---: ಶನಿ ಗ್ರಹ :---
ಓಂ ಶ್ರೀ ಗಣೇಶಾಯನಮಃ
ಓಂ ಶ್ರೀ ಗುರುಭ್ಯೋ ನಮಃ
--: ಶನಿ ಗ್ರಹ :--
Picture source: Internet/ social media
" ಮಂದೋ ಮುದ0 ಸರ್ವದಾ " ಎಂಬಂತೆ ಶನಿಯು ಸರ್ವಕಾಲದಲ್ಲಿಯೂ ಪ್ರೀತಿಯನ್ನು ಹೊಂದಿದ್ದು ಧೀರ್ಘಆಯುಷ್ಯವನ್ನು ನೀಡಿದರೆ ಭೋಗಭಾಗ್ಯಗಳನ್ನು ಹೊಂದಲು ಸಾಧ್ಯ, ಆದುದರಿಂದ ಆಯುರ್ದಾಯಕ್ಕೆ ಕಾರಣ ಶನಿಯು.
ವಿಭವ ಸಂವತ್ಸರದ ಮಾಘಮಾಸ ಕೃಷ್ಣಪಕ್ಷದ ಚತುರ್ದಶಿ ಜನನ. ( ಕೆಲವರ ಪ್ರಕಾರ ವೈಶಾಖ ಕೃಷ್ಣ ಚತುರ್ದಶಿ ) . ಜನ್ಮ ನಕ್ಷತ್ರ -- ಧನಿಷ್ಠ, ಗೋತ್ರ -- ಕಾಶ್ಯಪ, ಶರೀರ -- ಗಾಢ ನೀಲವರ್ಣ, ಹಸ್ತಸಂಖ್ಯೆ -- 8 , ಗ್ರಹಮಂಡಲದಲ್ಲಿ ಪಶ್ಚಿಮ ಸ್ಥಾನ, ಧಾನ್ಯ -- ತಿಲ ( ಕರಿ ಎಳ್ಳು ) , ವಸ್ತ್ರ -- ನೀಲ ( ಕಪ್ಪು ), ರತ್ನ. -- ನೀಲಮಣಿ, ಆಯುಧಗಳು -- ಶೂಲ, ಛಾಪ, ಬಾಣ, ನರಗಳು, ನೀಲರಥ, ಧನುರಾಕಾರ ಮಂಡಲ, ಪತ್ನಿಯರು -- ಜೇಷ್ಠ ಮತ್ತು ನೀಲದೇವಿ, ವಾಹನ --ನೀಲ ಗೃದ್ರ, ಅಧಿದೇವತೆ -- ಯಮ, ಅಭಿಮಾನದೇವತೆ -- ತ್ರಿಮೂರ್ತಿಗಳು, ಸೌರಾಷ್ಟ್ರಕ್ಕೆ ಅಧಿಪತಿ, ಕರ್ಮಕಾರಕ, ದುಃಖಕಾರಕ, ಆಯುಷ್ಯಕಾರಕ, ನಾಶಕಾರಕ, ಮೃತ್ಯ ಕಾರಕ, ಸೇವಕನು , ಪಾಪಗ್ರಹ, ಮಂದಗ್ರಹ, ಪಕ್ಷಿಗ್ರಹ, ನಪುಂಸಕಗ್ರಹ, ಅಂತ್ಯಜ, ಕೃಷವಾದ ಶರೀರ, ಬೆಕ್ಕಿನಂತೆ ವಿಶಾಲವಾದ ಹಳದಿಬಣ್ಣದ ಕಣ್ಣುಗಳು , ಕಪ್ಪುಬಣ್ಣ, ಒರಟಾದ ರೋಮ, ಅಗಲವಾದ, ದೊಡ್ಡದಾದ ಹಲ್ಲುಗಳು, ದಪ್ಪ ಚರ್ಮ, ಸೋಲು, ಅಪಜಯ, ಅಪಾರ್ಥ ಮಾಡಿಕೊಳ್ಳುವವನು, ಕ್ರೂರದೃಷ್ಟಿ, ಜಿಪುನತನ, ಸಾವು, ಆಲಸ್ಯ, ವಾತರೋಗ, ಮೂರ್ಖತೆ, ಅಂಗವಿಕಲತೆ, ಅನಾಚಾರ, ಬಹುಕಾಲ ಬದುಕುವವನು, ಶಿಶಿರಋತು ವಿಗೆ ಅಧಿಪತಿ, ಮೋಸಗಾರ, ಅಧಿಕಕೋಪ, ಸ್ನಾಯು ಮಾಂಸಖಂಡಗಳಿಗೆ ಅಧಿಪತಿ, ವಾಸ -- ಪರ್ವತ ಗುಡ್ಡ ಪ್ರದೇಶ, ಕಸದರಾಶಿ, ಹರಿದಬಟ್ಟೆ, ಧಾತು -- ಕಬ್ಬಿಣ, ಎತ್ತರವಾದ ತೆಳುದೇಹ , ವೃದ್ದನು, ವಾಯು ಮತ್ತು ಭೂತತ್ವದ ಗ್ರಹನು, ದೀರ್ಘವಾದ ಕಾಯಿಲೆ, ಶ್ರಮದಿಂದ ಸಂಪಾದನೆ, ಧರ್ಮಶಾಸ್ತ್ರದಲ್ಲಿ ಆಸಕ್ತಿ, ಶತ್ರುಭಯ, ಪ್ರರಬ್ಧಕರ್ಮದ ಪ್ರಕಾರ ಫಲಕೊಡುತ್ತಾನೆ, ಅನುಮಾನ, ಎಲ್ಲಾಕೆಲಸದಲ್ಲೂ ನಿಧಾನ ಪ್ರಗತಿ,ವಿಪರೀತವಾದ ಖರ್ಚು, ತಮೋಗುಣವುಳ್ಳ ಗ್ರಹ, ಶೂದ್ರಜಾತಿ, ರುಚಿ -- ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇಷ್ಟ, ಒಗರು ಪದಾರ್ಥಗಳು, ಸ್ಮಶಾನ, ವೈದ್ಯಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ವಾಹನ ಬಿಡಿಭಾಗ, ಗಣಿಕೆಲಸ, ಭೂಗರ್ಭಶಾಸ್ತ್ರ, ಇವೆಲ್ಲವೂ ಶನಿಯ ಕಾರಕತ್ವಕ್ಕೊಳಪಡುತ್ತದೆ, ಅವಸಾನ,ಪತಿತನಾಗುವುದು, ಸೆರೆವಾಸ, "ದುಃಖೋಮಾರ್ಥಾ0ಡಾತ್ಮಜಹ" ಎನ್ನುವಂತೆ ತಾನು ದುಃಖವನ್ನು ಅನುಭವಿಸಿ ಪ್ರಪಂಚಕ್ಕೆ ಸುಖವನ್ನುಂಟುಮಾಡುವ ಶ್ರಮಜೀವಿಗಳು, ಮಂದನಾದ್ದರಿಂದ ಜೀವಿತಾಂತ್ಯದಲ್ಲಿ ಬರುವ ಸುಖ ಸಂಪತ್ತು, ಭಯ ದುಃಖ ಅವಮಾನ, ಅನಾರೋಗ್ಯ, ದಾರಿದ್ರ್ಯ, ಸೇವಕ, ಅಪವಾದಗಳು, ನಿಂದೆ ಕಷ್ಟಗಳು, ನೀಚಜನರ ಸಹವಾಸ, ಕಪ್ಪುಬಣ್ಣ, ಸೋಂಬೇರಿತನ, ಕೃಷಿ ಸಾಧನಗಳು, ಜೈಲುವಾಸ, ಮೊಂಡುತನ, ವಾತವ್ಯಾಧಿ, ನಿರಾಶೆ, ಜೂಜಾಡುವುದು, ನೀಚಸ್ತ್ರೀಯರ ಸಹವಾಸ, ಕೆಳಮಟ್ಟದ ಮೋಜುಮಸ್ತಿ, ಉದ್ಯೋಗ, ಜೀವನಮಾರ್ಗ, ಶ್ರಮ, ತಾಮಸಪ್ರವೃತ್ತಿ, ಸಹನೆ ಆಧ್ಯಾತ್ಮಿಕತೆ, ಧಾರ್ಮಿಕಭಾವ, ನಾಸ್ತಿಕತೆ, ಹಲ್ಲುಗಳು, ಕರ್ಮಕ್ಕೆ ತಕ್ಕ ಪ್ರತಿಫಲ ದೊರೆಯದಿರುವುದು, ಕೃಶವಾದ ಶರೀರ, ಉಬ್ಬಿದನರಗಳು, ಎತ್ತರವಾದ ದೇಹ, ಉಬ್ಬಿದಹಲ್ಲು, ಒರಟಾದ ಉಗುರು, ಆಲಸ್ಯವಂತ, ನೀಲಿಮಿಶ್ರಿತ ಕಪ್ಪುಬಣ್ಣ, ನಿರ್ದಯಿ, ಮೂರ್ಖ, " ಶನೈ ಶ್ಚರ " ಹೆಸರೇ ಸೂಚಿಸುವಂತೆ ನಿಧಾನಗತಿಯ ಚಲನೆ ( ಸಂಸ್ಕೃತದಲ್ಲಿ " ಶನೈ: " ಎಂದರೆ ನಿಧಾನವೆಂದರ್ಥ ) , ಶನಿಯ ಚಲನೆ ನಿಧಾನ ಗತಿಯಾದ್ದರಿಂದ ಕೆಲವರು ಇವನನ್ನು ಕುಂಟ ಎಂದಿದ್ದಾರೆ, ಕಲುಷಿತ ಪ್ರದೇಶ, ಶ್ರಮಜೀವಿಗಳು ಕೆಲಸ ಮಾಡುವ ಜಾಗ, ಶಾಸ್ತಾದೇವತೆಯ ಮಂದಿರ, ಪಶ್ಚಿಮ ದಿಕ್ಕು ಶನಿಯ ಸಂಚಾರ ಸ್ಥಾನವಾಗಿದೆ.
---: ಪುರಾಣದಲ್ಲಿ ಶನಿಗ್ರಹ :---
Picture source: Internet/ social media
ಕಪ್ಪು ಎನಿಸಿದ ಕಡುನೀಲಿ ಬಣ್ಣದ ಶರೀರ, ಗುಳಿಬಿದ್ದ ಕಣ್ಣುಗಳು, ಚಾಡಿಹೇಳಿ ಜಗಳ ಹುಟ್ಟಿಸುವ ಸ್ವಭಾವ, ಕೋಲುದೇಹ, ಆಲಸ್ಯ, ಮೂರ್ಖತೆ ದೊಡ್ಡ ಉಗುರು -- ಹಲ್ಲುಗಳು, ರೋಮ ಮುಚ್ಚಿದ ಶರೀರ, ತಾಮಸ ಪ್ರಕೃತಿ, ಅತಿಕೋಪ, ಮುಪ್ಪು, ಅತಿನೀಲಿ ಬಣ್ಣದ ಉಡುಗೆಗಳು, ನಾಲ್ಕು ಕೈಗಳಲ್ಲಿ -- ಬಿಲ್ಲು ಚರ್ಮ ಬಾಣ ಶೂಲಗಳನ್ನು ಧರಿಸಿದ ಗೃದ್ರವಾಹನ , ಇಂದ್ರನೀಲದಂತೆ ಮೈಕಾಂತಿ ಹೊಂದಿದ ಈತನ ಚಲನೆ ನಿಧಾನ ( ಮಂದ ಗತಿಯ ಚಲನೆ ), ಇವು ಶಾಸ್ತ್ರಜ್ಞರು ಶನಿಯನ್ನು ಕಂಡ ರೀತಿ.
ಮಂದಗತಿಯ ಚಲನೆಆದ್ದರಿಂದ , ಮಂದ, ಸ್ಥಿರ, ಶನೈಶ್ಚರ, ರವಿಸುತ, ಸೂರ್ಯಪುತ್ರ ಇವು ಈತನ ಪ್ರಸಿದ್ಧ ನಾಮಗಳು. ಈತ ಗ್ರಹಗಳಲ್ಲಿ ತೀಕ್ಷ್ಣಗ್ರಹ, ಸ್ವಾಭಿಮಾನಿ.
ಸೂರ್ಯನಿಗೆ ಛಾಯಾದೇವಿಯಲ್ಲಿ ಹುಟ್ಟಿದ ಎರಡನೇ ಮಗನೇ ಶನೈಶ್ಚರ, ಅಣ್ಣ ಸಾವರ್ಣಿಮನು, ತಂಗಿ ತಪತಿ.
ಬ್ರಹ್ಮಮಾನಸ ಪುತ್ರನಾದ ತ್ವಷ್ಣ ತನ್ನ ಪುತ್ರಿಯಾದ ಸಂಜ್ಞಾ ( ಸಂಧ್ಯಾ) ದೇವಿಯನ್ನು ಸೂರ್ಯನಿಗೆ ಕೊಟ್ಟು ಮದುವೆ ಮಾಡಿದ ನಂತರ ಅವರಿಗೆ ವೈವಸ್ವತ ಮನು, ಯಮ ಹಾಗೂ ಯಮುನೆಗೆ ಜನ್ಮನೀಡಿದರು, ಕಾಲಕ್ರಮೇಣ ಸೂರ್ಯನ ಆ ಮಹಾಪ್ರಭೆಯನ್ನು ತಾಳಲಾರದೆ, ಸಂಧ್ಯಾ ತನ್ನದೇ ಆದ ಛಾಯಾರೂಪಕ್ಕೆ ಜೀವನೀಡಿ ತಂದೆ ಮನೆಗೆ ಹೊರಟು ಹೋದಳು, ಮತ್ತೆ ಸೂರ್ಯಾ ಮತ್ತು ಛಾಯಾದೇವಿಗೆ ಇಬ್ಬರು ಗಂಡು ಮಕ್ಕಳು, ಅವರೇ ಸಾವರ್ಣಿ ಮತ್ತು ಶನೈಶ್ಚರ ಮತ್ತು ತಂಗಿ ತಪತಿ. ಶ್ರೇಷ್ಠಯೋಗ, ತಪಸ್ಸಿನಿಂದ ಮಹಾಜ್ಞಾನಿಯಾಗಿ ದೇಹವನ್ನು ದಂಡಿಸಿ ನಿರ್ಮಾಮ್ಸ ದೇಹ ಹೊಂದಿದನು.
