Friday, 28 April 2017

--:ಗ್ರಹಗಳ ಬಗೆಗೆ ಅಧ್ಯಯನ:--


 --:ಗ್ರಹಗಳ ಬಗೆಗೆ ಅಧ್ಯಯನ:--

surya-dev.jpgಗ್ರಹಗಳು  ಎಂದರೇನು?
     ಗ್ರಹಿಸುವ  ಹಾಗೂ  ಪ್ರಭಾವ  ಬೀರುವ  ಶಕ್ತಿ  ಇರುವುದೇ  ಗ್ರಹಗ್ರಹಗಳು  ಹಾಗೂ  ನಕ್ಷತ್ರಗಳು  ಆಕಾಶದಲ್ಲಿ  ಮೈದಳೆದ  ಶಕ್ತಿಸ್ವರೂಪಭೂಮಿಯಲ್ಲಿನ  ಸಮಸ್ತ  ವ್ಯವಹಾರದ  ಮೇಲೆ  ಗ್ರಹಗಳ  ಪ್ರಭಾವ  ನಿಚ್ಚಳವಾಗಿದೆಜ್ಯೋತಿಷ್ಯಕ್ಕೆ  ಜೀವಾಳವೇ     ಗ್ರಹಗಳು.   ಜ್ಯೋತಿಷ್ಯದಲ್ಲಿ ಗ್ರಹಗಳ  ಸ್ಥಾನ    ಪ್ರಮುಖ  ಸ್ಥಾನವನ್ನು ವಹಿಸುತ್ತದೆಗ್ರಹಣ  ಎಂದರೆ  ಹಿಡಿಯುವುದು  ಎಂದರ್ಥ,  “ ಗೃಹ್ನಂತಿ  ಇತಿ  ಗ್ರಹಃಸೂರ್ಯ ಚಂದ್ರರನ್ನು  ಹಿಡಿಯುವ  ರಾಹುಕೇತುಗಳೇ  ಗ್ರಹರಲ್ಲತಮ್ಮ  ಪ್ರಭಾವ  ಪೂರಿತ  ಶಕ್ತಿಯಿಂದ  ಇಡೀ  ಚರಾಚರ  ಜಗತ್ತನ್ನೇ  ಹಿಡಿದಿಟ್ಟಿರುವ  ಆದಿತ್ಯಾದಿಗಳೂ  ಗ್ರಹರೇ  ಗ್ರಹರು   ಸಕಲ  ಪ್ರಾಣಿಜಾತದ  ಜೀವನದಲ್ಲೂ  ನಿರ್ಣಾಯಕ  ಪಾತ್ರವನ್ನು  ವಹಿಸುತ್ತಿದ್ದು  ತಮ್ಮ  ಪ್ರಭಾವವನ್ನು  ಬೀರುತ್ತದೆಪರಮೋತ್ಕರ್ಷವನ್ನು  ಹೊಂದಿ  ಸಿಂಹಾಸನ  ಏರುವುದಕ್ಕೂನೆಲಕಚ್ಚಿ  ಪ್ರಪಾತಕ್ಕೆ  ಬೀಳುವುದಕ್ಕೂ  ಗ್ರಹದ  ಸ್ಥಿತಿಗತಿಗಳು   ಕಾರಣವಾಗುತ್ತವೆ.
  ಒಂದು  ಸುಭಾಷಿತ  ಹೀಗೆ  ಹೇಳುತ್ತದೆ.
“” ಗ್ರಹಾಗಾವೋ  ನರೇಂದ್ರಶ್ಚ ಬ್ರಾಹ್ಮನಶ್ಚ ವಿಶೇಷತಃ
ಪೂಜಿತಾಃ ಪೂಜಯಷ್ಯಂತಿ  ನಿರ್ದಹಂತ್ಯ ನಮಾನಿತಾಃ “”
ಗ್ರಹಗಳು  ಗೋವುಗಳು  ರಾಜ ಮತ್ತು  ಬ್ರಾಹ್ಮಣರು    ನಾಲ್ವರು  ಪೂಜಿತರಾದರೆ  ಸರ್ವಾಭೀಷ್ಟಪ್ರದರುಅವಮಾನಿತರಾದರೆ  ಸರ್ವನಾಶಕರು ಎಂದಿದೆ.
      ಜ್ಯೋತಿಷ್ಯ  ಶಾಸ್ತ್ರಕ್ಕೆ  ಸಭಂದಿಸಿದಂತೆ  ಸೂರ್ಯಚಂದ್ರಕುಜಬುಧಗುರುಶುಕ್ರ , ಶನಿರಾಹುಕೇತುಗಳನ್ನು ಗ್ರಹಗಳೆಂದು  ಪರಿಗಣಿಸಲಾಗಿದೆ.   ಇವುಗಳಲ್ಲಿ,
ಸೂರ್ಯಚಂದ್ರರು --- ಪ್ರಕಾಶ ಗ್ರಹರೆಂತಲು ,
ಕುಜಬುಧಗುರುಶುಕ್ರಶನಿ  ಇವರನ್ನು  ತಾರಾಗ್ರಹರೆಂತಲೂ,
ರಾಹುಕೇತುಗಳನ್ನು  ಛಾಯಾ  ಗ್ರಹರೆಂತಲೂ  ಕರೆಯುತ್ತಾರೆ.
        ಗ್ರಹಗಳು  ತಾವಿರುವ  ರಾಶಿಯ  ಲಕ್ಷಣವನ್ನು  ಪಡೆಯುತ್ತಾರೆ  .ಭಚಕ್ರದಲ್ಲಿ  ಇವರ  ಸ್ಥಾನವನ್ನು  ಕೆಳಕಂಡಂತೆ  ಗುರುತಿಸಬಹುದುರವಿ ಮತ್ತು  ಚಂದ್ರರನ್ನು  ಹೊರತುಪಡಿಸಿ  ಉಳಿದ  ತಾರಾಗ್ರಹರಿಗೆ  ಎರಡೆರಡು  ಆದಿಪಠ್ಯವನ್ನು  ಕೊಡಲಾಗಿದೆ.
ಮೀನಾ
ಗುರು

ಮೇಷ
ಕುಜ
ವೃಷಭ
ಶುಕ್ರ
ಮಿಥುನ
ಬುಧ
ಕುಂಭ
ಶನಿ


ಗ್ರಹಗಳಆಧಿಪತ್ಯಗಳು
ಕಟಕ
ಚಂದ್ರ
ಮಕರ
ಶನಿ
ಸಿಂಹ
ರವಿ
ಧನಸ್ಸು
ಗುರು
ವೃಶ್ಚಿಕ
ಕುಜ
ತುಲಾ
ಶುಕ್ರ
ಕನ್ಯಾ
ಬುಧ


ಇನ್ನು  ಗ್ರಹಗಳ  ಸ್ವರೂಪ , ಸ್ವಭಾವಕಾರಕತ್ವ  ಗಳನ್ನ  ತಿಳಿಯೋಣ
---:ರವಿ  :---
surya-dev.jpg


Picture source: Internet/ social media


ನವಗ್ರಹದಲ್ಲಿ  ರಾಜನಾದ  ಸೂರ್ಯಗ್ರಹವು  ಕಾಶ್ಯಪ  ಹಾಗೂ  ಅದಿತಿ  ಪುತ್ರನಾಗಿದ್ದು  ಜಗತ್ತಿನ  ಪ್ರತ್ಯಕ್ಷ  ದೈವಾಗಿದೆ.     ಗ್ರಹವು  ಸಾಕ್ಷಾತ್ವಿಷ್ಣು  ರೂಪಿಯಾಗಿದ್ದುಶ್ರೀ  ಚಕ್ರದಲ್ಲಿ  ವಾಸಿಸುವ  ಸೂರ್ಯನು  ಶ್ರೀಚಕ್ರ ದೇವತೆ   ಯಾದ  ಲಲಿತಾ ದೇವಿಯ  ಆದೇಶದ  ಮೇರೆಗೆ  ಜಗತ್ತಿನ  ಎಲ್ಲಾ  ಜೀವಸಂಕುಲವನ್ನು  ತನ್ನ  ತೇಜಸ್ಸಿನಿಂದ  ಕಾಪಾಡುತ್ತಿದ್ದಾನೆ.
     ಪ್ರಭವ  ಸಂವತ್ಸರ  ಮಾಘಮಾಸ  ಶುಕ್ಲಪಕ್ಷ  ರಥಸಪ್ತಮಿ  ಯಂದು ಜನನಜನ್ಮನಕ್ಷತ್ರ  ವಿಶಾಖ,   ಕಾಶ್ಯಪಗೋತ್ರ,   ವಿಶ್ವಾಮಿತ್ರ  ಪರಂಪರೆ,   ಶರೀರ..... ಪದ್ಮವರ್ಣಹಸ್ತಸಂಖ್ಯಾ 1 ,  ಕಳಿಂಗದೇಶಕ್ಕೆ  ಅಧಿಪತಿಗ್ರಹಮಂಡಲದಲ್ಲಿ  ಕೇಂದ್ರಸ್ಥಾನಪೂರ್ವಾಭಿಮುಖಧಾನ್ಯ  -  ಗೋಧಿಕೆಂಪುವಸ್ತ್ರಮಾಣಿಕ್ಯರತ್ನಆಯುಧಗಳುಸಪ್ತರಜ್ಜುಗಳು,   ಏಕಚಕ್ರರಥಸ್ಥವರ್ತುಲಾಕಾರಮಂಡಲಸಂಜ್ಞಾ  ಮತ್ತು  ಛಾಯಾ  ಪತ್ನಿಯರುದೇವತೆರುದ್ರಸಿಂಹರಾಶಿಗೆ   ಅಧಿಪತಿ,   ಸಿಂಹರಾಶಿಯಲ್ಲಿಯೇ  ಮೂಲತ್ರಿಕೋಣತ್ವ,   ಮೇಷರಾಶಿಯಲ್ಲಿ   ಉಚ್ಚಸ್ಥಾನ,  10° ಯಲ್ಲಿ ಪರಮೋಚ್ಚ,    ತುಲಾದಲ್ಲಿ  ನೀಚ,  10° ಯಲ್ಲಿ  ಪರಮನೀಚದಶಾವರ್ಷಗಳುಆರುವರ್ಷಪುರುಷಲಿಂಗಆತ್ಮಕಾರಕಪಿತೃಕಾರಕಗೋಚಾರದಲ್ಲಿ   3,  6,  10,  11ರಲ್ಲಿಶುಭಉಳಿದ  ಸ್ಥಾನಗಳಲ್ಲಿ  ಅಶುಭತಾಮ್ರಧಾತುಕೆಂದಾವರೆಪುಷ್ಪ, ಸಾತ್ವಿಕ  ಗುಣವುಳ್ಳವನುಅಗ್ನಿತತ್ವ ಗ್ರಹ, ಚೌಕಾಕಾರ,   ಅಗಲವಾದ  ಭುಜಗಳು,ದಷ್ಟಪುಸ್ತ  ಅಂಗ, ಬಿಳಿ  ಮಿಶ್ರಿತ  ರಕ್ತಕೆಂಪುರುಚಿಖಾರ  ಪದಾರ್ಥಸರ್ಕಾರಿ ಸೇವೆಉನ್ನತವಾದ  ಅಧಿಕಾರಿ, ಸಾಮಾನ್ಯವಾದ  ಎತ್ತರಹಠ,   ಜ್ಞಾನವಂತಗ್ರೀಷ್ಮ ಋತುವಿಗೆ  ಅಧಿಪತಿರಾಜಗ್ರಹಸಾಹಸಿಧಾರಾಳ,   ಅಹಂಕಾರಿಬಲಗಣ್ಣಿಗೆ  ಕಾರಕಕಿರುಪ್ರವಾಸಉಷ್ಣದೇಹಅಕ್ಕಸಾಲಿಗಪಾಪಗ್ರಹಸ್ಥಿರಸ್ವಭಾವಪ್ರತಾಪಧೀರಶೂರಧೈರ್ಯವಂತಗಂಭೀರಆಕಾಶದೆಡೆಗೆ ನೋಟದೇವಸ್ಥಾನಬೆಟ್ಟಗುಡ್ಡಗಳಲ್ಲಿ ವಾಸಚತುರಪಿತೃಕಾರಕಶರೀರದ  ಎಲುಬುಗಳಿಗೆ  ಕಾರಕಬಲವಾದ ಮೂಳೆಗಳುತೀಕ್ಷ್ಣತೆಉತ್ಸಾಹ ಕಾರಕದಪ್ಪವಸ್ತ್ರಪಕ್ಷಿರೂಪಅಗ್ನಿ  ಅಧಿದೇವತೆಹೋಮ ಕಾರ್ಯಗಳಲ್ಲಿ   ಆಸಕ್ತಿಹಗಲಿನಲ್ಲಿ  ಬಲಉಳ್ಳವನುಕ್ಷತ್ರಿಯಜಾತಿತಲೆಕೂದಲು  ಕಡಿಮೆವೈದ್ಯಶಾಸ್ತ್ರ  ಬಲ್ಲವನು,ಉಷ್ಣಶರೀರವಿದ್ಯುತ್ಕೆಲಸಗಳಲ್ಲಿ  ಆಸಕ್ತಿರವಿಯ  ಜೊತೆಯಲ್ಲಿ  ಬೇರೆ  ಗ್ರಹಗಳಿದ್ದರೆ  ಅಸ್ತಂಗತರಾಗುವರುಒಂದು  ರಾಶಿಯಲ್ಲಿ  30 ದಿನಗಳು  ಸಂಚಾರ  ಮಾಡುವನುತಾನಿರುವ  ಸ್ಥಳದಿಂದ  7 ನೇ ಮನೆಗೆ  ದೃಷ್ಟಿಪ್ರತಿ  ರಾಶಿಯನ್ನು  ಪ್ರವೇಶಿಸುವ  ಸಮಯಕ್ಕೆ   ಸಂಕ್ರಮಣ  ಎನ್ನುತ್ತಾರೆ,  4  ನೇಮನೆಯಲ್ಲಿ  ಬಲಹೀನಹತ್ತನೇ  ಮನೆಯಲ್ಲಿ  ದಿಗ್ಬಲ  ಪಡೆಯುತ್ತಾನೆ,  ಕೃತಿಕಾಉತ್ತರ, ಉತ್ತರಾಷಾಡ  ನಕ್ಷತ್ರಗಳ  ಅಧಿಪತಿ.
ಆರೋಗ್ಯಮ್ಪ್ರದಾದಾತುನೋದಿನಕರ “  ಎಂಬಂತೆ ಜಾತಕನ  ಆರೋಗ್ಯ, ಬಲಗಣ್ಣು  ,ಜಗತ್ಸಾಕ್ಷಿ, ಪಾರಮಾರ್ಥಿಕ ಗುಣ, ಗ್ರಹವು ಬಲಹೀನವಾದರೆ ತಲೆಶೂಲೆ ,ಪಿತ್ತಕೋಶದ ತೊಂದರೆಹೃದಯಸಂಬಂಧಿ ತೊಂದರೆಕಣ್ಣು ಮತ್ತು ಹಲ್ಲಿಗೆ ತೊಂದರೆಯನ್ನು ಕೊಡುತ್ತಾನೆ.
---:  ಪುರಾಣದಲ್ಲಿ ಸೂರ್ಯ :---
“” ಗ್ರಹಣಾಮಾದಿರಾದಿತ್ಯೋ “”ಎಂಬಂತೆ ಈತ ಗ್ರಹಗಳಲ್ಲಿ ಮೊದಲಿಗಆರೋಗ್ಯ, ಜ್ಞಾನವನ್ನು ದಯಪಾಲಿಸುವ ದೇವತೆಎರಡೂ ಕೈಯಲ್ಲಿ ಕೆಂಪು ಕಮಲಗಳು, ಕೆಂಪು ರಥದಲ್ಲಿ ಆಸೀನ, ಸಾರಥಿಅರುಣರಥಕ್ಕೆಕಟ್ಟಿರುವ ಕುದುರೆಗಳು – 7,  ಸೂಕ್ಷ್ಮ ಗುಂಗುರು ಕೂದಲುಗಳಿಂದ ಒಪ್ಪುವ ತಲೆಆಕರ್ಷಕರೂಪಚೇತೋಹಾರಿಯಾದ ಗಂಭೀರ ದ್ವನಿಹೆಚ್ಚು ಎತ್ತರ ವಿಲ್ಲದ ನಿಲುವುಅನುಪಮ ಬುದ್ಧಿಸಾಮರ್ಥ್ಯಕೆಂಪು ಬೆರೆತ ಸುಂದರ ಕಣ್ಣುಗಳು,   ಧೈರ್ಯಶಾಲಿ, ಪ್ರಚಂಡಪಿತ್ತಪ್ರಕೃತಿ,  ಉನ್ನತ ವ್ಯಕ್ತಿತ್ವ ,ದೊಡ್ಡ ಕೈಗಳುಕೆಂಪು ಉಡುಗೆ.........  ಇದು ಶಾಸ್ರಕಾರರುರವಿಯನ್ನು ಗುರುತಿಸಿರುವ ಬಗೆ.
ಆದಿತ್ಯಮಾರ್ತಾಂಡಭಾನುರವಿದಿವಾಕರಪ್ರಭಾಕರ  ಇವು  ಸೂರ್ಯನ  ಪ್ರಸಿದ್ಧ  ಹೆಸರುಗಳು.
ಸೂರ್ಯನು  ಅದಿತಿಪಶ್ಯಪರ  ಮಗ.....  ಅದೊಂದು  ದಿನ  ಕಶ್ಯಪರು  ಮನೆಯಲ್ಲಿ  ಇರಲಿಲ್ಲ.   ಅದಿತಿದೇವಿ  ತುಂಬುಗರ್ಭಿಣಿದೇವರ  ಧ್ಯಾನದಲ್ಲಿದ್ದಾಗ.....  ಭವತೀಮ್ಭಿಕ್ಷಾಂದೇಹಿ  ಎಂಬ  ದ್ವನಿ......  ಬುಧನು  ಭಿಕ್ಷೆಗಾಗಿ  ಬಂದಿದ್ದಧ್ಯಾನದಲ್ಲಿ  ಮುಳುಗಿದ್ದ  ಅದಿತಿ........  ನಿಧಾನವಾಗಿ  ಭಿಕ್ಷೆ  ತಂದಿದ್ದಕ್ಕೆ  ಕ್ರೋಧಗೊಂಡ  ಬುಧಮಾಣನಕ )  “  ಏನು  ಗರ್ಭಿಣಿ  ಎಂಬ ಅಹಂಕಾರವೋಎಂದು  ಗರ್ಭದಲ್ಲಿರುವ  ಶಿಶು ಸತ್ತುಹೋಗಲಿ  ಎಂದು  ಶಾಪವನ್ನಿತ್ತ.   ತತ್ತರಿಸಿ ಹೋದ  ಅದಿತಿ  ಮೃತ  ಶಿಶುವನ್ನು ಹೆತ್ತಳುಶ್ರೀಹರಿಯ  ಮಹಿಮೆ  ಮತ್ತು  ಕಶ್ಯಪರ  ಪ್ರಭಾವದಿಂದ    ಶಿಶುವು  ಸತ್ತು  ಬದುಕಿತು  ಮಗುವೇ  ಸೂರ್ಯ.   ಆದಕಾರಣವೇ  ಮಾರ್ತಾಂಡ  ಆದಿತ್ಯ  ಎಂಬುದು  ಈತನ  ಮತ್ತೊಂದು  ಹೆಸರುಅದಿತಿಯ  ಮಗನೆಂಬುವುದಕ್ಕೆ  ಮಾತ್ರ    ಹೆಸರಲ್ಲ. ( ಆದಿತ್ಯದಿನವೂ  ಉದಾಯಿಸುತ್ತಾ  ,  ಜೀವಿಗಳ 24  ಗಂಟೆಗಳ  ಆಯುಷ್ಯವನ್ನು  ಕಿತ್ತು  ಸಾಗುವುದರಿಂದ  ಈತನಿಗೆ    ಹೆಸರುಆಯುರ್ದಾಯ  ಯಾತೀತಿ  ಆದಿತ್ಯಹ ).

ಸಂಜ್ಞಾ ಮತ್ತು  ಛಾಯಾ  ಸೂರ್ಯನ  ಹೆಂಡತಿಯರುಸಂಜ್ಞೆಯಲ್ಲಿ  ಯಮಯಮುನೆ  ಮತ್ತು  ಮನು  ಹುಟ್ಟಿದರು,   ಛಾಯಾದೇವಿಯಲ್ಲಿ  ಸಾವರ್ಣಿ  ಮತ್ತು  ಶನೈಶ್ಚರ ಹುಟ್ಟಿದರು  ಮನ್ವಂತರದ  ಅಧಿಪತಿಯಾದ  ವೈವಸ್ವತಮನು  ಸೂರ್ಯನ  ಮಗಗ್ರಹಗಳಲ್ಲಿ ಭಯಂಕರ   ಎನಿಸುವ  ಶನಿಯೂ  ಕೂಡ  ಸೂರ್ಯನ  ಪುತ್ರಕರ್ಣ  ಮತ್ತು  ಸುಗ್ರೀವರು  ಸೂರ್ಯಅಂಶ  ಸಂಭೂತರು.
        ಸೂರ್ಯ  ಗ್ರಹವನ್ನು  ಸ್ತುತಿಸುವ  ಸ್ತೋತ್ರ  ಹೀಗಿದೆ......
ಜಪಾಕುಸುಮಸಂಕಾಶಂ  ಕಾಶ್ಯಪೆಯೋಮಹಾದ್ಯುತಿಃ
ತಮೋರಿ     ಸರ್ವಪಾಪಘ್ನಮ್ಪ್ರಣತೊಸ್ಮಿದಿವಾಕರಂ
ಅರ್ಥ :- ಕೆಂಪು  ದಾಸವಾಳದ  ಪುಷ್ಪದ  ಕಾಂತಿಯನ್ನು  ಹೊಂದಿರುವ  ಕಶ್ಯಪನ  ಪುತ್ರನಾದ  ಮಹಾತೇಜಸ್ವಿ  ಕತ್ತಲ  ಕಡುವೈರಿ  ಸರ್ವ  ಪಾಪನಾಶಕನಾದ  ದಿವಾಕರನಿಗೆ  ನಮಿಸುವೆ.
  ಶ್ಲೋಕದ  ಪ್ರತಿನಿತ್ಯದ  ಪಠಣೆಯಿಂದ  ರವಿಗ್ರಹ  ದೋಷವನ್ನು  ಪರಿಹರಿಸಿ ಕೊಳ್ಳಬಹುದು.
ಸೂರ್ಯ  ಗಾಯತ್ರಿ  ಮಂತ್ರ :--
ಓಂ  ಭಾಸ್ಕರಾಯ  ವಿದ್ಮಹೇ
ಮಹಾದ್ಯುತಿಕರಾಯ ಧೀಮಹಿ
ತನ್ನೋ  ಆದಿತ್ಯ  ಪ್ರಚೋದಯಾತ್
ಸೂರ್ಯ  ಪೀಡಾ ಪರಿಹಾರ  ಸ್ತೋತ್ರ :-
ಗ್ರಹಣಾಮಾದಿರಾದಿತ್ಯೋ  ಲೋಕರಕ್ಷಣ ಕಾರಕಃ
ವಿಷಮಸ್ಥಾನ ಸಂಭೂತಾಮ್ಪೀಡಾಂ ಹರತುಮೇ  ರವಿಹಿ
ರವಿಯ ಏಕಾಕ್ಷರಿ ಬೀಜಮಂತ್ರ :--
ಓಂ  ಘೃಣಿಃ  ಸೂರ್ಯಾಯನಮಃ ( ಜಪಸಂಖ್ಯೆ 7000)
ಅನುಕೂಲ   ಮಂತ್ರ :--
ಓಂ ವ್ಹಿಮ್ಶ್ರೀಮ್ಸೌಹು
(Om  vheem shreem souhu )   ಜಪಸಂಖ್ಯೆ ಒಂದೂಕಾಲು ಲಕ್ಷ
ಸೂರ್ಯ ಕ್ಷೇತ್ರವಾದ ಸಿಂಹ ಲಗ್ನದವರು ಪೂಜಿಸಿ ಧರಿಸಬೇಕಾದ ಯಂತ್ರ
ಪಂಚದಶಾ ಯಂತ್
6
7
2
1
5
9
8
3
4

ಬೀಸಾ ಯಂತ್ರ
6
1
8
7
5
3
2
9
4

ಜಪಿಸ  ಬೇಕಾದ  ಮಂತ್ರ
ಓಂ ಹ್ರೀಂ ಐಮ್ಸೌಹು
ಸೂರ್ಯಗ್ರಹ  ಸಂಭಂದಿ  ದಾನಗಳು:--
ಸೂರ್ಯನ  ಬಣ್ಣ  ಕೆಂಪು  ಹಾಗಾಗಿಕೆಂಪಾದ  ತಾಮ್ರ  ಅವನ  ಲೋಹಕೆಂಪಾದ  ಮಾಣಿಕ್ಯವೇ  ಅವನ  ರತ್ನರವಿಯ  ಪ್ರೀತ್ಯರ್ಥವಾಗಿ  ಕೆಂಪುವಸ್ತ್ರವನ್ನುಕೆಂಪು  ಗೋಧಿಯನ್ನು  ದಾನಮಾಡಬೇಕು.
ರವಿ  ಲತ್ತಾ ಕಾಲದಲ್ಲಿ  :  ಸೂರ್ಯ ಪ್ರಾರ್ಥನೆಸುವರ್ಣ  ಪದ್ಮ ದಾನ ಕೆಂಪು  ಹಸುದಾನ ಮಾಡಬೇಕು.
ಸೂರ್ಯನು   ನಮಸ್ಕಾರ  ಪ್ರಿಯನು  ಆಗಿರುವುದರಿಂದ  ಬೆಳಿಗ್ಗೆ  ಸೂರ್ಯೋದಯದ  ಸಂದರ್ಭದಲ್ಲಿ  ಆದಿತ್ಯಹೃದಯ  ಪಾರಾಯಣಮಾಡಿ  ಸೂ  ರ್ಯನಮಸ್ಕಾರ  ಮಾಡುವುದರೊಂದಿಗೆ  ಈತನ  ಕೃಪೆಗೆ  ಪಾತ್ರರಾಗಬಹುದುಸೂರ್ಯಾ  ಲೋಕದಲ್ಲಿ  ನೀರು ಇಲ್ಲವಾದ್ದರಿಂದ  ಗಾಯತ್ರಿದೇವಿ  ಪ್ರಾರ್ಥನೆಯಿಂದ  ಅರ್ಘ್ಯ  ನೀಡುವುದರಿಂದ    ಸೂರ್ಯನಿಗೆ ಪ್ರಿಯವಾಗುತ್ತದೆ.
--: ವೈಜ್ಞಾನಿಕವಾಗಿ  ಸೂರ್ಯ:--
6594.ngsversion.1481905408341.adapt.1900.1.jpg

