Thursday, 24 May 2018

ಒಗಟುಗಳಲ್ಲಿ ನವಗ್ರಹಗಳು

                             ಹರಿಃ  ಓಂ
               ಶ್ರೀ ಮಹಾಗಣಪತಯೇ ನಮಃ
                   ಶ್ರೀ ಗುರುಭ್ಯೋನಮಃ

ಒಗಟುಗಳಲ್ಲಿ  ನವಗ್ರಹಗಳು  :---




ಹೇಳಿ... ನಾನ್ಯಾರು..??
********************
ನಾ ರಾಜ ನಾ ತಂದೆ
ನಾ ನಿನ್ನ ಆತ್ಮ
ನಾ ಒಲಿಯೇ ನಿನಗೀವೆ
ಉನ್ನತ ಸ್ಥಾನ
ನಾ ಜ್ಞಾನಿ  ನಾ  ಗ್ರೀಷ್ಮ
ನಾ ನಿನ್ನ ನೇತ್ರ
ನಾ ಒಲಿಯೇ.. ಧಾರಾಳಿ
ನೀ ಗೌರವಕೆ ಪಾತ್ರ
ನಾ ಧೀರ, ನಾ  ಶೂರ
ನಾ ಧೈರ್ಯವಂತ
ಗಂಭೀರ ನಡೆ
ನೋಟ ಆಕಾಶದೆಡೆ,
ನಾನೀವೆ  ಉತ್ಸಾಹ  ಧರ್ಮಕಾರ್ಯಗಳತ್ತ
ನಾನೆಲ್ಲರಿಗೂ ಕೇಂದ್ರಬಿಂದು
ಪೂರ್ವಮುಖಿ ನಾನು
ಎಲ್ಲರಿಹರು ಸುತ್ತುವರೆದು
ಲಗಾಮಿಹುದೆನ್ನಲಿ ಗೊತ್ತೇನು.?
ನಾನಿಲ್ಲದಿರೆ ಜಗವೇ ಮಂಕು
ಜಗಜನರ ಉತ್ಸಾಹಕೆ ನಾನಿರಬೇಕು
ಶ್ರೀ ಹರಿಯ ಒಲುಮೆಯಲಿ
ಸತ್ತು ಬದುಕಿದ ನಾನು
ದಿನದಿನವೂ  ಆಯುಷ್ಯ
ಕಿತ್ತು ನಡೆವವನು
ನಾನೆಲ್ಲರ ಹೃದಯಾಧೀಶ
ನೆನೆದೊಡನೆ ಹರಿವುದು ಕ್ಲೇಶ
ನಿನ್ನ ನೋಡಲು ದಿನವೂ ನಾ ಬರುವೆ
ನಾ ಯಾರೆಂದು ಹೇಳು ನೀ ಮಗುವೇ
ಸರಿಯಾಗಿ  ಹೇಳಿದರೆ
ಹರಸುತಲಿ ಕಾಯ್ವೆ
ಆರೋಗ್ಯ ಜ್ಞಾನದ ಬೆಳಕ
ದಾಯಪಾಲಿಸುವೆ
ಶ್ರೀ ಶೈಲನಾಥನ ದಯದಿಂದ
ಸಕಲ ಸನ್ಮಂಗಳವ ನಾ ನೀಡುವೆ...
           
                               ನೀ  ಮಾರ್ತಾಂಡ
                               ನೀ ಭಾಸ್ಕರ
                               ಪ್ರತಿದಿನವೂ ಉದಿಸುವೆ
                               ನಮಗೋಸ್ಕರ
                               ಆರೋಗ್ಯ ಪ್ರದಾತ
                               ಗ್ರಹಣಾಮಾದಿರಾದಿತ್ಯ
                               ಸಂಜ್ಞಾ ಛಾಯಾವಲ್ಲಭ
                               ಶ್ರೀ ವಿಷ್ಣು ಪ್ರಭಾವ
                               ಸಿಂಹರಾಷ್ಯಾಧೀಶ
                               ಗ್ರಹನಾಯಕ
                               ಶ್ರೀಶೈಲ ನಾಥನನುಗ್ರಹದ
                               ಬಲದಿ ಪರಿಹರಿಸು
                               ಸಕಲದೋಷ ಪ್ರಭೇಬೀರು
                               ಬಾಳಲ್ಲಿ ಓ.. ದಿವಾಕರಾ....
                                
              

ಹೇಳಿ  ನಾನ್ಯಾರು ??
******************
ನಾ ಶೀತಲ ನಾ ಮೋಹಕ
ಅಚ್ಚ ಶ್ವೇತ ವರ್ಣ..
ನಾ ಸೌಮ್ಯ ಸತ್ವವಂತ
ಮನವು ಚಂಚಲವಣ್ಣ..
ಆಕರ್ಷಕ ಸಿಹಿಮಾತಿನ
ಮಾತೃ ಹೃದಯದವನು
ನಾ ಒಲಿದರೆ ನೀ ದಯಾಮಯ
ಹಾಸ್ಯಪ್ರವೃತ್ತಿಯುಳ್ಳವನು
ನಾನೂ  ಕೂಡ  ಆಗಸಕೆ ಕಣ್ಣು
ಏರಿಳಿತವುಳ್ಳವನು
ಮನಸ್ಸಿದ್ದರೆ ನಿರ್ಮಲ
ಯಶಸ್ಸನ್ನೀಯುವವನು
ನಾನಿಲ್ಲದಿರೆ ಜಗತ್ತೇ ಶೂನ್ಯ
ಮನುಜಕುಲಕೆ  ಬ್ರಾಂತಿ
ನಾನೊಲಿಯೆ ಜೀವಿಗೆ ಪೋಷಣೆ
ನೀಡುವೆ ಮನಃಶಾಂತಿ
ಪ್ರೀತಿ ಪ್ರೇಮ ಪ್ರಣಯ
ಲೀಲೆಗಳಿಗೆ ನಾನೇ ಕಾರಣ
27 ಪತ್ನಿಯರ ಪತಿ ನಾನು
ಇದೆ ಅದಕೆ ಸಕಾರಣ
ನಾ ಕ್ಷೀಣಿಸಲು ಅಮೃತವಿಲ್ಲ
ದೇವತೆಗಳಿಗೆ ಕಷ್ಟವಂತೆ
ಸಾಗರದಿ ಆವಿರ್ಭವಿಸಿದವ
ಸರ್ವರಿಗೂ  ಇಷ್ಟವಂತೆ
ಕ್ಷೀಣನಾದೊಡೆ ಬಲವಿಲ್ಲ
ವೃದ್ಧಿಯಲಿ ಪ್ರವರ್ಧಮಾನ
ನಾ ಒಲಿಯೇ ವರವೀವೆ
ಮನವು ಉತ್ತಮೊತ್ತಮ
ಹೇಳು ನೀ ನಾ ಯಾರೆಂದು
ಕೊಡುವೆ ಅಮೃತದ ಬಿಂದು
ಆರೋಗ್ಯ ಸ್ಥಿರ ಮನಸು
ನೀಡಿ ಹರಸುವೆ ಎಂದೆಂದೂ
ಶ್ರೀ ಶೈಲನಾಥನ ದಯದಿಂದ
ಸಕಲ ಸೌಭಾಗ್ಯಗಳು ನಿನಗಿರಲಿ ಎಂದೂ....
               
                      
                             ನೀ ನೀಡುವೆ ಯಶಸ್ಸು
                             ನಿರ್ಮಲ ಮನಸ್ಸು
                             ಸೌಮ್ಯ ಸ್ವಭಾವದ ಸುಂದರ
                             ನೀ  ಬಾನ ಚಂದಿರ
                             ಅತ್ರಿನೇತ್ರ ಸಂಭೂತ
                             ರೋಹಿಣೀ ಪ್ರಿಯ
                             ಇಂದು.ಶೀತಲ ನೀ
                             ಕುಮುದಬಾಂಧವ
                             ಮಾತೃಸುಖವನೀವ
                             ಶಂಭೋರ್ಮುಕುಟ ಭೂಷಣ
                             ಕ್ಷೀರೋರ್ದಾರ್ಣವ ಸಂಭೂತ
                             ಹೇ ಚಂದ್ರಮಾ
                             ಶ್ರೀಶೈಲನಾಥನ
                             ಅನುಗ್ರಹದಿಕಾಯೋ
                             ಕಟಕರಾಷ್ಯಾಧೀಶ
                             ಚಂಚಲ ಚಿತ್ತ..

                           
             

ಹೇಳಿ .. ನಾನ್ಯಾರು ??
*******************
ನಾ  ಅವನಿಜ... ಆದರೂ
ಸಹನೆಯಿಲ್ಲ ಸಿಡುಕಿನವ
ರುಧಿರ ವರ್ಣ ನನ್ನದು
ಕಲಹಪ್ರಿಯನು..
ನನ್ನ  ದೃಷ್ಟಿಯದು ಕ್ರೂರ
ಹೋರಾಟವೇನಗಿಷ್ಟ, ನಾ ಧೀರ ಯೋಧ
ಸಸ್ಯಾದಿಪ ನಾನು ಅರಣ್ಯಾಧಿಪತಿಯು
ಪಾಕಶಾಸ್ತ್ರ ಪ್ರವೀಣನೂ ಹೌದು
ಸ್ವಚ್ಛ ಉಚ್ಚಾರಕನು
ದೇಶ ಸೇವೆಯೇ ಧ್ಯೇಯ
ಭೂಮಿಗಧಿಪತಿ ನಾನೇ
ನಾ ಮುನಿಯೇ  ಸ್ಪೋಟಗಳು
ಭೂಮಿ ಬಿರಿಯುವುದು
ದ್ವೇಷಾಸೂಯೆಯ ಅಹಂಕಾರದಿ
ಜಗ  ಹೊತ್ತಿ ಉರಿವುದು
ಭಯೋತ್ಪಾದನೆ ಆಕ್ರಮಣ
ಉರಿಬೆಂಕಿ ನಾನೇ
ಅನೈತಿಕತೆಯ ಬಲೆಯಲ್ಲಿ
ಬೀಳಿಸುವವ  ನಾನೇ
ಪಂಚಭೂತಾತ್ಮಗಳಿಗೆ ನಾನೇ ಅಧಿಪ
ಸರ್ವ ಮಂಗಳ ಮಾಂಗಲ್ಯ ಸ್ವರೂಪ
ಶುಭನಾದರೆ ನಾ ಯಂತ್ರ ಮಂತ್ರ ಸಿದ್ಧಿ
ಸುಂದರ ಸಂಸಾರ ನೈತಿಕತೆಯಲಿ ಬುದ್ಧಿ
ನಾನೊಲಿಯೇ ದೃಢಶಕ್ತಿ ಧೈರ್ಯವನೀವೆ
ಸಂಸಾರ ಸುಖವಿತ್ತು ಸೋದರರ ಕಾಯ್ವೆ
ಹೇಳು ನೀ ನಾನ್ಯಾರೆಂದು
ಕೀರ್ತಿಯನ್ನು ಕೊಡುವೆ
ಶ್ರೀ ಶೈಲನಾಥನ ದಯೆಯಿಂದ
ಸನ್ಮಂಗಳವಿತ್ತು ಕಾಯ್ವೆ....
                               ಅಡಿಗಡಿಗೆ ಕುದಿದು,
                               ಉರಿಗಣ್ಣಿಂದಳೆದು
                               ಕೋಪಾಗ್ನಿಯಲಿ ಕೊಂದು
                               ದೇವಸೇನಾನಿಯಾದೆ
                               ಪಂಚಭೂತಗಳಿಗಧಿಪ
                               ಹೇ ಭೂಮಿಸುತ
                               ಮಹಾತೇಜ  ಅತಿ
                               ಭಯಂಕರ ರೂಪ
                               ಮೇಶವೃಶ್ಚಿಕಾಧೀಶ
                               ಹೇ ಅವನಿಜ
                               ನೀ  ಅಂಗಾರಕ ಕುಜ
                               ಮಂಗಳ  ಭೌಮ
                               ಇರಲೆಮ್ಮ ಮೇಲೇ
                               ಶ್ರೀ ಶೈಲನಾಥನ ಪ್ರೇಮ
                           
               

ಹೇಳಿ.... ನಾನ್ಯಾರು .?
*******************
ನಾ ಕಿರಿಯ ನಾ ಚತುರ
ಸೌಮ್ಯ ಸ್ವಭಾವದವನು
ಶಕ್ತಿಪೀತ ರಥದಲ್ಲಿ
ವಿರಾಜಿಸುತ್ತಿರುವವನು
ಭೂತತ್ವಾಧಿಪತಿಯು ನಾ
ಜ್ಯೋತಿಷ್ಯಾಸ್ತ್ರ  ಬಲ್ಲವನು
ನಿಪುಣ ಚತುರ  ವಿವೇಕಿ
ನಾ ವಿನೋದ ಹಾಸ್ಯ ಪ್ರಿಯನು
ಚಿಗುರು ದೂರ್ವಾದಳ ಸಮದ ವರ್ಣ
ಹಾಸ್ಯಪ್ರಜ್ಞೆ ಯುಳ್ಳವನು
ದೋಷತ್ರಯದಧಿಪತಿಯು ನಾ
ತಾಯಿಯ ಕಡೆಯ  ಬಂಧು
ವ್ಯಾಪಾರ - ವ್ಯವಹಾರದಲ್ಲಿ
ನಾ ಒಂದು ಹೆಜ್ಜೆ ಮುಂದು
ರಾಜಸ ಗುಣದವನು ನಾ
ಬಹುವೇಷಧಾರಿ...
ನಾಟ್ಯಶಾಲೆ, ಉದ್ಯಾನಗಳಲಿ
ನಡೆ, ಗ್ರಾಮ ಸಂಚಾರಿ..
ಧರ್ಮ ಸಮ್ಮತವಾದ ನಡೆ ಇಷ್ಟ
ನಾ ಒಲಿಯದಿರೆ.ಕಷ್ಟ
ನಾ ಮುನಿಯೇ ಅಲ್ಲೋಲ ಕಲ್ಲೋಲ
ಮನಸ್ಸಿನಾಳದಲ್ಲಿ
ದಿಕ್ಕು ಕಾಣದೆ ಮುಳುಗಿ ಹೋದೀರಿ
ನೀವು ನಿತ್ಯ ವ್ಯವಹಾರದಲ್ಲಿ
ಮಧ್ಯಸ್ಥಿಕೆ ಗೂ ನಾನಿರಬೇಕು
ಮಾಧ್ಯಮ ಸಂಪರ್ಕ ಸಾಧಕನು
ಅಸಾಧಾರಣ ಭೌದ್ಧಿಕತೆಯ ರೂಪ
ನಾ ಒಲಿಯೇ ನೀಡುವೆನು
ಕಾರ್ಯಕಾರಣ ಬುದ್ಧಿ
ಚಮತ್ಕಾರ ನೀಡುವೆನು
ಕರಕುಶಲ ಬಂಧು ಮಿತ್ರ
ವಿದ್ಯಾವಿನಯ ಕೊಡುವೆನು
ನಾ ಒಲಿಯಲಿಹುದು
ವಾಕ್ಚಾತುರ್ಯ ಬಲವು
ಉನ್ನತ ವಿದ್ಯಾಭ್ಯಾಸ
ಮಾಯಾಜಾಲವು
ಹಸಿರಿರುವಲ್ಲಿ ಉಸಿರಾಗಿಹೆ ನಾ
ನೆಡು ಹಸಿರು ಗಿಡಗಳನು
ಹರಸಿ ಹಾರೈಸಿ ನಿಮ್ಮ
ಬಾಳ ಹಸಿರಾಗಿಸುವೆನು
ನಾನ್ಯಾರೆಂದು ಹೇಳು ನೀ
ವಿಚಾರ ಪರ ಮಾತಿನಲಿ
ಶ್ರೀ ಶೈಲನಾಥನ ದಯೆ ಇರಲಿ
ವಿಮರ್ಶಾತ್ಮಕ ಗುಣ ಬರಲಿ
                                ಹೇ ಸುಧಾಂಶುತನಯ
                                ನೀ ಪ್ರಜ್ಞಾವಂತನು
                                ಮಾತಿನಲಿ ಚಾತುರ್ಯ
                                ನೀ ಇಳಾಪ್ರಿಯನು
                                ಹುಟ್ಟಿನಿಂದಲೇ.ಚತುರ
                                ಅಪ್ರತಿಮ ಭೌದ್ಧಿಕ ರೂಪ
                                ಯುಕ್ತಿ ಚಮತ್ಕಾರಗಳನೀವ
                                ಶ್ರೀ ಮಹಾವಿಷ್ಣು ಸ್ವರೂಪ
                                ಮಿಥುನ ಕನ್ಯಾದೀಶ
                                ಹೇ.ಚಂದ್ರ ಪುತ್ರ
                                ಪಚ್ಚೆವರ್ಣದ. ಚೆಲುವ
   .                            ಹೇ.. ಬುಧದೇವ
                                ಶ್ರೀಶೈಲನಾಥನ ದಯವಿರಲಿ
                                ಪ್ರಖರ ಬುದ್ಧಿಯು ಒಲಿದು ಬರಲಿ
                               
                         