ಶನೈಶ್ಚರ ಸ್ವಾಮಿಯ ಹೆಸರು ಕೇಳುತ್ತಿದ್ದಂತೆ ಪ್ರತಿಯೊಬ್ಬರು ಒಂದು ಕ್ಷಣ ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾರೆ, ಕಾರಣ...... ದೇವಾದಿದೇವತೆಗಳೇ ಈತನ ಆರ್ಭಟಕ್ಕೆ ದಂಗಾಗಿ ಹೋಗಿದ್ದಾರೆ, ಕಾರಣ...... ಶ್ರೀಚಕ್ರದೇವತೆಯೂ ಶನಿಗೆ ಅಂತಹ ಅಧಿಕಾರ ನೀಡಿದ್ದಾರೆ, ಶನಿಯು ಕರ್ಮಕಾರಕ ಗ್ರಹ, ಈತನ ಪತ್ನಿಯು ಜೇಸ್ಟಾದೇವಿಯಾಗಿದ್ದು ಈಕೆ ಚಿತ್ರರಥನ ಮಗಳು, ಒಂದು ಸಲ ಈಕೆ ಪುತ್ರಾಕಾಂಕ್ಷಿಯಾಗಿ ಶನಿದೇವನ ಬಳಿಗೆ ಬರಲು, ಧ್ಯಾನಸ್ತನಾಗಿ ಕುಳಿತಿದ್ದನ್ನು ಕಂಡು ಬೇಸರಗೊಂಡು, ಭವಿಷ್ಯದಲ್ಲಿ ನಿನ್ನದೃಷ್ಟಿಯು ಕೆಳಮುಖವಾಗಲಿ ನಿನ್ನ ದೃಷ್ಟಿಯಿಂದ ನಾನಾಬಗೆಯ ತೊಂದರೆಗಳುಂಟಾಗಲಿ ಎಂದು ಶಾಪವನ್ನಿಟ್ಟಳು, ಪತ್ನಿ ಕೋಪದ ಶಾಪವೇ ಶನಿಯ ದೃಷ್ಟಿಯಿಂದುಂಟಾಗುವ ಪರಿಣಾಮಗಳಿಗೆ ಕಾರಣ.
ಶನಿಯ ಅದ್ವಿತೀಯ ಶಕ್ತಿಗೆ ಸಮಸ್ತ ದೈವಶಕ್ತಿಗಳೇ ಕಂಪಿಸತೊಡಗುತ್ತವೆ ಆದ್ದರಿಂದ ಈಶ್ವರನು ಶನಿಯನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡು ಅವರವರ ಕರ್ಮಗಳಿಗೆ ಅನುಸಾರವಾಗಿ ಶಿಕ್ಷೆ ನೀಡಲು ಮಾತ್ರ ಅಧಿಕಾರ ನೀಡಿದ್ದಾರೆ, ಶನಿಯು ಇತರ ಗ್ರಹಗಳ ಮೇಲೂ ಆಕ್ರಮಣ ಮಾಡಲು ಮುಂದಾದಾಗ , ಸೂರ್ಯನಿಗೆ ಮಗನ ಈ ಚಿಂತನೆ ಒಪ್ಪಿಗೆ ಆಗದೆ ಹಲವು ಬಾರಿ ಬುದ್ದಿ ಹೇಳಿದರು ಕೇಳದೆ ಇದ್ದಾಗ ಸೂರ್ಯನು ಈಶ್ವರನ ಮೊರೆ ಹೋಗಿ ವಿಷಯ ತಿಳಿಸಲು , ಈಶ್ವರನು ಶನಿಗೆ ಎಚ್ಚಸಿದರು , ಆತನು ನಿರ್ಲಕ್ಷಿಸಲು ಅವರಿಬ್ಬರ ಮಧ್ಯ ಯುದ್ಧವಾಯಿತು, ಶನಿಯು ಶಿವಗಣಗಳನ್ನು ಹಿಂಸೆಮಾಡತೊಡಗಿದಾಗ ಸಿಟ್ಟಿನಿಂದ ಶಿವ ತನ್ನ ಮೂರನೇ ಕಣ್ಣನ್ನು ತೆರೆದ, ಶನಿಯೂ ಕೂಡ ಅದಕ್ಕೆ ಸಮನಾದ ಕ್ರೂರದೃಷ್ಟಿ ಬೀರಿ ನಿಂತ, ಆಗ ಶಿವನು ತನ್ನ ತ್ರಿಶೂಲದಿಂದ ಶನಿದೇವನ ಮೇಲೆ ಹರಿಹಾಯಲಾಗಿ ಶನಿಯು ಅದೃಶ್ಯನಾದ, ಆಗ ಮಗನ ಈ ವ್ಯಥೆಯನ್ನು ನೋಡಲಾರದೆ ಸೂರ್ಯನು ಮಗನ ಪರವಾಗಿ ಶಿವನಲ್ಲಿ ರಕ್ಷಣೆ ಕೋರಿ ಯಾಚಿಸಿದನು, ಕರುಣಾಮಯಿಯಾದ ಶಿವ ಕ್ಷಮೆಯನ್ನು ನೀಡಿದನು, ಶಿವನ ಸರ್ವಾಧಿಕಾರವನ್ನು ಶನಿದೇವನು ಒಪ್ಪಿಕೊಂಡಿದ್ದರಿಂದ ಶಿವನು ತನ್ನ ದಂಡಾದಿಕಾರಿ ಪದವಿಯನ್ನು ಶನಿದೇವನಿಗೆ ನೀಡಿದ ಕಾರಣ ಶನಿಯು "ಶನೇಶ್ವರ" ನಾದ.
ಶನಿಯ ಚಲನೆ ನಿಧಾನ ಗತಿಯಾದ್ದರಿಂದ, ಶನಿಯನ್ನು ಮಂದ, ಕುಂಟು ಎನ್ನಲಾಗುತ್ತದೆ. ಬ್ರಹ್ಮ ವೈವರ್ತ ಪುರಾಣದ ಪ್ರಕಾರ ಪಾರ್ವತಿಯ ಅಂಶದಿಂದ ಸುಂದರವಾದ ಮಗು ಗಣೇಶನು ಹುಟ್ಟಿದ ನಂತರ ಸಮಸ್ತ ದೇವತೆಗಳು ನವಗ್ರಹರು ಬಂದರು, ಎಲ್ಲರೂ ಮಗುವನ್ನು ನೋಡಿ ಹಾಡಿ ಹೊಗಳುತ್ತಿದ್ದರೂ ಶನಿಯು ಮಾತ್ರ ಮಗುವನ್ನು ನೋಡಲಿಲ್ಲ, ಆಗ ಮಗುವನ್ನು ನೋಡು ಎಂದು ಹೇಳಲಾಗಿ , ಶನಿಯು ತನ್ನ ವಕ್ರ ದೃಷ್ಟಿಯಿಂದ ಮಗುವನ್ನು ನೋಡಿದ ತಕ್ಷಣ ಮಗುವಿನ ತಲೆ ಹೋಗಿ ಅಂಗಹೀನವಾಯ್ತು, ಕೋಪಗೊಂಡ ಪಾರ್ವತಿಯು ಅಂಗಹೀನನಾಗೆಂದು ಶನಿಯನ್ನು ಶಪಿಸಲು, ಶನಿಯು ಕುಂಟನಾದ.
