ಹರಿಃ ಓಂ
ಓಂ ಶ್ರೀ ಮಹಾಗಣಪತಯೇ ನಮಃ
ಓಂ ಶ್ರೀ ಗುರುಭ್ಯೋನಮಃ
ಸಂಖ್ಯಾಶಾಸ್ತ್ರ ಒಂದು ವಿಸ್ತೃತ ನೋಟ :---
Picture source : internet / social media
ಜ್ಯೋತಿಷ್ಯ,ಹಸ್ತರೇಖೆ,ಸಂಖ್ಯಾ,ಈ ಮೂರು ಶಾಸ್ತ್ರಗಳು ಒಂದಕ್ಕೊಂದು ಹೆಣೆದುಕೊಂಡು ಇರುವ ಶಾಸ್ತ್ರಗಳು. ಕ್ರೈಸ್ತನಿಗಿಂತಲೂ ಪೂರ್ವದಲ್ಲಿಯೇ ಈ ಮೂರು ಶಾಸ್ತ್ರಗಳೂ ಭಾರತದಲ್ಲಿಯೂ ಗ್ರೀಸ್ ದೇಶದಲ್ಲಿಯೂ ಒಂದೇ ರೀತಿಯಾಗಿ ಅಭಿವೃದ್ದಿ ಹೊಂದುತ್ತಾ ಪ್ರಸಿದ್ದಿಗೆ ಬಂದಿತು. ಆದರೆ ಈ ಕಾಲದಲ್ಲಿ ಈ ಮೂರು ಶಾಸ್ತ್ರಗಳನ್ನು ಆಧಾರವಾಗಿಟ್ಟುಕೊಂಡು ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಭೂತ,ಭವಿಷ್ಯ,ವರ್ತಮಾನ ಕಾಲಗಳ ಫಲಗಳನ್ನು ತಿಳಿಸುವ ಪಂಡಿತ ದಿಗ್ಗಜರು ಪ್ರಪಂಚದಾದ್ಯಂತ ಇದ್ದಾರೆ.
ಮಾನವನ ಭವಿಷ್ಯವನ್ನು ತಿಳಿಸುವ ಈ ಮೂರು ಶಾಸ್ತ್ರಗಳ ಮಹತ್ವವು ಸಮಾನವಾಗಿಯೇ ಇದ್ದರೂ ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡಕ್ಕಿಂತಲೂ ಸಂಖ್ಯಾಶಾಸ್ತ್ರ(ನ್ಯೂಮರಾಲಜಿ) ದಲ್ಲಿ ಮಾತ್ರ ಒಂದು ವೈಶಿಷ್ಟ್ಯ ಇದೆ. ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡೂ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರಾ ಆ ಬಗೆಯ ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆ ಮಾಡಿಕೊಳ್ಳಲು ಬೇಕಾದ ಸಲಹೆಗಳನ್ನು ಕೊಡುತ್ತದೆ.

ಸಂಖ್ಯಾ ಶಾಸ್ತ್ರದ ಪೂರ್ವೋತ್ತರಗಳು:---
ಆಕಾಶದಲ್ಲಿ ಸಂಚರಿಸುವ ಗ್ರಹಗಳಿಗೆ ಭೂಮಿಯಲ್ಲಿ ಒಂದರಿಂದ ಒಂಬತ್ತರವರೆಗೆ ಪ್ರಚಾರದಲ್ಲಿರುವ ಸಂಖ್ಯೆಗಳೊಂದಿಗೆ ನಿಕಟ ಸಂಬಂಧವಿದೆ. ಇದನ್ನು ಗ್ರಹಿಸಿ ಪ್ರತಿಯೊಂದು ಗ್ರಹಕ್ಕೂ ಸಂಬಂದ ಸಂಖ್ಯೆಯನ್ನು ನಿರ್ಣಯಿಸಿದ್ದಾರೆ. ಇದನ್ನು ನಿರ್ಣಯಿಸಿದವರಲ್ಲಿ ಚಲ್ದಿಯಾ ಎಂಬ ದೇಶದವರು ಗ್ರೀಸ್ ದೇಶದವರು ಅಗ್ರಗಣ್ಯರೆಂದು ಹೇಳಬಹುದು. ನಂತರ ಗ್ರೀಸ್ ದೇಶದ ವೇದಾಂತಿಯಾದ ಪೈಥಾಗರಸ್ ಎಂಬುವರು ಈ ಸಂಖ್ಯಾಶಾಸ್ತ್ರವನ್ನು ಅಭಿವೃದ್ದಿಗೆ ತಂದದ್ದು ಅಲ್ಲದೆ ನಿಯಮಬದ್ದವನ್ನಾಗಿ ಮಾಡಿ ಮಾನವನ ನಿತ್ಯಜೀವನಕ್ಕೆ ಉಪಯೋಗವಾಗುವಂತೆ ಈ ಶಾಸ್ತ್ರವನ್ನು ಪ್ರಚಾರಮಾಡಿಕೊಂಡು ಬಂದರು. ಆಮೇಲೆ ಹಲವು ಪಾಶ್ಚಾತ್ಯ ಪಂಡಿತರು ವಿಶೇಷವಾಗಿ ಚಿರೋ (ಕೈರೋ ) ರಂತಹ ವಿದ್ವಾಂಸರು ಈ ಶಾಸ್ತ್ರವನ್ನು ಯೋಗ್ಯರೀತಿಯಲ್ಲಿ ಉಪಯೋಗಿಸುತ್ತಾ ಪ್ರಚಾರಕ್ಕೆ ತಂದರು.
