ಹರಿಃ ಓಂ
ಶ್ರೀ ಮಹಾಗಣಪತಯೇ ನಮಃ
ಶ್ರೀ ಗುರುಭ್ಯೋನಮಃ
ಬಲಹೀನ ಗ್ರಹಗಳಿಂದಾಗುವ ತೊಂದರೆಗಳು ಹಾಗೂ ಪರಿಹಾರಗಳು. ಭಾಗ - 9
ಕೇತು ಗ್ರಹ :---
.
ವಿವೇಚನಾ ರಹಿತರು, ತಮ್ಮಲ್ಲೇ ನಂಬಿಕೆಯನ್ನು ಕಳೇದುಕೊಂಡವರು, ಆತ್ಮಘಾತುಕ ಮನೋಬಾವ, ಕ್ರೌರ್ಯದಿಂದ ಗಾಯಗೊಳ್ಳುವವರು, ಗುಂಪುಘರ್ಷಣೆಯಲ್ಲಿ ತೊಂದರೆಗೆ ಸಿಲುಕುತ್ತಾರೆ. ನಿರರ್ಥಕ ಕೆಲಸಗಳಲ್ಲಿ ಕಾಲಕಳೆಯುವವರು, ಅಲ್ಸರ್, ಅಜೀರ್ಣ, ಎಲ್ಲಾ ರೀತಿಯ ಹುಳುಗಳಿಂದ ಹೊಟ್ಟೆಯಲ್ಲಿ ತೊಂದರೆ ದೀರ್ಘಕಾಲಿಕ ಕಾಯಿಲೆಗಳಿಂದ ನರಳುವವರು ಮಗನಿಗೆ ಅಪಾಯ ವಿರುತ್ತದೆ, ಭ್ರಮೆಗಳಿಂದ ಭೀತರು, ಮೊಣಕಾಲುಗಳಿಗೆ ಆಗಾಗ ಅಪಾಯ ಉಂಟಾಗುತ್ತಿರುತ್ತದೆ, ೧೦೦ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೋಗಬೇಕಾಗುವುದು. ಮೂತ್ರದ ಅಥವ ಮಾನಸಿಕ ತೊಂದರೆಗಳಿಂದ ಅಥವ ತಿಳಿಯಲಾರದ ಕಾಯಿಲೆಗಳಿಂದ ನರಳುವರು. ಆಗಾಗ ಆತ್ಮಹತ್ಯ ಮನೋಬಾವನೆ ಸುಳಿಯುತ್ತಿರುತ್ತದೆ, ಪ್ಲೀಹದ ತೊಂದರೆ, ಜಲೋದರ, ಸಾಂಕ್ರಾಮಿಕ ಕಾಯಿಲೆ, ತೀವ್ರತರವಾದ ಜ್ವರ, ಗಾಯಗಳಿಂದ ಪಾದಗಳಲ್ಲಿ ಉರಿ, ಸಂದಿವಾತ, ಕುಷ್ಟ ಅಥವ ಚರ್ಮವ್ಯಾಧಿಗಳು, ಬೆನ್ನು ನೋವು, ಕಿವಿನೋವು, ಹರ್ನಿಯಾ ಗಡ್ಡೆ ಅಥವ ನಾಭಿಯ ಕೆಳಗೆಡೆಯ ಕಾಯಿಲೆಗಳಿಂದ ನರಳುವವರು, ಕೇತುವು ೨,೮,ನೇ ಸ್ಥಾನಗಳಲ್ಲಿ ಬಲಹೀನನಾಗುತ್ತಾನೆ. ಕೇತುವು ಅಶುಭನಾಗಿದ್ದರೆ 5, 6, 10 ಭಾವಗಳಿಂದ ಕೂಡ ಅಶುಭ ಫಲ ಪ್ರಾಪ್ತಿಯಾಗುತ್ತೆ.