Picture source: Internet/ social media
ಸೂರ್ಯನು  ಸೌರಮಂಡಲದ  ಮಧ್ಯದಲ್ಲಿರುವ  ಒಂದು ನಕ್ಷತ್ರ,   
ಭೂಮಿ  ಮತ್ತು  ಬೇರೆ ಕಾಯಗಳು   ಸೂರ್ಯನನ್ನು  ಪರಿಭ್ರಮಿಸುತ್ತದೆಸೂರ್ಯನೊಂದೆ  ಸೌರಮಂಡಲದ  99%  ದ್ರವ್ಯರಾಶಿಯನ್ನು  ಹೊಂದಿದೆಸೂರ್ಯನ  ಬೆಳಕು  ದ್ಯುತಿಸಂಶ್ಲೇಷನೆಯ  ಮೂಲಕ  ಭೂಮಿಯ  ಬಹುತೇಕ  ಎಲ್ಲಾ  ಜೀವಿಗಳಿಗೂ  ಆಧಾರವಾಗಿದ್ದು  ಭೂಮಿಯ    ಹವಾಮಾನದ  ಮೇಲೂ  ಪ್ರಭಾವ  ಬೀರುತ್ತದೆ.
ಕ್ಷೀರಪಥ  ತಾರಾಗಣ  ಕೇಂದ್ರದಿಂದ  ಸುಮಾರು  25,000 – 28000  ಜ್ಯೋತಿರವರ್ಷಗಳ  ದೂರದಲ್ಲಿ  ಸೂರ್ಯವು  ಪರಿಬ್ರಮಿಸುತ್ತದೆಇದರ  ಒಂದು  ಪರಿಭ್ರಮಣಕ್ಕೆ  ಸುಮಾರು  22525  ಕೋಟಿ  ವರ್ಷಗಳು  ಬೇಕಾಗುತ್ತದೆಇದರ  217ಕಿಮೀ/ ಕ್ಷಣದ  ಪರಿಭ್ರಮಣ  ವೇಗವು  ಪ್ರತಿ 1,400  ವರ್ಷಗಳಿಗೊಂದು  ಜ್ಯೋತೀರ್ವರ್ಷ  ಮತ್ತು  ಪ್ರತಿ  8  ದಿನಗಳಿಗೊಮ್ಮೆ  ಒಂದು  ಖಗೋಲ ಮಾನದ ಪ್ರಮಾಣಗಳಿಗೆ  ಸಮಾನವಾಗಿದೆಸೂರ್ಯನು  ಮೂರನೇ  ಪೀಳಿಗೆಯ  ಒಂದು  ನಕ್ಷತ್ರ,   ಹತ್ತಿರದಲ್ಲುಂಟಾದ  ತಾರಾಸ್ಪೋಟದಿಂದ  (supernova)  ಹೊರಬಂದ  ಆಘಾತ  ತರಂಗಗಳು  ಸೂರ್ಯನ  ಉದ್ಭವಕ್ಕೆ  ಚಾಲನೆ ಕೊಟ್ಟಿದ್ದಿರಬಹುದು. ಸೌರಮಂಡಲದಲ್ಲಿ  ಹೇರಳವಾಗಿ  ಕಂಡುಬರುವ  ಚಿನ್ನಯುರೆನಿಯಂ   ಗಳಂತ    ಭಾರವಸ್ತುಗಳ  ಅಸ್ತಿತ್ವವು    ರೀತಿಯ   ಉಡ್ಭವವನ್ನು  ಸೂಚಿಸುತ್ತದೆ    ಮೂಲವಸ್ತುಗಳು  ತಾರಾಸ್ಪೋಟದ  ಸಮಯದಲ್ಲಿ  ಉಂಟಾದ  ಪರಮಾಣು ಕ್ರಿಯೆಯಿಂದ  ಅಥವಾ ಒಂದು ಬೃಹತ್   ಎರಡನೇ ಪೀಳಿಗೆಯ  ನಕ್ಷತ್ರದಲ್ಲಿ     ನ್ಯೂಟ್ರಾ ನ್ಹೀರುವಿಕೆಯಿಂದ  ಉಂಟಾದ  ರೂಪ  ಬದಲಾವಣೆಯಿಂದ  ಸೃಷ್ಟಿಯಾಗಿದ್ದಿರಬಹುದು.
ಭೂಮಿಯ    ಮೇಲ್ಮೈಗೆ  ಸೂರ್ಯನ  ಬೆಳಕೇ  ಶಕ್ತಿಯ   ಮೂಲಸೂರ್ಯಪ್ರಕಾಶವು  ಹಲವು  ಆಸಕ್ತಿಕರ  ಜೈವಿಕ  ಗುಣಗಳನ್ನು  ಹೊಂದಿದೆ,   ಸೂರ್ಯನ  ಅತಿನೇರಳೆ  ಕಿರಣಗಳು   ನಂಜು    ನಿವಾರಕಗುಣಗಳನ್ನು  ಹೊಂದಿದೆ  ಇದನ್ನು  ಕ್ರಿಮಿ ನಿವಾರಣೆಗೆ  ಬಳಸಬಹುದುಇದು  ಚರ್ಮದ  ಮೇಲೆ  ಸುಡುಗಾಯಗಳನ್ನು  ಮಾಡುವುದಲ್ಲದೆ  ವಿಟಮಿನ್  D  ಉತ್ಪಾದನೆ    ಯಂತಹ    ಕೆಲವು  ವೈದ್ಯಕೀಯ  ಗುಣಗಳನ್ನು  ಹೊಂದಿದೆ.
--: ವೀಕ್ಷಣಾ   ಮಾಹಿತಿ :--
ಭೂಮಿಯಿಂದ       149.6×10^6ಕಿಮೀ
ಸರಾಸರಿದೂರ   ( 92.95×10^6 ಮೈಲಿ)
ಬೆಳಕಿನವೇಗಡಲ್ಲಿ   8.31 ನಿಮಿಷಗಳು
ಗೋಚ ಪ್ರಮಾಣ     -26.8m
Absolute  magnitude.  4.8m
ವರ್ಣಪಟಲ  ವಿಂಗಡಣೆ  G2V
ಕಕ್ಷೆಯ  ಗುಣ ಲಕ್ಷಣಗಳು
ಕ್ಷೀರಪಥದ  ಕೇಂದ್ರದಿಂದ  ಸರಾಸರಿ  ದೂರ–26,ooo -28ooo  ಜ್ಯೋತಿರವರ್ಷಗಳು
ತಾರಾಗಣ  ಕಾಲ -   2. 25 -2.50×10^8 a
ವೇಗ. 217ಕಿ. ಮೀ/ ಕ್ಷಣ ( ಕ್ಷೀರಪಥದ   ಕೇಂದ್ರದಿಂದ  ಪರಿಭ್ರಮನೆ )
--: ಬೌತಿಕ  ಗುಣ ಲಕ್ಷಣಗಳು :--
ಸರಾಸರಿ  ವ್ಯಾಸ   1.392×10^6 ಕಿಮೀ  ( ಭೂಮಿಯ 109  ಪಟ್ಟು)
ಪರಿಧಿ.   4.373×10^6  ಕಿಮೀ
ಹ್ರಸ್ವಾಕ್ಷತೆ.         9×10^6
ಮೇಲ್ಮೈ ವಿಸ್ತೀರ್ಣ   6.09×10^18 ಮೀ ( ಬೂಮಿಯ 11,900  ಪಟ್ಟು)
ಗಾತ್ರ     1.41 ×10^27 ಮೀ  ( ಭೂಮಿಯ 1,300,000 ಪಟ್ಟು)
ದ್ರವ್ಯರಾಶಿ   1.988435×10^30  ಕಿ . ಗ್ರಾಮ್  (ಭೂಮಿಯ 332.946  ಪಟ್ಟು)
ಸಾಂದ್ರತೆ.    1.408  ಕಿ ಗ್ರಾಮ್/ ಮೀ
ಮೇಲ್ಮೈ ಗುರುತ್ವ.    273.95 ಮೀಕ್ಷ^3 (27.9 ಜೀ)
ಮೇಲ್ಮೈನಿಂಸ ಮುಕ್ತಿವೇಗ  617.54 ಕಿ.ಮೀ/ಕ್ಷ  (ಭೂಮಿಯ 55  ಪಟ್ಟು)
ಮೇಲ್ಮೈ  ತಾಪಮಾನ  5785 ಕೆ
ಪ್ರಭಾವಲಯದ  ತಾಪಮಾನ   0.5 ಕೋಟಿ  ಕೆ
ಒಳ  ತಾಪಮಾನ    ~1.36  ಕೋಟಿ ಕೆ
--: ಪರಿಭ್ರಮನೆಯ ಗುಣಲಕ್ಷಣಗಳು :--
Obliquity   7.25°  ( to the ecliptic)
67.23   (to the galactic plane)
ಉತ್ತರದ್ರುವದ  ವಿಷುದಂಶ[1]    286.13
 19 ಘಂ 4 ನಿ 30 ಕ್ಷ
ಉತ್ತರದ್ರುವದ  ಘಂಟಾ  ವೃತ್ತಾಂಶ. +63.87
(6352’ ಉತ್ತರ)
ಸಮಭಾಜಕದಲ್ಲಿ  ಅಕ್ಷೀಯ  ಪರಿಭ್ರಮಣ  ಕಾಲ
25.38 ದಿನಗಳು  (25 ದಿ 9 ಘಂ 13 ಕ್ಷ )
ಸಮಭಾಜಕದಲ್ಲಿ  ಪರಿಭ್ರಮನದ  ವೇಗ  7174ಕಿಮೀ / ಪ್ರತಿ ಘಂ
ದ್ಯುತಿಗೋಳದ  ರಚನೆ  (ದ್ರವ್ಯರಾಶಿಯ  ದೃಷ್ಟಿಯಿಂದ)
ಜಲಜನಕ.       73.46%
ಹೀಲಿಯಮ್    24.85%
ಆಮ್ಲಜನಕ.      0.77%
ಇಂಗಾಲ          0.96%
ಕಬ್ಬಿಣ.             0.16%
Neon.             0.02%
ಸಾರಜನಕ.      9.09 %
Silicon.           0.07%
ಮ್ಯಾಗ್ನೆಸಿಯಂ. 0.05%
Sulphar.         0.02%
ಡಾ: ಶೈಲಜಾ ರಮೇಶ್....

ರಾಶಿಗಳ ಗುಣಧರ್ಮಗಳು (ಮುಂದುವರೆದ ಭಾಗ)

                            : ಹರಿಃ  ಓಂ
                   ಶ್ರೀ  ಗುರುಭ್ಯೋ ನಮಃ
             ಶ್ರೀ  ಮಹಗಣಪತಯೇ  ನಮಃ
ಮುಂದುವರೆದ  ಭಾಗ..........
--: ರಾಶಿ ಕುಂಡಲಿಯ  ವಿಶೇಷ  ಸ್ಥಾನಗಳು :--
ರಾಶಿ  ಕುಂಡಲಿಯು  ಹೊಂದಿರುವ  ವಿಶೇಷ  ಸ್ಥಾನಗಳು,  ಜ್ಯೋತಿಷ್ಯದಲ್ಲಿ  ಅವುಗಳ  ಪಾರಿಭಾಷಿಕ ಹೆಸರುಗಳು,  ಮತ್ತು  ಅವುಗಳ  ವಿಶೇಷತೆಯನ್ನು  ತಿಳಿಯುವುದು  ಅತ್ಯವಶ್ಯಕ.
ಅವುಗಳೆಂದರೆ............
ಕೇಂದ್ರ ಸ್ಥಾನಗಳು  --  1, 4, 7, 10
ಫಣಫರ                 --  ೨, 5, ೮, 11
ಅಪೋಕ್ಲಿಮ.          --   3, 6, 9, 12
ಉಪಚಯ.            --   3, 6, 10,11
ಧರ್ಮ ತ್ರಿಕೋಣ.   --   1  5, 9
ಅರ್ಥ  ತ್ರಿಕೋಣ    --   2,  6,  10
ಕಾಮ  ತ್ರಿಕೋಣ.   --   3,  7,  11
ಮೋಕ್ಷ  ತ್ರಿಕೋಣ  --   4,  8,  12
ದುಃಸ್ಥಾನಗಳು        --   ೬ , ೮,  12
ಮಾರಕ  ಸ್ಥಾನಗಳು --   2,  7
ಆಯುಸ್ತಾನಗಳು      --   3,  8
ಚತುರಸ್ರಗಳು.         --  4, 8
ಮತ್ತು   ಭಾಧಕ  ಸ್ಥಾನಗಳು.

