Saturday, 7 April 2018

ಬಲಹೀನ ಗ್ರಹಗಳು ಹಾಗೂ ಪರಿಹಾರಗಳು ಭಾಗ - 8.

                             ಹರಿಃ ಓಂ

                ಓಂ ಶ್ರೀ ಗಣೇಶಾಯನಮಃ

                ಓಂ  ಶ್ರೀ ಗುರುಭ್ಯೋನಮಃ

ಬಲಹೀನ ಗ್ರಹಗಳು ಹಾಗೂ  ಪರಿಹಾರಗಳು  ಭಾಗ  - 8

ರಾಹು ಗ್ರಹ :--

         Picture source: internet/social media
    ರಾಹು ಗ್ರಹವು ಜಾತಕದಲ್ಲಿ  ಬಲಹೀನ ನಾದಾಗ  ಈ ಕೆಳಕಂಡ ತೊಂದರೆಗಳು  ಕಾಣಿಸಿಕೊಳ್ಳುತ್ತವೆ.    
    
           ಅತಿಯಾದ ಸೂಕ್ಷ್ಮತೆ,  ತೊಳಲಾಟ,  ಆತಂಕ,  ಭಯ, ಭ್ರಮೆಗಳು,  ಮಾದಕವಸ್ತುಗಳಸೇವನೆ,  ಮೂರ್ಖತನ,  ನೀರಲ್ಲಿ  ಮುಳುಗುವ  ಅಥವ ಎತ್ತರದಿಂದ  ಬೀಳುವ  ಸಂಭವ,  ವಿವೇಚನಾರಹಿತ ನಿರ್ದಾರಗಳು,  ಎಲ್ಲರೊಡನೆಯೂ  ವಿರಸ,  ಸ್ನೇಹಿತರು ತೊರೆಯುವರು,  ವಿದವೆಯರೊಡನೆ, ಕೀಳು  ಮಟ್ಟದ  ಸ್ತ್ರೀಯರೊಡನೆ  ಅನೈತಿಕ ಸಂಬಂದಗಳು, ವಿದೇಶಿಯರು  ಮತ್ತು  ಕೀಳು ಜನರ ಸಂಪರ್ಕಗಳು, ಇದರಿಂದ  ತೊಂದರೆಗಳುಇರುತ್ತವೆ ಕೀಳು ಕೆಲಸಗಳಲ್ಲಿ ನಿರತರಾಗಿರುತ್ತಾರೆ,  ಸಾಂಕ್ರಾಮಿಕ  ರೋಗಗಳಿಗೆ  ತುತ್ತಾಗುವರು,ರೋಗ ನಿರೋಧಕ  ಶಕ್ತಿ  ಇಲ್ಲದಿರುವುದು. ಮಾನಸಿಕ ಅಸಮತೋಲನೆ, ವಿಷ,ಸರ್ಪಗಳ ಭೀತಿ, ಸದಾಕಾಲ ಕಲಹಗಳು, ಅಪಘಾತ, ವಾದ-ವಿವಾದಗಳಲ್ಲಿ ನಿರತರು, ಕಾಮಾಲೆ, ಕಾಲರ, ಪ್ಲೇಗ್ ಇತ್ಯಾದಿ. ಉಗುರುಗಳು ದುರ್ಬಲವಾಗುತ್ತವೆ, ಗುರುತಿಸಲಾಗದ  ವ್ಯಾಧಿಗಳು, ಕಳ್ಳತನದಿಂದ ಸಂಪತ್ತಿನ  ನಷ್ಟ, ೮ರಲ್ಲಿ  ಅಶುಭ  ರಾಹುವಿನಿಂದ ಗಮನೀಯ  ಏಳು  ಬೀಳುಗಳು ಉಂಟಾಗುತ್ತವೆ.
(*ಗಮನಕ್ಕೆ*:_ಪ್ರತಿನಿಧಿ ಗ್ರಹವು ಬಲಹೀನವಾಗಿದ್ದರೆ 6 ,೮.೧೨,ನೆಯ ಸ್ಥಾನಗಳಲ್ಲಿ ಕ್ರೂರವಾಗಿದ್ದರೆ ರಾಹುವು ಬಲಹೀನನೆಂದು ಪರಿಗಣಿಸಲಾಗಿದೆ.)

