Sunday, 2 July 2017

---: ಕೇತು ಗ್ರಹ :---


   ---:  ಕೇತು ಗ್ರಹ   :---

ಹರಿಃ ಓಂ
ಓಂ ಶ್ರೀ ಗಣೇಶಾಯ ನಮಃ
ಓಂ ಶ್ರೀ ಗುರುಭ್ಯೋ ನಮಃ

ಕೇತು ಗ್ರಹ  :--
Picture source: Internet/ social media

     " ಕೇತು ಕುಲಸ್ಯೋನ್ನತಿಮ್ ಕುರು ಸರ್ವದಾ "
     ಕುಲವನ್ನುಉದ್ದಾರ ಮಾಡುವವನು,  ಅಂದರೆ ವಂಶಾಭಿವೃದ್ಧಿ ,ಇದ್ದ ಜಾಗದಲ್ಲಿ ಪತಾಕೆ ಹಾರಿಸುವುದು /  ಅಭಿವೃದ್ಧಿ ಪಡಿಸುವುದು, ಪಿತಾಮಹ ,  ಮೋಕ್ಷ, ಸನ್ಯಾಸಿಗಳು, ದಿಗಂಬರರು, ಧಾರ್ಮಿಕತೆ, ದೈವೀಕತೆಗೆ ಕಾರಕ ಕೇತುಗ್ರಹ.
        ಕೀಲಕ ಸಂವತ್ಸರದ ಮಾರ್ಗಶಿರ ಮಾಸದ ಅಮಾವಾಸ್ಯೆ ಯಂದು ಜನನ, ಜನ್ಮ ನಕ್ಷತ್ರ ಮೂಲ, ಗೋತ್ರ - ಜೈಮಿನಿ( ಪಾರ್ಥಿವ ಸಂವತ್ಸರದ, ಫಾಲ್ಗುಣ ಮಾಸದ ಪೌರ್ಣಮಿ ಅಭಿಜಿತ್ ನಕ್ಷತ್ರದಲ್ಲಿ ಜನನ , ಜನ್ಮದೇಶ - ಅಂತರ್ವೇದಿ,  ಎಂಬುದು  ಕೆಲವರ  ಅಭಿಮತ), ಚಿತ್ರವರ್ಣ ಶರೀರ, ಹಸ್ತಸಂಖ್ಯೆ -  7, ಗ್ರಹಮಂಡಲದಲ್ಲಿ  ವಾಸಸ್ಥಾನ -  ದಕ್ಷಿಣಾಭಿಮುಖ, ಧಾನ್ಯ - ಹುರುಳಿ,  ವಸ್ತ್ರ - ಚಿತ್ರ ವಿಚಿತ್ರ ಬಣ್ಣ,  ರತ್ನ - ವೈಡೂರ್ಯ,  ಆಯುಧಗಳು - ಗಧೆ, ವರದ,  ಚಿತ್ರರಥವುಳ್ಳವನು, ದ್ವಜಾಕಾರ ಮಂಡಲ, ಪತ್ನಿ - ಚಿತ್ರಲೇಖ,  ವಾಹನ -  ಗೃದ್ರ,  ಶಕ್ತಿ ದೇವತೆ - ಧೂಮ್ರ, ಅಧಿದೇವತೆ - ಚಿತ್ರಗುಪ್ತ,  ಪ್ರತ್ಯಧಿದೇವತೆ - ಬ್ರಹ್ಮ,  ಅಭಿಮಾನ ದೇವತೆ  -  ವಿನಾಯಕ, ಬರ್ಬರ ದೇಶಕ್ಕೆ  ಅಧಿಪತಿ,  ಛಾಯಾಗ್ರಹನು,  ಜ್ಞಾನಕಾರಕನು,  ಮೋಕ್ಷಕಾರಕನು, ಗೂಢವಿದ್ಯೆಯಲ್ಲಿ ಪರಿಣಿತನು,  ವೇದಾಂತಿ, ಮಂತ್ರಶಾಸ್ತ್ರ  ಬಲ್ಲವನು, ರಹಸ್ಯಪ್ರಿಯನು, ವ್ಯಯ, ಗಂಗಾಸ್ನಾನ,  ಮಹಾತಪಸ್ವಿ,ಸ್ನೇಹ,  ಚಂಚಲನು, ನೀಚಸಂಗ,  ಮೂರ್ಖ,  ಬ್ರಹ್ಮಜ್ಞಾನ,  ಪಾದಗಳಿಗೆ  ಅಧಿಪತಿ,  ಅಂತ್ಯಜಾತಿ,  ವಿಷಕಾರಿ,  ಅಜೀರ್ಣ, ದುಃಸ್ವಪ್ನ,  ಹಸ್ತಸಾಮುದ್ರಿಕನು,  ವಶೀಕರಣ,  ವಿದ್ಯಾಬಂಗ,  ಅಪಘಾತ,  ಕೀಳುಜಾತಿ, ಕೃಷ್ಣ ಮತ್ತು  ಧೀರ್ಘ ಶರೀರವುಳ್ಳವನು,  ವಿಷಮಯ  ನಾಲಿಗೆ, ರಕ್ತವರ್ಣ  ಉಗ್ರದೃಷ್ಠಿ  ಮತ್ತು  ಮಾತುಗಳು,  ಕ್ರೂರಗ್ರಹ, ರಜೋಗುಣ,  ವಾಸಸ್ಥಳ  ಬಿಲ, ಕತ್ತಲೆಯ ಪ್ರದೇಶ, ಮಣ್ಣಿನ ಪಾತ್ರೇ, ಚಿಕ್ಕವೃಕ್ಷಗಳು, ಆಧ್ಯಾತ್ಮಿಕ ಚಿಂತಕ, ವೇದಾಂತ  ಪ್ರಚಾರನು, ಶತ್ರುಪೀಡೆ, ಜ್ವಾಲಾಮುಖಿ,  ಅಗ್ನಿತತ್ವ, " ಕುಜವತ್ ಕೇತುಃ"‌ , ಕುಜನಂತೆ ಕಾರಕತ್ವ, ಹೊಗೆಯನ್ನು ಕಾರುವವನು, ಅಂಗಹೀನತ್ವ, ವ್ರಣ, ಹಿಂಸಕ ಸ್ವಭಾವ,  ಚಿತ್ರ ವಿಚಿತ್ರ ವಾದ ಆಲೋಚನೆಗಳು, ಸ್ವಾರ್ಥ ಹಿಂಜರಿಕೆಯ ಸ್ವಭಾವ, ಭಿಕ್ಷುಗಳು, ಭಿಕ್ಷಾಟನೆ, ಇಂದ್ರಜಾಲ, ಮಾಟ , ಅಭಿಚಾರ ಮುಂತಾದ ರಹಸ್ಯ ವಿದ್ಯೆ, ವಸ್ತ್ರ  ತಯಾರಿಕೆ ಮತ್ತು  ಅದಕ್ಕೆ  ಸಂಬಂಧಿಸಿದ ಪರಿಕರಗಳು, ಆಟಿಕೆ, ಬೊಂಬೆಗಳ ತಯಾರಿಕೆ, ವೈರಾಗ್ಯ  ಇವು  ಕೇತುವಿನ ಕಾರಕತ್ವಗಳು.
        ಆಶ್ವಿನಿ, ಮಖಾ, ಮೂಲ ನಕ್ಷತ್ರಕ್ಕೆ ಅಧಿಪತಿ, ಕೇತುವಿಗೆ  ಯಾವುದೇ  ಸ್ವಂತ  ಮನೆಗಳಿಲ್ಲ,  ಆದರೂ,  ಮೀನರಾಶಿ  ಸ್ವಕ್ಷೇತ್ರ,  ಕುಂಬ  ರಾಶಿ ಮೂಲತ್ರಿಕೋನ, ವೃಷಭದಲ್ಲಿ ನೀಚ,ವೃಶ್ಚಿಕದಲ್ಲಿ ಉಚ್ಚಸ್ಥಾನ ವೆನ್ನುತ್ತಾರೆ, ( ಇದರಲ್ಲೂ  ಸ್ವಲ್ಪ  ಗೊಂದಲವಿದೆ ).
        ಗೋಚಾರದಲ್ಲಿ 3,  6,  11 ನೆ ಸ್ಥಾನದಲ್ಲಿ  ಶುಭನು, ಇನ್ನುಳಿದ ಸ್ಥಾನಗಳಲ್ಲಿ  ಅಶುಭನು,  ಲಗ್ನ ಮತ್ತು  ಎಲ್ಲ  ಗ್ರಹಗಳು ರಾಹು  ಕೇತುಗಳ  ನಡುವೆ  ಇದ್ದರೆ ಕಾಳಸರ್ಪ ಯೋಗ/ ದೋಷ ಎನ್ನುತ್ತಾರೆ.  ಕೇತುವಿನ  ದಶಾವರ್ಷ  7 ವರ್ಷಗಳು.
        ವಿಶಾಲವಾದ ಪ್ರದೇಶ,  ಸ್ಮಶಾನ,  ಹಾವಿರುವ  ಹುತ್ತಗಳು, ಬಿಲ,  ಕತ್ತಲೆ ಇರುವ  ಪ್ರದೇಶ,  ಮಾಟ  ಮಾಯ,ಇಂದ್ರಜಾಲ,  ಅಭಿಚಾರ ನಡೆಯುವ  ಪ್ರದೇಶ,  ಈಶಾನ್ಯ ದಿಕ್ಕು ಕೇತುವಿನ  ಸಂಚಾರ  ಸ್ಥಳಗಳಾಗಿವೆ.  ನೈಋತ್ಯ ದಿಕ್ಕಿನಲ್ಲಿ ಒಟ್ಟಾಗಿ  ರಾಹು ಕೇತುಗಳ  ಸಂಚಾರವೆಂಬ  ಅಭಿಪ್ರಾಯವೂ  ಇದೆ.
        ಕೇತುವಿನಿಂದ,  ಅಜ್ಜ ಅಜ್ಜಿ ಚಿಕ್ಕಮ್ಮ, ದೊಡ್ಡಮ್ಮ, ಸಾಕುಪ್ರಾಣಿಗಳು,  ಹುಚ್ಚು ಭ್ರಮೆ, ಹುಚ್ಚುಹಿಡಿದಂತೆ  ತಲೆ  ಕೆಡಿಸಿಕೊಳ್ಳುವುದು, ಡಕಾಯತಿ, ಮೊಸಮಾಡುವುದು,  ಮಾಟ ಮಂತ್ರ, ಮೋಡಿ,  ಸಿದ್ದಿ,  ಘೋರಪೂಜೆ,ಅನ್ಯಸಂಸ್ಕೃತಿ,  ಮತ್ತು  ಅನ್ಯ ಸಂಸ್ಕಾರದವರೊಡನೆ ಪ್ರೀತಿ ಪ್ರೇಮ,   ಇವುಗಗಳನ್ನು  ತಿಳಿಯಬಹುದು.   ಕೇತುವೂ  ಸಹ ರಾಹುವಿನಂತೆ  ಶನಿ , ಶುಕ್ರ ರೊಂದಿಗೆ  ಮಿತ್ರತ್ವ,  ರವಿ  ಚಂದ್ರ,  ಕುಜ,  ಗುರು ಇವರುಗಳೊಡನೆ ಶತ್ರುತ್ವ  ಹೊಂದಿದ್ದಾನೆ.  ಕೇತುವೂ ಜಾತಕದಲ್ಲಿ  ಯಾವ ಸ್ಥಾನದಲ್ಲಿರುವನೋ ಆ  ಸ್ಥಾನದ  ಫಲಗಳು  ಸ್ವಲ್ಪ  ಚಿಂತೆಗೀಡಾಗಿ  ನಂತರ  ಶುಭವಾಗುತ್ತದೆ,
ಕೇತು ಹೀನ ಸ್ಥಾನ ದಲ್ಲಿದ್ದರೆ  ನೋವು ,ಜ್ವರ,  ಗಾಯ, ಹೊಟ್ಟೆ ಕಣ್ಣುಗಳಿಗೆ ತೊಂದರೆ. ಇಂತಹ  ಕೇತುವಿನಿಂದ  ಶುಭ ಫಲ ಪಡೆಯಲು  ಗಣೇಶನ  ಪ್ರಾರ್ಥನೆಯಿಂದ  ಮಾತ್ರ ಸಾಧ್ಯ,  ಕೇತುವೂ ಗಣೇಶನಿಗೆ  ಗರಿಕೆ  ಮೋದಕ   ನೀಡಿ ಯಾರು ಪೂಜಿಸುತ್ತಾರೋ  ಅವರಿಗೆ  ಶುಭಫಲ  ನೀಡುತ್ತಾನೆ.
            ---:  ಪುರಾಣದಲ್ಲಿ   ಕೇತು  :---

Picture source: Internet/ social media
       ಉಗ್ರವಾದ  ಕೆಂಪು ಕಣ್ಣುಗಳು,  ವಿಷಕಾರುವ  ಮಾತು,  ಧೀರ್ಘಶರೀರ,  ಶಾಸ್ತ್ರಧಾರಿ ಕೈಗಳು,  ಆಚಾರಹೀನ,  ಕಂದು ಬಣ್ಣ,   ಧೂಮಸೇವನೆ,  ಕಜ್ಜಿ ಬೇನೆಗಳುಳ್ಳ  ಶರೀರ, ಕ್ರೂರ  ಸ್ವಭಾವ,  ನಾಲ್ಕು ಕೈಗಳು,  ಗಧಾ,  ವರದಾ,  ಆಯುಧಗಳು,  ಚಿತ್ರ ಗೃದ್ರ ವಾಹನ,  ಚಿತ್ರರಥ,  ತಮೋಗುಣ  ಪ್ರಧಾನ  ಉಗ್ರವಾದ  ರೂಪ,  ಇವು  ಕೇತುವಿನ  ಬಗ್ಗೆ  ಶಾಸ್ತ್ರ  ಕೊಡುವ  ಮಾಹಿತಿ.
        ಈತ  ಛಾಯಾಗ್ರಹ,  ಮಲಿನ ರೂಪದವ ,  ಶಾಸ್ತ್ರಗಳಿಗೆ  ಅಧಿನಾಯಕ,  ಗುಪ್ತ ಷಡ್ಯಂತ್ರಗಳು,  ಕ್ರೂರತ್ವ,  ಗುಪ್ತಶಕ್ತಿ,  ಬಲ,  ಕಠಿಣ ಭಯ,  ಕೊರತೆಯ  ಕಾರಣನಾಗಿದ್ದಾನೆ.  "  ಕುಜವತ್  ಕೇತುಹು "   ಕುಜನ  ಗುಣದಂತೆ  ಕೇತುವಿನ  ಗುಣಗಳೂ ಒಂದೇ ತೆರನಾಗಿರುತ್ತದೆ.
ಕೇತು  ಮೋಕ್ಷದಾಯಕನೂ  ಆಗುತ್ತಾನೆ.
         ರಾಹು  ಕೇತುಗಳು  ಇಬ್ಬರೂ  ಸೇರಿ ಮೊದ್ಲು ಒಬ್ಬ  ದೈತ್ಯನಾಗಿದ್ದನು,  ಅವನ  ಹೆಸರೇ  ಸ್ವರ್ಬಾನು.  ಇವನು  ಸಿಂಹಿಕಾ ಮತ್ತು  ವಿಪ್ರಚಿತ್ತನ ಮಗನಾಗಿ ಮಹಾಪರಾಕ್ರಮಶಾಲಿಯಾದ ದೈತ್ಯರ  ನಾಯಕನಾಗಿ  ಶುಕ್ರಾಚಾರ್ಯರ  ಶಿಷ್ಯನಾಗಿದ್ದ.
         
