ಹರಿಃ ಓಂ
ಓಂ ಶ್ರೀ ಗಣೇಶಾಯ ನಮಃ
ಓಂ ಶ್ರೀ ಗುರುಭ್ಯೋ ನಮಃ
ಸಂಖ್ಯೆ ಎರಡು
*********
*********
Picture source : internet / social media
೨,೧೧,೨೦,೨೯ ದಿನಾಂಕದವರು ೨ ಮೂಲಾಕ್ಷರಕ್ಕೆ ಬರುತ್ತಾರೆ.
ಈ ಎರಡನೇ ಸಂಖ್ಯೆಗೆ ಅಧಿಪತಿ ಚಂದ್ರ ನಾಗಿದ್ದಾನೆ, ಸೂರ್ಯನು ಆತ್ಮ ಕಾರಕನಾದರೆ ಚಂದ್ರನು "ಚಂದ್ರಮಾಮನಸೋಜಾತ"ನಾಗಿದ್ದಾನೆ.
Picture source : internet / social media
ರೂಪ ಆಕಾರ :---
*************
*************
ಎರಡನೇ ಸಂಖ್ಯೆ ಯಲ್ಲಿ ಜನಿಸಿದ ಹಲವರು ಒಳ್ಳೆಯ ರೂಪ ಶರೀರ ಹೊಂದಿ ಆಕರ್ಷಕವಾದ ಸೌಂದರ್ಯದವರಾಗಿರುತ್ತಾರೆ, ದೇಹಕ್ಕೆ ತಕ್ಕ ಎತ್ತರವೂ ಇವರಿಗಿರುತ್ತದೆ, ಚಿಕ್ಕಕಿವಿಗಳು, ಸುಂದರವಾದ,ಗುಂಡಾದ ನೇತ್ರಗಳು,ದಪ್ಪವಾದ ತುಟಿಗಳು, ನಯವಾದ ಕೂದಲು, ಮುಂದೆಬಂದಿರುವ ಹೊಟ್ಟೆ ಇವೆಲ್ಲವುಗಳೂ ಎರಡನೇ ಸಂಖ್ಯೆಯವರೆಂಬುದನ್ನು ವ್ಯಕ್ತಪಡಿಸುತ್ತದೆ.
ಗುಣ-ನಡತೆ :---
**********
ಎರಡನೇ ಸಂಖ್ಯೆಯವರು ಚಂಚಲವಾದ ಮನಸ್ಸುಳ್ಳವರು, ಸದಾ ಸಂದೇಹ ಸ್ವಬಾವದವರು ಆಗಿರುವರು.ಆದುದರಿಂದ ಯಾವ ಕಾರ್ಯವನ್ನು ಮಾಡಬೇಕಾದರೂ ಮೊದಲು ಚೆನ್ನಾಗಿ ಯೋಚಿಸಿ ನಂತರ ನಿಧಾನವಾಗಿ ಕಾರ್ಯಗತರಾಗಬೇಕೆಂಬ ಗುಣವು ಇವರಲ್ಲಿರಲಾರದು ಪ್ರತಿಯೊಂದು ವಿಚಾರದಲ್ಲೂ ಅವಸರಪಟ್ಟು ಪ್ರವೇಶಿಸಿ ನಂತರ ಅದನ್ನು ಕೈ ಬಿಡುವುದು ಇವರ ಗುಣ, ತಾವಾಗಿಯೇ ನಿರ್ಣಯಿಸಿ ಆಮೇಲೆ ನಿಧಾನವಾಗಿ ಕಾರ್ಯದಲ್ಲಿ ಪ್ರವರ್ತಿಸುವ ಸ್ವಭಾವವು ಇವರಲ್ಲಿ ಇಲ್ಲದಿದ್ದರೂ ಇತರರು ಹೇಳುವ ಆಲೋಚನೆಗಾದರೂ ಕಿವಿಗೊಟ್ಟು ಅವರು ಹೇಳುವ ದಾರಿಯಲ್ಲಿ ಕೆಲಸಮಾಡಿಕೊಳ್ಳಬಹುದು, ಆದರೆ ಇವರು ಪರರನ್ನು ನಂಬಿಯೂ ನಂಬದೆಯೂ ಇರುವ ಸ್ವಬಾವವುಳ್ಳವರಾಗಿ ಕಂಡುಬರುತ್ತಾರೆ ಇದು ಇವರ ಸಹಜ ಗುಣ. ತಮ್ಮ ಕೆಲಸಗಳನ್ನು ಬದಿಗೆ ಸರಿಸಿ ಪರರಿಗೆ ತಮ್ಮಿಂದ ಏನಾದರೂ ಉಪಕಾರ ಮಾಡಲು ಸಾದ್ಯವಿದೆಯೇ ಎಂಬಯೋಚನೆಯಲ್ಲಿಯೇ ಇರುತ್ತಾರೆ. ಪ್ರಾಪಂಚಿಕ ವಿಷಯದ ಚಿಂತನೆಗಿಂತ ಆಧ್ಯಾತ್ಮಿಕ ವಿಷಯದ ಚಿಂತನೆ ಅಧಿಕವಾಗಿರುವುದು, ಆಧ್ಯಾತ್ಮಿಕ ಚರ್ಚೆಯನ್ನು ಮಾಡುವಾಗ ಇವರಿಗೆ ಸಮಯವು ಕಳೆದುದೇ ತಿಳಿಯದು ತಮ್ಮ ಸಮಸ್ಯೆಗಳಿಗೆ ಏಕಾಂತದಲ್ಲಿ ತಾವೇ ಸ್ವತಃ ಚಿಂತಿಸಿ ಪರಿಹಾರವನ್ನು ಕಂಡುಕೊಳ್ಳುವ ಅಭ್ಯಾಸ ವುಳ್ಳವರು.
ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸುವ ಜೊತೆಗೆ ಈಜುವುದರಲ್ಲಿಯೂ ಅಭಿರುಚಿಯುಳ್ಳವರು, ಇವರಿಗೆ ಸ್ವಬಾವಿಕವಾಗಿರುವ ಮುಂಗೋಪವು, ಅವಸರದಲ್ಲಿ ಆರಂಭಿಸುವ ಕೆಲಸವೂ ಇವರು ಕೈಗೊಳ್ಳುವ ಕಾರ್ಯಗಳಲ್ಲಿ ಜಯಶೀಲರಾಗಲು ಭಾದಕವಾಗಬಹುದು. ಜೀವನದ ತೊಡಕುಗಳಲ್ಲಿ ನೊಂದು-ಬೆಂದು ಹೋಗಿರುವ ಎರಡನೇ ಸಂಖ್ಯೆಯವರು ಕೆಲವರು ಜಲಸಮಾಧಿಗೆ ಶರಣು ಹೋಗುವುದೂ ಇದೆ. ಸ್ವತಂತ್ರವಾಗಿ ಜೀವಿಸುವುದರಲ್ಲಿ ನಂಬಿಕೆ ಸಾಲದುದರಿಂದ ಇತರರ ಅಧೀನದಲ್ಲಿ ಸೇವಕರಾಗಿ ಇರುವುದಕ್ಕೂ ಸಿದ್ದರಾಗಿ ಕಾಲತಳ್ಳುವಸ್ವಭಾವ ಇವರದು, ಭೂತ ಪಿಶಾಚಿಗಳೆಂದರೆ ಇವರಿಗೆ ಭಯಜಾಸ್ತಿ.

ಎರಡನೆ ಸಂಖ್ಯೆಯ ಸ್ತ್ರೀಯರು ಬಹಳ ಹೇಡಿಗಳು, ಸ್ವಲ್ಪಗದರಿಸಿದರೂ ಭಯಬೀತರಾಗುವರು ಹಸಿರು ಬಣ್ಣಗಳುಳ್ಳ ವಸ್ತುಗಳನ್ನು ವಸ್ತ್ರಆಭರಣಗಳನ್ನೂ ಉಪಯೋಗಿಸುವುದೆಂದರೆ ಇವರಿಗೆ ಪ್ರೀತಿ, ಹೆಂಗಸರು ಹೆಚ್ಚಾಗಿ ಸೌಂದರ್ಯ ವೃದ್ದಿಗಾಗಿ ಸಮಯ ಕಳೆಯುತ್ತಾರೆ.
