Friday, 30 December 2022

121. ಸುಖ ಜೀವನ ( ಜನ್ಮಕುಂಡಲಿಯಲ್ಲಿ )

       ಓಂ ಶ್ರೀ ಮಹಾಗಣಪತಯೇ ನಮಃ
            ಓಂ ಶ್ರೀ ಗುರುಭ್ಯೋನಮಃ

ಸುಖ ಜೀವನ
       ( ಜನ್ಮಕುಂಡಲಿಯಲ್ಲಿ )

        ಮಾನವನಿಗೆ ಸೃಷ್ಟಿಯ ಎಲ್ಲಾ ಜೀವಿಗಳಿಗಿಂತ ಹೆಚ್ಚಿನ ಆಸೆ ಬಯಕೆಗಳು, ಇದು ಸಹಜವೂ ಕೂಡ, ಏಕೆಂದರೆ ಎಲ್ಲಾ ಜೀವಿಗಳಿಗಿಂತ ಮನುಜ ಬುದ್ಧಿವಂತ ಜೀವಿ, ತನ್ನ ಬೆಳವಣಿಗೆಗೆ ಪೂರಕವಾದ ಬೇಕುಬೇಡಗಳನ್ನು ಬಯಸುವುದು ತಪ್ಪೇನಲ್ಲ. ಅಲ್ಲದೆ ಆಸೆ ಕನಸುಗಳಿಲ್ಲದಿದ್ದರೆ ಬದುಕು ಬರಡಾದಂತೆ,  ಒಂದು ಪುಟ್ಟ ಮಗುವನ್ನು ಏನಾಗಲು ಬಯಸುತ್ತೀಯಾ ಎಂದು ಕೇಳಿದರೆ ಡಾಕ್ಟರ್, ಇಂಜಿನಿಯರ್, ಆಕ್ಟರ್, ಸಿಂಗರ್, ಪೊಲೀಸ್.... ಹೀಗೆ ತನ್ನಾಸೆಯನ್ನೆಲ್ಲ ಹೇಳುತ್ತದೆ ಅಲ್ಲವೇ.? ಹುಟ್ಟುವಾಗಲೇ ಆಸೆಯ ಮೂಟೆಯನ್ನೇ ಹೊತ್ತುಕೊಂಡು ಬಂದಿರುತ್ತಾನೆ ಮನುಜ, ಒಬ್ಬೊಬ್ಬರಿಗೆ ಒಂದೊಂದು ತೆರೆನಾದ ಆಸೆ ಕನಸುಗಳು..! ಈ ಆಸೆ ಕನಸುಗಳು ಈಡೇರಿದಾಗ ಸಿಗುವ ಒಂದು ಆಹ್ಲಾದಕರ ಭಾವವೇ ಸುಖ.   ಆಸೆ ಮತ್ತು ಸುಖ ಈ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಬಹುದು.

         ತತ್ವಶಾಸ್ತ್ರದಲ್ಲಿ, ಸುಖ ಕೇವಲ ಒಂದು ಭಾವನೆಯನ್ನು ಸೂಚಿಸದೆ ಒಳ್ಳೆ ಜೀವನ, ಅಥವಾ ಏಳಿಗೆಯನ್ನು ಸೂಚಿಸುತ್ತದೆ.

          ಆಸೆಯೇ ಇಲ್ಲದವನು ಈಶನಾಗುತ್ತಾನೆ ಎಂದು ತಿಳಿಸುತ್ತದೆ ತತ್ವಜ್ಞಾನ. ಹೆಣ್ಣು ಹೊನ್ನು ಮಣ್ಣುಗಳ ಆಸೆ ಬಿಟ್ಟವರು ಸಾಧುಸಂತರಾಗುತ್ತಾರೆ. ಆಸೆ ಪಡುವುದಕ್ಕಿಂತ ಮುಂಚೆಯೇ ಬಯಕೆ ಕಣ್ಮುಂದೆ ಇದ್ದರೆ ಅವರು ಪುಣ್ಯವಂತರು. ಬಯಸಿದ್ದು ಅನಾಯಾಸವಾಗಿ ಸಿಕ್ಕರೆ ಅವರು ಭಾಗ್ಯವಂತರು,  ಆಸೆ ಬಯಕೆಯ ಬೆಂಬತ್ತಿ  ಕಷ್ಟನಷ್ಟಗಳಿಗೆ ಸಿಲುಕಿದವರು ಭಾಗ್ಯಹೀನರು. ಆನಂತರವೂ ಬೆನ್ನಟ್ಟಿ ಪಡೆದೇ ತೀರಬೇಕೆಂಬ ಜಿದ್ದಿಗೆ ಬಿದ್ದು ಎಡರುತೊಡರಲ್ಲಿ ಸಿಲುಕಿ ತಪ್ಪೆಸಗಿದವರನ್ನು ನಾವು ಪೊಲೀಸ್ ಠಾಣೆಯಲ್ಲಿ ಹಾಗೂ ಜೈಲಿನಲ್ಲಿ ಕಾಣಬಹುದು. ಸಿರಿವಂತರ ಮನೆಯಲ್ಲಿ ಜನಿಸಿದವರೂ ಹೆಚ್ಚಿನ ಸುಖಿಗಳು ಅಂತಲ್ಲ, ಹಾಗೆಯೇ ಬಡತನದಲ್ಲಿ ಜನಿಸಿದವರೆಲ್ಲ ಕಷ್ಟಪಡಬೇಕಂತೆನೂ ಇಲ್ಲ. ಸುಖ ಎಂಬುದು ಯಾರ ಸ್ವತ್ತೂ ಅಲ್ಲ,  ಇವೆಲ್ಲಾ ಅವರವರು  ತಮ್ಮ ಪೂರ್ವ ಜನ್ಮದಲ್ಲಿ ಮಾಡಿದ ಪಾಪಪುಣ್ಯಗಳ ಮೊತ್ತದ ಆಧಾರದ ಮೇಲೆ ಆ ದೇವರು ನಿರ್ಧರಿಸುತ್ತಾರೆ ಎಂದು ಭಗವದ್ಗೀತೆ ತಿಳಿಸುತ್ತದೆ. ಹಾಗೆಯೇ ಪೂರ್ವ ಜನ್ಮದಲ್ಲಿನ ಪಾಪ ಪುಣ್ಯಗಳು ಜನ್ಮಕುಂಡಲಿಯ ರೂಪದಲ್ಲಿ ಆಯಾ ವ್ಯಕ್ತಿಗೆ ಕನ್ನಡಿಯಂತೆ ಗೋಚರಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ ಸುಖ ಎಂಬುದು ಹೇಗೆ ಸಿಗುತ್ತದೆ ಎಂಬುದನ್ನು ನೋಡೋಣ ಬನ್ನಿ.

          ಜನ್ಮಜಾತಕದಲ್ಲಿ ಲಗ್ನದಿಂದ ಚತುರ್ಥ ಸ್ಥಾನವು ಸುಖದ ಸ್ಥಾನ.  ಈ ಸ್ಥಾನದಲ್ಲಿ ಶುಭಗ್ರಹರಿದ್ದು, ಯಾವುದೇ ಅಶುಭಗ್ರಹಗಳ ಸಂಬಂಧ ಇಲ್ಲದಿದ್ದರೆ ಜಾತಕರು ಬಹುತೇಕ ಸುಖದ ಜೀವನ ನಡೆಸುತ್ತಾರೆ.  ನಾಲ್ಕನೇ ಸ್ಥಾನದಲ್ಲಿರುವ ಶುಭಗ್ರಹವು ಉಚ್ಚಸ್ಥಾನ ಅಥವಾ ಸ್ವಕ್ಷೇತ್ರ ಸ್ಥಿತನಾಗಿ ಶುಭಗ್ರಹಗಳ ಯುತಿ ಅಥವಾ ಸಂಬಂಧವಿದ್ದರೆ, ಜೊತೆಗೆ ಲಗ್ನಅಧಿಪತಿ ಕೂಡ ಬಲವಾಗಿದ್ದರೆ, ಅಂತಹ ಜಾತಕರು ಅಧಿಕ ಸುಖವಂತರಾಗಿರುತ್ತಾರೆ.
ಚತುರ್ಥ ಸ್ಥಾನದಲ್ಲಿ ಅಶುಭಗ್ರಹರು ಸ್ಥಿತರಿದ್ದು, ಲಗ್ನಅಧಿಪತಿಯೂ ದುರ್ಬಲನಾಗಿದ್ದರೆ  ಬಹುತೇಕ ಕಷ್ಟದ ಜೀವನ ಎದುರಿಸಬೇಕಾಗುತ್ತೆ. 4 ರಲ್ಲಿ ಅಶುಭಗ್ರಹರಿದ್ದು ಅದು ಆ ಗ್ರಹದ ಶತ್ರು, ನೀಚಕ್ಷೇತ್ರವೇನಾದರೂ ಆಗಿದ್ದು , ಜೊತೆಗೆ ಅಶುಭಗ್ರಹಗಳ ಯುತಿ, ಸಂಬಂಧವೇರ್ಪಟ್ಟರೆ, ಲಗ್ನಅಧಿಪತಿಯೂ ದುರ್ಬಲನಾಗಿದ್ದರೆ  ಅಂತಹ ಜಾತಕರು ಅತ್ಯಂತ ಕಷ್ಟ ಜೀವನವನ್ನು ನಡೆಸಬೇಕಾಗುತ್ತದೆ.

       ಗುರು, ಶುಕ್ರ, ಬುಧ, ವೃದ್ಧಿ ಚಂದ್ರರು ಶುಭಗ್ರಹಗಳೆಂತಲೂ... ರವಿ, ಕುಜ, ಶನಿ, ರಾಹು ಕೇತುಗಳು ಅಶುಭ ಗ್ರಹರೆಂತಲೂ.. ಬುಧ ಗ್ರಹ ಯಾರ ಜೊತೆಗೆ ಇರುತ್ತಾನೋ ಅವರಂತೆ ನಡೆದುಕೊಳ್ಳುತ್ತಾನೆಂತಲೂ... ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಗ್ರಹಗಳು ಜನ್ಮಕುಂಡಲಿಯಲ್ಲಿ  ಸುಖಸ್ಥಾನದಲ್ಲಿದ್ದಾಗ , ಯಾವರೀತಿಯಲ್ಲಿ, ಹೇಗೆ ಸುಖ ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ.

ಸೂರ್ಯ :-- ಸೂರ್ಯನು ಬಲಿಷ್ಠನಾಗಿ ಚತುರ್ಥದಲ್ಲಿದ್ದು, ಶುಭ ಸಂಬಂಧ ಹೊಂದಿದ್ದು ಲಗ್ನಾಧಿಪತಿಯೂ ಸಹ ಬಲಿಷ್ಠನಾಗಿದ್ದರೆ ಅಂತಹ ಜಾತಕರು ತಂದೆಯಿಂದ, ತಂದೆಯ ಕಡೆಯವರಿಂದ, ಪಿತ್ರಾರ್ಜಿತ ಆಸ್ತಿಯಿಂದ, ಸರ್ಕಾರದಿಂದ, ಸರ್ಕಾರಿ ಅಧಿಕಾರಿಗಳಿಂದ, ರಾಜಕಾರಣಿಗಳಿಂದ , ಸಂಘಸಂಸ್ಥೆಗಳಿಂದ, ನಾಯಕತ್ವದಿಂದ, ಸಮಾಜದಿಂದ, ಸಹಾಯ ದೊರೆತು ಸುಖ ಪಡೆಯುತ್ತಾರೆ.
         ಕೆಂಪು ವರ್ಣದ ವಸ್ತುಗಳು, ಬೆಂಕಿ, ಉಷ್ಣಕ್ಕೆ ಸಂಬಂಧಿಸಿದ ವಸ್ತುಗಳಾದ ಗೋಧಿ, ರವೆ ಮುಂತಾದ ವ್ಯಾಪಾರ ವಹಿವಾಟಿನಿಂದ ಕೂಡ ಅಧಿಕ ಲಾಭಗಳಿಸಿ ಸುಖ ಪಡುತ್ತಾರೆ.

ಚಂದ್ರ:--  ಚಂದ್ರನು ಬಲಾಢ್ಯನಾಗಿ  ಅಶುಭಗ್ರಹಗಳ ಸಂಬಂಧವಿಲ್ಲದೆ,  ಶುಭ ಸಂಬಂಧ ಹೊಂದಿ, ಲಗ್ನಾಧಿಪತಿಯೂ ಸಹ ಬಲಿಷ್ಠ ನಾಗಿದ್ದರೆ, ಅಂಥ ಜಾತಕರು  ತಾಯಿಯಿಂದ, ತಾಯಿಯ ಕಡೆಯವರಿಂದ, ನೀರು, ಇನ್ನಿತರೆ ದ್ರವಪದಾರ್ಥಗಳಿಂದ, ಅಕ್ಕಿ , ಬಿಳಿಯ ಪದಾರ್ಥಗಳು, ಹೋಟೆಲ್, ತಂಪುಪಾನೀಯಗಳ ವ್ಯಾಪಾರ ವಹಿವಾಟಿನಿಂದ, ಮನೋವಿಜ್ಞಾನಕ್ಕೆ ಸಂಬಂಧಪಟ್ಟ ವೃತ್ತಿಯಿಂದ, ಜಿಮ್, ಯೋಗಚಿಕಿತ್ಸೆ,  ಅಲಂಕಾರ ಕ್ಕೆ ಸಂಬಂಧಪಟ್ಟಂತಹ ಕಾರ್ಯಗಳಿಂದ, ಜಲಯಾನಕ್ಕೆ ಸಂಬಂಧಿಸಿದಂತೆ ಅಧಿಕ ಲಾಭ ಪಡೆದು ಸುಖ ಹೊಂದುತ್ತಾರೆ.

 ಕುಜ:--  ಜಾತಕದಲ್ಲಿ ಕುಜನು ಬಲಾಢ್ಯನಾಗಿ ಅಶುಭ ಸಂಪರ್ಕವಿಲ್ಲದೆ, ಶುಭ ಸಂಬಂಧ ಹೊಂದಿ,  ಲಗ್ನಾಧಿಪತಿಯೂ  ಬಲಿಶ್ಟನಾಗಿದ್ದರೆ.. ಭೂಮಿ, ವ್ಯವಸಾಯ, ರಿಯಲ್ ಎಷ್ಟೇಟ್, ಗೃಹನಿರ್ಮಾಣ, ಬೆಂಕಿ, ವಿದ್ಯುತ್, ಪೊಲೀಸ್, ಮಿಲಿಟರಿ, ಸೆಕ್ಯೂರಿಟಿ ಏಜೆನ್ಸಿ, ಸಾಹಸ ಪ್ರವೃತ್ತಿ, ವೈದ್ಯಕೀಯ, ಔಷಧ ವ್ಯಾಪಾರ,  ರಕ್ತಗೆಂಪು ವರ್ಣದ ವಹಿವಾಟು,  ಶಸ್ತ್ರಾಸ್ತ್ರಗಳ ವಹಿವಾಟುಗಳಿಂದ, ಒಡಹುಟ್ಟಿದವರಿಂದ ಸಹಾಯ ದೊರೆತು ಸುಖ ಹೊಂದುತ್ತಾರೆ.

ಬುಧ:--  ಬುಧನು ಬಲಾಢ್ಯನಾಗಿ ಅಶುಭರ ಸಂಬಂಧವಿಲ್ಲದೆ , ಶುಭರ ಸಂಪರ್ಕ ಹೊಂದಿದ್ದು ಲಗ್ನಾಧಿಪತಿಯೂ ಸಹ ಬಲಿಷ್ಠನಾಗಿದ್ದರೆ, ತಮ್ಮ ಬುದ್ಧಿಶಕ್ತಿಯಿಂದ,  ಟ್ಯೂಷನ್, ಲೇಖನ, ಪತ್ರಿಕೆ, ಪುಸ್ತಕ ಪ್ರಕಾಶನ, T.V ವಾರ್ತೆಗಳು, ಗಣಿತ, ಖಗೋಳ ಶಾಸ್ತ್ರ, ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರ, ಗಾಯನ, ಭಾಷಣ, ವ್ಯಾಪಾರದಿಂದ, ಹಸಿರು ವರ್ಣದ ವಸ್ತುಗಳ ವಹಿವಾಟಿನಿಂದ, ಮಿತ್ರರ ಸಹಾಯದಿಂದ ಅಧಿಕ ಸುಖವನ್ನು ಪಡೆಯುತ್ತಾರೆ.

 ಗುರು:-- ಗುರುವು ಭಲಾಢ್ಯನಾಗಿ, ಅಶುಭಗ್ರಹಗಳ ಸಂಪರ್ಕವಿಲ್ಲದೆ, ಶುಭ ಸಂಬಂಧ ಹೊಂದಿದ್ದರೆ, ಲಗ್ನಾಧಿಪತಿಯೂ ಬಲಿಷ್ಠನಾಗಿದ್ದರೆ, ಅಂತಹ ಜಾತಕರು, ಪೌರೋಹಿತ್ಯ, ಬ್ರಾಹ್ಮಣತ್ವ, ಅರ್ಚಕವೃತ್ತಿ, ಸಂಸ್ಕೃತ - ವೇದ- ತತ್ವಜ್ಞಾನ ಪ್ರವಚನಗಳಿಂದ, ಧಾರ್ಮಿಕ ಸಂಸ್ಥೆಗಳಿಂದ, ಗುರುವೃತ್ತಿಯಿಂದ, ಶಿಕ್ಷಣ ಸಂಸ್ಥೆ ನಡೆಸುವುದರಿಂದ, ಚಿನ್ನ, ಕಡಲೆ ವ್ಯಾಪಾರ  ವಹಿವಾಟಿನಿಂದ, ಸಾಧು ಸಂತ.ಗುರುಗಳ ಸಹಾಯ ದೊರೆತು ಅಧಿಕ ಸುಖ ಹೊಂದುತ್ತಾರೆ.

ಶುಕ್ರ:--   ಶುಕ್ರನು ಬಲಿಶ್ಟನಾಗಿ,  ಅಶುಭಗ್ರಹಗಳ ವೀಕ್ಷಣೆ ಇಲ್ಲದೆ, ಶುಭ ಗ್ರಹಗಳ ಸಂಪರ್ಕದಲ್ಲಿದ್ದು, ಲಗ್ನಾಧಿಪತಿಯೂ  ಬಲಾಢ್ಯನಾಗಿ ಇದ್ದರೆ, ಅಂತಹ ಜಾತಕರು ಲಲಿತಕಲೆಗಳಲ್ಲಿ ( ಸಂಗೀತ, ಗಾಯನ, ನೃತ್ಯ,  ಶಿಲ್ಪಕಲೆ,  ಚಿತ್ರಕಲೆ, ಕಥೆ ಕಾವ್ಯ ರಚನೆ, ಸಿನಿಮಾ , ನಾಟಕ ದಿಂದ.ಸಂಗಾತಿಯಿಂದ ಹಣಕಾಸು ಲಾಭ, ಭೋಗದ ವಸ್ತುಗಳ ವಹಿವಾಟಿನಿಂದ   ಶೃಂಗಾರ - ದೇಹಪುಷ್ಠಿಗೆ ಸಂಬಂಧಿಸಿದ ವ್ಯಾಪಾರ ವಹಿವಾಟಿನಿಂದ, ವಿವಾಹ - ಕಲ್ಯಾಣ ಮಂಟಪದಿಂದ ಲಾಭ ಪಡೆದು ಅಧಿಕ ಸುಖ ಪಡೆಯುತ್ತಾರೆ.

ಶನಿದೇವ:--    ಬಲಿಷ್ಠನಾದ ಶನಿಯು ಅಶುಭ ಗ್ರಹಗಳ ಸಂಪರ್ಕ ಪಡೆಯದೆ  ಶುಭ ಸಂಬಂಧ ಹೊಂದಿದ್ದರೆ, ಲಗ್ನಾಧಿಪತಿಯೂ ಬಲಿಷ್ಠನಾಗಿದ್ದರೆ, ಅಂತಹ ಜಾತಕರು, ಕಬ್ಬಿಣದ ವಸ್ತುಗಳು, ಫ್ಯಾಕ್ಟರಿ, ಮೆಷಿನರಿ, ಎಣ್ಣೆ,  ಸೇವಕವರ್ಗ, ಕೆಳದರ್ಜೆ ( ಕಸ - ಚರಂಡಿ) ಮಂಡಲಿಗಳಿಂದ, ಕಪ್ಪು ನೀಲಿ ವಸ್ತುಗಳ ವ್ಯಾಪಾರ ವಹಿವಾಟುಗಳಿಂದ, ಪಾದರಕ್ಷೆ ತಯಾರಿಕೆ, ಮಾರಾಟಗಳ ಲಾಭದಿಂದ ಸುಖ ಪಡೆಯುತ್ತಾರೆ.

ರಾಹು:-- ಶುಭ ಸಂಪರ್ಕ ಹೊಂದಿರುವ, ಅಶುಭ ಸಂಬಂಧವಿಲ್ಲದ ಬಲಾಢ್ಯ ರಾಹು ಹಾಗೂ ಬಲಿಸ್ಟ ಲಗ್ನಾಧಿಪತಿ ಹೊಂದಿರುವ ಜಾತಕರು, ವಿದೇಶಕ್ಕೆ ಸಂಬಂಧಿಸಿದಂತೆ ವಹಿವಾಟು, ಪ್ಲಾನಿಂಗ್ ಕಮೀಷನ್ ಕಾರ್ಯ, ಸಿನೆಮಾ, TV  ಫೋಟೋಗ್ರಫಿ, ಆನಿಮೇಶನ್, ಗ್ರಾಫಿಕ್ಸ್, ಏರೊನಾಟಿಕ್ಸ್, ಖಗೋಳಶಾಸ್ತ್ರ, ಜ್ಯೋತಿಷ್ಯ, ಹಾಗೂ ಉದ್ದು ಧಾನ್ಯಕ್ಕೆ ಸಂಬಂಧಿಸಿದ ವ್ಯಾಪಾರದಿಂದ ಲಾಭಗಳಿಸಿ ಸುಖ ಪಡೆಯುತ್ತಾರೆ.

ಕೇತು:--  ಬಲಾಢ್ಯನಾದ ಕೇತುವಿಗೆ  ಅಶುಭರ ಸಂಪರ್ಕವಿಲ್ಲದೆ, ಶುಭ ದೃಷ್ಟಿಯಿದ್ದು, ಜನ್ಮ ಲಗ್ನಾಧೀಶ ಬಲಿಷ್ಠನಾಗಿದ್ದರೆ, ಮಾಟ ಮಂತ, ಮ್ಯಾಜಿಕ್, ಕಂಪ್ಯೂಟರ್, ಮದ್ಯ, ತಂಬಾಕು, ಕ್ರಿಮಿನಾಶಕ ಗಳ ವ್ಯಾಪಾರ ವಹಿವಾಟಿನಿಂದ ಹುರುಳಿ ಧಾನ್ಯದ ವ್ಯಾಪಾರದಿಂದ ಸುಖ ಗಳಿಸುತ್ತಾರೆ.

           ಪೂರ್ವಾರ್ಜಿತ ಕರ್ಮಫಲದಿಂದ ಸುಖಸ್ಥಾನ ಬಲಹೀನವಾಗಿದ್ದು,  ಅಶುಭಫಲಗಳೇ ಹೆಚ್ಚಾಗಿ  ಜೀವನ ಕಷ್ಟ ಎನಿಸಿದಾಗ, ಶುಭಫಲಕ್ಕಾಗಿ ಜನ್ಮಕುಂಡಲಿಯ 5 ನೇ ಮನೆಗೆ ಸಂಬಂಧಿಸಿದ ದೇವರನ್ನು ಆರಾಧನೆ ಮಾಡಬೇಕು.

            ಡಾ: B. N. ಶೈಲಜಾ ರಮೇಶ್

Thursday, 22 September 2022

ವಿವಾಹಯೋಗ

ವಿವಾಹಯೋಗ
**************

         ಮಾನವ ಜೀವನದ  ಶೋಡಶ   ಸಂಸ್ಕಾರಗಳಲ್ಲಿ ಅತೀ ಮುಖ್ಯವಾದದ್ದು ವಿವಾಹ.  ಸಂಘಜೀವಿಯಾದ ಮಾನವ ಸಂಗಾತಿಯೊಡನೆ ಜೀವಿಸಿದಾಗಲೇ ವಂಶಾಭಿವೃದ್ಧಿ, ಆ ವಂಶದಿಂದ ಸುಖ ಸಂತೋಷ, ಮುಖ್ಯವಾಗಿ  ಪಿತೃಋಣವನ್ನು ತೀರಿಸುವಲ್ಲಿ ಸಹಕಾರಿ. ಅಪುತ್ರಂ ಗತಿರ್ನಾಸ್ತಿ ಎನ್ನುವಂತೆ ಸದ್ಗತಿಯನ್ನು ನೀಡುವಲ್ಲಿ  ಸಹಕಾರಿಯಾದ ಸತ್ಸಂತಾನವನ್ನು ಪಡೆಯಲು ಧರ್ಮಮಾರ್ಗವಾದ ಈ ವಿವಾಹ ಯೋಗಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳು ಹೇಗಿರಬೇಕೆಂದು ನೋಡೋಣ ಬನ್ನಿ. 
         ವಿವಾಹವು ವರವೋ, ಶಾಪವೋ, ಉತ್ತಮ ಸಂಗಾತಿಯೊ ಅಥವಾ ಪೀಡಿಸುವವರೊ, ಶೀಘ್ರವಿವಾಹವೋ, ಅಥವಾ ತಡವಿವಾಹವೋ.. ಎಲ್ಲಕ್ಕೂ ಕಾರಣ ಜಾತಕದ ಗ್ರಹಸ್ಥಿತಿ.
          ಜಾತಕದಲ್ಲಿ  ಲಗ್ನ,  ಚಂದ್ರ,  ಕಲತ್ರಕಾರಕನಾದ  ಶುಕ್ರ ಪ್ರಬಲವಾಗಿದ್ದರೆ ಉತ್ತಮ ವಿವಾಹಯೋಗ.

         ವಿವಾಹಯೋಗಕ್ಕೆ  ಪ್ರಮುಖವಾಗಿ ವಿವಾಹ ಸ್ಥಾನಗಳಾದ 1, 2, 4, 7, 8, 12  ಭಾವಗಳನ್ನು  ಲಗ್ನ, ಚಂದ್ರ ಹಾಗೂ ಶುಕ್ರರಿಂದ ನಿರ್ಣಯ ಮಾಡಬೇಕು.

1. ಲಗ್ನಭಾವ  -  ಜಾತಕನ ಗುಣ, ಆತನ ಸುಖವನ್ನು ಸೂಚಿಸುತ್ತದೆ.

2.  ಕುಟುಂಬ ಭಾವ - ಜಾತಕನ  ಕುಟುಂಬ ಸೌಖ್ಯವನ್ನು ಸೂಚಿಸುತ್ತದೆ.

4.   ಸುಖಭಾವ -  ವೈವಾಹಿಕ ಸುಖವನ್ನು ಸೂಚಿಸುತ್ತದೆ.

7.   ಕಳತ್ರಭಾವ  -  ಸಂಗಾತಿಯ ಗುಣ,  ಅವರಿಂದ ಸಿಗುವ ಸುಖ ದುಃಖಗಳನ್ನು ಸೂಚಿಸುತ್ತದೆ.

8.   ಮಾಂಗಲ್ಯ ಭಾವ  -  ಸಂಗಾತಿಯ ಆಯುಷ್ಯವನ್ನು ಸೂಚಿಸುತ್ತದೆ.

12.  ಪತಿ - ಪತ್ನಿಯರಲ್ಲಿ ಪರಸ್ಪರ ಪ್ರೀತಿ, ಶಯನಸುಖವನ್ನು  ಸೂಚಿಸುತ್ತದೆ.

         ಈ ಎಲ್ಲಾ ಭಾವಗಳಲ್ಲಿ ಶುಭಗ್ರಹರು ಸ್ಥಿತರಾದಾಗ ಉತ್ತಮ ವೈವಾಹಿಕ ಜೀವನ. ಅಶುಭ, ಪೀಡಿತ, ಅಸ್ತ, ನೀಚ ಗ್ರಹಗಳೇನಾದರೂ ಸ್ಥಿತವಾಗಿದ್ರೆ, ಆಯಾ ಗ್ರಹಗಳ ಪ್ರಭಾವಕ್ಕನುಗುಣವಾಗಿ ಜೀವನದಲ್ಲಿ ಏರುಪೇರುಗಳು ಇರುತ್ತದೆ.

          ವಿವಾಹ ಜೀವನಕ್ಕೆ ಶುಭಗ್ರಹರು  - ಚಂದ್ರ, ಶುಕ್ರ,  ಗುರು.
          ವಿವಾಹ ಜೀವನಕ್ಕೆ ಅಶುಭರು ರವಿ, ರಾಹು, ಶನಿ.
           ಸಂದರ್ಭಕ್ಕೆ ತಕ್ಕಂತೆ ವರ್ತಿಸುವವರು  ಕುಜ, ಕೇತು ಬುಧ (  ಶುಭಗ್ರಹರ ಸಂಪರ್ಕ ವಿದ್ದರೆ ಶುಭ,  ಅಶುಭರ ಸಂಪರ್ಕ ವಾದರೆ ಅಶುಭ )

           ವಿವಾಹವಾಗಲು  ಕುಟುಂಬ,.ಸಪ್ತಮ, ಮತ್ತು ಲಾಭ ಸ್ಥಾನ ಹಾಗೂ ಆ ಸ್ಥಾನಾಧಿಪತಿಗಳು ಅತ್ಯಂತ ಮುಖ್ಯವಾಗುತ್ತೆ, ಹಾಗೂ ವಿವಾಹ ಕಾರಕನ ಸ್ಥಿತಿಯೂ ಸಹ ಉತ್ತಮವಿರಬೇಕು.