Picture source: Internet/ social media
          ಅಮೃತದ  ಶೋಧನೆಗಾಗಿ  ದೇವ ದಾನವರು  ಕ್ಷೀರ ಸಾಗರವನ್ನು  ಮಂಥನ  ಮಾಡುವಾಗ ಉದ್ಭವಿಸಿದ  ಅಮೃತವನ್ನು  ಮೋಹಿನೀ ರೂಪದ  ಮಹಾವಿಷ್ಣುವು  ದೇವ ದಾನವರಿಗೆ  ಹಂಚುವ  ಸಂದರ್ಭದಲ್ಲಿ,  
Picture source: Internet/ social media

 ದೇವತೆಗಳಿಗೆ  ಹಂಚುತ್ತಿರುವಾಗ,  ರಾಕ್ಷಸ  ಸ್ವರ್ಭಾನುವು  ಮಾಯಾರೂಪ ತಾಳಿ  ದೇವತೆಗಳೊಡನೆ   ಕುಳಿತು  ಅಮೃತಪಾನ  ಮಾಡುವಾಗ  ಸೂರ್ಯ  ಚಂದ್ರರು  ಇದನ್ನು ನೋಡಿ  ಮೋಹಿನಿಗೆ  ತಿಳಿಸಿದಾಗ  ಮೋಹಿನಿಯು  ಚಕ್ರದಿಂದ  ಅವನ  ಶಿರಶ್ಚೇದನ  ಮಾಡಿದಳು, 


  
 Picture source: Internet/ social media

ಆಗ  ಅಮೃತವು  ಗಂಟಲಲ್ಲಿ  ಇಳಿಯುತ್ತಿತ್ತು.  ರುಂಡ  ಮುಂಡಗಳಿಗೆ ಅಮೃತ .ಸ್ಪರ್ಶವಾದ  ಕಾರಣ  ಶಿರಶ್ಚೇದನ ವಾದರೂ  ಮರಣವಿಲ್ಲದಂತಾಯಿತು,  ಮುಂದೆ  ರುಂಡದ  ಭಾಗಕ್ಕೆ   ರಾಹುವೆಂತಲೂ,  ಮುಂಡ ದ  ಭಾಗಕ್ಕೆ  ಕೇತುವೆಂತಲೂ  ನಾಮಕರಣವಾಯ್ತು.  ಇದನ್ನು  ನೋಡಿದ ಸ್ವರ್ಭಾನುವಿನ  ಮಗ ಗುಡುಗಿದ,  ಸೂರ್ಯ  ಚಂದ್ರರ  ಪಿತೂರಿಯಿಂದ  ತನ್ನ  ತಂದೆಗೆ  ಇಂತಹ  ಗತಿಯಾಯಿತೆಂದು ಸಿಟ್ಟಿಗೆದ್ದ  ದೇವತೆಗಳು  ಕುಡಿದ ಅಮೃತ  ಒಬ್ಬ  ದೈತ್ಯ  ಕುಡಿದ್ದಿದ್ದರಿಂದ  ತಪ್ಪೆನಾಯಿತು, ದೇವತೆಗಳಿಂದ  ಇದು  ಅಸುರರಿಗೆ  ಆದ  ಮೋಸ,  ದೇವತೆಗಳಿಗೆ  ತಕ್ಕ ಪಾಠ  ಕಲಿಸೇ ತೀರಬೇಕು ಎಂದು ಗೌತಮೀ ನದೀ ತೀರದಲ್ಲಿ  ತಪಸ್ಸಿಗೆ  ಕುಳಿತ.  ದೇವಲೋಕ  ಮುಟ್ಟಿದ ಆತನ  ಘೋರ  ತಪಸ್ಸಿಗೆ  ಹೆದರಿ,  ದೇವತೆಗಳೂ,  ಮುನಿಗಳೂ  ಮೇಘಹಾಸನ  ಬಳಿಗೆ  ಬಂದು ತಪಸ್ಸನ್ನು  ನಿಲ್ಲಿಸಿ  ನಿನಗೇನು ಬೇಕೆಂದು  ತಿಳಿಸು ಎಂದರು.   ನನ್ನ  ತಂದೆಯ  ಇಂತಹ  ದುರವಸ್ಥೆಗೆ  ಕಾರಣರಾದ  ನೀವು  ನನಗೆ  ಮತ್ತು  ನನ್ನ ತಂದೆಗೆ  ಸಂತೋಷವಾಗುವ  ಹಾಗೆ  ಮಾಡಿರಿ  ಎಂದನು.  ಆಗ  ದೇವತೆಗಳು  ಬುದ್ದಿ  ಉಪಯೋಗಿಸಿ,  ಸ್ವರ್ಭಾನುವು  ಅಮೃತ  ಸ್ಪರ್ಶದಿಂದ  ಅಮರನಾಗಿದ್ದಾನೆ,  ಅವನು  ದೈತ್ಯರ  ಪರ  ಸೇರಿ .ಅವರ  ನಾಯಕನಾದರೆ  ತಮಗೆ  ಉಳಿಗಾಲವಿಲ್ಲವೆಂದರಿತು ,  ಇವನನ್ನು  ನಮ್ಮಲ್ಲೇ  ಸೇರಿಸಿಕೊಂಡು  ಗ್ರಹಗಳ  ಸ್ಥಾನಮಾನ ನೀಡಿದರೆ  ಒಳ್ಳೆಯದು  ಎಂದರಿತು,  ಬ್ರಹ್ಮನು  ರುಂಡದ  ಭಾಗಕ್ಕೆ  ಸರ್ಪದ  ದೇಹವನ್ನು ಸೃಷ್ಟಿಸಿ  ಸೇರಿಸಿದನು,  ಮುಂಡದ  ಭಾಗಕ್ಕೆ  ಸರ್ಪದ  ತಲೆಯನ್ನು  ಸೃಷ್ಟಿಸಿ  ಸೇರಿಸಿ  ಅವರಿಗೆ  ಭೌತಿಕ  ಶರೀರವನ್ನು  ನೀಡಿ,  ರುಂಡ  ಭಾಗಕ್ಕೆ  ರಾಹುವೆಂತಲೂ  ಮುಂಡದ   ಭಾಗಕ್ಕೆ  ಕೇತುವೆಂತಲೂ ಹೆಸರಿಸಿ,  ದೇವತೆಗಳ  ಸ್ಥಾನಮಾನ ನೀಡಿ,  ನವಗ್ರಹಗಳಲ್ಲಿ  ಗ್ರಹಗಳ  ಸ್ಥಾನಮಾನ ,  ಅಧಿಕಾರ  ನೀಡಿದರು.  ಸ್ವರ್ಭಾನುವಿನ  ಮಗನಾದ  ಮೇಘಹಾಸನನ್ನು  ದೈತ್ಯರ  ರಾಜನನ್ನಾಗಿ  ಮಾಡಿದರು.
Picture source: Internet/ social media

        ಹೀಗೆ  ದೈತ್ಯರಾದ  ರಾಹು ಕೇತುಗಳು ಗ್ರಹಗಳಲ್ಲಿ  ಸ್ಥಾನಮಾನ  ಪಡೆದರೂ,  ಸೂರ್ಯ ಚಂದ್ರರ  ಕಾರಣದಿಂದ  ಶಿರಷ್ಛೇದನ ವಾಯಿತಾದ್ದರಿಂದ ಅವರಿಗೆ  ವೈರಿ,  ಹಾಗಾಗಿ  ಸೂರ್ಯ  ಚಂದ್ರರನ್ನು  ಗ್ರಹಣಕಾಲದಲ್ಲಿ. ಹಲವು ಗಂಟೆಗಳ  ಕಾಲ  ಪೀಡಿಸುತ್ತಾರೆ.
        ಪುರಾಣದ  ಪ್ರಕಾರ  ಕೇತುಗಳು ನೂರು ಜನ.  ಬ್ರಹ್ಮನ  ಮಕ್ಕಳು,  ಎರಡು ಕೈ ,  ವಿಚಿತ್ರಾಯುಧ ಧಾರಿಗಳು,  ಗೃದ್ರಾಸನಸ್ಥಿತರು.
        ಆದರೆ  ರಾಹುವಿನ  ಮುಂಡವೇ  ಕೇತುವಾದರೆ  ನೂರುಜನ  ಕೇತುಗಳೆನ್ನುವುದು  ಹೇಗೆ,  " ಯೇ ಬ್ರಹ್ಮ ಪುತ್ರಾಃ ಬ್ರಹ್ಮ ಸಮಾನ ವಕ್ರಾಃ  " ಎಂಬುದಾಗಿ ಕೇತುಗಳನ್ನು  ಬ್ರಹ್ಮಪುತ್ರರು, ಬ್ರಹ್ಮನಂತಹ  ಮುಖದವರು ಎಂದು  ಸ್ತುತಿಸುವುದು  ಹೇಗೆ ಸಾಧ್ಯ,  ನವಗ್ರಹ  ಪ್ರತಿಮೆಗಳ  ಬಗ್ಗೆ  ಹೇಳುತ್ತಾ  " ಸರ್ವೆಕಿರೀಟಿನಹ ಕಾರ್ಯಾಹ"   ಎಲ್ಲಾಗ್ರಹಗಳಿಗೂ  ಕಿರೀಟವಿರುವಂತೆ ಪ್ರತಿಮೆಯನ್ನು  ಮಾಡಬೇಕೆಂದು  ಹೇಳುತ್ತದೆ, ತಲೆಯಿಲ್ಲದೆ  ಕಿರೀಟವಿಡುವುದು  ಹೇಗೆ?  ,  ಹೀಗೆ  ನೂರೆಂಟು  ಪ್ರಶ್ನೆಗಳು  ಉದ್ಭವಿಸುತ್ತವೆ.


Picture source: Internet/ social media

        "  ರಾಹು ಜ್ಯೇಷ್ಠ0 ಕೇತುಕ0 "   ಎಂಬ  ವಚನಾನುಸಾರ  ರಾಹುವಿನ  ಶಿರದಲ್ಲೇ  ಸನ್ನಿಹಿತರಾದ  ಕೇತುಗಳೆಂಬ  ನೂರು  ದೇವತೆಗಳು,  ಕೇತುಗ್ರಹಕ್ಕೆ  ಅರ್ಪಿಸಿದ  ಪೂಜೆ,  ಆಹುತಿಗಳನ್ನು ಸ್ವೀಕರಿಸುತ್ತಾರೆ,  ಈ  ದೇವತೆಗಳು  ಬ್ರಹ್ಮಪುತ್ರರು,  ಬ್ರಹ್ಮಸಮಾನರರು,  ಬ್ರಹ್ಮಜ್ಞಾನಿಗಳು,    ಇವರೇ  ಕೇತುಗಳು.  ರಾಹುವಿನ  (ಸ್ವರ್ಭಾನು )  ದೇಹವೇ  ಕೇತುಗ್ರಹ ಎನ್ನುವುದಕ್ಕೆ  ಪ್ರಮಾಣವಿಲ್ಲ.  ರಾಹು  ಪುಚ್ಛವೆನಿಸಿದ  ಅದೂ  ಒಂದು  ಕೇತುವೆ, ಸಾವಿರಾರು  ಧೂಮಕೇತುಗಳಲ್ಲಿ  ಅದೂ  ಒಂದು  ಕೇತುವೆ,  ಆದರೆ  ಗ್ರಹವಲ್ಲ, ಈ  ರಾಹು ಕೇತುಗಳ  ಜೊತೆ  ಸೂರ್ಯ ಚಂದ್ರರನ್ನು  ದ್ವೇಷಿಸುವ  ರಾಹು / ಕೇತುಗಳೆಂಬ  ರಾಕ್ಷಸರೂ   ಹರಿಯ  ಅನುಗ್ರಹದಿಂದ  ಇದ್ದಾರೆ,  ಈ  ತತ್ವವನ್ನು  ತಿಳಿಯದೆ   ಪೂಜಿಸಿದಲ್ಲಿ ಆ  ಪೂಜಾಫಲ  ರಾಕ್ಷಸರ  ಪಾಲಾಗುತ್ತದೆ,  ಹಾಗಾಗಿ  ತಿಳಿದು  ಪೂಜಿಸಬೇಕು,  ಆಗ  ಕೇತುವಿನ  ಆರಾಧನೆಯ  ಫಲ  ಸಿಗುತ್ತದೆ.
        ರಾಹು ಕೇತುಗಳನ್ನು  ಕಪ್ಪು ಬಣ್ಣದ  ನೆರಳು,  ಕತ್ತಲೆ  ಎಂಬ  ಭಾವದಿಂದಲೇ  ಛಾಯಾಗ್ರಹ,  ತಮಃ ಎಂದು  ಕರೆಯಲಾಗುತ್ತದೆ.
        ಕೇತುವು  ಹೀನ  ಸ್ಥಾನದಲ್ಲಿದ್ದರ ೆ.   ಜ್ವರ ನೋವು ಗಾಯ  ,  ಎಲ್ಲಾ ಗ್ರಂಥಿಗಳ  ದೋಷಗಳು( ಕ್ಯಾನ್ಸರ್ ) , ಜೀವಾಣುಗಳಿಂದ  ಬರುವ  ವ್ಯಾಧಿಗಳು ,  ಮಾಂಸ ಕಣಗಳಿಂದ  ಬರುವ  ವ್ಯಾಧಿಗಳು  ಕಾಡಬಹುದು.
        ಗಣೇಶ  ದೇವರ  ಪ್ರಾರ್ಥನೆಯಿಂದ  ಕೇತುವಿನ  ಶುಭಫಲವನ್ನು  ಪಡೆಯಬಹುದು.
ಕಾರಣ........

Picture source: Internet/ social media

        ಗಣೇಶನ  ಜನ್ಮವೃತ್ತಾಂತ   ಕಥೆಯಲ್ಲಿ, ,,,,,,, ಪಾರ್ವತಿಯ  ಮೈಯ  ಬೆವರಿನಿಂದ  ಜನಿಸಿದ    ಗಣೇಶನು  ಶಿವನನ್ನು  ಕೈಲಾಸದ ದ್ವಾರದಲ್ಲೇ  ತಡೆದ,  ಅತೀವ  ಕೋಪೋದ್ರಿಕ್ತನಾದ  ಶಿವನಿಂದ  ಗಣೇಶನಶಿರಷ್ಛೇದನವಾಯ್ತು,  ನಂತರ  ಪಾರ್ವತಿಯ  ಅತೀವ  ದುಃಖವನ್ನು ನೋಡಲಾರದೆ ಆನೆಯ  ಮುಖವಿರಿಸಿ ಗಜಮುಖನನ್ನಾಗಿ  ಮಾಡಿದ  ಶಿವ.
          ಕೇತುವಿನ ಕಥೆಯಲ್ಲ್ಲೂ ............  ರಾಹುವಿನ  ಮುಂದಕ್ಕೆ  ಸರ್ಪದ  ತಲೆಯನ್ನಿರಿಸಿ  ಕೇತುವನ್ನಾಗಿಸಲಾಗಿದೆ.
     ಹಾಗಾಗಿ ಕೇತುವಿಗೆ  ಗಣೇಶ  ಅಭಿಮಾನಿ ದೇವತೆ.