ಸಂಖ್ಯೆಗಳ ಪ್ರಪಂಚ :- --
ಸಂಖ್ಯೆಗಳಿಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯಲು ಸಾದ್ಯವಿಲ್ಲ. ಅಂದರೆ ಲೋಕದ ವ್ಯವಹಾರಕ್ಕೆ ಸಂಖ್ಯೆಗಳೇ ಆಧಾರವೆಂದು ಅರ್ಥ, ಸಂಖ್ಯೆಗಳು ಎಲ್ಲಕ್ಕೂ ಹೇಗೆ ಆಧಾರವಾಗಿವೆ ಎಂಬುದನ್ನು ಕೆಲವು ಉದಾಹರಣೆಯೊಂದಿಗೆ ತಿಳಿಯೋಣ.
1, ಲೋಕದ ಸೃಷ್ಟಿ,ಸ್ಥಿತಿ,ಲಯಗಳನ್ನು ತಿಳಿಯುವುದು ಸಂಖ್ಯೆಗಳ ಮೂಲಕವೇ, ಕೃತಯುಗ,ತ್ರೇತಾಯುಗ,ದ್ವಾಪರಯುಗ,ಕಲಿಯುಗ ಎಂಬುದಾಗಿ ಕಾಲವನ್ನು ನಾಲ್ಕುಭಾಗಗಳಾಗಿ ವಿಭಾಗಿಸಿ,ಒಂದೊಂದು ಯುಗಗಳಿಗೂ ಕ್ಲಿಪವಾದ ವರ್ಷಗಳನ್ನು ನಿಯಮಿಸಿ,ಒಂದು ಯುಗವು ಕಳೆದುಹೋದನಂತರ ಮತ್ತೊಂದು ಯುಗವು ಆರಂಭವಾಗುವುದೆಂದು ಕೊನೆಗೆ ಪ್ರಳಯ ಎಂದೂ ಲೆಕ್ಕಮಾಡಿ ನಿಷ್ಕರ್ಷಿಸಿರುವುದು ಸಂಖ್ಯೆಗಳ ಸಹಾಯದಿಂದಲೇ
2, ಮನುಷ್ಯನ ಪರಮಾಯುಷ್ಯ ನೂರು ವರ್ಷವೆಂದು ಲೆಕ್ಕಹಾಕುವುದು ಕೂಡ ಸಂಖ್ಯೆಯ ಮುಖಾಂತರವೇ, ಮನುಷ್ಯನ ಶ್ವಾಸೋಚ್ವಾಸದ ಲೆಕ್ಕದ ಮೂಲಕ ಅವನ ಆಯಸ್ಸನ್ನು ನಿರ್ಣಯಿಸಿರುವುದು ಸಂಖ್ಯೆಗಳ ಮೂಲಕವೇ.
3, ಕಾಲವನ್ನು ಕ್ಷಣ , ಗಳಿಗೆ, ಗಂಟೆ, ದಿನ, ತಿಂಗಳು,ವರ್ಷಎಂಬರೀತಿಯಾಗಿ ಅದಕ್ಕೆ ಬೇಕಾದ ಸಂಖ್ಯೆಯಿಂದ ಎಣಿಸಿಯೇ ತೀರ್ಮಾನಿಸುತ್ತೇವೆ.
4, ಬಟ್ಟೆ , ನೆಲ-ಹೊಲಗಳನ್ನು ಮೀಟರ್, ಸೆಂಟೀಮೀಟರ್ ಎಕರೆ, ಎಂಬ ಲೆಕ್ಕದೊಂದಿಗೆ ಅಳೆಯುತ್ತೇವೆ.
5, ದವಸ ದಾನ್ಯಗಳನ್ನು ಒಂದು ಗ್ರಾಂ ನಿಂದ ಹಲವು ಕಿಲೋ ತೂಕದಲ್ಲಿ ಅಳೆಯುತ್ತೇವೆ.
ಈ ಪ್ರಕಾರ ನಮ್ಮ ಜೀವನದ ಪ್ರತಿನಿತ್ಯ ದ ಆಗುಹೋಗುಗಳು ಎಲ್ಲಾ ಸಂಖ್ಯೆ ಗಳ ಮೂಲಕವೇ ಗುರುತಿಸಲ್ಪಡುತ್ತದೆ
ಈ ಪ್ರಕಾರ ನಮ್ಮ ಜೀವನದ ಪ್ರತಿನಿತ್ಯ ದ ಆಗುಹೋಗುಗಳು ಎಲ್ಲಾ ಸಂಖ್ಯೆ ಗಳ ಮೂಲಕವೇ ಗುರುತಿಸಲ್ಪಡುತ್ತದೆ
6, ಪ್ರಾತಃಕಾಲ ಹಾಸಿಗೆ ಬಿಟ್ಟು ಏಳುವುದರಿಂದ ಆರಂಬಿಸಿ ರಾತ್ರಿ ಮಲಗುವವರೆಗೂ ಪ್ರಪಂಚದ ವ್ಯವಹಾರಗಳು ನಡೆಯುತ್ತಲೇ ಇರುವುದು ಸಂಖ್ಯೆಗಳನ್ನು ಅನುಸರಿಸಿಯೇ, ಆದುದರಿಂದ ಸಂಖ್ಯೆಯೇ ಜಗತ್ತು ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ.
ಸಂಖ್ಯೆಗಳು ಒಂದರಿಂದ ಒಂಬತ್ತರ ವರೆಗೆ:---
ಒಂದರಿಂದ ಕೋಟಿ ವರೆಗಿನ ಸಂಖ್ಯೆಗಳಾದರೂ ಅವುಗಳು ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳೊಳಗೆ ಅಡಗಿಬಿಡುವುದು. ಅಂದರೆ,ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳನ್ನು ಒಂದರ ಪಕ್ಕದಲ್ಲಿ ಇನ್ನೋಂದನ್ನು ಬರೆಯುವುದರಿಂದಲೇ ಲೋಕದಲ್ಲಿರುವ ಸಂಖ್ಯೆಗಳು ಎಲ್ಲವೂ ತಿಳಿದುಬರುವುದು.
