ತಿನ್ನಬಾರದು.

19 ). ಒಳ್ಳೆಯ ದಾಂಪತ್ಯ ಜೀವನಕ್ಕೆ ಕಪ್ಪು ಕೊಳಲಿನಲ್ಲಿ ಜೇನನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿಬಿಡಿ.

20 ). ಸಂಪತ್ತಿಗಾಗಿ,ಗಂಗಾಜಲವನ್ನು ಹಿತ್ತಾಳೆಯ ಪಾತ್ರೆಯಲ್ಲಿ ಇಡಿರಿ.

21 ). ಮಾನಸಿಕ ಶಾಂತಿಗಾಗಿ ತಾಯಿಯ ಆರೋಗ್ಯಕಾಗಿ ಹಳೆಯ ಅಕ್ಕಿ ಅಥವ ಬೆಳ್ಳಿಯನ್ನು ಹರಿಯುವ ನೀರಲ್ಲಿ ಹಾಕಿರಿ.

22 ). ೨ನೇ ಸ್ಥಾನದಲ್ಲಿ ಶನಿಯು ಕಲುಶಿತನಾಗಿದ್ದರೆ ಬರಿಗಾಲಲ್ಲಿ ದೇವಾಲಯಕ್ಕೆ ಹೋಗಿ ಸರ್ಪಗಳಿಗೆ ಹಾಲನ್ನು ನೀಡಿರಿ.

23 ). ಏಳರಾಟದ ಶನಿಕಾಟಕ್ಕೆ ನಿವಾರಣೆಗಾಗಿ ಶನಿವಾರದ ಸಂಜೆ ಮಣ್ಣಿನ ಕುಂಡದಲ್ಲಿ ತಾಮ್ರದಲ್ಲಿ ಕೆತ್ತಿದ ಒಂದು ಜೊತೆ ಸರ್ಪ ಮತ್ತು ಕಪ್ಪು ಉದ್ದನ್ನು ಅಶ್ವತ್ತ ಮರದ ಬೇರಿನ ಬುಡದಲ್ಲಿ ಹುದುಗಿಸಿರಿ.

    ✍   ಡಾ|| B. N. ಶೈಲಜಾ ರಮೇಶ್..


Tuesday, 27 March 2018

ಬಲಹೀನ ಗ್ರಹಗಳು ಮತ್ತು ಪರಿಹಾರಗಳು ಭಾಗ - 6.

                              ಹರಿಃ ಓಂ
                        ಶ್ರೀ ಗಣೇಶಾನಮಃ
                      ಶ್ರೀ ಗುರುಭ್ಯೋನಮಃ

ಬಲಹೀನ ಗ್ರಹಗಳಿಂದಾಗುವ ತೊಂದರೆಗಳು  ಮತ್ತು  ಪರಿಹಾರಗಳು  -  ಭಾಗ , 6.

         ಶುಕ್ರ ಗ್ರಹ :--    

ಶುಕ್ರ ಗ್ರಹವು  ಜಾತಕದಲ್ಲಿ  ಬಲಹೀನವಾದಾಗ  ಉಂಟಾಗುವ  ತೊಂದರೆಗಳು  :--

         ಕುರೂಪಿ, ಕಳಾಹೀನತೆ, ಪ್ರೀತಿ ವಾತ್ಸಲ್ಯಗಳಿರುವುದಿಲ್ಲ, ಒರಟುತನ,  ನೀಚತ್ವ,  ವೈವಾಹಿಕ  ಅಥವ  ದಾಂಪತ್ಯ ಸಮಸ್ಯೆಗಳು, ಪುರುಷರಿಗೆ  ಸ್ತ್ರೀಯೊಡನೆ ವಿರಸ, ಸಂಬಂದಗಳು, ಸ್ತ್ರೀಯರಲ್ಲಿ  ಕೋಮಲತೆಯ  ಗುಣಗಳು ಇಲ್ಲದಿರುವುದು, ದೈಹಿಕ, ಮೂತ್ರಪಿಂಡ ತೊಂದರೆಗಳು,  ಅತಿಯಾದ ಲೈಂಗಿಕತೆ,  ಮಿತಿಮೀರಿದ  ತಿನ್ನುವಿಕೆ, ಕುಡಿತ, ವಯಸ್ಸಾದ ನಂತರವೂ  ಇತರ  ಹೆಂಗಸ ರೊಡನೆ ಸಂಬಂದಗಳು, ಪತ್ನಿ  ಅಥವ  ಪರಸ್ತ್ರೀಯರಿಂದ  ಸಂಪತ್ತಿನ ಹಾನಿ, ಜಾತಕರಿಗೆ  ಹೆಚ್ಚಾಗಿ  ಹೆಣ್ಣು ಸಂತಾನ, ಮಾದಕ  ದ್ರವ್ಯ  ವ್ಯಸನಿ, ತಕ್ಕ ಮಟ್ಟಿಗೆ ಸಂಪಾದನೆ  ಇದ್ದರೂ  ಸದಾ  ಸಾಲಗಾರರು, ಲೈಂಗಿಕ  ವ್ಯಾಧಿಗಳು, ತಮ್ಮ ಸ್ಥಾನ ಮಾನಗಳು, ಮತ್ತು  ಅಧಿಕಾರಿಗಳಿಂದ  ಎಂದೂ ತೃಪ್ತರಲ್ಲ, ಶುಭಸಮಾರಂಭಗಳಲ್ಲಿ  ಅನಿರೀಕ್ಷಿತ ಅಪಘಾತಗಳು, ಕಲೆಗಳಲ್ಲಿ  ಅಡಚಣೇಗಳು.

ದ್ವಾದಶ  ಭಾವದಲ್ಲಿ  ಸ್ಥಿತ   ಶುಕ್ರನ  ಶುಭಾಶುಭ  ಫಲಗಳು:--

          ಪ್ರಥಮ ಭಾವ  :---

          ಪ್ರಥಮ ಭಾವಸ್ಥಿತ  ಶುಕ್ರನು ಶುಭನಾಗಿದ್ದರೆ,  ಜಾತಕರು  ಭಾಗ್ಯಶಾಲಿ,  ಧನವಂತ,  ಬುದ್ಧಿವಂತರು, ವಿನೋದ ಪ್ರಿಯ,  ಉತ್ತಮವಾಗಿ  ವ್ಯವಹಾರ  ಮಾಡುವವರು,  ಚೂಪಾದ ಮೂಗು, ಸುರದ್ರೂಪಿಗಳು,  ತನ್ನ ಕಾರ್ಯ ಕ್ಷೇತ್ರದಲ್ಲಿ ಶ್ರೇಷ್ಠ,  ಸಾಹಿತ್ಯ ಕ್ಷೇತ್ರದಲ್ಲಿ ಬೆಳಕಿಗೆ  ಬರುವವರು,  ಉತ್ತಮ  ಆರೋಗ್ಯವಂತ, ಆರ್ಥಿಕವಾಗಿ  ಉತ್ತಮ  ಸ್ಥಿತಿಯಲ್ಲಿ ಇರುವವ, ಸ್ವಾವಲಂಬಿ,  ವೈಭವಯುಕ್ತ  ಜೀವನ, ಉತ್ತಮ  ದಾಂಪತ್ಯ.

               ಪ್ರಥಮ ಭಾವಸ್ಥಿತ  ಶುಕ್ರನು ಆಶುಭನಾಗಿದ್ದರೆ,   ಜಾತಕನು ಭಾಗ್ಯಹೀನ,  ಕುಟುಂಬದವರಿಗೆ ಕಂಟಕಪ್ರಾಯನಾಗುತ್ತಾನೆ,  ಅನಾರೋಗ್ಯ,  ದಾಂಪತ್ಯ ಜೀವನ ಉತ್ತಮವಿರುವುದಿಲ್ಲ, ರೋಗಗ್ರಸ್ತ  ಸಂಗಾತಿ ಹಾಗೂ  ತಾನೂ  ಸ್ವತಃ  ರೋಗಿಷ್ಟ.

          ದ್ವಿತೀಯ ಭಾವ  :--

               ದ್ವಿತೀಯ ಭಾವಸ್ಥಿತ  ಶುಕ್ರನು ಶುಭನಾಗಿದ್ದರೆ,  ಜಾತಕನು, ಸುಂದರಾಕಾರ,  ತಿಳುವಳಿಕೆ ಉಳ್ಳವ,  ಧನವಂತ,  ಭಾಗ್ಯಶಾಲಿ,  ಸಮಾಜ ಸೇವಕ,  ಸನ್ಮಾನಿತ,  ಉತ್ತಮ  ವಸ್ತ್ರ
ಗಳ  ಧಾರಣೆ,  ವೈಭವದ ವಿವಾಹ,  ಅಧಿಕಾರಿಗಳಿಂದ  ಪ್ರಶಂಸೆ ಗೆ  ಒಳಗಾಗುವರು, ಉತ್ತಮ  ಚಾರಿತ್ರ್ಯ ದವರು, ಸ್ನೇಹ ಪ್ರವೃತ್ತಿ,  ಶುಕ್ರನ  ಸಂಬಂಧಿತ  ವಸ್ತುಗಳ  ವ್ಯಾಪಾರವಿದ್ದರೆ  ಸಫಲನಾಗುವವ,   ಉತ್ತಮ  ಸಾಂಸಾರಿಕ  ಜೀವನ .

               ದ್ವಿತೀಯಭಾವಸ್ಥಿತ  ಶುಕ್ರನು ಆಶುಭನಾಗಿದ್ದರೆ,  ಜಾತಕರು  ಭಾಗ್ಯಹೀನ,  ಚಾರಿತ್ರ್ಯ ಹೀನ,  ಅನೈತಿಕ ಸಂಬಂಧ, ಇವರ ಕೆಟ್ಟ ಕಾರ್ಯಗಳ ಫಲವಾಗಿ  ಪತ್ನಿ ರೋಗಗ್ರಸ್ಥೆ,  ಸಂತಾನ ಸುಖವಿಲ್ಲ,  ಕಾನೂನು ಬಾಹಿರ ಕೆಲಸಗಳಲ್ಲಿ  ತೊಡಗಿರುತ್ತಾರೆ.

          ತೃತೀಯ ಭಾವ :--

         ತೃತೀಯ ಭಾವಸ್ಥಿತ  ಶುಕ್ರನು ಶುಭನಾಗಿದ್ದರೆ,  ಜಾತಕನು,   ಸರ್ವಜನಪ್ರಿಯ,  ತನ್ನ  ಸೌಂದರ್ಯ ಹಾಗೂ ಉತ್ತಮ ನಡವಳಿಕೆಯಿಂದ ಎಲ್ಲರ ಮನಸ್ಸನ್ನು  ಗೆಲ್ಲುವವರಾಗಿರುತ್ತಾರೆ,  ಉತ್ಯಮ  ವಿದ್ಯಾವಂತ,  ಆರೋಗ್ಯವಂತ, ಉದ್ದೇಶಿತ ಯಾತ್ರೆಗಳಲ್ಲಿ  ಸಫಲ, ಆನಂದಮಯ ವೈವಾಹಿಕ ಜೀವನ.

          ತೃತೀಯ ಭಾವಸ್ಥಿತ  ಶುಕ್ರನು ಆಶುಭನಾಗಿದ್ದರೆ,  ಜಾತಕನು,  ಜಗಳಗಂಟಿ, ಪತ್ನಿಯಮೇಲೆ ಅವಲಂಬಿತ,  ಅಲೆಮಾರಿ,  ಭಾಗ್ಯಹೀನ, ಕುಟುಂಬಕರಿಗೆ,  ಬಂಧುಗಳಿಗೆ,  ನೆತೆಹೊರೆಯವರಿಗೆ  ಎಲ್ಲರಿಗೂ ಕಂಟಕಪ್ರಾಯ ನಾಗಿರುವವ, ಎಲ್ಲರಿಂದಲೂ  ಅಪಮಾನಕ್ಕೆ ಒಳಗಾಗುವವ.

          ಚತುರ್ಥ ಭಾವ :--

               ಚತುರ್ಥ  ಭಾವಸ್ಥಿತ  ಶುಕ್ರನು ಶುಭನಾಗಿದ್ದರೆ,  ಜಾತಕನು, ಭಾಗ್ಯಶಾಲಿ, ಪಿತ್ರಾರ್ಜಿತ ಧನ ಸಂಪತ್ತನ್ನು ಹೊಂದಿದವನು,  ಸಕಲ ಪ್ರಕಾರದ  ಸುಖವನ್ನು  ಹೊಂದಿದವನು, ವೈಭವಯುತ  ಮನೆ, ಅನೇಕ ಕ್ಷೇತ್ರದಲ್ಲಿ ಸಫಲನು,  ಉಚ್ಚಶಿಕ್ಷಣ , ಸುಖ ಸಂತೋಷದ ವೈವಾಹಿಕ  ಜೀವನ, ತಾಯಿಗೆ ಅತ್ಯಂತ ಪ್ರಿಯನಾದವ ಹಾಗೂ  ತಾಯಿಯನ್ನು  ಆದರಿಸುವವ.
         
               ಚತುರ್ಥ ಭಾವಸ್ಥಿತ  ಶುಕ್ರನು ಆಶುಭನಾಗಿದ್ದರೆ,  ಜಾತಕನು,  ಕುಟುಂಬದವರ  ದ್ವೇಷಕ್ಕೆ  ಒಳಗಾಗುವವ,  ಸಕಲರಿಂದ ಉಪೇಕ್ಷೆ ಗೆ ಒಳಗಾಗುವನು ಹಾಗೂ ಅಪಮಾನಕ್ಕೀಡಾಗುವವನು,  ದಾಂಪತ್ಯ ದಲ್ಲಿ  ಸುಖವಿಲ್ಲ,  ಸಂತಾನದ ಸುಖದ  ಕೊರತೆ,  ಮಾದಕ ವಸ್ತುಗಳ ವ್ಯಸನಿ.

          ಪಂಚಮಭಾವ :--

          ಪಂಚಮಭಾವ ಸ್ಥಿತ  ಶುಕ್ರ  ಶುಭನಾದರೆ, ಜಾತಕನು, ಉಚ್ಚ ಶಿಕ್ಷಿತ, ಸರ್ಕಾರದಲ್ಲಿ  ಉತ್ತಮ  ಶ್ರೇಣಿಯ  ಅಧಿಕಾರವನ್ನು  ಹೊಂದಿದವರು, ಉತ್ತಮ  ಸಲಹಾಗಾರ, ಸಟ್ಟಾ- ಜೂಜು  ಇವುಗಳಿಂದ  ಲಾಭ, ಸಂಗೀತದಲ್ಲಿ  ಆಸಕ್ತಿ, ಹಾಗೂ  ಉತ್ತಮ  ಸಂಗೀತಗಾರರಾಗುತ್ತಾರೆ,    ಸಫಲ ಪ್ರೇಮ ವಿವಾಹ.

          ಪಂಚಮಭಾವ ಸ್ಥಿತ  ಶುಕ್ರ  ಆಶುಭನಾದರೆ, ಜಾತಕನು,  ಬಂಧುಗಳಿಗೆ  ಹಾನಿಕಾರಕ,  ಧನನಾಶ, ಧೂರ್ತ, ಚಾರಿತ್ರ್ಯ ಹೀನ,  ಪ್ರೇಮವಿವಾಹವಾದರೂ,  ಪರಸ್ತ್ರೀ ಯರೊಡನೆ  ಸಂಬಂಧ,  ಮೊಸಗಾರ.

          ಷಷ್ಟ ಭಾವ :---

          ಷಷ್ಟ ಭಾವಸ್ಥಿತ  ಶುಕ್ರನು  ಶುಭನಾದರೆ, ಜಾತಕನು ಪ್ರಾಣಿಗಳನ್ನು  ಸಾಕುವ  ಅಭಿರುಚಿಯನ್ನು  ಹೊಂದಿರುವವ, ಆರೋಗ್ಯವಂತ, ದಷ್ಟ - ಪುಷ್ಟ ದೇಹದವ,  ಸುಂದರ, ಧನವಂತ,  ರಾಜನೀತಿಯಲ್ಲೂ ಸಫಲತೆ  ಹೊಂದುವವ, ವಿರೋಧಿಗಳ  ಪರಾಜಯ, ಸಂತಾನ  ಸುಖ  ಹೊಂದಿರುವವನಾಗುತ್ತಾನೆ.

          ಷಷ್ಟ ಭಾವಸ್ಥಿತ ಶುಕ್ರ ನು  ಅಶುಭನಾದರೆ,  ಜಾತಕನು  ಭಾಗ್ಯಹೀನ,  ಆಲಸಿ,  ದುರ್ಬಲ  ಮಧುಮೇಹ, ಮೂತ್ರಪಿಂಡ  ಹಾಗೂ  ಚರ್ಮ ರೋಗಗಳಿಂದ  ಭಾಧಿತರು,  ಚಾರಿತ್ರ್ಯ ಹೀನ,  ಅನೇಕ ಸ್ತ್ರೀಯರೊಡನೆ  ಸಮಾಗಮ,  ಧನನಷ್ಟ,  ಬಂಧುವಿರೋಧಿ,  ನ್ಯಾಯಾಲಯದಲ್ಲಿ  ಪರಾಜಯ.

          ಸಪ್ತಮಭಾವ  :--

          ಸಪ್ತಮ ಭಾವಸ್ಥಿತ  ಶುಕ್ರನು  ಶುಭನಾಗಿದ್ದರೆ,   ಜಾತಕರು,  ಭಾಗ್ಯಶಾಲಿ, ಕುಟುಂಬದವರೆಲ್ಲರ ಪ್ರೀತಿಪಾತ್ರದವರು ಹಾಗೂ  ಕುಟುಂಬವನ್ನು ಪ್ರೀತಿಸುವವರು,  ವ್ಯಾಪಾರದಲ್ಲಿ  ಅಧಿಕಲಾಭ,  ಧನಧಾನ್ಯ ಲಾಭ, ಸುಂದರ  ಸುಖೀ  ಸಂಸಾರ, ಯಾತ್ರೆಗಳಿಂದ  ಲಾಭ.

          ಸಪ್ತಮ ಭಾವಸ್ಥಿತ ಶುಕ್ರ ನು  ಅಶುಭನಾದರೆ, ಜಾತಕರು, ಅಲ್ಪಾಯು,  ಕಮ್ಮಿ, ವಿಲಾಸ ಜೀವನ  ನಡೆಸುವವರೂ,  ಗುಪ್ತಅಂಗಗಳ  ರೋಗ,  ಧನಕ್ಕಾಗಿ  ಪತ್ನಿಯನ್ನು  ಅಶ್ರಯಿಸುವವ,  ಕಲಹಪ್ರಿಯ, ಪತ್ನಿಯೊಡನೆ  ಜಗಳ,  ಪತ್ನಿಯ ಹಣವನ್ನು  ಬೇರೆ ಸ್ತ್ರೀಯರ ಸುಖಕ್ಕಾಗಿ  ಖರ್ಚು ಮಾಡುವವ.

          ಅಷ್ಟಮಭಾವ ;--

          ಅಷ್ಟಮಭಾವ ಸ್ಥಿತ  ಶುಕ್ರನು  ಶುಭನಾದರೆ,  ಜಾತಕರು, ಶ್ರೀಮಂತ, ಬಂಧುಗಳಿಂದ  ಧನಲಾಭ, ಸ್ವಂತಮನೆ ಹಾಗೂ  ವಾಹನಗಳಿರುತ್ತವೆ,  ವ್ಯಾಪಾರ ವೃತ್ತಿಯಲ್ಲಿ ಧನಲಾಭ,  25 ನೆ ವರ್ಷದಲ್ಲಿ  ವಿವಾಹವಾದರೆ  ಶುಭ,  ಸುಸಂಸ್ಕೃತ,  ರೂಪವತಿ  ಪತ್ನಿ, ಅನೇಕ  ಸಂತಾನ.

          ಅಷ್ಟಮಭಾವ ಸ್ಥಿತ ಶುಕ್ರನು  ಅಶುಭನಾದರೆ,  ಜಾತಕರು,  ಆರ್ಥಿಕವಾಗಿ  ದುರ್ಬಲರು, ಕ್ರೂರಿ,  ಕಲಹಪ್ರಿಯ, ಬಂಧು ದ್ವೇಷಿ,  ಕುಟುಂಬದವರೊಡನೆ  ವೈರತ್ವ, ಒಳಿತು ಮಾಡಿದವರಿಗೆ  ಕೆಡಕನ್ನು  ಬಯಸುವವ,  ಅನ್ಯ ಸ್ತ್ರೀಯೊಡನೆ  ಸಂಬಂಧ,  ಗುಪ್ತರೋಗದಿಂದ  ಬಾಧಿತ,  ನಪುಂಸಕನಾಗುವ  ಸಂಭವವೂ ಇರುತ್ತದೆ.

          ನವಮಭಾವ  :--

          ನವಮಭಾವ ಸ್ಥಿತ  ಶುಕ್ರನು  ಶುಭನಾದರೆ,  ಜಾತಕರು,  ಉಚ್ಚ ಶಿಕ್ಷಿತ, ಸರ್ಕಾರಿ ನೌಕರಿಯಲ್ಲಿ  ಉನ್ನತಾಧಿಕಾರಿ,  ದಯಾಳು,  ಧನವಂತ,  ರೂಪವಂತ,  ಆದರ್ಶ ವ್ಯಕ್ತಿ,  ವಿದೇಶ ವಾಸಯೋಗ, ಸುಂದರ , ಸುಶೀಲ,  ಬುದ್ಧಿವಂತ  ಸತಿ.

          ನವಮಭಾವ ಸ್ಥಿತ  ಶುಕ್ರನು,  ಅಶುಭನಾದರೆ,  ಜಾತಕರು,  ಧನಹೀನ,  ಭಾಗ್ಯಹೀನ, ಉತ್ತಮ ಶಿಕ್ಷಣ ವಿಲ್ಲ, ಪರಪೀಡಕ, 25 ನೆ ವರ್ಷದಲ್ಲಿ  ವಿವಾಹವಾದರೆ  ಅಶುಭ, ಕಲಹಪ್ರಿಯ ಪತ್ನಿ,  ಅಲ್ಪ ಸಂತಾನ,  ವ್ಯಾಪಾರದಿಂದ ಹಾನಿ, ಧನ ಅಪವ್ಯಯ ಮಾಡುವವರಾಗುತ್ತಾರೆ.

          ದಶಮ ಸ್ಥಾನ  :--

          ದಶಮ ಸ್ಥಾನ ಸ್ಥಿತ ಶುಕ್ರನು ಶುಭನಾದರೆ, ಜಾತಕರು, ಸಭ್ಯ,  ಶಿಸ್ತಾಚಾರದ  ವ್ಯಕ್ತಿ,  ಉಚ್ಚಶಿಕ್ಷಣದ ಪಡೆದವರು,  ಬುದ್ಧಿವಂತ, ನ್ಯಾಯಪ್ರಿಯ,  ಹಸನ್ಮುಖಿ,  ತನ್ನ  ರೂಪ ಹಾಗೂ  ಒಳ್ಳೆ  ಗುಣಗಳಿಂದಾಗಿ ಅನೇಕರಿಂದ  ಪ್ರಶಂಸೆಗೆ  ಒಳಗಾಗುತ್ತಾರೆ.

          ದಶಮಸ್ಥ  ಶುಕ್ರ  ಅಶುಭನಾದರೆ,  ದುಃಖ ಮಯ ಜೀವನ, ಚಾರಿತ್ರ್ಯ ಹೀನ,  ಧನಹೀನ, ಭಾಗ್ಯಹೀನ,  ಧರ್ಮವನ್ನು  ಅವಹೇಳನ ಮಾಡುವವ, ರೋಗಗಳಿಂದ  ಪೀಡಿತ,  ಪತ್ನಿಯೂ  ರೋಗಗ್ರಸ್ಥೆ, ಧನಹಾನಿ.

          ಏಕಾದಶ  ಭಾವ  :--

          ಏಕಾದಶ ಭಾವಸ್ಥ  ಶುಕ್ರನು ಶುಭನಾದರೆ, ಜಾತಕನು, ಉತ್ತಮ  ಸ0ಸ್ಕಾರವಂತ, ಧನವಂತ, ಪ್ರಸಿದ್ಧಿ ಪಡೆದವ, ಸಕಲರಿಂದ  ಸನ್ಮಾನಿತ, ಕುಟುಂಬದವರಿಗೆ  ಶುಭ ವನ್ನುಂಟು ಮಾಡುವವ,  ಸಕಲ ಸುಖವನ್ನೂ  ಪಡೆಯುವವ,  ಉತ್ತಮ  ಮಿತ್ರರು, ,  ಕುಟುಂಬಕ್ಕೆ ಕೀರ್ತಿಯನ್ನು ತರುವವ, ಪತ್ನೀಪುತ್ರ ರೊಡನೆ  ಸಂತುಷ್ಟ ಜೀವನ.

          ಏಕಾದಶ  ಭಾವಾಸ್ತ  ಶುಕ್ರ  ಅಶುಭನಾದರೆ,  ಜಾತಕರು  ತಮ್ಮ  ಕಾರ್ಯ ಕ್ಷೇತ್ರದಲ್ಲಿ ಸಫಲತೆ ಇಲ್ಲದವ,  ಮಿತ್ರರಿಂದ  ವಂಚನೆಗೆ  ಒಳಗಾಗುವವ, ದುಷ್ಟ ಜನರ  ಸಹವಾಸ, ಅಲ್ಪಧನ, ಪತ್ನಿಯೊಡನೆ ವೈಮನಸ್ಯ, ಅಲ್ಪ ಸಂತಾನ.

          ದ್ವಾದಶ ಭಾವ :--

          ಶುಕ್ರ  ಶುಭನಾಗಿ  ದ್ವಾದಶ  ಭಾವದಲ್ಲಿದ್ದರೆ, ಜಾತಕನು,  ಸುಶಿಕ್ಷಿತ ,  ಸಫಲ ವಿಜ್ಞಾನಿ,  ತಂತ್ರ - ಯಂತ್ರ - ಮಂತ್ರ  ವಿದ್ಯೆಗಳಲ್ಲೂ  ನಿಪುಣ, ರೂಪವಂತ,  ಧನವಂತ,  ಧೀರ್ಘಆಯು,  ಸ್ವಂತ ಮನೆ -  ವಾಹನಗಳುಳ್ಳವನು,  ಸಕಲ  ಭೋಗಗಳನ್ನೂ  ಪಡೆಯುವವ,  ಯಾತ್ರೆಗಳಿಂದ ಲಾಭ, ವಿದೇಶ ಯಾತ್ರಾಯೋಗ,  ಜನರ ಮಧ್ಯದಲ್ಲಿರಲು   ಇಷ್ಠಪಡುತ್ತಾವೆ, ಉತ್ತಮ  ಪತ್ನಿ. ಸುಖ  ಸಂಸಾರ.

          ದ್ವಾದಶ  ಭಾವಸ್ಥ  ಶುಕ್ರ  ಅಶುಭನಾದರೆ, ಜಾತಕನು,  ದುರ್ಬಲ,  ಕುಲನಾಶಕ,  ದುಷ್ಟ,  ಕಪಟಿ, ಉತ್ತಮ  ನಡತೆಯಿಲ್ಲದವನು ,  ಅನೈತಿಕ  ಸಂಬಂಧಗಳು, ಪ್ರಾಣಂತಿಕ  ರೋಗಗಳ  ಭಯ.

ಪರಿಹಾರಗಳು:-

1 ). ಶಚಿದೇವಿ ಅಥವ ಲಕ್ಷ್ಮಿಯನ್ನು ಪೂಜಿಸಿರಿ.

2 ). ಸದಾ ಶುಭ್ರರಾಗಿರಿ.

3 ). ಪತ್ನಿಯನ್ನು ಸಂತೋಷದಿಂದ ಇರಿಸಿಕೊಳ್ಳಿ. 

4 ). ೮ಕಿಲೋ ಮೂಲಂಗಿಯನ್ನು ದೇವಾಲಯಕ್ಕೆ ದಾನ ಮಾಡಿ.

5 ). ೨೫ ನೇ ವಯಸ್ಸಿನ ನಂತರ ವಿವಾಹ ಮಾಡಿಕೊಳ್ಳಿ.

6 ). ಹಸುವಿನ ತುಪ್ಪ ಮೊಸರು, ಕರ್ಪೂರ, ಮುತ್ತು, ಬಿಳಿಯ  ಬಟ್ಟೆ  ಅಥವ  ಸೌಂದರ್ಯ ಸಾಧನಗಳನ್ನು ದಾನಮಾಡಿ.

7 ). ಕರಿ ಹಸುವಿಗೆ ಜೋಳ,ಹಸಿಹುಲ್ಲು,೨ಕಿಲೋ ಆಲೂಗಡ್ಡೆ ಅಥವ ಅರಿಸಿನ ಮಿಶ್ರಿತ ಹಿಟ್ಟನ್ನು ತಿನ್ನಿಸಿ.

8 ). ಚಿಕ್ಕ ಬೆಳ್ಳಿಯ ಗುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಿ.

9 ). ಮನೆಗೆ ಪಶ್ಚಿಮ ದಿಕ್ಕಿನಲ್ಲಿ ಕಸಕ್ಕಾಗಿ ಒಂದು ಬುಟ್ಟಿಯನ್ನು ಇಡಿ.

10 ). ಮಗುವನ್ನು ದತ್ತು ತೆಗೆದುಕೊಳ್ಳಬೇಡಿ.

11 ). ಪತ್ನಿಗೆ ಅನಾರೋಗ್ಯವಾಗಿದ್ದರೆ ಆಕೆಯ ತೂಕದಷ್ಟು ಬೆಲ್ಲವನ್ನು ದೇವಾಲಯಕ್ಕೆ ದಾನ ಮಾಡಿ.

12 ). ೬ದಿನಗಳ ಕಾಲ ಕನ್ಯಾಮುತೈದೆಯರಿಗೆ ಹಾಲು ಮತ್ತು ಜೇನು ನೀಡಿರಿ.

13 ). ಯಾವುದೇ ಕೆಲಸದ ಪ್ರಾರಂಭದಲ್ಲಿಯೂ ಸ್ವಲ್ಪ ಸಿಹಿ ಮತ್ತು ನೀರನ್ನು ಸೇವಿಸಿರಿ.

14 ). ಬೆಳ್ಳಿಯ ಚಿಕ್ಕ ಫಲಕವನ್ನು ಬೇವಿನ ಮರದಡಿ ಹುದುಗಿಸಿ.

15 ). ಬೆಳ್ಳಿಯ ಚೂರನ್ನು ಜೇನಿನೊಂದಿಗೆ ನೆಲದಲ್ಲಿ ಹುದುಗಿಸಿ,

16 ). ಮಗಳ ಮದುವೆಯಕಾಲದಲ್ಲಿ ಅಳಿಯನಿಗೆ ೨
ಬಂಗಾರದ ಚೂರುಗಳನ್ನು ಸಂಕಲ್ಪಿಸಿಕೊಡಬೇಕು.

17 ).  ಪರಸ್ತ್ರೀಯರಲ್ಲಿ  ಅನುರಕ್ತರಾಗದಿರಿ.

18 ).  ಮದ್ಯ,  ಮಾಂಸ ಸೇವನೆಯಿಂದ  ದೂರವಿರಿ.

19 ). ಮಾವನ  ಮನೆಯ  ಯಾವುದೇ  ಸದಸ್ಯರನ್ನು ಜೊತೆಯಲ್ಲಿರಿಸಿಕೊಳ್ಳಬೇಡಿ.

20 ).  ತಾಯಿ  ತಂದೆಗೆ  ವಿಧೇಯರಾಗಿ, ಚನ್ನಾಗಿ  ನೋಡಿಕೊಳ್ಳಿ ಮತ್ತು  ಪ್ರತಿದಿನ  ಅವರ  ಆಶೀರ್ವಾದ ಪಡೆದುಕೊಳ್ಳಿ.
     
        ✍  ಡಾ|| B. N.  ಶೈಲಜಾ ರಮೇಶ್...

Wednesday, 14 March 2018

ಬಲಹೀನ ಗ್ರಹಗಳು ಹಾಗೂ ಪರಿಹಾರಗಳು ಭಾಗ 5.

                            ಹರಿಃ  ಓಂ
                     ಶ್ರೀ ಗಣೇಶಾನಮಃ
                  ಶ್ರೀ ಗುರುಭ್ಯೋನಮಃ
ಬಲಹೀನ  ಗ್ರಹಗಳು  ಹಾಗೂ  ಪರಿಹಾರಗಳು  ಭಾಗ  5 ..
ಗುರು ಗ್ರಹ  :--
Picture source: internet/ social media

         ಗುರುಗ್ರಹವು  ಜಾತಕದಲ್ಲಿ  ಬಲಹೀನವಾದಾಗ  ನೀಡುವ ಕೆಟ್ಟ  ಫಲಗಳು :--

       ನಿರುತ್ಸಾಹ,  ಚಂಚಲತೆ, ನಾಸ್ತಿಕತೆ, ನಿರಾಸೆ, ದುಗುಡ, ದುಃಖ  ಆರ್ಥಿಕ ತೊಂದರೆಗಳು,  ಅನುಕಂಪ ರಹಿತವರ್ತನೆ,  ದಬ್ಬಾಳಿಕೆ,  ಸಂತಾನ ಇಲ್ಲದಿರುವಿಕೆ,  ಇದ್ದರೂ ಅವರಿಗೆ ಕಷ್ಟಗಳು,  ನಿರ್ವೀರ್ಯತೆ,  ದೇಹವು ಕೃಷಗೊಳ್ಳುವುದು,  ನರಗಳು ಮತ್ತು ಕೋಶಗಳು  ಸಮರ್ಪಕವಾಗಿ ಕೆಲಸಮಾಡದಿರುವಿಕೆ,  ಸದಾರೋಗಿ,  ಮನೆಯಲ್ಲಿಟ್ಟ ಬಂಗಾರವು   ಕಳವಾಗುವುದು   ಅಥವ ಆಭರಣಗಳನ್ನು   ಮಾರುವುದು,  ಅನಿರೀಕ್ಷಿತವಾಗಿ ವಿದ್ಯಾಬ್ಯಾಸವು  ನಿಂತುಹೋಗುವುದು,  ಧರ್ಮದಲ್ಲಿ ಅನಾಸಕ್ತಿ,  ಪತ್ನಿ ಅಥವ ಮಕ್ಕಳಿಗೆ ಅನಾರೋಗ್ಯ,  ಸಂಪತ್ತು   ಬರುವುದರಲ್ಲಿ   ಅಡಚಣೆ,  ಸಂತಾನದಿಂದ   ಸುಖವಿಲ್ಲದಿರುವಿಕೆ,  ಮದುವೆಯು ತಡವಾಗುವಿಕೆ,  ಶೀಘ್ರ ಸ್ಖಲನ,  ವಿಧವೆ  ಅಥವ ಕೀಳು   ಹೆಂಗಸಿನ   ಸಂಪರ್ಕ,  ಜಾತಕರ   ತಂದೆಗೆ ಉಸಿರಾಟದ   ತೊಂದರೆ   ಅಥವ   ಮಾನಸಿಕ ತೊಳಲಾಟ.  ಕಿವಿನೋವು,  ಮಧುಮೇಹ ತೊಂದರೆ,  ಕಾಮಾಲೆ   ಅಥವ   ಮೂತ್ರ   ಪಿಂಡತೊಂದರೆ, ಮಗಳ   ಮದುವೆಗೆ   ಅಡಚಣೆಗಳು.  ವ್ಯಾಪಾರದಲ್ಲಿ ನಷ್ಟವಾಗುವಿಕೆ. 

ದ್ವಾದಶ ಭಾವದಲ್ಲಿ  ಗುರು ಸ್ಥಿತನಾದಾಗ ಉಂಟಾಗುವ  ಶುಭಶುಭ  ಫಲಗಳು :--

ಪ್ರಥಮ  ಭಾವ  :--

          ಪ್ರಥಮ ಭಾವದ ಗುರುವು  ಶುಭನಾಗಿದ್ದರೆ,  ಜಾತಕನು  ಭಾಗ್ಯಶಾಲಿ,  ಆರೋಗ್ಯ ವಂತ, ದಷ್ಟ - ಪುಷ್ಟ  ಶರೀರಿ,  ಬುದ್ಧಿವಂತ, ಜ್ಞಾನಿ, ಪ್ರಾಮಾಣಿಕ,  ಅನ್ಯರಿಂದಲೂ  ಪ್ರಾಮಾಣಿಕತೆಯನ್ನು ಬಯಸುವವ,  ಉಚ್ಛಮಟ್ಟದ ನ್ಯಾಯಮೂರ್ತಿ, ವೈದ್ಯ, ಲೆಕ್ಕಾಧಿಕಾರಿ,  ಸಂಪಾದಕ,  ದೀನರಿಗಾಗಿ ಮಿಡಿವ ಹೃದಯದವ, ಸಮಾಜ ಸೇವಕ, ಪವಿತ್ರಾತ್ಮ.

          ಅಶುಭ ಗುರುವಾದರೆ,  ಜಾತಕನು  ರೋಗಿ,  ನಿರ್ಧನ, ಅವಿದ್ಯಾವಂತ,  ಉಪಕಾರವನ್ನು  ಸ್ಮರಿಸದವ, ಆಶಿಸ್ತು,  ಮೂರ್ಖ,  ತಂದೆಯ ವಿರೋಧಿ,  ಅಸ್ತಮಾ, ಹೃದಯರೋಗ, ರಕ್ತಸಂಭಂಧಿ, ಕ್ಯಾನ್ಸರ್ ರೋಗಗಳಿಂದ  ಬಳಲುವವ, ಸುಖಹೀನ.

ದ್ವಿತೀಯ ಭಾವ  :--

         ದ್ವಿತೀಯ ಭಾವ  ಗುರು ಶುಭನಾಗಿದ್ದರೆ,  ಜಾತಕರು  ಆಸ್ತಿಕರು,  ಸಭ್ಯರು,  ಸಮಾಜ ಸುಧಾರಕರು, ಮಹಾತ್ವಾಕಾಂಕ್ಷಿ,  ನಿರ್ಭೀತ, ಉತ್ತಮ  ಶಿಕ್ಷಕರು,  ಸುಂದರ  ಸಂಸಾರ,  ಆಕಸ್ಮಿಕ ಧನ ಪ್ರಾಪ್ತಿ.

         ಗುರು ಅಶುಭನಾದರೆ, ತನ್ನ  ಕುಲಕ್ಕೆ  ಕಳಂಕ ತರುವವರು, ಮಾತಿನ ಮಲ್ಲರು, ಭಾಗ್ಯಹೀನ, ಸಂಸಾರ ಸುಖವಿಲ್ಲ.  

ತೃತೀಯಭಾವ  :--

          ಶುಭ ಗುರುವಾಗಿದ್ದರೆ,  ಜಾತಕರು  ಸೌಭಾಗ್ಯ ಶಾಲಿ,  ಧೀರ್ಘಆಯು, ಸಿರಿವಂತ,  ಲೇಖಕ, ಸಂಪಾದಕ,  ದೀನ ಜನರ ಮೇಲೆ  ದಯಾ ದೃಷ್ಟಿ ಇರುವವರಾಗುತ್ತಾರೆ.

          ಅಶುಭ  ಗುರುವಾದರೆ,  ಜಾತಕರು  ಕಲಹಪ್ರಿಯ,  ಕಠೋರ ಸ್ವಭಾವ, ಸ್ವಾರ್ಥಿ,  ಬಂಧುಗಳನ್ನು  ವಂಚಿಸುವವ, ತಂದೆ ತಾಯಿಯ ರನ್ನು ಅಪಮಾನಿಸುವವರಾಗುತ್ತಾರೆ.