ಶನಿಯು ಹೆಚ್ಚಾಗಿ ಕೆಟ್ಟದ್ದನ್ನು ಪ್ರಚೋದಿಸುತ್ತಾನೆ, ಅಂತೆಯೇ ವಿನಾಕಾರಣ ತೊಂದರೆಗೆ ಸಿಲುಕಿಸುತ್ತಾನೆ, ಮನಸ್ಸನ್ನು ಚಂಚಲಗೊಳಿಸುತ್ತಾನೆ, ಆದರೆ ದೃತಿಗೆಡದೆ ಯಾರು ಮುನ್ನುಗ್ಗುತ್ತಾರೋ ಅಂತಹವರನ್ನು ಮುನ್ನಡೆಸುತ್ತಾನೆ, ಉದಾ:-- ಸೂರ್ಯವಂಶ ಪ್ರದೀಪಕ, ರಘುವಂಶ ತಿಲಕ ಶ್ರೀರಾಮಚಂದ್ರ... 14 ವರ್ಷ ಬೆಂಬಿಡದೆ ಕಾಡಿ, ಮಡದಿಯಿಂದ ದೂರ ಮಾಡಿದ, ಶ್ರೀ ರಾಮನು ದೃತಿಗೆಡದೆ ರಕ್ಕಸ ಕುಲವನ್ನು ನಾಶಮಾಡಿ ಲೋಕೋದ್ದಾರ ಮಾಡಿದ.
ಯದುಕುಲ ತಿಲಕ ಶ್ರೀಕೃಷ್ಣನಿಗೆ ಕಳ್ಳತನದ ಆರೋಪ ಹೊರಿಸಿ, ಶಮಂತಕ ಮಣಿಯನ್ನು ಪುನಃ ತಂದು ಕೊಡಿಸಿದ, ಜಾಂಬವಾದಿಗಳಿಗೆ ದರುಶನ ಭಾಗ್ಯ ಕೋಡಿಸಿದ .
ಭರತ ಕುಲದ ಸತ್ಯ ಹರಿಶ್ಚಂದ್ರ ಸತ್ಯಕ್ಕಾಗಿ ರಾಜ್ಯ ಭೋಗಾದಿಗಳನ್ನು ತ್ಯಜಿಸಿ, ಹೆಂಡತಿ ಮಕ್ಕಳನ್ನು ತೊರೆಸಿ, ಕೊನೆಗೆ ಸತ್ಯವನ್ನೇ ಗೆದ್ದು ಕೊಟ್ಟ ಶನಿದೇವ.
ಇನ್ನು ರಾಜ ವಿಕ್ರಮಾದಿತ್ಯ ಶನಿಯನ್ನು ತುಚ್ಛ ಮಾತುಗಳಿ0ದ ದೂಷಿಸಿ ಅನಂತ ಕಷ್ಟಗಳನ್ನುನುಭವಿಸಿ ನಂತರ ಶನೇಶ್ವರನ ಪರಮ ಭಕ್ತನೆನಿಸಿದ. ಹೀಗೆ ಶನಿದೇವ ಯಾರನ್ನೂ ಬಿಟ್ಟಿಲ್ಲ.
ಶನೈಶ್ಚರ ಸ್ವಾಮಿಯ ಶುಭದೃಷ್ಟಿಯಿಂದ ಮನುಷ್ಯ ತುಂಬಾ ಪ್ರಬಲವಾಗಿ ದೊಡ್ಡ ಮನೆತನ ಹೊಂದಿ, ತನ್ನ ಮನೆತನದ ಹಿರಿಯರ ಸೇವೆ ಮಾಡಿ ಅವರ ಹಾರೈಕೆಯಿಂದ ವಂಶಾಭಿವೃದ್ಧಿಯನ್ನು, ಪಿತ್ರಾರ್ಜಿತ ಉಡುಗೊರೆಯನ್ನು, ಕುಟುಂಬದಲ್ಲಿ ಸಂತೋಷವನ್ನು , ಧೀರ್ಘಯುಷ್ಯ ಹೊಂದಿ ಸುಖಿಯಾಗುತ್ತಾನೆ. ಶುಭದೃಷ್ಟಿ ಪ್ರಬಲವಾಗಿದ್ರೆ ನ್ಯಾಯಾದೀಶರಾಗುತ್ತಾರೆ, ವಾಕ್ಚಾತುರ್ಯವನ್ನು ಪಡೆದವರಾಗುತ್ತಾರೆ, ಸ್ವಾಭಿಮಾನಿಯಾಗುತ್ತಾರೆ. ಇತರೆ ಎಂಟು ಗ್ರಹಗಳ ಅಶುಭದೃಷ್ಟಿಯುದ್ದರು ಶನಿದೇವನ ಶುಭದೃಷ್ಟಿಯೊಂದೇ ಎಂತಹ ಸಂಕಟ ಗಂಡಾಂತರಗಳನ್ನು ಪಾರುಮಾಡಬಲ್ಲದು. ಶನಿದೇವರ ಅಶುಭ ದೃಷ್ಟಿಯಿದ್ದು, ಉಳಿದ ಎಂಟು ಗ್ರಹಗಳು ಶುಭರಾಗಿದ್ದರೂ ಗಂಡಾಂತರ ತಪ್ಪಿಸಲು ಅಸಾಧ್ಯ.
ಉದಾ :-- ರಾವಣ
ರಾವಣನು ತನ್ನ ಮಹಾ ತಪಸ್ಸಿನ ಫಲದಿಂದ ಆದಿತ್ಯಾದಿ ನವಗ್ರಹರನ್ನು ತನ್ನ ಹತೋಟಿಯಲ್ಲಿಟ್ಟು ಕೊಂಡ, ರಾವಣನು ತನ್ನ ಪುತ್ರ ಜನನ ಸಮಯದಲ್ಲಿ ಯಾವ ಕಂಟಕಗಳು ಇಲ್ಲದ ಲೋಕ ಪ್ರಖ್ಯಾತನಾದ ಧೀರ್ಘಆಯುವಾದ ( ಮರಣವೇ ಇಲ್ಲದ ) ಮಗ ಜನಿಸಲೆಂದು ನವಗ್ರಹರನ್ನು ಕರೆಯಿಸಿ ಶುಭದೃಷ್ಟಿ ನೀಡಿರೆಂದು ಅಜ್ಞಾಪಿಸುತ್ತಾನೆ, ಅದರಂತೆ ಎಲ್ಲರೂ ಆಜ್ಞೆ ಪಾಲಿಸ್ಸುತ್ತಾರೆ, ಆದರೆ ಇನ್ನೇನು ಮಗು ಜನಿಸಬೇಕು ಅಷ್ಟರಲ್ಲಿ ಶನಿದೇವನು ತನ್ನ ಒಂದು ಕಾಲನ್ನು ಮಡಿಸಿ ಕೊಂಡು ಕುಳಿತುಕೊಳ್ಳುತ್ತಾನೆ, ಆಯುಷ್ಕಾರಕನಾದ ಶನಿದೇವ ಮಗುವಿಗೆ ಅಲ್ಪಾಯುವನ್ನು ನೀಡುತ್ತಾನೆ. ಎಲ್ಲಾ ತೆರನಾದ ಭಾಗ್ಯವಿದ್ದರೂ ರಾವಣನ ಮಗ ಅಲ್ಪಾಯುವಾಗುತ್ತಾನೆ.