ಹೇಳಿ... ನಾನ್ಯಾರು ???
********************
ನಾ  ಆಧ್ಯಾತ್ಮಿಕತೆಯ  ಪ್ರತೀಕ
ಧಾರ್ಮಿಕ ಪ್ರವರ್ತಕ
ಮೃದು ಭಾವದ ಮನಸು
ಅಧರ್ಮದಲಿ ಮುನಿಸು
ಉನ್ನತ ಸಂಸ್ಕಾರ ವಂತ
ನಾ  ವೇದ ಪಂಡಿತ
ಮಂತ್ರ ದ್ರಷ್ಟ್ರಾರನೂ ನಾನೇ
ಬ್ರಹ್ಮಜ್ಞಾನ ಉಳ್ಳವನು
ಸ್ಮೃತಿ ಶಾಸ್ತ್ರ ವೇದಪುರಾಣಗಳಿಗೆ
ನಾನೇ ಅಧಿಪತಿಯು
ಬಂಗಾರದಂತ ಮನಸ್ಸಿನವ
ಅದರದೇ ಬಣ್ಣ
ಶುಭಕರ್ಮಗಳಲಿ ಆಸ್ಥೆ
ಅಲ್ಲಿಯೇ ನಿಲ್ಲುವ ವ್ಯವಸ್ಥೆ
ಸುರರ, ಸುರರಂಥ ನಡೆಯವರ
ರಕ್ಷಣೆಯ ಭಾರ ಹೊಣೆ ನನ್ನದೇ
ಶರಣಾಗತರ  ಕಾಯ್ವ ಪ್ರಭೆ ನನ್ನದೇ
ಇಡು ನೀ ನನ್ನಲ್ಲಿ  ಶರಣಾಗತಿ
ನೀಡಿ ಶುಭಮತಿ
ಕರುಣಿಸುವೆ ಉತ್ತಮೊತ್ತಮ ಸಂತತಿ
ನನ್ನ ದಯೆಯಿಂದಲೇ ಆರ್ಥಿಕ ಪ್ರಗತಿ
ನಡೆದು ಉತ್ತಮ ರೀತಿ ಗಳಿಸು ಸದ್ಗತಿ
ನಾ ಮುನಿಯೇ ನೀ  ಅಳಿವೆ
ದುಃಖ ಮಲಿನತೆಯಲಿ ಅಲೆವೆ
ಕಷ್ಟಕೋಟಲೆಗಳ ನಡುವೆ
ಮರುಗಿ ಕೊರಗುವೆ
ದುಸ್ತರ ಬದುಕಲಿ ದಾರಿ ಕಾಣದೆ ತೊಳಲುವೆ
ಎಲ್ಲ ಶುಭಕಾರ್ಯಕ್ಕೆ ನನ್ನ ಬಲವಿರಬೇಕು
ಬದುಕು ನಳನಳಿಸಿ ನಗಲು
ನನ್ನ ಒಲವಿರಬೇಕು
ಹೇಳು ನೀ ನಾನ್ಯಾರೆಂದು
ಹರಸುವೆ ಬಳಿಬಂದು
ಶ್ರೀಶೈಲ ನಾಥನ  ದಯದಿಂದ
ದೈವಾನುಗ್ರಹವಿರಲಿ ಎಂದೂ...
                                 ಗೌರವಾದರಕೆ ಪಾತ್ರ
                                 ನೀ  ಪರಮ ಪವಿತ್ರ
                                 ಜ್ಞಾನ ಸುಖವನೀವ
                                 ಧನ, ಪುತ್ರದಾತ
                                 ತಾರಾಪತ್ನೀ ಸಹಿತ
                                 ಜ್ಯೋತಿಶ್ಯಾಸ್ತ್ರ ಪ್ರದಾತ
                                 ಧನುರ್ಮೀನಾಧಿಪತಿಯೇ
                                 ಹೇ  ದೇವಗುರುವೆ
                                 ಬೃಹತ್ ಬುದ್ಧಿಯ ದಾತ
                                 ಹೇ  ಬೃಹಸ್ಪತಿ
                               ಶ್ರೀಶೈಲನಾಥನನನುಗ್ರಹದಿಂದ
                                ನೀಡೆಮಗೆ ಸಕಲ ಶುಭಮತ
       

                    

: ಹೇಳಿ ...ನಾನ್ಯಾರು???
********************
ನಾ ಮೃದು ಸ್ವಭಾವದ ರಸಿಕ
ಭೋಗಭಾಗ್ಯ ಉಳ್ಳವನು
ಅಚ್ಚ ಶ್ವೇತ ವರ್ಣದ ಚೆಲುವ
ಬಿಳಿದಾವರೆಯ ಮುಖದವನು
ಯಜುರ್ವೇದಾಧಿಪತಿಯು ನಾ
ಸ್ವದೇಶಾಭಿಮಾನ ಉಳ್ಳವನು
ಸಂಗೀತ ಸಾಹಿತ್ಯ ನಾಟ್ಯಅಲಂಕಾರ
ಕವಿತ್ವ ಗುಣವುಳ್ಳವನು
ಹೂವು ಪರಿಮಳ ಗಂಧ
ವಿನೋದ ಲಾಸ್ಯವೇ ಚಂದ
ಶಯ್ಯಾಗೃಹವೆನಗಿಷ್ಟ
ಭೋಗಪ್ರಧಾನ ವಿಷಯಾಸಕ್ತ
ಕಲ್ಯಾಣ ಕಾರಕನೂ  ನಾನೇ
ಸೌಂದರ್ಯೋಪಾಸಕನು
ನಾ ರಕ್ಕಸ ಕುಲಕೆ ಮಿತ್ರ
ಸರಿದಾರಿಯ ತೋರಿಸುವವ
ಸನ್ಮಾರ್ಗಕ್ಕೆಳೆದುತರಲು
ಸಾಕಷ್ಟು ಪ್ರಯತ್ನಿಸುವವ
ಶ್ರೀಶೈಲ ನಾಥನನುಗ್ರಹದಿಂದ
ಸಂಜೀವಿನಿ ವಿದ್ಯೆ ಪಡೆದವ
ಷಂಡರಿಗನುಗ್ರಹಿಸಿದ ದೆಸೆ
ಶ್ರೀಚಕ್ರಾಧಿದೇವತೆಯಿಂದ
ಶಾಪಕ್ಕೊಳಗಾದವ
ಜಗದ ಜೀವಿಗಳು ಹಂಬಲಿಸಿ
ಹಾತೊರೆವ ಪ್ರತಿ ಸುಖದಲ್ಲಿ
ನಾನಡಗಿ ಕುಳಿತಿರುವೆ
ಒಲಿದು ಹಾರೈಸಲು ನಿಮ್ಮ
ದಾಂಪತ್ಯ ಸುಖವಿರಿಸುವೆ
ಸಕಲ ಭೋಗಭಾಗ್ಯಗಳನಿತ್ತು ಹರಸುವೆ
ಕಾಮಕಳತ್ರ ವೀರ್ಯ ಕಾರಕನು ನಾನೇ
ಸಿರಿ ಗೌರವಾದರ ಗೃಹಸೌಖ್ಯ ನೀಡುವವ ನಾನೇ
ನಾ ಮುನಿಯೇ ಜಯವಿಲ್ಲ
ಸಂಸಾರದಲಿ ಮುನಿಸು
ಭೋಗಲಾಲಸೆಗೆ ಮಿತಿಯಿಲ್ಲ
ಅನೈತಿಕತೆಯಲಿ  ಮನಸು
ಮುನಿದು ನಾ ಸಿಡಿದರೆ
ನಿನ್ನ ಅದಃಪತನಕೆ ದಾರಿ
ಒಲಿದು ಹರಸಿದರೆ
ಸಿರಿ ಸೌಭಾಗ್ಯವೀವ ನಾರಿ
ಹೇಳು ನೀ  ನಾನ್ಯಾರೆಂದು
ಸಿರಿದೇವಿ ಹರಸುವಳು ಬಂದು
ಶ್ರೀಶೈಲನಾಥನೊಲವಿರಲಿ
ಭೋಗಭಾಗ್ಯಗಳು ನಿನ್ನನರಸಿ ಬರಲಿ...
  
                                 ಕಾವ್ಯ ಕೋಮಲಮಯ
                                 ವಚನ,  ಮೃದುಹೃದಯ
                                 ಭೋಗಭಾಗ್ಯವನೀವ
                                 ಲಘುಸ್ವಭಾವದವ
                                 ಜ್ಞಾನವೀರ್ಯಕಾರಕ
                                 ನೀ  ಭೋಗಪ್ರಧಾನ ಗ್ರಹ
                                 ಅಸುರ ಗುರುವೇ ನೀ
                                 ಶಸ್ತ್ರಾಸ್ತ್ರ ಕೋವಿದ
                                 ಸಂಗೀತ ನಾಟ್ಯ ಗಾನ
                                 ಸಕಲ ಕಲಾವಿದ
                                 ವೃಷಭತುಲಾಧೀಶ
                                 ಹೇ.ಭಾರ್ಗವಾ
                                 ಶ್ರೀ ಶೈಲನಾಥನನುಗ್ರಹ
                                 ಇರಲಿ ಹೇ ಶುಕ್ರ ದೇವಾ..
                                      
                                    

ಹೇಳಿ...  ನಾನ್ಯಾರು..??
*********************
ಉತ್ತಮ  ಶಿಕ್ಷಕ ನು ನಾ ಪಕ್ಷಪಾತ ವಿಲ್ಲದವನು
ನೀ ನಡೆದ ನಡೆಯಂತೆಯೇ ಫಲಾಫಲವನೀಯುವನು
ವಾಯುತತ್ವ ಪ್ರಧಾನ ಶ್ರಮದಿಂದಲೇ ಜೀವನ
ತಮೋಗುಣದವನು ಸ್ಥಿರಕಾರ್ಯ ತತ್ಪರನು ನಾ
ನಿಧಾನವೇ ಪ್ರಧಾನಗುಣ ಧೀರ್ಘವ್ಯಾಧಿಯ ಜನ್ಯ
ಧರ್ಮಶಾಸ್ತ್ರಾಸಕ್ತನು ನಾ ಉತ್ತಮಕಾರ್ಯಕ್ಕೆ ಮಾನ್ಯ
ಮುನಿಸಿರಲು ಅಲ್ಲೋಲ ಕಲ್ಲೋಲ ಜಗವೇ ನಡುಗುವುದು
ಸಿಕ್ಕರೆನ್ನ ದೃಷ್ಟಿಗೆ ಬದುಕು ದುಸ್ತರವಾಗುವುದು
ಹೆಸರಲೇ ಇಹುದು ನಡುಕ ನಾ ವಯಸ್ಸಾದ ಮುದುಕ
ಅಹಿತಕರ್ಮಕ್ಕೆ ನಾ ಎಂದೂ ದುಃಖಕಾರಕ
ನೈತಿಕತೆಯ ಜರಿದು ಆದರೆ ಪತಿತ
ಆಗುವೆ.ಘೋರ ಶಿಕ್ಷಾರ್ಹ ಅವಸಾನ ಖಚಿತ
ಸುಕೃತ ಫಲವಿಲ್ಲದಿರೆ ನೀ  ಸಾಮಾನ್ಯ ಸೇವಕ
ಧರ್ಮಮಾರ್ಗದೊಳಿರಲು ನ್ಯಾಯಾಸ್ಥಾನಕೆ ಪ್ರೇರಕ
ಮುನಿಯೇ ನಾ ಅದಃಪತನ ಏಳುಬೀಳಿನ ಜೀವನ
ದಾರಿದ್ರ್ಯಾಪಮಾನ ಕಟ್ಟಿಟ್ಟ ಬುತ್ತಿ ಜೀವನವೇ ಅಯೋಮಯ
ಸೃಷ್ಟಿಯ ಸಮತೋಲನಕೆ ಹರನಿಂದ ನಿಯೋಜಿತನಾದವನು
ನ್ಯಾಯಮಾರ್ಗದಿ ನಡೆದು ಅವನ್ಹೆಸರ ಪಡೆದವನು
ಪ್ರಚೋದನೆಯಿಹುದು ನನ್ನದು ಕೆಟ್ಟಕಾರ್ಯಗಳಲ್ಲಿ
ಚಂಚಲೆಯಿತ್ತು ಮನಕೆ ಮುಳುಗಿಸಿ ಬಿಡುವೆ ಆಲಸ್ಯದಲ್ಲಿ
ಅಂಜಿ ಅಳುಕದೆ ದೃತಿಗೆಡದೆ ಮುನ್ನುಗ್ಗುವವರೇನಗಿಷ್ಠ
ನಡೆಯಿರಲು ನಿಸ್ಪೃಹತೆ ಯಲಿ ಹರಿಸುವೆ ಸಕಲ ಸಂಕಷ್ಟ
ಎಣಿಸಿ ಗುಣಿಸಿ ಹಿಂದಿನದನೆಲ್ಲ ಮಾರಣಾಂತಕನಾಗುವವನು
ಕೃತಿಯಂತೆಯೇ ಫಲವೀವ ಆಯುರ್ನಿರ್ಧಾರಕನು
ಮುನಿಸಿಹುದೆನಗೆ ಪಿತನಲ್ಲಿ ನಾನವನ ಕಡುವೈರಿ
ಹರಸಿ ಹಾರೈಸಿ ಹೆಸರಿತ್ತ ಸರ್ವಮಾನ್ಯ ತ್ರಿಪುರಾರಿ
ನಾ ಒಲಿಯೇ ಸಕಲಸುಖಭೋಗ ಹಿರಿತನದ ಜೀವನ
ಹಿರಿಯರ ಪದಸೇವೆಯಲಿಹುದು ಸರ್ವ ಕಷ್ಟ ನಿವಾರಣ
ನಾ ಒಲಿಯೇ ಆಸ್ತಿಕನು ನೀ ಆಧ್ಯಾತ್ಮ ದಲಿ ಪ್ರಗತಿ
ಧಾರ್ಮಿಕತೆ ಯಲಿ  ಮುನ್ನಡೆಯೇ ಕೊಡುವೆ ನಾ  ಪದೋನ್ನತಿ
ಹೇಳು ನೀ  ನಾನ್ಯಾರೆಂದು ದಯೆಯಿರಲಿ ಶ್ರೀ ಶೈಲನಾಥನದು
ನಿಸ್ಪೃಹ ಸೇವಾನಿರತರಿಗೆ ಉತ್ತಮೊತ್ತಮ  ಪದವಿಹುದು
                              ಸಕಲ ಕಾರ್ಯಗಳ ನಿಜ
                              ನಿರೀಕ್ಷಕನು ನೀನು
                              ಮನೋಬಲದ  ಸತ್ವ
                              ಪರೀಕ್ಷಕನು ನೀನು
                              ಕಾಶ್ಯಪಗೋತ್ರ ಸಂಜಾತ
                              ನೀ ಮಾರ್ತಾಂಡ ಸುತ
                              ಜ್ಯೇಷ್ಠಾ ಪತ್ನೀ ಸಮೇತ
                              ಆಯುಃಪ್ರಧಾತ
                              ಪ್ರಾರಬ್ಧದಂತೆ ಫಲವೀವ
                              ಉತ್ತಮ  ಅಧ್ಯಾಪಕ
                              ನಿಸ್ಪೃಹತೆ ಯ ನಡೆಯಿರೆ
                              ಅವ ವಂಶ ಪ್ರದೀಪಕ
                              ತಪ್ಪಿನಡೆದರೆ ಶಿಕ್ಷಿಸುವ
                              ಧರ್ಮದೇವತೆ
                              ಸನ್ಮಾರ್ಗದಲಿ ನಡೆಯಿರೆ
                              ನೀಡುವೆ ಆಧ್ಯಾತ್ಮಿಕತೆ
                              ತನ್ನ ಹೆಸರಿತ್ತು ಪೊರೆದ
                              ಆ ಪರಮೇಶ್ವರ
                              ಶ್ರೀಶೈಲನಾಥನ ದಯೆಯಿರಲಿ
                              ಶ್ರೀ ಶನೈಶ್ಚರ.....