  ಕೇತುಗ್ರಹವನ್ನು  ಸ್ತುತಿಸುವ  ಸ್ತೋತ್ರ  ಹೀಗಿದೆ,
" ಯೇ ಬ್ರಹ್ಮಪುತ್ರಾಃ ಬ್ರಹ್ಮಮಾನಸ ವಕ್ರಾಃ ಬ್ರಹ್ಮೋದೃವಾಃ
ಬ್ರಹ್ಮವಿದಃ ಕುಮಾರಾಃ ಬ್ರಹ್ಮೋತ್ತಮಾ ವರದಾ ಜಾಮದಜ್ನ್ಯಾಃ
ಕೇತೂನ್ ಸದಾ ಶರಣ ಮಹಂ ಪ್ರಪದ್ಯೇ"

"ಪಾಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕ0
ರೌದ್ರ0 ರೌದ್ರಾತ್ಮಕ0 ಘೋರಂ ತಂ ಕೇತುಂ ಪ್ರನಾಮಾಂಯಹಂ"

ಕೇತು ಪೀಡಾ ಪರಿಹಾರ  ಸ್ತೋತ್ರ :--

"ಅನೇಕ ರೂಪ ವರ್ನೈಶ್ಚ ಶತಶೋಥ ಸಹಸ್ತ್ರಶಃ
ಉತ್ಪಾತ ರೂಪೋ ಜಗತಾಂ ಪೀಡಾಂ ಹರತು ಮೇ ತಮಃ"

ಕೇತು ಗಾಯತ್ರೀ ಮಂತ್ರ :--

" ಚಿತ್ರಾಂಗದಾಯ  ವಿದ್ಮಹೇ
ಧೂಮ್ರವರ್ಣಾಯ  ಧೀಮಹಿ
ತನ್ನೋ  ಕೇತು ಪ್ರಚೋದಯಾತ್ "

ಕೇತು  ಬೀಜಾಕ್ಷರಿ ಮಂತ್ರ. :--

ಓಂ ಪ್ರಾ0 ಪ್ರೀ0 ಪ್ರೌ0 ಸಃ ಶ್ರೀ  ಕೇತವೇ ನಮಃ

ಕೇತುಗ್ರಹದ  ಪ್ರೀತ್ಯರ್ಥವಾಗಿ  ಶ್ರೀ  ಗಣಪತಿ ಮಂತ್ರ:--

ಓಂ ಗಂ ಗಣಪತಯೇ ನಮಃ

ಕೇತು ಯಂತ್ರ  :--


14
9
16
15
13
11
10
17
12


ಈ  ಯಂತ್ರವನ್ನು  ಅಷ್ಟಧಾತು ಲೋಹದಲ್ಲಿ ,  ಉಂಗುರ ಅಥವಾ  ತಾಯತದ ರೂಪದಲ್ಲಿ  ಬರೆದು,  ಕೇತುಮಂತ್ರವನು  108  ಬಾರಿ ಪಠಿಸಿ ಮಂಗಳವಾರದಂದು  ಧರಿಸಬೇಕು.

ವೈಜ್ಞಾನಿಕವಾಗಿ  ರಾಹು  --  ಕೇತು  :--


    Picture source: Internet/ social media

 ವೈಜ್ಞಾನಿಕವಾಗಿ  ವಿಶ್ಲೇಷಿಸಿದಾಗ  ವಾಸ್ತವವಾಗಿ  ನಭೋಮಂಡಲದಲ್ಲಿ  ಸೂರ್ಯನ  ಸುತ್ತ  ಭೂಮಿ  ಸುತ್ತುತ್ತಿದೆ,  ಭೂಮಿಯ  ಸುತ್ತ  ಚಂದ್ರ  ಸುತ್ತುತ್ತಿದೆ,  ಈ  ಅಂಡಾಕಾರದ  ಪರಿಕ್ರಮದ  ಮಾರ್ಗವನ್ನು  ಮಧ್ಯದಿಂದ  ವಿಭಜಿಸುವ  ಒಂದು  ಸರಳ  ರೇಖೆಯುಂಟು,  ಆ ಸರಳ  ರೇಖೆಯ  ತುದಿಗಳೇ  ರಾಹು - ಕೇತು  ಎಂಬ  ಎರಡು  ಬಿಂದುಗಳು.   ಸೂರ್ಯ ಚಂದ್ರರ  ಚಲನೆಯ  ಮಾರ್ಗದಲ್ಲಿ  ಉಂಟಾಗುವ  ಎರಡು  ಛೇದಕ  ಬಿಂದುಗಳು,  ಹಾಗಾಗಿ  ರಾಹು  ಹಾಗೂ  ಕೇತುವನ್ನು ಕ್ರಮವಾಗಿ ಉತ್ತರ  ಹಾಗೂ  ದಕ್ಷಿಣ  ಚಾಂದ್ರ  ಸಂಪಾತ ಗಳೆಂದು  ಕರೆಯಲಾಗುತ್ತದೆ.   ಸೂರ್ಯ  ಮತ್ತು  ಚಂದ್ರರು  ಈ  ಎರಡರಲ್ಲಿ  ಒಂದು  ಬಿಂದುವಿನಲ್ಲಿದ್ದಾಗ  ಗ್ರಹಣಗಳು  ಉಂಟಾಗುತ್ತದೆ.
ರಾಶಿಚಕ್ರದಲ್ಲಿ  ರಾಹು  ಕೇತುಗಳು  ಎರಡು  ಬಿಂದುಗಳು,  ಪರಸ್ಪರ  ವಿರುದ್ಧ  ದಿಕ್ಕಿನಲ್ಲಿರುವ  ಎರಡು  ಕಪ್ಪು  ಬಿಂದುಗಳು,  ರಾಹು ಕೇತುಗಳ  ಮದ್ಯೆ  ಸರಿಯಾಗಿ  ಆರು ರಾಶಿಯ  ಅಂತರವಿರುತ್ತದೆ.
*************************

✍ ಡಾ:  B N  ಶೈಲಜಾ  ರಮೇಶ್.

Thursday, 22 June 2017

22 ---: ರಾಹು ಗ್ರಹ :--

    ---:  ರಾಹು ಗ್ರಹ  :---
   ಹರಿಃ  ಓಂ
    ಶ್ರೀ  ಗಣೇಶಾಯ ನಮಃ
    ಶ್ರೀ  ಗುರುಭ್ಯೋ  ನಮಃ
    ರಾಹು ಗ್ರಹ :--  

Picture source: Internet/ social media

              " ರಾಹುರ್ಬಾಹುಬಲಮ್  ಕರೊತು ವಿರೋಧ  ಶಮನಮ್"   ಎಂಬಂತೆ  ಬಾಹುಬಲ  ಹಾಗೂ  ವಿರೋದಿಗಳನ್ನು  ಶಮನಗೊಳಿಸುವುದು,  ಕ್ರೂರಿ  ವೈರಾಗ್ಯ,  ನುಂಗುವುದು,  ಲಪಟಾಯಿಸುವುದು, ಪರಸ್ತ್ರೀಯರಲ್ಲಿ ಆಸಕ್ತಿ,  ಧರ್ಮ ಭ್ರಷ್ಟತೆ  ಮುಂತಾದುವಕ್ಕೆ ರಾಹುವು  ಕಾರಕನಾಗುತ್ತಾನೆ.

              ರಾಹುವು  ಪಾರ್ಥಿವ  ಸಂವತ್ಸರದ  ಭಾದ್ರಪದ ಮಾಸದ  ಹುಣ್ಣಿಮೆಯಂದು  ಜನನ,  ಜನ್ಮ ನಕ್ಷತ್ರ --- ಪೂರ್ವಬಾದ್ರ,   (ಕೆಲವು  ಗ್ರಂಥಗಳಲ್ಲಿ   ರಾಕ್ಷಸ  ಸಂವತ್ಸರದ  ಮಾಘ  ಶುಕ್ಲ  ಚತುರ್ದಶಿ ಯಂದು  ಜನನ,  ಜನ್ಮ ನಕ್ಷತ್ರ ---  ಆಶ್ಲೇಷ,  ಬರ್ಬರ  ದೇಶಾಧಿಪತಿ,  ಎಂದು  ಹೇಳಲಾಗಿದೆ )ಗೋತ್ರ  ---  ಪೈಠೇನಸ  ಗೋತ್ರ,  ಧೂಮ್ರವರ್ಣ, ಹಸ್ತ  ಸಂಖ್ಯೆ  --- 4,  ಗ್ರಹಮಂಡಲದಲ್ಲಿ  ನೈರುತ್ಯ  ಸ್ಥಾನ,  ದಕ್ಷಿಣಾಭಿಮುಖ,  ಧಾನ್ಯ. ---  ಉದ್ದು,  ವಸ್ತ್ರ  --- ಹೊಗೆ ಬಣ್ಣದ್ದು,  ರತ್ನ  ---  ಗೋಮೇಧಿಕ,  ಆಯುಧಗಳು  ---  ಖಡ್ಗ  ಚಾಮರ ,  ಧೂಮ್ರ ರಥ,  ಶೂರ್ಪಅಕಾರ  ಮಂಡಲ  ,   ಶಕ್ತಿ ದೇವತೆ ---  ಕೃಷ್ಣ,  ಅಧಿದೇವತೆ  ---  ಸರ್ಪ,  ವಾಹನ  ---  ಸಿಂಹ,  ಸಿಂಹಳ ದೇಶಕ್ಕೆ  ಅಧಿಪತಿಯು,  ಛಾಯಾಗ್ರಹನು,  ಧೀರ್ಘವಾದ  ಶರೀರ,  ಘಾತಿಸುವಂತಹ  ಮಾತು,  ಅನೈತಿಕ  ವ್ಯವಹಾರಗಳಲ್ಲಿ  ಆಸಕ್ತಿ,  ಜೂಜುಗಾರ,  ಪಾಶ್ಚಿಮಾತ್ಯ  ದೇಶಗಳಿಗೆ  ಹೋಗುವುದು,  ಅಧಿಕಕೋಪ,  ಕೆಟ್ಟನೋಟ,  ಕಳವಳಕಾರಿ,  ಪರಜಾತಿಯಲ್ಲಿ  ಆಶ್ರಯ  ಪಡೆಯುವುದು,  ನೆಗಡಿ,  ಶ್ಲೇಷ್ಮ,  ಕಫ,  ಗಾಳಿ,  ಊತ  ಸರ್ಪ,  ಹರಿದಾಡುವ  ಜಂತುಗಳು,  ಚಾಂಡಾಲ,  ತಾಮಸಗುಣ, ಬುದ್ದಿವಂತ,  ಭಯಂಕರ,  ಮಾತಾಮಹ,  ಪಾಪಗ್ರಹನು,  ನದಿ  ಅಥವಾ  ಭೂಗರ್ಭದಲ್ಲಿ ಅಡಗಿರುವ  ಧನ ಕೊಡುವವ,  ವಯಸ್ಸು  100  ವರ್ಷಗಳು, ವಾಸಸ್ಥಾನ  ---  ಕಾಡು  ವನ  ಕತ್ತಲೆಯ ಪ್ರದೇಶ,  ಪರ್ವತ,  ಶಿಖರ ,  ಪಾಳುಬಂಗಲೆ,  ವಲ್ಮೀಕ ( ಹುತ್ತ),  ಮುಳ್ಳಿನ  ವೃಕ್ಷಗಳು,  ಧಾತು  ---  ಸೀಸ,  ಅಸತ್ಯವನ್ನು  ಸಾಧಿಸುವುದು,  ಮೋಸಗಾರ,  ಕಪತಿ,  ಬುದ್ಧಿಹೀನ,  ಪರರನ್ನು  ನಿಂದಿಸುವುದು,  ಹೀನ  ಜಾತಿ,  ವಿಷಕಾರಿ,  ಕಾರಾಗೃಹವಾಸ,  ಮದ್ಯ,  ಮಾದಕ ದ್ರವ್ಯಗಳಲಿ  ಆಸಕ್ತಿ, ಅನೈತಿಕ  ವ್ಯವಹಾರ, ರಾತ್ರಿ  ಬಲವುಳ್ಳವನು,  ಮಾಯಾವಿದ್ಯೆ,  ಪಾಪಕಾರ್ಯ,  ಕೀಳುವೃತ್ತಿ ,  ದೂರದರ್ಶನ,  ಛಾಯಾ ಗ್ರಹನು,  ರೇಡಿಯೋ,  ವಾಯುಯಾನ,  ಗುಪ್ತನದಿಗಳು ವ್ಯವಸಾಯ, ತೆಳು  ಮತ್ತು  ಉದ್ದನೆಯ  ಶರೀರ,  ಕಪ್ಪು ಬಣ್ಣ,  ರೇಖೆ ಗುರುತು,  ಮಾನಸಿಕ  ತೊಂದರೆ,  ಕಲೆ  ಸಿನೆಮಾ,  ಬೇಟೆ,  ವೈಮಾನಿಕನು,  ಸಮಾಜ ಸೇವೆ,  ಸ್ವತಂತ್ರ  ಉದ್ಯೋಗದಲ್ಲಿ ಆಸಕ್ತಿ,  ಚರ್ಮ ರೋಗ,  ಕಾರಣ ಕಂಡು  ಹಿಡಿಯಲು ಕಷ್ಟವಾದ   ರೋಗಗಳು,  ಬಿಕ್ಕಳಿಕೆ,  ಕುಷ್ಠರೋಗ,  ಎಡಗಡೆಯಿಂದ  ಬರೆಯುವ  ಉರ್ದುವಿನಂತಹ  ಭಾಷೆ,  ಭ್ರಷ್ಟಾಚಾರ,  ಬೇರೆಯವರಿಗೆ  ತೊಂದರೆಯನ್ನುಂಟು  ಮಾಡುವುದು,  ಭೇಧವೆಣಿಸುವುದು,  ಕಾಲಪುರುಷನ  ಮಾತಾಮಹ,  ಸಿನೆಮಾ ನಿರ್ದೇಶಕರು,  ಬೃಹತ್ತಾದ ಯಂತ್ರಗಳು  ಹಾಗೂ  ಕಾರ್ಯಗಳು,  ಹಗ್ಗ  ಹಾಗೂ  ಸರಪಳಿಗಳ  ಸುರಲಿಗಳು,  ಛಾಯಾಗ್ರಹಣ,  X-ray,  laser ಚಿಕಿತ್ಸಾಲಯಗಳು,  ಬೋರ್ವೆಲ್,  ಭಾವಿಗಳು,  ಸುರಂಗಗಳು,  ರೈಲ್ವೆ ಹಳಿ  ಹಾಗೂ  ರೈಲ್ವೆ  ಬೋಗಿಗಳು,  ರಾಷ್ಟ್ರೀಯ  ಹೆದ್ದಾರಿಗಳು,  ವಿಶಾಲವಾದ  ಪ್ರದೇಶ,  ಸ್ಮಶಾನ  ಹಾವಿರುವ  ಹುತ್ತಗಳು,  ಬಿಲ  ಕತ್ತಲೆ ಇರುವ  ಪ್ರದೇಶ,  ಮಾಟ ಮಾಯ,  ಇಂದ್ರಜಾಲ,  ಅಭಿಚಾರ  ನಡೆಯುವ  ಪ್ರದೇಶ  ನೈರುತ್ಯ ದಿಕ್ಕು,  ಇವು  ರಾಹುವಿನ  ಸಂಚಾರ  ಸ್ಥಳಗಳಾಗಿವೆ.

      ರಾಹುವು  ಒಂದು  ರಾಶಿಯಲ್ಲಿ  18  ತಿಂಗಳು  ಸಂಚಾರ  ಮಾಡುತ್ತಾನೆ,   ಗೋಚಾರದಲ್ಲಿ  3,  6,   11,  ಶುಭ ಸ್ಥಾನಗಳು,  ಇನ್ನುಳಿದವು  ಅಶುಭ, 
     ಲಗ್ನ  ಮತ್ತು  ಎಲ್ಲ  ಗ್ರಹಗಳು  ರಾಹು  ಕೇತುಗಳ  ನಡುವೆ  ಸ್ಥಿತವಾಗಿದ್ದರೆ  ಕಾಲಸರ್ಪ  ಯೋಗ / ದೋಷ  ಎನಿಸಿಕೊಳ್ಳುತ್ತದೆ,  ರಾಹುವಿಗೆ  ಯಾವುದೇ  ಸ್ವಂತ  ಮನೆಗಲಿಲ್ಲ  .  ಆದರೂ  ಸಿಂಹ  ರಾಶಿಯು  ಮೂಲತ್ರಿಕೋನ,  ವೃಷಭದಲ್ಲಿ  ಉಚ್ಚತ್ವ,  ವೃಶ್ಚಿಕದಲ್ಲಿ  ನೀಚತ್ವ  ಪಡೆಯುತ್ತಾನೆ  ಎಂಬುದು  ಕೆಲವರ  ಮತ,( ಇದರಲ್ಲೂ  ಗೊಂದಲವಿದೆ).
ಆರಿದ್ರ,  ಸ್ವಾತಿ,  ಶತಭಿಷ,  ರಾಹುವಿನ  ನಕ್ಷತ್ರಗಳು,  ರಾಹುವಿನ  ದಶಾವರ್ಷ  --  18  ವರ್ಷಗಳು.