ಛಾಯಾಗ್ರಹವಾದ ಕೇತುವಿನ ಪ್ರಭಾವ ಕುಜನಿಗೆ ಸಮಾನವಾಗಿರುತ್ತದೆ, ಕೇತು ಅಶುಭನಾದರೆ ನಿಘೂಡ್ಗ ವಿದ್ಯೆಗಳ. ಆತ್ಮಜ್ಞಾನ. ಅಥವಾ ವೈರಾಗ್ಯವುಂಟಾಗುತ್ತದೆ, ಅಲ್ಲದೆ ಇಂಥ
ಸ್ಥಿತಿಯಲ್ಲಿ ಮಂಡಿನೋವು, ಮೂತ್ರವಿಕಾರ, ಅಜೀರ್ಣ, ಮಧುಮೇಹ, ಐಶ್ವರ್ಯ ನಾಶ, ಸಾಲವೃದ್ಧಿ, ಪುತ್ರನಿಂದ ದುರ್ವ್ಯವಹಾರ, ಹಾಗೂ ಪುತ್ರನಿಗೆ ಸಂಕಟ, ಮುಂತಾದ ತೊಂದರೆಗಳಿಗೆ ಕಾರಣನಾಗುತ್ತಾನೆ.
ಸ್ಥಿತಿಯಲ್ಲಿ ಮಂಡಿನೋವು, ಮೂತ್ರವಿಕಾರ, ಅಜೀರ್ಣ, ಮಧುಮೇಹ, ಐಶ್ವರ್ಯ ನಾಶ, ಸಾಲವೃದ್ಧಿ, ಪುತ್ರನಿಂದ ದುರ್ವ್ಯವಹಾರ, ಹಾಗೂ ಪುತ್ರನಿಗೆ ಸಂಕಟ, ಮುಂತಾದ ತೊಂದರೆಗಳಿಗೆ ಕಾರಣನಾಗುತ್ತಾನೆ.
ದ್ವಾದಶ ಭಾವಸ್ಥ ಕೇತುವಿನ ಶುಭಾಶುಭ ಫಲಗಳು :---
ಪ್ರಥಮ ಭಾವ :---
ಪ್ರಥಮ ಭಾವಸ್ಥ ಕೇತುವು ಶುಭನಾಗಿದ್ದರೆ, ಜಾತಕನು ಧೀರ್ಘಆಯು, ಭಾಗ್ಯವಂತ, ಪ್ರತಿಷ್ಠಿತ ವ್ಯಕ್ತಿ, ನೌಕರಿ ಹಾಗೂ ವ್ಯಾಪಾರಗಳಲ್ಲಿ ಸಫಲ, ಗುಣವಂತ ಹಾಗೂ ಧೀರ್ಘಆಯುಷಿ ಪುತ್ರರು, ಉತ್ತಮ ಕೌಟುಂಬಿಕ ಜೀವನ, ಯಾತ್ರೆ ಗಳಲ್ಲಿ ಸಫಲ, ಹಾಗೂ ಸುಖಮಯ ದಾಂಪತ್ಯ.
ಪ್ರಥಮ ಭಾವಸ್ಥ ಕೇತುವು ಆಶುಭನಾಗಿದ್ದರೆ, ಜಾತಕನು , ರೋಗಿ, ನಿರ್ದಯಿ, ಹಣವನ್ನು ದುರುಪಯೋಗ ಮಾಡುವವ, ಅಲ್ಪಸಂತಾನ, ಹೀನಗುಣದವ, ಸಂಗಾತಿ ಅಲ್ಪಾಯುವಾಗಿರುತ್ತಾರೆ.
ದ್ವಿತೀಯ ಭಾವ :---
ದ್ವಿತೀಯ ಭಾವಸ್ಥ ಕೇತುವು ಶುಭನಾಗಿದ್ದರೆ, ಜಾತಕನು , ಬಹುಮುಖ ಪ್ರತಿಭೆಯುಳ್ಳವನು, ಹಣವಂತ, ಭಾಗ್ಯವಂತ, ವ್ಯಾಪಾರ ವ್ಯವಹಾರ ದಲ್ಲಿ ಲಾಭ, ಪುರಸ್ಕಾರ ಗಳನ್ನು ಪಡೆಯುವವ, ತಾಯಿಯಿಂದ ಧನಸಹಾಯ, ಸಂತೋಷ ಭರಿತ ದಾಂಪತ್ಯ, ಲೆಕ್ಕ - ಪತ್ರದ ಕ್ಷೇತ್ರದಲ್ಲಿ ಯಶಸ್ವೀ.