                              
                   

ಹೇಳಿ ..... ನಾನ್ಯಾರು..??
**********************
ಹೂಟ  ಹೂಡುವ ಮಾಟ
ಕುಟಿಲ ಯೋಜನೆಯ ಆಟ
ನೀಡುವೆ ಎಲ್ಲರಿಗೂ ಕಾಟ
ಇದೆನ್ನ  ಪರಿಪಾಠ...!!
ಕೆಡುಕುಂಟುಮಾಡುವ ಕೆಲಸ
ಬದುಕಾಗುವುದು ಅಸ್ತವ್ಯಸ್ತ
ಭೌತಿಕ ರೂಪವೇ ಅಸ್ಪಷ್ಟ
ನಾ ನಶ್ವರತೆಯ ಸಂಕೇತ...!!
ತಂತ್ರ ಕುತಂತ್ರಕೆ ನಾನೆಜಮಾನ
ಅನಿಯಂತ್ರಿತ ಜೀವನಕೆ ಕಾರಣ
ಸುರಳಿ ಸರಪಳಿಗಳ ನೆರಳಿನಾಟದ
ಬವಣೆ ಬದುಕಿಗೆ ಮೂಲ ನಾನೇ...!!
ವಲ್ಮೀಕವೆನ್ನ ಸ್ಥಾನ
ಮೋಡಿ ಗಾರುಡಿ ಸಮ್ಮೋಹನ
ಮಾಯಾ ಮಾಟ ಕೂಟ
ಅಭಿಚಾರದೆಡೆ  ನೋಟ...!!
ನಾ ಒಲಿಯೇ  ಬಲವಿಹುದು
ಚಿತ್ರ - ಛಾಯೆಗಳಲಿ ಒಲವಿಹುದು
ಯಂತ್ರ ತಂತ್ರಗಳ ಸಾರಥ್ಯ
ಕಲೋಪಾಸನೆಗೆ ನಿಮಿತ್ತ...!!
ಭೂಗರ್ಭ ದೊಳಗಣ ಧನ
ಬೃಹತ್ ಬುದ್ಧಿಯ ಮನ
ಅಮೋಘ ಧೈರ್ಯ ಯುಕ್ತಿಬಲ
ನಾನೊಲಿಯೆ ಲೀಲಾಜಾಲ...!!
ಮುನಿದಿರಲು ವಿದ್ವಂಸಕ ಕೃತ್ಯ
ವ್ಯಾಧಿ ಬಾಧೆ ಪ್ರತಿನಿತ್ಯ
ಅಮಂಗಳ ಬೇನೆ ಮೈಲಿ ವಮನ
ವಿಷಪ್ರಾಶನ ಪುತ್ರಹೀನ...!!
ಜಗಚ್ಛಕ್ಷುಗಳೆನ್ನ ವೈರಿ
ಕಾಡಿ ಕಾಡಿಸುವೆ ಬಲು ಕ್ರೂರಿ
ಹಠದಿಂ ಪಡೆದೆ ಸ್ಥಾನಮಾನ
ಸುರರ ದ್ವೇಷ ವಿದಕೆ ಕಾರಣ...!!
ಹೇಳು ನೀ ನಾನ್ಯಾರೆಂದು
ಶ್ರೀಶೈಲನಾಥನರಸಿಯು ಹರಸಿ
ಹಾರೈಸುವಳು ಬಳಿಬಂದು
ಶ್ರೀವಲ್ಲಿನಾಥನ ದಯವಿರಲಿ ಎಂದೂ...!!
                               ಬಾಹುಬಲವೇ ಪ್ರಧಾನ
                               ಮಾಡು ವಿರೋಧ ಶಮನ
                               ಮಹಾಭಯಂಕರ ನೀ
                               ಪೊರೆ ..ಮಾತಾಮಹ
                               ಚಂದ್ರಾದಿತ್ಯರೊಡನೆ ವೈರ
                               ನೀ ಕಾಡಿ ಕಾಡಿಸುವ ಅಸುರ
                               ಸಿಂಹಿಕಾಗರ್ಭಸಂಭೂತ
                               ನೀ ಸಕಲಕಲಾ ಪಾರಂಗತ
                               ಛಾಯಾಗ್ರಹ ನೀನೇ
                               ಹೇ ನಾಗದ್ವಜನೆ
                               ಸರ್ವದೋಷಗಳ ಕ್ಷಯಿಸಿ
                               ನೀಡು ಮಂಗಳವ ಶಿಖೀ
                               ಮಹಾವೀರ ರಾಹು
                               ನೀನೊಲಿದರೆ ಪರಮಸುಖಿ
                               ಶ್ರೀಶೈಲನಾಥನನನುಗ್ರಹದಿ
                               ಕಾಯೋ ಅರ್ಧಕಾಯನೇ
                                         
                     

ಹೇಳಿ....  ನಾನ್ಯಾರು..??
**********************
ಅಸ್ಪಷ್ಟ ಭೌತಿಕ ರೂಪ
ಉರಿಕೆಂಡದಂತ ಕೋಪ
ವಿಷಕಾರುವ  ವಚನ
ಚಿತ್ರಚಿಚಿತ್ರ ವಸನ
ಗೂಢವಿದ್ಯಾಪ್ರವೀಣ
ಮಂತ್ರಶಾಸ್ತ್ರ ಬಲ್ಲವನು ನಾ
ರಜೋಗುಣವೇ ಪ್ರಧಾನ
ಚಿತ್ರಾಂಗ ಧೂಮ್ರವರ್ಣ
ಮಾಯಾಮಾಟ ಅಭಿಚಾರ
ತಂತ್ರಕುತಂತ್ರದ ವಿಚಾರ
ಅನ್ಯಸಂಸ್ಕೃತಿ ಸಂಸ್ಕಾರ
ನೀಚಸಂಗ ಹೀನ  ಆಚಾರ
ಕೃಪೆಯಿರಲು ಜ್ಞಾನವನೀವೆ
ಮೋಕ್ಷಜ್ಞಾನ ಪ್ರಧಾನಿಸುವೆ
ಗಂಗಾಸ್ನಾನ ಪುಣ್ಯಫಲ
ಬ್ರಹ್ಮಜ್ಞಾನ ಅಚಲ
ತಪಸ್ಸಿನೋಳಾಸಕ್ತಿ
ದೈವೀಕತೆ  ಸಂಸಾರ ನಿರಾಸಕ್ತಿ
ಮಹಾ ಮೇಧಾವಿ ವಿದ್ಯಾಪೂರ್ಣ
ಮುನಿದೊಡೆಲ್ಲವೂ ಅಪೂರ್ಣ
ಚಿತ್ತಭ್ರಮೆಯ ಘೋರ
ಮಾಯೆ ಮೋಡಿ ಚೋರ
ಸುಳಿಯೇ ಪ್ರೇಮ ಕಾಮ
ಅದಃಪತನ ನಿರ್ನಾಮ
ಒಲಿದರಿಹುದು ಯೋಗಾಯೋಗ
ಯಾತ್ರಾಫಲ ಯಜ್ಞಯಾಗ
ದೈವಸೇವಾಯೋಗ
ಆಧ್ಯಾತ್ಮಿಕತೆಯ ಪ್ರಭಾವ
ಹೇಳು ನೀ ನಾನ್ಯಾರೆಂದು
ಕೀರ್ತಿ ಪತಾಕೆ ಹಾರಿಸುವೆ ಬಂದು
ಕುಲೋಸ್ಯೋನ್ನತಿಯನೀವೆ
ಮೋಕ್ಷಜ್ಞಾನ ವಿತ್ತು ಕಾಯ್ವೆ
ಶ್ರೀಶೈಲನಾಥನ ಸುತನ
ದಯೆಯಿರಲು ಕಾಯ್ವೆ
ಉದ್ಧರಿಸಿ ಕುಲವನ್ನು
ಸತ್ಸಂತಾನಾಭಿವೃದ್ಧಿಯನೀವೆ..
                                       ರಕ್ತ ಕಾಂತಿಯುಕ್ತ
                                       ಭಯಂಕರ ನೇತ್ರ
                                       ವಸ್ತ್ರವೋ ಚಿತ್ರವಿಚಿತ್ರ
                                       ನಾನಾ ವರ್ಣಯುಕ್ತ
                                       ಸಕಲರಲಿ.ದುರ್ಬಲ
                                       ಹೇ ಧೂಮ್ರವರ್ಣ
                                       ಕ್ರೂರತೆಯ ಪ್ರತೀಕ
                                       ದೇಹವೆಲ್ಲ ವ್ರಣ
                                       ಮಂತ್ರಶಾಸ್ತ್ರ ದಷ್ಟ್ರಾರ
                                       ಮೋಕ್ಷ ಪ್ರದಾತ
                                       ಹರಸಿ ಹಾರೈಸಲು
                                       ಕೀರ್ತಿ ದ್ವಜದ ಸಂಕೇತ
                                       ಗೂಢವಿದ್ಯಾ ಚತುರ
                                       ಹೇ ಪಿತಾಮಹ
                                       ಚಿತ್ರಲೇಖಾ ಸಮೇತ
                                      ಪೀಡಾಂಹರತು ಮೇ ತಮ
                                       ಶ್ರೀಶೈಲನಾಥನ
                                       ಸುತನ ದಯವಿರಲಿ
                                       ಕುಲಸ್ಯೋನ್ನತಿಯ ನೀಡು
                                       ಕೇತುನಿನ್ನನುಗ್ರಹವಿರಲಿ
                                   
                               
🙏🙏🙏
    ನಮೋ ಮಾರ್ತಾಂಡ ನಮೋ ಶಶಧರ 
     ನಮೋ ಭೂಮಿಸುತ ನಮೋ ಸೋಮಾತ್ಮಜ
 ನಮೋ ಗುರುರ್ಗೌರವಾಧೀಶ ನಮೋ ಭಾರ್ಗವ
   ನಮೋ ನೀಲಾಂಬರ ಛಾಯಾಸುತ ನಮೋ ಶನೈಶ್ಚರ 
             ನಮೋ ಸಿಂಹಿಕಾಸೂನು ಧೀರ್ಘಬಾಹವೇ
                       ನಮೋ ಶಿಖೀ ಶತಕೇತವೇ  
     ಭಕ್ತಿಯಲಿ  ಬೇಡುವೆನು ನಿಮ್ಮಲ್ಲಿ ಶುಭಮತಿಯ ನೀಡಿ                                     ಪಾಲಿಸಿರಿ ಎನ್ನ 
                                       🙏🙏
          ✍    ಡಾ||  B. N. ಶೈಲಜಾ ರಮೇಶ್.....

Wednesday, 23 May 2018

ಕುಜದೋಷದ ಸ್ವರೂಪ, ಫಲ ಹಾಗೂ ಪರಿಹಾರೋಪಾಯಗಳು

                             ಹರಿಃ  ಓಂ
             ಶ್ರೀ ಮಹಾಗಣಪತಯೇ  ನಮಃ
                 ಶ್ರೀ  ಗುರುಭ್ಯೋನಮಃ

          ಕುಜದೋಷ  :--


ಕುಜದೋಷದ  ಸ್ವರೂಪ,  ಫಲ  ಹಾಗೂ  ಪರಿಹಾರೋಪಾಯಗಳು  :---
          ಜಾತಕರ  ಜನ್ಮ ಕುಂಡಲಿಯಲ್ಲಿ  ಕುಜ  ಎಷ್ಟು  ಅಶುಭನಾಗುತ್ತಾನೆ  ಎಂಬುದನ್ನು  ಕುಜದೋಷದ ಅಂತರ್ಗತ  ವಿಚಾರ ಮಾಡಬೇಕಾಗುತ್ತದೆ.
          ಕುಂಡಲಿಯಲ್ಲಿ  ಪ್ರಥಮ,  ದ್ವಿತೀಯ  ಚತುರ್ಥ, ಪಂಚಮ,  ಸಪ್ತಮ ,  ಅಷ್ಟಮ  ಹಾಗೂ  ದ್ವಾದಶ  ಭಾವಗಳಲ್ಲಿ  ಕುಜನಿದ್ದರೆ  ದೋಷವೆಂದೇನಿಸುತ್ತದೆ,  ಈ  ಭಾವಗಳಿಗೆ ತಮ್ಮದೇ  ಆದ  ಒಂದು ವಿಶಿಷ್ಟ  ಮಹತ್ವವಿದೆ.
   
          ■  ಪ್ರಥಮ  ಭಾವದಿಂದ  ಜಾತಕನ  ಶರೀರ,
          ■  ದ್ವಿತೀಯ ಭಾವದಿಂದ  ಕುಟುಂಬ ಸೌಖ್ಯ,
          ■  ಚತುರ್ಥ  ಭಾವದಿಂದ  ಸುಖ  ಅಂದರೆ  ಭೂಮಿ, ವಾಹನ, ಮನೆ  ಹಾಗೇ ಪ್ರಯೋಜನಕ್ಕೆ  ಬರುವ  ಅವಶ್ಯಕ  ಸಾಮಗ್ರಿಗಳು,
          ■  ಪಂಚಮ  ಭಾವದಿಂದ  ಸಂತಾನ  ಸುಖ
          ■  ಸಪ್ತಮ  ಭಾವದಿಂದ  ಕಾಮ, ಪತಿ ಅಥವಾ  ಪತ್ನಿ,  ರತಿಸುಖ,
          ■  ಅಷ್ಟಮ  ಭಾವದಿಂದ ಜೀವನದಲ್ಲಿ  ತಲೆದೋರುವ  ಬಾಧೆಗಳು  ಅಥವಾ  ಮೃತ್ಯು  ಅಥವಾ  ಆಯಸ್ಸಿನ  ವಿಚಾರ,
          ■  ದ್ವಾದಶ ಭಾವದಿಂದ  ವ್ಯಯ  ಅಥವಾ ಖರೀದಿ  ಶಕ್ತಿಯ  ವಿಚಾರಗಳನ್ನು  ಮಾಡಲಾಗುತ್ತದೆ.  ಆದ್ದರಿಂದ  ಜನ್ಮ ಕುಂಡಲಿಯಲ್ಲಿ ಕೌಟುಂಬಿಕ  ಸುಖ  ದುಃಖಾದಿಗಳ  ವಿಚಾರ  ಮಾಡುವಾಗ  ಈ   7  ಭಾವಗಳಿಗೆ  ವಿಶೇಷ  ಮಹತ್ವ  ಕೊಡಲಾಗುತ್ತದೆ.
          ಈ  ಭಾವಗಳಲ್ಲಿ  ಪಾಪಗ್ರಹಗಳ  ಸ್ಥಿತಿಯಾಗಲೀ  ಅಥವಾ  ಈ  ಭಾವಗಳ  ಮೇಲೆ  ಪಾಪಗ್ರಹಗಳ  ದೃಷ್ಟಿಯಾಗಲೀ  ಇದ್ದರೆ  ಜಾತಕರಿಗೆ  ಆ  ಭಾವಗಳ  ಸುಖದಲ್ಲಿ  ತೊಂದರೆಗಳು  ಲಭಿಸುತ್ತದೆ.
          ■   ಕುಜನು  ಪಾಪಗ್ರಹವಾಗಿದ್ದು,  ಒಂದು ವೇಳೆ  ಕುಜನು  ಲಗ್ನ,  ದ್ವಿತೀಯ,  ಚತುರ್ಥ,  ಪಂಚಮ,  ಸಪ್ತಮ,  ಅಷ್ಟಮ,  ದ್ವಾದಶ  ಭಾವಗಳಲ್ಲಿ  ಸ್ಥಿತನಿದ್ದರೆ  ತನ್ನ  ಕೆಟ್ಟ  ಪ್ರಭಾವ ವನ್ನು  ತೋರುತ್ತಾನೆ.
          ■   ಲಗ್ನದಲ್ಲಿ  ಮಂಗಳನಿದ್ದರೆ,  ಅಥವಾ  ಅವನ  ದೃಷ್ಟಿ  ಲಗ್ನದ  ಮೇಲಿದ್ದರೆ,  ಜಾತಕನ ಆರೋಗ್ಯ  ಉತ್ತಮವಾಗಿರುವುದಿಲ್ಲ,  ಸ್ವಭಾವದಲ್ಲಿ  ಕೂಡ  ಹಠಮಾರಿತನ  ಹಾಗೂ  ಉಗ್ರತನವಿರುತ್ತದೆ.
          ■   ದ್ವಿತೀಯದಲ್ಲಿ ಕುಜನಿದ್ದರೆ,  ಅಥವಾ  ಅವನ  ದೃಷ್ಟಿ  ದ್ವಿತೀಯದ  ಮೇಲಿದ್ದರೆ,  ಮಾತಿನಲ್ಲಿ  ಒರಟುತನ  ಹಾಗೂ  ಕುಟುಂಬದಲ್ಲಿ  ಹೊಂದಾಣಿಕೆಯ  ವಿಷಯದಲ್ಲಿ  ಕೊರತೆಯಿರುತ್ತದೆ.
          ■    ಚತುರ್ಥ  ಭಾವದಲ್ಲಿ  ಕುಜನಿದ್ದರೆ  ಅಥವಾ  ಅವನ ದೃಷ್ಟಿ  ಚತುರ್ಥ ದ  ಮೇಲಿದ್ದರೆ,  ಸುಖ ಭೋಗೋಪ ಸಾಧನಗಳಲ್ಲಿ  ಕೊರತೆಯಿರುತ್ತದೆ.
      
          ■    ಪಂಚಮ  ಭಾವದಲ್ಲಿ  ಕುಜನಿದ್ದರೆ  ಅಥವಾ  ಪಂಚಮದ  ಮೇಲೆ  ಕುಜನ  ದೃಷ್ಟಿಯಿದ್ದರೆ,  ಮೃತ ಸಂತಾನ, ಗರ್ಭಪಾತ,ಸಂತಾನ  ವಿಷಯದಲ್ಲಿ  ದುಃಖ, 
          ■    ಸಪ್ತಮ  ಭಾವದಲ್ಲಿ  ಕುಜನಿದ್ದರೆ  ಅಥವಾ  ಆ  ಭಾವದ ಮೇಲೆ  ಕುಜನ  ದೃಷ್ಟಿಯಿದ್ದರೆ,  ಕೌಟುಂಬಿಕ  ಜೀವನ  ಸುಖಮಯವಾಗಿ  ಇರುವುದಿಲ್ಲ,  ಒಮ್ಮೊಮ್ಮೆ ದ್ವಿಕಳತ್ರ,
          ■   ಅಷ್ಟಮ  ಭಾವದಲ್ಲಿ  ಕುಜನಿದ್ದರೆ  ಅಥವಾ ಕುಜನ  ದೃಷಿಯಿದ್ದರೆ,  ಜೀವನದಲ್ಲಿ  ತೊಂದರೆಗಳು,  ಕಲತ್ರನಾಶ,  ಹಾಗೂ  ಅನಿಷ್ಟ ಗಳು  ಭಾಧಿಸುತ್ತವೆ.
          ■   ದ್ವಾದಶ  ಭಾವದಲ್ಲಿ  ಕುಜನಿದ್ದರೆ  ಅಥವಾ  ಆ  ಭಾವದ ಮೇಲೆ  ಕುಜನ  ದೃಷ್ಟಿಯಿದ್ದರೆ,  ಅಧಿಕ  ವ್ಯಯ  ಚಿಂತೆ,  bed  comfort ವಿಚಾರದಲ್ಲಿ  ತೊಂದರೆಗಳು  ಪೀಡಿಸುತ್ತವೆ.
          ಆದ್ದರಿಂದ  ಈ  ಏಳು  ಭಾವಗಳಲ್ಲಿ  ಎಲ್ಲಿಯಾದರೂ  ಕುಜ  ಸ್ಥಿತನಿದ್ದರೆ  ಆ  ಜಾತಕರು  ಕುಜದೋಷವುಳ್ಳವರು  ಎಂದೆನಿಸಿಕೊಳ್ಳುತ್ತಾರೆ.
            ಲಗ್ನದಿಂದ,  ಚಂದ್ರರಾಶಿಯಿಂದ  ಹಾಗೂ  ಶುಕ್ರನಿಂದ ಕೂಡ   ಈ  ಭಾವಗಳಲ್ಲಿ  ಕುಜನು  ಸ್ಥಿತನಿದ್ದರೂ  ಕೂಡ  ಕುಜದೋಷವಾಗುತ್ತದೆ.
 