ಗೃಹಸ್ಥ ಜೀವನ :----
***********
ಇವರ ಸಾಂಸಾರಿಕ ಜೀವನ ಸುಖವಾಗಿರುತ್ತದೆ,
ಇವರು ಜನಿಸಿದ ದಿನಾಂಕ ತಿಂಗಳು ವರ್ಷಗಳ ಭವಿಷ್ಯ ಸಂಖ್ಯೆಯು ಎರಡು ಆಗಿರುವುದರಿಂದ 5, 6, 7, ನೇ ಸಮಷ್ಟಿ ಸಂಖ್ಯೆಯುಳ್ಳವರನ್ನು ವಿವಾಹ ಮಾಡಿಕೊಂಡರೆ ದಾಂಪತ್ಯ ಜೀವನವು ಬಹಳ ಆನಂದವಾಗಿರುತ್ತದೆ,ಅಲ್ಲದೆ ೨೫ರಿಂದ ೩೦ವರ್ಷಗಳ ನಡುವೆ ಮದುವೆ ಮಾಡಿಕೊಂಡರೆ ಒಳ್ಳೆಯದು,ಪ್ರೇಮವ್ಯವಹಾರದಲ್ಲಿ ಇವರಿಗೆ ಶತ ಪ್ರತಿಶತ ಜಯವೇ ಲಭಿಸುವುದು.

ಎರಡನೇ ಸಂಖ್ಯೆಯ ಪತಿಯಾದರೆ:--- ಹೆಚ್ಚು ನಿಸರ್ಗದ ಬಗ್ಗೆ ಪ್ರೀತಿ, ಆಕರ್ಷಣಾ ಶಕ್ತಿಯುಳ್ಳವರು, ಎರಡನೇ ಸಂಖ್ಯೆ ಋಣಾತ್ಮಕ ವಾಗಿದ್ದರೆ (Negative) , ಬರೀ ತಪ್ಪುಗಳನ್ನು ಕಂಡುಹಿಡಿಯುವುದೇ ಕೆಲಸ, ಅವರನ್ನು ತೃಪ್ತಿ ಪಡುಸಲಾಗುವುದಿಲ್ಲ, ಸೋಮಾರಿ, ಇವರು ಹಣದ ಆಸೆಗಾಗಿಯೇ ಮದುವೆಯಾಗುತ್ತಾರೆ, ಇಂತಹ ಸಂಗಾತಿಯಿಂದ ಜೀವನ ಸುಗಮವಾಗಿರುವುದಿಲ್ಲ.
ಎರಡನೇ ಸಂಖ್ಯೆ ಧನಾತ್ಮಕ ವಾಗಿದ್ದರೆ (positive), ತುಂಬಾ ಕಾಳಜಿ ಯಿಂದ ನೋಡಿಕೊಳ್ಳುವ ಸ್ವಭಾವದವರು, ದಯಾಪರರು, ಎಲ್ಲಾ ವಿಷಯಗಳಲ್ಲೂ ಸಹಾಯಕಾರಿ, ತುಂಬು ಪ್ರೀತಿಯನ್ನು ಕೊಡುವವರು.

ಎರಡನೇ ಸಂಖ್ಯೆಯ ಪತ್ನಿಯಾಗಿದ್ರೆ :--- ಸೂಕ್ಮ ಮನಸ್ಸಿನವರು, ದಯಾಪರರು, ವಾತ್ಸಲ್ಯ ಪ್ರೀತಿಯಿಂದ ಮನೆಯ ಜನರನ್ನು ನೋಡಿಕೊಳ್ಳುವವರು, ಏನೇ ಅನುಕೂಲ - ಅನಾನುಕೂಲವಿದ್ದರೂ ತೃಪ್ತಿ ಕರವಾಗಿರುತ್ತಾರೆ, ಪತಿಗೆ ಯಾವುದೇ ತೊಂದರೆ ಕೊಡದೆ ತಮ್ಮ ಕೆಲಸ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.
ಆರ್ಥಿಕ ಪರಿಸ್ಥಿತಿ:---
************
ಚಂದ್ರನಿಗೆ, ಶುಕ್ಲಪಕ್ಷ, ಕೃಷ್ಣಪಕ್ಷ ಇರುವಂತೆ ಎರಡನೇ ಸಂಖ್ಯೆಯವರಿಗೂ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಸಹಜವಾಗಿರಿತ್ತದೆ , ಪ್ರತಿನಿತ್ಯ ದಿಟ್ಟವಾಗಿ ನಿಂತು ಕೆಲಆ ಮಾಡುವ ಭೌತಿಕ ಆರೋಗ್ಯವಿರುವುದಿಲ್ಲ ಆದರಿಂದ ಧನ ಸಂಪಾದನೆ ಸಾಮಾನ್ಯವಾಗಿರುತ್ತದೆ, ಆದರೆ ಇವರು ನಡೆಸಿಕೊಂಡು ಬರುವ ವ್ಯಾಪಾರವು ಇವರಿಗೆ ಲಾಭದಾಯಕವಾಗಿಯೇ ಇರುವುದು. ಸಂಪಾದನೆ ಅಭಿವೃದ್ಧಿ ಆಗಬೇಕಾದರೆ ಕಲ್ಪನಾ ಸಾಗರದಿಂದ ಹೊರಬಂದು ಕ್ರಿಯಾಶೀಲ ರಾಗಿರಬೇಕು.