987654321 ಈ ದೊಡ್ಡಲೆಕ್ಕದಲ್ಲಿ ಒಂಬತ್ತರ ಒಳಗೇ ಇರುವ ಸಂಖ್ಯೆಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದನ್ನು ಬರೆದುದು ಕಂಡುಬರುತ್ತದೆ ಆದುದರಿಂದಲೇ ಇಷ್ಟು ದೊಡ್ಡಲೆಕ್ಕವೂ ೯ ರ ಅಂತರ್ಗತವಾಗಿರುವ ಸಂಖ್ಯೆಯನ್ನೇ ಸ್ಥಾನ ಭೇದದಿಂದ ಉಪಯೋಗಿಸಿರುವುದೆಂಬುದನ್ನು ಸುಲಬವಾಗಿ ತಿಳಿದುಕೊಳ್ಳಬಹುದು.
ಸೊನ್ನೆಗೆ ಸ್ವತಃ ಸ್ಥಾನ-ಮಾನಗಳಿಲ್ಲ. ಅಂದರೆ,ಬೇರೊಂದು ಸಂಖ್ಯೆಯೊಂದಿಗೆ ಸೇರಿದಾಗಲೇ ಸೊನ್ನೆಗೆ ಬೆಲೆ ಇರುವುದು.ಹಾಗೆ ಸಂಖ್ಯೆಯೊಂದಿಗೆ ಸೇರಿದಾಗಲೂ ಒಂದು ಸಂಖ್ಯೆಯನ್ನು ಅದರ ಪಕ್ಕದಲ್ಲಿ ಬರುವ ಸೊನ್ನೆಗೆ ಸ್ಥಾನ ಇರುವುದು.
ಉದಾ:- ೦-ಇದಕ್ಕೆ ಬೆಲೆ ಇಲ್ಲ. ೦೧-ಈ ಸೊನ್ನೆಗೂ ಬೆಲೆ ಇಲ್ಲ. ೧೦-ಇದಕ್ಕೆ ಬೆಲೆ ಇದೆ. ಅಂದರೆ,ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳ ನಂತರ ಬರುವ ಸೊನ್ನೆಗೆ ಮಾತ್ರವೇ ಬೆಲೆ ಇರುವುದು. ಆದರೆ ಸಂಖ್ಯಾಶಾಸ್ತ್ರದಲ್ಲಿ ಸೊನ್ನೆಯನ್ನು ತೆಗೆದುಕೊಂಡು ಇತ್ಯರ್ಥ ಮಾಡಬೇಕಾದ ಸ್ಥಾನ ಮಾನಗಳಿಲ್ಲವೆಂದು ತೀರ್ಮಾನಿಸಬಹುದು.

ಜ್ಯೋತಿಷ್ಯ ಮತ್ತು ಸಂಖ್ಯೆಗಳು:---
ಒಂದರಿಂದ ಒಂಬತ್ತರವರೆಗಿನ ಒಂಬತ್ತು ಸಂಖ್ಯೆಗಳನ್ನು ಮಾತ್ರ(ಅಂದರೆ ಆಧಾರ ಸಂಖ್ಯೆಗಳು ಮಾತ್ರ) ಈ ಶಾಸ್ತ್ರದಲ್ಲಿ ತೆಗೆದುಕೊಂಡಿರುವುದಕ್ಕೆ ಕಾರಣವು ಇಲ್ಲದಿಲ್ಲ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂದವಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
೧೨ರಾಶಿಗಳು, ೯ಗ್ರಹಗಳು, ೨೭ನಕ್ಷತ್ರಗಳು- ಈ ಮೂರನ್ನೂ ಆಧಾರವಾಗಿಟ್ಟುಕೊಂಡು ಜ್ಯೋತಿಷ್ಯಶಾಸ್ತ್ರವು ಮುಂದುವರಿಯುತ್ತದೆ. ೧೨ರಾಶಿಗಳಲ್ಲಿ ೨೭ ನಕ್ಷತ್ರಗಳಿವೆ. ಅಂದರೆ ಒಂದೊಂದು ರಾಶಿಗೂ ಸರಾಸರಿ ೨ ೧/೪ನಕ್ಷತ್ರಗಳು. ಒಂದೊಂದು ನಕ್ಷತ್ರಕ್ಕೂ ೪ ಪಾದಗಳು, ೨ ೧/೪ ನಕ್ಷತ್ರಗಳಿಗೆ ೯ ಪಾದಗಳು. ಅಂದರೆ ಒಂದೊಂದು ರಾಶಿಯಲ್ಲಿಯೂ ೯ ಪಾದಗಳು ಇವೆ. ೧೨ ರಾಶಿಗಳಿಗೆ ಒಟ್ಟು ೧೦೮ ಪಾದಗಳು.
ಅಂದರೆ ೨೭ ನಕ್ಷತ್ರ ಎಂದರೆ ೨+೭=೯,
೧೦೮ ಪಾದಗಳು ಎಂದರೆ ೧+೦+೮=೯,
ಡಿಗ್ರಿ ಎಂಬ ಲೆಕ್ಕವನ್ನು ತೆಗೆದುಕೊಂಡರೂ ರಾಶಿಗೆ ೩೦ ಡಿಗ್ರಿಗಳಂತೆ ೧೨ರಾಶಿಗಳಿಗೆ ೩೬೦ ಡಿಗ್ರಿಗಳು. ಹೀಗೆ ಇವುಗಳ ಆಕಾರ ಲೆಕ್ಕ ೩+೬+೦=೯,
ಈ ಡಿಗ್ರಿಗಳನ್ನು ಕಲೆ(ಮಿನಿಟ್ಟು)ಗಳಾಗಿ ಪರಿವರ್ತಿಸಿದರೆ ೩೬೦ × ೬೦ = ೨೧೬೦೦
ಅಂದರೆ ೨+೧+೬+೦+೦ = ೯ ಮಾತ್ರವೇ ಬರುತ್ತದೆ.