ದ್ವಾದಶ ಭಾವಸ್ಥಿತ  ರಾಹುವಿನ  ಶುಭಾಶುಭ ಫಲಗಳು :--

ಪ್ರಥಮ  ಭಾವ  :--
            
          ಪ್ರಥಮ ಭಾವಸ್ಥಿತ ರಾಹುವು  ಶುಭನಾಗಿದ್ದರೆ, ಜಾತಕರು ಧನವಂತರೂ,  ಸುಖ ಸಂವೃದ್ಧಿಯುಳ್ಳವರೂ,  ಮೃದುಸ್ವಭಾವದ ವಿನೋದಪ್ರಿಯರೂ, ಉತ್ತಮ  ಆರೋಗ್ಯದ, ಹಣೆ  ಅಥವಾ ತಲೆಯಲ್ಲಿ ಚಿಹ್ನೆಯಿರುವವರೂ,  ಮತ್ತು  ಸುಖ ಜೀವನವನ್ನು  ನಡೆಸುವವರಾಗಿರುತ್ತಾರೆ.

          ಪ್ರಥಮ ಭಾವಸ್ಥಿತ ರಾಹುವು  ಆಶುಭನಾಗಿದ್ದರೆ, ಜಾತಕರು ನಿರ್ಧನರು,  ಅನಾಚಾರ ಮಾಡುವವರೂ, ಉಗ್ರಸ್ವಭಾವದವರೂ,  ದುಷ್ಟ, ನಿರ್ದಯಿ , ಅಧರ್ಮಿ,  ಸಂಸಾರದ ತನ್ನ  ಹೊಣೆಯನ್ನು ನಿರ್ವಹಿಸಲಾರದವ,  ರೋಗಿ, ಕಲಹಪ್ರಿಯ,  ಪದೇ ಪದೇ ಕೋಪಗೊಳ್ಳುವವರೂ  ಆಗಿರ್ಥಾರೆ.

ದ್ವಿತೀಯ ಭಾವ  :--

         ದ್ವಿತೀಯ ಭಾವಸ್ಥಿತ ರಾಹುವು  ಶುಭನಾಗಿದ್ದರೆ, ಜಾತಕರು ಭಾಗ್ಯಶಾಲಿ,  ರಾಜಯೋಗವಿರುವವ,  ರಾಜ ಸಮಾನ ಜೀವನ,  ಸತ್ಕರ್ಮ ಮಾಡುವವ  , ಸಚ್ಚಾರಿತ್ರ್ಯ ಉಳ್ಳವ,  ಕರ್ತವ್ಯ ನಿಷ್ಟ,  ಧನವಂತ,  ದಯಾಳು,  ಆಕರ್ಷಕ ವ್ಯಕ್ತಿತ್ವ,  ಶ್ರೀಮಂತ  ಸುಖೀ  ಸಂಸಾರ.

         ದ್ವಿತೀಯಭಾವಸ್ಥಿತ ರಾಹುವು  ಆಶುಭನಾಗಿದ್ದರೆ,  ಜಾತಕನು  ದೈಹಿಕ ಹಾಗೂ  ಮಾನಸಿಕ ರೋಗಿ, ಕಷ್ಟಮಯ  ಜೀವನ, ಜಗಳಗಂಟಿ, ನಾಸ್ತಿಕ,  ಕೃಶಕಾಯ, ಮಾದಕ ವಸ್ತುಗಳ  ವ್ಯಸನಿ,  ಚಾರಿತ್ರ್ಯ ಹೀನ, ಅನೈತಿಕ ಸಂಬಂಧ ವಿರುವವ,  ಎರಡು ವಿವಾಹಯೋಗ, ದುಃಖಮಯ ದಾಂಪತ್ಯ.

ತೃತೀಯ ಭಾವ  :--

          ತೃತೀಯ ಭಾವಸ್ಥಿತ ರಾಹುವು  ಶುಭನಾಗಿದ್ದರೆ,  ಜಾತಕನು ಭೌತಿಕ ಸುಖ ಸೌಲಭ್ಯದಿಂದ  ಜೀವಿಸುವವ,  ಸೌಭಾಗ್ಯಶಾಲಿ,  ಧನವಂತ,  ಆರೋಗ್ಯವಂತ,  ಸಹೋದರರಿಗೆ ಇವರಿಂದ  ಲಾಭ,  ಸುಖೀದಾಂಪತ್ಯ ಹಾಗೂ  ಉತ್ತಮ  ಸಂತಾನ.