ಹೀಗೆ ಶನಿದೇವನ ಲೀಲೆ ಅದ್ಭುತ, ಶನಿದೇವನ ಅಶುಭದೃಸ್ಟಿಯಿಂದ ಅಲ್ಪಾಯುಷಿಯೂ, ಬಡವನೂ, ಅತಿಕಾಮಿಯೂ, ಮಾನಹೀನನು, ಮನೋರೋಗಿಯೂ, ವಂಶಾಭಿವೃದ್ಧಿಗೆ ಅಡಚನೆಯೂ, ಅಂಗವಿಕಲನು, ಬಡಕಲು ಶರೀರದವನು, ಸೋಮಾರಿಯು, ಅಭಿವೃದ್ಧಿಗೆ ಜಡತ್ವ, ವಾಯು, ಸಂಧಿವಾತ, ಮೂಳೆ ಮುರಿಯುವಿಕೆ, ಮಲಿನತೆ, ಮಹಾ ದರಿದ್ರರೂ ಆಗುತ್ತಾರೆ.
ಶನಿಯ ಶುಭದೃಷ್ಟಿ ಪಡೆಯಲು ಆಂಜನೆಯನಿಗೆ ಹುಚ್ಚೆಳ್ಳು ( ಎಳ್ಳೆಣ್ಣೆ) ಎಣ್ಣೆಯಿಂದ ಅಭಿಷೇಕ, ಮತ್ತು ಇದೇ ಎಣ್ಣೆಯಿಂದ ದೀಪ ಹಚ್ಚು ವುದು, ನೀಲ ಅಥವಾ ಕಪ್ಪುವಸ್ತ್ರ, ಶಂಕದ ಹೂವು, ಎಳ್ಳು, ಕಬ್ಬಿಣ ದಾನ ಮಾಡಬೇಕು, ಜಗತ್ತಿನ ಯಾವುದೇ ಕೆಳಮಟ್ಟದ ವಸ್ತುವಾಗಲೀ, ಪ್ರಾಣಿಗಳನ್ನಾಗಲೀ ತಿರಸ್ಕಾರದಿಂದ ಅವಮಾನಿಸಬಾರದು , ಅಧರ್ಮ, ಅನ್ಯಾಯ, ಮೋಸ ಕಪಟ, ವಂಚನೆ ಇವುಗಳು ಶನಿಯ ಮಹಾನ್ ಶತ್ರುಗಳು.
ಮನೆಯ ಹಿರಿಯರನ್ನು ತಾತ್ಸಾರ ಮಾಡುವುದು, ಎಲ್ಲಾ ಪುಣ್ಯವನ್ನೂ ಕೊಂದು ಹಾಕುತ್ತದೆ, ಏಕೆಂದರೆ ಮನೆಯ ಹಿರಿಯರ ಪ್ರತೀಕವೆ ಶನಿದೇವ, ಹಾಗೆಯೇ ಮರಣ ಹೊಂದಿದವರಿಗೆ ಕಾರ್ಯಗಳನ್ನು ಮಾಡದೇ ಹೋದರೆ ಶನಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ, ಏಕೆಂದರೆ ಶನಿಯು ಪ್ರೇತಕಾರಕ ಗ್ರಹವೂ ಆಗಿದ್ದಾನೆ, ಆದ್ದರಿಂದ ಗತಿಸಿದವರ ಸದ್ಗತಿಯಿಂದ ಹಿರಿಯರ ಹಾರೈಕೆಯಿಂದ ಶನಿಯ ಶುಭದೃಷ್ಟಿ ಪಡೆಯಬಹುದು.
ಶನಿಗ್ರಹವು ಪ್ರತಿಯೊಬ್ಬ ಜೀವಿಯ ಜೀವನದಲ್ಲೂ ಮೂರು ಬಾರಿ ಪ್ರವೇಶ ಮಾಡುತ್ತದೆ ಅದೇ ಸಾಡೇಸಾತ್ , ಏಳೂವರೆ ವರ್ಷದ ಶನಿ ( ಏಳರಾಟ ಶನಿಕಾಟ ) . ಅಂದರೆ.... ನಮ್ಮ ಜನ್ಮ ರಾಶಿಯ ಹಿಂದಿನ ಮನೆಯಲ್ಲಿ ಎರಡೂವರೆ ವರ್ಷ, ಜನ್ಮ ರಾಶಿಯಲ್ಲಿ ಎರಡೂವರೆ ವರ್ಷ, ಜನ್ಮರಾಶಿಯಿಂದ ಎರಡನೇ ಮನೆಯಲ್ಲಿ ಎರಡುವರೇವರ್ಷದ ಶನಿ ಸಂಚಾರದ ಕಾಲವನ್ನು ಸಾಡೇ ಸಾತಿ ಎನ್ನುತ್ತಾರೆ, ಹೀ ಗೆ 3 ಬಾರಿ ಮನುಷ್ಯನ ಜೀವನದಲ್ಲಿ ಪ್ರವೇಶ ಮಾಡುತ್ತಾನೆ.
ಮೊದಲ ಸಲ ವಿಪರೀತ ಕಷ್ಟಗಳ ಸುರಿಮಳೆ ಕರೆದು, ಎರಡನೇ ಸಲ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯಾಗುವಂತೆ ಮಾಡಿ, ಮೂರನೇ ಬಾರಿಗೆ ಧನನಷ್ಟ, ಮಾನಹಾನಿ, ಮೃತ್ಯು, ಮೃತ್ಯುವಿಗೆ ಸಮಾನವಾದ ತೊಂದರೆ ನೀಡುತ್ತಾನೆ.
ಜನ್ಮರಾಶಿಯ ಹಿಂದಿನ ರಾಶಿಯಲ್ಲಿ (12 ನೇ ಮನೆ ) ಸಂಚಾರ ಮಾಡುವಾಗ ........ ವಿಪರೀತ ಧನವ್ಯಯ, ಸಾಲ, ಕಷ್ಟ, ಭೂಮಿಗೆ, ಕಬ್ಬಿಣಕ್ಕೆ ಖರ್ಚು ಮಾಡುವುದು, ಅಂದುಕೊಂಡ ಕಾರ್ಯಗಳು ಬಹಳ ಪ್ರಯತ್ನದಲ್ಲೂ ವಿಫಲವಾಗುವುದು, ಹಲವಾರು ತರಹದ ತೊಂದರೆಗಳುಂಟಾಗುವುದು ಆಗುತ್ತದೆ.
ಜನ್ಮರಾಶಿಯ ಸಂಚಾರ ಕಾಲದಲ್ಲಿ.......... ಜನ್ಮ ರಾಶಿಯು, ಆರೋಗ್ಯ, ದೇಹ, ಜೀವನ ಯಾಪನೆಗೆ ಸಂಭಂಧಿಸಿದ್ದಾದ್ದರಿಂದ, ಇಲ್ಲಿ ಬಂದಾಗ ಒಂಟಿತನ, ಅಪಾರ ಮಾನಸಿಕ ಹಿಂಸೆ, ಸೋಮಾರಿತನ, ನಿಶ್ಯಕ್ತಿ, ನಿದ್ರಾಹೀನತೆ, ಅಲೆಮಾರಿಯಾಗುವುದು, ಅಪಮಾನ, ಪಾದಗಳು, ಮಂಡಿಗಳಲ್ಲಿ ಅಸಾಧ್ಯನೋವು, ಆಲಸ್ಯ ಮುಂತಾದ ಫಲಗಳು.