    ----:  ಪುರಾಣದಲ್ಲಿ  ರಾಹು :---
Picture source: Internet/ social media



        ನಾಲ್ಕು  ಕೈಗಳು , ಖಡ್ಗ  ಚರ್ಮ  ಶೂಲ  ವರಮುದ್ರೆಗಳು,  ವಿಕೃತವಾದ  ಕರಾಳ  ಮುಖ,  ಕಪ್ಪು  ಸಿಂಹಾಸನದಲ್ಲಿ  ಕುಳಿತಿರುವ  ಕಪ್ಪುಬಟ್ಟೆಯ  ಭಯಂಕರ  ಗ್ರಹ,  ಕಪ್ಪಾದ  ಮೈಬಣ್ಣ,  ಧೀರ್ಗವಾದ ಕೋಲು  ಶರೀರ, ವ್ರಣಾದಿ ಪೀಡೆ , ಪಾಷಂಡ ವಾದಿ  ಬಿಕ್ಕಳಿಕೆಯ  ತೊದಲು  ಮಾತು,  ಸುಳ್ಳುಗಾರಿಕೆ,  ಕಪಟ,  ಕುಷ್ಟಾದಿ ರೋಗ,  ಪರನಿಂದೆ,  ಬುದ್ದಿಹೀನತೆ, ಇವು  ರಾಹುವಿನ  ಲಕ್ಷಣ.

        ವೇದ  ಜ್ಯೋತಿಷ್ಯ  ಶಾಸ್ತ್ರದಲ್ಲಿ  ರಾಹುವನ್ನು  ಒಂದು  ಅಸುರನನ್ನಾಗಿ,  ಅಥವಾ  ಕೆಡುಕನ್ನು  ಉಂಟು  ಮಾಡುವ  ರಾಕ್ಷಸ  ರೂಪದಲ್ಲಿ  ಕಾಣಲಾಗುತ್ತದೆ,  ಈತ  ನಿಯಂತ್ರಿಸುವ  ಬದುಕಿನ  ಯಾವುದೇ  ಕ್ಷೇತ್ರವನ್ನು ಅಸ್ತವ್ಯಸ್ತತೆ,  ಅಸ್ಪಷ್ಠತೆ, ಹಾಗೂ  ಕ್ರೂರತೆಯಲ್ಲಿ  ಮುಳುಗಿಸುತ್ತಾನೆ.  ಈತನು ಭೌತಿಕ  ಜಗತ್ತಿನ  ನಶ್ವರತೆಯ  ಸಂಕೇತ ರೂಪ,  ಸ್ವಾರ್ಥ  ಗೊತ್ತುಗುರಿ ಇಲ್ಲದ  ವರ್ತನೆ,  ಅಥವಾ  ಜಾಣ್ಮೆ  ಇಲ್ಲವೇ  ತಿಳುವಳಿಕೆ  ಇಲ್ಲದ  ಅನಿಯಂತ್ರಿತ  ಬೆಳವಣಿಗೆಗೆ  ಕಾರಣನಾಗುತ್ತಾನೆ  ಎಂದು  ಹೇಳಲಾಗಿದೆ.  ಗ್ರಹಗಳ  ನಡುವೆ  ಕುಟಿಲ ಯೋಜನೆಯನ್ನು ರೂಪಿಸುವಲ್ಲಿ  ಹಾಗೂ  ಹೂಟ  ಹೂಡುವುದರಲ್ಲಿ  ಚಾಣಾಕ್ಷನೆಂದು  ಪರಿಗಣಿಸಲಾಗಿದೆ,  ಕುತಂತ್ರಗಳನ್ನು  ಮಾಡುವುದರಲ್ಲಿ  ಪ್ರವೀಣ  ಈತ.

        ಕಾಶ್ಯಪ  ಮತ್ತು  ದಿತಿಯ  ಪುತ್ರಿಯಾದ  ಸಿಂಹಿಕೆಯನ್ನು  ದೈತ್ಯನಾದ ವಿಪ್ರಚಿತ್ತ  ವಿವಾಹವಾಗುತ್ತಾನೆ,  ಇವರಿಬ್ಬರ  ಮಗನೇ  ರಾಹು,  ಈತನ  ಮೂಲ  ಹೆಸರು   "ಸ್ವರ್ಭಾನು" .
Picture source: Internet/ social media

        ಸಮುದ್ರ  ಮಥನ  ಕಾಲದಲ್ಲಿ  ಭಗವಂತನು  ಧನ್ವಂತರಿ  ರೂಪದಿಂದ   ತಂದುಕೊಟ್ಟ  ಅಮೃತದ  ಕಲಶವನ್ನು  ಕಂಡು  ದೈತ್ಯರಲ್ಲಿ  ಕೆಲವರು  ಓಡಿಹೋಗಿ  ಧನ್ವಂತರಿಯ  ಕೈಯಲ್ಲಿದ್ದ  ಅಮೃತ ಕಲಶವನ್ನು  ಕಿತ್ತುಕೊಂಡು  ಓಡಲಾರಂಭಿಸಿದರು,  ಇದನ್ನು  ಕಂಡು  ಹತಾಶರಾದ  ದೇವತೆಗಳ  ಕಳವಳವನ್ನು ಕಂಡು " ಮೋಹಿನಿ " ರೂಪದಲ್ಲಿ  ಶ್ರೀವಿಷ್ಣುವು  ಬಂದು  ಅಮೃತವನ್ನು  ದೇವ  ದಾನವರಿಗೆ  ಸಮಾನವಾಗಿ  ನಾನೇ  ಹಂಚುತ್ತೇನೆ,  ಎಲ್ಲರೂ  ಪ್ರತ್ಯೇಕ  ಸಾಲಿನಲ್ಲಿ  ಕುಳಿತುಕೊಳ್ಳಿ  ಎಂದು  ಹೇಳಿದಳು.   ನವ ಯೌವನಭರಿತ  ರೂಪವತಿ,  ಪರಮ  ಸುಂದರಿಯಾದ ಮೋಹಿನಿಯ  ರೂಪಕ್ಕೆ   ಮಾರುಹೋಗಿ  ದೈತ್ಯರು  ಸಮ್ಮತಿಸಿದರು.   ಮೊದಲು  ದೇವತೆಗಳಿಗೆ  ಹಂಚುತ್ತಿರುವಾಗ  ಸ್ವರ್ಭಾನುವು  ಮಾಯಾರೂಪ  ಧರಿಸಿ,  ದೇವತೆಗಳ  ಸಾಲಿನಲ್ಲಿ  ಕುಳಿತು  ಅಮೃತವನ್ನು ಸ್ವೀಕರಿಸಿದ,  ಇದನ್ನು  ಕಂಡ  ಸೂರ್ಯ  ಚಂದ್ರರು,   ಮೋಹಿನಿಗೆ  ತಿಳಿಸಲಾಗಿ, ಮೋಹಿನಿಯು  ಅವನ  ಶಿರಶ್ಚೇ ದನ ಮಾಡಿದಳು,  ಆದರೆ  ಆ  ದೈತ್ಯನಿಗೆ  ಅಮೃತ  ಸ್ಪರ್ಶ ವಾಗಿದ್ದರಿಂದ  ಶಿರಶ್ಚೇದನವಾದರೂ ಸಾವಿಲ್ಲ  ದಂತಾಯಿತು, 
ಶಿರದ  ಭಾಗ  ರಾಹು ಶಿರದಿಂದ  ಕೆಳಭಾಗ  ಕೇತುವಾಯಿತು.
Picture source: Internet/ social media

           ಇದನ್ನು  ನೋಡಿದ ಸ್ವರ್ಭಾನುವಿನ  ಮಗ ಗುಡುಗಿದ,  ಸೂರ್ಯ  ಚಂದ್ರರ  ಪಿತೂರಿಯಿಂದ  ತನ್ನ  ತಂದೆಗೆ  ಇಂತಹ  ಗತಿಯಾಯಿತೆಂದು ಸಿಟ್ಟಿಗೆದ್ದ  ದೇವತೆಗಳು  ಕುಡಿದ ಅಮೃತ  ಒಬ್ಬ  ದೈತ್ಯ  ಕುಡಿದ್ದಿದ್ದರಿಂದ  ತಪ್ಪೆನಾಯಿತು, ದೇವತೆಗಳಿಂದ  ಇದು  ಅಸುರರಿಗೆ  ಆದ  ಮೋಸ,  ದೇವತೆಗಳಿಗೆ  ತಕ್ಕ ಪಾಠ  ಕಲಿಸೇ ತೀರಬೇಕು ಎಂದು ಗೌತಮೀ ನದೀ ತೀರದಲ್ಲಿ  ತಪಸ್ಸಿಗೆ  ಕುಳಿತ.  ದೇವಲೋಕ  ಮುಟ್ಟಿದ ಆತನ  ಘೋರ  ತಪಸ್ಸಿಗೆ  ಹೆದರಿ,  ದೇವತೆಗಳೂ,  ಮುನಿಗಳೂ  ಮೇಘಹಾಸನ  ಬಳಿಗೆ  ಬಂದು ತಪಸ್ಸನ್ನು  ನಿಲ್ಲಿಸಿ  ನಿನಗೇನು ಬೇಕೆಂದು  ತಿಳಿಸು ಎಂದರು.   ನನ್ನ  ತಂದೆಯ  ಇಂತಹ  ದುರವಸ್ಥೆಗೆ  ಕಾರಣರಾದ  ನೀವು  ನನಗೆ  ಮತ್ತು  ನನ್ನ ತಂದೆಗೆ  ಸಂತೋಷವಾಗುವ  ಹಾಗೆ  ಮಾಡಿರಿ  ಎಂದನು.  ಆಗ  ದೇವತೆಗಳು  ಬುದ್ದಿ  ಉಪಯೋಗಿಸಿ,  ಸ್ವರ್ಭಾನುವು  ಅಮೃತ  ಸ್ಪರ್ಶದಿಂದ  ಅಮರನಾಗಿದ್ದಾನೆ,  ಅವನು  ದೈತ್ಯರ  ಪರ  ಸೇರಿ .ಅವರ  ನಾಯಕನಾದರೆ  ತಮಗೆ  ಉಳಿಗಾಲವಿಲ್ಲವೆಂದರಿತು ,  ಇವನನ್ನು  ನಮ್ಮಲ್ಲೇ  ಸೇರಿಸಿಕೊಂಡು  ಗ್ರಹಗಳ  ಸ್ಥಾನಮಾನ ನೀಡಿದರೆ  ಒಳ್ಳೆಯದು  ಎಂದರಿತು,  ಬ್ರಹ್ಮನು  ರುಂಡದ  ಭಾಗಕ್ಕೆ  ಸರ್ಪದ  ದೇಹವನ್ನು ಸೃಷ್ಟಿಸಿ  ಸೇರಿಸಿದನು,  ಮುಂದಾದ  ಭಾಗಕ್ಕೆ  ಸರ್ಪದ  ತಲೆಯನ್ನು  ಸೃಷ್ಟಿಸಿ  ಸೇರಿಸಿ  ಅವರಿಗೆ  ಭೌತಿಕ  ಶರೀರವನ್ನು  ನೀಡಿ,  ರುಂಡ  ಭಾಗಕ್ಕೆ  ರಾಹುವೆಂತಲೂ  ಮುಂಡದ   ಭಾಗಕ್ಕೆ  ಕೇತುವೆಂತಲೂ ಹೆಸರಿಸಿ,  ದೇವತೆಗಳ  ಸ್ಥಾನಮಾನ ನೀಡಿ,  ನವಗ್ರಹಗಳಲ್ಲಿ  ಗ್ರಹಗಳ  ಸ್ಥಾನಮಾನ ,  ಅಧಿಕಾರ  ನೀಡಿದರು.  ಸ್ವರ್ಭಾನುವಿನ  ಮಗನಾದ  ಮೇಘಹಾಸನನ್ನು  ದೈತ್ಯರ  ರಾಜನನ್ನಾಗಿ  ಮಾಡಿದರು.

         ಹೀಗೆ  ದೈತ್ಯರಾದ  ರಾಹು ಕೇತುಗಳು ಗ್ರಹಗಳಲ್ಲಿ  ಸ್ಥಾನಮಾನ  ಪಡೆದರೂ,  ಸೂರ್ಯ ಚಂದ್ರರ  ಕಾರಣದಿಂದ  ಶಿರಷ್ಛೇದನ ವಾಯಿತಾದ್ದರಿಂದ ಅವರಿಗೆ  ವೈರಿ,  ಹಾಗಾಗಿ  ಸೂರ್ಯ  ಚಂದ್ರರನ್ನು  ಗ್ರಹಣಕಾಲದಲ್ಲಿ. ಹಲವು ಗಂಟೆಗಳ  ಕಾಲ  ಪೀಡಿಸುತ್ತಾರೆ.

Picture source: Internet/ social media

         ಲೋಕವನ್ನು  ಕಾಪಾಡುವ  ಸೂರ್ಯ  ಚಂದ್ರರನ್ನೇ  ಶಾಶ್ವತವಾಗಿ  ದ್ವೇಷಿಸುವ  ಇವರು  ಆಗಾಗ  ಗ್ರಹಣ  ಉಂಟುಮಾಡಿ  ಲೋಕಕ್ಕೆ  ಅನಿಷ್ಟವನ್ನು ತರುವರು,  ರಾಕ್ಷಸರಾದ  ರಾಹು  ಕೇತುಗಳು  ಉಪಕಾರ  ಮಾಡುವ  ದೇವತೆಗಳಲ್ಲ,  ಹಿಂಸಾಪ್ರಿಯ  ರಾಕ್ಷಸರು,  ಸ್ವಭಾವತಃ  ಕ್ರೂರಿಗಳು,  ಬ್ರಹ್ಮದ್ವೇಷಿಗಳು,  ಇಂತಹ  ಇವರನ್ನು  ಪೂಜೆ  ಮಾಡಬಹುದೇ?  ಒಂದು  ವೇಳೆ  ಪೂಜೆಯಿಂದ  ಅಭೀಷ್ಟ  ದೊರೆತರೂ  ಇದು  ತಾಮಸ  ಪೂಜೆಯಾಗುವುದಿಲ್ಲವೇ?  ತತ್ಕಾಲಕ್ಕೆ  ಸತ್ಫಲ  ದೊರೆತರೂ  ಕೊನೆಯಲ್ಲಿ  ಅನಾರ್ಥವಲ್ಲವೇ?  ಇಂತಹ  ರಾಹು  ಕೇತುಗಳನ್ನು  ಸೂರ್ಯ  ಚಂದ್ರರೊಡನೆ  ಪ್ರತಿಷ್ಠಾ ಪಿಸಿ  ಪೂಜಿಸುವುದು  ಎಷ್ಟು ಸರಿ?  ಬಾರಿಯ  ರುಂಡವನ್ನೇ  ರಾಹುವೆಂದು  ಕರೆಯುವುದಾದರೆ  "  "ಖಡ್ಗಚರ್ಮಧರಂ  ಭೀಮಮ್"
" ಕರಾಲವದನಂ ಖಡ್ಗ ಚರ್ಮ ಶೂಲೀವರಪ್ರದಹ"  ಎಂದು  ಸ್ತೋತ್ರ ಮಾಡುವುದು  ಎಷ್ಟು  ಸರಿಯಾದೀತು,  ಕಟ್ಟಿನಿಂದ  ತರಿಯಲ್ಪಟ್ಟ  ತಲೆಗೆ  ಕೈಯಿದೆಯೇ?  ಒಂದು  ವೇಳೆ  ಎದೆಯಿಂದಲೇ  ಕತ್ತರಿಸಿರುವುದರಿಂದ  ಕೈ  ಇರಬಹುದು  ಎಂದು  ವಾದಿಸುವುದಾದರೆ,  ಕೇತುವಿಗೆ  ಕೈ  ಎಲ್ಲಿಂದ  ಬಂತು?  "  ಧೂಮ್ರಾಃ ದ್ವಿಬಾಹವಃ ಸರ್ವೇ"  ಎಂದು  ಕೇತುವನ್ನು ಸ್ತುತಿಸುತ್ತೇವೆ,  ಅಲ್ಲದೆ  ನಾಲ್ಕು  ಕೈಗಳಿದ್ದರೆ ರಾಕ್ಷಸರೆನಿಸುವುದು  ಹೇಗೆ?  ಯಾವ  ರಾಕ್ಷಸನಿಗೆ  ನಾಲ್ಕು  ಕೈಗಳಿವೆ?  ನಾಲ್ಕು  ಕೈಗಳು  ದೇವತಾ  ಶಕ್ತಿಯ  ದ್ಯೋತಕವಲ್ಲವೇ ?
 ಹೀಗೆ  ಅನೇಕ  ಪ್ರಶ್ನೆಗಳು  ಮೂಡುತ್ತದೆ.
           " ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ  ಸಮಾವಿಷ್ಯಮತೋ ಸಬಾಹುಃ"  ಎಂಬ  ಮದ್ವಾಚಾರ್ಯರ  ಮಾತಿನಂತೆ,  ದೇವತೆಗಳ  ಸನ್ನಿಧಾನವುಳ್ಳ  ರಾಹುವಿನ  ತಲೆ  ಗ್ರಹವೆನಿಸಿತು,  ಇಲ್ಲಿ  ರಾಹುವಿನ   ತಲೆ  ಅಧಿಷ್ಟಾನ ಮಾತ್ರ,  ಅದರಲ್ಲಿ  ದೇವತಾ  ಸಾನಿಧ್ಯವಿದೆ,  ಸಾಲಿಗ್ರಾಮ  ಶಿಲೆಯಲ್ಲಿ  ಹರಿ ಸಾನಿಧ್ಯವಿರುವಂತೆ,  ದುಂಡಗಿನ  ಸಾಲಿಗ್ರಾಮ ಶಿಲೆಯಲ್ಲಿ  ಚತುರ್ಭುಜನಾದ  ಹರಿ ಇರುವಂತೆ,  ದುಂಡಗಿನ  ರಾಹುವಿನ  ಶಿರದಲ್ಲಿ  ಚತುರ್ಭುಜ  ದೇವತೆಯನ್ನು  ಧ್ಯಾನಿಸಿ,  ಉದ್ದೇಶಿಸಿ,  ಪೂಜೆ  ಹೋಮಗಳನ್ನು  ಮಾಡಬೇಕು.  ಜಗಚ್ಛಕ್ಷುಗಳಾದ  ರವಿ  ಚಂದ್ರರನ್ನು ದ್ವೇಷಿಸುವ  ರಾಹುವೆಂಬ  ರಾಕ್ಷಸನೂ  ಹರಿಯ  ಅನುಗ್ರಹದಿ0ದಲೇ ಇದ್ದಾನೆ  ಎಂಬ  ತತ್ವವನ್ನು  ತಿಳಿದು  ಪೂಜಿಸಿದ್ದಲ್ಲಿ ಗ್ರಹಾರಾಧನೆಯ  ಫಲ  ಶುಭವನ್ನು  ಕೊಡುತ್ತದೆ.