          ತೃತೀಯ ಭಾವಸ್ಥಿತ ರಾಹುವು  ಅಶುಭನಾದರೆ, ಜಾತಕರು  ಚಂಚಲ ಬುದ್ಧಿಯವರು,  ಅಲ್ಪ ಶಿಕ್ಷಿತರು,  ಎಲ್ಲಾ ಕೆಲಸಗಳಲ್ಲೂ  ಕಾರ್ಯಹಾನಿ,  ಸಮಾಜ ಹಾಗೂ  ಸಂಬಂಧಗಳಿಂದ  ಅಪಮಾನಿತನಾಗುವವ.

ಚತುರ್ಥ ಭಾವ  :--

          ಚತುರ್ಥಭಾವಸ್ಥಿತ ರಾಹುವು  ಶುಭನಾಗಿದ್ದರೆ,  ಜಾತಕರು ಧನ ಧಾನ್ಯಗಳಿಂದ   ಪರಿಪೂರ್ಣ ರು,  ಸರ್ವಗುಣ ಸಂಪನ್ನರೂ, ಪರೋಪಕಾರಿ, ಪ್ರಾಮಾಣಿಕ ವ್ಯಕ್ತಿ,  ಉತ್ತಮ  ಕೌಟುಂಬಿಕ ಜೀವನ,  ಮಾತೃಭಕ್ತ,  ಸುಸಂಸ್ಕೃತ, ಸುಶಿಕ್ಷಿತ ಜೀವನ ಸಂಗಾತಿ.

          ಚತುರ್ಥ ಭಾವಸ್ಥಿತ ರಾಹುವು  ಆಶುಭನಾಗಿದ್ದರೆ,  ಜಾತಕರು  ವಾಚಾಳಿ,  ಆಶಿಕ್ಷಿತರು,  ತಾಯಿಗೆ ಕಷ್ಟ, ಭಾಗ್ಯಹೀನ,  ಮನೆಮಂದಿಗೆಲ್ಲಾ  ಅಶುಭನಾಗುವವ,  ಅನೈತಿಕ ಸಂಬಂಧ,  ವಿಶ್ವಾಸಕ್ಕೆ ಯೋಗನಲ್ಲದವರು ಹಾಗೂ ಎರಡು ವಿವಾಹ ಯೋಗವುಳ್ಳವರು.

ಪಂಚಮಭಾವ :--

         ಪಂಚಮಭಾವ ಸ್ಥಿತ ರಾಹುವು ಶುಭ ನಾಗಿದ್ದರೆ, ಜಾತಕರು,  ಪರೋಪಕಾರಿ,  ಉತ್ತಮ  ಚಾರಿತ್ರ್ಯ ದವರು, ಧನವಂತ ,  ತನ್ನ ಕಾರ್ಯಕ್ಷೇತ್ರದ ಲ್ಲಿ ಉತ್ತಮ ರೀತಿಯಲ್ಲಿ  ಅಭಿವೃದ್ಧಿ ಹೊಂದುವವ,  ಉಚ್ಚ ಅಧಿಕಾರಿಗಳ ಸಹಾಯ ಪಡೆಯುವವರು,  ಸಂತಾನ ಸುಖವಿರುವವರು ಆಗಿರುತ್ತಾರೆ.

           ಪಂಚಮಭಾವ ಸ್ಥಿತ ರಾಹುವು  ಅಶುಭನಾದರೆ ,  ಜಾತಕರು ಜೀವನದಲ್ಲಿ  ದುಃಖ, ಕೋರ್ಟ್ ಕೇಸ್ ಗಳಲ್ಲಿ  ಪರಾಜಯ, ಕೆಲವೊಮ್ಮೆ ಶಿಕ್ಷೆ ಗೂ  ಒಳಪಡಬಹುದು,  ಸಂತಾನ ಪ್ರಾಪ್ತಿಯಲ್ಲಿ  ವಿಳಂಬ,  ಅದಕ್ಕಾಗಿ ವೈದ್ಯಕೀಯ ಚಿಕಿತ್ಸೆಗೆ ಧನವ್ಯಯ,  ಸಂತಾನದ ಮರಣ ಭಯ, ಸಂತಾನಕ್ಕಾಗಿ  ದುಃಖ.