ಕೇಂದ್ರ ಸ್ಥಾನಗಳು  :-- 1, 4, 7, 10
    ಇವುಗಳನ್ನು  ಕಂಟಕ  ಸ್ಥಾನಗಳು  ಎಂದೂ  ಕರೆಯುತ್ತಾರೆ.
     ಜಾತಕದಲ್ಲಿನ  ಕೇಂದ್ರ  ಸ್ಥಾನಗಳು  ಜಾಟಕನ  ಗುಣ ಮಟ್ಟವನ್ನು  ನಿರ್ಧರಿಸುತ್ತದೆ,  ಇವು  ಒಂದಕ್ಕಿಂತ ಒಂದು  ಬಲಿಷ್ಠವಾಗಿವೆ.  ಒಂದನೇ  ಸ್ಥಾನವು  ಜಾತಕ ನ  ಹುಟ್ಟು,  ಆರೋಗ್ಯ, ರೂಪ  ಗೌರವ  ಇತ್ಯಾದಿಗಳನ್ನು  ನಿರ್ಧರಿಸಿದರೆ,  ಚತುರ್ಥವು  ವಿದ್ಯೆ,  ಸುಖ,  ವಾಹನ,  ಭೂಮಿ...
ಸಪ್ತಮವು  ಎಲ್ಲಾ ರೀತಿಯಾದ  ವ್ಯವಹಾರ,  ಜೀವನ  ಸಂಗಾತಿ...
ದಶಮ  ಕೇಂದ್ರವು  ಅತ್ಯಂತ  ಬಲಯುತವಾದದ್ದು  ಇದು  ಕರ್ಮಗಳು,   ಅಧಿಕಾರ,  ಸನ್ಮಾನವನ್ನು  ನಿರ್ಧರಿಸುತ್ತೆ.
     ಕೇಂದ್ರ  ಸ್ಥಾನದಲ್ಲಿ ಶುಭ  ಗ್ರಹಗಳಿದ್ದರೆ  ಜಾತಕ ವು  ಬಲಿಷ್ಠವಾಗಿರುತ್ತದೆ,  ಕೇಂದ್ರ  ಸ್ಥಾನದ  ಫಲದಿಂದಾಗಿ  ಬಾಲ್ಯದಿಂದಲೇ  ಜಾತಕನನ್ನು  ಅಭಿವೃದ್ಧಿಗೆ  ತರುತ್ತದೆ.  ಗ್ರಹಗಳ  ಬಲಾಬಲಗಳಿಗೆ  ಅನುಸಾರವಾಗಿ  ಜಾತಕನ  ಯೌವನದ ವರೆಗೆ  ಶುಭಾಶುಭ  ಫಲಗಳನ್ನು  ಕೊಡುತ್ತದೆ.
ಫಣಫರ  ಸ್ಥಾನಗಳು :-- ೨,  ೫,  ೮, ೧೧
     ಫಣಫರ ವು  ಜೀವನದ  ಮಧ್ಯಭಾಗದಲ್ಲಿ  ಫಲವನ್ನು  ಕೊಡುತ್ತದೆ,  ಈ  ಸ್ಥಾನಗಳು  ಮಧ್ಯಮ ಬಲವನ್ನು  ಹೊಂದಿದೆ.  ಜೀವನದಲ್ಲಿನ  ಏರುಪೇರುಗಳು  ಸೂಚಿಸುತ್ತದೆ.  ಧನಸಂಪತ್ ನ್ನು ಸೂಚಿಸುವ  ಎರಡನೇ  ಭಾವ,  ಬುದ್ಧಿ ಹಾಗೂ  ಪೂರ್ವಪುಣ್ಯವನ್ನು  ಸೂಚಿಸುವ  ಪಂಚಮಭಾವ,  ಸಂಪತ್ತಿ ನಲ್ಲಾಗುವ  ಏರುಪೇರನ್ನು  ಆಯುಪ್ರಮಾಣವನ್ನು  ಸೂಚಿಸುವ  ಅಷ್ಟಮ ಭಾವ,  ಇವುಗಳಿಂದ  ಉಂಟಾಗುವ  ಲಾಭಗಳನ್ನು ಏಕಾದಶ  ಸ್ಥಾನವು  ಪ್ರತಿನಿಧಿಸುತ್ತದೆ.
ಅಪೋಕ್ಲಿಮ :--  3,  6,  9,  12
ಅಪೋಕ್ಲಿಮ  ಎಂದರೆ  ಬಲವಿಲ್ಲದ್ದು  ಎಂದರ್ಥ.  ಆದ್ದರಿಂದ  ಈ  ಸ್ಥಾನಗಳು  ಯಾವುದೇ ರೀತಿಯಿಂದಲೂ  ಅನುಕೂಲವನ್ನುಂಟು  ಮಾಡುವುದಿಲ್ಲ.  ಈ  ಸ್ಥಾನದಲ್ಲಿರುವ  ಗ್ರಹಗಳು ಸಹ  ನಿರ್ಭಲರಾಗಿರುತ್ತಾರೆ.   ಇವುಗಳ  ಫಲಗಳು  ಜೀವನದ  ಅಂತ್ಯ  ಭಾಗದಲ್ಲಿ  ಅನುಭವಕ್ಕೆ  ಬರುತ್ತದೆ.  3 ನೆ  ಭಾವವು ಪ್ರಯತ್ನ  ಮತ್ತು  ಏಳಿಗೆಯನ್ನು  ಸೂಚಿಸುತ್ತದೆ.   6ನೇ  ಭಾವವು ಕರ್ಮ ಸ್ಥಾನಕ್ಕೆ  ಭಾಗ್ಯಭಾವವಾಗಿದೆ.  ಭಾಗ್ಯಭಾವವು  ಪುಣ್ಯವನ್ನು  ಸೂಚಿಸುತ್ತದೆ,  ವ್ಯಯಭಾವವು  ಮೋಕ್ಷವನ್ನು  ಸೂಚಿಸುತ್ತದೆ.
ಉಪಚಯ :--  3,  6,  10,  11
ಉಪಚಯವೆಂದರೆ  ಬೆಂಬಲ,  ಜಾತಕನು  ಹಿಡಿದ  ಕೆಲಸಕ್ಕೆ,  ಅಥವಾ  ಅಭಿವೃದ್ಧಿ  ಹೊಂದುವುದಕ್ಕೆ  ಒದಗುವ  ಎಲ್ಲಾ  ರೀತಿಯ  ಬೆಂಬಲವನ್ನು  ಈ  ಉಪಚಯ  ಸ್ಥಾನವು  ಸೂಚಿಸುತ್ತದೇ.
3 -  ಧೈರ್ಯ  ಸ್ಥೈರ್ಯ,  6 -  ಬೆಂಬಲ,  10 -   ಕರ್ಮಸ್ಥಾನದಲ್ಲಿ  ಏಳಿಗೆ,   ಇವುಗಳಿಂದ  ಪಡೆಯುವ  ಲಾಭವನ್ನು  11  ಸೂಚಿಸುತ್ತದೆ.   ಈ  ಸ್ಥಾನಗಳೆಲ್ಲವೂ  ಜಾಟಕನ  ಜೀವನದಲ್ಲಿ  ಏಳಿಗೆಯನ್ನು  ಉಂಟುಮಾಡುತ್ತವೆ,  ಜಾತಕನ  ಅಭಿವೃದ್ಶಿ  ಹಾಗೂ  ಬೆಂಬಲವೇ  ಈ. ಸ್ಥಾನಗಳ  ಮೂಲಮಂತ್ರವಾದ್ದರಿಂದ  ಗ್ರಹಗಳು  ಶುಭಾಶುಭ  ಬೇಧವಿಲ್ಲದೇ  ಸಹಕರಿಸುತ್ತದೆ.  ತೃತೀಯ  ಹಾಗೂ ಷಷ್ಟ  ಸ್ಥಾನವು ಅಶುಭ  ಫಲವನ್ನು,  ದಶಮ  ಹಾಗೂ  ಏಕಾದಶ  ಸ್ಥಾನವು  ಶುಭ  ಫಲವನ್ನು  ನೀ ಡುತ್ತದೆ.  3,  6 ರಲ್ಲಿ  ಸ್ಥಿತರಾದ  ಶುಭಗ್ರಹಗಳು  ಮಿಶ್ರಫಲವನ್ನು,  ಪಾಪ ಗ್ರಹಗಳು  ಶುಭಫಲವನ್ನು  ನೀಡುತ್ತಾರೆ.
ತ್ರಿಕೋಣಗಳು :--
1 ,  ೫,  9, ------ಧರ್ಮ  ತ್ರಿಕೋಣ
2,  6,  10,------ಅರ್ಥ  ತ್ರಿಕೋಣ
3,  7,  11 ------ ಕಾಮ ತ್ರಿಕೋಣ
4,  8,  12 ------ಮೋಕ್ಷ  ತ್ರಿಕೋಣ
ತ್ರಿಕೋಣಗಳು  ಜಾತಕನ  ಜ್ಞಾನ  ವಿಶೇಷತೆಯನ್ನು  ತಿಳಿಸುತ್ತದೆ.
    ಪೂರ್ವ ಪುಣ್ಯವಾದ  ಪಂಚಮವು  ಇಹದ  ಸುಖವನ್ನು,  ನವಮವು  ಭಾಗ್ಯ  ಸ್ಥಾನವಾಗಿದ್ದು  ಪರದಲ್ಲಿನ  ಸದ್ಗತಿಯನ್ನು  ತಿಳಿಸುತ್ತದೆ.  ಇದು  ಪೂರ್ಣ ಬಲವುಳ್ಳ  ತ್ರಿಕೋನವಾಗಿದೆ.   ಭಾವಾಧಿಪತಿಗಳು  ಬಲಿಷ್ಠವಾಗಿದ್ದರೆ  ಜಾತಕನು  ಉತ್ತಮವಾದ  ಜೀವನವನ್ನು  ಸಾಗಿಸುತ್ತಾನೆ,  ಇದು  ಜೀವನ ಪರ್ಯಂತ   ಮುಂದುವರೆಯುತ್ತದೆ.
ಧರ್ಮ,  ಅರ್ಥ,  ಕಾಮ,  ಮೋಕ್ಷ......  ಹೆಸರೇ  ಸೂಚಿಸುವಂತೆ  ಸ್ಥಿತಗ್ರಹರ  ಬಲಾಬಲದ ಮೇರೆಗೆ  ಜಾತಕನನ್ನು  ಧಾರ್ಮಿಕ,  ಜ್ಞಾನ,  ವಿನಯ,  ಸಾತ್ವಿಕತೆ,  ಧನ ಸಂಪನ್ನ,  ಬಯಸಿದ್ದೆಲ್ಲ  ಕೈಗೂಡುವುದು,  ಕಾರ್ಯ  ಕ್ಷೇತ್ರದಲ್ಲಿ  ಜಯ,  ಅತ್ಯುನ್ನತವಾದ  ದಾಂಪತ್ಯ  ಸುಖ, ವ್ಯವಹಾರದಲ್ಲಿ  ಜಯ,  ಧಾನಧರ್ಮ  ಬುದ್ಧಿ,  ತ್ಯಾಗ  ಮನೋಭಾವ,  ಜೀವನಾದ್ಯಂತದಲ್ಲಿ  ಸದ್ಗತಿ/ ಮೋಕ್ಷ...........  ಈ  ರೀತಿ  ತ್ರಿಕೋಣದಲ್ಲಿ  ಸ್ಥಿತರಾದ  ಗ್ರಹಗಳ  ಬಲಾಬಲದ  ಮೇರೆಗೆ  ಶುಭಾಶುಭಗಳು  ಲಭಿಸುತ್ತದೆ.
ದುಃಸ್ಥಾನ ಗಳು :--
     ದುಃಸ್ಥಾನವೆಂದು  ಜ್ಯೋತಿಷ್ಯದಲ್ಲಿ  ಪ್ರಖ್ಯಾತಿ  ಹೊಂದಿರುವ  6,  8,  12 ರ ಭಾವಗಳು  ಕ್ರಮವಾಗಿ 
   6 ರಿಂದ --  ರೋಗ,  ಋಣ,  ಶತೃ, ದಾರಿದ್ರ್ಯ,  ಅಪ ಮೃತ್ಯ್ ಯು, ಭಯ,  ಶೋಕ,  ಮನಸ್ತಾಪ ; 
   8ರಿಂದ --  ಸಾವು,  ಅಫಘಾತ,  ಸೆರೆವಾಸ,  ದುಃಖ, ವಿರೋಧ, ಅನವಶ್ಯಕ  ಚಿಂತೆ,  ರಂಧ್ರ ಸ್ಥಾನವಾದ್ದರಿಂದ  ಗುಪ್ತ ವಿಚಾರದಲ್ಲಿನ  ಭಾಧೆ ( ಪರರಿಗೆ  ಹೇಳಿಕೊಳ್ಳಲಾರದ  ಬಾಧೆ),
    12 ರಿಂದ  ಎಲ್ಲ  ಭಾವಗಳಿಂದಾಗುವ  ವ್ಯಯ,  ಮುಕ್ತಿ,  ವೈರಾಗ್ಯ,  ಬಂಧನ,  ಹಿಡಿದ ಕೆಲಸಗಳನ್ನು  ಸಾಧಿಸಲಾರದೆ  ಸೋಲುವುದು,  ವಿದೇಶವಾಸ,  ವಿಷಯ ಸುಖದಿಂದ ಬಂಧಿತರಾಗುವುದು/  ಮುಕ್ತಿ ದೊರೆಯುವುದು.
    ಅತಿ ಮುಖ್ಯವಾಗಿ  ಗಮನಿಸಬೇಕಾದ  ಅಂಶವೆಂದರೆ  8 ನೆ  ಸ್ಥಾನವು  ರಂಧ್ರ ಸ್ಥಾನವಾಗಿರುವುದರಿಂದ  ಅತ್ಯಂತ ದೋಷಯುಕ್ತವಾಗಿದೆ,  ಈ ದೆಸೆಯಲ್ಲಿ  ನೋಡಿದಾಗ 12 ನೆ  ಸ್ಥಾನವು 6 , 8, ಕ್ಕಿಂತ  ಕಡಿಮೆ  ದೋಷವನ್ನು  ಹೊಂದಿದೆ.  ಭಾವದಲ್ಲಿ  ಸ್ಥಿತ  ಗ್ರಹರ  ಬಲಾಬಲದ  ಮೇರೆಗೆ  ತೊಂದರೆಗಳಿಂದ  ಮುಕ್ತಿ  ಅಥವಾ ತೊಂದರೆಗೆ  ಸಿಲುಕುವುದು ಎಂಬುದನ್ನು  ತಿಳಿಯಬಹುದು.  8,  12  ರಲ್ಲಿ ಶುಭಗ್ರಹಗಳು  ಮಿಶ್ರ  ಫಲವನ್ನು,  ಪಾಪಗ್ರಹಗಳು  ಅಶುಭ ಫಲವನ್ನು  ನೀಡುತ್ತಾರೆ.
   6,  8,  12,  ರ  ಈ  ದುಃಸ್ಥಾನ ದ  ವಿಷಯದಲ್ಲಿ  ""ವಿಪರೀತ  ರಾಜಯೋಗ "" ಎಂಬ  ಒಂದು  ಯೋಗದ  ಮಾತು  ಕೇಳಿಬರುತ್ತದೆ.  ಒಂದು  ದುಃಸ್ಥಾನಧಿಪತಿಯು  ಇನ್ನೊಂದು  ದುಃಸ್ಥಾನ ದಲ್ಲಿ  ಸ್ಥಿತನಾದಾಗ  ಈ  ವಿಪರೀತ  ರಾಜಯೋಗ  ಉಂಟಾಗುತ್ತದೆ.  ಈ  ಯೋಗದಿಂದ  ದೀರ್ಘಕಾಲೀನ  ರೋಗವು  ಗುಣಮುಖವಾಗುವುದು,  ಬಯಸದೇ  ಭಾಗ್ಯ  ಪ್ರಾಪ್ತಿ,  ಆಕಸ್ಮಿಕ  ಧನಲಾಭ,  ಪರರಿಂದ  ಅನುಕೂಲ,  ಜೀವವಿಮಾದಂತಹ  ಮೂಲಗಳಿಂದ  ಧನಪ್ರಾಪ್ತಿ,  ಧಿಡೀರ್  ವಿದೇಶ ಪ್ರಯಾಣ , ಧೀರ್ಘ ಕಾಲದ  ತೊಂದರೆಗಳಿಂದ  ಮುಕ್ತಿ, ಇವೆಲ್ಲಾ  ವಿಪರೀತ  ರಾಜಯೋಗವನ್ನುಂಟು  ಮಾಡುವ ಗ್ರಹದ  ದಶಾ  ಅವಧಿಯಲ್ಲಿ  ನಡೆಯುತ್ತದೆ.  ಈ  ಫಲವು  ಒಂದು  ರೀತಿ  ಮರಳು ಗಾಡಿನ  ಓಯಸಿಸ್ ಇದ್ದಂತೆ.
ಮಾರಕ  ಸ್ಥಾನಗಳು :-  2,  7,
     ಮಾರಕ  ಸ್ಥಾನಗಳು  ಮರಣಕ್ಕೆ  ಕಾರಣವನ್ನು  ನಿರ್ಣಯಿಸುತ್ತದೆ.  2ನೆ ಸ್ಥಾನವು  ಧನ,  ಕುಟುಂಬ ಸ್ಥಾನವಾಗಿದ್ದು,  ಆಹಾರ ಸೇವನೆ ಯನ್ನು  ಸಹ ಸೂಚಿಸುತ್ತದೇ.  7 ನೆ  ಸ್ಥಾನವು  ಕಲತ್ರ ಹಾಗೂ  ಎಲ್ಲಾ ರೀತಿಯ  ವ್ಯವಹಾರ ವನ್ನು  ಸೂಚಿಸುತ್ತದೆ,  ಈ. ಭಾವಗಳಲ್ಲಿ  ಸ್ಥಿತರಾಗಿರುವ  ಗ್ರಹಗಳ  ಭಲಾಢ್ಯ ತೆಯ  ಮೇರೆಗೆ ಶುಭಾಶುಭ  ಫಲಗಳು  ಅನುಭವಕ್ಕೆ  ಬರುತ್ತದೆ.  ಕಲತ್ರ ಭಾವಕ್ಕೆ ( 7ನೇ ಭಾವಕ್ಕೆ )  2 ನೆ ಭಾವವು  ಆಯುಸ್ಥಾನ ವಾಗುತ್ತದೆ,  8ನೆ  ಸ್ಥಾನವು  ಜಾತ ಕನ  ಆಯುಸ್ತಾನವಾಗಿದೆ,  ಹಾಗೆಯೇ 3  ನೆ  ಸ್ಥಾನವು  ಅಷ್ಟಮಕ್ಕೆ,  ಅಷ್ಟ ಮ  ಸ್ಥಾನವಾಗಿದೆ (ಅಷ್ಟಮಾತ್  ಅಷ್ಟಮ)  .  8 ರಿಂದ ವ್ಯಯಸ್ಥಾನ 7 ನೆ  ಭಾವ,  ಹಾಗೆಯೇ 3  ರಿಂದ ವ್ಯಯಸ್ಥಾನ  2 ನೆ  ಭಾವ ಆದ್ದರಿಂದ  2,  7,  ಮಾರಕ  ಸ್ಥಾನವಾಗಿದೆ.
ಆಯುಸ್ಥಾನ :-- 3,  8
    