ದ್ವಿತೀಯ ಭಾವಸ್ಥ ಕೇತುವು ಆಶುಭನಾಗಿದ್ದರೆ, ಜಾತಕನು , ಹಣಕಾಸು ಮುಗ್ಗಟ್ಟಿನಿಂದ ಬಳಲುವವ, ವೃದ್ದಾಪ್ಯ ದಲ್ಲಿ ಕಷ್ಟ, ಅನಗತ್ಯ ಖರ್ಚು, ಮಾದಕ ವ್ಯಸನಿ, ಸದಾ ಚಿಂತೆ, ಸಂಘರ್ಷ ದ ಜೀವನ, ಸಂತಾನದಿಂದ ದುಃಖ.
ತೃತೀಯ ಭಾವ. :--
ತೃತೀಯಭಾವಸ್ಥ ಕೇತುವು ಶುಭನಾಗಿದ್ದರೆ, ಜಾತಕನು , ಪವಿತ್ರ ಭಾವನೆಯ ಪರೋಪಕಾರಿ, ದಯಾಳು ಧರ್ಮನಿಷ್ಠ, ಆಸ್ತಿಕ, ದೇವರಲ್ಲಿ ಅಚಲ ನಂಬಿಕೆ, ಭಾಗ್ಯವಂತ, ಉತ್ತಮ ಸಂತಾನ ತನ್ನ ಬಂಧು ಬಾಂಧವರಿಗೆ ಶುಭನಾಗುವವನು, ಕೃಷಿಯಿಂದ ವಿಶೇಷಲಾಭ, ಖಾಸಗಿ ಅಥವಾ ಸರ್ಕಾರದ ನೌಕರಿ ಯಲ್ಲಿ ಉಚ್ಚಪದವಿ ಗಳಿಸುವವ.
ತೃತೀಯಭಾವಸ್ಥ ಕೇತುವು ಆಶುಭನಾಗಿದ್ದರೆ, ಜಾತಕನು , ಆರ್ಥಿಕವಾಗಿ ದುರ್ಬಲ, ತಂದೆಗೆ ಅಪಮಾನಿಸುವವ, ತಂದೆಯ ಮರಣಕ್ಕೂ ಕಾರಣವಾಗುವವ, ಒಡಹುಟ್ಟಿದವರೊಡನೆ ದ್ವೇಷ, ಅಲೆದಾಟ, ಯಾತ್ರೆಗಳಲ್ಲಿ ಅಶುಭ.
ಚತುರ್ಥ ಭಾವ :---
ಚತುರ್ಥ ಭಾವಸ್ಥ ಕೇತುವು ಶುಭನಾಗಿದ್ದರೆ, ಜಾತಕನು , ಶ್ರೀಮಂತ, ಆಶಾವಾದಿ, ದಯಾಳು, ಸಾಹಸಿ, ಸ್ವಂತ ಮನೆ ವಾಹನಗಳನ್ನು ಹೊಂದಿರುತ್ತಾನೆ, ಪಿತ್ರಾರ್ಜಿತ ಸಂಪತ್ತುಳ್ಳ ವ, ಭೌತಿಕ ಸುಖ ಭೋಗಗಳನ್ನು ಹೊಂದಿ, ತಾಯಿಗೆ ಶುಭನಾದ ಮಗನಾಗುವವ.
ಚತುರ್ಥ ಭಾವಸ್ಥ ಕೇತುವು ಆಶುಭನಾಗಿದ್ದರೆ, ಜಾತಕನು , ಅನಾರೋಗಿ, ತಾಯಿಯೊಂದಿಗೆ ಕಲಹ, ತಾಯಿಗೆ ಅಲ್ಪಾಯು, ಧನಹಾನಿ, ದುರ್ಘಟನೆ ಯಲ್ಲಿ ಮರಣ.
ಪಂಚಮಭಾವ. :---
ಪಂಚಮ ಭಾವಸ್ಥ ಕೇತುವು ಶುಭನಾಗಿದ್ದರೆ, ಜಾತಕನು , ಧೀರ್ಘಆಯು, ಪರೋಪಕಾರಿ, ಜೀವನದಲ್ಲಿ ಸಮಸ್ತ ಸುಖ, ಬುದ್ಧಿವಂತ, ಮಧುರ ದಾಂಪತ್ಯ, ಹಿರಿಯರನ್ನು ಆದರಾಭಿಮಾನಗಳಿಂದ ನೋಡಿಕೊಳ್ಳುವವನು, ಉತ್ತಮ ಸಂತಾನ.