ಚತುರ್ಥಭಾವ  :--

          ಶುಭ ಗುರುವು  ಚತುರ್ಥಭಾವದಲ್ಲಿ  ಜಾತಕರನ್ನು ,  ಧನವಂತ,  ಭಾಗ್ಯವಂತ, ಉಚ್ಛಮಟ್ಟದ ಶಿಕ್ಷಿತ,  ಉತ್ತಮ  ವಕೀಲ,  ನ್ಯಾಯಾಧೀಶ,  ರಾಜನೀತಿಜ್ಞ,   ರಾಜಯೋಗ, ಆಕಸ್ಮಿಕ ಧನಪ್ರಾಪ್ತಿ,  ತಾಯ್ತನ್ದ ಯರ ಪ್ರೀತಿಯನ್ನು  ಹೊಂದುವವ,  ಸುಂದರ ಸುಶೀಲ ಸುಸಂಸ್ಕುತ ಪತ್ನಿ  ಮುಂತಾದ ಶುಭ  ಫಲ  ನೀಡುತ್ತಾನೆ.

          ಗುರುವು  ಅಶುಭನಾದರೆ, ಜಾತಕರು  ಜಗಳಗಂಟಿ,  ಉದ್ಧಟ ಪ್ರಕೃತಿಯವರು,  ಅಹಂ, ಅನೇಕ ಸ್ತ್ರೀಯರೊಡನೆ  ಸಂಭಂದ,  ವಾಹನ  ದುರ್ಘಟನೆ  ಮುಂತಾದ ಅಶುಭ ಫಲಗಳು.

ಪಂಚಮಭಾವ  :--

          ಶುಭಗುರುವು  ಪಂಚಮಭಾವ ದಲ್ಲಿದ್ದರೆ,  ಜಾತಕರು  ಭಾಗ್ಯಶಾಲಿ,  ಧೀರ್ಘಆಯು,  ಧನವಂತ,  ವಿನಮ್ರ ಸ್ವಭಾವದವರೂ, ಕುಶಾಗ್ರ ಬುದ್ಧಿ,  ಉತ್ತಮ  ಸಲಹೆಗಾರರು,  ಕುಲದ ಪ್ರತಿಷ್ಠೆಯನ್ನು  ವೃದ್ಧಿಸುವವರು,  ಸಮಾಜದ ಲ್ಲಿ ಸನ್ಮಾನಿತರು, ಪ್ರೇಮ ಪ್ರಸಂಗದಲ್ಲಿ  ಸಫಲರು.

          ಅಶುಭಗುರುವು  ಪಂಚಮದಲ್ಲಿದ್ದರೆ,  ಜಾತಕರು  ಭಾಗ್ಯಹೀನ, ಒಣ ಪ್ರತಿಷ್ಠೆ ಯವ,  ಜೂಜು, ಸಟ್ಟಾ, ಲಾಟರಿಯಲ್ಲಿ  ಧನಹಾನಿ,  ಸಂತಾನದ  ದುಃಖ,  ಅಯೋಗ್ಯ ಸಂತಾನ.

ಷಷ್ಟ ಬಾವ  :--

          ಷಷ್ಟ ಭಾವದ ಗುರುವು  ಶುಭನಾದರೆ,   ಜಾತಕನು  ಧನವಂತ,  ಭಾಗ್ಯವಂತ, ಆರೋಗ್ಯವಂತ,  ಧೀರ್ಘ ಆಯು, ದಯಾಳು,  ವ್ಯಾಯಾಮ ಪ್ರಿಯ,  ಪರೋಪಕಾರಿ,  ವೈಭವಯುತ ಜೀವನ,  ವೈರಿಗಳ ಪರಾಭವ,  ಬಂಧುಗಳಿಂದ ಸಹಕಾರ
.
         ಗುರು  ಅಶುಭನಾದರೆ,  ಜಾತಕರು  ಭಾಗ್ಯಹೀನ, ಸದಾ ಚಿಂತೆ,  ಮಾನಸಿಕ ಉದ್ವೇಗ, ನೇತ್ರ ರೋಗಿ,  ತಂದೆಗೆ  ಅಶುಭ,  ವ್ಯರ್ಥ ಅಲೆದಾಟ.

ಸಪ್ತಮಭಾವ  :--

          ಸಪ್ತಮ ಭಾವಸ್ಥ ಗುರು  ಶುಭನಾದರೆ ಜಾತಕರು. ಸದಾಚಾರಿ,  ಪರೋಪಕಾರಿ,  ತ್ಯಾಗಿ,  ಸತ್ಯವಾದಿ, ಉತ್ತಮ ಗುಣಗಳಿಂದ ಪ್ರಸಿದ್ಧಿ ಹೊಂದುವವ, ಸರ್ವರಿಂದಲೂ  ಸನ್ಮಾನಿತ,  ಸಫಲ  ರಾಜನೀತಿಜ್ಞ,  ಉತ್ತಮ  ವ್ಯಾಪಾರಿ,   ಸಭ್ಯ, ಸುಕ್ಷಿತ ಗುಣವಂತ ಪತ್ನಿ,  ಉತ್ತಮ  ಸಾಂಸಾರಿಕ  ಜೀವನ.

          ಸಪ್ತಮ  ಭಾವಸ್ಥ  ಗುರು  ಅಶುಭನಾದರೆ,  ಜಾತಕರು  ಚಾರಿತ್ರ್ಯಹೀನ,  ದುಷ್ಟ,  ಧರ್ಮ ಲಂಪಟ,  ಅಲೆಮಾರಿ,  ಅನ್ಯ ಸ್ತ್ರೀ ಯರೊಂದಿಗೆ  ಸಂಬಂಧ,  ಅಲ್ಪಾಯು ಸಂಗಾತಿ,  ಸಾಲಗಾರ,  ಗೃಹಸ್ಥ ಜೀವನದಲ್ಲಿ ಸುಖವಿಲ್ಲ,  ಸಹೋದರನ  ಕೃಪೆಯಿಂದ ಸಂಸಾರ ಪಾಲಿಸಬೇಕಾಗುತ್ತದೆ.

ಅಷ್ಟಮಭಾವ  :--

          ಶುಭಗುರುವಾದರೆ,  ಜಾತಕರು  ಧೀರ್ಘಆಯು,   ಸದಾಚಾರಿ,  ಪರಿಶ್ರಮಿ,  ಪ್ರತಿಷ್ಠಿತ, ವಿವಾಹಾತ್ಪರ ಭಾಗ್ಯ, ನೌಕರಿಯಲ್ಲಿ ಇರುವ  ಪತ್ನಿ, ಪತ್ನಿಯ ತಂದೆಯ  ಮನೆಯಿಂದ ಧನಾಗಮ.

          ಗುರು ಅಶುಭನಾದರೆ,  ಜಾತಕನು,  ಹೇಡಿ, ವಂಚಕ,  ದುಷ್ಟ,  ಅಪ್ರಾಮಾಣಿಕ,  ಮೊಸಗಾರ,  ಅಜ್ಞಾನಿ, ರೋಗಿ, ರಕ್ತ ಸಂಬಂದಿ ರೋಗದಿಂದ ಪೀಡಿತ,  ಕುಟುಂಬ ಸೌಖ್ಯವಿಲ್ಲ, ಅನ್ಯ ಸ್ತ್ರೀ ಸಂಬಂಧ,  ವ್ಯಾಪಾರದಲ್ಲಿ  ನಷ್ಟ.

ನವಮ ಭಾವ :--

          ನವಮಭಾವ ಗುರು  ಶುಭನಾಗಿದ್ದರೆ,  ಜಾತಕರು  ಬಹುಮುಖ ಪ್ರತಿಭೆ ಯುಳ್ಳವರು,  ಸಾಹಿತ್ಯ ಪ್ರೇಮಿ, ಲೇಖಕ, ವೈದ್ಯ,  ವಿಜ್ಞಾನಿ,  ಅಧ್ಯಾಪಕ,  ಭಾಗ್ಯಶಾಲಿ,  ಧನವಂತ, ಧಾನ - ಧರ್ಮಗಳನ್ನು  ಮಾಡುವವ, ಧಾರ್ಮಿಕತೆ,  ತಾಯ್ತ0ದಗೆ  ಅನುಕೂಲವಂತ,  ಸುಖವಾದ ಅನುಕೂಲಕರ  ದಾಂಪತ್ಯ, ಉತ್ತಮ  ಸಂತಾನ.

          ನವಮಭಾವದ ಗುರು  ಅಶುಭನಾದರೆ,  ಜಾತಕರು  ಕ್ರೂರಿ,  ನಿರ್ಧನ,  ಅಧರ್ಮಿ, ಜಗಳಗಂಟಿ,  ದುಃಖಿ,  ತಂದೆಗೆ  ಅಶುಭ, ಪತ್ನಿ - ಸಂತಾನದಿಂದ  ಸುಖವಿಲ್ಲ,  ಮಾವನ ಮನೆಯವರೊಡನೆ  ಭಿನ್ನಾಭಿಪ್ರಾಯ ಹಾಗೂ  ಹೃದಯ ಸಂಬಂಧಿ ರೋಗ.

ದಶಮಭಾವ:--

          ದಶಮ ಭಾವಸ್ಥ ಗುರು  ಶುಭಾನಾಗಿದ್ದರೆ,  ಜಾತಕನು,  ಸಕಲ ಸುಖ ಸಾಧನಗಳಿಂದ, ವೈಭವಯುತ  ಜೀವನ  ನಡೆಸುವವನು,  ಉತ್ತಮ  ರಾಜನೀತಿಜ್ಞ,   ಉತ್ತಮ  ಮಂತ್ರಿಯಾಗಬಲ್ಲರು,  ಉತ್ತಮ  ವ್ಯಾಪಾರಿ,  ವಿನಮ್ರ,  ದಯಾಳು,  ಸಭ್ಯ.
         
          ದಶಮ ಭಾವಸ್ಥ ಗುರು  ಆಶುಭಾನಾಗಿದ್ದರೆ,
 ಜಾತಕನು  ಮೂರ್ಖ,  ಅಜ್ಞಾನಿ,  ದುಷ್ಟ,  ಕಲಹಪ್ರಿಯ,  ಕ್ರೂರ ಪ್ರವೃತ್ತಿಯುಳ್ಳವರೂ,  ಜಂಬದ ಮಾತು,  ಆಲಸಿ,  ಧನಹೀನ,  ವೈವಾಹಿಕ ಜೀವನದಲ್ಲಿ   ಸುಖವಿಲ್ಲ    ಉಸಿರಾಟದ ಹಾಗೂ  ರಕ್ತ ದ  ತೊಂದರೆಗಳು.

ಏಕಾದಶ  ಭಾವ  :--   
         
        ಏಕಾದಶ  ಭಾವಸ್ಥ ಗುರು  ಶುಭಾನಾಗಿದ್ದರೆ,
ಜಾತಕನು  ಉಚ್ಚಶಿಕ್ಷಣದ ಪಡೆದವನು,  ಯಶಸ್ವೀ ಜೀವನ,  ಕುಶಾಗ್ರಾಮತಿ, ಪರೋಪಕಾರಿ,  ಉತ್ತಮ  ರಾಜನೀತಿಜ್ಞ,  ಕೊಟ್ಟ ಮಾತಂತೆ  ನಡೆಯುವವ,  ವೈಭವದ  ಜೀವನ, ಶ್ರೀಮಂತ ಹಾಗೂ  ಶ್ರೇಷ್ಠ  ಮಿತ್ರರನ್ನುಳ್ಳವನು.
      
          ಏಕಾದಶ  ಭಾವಸ್ಥ ಗುರು  ಅಶುಭಾನಾಗಿದ್ದರೆ,   ಜಾತಕನು  ಆಲಸಿ,  ಭಾಗ್ಯಹೀನ,  ಸಾಲಗಾರ,  ವಂಚಕ,  ಧೂರ್ತ,  ವ್ಯಾಪಾರದಲ್ಲಿ  ಹಾನಿ, ಸಂತಾನ  ಸುಖವಿಲ್ಲ,  ಅನೇಕ ಪ್ರಕಾರದ  ರೋಗಗಳು.

ದ್ವಾದಶ ಭಾವ  :--
         
          ದ್ವಾದಶ. ಭಾವಸ್ಥ ಗುರು  ಶುಭನಾಗಿದ್ದರೆ,  ಜಾತಕನು,  24 ನೆ ವರ್ಷದ  ನಂತರ  ಭಾಗ್ಯೋದಯ
ಜೀವನದ  ಉತ್ತರಾರ್ಧ  ಸುಖ,  ಪರಿಶ್ರಮಿ,  ಎಲ್ಲಾ ಕ್ಷೇತ್ರದಲ್ಲಿ ಸಫಲತೆ  ಹೊಂದುವವ,  ಉತ್ತಮ  ವೈದ್ಯ ( ಶಸ್ತ್ರ ಚಿಕಿತ್ಸಕ ),  ಕೆಮಿಷ್ಟ್, ಪ್ರಸಿದ್ಧ  ನ್ಯಾಯವಾದಿ, ನ್ಯಾಯಾಧೀಶ,  ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿ,  ವೈಭವದ ಜೀವನ, ಸಂಪೂರ್ಣ ಕುಟುಂಬ ಸೌಖ್ಯ.

          ದ್ವಾದಶ  ಭಾವಸ್ಥ ಗುರು  ಆಶುಭನಾಗಿದ್ದರೆ,
ಜಾತಕರು  ವಾಚಾಳಿ, ಜಗಳಗಂಟಿ,  ಅಸತ್ಯವಾದಿ,  ವಂಚಕ, ಜನರ  ವಿರುದ್ಧ  ಷಡ್ಯಂತ್ರ  ರಚಿಸುವವ, ದುಃಖಮಯ  ದಾಂಪತ್ಯ,  ರೋಗಿ, ಸಂತಾನ ಸುಖವಿಲ್ಲ.

ಪರಿಹಾರಗಳು:-

1 ). ಇಂದ್ರನನ್ನು ಆರಾಧಿಸಿ.

೨ ). ಸಂತರನ್ನು,  ಹಿರಿಯರನ್ನು, ಹೆಂಗಸರನ್ನು, ಹೆಣ್ಣುಮಕ್ಕಳನ್ನು  ಆದರಿಸಿ,

3 ). ಬಂಗಾರದ  ಸರವನ್ನು  ಕೊರಳಲ್ಲಿ  ಹಾಕಿಕೊಳ್ಳಿರಿ.

4 ). ದೇವಾಲಯಗಳಿಗೆ  ನಿತ್ಯವೂ  ಹೋಗಿಬನ್ನಿ.

5 ). ಸಿ0ಧೂರವನ್ನು  ಹಣೆಗೆ  ತಿಲಕವಾಗಿ  ಇಟ್ಟುಕೊಳ್ಳಿ.
6 ). ಕೊಟ್ಟ ಮಾತನ್ನು ಉಳಿಸಿಕೊಳ್ಳೀ.

7 ). ಗುರುವಾರಗಳಂದು ಪತ್ನಿಯು ಉಪವಾಸವನ್ನು ಮಾಡಬೇಕು.

8 ). ಮಕ್ಕಳಿಂದ ತೊಂದರೆ ಇದ್ದಲ್ಲಿ ವಿಷ್ಣುವನ್ನು ಪೂಜಿಸಿ.

9 ). ತಂದೆಗೆ ಅನಾರೋಗ್ಯ ಇದ್ದರೆ ಹರಿಯುವ ನೀರಲ್ಲಿ ೪೫ ದಿನಗಳ ಕಾಲ ತಾಮ್ರದ ನಾಣ್ಯವನ್ನು ಹಾಕಿರಿ. *

10 ). ದಾಂಪತ್ಯದಿಂದ ಹೊರಗೆ ಸಂಬಂದಗಳನ್ನು ಇಟ್ಟುಕೊಳ್ಳಬೇಡಿ.

11 ). ಅಶ್ವತ್ತ ವೃಕ್ಷಕ್ಕೆ ೮ ಗುರುವಾರಗಳು ಅರಿಸಿನದ ದಾರವನ್ನು ೮ ಸುತ್ತು ಕಟ್ಟಿ.

12 ). ಗುರುವು ೭ರಲ್ಲಿ ಅಶುಭನಾಗಿದ್ದರೆ ಹಳದಿ ವಸ್ತ್ರವನ್ನು ಅರ್ಚಕರಿಗೆ ದಾನಮಾಡಿ

13 ).ಸೂರ್ಯ ಗ್ರಹಣದಲ್ಲಿ,ಬಾದಾಮಿ,ಸಿಪ್ಪೆ ಸಹಿತ ತೆಂಗಿನಕಾಯಿ ಮತ್ತು ಕಪ್ಪು ಉದ್ದಿನಕಾಳು ದಾನ ಮಾಡಿ.

14 ). ಮಗಳ ಮದುವೆಯಲ್ಲಿ ೨ ಒಂದೇ ಸಮನಾದ ಬಂಗಾರದ ನಾಣ್ಯಗಳನ್ನು ಮಾಡಿಸಿ ಒಂದನ್ನು ಹರಿಯುವ ನೀರಲ್ಲಿ ಹಾಕಿ,ಮತ್ತೊಂದನ್ನು ಮಗಳಿಗೆ ನೀಡಿ ಸದಾ ಕಾಲ ಜೋಪಾನವಾಗಿ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತೆ ಮಾಡಿರಿ.

15 ). ಗುರುವು  ಅಸ್ತನಾಗಿದ್ದರೆ  ೪೦೦ಗ್ರಾಂ  ಬೆಲ್ಲ ಅಥವ  ಗೋಧಿಯನ್ನು  ಭಾನುವಾರ  ಹರಿಯುವ ನೀರಲ್ಲಿ  ಹಾಕಿ.

16 ). ಬುಧನೊಡನೆ  ಗುರುವಿದ್ದರೆ  ಬುಧನಿಗೆ ಸಂಬಂದಿಸಿದ  ವಸ್ತುಗಳನ್ನು  ದಾನಮಾಡಿ.

17 ). ಗುರುಗಳ ಸೇವೆಯನ್ನು ಮಾಡಿರಿ.

18 ) . ಓದುವ ಮಕ್ಕಳಿಗೆ ಉಚಿತ ಪಠ್ಯ, ಪಾಠ ಪ್ರವಚನಗಳನ್ನು ಮಾಡಿ.

19 ). ಗುರುಕುಲ,ಮಠಗಳಲ್ಲಿ ಪುಸ್ತಕ, ಪೆನ್ನು ವಿದ್ಯಾರ್ಥಿಗಳಿಗೆ   ಬೇಕಾದ   ಅಗತ್ಯ  ವಸ್ತುಗಳನ್ನು ನೀಡಿ
.
                  ✍ ಡಾ|| B. N. ಶೈಲಜಾ ರಮೇಶ್..