ಆದುದರಿಂದಲೇ ಒಂಬತ್ತು ಗ್ರಹಗಳನ್ನೂ ೧೨ರಾಶಿಗಳನ್ನೂ ೨೭ನಕ್ಷತ್ರಗಳನ್ನೂ ಆಧಾರವಾಗಿಟ್ಟುಕೊಂಡು ಜ್ಯೋತಿಷ್ಯಶಾಸ್ತ್ರದಲ್ಲಿಯೂ ಸಂಖ್ಯೆಗಳಲ್ಲಿ ಪ್ರಧಾನಗಿರುವುದೂ ಉತ್ತಮವಾಗಿರುವುದೂ ೯ ರ ಸಂಖ್ಯೆ ಎಂದೇ ತಿಳಿದು ಬರುತ್ತದೆ. ಇದರಿಂದ ಜ್ಯೋತಿಷ್ಯಕ್ಕೂ ಸಂಖ್ಯೆಗಳಿಗೂ ಇರುವ ಸಂಬಂಧವು ಚೆನ್ನಾಗಿ ಅರ್ಥವಾಗುತ್ತದೆ.
ಆಧಾರ ಸಂಖ್ಯೆಗಳು ಮತ್ತು ವಿಸ್ತಾರ ಸಂಖ್ಯೆಗಳು :---
ಸಂಖ್ಯೆಗಳನ್ನು ಆಧಾರ ಸಂಖ್ಯೆ ಮತ್ತು ವಿಸ್ತಾರ ಸಂಖ್ಯೆಗಳೆಂದು ಎರಡು ಬಗೆಯಾಗಿ ವಿಂಗಡಿಸಬಹುದು.
ಆಧಾರ ಸಂಖ್ಯೆಗಳು:---
ಆಧಾರ ಸಂಖ್ಯೆಗಳು:---
೧ ರಿಂದ ೯ ರವರೆಗಿನ ೯ ಸಂಖ್ಯೆಗಳು ಆಧಾರ ಸಂಖ್ಯೆಗಳು. ಈ ಸಂಖ್ಯೆಗಳು ಹಿಂದೆ ಮುಂದೆ ಬಂದರೆ ಇತರ ಸಂಖ್ಯೆಗಳು ರೂಪಾಂತರವನ್ನು ಹೊಂದುತ್ತವೆ. ಅಲ್ಲದೆ ಅಷ್ಟು ಸಂಖ್ಯೆಗಳನ್ನೂ ಸೇರಿಸಿ ಕೂಡಿಸಿದರೂ ಒಂಬತ್ತರ ಒಳಗೇ ಅಡಗಿಬಿಡುತ್ತದೆ.
ವಿಸ್ತಾರ ಸಂಖ್ಯೆಗಳು:---
೧೦ ರಿಂದ ಹಿಡಿದು ಕೋಟಿವರೆಗಿನ ಸಂಖ್ಯೆಗಳು ಎಲ್ಲವೂ ವಿಸ್ತಾರ ಸಂಖ್ಯೆಗಳು. ಅಂದರೆ ಒಂದರಿಂದ ಒಂಬತ್ತರವರೆಗಿನ ಸಂಖ್ಯೆಗಳನ್ನು ಪಕ್ಕದಲ್ಲಿಯೇ ಬರೆದುಕೊಂಡು ಹೋದರೆ ಈ ಸಂಖ್ಯೆಗಳು ವಿಸ್ತಾರವನ್ನೂ ಅರ್ಥಾತ್ ವ್ಯಾಪಕತ್ವವನ್ನೂ ಹೊಂದುತ್ತವೆ. ಆದುದರಿಂದ ಇವುಗಳನ್ನು ವಿಸ್ತಾರ ಸಂಖ್ಯೆಗಳು ಎನ್ನುತ್ತಾರೆ.
ಉದಾ:- ೧,೨,೩,೪,೫,೬,೭,೮,೯ ಇವು ಆಧಾರ ಸಂಖ್ಯೆಗಳು. ೧೦ ರಿಂದ ಕೋಟಿವರೆಗಿರುವ ಸಂಖ್ಯೆಗಳು ಎಲ್ಲವೂ ವಿಸ್ತಾರಸಂಖ್ಯೆಗಳು.
ನ್ಯೂಮರಾಲಜಿ ಎಂಬ ಸಂಖ್ಯಾ ಶಾಸ್ತ್ರಕ್ಕೆ ವಿಸ್ತಾರ ಸಂಖ್ಯೆಗಳ ಅವಶ್ಯಕತೆಯೇ ಇಲ್ಲ. ಅದಕ್ಕೆ ಆಧಾರ ಸಂಖ್ಯೆಯೇ ಬೇಕಾಗಿರುವುದು. ಅದು ಎಷ್ಟು ದೊಡ್ದ ಸಂಖ್ಯೆಯಾಗಿದ್ದರೂ ಅದನ್ನು ಆಧಾರ ಸಂಖ್ಯೆಗೆ ಬದಲಾಯಿಸಿಕೊಳ್ಳಬೇಕು.