ಪಂಚಮ ಭಾವಸ್ಥ ಕೇತುವು ಆಶುಭನಾಗಿದ್ದರೆ, ಜಾತಕರು ರೋಗಿ, ಭಾಗ್ಯಹೀನ, ಚಾರಿತ್ರ್ಯ ಹೀನ, ಅಸ್ತಮಾ ಹಾಗೂ ರಕ್ತ ರೋಗಗಳಿಂದ ಭಾಧಿತ, ಪರಸ್ತ್ರೀಯರಲ್ಲಿ ಅನೈತಿಕ ಸಂಬಂಧ, ಅಸಫಲ ದಾಂಪತ್ಯ, ಹಣದ ಕೊರತೆ, ಮನೆಯಲ್ಲಿ ಆದರವಿಲ್ಲ.
ಷಷ್ಟ ಭಾವ :---
ಷಷ್ಟ ಭಾವಸ್ಥಿತ ಕೇತು ಶುಭನಾಗಿದ್ದರೆ, ಜಾತಕರು, ಧೀರ, ವೀರ , ಸಾಹಸಿ, ಉತ್ಸಾಹಿ, ಆಶಾವಾದಿ, ಧೀರ್ಘಆಯು, .ವೈಭವಪೂರ್ಣ ಜೀವನ, ಸ್ವಂತ ಮನೆ ಹಾಗೂ ವಾಹನಗಳುಳ್ಳವನು, ವಾದ - ವಿವಾದಗಳಲ್ಲಿ ಸದಾ ವಿಜಯಿಗಳು, ವಿದೇಶದಲ್ಲಿ ಅಧಿಕ ಸಫಲತೆ, ಸೋದರಮಾವನಿಗೆ ಒಳ್ಳೆಯದು.
ಷಷ್ಟ ಭಾವಸ್ಥಿತ ಕೇತು ಆಶುಭನಾಗಿದ್ದರೆ, ಜಾತಕರು, ಕ್ರೂರಿ, ಕುಲನಾಶಕ, ಅಲ್ಪಾಯು, ಅಲ್ಪಬುದ್ಧಿಯವ , ಹೇಡಿ, ಮೂರ್ಖ, ಹೊಟ್ಟೆ ಹಾಗೂ ಚರ್ಮ ರೋಗದಿಂದ ಪೀಡಿತ, ಮಾದಕ ವ್ಯಸನಿ, ಚಾರಿತ್ರ್ಯ ಹೀನ, ಕೆಟ್ಟ ಹೆಂಗಸರಿಗೆ ಹಣ ವ್ಯಯಿಸುವವ, ಅಲೆದಾಟ.
ಸಪ್ತಮಭಾವ :---
ಸಪ್ತಮ ಭಾವಸ್ಥಿತ ಕೇತು ಶುಭನಾಗಿದ್ದರೆ, ಜಾತಕರು, ಪರಾಕ್ರಮಿ, ಸಾಹಸಿ, ಕರ್ಮವೀರ, ಶ್ರೀಮಂತ ಜೀವನ, ವ್ಯಾಪಾರ ದಲ್ಲಿ ಸಫಲ, ವಿದೇಶಯಾತ್ರಾಯೋಗ, ತಂದೆಗೆ. ಶುಭ, ಮಧುರ ದಾಂಪತ್ಯ ಜೀವನ.
ಸಪ್ತಮ ಭಾವಸ್ಥಿತ ಕೇತು ಆಶುಭನಾಗಿದ್ದರೆ, ಜಾತಕರು, ಕ್ರೂರ ಪ್ರವೃತ್ತಿ ಯುಳ್ಳವರು, ಅವಿಶ್ವಾಸಿ, ಅತಿ ಕೋಪ, ಅಸಭ್ಯವರ್ತನೆಯುಳ್ಳವನು, ಹಣದ ಕೊರತೆ, ರೋಗಯುತ ಪತ್ನಿ, ದಾಂಪತ್ಯ ಸುಖವಿಲ್ಲ, ಪರಸ್ತ್ರೀಯರಲ್ಲಿ ಸಂಬಂಧ, ಎರಡನೇಯ ವಿವಾಹವಾಗುವ ಸಂಭವವೂ ಇದೆ.