ಷಷ್ಟ ಭಾವ  :--

          ಷಷ್ಟ ಭಾವ ಸ್ಥಿತ ರಾಹುವು  ಶುಭನಾದರೆ ಜಾತಕರು,   ನಿರೋಗಿ,  ಧೀರ್ಘಆಯು, ಸೌಭಾಗ್ಯ ಶಾಲಿ, ಪರೋಪಕಾರಿ,  ಪ್ರಾಮಾಣಿಕ,  ಧನವಂತ,  ಧನ ಕನಕ ಮನೆ ವಾಹನಯುಕ್ತರು,  ಜೀವನದಲ್ಲಿ  ಸುಖಿ,  ಈ  ಭಾವದಲ್ಲಿ  ರಾಹು - ಚಂದ್ರ  ಯೋಗವಿದ್ದರೆ,  ಸ್ತ್ರೀಯ ಸಹಾಯದಿಂದ  ಹಣ ಸಂಪಾದನೆ ಮಾಡುವವ, ವ್ಯಾಪಾರ  ಅಥವಾ  ನೌಕರಿಯಲ್ಲಿರುವ  ಸತಿ.

          ಷಷ್ಟ ಭಾವ ಸ್ಥಿತ ರಾಹುವು ಅಶುಭನಾದರೆ,
ಜಾತಕರು,  ರೋಗಗ್ರಸ್ತ, ದುಷ್ಕರ್ಮಿ,  ದುಷ್ಟ,  ಕೀಳು ಮನಸ್ಸಿನವ,  ಎಲ್ಲರಿಂದಲೂ  ಅಪಮಾನಕ್ಕೊಳಗಾಗುವವ, ಕಾನೂನು ಬಾಹಿರವಾಗಿ  ಧನ ಸಂಪಾದನೆ, ಬಂಧನ ಹಾಗೂ  ಕಾರಾಗೃಹವಾಸಕ್ಕೆ  ಒಳಪಡಬಹುದು,  ದಿನನಿತ್ಯದ ಜೀವನಕ್ಕಾಗಿ  ಸಂಘರ್ಷ.

ಸಪ್ತಮಭಾವ  :--

          ಸಪ್ತಮಭಾವ ಸ್ಥಿತ ರಾಹುವು  ಶುಭಾನಾದರೆ , ಜಾತಕರು,  ವಿರೋಧಿ ಗಳ ಪರಾಜಯ, ನೌಕರಿಯಲ್ಲಿ  ಸಫಲ ರಾಗುವವರು, ಸರ್ಕಾರೀ ನೌಕರಿಯೂ  ಲಭ್ಯವಾಗಬಹುದು,  ಸುಶಿಕ್ಷಿತ,  ಶ್ರೀಮಂತ, ಸುಖ ಸಂಸಾರ, ಹಾಗೂ  ಉತ್ತಮ  ಸಂತಾನ.

          ಸಪ್ತಮಭಾವ ದಲ್ಲಿರುವ  ರಾಹುವು  ಅಶುಭನಾದರೆ,  ಜಾತಕರು  ರೋಗಪೀಡಿತ ರು, ಮನೆಯಲ್ಲಿ  ಸದಾ  ಕಲಹ, ಎರಡು ವಿವಾಹದ  ಯೋಗ,  ಪಿತ್ರಾರ್ಜಿತ ಆಸ್ತಿ ನಷ್ಟ.

ಅಷ್ಟಮಭಾವ :--

          ಅಷ್ಟಮಭಾವ ಸ್ಥಿತ  ರಾಹುವು  ಶುಭನಾದರೆ,  ಜಾತಕರು,  ಪತ್ನಿಯಿಂದ ಧನಲಾಭ  ಹೊಂದುವವರೂ,  ಮಧ್ಯವಯಸ್ಸಿನ ನಂತರ  ಶ್ರೀಮಂತರು, ನೌಕರಿ ಅಥವಾ  ವ್ಯಾಪಾರದಿಂದ  ಸಂಪಾದನೆ ಮಾಡುವ  ಪತ್ನಿ,  ಪತಿ - ಪತ್ನಿಯರಲ್ಲಿ  ಪರಸ್ಪರ ಸಹಕಾರವಿರುವವರು, ಉತ್ತಮ  ಸಂತಾನ.