     ದೈತ್ಯರಾಜ  ಜಲಂದರನು ರಾಹುವನ್ನು  ಶಿವನ  ಬಳಿ  ಕಳುಹಿಸಿ  ಆತನ  ಮೂಲಕ ಪಾರ್ವತಿಯನ್ನು  ತನಗೆ  ಒಪ್ಪಿಸಬೇಕೆಂಬ  ಸಂದೇಶವನ್ನು  ನೀಡುತ್ತಾನೆ,  ಈ  ಸಂದೇಶದಿಂದ  ಕೋಪೋದ್ರಿಕ್ತನಾದ  ಶಿವನ  ಲಲಾಟದಿಂದ,  ಉದ್ಭವಿಸಿದ  ಒಂದು  ಭಯಾನಕ  ಜೀವಿಯು ( ಸಿಂಹದ  ಮುಖ,  ಉರಿಯುತ್ತಿರುವ  ಕಣ್ಣುಗಳು,  ಒರಟಾದ  ದೇಹ,  ಉದ್ದನೆಯ  ತೋಳು,  ಕೋಪದಿಂದ  ಕೆಂಪಾದ  ನಾಲಿಗೆಯನ್ನು  ಚಾಚಿಕೊಂಡಂತಹ ಭಯಾನಕ  ಜೀವಿಯು)  ದೂತನಾಗಿ  ಬಂದಿದ್ದ  ರಾಹುವನ್ನು  ನುಂಗಲು  ತಯಾರಾಯಿತು,  ದೂತರನ್ನು  ಕೊಳ್ಳಬಾರದೆಂಬ  ಶಿವನ  ಆದೇಶವನ್ನು  ಪಾಲಿಸಿದ ಆ  ಭಯಾನಕ  ಜೀವಿಯು ಹಸಿವೆಯಿಂದ  ಬಳಲುತ್ತಿದ್ದುದನ್ನು ಗಮನಿಸಿದ  ಶಿವಗಣಗಳು ,  ಶಿವನನ್ನು  ಪ್ರಾರ್ಥಿಸಿ  ಆ  ಭಯಾನಕ  ಜೀವಿಯ  ಯಾತನೆಯನ್ನು  ತಿಳಿಸಿದರು,  ಶಿವನು,  ಆಷ್ಟು  ಹಸಿವೆಯಿಂದ  ಬಳಲುತ್ತಿದ್ದರೆ  ತನ್ನದೇ  ದೇಹದ  ಭಾಗವನ್ನು  ಭಕ್ಷಿಸಬೇಕೆಂದು  ಹೇಳುತ್ತಾನೆ,  ಆಗ  ಆ ಜೀವಿಯು ತನ್ನ  ತಲೆಯೊಂದನ್ನು  ಬಿಟ್ಟು  ಉಳಿದೆಲ್ಲಾ  ಭಾಗವನ್ನು  ನುಂಗಿಹಾಕಿತು.   ಇದರ  ಭಕ್ತಿಗೆ  ಮೆಚ್ಚಿದ  ಪರಶಿವನು  ಅದನ್ನು  ದ್ವಾರಪಾಲಕನನ್ನಾಗಿ  ನೇಮಿಸಿ,  ಎಲ್ಲ  ಕ್ರೂರ  ಜನರಿಗೆ  ಭಯವನ್ನುಂಟುಮಾಡಬೇಕೆಂದು  ಆದೇಶಿಸಿ,  ಶಿವನನ್ನು  ಪೂಜಿಸುವುದಾದರೆ  ಜೊತೆಗೆ  ತನ್ನ  ಗಣ ಗಳನ್ನೂ  ಆರಾಧಿಸಬೇಕೆಂದು  ಕಟ್ಟಳೆ  ಹಾಕುವುದರ  ಜೊತೆಗೆ  ಅದಕ್ಕೆ  " ಕೀರ್ತಿಮುಖ " ಎಂಬ  ಹೆಸರನ್ನು  ನೀಡಿದ  ಎಂದು  ಶಿವ ಪುರಾಣದಲ್ಲಿ  ಉಲ್ಲೇಖವಿದೆ.

        ಒಮ್ಮೆ  ಹನುಮಂತನು  ಬಾಲಕನಾಗಿದ್ದಾಗ,  ಆಕಾಶದಲ್ಲಿ ಪ್ರಜ್ವಲಿಸುತ್ತಿದ್ದ  ಸೂರ್ಯನನ್ನು  ಒಂದು  ದೊಡ್ಡ  ಹಣ್ಣು  ಎಂವ  ಬ್ರಮೆಯಿಂದ  ಆಕಾಶಕ್ಕೆ  ನೆಗೆದು  ಸೂರ್ಯನನ್ನೇ ಹಿಡಿಯಲು  ಹೋಗುತ್ತಿದ್ದ,  ಆ  ದಿನ  ಗ್ರಹಣವಾದ್ದರಿಂದ  ರಾಹುವೂ  ಕೂಡ  ಸೂರ್ಯನನ್ನು ನುಂಗಬೇಕಿತ್ತು, ಸೂರ್ಯನನ್ನು ನುಂಗಲು  ಪ್ರಯತ್ನಿಸುತ್ತಿದ್ದ  ಹನುಮಂತನನ್ನು  ಕಂಡು  ರಾಹುವು  ವಿಸ್ಮಿತನಾದ,  ರಾಹುವನ್ನು  ನೋಡಿದ  ಪುಟ್ಟ  ಹನುಮನು  ಅದರ  ಪ್ರತ್ಯೇಕಗೊಂಡ  ತಲೆಯನ್ನು  ಕಂಡು  ಕುತೂಹಲದಿಂದ  ಆಕರ್ಷಿತನಾಗಿ  ರಾಹುವನ್ನು  ಹಿಡಿದುಕೊಳ್ಳುತ್ತಾನೆ,  ಹನುಮನ  ಕಪಿ  ಮುಷ್ಟಿಗೆ  ಸಿಲುಕಿ  ರಾಹು  ನಲುಗುತ್ತಾನೆ,  ನಂತರ  ಹನುಮನ  ಪ್ರಾರ್ಥನೆ  ಮಾಡಿ  ಬಿಡುಗಡೆ  ಪಡೆಯುತ್ತಾನೆ  ಎಂದು  ಪುರಾಣದಲ್ಲಿ  ಉಲ್ಲೇಖವಿದೆ.

Picture source: Internet/ social media

     ರಾಮಾಯಣ  ಯುದ್ಧದ  ಮತ್ತೊಂದು  ಸಂದರ್ಭದಲ್ಲಿ,  ರಾವಣ  ನವಗ್ರಹಗಳನ್ನ ಸೆರೆಯಳಾಗಿರಿಸಿ ತನ್ನ  ಸಿಂಹಾಸನಕ್ಕೇರುವ  ಮೆಟ್ಟಲನ್ನಾಗಿಸಿಕೊಂಡಿದ್ದ,  ಆಗ  ಹನುಮಂತನು  ನವಗ್ರಹಗಳನ್ನ  ರಾವಣನ  ಬಂಧನದಿಂದ  ವಿಮುಕ್ತಿಗೊಳಿಸುತ್ತಾನೆ,  ನಂತರ  ನವಗ್ರಹಗಳೂ ಹನುಮಂತನಿಗೆ  ಆಶೀರ್ವದಿಸಿ "  ನಿನ್ನನ್ನು  ಪೂಜಿಸುವ  ಭಕ್ತರು ನಮ್ಮಿಂದಲೂ  ಅನುಗ್ರಹ ಪಡೆಯುತ್ತಾರೆ"  ಎಂದು  ಹೇಳುತ್ತಾರೆ,  ಈ  ರೀತಿಯಾಗಿ  ರಾಹುವಿನಿಂದ  ಪ್ರಭಾವಿತ  ತೊಂದರೆಗಳು  ಭಗವಾನ್  ಹನುಮಂತನ  ಆರಾಧನೆಯಿಂದ  ಶಮನಗೊಳ್ಳುತ್ತದೆ.

        ಭೌದ್ದ  ಧರ್ಮದಲ್ಲಿ  ರಾಹುವನ್ನು  " ಕ್ರೋಧದೇವತೆ" (ಭೀತಿಯನ್ನು ಪ್ರಚೋದಿಸುವ ದೇವತೆ) ಎಂದು  ಬಿಂಬಿಸಲಾಗಿದೆ.
        ರಾಹುವನ್ನು  ಒಂಬತ್ತು  ತಲೆಗಳು  ಹಾಗೂ  ತನ್ನ  ಗಾಢ  ಕಪ್ಪುವರ್ಣದ  ದೇಹದ  ಸುತ್ತಲೂ ಸಾವಿರ  ಕಣ್ಣುಗಳನ್ನು  ಹೊಂದಿರುವಂತೆ  ಚಿತ್ರಿಸಲಾಗಿದೆ,  ತನ್ನ  ನಾಲ್ಕು  ತೋಳುಗಳಲ್ಲಿ  ಬಿಲ್ಲು  ಬಾಣ  ಹಾಗೂ  ಕಂಠ ಪಾಶ  ಹಾಗೂ  ವಿಜಯ  ಪತಾಕೆಯನ್ನು  ಹೊಂದಿರುತ್ತಾನೆ , ಈತ  ಕಾಣಲು ಕ್ರುದ್ರ ನಾಗಿರುತ್ತಾನೆ,  ಬೆಂಕಿಯಂತೆ  ಉರಿಯುತ್ತಿರುತ್ತಾನೆ,  ಹಾಗೂ  ಈತನ  ದೇಹದ  ಕೆಳಭಾಗವು   ಹಾವಿನ  ಅಕಾರದಲ್ಲಿರುತ್ತದೆ.   ಭೌದ್ದ  ಧರ್ಮದಲ್ಲಿ  ರಾಹುವು  ಒಬ್ಬ  " ಸಾ"  ಆಗಿದ್ದಾನೆ.   " ಸಾ"  ಎಂದರೆ ಈತ  ಇಲ್ಲಿ  ಆಕಾಶಕಾಯಗಳೊಂದಿಗೆ  ಸಂಭಂಡವಿರುವ  ಸ್ವರ್ಗಾದೇವತೆಯ  ಒಂದು ವರ್ಗಕ್ಕೆ  ಸೇರಿದ್ದಾನೆ  ಎಂದರ್ಥ.

Picture source: Internet/ social media

     ಚಿತ್ರಕಲೆಯಲ್ಲಿ  ರಾಹುವನ್ನು  ಎಂಟು  ಕಪ್ಪು  ಕುದುರೆಗಳ  ರಥವನ್ನು  ಓಡಿಸುತ್ತಿರುವ  ದೇಹವಿಲ್ಲದ  ಒಂದು  ಡ್ರ್ಯಾಗನ್ ಆಗಿ  ಮೂಡಿಸಲಾಗಿದೇ.