           ಕುಜ  ಶನಿ,  ಸೂರ್ಯ,  ರಾಹು,  ಕೇತು  ಇವರು ತಮ್ಮ  ದೃಷ್ಟಿ ,  ಯುತಿ ಅಥವಾ   ಸ್ಥಿತಿಯಿಂದ ಯಾವುದೇ  ಭಾವದ  ಶುಭ ಫಲಗಳನ್ನು  ನಷ್ಟಗೊಳಿಸುವ  ಸಾಮರ್ಥ್ಯ ವನ್ನು  ಹೊಂದಿರುವರು,  ಆದ್ದರಿಂದ  ಈ  ಗ್ರಹರು  ನೈಸರ್ಗಿಕವಾಗಿ ಪಾಪಗ್ರಹರು,   ಈ  ಪಾಪಗ್ರಹಗಳು 1,  2,  4,  5,  7,  8,  12  ಈ  ಭಾವಗಳಲ್ಲಿ  ಸ್ಥಿತರಿದ್ದರೆ  ಕುಜದೋಷದಷ್ಟೇ  ಪ್ರಭಾವ  ಉಂಟಾಗುತ್ತದೆ,   ಆದ್ದರಿಂದ  ಇದರ  ವಿಚಾರವನ್ನೂ  ಮಾಡುವುದು  ಅವಶ್ಯಕ,  ಏಕೆಂದರೆ  ಲಗ್ನ ಶರೀರವನ್ನೂ,  ಚಂದ್ರ  ಮನಸ್ಸನ್ನೂ,  ಹಾಗೂ  ಶುಕ್ರ  ದಾಂಪತ್ಯ ಸುಖದ  ಪ್ರತಿನಿಧಿತ್ವ  ವಹಿಸುತ್ತಾರೆ.
          ದಾಂಪತ್ಯ  ಸುಖದಲ್ಲಿ  ಶರೀರ,  ಮನಸ್ಸು  ಹಾಗೂ  ರತಿಸುಖ  ತಮ್ಮದೇ  ಆದ  ಮಹತ್ವಹೊಂದಿದೆ.   ರವಿ , ಶನಿ, ರಾಹು, ಕೇತುಗಳಿಂದ  ನಿರ್ಮಾಣವಾಗುವ  ದುರ್ಯೋಗಗಳು  ಅಲ್ಪ ಪ್ರಭಾವವುಳ್ಳದ್ದಾಗಿರುತ್ತದೆ,   ಆದ್ರೆ ಕುಜನಿಂದ  ದುರ್ಯೋಗ  ನಿರ್ಮಾಣವಾದಾಗ  ಅದರ  ದುಷ್ಪ್ರಭಾವವನ್ನು  ಅಧಿಕವೆಂದು  ತಿಳಿಯಲಾಗುತ್ತದೇ,   ಕೇತುವಿನಿಂದ  ನಿರ್ಮಾಣವಾಗುವ  ಯೋಗ ಎಲ್ಲಕ್ಕಿಂತ  ಕಡಿಮೆ  ಪ್ರಭಾವ  ಹೊಂದಿರುತ್ತದೆ,  ಲಗ್ನ,  ಚತುರ್ಥ,  ಅಷ್ಟಮ ಹಾಗೂ  ವ್ಯಯಭಾವಗಳಲ್ಲಿ  ಪಾಪಗ್ರಹದ  ಸ್ಥಿತಿ ಯಿಂದ  ನಿರ್ಮಾಣವಾಗುವ  ದುರ್ಯೋಗಗಳ  ಪ್ರಭಾವ  ಭಾವಗಳ  ಕ್ರಮಾನುಸಾರ ಕಡಿಮೆಯಿರುತ್ತದೆ , ಆದರೆ  ಈ  ಪ್ರಭಾವ  ಸಪ್ತಮ  ಭಾವದಲ್ಲಿ  ಎಲ್ಲಕ್ಕಿಂತ  ಅಧಿಕವಿರುತ್ತದೆ,  ದ್ವಾದಶ  ಭಾವದಲ್ಲಿ  ಎಲ್ಲಕ್ಕಿಂತ  ಕಡಿಮೆಇರುತ್ತದೇ.
         
            ಮದುವೆ ಎಂಬುದು ಮನುಷ್ಯನ ಜೀವನವನ್ನೇ ಬದಲಿಸುವ ಕಾಲ ಘಟ್ಟ. ಇದು ಎರಡು ಜೀವಗಳು ಸಮ್ಮಿಳಿತಗೊಳ್ಳುವ ಕಾರ್ಯ.  ಕುಜದೋಷ ಎಷ್ಟಿದೆ ಎಂದು ಇಬ್ಬರ ಜಾತಕವನ್ನು (ವಧು-ವರ) ಕೂಲಂಕಷವಾಗಿ ಪರಿಶೀಲಿಸಿ ವಿವಾಹ ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರಲು ಸಹಾಯವಾಗುತ್ತದೆ.
          ದಾಂಪತ್ಯ ಯೋಗ ನಿರ್ಧರಿಸುವಾಗ ವಧು-ವರರ ದಿನಾದಿಕೂಟಗಳನ್ನು ಸೂಕ್ತವಾಗಿ ಪರಿಶೀಲಿಸುವುದರೊಂದಿಗೆ, ಜನ್ಮ ಜಾತಕದಲ್ಲಿ ಬರುವ ಕುಜದೋಷ, ವಿಷಕನ್ಯಾಯೋಗವನ್ನು ಪರಿಶೀಲಿಸಿ ವಿವಾಹವನ್ನು ನಿರ್ಧರಿಸಬೇಕಾಗಿರುವುದರಿಂದ ಈ ಕುಜದೋಷ ನೋಡಬೇಕು.
         ಕುಜ ದೋಷಗಳು ಬರಲು ಕಾರಣ:
         ■   ಜನನ ಕಾಲದಲ್ಲಿ ಗ್ರಹಗಳು, ಉಪಗ್ರಹಗಳು, ಉಲ್ಕಶಿಲೆಗಳು, ಧೂಮಕೇತುಗಳು ಮತ್ತು ಯಾವುದಾದರೊಂದು ಕ್ಷುದ್ರವಸ್ತು ಸೂರ್ಯನಿಗೆ ಅಡ್ಡಬಂದಾಗ ಸಂಕ್ರಮಣ ಏರ್ಪಟ್ಟು ಸೂರ್ಯನಿಂದ ಹೊರಹೊಮ್ಮುವ  ಕಿರಣಗಳು ವಕ್ರಸ್ಥಿತಿಯಲ್ಲಿ ಭೂಮಿಯ  ಮೇಲೆ ಬಿದ್ದಾಗ,
          ■  ಜ್ಯೋತಿಷ್ಯಶಾಸ್ತ್ರದ ರೀತ್ಯ  ಜಾತಕರ  ಜನ್ಮಕುಂಡಲಿಯಲ್ಲಿ ಕುಜ ಮತ್ತು ಶನಿಗ್ರಹಗಳು ಅಷ್ಟಮ ಸ್ಥಾನಕ್ಕೆ ಬಂದಾಗ,
          ■  ವಾಸಿಸುವ  ಮನೆ  ಮತ್ತು ಪರಿಸರದ ನೈರ್ಮಲ್ಯ ಕೆಟ್ಟು ವಾಸ್ತು ದೋಷಗಳು ಉದ್ಭವಿಸಿದಾಗ,
         ■  ಕುಲದೇವರನ್ನು ಪೂಜಿಸುವುದು ಮರೆತಾಗ,
  
         ■  ಪೌರ್ಣಮಿ ಅಮಾವಾಸ್ಯೆ ಮತ್ತು ಗ್ರಹಣ ಕಾಲದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮ ಸಮಯದಲ್ಲಿ ಜನಿಸಿದವರು ಕುಜ ದೋಷಕ್ಕೆ ತುತ್ತಾಗುತ್ತಾರೆ. 
ಕುಜದೋಷ  ಪರಿಶೀಲಿಸುವುದು ಮುಖ್ಯವಾಗಿ
          ■ ಮೊದಲನೆಯದಾಗಿ ಜನ್ಮ ಜಾತಕದಲ್ಲಿ ಬರುವ ಕುಜದೋಷ
          ■  ಎರಡನೆಯದಾಗಿ ವಿವಾಹ ಸಮಯದ ಲಗ್ನಕುಂಡಲಿಯಲ್ಲಿ ದೋಷಯುತ ಮಂಗಳನಿರದಂತೆ ಎಚ್ಚರವಹಿಸಬೇಕು.
          ■  ಮೂರನೆಯದಾಗಿ ಸ್ತ್ರೀಯ ಪ್ರಥಮ ರಜೋದರ್ಶನ ಕಾಲದಲ್ಲಿ ಸ್ಪಷ್ಟ ಲಗ್ನ ಕುಂಡಲಿಯಲ್ಲಿ ಕುಜದೋಷ ಅತಿ ಮಹತ್ವದ್ದು.
         ಕುಜದೋಷದ  ಸ್ವಯಂ  ನಿವೃತ್ತಿ
        ಜನ್ಮ ಕುಂಡಲಿಯಲ್ಲಿ  ಈ  ಕೆಳಗೆ  ತಿಳಿಸಿರುವ  ಸ್ಥಿತಿಗಳು  ನಿರ್ಮಾಣವಾಗಿದ್ದರೆ  ಪ್ರಾಯಶಃ  ಕುಜದೋಷ  ಸ್ವಯಂ  ನಿವಾರಣೆಯಾಗುತ್ತದೆ.
    
       ■   ವಧೂ -  ವರರ ಕುಂಡಲಿಗಳನ್ನು  ಕೂಡಿಸಲು  ಪರಿಶೀಲಿಸುವಾಗ,  ಕುಜದೋಷವಿದ್ದು,   ಯಾರೊಬ್ಬರ  ಕುಂಡಲಿಯಲ್ಲಿ,  1,  4,  7,  8,  12  ಭಾವದಲ್ಲಿ  ಶನಿ  ಸ್ಥಿತನಿದ್ದರೆ,
      ■   ಮೇಷ   ರಾಶಿ, ಲಗ್ನದಲ್ಲಿ  ಅಥವಾ  ವೃಶ್ಚಿಕ ರಾಶಿ,  ಲಗ್ನದ  ಚತುರ್ಥ ದಲ್ಲಿ,  ಅಥವಾ  ಮಕರ ರಾಶಿ,  ಲಗ್ನದ  ಸಪ್ತಮದಲ್ಲಿ  ಅಥವಾ  ಕಟಕ  ರಾಶಿ,  ಲಗ್ನದ ಅಷ್ಟಮದಲ್ಲಿ  ಅಥವಾ ಧನಸ್ಸು  ರಾಶಿಯ  ದ್ವಾದಶ  ಭಾವದಲ್ಲಿದ್ದರೆ,
      ■   ದ್ವಿತೀಯ ಭಾವದಲ್ಲಿ  ಚಂದ್ರ -  ಶುಕ್ರರ  ಯುತಿಯಿದ್ದರೆ,  ಕೇಂದ್ರದಲ್ಲಿ  ಶಶಿಮಂಗಳ ಯೋಗವಿದ್ದರೆ,   ಗುರು - ಕುಜರ  ಯುತಿಯಿದ್ದರೆ,  ಅಥವಾ  ಕುಜನ ಮೇಲೆ  ಗುರುವಿನ  ಪೂರ್ಣ ದೃಷ್ಟಿ ಇದ್ದರೆ,
       ■  ಗುರು  ಅಥವಾ  ಶುಕ್ರನ  ರಾಶಿಯು  ಅಷ್ಟಮ ಭಾವವಾಗಿದ್ದು, ಸಪ್ತಮಾಧಿಪತಿ  ಬಲಿಷ್ಠನಾಗಿ  ಕೇಂದ್ರ  ಅಥವಾ .ತ್ರಿಕೋಣದಲ್ಲುದ್ದರೆ,
       ■  ಸಪ್ತಮ ಭಾವಾಧಿಪತಿ ಅಥವಾ  ಶುಕ್ರ  ಬಲಿಷ್ಠರಾಗಿ  ಸಪ್ತಮ ಭಾವದಲ್ಲಿ  ಅಥವಾ  ಸಪ್ತಮಕ್ಕೆ  ದೃಷ್ಠಿ ಇದ್ದರೆ,
        ■   ದೋಷ ಕಾರಕನಾದ  ಕುಜ  ಸ್ವಕ್ಷೇತ್ರ,  ಉಚ್ಚಕ್ಷೇತ್ರ,  ಅಥವಾ  ಮೂಲತ್ರಿಕೋನ ದಲ್ಲಿ ಸ್ಥಿತನಿದ್ದರೆ  ಕುಜದೋಷ  ಸ್ವಯಂ ದೂರಾಗುತ್ತದೆ.
        
         ■  ಕಟಕ ಮತ್ತು ಸಿಂಹ ಲಗ್ನದವರಿಗೆ ಕುಜದೋಷವಿಲ್ಲ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷಾ, ಸ್ವಾತಿ, ಅನುರಾಧ, ಪೂರ್ವಷಾಢಾ, ಉತ್ತರಾಷಾಢಾ, ಶ್ರವಣ, ಉತ್ತರಾಭಾದ್ರ, ರೇವತಿ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಕುಜದೋಷವಿಲ್ಲ.
         ■  ಪಂಚಮಹಾಪುರುಷ ಯೋಗದಲ್ಲಿ ರುಚಿಕಯೋಗವಿದ್ದರೆ ಕುಜದೋಷವಿಲ್ಲ.
   
         ■  ರವಿ, ಚಂದ್ರ, ಕುಜ ಉಚ್ಚರಾಶಿಗಳಲ್ಲಿದ್ದರೆ ಹಾಗೂ ಕುಜನು ಶನಿರಾಹು, ರವಿಯ ಯುತಿಯಲ್ಲಿದ್ದರೂ ಕುಜದೋಷವಿಲ್ಲ.
         ವಿವಾಹ ಸಮಯದಲ್ಲಿ ವಧು- ವರರ ಸಾಲಾವಳಿಗೆ ತೆಗೆದುಕೊಂಡಾಗ ಗಂಡಿನ ಜಾತಕದಲ್ಲಿ (ವರ) ಕುಜನ 2,5,7ನೇ ಭಾವಗಳಲ್ಲಿ ಕುಜನಿದ್ದರೆ ಬಲಿಷ್ಠ ಕುಜದೋಷ. ಗಂಡಿನ ಜಾತಕದಲ್ಲಿ ಹೆಚ್ಚು ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದರೆ ವಿವಾಹ ಮಾಡಬಹುದು. ಆದರೆ, ಗಂಡಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಹೆಚ್ಚಿನ ಕುಜದೋಷವಿದ್ದರೆ ವಿವಾಹ ಮಾಡಬಾರದು.
         ಈ ಕುಜದೋಷ ಉಂಟಾಗುವುದಕ್ಕೂ ಸಮಯವುಂಟು. ಕುಜ ಬಲಿಷ್ಠನಿದ್ದರೆ ಅಥವಾ ಮಾರಕನಾಗಿದ್ದರೆ 28ನೇ ವಯಸ್ಸಿನಿಂದ 32ನೇ ವರ್ಷದವರೆಗೆ ತನ್ನ ಇಷ್ಟ- ಅನಿಷ್ಟಾದಿ ಫಲಗಳನ್ನು ಕೊಡುವನು. ಅಂದಿನ ಗೋಚಾರ ಸ್ಥಾನ ಮತ್ತು ಅಷ್ಟಕವರ್ಗ ಬಿಂದುಗಳನ್ನು ಗಮನಿಸಬೇಕು. ಇದರೊಂದಿಗೆ ದಶಾಕಾಲ ಬಹಳ ಮಹತ್ವದಾಗಿದೆ. ಈ ಅನಿಷ್ಟ ಫಲಗಳು ದಶಾಕಾಲದಲ್ಲೇ ಹೆಚ್ಚಾಗಿ ನೀಡುತ್ತಾನೆ. ಒಬ್ಬೊಬ್ಬರ ಜಾತಕದಲ್ಲಿ ಕುಜದಶಾಕಾಲ  ಬರದೇ ಹೋಗಬಹುದುದು. ಆಗ ಕುಜನ ಅನಿಷ್ಟ ಫಲಗಳು   ಕೂಡ  ಕಡಿಮೆಯಾಗುತ್ತದೆ.
  