ಉದಾ:- ಒಂದು ವಿಸ್ತಾರ ಸಂಖ್ಯೆ 99೪೫891317 ಆಗಿದ್ದರೆ ಇದನ್ನು
9+9+4+5+8+9+1+3+1+7 = 56
5+ 6 = 11
1+ 1 = 2
ಹೀಗೆ ಇದನ್ನು ಎರಡು ಎಂಬ ಆಧಾರ ಸಂಖ್ಯೆಯನ್ನಾಗಿ ಮಾರ್ಪಡಿಸಿಕೊಳ್ಳಬೇಕು.
ಇದೇ ರೀತಿಯಾಗಿ ಒಬ್ಬರ ಜನ್ಮದಿನ, ತಿಂಗಳು, ವರ್ಷ,ಈ ಮೂರನ್ನೂ ಸೇರಿಸಿ ಆಧಾರ ಸಂಖ್ಯೆಯನ್ನಾಗಿ ಮಾರ್ಪಡಿಸಿಕೊಂಡ ನಂತರವೇ ಅವರ ಭವಿಷ್ಯ ಫಲವನ್ನು ಹೇಳಬೇಕು.

ಮೂರುವಿಧವಾದ ಆಧಾರ ಸಂಖ್ಯೆಗಳು:---
ಈ ಶಾಸ್ತ್ರದಲ್ಲಿ ಮೂರುವಿಧವಾದ ಆಧಾರ ಸಂಖ್ಯೆಗಳನ್ನು ಇಟ್ಟುಕೊಂಡು ಫಲಗಳನ್ನು ಹೇಳಿರುತ್ತಾರೆ.
ಒಬ್ಬ ವ್ಯಕ್ತಿಯ ಜನ್ಮದಿನ, ತಿಂಗಳು, ವರ್ಷ ಈ ಮೂರನ್ನೂ ಸೇರಿಸಿ ಆಧಾರ ಸಂಖ್ಯೆಯನ್ನಾಗಿ ಪರಿವರ್ತಿಸಿ ನಂತರ ಆ ಸಂಖ್ಯೆಯನ್ನು ಆಧರಿಸಿ ಭವಿಷ್ಯ ಫಲವನ್ನು ಹೇಳಲಾಗುತ್ತದೆ.
ಮೇಲೆ ಹೇಳಿದ ಪ್ರಕಾರ ಮೂರು ವಿಧವಾದ ಸಂಖ್ಯೆಗಳನ್ನು ಇಟ್ಟುಕೊಂಡು ಈ ಶಾಸ್ತ್ರ ರೀತ್ಯಾ ಫಲಗಳನ್ನು ಹೇಳಬೇಕು. ಆದರೆ ಮನುಷ್ಯನ ಭವಿಷ್ಯವನ್ನು ಹೇಳುವುದಕ್ಕೆ ಹುಟ್ಟಿದ ದಿನಾಂಕ ಮಾತ್ರವೇ ಸಾಕೆಂದು ಸಂಖ್ಯಾಶಾಸ್ತ್ರ ನಿಪುಣರು ನಿರ್ಣಯಿಸಿದ್ದಾರೆ.
ನಾಮದ ಸಂಖ್ಯೆ :---
ಪ್ರತಿಯೊಬ್ಬ ಮನುಷ್ಯನಿಗೂ ಒಂದು ಹೆಸರು ಇದೆ. ಆ ಹೆಸರು ವ್ಯಕ್ತಿಯ ಪರಿಚಯಕ್ಕಾಗಿ ಇಟ್ಟಿದ್ದರೂ ಸಹ ಅದು ದೈವಾದೀನವಾಗಿಯೂ ಕರ್ಮಧೀನವಾಗಿಯೂ ಬಂದ ಹೆಸರು. ಆದುದರಿಂದ ಆ ಹೆಸರಿನ ಅಕ್ಷರಗಳಿಗೆ ಇರುವ ಒಟ್ಟು ಸಂಖ್ಯೆಯ ಆಧಾರ ದಿಂದ ಫಲವನ್ನು ಹೇಳಲಾಗುತ್ತದೆ. ಅಲ್ಲದೆ ಹೆಸರಿನಲ್ಲಿರುವ ಅಕ್ಷರಗಳನ್ನು ಆಂಗ್ಲ ಭಾಷೆಯ ಅಕ್ಷರಗಳನ್ನಾಗಿ ಇಟ್ಟುಕೊಳ್ಳಬೇಕು. ಆಗ ಮಾತ್ರ ಈ ಕಾಲದ ಶಾಸ್ತ್ರ ಪ್ರಮಾಣದಿಂದ ಫಲವನ್ನು ಹೇಳಲು ಸಾಧ್ಯವಾಗುವುದು.
ವ್ಯಕ್ತಿಯ ಹೆಸರಿನ ಇಂಗ್ಲಿಷ್ ಅಕ್ಷರಗಳನ್ನು ಬಳಸಿಕೊಂಡು, ಒಂದೊಂದು ಅಕ್ಷರಕ್ಕೆ ಬರುವ ಸಂಖ್ಯೆಯನ್ನು ಸೇರಿಸಿ ಕೂಡಿಸಿ. ಬಂದ ಆಧಾರ ಸಂಖ್ಯೆಯನ್ನು ಇಟ್ಟುಕೊಂಡು ಭವಿಷ್ಯ ಹೇಳಲಾಗುತ್ತದೆ.
(ಇಂಗ್ಲಿಷಿನ 'ಎ'ಯಿಂದ 'ಝಡ್' ಅಕ್ಷರಗಳಿಗೆ ಸಂಖ್ಯೆಗಳನ್ನು ನೀಡಲಾಗಿದೆ)
(ಇಂಗ್ಲಿಷಿನ 'ಎ'ಯಿಂದ 'ಝಡ್' ಅಕ್ಷರಗಳಿಗೆ ಸಂಖ್ಯೆಗಳನ್ನು ನೀಡಲಾಗಿದೆ)
A . I. J. Q. Y 1 ನೆ ಸಂಖ್ಯೆಯಾಗುತ್ತದೆ.