     ಈ ಭಾವಗಳು  ಜೀವಿಯ  ಅಂತ್ಯದ  ವಿಚಾರವನ್ನು  ಹೇಳುತ್ತದೆ.   ಅಂದರೆ  ಮರಣಕ್ಕೆ  ಕಾರಣ  ಹಾಗೂ  ಮರಣದ  ಸ್ವರೂಪವನ್ನು  ತಿಳಿಸುತ್ತದೆ.  ಮೂರನೇ  ಸ್ಥಾನವು  ಮರಣ  ಸ್ಥಾನವಾದ  ಅಷ್ಟಮ  ಭಾವಕ್ಕೆ  ಅಷ್ಟಮ  ಸ್ಥಾನವಾಗುತ್ತೆ,  ಇದು  ಉಪ  ಆಯುಸ್ಥಾನ,  ಜಾತಕರಿಗೆ  ಆಕಸ್ಮಿಕವಾಗಿ  ಎದುರಾಗುವ  ರೋಗ,  ಅಫಘಾತಗಳು,  ವೈ ಮನಸ್ಯ ,  ದೇಹಕ್ಕಾಗುವ  ನೋವುಗಳನ್ನು  ಸೂಚಿಸುತ್ತದೆ.   ಮೂರನೇ  ಸ್ಥಾನವು  ಕಿವಿ  ಹಾಗೂ  ಬಾಹುಗಳನ್ನು  ಸೂಚಿಸುವುದರಿಂದ,  ಕಿವಿಯ  ಸಮಸ್ಯೆ  ಬಲಹೀನತೆ/  ಭುಜಬಲವನ್ನು  ತೋರಿಸುತ್ತದೆ.
ಚತುರಸ್ರಗಳು :--  4,  8
ಈ  ಭಾವದಲ್ಲಿ  ಸ್ಥಿತರಾಗಿರುವ  ಗ್ರಹಗಳು  ಜಾತಕನ  ಸುಖ - ದುಃಖ ಕ್ಕೆ  ಸಂಬಂಧಿಸಿದಂತೆ  ಮಿಶ್ರಫಲವನ್ನು  ನೀಡುತ್ತದೆ.  4  ನೇ  ಸ್ಥಾನವು  ಸುಖಸ್ಥಾನ ಹಾಗೂ  8 ನೇ  ಸ್ಥಾನವು  ಮರಣ / ಆಯುಸ್ತಾನವಾಗಿದೆ.  ಈ  ಸ್ಥಾನದಲ್ಲಿ  ಸ್ಥಿತರಾದ  ಶುಭ / ಪಾಪ ಗ್ರಹಗಳ  ಬಲಾಬಲದ  ಮೇರೆಗೆ  ಜಾತಕನಿಗೆ ನೆಮ್ಮದಿ,  ಸೌಖ್ಯ,  ಧನ,  ವಸ್ತು  ವಾಹನ,  ಪಿತ್ರಾರ್ಜಿತವಾದ  ಆಸ್ತಿ,  ಅಂತಸ್ತುಗಳನ್ನು  ಕೊಡುತ್ತದೆ. ಪಾಪಗ್ರಹಗಳು  ಸ್ಥಿತರಾದರೆ  ಇದಕ್ಕೆ  ವಿರುದ್ಧ  ಫಲಗಳನ್ನು  ಕೊಡುತ್ತಾರೆ.
ಬಾಧಕ  ಸ್ಥಾನಗಳು  :-- 
ಚರ ರಾಶಿಗೆ. --  ಹನ್ನೊಂದನೇ  ಸ್ಥಾನ
ಸ್ಥಿರ  ರಾಶಿಗೆ --  ಒಂಬತ್ತನೇ  ಸ್ಥಾನ
ದ್ವಿಸ್ವಭಾವ  ರಾಶಿಗೆ --   ಏಳನೇ  ಸ್ಥಾನವು  ಬಾಧಕ  ಸ್ಥಾನವಾಗುತ್ತೆ.
✍ ಶೈಲಜಾ  ರಮೇಶ್...

Sunday, 23 April 2017

ರಾಶಿಗಳ ಗುಣಧರ್ಮಗಳು (ಮುಂದುವರಿದ ಭಾಗ)

                      : ಹರಿಃ  ಓಂ
         ಶ್ರೀ  ಮಹಗಣಪ ತಯೇ ನಮಃ
               ಶ್ರೀ  ಗುರುಭ್ಯೋನಮಃ
ರಾಶಿಗಳ  ಗುಣಧರ್ಮಗಳು
           ಮುಂದುವರೆದ  ಭಾಗ.......
ಜಾತಕದ  ಮೇಲೆ  ರಾಶಿಗಳ  ಗುಣಧರ್ಮಗಳ  ಪ್ರಭಾವ
ರಾಶಿಗಳ  ತತ್ವಗಳು :--
ಅಗ್ನಿತತ್ವ :--  1 , 5,  9,  ಮೇಷ,  ಸಿಂಹ,  ಧನಸ್ಸು
   
       ಅಗ್ನಿತತ್ವದವರು  ಸಹಜವಾಗಿ  ಕ್ರಿಯಾಶೀಲರಾಗಿರುತ್ತಾರೆ,  ಧೈರ್ಯ ಸ್ಥೈರ್ಯ ವಂತರಾಗಿರುತ್ತಾರೆ.   ಉತ್ಸಾಹ,  ಹುರುಪು ,  ನಾಯಕತ್ವದ  ಗುಣವಿರುತ್ತದೆ.  ಸಂಘರ್ಷಗಳು,  ವಿವಾದ,  ಕಲಹ,  ಅತಿಯಾದ ಕೋಪ,  ಮಿತಿ ಮೀರಿದ  ಕಾಮ,  ವಿಪರೀತ  ಜ್ವರದಿಂದ  ನರಳುವುದು,  infection  ಆಗ್ತಾಯಿರುತ್ತೆ,  ಸದಾ  ಹೊಸತನ್ನು  ಬಯಸುವವರು,  ಅಗ್ನಿಗೆ  ಸಂಬಂಧಿಸಿದ  ಕೆಲಸಗಳಲ್ಲಿ,  ಮದ್ದು,  ಗುಂಡು ತಯಾರಿಕಾ  ಘಟಕ... ಇಂತಹ  ಕೆಲಸಗಳಲ್ಲಿ ತೊಡಗಿಸಿಕೊಳ್ಳಲು  ಬಯಸುತ್ತಾರೆ. ತಾಂತ್ರಿಕ  ,  ಇಂಜಿನಿಯರ್  ವಿದ್ಯಾಭ್ಯಾಸದಲ್ಲಿ  ಹೆಚ್ಚಿನ  ಆಸಕ್ತಿ  ಹೊಂದಿರುತ್ತಾರೆ.  ಈ  ತತ್ವದಲ್ಲಿ  ಸ್ಥಿತರಾಗಿರುವ  ಗ್ರಹಗಳು  ತಮ್ಮ  ದಶಾಕಾಲದಲ್ಲಿ  ಈ  ಫಲಗಳನ್ನು  ನೀಡಲು  ಶಕ್ತರಾಗಿರುತ್ತಾರೆ.  ಈ  ತತ್ವಕ್ಕೆ  ಸೇರಿದ  ಗ್ರಹಗಳಾದ ಕುಜ,  ರವಿ  ಉತ್ತಮ  ಸ್ಥಿತಿಯಲ್ಲಿರಬೇಕಾಗುತ್ತದೆ.  ಇದಾರಿಂದ  ಜಾತಕರ  ಬುದ್ಧಿವಂತಿಕೆ,  ಜ್ಞಾನ  ಎಷ್ಟರಮಟ್ಟಿಗೆ  ಹಿಡಿದ  ಕೆಲಸವನ್ನು  ಸಾಧಿಸಲು  ದೇಹ  ಮತ್ತು ಮನಸ್ಸು  ಸಹಕರಿಸುತ್ತದೆಂಬುದನ್ನು  ತಿಳಿಸುತ್ತದೆ.

ಪೃಥ್ವಿ/ ಭೂತತ್ವ :--  2,  6,  10,  ವೃಷಭ,  ಕನ್ಯಾ,  ಮಕರ.
     ವಿಷಯ  ಸುಖಗಳನ್ನು  ಅನುಭವಿಸುವುದಕ್ಕಾಗಿಯೇ  ಇರುವುದು  ಈ  ಭೂ  ತತ್ವ......
ಹಾಗಾಗಿ,  ಪ್ರಾಪಂಚಿಕ  ವಿಷಯಗಳಿಗೆ  ಭೂತತ್ವ  ಕೇಂದ್ರವಾಗಿದೆ,  ಅಂದರೆ  ಅಧಿಕಾರ,  ಅಂತಸ್ತು,  ಗೌರವ  ಪಡೆಯುವುದು,  ಮಿತ್ರರಲ್ಲಿ  ಬೇಗ  ಒಂದಾಗದಿರುವುದು,  ಸಂಶಯಾ ಸ್ಪದ  ಸ್ವಭಾವ,  ವಿಮರ್ಶಾತ್ಮಕ ದೃಷ್ಟಿಯಿಂದ  ಆಲೋಚಿಸಿ  ನಿರ್ಣಯಿಸುವುದೇ  ಭೂತತ್ವದ  ವಿಶೇಷ,  ಬಡಪಟ್ಟಿಗೆ  ಸೋಲನ್ನೊಪ್ಪದ  ಸ್ವಭಾವ,  ಶ್ರಮಪಡದೇ  ಜೀವನ  ನಡೆಸುವವರು,  ಯಾವುದನ್ನು  ಬೇಡದೆನ್ನಡಿರುವ  ಸ್ವಭಾವ,  ಸಮಯಕ್ಕೆ ತಕ್ಕಂತೆ  ಹೊಂದಿಕೊಳ್ಳುವವರು,  ಹೇಗಾದರೂ  ಸುಖಪಡಬೇಕೆಂಬ  ಛಲ,  ಮಾನವ ಜನ್ಮ ಬಂದಿರುವುದೇ  ಪೂರ್ವಪುಣ್ಯ  ವಿಶೇಷವೆಂದು  ತಿಳಿದು  ಎಲ್ಲಾ  ಸುಖವನ್ನು  ಅನುಭವಿಸಲು  ಹಾತೊರೆಯುತ್ತಾ ರೆ.

        ವಾಯುತತ್ವ :--  3,  7,  11,  ಮಿಥುನ,  ತುಲಾ,  ಕುಂಭ
     ಕಲ್ಪನಾ  ಸಾಮ್ರಾಜ್ಯದಲ್ಲಿ  ವಿಹರಿಸಿ ಕನಸಿನ  ಗೋಪುರವನ್ನೇ  ಕಟ್ಟಿಕೊಂಡಿರುತ್ತಾರೆ.   ದೈಹಿಕ  ಬಲಕ್ಕಿಂತ  ಮನೋಬಲವೇ  ಅಧಿಕ ವಾಗಿರುತ್ತದೆ,  ಎಲ್ಲರಲ್ಲೂ  ಉತ್ತಮವಾದ  ಸಾಮರಸ್ಯವನ್ನು  ಹೊಂದಿರುತ್ತಾರೆ.  ಮಾನವೀಯ  ಗುಣಗಳು (ದಯೆ,  ಸದ್ವರ್ತನೆ,  ಸುಸಂಸ್ಕೃತಿ ) , ಉತ್ತಮವಾದ  ಕಲಾಪ್ರಜ್ಞೆ,  ಉತ್ತಮವಾದ  ಸಂಸ್ಕಾರ,  ಸಾಹಿತ್ಯ  ಸಂಗೀತಗಳಲ್ಲಿ  ಹೆಚ್ಚು  ಆಸಕ್ತಿ  ಹೊಂದಿದವರಾಗಿರುತ್ತಾರೆ,  ಸ್ವತಃ  ಕಲಾವಿದರಾಗಿರುತ್ತಾರೆ.  ತಮ್ಮ  ಅನಿಸಿಕೆಗಳನ್ನು  ಯಾರ  ಮೇಲೂ  ಹೇರುವುದಿಲ್ಲ,  ಉತ್ತಮವಾದ  ಸಲಹೆಗಾರರು ಹಾಗೂ  ಸೇವಾನಿರತ ರು,  ಆಲೋಚಿಸಿ  ಮಾತನಾಡುವವರು,  ಇದರಿಂದಾಗಿ  ವರದಿಗಾರರು,  ವಿಜ್ಞಾನಿಗಳು,  ವಿಷಯ  ನಿರೂಪಕರು,  ಕವಿಗಳು,  ಲೇಖಕರು,  ವಕೀಲರು,  ನ್ಯಾಯವಾದಿಗಳು,  ಪ್ರಾಧ್ಯಾಪಕರು,  ಉಪನ್ಯಾಸಕರು  ಆಗುವ  ಸಾಧ್ಯತೆಗಳು  ಜಾಸ್ತಿ  ಇರುತ್ತದೆ. ಮಾನಸಿಕ  ಸ್ಥಿತಿಯು  ಉತ್ತಮವಾಗಿರುವುದರಿಂದ,  ಉತ್ತಮ  ಸಮಾಜವನ್ನು  ಸೃಷ್ಟಿಮಾಡಬಲ್ಲರು,  ಮನಸ್ಸು  ಮುಟ್ಟು ವಂತೆ  ಮಾತನಾಡುವುದರಿಂದ  ಮಾನಸಿಕ  ತಜ್ಞರಾಗಬಹುದು,  ಆದ್ದರಿಂದ  ವಾಯುತತ್ವದಲ್ಲಿ  ಹೆಚ್ಚು ಗ್ರಹಗಳಿದ್ದರೆ  ತಮ್ಮ  ಬುದ್ಧಿ   ಸಾಮರ್ಥ್ಯದಿಂದ  ಕೀರ್ತಿ,  ಅಂತಸ್ತು,  ಗೌರವ,  ಅಧಿಕಾರ,  ಧನ  ಮುಂತಾದವುಗಳನ್ನು  ಪಡೆಯುವುದರಲ್ಲಿ  ಯಶಸ್ವಿಗಳಾಗುತ್ತಾರೆ.