           ಯಾವುದೇ ಜಾತಕದಲ್ಲಿ 2, 7, 11 ನೇ ಭಾವಾಧಿಪತಿಗಳು ಬಲಿಷ್ಠರಾಗಿ ವಿವಾಹ ಸೂಚಕ ಗ್ರಹರಾದ ಶುಕ್ರ, ಗುರು, ಚಂದ್ರರು  ಬಲಿಷ್ಠರಾಗಿದ್ದರೆ ಉತ್ತಮ ವಿವಾಹ ಯೋಗ.

          ಜಾತಕದಲ್ಲಿ ಸಪ್ತಮಾಧಿಪತಿ ಬಲಯುತನಾಗಿ  ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರ ದಲ್ಲಿದ್ದರೆ ವಿವಾಹಯೋಗ ಹಾಗೂ ಉತ್ತಮ ಸಂಗಾತಿ.

          ಸಪ್ತಮಾಧಿಪತಿ ಯು ಬಲಯುತನಾಗಿ ಶುಭಗ್ರಹರ ದೃಷ್ಟಿಯಲ್ಲಿದ್ದರೆ ಶುಭ ವಿವಾಹ ಯೋಹ.

          ಕಲತ್ರಕಾರಕನಾದ ಶುಕ್ರನು ಶುಭ ಗುರು ದೃಷ್ಟಿಯಲ್ಲಿದ್ದರೆ ಉತ್ತಮ ಸಂಗಾತಿಯೊಡನೆ ಶುಭವಿವಾಹ ಯೋಗ.

          ಪುರುಷರ ಜಾತಕದಲ್ಲಿ. ಚಂದ್ರ 2 ಅಥವಾ 4 ನೇ ಸ್ಥಾನದಲ್ಲಿದ್ದಾರೆ  ತಡ (ಆಲಸ್ಯ )ವಿವಾಹಯೋಗ

          ಸ್ತ್ರೀಯರ ಜಾತಕನಿಗೆ ರವಿಯು 2 ಅಥವಾ 4 ರಲ್ಲಿದ್ದರೆ ಆಲಸ್ಯ ವಿವಾಹಯೋಗ.

          ಮೇಷ, ಸಿಂಹ, ಕನ್ಯಾ, ಧನಸ್ಸು, ಮಕರ ಲಗ್ನದಲ್ಲಿ ಶುಕ್ರನಿದ್ದರೆ ( ಸ್ತ್ರೀ ಪುರುಷರ ಜಾತಕಗಳೆರಡರಲ್ಲೂ ) ಆಲಸ್ಯ ವಿವಾಹಯೋಗ.

       Dr : ಶೈಲಜಾ ರಮೇಶ್

Friday, 12 August 2022

ಶನಿಗ್ರಹದ ಹನ್ನೆರಡು ಭಾವಫಲಗಳು

         ಓಂ ಶ್ರೀ ಗುರುಭ್ಯೋನಮಃ
   ಓಂ ಶ್ರೀ ಮಹಾಗಣಪತಯೇ ನಮಃ
           

ಜ್ಯೋತಿಷ್ಯದ ಪ್ರಕಾರ ಶನಿ ಗ್ರಹದ ಮಹತ್ವ. ಹಾಗೂ ಹನ್ನೆರಡು ಭಾವಗಳಲ್ಲಿ ಶನಿ ಸ್ಥಿತ ಫಲ ಹಾಗೂ ಪರಿಹಾರಗಳು

        ನೀಲಾಂಜನ ಸಮಾಭಾಸಮ್
        ರವಿಪುತ್ರಂ ಯಮಾಗ್ರಜಮ್
        ಛಾಯಾ ಮಾರ್ತಾಂಡ ಸಂಭೂತಮ್
        ತಂ ನಮಾಮಿ ಶನೈಶ್ಚರಮ್

        ವಿಭವ   ಸಂವತ್ಸರದ  ಮಾಘಮಾಸ  ಕೃಷ್ಣಪಕ್ಷದ  ಚತುರ್ದಶಿಯಲ್ಲಿ. (  ಕೆಲವರ ಪ್ರಕಾರ ವೈಶಾಖ ಕೃಷ್ಣ  ಚತುರ್ದಶಿ ) ರವಿ ಛಾಯಾದೇವಿಯರ ಮಗನಾಗಿ ಜನ್ಮ ತಾಳುತ್ತಾನೆ. ಈತನ   ಜನ್ಮ ನಕ್ಷತ್ರ  --  ಧನಿಷ್ಠ,   ಗೋತ್ರ  --  ಕಾಶ್ಯಪ,  ಶರೀರ --  ಗಾಢ  ನೀಲವರ್ಣ, ಈತನ ಹಸ್ತಸಂಖ್ಯೆ  -- 8 , ಗ್ರಹಮಂಡಲದಲ್ಲಿ ಪಶ್ಚಿಮ  ಸ್ಥಾನ,  ಧಾನ್ಯ  --  ತಿಲ ( ಕರಿ ಎಳ್ಳು ) ,  ವಸ್ತ್ರ  --  ನೀಲ ( ಕಪ್ಪು ),  ರತ್ನ. --  ನೀಲಮಣಿ,  ,   ನೀಲರಥ, ಧನುರಾಕಾರ ಮಂಡಲ,  ಪತ್ನಿಯರು  -- ಜೇಷ್ಠ  ಮತ್ತು  ನೀಲದೇವಿ,  ವಾಹನ  --ನೀಲ ಗೃದ್ರ, ಅಧಿದೇವತೆ  --  ಯಮ,  ಅಭಿಮಾನದೇವತೆ  --  ತ್ರಿಮೂರ್ತಿಗಳು,  ಶನೈಶ್ಚರ  ಹೆಸರೇ ಹೇಳುವಂತೆ ನಿಧಾನ ಗತಿಯ ಚಲನೆ, ಚಾಲನೆ ನಿಧಾನವಾದ್ದರಿಂದ ಶನಿಯನ್ನು ಕುಂಟ ಅಂತಲೂ ಹೇಳ್ತಾರೆ.  ಕರ್ಮಕಾರಕ,  ದುಃಖಕಾರಕ,  ಆಯುಷ್ಯಕಾರಕ,  ನಾಶಕಾರಕ,  ಮೃತ್ಯ ಕಾರಕ,  ಸೇವಕನು , ಪಾಪಗ್ರಹ,  ಮಂದಗ್ರಹ,  ಪಕ್ಷಿಗ್ರಹ,  ನಪುಂಸಕಗ್ರಹ,  ,  ಶಿಶಿರಋತುವಿಗೆ  ಅಧಿಪತಿ, ಸ್ನಾಯು ಮಾಂಸಖಂಡಗಳಿಗೆ  ಅಧಿಪತಿ,  ವಾಸ  --  ಪರ್ವತ  ಗುಡ್ಡ ಪ್ರದೇಶ,  ಕಸದರಾಶಿ,  ಹರಿದಬಟ್ಟೆ,  ಧಾತು --  ಕಬ್ಬಿಣ,   ಎತ್ತರವಾದ  ತೆಳುದೇಹ ,  ವೃದ್ದನು,   ವಾಯು ಮತ್ತು  ಭೂತತ್ವದ  ಗ್ರಹನು,   ಶ್ರಮದಿಂದ  ಸಂಪಾದನೆ,  ಧರ್ಮಶಾಸ್ತ್ರದಲ್ಲಿ  ಆಸಕ್ತಿ,  ಶತ್ರುಭಯ, ಪ್ರಾರಬ್ಧಕರ್ಮದ  ಪ್ರಕಾರ  ಫಲಕೊಡುತ್ತಾನೆ,  ಎಲ್ಲಾಕೆಲಸದಲ್ಲೂ  ನಿಧಾನ ಪ್ರಗತಿ, ವಿಪರೀತವಾದ  ಖರ್ಚು,  ತಮೋಗುಣವುಳ್ಳ ಗ್ರಹ,  ಶೂದ್ರಜಾತಿ,  
ರುಚಿ  --  ಎಣ್ಣೆಯಲ್ಲಿ  ಕರಿದ ಪದಾರ್ಥಗಳು  ಇಷ್ಟ,  ಒಗರು ಪದಾರ್ಥಗಳು, "ದುಃಖೋಮಾರ್ಥಾ0ಡಾತ್ಮಜಹ" ಎನ್ನುವಂತೆ ತಾನು ದುಃಖವನ್ನು ಅನುಭವಿಸಿ ಪ್ರಪಂಚಕ್ಕೆ ಸುಖವನ್ನುಂಟುಮಾಡುವ  ಶ್ರಮಜೀವಿಗಳು,    ಶನಿಯೇ ಆದ್ದರಿಂದ ಜೀವಿತಾಂತ್ಯದಲ್ಲಿ ಬರುವ  ಸುಖ ಸಂಪತ್ತು,  ಭಯ  ದುಃಖ  ಅವಮಾನ,  ಅನಾರೋಗ್ಯ,  ದಾರಿದ್ರ್ಯಕ್ಕೆಲ್ಲಾ ಶನಿಯೇ ಕಾರಕನಾಗುತ್ತಾನೆ.
ವೈದ್ಯ ಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ವಾಹನದ ಬಿಡಿ ಭಾಗಗಳು, ಗಣಿಕೆಲಸ, ಭೂಗರ್ಭಶಾಸ್ತ್ರ,  ಇವೆಲ್ಲವೂ ಶನಿಯ ಕಾರಕತ್ವಕ್ಕೊಳಪಟ್ಟಿದೆ.
         
           ಹಿಂದೂ ಧರ್ಮದಲ್ಲಿ ಗ್ರಹಗಳಿಗೆ ದೇವತೆಗಳ ಸ್ಥಾನವನ್ನು ನೀಡಿ ಗೌರವಿಸಲಾಗಿ ದೆ.   ಶನಿ ಗ್ರಹವು ಕರ್ಮಕಾರಕ ಗ್ರಹವಾಗಿರುವುದರಿಂದ ಲೌಕಿಕ ದೃಷ್ಟಿಯಲ್ಲಿ ಇತರ ಗ್ರಹಗಳ ತುಲನೆಯಲ್ಲಿ ಈ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಶಿವನು ತನ್ನ ದಂಡಾಡಿಕಾರಿಯ ಪದವಿಯನ್ನು ಶನಿದೇವನಿಗೆ ನೀಡಿದ ಕಾರಣ ಶನಿಯು " ಶನೇಶ್ವರ" ನಾದ. ಪುಷ್ಯ, ಅನುರಾಧ, ಉತ್ತರಾಭಾದ್ರ ನಕ್ಷತ್ರಗಳು ಶನಿಯ ನಕ್ಷತ್ರ ಗಳು.  ಶನಿ ಗ್ರಹಕ್ಕೆ ಮಕರ ಮತ್ತು ಕುಂಭ ಇವು ಸ್ವಂತ ರಾಶಿಗಳು. ತುಲಾ ರಾಶಿಯಲ್ಲಿ ಶನಿಯು ಉಚ್ಚ ಸ್ಥಾನದಲ್ಲಿರುತ್ತದೆ.  ಮೇಶರಾಶಿ ಶನಿಯ ನೀಚಸ್ಥಾನವಾಗುತ್ತದೆ.      ‘ಒಂದು ಗ್ರಹವು ಉಚ್ಚ ರಾಶಿಯಲ್ಲಿರುವಾಗ, ಅದು ಯಾವ ವಿಷಯಗಳಿಗೆ ಕಾರಣೀಭೂತವಾಗಿರುತ್ತದೆಯೋ ಮತ್ತು ಜಾತಕದಲ್ಲಿ ಯಾವ ಸ್ಥಾನಗಳ ಸ್ವಾಮಿತ್ವವಿದೆಯೋ, ಆ ವಿಷಯಗಳ ಬಗ್ಗೆ ಶುಭಫಲವನ್ನು ನೀಡುತ್ತದೆ’ ಎಂಬ ನಿಯಮವಿದೆ.  ನಮ್ಮ ಪಾಪಪುಣ್ಯ ಕರ್ಮಗಳಿಗನುಸಾರವಾಗಿ ಶುಭಾಶುಭ ಫಲಗಳನ್ನು ಶನಿದೇವ ಕೊಡುತ್ತಾನೆ.   ಶನಿ ಗ್ರಹವು ವಾಯುತತ್ತ್ವದ್ದಾಗಿದ್ದು ಮಾನವನನ್ನು ಆಸಕ್ತಿಯಿಂದ ವಿರಕ್ತಿಯೆಡೆಗೆ ಕೊಂಡುಯ್ಯುತ್ತದೆ. ಮನುಷ್ಯನನ್ನು, ಜೀವನದಲ್ಲಿ ಬರುವಂತಹ ಮಾನ, ಅಪಮಾನ ಮತ್ತು ಅವಹೇಳನೆಯಿಂದ ಪರಮಾರ್ಥದ ದಿಕ್ಕಿನಲ್ಲಿ ಹೊರಳಿಸುತ್ತದೆ ಈ ಶನಿ ಗ್ರಹ. ಪೂರ್ವಪುಣ್ಯವನ್ನು ತೋರಿಸುವ ಈ ಗ್ರಹವು ಮೋಕ್ಷದ ದಾರಿದೀಪವಾಗಿದೆ.

      ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ಪ್ರತಿಯೊಂದು ಗ್ರಹದ ಶುಭ (ಗುಣ) ಮತ್ತು ಅಶುಭ (ದೋಷ) ಹೀಗೆ ಎರಡು ಮಗ್ಗಲುಗಳಿರುತ್ತವೆ. ಯಾವುದೇ ಗ್ರಹವು ಕೇವಲ ಅಶುಭವೇ ಅಥವಾ ಕೇವಲ ಶುಭವೇ ಇರುತ್ತದೆ ಎಂದಿಲ್ಲ. ಈ ನಿಮಯಕ್ಕನುಸಾರ ಶನಿ ಗ್ರಹಕ್ಕೂ ಎರಡು ಮಗ್ಗಲುಗಳಿವೆ; ಆದರೆ ಶನಿ ಗ್ರಹದ ಬಗ್ಗೆ ಕೇವಲ ಒಂದೇ ಕಡೆಯ ವಿಚಾರ ಮಾಡಲಾಗುತ್ತದೆ; ಆದ್ದರಿಂದ ಜನರ ಮನಸ್ಸಿನಲ್ಲಿ ಶನಿ ಗ್ರಹದ ಬಗ್ಗೆ ಭಯವು ನಿರ್ಮಾಣವಾಗಿದೆ. ಮನುಷ್ಯ  ಜೀವನದ  ಅಸ್ತಿತ್ವ,  ಸಾರ್ಥಕತೆಯನ್ನು  ಗುರ್ತಿಸಿ  ಕೊನೆಗೆ  ಗಟ್ಟಿಯಾದ  ಮನಸ್ಸು, ಶಾಶ್ವತ  ಸಂತೋಷವನ್ನು  ಹೊಂದುವ  ಮಾರ್ಗವನ್ನು  ತೋರಿಸಿಕೊಡುತ್ತಾನೆ ಶನಿದೇವ. ಆಯಸ್ಸು,  ಮರಣ,  ದುಃಖ,  ಪರಸ್ಥಳ,  ನಪುಂಸಕತ್ವ,  ದುರ್ವ್ಯಸನಗಳು ,  ನೀಚವಿದ್ಯೆ,  ನೀಚಜೀವನ, ನೀಚೋಪಾಸನೆ,  ದುರ್ವತನೆ,  ಸೆರೆಮನೆ,  ಅಸತ್ಯ,  ಅಧರ್ಮ,  ದೈನ್ಯಸ್ಥಿತಿ,  ಪಿತೃಶಾಪ  ಇನ್ನೂ ಅನೇಕ ವಿಚಾರದಲ್ಲಿ  ಶನಿಯು  ಅಧಿಕಾರ  ಹೊಂದಿದ್ದು,  ಊಹೆಗೂ   ನಿಲುಕದ  ರೀತಿಯಲ್ಲಿ  ಕಾಡಬಲ್ಲನು, ಮತ್ತು  ಶುಭಪರನಾದರೆ   ವಿಸ್ಮಯಕಾರಿ  ರಾಜಯೋಗವನ್ನು  ಸಹ ನೀಡಬಲ್ಲನು,  ಈತ  ಡಂಬಾಚಾರದ ಪೂಜೆಗಾಗಲೀ,  ಆಡಂಬರದ  ಭಕ್ತಿಗಾಗಲೀ,  ಒಡವೆವಸ್ತ್ರ ಹಣ  ಯಾವುದೇ  ವೇಷ ಭೂಷಣಗಳಿಗಾಗಲೀ  ಕರುಣೆ  ತೋರುವುದಿಲ್ಲ,  ಈತನು  ಸತ್ಯನಿಷ್ಠೆಗೆ , ಶುದ್ಧಮನಸ್ಸಿನ  ಭಕ್ತಿಗೆ, ಪರಿಶುದ್ಧ ಹೃದಯವಂತರಿಗೆ,  ನಿಷ್ಕಪಟತೆಗೆ ,  ಸರಳತೆಗೆ,  ಯಾರಿಗೂ  ದ್ರೋಹಮಾಡದೇ  ಧರ್ಮದ ಹಾದಿಯಲ್ಲಿ  ನಡೆಯುವಂತಹವರ  ಮೇಲೆ  ತನ್ನ  ಶುಭ  ಪ್ರಭಾವವನ್ನು  ಬೀರುತ್ತಾನೆ      

        ಜನರ ಕಷ್ಟಗಳಿಗೆ ಶನಿಯೇ ಕಾರಣ. ಶನಿಯಿಂದ ಬರುವ ತೊಂದರೆಗಳು ಮೊದಲು ತಿಳಿಯುವುದಿಲ್ಲ. ಅದು ತಿಳಿದಾಗ ಅವನು ಎಲ್ಲವನ್ನೂ ಅನುಭವಿಸಿ ಆಗಿರುತ್ತದೆ. ಶನಿಯು ಜಾತಕದಲ್ಲಿ ಪ್ರಬಲನಾದಾಗ ದುಃಖಗಳು ಕಡಿಮೆಯಾಗುತ್ತದೆ. ಶನಿ ನೀಚ, ಮಾರಕ ಸ್ಥಾನ ,ಪಾಪ ಸ್ಥಾನದಲ್ಲಿದ್ದರೆ ಅವನು ಜಾಸ್ತಿ ದುಃಖವನ್ನು ಕೊಡುತ್ತಾನೆ. ಶನಿಯು ತನ್ನ ಸ್ವಂತ ಕ್ಷೇತ್ರ , ಉಚ್ಛ ಕ್ಷೇತ್ರ, ಗುರುವಿನ ಮನೆಯಲ್ಲಿದ್ದಾಗ ದುಃಖಗಳು ಕಡಿಮೆಯಾಗುತ್ತದೆ. ಗೋಚಾರದಲ್ಲಿ ಶನಿ 3-6-11ರಲ್ಲಿದ್ದಾಗ ಸ್ವಲ್ಪ ಶುಭ ಫಲ ಕೊಡುತ್ತಾನೆ. 

       ಶನಿಯು ಜನ್ಮ ರಾಶಿಯಿಂದ 12ನೇ ಸ್ಥಾನ ಜನ್ಮರಾಶಿ ಮತ್ತು ಜನ್ಮರಾಶಿಯಿಂದ ದ್ವಿತೀಯ ಸ್ಥಾನದಲ್ಲಿ ಇದ್ದಾಗ ಅಂತವರಿಗೆ ಏಳರಾಟ ಶನಿ ಎಂದು ಹೇಳುತ್ತಾರೆ.    
          
          ಶನಿ ಗ್ರಹವು ಗರ್ವ, ಅಹಂಕಾರ, ಪೂರ್ವಾಗ್ರಹ ಇವುಗಳನ್ನು ದೂರ ಮಾಡಿ ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸುತ್ತದೆ ಹಾಗೂ ಅಂತರಂಗದಲ್ಲಿನ ಉಚ್ಚ ಗುಣಗಳ ಪರಿಚಯ ಮಾಡಿಸಿಕೊಡುತ್ತದೆ. ಶನಿಯು ಅನುಭವದಿಂದ ಶಿಕ್ಷಣವನ್ನು ನೀಡುವ ಶಿಕ್ಷಕನಾಗಿದ್ದಾನೆ. ಯಾರು ಶಿಸ್ತುಬದ್ಧ, ವಿನಯಶೀಲ ಹಾಗೂ ವಿನಮ್ರರಾಗಿರುತ್ತಾರೋ, ಅವರನ್ನು ಶನಿಯು ಉಚ್ಚ ಪದವಿಗೆ ಕರೆದೊಯ್ಯುತ್ತಾನೆ, ಹಾಗೂ ಯಾರು ಅಹಂಕಾರಿ, ಗರ್ವಿಷ್ಠ ಹಾಗೂ ಸ್ವಾರ್ಥಿಗಳಾಗಿರುತ್ತಾರೆಯೋ, ಅವರಿಗೆ ಶನಿಯು ತೊಂದರೆ ನೀಡುತ್ತಾನೆ. ಇಂತಹ ಕೆಟ್ಟ ಸಮಯದಲ್ಲಿಯೇ ಮನುಷ್ಯನ ಯೋಗ್ಯ ಪರೀಕ್ಷೆಯ ಕಾಲ ಅಂತ ಹೇಳಬಹುದು,  ಈ ಕಾಲದಲ್ಲಿ ವ್ಯಕ್ತಿಗೆ  ತಮ್ಮವರು -ಪರಕೀಯರು ಯಾರೆಂದು ಅರಿವಾಗುತ್ತದೆ. ತಮ್ಮ ಗುಣ-ದೋಷಗಳು ಗಮನಕ್ಕೆ ಬರುತ್ತವೆ. ಗರ್ವಹರಣವಾಗುತ್ತದೆ, ಅಹಂಕಾರ ಸೋರಿ ಹೋಗುತ್ತದೆ. ಮನುಷ್ಯತ್ವದ ಅರಿವಾಗುತ್ತದೆ. ಓರ್ವ ಮನುಷ್ಯನಾಗಿ ಹೇಗೆ ಜೀವಿಸಬೇಕೆಂಬುದರ ಜ್ಞಾನವುಂಟಾಗುತ್ತದೆ.

          ಶನಿಯು ನ್ಯಾಯದ ದೇವತೆಯಾಗಿದ್ದಾನೆ. ಧರ್ಮಮಾರ್ಗದಲ್ಲಿ ನಡೆದವರಿಗೆ ಒಳ್ಳೆಯದನ್ನು ಮತ್ತು ಅಧರ್ಮದಲ್ಲಿ ನಡೆಯುತ್ತಿರುವವರಿಗೆ ಶಿಕ್ಷೆಯನ್ನು ನೀಡುವ ಗ್ರಹ ಶನಿ ಗ್ರಹವಾಗಿದೆ. ಶನಿಗ್ರಹದ ಸಿಟ್ಟಿಗೆ ತುತ್ತಾದವರು ಹೆಚ್ಚಿನ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

       ಜಾತಕದಲ್ಲಿ ಶನಿ ಗ್ರಹವು ಯಾವ ಮನೆಯಲ್ಲಿ ಸ್ಥಿತವಾಗಿದೆ ಎಂಬುದರ ಆಧಾರದ ಮೇಲೆ ವ್ಯಕ್ತಿಯ ಲಾಭ ನಷ್ಟಗಳ ಬಗ್ಗೆ ಲೆಕ್ಕಾಚಾರ ಹಾಕಬಹುದಾಗಿದೆ. ಹೌದು, ಜಾತಕದಲ್ಲಿ  ಗ್ರಹಗಳು ಯಾವ ಮನೆಯಲ್ಲಿ ಸ್ಥಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ಅರಿಯಬಹುದಾಗಿದೆ. ವ್ಯಕ್ತಿಯ ಹಣಕಾಸಿನ  ಸ್ಥಿತಿಯಾಗಿರಬಹುದು, ವಿವಾಹ, ವ್ಯಾಪಾರ ವ್ಯವಹಾರ, ಉದ್ಯೋಗ ಕ್ಷೇತ್ರಗಳು, ಸಂತಾನ ಇತ್ಯಾದಿ ವಿಚಾರಗಳ ಬಗ್ಗೆ ಕೂಲಂಕುಷವಾಗಿ ತಿಳಿಯಬಹುದಾಗಿದೆ. ಹಾಗೆಯೇ ಶನಿ  ಗ್ರಹವು ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹವಾಗಿದೆ. ಹಾಗಾಗಿ ಜಾತಕದಲ್ಲಿ ಶನಿ ಗ್ರಹವು ಯಾವ ಸ್ಥಾನದಲ್ಲಿ ಸ್ಥಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.  ಜಾತಕದ ಕೆಲವು ಸ್ಥಾನದಲ್ಲಿ ಶನಿ ಗ್ರಹವು ಸ್ಥಿತವಾಗಿದ್ದರೆ ವ್ಯಕ್ತಿಗೆ ಲಾಭವಾಗುತ್ತದೆ. ಅದೇ ಇನ್ನು ಬೇರೆ ಸ್ಥಾನದಲ್ಲಿ ಸ್ಥಿತವಾಗಿದ್ದರೆ ವ್ಯಕ್ತಿಯು ಹಲವು ರೀತಿಯಲ್ಲಿ  ಕಷ್ಟ  ನಷ್ಟ ಅನುಭವಿಸಬೇಕಾಗುತ್ತದೆ.  ಒಂದೊಮ್ಮೆ ಶನಿ ಗ್ರಹವು ಹೆಚ್ಚು ನಷ್ಟವಾಗುವ ಸ್ಥಾನದಲ್ಲಿ ಸ್ಥಿತವಾಗಿದ್ದರೆ. ಅದಕ್ಕೆ ತಕ್ಕ ಪರಿಹಾರಗಳನ್ನು ಸಹ ಮಾಡಿಸಿಕೊಳ್ಳಬಹುದಾಗಿದೆ. ಜಾತಕದಲ್ಲಿ ಶನಿಗ್ರಹವು ಯಾವ ಸ್ಥಾನದಲ್ಲಿದ್ದರೆ ಯಾವ ಫಲ ಎಂಬುದನ್ನು ತಿಳಿಯೋಣ...       

      ದ್ವಾದಶ ಭಾವಗಳಲ್ಲಿ ಸ್ಥಿತನಾದ  ಶನಿಯ  ಶುಭಾಶುಭ ಫಲಗಳು :--

          ಪ್ರಥಮ ಭಾವ :--
         ಪ್ರಥಮ ಭಾವವನ್ನು ಲಗ್ನ, ತನುಸ್ಥಾನ(ಭಾವ) ಅಂತಲೂ ಕರೀತೀವಿ. ಈ ಭಾವ ಶನಿದೇವನಿಗೆ ಮೂಲತ್ರಿಕೋನ, ಉಚ್ಚಕ್ಷೇತ್ರ, ಸ್ವಕ್ಷೇತ್ರ ವಾದರೆ ಶಶಯೋಗವಾಗುತ್ತೆ.  ಆಗ ಜಾತಕರು ಆತ್ಮಜ್ಞಾನಿಗಳು, ವೇದಾಂತಿ, ಧಾರ್ಮಿಕ ಮುಂದಾಳು, ಸತ್ಕಾರ್ಯ ನಿರತನು ಕುಲಧರ್ಮದಂತೆ ನಡೆಯುವವರೂ ಆಗುತ್ತಾರೆ.

          ಪ್ರಥಮ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು  ಧೀರ್ಘಆಯು,  ಬಲಶಾಲಿ, ಸತ್ಯನಿಷ್ಠ, ವಿದ್ವಾಂಸ, ನಿರ್ಭೀತ, ನ್ಯಾಯಪ್ರಿಯ, ಧನವಂತ,  ರಾಜನೀತಿಯಲ್ಲಿ  ಪರಿಣಿತ, ಭಾಗ್ಯವೃದ್ಧಿಗಾಗಿ ಪರಿಶ್ರಮ ವಹಿಸುವವ, ಶತ್ರುಗಳನ್ನು  ಜಯಿಸುವವ, ಯಾತ್ರೆಗಳಿಂದ  ಲಾಭ.
         
          ಪ್ರಥಮ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ದರಿದ್ರನು, ಆಲಸಿ,  ದುಃಖಿ, ಅನಾರೋಗ್ಯದಿಂದ  ಪೀಡಿತ, ಕೀಲುಗಳ ನೋವು  , ಮಲಬದ್ಧತೆ,  ದಂತರೋಗ ಹಾಗೂ  ನೇತ್ರ ರೋಗದಿಂದ  ಭಾದಿತ, ಪಿತ್ರಾರ್ಜಿತ ಧನದಿಂದಲೂ  ವಂಚಿತ, ಮಾದಕವಸ್ತುಗಳ ವ್ಯಸನಿ, ಸಾಮಾನ್ಯ ಮಟ್ಟದ  ದಾಂಪತ್ಯ ಹಾಗೂ  ಸಂತಾನದಿಂದ ವ್ಯಸನಿ.