ರಾಶಿಯಿಂದ ಎರಡನೇ ಮನೆಯಲ್ಲಿ ಸಂಚಾರ ಮಾಡುವಾಗ.......... ನಿಷ್ಕಾರಣವಾಗಿ ಬಂಧುಗಳಲ್ಲಿ ದ್ವೇಷ, ಕುಟುಂಬದಲ್ಲಿ ನೋವುಗಳು, ಸ್ವಜನ ದ್ವೇಷ, ಕಾರ್ಯಬಂಗ, ಧನಹಾನಿ, ಮುಂತಾದ ಅಶುಭ ಫಲಗಳನ್ನು ನೀಡುತ್ತಾನೆ.
ಮನುಷ್ಯ ಜೀವನದ ಅಸ್ತಿತ್ವ, ಸಾರ್ಥಕತೆಯನ್ನು ಗುರ್ತಿಸಿ ಕೊನೆಗೆ ಗಟ್ಟಿಯಾದ ಮನಸ್ಸು, ಶಾಶ್ವತ ಸಂತೋಷವನ್ನು ಹೊಂದುವ ಮಾರ್ಗವನ್ನು ತೋರಿಸಿಕೊಡುತ್ತಾನೆ.
ಆಯಸ್ಸು, ಮರಣ, ದುಃಖ, ಪರಸ್ಥಳ, ನಪುಂಸಕತ್ವ, ದುರ್ವ್ಯಸನಗಳು , ನೀಚವಿದ್ಯೆ, ನೀಚಜೀವನ, ನೀಚೋಪಾಸನೆ, ದುರ್ವತನೆ, ಸೆರೆಮನೆ, ಅಸತ್ಯ, ಅಧರ್ಮ, ದೈನ್ಯಸ್ಥಿತಿ, ಪಿತೃಶಾಪ ಇನ್ನೂ ಅನೇಕ ವಿಚಾರದಲ್ಲಿ ಶನಿಯು ಅಧಿಕಾರ ಹೊಂದಿದ್ದು, ಊಹೆಗೂ ನಿಲುಕದ ರೀತಿಯಲ್ಲಿ ಕಾಡಬಲ್ಲನು, ಮತ್ತು ಶುಭಪರನಾದರೆ ವಿಸ್ಮಯಕಾರಿ ರಾಜಯೋಗವನ್ನು ನೀಡಬಲ್ಲನು, ಈತ ಡಂಬಾಚಾರದ ಪೂಜೆಗಾಗಲೀ, ಆಡಂಬರದ ಭಕ್ತಿಗಾಗಲೀ, ಒಡವೆವಸ್ತ್ರ ಹಣ ಯಾವುದೇ ವೇಷ ಭೂಷಣಗಳಿಗಾಗಲೀ ಕರುಣೆ ತೋರುವುದಿಲ್ಲ, ಈತನು ಸತ್ಯನಿಷ್ಠೆಗೆ , ಶುದ್ಧಮನಸ್ಸಿನ ಭಕ್ತಿಗೆ, ಪರಿಶುದ್ಧ ಹೃದಯವಂತರಿಗೆ, ನಿಷ್ಕಪಟತೆಗೆ , ಸರಳತೆಗೆ, ಯಾರಿಗೂ ದ್ರೋಹಮಾಡದ ಧರ್ಮದ ಹಾದಿಯಲ್ಲಿ ನಡೆಯುವಂತಹವರ ಮೇಲೆ ತನ್ನ ಶುಭ ಪ್ರಭಾವವನ್ನು ಬೀರುತ್ತಾನೆ
ಶನಿದೇವನಿಗೆ ಎಳ್ಳೆಣ್ಣೆ ಅಭಿಷೇಕ ಅತ್ಯಂತ ಪ್ರಿಯ, ಇದಕ್ಕೊಂದು ಪೌರಾಣಿಕ ಕಥೆಯಿದೆ.
ಶನಿ ಮಹಾತ್ಮನು ಚಿಕ್ಕವನಿದ್ದಾಗ ಅತೀ ಉತ್ಸುಕತೆಯಿಂದಿರುತ್ತಿದ್ದನು, ವಿಪರೀತ ಮೊಂಡು, ವಿಪರೀತ ಕಾಡಾಟ , ಇವನ ಕಿಡಿಗೇಡಿ ತನಕ್ಕೆ ಎಲ್ಲರೂ ಶಿಕ್ಷೆ ಅನುಭವಿಸಬೇಕಾಗುತ್ತಿತ್ತು,
Picture source: Internet/ social media
ಅದೊಂದು ದಿನ ಶ್ರೀರಾಮ ಭಕ್ತನಾದ ಹನುಮಂತನು,ಧ್ಯಾನ ಮಗ್ನನಾಗಿ ಕುಳಿತಿದ್ದಾಗ, ಶನಿಯು ಹನುಮನಿದ್ದೆಡೆಗೆ ಬಂದು ವಿಪರೀತ ಕುಚೇಷ್ಟೆ ಮಾಡಿದನಂತೆ, ದ್ಯಾನಭಂಗವಾಗಿ ಹನುಮಂತನು ಎಚ್ಚರಗೊಂಡು, ನನ್ನ ಧ್ಯಾನಕ್ಕೆ ಭಂಗ ತರಬೇಡ ಎಂದು ಹೇಳಿದರೂ, ಚೇಷ್ಟೆಯನ್ನು ಮುಂದುವರೆಸಿದ ಶನಿದೇವನ ಮೇಲೆ ಅತೀವ ಕುಪಿತಗೊಂಡ ಹನುಮ ತನ್ನ ಬಾಲದಿಂದ ಶನಿಯನ್ನು ಬಿಗಿಯಾಗಿ ಸುತ್ತಿ ಅಷ್ಟ ದಿಕ್ಕುಗಳಲ್ಲೂ ಗರ ಗರ ತಿರುಗಿಸಿ ದೂರ ಬಿಸಾಡಿದನು, ಆಗ ತುಂಬಾ ಮೇಲಿನಿಂದ ಬಿದ್ದಿದ್ದರಿಂದ ಶನಿದೇವರಿಗೆ ಮೈತುಂಬಾ ಗಾಯಗಳಾಗಿ ದೇಹದಲ್ಲೆಲ್ಲಾ ರಕ್ತ ಸೋರಹತ್ತಿತು. ಆಗ ತನ್ನ ತಪ್ಪಿನ ಅರಿವಾಗಿ ಹನುಮನ ಬಳಿ ಬಂದು ವಿನಮ್ರತೆಯಿಂದ ಕೈ ಮುಗಿದು ಕ್ಷಮೆ ಯಾಚಿಸಿದನು, ಶನಿದೇವನ ಮುಗ್ಧತೆಗೆ ಪ್ರಸನ್ನನಾದ ಹನುಮನು ತನ್ನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಅವರನ್ನು ನೀನು ಕಾಡಬಾರದು ಎಂದು ಭಾಷೆ ತೆಗೆದುಕೊಂಡನು, ಇದಕ್ಕೊಪ್ಪಿದ ಶನಿದೇವನು ಈಗ ಈ ನನ್ನ ನೋವನ್ನು ನಿವಾರಿಸು ಎಂದು ಕೇಳುತ್ತಾನೆ, ನೋವಿನಿಂದ ನರಳುತ್ತಿದ್ದ ಶನಿದೇವನಿಗೆ ಹನುಮಂತನು ಮೈಗೆಲ್ಲಾ ಎಳ್ಳೆಣ್ಣೆ ಹಚ್ಚಿ ಮೈಮೇಲಿದ್ದ ಗಾಯಗಳನ್ನು ವಾಸಿಮಾಡಿದನು, ಗಾಯದಿಂದ ನೊಂದಿದ್ದ ದೇಹ ಮತ್ತೆ ಹುರುಪಾಯಿತು, ಶನಿದೇವನಿಗೆ ಆನಂದವಾಯಿತು, ಹಾಗಾಗಿ ಎಳ್ಳೆಣ್ಣೆ ಅಭಿಷೇಕ ಶನಿದೇವನಿಗೆ ಪ್ರಿಯವಾಯಿತು.