ದೇಹಾರೋಗ್ಯ :---
**********
ಎರಡನೇ ಸಂಖ್ಯೆಯವರಿಗೆ ಉದರಕ್ಕೆ ಸಂಬಂಧಪಟ್ಟ ವ್ಯಾಧಿಗಳು ಆಗಾಗ್ಗೆ ಭಾದಿಸುತ್ತವೆ, ಕೆಲವರಿಗೆ "ಗನೇರಿಯಾ"ದಂತಹ ರೋಗವು ಬರಬಹುದು, ಕೆಲವರಿಗೆ ಮನೋವ್ಯಾಧಿಯು ಭಾದಿಸುವುದು , ಆದುದರಿಂದ ದುಃಖಕರವಾದ ಸಮಾಚಾರವನ್ನು ಇಂಥವರಿಗೆ ಹೇಳದೇ ಇರುವುದೇ ಉತ್ತಮವಾದುದು.ಒಂದು ವೇಳೆ ಹೇಳಿದರೂ ನಿಧಾನವಾಗಿ ಗಾಬರಿಯಾಗದಂತೆ ಹೇಳಬೇಕು ಚಂದ್ರಗ್ರಹವು ತಂಪಾದ ಗ್ರಹವಾದ್ದರಿಂದ ಇವರಿಗೆ ಶೈತ್ಯ ಸಂಬಂದವಾದ ವ್ಯಾಧಿಗಳು ಹೆಚ್ಚಾಗಿ ಬರಬಹುದು. ಚಂದ್ರಗ್ರಹವು ಕೆಲವರಿಗೆ ದುರ್ಬಲವಾಗಿರುವುದು ಅಂತಹವರಿಗೆ ಜಲಗಂಡಾಂತರವು ಬರುವ ಸಂಭವ ವಿರುತ್ತದೆ. ಅಂಗೈಯಲ್ಲಿರುವ ಚಂದ್ರನ ಪರ್ವದಲ್ಲಿ, ದ್ವೀಪಅಕಾರ ಹಾಗೂ ವಲಯದಂತಿರುವ ರೇಖೆಗಳಿದ್ದರೆ ಜಲಸಮಾಧಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಆದುದರಿಂದ ಇವರು ನೀರಿನ ಬಳಿ ಜಾಗೃತರಾಗಿರುವುದೇ ಲೇಸು.

ಉದ್ವೇಗ ಮತ್ತು ಚಿಂತೆಗಳು ಇವರನ್ನು ಕಾಡುತ್ತಿರುತ್ತದೆ, ಅಲ್ಪಸ್ವಲ್ಪ ವಿಷಯಕ್ಕೂ ಚಿಂತಾಕ್ರಾಂತರಾಗುತ್ತಾರೆ, ಈ ರೀತಿಯ ಚಿಂತೆಗಳಿಂದ ಹೃದಯವು ಬಲಹೀನವಾಗಿ ದುರ್ಬಲವಾಗುತ್ತದೆ, ಆಗಾಗ ನರಗಳ ದೌರ್ಬಲ್ಯ ಕಾಡುತ್ತಿರುತ್ತದೆ, ಅಲರ್ಜಿಗಳು ಸೋಂಕು, ಟೈಫಾಯಿಡ್, ಬಿಟ್ಟು ಬಿಟ್ಟು ಬರುವ ಜ್ವರ, ರಕ್ತ ಹೀನತೆ ಕಡಿಮೆ ರಕ್ತ ಸಂಚಾರ, ಅಸ್ತಮಾ, ಮಧುಮೇಹ ಬರುವ ಸಾಧ್ಯತೆಗಳಿರುತ್ತವೆ.