Friday, 9 March 2018

ಬಲಹೀನ ಗ್ರಹಗಳಿಂದಾಗುವ ತೊಂದರೆಗಳು ಭಾಗ 4

                              ಹರಿಃ ಓಂ
                       ಶ್ರೀ ಗಣೇಶಾನಮಃ
                     ಶ್ರೀ ಗುರುಭ್ಯೋನಮಃ

         ಬಲಹೀನ ಗ್ರಹಗಳಿಂದಾಗುವ  ತೊಂದರೆಗಳು ಹಾಗೂ  ಪರಿಹಾರಗಳು ( ಲಾಲ್ ಕಿತಾಬ್ ಪರಿಹಾರಗಳು )

ಬುಧ ಗ್ರಹ  :--   
   
(Picture source: internet/ social media)
         
          ಬುದ್ದಿಮಾಂದ್ಯತೆ,  ವಿಚಾರಗಳನ್ನು ತಿಳಿಸುವಲ್ಲಿ  ಅಸಹಾಯಕತೆ, ಮೂರ್ಖತನ,  ಅಪ್ರಬುದ್ದತೆ,  ವಾಕ್ ತೊಂದರೆ,  ನೆನಪಿನ ಶಕ್ತಿ ಕೊರತೆ,  ತಮ್ಮ ಮೇಲೆಯೇ ಹತೋಟಿಯಿಲ್ಲದಿರುವಿಕೆ,  ಹಗಲು ಗನಸು ಗಾರರು,   ತಾರ್ಕಿಕತೆಯ ಕೊರತೆ,  ಸಂಸಾರದಲ್ಲಿ   ಹುಡುಗಿಯರಿಗೆ  ಸಮಸ್ಯೆಗಳು,   ನರದೌರ್ಬಲ್ಯತೆ,  ಕ್ಷಯ,   ನಿದ್ರಾಹೀನತೆ,  ತಲೆಸುತ್ತುವಿಕೆ,  ಚರ್ಮದ ತುರಿಕೆ,  ಅಲರ್ಜಿ,  ಹೃದಯ   ಮತ್ತು   ಶ್ವಾಸಕೋಶಗಳ ದುರ್ಬಲತೆ,  ವ್ಯಾಪಾರ  ವ್ಯವಹಾರ  ,ಷೇರು ಪೇಟೆ  ವ್ಯವಹಾರಗಳಲ್ಲಿ   ನಷ್ಟ,  ಹಲ್ಲಿನ ತೊಂದರೆ  ವಿದ್ಯಾಬ್ಯಾಸದಲ್ಲಿ  ಅಡಚಣೆ,  ಏಕಾಂತತೆ,  ಮಾನಸಿಕ   ತೊಳಲಾಟ,  ಮದುವೆಯ ನಂತರವೂ ಹೆಣ್ಣಿನ   ತಾಯಿಯ   ಮನೆಯವರಿಗೆ ತೊಂದರೆಗಳು,  ನಾದಿನಿಯಿಂದ ಕೆಟ್ಟ ಹೆಸರು,  ಕಛೇರಿಯಲ್ಲಿ ಸ್ವಾರ್ಥತೆ,  ಜಾತಕರು ಸುಳ್ಳುಗಾರರು,  ಮೋಸಗಾರರು,  ಮದ್ಯವ್ಯಸನಿ,  ಬಂದುಗಳ  ಅಥವ ದಾಂಪತ್ಯದ   ಹೊರಗಿನ   ಸಂಬಂದದಿಂದ ಕೆಟ್ಟ ಹೆಸರು . 

ದ್ವಾದಶ ಭಾವಗಳಲ್ಲಿ  ಸ್ಥಿತನಾದ  ಬುಧನ  ಶುಭಾಶುಭ ಫಲಗಳು :--

ಪ್ರಥಮಭಾವ  :--

          ಪ್ರಥಮ  ಭಾವಸ್ಥ ಬುಧ  ಶುಭನಾಗಿದ್ದರೆ,  ಜಾತಕನು  ಗಣಿತಜ್ಞ,  ಜ್ಯೋತಿಷಿ,  ಮೃಧುಭಾಷಿ,  ಸಭ್ಯಸ್ಥ,  ಪಂಡಿತ,  ಧನವಂತ,  ಉತ್ತಮ  ಸಂಸ್ಕಾರಗಳುಳ್ಳವ,  ಜನರಿಂದ  ಸನ್ಮಾನಿತ,  ಕಲೆಗಳಲ್ಲಿ  ಅಭಿರುಚಿ.
          ಆಶುಭನಾಗಿದ್ದರೆ,  ಜಾತಕನು  ಕೃಶ ಶರೀರದವ,  ಮಂದಬುದ್ಧಿ,  ಜಗಳಗಂಟಿ,  ಪ್ರಾಯಶಃ  ನಪುಂಸಕ, ಪತ್ನಿಯೊಡನೆ ಉತ್ತಮ  ಸಂಬಂಧವಿಲ್ಲ, ವಿಚ್ಛೇದನ ವೂ  ಆಗಬಹುದು.

ದ್ವಿತೀಯ ಭಾವ  :--

          ದ್ವಿತೀಯ ಭಾವಸ್ಥ ಬುಧ  ಶುಭನಾಗಿದ್ದರೆ,  ಜಾತಕನು , ಮೃಧುಭಾಷಿ, ತಿಳುವಳಿಕೆಯುಕ್ತ, ಹಾಸ್ಯ ಪ್ರವೃತ್ತಿ,  ಕುಶಾಗ್ರಬುದ್ಧಿ,  ವಾಕ್ಪಟು, ಶ್ರೀಮಂತ,
 ಸುಖ ಸಂವೃದ್ಧಿ ಉಳ್ಳವನು, ವಿದ್ಯಾವಂತ, ಧಾರ್ಮಿಕ ಹಾಗೂ  ಜ್ಯೋತಿಷ್ಯ ದಲ್ಲಿ ಅಭಿರುಚಿ,  ಬರವಣಿಗೆ ಯಲ್ಲಿ  ಆಸಕ್ತಿ, ಉತ್ತಮ  ಸಂಗಾತಿ, ಸುಂದರ  ದಾಂಪತ್ಯ.

          ಅಶುಭನಾದರೆ,  ವ್ಯಾಪಾರ - ವ್ಯವಹಾರದಲ್ಲಿ  ಹಾನಿ,  ಕೃಶಕಾಯ, ಜೂಜು - ಲಾಟರಿ - ಸಟ್ಟಾ ಗಳಿಂದ  ಧನಹಾನಿ, ಸಹೋದರ ಸಂಬಂಧದಲ್ಲಿ  ಉತ್ತಮ  ಸಂಬಂಧವಿರುವುದಿಲ್ಲ,  ಸಾಮಾನ್ಯ  ದಾಂಪತ್ಯ.

ತೃತೀಯಭಾವ  :--        
         
          ತೃತೀಯ ಭಾವಸ್ಥ ಬುಧ  ಶುಭನಾಗಿದ್ದರೆ,  ಜಾತಕನು ಧೀರ್ಘಆಯು,  ಉಚ್ಚಶಿಕ್ಷಣ, ಧನವಂತ,  ಶಿಕ್ಷಕ ವೃತ್ತಿಯಿಂದ ಲಾಭ,  ಯಾತ್ರೆಗಳಲ್ಲಿ  ಆಸಕ್ತಿ, ಸುಂದರ  ಕೌಟುಂಬಿಕ ಜೀವನ.

           ಅಶುಭನಾದರೆ,  ಅನ್ಯ ಜನರಲ್ಲಿ  ವಿಶ್ವಾಸ,  ಮನೆಯ ಬದಲು ವಸತಿ ಪ್ರದೇಶ ಗಳಲ್ಲಿ ಇರಲು  ಇಷ್ಟ, ಬಂಧು ಮಿತ್ರರ  ಸಂಬಂಧಗಳಿಂದ  ವಂಚಿತ,  ವ್ಯಾಪಾರದಲ್ಲಿ  ಹಾನಿ,  ಸಂಸಾರದಲ್ಲಿ  ವೈಮನಸ್ಸು.

ಚತುರ್ಥ ಭಾವ  :--
 
      ಚತುರ್ಥ  ಭಾವಸ್ಥ ಬುಧ  ಶುಭನಾಗಿದ್ದರೆ,  ಜಾತಕನು   ಆರೋಗ್ಯವಂತ,  ಉಚ್ಚಶಿಕ್ಷಣ,  ಧೀರ್ಘಆಯು, ಸುಸಂಕೃತ, ಸಭ್ಯ,  ಪತ್ರಿಕಾರಂಗದಲ್ಲಿ ಉತ್ತಮ  ಹಾಗೂ  ಯಶಸ್ವೀ ಬರಹಗಾರ, ಸಂಪಾದಕ ಅಥವಾ  ಸಂಬಂಧಿತ ಕಾರ್ಯಗಳನ್ನು  ಮಾಡುವವರು. ಹೆತ್ತವರನ್ನು ಆಧರಿಸುವವ, ಮಧುರ ದಾಂಪತ್ಯ.

          ಅಶುಭನಾದರೆ,  ಶಿಕ್ಷಣ ಅಪೂರ್ಣ, ತಾಯಿಯ  ಪ್ರೀತಿಯ ಕೊರತೆ,  ತಂದೆಯಿಂದ  ಪೋಷಿತ,  ವ್ಯಾಪಾರ ದಲ್ಲಿ  ಹಾನಿ,  ಪತ್ನಿಯೊಡನೆ  ಭಿನ್ನಾಭಿಪ್ರಾಯ.

ಪಂಚಮಭಾವ :--
    
          ಪಂಚಮಭಾವ ಸ್ಥಿತ ಬುಧನು  ಶುಭನಾಗಿದ್ದರೆ,  ಜಾತಕನು  ದೂರದರ್ಶಿ,  ಮೇಧಾವಿ, ನ್ಯಾಯಪ್ರಿಯ,  ವಿವೇಕವಂತ,  ಚಿಂತನಶೀಲ, ಉಚ್ಛಮಟ್ಟದ  ಸರ್ಕಾರಿ ಅಧಿಕಾರಿ,  ಸಂಗೀತ ಮುಂತಾದ ಕಲೆಗಳಲ್ಲಿ. ಅಭಿರುಚಿ,  ಸಿರಿವಂತ.

          ಬುಧ   ಅಶುಭನಾದರೆ, ಅಪೂರ್ಣ ವಿದ್ಯಾಭ್ಯಾಸ,  ವ್ಯಾಪಾರ -ವ್ಯವಹಾರದಲ್ಲಿ  ಹಾನಿ,  ತಂದೆಗೆ. ಅಶುಭ, ಪತ್ನಿ ಯೊಡನೆ ಒಳ್ಳೆಯ  ಬಾಂಧವ್ಯವಿಲ್ಲ, ಉದರರೋಗ, ರಕ್ತ ದೊತ್ತಡ   ಮುಂತಾದ ರೋಗಗಳಿಂದ  ಭಾದಿತ,  ಸಂತಾನದ ಚಿಂತೆ.

ಷಷ್ಟ ಭಾವ :--

          ಷಷ್ಟ ಭಾವಸ್ಥಿತ  ಬುಧನು. ಶುಭನಾಗಿದ್ದರೆ,  ಜಾತಕನು,  ಪ್ರಾಮಾನಿಕನು,  ಪರಿಶ್ರಮದಿಂದ  ವಿಧ್ಯೆ,  ಉನ್ನತ ಮಟ್ಟದ  ಶ್ರೇಷ್ಠ ವೈದ್ಯ,  ಆರೋಗ್ಯದ ಕುರಿತು ಜಾಗೃತನಾಗಿರುವವ,  ಧಾರ್ಮಿಕ, ಧನ, ವಾಹನ  ಸಂಪತ್ತು ಗಳಿಂದ ಸುಖಿ,  ಸುಂದರ ಸಾಂಸಾರಿಕ ಜೀವನ.

          ಬುಧ  ಅಶುಭನಾದರೆ,  ಜಾತಕರು  ಕ್ರೋಧಿ,  ಜಗಳಗಂಟಿ,  ಅನಗತ್ಯ  ಖರ್ಚು, ಚಿಂತೆ, ಅಪೂರ್ಣ ವಿಧ್ಯೆ,  ಸಂಘರ್ಷದ ಜೀವನ, ತಾಯಿ ಅಥವಾ  ಚಿಕ್ಕಮ್ಮ ರೊಂದಿಗೆ  ವಿವಾದ, ಧನಹಾನಿ, ಆತ್ಮಹತ್ಯೆಯ  ಸಂಭವನೀಯತೆಯೂ  ಇರುತ್ತದೆ,  ಚರ್ಮ ರೋಗ,  ಹೃದಯರೋಗ, ನರದೌರ್ಬಲ್ಯ ದಿಂದ  ಬಾಧಿತನಾಗುತ್ತಾನೆ,  ಇವರ ಬಗ್ಗೆ  ವಿಶೇಷ ಗಮನ ಕೊಡುವುದು  ಅಗತ್ಯ.

ಸಪ್ತಮ ಭಾವ  :--

          ಸಪ್ತಮಭಾವಸ್ಥಿತ  ಬುಧನು  ಶುಭನಾಗಿದ್ದರೆ,  ಜಾತಕರು ಕುಶಾಗ್ರ ಮತಿಗಳು,  ಜ್ಯೋತಿಷಿ, ತಿಳುವಳಿಕೆ ಉಳ್ಳವ,  ತಾಯಿಯೊಡನೆ ಪರಸ್ಪರ ಪ್ರೀತಿ - ವಿಶ್ವಾಸ  ಇರುವವ, ಉನ್ನತ ಮಟ್ಟದ ಅಧಿಕಾರಿಗಳು,  ಉಚ್ಚಶಿಕ್ಷಣ,  ಬುದ್ಫ್ಹಿವಂತ  ಸಂಗಾತಿ,  ಸಿರಿವಂತ.

          ಬುಧ  ಅಶುಭನಾದರೆ,  ಕೋಪವುಳ್ಳವನು,  ಮಾನಸಿಕ ರೋಗ,  ಮನೆಯಲ್ಲಿ  ಸದಾ ಜಗಳ,  ವಿಚ್ಛೇದನವೂ  ಆಗಬಹುದು, ಅಪೂರ್ಣ ವಿದ್ಯಾಭ್ಯಾಸ,  ಅನೈತಿಕ  ಸಂಬಂಧ.

ಅಷ್ಟಮಭಾವ  :--
  
          ಅಷ್ಟಮಭಾವದ  ಬುಧ  ಶುಭನಾಗಿದ್ದರೆ,  ಜಾತಕರು  ಉನ್ನತ ವಿದ್ಯಾವಂತ ರು,  ಸತ್ಯನಿಷ್ಠ, ನ್ಯಾಯಪ್ರಿಯ,  ಭಾಗ್ಯಶಾಲಿ,  ಪ್ರಾಮಾಣಿಕ ವ್ಯಕ್ತಿ, ಕೋರ್ಟ್ ವ್ಯವಹಾರಗಳಲ್ಲಿ  ಜಯ,  ಉತ್ತಮ   ಸಂಗಾತಿ,  ಪತಿ ಪತ್ನಿ ಇಬ್ಬರೂ  ಭಾಗ್ಯಶಾಲಿ ಗಳು.

          ಅಶುಭ  ಬುಧನಾದರೆ,   ಜಾತಕನು  ಅಲ್ಪಾಯು,  ಭಾಗ್ಯಹೀನ,  ಜಗಳಗಂಟಿ,  ಪಾಲುದಾರಿಕೆ   ವ್ಯವಹಾರಗಲ್ಲಿ  ಹಾನಿ,  ನಪುಂಸಕತ್ವ,  ಅಲ್ಪ ಸಂತಾನ , ನರದೌರ್ಬಲ್ಯ ಕ್ಕೆ  ಸಂಬಂಧಿಸಿದ  ರೋಗಗಳಿಂದ  ಬಾಧಿತ.

ನವಮಭಾವ  :--

          ಬುಧ  ಶುಭನಾಗಿದ್ದಾಗ, ಜಾತಕರು  ವಿದ್ಯಾವಂತ, ಭವಿಷ್ಯ ವನ್ನು  ಬಲ್ಲವರು,  ಮೇಧಾವಿ  ಭಾಗ್ಯಶಾಲಿ,  ಉನ್ನತ ಪದವಿ, ಸದಾ  ವಿದ್ಯಾಧ್ಯಯನದಲ್ಲಿ  ಆಸಕ್ತಿ,  ಪಿತೃಭಕ್ತ,  ಪೂರ್ಣ  ಸುಖ ಸಂವೃದ್ಧಿ ಇರುವವರು,  ಸುಂದರ ಸುಶೀಲ ಪತ್ನಿ.

          ಬುಧ  ಅಶುಭನಾದರೆ,  ಅಪೂರ್ಣ ವಿಧ್ಯೆ,  ಹಾಗಾಗಿ  ಒಳ್ಳೆ ಕೆಲಸವಿಲ್ಲ,  ಅಸತ್ಯ,  ದುರಾಚಾರಿ,  ಲಜ್ಜಾಹೀನ,  ನುಡಿದಂತೆ  ನಡೆಯಿಲ್ಲ,  ಸುಖವಿಲ್ಲ,  ಕಲಹಯುಕ್ತ  ಕುಟುಂಬ.

ದಶಮಭಾವ :--

          ದಶಮ ಭಾವಸ್ಥ  ಬುಧನು  ಶುಭನಾದರೆ,  ಜಾತಕನು  ಬಹುಮುಖ ಪ್ರತಿಭೆಯುಳ್ಳವನು,  ಜ್ಯೋತಿಷ್ಯ ಬಲ್ಲವ, ಸಂಪಾದನೆಯ ಕಲೆಯಲ್ಲಿ  ನಿಪುಣ, ಹೊಸವಿಷಯಗಳಲ್ಲಿ  ಸಂಶೋಧನೆ  ಮಾಡುವವ,  ಜ್ಞಾನಿ,  ಅನೇಕ  ವಿದ್ಯೆಗಳು,  ಅಧಿಕ ಧನ ಹಾಗೂ  ಯಶಸ್ಸನ್ನು  ಹೊಂದಿದವನು.

          ಅಶುಭ ಬುಧನಾದರೆ,   ಮಾದಕ ವಸ್ತುಗಳ  ವ್ಯಸನಿ,  ಸದಾ ಯಾವುದಾದರೊಂದು  ರೋಗಗಳಿಂದ  ಪೀಡಿತ,  ಬಡತನ,  ಮಾನಸಿಕ  ಉದ್ವೇಗ.

ಏಕಾದಶ  ಭಾವ  :--

          ಶುಭ ಬುಧನಾದರೆ,  ಜಾತಕನು ಶ್ರೇಷ್ಠ ಮಟ್ಟದ  ಗಣಿತಜ್ಞ,  ಯಾವುದೇ ವಿಚಾರದಲ್ಲೂ  ಪರಾಮರ್ಶಿಸಿ ಕಾರ್ಯ ನಿರ್ವಹಿಸುವ ವ,  ಮಹತ್ವಾಕಾಂಕ್ಷೆ,  ಚಿಂತನಶೀಲ,  ಶ್ರೀಮಂತ,  ಉತ್ತಮ  ಪತ್ನಿ,  ಪುತ್ರರು.

          ಅಶುಭ ಬುಧನಾದರೆ,  ವಂಚಕ  ವಿಶ್ವಾಸಹೀನ,  ಜಗಳಗಂಟಿ,  ಆಲಸಿ, ನಿರ್ಧನ,  ಕ್ರೂರಿ,  ವಿದ್ಯಾವಿಹೀನ,  ಬಂಧುಗಳೊಂದಿಗೆ  ಉತ್ತಮ  ಸಂಬಂಧವಿಲ್ಲ,  ರೋಗಗ್ರಸ್ತ,  ಸಂಸಾರ ಪಾಲನೆಯ  ಚಿಂತೆ.

ದ್ವಾದಶ ಭಾವ :--

          ದ್ವಾದಶ ಭಾವದಲ್ಲಿರುವ  ಬುಧ  ಶುಭನಾಗಿದ್ದರೆ,  ಜಾತಕನು  ಧನವಂತ,  ದಯಾಳು,  ತ್ಯಾಗಿ,  ಅನೇಕ ವಿದ್ಯೆಗಳಲ್ಲಿ  ಪ್ರವೀಣ,  ಯಂತ್ರ - ಮಂತ್ರ - ತಂತ್ರ  ವಿದ್ಯೆಗಳಲ್ಲಿ  ಪರಿಣಿತ,  ಬುದ್ಧಿವಂತ,  ಯಶಸ್ದು  ಹಾಗೂ  ವಿದೇಶಯಾತ್ರೆ ಗಳಲ್ಲಿ  ಯಶಸ್ಸು.