ದ್ವಾದಶ ಲಗ್ನಗಳಲ್ಲಿ  ಕುಜದೋಷ  ಹಾಗೂ  ಲಾಲ್ ಕಿತಾಬ್  ರೀತ್ಯಾ  ಪರಿಹಾರೋಪಾಯಗಳು:---
          ಮೇಶಲಗ್ನ:--
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಕೆಂಪು ಬಣ್ಣದ ಕರವಸ್ತ್ರವನ್ನು ಬಳಿಯಲ್ಲಿರಿಸಿಕೊಳ್ಳಬೇಕು.
2, ತಾಮ್ರ ಅಥವಾ  ಚಿನ್ನದ  ಉಂಗುರದಲ್ಲಿ  ಹವಳವನ್ನು ಧರಿಸಬೇಕು.
3, ಮಂಗವನ್ನು  ಸಾಕಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
1,  ಸಂತಾನಹೀನ  ವ್ಯಕ್ತಿ ಯಿಂದ ಯಾವುದೇ ಉಡುಗೊರೆಗಳನ್ನು  ಪಡೆಯಬಾರದು.
2,  ದಕ್ಷಿಣ ದಿಕ್ಕಿನ ಕಡೆ  ಬಾಗಿಲಿರುವ  ಮನೆಯಲ್ಲಿ  ವಾಸಿಸಬಾರದು.
3,  ಬೆಳ್ಳಿಯ ಕಡಗವನ್ನು ಧರಿಸಬೇಕು.
ಸಪ್ತಮಸ್ಥಿತ  ಕುಜನಿಗೆ  ಪರಿಹಾರೋಪಾಯ :---
1,  ಸುಳ್ಳನ್ನಾಡಬಾರದು,  ಸುಳ್ಳು ಸಾಕ್ಷಿ  ಹೇಳಬಾರದು.
2, ಚಿನ್ನದ  ಉಂಗುರದಲ್ಲಿ  ಹವಳ ಧರಿಸಬೇಕು.
3,  ಸಹೋದರಿ  ಅಥವಾ  ಪುತ್ರಿಗೆ  ಸಿಹಿ ತಿನ್ನಿಸಬೇಕು.
ಅಷ್ಟಮಭಾವ ಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ನದಿಯ  ನೀರಿನಲ್ಲಿ ಸಕ್ಕರೆಯನ್ನು  ಪ್ರವಹಿಸಿಬೇಡಬೇಕು.
2, ಬೆಳ್ಳಿ ಉಂಗುರವನ್ನು  ಧರಿಸಬೇಕು.
3, ದಕ್ಷಿಣ ದಿಕ್ಕಿಗೆ  ಬಾಗಿಲಿರುವ ಮನೆಯಲ್ಲಿ  ವಾಸಿಸಬಾರದು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಜನರಿಗೆ  ಸಿಹಿ  ಹಂಚಬೇಕು.
2, ಮಾಂಸಾಹಾರ  ಸೇವಿಸಬಾರದು.
3, ಗಾಯತ್ರೀ ಮಂತ್ರ  ಅಥವಾ  ದುರ್ಗಾ  ಸಪ್ತಶತಿಯ  ಪಾರಾಯಣ  ಮಾಡಬೇಕು.
          ವೃಷಭಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಶುದ್ಧ  ಚಾರಿತ್ರ್ಯ ವಿರಬೇಕು.
2, ದಾನ ರೂಪದಲ್ಲಿ  ಕೊಡುವ ವಸ್ತುಗಳನ್ನು  ಸ್ವೀಕರಿಸಬಾರದು.
3, ಕೆಂಪು ಬಣ್ಣದ  ಕರವಸ್ತ್ರವನ್ನು ಬಳಿಯಲ್ಲಿರಿಸಿಕೊಳ್ಳಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ
1, ಬೆಳ್ಳಿಯ  ಕಡಗದಲ್ಲಿ ತಾಮ್ರದ ಮೊಳೆ ಯನ್ನು ಸೇರಿಸಿ ಧರಿಸಬೇಕು.
2,  ಜೇನುತುಪ್ಪ ಹಾಗೂ  ಸಿಂಧೂರವನ್ನು  ನದಿಯಲ್ಲಿ ಪ್ರವಹಿಸಿಬೇಡಬೇಕು.
3, ಸಹೋದರಿ  ಅಥವಾ  ಪುತ್ರಿಯ  ಸೇವೆ ಮಾಡಬೇಕು.
ಸಪ್ತಮಸ್ಥಿತ  ಕುಜನಿಗೆ  ಪರಿಹಾರೋಪಾಯ :---
1,  ಶುದ್ಧ  ಚಾರಿತ್ರ್ಯ ವಿರಬೇಕು.
2,  ಪ್ರತಿದಿನ  ಸುಂದರಕಾಂಡ  ಪಠಿಸಬೇಕು.
3,  ಹವಳದ  ಉಂಗುರ  ಧರಿಸಬೇಕು.
ಅಷ್ಟಮಭಾವ ಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ದಕ್ಷಿಣದ ದ್ವಾರದ ಮನೆಯಲ್ಲಿ  ವಾಸಿಸಬಾರದು.
2,  ಮಾಂಸಾಹಾರ  ಮತ್ತು  ಮದ್ಯಪಾನ  ಸೇವಿಸಲೇ ಬಾರದು.
3,  ವಿಧವೆಯರಿಗೆ  ಗೌರವಿಸಿ  ಪಾಲನೆ , ಪೋಷಣೆ  ಮಾಡಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1, ಸಿಹಿ ಭೋಜನವನ್ನು  ಅನ್ಯರಿಗೂ  ಮಾಡಿಸಿ  ತಾನೂ  ಸೇವಿಸಬೇಕು.
2,  ಹಿರಿಯ ಸಹೋದರನ ಕೈಯಿಂದ  ಹಾಲು  ಸೇವಿಸಬೇಕು.
3,  ಹವಳದ  ಉಂಗುರವನ್ನು  ಧರಿಸಬೇಕು.
          ಮಿಥುನಲಗ್ನ :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಹನುಮಂತ  ದೇವರಿಗೆ  ನೈವೇದ್ಯವನ್ನು  ಸಮರ್ಪಿಸಿ ಪ್ರಸಾದವನ್ನು  ಸ್ವೀಕರಿಸಬೇಕು.
2,  ಬೆಳ್ಳಿಯ  ಬಳೆಗೆ  ಕೆಂಪು ವರ್ಣವನ್ನು  ಲೇಪಿಸಿ ,  ಸ್ತ್ರೀಯರು  ಧರಿಸಬೇಕು.
3,  ದಾನವಾಗಿ  ಯಾವುದೇ  ವಸ್ತುವನ್ನು  ಪಡೆಯಬಾರದು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ
1,  ಯಾರನ್ನೂ  ಅವಾಚ್ಯ ಶಬ್ದಗಳಿಂದ  ನಿಂದಿಸಬಾರದು.
2,  ಸಂತಾನಹೀನರು, ಒಕ್ಕಣ್ಣರು, ಕೆಡಕನ್ನುಂಟುಮಾಡುವ  ವ್ಯಕ್ತಿಗಳಿಂದ  ದೂರವಿರಬೇಕು.
3,  ಬೆಳ್ಳಿಯ  ಕಡಗವನ್ನು  ಧರಿಸಬೇಕು.
ಸಪ್ತಮಸ್ಥಿತ  ಕುಜನಿಗೆ  ಪರಿಹಾರೋಪಾಯ :---
1,  ಸಹೋದರನ  ಮಕ್ಕಳ  ಪಾಲನೆ   (ಸೇವೆ ) ಮಾಡಬೇಕು.
2,  ಸಹೋದರಿ  ಅಥವಾ  ಪುತ್ರಿಗೆ  ಪ್ರತಿನಿತ್ಯ  ಸಿಹಿಯನ್ನು  ತಿನ್ನಿಸಬೇಕು.
3, ಇಟ್ಟಿಗೆಯಿಂದ  ಹಸಿಗೋಡೆ ನಿರ್ಮಿಸಿ,  ಮತ್ತೆ  ಕೆಡವಬೇಕು.
ಅಷ್ಟಮ ಸ್ಥಿತ ಕುಜನಿಗೆ  ಪರಿಹಾರೋಪಾಯ:---
1,  ದಕ್ಷಿಣದ ದ್ವಾರದ  ಮನೆಯಲ್ಲಿ  ವಾಸಮಾಡಬಾರದು.
2,  ಯಾರನ್ನೂ  ಬೈಯಬಾರದು.
3, ವಿಧವಾ ಸ್ತ್ರೀಯರ ಸೇವೆ  ಮಾಡಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1, ಬೆಳಿಗ್ಗೆ  ಎದ್ದ ತಕ್ಷಣ ಜೇನುತುಪ್ಪದಿಂದ  ಬಾಯಿ  ಸಿಹಿ ಮಾಡಿಕೊಳ್ಳಬೇಕು.
2,  ದೇವಸ್ಥಾನಗಳಲ್ಲಿ  ಸಿಹಿ  ಹಂಚಬೇಕು.
3,  ಸಂತೋಷದ  ಸಂದರ್ಭಗಳಲ್ಲಿ  ಸಿಹಿ  ಹಂಚಬೇಕು.
          ಕಟಕಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಮನೆ  ಹಾಗೂ  ಕಾರ್ಯಾಲಯದಲ್ಲಿ  ಸೇವಕರನ್ನು  ನೇಮಿಸಿಕೊಳ್ಳಬೇಕು.
2,  ಪ್ರತಿನಿತ್ಯ  ಹನುಮಾನ್  ಚಾಲೀಸ  ಪಠಿಸಬೇಕು.
3,  ಹವಳವನ್ನು  ತಾಮ್ರ ಅಥವಾ  ಚಿನ್ನದ  ಉಂಗುರದಲ್ಲಿ  ಧರಿಸಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಂತಾನ  ಹೀನ  ವ್ಯಕ್ತಿ ಗಳಿಂದ  ಯಾವುದೇ  ದಾನವನ್ನು  ಪಡೆಯಬಾರದು.
2,  ಸಹೋದರಿ  ಅಥವಾ  ಪುತ್ರಿಗೆ  ಪ್ರತಿನಿತ್ಯ  ಸಿಹಿಯನ್ನು  ತಿನ್ನಿಸಬೇಕು.
3, ಇಟ್ಟಿಗೆಯಿಂದ  ಹಸಿಗೋಡೆ ನಿರ್ಮಿಸಿ,  ಮತ್ತೆ  ಕೆಡವಬೇಕು.
ಸಪ್ತಮಸ್ಥಿತ  ಕುಜನಿಗೆ  ಪರಿಹಾರೋಪಾಯ :---
1,  ಬೆಳ್ಳಿ  ಬಳೇಯನ್ನು ಕೆಂಪು  ಬಣ್ಣದಿಂದ  ಅಲಂಕರಿಸಿ  ಸ್ತ್ರೀಯರು  ಧರಿಸಬೇಕು.
2,  ಉತ್ತಮ  ಚಾರಿತ್ರ್ಯ ವಂತರಾಗಿರಬೇಕು.
3,  ಸ್ರ್ತೀ  ಸಂಬಂಧಿಗಳ  ಮನೆಗೆ  ಹೋಗುವಾಗ  ಸಿಹಿ  ತಿನಿಸನ್ನು  ತೆಗೆದುಕೊಂಡು  ಹೋಗಬೇಕು.
ಅಷ್ಟಮ ಸ್ಥಿತ ಕುಜನಿಗೆ  ಪರಿಹಾರೋಪಾಯ:---
1,  ನದಿಯ  ನೀರಿನಲ್ಲಿ ಸಕ್ಕರೆಯನ್ನು  ಪ್ರವಹಿಸಿಬೇಡಬೇಕು.
2, ಬೆಳ್ಳಿ ಉಂಗುರವನ್ನು  ಧರಿಸಬೇಕು.
3, ದಕ್ಷಿಣ ದಿಕ್ಕಿಗೆ  ಬಾಗಿಲಿರುವ ಮನೆಯಲ್ಲಿ  ವಾಸಿಸಬಾರದು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ತುಕ್ಕು  ಹಿಡಿದು  ಹಾಳಾದ  ಆಯುಧಗಳನ್ನು  ಮನೆಯಲ್ಲಿ  ಇಟ್ಟುಕೊಳ್ಳಬಾರದು.
2,  ಅತಿಥಿಗಳ  ಭೋಜನಾನಂತರ  ಅವರಿಗೆ ಸೋಂಪು,  ಕಲ್ಲುಸಕ್ಕರೆಯನ್ನು  ಕೊಡಬೇಕು.
3,  ಸಿಹಿಯನ್ನು  ಹಂಚುವುದು  ತುಂಬಿಕ್ಆ  ಶುಭದಾಯಕ.
          ಸಿಂಹಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಆನೆಯ  ದಂತದಿಂದ  ತಯಾರಾದ  ಯಾವುದೇ  ವಸ್ತುಗಳನ್ನು  ಮನೆಯಲ್ಲಿಡಬಾರದು.
2,  ಯಾವುದೇ  ವಸ್ತುಗಳನ್ನು  ದಾನವಾಗಿ  ಪಡೆಯಬಾರದು.
3,  ಶುದ್ಧ  ಚಾರಿತ್ರ್ಯ ವಿರಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ತಾಯಿ  ಅಥವಾ  ತಾಯಿ  ಸಮನಾದ  ವ್ಯಕ್ತಿಯ  ಸೇವೆ  ಮಾಡಬೇಕು.
2,  ಸಂತಾನವಿಲ್ಲದವರಿಂದ   ಹಣವಾಗಲಿ ,  ಭೂಮಿಯನ್ನಾಗಲೀ  ಪಡೆಯಬಾರದು.
3,  ದಕ್ಷಿಣದ ಬಾಗಿಲಿನ  ಮನೆಯಲ್ಲಿ  ವಾಸಮಾಡಬಾರದು.
ಸಪ್ತಮಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,  ಶುಧ್ಹ ಚಾರಿತ್ರ್ಯವಿರಬೇಕು.
2,  ಮಾಂಸಾಹಾರ  ಹಾಗೂ ಮಧ್ಯಪಾನಗಳಿಂದ .ದೂರವಿರಬೇಕು.
3, ತಾಮ್ರ ಅಥವಾ  ಬಂಗಾರದಲ್ಲಿ  ಹವಳವನ್ನು  ಧರಿಸಬೇಕು.
ಅಷ್ಟಮಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,  ಯಾರಿಗೂ  ಬೈಯಬಾರದು ಹಾಗೂ ಕೆಟ್ಟದ್ದನ್ನು  ಬಯಸಬಾರದು.
2,  ವಿಧವೆಯರನ್ನು ಗೌರವಿಸಿ,  ಪಾಲನೆ  ಪೋಷಣೆ,  ಸೇವೆ  ಮಾಡಬೇಕು.
3,  ಬೆಳ್ಳಿಯ ಕಡಗದಲ್ಲಿ  ತಾಮ್ರದ ಮೊಳೆಯನ್ನು ಕೂಡಿಸಿ  ಧರಿಸಬೇಕು.
ದ್ವಾದಶಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,  ಸಿಹಿತಿನಿಸು ಹಾಗೂ ಸಿಹಿ ಭೋಜನವನ್ನು ಜನರಿಗೆ  ಬಡಿಸಬೇಕು
2,  ಗಾಯತ್ರೀ ಮಂತ್ರಜಪ ಹಾಗೂ ದುರ್ಗಾಮಾತೆಯ ಸ್ತೋತ್ರವನ್ನು ಪಠಿಸಬೇಕು.
3,  ಹನುಮಂತ  ದೇವರಿಗೆ  ನೈವೇದ್ಯ ಅರ್ಪಿಸಿ ಪ್ರಸಾದವನ್ನು ಎಲ್ಲರಿಗೂ  ಹಂಚಬೇಕು.
          ಕನ್ಯಾಲಗ್ನ  ;--
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಆನೆಯ ದಂತದ ಯಾವುದೇ ವಸ್ತುಗಳನ್ನು  ಮನೆಯಲ್ಲಿಡಬಾರದು.
2,  ಹನುಮಾನ್  ಚಾಲೀಸಾ ವನ್ನು ಪ್ರತಿನಿತ್ಯ ತಪ್ಪದೆ ಪಠಿಸಬೇಕು.
3,  ಅಸತ್ಯ ನುಡಿಯಬಾರದು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1, ನದಿಯ ಜಲದಲ್ಲಿ  ಸಿಂಧೂರ  ಹಾಗೂ  ಜೇನುತುಪ್ಪವನ್ನು  ಪ್ರವಹಿಸಿಬಿಡಬೇಕು.
2,  ಸಂತಾನ ಹೀನ    ವ್ಯಕ್ತಿಯಿಂದ ಯಾವುದೇ  ದಾನವನ್ನು   ಸ್ನೇಕರಿಸIಬಾರದು
3,  ದಕ್ಷಿಣ ದಿಶೆಯ ಮನೆಯಲ್ಲಿ   ವಾಸ
ಮಾಡ ಬಾರದು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಶುದ್ಧ  ಚಾರಿತ್ರ್ಯವಿರಬೇಕು.
2,  ಪುತ್ರಿ  ಅಥವಾ  ಸಹೋದರಿಗೆ  ಸಿಹಿಯನ್ನು ತಿನ್ನಿಸಬೇಕು.
3,  ಬೆಳ್ಳಿಯ ಬಳೆಗಳನ್ನು ಕೆಂಪುವರ್ಣದಿಂದ  ಅಲಂಕರಿಸಿ ಸ್ತ್ರೀಯು  ಧರಿಸಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ದಕ್ಷಿಣದ ದಿಕ್ಕಿನ ಮನೆಯಲ್ಲಿ  ವಾಸಿಸಬಾರದು.
2,  ಯಾರಿಗೂ  ಬೈಯಬಾರದು ಹಾಗೂ ಕೆಟ್ಟದ್ದನ್ನು  ಬಯಸಬಾರದು.
3,  ವಿಧವೆಯರ  ಸೇವೆ ಮಾಡಿ ಅವರ  ಆಶೀರ್ವಾದ ಪಡೆಯಬೇಕು.
ದ್ವಾದಶಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,   ಮನೆ ಹಾಗೂ ಕಾರ್ಯ ಸ್ಥಾನದಲ್ಲಿ  ಸೇವಕರನ್ನು ನೇಮಿಸಿಕೊಳ್ಳಬೇಕು.
2,  ಆಂಜನೇಯ ದೇವರಿಗೆ ನೈವೇದ್ಯವನ್ನು  ಸಮರ್ಪಿಸಿ  ಎಲ್ಲರಿಗೂ  ವಿತರಿಸಬೇಕು.
3,  ಹಿರಿಯ  ಸೋದರ ನ ಕೈಯಿಂದ  ಹಾಲನ್ನು  ಕುಡಿಯಬೇಕು.
          ತುಲಾಲಗ್ನ. :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ದಾನದ ರೂಪದಲ್ಲಿ ಆಗಲೀ ,  ಉಚಿತವಾಗಿ ಆಗಲೀ ಯಾರಿಂದಲೂ  ಯಾವುದೇ ವಸ್ತುವನ್ನು  ಸ್ವೀಕರಿಸಬಾರದು.
2,  ಸುಳ್ಳನ್ನು ಹೇಳುವುದು  ಹಾಗೂ  ಸುಳ್ಳು ಸಾಕ್ಷಿ ಹೇಳುವುದಾಗಲೀ  ಮಾಡಬಾರದು.
3,  ಆನೆಯ ದಂತದಿಂದ ಮಾಡಿದ ಯಾವುದೇ  ವಸ್ತುಗಳನ್ನು  ಮನೆಯಲ್ಲಿಡಬಾರದು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