ಜಲತತ್ವ :-- 4,  8,  12,  ಕಟಕ  ವೃಶ್ಚಿಕ,  ಮೀನ
     ಜಲದ  ಗುಣವು  ಏರಿಳಿತಗಳನ್ನು ಸೂಚಿಸುವುದಾದ್ದರಿಂದ  ಜೀವನವು  ಸಹ  ಏರಿಳಿತಗಳಿಂದ  ಕೂಡಿರುತ್ತದೆ  ಭಾವನಾ ಜೀವಿಗಳಾಗಿರುತ್ತಾರೆ,  ಯಾವುದೇ  ವಿಚಾರವನ್ನಾದರು  ಬಹಳ  ಬೇಗ  ಗ್ರಹಿಸಿಕೊಳ್ಳುತ್ತಾರೆ,  ಹಾಗೆಯ್ಯೇ ಎಲ್ಲರಲ್ಲೂ  ಬಹುಬೇಗ  ಬೆರೆಯುತ್ತಾರೆ,  ಜನರೊಂದಿಗೆ  ಬೆರೆತರೂ ಸಹ  ಅವರವರ  ಆಂತರ್ಯವನ್ನು ತಿಳಿದು  ಅದಕ್ಕೆ  ತಕ್ಕನಾಗಿ  ವರ್ತಿಸುತ್ತಾರೆ.  ಯಾರಲ್ಲೂ  ದ್ವೇಷ  ಕಟ್ಟಿಕೊಳ್ಳಲು  ಇಷ್ಟಪಡುವುದಿಲ್ಲ,  ನಿಗೂಢ ವಿಷಯವನ್ನು  ತಿಳಿದುಕೊಳ್ಳಲು  ಆಸಕ್ತಿ,  ಸ್ವಲ್ಪ  ಹಿಂಜರಿಕೆ  ಸ್ವಭಾವ,  ನಾಚಿಕೆ  ಸ್ವಭಾವ,  ಜಲತತ್ವವಾದ್ದರಿಂದ  ಜಲಸಂಭಂದಿ  ರೋಗಗಳಿಂದ  ನರಳುವ  ದೇಹಪ್ರಕೃತಿ,  ಶರೀರದಲ್ಲಿ  ಹುಣ್ಣುಗಳು  ಬಹುಬೇಗ  ಕಾಣಿಸಿಕೊಳ್ಳುತ್ತವೆ,  ಗಂಟಲು ಬೇನೆ  ಗಳಗಂಡ,  ಹೊಟ್ಟೆಗೆ  ಸಂಬಂದಿಸಿದ ರೋಗಗಳು,  ನಿಶ್ಯಕ್ತಿ,  ಶ್ವಾಸಕೋಶದ ತೊಂದರೆ,  ಗ್ಯಾಸ್ಟ್ರಿಕ್  ಸಮಸ್ಯೆ. ಮುಂತಾದವುಗಳು  ತಲೆದೋರುತ್ತದೆ.  ಜಲಸಂಬಂಧಿ. ವ್ಯಾಪಾರ ವ್ಯವಹಾರ. ಹಾಗೂ ನೌಕಾಪಡೆ,  ನೌಕಯಾನದಲ್ಲಿ  ಕಾರ್ಯ  ನಿರ್ವಹಿಸಲು  ಇಷ್ಟಪಡುತ್ತಾರೆ,  ಮಾನಸಿಕವಾಗಿ  ಪ್ರಬಲವಾಗಿದ್ದು,  ಭಾವನಾ ಜೀವಿಗಳಾದ್ದರಿಂದ  ನಾಟಕ,  ಚಿತ್ರರಂಗದಲ್ಲಿ  ಆಸಕ್ತರಾಗಿದ್ದು,  ಸ್ವತಃ  ನಾಟಕಕಾರರು,  ನಟರು,  ಚಿತ್ರಕಲಾವಿದರು,  ಚಿತ್ರನಟ ರು ನೃತ್ಯ,  ಸಂಗೀತ  ನಿರೂಪಕರು  ನಿರ್ದೇಶಕರು  ಆಗಬಹುದು,  ಜಲತತ್ವದಲ್ಲಿ ಸ್ಥಿತರಾಗಿರುವ  ಗ್ರಹಗಳಿಗೆ  ತಕ್ಕಂತೆ  ಆಯಾ  ದಶಾಕಾಲದಲ್ಲಿ  ಫಲಗಳು  ಅನುಭವಕ್ಕೆ  ಬರುತ್ತದೆ,   ಜಲಗ್ರಹಗಳಾದ  ಶುಕ್ರ  ಹಾಗೂ  ಚಂದ್ರರ ಸ್ಥಿತಿಯನ್ನೂ  ಪ್ರಧಾನವಾಗಿ ನೋಡಬೇಕು.
      ಜಲತತ್ವಕ್ಕೆ  ಸಂಬಂಧಿಸಿದಂತೆ ಅತಿ  ಮುಖ್ಯವಾದ  ವಿಚಾರವನ್ನು  ಗಮನಿಸಬೇಕಾಗುತ್ತದೆ,  ಬೇರಾವ  ತತ್ವವೂ ಸಹ  ಒಂದರೊಡನೊಂದು  ಸಂಬಂಧವನ್ನು  ಹೊಂದಿರುವುದಿಲ್ಲ,  ಆದರೆ  ಜಲತತ್ವ ದೊಂದಿಗೆ  ಇತರ  ತತ್ವದ  ರಾಶಿಗಳು  ಸಂಭಂದ  ಹೊಂದಿರುವುದನ್ನು  ಗಮನಿಸಬಹುದು.
      ಕಟಕ,  ವೃಶ್ಚಿಕ, ಮಕರ, ಮೀನಗಳು  ಪೂರ್ಣ ಜಲತತ್ವ ರಾಶಿಯಾಗಿರುವುದು  ತಿಳಿದ  ವಿಷಯವೇ,  ಉಳಿದ  ರಾಶಿಗಳಾದ  ಮೇಷ ೧/೨,  ವೃಷಭ 1/2,  ತುಲಾ 1/4, ಧನಸ್ಸು 1/2,  ಕುಂಬ  1/2   ಭಾಗಗಳಷ್ಟು  ಜಲತತ್ವವನ್ನು  ಹೊಂದಿದ್ದು, ಈ  ವಿಚಾರವು  ಮೇಧಿನಿ  ಜ್ಯೋತಿಷ್ಯದ  ಫಲ ನಿರೂಪಣೆಯಲ್ಲಿ  ವಿಶೇಷವಾದ  ಪಾತ್ರವನ್ನು  ವಹಿಸುತ್ತದೆ.

ದಿಕ್ಕುಗಳು:--
     ಮನೆಗೆ  ಬಾಗಿಲಿಡಲು,  ಪ್ರಯಾಣ  ಮಾಡಲು,  ಗಂಡು/ ಹೆಣ್ಣುಗಳು,  ಕಳುವಿನ ಪ್ರಶ್ನೆ,  ಮುಂತಾದವುಗಳಲ್ಲಿ  ಹೆಚ್ಚಿನ  ರೀತಿಯಲ್ಲಿ  ಉಪಯೋಗಕ್ಕೆ  ಬರುತ್ತದೆ.  ವಿಶೇಷವಾಗಿ  ಯಾವಾದಿಕ್ಕು  ಹೆಚ್ಚಿನ  ಗ್ರಹಗಳನ್ನು  ಹೊಂದಿದ್ದು,  ಶುಭ ಗ್ರಹಗಳ  ಸ್ಥಿತ ದೃಷ್ಟಿಯನ್ನು  ಹೊಂದಿದ್ದು  ಬಲಯುತವಾಗಿ  ಇರುತ್ತದೆಯೋ,  ಆ  ರಾಶಿಯು  9-(ಭಾಗ್ಯ),  10-( ಕರ್ಮ),  11- ( ಲಾಭ)  ಆದರೆ  ಆ  ದಿಕ್ಕಿನಿಂದ  ಭಾಗ್ಯೋದಯವನ್ನು ಹೊಂದುತ್ತಾರೆ,  ಇದಕ್ಕೆ ವಿರುದ್ಧವಾದರೆ  ಆ  ದಿಕ್ಕಿನಿಂದ  ಹಾನಿ  ಉಂಟಾಗುತ್ತದೆ.