          ಅಷ್ಟಮಭಾವ ಸ್ಥಿತ  ರಾಹುವು  ಅಶುಭನಾದರೆ, ಜಾತಕರು, ದುಃಖಿ,  ಕಲಹಪ್ರಿಯ, ಕೋಪಿಷ್ಠರು,  ಕೋಪದ ಕಾರಣದಿಂದಲೇ ದುಃಖ ಅನುಭವಿಸುವವರು , ಎಲ್ಲರಿಂದ , ಎಲ್ಲೆಡೆಯಲ್ಲಿಯೂ  ಅಪಮಾನಕ್ಕೊಳಗಾಗುವವರು,  ಅಂಗಹಾನಿ,  ನ್ಯಾಯಾಲಯ ದಲ್ಲಿ  ಸೋಲು, ದುಃಖಮಯ  ದಾಂಪತ್ಯ.

ನವಮಭಾವ :--

          ನವಮಭಾವಸ್ಥಿತ ರಾಹುವು  ಶುಭನಾದರೆ,  ಜಾತಕರು,  ವಿದೇಶ ಯಾತ್ರಾ ಯೋಗವಿರುವವರು, ಹಾಗೂ  ಸಫಲರಾಗುವವರು,  ಉಚ್ಚಶಿಕ್ಷಣ, ಮಹಾ ಶ್ರೀ ಮಂತರು,  ಐಷಾರಾಮಿ ಜೀವನ ಹಾಗೂ  ಸುಖಕರ  ದಾಂಪತ್ಯ, ಉತ್ತಮ ಸಂತಾನ. ಮನೋವಿಜ್ಞಾನಿ.

         ನವಮಭಾವ ಸ್ಥಿತ ರಾಹುವು ಅಶುಭನಾದರೆ, ಜಾತಕರು,  ತಂದೆಯೊಡನೆ ವೈರಭಾವವಿರುವವರು,  ಸ್ವಾರ್ಥಿ,  ಜಗಳಗಂಟಿ,  ದುಷ್ಟ ಸ್ವಭಾವದವರೂ,  ತನ್ನ  ಲಾಭಕ್ಕಾಗಿ ಬೇರೆಯವರಿಗೆ  ತೊಂದರೆಯನ್ನುಂಟುಮಾಡುವವರು,
ಕುಟುಂಬದವರೊಡನೆ ವಿವಾದ,  ಜಗಳ,  ಪರಸ್ತ್ರೀಯರಲ್ಲಿ ಅನೈತಿಕ ಸಂಬಂಧ.

ದಶಮಭಾವ ;--

          ದಶಮಭಾವದ  ರಾಹು  ಶುಭನಾಗಿದ್ದರೆ,  ಜಾತಕರು, ಉಚ್ಚಶಿಕ್ಷಿತರು,  ಶ್ರೇಷ್ಠ ಮಟ್ಟದ ಲೇಖಕ,  ಕವಿ, ಸಫಲ ವ್ಯಾಪಾರಿ,  ಶ್ರೀಮಂತ ಕುಟುಂಬದಲ್ಲಿ  ಜನನ,  ಪರೋಪಕಾರಿ,  ಎಲ್ಲಾರೀತಿಯ ಸುಖ ಸೌಲಭ್ಯಗಳನ್ನು ಹೊಂದುವವ,  ಪ್ರಾಮಾಣಿಕ.

          ದಶಮಭಾವದ ರಾಹು ಅಶುಭನಾದರೆ,  ಜಾತಕರು, ಚಾರಿತ್ರ್ಯ ಹೀನ, ದುರ್ಬಲ, ಜೀವನದಲ್ಲಿ ಅಪಾರ ಕಷ್ಟ ಗಳನ್ನು  ಅನುಭವಿಸುವವರು,  ಅನೇಕ ಸ್ತ್ರೀ ಸಂಗ,  ವೇಶ್ಯಾಸಂಗ,  ಅವರಿಗಾಗಿ ಖರ್ಚು ಮಾಡುವವ,  ಅಪಮಾನಿತ,  ಕುಲಕಂಟಕನಾಗುತ್ತಾನೆ, ಜೈಲುವಾಸವೂ ಉಂಟಾಗಬಹುದು.