          ಬುಧ  ಅಶುಭನಾದರೆ,  ಜಾತಕನು  ಚಾರಿತ್ರ್ಯಹೀನ,  ಭಾಗ್ಯಹೀನ,  ಮಾನಸಿಕ ಹಾಗೂ  ದೈಹಿಕ  ರೋಗಗಳಿಂದ ಬಾಧಿತ,  ಆಲಸ್ಯ,  ಉನ್ಮಾದ,  ಹುಚ್ಚು,  ಸಂಬಂಧಿಕಾರಲ್ಲಿ  ವಿಶ್ವಾಸ ವಿಲ್ಲ,  ವಿದೇಶಯಾತ್ರೆ  ಶುಭವಲ್ಲ,  ವ್ಯಾಪಾರದ್ಲಲಿ  ಧನ ಹಾನಿ,  ಲಾಟರಿ , ಸಟ್ಟಾ,  ಜೂಜು  ಇವುಗಳಲ್ಲಿ. ಧನಹಾನಿ.

ಪರಿಹಾರಗಳು:-

1 ). ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.  

2 ). ಹಲ್ಲುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ.

3 ). ಹೆಣ್ಣು ಮಕ್ಕಳು ಮೂಗನ್ನು ಚುಚ್ಚಿಕೊಂಡು ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ.

4 ). ಗಂಡಸರು ಎಡಕೈಗೆ ಬೆಳ್ಳಿಯ ಕಡಗವನ್ನು ಧರಿಸಿ. 

5 ). ಸರಸ್ವತಿ ಅಥವ ಗಾಯತ್ರಿಯನ್ನು ಆರಾಧಿಸಿ ಗಾಯತ್ರಿ ಜಪವನ್ನು ಸದಾ ಮಾಡುತ್ತಿರಿ.

6 ). ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡಿ

7 ). ಹಸಿಹುಲ್ಲನ್ನು ಹಸುಗಳಿಗೆ ತಿನ್ನಿಸಿ.  

8 ). ಮದ್ಯ,ಮಾಂಸ,ಮೊಟ್ಟೆಗಳನ್ನು ಸೇವಿಸಬೇಡಿ.

9 ). ಊಟಕ್ಕೆ ಮುಂಚೆ ಸ್ವಲ್ಪ ಆಹಾರವನ್ನು ಹಸು,ನಾಯಿ,ಕಾಗೆಗಳಿಗೆ ಹಾಕಿರಿ.

10). ರಾತ್ರಿ ಉಪ್ಪುನೀರಲ್ಲಿ ನೆನೆಸಿದ ಹೆಸರುಬೇಳೆಯನ್ನು ಮಾರನೆ ದಿನ ಬೆಳಗ್ಗೆ ಪಕ್ಷಿಗಳಿಗೆ ನೀಡಿರಿ.

11 ). ಹಸಿ ಮಣ್ಣಿನ ಕಲಶವನ್ನು ಹರಿಯುವ ನೀರಲ್ಲಿ ಹಾಕಿ.

12) ಯಾರಿಂದಲೂ  ಯಂತ್ರಗಳನ್ನು   (ತಾಯಿತ,ಕುಡಿಕೆ.ಇತರೆ)  ತಗೆದುಕೊಳ್ಳಬೇಡಿ.

13 ). ಸ್ವಲ್ಪ ಶುದ್ದವಾದ ತುಪ್ಪ ಸಕ್ಕರೆ,  ಕರ್ಪೂರಗಳನ್ನು   ಹಿತ್ತಾಳೆ ಬಕೇಟಿನ ನೀರಲ್ಲಿ ಹಾಕಿ.

14 ). ಬುಧವಾರದಿಂದ ೮ದಿನಗಳ ಕಾಲ ತೂತಿರುವ ತಾಮ್ರದ ಸಣ್ಣ ಬಿಲ್ಲೆಗಳನ್ನು ಹರಿಯುವ ನೀರಲ್ಲಿಹಾಕಿ.

15 ). ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪ ಕಲ್ಲುಸಕ್ಕರೆಯನ್ನು  ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿರಿ.

16 ). ಮಾದಕ ವಸ್ತುಗಳಿಂದ  ದೂರವಿರಿ.

17 ).  ಹೆಸರುಕಾಳು ದಾನಮಾಡಿ.

18 ).  ತಾಯಿ,  ಸಹೋದರಿ, ಸೋದರತ್ತೆ,  ಸೋದರ  ಸಂಬಂಧವನ್ನು  ಗೌರವದಿಂದ  ಕಾಣಿ.

19 ).  ಶುಭಕಾರ್ಯವನ್ನು. ಮಾಡುವ  ಮೊದಲು ಕನ್ಯೆಯರಿಂದ  ಆಶೀರ್ವಾದ ಪಡೆಯಿರಿ.

20 ). ಕಟುವಾದ ಮಾತುಗಳನ್ನಾಡದೆ,  ನಾಲಿಗೆಯ ಮೇಲೆ  ನಿಯಂತ್ರಣ ವಿದ್ದರೆ  ಬುಧನ  ಅಶುಭತ್ವದಿಂದ  ರಕ್ಷಣೆ ದೊರೆಯುತ್ತದೆ.

     ✍  ಡಾ :  B. N.  ಶೈಲಜಾ ರಮೇಶ್

Tuesday, 6 March 2018

ಬಲಹೀನ ಗ್ರಹಗಳಿಂದಾಗುವ ತೊಂದರೆಗಳು ಭಾಗ 3

                    ಹರಿಃ ಓಂ 
                        ಶ್ರೀ ಗಣೇಶಾನಮಃ
                      ಶ್ರೀ ಗುರುಭ್ಯೋನಮಃ
ಬಲಹೀನ ಗ್ರಹಗಳಿಂದಾಗುವ  ತೊಂದರೆಗಳು  ಹಾಗೂ  ಪರಿಹಾರಗಳು  ಭಾಗ  : 3
ಕುಜನಿಂದ  ಉಂಟಾಗುವ  ತೊಂದರೆಗಳು. :--
(Image source: Internet)

          ಉತ್ಸಾಹ ರಹಿತರು,  ಯಾವುದೇ ಕೆಲಸವನ್ನು ಮಾಡಲು ಅನರ್ಹತೆ,  ನಿರ್ಬೀತಿಯಿಂದ ಇರಲಾರರು,   ಹಾಗು ತಮ್ಮ ಸ್ವಂತ ಬಲದ ಮೇಲೆ ನಿಲ್ಲರಾರರು,   ಇತರರ ಅಧಿಕಾರಕ್ಕೆ ದಬ್ಬಾಳಿಕೆಗೆ ಸುಲಭವಾಗಿ   ಒಳಗಾಗುವವರು,  ಕೋರ್ಟು ವ್ಯವಹಾರಗಳಲ್ಲಿ  ಸಿಲುಕುವವರು,  ಇದರಿಂದ ನಷ್ಟಗಳನ್ನು  ಅನುಭವಿಸಿವವರು.   ಅನಿರೀಕ್ಷಿತವಾಗಿ ಸ್ಥಿರಾಸ್ಥಿಯು  ಮಾರಾಟಕ್ಕೆ  ಬರುತ್ತದೆ,  ಅಥವ ಇತರರ   ಅನುಬೋಗಕ್ಕೆ ಒಳಗಾಗುತ್ತದೆ,   ಅಗ್ನಿ,  ಕಳ್ಳರು   ಮತ್ತು   ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ,  ರೋಗ   ನಿರೋದಕಶಕ್ತಿ ಇರುವುದಿಲ್ಲ.  ಹಸಿವಿಲ್ಲದಿರುವಿಕೆ  ,ದೇಹ ತೂಕವನ್ನು ಕಳೆದುಕೊಳ್ಳುತ್ತದೆ,  ಬಲಹೀನ   ಜಠರ-ಕರುಳಿನ ತೊಂದರೆಗಳು,  ರಕ್ತಸೋರುವ ಗಾಯಗಳು,  ರಕ್ತಹೀನತೆಯಿಂದ   ಗಾಯಗಳು  ವಾಸಿಯಾಗುವುದು   ನಿದಾನವಾಗುತ್ತದೆ. ಪುರುಷರಲ್ಲಿ  ನಿರ್ವೀರ್ಯತೆ ಕಿವಿ,  ಕೀಲು,  ಮಂಡಿ,  ಕಾಲುಗಳು   ನೋವಿರುತ್ತದೆ,  ಪತ್ನಿಗೆ ಅನಾರೋಗ್ಯವಿರುತ್ತದೆ,  ದಾಂಪತ್ಯ ಸುಖವಿರುವುದಿಲ್ಲ,  ಗರ್ಭಪಾತ  ಅಥವ  ಹುಟ್ಟಿದ ಮಕ್ಕಳೆಲ್ಲಾ   ಸಾಯುವುದು,  ಕುಟುಂಬದಲ್ಲಿ   ಹೆಚ್ಚಿನ   ಸಾವು  ದಾಂಪತ್ಯದ ಹೊರಗೂ ಸಂಬಂದಗಳು  ಮಗನ   ತಪ್ಪಿನಿಂದ ಬಾಧೆ,  ಸುಖವಿರುವುದಿಲ್ಲ   ಹಿರಿಯ   ಸೋದರ   ಅಥವ ಭಾವನಿಂದ   ಸಮಸ್ಯೆಗಳು,  ಇವರ  ತಾಯಿ  ಅಥವ ಸೋದರಿಯೊಡನೆ   ಸೋದರರ   ಬಂದುಗಳು   ಅಥವ   ಸ್ನೇಹಿತರ   ಸಂಬಂದಗಳು ಹಿತವಾಗಿರುವುದಿಲ್ಲ   ಶತೃಗಳು   ಹೆಚ್ಚಾಗುವಿಕೆ.
ಕುಜನು  ದ್ವಾದಶ ಭಾವಗಳಲ್ಲಿ  ಸ್ಥಿತ ಫಲಗಳು :--
ಪ್ರಥಮ  ಭಾವ :--
          ಪ್ರಥಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ದಷ್ಟ ಪುಷ್ಟ ಶರೀರಿ,  ಪರಿಶ್ರಮಿ,  ಆರೋಗ್ಯವಂತ,  ಭಯರಹಿತ,  ಧೀರ್ಘಆಯು,  ಧನವಂತ,  ದಯಾಳು,  ಯಶಸ್ವೀ ದಾಂಪತ್ಯ  ಹಾಗೂ  ಸುಖಿ.
         ಅಶುಭನಾದರೆ, ಜಾತಕನು  ಕ್ರೂರಿ,  ನಿರ್ದಯಿ, ಆಧರ್ಮಿ,  ಕ್ರೋಧಿ,  ಆರ್ಥಿಕ  ಸಂಕಷ್ಟ,  ಅಲ್ಪಾಯು  ಸಂಗಾತಿ,  ಜೀವನ ಪರ್ಯಂತ  ದುಃಖಿ,  ನೇತ್ರ ರೋಗಿ.
ದ್ವಿತೀಯ ಭಾವ  :--
          ದ್ವಿತೀಯ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸಾಹಸಿ, ಬುದ್ಧಿವಂತ,  ಭಯರಹಿತ,  ದಯಾಳು,  ಸ್ಪಷ್ಟ ಮಾತಿನವರು,  ಸಹೋದರರಲ್ಲಿ  ಜೇಷ್ಠ ಹಾಗೂ ಕುಟುಂಬದ  ಸಂರಕ್ಷಣೆ ಮಾಡುವವರು, ಮಿಷಿನರಿ,  ಹಾರ್ಡ್ವೇರ್ ಮುಂತಾದುವುಗಳ  ಆವಿಷ್ಕಾರಗಳನ್ನು  ಮಾಡುವ ಈತನ ದಾಂಪತ್ಯ ಜೀವನವೂ  ಸುಖಮಯವಾಗಿರುತ್ತದೆ.
          ಅಶುಭನಾದರೆ,  ಜಾತಕರ ವಿದ್ಯಾಭ್ಯಾಸ  ಅಪೂರ್ಣವಾಗುತ್ತದೆ,  ವ್ಯಾಪಾರದಲ್ಲೂ  ಸಫಲತೆ ಇಲ್ಲ,  ಜಗಳಗಂಟಿ,  ಈತನ ಮರಣಕ್ಕೆ ಜಗಳ ಅಥವಾ  ದುರ್ಘಟನೆ  ಕಾರಣವಾಗುತ್ತದೆ.
ತೃತೀಯ ಭಾವ :--
          ತೃತೀಯ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸಹೋದರರಲ್ಲಿ  ಜೇಷ್ಠ, ಆದರ್ಶ ಗಳನ್ನು  ಅನುಸರಿಸಿ ನಡೆಯುವವ,  ಮಾರ್ಗದರ್ಶಕ,  ಧನವಂತ,  ಪ್ರತಿಷ್ಠಿತ,   ಕೌಟುಂಬಿಕ ಜೀವನ ಚನ್ನಾಗಿರುತ್ತದೆ.
           ಅಶುಭನಾದರೆ,  ಜಾತಕರು  ಭಾಗ್ಯಹೀನ,  ಅಪ್ರಾಮಾಣಿಕ,  ವ್ಯಭಿಚಾರಿ, ವಂಚಕ,  ಅನ್ಯ ಸ್ತ್ರೀಯರೊಂದಿಗೆ  ಸಂಪರ್ಕ,  ಸಂತಾನ ಸುಖವಿಲ್ಲ,  ರಕ್ತ ಸಂಬಂಧಿ  ರೋಗಗಳು.
ಚತುರ್ಥ ಭಾವ  :--
          ಚತುರ್ಥ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸತ್ಯವಂತ,  ನ್ಯಾಯಮಾರ್ಗದಲಿ  ನಡೆಯುವವನು,  ಸಾಹಸಿ,  ಭಯರಹಿತ,  ಪಿತ್ರಾರ್ಜಿತ ಸಂಪತ್ತು ಉಳ್ಳವ,  ವ್ಯಾಪಾರ - ವ್ಯವಹಾರಗಳಲ್ಲಿ  ಯಶಸ್ವಿಯಾಗಿ ಮುನ್ನಡೆಯುವವನು,  ಸುಂದರ ಸುಖದ  ಸಂಸಾರ.
          ಅಶುಭನಾದರೆ,  ತಾಯಿ ತಂದೆಯರಿಗೆ ಅಶುಭ,  ಪತ್ನೀಪೀಡಕ,  ಕ್ರೂರಿ,  ದುರ್ವ್ಯವಹಾರಿ,  ಸ್ವತಂತ್ರವಾಗಿ  ನಿರ್ಣಯ ಕೈಗೊಳ್ಳಲು  ಅಸಮರ್ಥ,  ದುರ್ಘಟನೆಯಿಂದ , ಗಾಯಗೊಳ್ಳುವ ಅಥವಾ  ಮರಣಹೊಂದುವ  ಯೋಗ.
ಪಂಚಮ  ಭಾವ  :--
            
          ಪಂಚಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು, ದಷ್ಟಪುಷ್ಟ ಶರೀರಿ,  ಧೀರ್ಘಆಯು,  ಆರೋಗ್ಯವಂತ,  ಕ್ರೀಡಾಪಟು,  ಕ್ರೀಡೆಯಲ್ಲಿ  ರಾಷ್ಟ್ರ ಮಟ್ಟದಲ್ಲಿ  ಸಫಲನಾಗುವವ,  ಆಧುನಿಕತೆಯಲ್ಲಿ  ಆಸಕ್ತಿ,  ಧನವಂತ,  ವೈದ್ಯಕೀಯ ಕ್ಷೇತ್ರದಲ್ಲಿ ಯೂ ಯಶಸ್ವಿಯಾಗುತ್ತಾನೆ,  ಉತ್ತಮ  ದಾಂಪತ್ಯ.
          ಅಶುಭನಾದರೆ,   ಕಪಟ ಯೋಜನೆಗಳನ್ನು  ಮಾಡುವವ,  ಲೋಭಿ,  ಅಲ್ಪಾಯು  ಸಂತಾನ,  ಸಟ್ಟಾ,  ಲಾಟರಿ,  ಜೂಜು ಇವುಗಳಲ್ಲೂ  ಆಸಕ್ತಿ,  ಜೈಲುವಾಸ.
ಷಷ್ಟ ಭಾವ  :--
         
          ಷಷ್ಟ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಆದರ್ಶವಾದಿ, ಸತ್ಯನಿಷ್ಠ, ಲೇಖಕ,  ಸಂಗೀತ ಕ್ಷೇತ್ರದಲ್ಲಿ ಯೂ ಕೂಡ  ಸಫಲ,  ಧನ ವಾಹನಗಳುಳ್ಳವನು, ಸುಖಕರ  ದಾಂಪತ್ಯ.
          ಅಶುಭನಾದರೆ, ಜಾತಕನು  ಆಲಸಿ,  ಹೊಣೆಗೇ ಡಿ,  ಶೀಘ್ರ ಕೋಪಕ್ಕೊಳಗಾಗುವವ,   ವಿವಾದದಲ್ಲಿ ಸಿಲುಕಿ ಧನಹಾನಿ, ದುರ್ಘಟನೆ ಯಿಂದ  ಗಾಯಕ್ಕೊಳಗಾಗುವವರು,  ಅಲ್ಪಾಪುತ್ರರು.
ಸಪ್ತಮ ಭಾವ  :--
         ಸಪ್ತಮ ಭಾವದ  ಕುಜನು  ಶುಭನಾಗಿದ್ದರೆ  ಜಾತಕ ರು, ಧರ್ಮಪ್ರಿಯ,  ಉಚ್ಛಮಟ್ಟದ  ವ್ಯಾಪಾರಿ,  ರಾಜಕೀಯ  ಮುಂದಾಳು,  ಬುದ್ಧಿವಂತರು,  ಧನ, ಧಾನ್ಯ, ವಾಹನಗಳುಳ್ಳವರು, ಪರರ ಹಿತಕ್ಕಾಗಿ  ಶ್ರಮಿಸಿವವರು.
          ಅಶುಭನಾದರೆ,  ಜಾತಕನು  ಜಗಳಗಂಟನು,   ಕೋರ್ಟ್ ವ್ಯವಹಾರಗಳಲ್ಲಿ  ಧನನಷ್ಟ,  ಆಪತ್ತು, ದಾಂಪತ್ಯ ದಲ್ಲಿ  ತೃಪ್ತಿ ಇಲ್ಲ,  ವಿಧವೆ ಅಥವಾ  ವ್ಯಭಿಚಾರಿಣಿ  ಸ್ತ್ರೀಯರಲ್ಲಿ  ಆಸಕ್ತಿ,  ದ್ವಿಕಳತ್ರ,  ಮೂಲವ್ಯಾಧಿ.
ಅಷ್ಟಮ  ಭಾವ  :--
          ಅಷ್ಟಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,   ನ್ಯಾಯದ ಪಕ್ಷದ,  ಸಮಾಜದಲ್ಲಿ  ಸನ್ಮಾನಿತ,  ನಿರ್ಭಯಿ,  ಸಾಹಸಿ,  ಧನವಂತ,  ಉತ್ತಮವ್ಯಕ್ತಿ,  ಶತ್ರುಗಳ ಮೇಲೆ ವಿಜಯ,  ಉತ್ತಮ ಪತ್ನಿ.
          ಅಶುಭನಾದರೆ,  ಅಲ್ಪಾಯು, ಅಫಘಾತಗಳು,  ನೇತ್ರರೊಗಿ,  ಕಳತ್ರ ನಾಶ, ಗುಪ್ತರೋಗಗಳು,
ನವಮ ಭಾವ  :--
          ನವಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,   ಭಾಗ್ಯಶಾಲಿ,  ಮಹಾಯೋಧ,  ಧೀರ್ಘಆಯು,  ಯುದ್ಧ ಕಲೆಯಲ್ಲಿ  ನಿಪುಣ,  ದೇಶಕ್ಕೆ  ಗೌರವ  ತರುವವ,  ಅಂತಾರಾಷ್ಟ್ರೀಯ ಮಟ್ಟದಲ್ಲಿ  ವ್ಯಾಪಾರ,  ಅತ್ಯಧಿಕ  ಧನವಂತ,  ಕುಟುಂಬದವರೆಲ್ಲರ  ಸಹಕಾರವಿರುತ್ತದೆ.
         ಅಶುಭನಾದರೆ,  ಜಾತಕನು  ನಾಸ್ತಿಕ,  ಪರಪೀಡಕ, ಜಗಳಗಂಟಿ,  ಕ್ರೂರಪ್ರವೃತ್ತಿಯವ,  ಭಾಗ್ಯಹೀನ,  ತಂದೆಗೆ  ಅಶುಭ.
ದಶಮ ಭಾವ :--
          ದಶಮ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಬುದ್ಧಿವಂತ,  ಪರಿಶ್ರಮಿ,  ಧನವಂತ,  ಭಯರಹಿತ,  ಕಠಿಣ  ಕಾರ್ಯಗಳ  ನೇತೃತ್ವದಲ್ಲಿ  ಸಮರ್ಥನಾದವ,  ಎಲ್ಲಾ ಕ್ಷೇತ್ರದಲ್ಲಿ ಯೂ  ಸಫಲ,  ಉತ್ಸಾಹಿ,  ರಾಜನೀತಿ  ಬಲ್ಲವ, ಪ್ರಸಿದ್ಧ ಮಂತ್ರಿ,   ಎಲ್ಲೆಡೆಯೂ  ಸಫಲತೆ, ಎಲ್ಲರಿಂದಲೂ  ಸನ್ಮಾನಿತ,  ಸುಮಧುರ ದಾಂಪತ್ಯ.
          ಅಶುಭನಾದರೆ,  ಜಾತಕರು  ಕ್ರೋಧ ಪ್ರವೃತ್ತಿ ಯುಳ್ಳವರೂ, ಹಾಗಾಗಿ  ಅಪಮಾನ, ವ್ಯಾಪಾರದಲ್ಲಿ  ಹಾನಿ,  ಕುಟುಂಬದಲ್ಲಿ  ಮೃತ್ಯು.
ಏಕಾದಶ  ಭಾವ  :--
          ಏಕಾದಶ  ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸ್ವಯಂ ತನ್ನ  ಭಾಗ್ಯವನ್ನು ತಾನೇ  ನಿರ್ಮಿಸಿಕೊಳ್ಳುವವ,  ಉಚ್ಚಶಿಕ್ಷಣ,  ಧನವಂತ,  ರಾಜನೀತಿ  ಬಲ್ಲವ,  ಅಂತಾರಾಷ್ಟ್ರೀಯ ಮಟ್ಟದಲ್ಲಿ  ವ್ಯಾಪಾರ,  ಐಷಾರಾಮಿ  ಜೀವನ,  ಧರ್ಮದಲ್ಲಿ  ಆಸಕ್ತಿ,  ಮಿತ್ರರಿಂದ  ಲಾಭ,  ಸುಖಮಯ  ದಾಂಪತ್ಯ.
          ಅಶುಭನಾದರೆ,  ಜಾತಕನು  ಅಲ್ಪಾಯು,  ಭಾಗ್ಯಹೀನ,  ಕುಟುಂಬ ಕ್ಕೆ  ಕಂಟಕಪ್ರಾಯ,  ಅಲ್ಪ ಸಂತಾನ,  ಸಂಭಂಧಿಕರೊಡನೆ  ಭಿನ್ನಾಭಿಪ್ರಾಯ,  ಪಿತ್ರಾರ್ಜಿತ  ಆಸ್ತಿ  ನಷ್ಟ.
ದ್ವಾದಶ  ಭಾವ :--
         