B. K. R. 2 ನೆ ಸಂಖ್ಯೆಯಾಗುತ್ತದೆ.
C. G. L. S. 3 ನೆ ಸಂಖ್ಯೆಯಾಗುತ್ತದೆ.
D. T. M. 4 ನೆ ಸಂಖ್ಯೆಯಾಗುತ್ತದೆ.
E. H. N. X. 5 ನೆ ಸಂಖ್ಯೆಯಾಗುತ್ತದೆ.
U. V. W. 6 ನೆ ಸಂಖ್ಯೆಯಾಗುತ್ತದೆ.
Q . Z. 7 ನೆ ಸಂಖ್ಯೆಯಾಗುತ್ತದೆ.
F . P. 8 ನೆ ಸಂಖ್ಯೆಯಾಗುತ್ತದೆ.
B. K. R. 2 ನೆ ಸಂಖ್ಯೆಯಾಗುತ್ತದೆ.
C. G. L. S. 3 ನೆ ಸಂಖ್ಯೆಯಾಗುತ್ತದೆ.
D. T. M. 4 ನೆ ಸಂಖ್ಯೆಯಾಗುತ್ತದೆ.
E. H. N. X. 5 ನೆ ಸಂಖ್ಯೆಯಾಗುತ್ತದೆ.
U. V. W. 6 ನೆ ಸಂಖ್ಯೆಯಾಗುತ್ತದೆ.
Q . Z. 7 ನೆ ಸಂಖ್ಯೆಯಾಗುತ್ತದೆ.
F . P. 8 ನೆ ಸಂಖ್ಯೆಯಾಗುತ್ತದೆ.
ಒಂಬತ್ತನೇ ಸಂಖ್ಯೆಗೆ ಯಾವ ಅಕ್ಷರವೂ ಬರೆದಿರುವುದು ಒಂದು ವಿಶೇಷ, ಒಂಬತ್ತು ಎನ್ನುವುದು ಶಬ್ದಗಳ ಸಂಯುಕ್ತವಾಗಿ ಇದಕ್ಕೆ ಯಾವ ಅಕ್ಷರ ವನ್ನೂ ಕೊಟ್ಟಿಲ್ಲ.
ಹೀಗೆ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಸಂಖ್ಯೆ ಇರುತ್ತದೆ. ಹಾಗೂ ಒಂದೊಂದು ಸಂಖ್ಯೆಗೂ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ.
ಒಂದಕ್ಕೆ -- ಸೂರ್ಯ,
ಎರಡಕ್ಕೆ -- ಚಂದ್ರ,
ಮೂರಕ್ಕೆ. -- ಗುರು,
ನಾಲ್ಕಕ್ಕೆ -- ರಾಹು
ಐದಕ್ಕೆ -- ಬುಧ
ಆರಕ್ಕೆ -- ಶುಕ್ರ,
ಏಳಕ್ಕೆ -- ಕೇತು
ಎಂಟಕ್ಕೆ -- ಶನಿ,
ಒಂಬತ್ತಕ್ಕೆ -- ಕುಜ
ಒಂದಕ್ಕೆ -- ಸೂರ್ಯ,
ಎರಡಕ್ಕೆ -- ಚಂದ್ರ,
ಮೂರಕ್ಕೆ. -- ಗುರು,
ನಾಲ್ಕಕ್ಕೆ -- ರಾಹು
ಐದಕ್ಕೆ -- ಬುಧ
ಆರಕ್ಕೆ -- ಶುಕ್ರ,
ಏಳಕ್ಕೆ -- ಕೇತು
ಎಂಟಕ್ಕೆ -- ಶನಿ,
ಒಂಬತ್ತಕ್ಕೆ -- ಕುಜ
ಹೀಗೆ ಪ್ರತಿ ಸಂಖ್ಯೆಗೂ ಅಧಿಪತಿಯಾಗಿರುತ್ತಾರೆ, ಈ ಗ್ರಹಗಳು ನೀಡುವ ಫಲಗಳ ಆಧಾರದ ಮೇಲೆ ವ್ಯಕ್ತಿಯ ಜೀವನ ಕ್ರಮ ನಡೆಯುತ್ತದೆ.
೧) ಹುಟ್ಟಿದ ದಿನಾಂಕ(ಇಂಗ್ಲೀಷ್ ತಾರೀಖು),
೨) ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ
ಒಟ್ಟು ಸಂಖ್ಯೆ.
3) ಒಬ್ಬರ ಹೆಸರಿನಲ್ಲಿರುವಅಕ್ಷರಗಳನ್ನು ಕೂಡಿಸಿದರೆ ಬರುವ ಸಮಷ್ಟಿ ಸಂಖ್ಯೆ.
(ಸೂಚನೆ: ಈ ಸಮಷ್ಟಿ ಸಂಖ್ಯೆಯು ದೊಡ್ಡದಾಗಿದ್ದರೆ ಅದನ್ನು ಆಧಾರ ಸಂಖ್ಯೆಯನ್ನಾಗಿ ಬದಲಾಯಿಸಿಕೊಳ್ಳಬೇಕು.)
೨) ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ
ಒಟ್ಟು ಸಂಖ್ಯೆ.
3) ಒಬ್ಬರ ಹೆಸರಿನಲ್ಲಿರುವಅಕ್ಷರಗಳನ್ನು ಕೂಡಿಸಿದರೆ ಬರುವ ಸಮಷ್ಟಿ ಸಂಖ್ಯೆ.