ಅಷ್ಟಮ ಭಾವ :---
ಅಷ್ಟಮ ಭಾವಸ್ಥಿತ ಕೇತು ಶುಭನಾಗಿದ್ದರೆ,
ಜಾತಕರು ಗೂಢ ವಿದ್ಯಗಳನ್ನು ಬಲ್ಲವರು, ಜ್ಯೋತಿಷ್ಯ ಶಾಸ್ತ್ರದ ಲ್ಲಿ ಆಸಕ್ತಿ ಇರುವವರು, ಪ್ರಾಮಾಣಿಕರು, ಧೀರ್ಘಆಯು, ಶ್ರೀಮಂತ ಜೀವನ್, ಆಕಸ್ಮಿಕ ಧನ ಪಡೆಯುವವರು, ಜಮೀನುಗಳುಳ್ಳವರು, ಉದ್ಯೋಗ - ವ್ಯಾಪಾರ ಎರಡರಲ್ಲಿಯೂ ಲಾಭಾಂಶ ಪಡೆಯುವವರು, ಉಧೋಗದಲ್ಲಿರುವ ಹೆಂಡತಿ.

ಅಷ್ಟಮ ಭಾವಸ್ಥಿತ ಕೇತು ಆಶುಭನಾಗಿದ್ದರೆ, ತನ್ನ ಹಿರಿಯ ಸೋದರನ ಮೃತ್ಯು, ತಂದೆಗೆ ಅಶುಭ, ಪರಸ್ತ್ರೀಯರೊಡನೆ ಅನೈತಿಕ ಸಂಬಂಧ, ದಾಂಪತ್ಯ ಜೀವನ ಹಾಗೂ ಸಂತಾನ ಸುಖದಿಂದ ವಂಚಿತರು.
ನವಮಭಾವ :---
ನವಮ ಭಾವಸ್ಥಿತ ಕೇತು ಶುಭನಾಗಿದ್ದರೆ,
ಜಾತಕರು , ಮೃಧುಭಾಷಿ, ಸಮಾಜ ಸುಧಾರಕ, ಪಿತೃಭಕ್ತ, ಪ್ರಾಮಾಣಿಕ ಮನುಷ್ಯ, ಧೀರ್ಘಆಯು, ಪರೋಪಕಾರಿ, ಉತ್ತಮ ಆದರ್ಶ ವ್ಯಕ್ತಿ, ತಂದೆಯ ಆಸೆಗಳನ್ನು ಪೂರೈಸುವವ, ವಿದೇಶ ಪ್ರವಾಸ ಯೋಗ ಇರುವವ.
ಜಾತಕರು , ಮೃಧುಭಾಷಿ, ಸಮಾಜ ಸುಧಾರಕ, ಪಿತೃಭಕ್ತ, ಪ್ರಾಮಾಣಿಕ ಮನುಷ್ಯ, ಧೀರ್ಘಆಯು, ಪರೋಪಕಾರಿ, ಉತ್ತಮ ಆದರ್ಶ ವ್ಯಕ್ತಿ, ತಂದೆಯ ಆಸೆಗಳನ್ನು ಪೂರೈಸುವವ, ವಿದೇಶ ಪ್ರವಾಸ ಯೋಗ ಇರುವವ.
ನವಮ ಭಾವಸ್ಥಿತ ಕೇತು ಆಶುಭನಾಗಿದ್ದರೆ,
ಜಾತಕರು , ಮೂರ್ಖ ಅಜ್ಞಾನಿ, ಚಾರಿತ್ರ್ಯ ಹೀನ, ವ್ಯಸನಿ, ದರೋಡೆ, ಹತ್ಯೆ, ಬಲತ್ಕಾರದಂತಹ ಹೀನ ಕೃತ್ಯಗಳನ್ನು ಮಾಡುವವ, ಪರಸ್ತ್ರೀ ಸಂಗ, underworld ವ್ಯಕ್ತಿ ಗಳ ಸಹವಾಸ.
ಜಾತಕರು , ಮೂರ್ಖ ಅಜ್ಞಾನಿ, ಚಾರಿತ್ರ್ಯ ಹೀನ, ವ್ಯಸನಿ, ದರೋಡೆ, ಹತ್ಯೆ, ಬಲತ್ಕಾರದಂತಹ ಹೀನ ಕೃತ್ಯಗಳನ್ನು ಮಾಡುವವ, ಪರಸ್ತ್ರೀ ಸಂಗ, underworld ವ್ಯಕ್ತಿ ಗಳ ಸಹವಾಸ.