ಉದ್ಯೋಗ ಮತ್ತು ವ್ಯಾಪಾರ:---
******************
******************
ಈ ಸಂಖ್ಯೆಯವರು ಹಲವರು ವ್ಯಾಪಾರವನ್ನೇ ಮಾಡಿಕೊಂಡಿರುವರು.ಇತರರೊಡನೆ ಪಾಲುಗಾರರಾಗುದು ಇವರಿಗೆ ಸರಿಯಾಗುವುದಿಲ್ಲ ಆದುದರಿಂದ ಪ್ರತ್ಯೇಕವಾಗಿ ವ್ಯಾಪಾರ ನಡೆಯಿಸುವುದೇ ಇವರಿಗೆ ಲಾಭದಾಯಕವಾಗಿರುವುದು, ಈ ಸಂಖ್ಯೆಯವರು ಹೆಚ್ಚಾಗಿ ಸೌಂದರ್ಯ ವರ್ಧಕ ವೃತ್ತಿ, ಅಥವಾ ಸೌಂದರ್ಯ ವರ್ಧಕಗಳ ತಯಾರಿಕಾ ಘಟಕಗಳಲ್ಲೂ ವೃತ್ತಿ ಮಾಡುತ್ತಾರೆ, ವಸ್ತ್ರದ ಗಿರಣಿ ಮತ್ತು ಕಾರ್ಖಾನೆಗಳು ನಡೆಯಿಸುವುದು, ,ಪರಿಮಳ ದ್ರವ್ಯಗಳನ್ನು ತಯಾರುಮಾಡುವುದು ಲಾಭದಾಯಕವಾಗಿರುತ್ತದೆ, ಉದ್ಯೋಗಗಳಲ್ಲಿ ಸರ್ಕಾರದ ಕೆಲಸಗಳಲ್ಲಿ ದೊಡ್ಡಪದವಿಯನ್ನು ಅಲಂಕರಿಸಬಹುದು, ಕೆಲಸದ ಆಳುಗಳು,ಸೇವಕರು ಮೊದಲಾದವರೊಡನೆ ಆಡಂಬರದ ಜೀವನ ನಡೆಸುವರು.
ಕವಿಗಳು, ಸಾಹಿತಿಗಳು, ಹಾಡುಗಾರರು, ಲಲಿತಕಲೆಗಳಲ್ಲಿ ಆಸಕ್ತಿಯುಳ್ಳವರೂ ಹರಿಕಥೆಗಳನ್ನು ಮಾಡುವವರು,ಪುರಾಣ ಪುಣ್ಯಪ್ರವಚನಗಳನ್ನು ಹೇಳುವವರು ಈ ಎರಡನೇ ಸಂಖ್ಯೆಯಲ್ಲಿ ಜನಿಸಿದವರಾಗಿರುತ್ತಾರೆ.

ಚಂದ್ರಬಲವಿಲ್ಲದ ಈ ಎರಡನೇ ಸಂಖ್ಯೆಯವರು ಮನೆಕೆಲಸ ಮಾಡುವ ಸೇವಕರಾಗಿ ,ದೋಣಿ ಹಡಗು ನಡೆಸುವರಾಗಿ, ನರ್ಸ್ಗಳಾಗಿ ಸೇವಾವೃತ್ತಿಯ ಕೆಲಸಮಾಡುತ್ತಾರೆ. ಲೋಕಸಂಚಾರ ಮಾಡುವುದರಲ್ಲಿ ಆಸಕ್ತಿ, ಹಾಗಾಗಿ ವಿದೇಶ ಪರ್ಯಟನೆ ಮಾಡುತ್ತಾರೆ.