      ಶನಿಗ್ರಹವು ಜಾತಕದ ಪ್ರಥಮ ಸ್ಥಾನದಲ್ಲಿ ಸ್ಥಿತವಾಗಿದ್ದು, ಸಪ್ತಮ ಮತ್ತು ದಶಮ ಸ್ಥಾನದಲ್ಲಿ ಯಾವುದೇ ಗ್ರಹಗಳು ಸ್ಥಿತವಾಗಿಲ್ಲದಿದ್ದರೆ ಅದನ್ನು ಲಾಭದ ಸ್ಥಾನವೆಂದು ಕೂಡ ಕರೆಯಲಾಗುತ್ತೆ. ಅಷ್ಟೇ ಅಲ್ಲದೆ ಈ ಸ್ಥಾನದಲ್ಲಿದ್ದಾಗ ಸಾಲ ವೃದ್ಧಿಯಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಹಾಗಾಗಿ ಜಾತಕದಲ್ಲಿ ಹೀಗಿದ್ದಾಗ ಸಾಲವನ್ನು ಪಡೆಯುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಜೊತಗೆ ವಿವಾದ ಕಲಹಗಳಲ್ಲಿ ತೊಡಗಿಕೊಳ್ಳದಂತೆ ಜಾಗರೂಕರಾಗಿರಬೇಕು.
ಲಗ್ನದಲ್ಲೇ ಶನಿ ಇರುವವರ ಉದ್ಯೋಗ ಜೀವನ ಬಹಳ ಚೆನ್ನಾಗಿರುತ್ತದೆ. ಏಕೆಂದರೆ ಅ ಸ್ಥಾನದಲ್ಲಿ ಇರುವ ಶನಿ ಹತ್ತನೇ ಮನೆ ಅಂದರೆ ವೃತ್ತಿ ಬದುಕಿನ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಶಿಸ್ತು ಹೆಚ್ಚಾಗಿರುತ್ತದೆ. ಶ್ರಮ ಜೀವಿಗಳು ಹಾಗೂ ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ.  ತಮ್ಮ ಅಸಲಿ ವಯಸ್ಸಿಗಿಂತ ಸ್ವಲ್ಪ ಹೆಚ್ಚು ವಯಸ್ಸಾದಂಥ ಭಾವ ಇರುತ್ತದೆ. ಇನ್ನು ಶನಿಯು ಏಳನೇ ಮನೆಯನ್ನೂ ದೃಷ್ಟಿಸುವುದರಿಂದ ಇವರಿಗಿಂತ ವಯಸ್ಸಿನಲ್ಲಿ ಹಿರಿಯರಾದವರು ಪತ್ನಿಯಾಗಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮೂರನೇ ಮನೆಯ ಮೇಲೂ ದೃಷ್ಟಿ ಬೀರುವುದರಿಂದ ಸೋದರ ಸಂಬಂಧ ಚೆನ್ನಾಗಿರುವುದಿಲ್ಲ.

          ದ್ವಿತೀಯ ಭಾವ :--
          
          ದ್ವಿತೀಯ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಭಾಗ್ಯಶಾಲಿ, ಸಿರಿವಂತರು, ಸತ್ಯವಾದಿ,  ಪರೋಪಕಾರಿ, ಗುರುಭಕ್ತ,  ನ್ಯಾಯವಾದಿ, ತಾಯ್ತನ್ಡೆಯರ ಸಂಪೂರ್ಣ ಪ್ರೀತಿ ಪಡೆದವ, ವ್ಯಾಪಾರದಲ್ಲೂ ಉನ್ನತಿ, ಪರಿಶ್ರಮಿ.
          
          ದ್ವಿತೀಯ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು  ಸಂದೇಹ ಪ್ರವೃತ್ತಿಯವ, ಅಪೂರ್ಣ ವಿದ್ಯೆ, ಅಧಿಕ ಪರಿಶ್ರಮ ವಹಿಸಿದರೂ  ಪೂರ್ಣ ಲಾಭ ಸಿಗುವುದಿಲ್ಲ, ಧನಹಾನಿ.

      ಎರಡನೇ ಮನೆಯ ಶನಿ ಯಶಸ್ಸು ದೊರೆಯುವಂತೆ ಮಾಡುತ್ತಾನೆಯಾದರೂ ಕುಟುಂಬದಿಂದ, ಅದರಲ್ಲೂ ತಾಯಿಯಿಂದ ದೂರ ಆಗುವಂತೆ ಮಾಡುತ್ತಾನೆ. ಮೂವತ್ನಾಲ್ಕನೇ ವಯಸ್ಸಿನ ತನಕ ಮನೆ  ಆಸ್ತಿ ಖರೀದಿ ಮಾಡಲು ಕಷ್ಟವಾಗುತ್ತದೆ. ಮನೆಯಲ್ಲಿ ತುಂಬ ಕಠಿಣ ನಿಯಮಗಳನ್ನು ವಿಧಿಸಿ, ವಿಪರೀತ ಶಿಸ್ತಿನಿಂದ ಬೆಳೆಯುವಂತಾಗುತ್ತದೆ. ಇವರ ಬಗ್ಗೆ ತಾಯಿ ತುಂಬ ಕಠಿಣವಾಗಿ ನಡೆದುಕೊಳ್ಳುತ್ತಾರೆ. 
ಶನಿ ದಶೆ ನಡೆಯುವಾಗ  ಹೆಚ್ಚಿನ ಲಾಭ. ಶನಿಗ್ರಹವು ಜಾತಕದ ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಸಂತೋಷದಿಂದ ಕೆಲಸ ನಿರ್ವಹಿಸಬೇಕು. ದುರಾಸೆಗೆ ಬಲಿಯಾದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

          ತೃತೀಯಭಾವ :--
          
          ತೃತೀಯ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧೀರ್ಘಆಯು,  ಧಾರ್ಮಿಕ ಪ್ರವೃತ್ತಿಯವ, ಸತ್ಯವಾದಿ,  ಧನವಂತ,  ಪ್ರಾಮಾಣಿಕ,  ಪರಿಶ್ರಮಿ,  ನ್ಯಾಯಪ್ರಿಯ, ಸಭ್ಯಸ್ಥ,  ಸಜ್ಜನವ್ಯಕ್ತಿ, ವಿದ್ಯಾವಂತ,  ವೈದ್ಯಕೀಯ ಹಾಗೂ  ರಾಜನೀತಿ ಯ  ಕ್ಷೇತ್ರದಲ್ಲಿ ಸಫಲತೆಯನ್ನು  ಪಡೆಯುವವ, ಸಹನಶೀಲ,  ಸಹೋದರರಿಗೆ  ಶುಭ, ಅವರಿಂದ  ಅನೇಕ ಪ್ರಕಾರದ ಸಹಕಾರ  ಪಡೆಯುತ್ತಾನೆ.
          
          ತೃತೀಯ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಭಾಗ್ಯಹೀನ, ಚಾರಿತ್ರ್ಯಹೀನ,  ಜಗಳಗಂಟಿ,  ಅಲ್ಪಾಯು, ರೋಗಿ, ಕುರೂಪಿ,  ಸಹೋದರರಿಗೆ ಅನಿಷ್ಟ,  ಯಾತ್ರೆಗಳಲ್ಲಿ ನಷ್ಟ,  ದುಃಖಿತ.

       ಲಗ್ನದಿಂದ ಮೂರನೇ ಮನೆಯಲ್ಲಿ ಶನಿಯಿದ್ದರೆ ಈ ವ್ಯಕ್ತಿಗಳು ತಮಗೆ ತಾವೇ ಬಾಸ್ ನಂತೆ ಇರುತ್ತಾರೆ. ಕಾದಂಬರಿಕಾರರು, ಆರ್ ಜೆ ಹೀಗೆ ವೃತ್ತಿ ಅಥವಾ ವ್ಯಾಪಾರ ಕೈಗೊಳ್ಳುತ್ತಾರೆ. ಒಂದು ವೇಳೆ ಈ ಸ್ಥಾನದಲ್ಲಿ ಶನಿಯ ಜತೆಗೆ ರವಿ ಗ್ರಹ ಇದ್ದರೆ ತಂದೆಯ ಜತೆಗಿನ ಸಂಬಂಧ ಚೆನ್ನಾಗಿರುವುದಿಲ್ಲ. ಜತೆಗೆ ಸೋದರ-ಸೋದರಿ ಜತೆಗೆ ಸಂಬಂಧವೂ ಚೆನ್ನಾಗಿರುವುದಿಲ್ಲ. ಉನ್ನತ ಶಿಕ್ಷಣಕ್ಕೆ ನಾನಾ ಅಡ್ಡಿಗಳು ಬರುತ್ತವೆ. ಧಾರ್ಮಿಕ- ಆಧ್ಯಾತ್ಮಿಕ ಕಾರ್ಯಗಳಲ್ಲೂ ನಾನಾ ಅಡಚಣೆಗಳು ಬರುತ್ತವೆ ನಕಾರಾತ್ಮಕ ಭಾವನೆಗಳು ಹೆಚ್ಚುತ್ತವೆ. ಇದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ. 

          ಚತುರ್ಥ ಭಾವ  :--

         ಚತುರ್ಥ ಭಾವವೂ ಕೇಂದ್ರಸ್ಥಾನವಾದ್ದರಿಂದ, ಈ ಭಾವವೇನಾದರೂ ಶನಿದೇವನಿಗೆ ಸ್ವಕ್ಷೇತ್ರ, ಉಚ್ಚಕ್ಷೇತ್ರ, ಮೂಲತ್ರಿಕೋನ ಆಗಿದ್ದರೆ ಶಶಯೋಗವಾಗುತ್ತೆ. ಆಹಾ ಜಾತಕರು ಊರಿನ ಮುಖ್ಯಸ್ಥ, ಭೂಮಿಯಿಂದ ಲಾಭ, ಧಾರ್ಮಿಕ ಮನೋಭಾವ ಇರುತ್ತೆ.
          
          ಚತುರ್ಥ  ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಸ್ವಂತ ಮನೆ, ವಾಹನ , ಸೇವಕರುಳ್ಳವನಾಗಿರುತ್ತಾನೆ,  ಭಾಗ್ಯವಂತ,  ಧನವಂತ, ದಾನವಂತ,  ಶನಿಯು 2, 7, 11, ನೇ  ಅಧಿಪತಿಯರೊಂದಿಗೆ  ಶುಭರೂಪದಲ್ಲಿ  ಸ್ಥಿತನಿದ್ದರೆ,  ಪಿತ್ರಾರ್ಜಿತ ಸಂಪತ್ತು  ಪ್ರಾಪ್ತಿಯಾಗುತ್ತೆ,  ವಿದೇಶಯಾತ್ರೆ ಯೋಗವಿದ್ದು ಯಶಸ್ಸು  ದೊರೆಯುತ್ತದೆ,  ಎಲ್ಲರಿಗೂ  ಪ್ರಿಯನಾದವನಾಗಿ  ಎಲ್ಲರಿಂದ  ಸಹಕಾರ  ಪಡೆಯುತ್ತಾನೆ.
          
         ಚತುರ್ಥ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನ   ಶಿಕ್ಷಣ ಅಪೂರ್ಣ,  ಜೀವನ ನಿರ್ವಹಣೆಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ, ಆ ಸಂದರ್ಭದಲ್ಲಿ ಪಿತ್ರಾರ್ಜಿತ ಸ್ಥಾನದಲ್ಲಿ  ವಾಸಮಾಡುವುದು ಒಳ್ಳೆಯದಲ್ಲ . ಅದರಿಂದ  ದುಃಖ,  ಸ್ವಂತ ಮನೆ  ನಿರ್ಮಿಸುವುದರಿಂದ  ತಾಯಿಗೆ  ಅಶುಭ,  ತಾಯಿ  ಧೀರ್ಘತಮ  ಕಾಯಿಲೆಯಿಂದ  ನರಳುತ್ತಾರೆ.

       ಶನಿಗ್ರಹವು ಜಾತಕದ ನಾಲ್ಕನೇ ಮನೆಯಲ್ಲಿ ಸ್ಥಿತವಾಗಿದ್ದರೆ ಹೊಸ  ಮನೆಯನ್ನು ಖರೀದಿಸುವುದು ಒಳಿತಲ್ಲ. ಶನಿಯು ಈ ಸ್ಥಾನದಲ್ಲಿ ಇದ್ದಾಗ ಹೊಸ ಮನೆಯನ್ನು ಖರೀದಿಸಿದರೆ ಅಥವಾ ಜಮೀನು - ಆಸ್ತಿಯನ್ನು ಖರೀದಿಸಿದರೆ ಹೆಚ್ಚು ದಿನ ನಿಲ್ಲುವುದಿಲ್ಲ.
ಲಗ್ನದಿಂದ ನಾಲ್ಕನೇ ಭಾವದ ಶನಿಯು
ಮನೆಯಲ್ಲಿ ಶಿಸ್ತುಬದ್ಧ ವಾತಾವರಣ ನಿರ್ಮಿಸುತ್ತಾನೆ. ತಾಯಿ ಜತೆಗೆ ಬಾಂಧವ್ಯ ದೀರ್ಘ ಕಾಲ ಇರುವುದಿಲ್ಲ. ಅನಾರೋಗ್ಯ ಸಮಸ್ಯೆಗಳು ಬಹಳ . ಜತೆಗೆ ಶತ್ರುಗಳ ವಿರುದ್ಧ ಕೈ ಮೇಲಾಗಿರುತ್ತದೆ. ಒಂದು ವೇಳೆ ಈ ಸ್ಥಾನದಲ್ಲಿ ಶನಿ ನೀಚನಾಗಿದ್ದರೆ ಮೂಳೆ ಹಾಗೂ ಸಂದು ನೋವುಗಳು ಕಾಣಿಸಿಕೊಳ್ಳಬಹುದು. ಇನ್ನು ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ಬೆಳೆಯಲು ಸಹಕಾರಿ ಆಗಿರುತ್ತದೆ.
   
         ಪಂಚಮಭಾವ :--
          
         ಪಂಚಮಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧಾರ್ಮಿಕ,  ನ್ಯಾಯವಾದಿ, ಪರೋಪಕಾರಿ,  ಸಂಯಮಿ,  ಸಭ್ಯ,  ಸನ್ಮಾನಿತ, ಮಾತೇ  ದುರ್ಗೆಯ ಭಕ್ತ,  ಉತ್ತಮ  ಲೇಖಕ,  ಹೊಸ ಹೊಸ  ಆವಿಷ್ಕಾರ ಗಳಲ್ಲಿ  ಆಸಕ್ತಿ,  ಹಿರಿಯರ  ಸಂಗದಲ್ಲಿರಲು  ಆಸೆ, ಅವರ  ಅನುಭವದ ಜ್ಞಾನವನ್ನು  ಪಡೆಯಲು  ಉತ್ಸುಕನಾಗುತ್ತಾನೆ,  ಚಿತ್ರರಂಗ ಹಾಗೂ ಛಾಯಾಚಿತ್ರ ಕ್ಷೇತ್ರದಲ್ಲಿ  ಸಫಲನಾಗುತ್ತಾನೆ.
          
          ಪಂಚಮಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಜೂಜು,  ಸಟ್ಟಾ,  ಲಾಟರಿ,  ಅಭಿನಯ,  ಚಲನಚಿತ್ರರಂಗ,  ಮುಂತಾದ ಕ್ಷೇತ್ರದಲ್ಲಿ  ಹಾನಿಯನ್ನು ಹೊಂದುತ್ತಾನೆ,  ಪ್ರೇಮಪ್ರಕರಣಗಳು ಅಸಫಲವಾಗುತ್ತವೆ  ಅಲ್ಪ ಸಂತಾನ,  ಅನ್ಯ ಸ್ತ್ರೀ ಸಂಗ,  ವಿಶೇಷವಾಗಿ ವಿಧವೆಯರೊಡನೆ ವ್ಯಭಿಚಾರ,  ವಿರೋಧಿ ಗಳಿಂದ  ಹಾನಿ.

       ಜಾತಕದ ಐದನೇ ಮನೆಯಲ್ಲಿ ಶನಿ ಗ್ರಹವು ಸ್ಥಿತವಾಗಿದ್ದಾಗ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗಾಗಿ ಹೊಸ  ಕಾರ್ಯಗಳನ್ನು ಕೈಗೊಳ್ಳದಿರುವುದು ಉತ್ತಮ. 
ಲಗ್ನದಿಂದ ಐದನೇ ಮನೆಯಲ್ಲಿ  ಶನಿಯಿದ್ದರೆ ಕ್ರಿಯಾತ್ಮಕತೆಗೆ ತಡೆ. ತನ್ನ ಮೂರನೇ ದೃಷ್ಟಿಯಿಂದ ಸಪ್ತಮವನ್ನು ದೃಷ್ಟಿಸುವುದರಿಂದ ಮದುವೆ ವಿಳಂಬ.  ಜೊತೆಗೆ ಸಂತಾನ ವಿಚಾರ ತಡ ಆಗುತ್ತದೆ. ಒಂದು ವೇಳೆ ಶನಿಯು ಬುಧ ಅಥವಾ ಶುಕ್ರನ ಜತೆಗೆ ಇದ್ದರೆ ಕ್ರಿಯೇಟಿವಿಟಿ ಹೆಚ್ಚುತ್ತದೆ. ಪ್ರಬುದ್ಧ ಹಾಗೂ ಶಿಸ್ತುಬದ್ಧ ಸಂಗಾತಿ ಸಿಗುತ್ತಾರೆ. ಅನಿರೀಕ್ಷಿತವಾದ ಲಾಭಗಳನ್ನು ಪಡೆಯುತ್ತಾರೆ. ಈ ವ್ಯಕ್ತಿಗಳಿಗೆ ನಾಚಿಕೆ ಸ್ವಭಾವ ಇರುತ್ತದೆ.

          ಷಷ್ಟ ಭಾವ  :--
       ಈ ಭಾವಕ್ಕೆ ಕಾರಕಗ್ರಹ ಶನಿ ಮತ್ತು ಕುಜ.

        ಜಾತಕದ ಆರನೇ ಮನೆಯಲ್ಲಿ ಶನಿ ಗ್ರಹವು ಸ್ಥಿತವಾಗಿದ್ದರೆ ಶುಭ ಸೂಚಕವೆಂದು ಹೇಳಲಾಗುತ್ತದೆ. ಏಕೆಂದರೆ ಈ ಸ್ಥಾನ ಉಪಚಯ ಸ್ಥಾನವಾಗುತ್ತೆ.  ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಜಮೀನು - ಆಸ್ತಿಗಳನ್ನು ಹೊಂದುವ ಸಾಧ್ಯತೆಯೂ ಇರುತ್ತದೆ. ಇದರ ಜೊತೆಗೆ ಯಾವುದೇ ಕೆಟ್ಟ ಕೆಲಸಗಳನ್ನು ಮಾಡದೆ ಮತ್ತು ಮದ್ಯಪಾನ - ಧೂಮಪಾನದಿಂದ ದೂರವಿದ್ದರೆ ಉತ್ತಮ.

          ಷಷ್ಟ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧನವಂತ,  ಕರ್ಮಠ,  ಕಾನೂನಿನಲ್ಲಿ ಪರಿಣಿತ,  ರಾಜಕೀಯದಲ್ಲಿ  ಮುಂದಾಳು,  ಜೀವನದಲ್ಲಿ  ಸಫಲತೆ ಯನ್ನು ಪಡೆಯುವವ, ಸರ್ಕಾರಿ ನೌಕರಿಯಲ್ಲಿ  ಉನ್ನತ ಪದವಿ,  ಯಾತ್ರೆಗಳಲ್ಲಿ ಲಾಭ, ಭೌತಿಕ ಸುಖ ಸಾಧನಗಳು  ಹಾಗೂ ಸಂತಾನ  ಸುಖವನ್ನು ಪಡೆಯುವವನಾಗುತ್ತಾನೆ.        

          ಷಷ್ಟಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು  ಕೋರ್ಟ್ ಕೇಸ್ ಗಳಲ್ಲಿ  ಸೋಲು,  ಧನ ಹಾಗೂ  ಯಶಸ್ಸಿನ  ಹಾನಿ, ನೌಕರಿ ಮಾಡುವುದೂ ಕೂಡ  ಹಾನಿ,   6ನೇ ಭಾವ   ಸರ್ವೀಸ್ ತೋರಿಸುತ್ತೆ, ಕೆಲಸದಲ್ಲಿ ಸ್ಥಿರತೆ ಇರಲ್ಲ.   ಕಾನೂನು ರೀತ್ಯಾ    ಲೀಗಲ್ ಆಗಿ   ಮನೆಯನ್ನು  ನಿರ್ಮಿಸಿದರೆ  ತೊಂದರೆ ಇಲ್ಲ,   ಇಲ್ಲಾಂದ್ರೆ ಕೋರ್ಟ್ ಕೇಸು ಅಂತ ಅಲೀಬೇಕಾಗುತ್ತೆ. ಸೋದರಮಾವ ಹಾಗೂ  ಆತನ ಪತ್ನಿ,  ತಾಯಿ ಹಾಗೂ  ಆಕೆಯ  ಸೋದರಿಗೆ  ಅಶುಭ,(  ತಾಯಿಯ ಸ್ಥಾನವಾದ 4th ನಿಂದ 3rd ತಾಯಿಯ ಸಹೋದರ ಸಹೋದರಿಯರನ್ನು  ಸೂಚಿಸುತ್ತೆ) ಸಂತಾನ ಹಾಗೂ  ಕೌಟುಂಬಿಕ ಜೀವನ  ಸಾಧಾರಣ.

ಶನಿದೇವ ಶುಭನಾಗಿದ್ರೆ..
 ಶತ್ರುಗಳು ನಾಶವಾಗುತ್ತಾರೆ. ವಿರೋಧಿಗಳ ವಿರುದ್ಧ ಕೈ ಮೇಲಾಗುತ್ತದೆ. ಸರಿಯಾದ ಸಮಯಕ್ಕೆ ಉದ್ಯೋಗ- ವೃತ್ತಿ ಬದುಕಿನ ಏಳ್ಗೆ ಆಗುತ್ತದೆ. ದೀರ್ಘಾಯುಷ್ಯ ನೀಡುತ್ತದೆ. ಸಾಲ- ವ್ಯಾಜ್ಯಗಳ ವಿಚಾರವನ್ನು ಇವರು ತುಂಬ ಚೆನ್ನಾಗಿ ನಿರ್ವಹಿಸುತ್ತಾರೆ. ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಇವರು ಉದ್ಯೋಗಿಗಳಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. ಮಾಲೀಕರಾಗುವ, ಅಧಿಕಾರಿಗಳಾಗುವ ಅವಕಾಶ ಕಡಿಮೆ. ಸೋದರ- ಸೋದರಿಯರ ನೆರವು ದೊರೆಯುತ್ತದೆ. ಶನಿ ಹೀನಸ್ಥಿತಿಯಲ್ಲಿದ್ದಲ್ಲಿ  ಮೂಳೆ ಕ್ಯಾನ್ಸರ್, ಕೀಲು, ಪಾರ್ಶ್ವವಾಯು, ಅಜೀರ್ಣ, ನರ, ಮಾಂಸಖಂಡಗಳು, ಹಲ್ಲುನೋವು, ಮುಂತಾದ ರೋಗಗಳು ಕಾಡುತ್ತವೆ.
  
          ಸಪ್ತಮ ಭಾವ  :--
         ಸಪ್ತಮ ಭಾವದಲ್ಲಿ ಶನಿದೇವನಿಗೆ ದಿಗ್ಬಲ.  ಈ ಭಾವ ಕೇಂದ್ರಸ್ಥಾನವೂ ಆದ್ದರಿಂದ, ಶನಿಯು ತನ್ನ ಉಚ್ಚಕ್ಷೇತ್ರ, ಸ್ವಕ್ಷೇತ್ರ, ಮೂಲತ್ರಿಕೋನ ದಲ್ಲಿ ಸ್ಥಿತನಾದರೆ ಮತ್ತೆ ಶಶಯೋಗವಾಗುತ್ತೆ. ಇದರಿಂದ ವಿವಾಹಾತ್ಪರ ಭಾಗ್ಯ, ಉತ್ತಮ ಗುಣದ ಪತ್ನಿ, ಪತ್ನೀ ಪುತ್ರರಿಂದ ಅನುಕೂಲ, ವೃದ್ಧಸ್ತ್ರೀಯರಿಂದ ಧನಲಾಭ.  ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ, ಧರ್ಮಕಾರ್ಯದಲ್ಲಿ ಆಸಕ್ತಿ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಸಾಹಸವಂತರು, ಉನ್ನತ ವಿದ್ಯಾಭ್ಯಾಸ ಮಾಡುವ ಅವಕಾಶ ಇರುತ್ತೆ, ಹಾಗೆಯೇ ವ್ಯವಹಾರ ಬುದ್ಧಿಯೂ ಇರುತ್ತೆ.
          
          ಸಪ್ತಮಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಭಾಗ್ಯಶಾಲಿ,  ಶ್ರೀಮಂತ, ಆದರ್ಶವಾದಿ,  ಸತ್ಯವಾದಿ,  ಒಳ್ಳೆಯ  ರಾಜಕೀಯ  ಮುಖಂಡ,  ನ್ಯಾಯಪ್ರಿಯ,  ಸ್ವಾಭಿಮಾನಿ,  ಸುಖಿ,  ವಿವಾಹ ವಿಳಂಬ,  ಸುಂದರ , ಸುಶೀಲ,  ಸುಸಂಸ್ಕೃತ ಹಾಗೂ ವಿಶೇಷ ಕಾಳಜಿಯುಕ್ತ ಪತ್ನಿ.
          
          ಸಪ್ತಮಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಹಣವನ್ನು. ದುರುಪಯೋಗ ಮಾಡುವವ, ಧೂರ್ತ, ಸಂಗಾತಿಯ ವಿಷಯದಲ್ಲಿ  ಅಪ್ರಾಮಾಣಿಕ,  ದುರ್ಗುಣಗಳಿಂದ  ಕೂಡಿದವ  ಅಲ್ಪ ಸಂತಾನ.
 ಆರ್ಥಿಕ ನಷ್ಟ ಮತ್ತು ಸಾಮಾಜಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಈ ಸಮಯದಲ್ಲಿ ಅನ್ಯ ಮಹಿಳೆಯರ ಬಗ್ಗೆ ಉತ್ತಮ ಭಾವನೆಯನ್ನು ಹೊಂದುವುದು ಮತ್ತು ಹಣದ ಸರಿಯಾದ ಬಳಕೆ ಮಾಡುವುದು ತುಂಬಾ ಅವಶ್ಯವಾಗಿರುತ್ತದೆ. ಲಗ್ನದಿಂದ ಏಳನೇ ಮನೆ ತುಲಾ ರಾಶಿ ಆಗಿದ್ದು, ಅಲ್ಲೇ ಶನಿಯಿದ್ದರೆ ಬಹಳ ಉತ್ತಮ. ಇಲ್ಲದಿದ್ದರೆ ತುಂಬ ಗಂಭೀರ ಸ್ವಭಾವದ ಹಾಗೂ ವಿಪರೀತ ಶಿಸ್ತಿನ ಸಂಗಾತಿ ದೊರೆಯುತ್ತಾರೆ. ಈ ಸಂಬಂಧ ದೀರ್ಘಾವಧಿ ಇರುತ್ತದಾದರೂ ಪ್ರೀತಿ ಹಾಗೂ ಭಾವನೆಗಳಿಗೆ ಅವಕಾಶ ಇರುವುದಿಲ್ಲ.  ಈ ಜನರು ಜನರ ಜತೆ  ಹೆಚ್ಚು ಬೆರೆಯುವುದಿಲ್ಲ. ಮನೆಯಲ್ಲಿ ಕೂಡ ನಿರ್ಬಂಧಗಳು ಇರುತ್ತವೆ.

          ಅಷ್ಟಮಭಾವ  :--

ಅಷ್ಟಮಭಾವ ಕಾರಕ ಶನಿಯೇ ಆಗುತ್ತಾನೆ.
          
          ಅಷ್ಟಮಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧೀರ್ಘಆಯು,  ಸಭ್ಯ, ಧಾರ್ಮಿಕತೆ,  ಭಾಗ್ಯಶಾಲಿ, ಸ್ವಾಭಿಮಾನಿ, ರಾಜನೀತಿಜ್ಞ,  ಶ್ರೇಷ್ಠ ತತ್ವಜ್ಞಾನಿ,  ಗುಣವಂತ, ದಯಾಳು,  ಶನಿಗೆ  ಸಂಬಂಧ ಪಟ್ಟ  ವ್ಯಾಪಾರ ದಿಂದ  ಅತ್ಯಧಿಕ ಲಾಭ,ಸುಖ ದಾಂಪತ್ಯ.
          