ಏಕಾದಶಭಾವ  :--

          ಏಕಾದಶ ಭಾವಸ್ಥಿತ ರಾಹು  ಶುಭನಾಗಿದ್ದರೆ,  ಜಾತಕರು,  ಎಲ್ಲಾ ಸುಖ - ಭೋಗಗಳನ್ನು ಹೊಂದಿರುವವ,  ಯೋಧ, ಯುದ್ಧಕಲೆಯಲ್ಲಿ ಪ್ರವೀಣ, ಉಚ್ಚ ಶಿಕ್ಷಣ, ಜ್ಯೋತಿಷ್ಯ ಶಾಸ್ತ್ರದ ಲ್ಲಿ ಪಂಡಿತ,  ವಿದ್ವಾಂಸ, ಪರಿಶ್ರಮದಿಂದ ಸ್ವಯಂ ಭಾಗ್ಯವನ್ನು ನಿರ್ಮಿಸಿಕೊಳ್ಳುವವ, ವಿರೋಧಿಗಳ ಪರಾಜಯ.

          ಏಕಾದಶ ಭಾವಸ್ಥಿತ  ರಾಹುವು  ಅಶುಭನಾದರೆ,  ಜಾತಕನು ಕುಟಿಲ ಬುದ್ಧಿಯವ,  ವಂಚಕ,  ರೋಗಿ, ಭಾಗ್ಯಹೀನ, ಮಂದ ಶ್ರವಣ ಶಕ್ತಿ,  ತಂದೆಗೆ ಅಲ್ಪಾಯಸ್ಸು, ಅಥವಾ  ತಂದೆಯಿಂದ  ದೂರ,  ಮೊಸಗಾರ, ಅಲ್ಪಸಂತಾನ,  ಬೆನ್ನುಮೂಳೆ  ಅಥವಾ  ಕಾಲುಗಳಲ್ಲಿ ವಿಕಾರ.

ದ್ವಾದಶ ಭಾವ :--

          ದ್ವಾದಶ ಭಾವಸ್ಥಿತ ರಾಹುವು   ಶುಭನಾಗಿದ್ದರೆ,  ಜಾತಕರು  ದಯಾಳು, ಉದಾರಿ, ಶ್ರೀಮಂತ,  ಏಕಾಂತಪ್ರಿಯರು, ಮೃದುಮನಸ್ಸಿನ  ಭಾವುಕರು,  ಪರೋಪಕಾರಿ, ತನ್ನ  ಒಡಹುಟ್ಟಿದವರಿಗಾಗಿ ಪಾಲಕರಂತೆ ಕಾರ್ಯ ನಿರ್ವಹಿಸುವ ವರು,  ವಿದೇಶಯಾತ್ರಾ ಯೋಗವಿರುವವರು ಹಾಗೂ ವ್ಯಾಪಾರ ದಲ್ಲಿ  ಸಫಲ.

           ದ್ವಾದಶ ಭಾವಸ್ಥಿತ  ರಾಹುವು  ಅಶುಭನಾದರೆ,  ಭಾಗ್ಯಹೀನ,  ಮಿಥ್ಯಾಪವಾದಕ್ಕೆ ಒಳಗಾಗುವವರು, ವ್ಯಾಪಾರದಲ್ಲಿ  ಲಾಭ ಆದರೆ  ಚೋರ ಡಕಾಯಿತರಿಂದ ನಷ್ಟ, ನೇತ್ರ ರೋಗ, ಇಂಥ  ಜಾತಕರು ತನ್ನ  ಮಿತ್ರ - ಪರಿಚಯಸ್ಥರ  ವಿಷಯದಲ್ಲಿ  ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಪರಿಹಾರೋಪಾಯಗಳು:-

೧ ).  ದುರ್ಗೆ ಮತ್ತು ನಾಗಪೂಜೆಯನ್ನು ನೀಲಿ ಪುಷ್ಪಗಳಿಂದ ಮಾಡುವುದು.