ಚಂದ್ರನ ಕಾಲ ಜೂನ್ ೨೧ರಿಂದ ಜುಲೈ ೨೨
ಈ ವೇಳೆಯಲ್ಲಿ ೨,೧೧.೨೯ ಈ ದಿನಾಂಕಗಳಲ್ಲಿ ಸೋಮವಾರ ಶುಕ್ರವಾರ ಜನಿಸಿದವರಿಗೆ ವಿಶೇಷವಾಗಿ ಚಂದ್ರ ಬಲಶಾಲಿಯಾಗಿರುತ್ತಾನೆ ಅಂತವರು ತುಂಬಾ ಹೆಸರುವಾಸಿಯಾದ (ಪ್ರಖ್ಯಾತಿಹೊಂದಿ) ವ್ಯಕ್ತಿಗಳಾಗಿ ಬಾಳುತ್ತಾರೆ,

ಚಂದ್ರನ ದಿಕ್ಕು-ಪ್ರದೇಶ:---
****************
****************
ಉತ್ತರದಿಕ್ಕು, ಏರಿಗಳು, ಕೊಳಗಳು, ಬಾವಿಗಳು,ಸ್ನಾನಗೃಹಗಳು,ಶೀತಪ್ರದೇಶಗಳು ಎರಡನೇ ಸಂಖ್ಯೆಯವರಿಗೆ ಉತ್ತರದಿಕ್ಕಿಗೆ ಪ್ರಯಾಣ ಶುಭಕರ, ಯಾವುದೇ ಕಾರ್ಯರಂಭವನ್ನು ಉತ್ತರಾಭಿಮುಖವಾಗಿ ಕುಳಿತು ಮಾಡಿದರೆ ಒಳ್ಳೆಯದು, ಕಛೇರಿಯಲ್ಲಿ ಉತ್ತರಾಭಿಮುಖವಾಗಿ ಕುಳಿತುಕೊಳ್ಳುವುದು ಒಳ್ಳೆಯ ಪ್ರಭಾವಮತ್ತು ಜಯವನ್ನು ತರುತ್ತದೆ.
ಅದೃಷ್ಟದ ರತ್ನ:--
**********
**********
ಮುತ್ತು ಇಲ್ಲವೇ ಚಂದ್ರಕಾಂತಮಣಿ ಧರಿಸಿದರೆ ಉತ್ತಮ , ಚಂದ್ರನ ಲೋಹವಾದ ಬೆಳ್ಳಿಯಲ್ಲಿ ಧರಿಸಿದರೆ ಇನ್ನೂ ಉತ್ತಮ, ಗ್ರಹಪೀಡೆ, ಶತೃಭಾದೆ, ಋಣಭಾದೆ, ನಿವಾರಣೆಯಾಗುತ್ತದೆ.
ಅದೃಷ್ಟದ ವರ್ಣ :--
***********
ಬಿಳಿ,ಎಲೆ ಹಸಿರು ಈ ಬಣ್ಣಗಳ ವಸ್ತ್ರ,ಆಭರಣಗಳನ್ನು ಧರಿಸಿದರೆ ಶುಭ. ಈ ಬಣ್ಣಗಳು ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ, ಮಂಜಿನತಹ ಬಿಳಿಬಣ್ಣ ತೇಜಸ್ಸು ಪರಾಕ್ರಮ ನೀಡುತ್ತದೆ.

ಅನುಕೂಲಕರ ದಿನಾಂಕಗಳು:---
******************
೨,೭,೧೧,೨೦,೨೫,೨೯(೨,೭)
ಶುಭವಾದವು.
******************
೨,೭,೧೧,೨೦,೨೫,೨೯(೨,೭)
ಶುಭವಾದವು.
ಅನಾನುಕೂಲಕರ ದಿನಾಂಕಗಳು:---
*******************
*******************
೪,೮,೯,೧೮,೨೭(೪,೮,೯)
ಉತ್ತಮ ದಿಕ್ಕು :-- ವಾಯುವ್ಯ
*************
*************
ಉತ್ತಮ ವಾರಗಳು :--
*************
ಸೋಮವಾರ, ಬುಧವಾರ,ಶುಕ್ರವಾರ
*************
ಸೋಮವಾರ, ಬುಧವಾರ,ಶುಕ್ರವಾರ
ಗ್ರಹಪ್ರೀತಿಗೆ:- --
**********
ಸೋಮವಾರ ವ್ರತ ದುರ್ಗಾಪೂಜೆ ಸ್ತೋತ್ರ ಪಾರಾಯಣ ಅಥವ ಲಕ್ಷ್ಮಿಸ್ತೋತ್ರ,ಪಾರಾಯಣ ಮಾಡಿದರೆ ಸೂಕ್ತ.

ಓಂ ಶ್ರೀಮ್ ಕ್ರೀಮ್ ಚಂ ಚಂದ್ರಾಯ ನಮಃ
ಈ ಮಂತ್ರ ಪಠಣದಿಂದ ಮನಸ್ಸಿನ ತೊಂದರೆ, ಚಿಂತೆಯನ್ನು ದೂರಮಾಡಬಹುದು.
✍ ಡಾ : B. N. ಶೈಲಜಾ ರಮೇಶ್