1,  ತಾಯಿ  ಅಥವಾ  ತಾಯಿ  ಸಮಾನಳಾದ  ಸ್ತ್ರೀಯರ  ಸೇವೇ  ಮಾಡಬೇಕು.
2,  ಸಂತಾನ ಹೀನ  ವ್ಯಕ್ತಿಯಿಂದ  ಭೂಮಿ  -  ಸಂಪತ್ತನ್ನು  ಪಡೆಯಬಾರದು.
3,  ನದಿಯ ಜಲದಲ್ಲಿ  ಸಿಂಧೂರ  ಹಾಗೂ  ಜೇನುತುಪ್ಪವನ್ನು  ಪ್ರವಹಿಸಿಬೇಡಬೇಕು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಮಾಂಸಾಹಾರ,  ಹಾಗೂ  ಮದ್ಯಪಾನವನ್ನು  ವ್ಯರ್ಜಿಸಬೇಕು.
2,  ಪ್ರತಿದಿನ  ಹನುಮಾನ್  ಚಾಲೀಸಾ ಪಠಿಸಬೇಕು.
3, ವ್ಯವಹಾರಗಳು  ಹಾಗೂ  ಚಾರಿತ್ರ್ಯವನ್ನು  ಪವಿತ್ರವಾಗಿಟ್ಟುಕೊಳ್ಳಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಂತಾನಹೀನ,  ಒಕ್ಕಣ್ಣಿನ  ಹಾಗೂ  ಕ್ರೂರ ವ್ಯಕ್ತಿ ಗಳಿಂದ  ದೂರವಿರಬೇಕು.
2,   ಸಿಹಿ ತಂದೂರಿ ರೊಟ್ಟಿಯನ್ನು  ನಾಯಿಗೆ  ತಿನ್ನಿಸಬೇಕು.
3,  ವಿಧವೆಯರ ಸೇವೆ ಮಾಡಿ  ಆಶೀರ್ವಾದ ಪಡೆಯಬೇಕು.
ದ್ವಾದಶಭಾವ ಸ್ಥಿತ ಕುಜನಿಗೆ ಪರಿಹಾರೋಪಾಯ :--
1,  ಹಾಲಿನಿಂದ ಮಾಡಿದ ಹಲ್ವಾವನ್ನು  ಸೇವಿಸಬೇಕು ಹಾಗೂ  ಅನ್ಯರಿಗೂ  ತಿನ್ನಿಸಬೇಕು.
2,  ತುಕ್ಕುಹಿಡಿದು   ಹಾಳಾದ  ಆಯುಧಗಳನ್ನು  ಮನೆಯಲ್ಲಿ ಇಡಬಾರದು.
3,  ಗಾಯತ್ರೀ ಮಾತೇ ಹಾಗೂ  ದುರ್ಗಾಮಾತೆಯ  ಸ್ತೋತ್ರವನ್ನು ಪಠಿಸಬೇಕು.
          ವೃಶ್ಚಿಕ ಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಕೆಂಪುವರ್ಣದಿಂದ ಕೂಡಿದ ಕರವಸ್ತ್ರವನ್ನು  ಬಳಿಯಲ್ಲಿ ಇಟ್ಟುಕೊಳ್ಳಬೇಕು.
2,  ಬೆಳ್ಳಿಯ  ಉಂಗುರವನ್ನು  ಧರಿಸಬೇಕು.
3,  ಯಾರಿಂದಲೂ  ದಾನವನ್ನು  ಪಡೆಯಬಾರದು
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
1,  ಸಂತಾನ ಹೀನ  ವ್ಯಕ್ತಿಗಳ  ಯಾವುದೇ ರೀತಿಯ  ಸಂಪತ್ತನ್ನು  ಖರೀದಿಸಬಾರದು.
2,  ದಕ್ಷಿಣದ ದಿಕ್ಕಿನ  ಬಾಗಿಲಿನ ಮನೆಯಲ್ಲಿ  ವಾಸಮಾಡಬಾರದು.
3,  ಸುಳ್ಳನ್ನು  ನುಡಿಯುವುದಾಗಲೀ  ಬೈಯುವುದಾಗಲೀ  ಮಾಡಬಾರದು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಹೋದರನ  ಮಕ್ಕಳ  ಪಾಲನೆ  ಮಾಡಬೇಕು.
2,  ಹಸಿ ಇಟ್ಟಿಗೆಯಿಂದ  ಗೋಡೆಯನ್ನು  ನಿರ್ಮಿಸಿ  ಕೆಡವಬೇಕು.
3,  ಶುದ್ಧ  ಚಾರಿತ್ರ್ಯವಿರಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಿಹಿ ತಂದೂರಿ ರೊಟ್ಟಿಯನ್ನು  ನಾಯಿಗೆ  ತಿನ್ನಿಸಬೇಕು.
2,  ಬೆಳ್ಳಿಯ ಕಡಗದಲ್ಲಿ ತಾಮ್ರದ  ಮೊಳೆಯನ್ನು ಕೂಡಿಸಿ  ಧರಿಸಬೇಕು.
3,  ಸುಳ್ಳನ್ನು  ನುಡಿಯುವುದಾಗಲೀ  ಬೈಯುವುದಾಗಲೀ  ಮಾಡಬಾರದು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1, ಬೆಳಿಗ್ಗೆ  ಎದ್ದ ತಕ್ಷಣ ಜೇನುತುಪ್ಪದಿಂದ  ಬಾಯಿ  ಸಿಹಿ ಮಾಡಿಕೊಳ್ಳಬೇಕು.
2,  ದೇವಸ್ಥಾನಗಳಲ್ಲಿ  ಸಿಹಿ  ಹಂಚಬೇಕು.
3,  ಸಂತೋಷದ  ಸಂದರ್ಭಗಳಲ್ಲಿ  ಸಿಹಿ  ಹಂಚಬೇಕು.
          ಧನುರ್ ಲಗ್ನ. :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ಆನೆಯ  ದಂತದಿಂದ  ತಯಾರಾದ  ಯಾವುದೇ  ವಸ್ತುಗಳನ್ನು  ಮನೆಯಲ್ಲಿಡಬಾರದು.
2,  ಕೆಂಪುವರ್ಣದಿಂದ ಕೂಡಿದ ಕರವಸ್ತ್ರವನ್ನು  ಬಳಿಯಲ್ಲಿ ಇಟ್ಟುಕೊಳ್ಳಬೇಕು.
3,   ಪ್ರತಿದಿನ  ಹನುಮಾನ್  ಚಾಲೀಸಾ ಪಠಿಸಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
೧,  ಮಂಗನನ್ನು  ಸಾಕಿ  ಅದರ  ಸೇವೆ  ಮಾಡಬೇಕು.
2,  ಮುತ್ತುಗದ ಗಿಡವನ್ನು ಮಕ್ನೆಯಲ್ಲಿ  ಬೆಳೆಸಬಾರದು.
3,  ತಾಯಿ  ಅಥವಾ  ತಾಯಿ  ಸಮಾನಳಾದ  ಸ್ತ್ರೀಯರ  ಸೇವೇ  ಮಾಡಬೇಕು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಮಾಂಸಾಹಾರ,  ಹಾಗೂ  ಮದ್ಯಪಾನವನ್ನು  ವ್ಯರ್ಜಿಸಬೇಕು.
2,  ಹಸಿ ಇಟ್ಟಿಗೆಯಿಂದ  ಗೋಡೆಯನ್ನು  ನಿರ್ಮಿಸಿ  ಕೆಡವಬೇಕು.
3,  ಅತ್ತೆ,  ಚಿಕ್ಕಮ್ಮ,  ನಾದಿನಿ  ಇವರಮನೆಗೆ  ಹೋಗುವಾಗ  ಸಿಹಿ  ತಿಂಡಿ ತೆಗೆದುಕೊಂಡು ಹೋಗಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಂತಾನ ಹೀನ  ವ್ಯಕ್ತಿ ಯೊಡನೆ  ಸಂಬಂದ ಇರಿಸಿಕೊಳ್ಳಬಾರದು.
2,  ಬೆಳ್ಳಿಯ  ಊಂಗುರವನ್ನು ಧರಿಸಬೇಕು.
3,  ಗಾಯತ್ರಿ. ಮಂತ್ರ ಜಪ  ಮಾಡಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಮಾಂಸಾಹಾರ,  ಹಾಗೂ  ಮದ್ಯಪಾನವನ್ನು  ವ್ಯರ್ಜಿಸಬೇಕು.
2,  ತುಕ್ಕುಹಿಡಿದು   ಹಾಳಾದ  ಆಯುಧಗಳನ್ನು  ಮನೆಯಲ್ಲಿ ಇಡಬಾರದು.
3,  ಪ್ರಾತಃಕಾಲದಲ್ಲಿ  ಎದ್ದ ತಕ್ಷಣ ಜೇನುತುಪ್ಪ ದಿಂದ  ಬಾಯಿಯನ್ನು  ಸಿಹಿ ಗೊಳಿಸಬೇಕು.
          ಮಕರಲಗ್ನ  :---
ಲಗ್ನಸ್ಥಿತ  ಕುಜನಿಗೆ  ಪರಿಹಾರೋಪಾಯ  :--
1,  ತಾಮ್ರ ಅಥವ  ಚಿನ್ನದ ಉಂಗುರದಲ್ಲಿ ಹವಳವನ್ನು ಧರಿಸಬೇಕು.
2, ದಾನ ರೂಪದಲ್ಲಿ  ಕೊಡುವ ವಸ್ತುಗಳನ್ನು  ಸ್ವೀಕರಿಸಬಾರದು.
3,  ತಾಯಿ  ಅಥವಾ  ತಾಯಿ  ಸಮಾನಳಾದ  ಸ್ತ್ರೀಯರ  ಸೇವೇ  ಮಾಡಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :-
1,  ಮಂಗವನ್ನು  ಸಾಕಬೇಕು, ಅದರ ಸೇವೆ ಮಾಡಬೇಕು.
2, ದಕ್ಷಿಣದ ಬಾಗಿಲಿನ ಮನೆಯಲ್ಲಿ  ವಾಸಮಾಡಬಾರದು.
3,  ಸದಾ  ಸತ್ಯವನ್ನೇ  ನುಡಿಯಬೇಕು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಮದ್ಯಪಾನ,  ಮಾಂಸಾಹಾರ ಸೇವನೆ  ಮಾಡಬಾರದು,
2,  ಸಹೋದರಿ ಅಥವಾ  ಪುತ್ರಿಗೆ  ನಿತ್ಯವೂ  ಸಿಹಿ ತಿನ್ನಿಸಬೇಕು.
3,  ಮನೆಗೆ  ಬಂದ  ಅತಿಥಿಗಳಿಗೆ  ಸಿಹಿ ಭೋಜನ ಮಾಡಿಸಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಂತಾನಹೀನ,  ಒಕ್ಕಣ್ಣಿನ  ಹಾಗೂ  ಕ್ರೂರ ವ್ಯಕ್ತಿ ಗಳಿಂದ  ದೂರವಿರಬೇಕು.
2, ದಕ್ಷಿಣದ ಬಾಗಿಲಿನ ಮನೆಯಲ್ಲಿ  ವಾಸಮಾಡಬಾರದು
3,  ವಿಧವೆಯರ ಸೇವೆ ಮಾಡಿ  ಆಶೀರ್ವಾದ ಪಡೆಯಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಪ್ರತಿನಿತ್ಯ  ಹನುಮಾನ್  ಚಾಲೀಸಾ ಪಠಿಸಬೇಕು.
2,  ಹಾಲಿನಿಂದ ಮಾಡಿದ ಹಲ್ವಾವನ್ನು  ಬೆರೆಯವರಿಗೂ ತಿನಿಸಿ  ತಾನೂ  ತಿನ್ನಬೇಕು.
3,  ತುಕ್ಕು ಹಿಡಿದ ಆಯುಧಗಳನ್ನು ಮನೆಯಲ್ಲಿ ಇರಿಸಬಾರದು.
           ಕುಂಭ  ಲಗ್ನ  :----
ಲಗ್ನ ಸ್ಥಿತ ಕುಜನಿಗೆ  ಪರಿಹಾರೋಪಾಯ  :---
1, ಆನೆಯ ದಂತದಿಂದ  ಮಾಡಿದ  ಯಾವುದೇ  ವಸ್ತುಗಳನ್ನು  ಮನೆಯಲ್ಲಿಡಬಾರದು.
2,  ಯಾರಿಂದಲೂ  ಯಾವುದೇ ಪದಾರ್ಥಗಳನ್ನು  ಉಚಿತವಾಗಿ  ಪಡೆಯಬಾರದು.
3,  ಆಂಜನೆಯನಿಗೆ ನೈವೇದ್ಯವನ್ನು ಮಾಡಿ  ಪ್ರಸಾದವನ್ನು  ಎಲ್ಲರಿಗೂ ಹಂಚಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :
1,. ನದಿಯಲ್ಲಿ ಜೇನುತುಪ್ಪ ಹಾಗೂ  ಸಿಂಧೂರ ವನ್ನು  ಪ್ರವಹಿಸಿ ಬಿಡಬೇಕು. 
2, ತಾಯಿಯ ಸೇವೆಯನ್ನು ಮಾಡಬೇಕು  ಅಥವಾ ಮಂಗವನ್ನು  ಸಾಕ ಬೇಕು.
3,  ಬೆಳ್ಳಿಯ ಕಡಗದಲ್ಲಿ  ತಾಮ್ರದ  ಮೊಳೆಯನ್ನು
ಕೂಡಿಸಿ  ಧರಿಸಬೇಕು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸಹೋದರನ  ಸಂತಾನದ ಪಾಲನೆ ಮಾಡಬೇಕು.
2,  ಅತಿಥಿಗಳಿಗೆ  ಸಿಹಿಭೋಜನ ಮಾಡಿಸಬೇಕು.
3, ಶುದ್ಧ ನಡತೆಯಿರಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಸತ್ಯವನ್ನೇ ನುಡಿಯಬೇಕು,  ವಚನಬದ್ಧ ರಾಗಿರಬೇಕು.
2,  ವಿಧವೆಯರ ಸೇವೆ ಮಾಡಿ  ಆಶೀರ್ವಾದ ಪಡೆಯಬೇಕು.
3,  ದಕ್ಷಿಣದ ದಿಕ್ಕಿನ ಮನೆಯ ವಾಸ  ಸಲ್ಲದು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಬೆಳ್ಳಿಯ ಬಳೆಗಳನ್ನು  ಕೆಂಪುವರ್ಣದಿಂದ ಅಲಂಕರಿಸಿ,  ಸ್ತ್ರೀಯರು. ಧರಿಸಬೇಕು.
2,   ಆಂಜನೇಯ ನಿಗೆ ನೈವೇದ್ಯವನ್ನು ಸಮರ್ಪಿಸಿ,  ಪ್ರಸಾದವನ್ನು  ಹಂಚಬೇಕು.
3,   ತುಕ್ಕುಹಿಡುದ  ವಸ್ತುಗಳನ್ನು ಮನೆಯಲ್ಲಿ ಇಡಬಾರದು.
          ಮೀನ ಲಗ್ನ :---
ಲಗ್ನ ಸ್ಥಿತ ಕುಜನಿಗೆ  ಪರಿಹಾರೋಪಾಯ  :---
1,  ಕೆಂಪು  ಬಣ್ಣದ  ಕರವಸ್ತ್ರವನ್ನು  ಸದಾ  ಬಳಿಯಲ್ಲಿ ಇರಿಸಿಕೊಳ್ಲ ಬೇಕು.
2,  ಯಾರಿಂದಲೂ  ಯಾವುದೇ ಪದಾರ್ಥಗಳನ್ನು  ಉಚಿತವಾಗಿ  ಪಡೆಯಬಾರದು.
3,  ಮನೆ ಮತ್ತು  ಕಾರ್ಯಾಲಯದಲ್ಲಿ   ಸೇವಕರನ್ನು  ನೇಮಿಸಿಕೊಳ್ಳಬೇಕು.
ಚತುರ್ಥ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :
1,  ಮಂಗವನ್ನು  ಸಾಕಬೇಕು ಹಾಗೂ  ಅದರ  ಸೇವೆ ಮಾಡಬೇಕು.
2,  ತಾಯಿಯ ಸೇವೆ ಮಾಡಬೇಕು.
3,  ಯಾರನ್ನೂ  ಬೈಯಬಾರದು.
ಸಪ್ತಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಮದ್ಯಪಾನ.. ಮಾಂಸಾಹಾರ  ಸೇವನೆ  ಮಾಡಲೇಬಾರದು.
2,  ಹಸಿ ಇಟ್ಟಿಗೆಯಿಂದ  ಗೋಡೆಯನ್ನು  ಕಟ್ಟಿ  ಕೆಡವಬೇಕು.
3,  ಬೆಳ್ಳಿಯ ಬಳೆಗಳನ್ನು  ಸ್ತ್ರೀಯರು  ಧರಿಸಬೇಕು.
ಅಷ್ಟಮ ಸ್ಥಾನಸ್ಥಿತ ಕುಜನಿಗೆ  ಪರಿಹಾರೋಪಾಯ :--
1,  ಬಂಗಾರದ ಉಂಗುರದಲ್ಲಿ  ಹವಳವನ್ನು  ಧರಿಸಬೇಕು.
2,  ಸಿಹಿ ತಂದೂರಿ  ರೊಟ್ಟಿಯನ್ನು  ನಾಯಿಗೆ  ತಿನ್ನಿಸಬೇಕು.
3,  ವಿಧವೆಯರ ಸೇವೆ ಮಾಡಿ ಆಶೀರ್ವಾದ ಪಡೆಯಬೇಕು.
ದ್ವಾದಶಸ್ಥಿತ  ಕುಜನಿಗೆ  ಪರಿಹಾರೋಪಾಯ:---
1,  ಪ್ರತಿನಿತ್ಯ  ಏಳುತ್ತಿದ್ದಂತೆಯೇ ಜೇನುತುಪ್ಪದಿಂದ  ಬಾಯಿಯನ್ನು  ಸಿಹಿಗೊಳಿಸಬೇಕು.
2,  ಹಾಲಿನಿಂದ ಮಾಡಿದ  ಹಲ್ವಾ ಸೇವನೆ ಮಾಡಬೇಕು  ಹಾಗೂ  ಬೇರೆಯವರಿಗೂ  ಹಂಚಬೇಕು.
3,  ಹನುಮಂತ ನಿಗೆ  ಸಿಂಧೂರವರ್ಣದ  ರವಿಕೆ  ಬಟ್ಟೆಯನ್ನು  ಅರ್ಪಿಸಬೇಕು.
           ಒಟ್ಟಿನಲ್ಲಿ..    ಯಾವುದೇ ಲಗ್ನವಾಗಲೀ... ಕುಜನು   ಯಾವುದೇ  ಭಾವದಲ್ಲಿರಲಿ ( 1, 2, 4, 5, 7, 8, 12 )   ಜಾತಕರು   ಪರಿಶುದ್ಧರಾಗಿರಬೇಕು,  ಸ್ರ್ತೀಯರನ್ನು  ಶುದ್ಧ ಭಾವದಿಂದ  ತಾಯಿಯಂತೆ  ನೋಡಬೇಕು,  ತಾಯಿಯ  ಸೇವೆ  ಮಾಡಬೇಕು,  ಮಾಂಸಾಹಾರ,  ಮದ್ಯಪಾನ  ವ್ಯರ್ಜಿಸಬೇಕು,  ಸಹೋದರ ರನ್ನು,  ಸಹೋದರಿಯರನ್ನು, ಹಾಗೂ  ಅವರ ಮಕ್ಕಳನ್ನು  ಪ್ರೀತಿ ವಿಶ್ವಾಸದಿಂದ  ನೋಡಬೇಕು,  ಸತ್ಯ ವಂತರಾಗಿರಬೇಕು,  ಯಾರಿಗೂ  ಅನ್ಯಾಯ ಮಾಡುವುದಾಗಲೀ,  ಬೇರೆಯವರ  ಸಂಪತ್ತಿನ ಅಪವ್ಯಯ ಮಾಡುವುದಾಗಲೀ  ಮಾಡಬಾರದು... ಎಂಬುದು  ಲಾಲ್ ಕಿತಾಬ್ ನಲ್ಲಿ  ಉಲ್ಲೇಖಿತವಾಗಿದೆ.
        ✍  ಡಾ || B. N.  ಶೈಲಜಾ  ರಮೇಶ್...