2 ). ಒಟ್ಟು ಕುಟುಂಬದೊಂದಿಗೆ ಜೀವಿಸುವುದು.

3 ). ಆನೆಯು ತುಳಿದ ಮಣ್ಣನ್ನು ಒಂದು ಬಾವಿಯಲ್ಲಿ ಹಾಕುವುದು.

4 ). ದೇವಾಲಯ ಅಥವ ದಾರ್ಮಿಕ ಸ್ಥಳದಲ್ಲಿ ಪಾಪ ಕೆಲಸಗಳನ್ನು ಮಾಡದಿರುವುದು.

5 ). ಬೆಳ್ಳಿಯಲ್ಲಿ ಮಾಡಿದ ಒಂದು ಆನೆಯನ್ನು ಅಥವ ಒಂದು ಸಣ್ಣ ಕೆಂಪು ಬಣ್ಣದ ಲೋಹದ ಗುಂಡನ್ನು ಮನೆಯಲ್ಲಿ ಇಡಿರಿ.

6 ). ಅಡುಗೆ ಮನೆಯಲ್ಲಿ ಕುಳಿತು ಊಟಮಾಡಿ.

7 ). ನಿಮ್ಮ ಸಂಪಾದನೆಯ ಸ್ವಲ್ಪಬಾಗವನ್ನು ನಾದಿನಿ,ಮಗಳು,ಅಥವ ಸೋದರಿಗಾಗಿ ಖರ್ಚುಮಾಡಿ.

8 ). ಹರಿಯುವ ನೀರಲ್ಲಿ ಹಾಲಿನಲ್ಲಿ ತೊಳೆದ ಬಾರ್ಲಿಅಥವ ನಿಮ್ಮ ತೂಕದಷ್ಟು ಇದ್ದಿಲು ಅಥವ ೮ ನೀಲಿ ಹೂವುಗಳನ್ನು ಹಾಕುವುದು.

9 ). ಮಾನಸಿಕ ಶಾಂತಿಗೆ ಬೆಳ್ಳಿಯ ಪಾತ್ರೆಯಲ್ಲಿ ಗಂಗಾಜಲವನ್ನು ಹಾಕಿ ಅದರಲ್ಲಿ ಒಂದು ಚೌಕಾಕಾರದ ಬೆಳ್ಳಿಯ ತಗಡನ್ನು ಹಾಕಿ ದೇವರ ಬಳೀ ಇಡಿ ಅಥವ ಬೆಳ್ಳಿಯ ಸರವನ್ನು ಕೊರಳಿಗೆ ಹಾಕಿಕೊಳ್ಳಿ.

10 ). ಸಾಸಿವೆ,ಹೊಗೆಸೊಪ್ಪು,ಕಪ್ಪುಬಂಬಳಿ,ಸೀಸ ಅಥವ ಕಸ್ತೂರಿಯನ್ನು ಅಂತ್ಯಜರಿಗೆ ದಾನ ಮಾಡಿ,

11 ).  ಮೇಲ್ಕಂಡ  ವಸ್ತುಗಳನ್ನು ಮುಸ್ಲಿಂಬಾಂದವರಿಗೂ   ಮಸೀದಿಯಲ್ಲಿ ಕೊಡಬಹುದು.

12 ). ಸ್ಥಿರವಾಗಿ ಜ್ವರವಿದ್ದರೆ ಅಥವ ಕ್ಷಯವಿದ್ದರೆ ೮೦೦ಗ್ರಾಂ ಬಾರ್ಲಿಯನ್ನು ಗೋಮೂತ್ರದಲ್ಲಿ ತೊಳೆದು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಲ್ಲಿ ಹಾಕಿರಿ.

         (ರವಿಯು ಜನನ ಕುಂಡಲಿಯಲ್ಲಿ ೪ನೇಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿರಿ.)

13 ). ರಾಹು ನಿಮ್ಮ ಜಾತಕದಲ್ಲಿ ಗೋಚಾರದಲ್ಲಿ ೧೨ನೇ ಸ್ಥಾನದಲ್ಲಿ ಸಂಚರಿಸುವಾಗ ಯಾವ ಹೊಸ ಕೆಲಸವನ್ನು ಮಾಡಬೇಡಿ.