        ರಾಹುವನ್ನು....  ಮೋಸ  ಪ್ರವೃತ್ತಿಯ  ಒಬ್ಬ  ಪೌರಾಣಿಕ  ನಾಯಕನೆಂದು  ಪರಿಗಣಿಸಲಾಗಿದೆ.   ಈತ  ಮೊಸಮಾಡುವವರು,  ಪರಕೀಯರ  ಸ್ವತ್ತನ್ನು  ಕಬಲಿಸುವವರು,  ಮಾಡಜ ದ್ರವ್ಯಗಳ  ಮಾರಾಟ  ಮಾಡುವವರು,  ವಿಷವನ್ನು  ಮಾರಾಟಮಾಡುವವರು,  ಅಪ್ರಾಮಾಣಿರು, ಅನೈತಿಕ  ಚಟು ವಟಿಕೆಗಳನ್ನು  ನಡೆಸುವವರು  ಮುಂತಾದವರನ್ನು  ಪ್ರತಿನಿಧಿಸುತ್ತಾನೆ.  ಈತ  ಅಧರ್ಮೀಯ,  ಬಹಿಷ್ಕೃತ ,  ಕಟಿಣಮಾತು, ಬ್ರಾಂತಿಕಾರಕತೆ,  ಅಸತ್ಯ,  ಆಶುಚಿತ್ವ,  ಹೊಟ್ಟೆಯ  ಹುಣ್ಣುಗಳು  ಹಾಗೂ  ದೇಹಾಂತರ ವೇಷಧಾರಿ  ರೂಪವನ್ನು  ಸೂಚಿಸುತ್ತಾನೆ,  ಬೇರೊಬ್ಬರ  ಶಕ್ತಿಯನ್ನು  ಬಲಪಡಿಸುವಲ್ಲಿ  ಹಾಗೂ  ಸ್ನೇಹಿತರನ್ನು ವೈರಿಗಳನ್ನಾಗಿ  ಬದಲಿಸಲು  ಕಾರಣಿಭೂತನಾಗಿದ್ದಾನೆ.  ವಿಷಕಾರಿ  ಹಾವುಗಳ  ಕಡಿತಗಳನ್ನು  ರಾಹುವಿನ  ಕೃಪೆಯಿಂದ  ಗುಣಪಡಿಸಬಹುದು,  ಎಲ್ಲ  ಬಗೆಯ  ವಿಷಕರ  ರಾಸಾಯನಿಕಗಳಾದ   ಗೊಬ್ಬರಗಳು,  ಕ್ರಿಮಿನಾಶಕಗಳು  ಹಾಗೂ  ಸೋಂಕು  ನಿವಾರಕಗಳು, ಅಲ್ಲದೇ  ತಿಷ್ಣವಾದ ಘಾಟಿನ ಮಾದರಿಯ  ಎಲ್ಲ  ಪದಾರ್ಥಗಳು,  ವಿಷಕಾರಿ  ಅಂಶವನ್ನೊಳಗೊಂಡ  ಯಾವುದೇ  ಪದಾರ್ಥಗಳಿಗೆ  ರಾಹು  ಕಾರಕನಾಗಿದ್ದಾನೆ,  ಗಾರುಡಿ ವಿದ್ಯೆ,  ಜೂಜು,  ಬೇಟೆ,  ಅಪಹರಣ,  ಯುಕ್ತಿಬಲ,  ಅಮೋಘಧೈರ್ಯ,  ಚರ್ಮದ  ಆರೋಗ್ಯ,  ದುಃಖ,  ಶರೀರ ಪೀಡಕ,  ವಿದ್ಯುತ್ ಉಪಕರಣಗಳು,  ಆಧುನಿಕ  ತಂತ್ರಜ್ಞಾನ,  ಮಾಯಾವಿದ್ಯೆ,  ಅಂತರಜಾಲ  ಸಂಪರ್ಕ,  ನೆಟ್ವರ್ಕ್,  ಕಂಪ್ಯೂಟರ್  ಅಣುಶಕ್ತಿ  ,ವಾಂತಿ,  ಸಿಡುಬು,  ಅಮ್ಮ(ಮೈಲಿ) ಶ್ವೇತಕುಷ್ಠ,  ಹೀಗೆ  ಮೇಲಿನ  ವಿಚಾರಗಳಿಗೆ ರಾಹು  ಕಾರಕನಾಗಿದ್ದಾನೆ.  ರಾಹುವು  ಅಶುಭನಾದರೆ,  ಪುಕ್ಕಲ ಸ್ವಭಾವ,  ಚರ್ಮವ್ಯಾಧಿಗಳು,  ಮಂಕಾದ  ಜೀವನ,  ಏನೂ ಕಾಯಿಲೆ  ಇಲ್ಲದಿದ್ದರೂ ನೋವಿನಿಂದ  ನರಳುವುದು, ಗ್ಯಾಸ್ಟ್ರಬಲ್,  ಕ್ಷಯರೋಗ,  ಸಂತಾನ   ಹೀನತೆ,  ವೈಧವ್ಯ  ಮುಂತಾದ  ತೊಂದರೆಗಳು  ಬರುತ್ತದೆ.

        ರಾಹುವಿನ  ಶಭದೃಷ್ಟಿ ಹೊಂದಲು  ದುರ್ಗಾಸಪ್ತಶತಿ  ಪಾರಾಯಣ,  ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಪ್ರಾರ್ಥನೆ,
 ಸರ್ಪಗಳು  ರಾಹುವಿನ  ಪ್ರತೀರ್ಕವಾಗಿದ್ದು ,  ನಾಗಪೂಜೆಯನ್ನು  ಮಾಡಬೇಕು , ಚರ್ಮವ್ಯಾಧಿಗೆ  ನಾಗನು  ವಾಸಿಸುವ  ಹುತ್ತದ  ಮಣ್ಣು  ಹಚ್ಚುವುದರಿಂದ  ಗುಣವಾಗುತ್ತದೆ.

ಈ  ಗ್ರಹವನ್ನು  ಸ್ತುತಿಸುವ  ಸ್ತೋತ್ರ  ಹೀಗಿದೆ.

"  ಯೋ ವಿಷ್ಣುನೈವಾಮೃತಮ್ ಪೀಯಮಾನ0
ಶಿರಶ್ಚಿತ್ವಾಗ್ರಹಭಾವೇನಾಯುಕ್ತಃ
ಯಶ್ಚಂದ್ರಸೂರ್ಯೋಗ್ರಸತೇ ಪರ್ವಕಾಲೇ
ರಾಹುಂ ಸದಾ ಶರಣಮಹಂ ಪ್ರಪದ್ಯೇ"

"  ಅರ್ಧಕಾಯಮ್  ಮಹಾವೀರ್ಯಂ
ಚಂದ್ರಾದಿತ್ಯ  ವಿಮರ್ಧನಮ್
ಸಿಂಹಿಕಾ  ಗರ್ಭ  ಸಂಭೂತಮ್
ತಂ  ರಾಹುಂ  ಪ್ರಣಮಾಂಯಹಂ "

ರಾಹು ಪೀಡಾ ಪರಿಹಾರ ಸ್ತೋತ್ರ :--

ಮಹಾಶಿರಾ  ಮಹಾವಕ್ರೋ
ಧೀರ್ಘದಂಸ್ಟ್ರೋ  ಮಹಾಬಲಃ
ಆತನುಶ್ಚೊರದ್ವಕೇಶಶ್ಚ
ಪೀಡಾಂ ಹರತು ಮೇ ಶಿಖೀ

ರಾಹು  ಗಾಯತ್ರಿ ಮಂತ್ರ :-- 

ಓಂ  ನಾಗದ್ವಜಾಯ  ವಿದ್ಮಹೇ
ಪದ್ಮಹಸ್ತಾಯ  ಧೀಮಹಿ
ತನ್ನೋ ರಾಹು  ಪ್ರಚೋದಯಾತ್

ಈ  ಮಂತ್ರಗಳ  ಪಠಣೆಯಿಂದ  ರಾಹುವಿನ  ಕೃಪೆಗೆ  ಪಾತ್ರರಾಗ ಬಹುದು. 

ರಾಹು  ಯಂತ್ರ  :-- 

13
8
15
14
12
10
9
16
11




ಇದನ್ನು  ಅಷ್ಟ ಧಾತುವಿನ  ತಗದಿನಲ್ಲಿ  ಅಥವಾ  ಉಂಗುರದಲ್ಲಿ  ಬರೆದು  ಶನಿವಾರಗಳಲ್ಲಿ  ರಾಹುಮಂತ್ರ  ಅಥವಾ  ರಾಹು  ಆಷ್ಟೊತ್ತರ ವನ್ನು  ಪಠಿಸಿ  ಧರಿಸಬೇಕು.

ಓಂ ಹ್ರೀಂ  ದುಂ ದುರ್ಗಾಯೈ ನಮಃ
ಈ  ದುರ್ಗಾಮಂತ್ರವನ್ನು  ಜಪಿಸುವುದರಿಂದ ಕೂಡ  ರಾಹುವಿನ  ಕೃಪೆಗೆ  ಪಾತ್ರರಾಗಬಹುದು.

 ಬೀಜಾಕ್ಷರಿ  ಮಂತ್ರ  :--- 
ಓಂ  ಬ್ರಾಂ  ಬ್ರೀಮ್  ಬ್ರೌಮ್  ನಮಃ  ಶ್ರೀ  ರಾಹವೇ ನಮಃ
 ( ಜಪ ಸಂಖ್ಯೆ  18,000 )



 ವೈಜ್ಞಾನಿಕವಾಗಿ  ರಾಹು  --  ಕೇತು  :-- 

Picture source: Internet/ social media

     ವೈಜ್ಞಾನಿಕವಾಗಿ  ವಿಶ್ಲೇಷಿಸಿದಾಗ  ವಾಸ್ತವವಾಗಿ  ನಭೋಮಂಡಲದಲ್ಲಿ  ಸೂರ್ಯನ  ಸುತ್ತ  ಭೂಮಿ  ಸುತ್ತುತ್ತಿದೆ,  ಭೂಮಿಯ  ಸುತ್ತ  ಚಂದ್ರ  ಸುತ್ತುತ್ತಿದೆ,  ಈ  ಅಂಡಾಕಾರದ  ಪರಿಕ್ರಮದ  ಮಾರ್ಗವನ್ನು  ಮಧ್ಯದಿಂದ  ವಿಭಜಿಸುವ  ಒಂದು  ಸರಳ  ರೇಖೆಯುಂಟು,  ಆ ಸರಳ  ರೇಖೆಯ  ತುದಿಗಳೇ  ರಾಹು - ಕೇತು  ಎಂಬ  ಎರಡು  ಬಿಂದುಗಳು.   ಸೂರ್ಯ ಚಂದ್ರರ  ಚಲನೆಯ  ಮಾರ್ಗದಲ್ಲಿ  ಉಂಟಾಗುವ  ಎರಡು  ಛೇದಕ  ಬಿಂದುಗಳು,  ಹಾಗಾಗಿ  ರಾಹು  ಹಾಗೂ  ಕೇತುವನ್ನು ಕ್ರಮವಾಗಿ ಉತ್ತರ  ಹಾಗೂ  ದಕ್ಷಿಣ  ಚಾಂದ್ರ  ಸಂಪಾತ ಗಳೆಂದು  ಕರೆಯಲಾಗುತ್ತದೆ.   ಸೂರ್ಯ  ಮತ್ತು  ಚಂದ್ರರು  ಈ  ಎರಡರಲ್ಲಿ  ಒಂದು  ಬಿಂದುವಿನಲ್ಲಿದ್ದಾಗ  ಗ್ರಹಣಗಳು  ಉಂಟಾಗುತ್ತದೆ.

ರಾಶಿಚಕ್ರದಲ್ಲಿ  ರಾಹು  ಕೇತುಗಳು  ಎರಡು  ಬಿಂದುಗಳು,  ಪರಸ್ಪರ  ವಿರುದ್ಧ  ದಿಕ್ಕಿನಲ್ಲಿರುವ  ಎರಡು  ಕಪ್ಪು  ಬಿಂದುಗಳು,  ರಾಹು ಕೇತುಗಳ  ಮದ್ಯೆ  ಸರಿಯಾಗಿ  ಆರು ರಾಶಿಯ  ಅಂತರವಿರುತ್ತದೆ.
*************************
✍ ಡಾ:  B N  ಶೈಲಜಾ  ರಮೇಶ್

Monday, 12 June 2017

--: ಶುಕ್ರ ಗ್ರಹ :--

--:  ಶುಕ್ರ  ಗ್ರಹ  :--

ಹರಿಃ  ಓಂ 
ಶ್ರೀ ಗಣೇಶಾಯ ನಮಃ
ಶ್ರೀ ಗುರುಭ್ಯೋ ನಮಃ


ಶುಕ್ರಗ್ರಹ

     " ಕಾವ್ಯ  ಕೋಮಲ  ವಾಗ್ವಿಲಾಸಮತಲಂ "   ಎಂಬಂತೆ  ಕಾವ್ಯಮಯವಾಗಿ  ಕೋಮಲತೆಯಿಂದ  ಕೂಡಿದ  ಮಾತು  ಎಲ್ಲಾ  ರೀತಿಯ  ಸುಖಗಳಿಗೆ  ಶುಕ್ರ  ಕಾರಕನಾಗುತ್ತಾನೆ.

     "ಅಸ್ಯಪ್ರತ್ನಾಮನುದ್ಯುತಮ್  ಶುಕ್ರಂದುದುಹೆ  ಅಹ್ರ ಯಃ  ಪಯಸ್ಸಹಸ್ರಸಾಂಋಷಿಃ "
     ನವಗ್ರಹಗಳಲ್ಲಿ  6 ನೆಯವನಾದ ಅದ್ಭುತವಾದ  ಗ್ರಹವೇ  ಶುಕ್ರ.