          ದ್ವಾದಶ ಭಾವದ  ಕುಜನು  ಶುಭನಾಗಿದ್ದರೆ  ಜಾತಕನು,  ಸಂಮೃದ್ಧ  ಕುಟುಂಬದಲ್ಲಿ  ಜನಿಸಿದವರು, ಪ್ರತಿಷ್ಠೆ,  ಉಚ್ಚಶಿಕ್ಷಣ,  ಧನವಂತ, ವಿದೇಶ ಯಾತ್ರಾಯೋಗ, ಆಶ್ರಯ ಹೀನರಿಗೆ  ಆಶ್ರಯದಾತ.
          ಅಶುಭನಾದರೆ,  ಜಾತಕರು  ಜಗಳಗಂಟಿ, ಭಾಗ್ಯಹೀನ,  ಕ್ರೂರ,  ವಿಕಾರ  ದೃಷ್ಟಿ,  ಅಧಿಕ ಕಷ್ಟ,  ಜೈಲುವಾಸ ಯೋಗ,
ಪರಿಹಾರಗಳು:- ( ಲಾಲ್ ಕಿತಾಬ್ ಪರಿಹಾರಗಳು )
1 ). ಸುಬ್ರಮಣ್ಯ,ಹನುಮಂತರನ್ನು ಬೆಸ ರಾಶಿಯವರು/ಚಾಮುಂಡಿ  ಅಥವ   ಭದ್ರಕಾಳಿಯನ್ನು ಸಮರಾಶಿಯವರು  ಆರಾಧಿಸಿ.
2 ). ಮಂಗಳವಾರಗಳಂದು  ಉಪವಾಸವನ್ನು  ಮಾಡಿ ಸಿಹಿಯನ್ನು ಹಂಚಿ.
3 ). ಕರ್ಪೂರ,  ಮೊಸರು, ಸುಗಂಧ  ದ್ರವ್ಯಗಳನ್ನು ಕೆಂಪು  ವಸ್ತ್ರದಲ್ಲಿ  ಇರಿಸಿ  ನಿರ್ಜನ  ಪ್ರದೇಶದಲ್ಲಿ ನೆಲದಲ್ಲಿ  ಹುದುಗಿಸಿ.
೪ ). ಹಾಲನ್ನು  ಆಲದ  ಮರದ  ಬುಡಕ್ಕೆ  ಹಾಕಿ  ಹಸಿಯ ಮಣ್ಣನ್ನು  ತಿಲಕದಂತೆ   ಹಚ್ಚಿಕೊಳ್ಳಿ .
5 ). ಬೇವಿನ ಮರವನ್ನು ನೆಟ್ಟು ನೀರನ್ನು ಹಾಕುತ್ತಿರಿ.
6 ). ಸೋದರ  ಮತ್ತು  ಸೋದರ ಮಾವನನ್ನು ಸತ್ಕರಿಸಿ.
7 ).  ನಾಯಿಗಳಿಗೆ  ತಂದೂರಿ  ಸಿಹಿರೊಟ್ಟಿಯನ್ನು  ೪೫ ದಿನಗಳ  ಕಾಲ  ಕೊಡಿ.
8 ). ಸದಾ  ಗಾಯತ್ರಿ  ಮಂತ್ರ  ಅಥವ  ಹನುಮಾನ್ ಚಾಲೀಸವನ್ನು ಪಠಿಸುತ್ತಿರಿ.
9 ). ರಕ್ತ ದಾನ ಮಾಡಿ.
10 ). ಮಂಗಳವಾರ  ಮದ್ಯಾಹ್ನಗಳಂದು  ಹರಿಯುವ ನೀರಲ್ಲಿ  ಬತ್ತಾಸು  ಹಾಕಿ .
11) . ಚಪಾತಿಯನ್ನು ಬೇಯಿಸುವ  ಮುಂಚೆ ಕಾದ ಹೆಂಚಿನ ಮೇಲೆ ನೀರನ್ನು ಚುಮುಕಿಸಿ.
೧೨ ). ಬಂಗಾರ, ಬೆಳ್ಳಿ, ತಾಮ್ರದ ಉಂಗುರವನ್ನು ಧರಿಸಿ.
13 ).  ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ.
14 ). ಕೆಂಪು ವಸ್ತ್ರಗಳನ್ನು ಸೋದರತ್ತೆ,ಸೋದರಿ,ತಾಯಿಗೆ ಹಾಗು ಹೆಂಡತಿಗೆ ಕೊಡಿ.
15 ). ಪಕ್ಷಿಗಳಿಗೆ ಸಿಹಿಯನ್ನು ತಿನ್ನಿಸಿ.
16 ). ರೋಗಗಳಿಂದ ಮುಕ್ತರಾಗಲು ಜಿಂಕೆ ಚರ್ಮದ ಮೇಲೆ ಮಲಗಿ.
17 ). ಅಗ್ನಿ ಅಪಘಾತಗಳ ತಡೇಗಟ್ಟಲು ಸಕ್ಕರೆಯ ಖಾಲಿ ಚೀಲಗಳನ್ನು ಸಜ್ಜೆಯ ಮೇಲೆ ಇಡಿ.
18 ). ಬಾವ,ಬಾಮೈದುನ ನೊಂದಿಗೆ ಬಾಗಸ್ಥವ್ಯವಹಾರ ಮಾಡದಿರಿ.
19 ). ಪತ್ನಿ ಅಥವ ಮಕ್ಕಳಿಗೆ ತೊಂದರೆ ಇದ್ದರೆ ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪವನ್ನು ಇಟ್ಟು ರುದ್ರಭೂಮಿಯಲ್ಲಿ ಹುದುಗಿಸಿ.
20 ) . ೮ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ಆನೆಗೆ ಸಂಬಂದಿಸಿದ ದಂತದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
21 ). ೬ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ೬ ಮಂದಿ ಕನ್ಯಾ ಮುತ್ತೈದೆಯರ ಅಶೀರ್ವಾದವನ್ನು ೬ ದಿನಗಳ ಕಾಲ ಪಡೆಯಿರಿ.
    
         ✍   ಡಾ : B. N.  ಶೈಲಜಾ  ರಮೇಶ್.

Saturday, 3 March 2018

ಬಲಹೀನ ಗ್ರಹಗಳಿಂದಾಗುವ ತೊಂದರೆಗಳು ಹಾಗೂ ಪರಿಹಾರ ಗಳು ಭಾಗ - 2

                          ಹರಿಃ ಓಂ   
                     ಶ್ರೀ ಗಣೇಶಾನಮಃ
                   ಶ್ರೀ ಗುರುಭ್ಯೋನಮಃ

       ಜಾತಕನ ಕುಂಡಲಿಯಲ್ಲಿ ಗ್ರಹಗಳು  ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಮತ್ತು  ಇವುಗಳ ಪರಿಹಾರಗಳು ( ಲಾಲ್ ಕಿತಾಬ್ ಪರಿಹಾರಗಳು)

ಗ್ರಹಗಳು
೧)  ನೀಚತ್ವದಲ್ಲಿ
೨)  ಶತೃಕ್ಷೇತ್ರಗಳಲ್ಲಿ
೩)  ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ
೪)  ಅಸ್ತಂಗತರಾಗಿದ್ದರೆ
5)  ೬, ೮೧೨ನೇ ಸ್ಥಾನಗಳಲ್ಲಿದ್ದರೆ.
೬)  ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ.
೭)  ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ.
ಚಂದ್ರ:---
Image source:  Internet

ಚಂದ್ರ  ನಿಂದ ಉಂಟಾಗುವ  ತೊಂದರೆಗಳು  :--

       ಜನನ ಕುಂಡಲಿಯಲ್ಲಿ ಚಂದ್ರನು ರಾಹು ಮತ್ತು ಶನಿಗಳ ಸಂಪರ್ಕದಲ್ಲಿ ಮತ್ತು ಕ್ಷೀಣನಾಗಿದ್ದರೆ,
ಬಾವನಾತ್ಮಕತೆಯಲ್ಲಿ ಅಸಮತೋಲನ,
ಇತರರಬಗ್ಗೆ  ಆತ್ಮೀಯತೆಯಿಂದಿರಲು ಹೆದರಿಕೆ,  ಜೀವನದಲ್ಲಿ ತುಮುಲಗಳನ್ನು  ಸಹಿಸಲಾರರು
ಸಂತೃಪ್ತಿ ಇರುವುದಿಲ್ಲ  ರಹಸ್ಯಗಳನ್ನು ಕಾಪಾಡಲಾರರು, ಋಣಾತ್ಮಕತೆ, ಮಂಕು  ಮುಚ್ಚಿದ  ಮನಸ್ಸು, ತಾಯಿಯು ಸಹ ಜೀವನದಲ್ಲಿ  ಹಲವಾರು ರೀತಿಯಲ್ಲಿ  ಕಷ್ಟಗಳನ್ನುಅನುಭವಿಸಿರುವರು,
ಅಶಕ್ತತೆ, ದೇಹದಲ್ಲಿ  ದ್ರವಗಳ ಕೊರತೆ, ತೂಕನಷ್ಟ,ಒಣಗಿದ ಚರ್ಮ,ಮಲಬದ್ದತೆ, ನರಗಳ ಊತ,ಮೂತ್ರಕೋಶದ ತೊಂದರೆ, ಶ್ವಾಸಕೋಶಗಳ ನಿರ್ಬಲತೆ, ತಾಪವನ್ನು ತಾಳಲಾರರು, ಔಷದಿಗಳು ಉಪಯೋಗವಾಗುವುದಿಲ್ಲ, ಹೃದಯ ಅಥವ ಸ್ತನಗಳಲ್ಲಿ ತೊಂದರೆ, ಮದ್ಯವ್ಯಸನಿಗಳಾಗುವರು, ಸೊಸೆಯೊಂದಿಗೆ  ವಿನಾಕಾರಣ ಕಲಹಗಳು, ಮಗಳು ಅತ್ತೆಮನೆಯಲ್ಲಿ ಅಸುಖಿ, ಮಕ್ಕಳವಿದ್ಯಾಬ್ಯಾಸದಲ್ಲಿ ತೊಂದರೆಗಳು, ಹಾಲುಕೊಡುವ  ಹಸುಗಳು ಸಾಯುತ್ತವೆ, ಕೊಳವೆಬಾವಿ ಒಣಗುತ್ತದೆ, ಸಂಸಾರದಲ್ಲಿ  ಒಡಕು ಹೆಚ್ಚಾಗುತ್ತದೆ, ಪರಸ್ತ್ರೀಯರ ಮೇಲೆ  ಹಣವನ್ನು ವ್ಯೆಚ್ಚಮಾಡುವಿರಿ, ಅನಿರೀಕ್ಷಿತ ಅನಾರೋಗ್ಯ, ಹಣಕಾಸು ತೊಂದರೆ  ಒಳ್ಳೆಕೆಲಸ ಮಾಡಿದರು  ಕೆಟ್ಟಹೆಸರು ತಪ್ಪುವುದಿಲ್ಲ, ಆಗಿ ಹೋದದ್ದನ್ನು  ಚಿಂತಿಸಿ ಅತಿಯಾಗಿ ಮರುಗುವಿಕೆ, ಸ್ತ್ರೀಯರಲ್ಲಿ  ಬಂಜೆತನ  ಮತ್ತು ಋತುಚಕ್ರದ ತೊಂದರೆಗಳು.

ಚಂದ್ರನು ದ್ವಾದಶ ಭಾವಗಳಲ್ಲಿ  ಸ್ಥಿತ ಫಲಗಳು :--
ಪ್ರಥಮ ಭಾವ :--

          ಪ್ರಥಮ ಭಾವದಲ್ಲಿ ಸ್ಥಿತನಾದ  ಚಂದ್ರನು ಶುಭನಾಗಿದ್ದರೆ,  ಜಾತಕನು  ಆಕರ್ಷಕ ವ್ಯಕ್ತಿತ್ವ ದವರು, ಅತ್ಯಂತ ರೂಪವಂತರು,  ಗೌರವವರ್ಣ,  ದುಂಡನೆಯ ಮುಖ, ಉತ್ತಮ ವಿಚಾರದವರು, ಶ್ರೀಮಂತ ರು , ದೊಡ್ಡ ಕುಟುಂಬದವರು,  ಬುದ್ಧಿವಂತರು,  ಸಾಂಸಾರಿಕ ಜೀವನದ ಲ್ಲಿ ಸುಖಿ,  ದಯಾಳು, ಪರೋಪಕಾರಿ,  ಸ್ತ್ರೀಯರ ಕುರಿತು ವಿಶೇಷ  ಭಕ್ತಿ ಭಾವ ವಿರುವವರೂ,  ತಾಯಿಯ ಕುರಿತು ವಿಶೇಷ  ಗೌರವವಿರುವವರೂ  ಆಗಿರುತ್ತಾರೆ.
          ಅಶುಭ ನಾಗಿದ್ದರೆ,  ಜಾತಕರು ದೈಹಿಕ ಹಾಗೂ ಮಾನಸಿಕ ಅನಾರೋಗ್ಯ ದಿಂದ ಭಾಧಿತರು, ಸದಾ ಒಂದಿಲ್ಲೊಂದು ಚಿಂತೆ ಭಾಧಿಸುತ್ತವೆ,  ಉನ್ಮಾದತೆ,  ಸ್ತ್ರೀಯರಿಂದ ಅಪಮಾನ -  ತಿರಸ್ಕಾರ  ಉಂಟಾಗುತ್ತದೆ
.
ದ್ವಿತೀಯ  ಭಾವ :--

           ಶುಭ ಚಂದ್ರ ನಾಗಿದ್ದರೆ,  ಜಾತಕರು ವಿಶೇಷ ಆಕರ್ಷಕ ರು,  ವಾಕ್ಚಾತುರ್ಯವುಳ್ಳವರೂ,  ವಾಕ್ಚಾತುರ್ಯ ಬಲದಿಂದ  ಎಲ್ಲರನ್ನೂ  ಪ್ರಭಾವಿತ ಗೊಳಿಸುವವರೂ,  ವ್ಯವಹಾರ  ನಿಪುಣರೂ,  ವಿನೋದ  ಪ್ರವೃತ್ತಿ ಯವರು,  ಅವಕಾಶ ಗಳ ಪೂರ್ಣ ಲಾಭ ಪಡೆಯುವವರು,  ದೊಡ್ಡ ಕುಟುಂಬದವರು.

           ಅಶುಭ ಚಂದ್ರನಾದರೆ, ಜಾತಕರು ವಿಪರೀತ ಮಾನಸಿಕ ವ್ಯಥೆಯಿಂದ ಬಳಲುವವರೂ,  ವಿದ್ಯಾಧ್ಯಯನದಲ್ಲಿ  ತೊಂದರೆಗಳು,  ಪಿತ್ರಾರ್ಜಿತ  ಸ್ವತ್ತಿನಿಂದ  ವಂಚಿತರು,  ಸಣ್ಣ - ಪುಟ್ಟ  ಕೆಲಸಗಳಿಗೂ ವಿಪರೀತ ಶ್ರಮ ಪಡುವವರು,  ಹಣ  ಸಂಪಾದನೆ ಯಲ್ಲಿ ಅಸಮರ್ಥರು,   ಬಹುಶಃ  ಅಲ್ಪಾಯುಷ್ಯವಿರುವ  ಸತಿ,  ಅಥವಾ  ರೋಗಪೀಡಿತ  ಸತಿ,  ಮಾದಕವಸ್ತು  ವ್ಯಸನಿ,  ಕಠೋರ ಮಾತುಗಳನ್ನಾಗುವವರು.

ತೃತೀಯ ಭಾವ  :--

         ಶುಭ ಚಂದ್ರನಾದರೆ,  ಜಾತಕನು ಉತ್ತಮ  ಆರೋಗ್ಯವಂತ,  ಶ್ರೀಮಂತ,  ಸಮಾಜದಲ್ಲಿ  ಸನ್ಮಾನಿತ ಹಾಗೂ  ಪ್ರತಿಷ್ಠಿತರು,  ಸ್ಥಿರ ಮನಸ್ಕರೂ,  ಪರಿಶ್ರಮ ಕ್ಕೆ ತಕ್ಕ ಫಲವನ್ನು  ಹೊಂದುವವರೂ,  ಬುದ್ಧಿವಂತರು,  ವ್ಯಾಪಾರ ದಲ್ಲಿ ಕುಶಲರು,  ಸಂಚಾರದಲ್ಲಿ  ಅಭಿರುಚಿ.