ದೇವತಾರಾಧನೆ, ಗ್ರಹಪೂಜೆ, ಹಿರಿಯರ ಸೇವೆಯಿಂದ ವಿಮುಖರಾದ ಜನರಿಗೆ ಸಂಕಟವನ್ನು ಕೊಡುವನಾದ್ದರಿಂದಲೇ ಶನೇಶ್ವರನು ಹೆಚ್ಚು ಪ್ರಚಾರದಲ್ಲಿದ್ದಾನೆ.
ಶನಿದೇವನನ್ನು ಸ್ತುತಿಸುವ ಸ್ತೋತ್ರ ಹೀಗಿದೆ
" ನೀಲಾಂಜನ ಸಮಾಭಾಸ0 ರವಿಪುತ್ರಂ ಯಮಾಗ್ರಜಮ್
ಛಾಯಾ ಮಾರ್ಥಾ0ಡ ಸಂಭೂತಮ್ ತಂ ನಮಾಮಿ ಶನೈಶ್ಚರ0"
ಶ್ರೀಮದ್ ವಾದಿರಾಜ ವಿರಚಿತ ಶನಿ ಸ್ತೋತ್ರ
" ಶನೇ ದಿನಮಣೇಃ ಸೂನೂಹ್ಯನೆಕಾಗುಣಸನ್ಮಣೇ
ಅರಿಷ್ಟ0ಹರಮೇ ಭೀಷ್ಟಮ್ ಕುರು ಮಾ ಕುರು ಸಂಕಟ0 "
ಶನಿ ಗಾಯತ್ರಿ ಮಂತ್ರ :--
"ಓಂ ನೀಲಾಂಬರಾಯ ವಿದ್ಮಹೇ
ಸೂರ್ಯ ಪುತ್ರಾಯ ಧೀಮಹಿ
ತನ್ನೋ ಸೌರಿಃ ಪ್ರಚೋದಯಾತ್ "
ಶನಿ ಪೀ ಡಾ ಪರಿಹಾರ ಸ್ತೋತ್ರ :--
" ಸೂರ್ಯ ಪುತ್ರೋ ಧೀರ್ಘದೇಹೋ ವಿಶಾಲಾಕ್ಷ ಶಿವಪ್ರಿಯಃ
ಧೀರ್ಘಚಾರ ಪ್ರಸನ್ನಾತ್ಮಾ ಪೀಡಾ0 ಹರತು ಮೇ ಶನಿಃ "
ಶ್ರೀ ಶನೇಶ್ವರ ಮೂಲ ಮಂತ್ರ :--
ನಮಸ್ತೇ ಕೋಣ ಸಂಸ್ಥಾಯ ಪಿಂಗಳಾಯ ನಮೋಸ್ತುತೆ
ನಮಸ್ತೇ ವಿಷ್ಣು ರೂಪಾಯ ಕೃಷ್ಣಾಯ ಚ ನಮೋಸ್ತುತೆ
ನಮಸ್ತೇ ರೌದ್ರ ದೇಹಾಯ ನಮಸ್ತೇ ಕಾಲ ಕಾಲಾಯ ಚ
ನಮಸ್ತೇ ಯಮ ಸಂಜ್ಞಾಯ ಶನೇಶ್ವರ ನಮೋಸ್ತುತೆ
ಪ್ರಸೀದ ಕುರು ದೇವೇಶ ದೀನಸ್ಯ ಪ್ರಣತಸ್ಯ ಚ
( ಜಪಸಂಖ್ಯೆ 23,000 , 19 ದಿನಗಳಲ್ಲಿ)
ಏಕಾಕ್ಷರಿ ಬೀಜಮಂತ್ರ :--
ಓಂ ಶಂ ಶನೈಶ್ಚರಾಯ ನಮಃ
ಅನುಕೂಲ ಮಂತ್ರ :--
ಐಮ್ ಕ್ಲೀಮ್ ಹ್ರೀಂ ಶ್ರೀಮ್ ಸೌಃ ( ಜಪ ಸಂಖ್ಯೆ ಒಂದೂ ಕಾಲು ಲಕ್ಷ)
ತಾಂತ್ರಿಕ ವಿಧಾನ ಮಂತ್ರ :--
ಓಂ ಪ್ರಾಂ ಪ್ರೀ0 ಪ್ರೌ0 ಸಃ ಶನೈಶ್ಚರಾಯ ನಮಃ
( ಜಪಸಂಖ್ಯೆ 23,000)
ಶನಿ ಲತ್ತಾ ಕಾಲದಲ್ಲಿ :--
ದೇಹಪೀಡೆ , ಜೆಸ್ಟಬ್ರಾತೃ ವಿನಿಂದ ತೊಂದರೆಗಳುಂಟಾಗುತ್ತದೆ.
ಲತ್ತಾಶಾಂತಿ :-- ಕಬ್ಬಿಣ ಮತ್ತು ಎಳ್ಳು ದಾನ, ಅಶ್ವತ್ಥ ಪ್ರದಕ್ಷಿಣೆ ಮಾಡಬೇಕು.