     ಮನ್ಮಥನಾಮ  ಸಂವತ್ಸರದ  ಚೈತ್ರಮಾಸ  ಶುಕ್ಲಪಕ್ಷದ  ಏಕಾದಶಿಯಲ್ಲಿ  ಶುಕ್ರನ  ಜನನವಾಯಿತು. ಜನ್ಮ  ನಕ್ಷತ್ರ  ಮಖಾ,  ಭಾರ್ಗವ  ಗೋತ್ರ,  ಬೃಗು ಮಹರ್ಷಿಯ  ಪರಂಪರೆ,  ಶ್ವೇತವರ್ಣ,  ಹಸ್ತಸಂಖ್ಯೆ - 6,  ಗ್ರಹಮಂಡಲದಲ್ಲಿ  ಪೂರ್ವ  ದಿಕ್ಕಿ ಗೆ  ಸ್ಥಾನ,  ಧಾನ್ಯ  --  ಅವರೆಕಾಳು,  ವಸ್ತ್ರ --  ಬಿಳಿ ಮತ್ತು ಹಸಿರು  ಮಿಶ್ರಿತ  ಬಣ್ಣ,  ರತ್ನ  --  ವಜ್ರ,  ಆಯುಧಗಳು  --  ದಂಡ  ಅಕ್ಷಮಾಲ ಕಮಂಡಲ,  ಶ್ವೇತರಥ, ಗ್ರಹಮಂಡಲದಲ್ಲಿ  ಪಂಚಕೋನಾಕಾರ,  ಪತ್ನಿ - ಜಯಂತಿ,  ವಾಹನ  --  ಶ್ವೇತಾಶ್ವ,  ಪಾಂಚಾಲ ದೇಶಕ್ಕೆ  ಅಧಿಪತಿ,  ಪುಷ್ಪ --  ಬಿಳಿತಾವರೆ  ಹೂವು,  ಕಲತ್ರ  ಕಾರಕ,  ಕಾಮಕಾರಕ,  ಜ್ಞಾನಕಾರಕ, ವೀರ್ಯಕಾರಕ,   ಐಷಾರಾಮಿ  ಜೀವನ -  ಭೋಗ ಪ್ರಧಾನ  ಗ್ರಹ,  ಲೌಕಿಕ  ಸುಖ  ನೀಡುವವನು, ರಜೋಗುಣ,  ದ್ವಿಪಾದ ಗ್ರಹ,  ಮೃದು ಹಾಗೂ  ಲಘು  ಸ್ವಭಾವ,  ಪರೋಪಕಾರಿ,  ಹೆಂಡತಿ ಸುಖ,   ಇ0ದ್ರಿಯಸುಖ,  ವಿವಾಹ  ಭಾಗ್ಯ  ನೀಡುವವ,  ರುಚಿ --  ಹುಳಿರಸ,  ಪೂರ್ವ - ದಕ್ಷಿಣ  ಪ್ರಾಂತ್ಯಕ್ಕೆ ಸಂಚಾರ,  ಸ್ತ್ರೀ ಗ್ರಹ,  ಕಪ್ಪಾದ  ಗುಂಗುರು ಕೂದಲು,  ಯಜುರ್ವೇದಕ್ಕೆ  ಅಧಿಪತಿಯು, ಸ್ವದೇಶಾಭಿಮಾನ,  ಜಲಮಯವಾದ  ಪ್ರದೇಶ,  ಸಂಗೀತ ,  ಸಾಹಿತ್ಯ,  ನಾಟ್ಯ,  ಅಲಂಕಾರ ,  ಕವಿತ್ವ, ಸಿನೆಮಾನಟ,  ವಿದೇಶಿಭಾಷೆ,  ಮಗ್ಗ,  ದರ್ಜಿ, ದಾಂಪತ್ಯ  ಜೀವನದಲ್ಲಿ  ಪರಸ್ಪರ  ಹೊಂದಾಣಿಕೆ ಕೊಡುವವ,  ಶ್ರೀಮಂತತನ,  ಗೌರವ,  ಗೃಹಸೌಖ್ಯ,  ಅಭಿವೃದ್ಧಿ,  ಮೋಹಕಾರಕ,  ಸ್ತ್ರೀ ಮೂಲಕ ಲಾಭ,  ದೈತ್ಯಗುರು,  ವಯಸ್ಸು - 16  ವರ್ಷಗಳು, ತಮಾಷೆ  ಮಾಡುವವನು ,  ಈಜುಗಾರ, ಅದೃಷ್ಟವಂತ,  ಶಯನ ಗೃಹವಾಸ,  ಸುಗಂಧಪರಿಮಳ,  ಹೂವಿನ ಹಾರ,  ವೀಣೆ,  ಕೊಳಲು, ವಿನೋದ ದಲ್ಲಿ  ಆಸಕ್ತಿ,  ವಸಂತಕಾಲಕ್ಕೆ  ಅಧಿಪತಿ,  ಆಜ್ಞೇಯಕ್ಕೆ  ಅಧಿಪತಿ,  ಸುಂದರವಾದ   ಗಮನ ಸೆಳೆಯುವ  ಕಣ್ಣು,  ಅಗಲವಾದ  ಹಗುರವಾದ  ಭುಜಗಳು,  ಕಫ  ಮತ್ತು  ವಾಯು,  ಮಧ್ಯಮ  ಎತ್ತರ, ಜಲತತ್ವ,  ಬ್ರಾಹ್ಮಣ ಜಾತಿ,  ಅಷ್ಟಾಕೃತಿ,  ಅತ್ಯಾಕರ್ಷಕ  ಶರೀರ,  ಅಧಿಕವಾದ ಶೌರ್ಯ  ಹಾಗೂ ವೀರ್ಯವಂತ,  ರಾಕ್ಷಸರಿಗೆ  ಗುರು,  ಎಲ್ಲಾ  ವಿಚಾರದಲ್ಲೂ  ಉನ್ನತ ಮಟ್ಟದ ಸುಖ,  ಚಾಯಾಗ್ರಹಣ, ಚಿತ್ರ  ವಿಚಿತ್ರವಾದ  ಉಡುಪು,  ಒಡವೆ  ವಸ್ತ್ರಗಳು,   ರೇಷ್ಮೆ,  ವಿಷಯಾಸಕ್ತಿ, ಸೌಂದರ್ಯಪ್ರಸಾದನಗಳು, ವಿಷಯಾಸಕ್ತಿ,  ಕುಟುಂಬ  ಸೌಖ್ಯ,  ಆಡಂಬರ  ಜೀವನ,  ಮಂತ್ರಿ ಪದವಿ, ವೇಶ್ಯಾಗೃಹ,  ಪರಸ್ತ್ರೀ  ಸಹವಾಸ ಸೌಖ್ಯ,  ಮುಂತಾದುವಕ್ಕೆ  ಶುಕ್ರನು  ಕಾರಕನಾಗುತ್ತಾನೆ, ಅಧಿದೇವತೆ --  ಮಹಾಲಕ್ಷ್ಮಿ ( ಶಚಿದೇವಿ)  ,  ಶುಕ್ರಗ್ರಹನು ಒಂದು  ರಾಷಿಯಲ್ಲಿ  30  ದಿನಗಳ ಕಾಲ ಸಂಚರಿಸುವನು,  4ನೆ  ಮನೆಯಲ್ಲಿ  ದಿಗ್ಬಲನು,  10 ನೆ  ಮನೆಯಲ್ಲಿ  ಬಲಹೀನನು,   ವೃಷಭ , ತುಲಾ ಶುಕ್ರನ  ಸ್ವಕ್ಷೇತ್ರವು,   ಮೀನಾ  ರಾಶಿಯಲ್ಲಿ  ಉಚ್ಚ್ಜಸ್ಥಾನ, 28° ಯಲ್ಲಿ  ಪರಮೋಚ್ಚ, ಕನ್ಯಾರಾಶಿಯಲ್ಲಿ  ನೀಚಸ್ಥಾನ,  27°ಯಲ್ಲಿ  ಪರಮ ನೀಚ.   ಭರಣಿ - ಪುಬ್ಬ -ಪೂರ್ವಾಷಾಡಾ ನಕ್ಷತ್ರಗಳಿಗೆ  ಅಧಿಪತಿಯು,  ಶುಕ್ರನ  ದಶಾಕಾಲ  20  ವರ್ಷಗಳು,  ಗೋಚಾರದಲ್ಲಿ  1, 2, 3, 4, 5, 8, 9, 11, 12 ರಲ್ಲಿ ಶುಭ,  ಇನ್ನಿತರ  ಸ್ಥಾನಗಳಲ್ಲಿ  ಅಶುಭನು,   ಶುಕ್ರಗ್ರಹನು  ಹೀನಸ್ಥಾನದಲ್ಲಿದ್ದರೆ  ಉದ್ವೇಗ, ಮೂತ್ರ ಪಿಂಡ,  ಗುಪ್ತಅಂಗಗಳ  ಭಾಗ,  ಮೂತ್ರಕೋಶಗಳ  ತೊಂದರೆ,  ಕಣ್ಣುಗಳ ತೊಂದರೆಯಾಗುವುದು.

---:  ಪುರಾಣದಲ್ಲಿ  ಶುಕ್ರ  :---
Picture source: Internet/ social media
    ಬಿಳಿಯ  ಬಟ್ಟೆಯನ್ನು  ಧರಿಸಿದ,  ಬಿಳಿಶರೀರದ  ದೈತ್ಯಮಂತ್ರಿ,  ನಾಲ್ಕು  ಕೈಗಳಲ್ಲಿ  ದಂಡ ವರಮುದ್ರೆ -  ಕಮಂಡಲು -  ಜಪಮಾಲೆಗಳನ್ನು  ಧರಿಸಿರುವ  ತಪಸ್ವಿ,  ಶಾಸ್ತ್ರಾಸ್ತ್ರ  ಕೋವಿದ, ಅಜಾನುಬಾಹು,  ಸುಂದರ  ಚಾರುವೃತ್ತ  ತೊಡೆಗಳು,  ಆಕರ್ಷಕ  ಮುಖಕಾಂತಿ,  ಮನಸೆಳೆಯುವ ಕೇಶರಾಶಿ,  ಕಾಮುಖತೆ,  ರಾಜಸಪ್ರವೃತ್ತಿ,  ಕ್ರೀಡಾತತ್ಪರ,  ಬುದ್ಧಿವಂತ,  ವಿಶಾಲ  ನೇತ್ರ,  ಸ್ಥೂಲಭುಜ, ಶುಭ್ರವರ್ಣದ  ಬಟ್ಟೆ  ಇವು  ಶುಕ್ರನ  ಲಕ್ಷಣಗಳು.

     ಬೃಗು ಮಹರ್ಷಿಯ  ಮಗ,  ತಾಯಿ --  ಪುಲೋಮೆ,  ಸಹೋದರ -- ಚ್ಯವನ,  ಪತ್ನಿ -- ಉರ್ಜಸ್ವತಿ (ಸುಕೀರ್ತಿ),   ಮಗಳು  --  ದೇವಯಾನಿ,  ಕಂಡಾಮರ್ಕರು  ಮಕ್ಕಳು.

   ಶಿವನ  ಶುಕ್ರ ದಿಂದ ( ವೀರ್ಯ)  ಜನಿಸಿದ್ದರಿಂದ  ಶುಕ್ರ  ಎನಿಸಿಕೊಂಡ  ಎಂಬ ಕಥೆ ಶಾಂತಿಪರ್ವದಲ್ಲಿದೆ,    ಮಿಥುನ  ಭಾವದಲ್ಲಿ  ಪ್ರಸಿದ್ಧನಾದ  ಅರ್ಧನಾರೀಶ್ವರನ  ಶುಕ್ರದಿಂದ ಜನಿಸಿದ್ದರಿಂದಲೇ ಈತನಿಗೆ  ಕಾಮುಕತೆ,  ಶುಕ್ರ ಪ್ರಾಧಾನ್ಯಗಳು  ಈತನ  ಸ್ವರೂಪ  ಗುಣವಾಗಿವೆ. ಆದ್ದರಿಂದಲೇ  ಈತನು  ಸ್ತ್ರೀ  ಕಾರಕ.

     ದೈತ್ಯರ  ರಕ್ಷಣೆಗಾಗಿ  ಬದ್ದ  ಕಂಕಣನಾದ  ಬ್ರಾಹ್ಮಣ,  ದೈತ್ಯರ  ಗುರು,  ದೈತ್ಯಮಂತ್ರಿ,  ತಲೆ ಕೆಳಗೆ ಮಾಡಿ  ಧೂಮಪಾನ ಮಾಡುತ್ತಾ  ಸಹಸ್ರವರ್ಷ ತಪಸ್ಸನ್ನಾಚರಿಸಿ  ಮೃತ ಸಂಜೀವಿನಿ ವಿದ್ಯೆಯಯನ್ನು ಈಶ್ವರನಿಂದ  ಪಡೆದ  ಹಟವಾದಿ,  ಈ  ಮೂಲಕ  ದೇವಾಸುರ ಯುದ್ದದಲ್ಲಿ ಮಾಡಿದ  ರಾಕ್ಷಸರನ್ನು  ಪುನಃ  ಜೀವಿಸುವಂತೆ  ಮಾಡಿದ.

     ವಾಮನಾವತಾರಿಯಾದ  ಶ್ರೀವಿಷ್ಣುವಿಗೆ  ಬಲಿಯು ಭೂದಾನವನ್ನು  ಮಾಡುವ  ಸಮಯ,   ವಾಮನ  ಮೂರ್ತಿಯು  ತನ್ನ  ಪಾದದಳತೆ  ಭೂಮಿಯನ್ನು  ಕೋರಿದಾಗ,  ಮುಂದೆ  ಆಗುವುದನ್ನು ಊಹಿಸಿ,  ಬಲಿಯು  ದಾನ  ಮಾಡದಂತೆ  ತಡೆಯಲು  ಪ್ರಯತ್ನಿಸಿ,  ಬಲಿಯು  ಕೇಳದೆ  ಇದ್ದಾಗ ಕಮಂಡಲು ( ಗಿಂಡಿ ) ತೂತಿನಲ್ಲಿ ಕುಳಿತು  ಜಲಧಾರೆಯನ್ನು  ತಡೆದ,  ವಾಮನನ  ಮೂಲಕ ದರ್ಬೆಯಿಂದ  ಚುಚ್ಚಿಸಿಕೊಂಡು  ಒಕ್ಕಣ್ಣನಾದ.

     ದೇವತೆಗಳಿಂದ  ಬೇಗನೆ  ನಾಶವಾಗುತ್ತಿದ್ದ  ರಾಕ್ಷಸರನ್ನು  ರಕ್ಷಿಸಲು,  ಅವರನ್ನು  ಸನ್ಮಾರ್ಗಕ್ಕೆ ತರಲು  ಸಾಕಷ್ಟು  ಪ್ರಯತ್ನ  ಮಾಡಿ  ಸೃಷ್ಟಿಯನ್ನು  ಕಾಪಾಡಿದ  ಆಚಾರ್ಯನಾದ್ದರಿಂದಲೇ  ಈತ  'ಶುಕ್ರಾಚಾರ್ಯ '.

     ಶುಕ್ರನಿಗೆ  ಗುರುವು  ಶತ್ರು,  ಕಾರಣ...  ಗುರು  ದೇವತೆಗಳಿಗೆ  ಆಚಾರ್ಯನಾಗಿದ್ದು,  ಸದಾಕಾಲ ರಕ್ಷಿಸುತ್ತಿದ್ದ,  ಹಾಗೆಯೇ  ಶುಕ್ರಾಚಾರ್ಯರು  ಕೂಡ  ರಾಕ್ಷಸರನ್ನು  ರಕ್ಷಿಸುತ್ತಿದ್ದರು,  ಹೀಗೆ ಒಬ್ಬರಿಗೊಬ್ಬರು  ವಿರೋಧ  ತೋರಿಸುತ್ತಾ  ಶತ್ರುವಾದರು.   ಇದನ್ನು  ಸೂರ್ಯನೊಂದಿಗೆ ಹೇಳಿಕೊಂಡರು,  ಸೂರ್ಯನು  ಉಪಾಯದಿಂದ  ಸಂಜೀವಿನಿ  ವಿದ್ಯೆ ಕಲಿತು  ಗುರುವಿಗೆ  ಮಿತ್ರನಾದ , ಕಾರಣ.....ಶುಕ್ರಾಚಾರ್ಯ  ಸೂರ್ಯನಿಗೆ  ರಾಕ್ಷಸರ  ಬಾಧೆಗೆ  ಒಳಗಾಗೆಂದು  ಶಾಪ ನೀಡಿದರು, ಇದರಿಂದ  ಸೂರ್ಯನು  ಕೂಡ  ಶತ್ರುವಾದ.   ಹಾಗೆಯೇ  ಚಂದ್ರನು  ಮೋಸದಿಂದ  ತನ್ನ  ಮಗನಾದ ಬುಧನನ್ನು  ಶುಕ್ರಾಚಾರ್ಯರ  ಬಳಿಗೆ  ಕಳುಹಿಸಿದ,  ಶುಕ್ರಾಚಾರ್ಯರು  ತಿಳಿಯದೆ  ಸಂಜೀವಿನಿಯು ಸೇರಿ  ಸಕಲ ವಿದ್ಯೆಯನ್ನು  ಕಲಿಸಿದರು,  ಒಂದು ದಿನ  ಶುಕ್ರಾಚಾರ್ಯರು  ಶ್ರೀ ಚಕ್ರವನ್ನು ಪೂಜಿಸುತ್ತಿದ್ದಾಗ  ಶ್ರೀ  ಚಕ್ರದೇವತೆ  ಪ್ರತ್ಯಕ್ಷಳಾಗಿ  ನಿನಗೆ  ಕಲಿಸಿದ  ಅಮೂಲ್ಯವಾದ  ವಿದ್ಯೆಯನ್ನು   ಮೊಸಗಾರರಿಗೂ,  ಷಂಡರಿಗೂ ಬೋಧನೆ  ಮಾಡಿದ್ದಿಯಾ  ನಿನ್ನ  ಶಕ್ತಿ  ಉಡುಗಿ  ಹೋಗಲಿ  ಎಂದು ಶಾಪವನ್ನಿಟ್ಟಳು,  ಇದರಿಂದ  ಚಂದ್ರ  ಕೂಡ  ಶತ್ರುವಾದ,   ಆದರೆ  ಬುಧ  ಸ್ವಯಂ  ಬುದ್ಧಿಯಿಂದ ಬಂದಿಲ್ಲವಾದ  ಕಾರಣ  ಬುದನೊಂದಿಗೆ  ವೈರತ್ವವಿಲ್ಲ ಮಿತ್ರನಾದ,  ಹಾಗೆಯೇ  ಶನಿಯೂ  ಕೂಡ ಮಿತ್ರ. ಜಗತ್ತಿನ  ಪ್ರತಿಯೊಂದು  ಪ್ರಾಣಿಯೂ  ಹಂಬಲಿಸಿ  ಹಾತೊರೆಯುವ  ಪ್ರತಿಯೊಂದು ಸುಖದಲ್ಲಿಯೂ  ಶುಕ್ರನಿದ್ದಾನೆ,   ಶುಕ್ರನ  ಶುಭ  ದೃಷ್ಟಿಯಿಂದ  ಮಾತ್ರ  ಎಲ್ಲಾ  ಸುಖಗಳು  ಸಿಗಲು ಸಾಧ್ಯ,  ಜಾತಕದಲ್ಲಿ  ಶುಕ್ರ  ನೀಚ, ಶತ್ರುಸ್ಥಾನ ಅಥವಾ  ಪೀಡಿತನಾಗಿದ್ದರೆ  ಈ  ಎಲ್ಲಾ  ಸುಖಗಳಿಗೂ ಪ್ರತಿಕೂಲವಾಗುತ್ತದೆ,  ಎಲ್ಲಾ  ಸುಖಗಳನ್ನು  ನೀಡುವ  ಶುಕ್ರನ  ಶುಭ ದೃಷ್ಟಿ  ಪಡೆಯಲು.... ಮಹಾಲಕ್ಷ್ಮಿಗೆ  ಪ್ರತಿ  ಶುಕ್ರವಾರ  ಮಂಗಳ ದ್ರವ್ಯಗಳಿಂದ,  ಸುಗಂಧದ್ರವ್ಯಗಳಿಂದ,  ಸುವಾಸನೆಯುಕ್ತ ಹೂಗಳು,  ಬಿಳಿತಾವರೆ,  ಅತ್ತಿ ಪತ್ರೆಯಿಂದ  ಪೂಜಿಸಿ  ತುಪ್ಪದನ್ನ  ನೈವೇದ್ಯ  ಮಾಡಿ  ನೆನೆಸಿದ ಅವರೆಕಾಳನ್ನು  ಬಿಳಿಯ  ಹಸುವಿಗೆ  ನೀಡಿ 8  ವರ್ಷದೊಳಗಿನ ಮಹಾಲಕ್ಷ್ಮಿ  ಸ್ವರೂಪರಾದ ಹೆಣ್ಣುಮಕ್ಕಳಿಗೆ ಮಂಗಲದ್ರವ್ಯ ಯುಕ್ತವಾದ  ಬಾಗಿನವನ್ನು  ನೀಡುವುದರಿಂದ  ಶುಕ್ರಗ್ರಹದ ಶುಭತ್ವವನ್ನು ಪಡೆಯಬಹುದು.