         ಅಶುಭ ನಾಗಿದ್ದರೆ,  ಜಾತಕರು  ಚಿಂತೆ ಯಿಂದಾವೃತ ,  ಮತಿಭ್ರಮಣೆ,  ಯಾತ್ರೆಗಳಲ್ಲಿ  ದುರ್ಘಟನೆ ಉಂಟಾಗುವ  ಸಂಭವ,  ತಂದೆಗೆ ಅಲ್ಪಾಯು,  ಸೋದರರೊಂದಿಗೆ ವೈರತ್ವ ಹಾಗೂ  ಅಪಮಾನ,  ಅಲೆದಾಟ, ಅನೇಕ  ಶತ್ರುಗಳು.

ಚತುರ್ಥ ಭಾವ :--

          ಶುಭ ಚಂದ್ರನಾಗಿದ್ದರೆ, ಜಾತಕರು  ಶ್ರೀಮ0ತರು,  ಸಮಾಜದಲ್ಲಿ  ಪ್ರತಿಷ್ಠಿತ ರು,  ಗುಣವಂತರು,  ಸರಳ ಸ್ವಭಾವದ ತಾಯಿ,  ತಾಯಿ ತಂದೆಯ  ಸೇವಕ,  ಅನೇಕ ವಾಹನಗಳು,  ಉನ್ನತ  ವಿದ್ಯಾವಂತ,  ಸುಖೀ  ಹಾಗೂ  ವೈಭವಯುತ  ಜೀವನ,  ಜಲ - ಪದಾರ್ಥ  ಸಂಬಂಧಿ  ವ್ಯಾಪಾರ,  ಉತ್ಯಮ  ದಾಂಪತ್ಯ.

          ಅಶುಭನಾದರೆ,   ಪಿತ್ರಾರ್ಜಿತ ಧನ ನಷ್ಟ,  ಅಲ್ಪ ಸಂಪಾದನೆ, ದಾಂಪತ್ಯ ಜೀವನದಲ್ಲಿ ಸುಖವಿಲ್ಲ, ಮನೆ ಬದಲಾವಣೆ,  ತಾಯಿಯೊಡನೆ  ವಾದ - ವಿವಾದ,  ವಾಹನ  ದುರ್ಘಟನೆ,  ಯಾತ್ರೆಗಳಲ್ಲಿ ಕಷ್ಟ,  ದುಃಖ ,ಕಷ್ಟ,  ದಾರಿದ್ರ್ಯ,  ವ್ಯಾಧಿ ಇರುವವರಾಗುತ್ತಾರೆ.

ಪಂಚಮಭಾವ :--
        
          ಶುಭ ಚಂದ್ರನಾಗಿದ್ದರೆ, ಜಾತಕರು  ಭಾಗ್ಯವಂತರು,  ನ್ಯಾಯಪ್ರಿಯ,  ಅನ್ಯಾಯದ ವಿರುದ್ಧ ಹೋರಾಡುವವರು,  ಕಲೆಗಳಲ್ಲಿ  ಆಸಕ್ತಿ,  ಸುಂದರ ಪತ್ನಿ,  ಪತ್ನಿಯಿಂದ ಪೂರ್ಣ ಸಹಕಾರ,  ಸ್ತ್ರೀ ಸಂತಾನ,  ಆಕಸ್ಮಿಕ  ಧನಲಾಭ,  ಜ್ಯೋತಿಷ್ಯ ಹಾಗೂ  ಗುಪ್ತ ವಿದ್ಯೆಯಲ್ಲಿ ಆಸಕ್ತಿ.

          ಅಶುಭನಾದರೆ,  ಮಾನಸಿಕವಾಗಿ ತೊಂದರೆ, ಸ್ತ್ರೀ  ಸಂತಾನ,  ಅಹಂಕಾರಿ,  ಗರ್ವದ ಪತ್ನಿ,  ಪ್ರೀತಿ - ಪ್ರಣಯದ  ಕಾರಣಕ್ಕಾಗಿ  ಸಾರ್ವಜನಿಕವಾಗಿ ಅವಮಾನ  ಅನುಭವಿಸುವವರು.

ಷಷ್ಟ ಭಾವ  :--

          ಶುಭ ಚಂದ್ರನಾಗಿದ್ದರೆ, ಜಾತಕರು  ಭಾಗ್ಯಶಾಲಿ,  ಆದರೆ ಕೃಶ ಶರೀರ,  ದನ ಸಂಪತ್ತು, ಯಶಸ್ವೀ ವ್ಯಕ್ತಿ,  ಮಾತೃ ಸಂಬಂಧದಿಂದ ಲಾಭ, ಒಂದು  ಸ್ಥಾನದಲ್ಲಿ  ಸ್ಥಿರವಾಗಿ  ನಿಲ್ಲದವರು.

         ಚಂದ್ರ  ಅಶುಭನಾದರೆ, ಜಾತಕನು  ಅನಾರೋಗ್ಯದಿಂದ ಪೀಡಿತ,  ಹೊಟ್ಟೆ ಹಾಗೂ  ಮೂತ್ರ ರೋಗಗಳಿಂದ  ಭಾಧಿತರು,   ಮಾನಸಿಕ  ಅಸಮತೋಲನ,  ವಿವಾಹದ   ಸಂದರ್ಭದಲ್ಲಿ  ಅಶುಭ ಘಟನೆಗಳು ,  ಶತ್ರುಗಳಿಂದ  ಭಾಧಿತರು,  ಅಲ್ಪಾಯು.

ಸಪ್ತಮ ಭಾವ  :--

          ಶುಭ ಚಂದ್ರನಾಗಿದ್ದರೆ, ಜಾತಕರು  ಸಮಾಜದಲ್ಲಿ  ಸನ್ಮಾಮಿತರು, ಶೀಘ್ರ ವಿವಾಹ ಯೋಗ,   ಸುಶೀಲ ಸುಂದರ ಪತ್ನಿ,  ಸಾಹಿತ್ಯಾಸಕ್ತರು, ಜ್ಯೋತಿಶ್ಯ   ಪ್ರವೀಣರು,   ವಿಚಾರವಂತರೂ,  ಯಾತ್ರೆಗಳನ್ನು  ಮಾಡುವವರು,  ವ್ಯಾಪಾರ ದಲ್ಲಿ  ಪ್ರಗತಿ.

         ಅಶುಭ ಚಂದ್ರನಾದರೆ,  ಜಾತಕರು  ಕೃಶ ಶರೀರಿ,  ಬೇರೆಯವರ  ಪ್ರಗತಿಯ ಬಗ್ಗೆ  ಅಸೂಯೆ, ಮಾದಕ ವಸ್ತುಗಳ ವ್ಯಸನಿ,  ಎರಡು ವಿವಾಹಗಳ  ಸಾಧ್ಯತೆ,  ಹೆಂಡತಿ  ಮತ್ತು  ತಾಯಿಯ ಮಧ್ಯೆ ಜಗಳ.

ಅಷ್ಟಮ ಭಾವ  :--
         
          ಶುಭ ಚಂದ್ರನಾಗಿದ್ದರೆ, ಜಾತಕರು  ಸುಂದರ,  ಆಕರ್ಷಕ,  ಶ್ರೀಮಂತ,  ಪಿತ್ರಾರ್ಜಿತ ಆಸ್ತಿ ಹೊಂದಿರುವವರು,  ಸ್ತ್ರೀ ಧನವನ್ನು  ಹೊಂದುವವರೂ,  ಉದ್ಯೋಗಸ್ಥ  ಪತ್ನಿ,  ಉತ್ತಮ  ದಾಂಪತ್ಯ,  ವಿದೇಶ ಪ್ರಯಾಣ,  ಉಚ್ಚ ಶಿಕ್ಷಣ,  ಸುಖೀ ಜೀವನ.

         ಅಶುಭನಾದರೆ,  ಜಾತಕನು ಕೃಶ ಶರೀರದವ, ಅಕಾಲ ಮರಣ,  ಅನೇಕ   ಸ್ತ್ರೀಯರ  ಸಹವಾಸದಿಂದ  ತೊಂದರೆ,  ಜಲಗಂಡ,  ಸದಾ ಹಣದ  ತೊಂದರೆ.

ನವಮ ಭಾವ :--
         
          ಶುಭ ಚಂದ್ರನಾಗಿದ್ದರೆ, ಜಾತಕರು  ನ್ಯಾಯಪರರು,  ಸದಾಚಾರ,  ಸಾಮಾಜಿಕ ಕಾರ್ಯ ನಿರತರೂ,  ಧಾರ್ಮಿಕತೆ,  ದಯೆ  ಧರ್ಮದಲ್ಲಿ  ಆಸಕ್ತಿ,  ತನ್ನ  ಜಾತಿವರ್ಗದಲ್ಲಿ  ಪ್ರಸಿದ್ಧರು,  ಭಾಗ್ಯವಂತರು,  ಅನ್ಯರ  ಸಮಸ್ಯೆ ಗಳಿಗೆ  ಸ್ಪಂದಿಸುವವರು,  ಉಚ್ಛಮಟ್ಟದ  ಮನೋವಿಜ್ಞಾನಿ.

         ಅಶುಭ ಚಂದ್ರನಾದರೆ,   ಅಲ್ಪಬುದ್ಧಿ,  ಧರ್ಮದ ಬಗ್ಗೆ  ಅವಹೇಳನ ಮಾತು,  ಸುಳ್ಳು ಹೇಳುವವ, ಚಿಕ್ಕಂದಿನಲ್ಲೇ  ತಂದೆಯ  ವಿಯೋಗ,  ಚಿಕ್ಕ ವಯಸ್ಸಿನಲ್ಲಿ  ಕುಟುಂಬದ  ಹೊಣೆ,  ಇಚ್ಛಾಶಕ್ತಿ ಯ  ಕೊರತೆ,  ಅನಾರೋಗ್ಯ ಪೀಡಿತ  ತಾಯಿ.

ದಶಮ  ಭಾವ  :--
        
          ಶುಭ ಚಂದ್ರನಾಗಿದ್ದರೆ, ಜಾತಕರು  ಸಂವೇದನಾ ಶೀಲತೆ,  ಪರೋಪಕಾರಿ,   ದಯಾಳು,  ವೃದ್ಧರನ್ನು ವಿಶೇಷವಾಗಿ ಆದರಿಸುವವರು,  ಭೂ ಸಂಪತ್ತು,  ಜಲೀಯ  ಪದಾರ್ಥಗಳ ವ್ಯಾಪಾರದಲ್ಲಿ  ಯಶಸ್ಸು, ಇಚ್ಛಿತ ಕಾರ್ಯಗಳಲ್ಲಿ  ಯಶಸ್ವಿ.

         ಚಂದ್ರನು  ಅಶುಭನಾದರೆ,  ಅನಾರೋಗ್ಯ, ಚಂಚಲ ಮನಸ್ಸಿನವರು,  ವೃತ್ತಿಯಲ್ಲಿ  ಪದೇ ಪದೇ  ಬದಲಾವಣೆ,  ಪತ್ನಿಯಿಂದ ಅಸಹಕಾರ,   ತಾಯಿ ಸುಖದ  ಕೊರತೆ,  ಜೀವನದಲ್ಲಿ  ಏರಿಳಿತ.

ಏಕಾದಶ  ಭಾವ. :--
       
          ಶುಭ ಚಂದ್ರನಾಗಿದ್ದರೆ, ಜಾತಕರು  ಭಾಗ್ಯಶಾಲಿ,  ಶ್ರೀಮಂತ,  ಸಮಾಜಸೇವಕರು,  ಜೀವನದಲ್ಲಿ  ಸಿದ್ಧಾಂತಗಳಿಗೆ  ಮಹತ್ವ ಕೊಡುವವರು,  ಪ್ರತಿಷ್ಠಿತ ವ್ಯಕ್ತಿ,  ದೂರ ದರ್ಶಿತ್ವ ಉಳ್ಳವರೂ, ಬುದ್ಧಿವಂತರು,  ಸಾತ್ವಿಕ  ಸ್ನೇಹಿತರುಳ್ಳವರು,  ಸುಖೀ  ವೈವಾಹಿಕ  ಜೀವನ,  ಸುಸಂಸ್ಕೃತ ಸಂತಾನ.

        ಅಶುಭನಾದರೆ,  ಭಾಗ್ಯಹೀನರು, ಮುಂದಾಲೋಚನೆ ಇಲ್ಲದವರು,  ಸ್ವಾರ್ಥಿ,  ಉತ್ತಮ ಸ್ನೇಹಿತರಿಲ್ಲದವರು,  ಹಣದ  ಅಪವ್ಯಯ,  ಸಂತಾನ  ಸುಖವಿಲ್ಲ,  ಅಲ್ಪಾಯು ತಾಯಿ,  ಅಪಕೀರ್ತಿ, ಅಧಿಕ  ಸ್ತ್ರೀ ಸಂತಾನ.

ದ್ವಾದಶ ಭಾವ  :--
       
          ಶುಭ ಚಂದ್ರನಾಗಿದ್ದರೆ, ಜಾತಕರು   ಭಾಗ್ಯವಂತರು,  ಏಕಾಂತಪ್ರಿಯರು,  ಉಚ್ಚಶಿಕ್ಷಣದ ಯೋಗ,  ವಿದೇಶಿ ನೌಕರಿ, ವ್ಯವಹಾರದಲ್ಲಿ  ಸಫಲತೆ,  ಜ್ಯೋತಿಷ್ಯ ದಲ್ಲಿ  ವಿಶೇಷ ಅಭಿರುಚಿ,  ಮಹತ್ವಾಕಾಂಕ್ಷಿ,  ಪತ್ನಿಯ  ಸಹಕಾರ,  ದಯಾಳು, ಇಂದ್ರಿಯ ನಿಗ್ರಹ.

        ಚಂದ್ರ  ಅಶುಭನಾದರೆ,  ಭಾಗ್ಯಹೀನ,  ನೇತ್ರರೊಗಿ,  ಅಶಾಂತ ಜೀವನ,  ವೈವಾಹಿಕ ಜೀವನದಲ್ಲಿ  ಅಶಾಂತಿ, ಧನವ್ಯಯ,   ವಿದೇಶ ಪ್ರಯಾಣದಲ್ಲಿ ತೊಂದರೆ,  ನೀಚ ಜನರ  ಸಂಗದಲ್ಲಿ  ಸಾರ್ವಜನಿಕ ವಾಗಿ  ಅಪಮಾನ
.
ಪರಿಹಾರಗಳು:-

1)  ದುರ್ಗೆ ಅಥವ ಚಾಮುಂಡಿಯನ್ನು ಆರಾಧಿಸಿ,

2)  ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ(ಚಂದ್ರನು ಮೇಷ ಅಥವ ವೃಶ್ಚಿಕಗಳಿಇದ್ದರೆ)

3)  ಹಾಲು ಮತ್ತು ನೀರನ್ನು ಕುಡಿಯಲು ಬೆಳ್ಳಿಯ ಲೋಟವನ್ನು ಉಪಯೋಗಿಸಿ.

4)  ನಿಮ್ಮ ತಾಯಿಯ ಕೈಯಿಂದ ಹಳೆಯ ಅಕ್ಕಿ ಮತ್ತು ಬೆಳ್ಳಿಯ ನಾಣ್ಯವನ್ನು ತಗೆದುಕೊಂಡು ಒಂದು ಬಿಳಿಯ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿಟ್ಟಿರಿ.

5)  ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ ಸೋಮವಾರಗಳಂದು ಹರಿಯುವ ನೀರಲ್ಲಿ ಹಾಕಿ.

6)  ೪೦ದಿನಗಳಕಾಲ ಮಲಗುವಾಗ ತಲೆಯ ಬಳಿ ಒಂದುಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಅಶ್ವತ್ತ ಮರದ ಬುಡಕ್ಕೆ ಹಾಕಿ.

7)  ರಾತ್ರಿಯ ಹೊತ್ತು ಹಾಲನ್ನು ಕುಡಿಯಬೇಡಿ.

8)  ಮಗನ ಜೊತೆ ಪ್ರಯಾಣಿಸುವಾಗ ಹರಿಯುವ ನೀರಿನಲ್ಲಿ ತಾಮ್ರದ ನಾಣ್ಯವನ್ನು ಹಾಕಿ.

8)  ರುದ್ರಭೂಮಿಯಲ್ಲಿನ ಬಾವಿಯ ನೀರನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಿ.

9)  ಎರಡು ಜೊತೆ ಬೆಳ್ಳಿ ಮತ್ತು ಮುತ್ತಿನ ಚೂರುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಜೊತೆಯನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ.

10)  ತಾಯಿಯನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ.

11)  ಮಗ ಮತ್ತು ಮೊಮ್ಮೊಗನೊಡನೆ ದೇವಸ್ಥಾನಕ್ಕೆ ಹೋಗಿ,

12)  ಪಿತೃಕಾರ್ಯವನ್ನು ಮಾಡಿ

13)  ಸರಿಯಾಗಿ ನಿದ್ರೆ ಬರದಿದ್ದರೆ ಮಂಚದ ನಾಲ್ಕು ಕಾಲುಗಳಿಗು ತಾಮ್ರದ ಮೊಳೆಯನ್ನು ಹೊಡೆಯಿರಿ
.
14)  ೨೪ನೇ ವಯಸ್ಸಿಗೆ ಮುಂಚೆ ವಿವಾಹವಾಗಬಾರದು.

೧೫)  ಮೊದಲಬಾರಿಗೆ ಪತ್ನಿಯನ್ನು ಅವರ ಮನೆಯಿಂದ ಕರೆತರುವಾಗ ಸ್ವಲ್ಪ ಬೆಳ್ಳಿಯನ್ನು ಸಹ ಜೊತೆಯಲ್ಲಿ ತಗೆದುಕೊಂಡು ಬನ್ನಿ.

16)  ಆಸ್ಪತ್ರೆ ಅಥವ ರುದ್ರಭೂಮಿಯಲ್ಲಿ ಬಾವಿಯನ್ನು ತೆಗೆಯಿಸಿ.

17)  ಹಾಲು ತುಂಬಿದ ಪಾತ್ರೆ ಅಥವ ಬಾಟಲನ್ನು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ.

18)  ಅನಾಥ ಮಕ್ಕಳೀಗೆ ಹಾಲನ್ನು ಕೊಡಿ.

19)  ಸ್ವಲ್ಪ ಬೆಳ್ಳಿಯನ್ನು ಮನೆಯ ತಳಪಾಯದಲ್ಲಿ ಹುದುಗಿಸಿ ಅದರಲ್ಲಿನ ಸ್ವಲ್ಪಬಾಗವನ್ನು ಮನೆಯಲ್ಲಿ ಇರಿಸಿ
.
20)  ಚಂದ್ರಗ್ರಹಣದಲ್ಲಿ ಸ್ವಲ್ಪ ಇದ್ದಿಲು,ಬಾರ್ಲಿ,ಬಿಳಿಸಾಸಿವೆಕಾಳುಗಳನ್ನು ಹರಿಯುವ ನೀರಲ್ಲಿ ಹಾಕಿ.

21)  ಹಸಿರು ವಸ್ತ್ರವನ್ನು ಕನ್ಯೆಗೆ ದಾನಮಾಡಿ.

22)  ಬಿಳಿಯ ಮೊಲವನ್ನು ಸಾಕಿ.

23)  ಕೆಲಸಕ್ಕೆ ಮೊದಲು ಹಾಲು ಅಥವ ನೀರು ಕುಡಿಯಿರಿ
.
24)  ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಹಾಕಿ ಉಂಗುರದ ಬೆರಳಿಗೆ ಹಾಕಿಕೊಳ್ಳಿ ಮತ್ತು ಸೋಮವಾರಗಳಂದು ಉಪವಾಸ ಮಾಡಿ.

25)  ನಿರ್ವೀರ್ಯತೆಗೆ ಬಂಗಾರದ ಕಡ್ಡಿಯನ್ನು ಕೆಂಪಗೆ ಕಾಯಿಸಿ ೧೧ ಸಲ ನೀರಲ್ಲಿ  ಅದ್ದಿ ನಂತರ ಆ ನೀರನ್ನು ಕುಡಿಯಿರಿ.