ದಶಮಭಾವ :---
ದಶಮ ಭಾವಸ್ಥಿತ ಕೇತು ಶುಭನಾಗಿದ್ದರೆ,
ಜಾತಕರು , ಸುಶಿಕ್ಷಿತ ವ್ಯಕ್ತಿ, ತೀಕ್ಷ್ಣ ಬುದ್ಧಿಯುಳ್ಳವರೂ, ಮಿತ್ರರಿಂದ ಸಹಕಾರ ಸ್ವಂತ ಮನೆ, ಲೌಕಿಕ ಸುಖಭೋಗಗಳು, ಸಾಹಸಿ, ಆಟೋಟಗಳಲ್ಲಿ ಕೀರ್ತಿ, ಸುಖೀ ದಾಂಪತ್ಯ, ಧನ - ಸಂಪತ್ತನ್ನು ಕೂಡಿಡಿವುದರಲ್ಲಿ ಆಸಕ್ತಿ.
ಜಾತಕರು , ಸುಶಿಕ್ಷಿತ ವ್ಯಕ್ತಿ, ತೀಕ್ಷ್ಣ ಬುದ್ಧಿಯುಳ್ಳವರೂ, ಮಿತ್ರರಿಂದ ಸಹಕಾರ ಸ್ವಂತ ಮನೆ, ಲೌಕಿಕ ಸುಖಭೋಗಗಳು, ಸಾಹಸಿ, ಆಟೋಟಗಳಲ್ಲಿ ಕೀರ್ತಿ, ಸುಖೀ ದಾಂಪತ್ಯ, ಧನ - ಸಂಪತ್ತನ್ನು ಕೂಡಿಡಿವುದರಲ್ಲಿ ಆಸಕ್ತಿ.
ದಶಮ ಭಾವಸ್ಥಿತ ಕೇತು ಆಶುಭನಾಗಿದ್ದರೆ,
ಜಾತಕರು , ಅಸಭ್ಯ ವ್ಯಕ್ತಿ, ಮಲಿನ ಸ್ಥಾನ ದಲ್ಲಿ ವಾಸ, ತಾಯಿಗೆ ಅಶುಭ, ವ್ಯಾಪಾರ ವ್ಯವಹಾರ ದಲ್ಲಿ ಹಾನಿ ಕೌಟುಂಬಿಕ ಹಾಗೂ ದಾಂಪತ್ಯ ಜೀವನದಲ್ಲಿ ಸುಖವಿಲ್ಲ, ಅಲ್ಪಸಂತಾನ, ಒಡಹುಟ್ಟಿದವರು ಹಾಗೂ ಪತ್ನಿಯಿಂದ ಅಪಮಾನಕ್ಕೊಳಗಾಗುವವರು.
ಏಕಾದಶ ಭಾವ :---
ಏಕಾದಶ ಭಾವಸ್ಥಿತ ಕೇತು ಶುಭನಾಗಿದ್ದರೆ,
ಜಾತಕರು , ಭಾಗ್ಯವಂತ, ಬುದ್ಧಿವಂತ, ಧನವಂತ, ವೈಭವಯುತ ಜೀವನ, ಐಷಾರಾಮಿ ಬಂಗಲೆ, ಬೆಲೆಬಾಳುವ ವಾಹನಗಳು, ಉತ್ತಮ ಗೃಹಸ್ಥ ಜೀವನ, ತನ್ನ ಕೆಲಸಕಾರ್ಯಗಳಿಂದಾಗಿ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗುವವ.
ಜಾತಕರು , ಭಾಗ್ಯವಂತ, ಬುದ್ಧಿವಂತ, ಧನವಂತ, ವೈಭವಯುತ ಜೀವನ, ಐಷಾರಾಮಿ ಬಂಗಲೆ, ಬೆಲೆಬಾಳುವ ವಾಹನಗಳು, ಉತ್ತಮ ಗೃಹಸ್ಥ ಜೀವನ, ತನ್ನ ಕೆಲಸಕಾರ್ಯಗಳಿಂದಾಗಿ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗುವವ.