          ಅಷ್ಟಮ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು  ಭಾಗ್ಯಹೀನ,  ಧನಹೀನ,  ಚಾರಿತ್ರ್ಯ ಹೀನ, ಮೊಸಗಾರ,  ದುಷ್ಟ, ಎಲ್ಲರಿಂದಲೂ  ಉಪೇಕ್ಷೆಗೊಳಪಟ್ಟವನು,  ವ್ಯಾಪಾರ ದಲ್ಲಿ  ವಿಫಲ,  ಶನಿಯು ಎಷ್ಟು ಗ್ರಹಗಳೊಡನೆ ಸ್ಥಿತನಿರುತ್ತಾನೋ  ಅಷ್ಟು ಸದಸ್ಯರ  ಮರಣ  ಸಂಭವ,  ಇವರ  ವೈವಾಹಿಕ  ಜೀವನ  ದುಃಖಮಯ. ಶನಿ ಗ್ರಹವು  ಎಂಟನೇ ಮನೆಯಲ್ಲಿ ಸ್ಥಿತವಾಗಿ ಕುಜ ಗ್ರಹದ
ಯುತಿಯಾದಾಗ ( ಒಂದೇ ಮನೆಯಲ್ಲಿದ್ದಾಗ ) ಗುಪ್ತ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅವಶ್ಯಕ. ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಹಣವನ್ನು ಖರ್ಚುಮಾಡುವಾಗ ಮಿತಿ ಹಾಕಿಕೊಳ್ಳುವುದು ಉತ್ತಮ. ಎಂಟರ ಶನಿ ಧೀರ್ಘಾಯುಷ್ಯವನ್ನು ನೀಡುವ ಜತೆಗೆ ದುರದೃಷ್ಟವನ್ನೂ ತರುತ್ತಾನೆ. ಈ ಸ್ಥಾನದಲ್ಲಿ ಶನಿ ಇದ್ದರೆ ಭೂಮಿಯ ಒಳ ಭಾಗದಲ್ಲಿನ ಕೆಲಸಗಳು, ಉದಾಹರಣೆಗೆ ಒಳಚರಂಡಿ ಕಾಮಗಾರಿ ಭೂಗರ್ಭಶಾಸ್ತ್ರ, ಗಣಿಗಾರಿಕೆ, ಭಾವಿ, ಕೊಳವೆಭಾವಿ, ಇತ್ಯಾದಿ ಮಾಡಿದರೆ ಲಾಭ ಆಗುತ್ತದೆ. ಜೀವನ ಸ್ಥಿರವಾಗಿರುತ್ತದೆ. ಜೀವನದ ಆರಂಭಿಕ ಹಂತದಲ್ಲೇ ಇವರು ಕುಟುಂಬದಿಂದ ದೂರ ಆಗುವ ಸಾಧ್ಯತೆ ಹೆಚ್ಚು. ಕುಟುಂಬಕ್ಕೆ ಸಂಬಂಧಿಸಿದ ರಹಸ್ಯವೊಂದು ಇರುತ್ತದೆ. ಶಿಕ್ಷಣದಲ್ಲಿ ಅಡೆತಡೆಗಳು ಹಾಗೂ ಸಂತಾನ ವಿಚಾರದಲ್ಲಿ ಸಮಸ್ಯೆಗಳಾಗುತ್ತವೆ.

          ನವಮಭಾವ :---
           
          ಶನಿಗ್ರಹವು ಜಾತಕದ ಒಂಭತ್ತನೇ ಮನೆಯಲ್ಲಿ ಸ್ಥಿತವಾಗಿದ್ದರೆ ಶುಭ ಎಂದು ಹೇಳಲಾಗುತ್ತದೆ. ಏಕೆಂದರೆ ಶನಿದೇವ ಧಾರ್ಮಿಕನೂ ಹೌದು, ಧರ್ಮಭಾವವಾದ ನವಮಭಾವದಲ್ಲಿ ಶನಿ ಸ್ಥಿತನಾಗಿದ್ದರೆ, ವ್ಯಕ್ತಿಗೆ ಆಧ್ಯಾತ್ಮಿಕ ಭಾವನೆಯ ಹಸಿವಿರುತ್ತದೆ, ಸಾಂಸಾರಿಕ ಜೀವನದಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ

            ನವಮಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಜನ್ಮದಿಂದಲೇ  ಭಾಗ್ಯವಂತ, ದಾರ್ಶನಿಕ,  ವಿಜ್ಞಾನಿ,  ಮಾತೇ ದುರ್ಗೆಯ ಭಕ್ತ,  ಜ್ಯೋತಿಷ್ಯ ಶಾಸ್ತ್ರದಲ್ಲಿ  ಪಂಡಿತ,  ಧಾರ್ಮಿಕ ವಿಚಾರಧಾರೆಯುಳ್ಳವ,  ಭವ್ಯ ಮನೆ,  ವಾಹನ  ಸೇವಕರುಳ್ಳವ,  ವಿದೇಶ ಯಾತ್ರಾಯೋಗ,  ಉತ್ತಮ ತಂದೆತಾಯಿಯರನ್ನು  ಪಡೆದವನಾಗಿರುತ್ತಾನೆ.  ಧಾರ್ಮಿಕ ಆಧ್ಯಾತ್ಮಿಕ ಬರವಣಿಗೆಯಲ್ಲಿ ಆಸಕ್ತಿ ಇರುತ್ತೆ, ಸಾಲದಿಂದ, ಅಡೆತಡೆಗಳಿಂದ, ಅನಾರೋಗ್ಯ ಸಮಸ್ಯೆಯಿಂದ ಬೇಗ ನಿವಾರಣೆ ಆಗುತ್ತೆ. ಕಾನೂನು ಕಟ್ಟಳೆಗಳನ್ನು ಗೌರವಿಸುತ್ತಾರೆ. ಧರ್ಮ, ಗುರುಹಿರಿಯರು, ಪೋಷಕರ ಬಗ್ಗೆ ಗೌರವ ಇರುತ್ತೆ. ಇವರಿಗೆ ಶನಿ ದಶಾದಲ್ಲಿ ಉತ್ತಮ ಫಲ.
          
          ನವಮ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು  ಅಪೂರ್ಣ ವಿದ್ಯೆ,  ಭಾಗ್ಯಹೀನ, ಅಧರ್ಮಿ, ಅಪ್ರಾಮಾಣಿಕ,  ಲೋಭಿ, ಕಲಹಪ್ರಿಯ, ಕೃಶಕಾಯ, ಯಾತ್ರೆಗಳಲ್ಲಿ  ನಷ್ಟ. ಬಾಲ್ಯದಲ್ಲೇ ತಂದೆಯಿಂದ ದೂರ ಆಗಬೇಕಾಗುತ್ತದೆ.  ಉನ್ನತ ಶಿಕ್ಷಣದಲ್ಲಿ ತೊಂದರೆಗಳು ಎದುರಾಗುತ್ತವೆ. 
    
           ದಶಮಭಾವ :---
ಇದನ್ನು ಕರ್ಮಭಾವ ಅಂತಲೂ ಕರೆಯುತ್ತಾರೆ. ಶನಿ ಈ ಭಾವ ಕಾರಕ. (ಇತರ ಕಾರಕರು ರವಿ ಬುಧ ಗುರು)

       ಶನಿ ಗ್ರಹವು ಹತ್ತನೆ ಮನೆಯಲ್ಲಿ ಸ್ಥಿತವಾಗಿದ್ದರೆ ಶುಭ ಎಂದೇ ಹೇಳಬಹುದು. ಶನಿದೇವನಿಗೆ ಈ ಭಾವ ಉಚ್ಚಕ್ಷೇತ್ರ, ಸ್ವಕ್ಷೇತ್ರ, ಮೂಲತ್ರಿಕೋನವಾಗಿದ್ರೆ ಶಶಯೋಗವಾಗುತ್ತೆ.
 ಲಕ್ಷ್ಮಿ ಕೃಪೆ ಸಿಗುತ್ತದೆ ಮನೆಯಲ್ಲಿ ಧನ -ಧಾನ್ಯ ವೃದ್ಧಿಯಾಗುತ್ತದೆ. ಜಾತಕನು ಶುಭಕರ್ಮಾಚರಣೆ, ದೇವತಾಕಾರ್ಯ ಮಾಡುವವನು, ತಾಳ್ಮೆಯಿಂದ ಕೆಲಸ ಮಾಡುವವನು, ಧರ್ಮದ ಸಂಪಾದನೆ, ಉದ್ಯೋಗ ದಲ್ಲಿ ವಿಶೇಷ ಲಾಭ, ಉತ್ತಮ ಆಡಲಿತಗಾರನಾಗುತ್ತಾನೆ.
 
         ದಶಮ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಬಲಶಾಲಿ, ಗುಣಶಾಲಿ, ಆಯುಷ್ಯವಂತ, ಧಾರ್ಮಿಕ, ಎಲ್ಲಾ ವಿಷಯದಲ್ಲೂ  ಸಫಲತೆಯನ್ನು  ಪಡೆಯುವವ,  ಉಚ್ಛಮಟ್ಟದ  ರಾಜನೀತಿಜ್ಞ,  ಸಫಲ ಯಾತ್ರಾಫಲ, ನೀತಿವಂತ  ಹೆತ್ತವರು,  ಮಧುರ  ದಾಂಪತ್ಯ, ಹತ್ತನೇ ಸ್ಥಾನದ ಶನಿಯಿಂದ ಉದ್ಯೋಗ ಅಥವಾ ವೃತ್ತಿ ಬದುಕು ಅದ್ಭುತವಾಗಿರುತ್ತದೆ. ಗಣಿಗಾರಿಕೆ ಹಾಗೂ ತೈಲಕ್ಕೆ ಸಂಬಂಧಿಸಿದ ಉದ್ಯೋಗ- ವೃತ್ತಿ ಚೆನ್ನಾಗಿ ಕೈ ಹಿಡಿಯುತ್ತದೆ. ಆದರೆ ಇತರ ಗ್ರಹಗಳ ಬೆಂಬಲವೂ ಇರಬೇಕು. ಸಾಮಾನ್ಯವಾಗಿ ಸರಕಾರಿ ಕೆಲಸ ದೊರೆಯುವ ಸಾಧ್ಯತೆ ಇರುತ್ತದೆ. ಯಾವುದೇ ಉದ್ಯೋಗ ಇದ್ದರೂ ಗಂಭೀರವಾಗಿ ತೊಡಗಿಕೊಳ್ಳುತ್ತಾರೆ. ಶ್ರಮಜೀವಿಗಳು, ಮಹತ್ವಾಕಾಂಕ್ಷಿಗಳಾಗಿ ಇರುತ್ತಾರೆ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಅವಕಾಶಗಳು ದೊರೆಯುತ್ತವೆ. ಇವರಿಗೆ ದೊರೆಯುವ ಸಂಗಾತಿ ಕೂಡ ಉದ್ಯೋಗ- ವೃತ್ತಿ ಬದುಕಿನ ಬಗ್ಗೆ ಅಷ್ಟೇ ಗಂಭೀರವಾಗಿ ಇರುತ್ತಾರೆ. ಕೆಲಸ- ವೃತ್ತಿ ಕಾರಣಕ್ಕಾಗಿಯೇ ತಮ್ಮ ಮದುವೆಯನ್ನು ಮುಂದಕ್ಕೆ ಹಾಕುತ್ತಾರೆ.

          ದಶಮ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ವ್ಯಾಪಾರದಲ್ಲಿ  ಹಾನಿ,  ರೋಗಪೀಡಿತ  ತಾಯಿ,  ನೌಕರಿಯಿಂದ  ಲಾಭ, ಮಾದಕ ವಸ್ತುಗಳ ವ್ಯಸನಿ,  ದುಃಖಮಯ ದಾಂಪತ್ಯ .

          ಏಕಾದಶ ಭಾವ  :---
         ಉಪಚಯ ಸ್ಥಾನವಾದ ಈ ಭಾವದಲ್ಲಿ ಶನಿ ಸ್ಥಿತನಾದರೆ ಉತ್ತಮ.
          
          ಏಕಾದಶ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು   ಧೀರ್ಘಆಯು,  ಭಾಗ್ಯಶಾಲಿ, ಅಪಾರ ಧನ - ಸಂಪತ್ತಿನ  ಒಡೆಯ,  ಪಿತ್ರಾರ್ಜಿತ  ಆಸ್ತಿಯನ್ನು ಹೊಂದಿರುವವ,  ವ್ಯಾಪಾರದಲ್ಲಿ  ನಿರಂತರ ಪ್ರಗತಿ,  ಕುಟುಂಬದಲ್ಲಿ  ಗೌರವಾನ್ವಿತ, ಹಾಗೂ  ಗೌರವಾನ್ವಿತ ಕುಟುಂಬದವ,  ಶ್ರೇಷ್ಠ ಮಿತ್ರರು,  ಸುಖ ಸುಂದರ  ದಾಂಪತ್ಯ.     ಈ ಭಾವ ಶನಿಯ ಸ್ವಕ್ಷೇತ್ರ, ಉಚ್ಚ ಕ್ಷೇತ್ರ ಅಥವಾ ಮಿತ್ರ ಕ್ಷೇತ್ರ ಅಗಿದ್ದಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ದೊಡ್ಡ ಪ್ರಮಾಣದ ಆಸ್ತಿ, ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ದೊರೆಯುತ್ತದೆ. ಜಾತಕದಲ್ಲಿ ಶುಕ್ರನ ಜೊತೆಗೆ ಚಂದ್ರ  ಇದ್ದು, ಅಲ್ಲೇ ಶನಿಯೂ ಇದ್ದರೆ ಯಶಸ್ಸು, ಅತ್ಯುನ್ನತ ಸ್ಥಾನ ಮಾನ ದೊರೆಯುತ್ತದೆ.        

      ಏಕಾದಶಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ನಿರ್ಧನ,  ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಇದರಿಂದ ಪಾರಾಗಲು ಖರ್ಚಿನಲ್ಲಿ ಹಿಡಿತವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಅಲ್ಪಾಯು, ವಿದ್ಯೆಯಿಲ್ಲದವ, ಕುಟುಂಬದವರೊಡನೆ ಸಾಮರಸ್ಯವಿಲ್ಲದವ, ಸಂಸಾರ ಸುಖವಿಲ್ಲ ಹಾಗೂ ಸ್ನೇಹಿತರಿಂದ  ತೊಂದರೆಗಳು.
ಒಂದು ವೇಳೆ ಶನಿ ನೀಚನಾಗಿದ್ದರೆ ಜೂಜು, ಸಟ್ಟಾ ವ್ಯವಹಾರದ ಮೂಲಕ ಹಣಗಳಿಸುತ್ತಾರೆ. ಇದರಿಂದ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಸಮಾಜದಲ್ಲಿ ಅಪಾರ ಸಂಖ್ಯೆಯ ಸ್ನೇಹಿತರು ಇರುತ್ತಾರೆ. ಕುಜ ಅಥವಾ ಪಾಪ ಗ್ರಹಗಳು ಯಾವುದಾದರೂ ಗ್ರಹ ಲಗ್ನದಲ್ಲಿ ಇದ್ದಲ್ಲಿ ಆರೋಗ್ಯ ಸಮಸ್ಯೆಗಳು ಆಗುತ್ತವೆ. ಮಕ್ಕಳು ಮತ್ತು ತಮ್ಮ ಕ್ರಿಯಾತ್ಮಕ ಆಲೋಚನೆ ಮೂಲಕ ಅಪಾರ ಗಳಿಕೆ ಪಡೆಯುತ್ತಾರೆ.

          ದ್ವಾದಶ ಭಾವ  :--
ಈ ಭಾವವನ್ನು ವ್ಯಯಭಾವ, ಮೋಕ್ಷಭಾವ ಎಂತಲೂ ಕರೆಯುತ್ತಾರೆ. ಈ ಭಾವಕ್ಕೆ ಶನಿ ಮತ್ತು ಕೇತು ಕಾರಕರು.
          
          ದ್ವಾದಶ ಭಾವಸ್ಥ  ಶನಿಯು  ಶುಭನಾಗಿದ್ದರೆ,   ಜಾತಕನು  ವಿದ್ವಾಂಸ, ದಯೆಯುಳ್ಳವ,  ಭಾಗ್ಯವಂತ, ಪ್ರಸಿದ್ಧಿ ಪಡೆಯುವವ,  ಅಂತಾರಾಷ್ಟ್ರೀಯ ಮಟ್ಟದಲ್ಲಿ  ವ್ಯಾಪಾರ ವ್ಯಾವಹಾರ ಇರುವವ,  ಸುಂದರ ಸುಮಧುರ  ದಾಂಪತ್ಯ. ವಿದೇಶಿ ವ್ಯಾಪಾರ ವ್ಯವಹಾರದಿಂದ ಅತ್ಯಧಿಕ ಧನಲಾಭ, ವಿರೋಧಿಗಳ ವಿನಾಶ.

           ದ್ವಾದಶ ಭಾವಸ್ಥ  ಶನಿಯು  ಆಶುಭನಾಗಿದ್ದರೆ,   ಜಾತಕನು   ಕೃಶಕಾಯ,  ಏಕಾಂತಪ್ರಿಯ,  ವಿರೋಧಿಗಳಿಂದ  ಪರಾಜಯ  ಹೊಂದುವವ,  ವಿದೇಶೀ ಯಾತ್ರೆಗಳಲ್ಲಿ  ಅಶುಭ,  ನಷ್ಟ,  ಅಲ್ಪ ಸಂತಾನ.
ಶನಿ ಗ್ರಹವು ಹನ್ನೆರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಶುಭ ಎಂದೇ ಹೇಳಲಾಗುತ್ತದೆ. ಈ ಸಮಯದಲ್ಲಿ ಯಾವುದೇ ನೂತನ ಕಾರ್ಯಗಳನ್ನು ಆರಂಭಿಸುವುದು ಒಳ್ಳೆಯದಲ್ಲ.
         ಹನ್ನೆರಡನೇ ಮನೆ ಶನಿಗೆ ಉತ್ತಮವಲ್ಲ. ಇದರಿಂದ ಒತ್ತಡ ಹೆಚ್ಚಾಗುತ್ತದೆ. ಆಸ್ತಿ ಕಳೆದುಕೊಳ್ಳುತ್ತಾರೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನೂ ಉಳಿಸಿಕೊಳ್ಳಲು ಆಗುವುದಿಲ್ಲ. ಒಂದು ಕಡೆಯಿಂದ ಆಸ್ತಿ ಸಂಪಾದನೆಗೆ ಶ್ರಮ ಪಡುತ್ತಿದ್ದರೂ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಆಧ್ಯಾತ್ಮಿಕ ಚಿಂತನೆಗಳು ಬರುತ್ತವೆ. ಅದು ಕೂಡ ತಡವಾಗಿ ಬರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ವಿದೇಶಿ ಮೂಲದಿಂದ ಅದ್ಭುತವಾದ ಗಳಿಕೆಯನ್ನೂ ನೀಡುತ್ತದೆ. ವಿರೋಧಿ ಪಾಳಯ್ದ ವಿರುದ್ಧ ಇವರ ಕೈ ಮೇಲಾಗುತ್ತದೆ. ಶನಿ ಮಹರ್ದಶಾ ನಡೆಯುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಇನ್ನು ದ್ವಾದಶ ರಾಶಿಗಳಲ್ಲಿ ಶನಿ ಸ್ಥಿತ ಫಲಗಳನ್ನು ನೋಡೋಣ

ಮೇಷರಾಶಿಯಲ್ಲಿ ಶನಿ 

          ಮೇಷ ರಾಶಿಯಲ್ಲಿ ಶನಿ ನೀಚ ಸ್ಥಾನದಲ್ಲಿರುತ್ತಾನೆ. ಶನಿ ನೀಚ ಸ್ಥಾನದಲ್ಲಿದ್ದರೆ ಅಶುಭ ಫಲವನ್ನು ನೀಡುತ್ತಾನೆ. ಈ ರಾಶಿಯಲ್ಲಿ ಶನಿ ಇದ್ದಾಗ, ಮೇಷ ರಾಶಿಯವರ ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಆತ್ಮವಿಶ್ವಾಸದ ಕೊರತೆಯಾಗುತ್ತದೆ. ಹಟ ಮತ್ತು ಕೋಪಕ್ಕೆ ದಾಸರಾಗುತ್ತಾರೆ. ಕೆಟ್ಟ ಅಭ್ಯಾಸಗಳತ್ತ ಮನಸ್ಸು ವಾಲುತ್ತದೆ. ಯಂತ್ರ ಸಂಬಂಧಿ ಕೆಲಸಗಳಲ್ಲಿ ಮುಂದುವರಿಯಬಹುದು. ಮೇಷ ರಾಶಿಯ ವ್ಯಕ್ತಿಗಳಿಗೆ ಶನಿದಶೆ ನಡೆಯುತ್ತಿದ್ದರೆ ಅಂತಹ ಸಮಯದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಮನಸ್ಥಾಪ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ವೃಷಭದಲ್ಲಿ ಶನಿ

          ಜಾತಕದಲ್ಲಿ ಶನಿಯು ವೃಷಭ ರಾಶಿಯಲ್ಲಿದ್ದಾಗ  ಧನಕಾರಕ ಶುಕ್ರನ ಪ್ರಭಾವದಿಂದ ಹಣಕಾಸಿನ ಅಭಿವೃದ್ಧಿ ಇರುತ್ತೆ. ವೈಭವ ಸಂಬಂಧವಾದ ವ್ಯಾಪಾರ ವೃತ್ತಿಯನ್ನು ಮಾಡುತ್ತಾರೆ. ಈ ವ್ಯಕ್ತಿಗಳು ಚತುರರು ಮತ್ತು ಶಕ್ತಿಶಾಲಿಯಾಗಿರುತ್ತಾರೆ ಆದರೆ ವಿಶ್ವಾಸಕ್ಕೆ ಅರ್ಹರಾಗಿರುವುದಿಲ್ಲ. ಮೋಸ, ವಂಚನೆಗಳನ್ನು ಮಾಡುವ ಮನಃಸ್ಥಿತಿ ಉಳ್ಳವರಾಗಿರುತ್ತಾರೆ. ಜಾತಕದಲ್ಲಿ ಬೇರೆ ಗ್ರಹಗಳು ಶುಭ ಸ್ಥಿತಿಯಲ್ಲಿರದಿದ್ದರೆ ಅನ್ಯ ಸಂಬಂಧವನ್ನು ಮಾಡುವ ಮನಃಸ್ಥಿತಿ ಇವರದ್ದಾಗುತ್ತದೆ.

ಶನಿ ಮಿಥುನ ರಾಶಿಯಲ್ಲಿದ್ದಾಗ 

       ಜಾತಕರು  ವ್ಯಾಪಾರ ಸಂಬಂಧಿ ವೃತ್ತಿಯಲ್ಲಿರ್ತಾರೆ. ಲೆಕ್ಕಾಚಾರ ಬುದ್ಧಿ ಇರುತ್ತೆ. ಇದು ಧೈರ್ಯ ಸ್ಥಾನವೂ ಆಗಿರುವುದರಿಂದ
ಇಲ್ಲಿ ಶನಿಯು ವ್ಯಕ್ತಿಯನ್ನು ಹುಚ್ಚು ಸಾಹಸಕ್ಕೆ ಕೈ ಹಾಕುವಂಥ ಮನಸ್ಸನ್ನು ನೀಡುತ್ತಾನೆ. ಚತುರನಾಗಿದ್ದರೂ ಮೋಸ ಮಾಡುವ ಪ್ರವೃತ್ತಿಯನ್ನು ಹೊಂದುತ್ತಾನೆ. ರಾಜನೀತಿ ಮತ್ತು ಕೂಟನೀತಿಯಂಥ ಕ್ಷೇತ್ರದಲ್ಲಿ ಉತ್ತಮನಾಗಿರುತ್ತಾನೆ. ಮಿಥುನ ರಾಶಿಯಲ್ಲಿ ಶನಿ ಇದ್ದರೆ ಸಂತಾನಕ್ಕೆ ಅಷ್ಟು ಉತ್ತಮವಲ್ಲ. ಸಾಹಿತ್ಯ, ಸಂಗೀತ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಒಲವು ಮೂಡುತ್ತದೆ.

ಕಟಕದಲ್ಲಿ ಶನಿ 

           ಜಾತಕದ ನಾಲ್ಕನೇ ಮನೆಯಲ್ಲಿ ಶನಿ ಇದ್ದಾಗ  ಕಲೆಯಲ್ಲಿ ಆಸಕ್ತಿ, ಜಲ ಸಂಬಂಧಿ ಕೆಲಸ ಇರುತ್ತೆ.  ಸದಾ ಸಂಚಾರ ಇರುತ್ತೆ,  ಈ ಜಾತಕರ ವ್ಯವಹಾರಗಳಲ್ಲಿ ಸುಳ್ಳು ಮೋಸವೂ ಸಹ ಇರುತ್ತೆ. ಹಟ ಮತ್ತು ಈರ್ಷೆಯಂಥ ಸ್ವಭಾವ ಹೆಚ್ಚಾಗುತ್ತದೆ. ತಾಯಿಯಿಂದ ಹೆಚ್ಚು ಪ್ರೇಮ ಲಭಿಸುವುದಿಲ್ಲ. ಈ ರಾಶಿಯವರಿಗೆ ಶನಿದೆಶೆ ನಡೆಯುತ್ತಿದ್ದಾಗ ಹೆಚ್ಚು ಕಷ್ಟವನ್ನು ಪಡಬೇಕಾಗುತ್ತದೆ. ಜೊತೆಗೆ ಸಂಸಾರದಲ್ಲಿ ಮನಸ್ಥಾಪ, ಅಶಾಂತಿ ಉಂಟಾಗುತ್ತದೆ.

ಸಿಂಹದಲ್ಲಿ ಶನಿ

          ಸರ್ಕಾರಿ ಸಂಬಂಧ ಅಥವಾ ಗೌರವಾಯುತವಾದ ಹುದ್ದೆಯಲ್ಲಿರ್ತಾರೆ.
ಅಶುಭ ಪ್ರಭಾವವನ್ನೆ ಹೆಚ್ಚು ನೀಡುವ ಶನಿ ಸಿಂಹದಲ್ಲಿದ್ದಾಗ ವ್ಯಕ್ತಿಯನ್ನು ಗಂಭೀರ ಮತ್ತು ಚಿಂತನೆ ಮಾಡುವಂತೆ ಮಾಡುತ್ತಾನೆ. ಕಾರ್ಯದಲ್ಲಿ ನೈಪುಣ್ಯತೆಯನ್ನು ಮತ್ತು ಪರಿಶ್ರಮವನ್ನು ತೋರುತ್ತಾನೆ. ಶನಿಯ ಪ್ರಭಾವಕ್ಕೊಳಪಟ್ಟ ಈ ರಾಶಿಯವರು ಮಾತಿನಂತೆ ನಡೆಯುವವರಾಗುತ್ತಾರೆ. ಶನಿದಶೆ ನಡೆಯುತ್ತಿದ್ದಾಗ ಮಾತ್ರ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಹೆಚ್ಚು ಧನ ವ್ಯಯವಾಗುವ ಸಾಧ್ಯತೆ ಇರುತ್ತದೆ. ನಿರಾಶೆಯಂಥ ಮನಃಸ್ಥಿತಿ ಉಂಟಾಗುತ್ತದೆ.

ಕನ್ಯಾದಲ್ಲಿ ಶನಿ

          ಜಾತಕದಲ್ಲಿ ಕನ್ಯಾರಾಶಿಯಲ್ಲಿ ಶನಿ ಇದ್ದರೆ ಪರೋಪಕಾರಿ ಮತ್ತು ಗುಣವಂತರಾಗಿರುತ್ತಾರೆ. ಈ ರಾಶಿಯಲ್ಲಿ ಶನಿ ಇದ್ದಾಗ ಹಣವಂತ ಮತ್ತು ಶಕ್ತಿಶಾಲಿಯಾಗುತ್ತಾರೆ. ಬುದ್ಧಿ ಉಪಯೋಗಿಸಿ ಸುಲಭದಲ್ಲಿ ಸಂಪಾದನೆ ಮಾಡುವ ಚತುರತೆ ಇರುತ್ತೆ. ಕಡಿಮೆ ಮಾತನಾಡುವ ಇವರು ಗಂಭೀರ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ರಾಶಿಯವರಿಗೆ ಶನಿದಶೆಯು ಶುಭ, ಲಾಭವನ್ನು ತರುತ್ತದೆ.

ತುಲಾರಾಶಿಯಲ್ಲಿ ಶನಿ

        ಶನಿ ತುಲಾ ರಾಶಿಯಲ್ಲಿದ್ದರೆ ಈ ರಾಶಿಯವರಿಗೆ ಉತ್ತಮ ಫಲವನ್ನು ನೀಡುತ್ತಾನೆ. ಸ್ವಾಭಿಮಾನಿ ಮತ್ತು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇಲ್ಲಿ ಶನಿಯು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೇ, ಮಾನಸಿಕ ಸ್ಥಿರತೆಯನ್ನು ನೀಡುತ್ತಾನೆ. ಹಣಕಾಸುಗಳ ವ್ಯವಹಾರ, ವೈಭವೋಪೇತ ಸಂಸ್ಥೆಗಳಲ್ಲಿ ವೃತ್ತಿಯಿರುತ್ತೆ.

ವೃಶ್ಚಿಕದಲ್ಲಿ ಶನಿ 

       ಯಾರ ಜಾತಕದಲ್ಲಿ ವೃಶ್ಚಿಕ ರಾಶಿಯಲ್ಲಿ ಶನಿ ಇರುತ್ತಾನೋ ಅಂಥವರು ಭಾವೋದ್ರೇಕ ಮತ್ತು ಕೋಪಕ್ಕೆ ಬುದ್ಧಿ ಕೊಡುತ್ತಾರೆ. ಜೊತೆಗೆ ನಿರಾಸಕ್ತಿ ಉಂಟಾಗುವುದಲ್ಲದೆ ಅಸೂಯೆಯ ಗುಣ ಹೆಚ್ಚಾಗುತ್ತದೆ.  ಮೆಕ್ಯಾನಿಕಲ್, ಇಂಜಿನಿಯರಿಂಗ್, ಯಂತ್ರ ಸಂಬಂಧಿ ಕೆಲಸ, ಭೂ ಖನಿಜ ಸಂಬಂಧದ ವೃತ್ತಿಯಲ್ಲಿ ಶ್ರಮಜೀವನ ಇರುತ್ತೆ.  ಈ ರಾಶಿಯವರಿಗೆ ಶನಿದಶೆ ಇದ್ದಾಗ ಆರ್ಥಿಕ ನಷ್ಟ ಮತ್ತು ಮರ್ಯಾದೆಗೆ ದಕ್ಕೆ ಉಂಟಾಗುತ್ತದೆ.