    ಶುಕ್ರ ಲತ್ತಾಕಾಲದಲ್ಲಿ  ಹೆಂಗಸರಿಗಾದರೆ.....ಗಂಡನಿಗೆ  ಪೀಡೆ,  ಗಂಡಸರಿಗಾದರೆ.....ಹೆಂಡತಿಗೆ  ಪೀಡೆ,
ಲತ್ತಾಶಾಂತಿ :- ಬೆಳ್ಳಿಪಾತ್ರೆ  ದಾನ ಮತ್ತು  ಬಿಳಿ  ಹಸುದಾನ  ಮಾಡಬೇಕು.

ಶುಕ್ರಗ್ರಹವನ್ನು  ಸ್ತುತಿಸುವ  ಮಂತ್ರ  ಹೀಗಿದೆ :--

ಹಿಮಕುಂದ ಮೃಣಾಲಾಭಾಂ  ದೈತ್ಯಾನಾಮ್  ಪರಮಂ ಗುರುಮ್
ಸರ್ವಶಾಸ್ತ್ರ  ಪ್ರವರ್ತಾರಾಮ್  ಭಾರ್ಗವಂ  ಪ್ರಣಮಾಂಯಹಂ
ಈ  ಸ್ತೋತ್ರ  ಪಠಣೆಯಿಂದ ಶುಕ್ರ ಗ್ರಹ  ದೋಷವನ್ನು ಪರಿಹರಿಸಿಕೊಳ್ಳಬಹುದು.

ಶುಕ್ರ  ಪೀಡಾ  ಪರಿಹಾರ  ಸ್ತೋತ್ರ :--

ದೈತ್ಯಮಂತ್ರಿ  ಗುರು‌ಸ್ತೆ ಶಾಂ
ಪ್ರಾಣದಶ್ಚ  ಮಹಾಮತಿಃ
ಪ್ರಭುಸ್ತಾರಾ  ಗ್ರಹಾಣಾನ್ಛ
ಪೀಡಾಂ  ಹರತು  ಮೇ ಭೃ ಗುಃ

ಶುಕ್ರ  ಗಾಯತ್ರೀ  ಮಂತ್ರ :--

ಓಂ ಭಾರ್ಗವಾಯ  ವಿದ್ಮಹೇ
ದಾನವಾಚಾರ್ಯಾಯ  ಧೀಮಹಿ
ತನ್ನೋ  ಶುಕ್ರ  ಪ್ರಚೋದಯಾತ್

ಏಕಾಕ್ಷರಿ  ಬೀಜಮಂತ್ರ :--

ಓಂ  ಶುಮ್  ಶುಕ್ರಾಯ  ನಮಃ

ಅನುಕೂಲ  ಮಂತ್ರ  :--

ಓಂ  ಐಮ್  ಕ್ಲೀಮ್  ಶ್ರೀಮ್
(ಜಪಸಂಖ್ಯೆ  ಒಂದೂಕಾಲು ಲಕ್ಷ )

ತಾಂತ್ರಿಕ  ವಿಧಾನ  ಮಂತ್ರ  :--

ಓಂ  ದ್ರಾ0  ದ್ರೀ0  ದ್ರೌ0  ಸಃ ಶುಕ್ರಾಯ  ನಮಃ
( ಜಪಸಂಖ್ಯೆ  16,000 )

ಶುಕ್ರನ  ಕ್ಷೇತ್ರವಾದ  ವೃಷಭ  ಲಗ್ನದವರು ಪೂಜಿಸಿ  ಧರಿಸಬಹುದಾದ  ಯಂತ್ರ

ಪಂಚದಶಾ ಯಂತ್ರ


4
9
2
3
5
7
8
1
6





ಬೀಸಾಯಂತ್ರ

11
6
13
12
10
8
7
14
9



ಓಂ ಐ0  ಕ್ಲೀ0  ಶ್ರೀ0

 ಶುಕ್ರನ  ಕ್ಷೇತ್ರವಾದ ತುಲಾ ಲಗ್ನದವರು ಪೂಜಿಸಿ  ಧರಿಸಬಹುದಾದ  ಯಂತ್ರ

ಪಂಚದಶಾ  ಯಂತ್ರ

2
7
6
9
1
5
4
3
8




ಬೀಸಾಯಂತ್ರ

11
6
13
12
10
8
7
14
9



ಓಂ  ಐ0  ಕ್ಲೀ0  ಶ್ರೀ0

--: ವೈಜ್ಞಾನಿಕವಾಗಿ  ಶುಕ್ರ :--
Picture source: Internet/ social media

   ಶುಕ್ರವು  ಸೂರ್ಯನಿಗೆ  ಅತಿ  ಸಮೀಪವಾದ  ಎರಡನೇ  ಗ್ರಹ,   ಸೂರ್ಯನನ್ನು 224.7 ದಿನಗಳಿಗೊಮ್ಮೆ  ಪರಿಭ್ರಮಿಸುತ್ತದೆ.  -4.6 ಗೋಚರ  ಪ್ರಮಾಣ ವಿರುವ  ಶುಕ್ರವು,  ಚಂದ್ರನ  ನಂತರ ರಾತ್ರಿಯ  ಆಗಸದಲ್ಲಿ  ಅತ್ಯಂತ  ಪ್ರಕಾಶಮಾನವಾದ  ಕಾಯ.  47.8°  ಗರಿಷ್ಠ  ನೀಳತೆಯನ್ನು ಹೊಂದಿರುವ  ಶುಕ್ರಗ್ರಹವು  ಮುಂಜಾನೆ  ಮತ್ತು  ಮುಸ್ಸಂಜೆಗಳಲ್ಲಿ  ಚನ್ನಾಗಿ  ಕಾಣುತ್ತದೆ,  ಇದನ್ನು ಹಗಲು  ನಕ್ಷತ್ರ  ಹಾಗೂ  ಸಂಜೆ  ನಕ್ಷತ್ರ  ಎಂದೂ  ಕರೆಯುತ್ತಾರೆ.

    ಗಾತ್ರದಲ್ಲಿ  ಸುಮಾರು  ಭೂಮಿಯಷ್ಟೇ ಇದೆ,  ತನ್ನ  ಅಕ್ಷದ ಮೇಲೆ  ಬುದಗ್ರಹಕ್ಕಿಂತ  ನಿಧಾನವಾಗಿ ಸುತ್ತುವ  ಇದರ  ಒಂದು  ದಿನ  ಭೂಮಿಯ  243  ದಿನಕ್ಕೆ  ಸಮಾನ,  ಇದು  ಭೂಮಿಯ  ವಿರುದ್ಧ ದಿಕ್ಕಿನಲ್ಲಿ  ಸುತ್ತುತ್ತದೆ,  ಇದರ  ವಾತಾವರಣದಲ್ಲಿ  ಇಂಗಾಲಾಮ್ಲ  ಹೆಚ್ಚಾಗಿ  ಇರುವುದರಿಂದ  ಈ ಗ್ರಹದಲ್ಲಿ  ಜೀವಿಗಳು  ಇಲ್ಲ,  ಇದರ  ಮೇಲ್ಮೈ  ಸೀಸವನ್ನೂ  ಕರಗಿಸಬಲ್ಲಷ್ಟು  ಶಾಖ ದಿಂದ  ಕೂಡಿದೆ.

  ಘನರೂಪಿಯಾದ  ಶುಕ್ರವು  ಭೂಮಿಯ  ಗಾತ್ರ   ಮತ್ತು  ರಚನೆಯನ್ನು  ಹೋಲುವುದರಿಂದ ಇದನ್ನು  ಭೂಮಿಯ  "  ಸೋದರಗ್ರಹ " ವೆಂದೂ  ಕರೆಯಲಾಗುತ್ತದೆ.   ಶುಕ್ರವು  ಚನ್ನಾಗಿ  ಬೆಳಕನ್ನು ಪ್ರತಿಪಲಿಸುವ  ಮೊಡಗಳಿಂದ   ಆವೃತ್ತವಾಗಿದ್ದು  ಅದರ  ಮೇಲ್ಮೈ ಸೂರ್ಯನ  ಬೆಳಕಿರುವಾಗ ಕಾಣುವುದಿಲ್ಲ.20 ನೇ  ಶತಮಾನದಲ್ಲಿ  ಗ್ರಹ  ವಿಜ್ಞಾನವು  ಶುಕ್ರದ  ಕೆಲವು  ರಹಸ್ಯವನ್ನು  ಬಯಲು ಮಾಡುವ  ಮುನ್ನ  ಅದರ  ಬಗ್ಗೆ  ಹಲವಾರು  ವದಂತಿಗಳು,  ಅನುಮಾನಗಳು  ಹುಟ್ಟಿಕೊಂಡಿದ್ದವು, ಮುಖ್ಯವಾಗಿ ಇಂಗಾಲದ ಡೈ ಆಕ್ಸೈಡ್ ನ್ನು  ಒಳಗೊಂಡ ಶುಕ್ರದ  ವಾಯು ಮಂಡಲವು   ಘನರೂಪಿ ಗ್ರಹಗಳಲ್ಲೇ ಅತಿ  ದಟ್ಟವಾಗಿದೆ.   ಶುಕ್ರದ  ಮೇಲ್ಮೈನಲ್ಲಿ  ವಾಯು  ಒತ್ತಡವು  ಭೂಮಿಯ  ಮೇಲಿನ ಒತ್ತಡಕ್ಕಿಂತ  90  ಪಟ್ಟು  ಅಧಿಕ,  ಶುಕ್ರದ  ಮೇಲ್ಮೈನ  ವಿವರವಾದ  ನಕ್ಷೆಯನ್ನು  ಕಳೆದ  20 ವರ್ಷಗಳಲ್ಲಿ ಮಾತ್ರ  ತಯಾರಿಸಲಾಗಿದೆ.   ವ್ಯಾಪಕವಾಗಿ  ಜ್ವಾಲಾಮುಖಿಗಳು  ಕಂಡು  ಬರುವ  ಈ ಮೇಲ್ಮೈನಲ್ಲಿ  ಇಂದಿಗೂ  ಕೆಲವು  ಜ್ವಾಲಾಮುಖಿಗಳು ಜೀವಂತವಾಗಿರಬಹುದು  ಎಂಬುದು ವಿಜ್ಞಾನಿಗಳ  ನಿಲುವು.   ಶುಕ್ರಗ್ರಹದ  ವ್ಯಾಸ 12,400 km ಅಂದರೆ 7,700  ಮೈಲಿಗಳು.  ಸೂರ್ಯನ ಸುತ್ತ  ಒಂದು  ಬಾರಿ  ಪ್ರದಕ್ಷಿಣೆ  ಹಾಕಲು  ತೆಗೆದುಕೊಳ್ಳುವ  ಕಾಲ 224,7  ದಿನಗಳು,  ಸೂರ್ಯನಿಂದ ಸುಮಾರು 108.000.000 km ಅಂದರೆ 67.000.000  ಮೈಲುಗಳ  ದೂರದಲ್ಲಿದೆ.   ಶುಕ್ರದ  ವ್ಯಾಸವುಬ್ ಭೂಮಿಯ  ವ್ಯಾಸಕ್ಕಿಂತ  ಕೇವಲ  650 km  ಕಡಿಮೆಯಿದೆ,  ಮತ್ತು  ಶುಕ್ರದ  ದ್ರವ್ಯರಾಶಿಯು ಭೂಮಿಯ  81.5% ರಷ್ಟಿದೆ.

ಶುಕ್ರದ  ಕಕ್ಷೆಯ  ಗುಣಗಳು

ಧೀರ್ಘಾರ್ಧ  ಅಕ್ಷ     --- 108,208,926  km
ಕಕ್ಷೆಯ   ಪರಿಧಿ    ---   680,000,000  km
ಕಕ್ಷೀಯ  ಕೇಂದ್ರ  ಚ್ಯುತಿ   ---  0.006 773 23
ಪುರರವಿ   --- 107,476,002 km
ಅಪರವಿ    ---  108,941,849 km
ಕಕ್ಷೀಯ  ಪರಿಭ್ರಮಣ  ಕಾಲ  ---  224,700 69  ದಿನ
ಯುತಿ  ಅವಧಿ  ---  583.92 d
ಸರಾಸರಿ  ಕಕ್ಷಾ ವೇಗ  ---  35.020 km/ ಪ್ರತಿ ಕ್ಷಣ
ಗರಿಷ್ಠ ಕಕ್ಷಾ  ವೇಗ  --- 35.256 km/ ಪ್ರತಿ ಕ್ಷಣ
ಕನಿಷ್ಠ ಕಕ್ಷಾ  ವೇಗ  ---  34.784  km/ ಪ್ರತಿ  ಕ್ಷಣ
ಓರೆ  --- 3.394 71°

ಭೌತಿಕ  ಗುಣಲಕ್ಷಣಗಳು  :--

ಸಮಭಾಜಕ  ರೇಖೆಯ  ವ್ಯಾಸ  ---  12,103.7  km
ಮೇಲ್ಮೈ  ವಿಸ್ತೀರ್ಣ  ---  4.60×10^8 km
ಗಾತ್ರ   ---  9.28×10 ^11
ದ್ರವ್ಯರಾಶಿ  ---  4.8685 × 10^24 kg
ಸರಾಸರಿ  ಸಾಂದ್ರತೆ  ---  5.204 ಗ್ರಾಮ್/ ಸೆ.ಮೀ
ಸಮಭಾಜಕದ  ಬಳಿ  ಗುರುತ್ವ  --- 8.87 ಮೀ / ಕ್ಷಣ
ಅಕ್ಷೀಯ  ಪರಿಭ್ರಮನದ  ಕಾಲ  ---  243.0185 ದಿನ
ಅಕ್ಷೀಯ  ಪರಿಭ್ರಮನದ  ವೇಗ  ---  652 km
ಅಕ್ಷದ  ಓರೆ     --- 2.64°
ಉತ್ತರ ದೃವದಂಶ  ---   272.76°
ಮೇಲ್ಮೈ  ತಾಪಮಾನ  ---  ಕನಿಷ್ಠ  ---  228 k
ಸರಾಸರಿ  ---  737 k
ಗರಿಷ್ಠ.  ---  773 k

ವಾಯುಮಂಡಲದ  ಗುಣಲಕ್ಷಣಗಳು

ವಾತಾವರಣದ  ಒತ್ತಡ  ---  9.2 MPa
ಇಂಗಾಲದ ಡೈ ಆಕ್ಸೈಡ್  ---  ~96.5%
ಸಾರಜನಕ  ---  ~3.5%
ಗಂದಕದ ಡೈ ಆಕ್ಸೈಡ್  --- ~.015%
ಆರ್ಗಾನ್   ---  .007%
ನೀರಾವಿ    ---  .002 %
ಇಂಗಾಲದ  ಮಾನಾಕ್ಸೈಡ್  --- .0017 %
ಹೀಲಿಯಂ  ---  .0012%
ನಿಯಾನ್   ---  .0007%
**************************
✍ ಡಾ||  B N  ಶೈಲಜಾ  ರಮೇಶ್