ಯುಗಗಳು :-- ಧನಾರ್ಜನೆಯ  ಮೇಲೆ  ಯುಗಗಳ  ಪ್ರಭಾವಗಳು...
ಕೃತಯುಗ :-- 1,  5,  9  ಮೇಷ,  ಸಿಂಹ,  ಧನಸ್ಸು
ದೈವಬಲದಿಂದ  ಧನಾರ್ಜನೆ
ತ್ರೇತಾಯುಗ :-- 2, 6,  10   ವೇಷಭ,  ಕನ್ಯಾ,  ಮಕರ
ಸಂಚಾರದಿಂದ  ಧನ  ಸಂಗ್ರಹ,
ದ್ವಾಪರಯುಗ :-- 3,  7,  11  ಮಿಥುನ,  ತುಲಾ,  ಕುಂಬ
ವ್ಯಾಪಾರ  ವ್ಯವಹಾರದಿಂದ  ಧನಾರ್ಜನೆ
ಕಲಿಯುಗ :-- 4, 8,  12   ಕಟಕ,  ವೃಶ್ಚಿಕ,  ಮೀನಾ
ಬಹುಕಷ್ಟದಿಂದ  ದುಡಿದೇ  ಸಂಪಾದಿ ಸಬೇಕು.
ಚಿಹ್ನೆಯ  ಉದಯ :-
ಶಿರೋದಯ  :--  3, 6,  7,  8,  11
ಮಿಥುನ,  ಕನ್ಯಾ,  ತುಲಾ,  ವೃಶ್ಚಿಕ, ಕುಂಭ,   ದಶಾಕಾಲದ  ಪ್ರಾರಂಭದಲ್ಲೂ ( 0°-10°)........
ಪೃಷ್ಟೋದಯ :--  1,  2,  4,  5,  9,  10,   ಮೇಷ,  ವೃಷಭ,  ಕಟಕ,  ಸಿಂಹ,  ಧನಸ್ಸು,  ಮಕರ,  ದಶೆಯ  ಅಂತ್ಯದಲ್ಲೂ (10°-20°)........
ಉಭಯೋದಯ  :--  12,  ಮೀನಾ(20°-30°)  ಎಲ್ಲಾ ಕಾಲದಲ್ಲಿಯೂ  ಫಲಕೊಡಲು  ಶಕ್ತವಾಗಿರುತ್ತದೆ.
(ವಿಶೇಷವಾಗಿ  ಪ್ರಶ್ನಾಲಗ್ನದಲ್ಲಿ  ರಾಶಿ  ಚಿಹ್ನೆಗಳ  ಉದಯವನ್ನು ಗಮನಿಸಬೇಕು)
       ಮನುಷ್ಯ  ರಾಶಿಗಳಾದ  ಕನ್ಯಾ,  ತುಲಾ,  ಕುಂಭ  ಹಾಗೂ ಧನಸ್ಸಿನ  ಮೊದಲಭಾಗ (0-15°) ಪೂರ್ವದಿಕ್ಕಿನಲ್ಲೂ.........
     ಮೇಷ,  ವೃಷಭ,  ಸಿಂಹ  ಧನಸ್ಸಿನ  ಎರಡನೇ  ಭಾಗ (15°-30°) ದಕ್ಷಿಣಾದಿಕ್ಕಿನಲ್ಲೂ.......
      ಕಟಕ,  ಮೀನ,  ಮಕರದ ಎರಡನೇ ಭಾಗ( ೧5°-೩0°) ಜಲರಾಶಿಯಾಗಿದ್ದು  ಪಶ್ಚಿಮ ದಿಕ್ಕಿನಲ್ಲೂ........
    ವೃಶ್ಚಿಕ  ರಾಶಿಯು  ಕೀಟರಾಶಿಯಾಗಿದ್ದು  ಉತ್ತರ  ದಿಕ್ಕಿನಲ್ಲೂ,  ಬಲಿಷ್ಠವಾಗಿರುತ್ತದೆ
     ವೃಶ್ಚಿಕ  ರಾಶಿಯು  ಸಾಯಂಕಾಲದಲ್ಲೂ,  ಚತುಷ್ಪಾದ  ರಾಶಿಗಳು  ರಾತ್ರಿಯಲ್ಲೂ,  ನರರಾಶಿಗಳು  ಹಗಲಿನಲ್ಲಿಯು  ಬಲಿಷ್ಠವಾಗಿರುತ್ತದೆ.
     ಮೇಷ,  ವೃಷಭ,  ಧನಸ್ಸು,  ಮಕರ,  ಕಟಕ  ಲಗ್ನ  ಮತ್ತು  ರಾಶಿಗಳಾದಾಗ  ರಾತ್ರಿಯ  ಕಾಲ ದಲ್ಲಿ  ಬಲಿಷ್ಠವಾಗಿರುತ್ತದೆ.
      ಸಿಂಹ,  ಕನ್ಯಾ,  ತುಲಾ  ವೃಶ್ಚಿಕ,  ಕುಂಭ,  ಮೀನಾ  ರಾಶಿಗಳು  ಲಗ್ನ  ಮತ್ತು  ರಾಶಿ ಗಳಾದಾಗ  ಹಗಲಿನಲ್ಲಿ  ಬಲಿಷ್ಠವಾಗಿರುತ್ತದೆ.
          --: ಸ್ತ್ರೀ,  ಪುರುಷ ರಾಶಿಗಳು:--
     ಪುರುಷ  ಜಾತಕದಲ್ಲಿ  ಸಮರಾಶಿ ಅಥವಾ  ಸ್ತ್ರೀ  ರಾಶಿಯಲ್ಲಿ  ಹೆಚ್ಚಿನ  ಗ್ರಹಗಳು  ಸ್ಥಿತರಾದರೆ,  ಜಾತಕರು  ಕೋಮಲತೆ  ಹಾಗೂ  ಸೌಮ್ಯ ಸ್ವಭಾವವನ್ನು  ಹೊಂದಿರುತ್ತಾರೆ.
     ಸ್ತ್ರೀ  ಜಾತಕದಲ್ಲಿ,  ಬೆಸರಾಶಿ ಅಥವಾ  ಪುರುಷ ರಾಶಿಯಲ್ಲಿ  ಹೆಚ್ಚಿನ  ಗ್ರಹಗಳು  ಸ್ಥಿತರಾದರೆ  ಧೈರ್ಯ,  ಸ್ಥೈರ್ಯ,  ಪ್ರತಿಯೊಂದು  ಕೆಲಸದಲ್ಲೂ  ಮುಂದಾಳತ್ವ,  ನಾಯಕತ್ವ,  ಕಠೋ ರತೆಯನ್ನು  ಹೊಂದಿರುತ್ತಾರೆ.
      ಯಾವುದೇ  ಜಾತಕದಲ್ಲಿ  ರವಿ,  ಚಂದ್ರ,  ಲಗ್ನಗಳು  ಮುಖ್ಯವಾಗಿ  ಸಮರಾಶಿಯಲ್ಲಿದ್ದರೆ,  ಸೌಮ್ಯತೆ ,  ಕೋಮಲತೆ,  ಅನುಸರಿಸಿಕೊಂಡು  ಹೋಗುವ ಗುಣವನ್ನು  ಹೊಂದಿರುತ್ತಾರೆ.   ಇದಕ್ಕೆ  ವಿರುದ್ಧವಾಗಿ  ಅಧಿಕ  ಗ್ರಹಗಳು  ಬೆಸ  ಅಥವಾ  ಪುರುಷರಾಶಿಯಲ್ಲಿ  ಸ್ಥಿತರಾದಾಗ,  ಪುರುಷತ್ವಕ್ಕೆ  ಒಪ್ಪುವ  ಗುಣಗಳೇ  ಪ್ರಧಾನವಾಗುತ್ತವೆ.
     ಯಾವುದೇ  ಜಾತಕದಲ್ಲಿ  ಪಂಚಮ  ಸ್ಥಾನ ಹಾಗೂ ಪಂಚಮಾದಿಪತಿಯು  ಸ್ಥಿತರಾಗಿರುವುದು  ಸಮ ರಾಶಿಯಾದರೆ  ಅವರ  ಸಂತಾನಕ್ಕೆ  ಸಂಭಂದಿಸಿದಂತೆ  ಗಂಡು  ಸಂತಾನಕ್ಕಿಂತ  ಹೆಣ್ಣು  ಸಂತಾನವೆ ಅಧಿಕವಾಗಿರುತ್ತದೆ.
     ಇದೇ  ರೀತಿ  ಸಹೋದರ,  ಸಹೋದರಿಯರನ್ನು  ಆಯಾ  ಭಾವಗಳನ್ನು,  ಭಾವಾಧಿಪತಿ  ಸ್ಥಿತ ರಾಶಿಗಳನ್ನು  ನೋಡಿ  ನಿರ್ಧರಿಸ ಬೇಕಾಗುತ್ತದೆ.
      --: ರಾಶಿಗಳ   ಸ್ವಭಾವ:--
   
ಚರ  ರಾಶಿಗಳು :-- 1, 4, 7, 10
ಮೇಷ,  ಕಟಕ,  ತುಲಾ,  ಮಕರ.
ಈ  ರಾಶಿಗಳು  ಲಗ್ನ ಅಥವಾ  ರಾಶಿಯಾದಾಗ,  ನಿರಂತರ  ಬದಲಾವಣೆ,  ರಾಜಸಿಕ .ಸ್ವಭಾವ,  ಒರಟು  ಸ್ವಭಾವ,  ಸ್ವಾಭಾವಿಕ  ಗುಣದಂತೆ  ನಡೆಯುವರು,  ಸದಾ  ಕ್ರಿಯಾಶೀಲತೆ  ಹೊಂದಿರುವುದು,  ಬಲಿಷ್ಠತೆ,  ಗುರಿಯನ್ನು  ಮುಟ್ಟುವವರೆಗೆ  ಶ್ರಮಿಸುವರು,  ಸ್ವತಂತ್ರ  ಮನೋಭಾವ,  ನಾಯಕತ್ವ,  ಜಿಗುಟುತನ,  ತಾವು  ತಾವು ಬರಲು, ಇತರರನ್ನು ತುಳಿಯಲು  ಸಿದ್ಧರಾಗಿರುತ್ತಾರೆ . ಬದಲಾವಣೆಯೇ ಜೀವನದ  ಮುಖ್ಯ ಗುರಿಯಾಗಿರುತ್ತದೆ,  ಜನರ  ಸಂಪರ್ಕವಿರುವ  ಕಾರ್ಯಕ್ಷೇತ್ರದಲ್ಲಿರುತ್ತಾರೆ,  ತಮ್ಮ  ಕೆಲಸದ ಮೂಲಕವೇ  ಗುರುತಿಸಲ್ಪಡುವವರು,  ಸಂಶೋಧನಾ  ಕ್ಷೇತ್ರದಲ್ಲೂ  ಆಸಕ್ತಿ,  ಕ್ರಿಯಾಶೀಲತೆಗೆ  ತಕ್ಕಂತೆ ಕೀರ್ತಿ  ಐಶ್ವರ್ಯ ಇವರದಾಗುತ್ತದೆ,  ಸದಾ   ಕ್ರಿಯಾಶೀಲರಾಗಿರುವುದರಿಂದ  ಹೆಚ್ಚು  ಶಕ್ತಿಯ  ಹಾಗೂ  ಚೈತನ್ಯದ. ಅವಶ್ಯಕತೆ ಇರುತ್ತದೆ,  ಆದ್ದರಿಂದ  ಶರೀರದಲ್ಲಿ ಚೈತನ್ಯ್  ನೀಡುವ  ಅಂಗಗಳಾದ  ಹೊಟ್ಟೆ ,  ಕಿಡ್ನಿ,  ಕೀಲುಗಳು  ವಿಶೇಷವಾಗಿ ತಲೆ  ಭಾದಿತವಾಗುತ್ತದೆ.
     ಗೃಹ ನಿರ್ಮಾಣ,  ಮುಂತಾದ   ಮಹೂರ್ತಗಳಿಗೆ,  ಚರ  ಲಗ್ನವನ್ನು ಆಯ್ಕೆ  ಮಾಡಿಕೊಂಡಾಗ  ಹಿಡಿದ  ಕಾರ್ಯವು  ಬಹಳ  ಬೇಗ  ಮುಕ್ತಾಯವಾಗುತ್ತದೆ.
"" ಸತ್ವಂ  ಕುಜೋಹೊ""  ಎಂಬಂತೆ  ಕ್ರಿಯಾಶೀಲತೆಗೆ  ಪ್ರಧಾನವಾದ  ಗ್ರಹ,  ಕುಜ   ಜಾತಕದಲ್ಲಿ  ಉತ್ತಮನಾಗಿರಬೇಕು. 
: ಸ್ಥಿರ  ರಾಶಿಗಳು :--   2,  5,  8,  11,
ವೃಷಭ,  ಸಿಂಹ,  ವೃಶ್ಚಿಕ, ಕುಂಬ,
    ನಿಂತಲ್ಲೇ  ನಿಂತು  ಬೆಳವಣಿಗೆಯನ್ನು  ಕಾಣುತ್ತ್ತದೆ.   ಈ  ರಾಶಿಯಲ್ಲಿ  ಹೆಚ್ಚಿನ  ಗ್ರಹಗಳಿದ್ದರೆ  ಸೋಂಬೇರಿಗಳಾಗುತ್ತಾರೆ.  ಯಾವ  ಕೆಲಸದಲ್ಲೂ  ಮುನ್ನುಗ್ಗುವ  ಸ್ವಭಾವ  ಇರುವುದಿಲ್ಲ.  ಯಾವುದೇ  ಹೊಸತನಕ್ಕೆ  ಸುಲಭವಾಗಿ  ಒಗ್ಗಿಕೊಳ್ಳುವುದಿಲ್ಲ,  ಸದಾ  ಶಾಂತತೆಯಿಂದಿದ್ದು  ಸಂಶೋಧನಾ  ಮನೋಭಾವದವರಾಗಿರುತ್ತಾರೆ.  ಪ್ರತಿಯೊಂದನ್ನು   ವಿಮರ್ಶೆಯ  ದೃಷ್ಟಿಯಿಂದಲೇ  ನೋಡುತ್ತಾರೆ.  ವಿಷಯ  ಸುಖಗಳಿಗೆ,  ಘನತೆ  ಗೌರವ ಗಳಿಗಾಗಿಯೇ  ಸದಾ  ಶ್ರಮಿಸುತ್ತಾರೆ.  ಜ್ಞಾಪಕ  ಶಕ್ತಿ  ಉತ್ತಮವಾಗಿರುತ್ತದೆ.  ಸೋಲೊಪ್ಪಿಕೊಳ್ಳದ  ಸ್ವಭಾವ,  ಇತರರ  ಚಿಂತನೆಗೆ  ಬೆಲೆ  ಕೊಡುವುದಿಲ್ಲ,  ಸಾಧಾರಣವಾಗಿ  ಕಾಯಿಲೆಗಳು  ಬರುವುದಿಲ್ಲ,  ಬಂದರೆ  ಬಹಳ ಕಾಲ  ನರಳಿಸುತ್ತದೆ.  ಇವರಿಗೆ  ತೊಂದರೆ  ಕೊಡುವ  ಅಂಗಗಳು .....  ಹೃದಯ, ಬೆನ್ನುಮೂಳೆ  ಹಾಗೂ  ಜನನಾಂಗಗಳು.   ಹಂತ  ಹಂತವಾಗಿ,  ಭೂಮಿ,  ಹಣ  ಮುಂತಾದವುಗಳನ್ನು ಸಂಗ್ರಹಿಸಿಕೊಂಡು  ಮೇಲೇರುತ್ತಾರೆ.  ಸಂಪಾದನೆಗಿಂತ  job  seccurity  ಯನ್ನು  ಬಯಸುತ್ತಾರೆ,  ಸೈರಣೆ,  ಸಂಯಮ  ಇವರ  ಗುಣ.
     ಸ್ಥಿರವಾದ  ಕೆಲಸ ಕಾರ್ಯಗಳಿಗೆ ( ವಿವಾಹ ) ಸ್ಥಿರ ಲಗ್ನ  ಮಹೂರ್ತವನ್ನು  ಆಯ್ಕೆ ಮಾಡಿಕೊಳ್ಳಬೇಕು.
ದ್ವಿಸ್ವಭಾವ/ ಉಭಯ  ರಾಶಿಗಳು:--
3,  6,  9,  12,  ಮಿಥುನ,  ಕನ್ಯಾ,  ಧನಸ್ಸು,  ಮೀನ
     ಈ  ರಾಶಿಗಳ  ವಿಶೇಷವೆಂದರೆ  ಬುಧ,  ಗುರುಗಳು  ದ್ವಿಸ್ವಭಾವ  ರಾಶ್ಯಾಧಿಪತಿಗಳು,  ಬುಧ  ಬುದ್ಧಿ  ಸೂಚಕ ಗ್ರಹವಾದರೆ.....  ಗುರು  ಪಾಂಡಿತ್ಯ  ಗ್ರಹ,   ಎರಡೂ  ಶುಭ  ಗ್ರಹಗಳೇ.
     ದ್ವಿಸ್ವಭಾವದ  ಜಾತಕರು,  ಬಹುಮುಖ  ಪ್ರತಿಭೆ  ಉಳ್ಳವರು,  ಒಂದಕ್ಕಿಂತ  ಹೆಚ್ಚಿನ  ಕಾರ್ಯಗಳಲ್ಲಿ  ತಮ್ಮನ್ನು  ತೊಡಗಿಸಿಕೊಂಡಿರುತ್ತಾರೆ.  ಕನಸುಗಾರರು,  ಕಲ್ಪನೆಯಲ್ಲಿ  ಸುಖ  ಕಾಣುವವರು,  ಸಮಯ  ಸಂದರ್ಭಕ್ಕೆ  ತಕ್ಕಂತೆ  ಹೊಂದಿಕೊಳ್ಳುವ  ಸ್ವಭಾವ,  ಮಾಹಿತಿ  ಸಂಗ್ರಹದಲ್ಲಿ  ಅಭಿರುಚಿ,  ಅನೇಕ  ವಿಚಾರದ  ಬಗೆಗೆ  ಆಳವಾದ  ಚಿಂತನೆ  ನಡೆಸುವವರು,  ಭಾವುಕ  ಜೀವಿಗಳು,  ಹಾಗಾಗಿ  ಇತರರ  ಟೀಕೆಗೆ  ಒಳಗಾಗುತ್ತಾರೆ,  ಉತ್ತಮವಾದ  ಅವಕಾಶಗಳು  ಹುಡುಕಿ  ಬಂದರೂ  ಅವುಗಳನ್ನು  ಉಪಯೋಗಿಸಿಕೊಳ್ಳುವುದರಲ್ಲಿ  ವಿಫಲರಾಗುತ್ತಾರೆ,  ಇತರರ  ಮೇಲ್ವಿಚಾರಣೆಯಲ್ಲಿ  ಕೆಲಸ  ಮಾಡುತ್ತಾರೆ.   ನಾಜೂಕಿನ  ಆರೋಗ್ಯ,  ನರಗಳ  ದೌರ್ಬಲ್ಯ,  ಶ್ವಾಸಕೋಶ  ಹಾಗೂ  ಹೊಟ್ಟೆಗೆ  ಸಂಬಂದಿಸಿದ  ತೊಂದರೆಗಳಿಂದ ಆಗಾಗ  ನರಳುತ್ತಾರೆ.  ಉದಾಸೀನ  ಮನೋಭಾವವಿದ್ದರಿಂದ  ಕಾಯಿಲೆಗಳು  ಹೆಚ್ಚು ಕಾಲ ಭಾಧಿಸುತ್ತದೆ.    ಭಾವನಾ  ಜೀವಿಗಳು,  ಪರೋಪಕಾರಿಗಳು,  ಒಗ್ಗಟ್ಟನ್ನು  ಇಷ್ಟಪಡುವವರು,  ಬೋಧನೆಯಲ್ಲಿ  ಆಸಕ್ತಿ,  ಬುದ್ಧಿ  ಹಾಗೂ  ಪಾಂಡಿತ್ಯವಿರುವ  ಕ್ಷೇತ್ರದಲ್ಲಿ,  ಬರವಣಿಗೆಯಲ್ಲಿ  ತೊಡಗಿಸಿಕೊಂಡು  ಲೇಖಕರು,  ಸಾಹಿತಿಗಳು,  ಪತ್ರಕರ್ತರು,  ದೂರದರ್ಶನ ದಂತಹ  ಮಾಧ್ಯಮದಲ್ಲಿ  ಕಾರ್ಯ ನಿರ್ವಹಿಸುವ ವರಾಗುತ್ತಾರೆ.
     ಈ  ರಾಶಿಯವರಿಗೆ   ಬುಧ,  ಗುರುಗಳು  ಉತ್ತಮವಾಗಿರಬೇಕು,  ಇಲ್ಲವಾದಲ್ಲಿ  ಸಾಧಿಸುವ  ಕೆಲಸದಲ್ಲಿ  ಸೋಲು,  ಹಿಂಜರಿಕೆ,  ಅಪಮಾನಗಳು  ಉಂಟಾಗಬಹುದು.
ಮುಂದುವರೆಯುವುದು.............
✍ ಡಾ||  ಶೈಲಜಾ  ರಮೇಶ್