 ಧನು ರಾಶಿಯಲ್ಲಿ ಶನಿ

        ರಾಶಿಚಕ್ರದಲ್ಲಿ ಶನಿಯದು ನವಮ ಸ್ಥಾನ. ಈ ರಾಶಿಯಲ್ಲಿ ಶನಿ ಇದ್ದಾಗ ವ್ಯಕ್ತಿಗಳು ವ್ಯಾವಹಾರಿಕವಾಗಿ ಚುರುಕಾಗುತ್ತಾರೆ ಮತ್ತು ಜ್ಞಾನವಂತರಾಗುತ್ತಾರೆ. ಪರಿಶ್ರಮವನ್ನು ಪಡುವುದಲ್ಲದೇ, ಉತ್ತಮ ಚಿಂತನೆಗಳನ್ನು ಮಾಡುತ್ತಾರೆ. ಚತುರತೆಯಿಂದ ಕಾರ್ಯ ನಿರ್ವಹಿಸುವುದಲ್ಲದೇ, ಪರರ ಉಪಕಾರವನ್ನು ಸದಾ ನೆನೆಯುತ್ತಾರೆ. ದೈವಿಕ, ಸಾತ್ವಿಕವಾದ ಬುದ್ಧಿಯನ್ನು ಅನುಸರಿಸಿ ಸುಲಭದ ದಾರಿಯಲ್ಲಿ ಜೀವನ ನಡೆಸುತ್ತಾರೆ. ಈ ರಾಶಿಯವರಿಗೆ ಶನಿದಶೆ ಇದ್ದಾಗ ಇವರು ಸುಖ ಮತ್ತು ಉತ್ತಮ ಫಲವನ್ನು ಪಡೆಯುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಫಲತೆಯನ್ನು ಕಾಣುತ್ತಾರೆ.

ಮಕರದಲ್ಲಿ ಶನಿ

          ಮಕರ ರಾಶಿಯಲ್ಲಿ ಶನಿ ಇದ್ದರೆ ಇಂತವರು ಪರಿಶ್ರಮಿಗಳಾಗಿರುತ್ತಾರೆ. ದೇವರಲ್ಲಿ ಹೆಚ್ಚು ಭಕ್ತಿಯನ್ನು ಹೊಂದುತ್ತಾರೆ. ವ್ಯವಹಾರದಲ್ಲಿ ಏಳಿಗೆಯನ್ನು ಕಾಣುತ್ತಾರೆ. ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆಸ್ತಿ-ಭೂಮಿಯ ಲಾಭವನ್ನು ಶನಿ ತಂದುಕೊಡುತ್ತಾನೆ.  ವ್ಯವಸಾಯದಲ್ಲಿ ಆಸಕ್ತಿ ಇರುತ್ತೆ.

ಕುಂಭರಾಶಿ ಶನಿ 

        ಯಾರ ಜಾತಕದಲ್ಲಿ ಶನಿ ದಶಮ ಸ್ಥಾನದಲ್ಲಿ ಅಥವಾ ಕುಂಭ ರಾಶಿಯಲ್ಲಿ ಇರುವನೋ ಇಂತವರು ಅಹಂಕಾರಿಗಳಾಗುತ್ತಾರೆ. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ.  ಗುಪ್ತ ವಿಷಯಜ್ಞಾನ, ಸರ್ಕಾರೀ ಸಹಕಾರದಿಂದ ಅಭಿವದ್ಧಿ ಕಾಣಬಹುದು. ಕೂಟನೀತಿಯಂಥ ಕ್ಷೇತ್ರದಲ್ಲಿ ಸಫಲರಾಗುತ್ತಾರೆ. ಕಣ್ಣಿಗೆ ಸಂಬಂಧ ಪಟ್ಟ ರೋಗದಿಂದ ಬಳಲುತ್ತಾರೆ. ವ್ಯವಹಾರದಲ್ಲಿ ಕುಶಲತೆಯನ್ನು, ಭಾಗ್ಯವನ್ನು ಹೊಂದುತ್ತಾರೆ.

ಮೀನದಲ್ಲಿ ಶನಿ

        ಶನಿ ಮೀನರಾಶಿಯಲ್ಲಿದ್ದರೆ ಇಂಥ ವ್ಯಕ್ತಿಯು ಗಂಭೀರನಾಗುತ್ತಾನೆ. ದೈವೀಕ ಗುರುಪೀಠ, ಉಪದೇಶ ಸಂಬಂಧ ಮುಂದುವರೆಯುತ್ತಾನೆ. ಹೇಗಾದರೂ ಅಧಿಪತಿಯ ಸ್ಥಾನ ಗಳಿಸುವಲ್ಲಿ ಸಫಲನಾಗುತ್ತಾನೆ. ಅಸೂಯೆ ಪಡುವವನಾಗುತ್ತಾನೆ, ಮಹತ್ವಾಕಾಂಕ್ಷಿ ಗುಣವನ್ನು ಹೊಂದಿರುತ್ತಾನೆ. ಈ ರಾಶಿಯಲ್ಲಿ ಶನಿ ಇದ್ದಾಗ ಉದಾರತೆಯ ಗುಣವನ್ನು ಹೊಂದುತ್ತಾನೆ ಮತ್ತು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಆರ್ಥಿಕ ಸ್ಥಿತಿಯನ್ನು ಸಾಧಾರಣವಾಗಿಸುತ್ತಾನೆ ಶನಿ.

           ಶನೈಶ್ಚರ  ಸ್ವಾಮಿಯ  ಶುಭದೃಷ್ಟಿಯಿಂದ  ಮನುಷ್ಯ  ತುಂಬಾ  ಪ್ರಬಲವಾಗಿ  ದೊಡ್ಡ  ಮನೆತನ ಹೊಂದಿ,  ತನ್ನ  ಮನೆತನದ  ಹಿರಿಯರ  ಸೇವೆ  ಮಾಡಿ  ಅವರ  ಹಾರೈಕೆಯಿಂದ ವಂಶಾಭಿವೃದ್ಧಿಯನ್ನು,  ಪಿತ್ರಾರ್ಜಿತ  ಉಡುಗೊರೆಯನ್ನು,  ಕುಟುಂಬದಲ್ಲಿ  ಸಂತೋಷವನ್ನು , ಧೀರ್ಘಯುಷ್ಯ  ಹೊಂದಿ  ಸುಖಿಯಾಗುತ್ತಾನೆ.   ಶುಭದೃಷ್ಟಿ  ಪ್ರಬಲವಾಗಿದ್ರೆ ನ್ಯಾಯಾದೀಶರಾಗುತ್ತಾರೆ,  ವಾಕ್ಚಾತುರ್ಯವನ್ನು  ಪಡೆದವರಾಗುತ್ತಾರೆ,  ಸ್ವಾಭಿಮಾನಿಯಾಗುತ್ತಾರೆ.   

ಶನಿ ದೇವ ಇತರ ಗ್ರಹಗಳ ಜೊತೆಯಲ್ಲಿದ್ದಾಗ ಫಲಗಳು*

 ಶನಿ + ರವಿ

         ಜಾತಕರ ತಂದೆ ತುಂಬಾ ಕಷ್ಟದಿಂದ ಮೇಲೆ ಬಂದಿರುತ್ತಾರೆ, ಜಾತಕರೂ ಸಹ ಅನೇಕ ಕಷ್ಟ ಶತ್ರುಗಳನ್ನ ಜಯಿಸಿ ಮುಂದೆ ಬರಬೇಕು. ನಂತರ ಗೌರವಾಯುತವಾದ ಉದ್ಯೋಗ, ಜೀವನ ಸಿಗುತ್ತೆ ಜಾತಕರು ತನ್ನ ತಂದೆಯ ವೃತ್ತಿಯನ್ನೇ ಅನುಸರಿಸಬೇಕಾಗುತ್ತೆ. ತಂದೆಯ ಜೊತೆಗೆ  misunderstanding ಇರುತ್ತೆ. ಜಾತಕರ ಮಗ ನೀಚರ ಸಹವಾಸ, ಸೋಮಾರಿತನ ಹೊಂದಿದ್ದು ನಂತರ ಉತ್ತಮ ಮಾರ್ಗಕ್ಕೆ ಬರ್ತಾನೆ.

 ಶನಿ + ಚಂದ್ರ

        ಜಾತಕನಿಗೆ ಚಲನೆ ಇರತಕ್ಕ ಕೆಲಸ, ತಿರುಗಾಟ ಜಾಸ್ತಿ, ತಾಯಿ ಸದಾ ಕರ್ಮನಿರತಳು, ತಾಯಿಗೆ ವಾತ ಕಫದ ತೊಂದ್ರೆ ಇರುತ್ತೆ. ಅಧಿಕ ಖರ್ಚು, ಕೆಲಸದಲ್ಲಿ ಅಪವಾದ ನಿಂದನೆಗಳು ಬರುತ್ತಿರುತ್ತವೆ. ಮನೆಯಲ್ಲಿ ಸದಾ ಅಶಾಂತಿ, ಮನೆಯ ಹೆಣ್ಣುಮಕ್ಕಳಿಗೆ ಸುಖವಿಲ್ಲ, ಎಲ್ಲದರಲ್ಲೂ ಅನುಮಾನ, ಜೊತೆಗೆ ಶೀತಕ್ಕೆ ಸಂಬಂಧಪಟ್ಟ ಕಾಯಿಲೆ ಇರುತ್ತೆ.

 ಶನಿ + ಕುಜ

     ಯಂತ್ರ ಸಂಬಂಧವಾದ ವೃತ್ತಿ, ವೃತ್ತಿಯಲ್ಲಿ ಬೇಸರ, ವೃತ್ತಿಭಂಗ, ವೃತ್ತಿಯಲ್ಲಿ ಬದಲಾವಣೆ , ಒಂದುವೇಳೆ ಜಾತಕರು ಉನ್ನತ ಅಧಿಕಾರ ಪಡೆದರೂ, ಶತ್ರುಗಳು ಇವರನ್ನು ಆ ಪಡವಿಯಿಂದ ಕೆಳಗಿಳಿಸಲು ಹೊಂಚುಹಾಕ್ತಿರ್ತಾರೆ.

 ಶನಿ + ಬುಧ

     ಈ ಯುತಿಯಲ್ಲಿ ಜಾತಕರು ಬುದ್ಧಿವಂತರಾದರೂ ತೋರಿಸಿಕೊಳ್ಳಿವುದಿಲ್ಲ, ನೋಡುವವರಿಗೆ ಮಂಕುಬಡಿದವರಂತೆ ಕಾಣುತಾರೆ.  ಆಡಂಬರ ಇರಲ್ಲ, ಚುಕುಕುತನ ಕಡಿಮೆ, ಯಾವುದೇ ವಿಷಯವನ್ನಾದರೂ ನಾಲ್ಕಾರು ಬಾರಿ ತಿಳಿಸಿದ ನಂತರವೇ ಗ್ರಹಿಸಿಕೊಳ್ಳುವುದು. ಸೋಮಾರಿತನ. ಭೂಮಿ ಸಂಬಂಧ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣುವರು.

 ಶನಿ + ಗುರು

      ಇದು ಧರ್ಮಕರ್ಮಾಧಿಪತಿಗಳ ಸಂಬಂಧವಾಗುತ್ತೆ. ಜೊತೆಗೆ ಗುರುವು ಜ್ಞಾನಕಾರಕನೂ ಆಗಿರುವುದರಿಂದ ಜಾತಕರಿಗೆ ಆಧ್ಯಾತ್ಮಿಕತೆಯಲ್ಲಿ ಒಲವಿರುತ್ತೆ. ಒಳ್ಳೆಯ ನ್ಯಾಯವಾದಿಯೂ ಆಗಬಲ್ಲರು, ಗೌರವಾಯುತವಾದ ಕೆಲಸ.   ಶನಿಯು ಹಲ್ಲು, ಗಲ್ಲಕ್ಕೆ ಕಾರಕ, ಗುರುವು ಮೂಗಿಗೆ ಕಾರಕ... ಹಾಗಾಗಿ ಜಾತಕರ ಹಲ್ಲು ಮೂಗುಗಳು ಚೆನ್ನಾಗಿರುತ್ತೆ. ಒಳ್ಳೆಯ ಪದಾರ್ಥಗಳನ್ನು ತಿನ್ನೋಕ್ಕೆ ಇಷ್ಟಪಡ್ತಾರೆ. ಗುರುಪೀಠವನ್ನು ಅಲಂಕರಿಸುವ ಯೋಗವೂ ಬರಬಹುದು. ದೈವೀಕ ಚಿಂತನೆ ಉಳ್ಳವರಾದ್ದರಿಂದ ಜಗಳ ಕದನಕ್ಕೆ ಹೋಗುವುದಿಲ್ಲ. ತಮ್ಮ ಗೌರವ ಕಾಪಾಡಿಕೊಳ್ಳುವುದಕ್ಕೆ ವಿವೇಚನೆಯಿಂದ ಕಾರ್ಯ ನಿರ್ವಹಿಸುವರು.

 ಶನಿ + ಶುಕ್ರ

      ಈ ಯುತಿಯ ಜಾತಕರಿಗೆ ವಿವಾಹಾತ್ಪರ ಭಾಗ್ಯ ಇರುತ್ತೆ, ಸುಂದರ ಮನೆ, ಆಸ್ತಿ  ಪಡೆಯುವ ಯೋಗ ಇರುತ್ತೆ. ಹಣಕಾಸು ಸಂಸ್ಥೆ, ಬ್ಯಾಂಕ್, ದ್ರವ್ಯಸಂಬಂಧ ವ್ಯವಹಾರ ಸಂಸ್ಥೆಯಲ್ಲಿ ಕೆಲಸ ಇರುತ್ತೆ. ಎಲ್ಲಾ ಭಾಗ್ಯಗಳು ಇದ್ದರೂ ಸಹ ಆಡಂಬರದ ಜೀವನ ನಡೆಸೋಲ್ಲ. ತುಂಬಾ ಸರಳವಾಗಿರ್ತಾರೆ.

 ಶನಿ + ರಾಹು

      ಛಾಯಾಗ್ರಹ ರಾಹುವಿನೋಡನೆ ಶನಿ, ಹಾಗಾಗಿ ಕತ್ತಲಲ್ಲಿ ಮಾಡುವ ಕೆಲಸ,  ಶುಭವಾಗಿದ್ದರೆ ಛಾಯಾಗ್ರಹಣ, ಕ್ಯಾಮರಾಮನ್ ಆಗಿ, ಕೆಲಸ ಮಾಡಬಹುದು, ಚಲನಚಿತ್ರ, ಚಕ್ರ ಸಂಬಂಧ ವೃತ್ತಿ ಮಾಡಬಹುದು. ಗುಪ್ತ ವಾಗಿ ಹಣವನ್ನು ಕೂಡಿಡ್ತಾರೆ. ಅಶುಭವಾದ್ರೆ ಕಳ್ಳತನ, ಸ್ಮಗ್ಲಿಂಗ್ ಮಾಡುವವರಾಗ್ತಾರೆ.

 ಶನಿ + ಕೇತು

      ಇವರಿಗೆ ವೈರಾಗ್ಯ ಚಿಂತನೆ ಇರುತ್ತೆ, ಯಾವುದೇ ಕೆಲಸದಲ್ಲೂ ಆಸಕ್ತಿ ಇರಲ್ಲ. ಮಾಡುವ ವೃತ್ತಿಯಲ್ಲಿ ಅಡಚನೆಗಳಿರುತ್ತವೆ. ಒಂದುವೇಳೆ ಉನ್ನತ ಹುದ್ದೆಯಿದ್ದರೂ ನಿರಾಸಕ್ತಿಯಿಂದ, ಹೆದರಿಕೆಯಿಂದ ಕೆಲಸ ಬಿಡುವ ಯೋಗ.  ನೇಯ್ಗೆ, ಪ್ರಿಂಟಿಂಗ್ ಪ್ರೆಸ್, ಟೈಲರಿಂಗ್ ಕೆಲಸದಿಂದ ಜೀವನ ಸಾಗಿಸ್ತಾರೆ.

ರವ್ಯಾದಿ ಗ್ರಹಗಳ ಮೇಲೆ ಶನಿ ಸಂಚರಿಸುವಾಗ ಫಲಗಳು :-
 
ರವಿಯ ಮೇಲೆ ಶನಿ ಸಂಚರಿಸುವ ಸಂದರ್ಭದಲ್ಲಿ, ಜಾತಕರಿಗೆ  ಕೆಲಸದಲ್ಲಿ ಅಭಿವೃದ್ಧಿ ಕುಂಠಿತ, ಹಣದ ಅಭಾವ, ವಿಶ್ರಾಂತಿ ಇಲ್ಲದ ಜೀವನ, ತಂದೆಗೆ ಕಾಯಿಲೆ, ಜಾತಕರಿಗೆ ಕೆಟ್ಟ ಹೆಸರು, ಸರಕಾರದಿಂದ ತೊಂದರೆ ಯಾಗುತ್ತದೆ.

ಚಂದ್ರನ ಮೇಲೆ ಶನಿ ಸಂಚಾರದಿಂದ, ಜಾತಕರಿಗೆ ಸ್ಥಳ ಬದಲಾವಣೆ, ತಿರುಗಾಟ, ಉದ್ಯೋಗ ಬದಲಾವಣೆ, ತಾಯಿಯ ಆರೋಗ್ಯದಲ್ಲಿ ಏರುಪೇರು,  ನೀಚ ಚಂದ್ರನ ಮೇಲೆ ಶನಿ ಸಂಚಾರ ಕಾಲದಲ್ಲಿ ನೀಚ ಹೆಂಗಸರಿಂದ ತೊಂದರೆ.

ಕುಜನ ಮೇಲೆ ಶನಿ ಸಂಚಾರ ಕಾಲದಲ್ಲಿ, ಉದ್ಯೋಗಕ್ಕೆ ತೊಂದರೆ, ಶತ್ರುಗಳಿಂದ ತೊಂದರೆ, ಅಫಘಾತಗಳಾಗುವ ಸಂಭವ, ಆಸ್ತಿ ಖರೀದಿ ಮಾಡಬಹುದು, ಸ್ತ್ರೀ ಜಾತಕವಾದ್ರೆ, ಕುಜನ ಮೇಲೆ ಶನಿ ಸಂಚಾರ ಕಾಲದಲ್ಲಿ ಗಂಡನ ಕೆಲಸಕ್ಕೆ ತೊಂದರೆ, ಉದ್ಯೋಗ ಕಳೆದುಕೊಳ್ಳುವ ಸಂಭವವೂ ಉಂಟು.

ಬುಧನ ಮೇಲೆ ಶನಿ ಸಂಚಾರ ಕಾಲದಲ್ಲಿ ವ್ಯಾಪಾರ ವ್ಯವಹಾರ ಶುಭ, ವಿದ್ಯಾಭಾಸದಲ್ಲಿ ತಡವಾದರೂ ಯಶಸ್ಸು ಸಿಗುತ್ತದೆ, ಸ್ನೇಹಿತರಿಂದ ಸಹಕಾರ, ಸೋದರರಿಗೆ ಲಾಭ, ಭೂಮಿ ಲಾಭ.

ಗುರುವಿನ ಮೇಲೆ ಶನಿ ಸಂಚಾರ ಕಾಲದಲ್ಲಿ ಉದ್ಯೋಗದಲ್ಲಿ ಬದಲಾವಣೆ, ಬಡ್ತಿ ಸಿಗುತ್ತದೆ, ಜಾತಕರಿಗೆ ಒಳ್ಳೇ ಸಮಯ, ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ, ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರುತ್ತದೆ.

ಶುಕ್ರನ ಮೇಲೆ ಶನಿ ಸಂಚರಿಸುವಾಗ ಹೆಂಡತಿಯಿಂದ ಲಾಭ, ಭೂಮಿ ಖರೀದಿ ಅಥವಾ ಮಾರಾಟ, ವಾಹನ ಖರೀದಿ, ಅಭಿವೃದ್ಧಿ ಕಾರ್ಯಗಳು ನಡೆಯುತ್ತದೆ, ಜೊತೆಗೆ ಹೆಂಡತಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.

ಜಾತಕದ ಶನಿಯ ಮೇಲೆ ಗೋಚರದ ಶನಿ ಸಂಚಾರಕಾಲದಲ್ಲಿ,ಕೆಲಸದದಲ್ಲಿ ಕಷ್ಟ ನಷ್ಟಗಳು, ನಿಧಾನಗತಿಯಲ್ಲಿ ಕೆಲಸಕಾರ್ಯಗಳು, ತೊಂದರೆ.

ರಾಹುವಿನ ಮೇಲೆ ಶನಿ ಸಂಚಾರ ಕಾಲದಲ್ಲಿ ನಿರುದ್ಯೋಗಿ ಯಾಗುವ ಸಂಭವ, ಕೀಳ್ದರ್ಜೆ ಕೆಲಸ, ಸೋಮಾರಿ, ಮಾಡುವ ಕೆಲಸದಲ್ಲೂ ತೊಂದರೆ, ವಿನಾಕಾರಣ ಜಗಳ, ಪಿತೃಕರ್ಮಗಳನ್ನು ಮಾಡುವ ಯೋಗ. ವಾಹನ ಯೋಗವೂ ಇರುತ್ತದೆ.

ಕೇತುವಿನ ಮೇಲೆ ಶನಿ ಸಂಚರಿಸುವಾಗ ಉದ್ಯೋಗ ಕಳೆದುಕೊಳ್ಳುವ ಸಂಭವ, ತಕರಾರು, ವ್ಯಾಜ್ಯ, ಪುಣ್ಯಕ್ಷೇತ್ರ ಸಂಸರ್ಶನ.

ವಕ್ರೀ ಶನಿ

      ಸೂರ್ಯನಿಂದ ಶನಿಯು 5, 6, 7, 8 ರಲ್ಲಿ ಇರುವಾಗ  ಅಂದರೆ, 135° ಯಿಂದ 210°ಯ ಒಳಗೆ ವಕ್ರತ್ವವನ್ನು ಪಡೆಯುತ್ತಾನೆ,   ಯಾವುದೇ ಸ್ಥಾನದಲ್ಲಿರಲಿ, ಯಾವುದೇ ಅವಸ್ಥೆಯಲ್ಲಿರಲಿ ಆ ಸ್ಥಾನದ ಕಾರಕತ್ವಗಳಲ್ಲಿ ನಿಧಾನ ಗತಿಯ ಪ್ರಗತಿಯನ್ನು ಕೊಡುತ್ತಾನೆ ಶನಿ, ಆದ್ರೆ perfection ಇರುತ್ತೆ, ನಿಂತುಹೋದ ಕೆಲಸಗಳನ್ನು ಮಾಡಿಸಿಯೇ ತೀರುತ್ತಾನೆ. ಶನಿ ವಕ್ರೀಯಾಗೋದೇ ನಮ್ಮ ಕರ್ಮವನ್ನು ತೀರಿಸಿ ಋಣಮುಕ್ತರಾಗಲು, ಪ್ರಬುದ್ಧತೆಯನ್ನು ಪಡೆಯಲು, ವ್ಯಕ್ತಿಗಳನ್ನು  ಗಟ್ಟಿ ಮಾಡಲು, ಚೌಕಟ್ಟು ಮುಕ್ತರನ್ನಾಗಿ ಮಾಡಲು, ಕಳೆದ ಜನ್ಮದ ನಿಂತುಹೋದ ಕಾರ್ಯಕ್ಷೇತ್ರದಲ್ಲಿ ಮುಂದುವರೆಸಲು. ಶನಿ ವಕ್ರೀ ಆದರೆ ಸಾತ್ವಿಕತೆ, ತಾರ್ಕಿಕತೆ, ತಾತ್ವಿಕತೆ ಬರುತ್ತೆ, ಆಧ್ಯಾತ್ಮಿಕತೆಯಲ್ಲಿ ಒಲವು ಮೂಡುತ್ತೆ.
ಶನಿಯು ತನ್ನ ಸ್ವಂತ ಮನೆಯಲ್ಲಿ ವಕ್ರೀಯಾಗಿದ್ರೆ,  ಜಾತಕರ ಪ್ರಯತ್ನಗಳಲ್ಲಿ ಮೊದಲು ಸೋಲು ಕಂಡರೂ, ತೊಂದರೆ ಅನುಭವಿಸಿದರೂ ಕೊನೆಗೆ ಶುಭವನ್ನೇ ಕೊಡ್ತಾನೆ, ಶನಿಯ ದಶಾ, ಭುಕ್ತಿಯಲ್ಲಿ ಜಯವನ್ನೇ ಕೊಡ್ತಾನೆ. 
     ಸಿಂಹ ರಾಶಿಯಲ್ಲಿ ಶನಿಯು ವಕ್ರತ್ವ ಪಡೆದರೆ ತಂದೆಯ ಕರ್ಮವನ್ನು (ಋಣವನ್ನು) ತೀರಿಸುತ್ತಾನೆ,  ದುಸ್ಥಾನ ದಲ್ಲಿ ವಕ್ರೀಯಾದಾಗ ರಾಜಯೋಗವನ್ನು ಕೊಡ್ತಾನೆ.
ಶನಿಯು ವಕ್ರೀಯಾದಾಗ ಯಾವಾಗಲೂ ಅಶುಭಫಲವನ್ನೇ ಕೊಡುವುದಿಲ್ಲ, ತನ್ನ ಸಂಬಂಧಿತ ಕಾರ್ಯಗಳ ಮರು ಪರಿಶೀಲನೆಗೆ ಪ್ರೇರೇಪಿಸುತ್ತಾನೆ.

ಜೀವಿಗಳ ಜಾತಕದಲ್ಲಿ ಇತರ ಎಂಟು ಗ್ರಹಗಳ  ಅಶುಭದೃಷ್ಟಿಯುದ್ದರು  ಶನಿದೇವನ  ಶುಭದೃಷ್ಟಿಯೊಂದೇ  ಎಂತಹ ಸಂಕಟ  ಗಂಡಾಂತರಗಳನ್ನು  ಪಾರುಮಾಡಬಲ್ಲದು.   ಶನಿದೇವರ  ಅಶುಭ ದೃಷ್ಟಿಯಿದ್ದು,  ಉಳಿದ ಎಂಟು  ಗ್ರಹಗಳು  ಶುಭರಾಗಿದ್ದರೂ  ಗಂಡಾಂತರ  ತಪ್ಪಿಸಲು ಅಸಾಧ್ಯ.
           ವ್ಯಕ್ತಿಯ ಭವಿಷ್ಯದ ಬಗ್ಗೆ ನಿಖರವಾಗಿ ತಿಳಿಯಲು ಜಾತಕದಲ್ಲಿ ಉಳಿದ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ನೋಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಶನಿ ಗ್ರಹವು ಶುಭ ಪ್ರಭಾವವನ್ನು ಬೀರಲು ಅನೇಕ ಪರಿಹಾರಗಳನ್ನು ಸಹ ಮಾಡಿಕೊಳ್ಳ ಬಹುದಾಗಿರುತ್ತದೆ.

     ಜಾತಕದಲ್ಲಿ ಶನಿದೇವನಿಂದ ಉಂಟಾಗುವ ಕಷ್ಟ ನಷ್ಟಗಳಿಗೆ ಈ ಕೆಳಗಂಡ ಪೂಜಾ ಕ್ರಮದಿಂದ ಸ್ವಲ್ಪಮಟ್ಟಿನ  ಪರಿಹಾರಗಳನ್ನು ಪಡೆಯಬಹುದು.

ಪರಿಹಾರ:-
(ಲಾಲ್ ಕಿತಾಬ್ ಪರಿಹಾರಾಕ್ರಮಗಳು)

1 ).ಹನುಮಂತನನ್ನು ಆರಾಧಿಸಿರಿ. 

2 ).ಆಹಾರ ಸೇವನೆ ಮುಂಚೆ ಸ್ವಲ್ಪ ಆಹಾರವನ್ನು ನಾಯಿ ಅಥವ ಕಾಗೆಗಳಿಗೆ ನೀಡಿ 

3 ). ಉದ್ದು, ಎಳ್ಳಿನ ಎಣ್ಣೆ, ಚರ್ಮ, ಬಾದಾಮಿ ಇವುಗಳನ್ನು ನಿರ್ಗತಿಕರಿಗೆ ನೀಡಿ.

4 ). ಎಮ್ಮೆಗೆ ಮೇವನ್ನು ನೀಡಿ,

5 ). ಸೂರ್ಯಾಸ್ತದ ನಂತರ ಕಪ್ಪು ಇರುವೆಗಳಿಗೆ ಧಾನ್ಯ ನೀಡಿ .

6 ). ನಡುವಿನ ಬೆರಳಿಗೆ ಕಬ್ಬಿಣದ ಸ್ಟೀಲ್ ಕುದುರೆ ಲಾಳದ ಉಂಗುರವನ್ನು ಧರಿಸಿರಿ.

7 ). ಹರಿಯುವ ನೀರಲ್ಲಿ ೬ ಬಾದಾಮಿ ೬ ಸಿಪ್ಪೆ ಸಹಿತ ತೆಂಗಿನಕಾಯಿ೬ಶನಿವಾರದ ದಿನಗಳ ಕಾಲ ಹಾಕಿರಿ.

8 ). ಮನೆಯ ಕತ್ತಲೆಯ ಕೋಣೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ೧೨ ಬಾದಾಮಿಗಳನ್ನು ಅಥವ ಜೇನುತುಪ್ಪ ಅಥವ ತಾಮ್ರವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನೆಲದಲ್ಲಿ ಹುದುಗಿಸಿರಿ.