ಏಕಾದಶ ಭಾವಸ್ಥಿತ ಕೇತು ಆಶುಭನಾಗಿದ್ದರೆ, ಜಾತಕರು, ತನ್ನ ಸ್ನೇಹಿತರು ಹಾಗೂ ಸಹೋದರರ ಕಾರಣವಾಗಿ ಕಷ್ಟಗಳನ್ನು ಅನುಭವಿಸುವವರು, ಸದಾ ಒಂದಿಲ್ಲೊಂದು ರೀತಿಯಲ್ಲಿ ಚಿಂತೆ ಯಿಂದ ಭಾದಿತ, ಅಲ್ಪಾಯು ತಾಯಿ, ಅಲ್ಪ ಸಂತಾನ ಅಥವಾ ಸಂತಾನ ಹೀನ.
ದ್ವಾದಶ ಭಾವ :--
ದ್ವಾದಶ ಭಾವಸ್ಥಿತ ಕೇತು ಶುಭನಾಗಿದ್ದರೆ,
ಜಾತಕರು ,ಅಪಾರ ಧನ. ಸಂಪತ್ತಿನ ಒಡೆಯ, ವೈಭವಯುಕ್ತ ಶ್ರೇಷ್ಠ ಜೀವನ, ಶಾಂತಿಯುತ ಗೃಹಸ್ಥ ಜೀವನ, ಸುಂದರ, ಸುಶೀಲ ಸುಸಂಸ್ಕೃತ ಪತ್ನಿ, ಉತ್ತಮ ಪುತ್ರರು, ಕುಟುಂಬದ ಬೆಂಬಲದೊಂದಿಗೆ, ಉನ್ನತ ಸ್ಥಿತಿ ಪಡೆಯುವವ, ವೃದ್ದಾವಸ್ಥೆಯಲ್ಲಿ ಪುತ್ರರಿಂದ ಸುಖ.
ಜಾತಕರು ,ಅಪಾರ ಧನ. ಸಂಪತ್ತಿನ ಒಡೆಯ, ವೈಭವಯುಕ್ತ ಶ್ರೇಷ್ಠ ಜೀವನ, ಶಾಂತಿಯುತ ಗೃಹಸ್ಥ ಜೀವನ, ಸುಂದರ, ಸುಶೀಲ ಸುಸಂಸ್ಕೃತ ಪತ್ನಿ, ಉತ್ತಮ ಪುತ್ರರು, ಕುಟುಂಬದ ಬೆಂಬಲದೊಂದಿಗೆ, ಉನ್ನತ ಸ್ಥಿತಿ ಪಡೆಯುವವ, ವೃದ್ದಾವಸ್ಥೆಯಲ್ಲಿ ಪುತ್ರರಿಂದ ಸುಖ.
ದ್ವಾದಶ ಭಾವಸ್ಥಿತ ಕೇತು ಆಶುಭನಾಗಿದ್ದರೆ, ಜಾತಕರು ಸುಳ್ಳುಗಾರ, ವಿಶ್ವಾಸ ಘಾತಕ, ದುಷ್ಟ, ಬಂಧುಗಳಿಗೆ ತೊಂದರೆಯುಂಟುಮಾಡುವವ, ಅನೈತಿಕ ಕಾರ್ಯದಲ್ಲಿ ಆಸಕ್ತಿ, ವಿದೇಶಯಾತ್ರಾ ಯೋಗವಿದ್ದರೂ ಯಾತ್ರೆಗಳಲ್ಲಿ ತೊಂದರೆ, ಸಾಮಾನ್ಯ ಮಟ್ಟದ ಸಾಂಸಾರಿಕ ಜೀವನ, ನೇತ್ರರೊಗಿ.
ಪರಿಹಾರೋಪಾಯಗಳು:-
1 ) ಗಣಪತಿಯನ್ನು ಆರಾಧಿಸಿರಿ
2 ) ಕರಿ ನಾಯಿ ಸಾಕಿಕೊಳ್ಳಿರಿ .
3 ) ಬಿಳಿ ಅಥವ ಕಪ್ಪು ಕಂಬಳಿಯನ್ನು ದೇವಾಲಯಕ್ಕೆ ಅಥವ ಸಾಧುವಿಗೆ ನೀಡಿ.
4 ) ಮಕ್ಕಳ ಒಳಿತಿಗಾಗಿ ಹಾಲು,ಅಕ್ಕಿ,ಕೆಂಪು ಬೇಳೆ,ಕಲ್ಲು ಸಕ್ಕರೆ,ಜೇನು ತುಪ್ಪ, ದಾನ ಮಾಡಿ.