14 ). ಕಪ್ಪು ವಸ್ತ್ರ ಅಥವ ಕನ್ನಡಕವನ್ನು ಧರಿಸಿರಿ.

15 ). ತಾಮ್ರದಲ್ಲಿ ಮಾಡಿದ ಒಂದು ಜೊತೆ ಸರ್ಪಗಳನ್ನು ಮನೆಯಿಂದ ನೈರುತ್ಯದಿಕ್ಕಿನಲ್ಲಿ ನಿರ್ಜನ ಪ್ರದೇಶದಲ್ಲಿ ಹುದುಗಿಸಿರಿ.

16 ). ಸೂರ್ಯೋದಯ ಅಥವ ಅಸ್ತಗಳಲ್ಲಿ ಯಾವ ಮುಖ್ಯ ನಿರ್ದಾರಗಳನ್ನು ತಗೆದುಕೊಳ್ಳಬೇಡಿ.

17 ). ರಾಹುವಿನ ದುಷ್ಪರಿಣಾಮಗಳನ್ನು ನಿವಾರಿಸಲು  ಮಗಳ  ಮದುವೆಯಲ್ಲಿ  ಕಬ್ಬಿಣದ ಅಥವ ಸ್ಟೀಲಿನ ಒಂದು ಜೊತೆ ಒಂದೇ ತರದ ಚೂರುಗಳನ್ನು ಕೊಟ್ಟು ಒಂದನ್ನು ಹರಿಯುವ ನೀರಿನಲ್ಲಿ ಹಾಕಿ ಮತ್ತೊಂದನ್ನು ಸದಾಕಾಲ ಅವಳ ಬಳಿಯಲ್ಲೇ ಇಟ್ಟುಕೊಳ್ಳುವಂತೆ ಹೇಳಿರಿ.

18 ). ಭಾನುವಾರ ಸಂಜೆ ಒಂದು ತೆಂಗಿನಕಾಯಿ ಮತ್ತು ತಾಮ್ರದ ತಗಡಿನಲ್ಲಿ ಕೆತ್ತಿದ ಜೋಡಿ ಸರ್ಪಗಳನ್ನು ನೀಲಿವಸ್ತ್ರದಲ್ಲಿ ಕಟ್ಟಿ ನದಿಯಲ್ಲಿ ಹಾಕಿ

19 ). ರೋಗ ನಿವಾರಣೆಗೆ ರೋಗಿಯ ತೂಕದಷ್ಟು ಬಾರ್ಲಿಯನ್ನು ರಾತ್ರಿ ತಲೆಯ ಬಳಿ ಇಟ್ಟುಕೊಂಡಿದ್ದು ಮಾರನೆಯ ದಿನ ಅಂತ್ಯಜರಿಗೆ ದಾನಮಾಡಿರಿ.

20 ).ಪತ್ನಿ ಮತ್ತು ಮಕ್ಕಳ ತೊಂದರೆಗೆ ಮನೆಯ ಹೊಸ್ತಿಲಿನಲ್ಲಿ ಬೆಳ್ಳಿಯ ತಗಡನ್ನು ಹುದುಗಿಸಿ

21 ). ಬಿಳಿ ಹಸುವನ್ನು ಸಾಕಿರಿ.

22 ).  ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಸೇವನೆ ಮಾಡಬಾರದು.

23 ).  ಅನೈತಿಕ ಸಂಬಂಧಗಳಿಂದ  ದೂರವಿರುವ ಬೇಕು.

24 ). ಯಾಚಕರನ್ನು  ಬರಿಗೈಲಿ ಎಂದೂ  ಕಳಿಸಬಾರದು.

25 ). ವಿಶ್ವಾಸ ಘಾತ ಮಾಡುವ ಪ್ರವೃತ್ತಿ ಯಿಂದ ದೂರವಿರಬೇಕು.
        
 ✍  ಡಾ || B. N.  ಶೈಲಜಾ ರಮೇಶ್.

2 comments:

  1. simply superb, very useful for students of astrology, please keep it up, well done, and I am also a student of astrology

    ReplyDelete