9 ). ಮಾಂಸ,ಮೀನು ಅಥವ ಮದ್ಯವನ್ನು ದೂರವಿಡಿ.

1೦ ). ಶನಿವಾರಗಳಂದು ಉಪವಾಸವನ್ನು ಮಾಡಿ

11 ). ಆಲದಮರದ ಬುಡಕ್ಕೆ ಹಾಲನ್ನು ಹಾಕಿ ಆ ಹಸಿಯ ಮಣ್ಣನ್ನು ತಿಲಕದಂತೆ ಹಣೆಗೆ ಹಚ್ಚಿಕೊಳ್ಳಿ.

12 ). ಮಕ್ಕಳಿಗೆ ತೊಂದರೆಯ ನಿವಾರಣೆಗೆ ಕಪ್ಪು ನಾಯಿಯನ್ನು ಸಾಕಿರಿ.

13 ). ಮಣ್ಣಿನ ಕುಡಿಕೆಯಲ್ಲಿ ಎಳ್ಳಿನ ಎಣ್ಣೆಯನ್ನು ಹಾಕಿ ನದಿಯ ಅಥವ ಕೊಳದ ದಡದ ಬಳಿ ನೀರಲ್ಲಿ ಮುಳುಗುವಂತೆ ಹುದುಗಿಸಿರಿ.

೧4). ಮುಖ್ಯವಾದ ಕೆಲಸಗಳನ್ನು ರಾತ್ರಿಗಳಲ್ಲಿ ಅಥವ ಕೃಷ್ಣಪಕ್ಷದಲ್ಲಿ ಮಾಡಿರಿ.

15 ). ಬೆಳ್ಳಿಯ ಚೌಕಾಕಾರದ ತುಂಡನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಂಡಿರಿ .

16 ). ೮೦೦ಗ್ರಾಂ ಉದ್ದು ಶನಿವಾರದಿಂದ ಆರಂಭಿಸಿ ೮ ದಿನಗಳ ಕಾಲ ಹರಿಯುವ ನೀರಿಗೆ ಹಾಕಿರಿ.

17 ). ಸ್ವಲ್ಪ ಎಣ್ಣೆಯನ್ನು ೪೩ ದಿನಗಲ ಕಾಲ ನೆಲದ ಮೇಲೆ ಹಾಕುತ್ತಿರಿ. ಮದ್ಯ ವನ್ನು ಸಹ ಹಾಕಬಹುದು. 

18 ). ೨ನೇ ಸ್ಥಾನದಲ್ಲಿ ಅಶುಭಗ್ರಹಗಳಿದ್ದರೆ ೧೦ ಬಾದಾಮಿಗಳನ್ನು ದೇವಾಲಯಕ್ಕೆ ಕೊಟ್ಟು ಅದರಲ್ಲಿ ೫ಅನ್ನು ಮನೆಗೆ ಹಿಂದಕ್ಕೆ ತಂದು ಮನೆಯಲ್ಲಿಟ್ಟಿರಿ ಆದರೆ ಅವುಗಳನ್ನು ನೀವು ತಿನ್ನಬಾರದು.

19 ). ಒಳ್ಳೆಯ ದಾಂಪತ್ಯ ಜೀವನಕ್ಕೆ ಕಪ್ಪು ಕೊಳಲಿನಲ್ಲಿ ಜೇನನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿಬಿಡಿ.

20 ). ಸಂಪತ್ತಿಗಾಗಿ,ಗಂಗಾಜಲವನ್ನು ಹಿತ್ತಾಳೆಯ ಪಾತ್ರೆಯಲ್ಲಿ ಇಡಿರಿ.

21 ). ಮಾನಸಿಕ ಶಾಂತಿಗಾಗಿ ತಾಯಿಯ ಆರೋಗ್ಯಕಾಗಿ ಹಳೆಯ ಅಕ್ಕಿ ಅಥವ ಬೆಳ್ಳಿಯನ್ನು ಹರಿಯುವ ನೀರಲ್ಲಿ ಹಾಕಿರಿ.

22 ). ೨ನೇ ಸ್ಥಾನದಲ್ಲಿ ಶನಿಯು ಕಲುಶಿತನಾಗಿದ್ದರೆ ಬರಿಗಾಲಲ್ಲಿ ದೇವಾಲಯಕ್ಕೆ ಹೋಗಿ ಸರ್ಪಗಳಿಗೆ ಹಾಲನ್ನು ನೀಡಿರಿ.

23 ). ಏಳರಾಟದ ಶನಿಕಾಟಕ್ಕೆ ನಿವಾರಣೆಗಾಗಿ ಶನಿವಾರದ ಸಂಜೆ ಮಣ್ಣಿನ ಕುಂಡದಲ್ಲಿ ತಾಮ್ರದಲ್ಲಿ ಕೆತ್ತಿದ ಒಂದು ಜೊತೆ ಸರ್ಪ ಮತ್ತು ಕಪ್ಪು ಉದ್ದನ್ನು ಅಶ್ವತ್ತ ಮರದ ಬೇರಿನ ಬುಡದಲ್ಲಿ ಹುದುಗಿಸಿರಿ.

24). ಎಲ್ಲಕ್ಕಿಂತ ಹೆಚ್ಚಾಗಿ ತಂದೆತಾಯಿ, ಹಿರಿಯರ ಸೇವೆ ಮಾಡಿ.

25). ತಿಲಾಭಿಷೇಕವನ್ನು ಶನಿತ್ರಯೋದಶಿಯಂದು, ಶನಿಜಯಂತಿಯಂದು  ಮತ್ತು ಶನಿ- ಅಮಾವಾಸ್ಯೆ ದಿನಗಳಂದು ಮಾಡಿಸಿ .

27). ಕರಿ ಎಳ್ಳನ್ನು  ದಾನ ಮಾಡಿ

28). ಕಪ್ಪು ಹಸುವಿಗೆ (ಕಪಿಲ ಗೋವು ) ಕರಿ ಎಳ್ಳು , ಬೆಲ್ಲದ ಮಿಶ್ರಣವನ್ನು ತಿನ್ನಿಸಿ 

29 ). ಶನಿವಾರದಂದು ಉಪವಾಸ ಮಾಡುವುದು ಒಳ್ಳೆಯದು

30 ). ದೈಹಿಕ ಅಂಗವಿಕಲರಿಗೆ ಆಹಾರ 

31 ). ನವಗ್ರಹ ಪ್ರದಕ್ಷಿಣೆ ಮಾಡುವುದು

32 ). ಪ್ರತಿದಿನ ಮನೆಯ ಮುಖ್ಯದ್ವಾರದ ಮುಂದೆ , ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚಿಡಬೇಕು.

33 ). ದಶರಥ ಮಹಾರಾಜನಿಂದ ರಚಿಸಲ್ಪಟ್ಟ ಶನಿ ಸ್ತೋತ್ರದ ಪಠಣ.

34 ). ಶನಿ ಜಪಂ, ೧೯೦೦೦ ಮೂಲಮಂತ್ರದ ಜೊತೆಗೆ , ಪುನರ್ ಚರಣ , ಹವನಂ , ದಾನ .

35 ). ರಾಮ - ನಾಮ ', ಹನುಮಾನ್ ಚಾಲೀಸ , ದುರ್ಗಾ ಸ್ತುತಿಯ ಪಠಣ 

36 ). ಮೆಣಸು ಬೆರೆಸಿದ ಮೊಸರನ್ನವನ್ನು ದೇವರಿಗೆ ಅರ್ಪಿಸಿ ನಂತರ ಕಾಗೆಗೆ ಉಣಬಡಿಸುವುದು.


       ಶನಿಯ  ಶುಭದೃಷ್ಟಿ  ಪಡೆಯಲು  ಆಂಜನೆಯನಿಗೆ  ಹುಚ್ಚೆಳ್ಳು ( ಎಳ್ಳೆಣ್ಣೆ)  ಎಣ್ಣೆಯಿಂದ ಅಭಿಷೇಕ,  ಮತ್ತು  ಇದೇ  ಎಣ್ಣೆಯಿಂದ ದೀಪ  ಹಚ್ಚುವುದು,  ನೀಲ  ಅಥವಾ  ಕಪ್ಪುವಸ್ತ್ರ,  ಶಂಕದ ಹೂವು,  ಎಳ್ಳು,  ಕಬ್ಬಿಣ  ದಾನ  ಮಾಡಬೇಕು,  ಜಗತ್ತಿನ  ಯಾವುದೇ  ಕೆಳಮಟ್ಟದ  ವಸ್ತುವಾಗಲೀ, ಪ್ರಾಣಿಗಳನ್ನಾಗಲೀ  ತಿರಸ್ಕಾರದಿಂದ  ಅವಮಾನಿಸಬಾರದು ,  ಅಧರ್ಮ,  ಅನ್ಯಾಯ,  ಮೋಸ ಕಪಟ, ವಂಚನೆ  ಇವುಗಳು  ಶನಿಯ  ಮಹಾನ್  ಶತ್ರುಗಳು.                        
         ಮನೆಯ  ಹಿರಿಯರನ್ನು  ತಾತ್ಸಾರ  ಮಾಡುವುದು,  ಎಲ್ಲಾ  ಪುಣ್ಯವನ್ನೂ  ಕೊಂದು ಹಾಕುತ್ತದೆ, ಏಕೆಂದರೆ  ಮನೆಯ  ಹಿರಿಯರ  ಪ್ರತೀಕವೆ  ಶನಿದೇವ,  ಹಾಗೆಯೇ  ಮರಣ  ಹೊಂದಿದವರಿಗೆ   ಕಾರ್ಯಗಳನ್ನು  ಮಾಡದೇ  ಹೋದರೆ  ಶನಿಯ  ಅವಕೃಪೆಗೆ  ಪಾತ್ರರಾಗಬೇಕಾಗುತ್ತದೆ,  ಏಕೆಂದರೆ ಶನಿಯು  ಪ್ರೇತಕಾರಕ  ಗ್ರಹವೂ  ಆಗಿದ್ದಾನೆ,  ಆದ್ದರಿಂದ  ಗತಿಸಿದವರ  ಸದ್ಗತಿಯಿಂದ  ಹಿರಿಯರ ಹಾರೈಕೆಯಿಂದ  ಶನಿಯ  ಶುಭದೃಷ್ಟಿ  ಪಡೆಯಬಹುದು.

         ವ್ಯಕ್ತಿಯ ಭವಿಷ್ಯದ ಬಗ್ಗೆ ನಿಖರವಾಗಿ ತಿಳಿಯಲು ಜಾತಕದಲ್ಲಿ ಉಳಿದ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ನೋಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಶನಿ ಗ್ರಹವು ಶುಭ ಪ್ರಭಾವವನ್ನು ಬೀರಲು ಅನೇಕ ಪರಿಹಾರಗಳನ್ನು ಸಹ ಮಾಡಿಕೊಳ್ಳಬಹುದಾಗಿರುತ್ತದೆ

    ✍   ಡಾ|| B. N. ಶೈಲಜಾ ರಮೇಶ್..





.












 .

















Wednesday, 27 July 2022

ಸಂಖ್ಯಾಶಾಸ್ತ್ರ ಭಾಗ 1

                             ಹರಿಃ ಓಂ
                 ಓಂ ಶ್ರೀ ಗಣೇಶಾಯ ನಮಃ
                 ಓಂ ಶ್ರೀ ಗುರುಭ್ಯೋ ನಮಃ
ಸಂಖ್ಯೆ  ಒಂದು (೧) 

           ಒಂದು  ಎನ್ನುವ  ಸಂಖ್ಯೆಯು  ಎಲ್ಲಾ ಸಂಖ್ಯೆಗಳಿಗೂ  ಆಧಾರವಾಗಿದೆ. ಹಲವು ಒಂದುಗಳು ಸೇರಿದರೇ ಎಲ್ಲಾ ಸಂಖ್ಯೆಗಳು ರೂಪುಗೊಳ್ಳುವುದು. 
ಉದಾ :---೧+೧=೨
                ೨+೧=೩
                ೩+೧=೪
         ಇದೇ ರೀತಿ ಕೋಟಿ ವರೆಗೂ ಇರುವ ಸಕಲ ಸಂಖ್ಯೆಗಳೂ ಕೂಡಿಯೇ ರೂಪುಗೊಳ್ಲುತ್ತವೆ.ಮತ್ತು ಒಂದರಿಂದ ಒಂಬತ್ತರವರೆಗಿರುವ ಸಂಖ್ಯೆಗಳಲ್ಲಿ ಒಂದು ಎಂಬ ಸಂಖ್ಯೆಯ ಮಹತ್ವ ಅದಿಕ. ನಿತ್ಯ-ಸತ್ಯ-ಸನಾತನವಾಗಿ ಎಂದೆಂದಿಗೂ ನಿಂತು ನೆಲೆಸಿರುವ ಪರಬ್ರಹ್ಮ ವಸ್ತುವು ಒಂದೇ. ಲೋಕವೆಲ್ಲಾ ಅದೇ ಒಂದಾದ ಪರಬ್ರಹ್ಮವೆಂಬ ವಸ್ತುವಿನಿಂದಲೇ ಸೃಷ್ಟಿಯಾಗಿದೆ. ಹೀಗೆ ಹಲವು ಬಗೆಗಳಾಗಿ ತೋರಿಬರುವ ವಸ್ತುವು ಎಲ್ಲವೂ ಅದೇ ಒಂದರಲ್ಲಿ ಅಡಗಿ ಐಕ್ಯವಾಗುತ್ತದೆ. ಆದುದರಿಂದಲೇ,  ಸಂಖ್ಯೆಗಳಲ್ಲಿ  ಒಂದು  ಎಂಬುದು ಬಹಳ ಮಹತ್ವವುಳ್ಳದ್ದಾಗಿದೆ. ಇಂದಿನ ಪ್ರಪಂಚದಲ್ಲೆಲ್ಲಾ   ಇಂಗ್ಲೀಷ್ ದಿನಾಂಕಗಳೇ ವ್ಯವಹಾರದಲ್ಲಿ ಇರುವದರಿಂದಲೂ ಪಾಶ್ಚಾತ್ಯ ಮತ್ತು ಪೌರ್ವಾತ್ಯ ದೇಶದ ಸಂಖ್ಯಾಶಾಸ್ತ್ರ ನಿಪುಣರೂ,ರೇಖಾಶಾಸ್ತ್ರ ಪಾರಂಗತರೂ ಇಂಗ್ಲೀಷು ತಿಂಗಳಿನ ದಿನಾಂಕಗಳು ಇವುಗಳನ್ನೇ ಆಧಾರವಾಗಿಟ್ಟುಕೊಂಡು ಮಾನವನ ಜೀವನದ ಫಲಿತಾಂಶವನ್ನು ಹೇಳುತ್ತಿರುವುದರಿಂದಲೂ ನಾವು ಕೂಡ ಅದೇ ಆಂಗ್ಲ ದಿನಾಂಕ,ಮಾಸ,ವರ್ಷಗಳನ್ನೇ ಆಧಾರವಾಗಿಟ್ಟುಕೊಂಡು ಫಲಗಳನ್ನು ನೋಡಬೇಕು.
         ಒಂದು ಸಂಖ್ಯೆಯವರು ಜನವರಿಯಿಂದ ಡಿಸೆಂಬರ್ ವರೆಗಿನ ಹನ್ನೇರಡು ತಿಂಗಳಿನಲ್ಲಿ ಯಾವ ತಿಂಗಳಲ್ಲಾದರೂ ಸರಿ ೧,೧೦,೧೯,೨೮ ಈ ದಿನಾಂಕದಲ್ಲಿ ಜನಿಸಿದವರನ್ನು ೧ ಸಂಖ್ಯೆಯುಳ್ಲವರೆಂದು  ತಿಳಿಯಬೇಕು.  ಗ್ರಹಕ್ಕೆ ಸಂಬಂದ ಪಟ್ಟ0ತೆ  ಸೂರ್ಯನೇ  ಮೊದಲಾದ ಒಂಬತ್ತು  ಗ್ರಹಗಳಲ್ಲಿ  ಒಂದನೆ ಸಂಖ್ಯೆಗೆ ಸೂರ್ಯನು ಅಧಿಪತಿಯಾಗಿದ್ದಾನೆ.  ಅವನು ನವಗ್ರಹಗಳ ನಾಯಕನು.  ಸಮಸ್ತ ಜೀವರಾಶಿಗಳಿಗೂ ಸೂರ್ಯನೇ ಆತ್ಮಸ್ವರೂಪನೆಂದು  ಶಾಸ್ತ್ರಗಳು ಹೇಳುತ್ತವೆ. ಆದುದರಿಂದ ಗ್ರಹನಾಯಕನಾದ ಸೂರ್ಯನು ಸಂಖ್ಯೆಗಳಲ್ಲಿ  ಪ್ರಥಮವಾದ ಒಂದನೇ ಸಂಖ್ಯೆಗೆ ಸೇರಿದವನೆಂದು ಹೇಳುವುದು ಸಮಂಜವಾಗಿದೆ.
           ಒಂದನೇ  ಸಂಖ್ಯೆಗೆ ಸೇರಿದ ಗ್ರಹವು ಸೂರ್ಯ ನಾಗಿರುವುದರಿಂದ ಆ ಸಂಖ್ಯೆಯ ದಿನ ಜನಿಸಿದವರಲ್ಲಿ  ಜ್ಯೋತಿಷ್ಯ ಶಾಸ್ತ್ರ ರೀತ್ಯ ಸೂರ್ಯಗ್ರಹಕ್ಕೆ ಕೊಟ್ಟಿರುವ ಸ್ವರೂಪ, ಸ್ವಭಾವ, ಗುಣಗಳೆಲ್ಲಾ ಇರುತ್ತವೆ.
Picture source : Internet/ social media