Saturday, 19 May 2018

ಬಲಹೀನ ಗ್ರಹಗಳಿಂದಾಗುವ ತೊಂದರೆಗಳು ಹಾಗೂ ಪರಿಹಾರಗಳು ... ಭಾಗ - 9

                               ಹರಿಃ ಓಂ

                ಶ್ರೀ ಮಹಾಗಣಪತಯೇ  ನಮಃ

                      ಶ್ರೀ ಗುರುಭ್ಯೋನಮಃ

ಬಲಹೀನ ಗ್ರಹಗಳಿಂದಾಗುವ  ತೊಂದರೆಗಳು  ಹಾಗೂ  ಪರಿಹಾರಗಳು.   ಭಾಗ  -  9

ಕೇತು ಗ್ರಹ :---

.
          ವಿವೇಚನಾ ರಹಿತರು,  ತಮ್ಮಲ್ಲೇ ನಂಬಿಕೆಯನ್ನು ಕಳೇದುಕೊಂಡವರು,  ಆತ್ಮಘಾತುಕ ಮನೋಬಾವ,  ಕ್ರೌರ್ಯದಿಂದ ಗಾಯಗೊಳ್ಳುವವರು,  ಗುಂಪುಘರ್ಷಣೆಯಲ್ಲಿ ತೊಂದರೆಗೆ ಸಿಲುಕುತ್ತಾರೆ.  ನಿರರ್ಥಕ  ಕೆಲಸಗಳಲ್ಲಿ ಕಾಲಕಳೆಯುವವರು,  ಅಲ್ಸರ್,  ಅಜೀರ್ಣ, ಎಲ್ಲಾ ರೀತಿಯ   ಹುಳುಗಳಿಂದ   ಹೊಟ್ಟೆಯಲ್ಲಿ   ತೊಂದರೆ ದೀರ್ಘಕಾಲಿಕ   ಕಾಯಿಲೆಗಳಿಂದ   ನರಳುವವರು ಮಗನಿಗೆ  ಅಪಾಯ ವಿರುತ್ತದೆ,  ಭ್ರಮೆಗಳಿಂದ ಭೀತರು,  ಮೊಣಕಾಲುಗಳಿಗೆ ಆಗಾಗ  ಅಪಾಯ ಉಂಟಾಗುತ್ತಿರುತ್ತದೆ,  ೧೦೦ದಿನಗಳಿಗೂ ಹೆಚ್ಚಾಗಿ ಕೆಲಸದ  ಮೇಲೆ  ಹೋಗಬೇಕಾಗುವುದು. ಮೂತ್ರದ ಅಥವ  ಮಾನಸಿಕ  ತೊಂದರೆಗಳಿಂದ  ಅಥವ ತಿಳಿಯಲಾರದ  ಕಾಯಿಲೆಗಳಿಂದ ನರಳುವರು.  ಆಗಾಗ  ಆತ್ಮಹತ್ಯ ಮನೋಬಾವನೆ ಸುಳಿಯುತ್ತಿರುತ್ತದೆ,  ಪ್ಲೀಹದ ತೊಂದರೆ,  ಜಲೋದರ,  ಸಾಂಕ್ರಾಮಿಕ ಕಾಯಿಲೆ,  ತೀವ್ರತರವಾದ  ಜ್ವರ,  ಗಾಯಗಳಿಂದ  ಪಾದಗಳಲ್ಲಿ ಉರಿ,  ಸಂದಿವಾತ, ಕುಷ್ಟ ಅಥವ ಚರ್ಮವ್ಯಾಧಿಗಳು,  ಬೆನ್ನು ನೋವು,  ಕಿವಿನೋವು,  ಹರ್ನಿಯಾ  ಗಡ್ಡೆ   ಅಥವ  ನಾಭಿಯ  ಕೆಳಗೆಡೆಯ ಕಾಯಿಲೆಗಳಿಂದ  ನರಳುವವರು,  ಕೇತುವು ೨,೮,ನೇ ಸ್ಥಾನಗಳಲ್ಲಿ  ಬಲಹೀನನಾಗುತ್ತಾನೆ.  ಕೇತುವು  ಅಶುಭನಾಗಿದ್ದರೆ 5, 6, 10  ಭಾವಗಳಿಂದ ಕೂಡ  ಅಶುಭ ಫಲ ಪ್ರಾಪ್ತಿಯಾಗುತ್ತೆ.
           ಛಾಯಾಗ್ರಹವಾದ  ಕೇತುವಿನ  ಪ್ರಭಾವ  ಕುಜನಿಗೆ  ಸಮಾನವಾಗಿರುತ್ತದೆ,  ಕೇತು  ಅಶುಭನಾದರೆ ನಿಘೂಡ್ಗ  ವಿದ್ಯೆಗಳ. ಆತ್ಮಜ್ಞಾನ. ಅಥವಾ  ವೈರಾಗ್ಯವುಂಟಾಗುತ್ತದೆ,  ಅಲ್ಲದೆ  ಇಂಥ
ಸ್ಥಿತಿಯಲ್ಲಿ  ಮಂಡಿನೋವು,  ಮೂತ್ರವಿಕಾರ,  ಅಜೀರ್ಣ, ಮಧುಮೇಹ,  ಐಶ್ವರ್ಯ ನಾಶ,  ಸಾಲವೃದ್ಧಿ,  ಪುತ್ರನಿಂದ  ದುರ್ವ್ಯವಹಾರ,  ಹಾಗೂ  ಪುತ್ರನಿಗೆ  ಸಂಕಟ,  ಮುಂತಾದ ತೊಂದರೆಗಳಿಗೆ  ಕಾರಣನಾಗುತ್ತಾನೆ.

ದ್ವಾದಶ ಭಾವಸ್ಥ  ಕೇತುವಿನ  ಶುಭಾಶುಭ  ಫಲಗಳು  :---

          ಪ್ರಥಮ ಭಾವ :---

          ಪ್ರಥಮ ಭಾವಸ್ಥ  ಕೇತುವು  ಶುಭನಾಗಿದ್ದರೆ,   ಜಾತಕನು  ಧೀರ್ಘಆಯು,  ಭಾಗ್ಯವಂತ,  ಪ್ರತಿಷ್ಠಿತ ವ್ಯಕ್ತಿ,  ನೌಕರಿ ಹಾಗೂ  ವ್ಯಾಪಾರಗಳಲ್ಲಿ  ಸಫಲ,  ಗುಣವಂತ ಹಾಗೂ  ಧೀರ್ಘಆಯುಷಿ ಪುತ್ರರು,  ಉತ್ತಮ  ಕೌಟುಂಬಿಕ ಜೀವನ,  ಯಾತ್ರೆ ಗಳಲ್ಲಿ  ಸಫಲ,  ಹಾಗೂ  ಸುಖಮಯ  ದಾಂಪತ್ಯ.
  
         
          ಪ್ರಥಮ ಭಾವಸ್ಥ  ಕೇತುವು  ಆಶುಭನಾಗಿದ್ದರೆ,   ಜಾತಕನು  ,  ರೋಗಿ,  ನಿರ್ದಯಿ,  ಹಣವನ್ನು  ದುರುಪಯೋಗ ಮಾಡುವವ,  ಅಲ್ಪಸಂತಾನ,  ಹೀನಗುಣದವ,  ಸಂಗಾತಿ  ಅಲ್ಪಾಯುವಾಗಿರುತ್ತಾರೆ.

          ದ್ವಿತೀಯ ಭಾವ  :---
         
          ದ್ವಿತೀಯ ಭಾವಸ್ಥ  ಕೇತುವು  ಶುಭನಾಗಿದ್ದರೆ,   ಜಾತಕನು  , ಬಹುಮುಖ  ಪ್ರತಿಭೆಯುಳ್ಳವನು, ಹಣವಂತ,  ಭಾಗ್ಯವಂತ,  ವ್ಯಾಪಾರ  ವ್ಯವಹಾರ ದಲ್ಲಿ  ಲಾಭ,  ಪುರಸ್ಕಾರ ಗಳನ್ನು  ಪಡೆಯುವವ,  ತಾಯಿಯಿಂದ  ಧನಸಹಾಯ,  ಸಂತೋಷ ಭರಿತ  ದಾಂಪತ್ಯ, ಲೆಕ್ಕ - ಪತ್ರದ ಕ್ಷೇತ್ರದಲ್ಲಿ  ಯಶಸ್ವೀ.

          ದ್ವಿತೀಯ ಭಾವಸ್ಥ  ಕೇತುವು  ಆಶುಭನಾಗಿದ್ದರೆ,   ಜಾತಕನು ,  ಹಣಕಾಸು ಮುಗ್ಗಟ್ಟಿನಿಂದ  ಬಳಲುವವ, ವೃದ್ದಾಪ್ಯ ದಲ್ಲಿ  ಕಷ್ಟ,  ಅನಗತ್ಯ  ಖರ್ಚು, ಮಾದಕ ವ್ಯಸನಿ,  ಸದಾ ಚಿಂತೆ,  ಸಂಘರ್ಷ ದ ಜೀವನ,  ಸಂತಾನದಿಂದ  ದುಃಖ.

          ತೃತೀಯ  ಭಾವ. :--

          ತೃತೀಯಭಾವಸ್ಥ  ಕೇತುವು  ಶುಭನಾಗಿದ್ದರೆ,   ಜಾತಕನು ,  ಪವಿತ್ರ  ಭಾವನೆಯ  ಪರೋಪಕಾರಿ,   ದಯಾಳು  ಧರ್ಮನಿಷ್ಠ,  ಆಸ್ತಿಕ,  ದೇವರಲ್ಲಿ  ಅಚಲ  ನಂಬಿಕೆ,  ಭಾಗ್ಯವಂತ,  ಉತ್ತಮ  ಸಂತಾನ  ತನ್ನ  ಬಂಧು ಬಾಂಧವರಿಗೆ ಶುಭನಾಗುವವನು,  ಕೃಷಿಯಿಂದ  ವಿಶೇಷಲಾಭ,  ಖಾಸಗಿ ಅಥವಾ  ಸರ್ಕಾರದ  ನೌಕರಿ ಯಲ್ಲಿ  ಉಚ್ಚಪದವಿ  ಗಳಿಸುವವ.

          ತೃತೀಯಭಾವಸ್ಥ  ಕೇತುವು  ಆಶುಭನಾಗಿದ್ದರೆ,   ಜಾತಕನು ,   ಆರ್ಥಿಕವಾಗಿ  ದುರ್ಬಲ,  ತಂದೆಗೆ  ಅಪಮಾನಿಸುವವ,  ತಂದೆಯ  ಮರಣಕ್ಕೂ  ಕಾರಣವಾಗುವವ,  ಒಡಹುಟ್ಟಿದವರೊಡನೆ  ದ್ವೇಷ,  ಅಲೆದಾಟ,  ಯಾತ್ರೆಗಳಲ್ಲಿ  ಅಶುಭ.

          ಚತುರ್ಥ ಭಾವ  :---

             ಚತುರ್ಥ  ಭಾವಸ್ಥ  ಕೇತುವು  ಶುಭನಾಗಿದ್ದರೆ,   ಜಾತಕನು ,   ಶ್ರೀಮಂತ,  ಆಶಾವಾದಿ,  ದಯಾಳು,  ಸಾಹಸಿ,  ಸ್ವಂತ ಮನೆ  ವಾಹನಗಳನ್ನು  ಹೊಂದಿರುತ್ತಾನೆ,  ಪಿತ್ರಾರ್ಜಿತ  ಸಂಪತ್ತುಳ್ಳ ವ,  ಭೌತಿಕ ಸುಖ ಭೋಗಗಳನ್ನು  ಹೊಂದಿ,  ತಾಯಿಗೆ  ಶುಭನಾದ  ಮಗನಾಗುವವ.

          ಚತುರ್ಥ ಭಾವಸ್ಥ  ಕೇತುವು  ಆಶುಭನಾಗಿದ್ದರೆ,   ಜಾತಕನು ,   ಅನಾರೋಗಿ,  ತಾಯಿಯೊಂದಿಗೆ  ಕಲಹ,  ತಾಯಿಗೆ  ಅಲ್ಪಾಯು, ಧನಹಾನಿ,  ದುರ್ಘಟನೆ ಯಲ್ಲಿ  ಮರಣ.

          ಪಂಚಮಭಾವ. :---
    
           ಪಂಚಮ ಭಾವಸ್ಥ  ಕೇತುವು  ಶುಭನಾಗಿದ್ದರೆ,   ಜಾತಕನು ,   ಧೀರ್ಘಆಯು,  ಪರೋಪಕಾರಿ,  ಜೀವನದಲ್ಲಿ  ಸಮಸ್ತ ಸುಖ,  ಬುದ್ಧಿವಂತ,  ಮಧುರ  ದಾಂಪತ್ಯ,  ಹಿರಿಯರನ್ನು  ಆದರಾಭಿಮಾನಗಳಿಂದ  ನೋಡಿಕೊಳ್ಳುವವನು,   ಉತ್ತಮ  ಸಂತಾನ.