5 ) ವರದಕ್ಷಿಣೆಯಾಗಿ ಬಂದ ಹಾಸಿಗೆಯ ಮೇಲೆ ಮಲಗಿರಿ .
6 ) ಕಿವಿಯನ್ನು ಚುಚ್ಚಿಸಿಕೊಂಡು ಬಂಗಾರದ ಉಂಗುರವನ್ನು ಹಾಕಿಕೊಳ್ಳಿ.
7 ) ಎರಡು ಒಂದೇ ಆಕಾರದ ಬೆಣಚಕಲ್ಲುಗಳನ್ನು ತಗೆದುಕೊಂಡು ಒಂದನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ (ರವಿಯು ೪ನೇ ಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿ.)
8 ) ಕಾಲಿನ ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ.
9 ) ಬಂಗಾರದ ಸರವನ್ನು ಕೊರಳಿಗೆ ಹಾಕಿಕೊಳ್ಳಿ
10 ) ಕೇಸರಿಯನ್ನು ಹಣೆಗೆ ಹಚ್ಚಿಕೊಳ್ಳಿ.
11 ) ಮನೆಯ ಗೇಟಿನ ಕಂಬಕ್ಕೆ ತಾಮ್ರದ ತಗಡನ್ನು ಹಾಕಿರಿ.
12 ) ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ನಿಮ್ಮ ಬಾವಮೈದುನ,ಸೋದರಿಯ ಮಗ/ಮಗಳಿಗೆ ನೀಡಿ.
13 ) ಮಕ್ಕಳ ಒಳಿತಿಗಾಗಿ ಕಡಲೆಕಾಳು ಮತ್ತು ಕೇಸರಿಯನ್ನು ದೇವಸ್ಥಾನಕ್ಕೆ ಗುರುವಾರ ದಂದು ದಾನ ಕೊಡಿ ೧೦೦ ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೊರಗೆ ಹೋಗಬೇಕಾಗಿ ಬಂದರೆ ಹರಿವ ನೀರಿನಲ್ಲಿ ತಾಮ್ರದ ನಾಣ್ಯಗಳನ್ನು ಹಾಕಿರಿ.
14 ) ಬೆಳ್ಳಿಯ ಕೊಡದಲ್ಲಿ ಜೇನು ತುಪ್ಪವನ್ನು ತುಂಬಿ ಮನೆಯ ಹೊರಗಡೆ ಹುದುಗಿಸಿ.
15 ) ಮಕ್ಕಳಿಲ್ಲದವರಿಂದ ಭೂಮಿಯನ್ನು ಕೊಂಡು ಅಲ್ಲಿ ಮನೆಯನ್ನು ಕಟ್ಟದಿರಿ.
16 ) ೮ನೇ ಸ್ಥಾನದಲ್ಲಿ ಕೇತುವು ಕಲುಶಿತನಾಗಿದ್ದರೆ ಶಿವನಿಗೆ ಕ್ಷೀರಾಭಿಷೇಕ ಮಾಡಿಸಿರಿ.ಅಥವ ನಿಂಬೇ ಹಣ್ಣನ್ನು ದಾರ್ಮಿಕ ಸ್ಥಳಗಳಲ್ಲಿ ದಾನ ಮಾಡಿ
17 ) ನಾಯಿಗೆ ೧೫ ದಿನಗಳ ಕಾಲ ಹಾಲನ್ನು ಹಾಕಿರಿ.
✍ ಡಾ|| B. N. ಶೈಲಜಾ ರಮೇಶ್
ಇಲ್ಲಿ ವಿವರಿಸಿರುವ 1ನೇ ಭಾವ, 2ನೇ ಭಾವವನ್ನು ಜನ್ಮ ಕುಂಡಲಿಯ ಮೇಷ ರಾಶಿಯಿಂದ ಎಣಿಸ ಬೇಕೆ? ಅಥವಾ ಲಗ್ನದಿಂದ ಎಣಿಸಬೇಕೆ? ಎಂಬುದುನ್ನು ದಯಮಾಡಿ ತಿಳಿಸಿ.
ReplyDeleteಲಗ್ನದಿಂದ ಎಣಿಸಬೇಕು
DeleteSister 1-5-1984 = time11.45pm makaralagna 11ne mane Andre vrushikadalli kethu edhare aga nanage nicha vagidhano or chennagidhano pls thilasi 🙏🙏🙏🙏
ReplyDelete