    ರೂಪ ಮತ್ತು ಆಕಾರ  :---
         ಒಂದನೆ ಸಂಖ್ಯೆಯವರು ಸಾಮಾನ್ಯವಾದ ಎತ್ತರವುಳ್ಳವರಾಗಿರುವರು.ಇವರಿಗೆ ದೀರ್ಘವಾದ ಭುಜಗಳೂ ವಿಶಾಲವಾದ ಹಣೆಯೂ ಇರುವುದು.ತಲೆ ಕೂದಲು ತೆಳುವಾಗಿ  ಹೊಳಪಿನಿಂದ ಕೂಡಿ ನಯವಾಗಿ ಇರುವುದು.  ಅಂದವಾಗಿ ಬಿಲ್ಲಿನಂತೆ ಬಾಗಿದ ಹುಬ್ಬುಗಳು ದೃಡವಾದ ದಂತಪಂಕ್ತಿಯು ಇರುವುವು.
     ಗುಣ ನಡತೆಗಳು  :---
          ನಮ್ಮ ಸೌರಮಾನ ದಲ್ಲಿ ಸೂರ್ಯನೇ ಎಲ್ಲ ಗ್ರಹಗಳ ಅಧಿಪತಿಯಾಗಿರುವುದರಿಂದ, ಬಲಿಷ್ಠನಾಗಿಯೊ ಇರುವುದರಿಂದ  ಈ ಸಂಖ್ಯೆಯಲ್ಲಿ  ಜನಿಸಿದವರು  ಸ್ವಾತಂತ್ರ್ಯ ಪ್ರಿಯರು,  ಇತರರ ಆಶ್ರಯದಲ್ಲಿರಲು ಇಷ್ಟಪಡುವುದಿಲ್ಲ,  ಯಾವುದೇ ಕೆಲಸಕಾರ್ಯಗಳನ್ನು ಸ್ವತಂತ್ರ ವಾಗಿಯೇ ಮಾಡಲಿಚ್ಛಿಸುತ್ತಾರೆ, ಹಠವಾದಿ,  ಧೈರ್ಯ ಶಾಲಿ, ಇತರರ ಮೇಲೆ ಅಧಿಕಾರ ಚಲಾಯಿಸಲು ಬಯಸುತ್ತಾರೆ,  ಇವರದು ನೇರ ಹಾದಿ, ಸಿಂಹದ ಹಾಗೆ ಧೈರ್ಯ,ಸಾಹಸ ಉಳ್ಳವರು, ತಮ್ಮ ವಿಚಾರವನ್ನು ಧ್ಯೇಯವನ್ನೂ ಬಿಟ್ಟುಕೊಡದೆ ಸಾಧಿಸುವ ಸ್ವಭಾವವುಳ್ಳವರು.ತಾವು ಅನ್ಯರ ಅದೀನರಾಗಿರುವುದಕ್ಕಿಂತಲೂ ತಮಗೇ ಇತರರು ಅಧೀನರಾಗಿರಬೇಕೆಂಬ ಮನೋಭಾವವುಳ್ಳವರು. ಎಲ್ಲದರಲ್ಲೂ ತಾನೇ ಮುಂದಾಗಿ ಮುಂದಾಳಾಗಿ ಕೆಲಸ-ಕಾರ್ಯಗಳನ್ನು ಸಾಧಿಸುವ ಸಾಮರ್ಥ್ಯವುಳ್ಳವರು. ಸೇವಾವೃತ್ತಿಗಿಂತ ಸ್ವತಂತ್ರ ಜೀವನ ನಡೆಸುವುದೇ ಇವರಿಗೆ ಪ್ರಿಯವಾದುದು. ಇವರು ಹೆಚ್ಚು ಮಾತನಾಡುವವರಲ್ಲ, ಮಿತಭಾಷಿಗಳು    ಮಾತನಾಡಬೇಕಾಗಿ ಬಂದರೆಮಾತ್ರ ಭಾವ, ಅರ್ಥ, ಹಾಸ್ಯರಸ  ಸೇರಿಸಿ  ಮಾತನಾಡುವರು. ಇವರನ್ನು ಸಕಲ ಕಲಾವಿದರೆಂದು ಹೇಳಬಹುದು.   ಯಾವ ಕಲೆಯಾದರೂ ಸರಿ ಅದನ್ನು ಬೇಗನೆ ಗ್ರಹಿಸುವ ಶಕ್ತಿ, ಉತ್ಸಾಹ ಮತ್ತು ನೈಪುಣ್ಯತೆ ಇವರಲ್ಲಿ ಕಂಡುಬರುತ್ತದೆ,  ಇವರದು  ನಿರ್ಮಲ ಹೃದಯ ಕಪಟ ಇಲ್ಲದೆ ಸ್ನೇಹಭಾವದಿಂದ ಎಲ್ಲರೊಂದಿಗೆ ಒಡನಾಡುವರು.ಇವರಿಗೆ ಯಾವುದನ್ನೂ ರಹಸ್ಯವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಅಸಾದ್ಯವಾದುದರಿಂದ ಎಲ್ಲವನ್ನೂ ಇತರರಲ್ಲಿ ಹೇಳಿಬಿಡುತ್ತಾರೆ. ತಾವು ಮಾಡಿದ ತಪ್ಪು-ಸರಿಗಳನ್ನು ಇತರರಿಗೆ ಹೇಳಿ ಯಾವಾಗಲೂ ತಮ್ಮ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಬೇಕೆಂಬ ಪ್ರಯತ್ನದಲ್ಲಿಯೇ ಇರುವರು.ತಾವು ಯಾವುದೇ ಕಳಂಕವಿಲ್ಲದ ನಿರ್ಮಲ ಮನಸ್ಸಿನವರಾಗಿರುವುದರಿಂದ ಸುಳ್ಳುಹೇಳುವವರನ್ನು ,ಮೋಸಮಾಡುವವರನ್ನೂ ಕಂಡರೆ ಇವರಿಗಾಗದು.  ತಮಗೆ ತಿಳಿದಿದ್ದನ್ನು  ದಯಾ -  ದಾಕ್ಷಿಣ್ಯ ವಿಲ್ಲದೇ ಇತರರಿಗೆ ತಿಳಿಸುತ್ತಾರೆ,   ಹಾಗೆಯೇ  ಇತರರ ತಪ್ಪುಗಳನ್ನೂ  ಯಾವುದೇ ದಯಾ - ದಾಕ್ಷಿಣ್ಯ ವಿಲ್ಲದೆ  ನೇರವಾಗಿ ತಿಳಿಸುತ್ತಾರೆ,  ಹಾಗಾಗಿ  ಇವರಿಗೆ  ಶತ್ರುಗಳು ಹೆಚ್ಚು,  ಆದರೆ ಅದಕ್ಕೆಲ್ಲಾ ಭಯಪಡುವ ಪ್ರವೃತ್ತಿ ಇಲ್ಲ.
          ಇವರು ನಿಸರ್ಗಾರಾಧಕರು,  ಉತ್ತಮ ಪರಿಸರ ಸುಂದರ ನಿಸರ್ಗ ಧಾಮದಲ್ಲಿ ವಾಸಿಸಲು ಕಾಲ ಕಳೆಯಲು ಇಷ್ಟಪಡುತ್ತಾರೆ,  ಹಾಗೆಯೇ  ಒಂಟಿತನ ವನ್ನೂ  ಇಷ್ಟಪಡುತ್ತಾರೆ,  ಇವರು ಸದಾ ಚಟುವಟಿಕೆ ಯಿಂದರಲು  ಬಯಸುತ್ತಾರೆ,  ಸೋಮಾರಿತನ ಇವರಿಗಾಗದು,  ತನಗೆ  ಏನೇ ಕಷ್ಟ ಬಂದರೂ ಇತರರಲ್ಲಿ  ಹೇಳಿಕೊಳ್ಳುವ  ಗುಣವಿರುವುದಿಲ್ಲ, ಇನ್ನೊಬ್ಬರ  ಸಹಾಯವನ್ನೂ  ಅಪೇಕ್ಷೆ ಪಡುವುದಿಲ್ಲ,ತಮಗೆ ಸಹಾಯ ಮಾಡಬೇಕೆಂದು ಪರರ ಬಳಿ ಹೋಗುವುದು ಇವರ ಸ್ವಭಾವಕ್ಕೆ ವಿರುದ್ದವಾದುದು,  ಆದರೆ ಇವರ ಪರಿಸ್ಥಿತಿ ನೋಡಿ ಇತರರು ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುವರು. 
         ಬಿಳಿಯ ವಸ್ತ್ರವನ್ನು ಧರಿಸುವುದೆಂದರೆ ಇವರಿಗೆ ಬಹಳಪ್ರೀತಿ ಜನಸಮುದಾಯದೊಂದಿಗೆ ಇರುವುದಕ್ಕಿಂತಲೂ ಏಕಾಂತ ವಾಸವು ಇವರಿಗೆ ಪ್ರಿಯವಾದುದು  ಆಲಸ್ಯ ಮಾಡುವವರಲ್ಲ, ಸಮಯ ವ್ಯರ್ಥ ಮಾಡುವವರಲ್ಲ ,  ಪ್ರಯಾಣ ಮಾಡುವುದರಲ್ಲೂ  ಪರ್ವತ, ಬೆಟ್ಟ ಗುಟ್ಟ , ಪ್ರಪಾತ ಮೊದಲಾದ ಪ್ರಾಕೃತಿಕ ದೃಶ್ಯಗಳನ್ನು ನೋಡುವುದೆಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ. ದೈವ ನಂಬಿಕೆಯುಳ್ಳ ಆಸ್ತಿಕರು ಇವರು. 
        ಗೃಹಸ್ಥ ಜೀವನ :---
       ಇವರಿಗೆ ವಯಸ್ಸಾದ ಮೆಲೆಯೇ ವಿವಾಹವು ಆಗುವುದು.ಇವರ ಸಾಂಸಾರಿಕ ಜೀವನವು ಸಾಕಷ್ಟು ಸುಖಮಯವಾಗಿ ಇರುವುದಿಲ್ಲ,  ಯಾವಾಗಲೂ ಸತಿ-ಪತಿಗಳಲ್ಲಿ ಯಾವುದಾದರೊಂದು ಮನಸ್ತಾಪವು ಬರುತ್ತಲೇ ಇರುವುದರಿಂದ ಗೃಹಶಾಂತಿ-ಸಮಾಧಾನವು ನೆಲೆಸಿರಲಾರದು.  ಮುಖ್ಯವಾಗಿ ಈ ಒಂದನೆ  ಸಂಖ್ಯೆಯವರು ಇದೇ ಒಂದನೆ ಸಂಖ್ಯೆಯುವರೊಡನೆ  ವಿವಾಹವಾದರೆ, ಭಿನ್ನಾಭಿಪ್ರಾಯ ಹೆಚ್ಚಾಗುವುವು.  ಏಕೆಂದರೆ ಸ್ವತಂತ್ರ ವಾದಿಗಳು ಇತರರ ಆಶ್ರಯ ದಲ್ಲಿರಲು ಇಷ್ಟಪಡುವುದಿಲ್ಲ , ಪರಸ್ಪರ ಮಾತಿಗೆ ಬೆಲೆ ಕೊಡದೆ  ಕಲಹಗಳಾಗುವ ಸಂಭವವೇ ಹೆಚ್ಚು,  ಆದುದರಿಂದ ಒಂದು ಸಂಖ್ಯೆಯವರು ಪುನಃ ಒಂದು ಸಂಖ್ಯೆಯವರನ್ನು ವಿವಾಹವಾಗಬಾರದೆಂದು ಈ ಶಾಸ್ತ್ರವು ವಿಚಾರಪೂರ್ವಕವಾಗಿ ಎಚ್ಚರಿಸುತ್ತದೆ.
       ಆರ್ಥಿಕ ಪರಿಸ್ಥಿತಿ  :---
         ಇವರ ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿರುವುದಿಲ್ಲ,  ಯಾವಾಗಲೂ ಹಣಕ್ಕಾಗಿ ಕಷ್ಟಪಟ್ಟು ತಮ್ಮ ಕೊರತೆಗಳನ್ನು ನೀಗಿ   ಅವಶ್ಯಕತೆಗಳನ್ನು   ಪೂರ್ತಿ ಮಾಡಿಕೊಳ್ಳಲಾರದೆ ಪರಿತಪಿಸುವ   ಪರಿಸ್ಥಿತಿಯು ಒದಗಿ ಬರುವುದು.  ಸಮಯಕ್ಕೆ ಸಹಾಯವಾಗುವಂತೆ ಇವರ ಬಳಿ ಕೂಡಿಟ್ಟ ಹಣವು ಇರಲಾರದು  ,  ಹಣವನ್ನು ಅಡ್ಡಾದಿಡ್ಡಿ ಖರ್ಚು ಮಾಡುತ್ತಾರೆ,  ಆಡಂಬರ ಜೀವನ ನಡೆಸಲು ಸಾಕಾಗುವಷ್ಟು ಸಂಪಾದನೆ ಇರುತ್ತದೆ,  ಕೆಲವು ಸಲ ಹಣ ಹೊಂದಿಸಲು ಕಷ್ಟ ಪಡಬೇಕಾಗುತ್ತದೆ,  ಉಳಿತಾಯ ಮಾಡಲಾರರು,ಆದರೆ ಇವರ ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿ ಇರದಿದ್ದರೂ ಇವರ  ವ್ಯಕ್ತಿತ್ವ ನಡತೆಯಿಂದ ಇವರು ಧನವಂತರಂತೆಯೇ ಕಾಣುತ್ತಾರೆ,  ದೈವಾನುಗ್ರಹವಿರುತ್ತದೆ, .ಜೀವನದ ಉತ್ತರಾರ್ಧದಲ್ಲಿ  ಇವರು ಒಂದು ರೀತಿಯಲ್ಲಿ ಸುಖಮಯವಾದ  ಜೀವನವನ್ನು ನಡೆಸುವರು, ಅಂದರೆ ಸುಮಾರು ೪೦ ವರ್ಷಗಳ ನಂತರ ಇವರ ಉದ್ಯೋಗದಲ್ಲಿ ,ವ್ಯಾಪಾರದಲ್ಲಿ ಸ್ಥಿರವಾಗಿ ನಿಂತು ಜೀವನವು ಸುಗಮವಾಗಿ ಸಾಗುವುದು,  ಅಲ್ಲಿಯವರೆವಿಗೂ  ಆರ್ಥಿಕ  ಸಂಕಷ್ಟ ವಿರುತ್ತದೆ.
        ದೇಹಾರೋಗ್ಯ :---
          ಒಂದು ಸಂಖ್ಯೆಯುಳ್ಲವರು ಆಹಾರದ ವಿಷಯದಲ್ಲಿ ಮುಂಜಾಗ್ರತೆ ಉಳ್ಳವರಾಗಿರುತ್ತಾರೆ, ಆದುದರಿಂದ ಇವರಿಗೆ ಹೊಟ್ಟೆನೋವು ಮೊದಲಾದ ಕಾಯಿಲೆಯು ಬರುವುದಿಲ್ಲ.ಆದರೂ ಕೂಡ ಇವರುಗಳಿಗೆ ಹಲವುವೇಳೆ ಹೃದಯ ವೇದನೆಯಿಂದ ನರಳುವರು, ಇವರು ಮಾನಸಿಕ ವಾಗಿ    ಬಲಾಢ್ಯರಾದರೂ,  ಕ್ರಮೇಣ  ನರಗಳು ಬಲಹೀನವಾಗಿ ಮಾನಸಿಕ ಉದ್ವೇಗ ಪಡುತ್ತಾರೆ.
ಸಾಮಾನ್ಯವಾಗಿ ಇವರಿಗೆ ಹೃದಯ ಮತ್ತು  ರಕ್ತ ಸಂಬಂಧಿ  ಕಾಯಿಲೆಗಳು ಬರುವ  ಸಾಧ್ಯತೆ ಗಳು  ಜಾಸ್ತಿ,  ರಕ್ತ ಶುದ್ಧೀಕರಣ ಮತ್ತು ರಕ್ತ ಸಂಚಾರ ದ  ವಿಷಯದಲ್ಲಿ  ಎಚ್ಚರಿಕೆ ವಹಿಸಬೇಕು, ಅಲ್ಲದೆ  ವಾತ, ಪಿತ್ತ, ಶ್ಲೇಷ್ಮ  ಎಂಬ ತ್ರಿಧಾತುಗಳಲ್ಲಿ  ಪಿತ್ತಕ್ಕೆ ಸಂಬಂಧಪಟ್ಟ  ರೋಗಗಳು, ಉಷ್ಣಪ್ರಕೋಪವೂ ಇವರಿಗೆ  ಆಗಾಗ  ತಲೆದೋರುತ್ತದೆ. ಈ ಒಂದನೇ ಸಂಖ್ಯೆಯವರಿಗೆ  ದೃಷ್ಟಿದೋಷವೂ ಇರಬಹುದುದಾದರಿಂದ  ಬಹುಮಂದಿ ಸಣ್ಣವಯಸ್ಸಿನಲ್ಲೇ  ಕನ್ನಡಕಗಳನ್ನು ಹಾಕಿಕೊಳ್ಳಬೇಕಾದ  ಸಮಯ .ಬರಬಹುದು.
     ಉದ್ಯೋಗ ಮತ್ತು ವ್ಯಾಪಾರ :---
        ಒಂದನೇ  ಸಂಖ್ಯೆಯುಳ್ಳವರು ಉದ್ಯೋಗದಲ್ಲಿದ್ದರೆ ಆಫೀಸು ಮೇನೇಜರ್ ಅಥವ  ಐ ಎ ಎಸ್ ನಂತಹ ದೊಡ್ಡ ಅಧಿಕಾರಿಯಾಗಿಯೋ ಧಾರ್ಮಿಕ ಸಂಸ್ಥೆಗಳಲ್ಲಿ ಟ್ರಸ್ಟಿಗಳಾಗಿಯೋ ದೊಡ್ಡ ಅಧಿಕಾರವುಳ್ಳ ಒಂದು ಪದವಿಯಲ್ಲಿದ್ದು ಅದನ್ನು ಚೆನ್ನಾಗಿ ನಿರ್ವಹಿಸುವವರಾಗಿ ಇರುವರು.ಇವರು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸರಕಾರದ ಉದ್ಯೋಗದಲ್ಲಿಯೋ ಅಥವ ಸರಕಾರದೊಂದಿಗೆ ನಿಕಟಸಂಬಂಧವನ್ನು ಇಟ್ಟುಕೊಂಡಿರುವ ಉದ್ಯೋಗದಲ್ಲಿಯೋ ಇರುತ್ತಾರೆ. ಸಾಮಾಜಿಕ ಕೇಂದ್ರ,  ಸಹಕಾರ ಸಂಸ್ಥೆ ಗಳು,  ಸಂಘ ಸಂಸ್ಥೆಗಳು , ಧಾರ್ಮಿಕ  ಕೇಂದ್ರಗಳಲ್ಲಿ,  ವಿದೇಶ ಸಂಬಂಧವಾದ  ಆಮಧ್ಯ ರಫ್ತು,  ಒಳಾಂಗಣ ವಿನ್ಯಾಸ ಗಳಲ್ಲೂ,  ಸಂಶೋಧನೆ ಗಳು,  ಮುಂದಾಳತ್ವ ವಿರುವ  ಇಲಾಖೆಯ ಲ್ಲಿ  ಉನ್ನತ ಸ್ಥಾನ,  ವೈದ್ಯಕೀಯ ವೃತ್ತಿ ( ಸರ್ಜನ್ )  ಆಗಿ,  ವಿದ್ಯುತ್ ಸಂಬಂಧ ಪಟ್ಟ ವೃತ್ತಿ ಯಲ್ಲೂ  ಮುಂದೆ ಬರುತ್ತಾರೆ.
          ಸೂರ್ಯನ ಕಾಲ(ಸಮಯ) ಮಾರ್ಚ್ 21 ರಿಂದ ಏಪ್ರಿಲ್ 21 ನೇ ತಾರೀಖು, ಆ ನಂತರ ಜುಲೈ ೨೨ರಿಂದ ಆಗಸ್ಟ್ ೨೨ ವರೆಗಿನ  ಒಂದುತಿಂಗಳು  ಕಾಲವು ಸೂರ್ಯನಿಗೆ  ಸಂಬಂಧಪಟ್ಟ  ಕಾಲವು.  ಒಂದನೇ ಸಂಖ್ಯೆಯುವರು ಈ ಒಂದು ತಿಂಗಳ ಅವಧಿಯಲ್ಲಿ ಜನಿಸಿದವರಾಗಿದ್ದರೆ ಬಹಳ ಅದೃಷ್ಟಶಾಲಿಗಳಾಗಿ ಇರುತ್ತಾರೆ.  ಭಾನುವಾರವು  ಸೂರ್ಯನಿಗೆ ಸಂಬಂಧಪಟ್ಟದ್ದು,   ಕಾಲ ಪರಿಮಾಣದಲ್ಲಿ  ಆರುತಿಂಗಳ  ಕಾಲವು ಸೂರ್ಯನಿಗೆ ಸೇರಿದೆ. ಸೂರ್ಯನು  ಹಗಲಲ್ಲಿ ಶಕ್ತಿವಂತನಾಗಿರುತ್ತಾನೆ.  ಈ ವಿಷಯಗಳನ್ನು  ಒಂದನೆ ಸಂಖ್ಯೆಯುಳ್ಳವರಿಗೆ ಅನ್ವಯಿಸಿಕೊಳ್ಳಬೇಕು.
      ಸೂರ್ಯನ ದಿಕ್ಕು ಮತ್ತು ಪ್ರದೇಶ :---
       ಸೂರ್ಯನ ದಿಕ್ಕುಪೂರ್ವ, ಪ್ರಾರ್ಥನಾ ಮಂದಿರ, ದೇವಸ್ಥಾನ  ಸೂರ್ಯನಿಗೆ ಸಂಬಂಧಪಟ್ಟ ಪ್ರದೇಶಗಳು. ಯಾವ ಕಾರ್ಯವನ್ನೂ ಯಾವ ಪ್ರಯಾಣವನ್ನೂ  ಕೈಗೊಳ್ಳಬೇಕಾದರೂ ಪೂರ್ವಾಭಿಮುಖವಾಗಿ  ಆರಂಭಿಸುವುದು ಉತ್ತಮ, ಕಾರ್ಯಾಲಯಗಳಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವುದರಿಂದ ಅಭಿವೃದ್ಧಿ ಯುಂಟಾಗುವುದು.
       ಅದೃಷ್ಟ ರತ್ನಗಳು :---
     ಸೂರ್ಯಗಹದ  ಅನುಗ್ರಹ  ಪಡೆಯಲು ಅಂದರೆ ಸೂರ್ಯ ಪ್ರೀತ್ಯರ್ಥವಾಗಿ ಮಾಣಿಕ್ಯ ರತ್ನವನ್ನು ಧರಿಸಿಕೊಳ್ಳಬೇಕು. ಮಾಣಿಕ್ಯವನ್ನು ಉಂಗುರದಲ್ಲಿ  ಆಗಲಿ ಸರದಲ್ಲಾಗಲಿ ಇಟ್ಟು ಧರಿಸುವುದರಿಂದ ಇಚ್ಚಿಸಿದ ಎಲ್ಲಾ ಕಾರ್ಯಗಳು ನೆರೆವೇರುವುದು ಮತ್ತು  ಆರೋಗ್ಯ  ಉತ್ತಮವಾಗುವುದು, ತಾಮ್ರ ಲೋಹವು ಸೂರ್ಯನಿಗೆ ಸಂಬಂಧಪಟ್ಟ ಲೋಹವಾಗಿದೆ.
ಅದೃಷ್ಟದ ವರ್ಣ(ಬಣ್ಣ) :---
         ಬೆಳಗಿನ  ಸೂರ್ಯನ ಕಾಂತಿಯಂತೆ ಹಳದಿ, ಕೆಂಪು ಮಿಶ್ರವಾದ ವರ್ಣವೇ ಸೂರ್ಯಗ್ರಹದ ವರ್ಣವು.ಆದುದರಿಂದ ಈ ಬಣ್ಣದ ವಸ್ತ್ರಾಭರಣಗಳನ್ನು ಧರಿಸಿದರೆ ಕಾರ್ಯದಲ್ಲಿ ಜಯವಾಗುವುದು.
    ಅನುಕೂಲ ದಿನಾಂಕಗಳು :----
     ಒಂದನೇ  ಸಂಖ್ಯೆಯವರಿಗೆ ಎಲ್ಲಾ ತಿಂಗಳಲ್ಲಿಯೂ ೧,೪,೧೦.೧೯.೨೨,೨೮(೧,೪) ಈ ದಿನಾಂಕಗಳು ಬಹಳ ಅನುಕೂಲಕರವಾಗಿರುವುವು. ಯಾವುದೇ ಕಾರ್ಯ ಆರಂಭಿಸಲು ಈ ದಿನಾಂಕಗಳು ಸೂಕ್ತ.
ಅನಾನುಕೂಲ ದಿನಾಂಕಗಳು:---
          ಎಲ್ಲ ತಿಂಗಳಲ್ಲಿನ ೮,೧೭,೨೬ ಈ ದಿನಾಂಕಗಳು ಅನಾನುಕೂಲವಾದವು.(೮) ಸಂಖ್ಯೆಯು ಅನಾನುಕೂಲ ವಾಗಿರುತ್ತದೆ ಆದುದರಿಂದ ಈ ದಿನಾಂಕದಲ್ಲಿ ಯಾವುದೇ ಶುಭಕಾರ್ಯಾರಂಭಮಾಡಬಾರದು.
      ಗ್ರಹಪ್ರೀತಿ :---
      
         ಒಂದನೆ ಸಂಖ್ಯೆಯವರಿಗೆ ಸೂರ್ಯ ಆರಾಧ್ಯ ದೈವ,  ಪ್ರತಿದಿನ  ಸೂರ್ಯೋದಯ ದ ದರ್ಶನ,  ಮತ್ತು  ಸೂರ್ಯ ನಮಸ್ಕಾರ ಮಾಡಬೇಕು,  ಸೂರ್ಯ ಗ್ರಹ  ತೃಪ್ತಿಗಾಗಿ ಆದಿತ್ಯ ಹೃದಯ ಸ್ತೋತ್ರ ಪಾರಾಯಣವನ್ನು ಮಾಡಬೇಕು. ಅದರಿಂದ ಆರೋಗ್ಯಭಾಗ್ಯವೂ ಇಷ್ಟಾರ್ಥ ಸಿದ್ದಿಯು ಉಂಟಾಗುತ್ತದೆ.
          ಒಂದನೇ ಸಂಖ್ಯೆಯವರಿಗೆ  ತೊಂದರೆ ಯಾದಾಗ, ಮನಸ್ಸು  ಸರಿಯಿಲ್ಲದಾಗ " ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ "   ಈ ಮಂತ್ರ ಪಠಣೆ ಮಾಡಿದಾಗ  ಶೀಘ್ರ ಶುಭಫಲ ದೊರೆಯುತ್ತದೆ.
ಶಿವನ ದೇವಸ್ಥಾನ ಸಂದರ್ಶನ,  ಗೋಧಿ ದಾನ ಇವುಗಳೂ ಉತ್ತಮ ಫಲ ನೀಡುತ್ತವೆ.
   ✍  ಡಾ :  B. N.  ಶೈಲಜಾ ರಮೇಶ್

Tuesday, 19 July 2022

---: ಶನಿ ಗ್ರಹ :---

---:  ಶನಿ  ಗ್ರಹ  :---
ಓಂ  ಶ್ರೀ ಗಣೇಶಾಯನಮಃ
ಓಂ  ಶ್ರೀ  ಗುರುಭ್ಯೋ ನಮಃ

--:  ಶನಿ  ಗ್ರಹ  :--

Picture source: Internet/ social media

     "  ಮಂದೋ  ಮುದ0  ಸರ್ವದಾ "   ಎಂಬಂತೆ   ಶನಿಯು  ಸರ್ವಕಾಲದಲ್ಲಿಯೂ  ಪ್ರೀತಿಯನ್ನು ಹೊಂದಿದ್ದು  ಧೀರ್ಘಆಯುಷ್ಯವನ್ನು   ನೀಡಿದರೆ  ಭೋಗಭಾಗ್ಯಗಳನ್ನು  ಹೊಂದಲು  ಸಾಧ್ಯ, ಆದುದರಿಂದ  ಆಯುರ್ದಾಯಕ್ಕೆ  ಕಾರಣ  ಶನಿಯು.

     ವಿಭವ   ಸಂವತ್ಸರದ  ಮಾಘಮಾಸ  ಕೃಷ್ಣಪಕ್ಷದ  ಚತುರ್ದಶಿ  ಜನನ. (  ಕೆಲವರ ಪ್ರಕಾರ ವೈಶಾಖ ಕೃಷ್ಣ  ಚತುರ್ದಶಿ ) .   ಜನ್ಮ ನಕ್ಷತ್ರ  --  ಧನಿಷ್ಠ,   ಗೋತ್ರ  --  ಕಾಶ್ಯಪ,  ಶರೀರ --  ಗಾಢ  ನೀಲವರ್ಣ, ಹಸ್ತಸಂಖ್ಯೆ  -- 8 , ಗ್ರಹಮಂಡಲದಲ್ಲಿ ಪಶ್ಚಿಮ  ಸ್ಥಾನ,  ಧಾನ್ಯ  --  ತಿಲ ( ಕರಿ ಎಳ್ಳು ) ,  ವಸ್ತ್ರ  --  ನೀಲ ( ಕಪ್ಪು ),  ರತ್ನ. --  ನೀಲಮಣಿ,  ಆಯುಧಗಳು --  ಶೂಲ,  ಛಾಪ, ಬಾಣ, ನರಗಳು,   ನೀಲರಥ, ಧನುರಾಕಾರ ಮಂಡಲ,  ಪತ್ನಿಯರು  -- ಜೇಷ್ಠ  ಮತ್ತು  ನೀಲದೇವಿ,  ವಾಹನ  --ನೀಲ ಗೃದ್ರ, ಅಧಿದೇವತೆ  --  ಯಮ,  ಅಭಿಮಾನದೇವತೆ  --  ತ್ರಿಮೂರ್ತಿಗಳು,  ಸೌರಾಷ್ಟ್ರಕ್ಕೆ  ಅಧಿಪತಿ, ಕರ್ಮಕಾರಕ,  ದುಃಖಕಾರಕ,  ಆಯುಷ್ಯಕಾರಕ,  ನಾಶಕಾರಕ,  ಮೃತ್ಯ ಕಾರಕ,  ಸೇವಕನು , ಪಾಪಗ್ರಹ,  ಮಂದಗ್ರಹ,  ಪಕ್ಷಿಗ್ರಹ,  ನಪುಂಸಕಗ್ರಹ,  ಅಂತ್ಯಜ,  ಕೃಷವಾದ ಶರೀರ,  ಬೆಕ್ಕಿನಂತೆ ವಿಶಾಲವಾದ  ಹಳದಿಬಣ್ಣದ  ಕಣ್ಣುಗಳು ,  ಕಪ್ಪುಬಣ್ಣ,  ಒರಟಾದ  ರೋಮ,  ಅಗಲವಾದ, ದೊಡ್ಡದಾದ  ಹಲ್ಲುಗಳು,  ದಪ್ಪ ಚರ್ಮ,  ಸೋಲು,  ಅಪಜಯ,  ಅಪಾರ್ಥ ಮಾಡಿಕೊಳ್ಳುವವನು, ಕ್ರೂರದೃಷ್ಟಿ,  ಜಿಪುನತನ,  ಸಾವು,  ಆಲಸ್ಯ,  ವಾತರೋಗ, ಮೂರ್ಖತೆ,  ಅಂಗವಿಕಲತೆ,  ಅನಾಚಾರ, ಬಹುಕಾಲ  ಬದುಕುವವನು,  ಶಿಶಿರಋತು ವಿಗೆ  ಅಧಿಪತಿ,  ಮೋಸಗಾರ,  ಅಧಿಕಕೋಪ,  ಸ್ನಾಯು ಮಾಂಸಖಂಡಗಳಿಗೆ  ಅಧಿಪತಿ,  ವಾಸ  --  ಪರ್ವತ  ಗುಡ್ಡ ಪ್ರದೇಶ,  ಕಸದರಾಶಿ,  ಹರಿದಬಟ್ಟೆ,  ಧಾತು --  ಕಬ್ಬಿಣ,   ಎತ್ತರವಾದ  ತೆಳುದೇಹ ,  ವೃದ್ದನು,   ವಾಯು ಮತ್ತು  ಭೂತತ್ವದ  ಗ್ರಹನು,                     ದೀರ್ಘವಾದ  ಕಾಯಿಲೆ,  ಶ್ರಮದಿಂದ  ಸಂಪಾದನೆ,  ಧರ್ಮಶಾಸ್ತ್ರದಲ್ಲಿ  ಆಸಕ್ತಿ,  ಶತ್ರುಭಯ, ಪ್ರರಬ್ಧಕರ್ಮದ  ಪ್ರಕಾರ  ಫಲಕೊಡುತ್ತಾನೆ,   ಅನುಮಾನ,  ಎಲ್ಲಾಕೆಲಸದಲ್ಲೂ  ನಿಧಾನ ಪ್ರಗತಿ,ವಿಪರೀತವಾದ  ಖರ್ಚು,  ತಮೋಗುಣವುಳ್ಳ ಗ್ರಹ,  ಶೂದ್ರಜಾತಿ,  ರುಚಿ  --  ಎಣ್ಣೆಯಲ್ಲಿ  ಕರಿದ ಪದಾರ್ಥಗಳು  ಇಷ್ಟ,  ಒಗರು ಪದಾರ್ಥಗಳು, ಸ್ಮಶಾನ,  ವೈದ್ಯಶಾಸ್ತ್ರ,  ಜೀವಶಾಸ್ತ್ರ,  ರಸಾಯನ ಶಾಸ್ತ್ರ, ವಾಹನ ಬಿಡಿಭಾಗ, ಗಣಿಕೆಲಸ, ಭೂಗರ್ಭಶಾಸ್ತ್ರ, ಇವೆಲ್ಲವೂ ಶನಿಯ ಕಾರಕತ್ವಕ್ಕೊಳಪಡುತ್ತದೆ, ಅವಸಾನ,ಪತಿತನಾಗುವುದು, ಸೆರೆವಾಸ, "ದುಃಖೋಮಾರ್ಥಾ0ಡಾತ್ಮಜಹ" ಎನ್ನುವಂತೆ ತಾನು ದುಃಖವನ್ನು ಅನುಭವಿಸಿ ಪ್ರಪಂಚಕ್ಕೆ ಸುಖವನ್ನುಂಟುಮಾಡುವ  ಶ್ರಮಜೀವಿಗಳು, ಮಂದನಾದ್ದರಿಂದ ಜೀವಿತಾಂತ್ಯದಲ್ಲಿ  ಬರುವ  ಸುಖ ಸಂಪತ್ತು,  ಭಯ  ದುಃಖ  ಅವಮಾನ,  ಅನಾರೋಗ್ಯ,  ದಾರಿದ್ರ್ಯ,  ಸೇವಕ,  ಅಪವಾದಗಳು,  ನಿಂದೆ ಕಷ್ಟಗಳು,  ನೀಚಜನರ  ಸಹವಾಸ,  ಕಪ್ಪುಬಣ್ಣ,  ಸೋಂಬೇರಿತನ,  ಕೃಷಿ ಸಾಧನಗಳು, ಜೈಲುವಾಸ, ಮೊಂಡುತನ,  ವಾತವ್ಯಾಧಿ,  ನಿರಾಶೆ,  ಜೂಜಾಡುವುದು,  ನೀಚಸ್ತ್ರೀಯರ  ಸಹವಾಸ,   ಕೆಳಮಟ್ಟದ ಮೋಜುಮಸ್ತಿ,  ಉದ್ಯೋಗ,  ಜೀವನಮಾರ್ಗ,  ಶ್ರಮ,  ತಾಮಸಪ್ರವೃತ್ತಿ,  ಸಹನೆ  ಆಧ್ಯಾತ್ಮಿಕತೆ, ಧಾರ್ಮಿಕಭಾವ,  ನಾಸ್ತಿಕತೆ,  ಹಲ್ಲುಗಳು,  ಕರ್ಮಕ್ಕೆ  ತಕ್ಕ  ಪ್ರತಿಫಲ  ದೊರೆಯದಿರುವುದು, ಕೃಶವಾದ ಶರೀರ,  ಉಬ್ಬಿದನರಗಳು,  ಎತ್ತರವಾದ  ದೇಹ,  ಉಬ್ಬಿದಹಲ್ಲು,  ಒರಟಾದ  ಉಗುರು,  ಆಲಸ್ಯವಂತ, ನೀಲಿಮಿಶ್ರಿತ ಕಪ್ಪುಬಣ್ಣ, ನಿರ್ದಯಿ, ಮೂರ್ಖ,  " ಶನೈ ಶ್ಚರ " ಹೆಸರೇ ಸೂಚಿಸುವಂತೆ ನಿಧಾನಗತಿಯ  ಚಲನೆ ( ಸಂಸ್ಕೃತದಲ್ಲಿ  " ಶನೈ: " ಎಂದರೆ  ನಿಧಾನವೆಂದರ್ಥ ) ,  ಶನಿಯ  ಚಲನೆ ನಿಧಾನ ಗತಿಯಾದ್ದರಿಂದ ಕೆಲವರು ಇವನನ್ನು ಕುಂಟ ಎಂದಿದ್ದಾರೆ, ಕಲುಷಿತ  ಪ್ರದೇಶ, ಶ್ರಮಜೀವಿಗಳು ಕೆಲಸ ಮಾಡುವ ಜಾಗ, ಶಾಸ್ತಾದೇವತೆಯ ಮಂದಿರ, ಪಶ್ಚಿಮ ದಿಕ್ಕು ಶನಿಯ ಸಂಚಾರ ಸ್ಥಾನವಾಗಿದೆ.

---:  ಪುರಾಣದಲ್ಲಿ  ಶನಿಗ್ರಹ  :---


Picture source: Internet/ social media

   ಕಪ್ಪು  ಎನಿಸಿದ  ಕಡುನೀಲಿ ಬಣ್ಣದ  ಶರೀರ,  ಗುಳಿಬಿದ್ದ  ಕಣ್ಣುಗಳು,  ಚಾಡಿಹೇಳಿ  ಜಗಳ ಹುಟ್ಟಿಸುವ  ಸ್ವಭಾವ,  ಕೋಲುದೇಹ,  ಆಲಸ್ಯ,  ಮೂರ್ಖತೆ  ದೊಡ್ಡ  ಉಗುರು --  ಹಲ್ಲುಗಳು, ರೋಮ  ಮುಚ್ಚಿದ  ಶರೀರ,  ತಾಮಸ  ಪ್ರಕೃತಿ,  ಅತಿಕೋಪ,  ಮುಪ್ಪು,  ಅತಿನೀಲಿ ಬಣ್ಣದ ಉಡುಗೆಗಳು,  ನಾಲ್ಕು ಕೈಗಳಲ್ಲಿ --  ಬಿಲ್ಲು  ಚರ್ಮ  ಬಾಣ  ಶೂಲಗಳನ್ನು  ಧರಿಸಿದ  ಗೃದ್ರವಾಹನ , ಇಂದ್ರನೀಲದಂತೆ  ಮೈಕಾಂತಿ  ಹೊಂದಿದ  ಈತನ  ಚಲನೆ ನಿಧಾನ  ( ಮಂದ ಗತಿಯ  ಚಲನೆ ),  ಇವು ಶಾಸ್ತ್ರಜ್ಞರು  ಶನಿಯನ್ನು  ಕಂಡ ರೀತಿ.

    ಮಂದಗತಿಯ  ಚಲನೆಆದ್ದರಿಂದ ,  ಮಂದ,  ಸ್ಥಿರ,  ಶನೈಶ್ಚರ,  ರವಿಸುತ,  ಸೂರ್ಯಪುತ್ರ  ಇವು ಈತನ  ಪ್ರಸಿದ್ಧ  ನಾಮಗಳು.  ಈತ  ಗ್ರಹಗಳಲ್ಲಿ  ತೀಕ್ಷ್ಣಗ್ರಹ,  ಸ್ವಾಭಿಮಾನಿ.

  ಸೂರ್ಯನಿಗೆ  ಛಾಯಾದೇವಿಯಲ್ಲಿ ಹುಟ್ಟಿದ  ಎರಡನೇ  ಮಗನೇ  ಶನೈಶ್ಚರ,  ಅಣ್ಣ ಸಾವರ್ಣಿಮನು, ತಂಗಿ  ತಪತಿ.