ಶನಿಗ್ರಹದ ಸ್ವಕ್ಷೇತ್ರವಾದ ಮಕರ ಲಗ್ನದವರು ಪೂಜಿಸಿ ಧರಿಸ ಬಹುದಾದ ಯಂತ್ರ
ಪಂಚದಶಾಯಂತ್ರ
8
|
1
|
6
|
3
|
5
|
7
|
4
|
9
|
2
|
ಬೀಸಾಯಂತ್ರ
12
|
7
|
14
|
13
|
11
|
9
|
8
|
15
|
10
|
ಓಂ ಐಮ್ ಕ್ಲೀಮ್ ಹ್ರೀಂ ಶ್ರೀಮ್ ಸೌಃ
ಶನಿಯ ಸ್ವಕ್ಷೇತ್ರವಾದ ಕುಂಬ ಲಗ್ನದವರು ಪೂಜಿಸಿ ಧರಿಸಬಹುದಾದ ಯಂತ್ರ
ಪಂಚದಶಾಯಂತ್ರ
2
|
7
|
6
|
9
|
5
|
1
|
4
|
3
|
8
|
ಬೀಸಾಯಂತ್ರ
12
|
7
|
14
|
13
|
11
|
9
|
8
|
15
|
10
|
ಓಂ ಹ್ರೀಂ ಐಮ್ ಕ್ಲೀಮ್ ಶ್ರೀಮ್
--: ವೈಜ್ಞಾನಿಕವಾಗಿ ಶನಿ ಗ್ರಹ :--
Picture source: Internet/ social media
ಸೂರ್ಯನಿಂದ 6 ನೇ ಗ್ರಹ, ಅನಿಲ ರೂಪಿಯಾದ ಶನಿಯು ಗುರು ಗ್ರಹದ ನಂತರ ಸೌರಮಂಡಲದಲ್ಲಿ ಎರಡನೇ ಅತಿ ದೊಡ್ಡ ಗ್ರಹ. ಶನಿಯು ಎದ್ದು ಕಾಣುವಂತ ಉಂಗುರ ವ್ಯವಸ್ಥೆಯನ್ನು ಹೊಂದಿದೆ. ಈ ಉಂಗುರಗಳು ಮುಖ್ಯವಾಗಿ ಮಂಜಿನ ಪುಡಿಯಿಂದ ರಚಿತವಾಗಿದ್ದು, ಸ್ವಲ್ಪ ಕಲ್ಲಿನ ಚೂರುಗಳು ಮತ್ತು ಧೂಳು ಸಹ ಇವುಗಳಲ್ಲಿ ಕಂಡುಬರುತ್ತದೆ.
ಶನಿಯು ಭೂಮಿಯಂತೆಯೇ ದೃವಾಗಳಲ್ಲಿ ಸ್ವಲ್ಪ ಚಪ್ಪಟೆಯಾಗಿದ್ದು, ಸಮ ಭಾಜಕದಲ್ಲಿ ಉಬ್ಬಿಕೊಂಡಿದೆ. ಅದರ ಸಮಭಾಜಕ ಮತ್ತು ದೃವಗಳ ಮೂಲಕ ವ್ಯಾಸಗಳು ಸುಮಾರು 10% ವ್ಯತ್ಯಾಸವನ್ನು ಹೊಂದಿದೆ. (120.536km ಮತ್ತು 108.728 km ) . ಶನಿಯ ಈ ಆಕಾರಕ್ಕೆ ಅದರ ಅನಿಲ ರೂಪ ಮತ್ತು ತ್ವರಿತವಾದ ಅಕ್ಷೀಯ ಪರಿಭ್ರಮಣಗಳು ಕಾರಣ. ಉಳಿದ ಅನಿಲರೂಪಿ ಗ್ರಹಗಳು ಈ ರೀತಿಯ ಆಕಾರವನ್ನು ಹೊಂದಿದ್ದರೂ ಶನಿಯಲ್ಲಿ ಇದು ಎದ್ದು ಕಾಣುತ್ತದೆ . ಸೌರಮಂಡಲದಲ್ಲಿ ನೀರಿಗಿಂತ ಕಡಿಮೆ ಸಾಂದ್ರತೆಯುಳ್ಳ ಏಕೈಕ ಗ್ರಹ ಶನಿ. ಶನಿಯ ಸರಾಸರಿ ಸಾಂದ್ರತೆಯು ನೀರಿನ 69% ರಷ್ಟಿದೆ. ಇದು ಕೇವಲ ಸರಾಸರಿ ಪ್ರಮಾಣ, ಶನಿಯ ವಾಯುಮಂಡಲವು ನೀರಿಗಿಂತ ಹಗುರವಾಗಿದೆ ಮತ್ತು ಗ್ರಹದ ಒಳಭಾಗವು ಗಮನಾರ್ಹವಾಗಿ ಹೆಚ್ಚು ಸಾಂದ್ರತೆಯನ್ನು ಹೊಂದಿದೆ. ಶನಿಯು ಸುಮಾರು 56 ಉಪಗ್ರಹಗಳನ್ನು ಹೊಂದಿದೆ.
ಕಕ್ಷೆಯ ಗುಣಗಳು
ಧೀರ್ಘಅರ್ಧ ಅಕ್ಷ. --- 1,426,725,413 km
Orbital ಪರಿಧಿ --- 8.958 ×10^12
ಕಕ್ಷೀಯ ಕೇಂದ್ರ ಚ್ಯುತಿ --- 0.054 150 60
ಸೂರ್ಯನಿಂದ ಕನಿಷ್ಠ ದೂರ --- 1,349,467,375 km
ಸೂರ್ಯನಿಂದ ಗರಿಷ್ಠ ದೂರ --- 1,503, 983,449 km
ಕಕ್ಷೀಯ ಪರಿಭ್ರಮನ ಕಾಲ --- 10,756.1995 ದಿನ
ಸರಾಸರಿ ಕಕ್ಷಾವೇಗ --- 9.639 km/ ಪ್ರತಿಕ್ಷಣ
ಓರೆ --- 2.484 46°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ. --- 56
ಭೌತಿಕ ಗುಣಲಕ್ಷಣಗಳು
ಸಮಭಾಜಕ ರೇಖೆಯ ವ್ಯಾಸ --- 120,536 km
ದ್ರುವಗಳ ಮೂಲಕ ವ್ಯಾಸ --- 108,728 km
ಮೇಲ್ಮೈ ವಿಸ್ತೀರ್ಣ --- 4.27×10^10 km
ಗಾತ್ರ --- 8.27×10^14 km
ದ್ರವ್ಯರಾಶಿ --- 5.6846×10^27 k gram
ಸರಾಸರಿ ಸಾಂದ್ರತೆ --- 0.6873 ಗ್ರಾಮ್/ ಪ್ರತಿ ಸೆ.ಮೀ
ಸಮಭಾಜಕದ ಬಳಿ ಗುರುತ್ವ --- 8.96 ಮೀ/ಕ್ಷಣ
ಮುಕ್ತಿವೇಗ --- 35.49 km/ಪ್ರತಿಕ್ಷಣ
ಅಕ್ಷೀಯ ಪರಿಭ್ರಮಣ ಕಾಲ --- 0.449 375 ದಿನ
ಅಕ್ಷೀಯ ಪರಿಭ್ರಮಣ ವೇಗ --- 9.87km/ಪ್ರತಿಕ್ಷಣ
ಅಕ್ಷದ ಓರೆ --- 26.73°
ಪ್ರತಿಫಲನಾಂಶ --- 0.47
ಮೇಲ್ಮೈ ತಾಪಮಾನ
-----------------------------
min --- 82 K
mean --- 143 K
max --- N/A
ಮೋಡದ ಪರದೆಯ ಮೇಲೆ ಸರಾಸರಿ ತಾಪಮಾನ --- 93K
ವಾಯುಮಂಡಲದ ಗುಣಲಕ್ಷಣಗಳು
ವಾತಾವರಣದ ಒತ್ತಡ --- 140k P a
ಜಲಜನಕ --- >93%
ಹೀಲಿಯಂ --- >5%
ಮೀಥೇನ್ --- 0.2%
ನೀರಾವಿ --- 0.1%
ಅಮೋನಿಯಾ --- 0.01%
ಈಥೇನ್ --- 0.0005%
ಫಾಸ್ಪೀನ್ --- 0.0001%
**********
✍ ಡಾ: B. N. ಶೈಲಜಾ ರಮೇಶ್
No comments:
Post a Comment