(ಸೂಚನೆ: ಈ ಸಮಷ್ಟಿ ಸಂಖ್ಯೆಯು ದೊಡ್ಡದಾಗಿದ್ದರೆ ಅದನ್ನು ಆಧಾರ ಸಂಖ್ಯೆಯನ್ನಾಗಿ ಬದಲಾಯಿಸಿಕೊಳ್ಳಬೇಕು.)
ಉದಾ:- ಒಬ್ಬರು ಹುಟ್ಟಿದ ದಿನಾಂಕ
25 - 03 - 1998 , ಇವರ ಹೆಸರು R. ಸ್ಮರಣ್ R. SMARAN (ಇಂಗ್ಲೀಷ್)
ಇವರ- ೧) ದಿನಾಂಕ ಸಂಖ್ಯೆ. ೨ + 5 = 7
೨) ದಿನಾಂಕ, ತಿಂಗಳು, ವರ್ಷ ಇವುಗಳ ಸಮಷ್ಟಿ ಸಂಖ್ಯೆ
2 + 5 + 0 + 3 + 1 + 9 + 9+ 8 = 37
3 + 7 = 10
1 + 0 = 1
3) ಹೆಸರಿನ ಸಂಖ್ಯೆ R. SMARAN
2 + 3 + 4 + 1 + 2 + 1 + 5 = 18
1 + 8 = 9
. 9. ಇದೇ ಇವರ ಹೆಸರಿನ ಸಂಖ್ಯೆ.

ಆದುದರಿಂದಲೇ. (೧) ಜನ್ಮ ದಿನಾಂಕ ಸಂಖ್ಯೆ
(೨) ಹುಟ್ಟಿದ ದಿನಾಂಕ, ತಿಂಗಳು, ವರ್ಷ ಇವುಗಳ ಸಮಷ್ಟಿಸಂಖ್ಯೆ
(೩)ಹೆಸರಿನ ಸಂಖ್ಯೆ-
ಈ ಮೂರು ಸಂಖ್ಯೆಗಳೂ ಸಂಖ್ಯಾ ಶಾಸ್ತ್ರ ರೀತಿಯಾಗಿ ಜೀವನದ ಫಲವನ್ನು ಹೇಳುವಾಗ ಸಹಾಯವಾಗುತ್ತದೆ.ಈ ಮೂರು ಸಂಖ್ಯೆಗಳು ಒಂದೇ ವಿಧವಾಗಿಯೂ ಅನುಕೂಲ ಸಂಖ್ಯೆಗಳಾಗಿಯೋ ಇದ್ದರೆ ಅವರಿಗೆ ಒಳ್ಳೆಯದು, ಕೆಟ್ಟದ್ದು ಆಗುವ ಕಾಲವನ್ನು ಸರಿಯಾಗಿ ನಿರ್ಣಯಿಸಿ ಹೇಳಲು ಅನುಕೂಲವಾಗುವುದು. ಆದುದರಿಂದ ಈ ಶಾಸ್ತ್ರವನ್ನು ಬಲ್ಲವರು ಒಬ್ಬರ ಹುಟ್ಟಿದ ದಿನಾಂಕವನ್ನು ಇಟ್ಟುಕೊಂಡು ಸ್ವಬಾವ,ಗುಣ,ನಡತೆ ಮೊದಲಾದವುಗಳನ್ನು ತಿಳಿದುಕೊಳ್ಳಬೇಕು.ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಸಮಷ್ಟಿ ಸಂಖ್ಯೆಯನ್ನು ಇಟ್ಟುಕೊಂಡು ಅದೃಷ್ಟ ಯೋಗಗಳನ್ನು ತಿಳಿದುಕೊಳ್ಳಬೇಕು ಹೆಸರಿನ ಸಂಖ್ಯೆಗಳ ಮೂಲಕ ಮೇಲೆ ಹೇಳಿದ ಫಲಗಳು ಉತ್ತಮವಾಗಿ ಕೂಡಿಬರುವುದೆಂದು ತಿಳಿಯಬೇಕು. ಇನ್ನೂ ಹುಟ್ಟಿದ ದಿನಾಂಕ ಸಂಖ್ಯೆ,ಹುಟ್ಟಿದ ದಿನ,ತಿಂಗಳು,ವರ್ಷ ಇವುಗಳ ಸಮಷ್ಟಿ ಸಂಖ್ಯೆ,ಹೆಸರಿನ ಸಂಖ್ಯೆ ಈ ಮೂರಕ್ಕೂ ಸಮಾನತೆ(ಹೊಂದಾಣಿಕೆ)ಯನ್ನು ತರಬೇಕು,.ಆದರೆ ಹುಟ್ಟಿದ ದಿನಾಂಕವನ್ನಾಗಲೀ ಇವುಗಳ ಸಮಷ್ಟಿ ಸಂಖ್ಯೆಯನ್ನಾಗಲೀ ಬದಲಾಯಿಸಲಾಗದು. ಆದುದರಿಂದ ಹೆಸರಿನಲ್ಲಿರುವ ಸಮಷ್ಟಿ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿದೆ,

ಅದು ಹೇಗೆಂದರೆ,ಮೇಲೆ ಉದಾಹರಿಸಿದ: ಆರ್ , ಸ್ಮರಣ್. R. Smaran ಎಂಬ ಹೆಸರಿನಲ್ಲಿ ಒಂದು ಅಕ್ಷರವನ್ನು ಕಡಿಮೆಮಾಡಿಯೋ ಅಥವ ಸೇರಿಸಿಯೋ ಬದಲಾಯಿಸಿದರೆ ಆ ಹೆಸರಿನ ಸಂಖ್ಯೆಯು ಬದಲಾಗುವುದು.