          ಪಂಚಮ ಭಾವಸ್ಥ  ಕೇತುವು  ಆಶುಭನಾಗಿದ್ದರೆ,  ಜಾತಕರು  ರೋಗಿ,  ಭಾಗ್ಯಹೀನ,  ಚಾರಿತ್ರ್ಯ ಹೀನ,  ಅಸ್ತಮಾ  ಹಾಗೂ  ರಕ್ತ ರೋಗಗಳಿಂದ  ಭಾಧಿತ,  ಪರಸ್ತ್ರೀಯರಲ್ಲಿ  ಅನೈತಿಕ ಸಂಬಂಧ,  ಅಸಫಲ  ದಾಂಪತ್ಯ,  ಹಣದ ಕೊರತೆ,  ಮನೆಯಲ್ಲಿ  ಆದರವಿಲ್ಲ.

          ಷಷ್ಟ ಭಾವ  :---

          ಷಷ್ಟ ಭಾವಸ್ಥಿತ  ಕೇತು  ಶುಭನಾಗಿದ್ದರೆ,  ಜಾತಕರು,  ಧೀರ,  ವೀರ ,  ಸಾಹಸಿ,  ಉತ್ಸಾಹಿ,  ಆಶಾವಾದಿ,  ಧೀರ್ಘಆಯು, .ವೈಭವಪೂರ್ಣ  ಜೀವನ,  ಸ್ವಂತ ಮನೆ  ಹಾಗೂ  ವಾಹನಗಳುಳ್ಳವನು,  ವಾದ - ವಿವಾದಗಳಲ್ಲಿ  ಸದಾ  ವಿಜಯಿಗಳು,   ವಿದೇಶದಲ್ಲಿ  ಅಧಿಕ  ಸಫಲತೆ,   ಸೋದರಮಾವನಿಗೆ  ಒಳ್ಳೆಯದು.

     ಷಷ್ಟ ಭಾವಸ್ಥಿತ  ಕೇತು  ಆಶುಭನಾಗಿದ್ದರೆ,  ಜಾತಕರು,  ಕ್ರೂರಿ,  ಕುಲನಾಶಕ, ಅಲ್ಪಾಯು,  ಅಲ್ಪಬುದ್ಧಿಯವ , ಹೇಡಿ,  ಮೂರ್ಖ,  ಹೊಟ್ಟೆ ಹಾಗೂ  ಚರ್ಮ  ರೋಗದಿಂದ  ಪೀಡಿತ,  ಮಾದಕ  ವ್ಯಸನಿ,  ಚಾರಿತ್ರ್ಯ ಹೀನ,  ಕೆಟ್ಟ  ಹೆಂಗಸರಿಗೆ ಹಣ  ವ್ಯಯಿಸುವವ,  ಅಲೆದಾಟ.

          ಸಪ್ತಮಭಾವ  :---

               ಸಪ್ತಮ  ಭಾವಸ್ಥಿತ  ಕೇತು  ಶುಭನಾಗಿದ್ದರೆ,  ಜಾತಕರು,  ಪರಾಕ್ರಮಿ,  ಸಾಹಸಿ, ಕರ್ಮವೀರ,  ಶ್ರೀಮಂತ ಜೀವನ,  ವ್ಯಾಪಾರ ದಲ್ಲಿ  ಸಫಲ, ವಿದೇಶಯಾತ್ರಾಯೋಗ,   ತಂದೆಗೆ. ಶುಭ,  ಮಧುರ  ದಾಂಪತ್ಯ ಜೀವನ.

         ಸಪ್ತಮ  ಭಾವಸ್ಥಿತ  ಕೇತು  ಆಶುಭನಾಗಿದ್ದರೆ,  ಜಾತಕರು,  ಕ್ರೂರ ಪ್ರವೃತ್ತಿ ಯುಳ್ಳವರು,  ಅವಿಶ್ವಾಸಿ,  ಅತಿ ಕೋಪ,  ಅಸಭ್ಯವರ್ತನೆಯುಳ್ಳವನು,   ಹಣದ  ಕೊರತೆ,  ರೋಗಯುತ ಪತ್ನಿ, ದಾಂಪತ್ಯ ಸುಖವಿಲ್ಲ,  ಪರಸ್ತ್ರೀಯರಲ್ಲಿ  ಸಂಬಂಧ,  ಎರಡನೇಯ    ವಿವಾಹವಾಗುವ  ಸಂಭವವೂ  ಇದೆ.

          ಅಷ್ಟಮ ಭಾವ  :---

           ಅಷ್ಟಮ ಭಾವಸ್ಥಿತ  ಕೇತು  ಶುಭನಾಗಿದ್ದರೆ,
ಜಾತಕರು  ಗೂಢ ವಿದ್ಯಗಳನ್ನು  ಬಲ್ಲವರು,  ಜ್ಯೋತಿಷ್ಯ ಶಾಸ್ತ್ರದ ಲ್ಲಿ  ಆಸಕ್ತಿ ಇರುವವರು,  ಪ್ರಾಮಾಣಿಕರು,  ಧೀರ್ಘಆಯು,  ಶ್ರೀಮಂತ ಜೀವನ್, ಆಕಸ್ಮಿಕ  ಧನ ಪಡೆಯುವವರು,  ಜಮೀನುಗಳುಳ್ಳವರು,  ಉದ್ಯೋಗ - ವ್ಯಾಪಾರ  ಎರಡರಲ್ಲಿಯೂ  ಲಾಭಾಂಶ ಪಡೆಯುವವರು,   ಉಧೋಗದಲ್ಲಿರುವ  ಹೆಂಡತಿ.

           ಅಷ್ಟಮ ಭಾವಸ್ಥಿತ  ಕೇತು  ಆಶುಭನಾಗಿದ್ದರೆ,  ತನ್ನ  ಹಿರಿಯ  ಸೋದರನ ಮೃತ್ಯು,  ತಂದೆಗೆ  ಅಶುಭ,  ಪರಸ್ತ್ರೀಯರೊಡನೆ ಅನೈತಿಕ ಸಂಬಂಧ,  ದಾಂಪತ್ಯ ಜೀವನ ಹಾಗೂ  ಸಂತಾನ ಸುಖದಿಂದ  ವಂಚಿತರು.

          ನವಮಭಾವ  :---

           ನವಮ ಭಾವಸ್ಥಿತ  ಕೇತು  ಶುಭನಾಗಿದ್ದರೆ,
ಜಾತಕರು  ,  ಮೃಧುಭಾಷಿ,  ಸಮಾಜ ಸುಧಾರಕ,  ಪಿತೃಭಕ್ತ,  ಪ್ರಾಮಾಣಿಕ  ಮನುಷ್ಯ, ಧೀರ್ಘಆಯು,  ಪರೋಪಕಾರಿ, ಉತ್ತಮ  ಆದರ್ಶ ವ್ಯಕ್ತಿ,  ತಂದೆಯ  ಆಸೆಗಳನ್ನು  ಪೂರೈಸುವವ,  ವಿದೇಶ ಪ್ರವಾಸ ಯೋಗ ಇರುವವ.

           ನವಮ ಭಾವಸ್ಥಿತ  ಕೇತು  ಆಶುಭನಾಗಿದ್ದರೆ,
ಜಾತಕರು  ,  ಮೂರ್ಖ  ಅಜ್ಞಾನಿ,  ಚಾರಿತ್ರ್ಯ ಹೀನ,  ವ್ಯಸನಿ,  ದರೋಡೆ, ಹತ್ಯೆ, ಬಲತ್ಕಾರದಂತಹ   ಹೀನ ಕೃತ್ಯಗಳನ್ನು  ಮಾಡುವವ,   ಪರಸ್ತ್ರೀ ಸಂಗ, underworld  ವ್ಯಕ್ತಿ ಗಳ  ಸಹವಾಸ.

          ದಶಮಭಾವ :---

           ದಶಮ ಭಾವಸ್ಥಿತ  ಕೇತು  ಶುಭನಾಗಿದ್ದರೆ,
ಜಾತಕರು , ಸುಶಿಕ್ಷಿತ ವ್ಯಕ್ತಿ,  ತೀಕ್ಷ್ಣ ಬುದ್ಧಿಯುಳ್ಳವರೂ,  ಮಿತ್ರರಿಂದ  ಸಹಕಾರ  ಸ್ವಂತ ಮನೆ,  ಲೌಕಿಕ ಸುಖಭೋಗಗಳು, ಸಾಹಸಿ,  ಆಟೋಟಗಳಲ್ಲಿ  ಕೀರ್ತಿ,  ಸುಖೀ ದಾಂಪತ್ಯ,  ಧನ - ಸಂಪತ್ತನ್ನು ಕೂಡಿಡಿವುದರಲ್ಲಿ  ಆಸಕ್ತಿ.

          ದಶಮ ಭಾವಸ್ಥಿತ  ಕೇತು  ಆಶುಭನಾಗಿದ್ದರೆ,
ಜಾತಕರು  ,  ಅಸಭ್ಯ ವ್ಯಕ್ತಿ,  ಮಲಿನ ಸ್ಥಾನ ದಲ್ಲಿ ವಾಸ,  ತಾಯಿಗೆ  ಅಶುಭ,  ವ್ಯಾಪಾರ ವ್ಯವಹಾರ ದಲ್ಲಿ  ಹಾನಿ   ಕೌಟುಂಬಿಕ ಹಾಗೂ  ದಾಂಪತ್ಯ ಜೀವನದಲ್ಲಿ ಸುಖವಿಲ್ಲ,  ಅಲ್ಪಸಂತಾನ,  ಒಡಹುಟ್ಟಿದವರು  ಹಾಗೂ  ಪತ್ನಿಯಿಂದ ಅಪಮಾನಕ್ಕೊಳಗಾಗುವವರು.

          ಏಕಾದಶ  ಭಾವ  :---

           ಏಕಾದಶ ಭಾವಸ್ಥಿತ  ಕೇತು  ಶುಭನಾಗಿದ್ದರೆ,
ಜಾತಕರು  ,  ಭಾಗ್ಯವಂತ,  ಬುದ್ಧಿವಂತ, ಧನವಂತ,  ವೈಭವಯುತ ಜೀವನ,  ಐಷಾರಾಮಿ  ಬಂಗಲೆ,  ಬೆಲೆಬಾಳುವ  ವಾಹನಗಳು,  ಉತ್ತಮ ಗೃಹಸ್ಥ ಜೀವನ,  ತನ್ನ  ಕೆಲಸಕಾರ್ಯಗಳಿಂದಾಗಿ  ರಾಷ್ಟ್ರ ಮಟ್ಟದಲ್ಲಿ  ಹೆಸರುವಾಸಿಯಾಗುವವ.

          ಏಕಾದಶ ಭಾವಸ್ಥಿತ  ಕೇತು  ಆಶುಭನಾಗಿದ್ದರೆ, ಜಾತಕರು,  ತನ್ನ  ಸ್ನೇಹಿತರು  ಹಾಗೂ ಸಹೋದರರ  ಕಾರಣವಾಗಿ  ಕಷ್ಟಗಳನ್ನು  ಅನುಭವಿಸುವವರು,  ಸದಾ ಒಂದಿಲ್ಲೊಂದು ರೀತಿಯಲ್ಲಿ ಚಿಂತೆ ಯಿಂದ  ಭಾದಿತ, ಅಲ್ಪಾಯು ತಾಯಿ,  ಅಲ್ಪ ಸಂತಾನ  ಅಥವಾ  ಸಂತಾನ ಹೀನ.

          ದ್ವಾದಶ ಭಾವ  :--

           ದ್ವಾದಶ ಭಾವಸ್ಥಿತ  ಕೇತು  ಶುಭನಾಗಿದ್ದರೆ,
ಜಾತಕರು  ,ಅಪಾರ ಧನ. ಸಂಪತ್ತಿನ ಒಡೆಯ, ವೈಭವಯುಕ್ತ ಶ್ರೇಷ್ಠ ಜೀವನ, ಶಾಂತಿಯುತ  ಗೃಹಸ್ಥ  ಜೀವನ, ಸುಂದರ, ಸುಶೀಲ  ಸುಸಂಸ್ಕೃತ ಪತ್ನಿ,  ಉತ್ತಮ  ಪುತ್ರರು,  ಕುಟುಂಬದ ಬೆಂಬಲದೊಂದಿಗೆ, ಉನ್ನತ ಸ್ಥಿತಿ ಪಡೆಯುವವ,  ವೃದ್ದಾವಸ್ಥೆಯಲ್ಲಿ ಪುತ್ರರಿಂದ  ಸುಖ.

           ದ್ವಾದಶ ಭಾವಸ್ಥಿತ  ಕೇತು  ಆಶುಭನಾಗಿದ್ದರೆ,  ಜಾತಕರು  ಸುಳ್ಳುಗಾರ,  ವಿಶ್ವಾಸ ಘಾತಕ, ದುಷ್ಟ,  ಬಂಧುಗಳಿಗೆ  ತೊಂದರೆಯುಂಟುಮಾಡುವವ,  ಅನೈತಿಕ ಕಾರ್ಯದಲ್ಲಿ ಆಸಕ್ತಿ,  ವಿದೇಶಯಾತ್ರಾ ಯೋಗವಿದ್ದರೂ  ಯಾತ್ರೆಗಳಲ್ಲಿ  ತೊಂದರೆ,  ಸಾಮಾನ್ಯ ಮಟ್ಟದ  ಸಾಂಸಾರಿಕ ಜೀವನ,  ನೇತ್ರರೊಗಿ.
         
ಪರಿಹಾರೋಪಾಯಗಳು:-

1 )  ಗಣಪತಿಯನ್ನು ಆರಾಧಿಸಿರಿ

2 ) ಕರಿ ನಾಯಿ ಸಾಕಿಕೊಳ್ಳಿರಿ .

3 ) ಬಿಳಿ ಅಥವ ಕಪ್ಪು ಕಂಬಳಿಯನ್ನು ದೇವಾಲಯಕ್ಕೆ ಅಥವ ಸಾಧುವಿಗೆ ನೀಡಿ.

4 ) ಮಕ್ಕಳ ಒಳಿತಿಗಾಗಿ ಹಾಲು,ಅಕ್ಕಿ,ಕೆಂಪು ಬೇಳೆ,ಕಲ್ಲು ಸಕ್ಕರೆ,ಜೇನು ತುಪ್ಪ, ದಾನ ಮಾಡಿ.

5 ) ವರದಕ್ಷಿಣೆಯಾಗಿ ಬಂದ ಹಾಸಿಗೆಯ ಮೇಲೆ ಮಲಗಿರಿ .

6 ) ಕಿವಿಯನ್ನು ಚುಚ್ಚಿಸಿಕೊಂಡು ಬಂಗಾರದ ಉಂಗುರವನ್ನು ಹಾಕಿಕೊಳ್ಳಿ.

7 ) ಎರಡು ಒಂದೇ ಆಕಾರದ ಬೆಣಚಕಲ್ಲುಗಳನ್ನು ತಗೆದುಕೊಂಡು ಒಂದನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ (ರವಿಯು ೪ನೇ ಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿ.)

8 ) ಕಾಲಿನ ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ.

9 ) ಬಂಗಾರದ ಸರವನ್ನು ಕೊರಳಿಗೆ ಹಾಕಿಕೊಳ್ಳಿ

10 ) ಕೇಸರಿಯನ್ನು ಹಣೆಗೆ ಹಚ್ಚಿಕೊಳ್ಳಿ.

11 ) ಮನೆಯ ಗೇಟಿನ ಕಂಬಕ್ಕೆ ತಾಮ್ರದ ತಗಡನ್ನು ಹಾಕಿರಿ.

12 ) ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ನಿಮ್ಮ ಬಾವಮೈದುನ,ಸೋದರಿಯ ಮಗ/ಮಗಳಿಗೆ ನೀಡಿ.

13 ) ಮಕ್ಕಳ ಒಳಿತಿಗಾಗಿ ಕಡಲೆಕಾಳು ಮತ್ತು ಕೇಸರಿಯನ್ನು ದೇವಸ್ಥಾನಕ್ಕೆ ಗುರುವಾರ ದಂದು ದಾನ ಕೊಡಿ ೧೦೦ ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೊರಗೆ ಹೋಗಬೇಕಾಗಿ ಬಂದರೆ ಹರಿವ ನೀರಿನಲ್ಲಿ ತಾಮ್ರದ ನಾಣ್ಯಗಳನ್ನು ಹಾಕಿರಿ.

14 ) ಬೆಳ್ಳಿಯ ಕೊಡದಲ್ಲಿ ಜೇನು ತುಪ್ಪವನ್ನು ತುಂಬಿ ಮನೆಯ ಹೊರಗಡೆ ಹುದುಗಿಸಿ.

15 ) ಮಕ್ಕಳಿಲ್ಲದವರಿಂದ ಭೂಮಿಯನ್ನು ಕೊಂಡು ಅಲ್ಲಿ ಮನೆಯನ್ನು ಕಟ್ಟದಿರಿ.

16 ) ೮ನೇ ಸ್ಥಾನದಲ್ಲಿ ಕೇತುವು ಕಲುಶಿತನಾಗಿದ್ದರೆ ಶಿವನಿಗೆ ಕ್ಷೀರಾಭಿಷೇಕ ಮಾಡಿಸಿರಿ.ಅಥವ ನಿಂಬೇ ಹಣ್ಣನ್ನು ದಾರ್ಮಿಕ ಸ್ಥಳಗಳಲ್ಲಿ ದಾನ ಮಾಡಿ

17 ) ನಾಯಿಗೆ ೧೫ ದಿನಗಳ ಕಾಲ ಹಾಲನ್ನು ಹಾಕಿರಿ.

✍   ಡಾ|| B. N.  ಶೈಲಜಾ ರಮೇಶ್