Tuesday, 18 April 2017

ರಾಶಿಗಳ ಗುಣಧರ್ಮಗಳು

ಹರಿಃಓಂ
ಶ್ರೀ ಮಹಗಣಪತಯೇ  ನಮಃ

ರಾಶಿಗಳಗುಣಧರ್ಮಗಳು:---
                                            ಮುಂದುವರೆದಭಾಗ..............                                   
ರಾಶಿಗಳ   ಗುಣದಬಗೆಗೆ   ಸಂಕ್ಷಿಪ್ತವಾಗಿ   ತಿಳಿದುಕೊಂಡಮೇಲೆ   ಇವುಗಳಲ್ಲಿ      ಕಂಡುಬರುವತತ್ವಗಳುಜಾತಿದಿಕ್ಕುಸ್ವಭಾವ   ಚಿಹ್ನೆಯಪಾದಕಾಲಪುರುಷಣ   ಅಂಗಬಣ್ಣವಾಸಿಸುವ   ಜಾಗ   ಇತ್ಯಾದಿಗಳುಜ್ಯೋತಿಷ್ಯದಲ್ಲಿ  ಯಾವ  ರೀತಿಯಲ್ಲಿ   ಮಹತ್ವ   ಪಡೆಯುತ್ತದೆ   ಎಂಬ    ವಿಷಯವನ್ನು  ಮುಖ್ಯವಾಗಿ    ತಿಳಿದುಕೊಳ್ಳಬೇಕಾಗುತ್ತದೆಇವುಗಳನ್ನು ಗುರ್ತಿಸುವ    ಮಾರ್ಗವೆಂದರೆ    ಸಂಖ್ಯೆಗಿಂದ   ಗುರ್ತಿಸುವುದುಮೇಶದಿಂದ   ಮೀನದವರೆಗಿನ  ಹನ್ನೆರಡುರಾಶಿಗಳನ್ನುಅವುಗಳ  ವಿಷೇಶನಗಳನ್ನು  ಸಂಖ್ಯೆಯಿಂದ  ತಿಳಿದುಕೊಂಡಾಗ  ಕೆಲವು  ವಿಚಾರಗಳು  ತಕ್ಷಣ ಗೋಚರವಾಗುತ್ತದೆ.

12
ಮೀನಾ
1
ಮೇಷ
2
ವೃಷಭ
3
ಮಿಥುನ
11
ಕುಂಬ

4
ಕಟಕ
10
ಮಕರ
5
ಸಿಂಹ
9
ಧನಸ್ಸು
8
ವೃಶ್ಚಿಕ
7
ತುಲಾ
6
ಕನ್ಯಾ


ತತ್ವಗಳು:--
ಅಗ್ನಿತತ್ವ---  1,  5,  9ಮೇಷಸಿಂಹಧನಸ್ಸು
ಭೂತತ್ವ---- 2,  6,  10   ವೃಷಭಕನ್ಯಾಮಕರ
ವಾಯುತತ್ವ --- 3,  7,  11ಮಿಥುನತುಲಾಕುಂಭ
ಜಲತತ್ವ ----  4,  8,  12  ಕಟಕವೃಶ್ಚಿಕಮೀನಾ

12
ಜಲತತ್ವ
1
ಅಗ್ನಿತತ್ವ
2
ಭೂತತ್ವ
3
ವಾಯುತತ್ವ
11
ವಾಯುತತ್ವ




ತತ್ವಗಳು
4
ಜಲತತ್ವ
10
ಭೂತತ್ವ
5
ಅಗ್ನಿತತ್ವ
9
ಅಗ್ನಿತತ್ವ
8
ಜಲತತ್ವ
7
ವಾಯುತತ್ವ
6
ಭೂತತ್ವ


ವರ್ಣಗಳು :---
ಕ್ಷತ್ರಿಯ--  1, 5, 9 ಮೇಷಸಿಂಹಧನಸ್ಸು
ಶೂದ್ರ  ---  2, 6, 10 ವೃಷಭಕನ್ಯಾಮಕರ
ವೈಶ್ಯ ---  3,  7,  11 ಮಿಥುನತುಲಾಕುಂಭ
ಬ್ರಾಹ್ಮಣ --- 4,  8,  12  ಕಟಕವೃಶ್ಚಿಕಮೀನಾ

12
ಬ್ರಾಹ್ಮಣ
1
ಕ್ಷತ್ರಿಯ
2
ಶೂದ್ರ
3
ವೈಶ್ಯ
11
ವೈಶ್ಯ




ವರ್ಣಗಳು
4
ಬ್ರಾಹ್ಮಣ
10
ಶೂದ್ರ
5
ಕ್ಷತ್ರಿಯ
9
ಕ್ಷತ್ರಿಯ
8
ಬ್ರಾಹ್ಮಣ
7
ವೈಶ್ಯ
6
ಶೂದ್ರ


ಯುಗಗಳು :---
ಕೃತಯುಗ--  1,  5,  9   ಮೇಷಸಿಂಹಧನಸ್ಸು
ತ್ರೇತಾಯುಗ. --  2,  6,  10   ವೃಷಭಕನ್ಯಾಮಕರ
ದ್ವಾಪರ  --  3,  7,  11ಮಿಥುನತುಲಾಕುಂಬ
ಕಲಿಯುಗ– 4,  8,  12  ಕಟಕವೃಶ್ಚಿಕಮೀನಾ



12
ಕಲಿಯುಹ
1
ಕೃತಯುಗ
2
ತ್ರೇತಾಯುಗ
3
ದ್ವಾಪರಯುಗ
11
ದ್ವಾಪರಯುಗ




ಯುಗಗಳು
4
ಕಲಿಯುಗ
10
ತ್ರೇತಾಯುಗ
5
ಕೃತಯುಗ
9
ಕೃತಯುಗ
8
ಕಲಿಯುಗ
7
ದ್ವಾಪರಯುಗ
6
ತ್ರೇತಾಯುಗ


ದಿಕ್ಕುಗಳು  :--
ಪೂರ್ವದಿಕ್ಕು – 1,  5,  9   ಮೇಷಸಿಂಹ,   ಧನಸ್ಸು
ದಕ್ಷಿಣಾದಿಕ್ಕು --  2,  6,  10   ವೃಷಭಕನ್ಯಾಮಕರ
ಪಶ್ಚಿಮದಿಕ್ಕು--  3,  7,  11,  ಮಿಥುನತುಲಾಕುಂಬ
ಉತ್ತರದಿಕ್ಕು --  4,  8,  12  ಕಟಕವೃಶ್ಚಿಕ , ಮೀನಾ


12
ಉತ್ತರ
1
ಪೂರ್ವ
2
ದಕ್ಷಿಣ
3
ಪಶ್ಚಿಮ
11
ಪಶ್ಚಿಮ




ದಿಕ್ಕುಗಳು
4
ಉತ್ತರ
10
ದಕ್ಷಿಣ
5
ಪೂರ್ವ
9
ಪೂರ್ವ
8
ಉತ್ತರ
7
ಪಶ್ಚಿಮ
6
ದಕ್ಷಿಣ

ಸ್ವಭಾವಗಳು  :---
ಚರಸ್ವಭಾವರಾಶಿಗಳು :-  1 ,  4,  7,  10 
ಸ್ಥಿರಸ್ವಭಾವರಾಶಿಗಳು :- 2,   5,  8,   11
ದ್ವಿಸ್ವಭಾವರಾಶಿಗಳು  :- 3,   6,   9,   12



12
ದ್ವಿಸ್ವಭಾವ


1
ಚರ
2
ಸ್ಥಿರ
3
ದ್ವಿಸ್ವಭಾವ
11
ಸ್ಥಿರ




ಸ್ವಭಾವಗಳು
4
ಚರ
10
ಚರ
5
ಸ್ಥಿರ
9
ದ್ವಿಸ್ವಭಾವ
8
ಸ್ಥಿರ
7
ಚರ
6
ದ್ವಿಸ್ವಭಾವ

ರಾಶಿಗಳ ಪಾದಗಳು :--

ಚತುಷ್ಪಾದರಾಶಿ :-  1,  2 ,  5  ಮೇಷವೃಷಭಸಿಂಹ
ದ್ವೀಪಾದರಾಶಿ :-  3  , 6,  7 ,  9,  11  ಮಿಥುನಕನ್ಯಾ,ತುಲಾಧನಸ್ಸುಕುಂಬ
ಬಹುಪಾದರಾಶಿ :- 4,  8,  10,  12   ಕಟಕವೃಶ್ಚಿಕಮಕರಮೀನ


12
ಬಹುಪಾದ
1
ಚತುಷ್ಪಾದ
2
ಚತುಷ್ಪಾದ
3
ದ್ವಿಪಾದ
11
ದ್ವಿಪಾದ




ರಾಶಿಗಳಪಾದಗಳು
4
ಬಹುಪಾದ
10
ಬಹುಪಾದ
5
ಚತುಷ್ಪಾದ
9
ದ್ವಿಪಾದ
8
ಬಹುಪಾದ
7
ದ್ವಿಪಾದ
6
ದ್ವಿಪಾದ



ಚಿಹ್ನೆಯ  ಉದಯ :--
ಪೃಷ್ಟೋದಯ--- 1,  2,  4,  5,  9,  10
ಶಿರೋದಯ --- 3,  6,  7,  8,  11
ಉಭಯೋದಯ ---  12


12
ಉಭಯೋದಯ
1  
ಪೃಷ್ಟೋದಯ
2
ಪೃಷ್ಟೋದಯ
3
ಶಿರೋದಯ
11
ಶಿರೋದಯ



ರಾಶಿಚಿಹ್ನೆಯಉದಯ
4
ಪೃಷ್ಟೋದಯ
10
ಪೃಷ್ಟೋದಯ
5
ಪೃಷ್ಟೋದಯ
9
ಪೃಷ್ಟೋದಯ
8
ಶಿರೋದಯ
7
ಶಿರೋದಯ
6
ಶಿರೋದಯ



ಧಾತುರಾಶಿ :-  1 ,4  7, 10
ಮೂಲರಾಶಿ :-  2, 5,  8,  11
ಜೀವರಾಶಿ :-- 3,  6,  9,  12


12
ಜೀವ
1
ಧಾತು
2
ಮೂಲ
3
ಜೀವ
11
ಮೂಲ

4
ಧಾತು
10
ಧಾತು
5
ಮೂಲ
9
ಜೀವ
8
ಮೂಲ
7
ಧಾತು
6
ಜೀವ



ಸಮ
ಸ್ತ್ರೀ
ಲಯ
ಬೆಸ
ಪುರುಷ
ಸೃಷ್ಟಿ
ಸಮ
ಸ್ತ್ರೀ
ಸ್ಥಿತಿ
ಬೆಸ
ಪುರುಷ
ಲಯ
ಬೆಸ
ಪುರುಷ
ಸ್ಥಿತಿ

ಸಮ
ಸ್ತ್ರೀ
ಸೃಷ್ಠಿ

ಸಮ
ಸ್ತ್ರೀ
ಸೃಷ್ಠಿ
ಬೆಸ
ಪುರುಷ
ಸ್ಥಿತಿ
ಬೆಸ
ಪುರುಷ
ಲಯ
ಸಮ
ಸ್ತ್ರೀ
ಸ್ಥಿತಿ
ಬೆಸ
ಪುರುಷ
ಸೃಷ್ಠಿ
ಸಮ
ಸ್ರೀ
ಲಯ

ಮುಂದುವರೆಯುವುದು...............

ಡಾಶೈಲಜಾರಮೇಶ್.