                   ✍ ಡಾ:  ಶೈಲಜಾ ರಮೇಶ್

Thursday, 1 March 2018

ಬಲಹೀನ ಗ್ರಹಗಳಿಂದುಂಟಾಗುವ ತೊಂದರೆಗಳು ಹಾಗೂ ಪರಿಹಾರಗಳು :-- ಭಾಗ 1

                       *ಹರಿಃ ಓಂ*     
                 *ಶ್ರೀ ಗಣೇಶಾಯ ನಮಃ*
                  *ಶ್ರೀ ಗುರುಭ್ಯೋನಮಃ*
        *ಜಾತಕನ ಕುಂಡಲಿಯಲ್ಲಿ ಗ್ರಹಗಳು  ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು* *ಮತ್ತು  ಇವುಗಳ ಪರಿಹಾರಗಳು* ( ಲಾಲ್ ಕಿತಾಬ್ ಪರಿಹಾರಗಳು)
*ಗ್ರಹಗಳು*
೧)ನೀಚತ್ವದಲ್ಲಿ
೨)ಶತೃಕ್ಷೇತ್ರಗಳಲ್ಲಿ
೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ
೪)ಅಸ್ತಂಗತರಾಗಿದ್ದರೆ
5) ೬, ೮೧೨ನೇ ಸ್ಥಾನಗಳಲ್ಲಿದ್ದರೆ.
೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ.
೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ.

ರವಿ :--
*ರವಿಯಿಂದ ಉಂಟಾಗುವ ತೊಂದರೆಗಳು ಮತ್ತು ಅದಕ್ಕೆ ಪರಿಹಾರಗಳು*
Picture source :  Internet/ social media
*ತೊಂದರೆಗಳು* :-
ಆತ್ಮ ವಿಶ್ವಾಸದ  ಗೌರವದ ಕೊರತೆ, ದೈರ್ಯ, ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ  ಜೀವನದಲ್ಲಿ ಸೋಲು, ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ, ಬಲಗಣ್ಣಿನಲ್ಲಿ ತೊಂದರೆ, ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಳ ತನ ಅಥವ ಸರ್ಕಾರದಿಂದ ಶಿಕ್ಷೆ, ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನಸಿಕನೋವು, ಉತ್ಸಾಹಹೀನತೆ,ಅಶಕ್ತತೆ,
ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ, ರಕ್ತ ಚಲನೆಯಲ್ಲಿ ಕೊರತೆ, ನರದೌರ್ಬಲ್ಯ, ದೃಷ್ಟಿದೋಷ, ಸಂದಿವಾತ ಮತ್ತು  ಮೂಳೆಗಳು     ದುರ್ಬಲವಾಗಿರುತ್ತವೆ.
ರವಿಯು ದ್ವಾದಶ ಭಾವಗಳಲ್ಲಿ  ಸ್ಥಿತ ಫಲ:--
ಪ್ರಥಮ ಭಾವ  :--
          ಪ್ರಥಮ ಭಾವದಲ್ಲಿ  ರವಿ ಸ್ಥಿತನಿದ್ದರೆ,  ಜಾತಕನು ಧೀರ್ಘಆಯು ಆಗುತ್ತಾನೆ,  ಕುಟುಂಬದಲ್ಲಿ  ಸಹೋದರಿ , ಸಹೋದರರ ಅಸಹಕಾರ ಇದ್ದರೂ  ಪ್ರಗತಿ ಸಾಧಿಸುತ್ತಿರುತ್ತಾನೆ,  ಪರೋಪಕಾರಿಯಾದರೂ  ಪ್ರೀತಿಯಿಂದ  ದೂರವಿರುತ್ತಾನೆ,  ಗೃಹಸ್ಥ ಜೀವನ ಚನ್ನಾಗಿದ್ದು ಮೊದಲು ಪುತ್ರಸಂತಾನ ಆಗುತ್ತದೆ,  ನಿರ್ಧನರಿಗೆ  ಸಹಾಯ ಮಾಡುವವನಾದರೂ  ಅಧಿಕ ಕೋಪ ಇರುತ್ತದೆ, ಯಾವುದನ್ನೇ ಆದರೂ  ಸಾರಾ ಸಾರಾ ವಿವೇಚಿಸಿ  ವಿಶ್ವಾಸ ಇಡುವ ವ್ಯಕ್ತಿ ಆಗುತ್ತಾನೆ,   ಈತ  ಅಗಲವಾದ  ಹಣೆ ಹೊದಿರುವವನು,  ಸ್ವಾಭಿಮಾನಿ,  ಅಧಿಕಾರ ಚಲಾಯಿಸುವವನು  ಆಗಿರುತ್ತಾನೆ.
ದ್ವಿತೀಯ ಭಾವ :--
          ರವಿಯು ದ್ವಿತೀಯದಲ್ಲಿ ಸ್ಥಿತನಾಗಿದ್ದರೆ,  ಪತ್ನಿ ( ಸ್ತ್ರೀ) ಕಾರಣದಿಂದ  ಸಂಭಂಧಿಗಳೊಡನೆ  ವಿವಾದ -  ಜಗಳ  ಉಂಟಾಗುತ್ತದೆ,  ಒಂದು ವೇಳೆ ಜಾತಕರ ಪತ್ನಿಯ ( ಶುಕ್ರ) ಜಗಳದಿಂದ ದೂರವಿದ್ದರೆ ನಿರಂತರವಾಗಿ  ಪ್ರಗತಿಯನ್ನು  ಕಾಣುತ್ತಾನೆ,  ಈ  ಜಾತಕರು ತನ್ನ  ಭುಜಬಲದ ಮೇಲೆ ವಿಶ್ವಾಸವಿಟ್ಟು ಯಶಸ್ಸು - ಗೌರವ  ಪ್ರಾಪ್ತಿ ಹೊಂದುವವರೂ ಮತ್ತು  ಅನ್ಯರಿಗೆ  ಸಹಾಯ ಮಾಡುವವರೂ ಆಗುತ್ತಾರೆ.
ತೃತೀಯ ಭಾವ  :--
          ತೃತೀಯದಲ್ಲಿ ರವಿ ಸ್ಥಿತನಿದ್ದರೆ, ಜಾತಕನು  ಜೀವನ  ನಿರ್ವಹಣೆ ಮಾಡಲು  ಸಮರ್ಥ,  ವ್ಯವಹಾರ  ಕುಶಲ, ಮತ್ತು ತೀರ್ಥಯಾತ್ರೆ ಮಾಡುವ ಮನಸ್ಸುಳ್ಳವನಾಗಿರುತ್ತಾನೆ,  ಇವರಿಗೆ  ಸಹೋದರ ಸಹೋದರಿಯರಿರುತ್ತಾರೆ,  ತಾಯಿಗೆ ಧೀರ್ಘಾಯಸ್ಸು, ಈತ ಯಾವುದೇ ದುರಾಚಾರಗಳನ್ನ ಮಾಡದಿದ್ದರೆ  ಎಲ್ಲಾ ಪ್ರಕಾರಗಳಿಂದಲೂ  ಸಂತೃಪ್ತಿ,  ಸತ್ಸಂತಾನವಿರುತ್ತದೇ,  ದುರಾಚಾರದ್ಲಲಿ ತೊಡಗಿದರೆ ಸೂರ್ಯ ಅಶುಭ ಫಲ ಪ್ರಧಾನಿಸುತ್ತಾನೆ.
ಚತುರ್ಥ ಭಾವ :--
          ರವಿಯು ಚತುರ್ಥದಲ್ಲಿ  ಸ್ಥಿತವಿದ್ದರೆ,  ಜಾತಕರು ಸ್ವಕ್ಷೇತ್ರ ಬಿಟ್ಟು ದೂರದಲ್ಲಿ ಅಥವಾ  ವಿದೇಶದಲ್ಲಿ ವಾಸಿಸುತ್ತಾರೆ,  ತಾಯಿ  ಮತ್ತು  ಸಹೋದರರಿಗೆ  ಕಷ್ಟ,  ಪೂರ್ವಜರಿಗಿಂತ ಬೇರೆಯೇ ಆದ  ವ್ಯವಹಾರಗಳನ್ನು  ಮಾಡುತ್ತಾರೆ,
ಪಂಚಮಭಾವ  :--
          ಇಲ್ಲಿನ ರವಿಯು  ಜಾತಕನ ಭಾಗ್ಯೋದಯಕ್ಕೆ
ಕಾರಣನಾಗುತ್ತಾನೆ,  ಜಾತಕನು  ವಿದ್ಯಾವಂತನಾಗಿ  ಸರ್ಕಾರದಲ್ಲಿ  ಗೌರವಾದರಗಳನ್ನು  ಹೊಂದುತ್ತಾನೆ,  ವೃದ್ಧಾಪ್ಯದಲ್ಲಿ ಉತ್ತಮ ಜೀವನ, ಯಾತ್ರೆಗಳು,  ಆಕಸ್ಮಿಕ ಧನದ ಪ್ರಾಪ್ತಿ ಆಗುತ್ತದೆ.
ಷಷ್ಟಮ ಭಾವ:--
          ಇಲ್ಲಿ  ರವಿಯು ಶುಭ ನಾಗಿದ್ದರೆ,  ಜಾತಕನು  ರಾಜನೀತಿಯಲ್ಲಿ ಸಕ್ರಿಯನಾಗಿರುತ್ತಾನೆ,  ಶ್ರೇಷ್ಠ ಕುಟುಂಬದಲ್ಲಿ  ಜನನ,  ಕೋರ್ಟು ವ್ಯವಹಾರಗಳಲ್ಲಿ  ಜಯ,  ಸಮಾಜದಲ್ಲಿ ಸನ್ಮಾನಿತರು, ಸರ್ಕಾರಿ ನೌಕರಿಯಲ್ಲಿ  ಪ್ರತಿಷ್ಠಿತ ಹುದ್ದೆ ಇರುತ್ತದೆ,
       ಅಶುಭ ವಾದರೆ,  ಪತ್ನಿಯಿಂದ ದುಃಖಿತ,  ಕೋರ್ಟ್ ವ್ಯವಹಾರದಲ್ಲಿ  ಸೋಲು,  ಧನಹಾನಿ, ಎಲ್ಲರಿಂದಲೂ  ಉಪೇಕ್ಷಿತನಾಗಿ, ಆರೋಗ್ಯ, ಧನ, ಸಮಯ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ.
ಸಪ್ತಮ ಭಾವ :--
          ರವಿಯು  ಶುಭನಾಗಿದ್ದರೆ, ಜಾತಕನು  ಸುಂದರ,  ಬಲಿಷ್ಠ ಹಾಗೂ  ವಿವಾಹದ ನಂತರ  ಭಾಗ್ಯೋ ದಯ, ತನ್ನ  ವಂಶಜರಿ ಗೆ ಲಾಭದಾಯಕನಾಗುತ್ತಾನೆ,
         ಅಶುಭನಾಗಿದ್ದರೆ ವಿವಾಹ  ವಿಳಂಬ, ಕೋಪಗ್ರಸ್ಥ ಪತ್ನಿ,  ಪತ್ನಿಗೆ ದಾಸ, ಚಾರಿತ್ರ್ಯಹೀನ  ಸ್ತ್ರೀ ಯರೊಂದಿಗೆ ಸಂಬಂಧ, ಕಲಹದ ದಾಂಪತ್ಯ, ನೇತ್ರ ರೋಗ.
ಅಷ್ಟಮ ಭಾವ :--
          ಶುಭ ರವಿಯಾದರೆ,  ಜಾತಕನು ನಿರೋಗಿ, ಸ್ತ್ರೀಯರಿಂದ  ಧನಲಾಭ,  ಪಾಲುದಾರಿಕೆಯಲ್ಲಿ  ಲಾಭ, ಗುಪ್ತವಿದ್ಯಗಳನ್ನು  ಬಲ್ಲವ ಹಾಗೂ  ದಕ್ಷ ನಾಗುತ್ತಾನೆ.
          ಅಶುಭ ರವಿಯಾದರೆ,  ಸದಾ ಜಗಳ, ಅನೇಕ ಸ್ತ್ರೀಯರೊಡನೆ ಅನೈತಿಕ ಸಂಬಂಧ,  ನಪುಂಸಕ ಕೂಡ  ಆಗಬಹುದು.
ನವಮ ಭಾವ :--
          ನವಮದಲ್ಲಿ  ರವಿಯಿದ್ದರೆ ಜಾತಕನು  ಉನ್ನತ ಮಟ್ಟದ ವ್ಯವಹಾರ ಕುಶಲ ಹಾಗೂ ದೊಡ್ಡ ಶ್ರೀಮಂತ ನಾಗುತ್ತಾನೆ, ಪರೋಪಕಾರಿ, ಕುಟುಂಬಕ್ಕಾಗಿ  ಜೀವ ಸವೆಸುವವ,  ಧಾರ್ಮಿಕ ಮನೋಭಾವ,  ತೀರ್ಥಯಾತ್ರೆ ಮಾಡುವವ,  ಪಾತ್ರಾರ್ಜಿತ ವ್ಯವಹಾರದಲ್ಲಿ  ಉನ್ನತಿ.
ದಶಮ ಭಾವ :--
          ದಶಮ ಭಾವದ ರವಿ.. ಜಾತಕನಿಗೆ ಮಹತ್ವಾಕಾಂಕ್ಷೆ, ಕಲೆ ಸಾಹಿತ್ಯ ಸಂಗೀತದಲ್ಲಿ  ಅಭಿರುಚಿ,  ದಯಾಳು ಹಾಗೂ ವ್ಯಾಪಾರದಲ್ಲಿ  ಸಫಲತೆಯನ್ನು  ಕೊಡುತ್ತಾನೆ.
          ಅಶುಭನಾದರೆ, ರಾಜನೀತಿಯಲ್ಲಿ, ಕುಟುಂಬದಲ್ಲಿ, ಸಫಲತೆಯಿಲ್ಲ, ವ್ಯಾಪಾರ ದಲ್ಲಿ  ವಿಫಲ,  ತಂದೆಗೆ ಅಶುಭ.
ಏಕಾದಶ ಭಾವ  :--
          ಶುಭ ರವಿಯಾದರೆ,  ರಾಜಕೀಯ ( ರಾಜನೀತಿಯಲ್ಲಿ)  ಸಫಲ, ಪ್ರಾಮಾಣಿಕ ಪ್ರವೃತ್ತಿ, ಶ್ರೀಮಂತ, ಮಿತ್ರರ  ಶುಭಚಿಂತಕ,  ಧನ ಸಂಚಯ ಮಾಡುವವನು ಆಗುತ್ತಾನೆ.
          ಅಶುಭನಾದರೆ, ಸಂತಾನದಿಂದ  ವಂಚಿತ, ವ್ಯಾಪಾರದಲ್ಲಿ  ಸದಾ  ಹಾನಿ,  ಅನಾರೋಗ್ಯ.
ದ್ವಾದಶ ಭಾವ  :--
          ಇಲ್ಲಿ ರವಿಯು  ಶುಭನಾದರೆ,  ಜಾತಕನು  ವಿದೇಶ ಯಾತ್ರಾಯೋಗ,  ವಿದೇಶದಲ್ಲಿ  ಸಫಲತೆ ಹೊಂದುವವ, ವ್ಯಾಪಾರದಲ್ಲಿ  ಲಾಭ,  ಶ್ರೇಷ್ಠ ಚಿಕಿತ್ಸಕ ಆಗುತ್ತಾನೆ.
         ಅಶುಭ ರವಿಯಾದರೆ,  ವಿದೇಶದಲ್ಲಿ ಅಸಫಲತೆ, ಮೆದುಳು ಮತ್ತು  ನೇತ್ರರೊಗದಿಂದ ಪೀಡಿತ, ಧನ ನಾಶ,  ಅಪ್ರಾಮಾನಿಕ, ಪದಾರ್ಥಗಳನ್ನು ದುರುಪಯೋಗ ಮಾಡುವವ ಆಗುತ್ತಾನೆ.
ರವಿಯ ಶುಭಾಶುಭ  ಭಾವಗಳು. :--
          ರವಿಯು  ಪ್ರಥಮ, ಪಂಚಮ, ಅಷ್ಟಮ, ನವಮ,  ದಶಮ , ಏಕಾದಶ, ದ್ವಾದಶ ಭಾವಗಳಲ್ಲಿ  ಶುಭ ಫಲಗಳನ್ನೂ...
     ಷಷ್ಟ,  ಸಪ್ತಮ ಭಾವಗಳಲ್ಲಿ. ಅಶುಭ ಫಲಗಳನ್ನೂ ಪ್ರಸಾದಿಸುತ್ತಾನೆ,  ರವಿಯು  ಏಕಾಂಗಿಯಾಗಿ  ಯಾವುದೇ ಭಾವದಲ್ಲಿ  ಸ್ಥಿತನಿದ್ದರೂ ಸ್ವಪ್ರಯತ್ನದಿಂದ ಲೇ ಶ್ರೀಮಂತ ರಾಗುತ್ತಾರೆ,
      ರವಿಯು  ಅಶುಭನಾದರೆ ಪ್ರಥಮ ಭಾವ ಕೂಡ ಹಾಳಾಗುತ್ತೆ,  ಚಂದ್ರನೊಡನೆ ಸಂಬಂಧವಿದ್ದರೆ ಚತುರ್ಥ ಭಾವದ  ಅಶುಭ ಫಲ ಪ್ರಾಪ್ತಿಯಾಗುತ್ತೆ,  ರಾಹುವಿನೋಡನೆ ಸಂಭಂದ ವಿದ್ದರೆ  ಪಂಚಮ ಭಾವದ ಫಲ ನಾಶವಾಗುತ್ತೆ,  ರವಿಯು  ಷಷ್ಟ ಭಾವದಲ್ಲಿ ಸ್ಥಿತನಿದ್ದರೆ ಪುತ್ರಪ್ರಾಪ್ತಿಯ  ನಂತರವೇ  ಶುಭಫಲ ಪ್ರಾಪ್ತಿ.
ರವಿಯ  ಅಶುಭತ್ವದ ಲಕ್ಷಣ  :--
           ರವಿಯು  ಅಶುಭನಾಗಿದ್ದರೆ,  ಜಾತಕನ  ಶರೀರ ಒಣಗಿ  ಬಿರುಸಾಗಿರುತ್ತದೆ,  ಅತ್ಯಂತ ಕಠಿಣತೆಯಿಂದ  ಶರೀರದ  ಅಂಗಗಳ  ಚಲನೆ ಸಂಭವ,  ಬಾಯಿಯಲ್ಲಿ  ಸದಾ  ಜೊಲ್ಲು ಸುರಿಸುತ್ತಿರುತ್ತಾರೆ,  ಮನೆಯಲ್ಲಿ ಕೆಂಪು ಬಣ್ಣದ  ಹಸು ಅಥವಾ ಎಮ್ಮೆ ಸಾಕಿದ್ದರೆ ಅದು  ಮರಣ ಹೊಂದುತ್ತದೆ ಅಥವಾ  ಕಳೆದು ಹೋಗುತ್ತದೆ.
         ಹೃದಯರೋಗ, ಉದರಸಂಭಂದಿ  ವಿಕಾರ, ನೇತ್ರರೋಗ,  ಧನನಾಶ,  ಸಾಲದ ಹೊರೆ,  ಮಾನ ನಷ್ಟ,  ಅಪಯಶಸ್ಸು,  ಮುಂತಾದ ಆನಿಷ್ಠ ಫಲಗಳು.
*ಪರಿಹಾರಗಳು:-*
ಶಿವಮತ್ತು ರವಿಯನ್ನು ಆರಾಧಿಸಿ,
೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ,
ರವಿಗೆ ಸಂಬಂದಿಸಿದ ಇತರರು ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ  ದಾನಮಾಡಿ,
ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ,
ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ.
ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ.
ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ.
ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ.
ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ.
ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ.
ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ
ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ.
ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ.
ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ.
ಸುಳ್ಳು ಸಾಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ.
ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ.
ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ.
✍ ಡಾ:  ಶೈಲಜಾ ರಮೇಶ್