ಉದಾ: ಮೇಲೆ ಕೊಟ್ಟಿರುವ ಹೆಸರಿನಲ್ಲಿ N ಎಂಬ ಅಕ್ಷರದ ನಂತರ ಇನ್ನೊಂದು ಎ- ಯನ್ನು
ಸೇರಿಸಿದರೆ ಹೆಸರಿನ ಸಮಷ್ಟಿ ಸಂಖ್ಯೆ 1 ಆಗುತ್ತದೆ. ಇದೇ ರೀತಿಯಾಗಿ ತಮ್ಮ ಹೆಸರಿನಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬಹುದು.
ಉದಾ: ಮೇಲೆ ಕೊಟ್ಟಿರುವ ಹೆಸರಿನಲ್ಲಿ N ಎಂಬ ಅಕ್ಷರದ ನಂತರ ಇನ್ನೊಂದು ಎ- ಯನ್ನು
ಸೇರಿಸಿದರೆ ಹೆಸರಿನ ಸಮಷ್ಟಿ ಸಂಖ್ಯೆ 1 ಆಗುತ್ತದೆ. ಇದೇ ರೀತಿಯಾಗಿ ತಮ್ಮ ಹೆಸರಿನಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬಹುದು.
ಮೇಲೆ ಹೇಳಿದ ಪ್ರಕಾರ ಮೂರು ವಿಧವಾದ ಸಂಖ್ಯೆಗಳನ್ನು ಇಟ್ಟುಕೊಂಡು ಈ ಶಾಸ್ತ್ರ ರೀತ್ಯಾ ಫಲಗಳನ್ನು ಹೇಳಬೇಕು. ಆದರೆ ಮನುಷ್ಯನ ಭವಿಷ್ಯವನ್ನು ಹೇಳುವುದಕ್ಕೆ ಹುಟ್ಟಿದ ದಿನಾಂಕ ಮಾತ್ರವೇ ಸಾಕೆಂದು ಸಂಖ್ಯಾಶಾಸ್ತ್ರ ನಿಪುಣರು ನಿರ್ಣಯಿಸಿದ್ದಾರೆ.
ವಿವಾಹ :--- ವಿವಾಹವು ಆಗಬೇಕಾಗಿರುವ ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಿವಾಹ ಯೋಗ್ಯವಾದ ಘಟನೆಗಳನ್ನು ನೋಡುವ ಕ್ರಮವೂ ಈ ಶಾಸ್ತ್ರದಲ್ಲಿ ಹೇಳಿದೆ, ಈ ಘಟನೆಗಳನ್ನು ಅವರವರು ಹುಟ್ಟಿದ ದಿನಾಂಕ, ತಿಂಗಳು, ವರ್ಷ,ಇವುಗಳ ಸಮಷ್ಟಿ ಸಂಖ್ಯೆಯನ್ನು ತಗೆದುಕೊಂಡೇ ನೋಡಬೇಕು ಎಂದು ಶಾಸ್ತ್ರಜ್ಞರು ತೀರ್ಮಾನಿಸಿದ್ದಾರೆ,
.ಈ ಘಟನೆಗಳನ್ನು ಮದುವೆಯಾಗಲಿರುವ ವ್ಯಕ್ತಿಗಳಿಗೆ ಮಾತ್ರವಲ್ಲದೆ,ವ್ಯಾಪಾರ ವ್ಯವಹಾರಗಳು ಮತ್ತು ಇತರ ಕಾರ್ಯ ಕಲಾಪಗಳಲ್ಲಿಯೂ, ಅಂದರೆ ಪಾಲುದಾರಿಕೆ , ಯಜಮಾನ -ಸೇವಕರು, ಮೊದಲಾದವರಿಗೂ ಅನ್ವಯಿಸಿಕೊಳ್ಳಬಹುದು. ಹೀಗೆ ಹುಟ್ಟಿದ ದಿನಾಂಕ ಗಳೊಂದಿಗೆ ತಮ್ಮ ಸ್ವಭಾವ ವನ್ನು ಅವರ ಸ್ವಭಾವದಿಂದಿಗೆ ನಿರ್ಣಯಿಸಿ ವ್ಯವಹರಿಸುವುದಕ್ಕೆ ಸಂಖ್ಯಾ ಶಾಸ್ತ್ರವು ಸಹಕಾರಿಯಾಗಿದೆ.

ಗ್ರಹ ಪ್ರೀತಿ :---
ಈ ರೀತಿ ಸಂಖ್ಯೆಗಳುಳ್ಳ ಒಬ್ಬೊಬ್ಬರೂ ತಮಗೆ ಅನುಕೂಲರಾಗಿರುವ ಗ್ರಹಗಳು ಇನ್ನೂ ಹೆಚ್ಚು ಸುಖವನ್ನು ಅನುಗ್ರಹಿಸುವಂತೆ ಮತ್ತು ಪ್ರತಿಕೂಲವಾಗಿರುವ (ಅಶುಭವಾಗಿರುವಾಗ) ಗ್ರಹಗಳ ಶಾಂತಿಯೂ ಪ್ರತಿ ದಿನವೂ ದೇವರ ಪ್ರಾರ್ಥನೆ,ಪೂಜೆ,ವ್ರತ ಮೊದಲಾದವನ್ನು ಮಾಡಬೇಕಾದ ಕ್ರಮಗಳನ್ನು ಆಯಾಯ ಸಂಖ್ಯೆಗಳಿಗಿರುವ ಫಲಗಳನ್ನು ಮುಂದಿನ ಭಾಗದಲ್ಲಿ ತಿಳಿಸಲಾಗುವುದು.
ಮುಂದುವರೆಯುವುದು.......
✍ ಡಾ : B. N. ಶೈಲಜಾ ರಮೇಶ್...
Super madam...ಮುಂದಿನ ಭಾಗ ಯಾವಾಗ madam
ReplyDeleteಆದಷ್ಟು ಶೀಘ್ರವೇ...
Delete