  ಬ್ರಹ್ಮಮಾನಸ  ಪುತ್ರನಾದ  ತ್ವಷ್ಣ  ತನ್ನ ಪುತ್ರಿಯಾದ  ಸಂಜ್ಞಾ  ( ಸಂಧ್ಯಾ)   ದೇವಿಯನ್ನು ಸೂರ್ಯನಿಗೆ  ಕೊಟ್ಟು  ಮದುವೆ ಮಾಡಿದ  ನಂತರ  ಅವರಿಗೆ   ವೈವಸ್ವತ  ಮನು,  ಯಮ  ಹಾಗೂ ಯಮುನೆಗೆ ಜನ್ಮನೀಡಿದರು,  ಕಾಲಕ್ರಮೇಣ  ಸೂರ್ಯನ  ಆ  ಮಹಾಪ್ರಭೆಯನ್ನು  ತಾಳಲಾರದೆ, ಸಂಧ್ಯಾ ತನ್ನದೇ  ಆದ  ಛಾಯಾರೂಪಕ್ಕೆ  ಜೀವನೀಡಿ   ತಂದೆ  ಮನೆಗೆ  ಹೊರಟು ಹೋದಳು,   ಮತ್ತೆ ಸೂರ್ಯಾ ಮತ್ತು  ಛಾಯಾದೇವಿಗೆ ಇಬ್ಬರು ಗಂಡು ಮಕ್ಕಳು,   ಅವರೇ  ಸಾವರ್ಣಿ  ಮತ್ತು  ಶನೈಶ್ಚರ ಮತ್ತು  ತಂಗಿ  ತಪತಿ.   ಶ್ರೇಷ್ಠಯೋಗ, ತಪಸ್ಸಿನಿಂದ  ಮಹಾಜ್ಞಾನಿಯಾಗಿ  ದೇಹವನ್ನು  ದಂಡಿಸಿ ನಿರ್ಮಾಮ್ಸ  ದೇಹ  ಹೊಂದಿದನು.

     ಶನೈಶ್ಚರ  ಸ್ವಾಮಿಯ  ಹೆಸರು  ಕೇಳುತ್ತಿದ್ದಂತೆ  ಪ್ರತಿಯೊಬ್ಬರು  ಒಂದು ಕ್ಷಣ  ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾರೆ,  ಕಾರಣ......  ದೇವಾದಿದೇವತೆಗಳೇ  ಈತನ  ಆರ್ಭಟಕ್ಕೆ  ದಂಗಾಗಿ ಹೋಗಿದ್ದಾರೆ, ಕಾರಣ......  ಶ್ರೀಚಕ್ರದೇವತೆಯೂ ಶನಿಗೆ  ಅಂತಹ  ಅಧಿಕಾರ  ನೀಡಿದ್ದಾರೆ,  ಶನಿಯು ಕರ್ಮಕಾರಕ ಗ್ರಹ,  ಈತನ  ಪತ್ನಿಯು  ಜೇಸ್ಟಾದೇವಿಯಾಗಿದ್ದು  ಈಕೆ ಚಿತ್ರರಥನ  ಮಗಳು,  ಒಂದು ಸಲ  ಈಕೆ ಪುತ್ರಾಕಾಂಕ್ಷಿಯಾಗಿ  ಶನಿದೇವನ  ಬಳಿಗೆ  ಬರಲು,  ಧ್ಯಾನಸ್ತನಾಗಿ  ಕುಳಿತಿದ್ದನ್ನು  ಕಂಡು ಬೇಸರಗೊಂಡು,  ಭವಿಷ್ಯದಲ್ಲಿ  ನಿನ್ನದೃಷ್ಟಿಯು  ಕೆಳಮುಖವಾಗಲಿ ನಿನ್ನ ದೃಷ್ಟಿಯಿಂದ ನಾನಾಬಗೆಯ  ತೊಂದರೆಗಳುಂಟಾಗಲಿ  ಎಂದು  ಶಾಪವನ್ನಿಟ್ಟಳು,  ಪತ್ನಿ ಕೋಪದ  ಶಾಪವೇ ಶನಿಯ  ದೃಷ್ಟಿಯಿಂದುಂಟಾಗುವ  ಪರಿಣಾಮಗಳಿಗೆ  ಕಾರಣ.

     ಶನಿಯ  ಅದ್ವಿತೀಯ  ಶಕ್ತಿಗೆ  ಸಮಸ್ತ  ದೈವಶಕ್ತಿಗಳೇ  ಕಂಪಿಸತೊಡಗುತ್ತವೆ  ಆದ್ದರಿಂದ  ಈಶ್ವರನು ಶನಿಯನ್ನು  ತನ್ನ  ಸ್ವಾಧೀನದಲ್ಲಿಟ್ಟುಕೊಂಡು  ಅವರವರ  ಕರ್ಮಗಳಿಗೆ ಅನುಸಾರವಾಗಿ  ಶಿಕ್ಷೆ ನೀಡಲು  ಮಾತ್ರ  ಅಧಿಕಾರ  ನೀಡಿದ್ದಾರೆ,  ಶನಿಯು  ಇತರ ಗ್ರಹಗಳ  ಮೇಲೂ  ಆಕ್ರಮಣ  ಮಾಡಲು ಮುಂದಾದಾಗ ,  ಸೂರ್ಯನಿಗೆ  ಮಗನ  ಈ  ಚಿಂತನೆ  ಒಪ್ಪಿಗೆ  ಆಗದೆ  ಹಲವು ಬಾರಿ  ಬುದ್ದಿ   ಹೇಳಿದರು  ಕೇಳದೆ  ಇದ್ದಾಗ  ಸೂರ್ಯನು  ಈಶ್ವರನ  ಮೊರೆ ಹೋಗಿ  ವಿಷಯ  ತಿಳಿಸಲು , ಈಶ್ವರನು ಶನಿಗೆ  ಎಚ್ಚಸಿದರು ,  ಆತನು  ನಿರ್ಲಕ್ಷಿಸಲು  ಅವರಿಬ್ಬರ  ಮಧ್ಯ  ಯುದ್ಧವಾಯಿತು,  ಶನಿಯು ಶಿವಗಣಗಳನ್ನು  ಹಿಂಸೆಮಾಡತೊಡಗಿದಾಗ  ಸಿಟ್ಟಿನಿಂದ  ಶಿವ  ತನ್ನ  ಮೂರನೇ  ಕಣ್ಣನ್ನು  ತೆರೆದ, ಶನಿಯೂ  ಕೂಡ  ಅದಕ್ಕೆ  ಸಮನಾದ  ಕ್ರೂರದೃಷ್ಟಿ ಬೀರಿ ನಿಂತ,  ಆಗ  ಶಿವನು  ತನ್ನ  ತ್ರಿಶೂಲದಿಂದ ಶನಿದೇವನ  ಮೇಲೆ  ಹರಿಹಾಯಲಾಗಿ  ಶನಿಯು  ಅದೃಶ್ಯನಾದ,  ಆಗ  ಮಗನ  ಈ  ವ್ಯಥೆಯನ್ನು ನೋಡಲಾರದೆ  ಸೂರ್ಯನು  ಮಗನ  ಪರವಾಗಿ ಶಿವನಲ್ಲಿ  ರಕ್ಷಣೆ  ಕೋರಿ  ಯಾಚಿಸಿದನು, ಕರುಣಾಮಯಿಯಾದ  ಶಿವ  ಕ್ಷಮೆಯನ್ನು  ನೀಡಿದನು,  ಶಿವನ  ಸರ್ವಾಧಿಕಾರವನ್ನು  ಶನಿದೇವನು ಒಪ್ಪಿಕೊಂಡಿದ್ದರಿಂದ  ಶಿವನು  ತನ್ನ  ದಂಡಾದಿಕಾರಿ ಪದವಿಯನ್ನು  ಶನಿದೇವನಿಗೆ  ನೀಡಿದ  ಕಾರಣ ಶನಿಯು   "ಶನೇಶ್ವರ" ನಾದ.

     ಶನಿಯ ಚಲನೆ  ನಿಧಾನ ಗತಿಯಾದ್ದರಿಂದ, ಶನಿಯನ್ನು  ಮಂದ, ಕುಂಟು  ಎನ್ನಲಾಗುತ್ತದೆ.  ಬ್ರಹ್ಮ ವೈವರ್ತ  ಪುರಾಣದ  ಪ್ರಕಾರ  ಪಾರ್ವತಿಯ  ಅಂಶದಿಂದ  ಸುಂದರವಾದ  ಮಗು  ಗಣೇಶನು ಹುಟ್ಟಿದ ನಂತರ  ಸಮಸ್ತ  ದೇವತೆಗಳು  ನವಗ್ರಹರು  ಬಂದರು,  ಎಲ್ಲರೂ  ಮಗುವನ್ನು  ನೋಡಿ  ಹಾಡಿ ಹೊಗಳುತ್ತಿದ್ದರೂ  ಶನಿಯು  ಮಾತ್ರ  ಮಗುವನ್ನು  ನೋಡಲಿಲ್ಲ,  ಆಗ  ಮಗುವನ್ನು  ನೋಡು ಎಂದು  ಹೇಳಲಾಗಿ ,  ಶನಿಯು  ತನ್ನ  ವಕ್ರ  ದೃಷ್ಟಿಯಿಂದ   ಮಗುವನ್ನು  ನೋಡಿದ  ತಕ್ಷಣ ಮಗುವಿನ  ತಲೆ  ಹೋಗಿ  ಅಂಗಹೀನವಾಯ್ತು,  ಕೋಪಗೊಂಡ  ಪಾರ್ವತಿಯು ಅಂಗಹೀನನಾಗೆಂದು ಶನಿಯನ್ನು  ಶಪಿಸಲು,  ಶನಿಯು  ಕುಂಟನಾದ.

    ಶನಿಯು  ಹೆಚ್ಚಾಗಿ  ಕೆಟ್ಟದ್ದನ್ನು  ಪ್ರಚೋದಿಸುತ್ತಾನೆ,  ಅಂತೆಯೇ  ವಿನಾಕಾರಣ  ತೊಂದರೆಗೆ ಸಿಲುಕಿಸುತ್ತಾನೆ,  ಮನಸ್ಸನ್ನು  ಚಂಚಲಗೊಳಿಸುತ್ತಾನೆ,  ಆದರೆ  ದೃತಿಗೆಡದೆ  ಯಾರು ಮುನ್ನುಗ್ಗುತ್ತಾರೋ  ಅಂತಹವರನ್ನು  ಮುನ್ನಡೆಸುತ್ತಾನೆ,  ಉದಾ:--  ಸೂರ್ಯವಂಶ  ಪ್ರದೀಪಕ, ರಘುವಂಶ  ತಿಲಕ  ಶ್ರೀರಾಮಚಂದ್ರ...  14  ವರ್ಷ   ಬೆಂಬಿಡದೆ  ಕಾಡಿ,  ಮಡದಿಯಿಂದ  ದೂರ ಮಾಡಿದ,  ಶ್ರೀ  ರಾಮನು  ದೃತಿಗೆಡದೆ  ರಕ್ಕಸ  ಕುಲವನ್ನು  ನಾಶಮಾಡಿ  ಲೋಕೋದ್ದಾರ  ಮಾಡಿದ.

    ಯದುಕುಲ ತಿಲಕ   ಶ್ರೀಕೃಷ್ಣನಿಗೆ  ಕಳ್ಳತನದ  ಆರೋಪ  ಹೊರಿಸಿ,  ಶಮಂತಕ   ಮಣಿಯನ್ನು ಪುನಃ  ತಂದು  ಕೊಡಿಸಿದ,  ಜಾಂಬವಾದಿಗಳಿಗೆ  ದರುಶನ  ಭಾಗ್ಯ  ಕೋಡಿಸಿದ .

    ಭರತ ಕುಲದ  ಸತ್ಯ ಹರಿಶ್ಚಂದ್ರ  ಸತ್ಯಕ್ಕಾಗಿ ರಾಜ್ಯ ಭೋಗಾದಿಗಳನ್ನು ತ್ಯಜಿಸಿ,  ಹೆಂಡತಿ ಮಕ್ಕಳನ್ನು ತೊರೆಸಿ,  ಕೊನೆಗೆ  ಸತ್ಯವನ್ನೇ  ಗೆದ್ದು ಕೊಟ್ಟ  ಶನಿದೇವ.

 ಇನ್ನು  ರಾಜ  ವಿಕ್ರಮಾದಿತ್ಯ  ಶನಿಯನ್ನು  ತುಚ್ಛ  ಮಾತುಗಳಿ0ದ  ದೂಷಿಸಿ  ಅನಂತ ಕಷ್ಟಗಳನ್ನುನುಭವಿಸಿ  ನಂತರ ಶನೇಶ್ವರನ ಪರಮ ಭಕ್ತನೆನಿಸಿದ. ಹೀಗೆ  ಶನಿದೇವ  ಯಾರನ್ನೂ  ಬಿಟ್ಟಿಲ್ಲ.

     ಶನೈಶ್ಚರ  ಸ್ವಾಮಿಯ  ಶುಭದೃಷ್ಟಿಯಿಂದ  ಮನುಷ್ಯ  ತುಂಬಾ  ಪ್ರಬಲವಾಗಿ  ದೊಡ್ಡ  ಮನೆತನ ಹೊಂದಿ,  ತನ್ನ  ಮನೆತನದ  ಹಿರಿಯರ  ಸೇವೆ  ಮಾಡಿ  ಅವರ  ಹಾರೈಕೆಯಿಂದ ವಂಶಾಭಿವೃದ್ಧಿಯನ್ನು,  ಪಿತ್ರಾರ್ಜಿತ  ಉಡುಗೊರೆಯನ್ನು,  ಕುಟುಂಬದಲ್ಲಿ  ಸಂತೋಷವನ್ನು , ಧೀರ್ಘಯುಷ್ಯ  ಹೊಂದಿ  ಸುಖಿಯಾಗುತ್ತಾನೆ.   ಶುಭದೃಷ್ಟಿ  ಪ್ರಬಲವಾಗಿದ್ರೆ ನ್ಯಾಯಾದೀಶರಾಗುತ್ತಾರೆ,  ವಾಕ್ಚಾತುರ್ಯವನ್ನು  ಪಡೆದವರಾಗುತ್ತಾರೆ,  ಸ್ವಾಭಿಮಾನಿಯಾಗುತ್ತಾರೆ. ಇತರೆ  ಎಂಟು ಗ್ರಹಗಳ  ಅಶುಭದೃಷ್ಟಿಯುದ್ದರು  ಶನಿದೇವನ  ಶುಭದೃಷ್ಟಿಯೊಂದೇ  ಎಂತಹ ಸಂಕಟ  ಗಂಡಾಂತರಗಳನ್ನು  ಪಾರುಮಾಡಬಲ್ಲದು.   ಶನಿದೇವರ  ಅಶುಭ ದೃಷ್ಟಿಯಿದ್ದು,  ಉಳಿದ ಎಂಟು  ಗ್ರಹಗಳು  ಶುಭರಾಗಿದ್ದರೂ  ಗಂಡಾಂತರ  ತಪ್ಪಿಸಲು ಅಸಾಧ್ಯ.

ಉದಾ :--  ರಾವಣ

  ರಾವಣನು  ತನ್ನ  ಮಹಾ ತಪಸ್ಸಿನ  ಫಲದಿಂದ  ಆದಿತ್ಯಾದಿ  ನವಗ್ರಹರನ್ನು  ತನ್ನ ಹತೋಟಿಯಲ್ಲಿಟ್ಟು ಕೊಂಡ,  ರಾವಣನು  ತನ್ನ  ಪುತ್ರ ಜನನ  ಸಮಯದಲ್ಲಿ  ಯಾವ  ಕಂಟಕಗಳು ಇಲ್ಲದ  ಲೋಕ ಪ್ರಖ್ಯಾತನಾದ ಧೀರ್ಘಆಯುವಾದ ( ಮರಣವೇ ಇಲ್ಲದ ) ಮಗ  ಜನಿಸಲೆಂದು ನವಗ್ರಹರನ್ನು  ಕರೆಯಿಸಿ  ಶುಭದೃಷ್ಟಿ  ನೀಡಿರೆಂದು  ಅಜ್ಞಾಪಿಸುತ್ತಾನೆ,  ಅದರಂತೆ  ಎಲ್ಲರೂ  ಆಜ್ಞೆ ಪಾಲಿಸ್ಸುತ್ತಾರೆ,   ಆದರೆ  ಇನ್ನೇನು  ಮಗು  ಜನಿಸಬೇಕು  ಅಷ್ಟರಲ್ಲಿ  ಶನಿದೇವನು  ತನ್ನ  ಒಂದು ಕಾಲನ್ನು  ಮಡಿಸಿ ಕೊಂಡು  ಕುಳಿತುಕೊಳ್ಳುತ್ತಾನೆ,   ಆಯುಷ್ಕಾರಕನಾದ  ಶನಿದೇವ  ಮಗುವಿಗೆ ಅಲ್ಪಾಯುವನ್ನು  ನೀಡುತ್ತಾನೆ.  ಎಲ್ಲಾ ತೆರನಾದ  ಭಾಗ್ಯವಿದ್ದರೂ  ರಾವಣನ  ಮಗ ಅಲ್ಪಾಯುವಾಗುತ್ತಾನೆ.

   ಹೀಗೆ  ಶನಿದೇವನ  ಲೀಲೆ  ಅದ್ಭುತ,  ಶನಿದೇವನ  ಅಶುಭದೃಸ್ಟಿಯಿಂದ  ಅಲ್ಪಾಯುಷಿಯೂ, ಬಡವನೂ,  ಅತಿಕಾಮಿಯೂ,  ಮಾನಹೀನನು,  ಮನೋರೋಗಿಯೂ,  ವಂಶಾಭಿವೃದ್ಧಿಗೆ ಅಡಚನೆಯೂ,  ಅಂಗವಿಕಲನು,  ಬಡಕಲು  ಶರೀರದವನು,  ಸೋಮಾರಿಯು,  ಅಭಿವೃದ್ಧಿಗೆ ಜಡತ್ವ, ವಾಯು,  ಸಂಧಿವಾತ,  ಮೂಳೆ ಮುರಿಯುವಿಕೆ,  ಮಲಿನತೆ,  ಮಹಾ ದರಿದ್ರರೂ  ಆಗುತ್ತಾರೆ.

     ಶನಿಯ  ಶುಭದೃಷ್ಟಿ  ಪಡೆಯಲು  ಆಂಜನೆಯನಿಗೆ  ಹುಚ್ಚೆಳ್ಳು ( ಎಳ್ಳೆಣ್ಣೆ)  ಎಣ್ಣೆಯಿಂದ ಅಭಿಷೇಕ,  ಮತ್ತು  ಇದೇ  ಎಣ್ಣೆಯಿಂದ ದೀಪ  ಹಚ್ಚು ವುದು,  ನೀಲ  ಅಥವಾ  ಕಪ್ಪುವಸ್ತ್ರ,  ಶಂಕದ ಹೂವು,  ಎಳ್ಳು,  ಕಬ್ಬಿಣ  ದಾನ  ಮಾಡಬೇಕು,  ಜಗತ್ತಿನ  ಯಾವುದೇ  ಕೆಳಮಟ್ಟದ  ವಸ್ತುವಾಗಲೀ, ಪ್ರಾಣಿಗಳನ್ನಾಗಲೀ  ತಿರಸ್ಕಾರದಿಂದ  ಅವಮಾನಿಸಬಾರದು ,  ಅಧರ್ಮ,  ಅನ್ಯಾಯ,  ಮೋಸ ಕಪಟ, ವಂಚನೆ  ಇವುಗಳು  ಶನಿಯ  ಮಹಾನ್  ಶತ್ರುಗಳು.                        

   ಮನೆಯ  ಹಿರಿಯರನ್ನು  ತಾತ್ಸಾರ  ಮಾಡುವುದು,  ಎಲ್ಲಾ  ಪುಣ್ಯವನ್ನೂ  ಕೊಂದು ಹಾಕುತ್ತದೆ, ಏಕೆಂದರೆ  ಮನೆಯ  ಹಿರಿಯರ  ಪ್ರತೀಕವೆ  ಶನಿದೇವ,  ಹಾಗೆಯೇ  ಮರಣ  ಹೊಂದಿದವರಿಗೆ   ಕಾರ್ಯಗಳನ್ನು  ಮಾಡದೇ  ಹೋದರೆ  ಶನಿಯ  ಅವಕೃಪೆಗೆ  ಪಾತ್ರರಾಗಬೇಕಾಗುತ್ತದೆ,  ಏಕೆಂದರೆ ಶನಿಯು  ಪ್ರೇತಕಾರಕ  ಗ್ರಹವೂ  ಆಗಿದ್ದಾನೆ,  ಆದ್ದರಿಂದ  ಗತಿಸಿದವರ  ಸದ್ಗತಿಯಿಂದ  ಹಿರಿಯರ ಹಾರೈಕೆಯಿಂದ  ಶನಿಯ  ಶುಭದೃಷ್ಟಿ  ಪಡೆಯಬಹುದು.

    ಶನಿಗ್ರಹವು  ಪ್ರತಿಯೊಬ್ಬ  ಜೀವಿಯ  ಜೀವನದಲ್ಲೂ  ಮೂರು ಬಾರಿ  ಪ್ರವೇಶ  ಮಾಡುತ್ತದೆ  ಅದೇ ಸಾಡೇಸಾತ್ ,  ಏಳೂವರೆ  ವರ್ಷದ  ಶನಿ ( ಏಳರಾಟ  ಶನಿಕಾಟ ) .  ಅಂದರೆ....  ನಮ್ಮ  ಜನ್ಮ ರಾಶಿಯ ಹಿಂದಿನ  ಮನೆಯಲ್ಲಿ  ಎರಡೂವರೆ  ವರ್ಷ,  ಜನ್ಮ  ರಾಶಿಯಲ್ಲಿ  ಎರಡೂವರೆ  ವರ್ಷ, ಜನ್ಮರಾಶಿಯಿಂದ  ಎರಡನೇ  ಮನೆಯಲ್ಲಿ  ಎರಡುವರೇವರ್ಷದ  ಶನಿ  ಸಂಚಾರದ  ಕಾಲವನ್ನು ಸಾಡೇ ಸಾತಿ  ಎನ್ನುತ್ತಾರೆ,  ಹೀ ಗೆ  3  ಬಾರಿ ಮನುಷ್ಯನ  ಜೀವನದಲ್ಲಿ  ಪ್ರವೇಶ  ಮಾಡುತ್ತಾನೆ.                        
   ಮೊದಲ ಸಲ  ವಿಪರೀತ  ಕಷ್ಟಗಳ  ಸುರಿಮಳೆ  ಕರೆದು,   ಎರಡನೇ  ಸಲ  ಎಲ್ಲಾ  ಕ್ಷೇತ್ರದಲ್ಲೂ ಅಭಿವೃದ್ಧಿಯಾಗುವಂತೆ  ಮಾಡಿ,  ಮೂರನೇ ಬಾರಿಗೆ  ಧನನಷ್ಟ,  ಮಾನಹಾನಿ,  ಮೃತ್ಯು, ಮೃತ್ಯುವಿಗೆ ಸಮಾನವಾದ  ತೊಂದರೆ  ನೀಡುತ್ತಾನೆ.
   
   ಜನ್ಮರಾಶಿಯ  ಹಿಂದಿನ  ರಾಶಿಯಲ್ಲಿ  (12 ನೇ  ಮನೆ ) ಸಂಚಾರ  ಮಾಡುವಾಗ ........ ವಿಪರೀತ ಧನವ್ಯಯ,  ಸಾಲ,  ಕಷ್ಟ,  ಭೂಮಿಗೆ,  ಕಬ್ಬಿಣಕ್ಕೆ  ಖರ್ಚು  ಮಾಡುವುದು,  ಅಂದುಕೊಂಡ ಕಾರ್ಯಗಳು  ಬಹಳ  ಪ್ರಯತ್ನದಲ್ಲೂ  ವಿಫಲವಾಗುವುದು,  ಹಲವಾರು  ತರಹದ ತೊಂದರೆಗಳುಂಟಾಗುವುದು  ಆಗುತ್ತದೆ.
   
     ಜನ್ಮರಾಶಿಯ  ಸಂಚಾರ ಕಾಲದಲ್ಲಿ..........  ಜನ್ಮ  ರಾಶಿಯು,  ಆರೋಗ್ಯ,  ದೇಹ,  ಜೀವನ ಯಾಪನೆಗೆ  ಸಂಭಂಧಿಸಿದ್ದಾದ್ದರಿಂದ,  ಇಲ್ಲಿ  ಬಂದಾಗ  ಒಂಟಿತನ,  ಅಪಾರ   ಮಾನಸಿಕ  ಹಿಂಸೆ, ಸೋಮಾರಿತನ,  ನಿಶ್ಯಕ್ತಿ,  ನಿದ್ರಾಹೀನತೆ,  ಅಲೆಮಾರಿಯಾಗುವುದು,  ಅಪಮಾನ,  ಪಾದಗಳು, ಮಂಡಿಗಳಲ್ಲಿ  ಅಸಾಧ್ಯನೋವು,  ಆಲಸ್ಯ  ಮುಂತಾದ  ಫಲಗಳು.

   ರಾಶಿಯಿಂದ  ಎರಡನೇ  ಮನೆಯಲ್ಲಿ  ಸಂಚಾರ  ಮಾಡುವಾಗ..........  ನಿಷ್ಕಾರಣವಾಗಿ  ಬಂಧುಗಳಲ್ಲಿ  ದ್ವೇಷ,  ಕುಟುಂಬದಲ್ಲಿ  ನೋವುಗಳು,  ಸ್ವಜನ  ದ್ವೇಷ,  ಕಾರ್ಯಬಂಗ,  ಧನಹಾನಿ,  ಮುಂತಾದ  ಅಶುಭ  ಫಲಗಳನ್ನು ನೀಡುತ್ತಾನೆ.

      ಮನುಷ್ಯ  ಜೀವನದ  ಅಸ್ತಿತ್ವ,  ಸಾರ್ಥಕತೆಯನ್ನು  ಗುರ್ತಿಸಿ  ಕೊನೆಗೆ  ಗಟ್ಟಿಯಾದ  ಮನಸ್ಸು, ಶಾಶ್ವತ  ಸಂತೋಷವನ್ನು  ಹೊಂದುವ  ಮಾರ್ಗವನ್ನು  ತೋರಿಸಿಕೊಡುತ್ತಾನೆ.
ಆಯಸ್ಸು,  ಮರಣ,  ದುಃಖ,  ಪರಸ್ಥಳ,  ನಪುಂಸಕತ್ವ,  ದುರ್ವ್ಯಸನಗಳು ,  ನೀಚವಿದ್ಯೆ,  ನೀಚಜೀವನ, ನೀಚೋಪಾಸನೆ,  ದುರ್ವತನೆ,  ಸೆರೆಮನೆ,  ಅಸತ್ಯ,  ಅಧರ್ಮ,  ದೈನ್ಯಸ್ಥಿತಿ,  ಪಿತೃಶಾಪ  ಇನ್ನೂ ಅನೇಕ ವಿಚಾರದಲ್ಲಿ  ಶನಿಯು  ಅಧಿಕಾರ  ಹೊಂದಿದ್ದು,  ಊಹೆಗೂ   ನಿಲುಕದ  ರೀತಿಯಲ್ಲಿ  ಕಾಡಬಲ್ಲನು, ಮತ್ತು  ಶುಭಪರನಾದರೆ   ವಿಸ್ಮಯಕಾರಿ  ರಾಜಯೋಗವನ್ನು  ನೀಡಬಲ್ಲನು,  ಈತ  ಡಂಬಾಚಾರದ ಪೂಜೆಗಾಗಲೀ,  ಆಡಂಬರದ  ಭಕ್ತಿಗಾಗಲೀ,  ಒಡವೆವಸ್ತ್ರ ಹಣ  ಯಾವುದೇ  ವೇಷ ಭೂಷಣಗಳಿಗಾಗಲೀ  ಕರುಣೆ  ತೋರುವುದಿಲ್ಲ,  ಈತನು  ಸತ್ಯನಿಷ್ಠೆಗೆ , ಶುದ್ಧಮನಸ್ಸಿನ  ಭಕ್ತಿಗೆ, ಪರಿಶುದ್ಧ ಹೃದಯವಂತರಿಗೆ,  ನಿಷ್ಕಪಟತೆಗೆ ,  ಸರಳತೆಗೆ,  ಯಾರಿಗೂ  ದ್ರೋಹಮಾಡದ  ಧರ್ಮದ ಹಾದಿಯಲ್ಲಿ  ನಡೆಯುವಂತಹವರ  ಮೇಲೆ  ತನ್ನ  ಶುಭ  ಪ್ರಭಾವವನ್ನು  ಬೀರುತ್ತಾನೆ                        
ಶನಿದೇವನಿಗೆ  ಎಳ್ಳೆಣ್ಣೆ ಅಭಿಷೇಕ  ಅತ್ಯಂತ  ಪ್ರಿಯ,  ಇದಕ್ಕೊಂದು  ಪೌರಾಣಿಕ  ಕಥೆಯಿದೆ.

        ಶನಿ  ಮಹಾತ್ಮನು  ಚಿಕ್ಕವನಿದ್ದಾಗ  ಅತೀ  ಉತ್ಸುಕತೆಯಿಂದಿರುತ್ತಿದ್ದನು,  ವಿಪರೀತ  ಮೊಂಡು, ವಿಪರೀತ  ಕಾಡಾಟ , ಇವನ  ಕಿಡಿಗೇಡಿ ತನಕ್ಕೆ  ಎಲ್ಲರೂ  ಶಿಕ್ಷೆ  ಅನುಭವಿಸಬೇಕಾಗುತ್ತಿತ್ತು,

Picture source: Internet/ social media

     ಅದೊಂದು ದಿನ  ಶ್ರೀರಾಮ  ಭಕ್ತನಾದ  ಹನುಮಂತನು,ಧ್ಯಾನ  ಮಗ್ನನಾಗಿ  ಕುಳಿತಿದ್ದಾಗ, ಶನಿಯು  ಹನುಮನಿದ್ದೆಡೆಗೆ  ಬಂದು  ವಿಪರೀತ  ಕುಚೇಷ್ಟೆ  ಮಾಡಿದನಂತೆ,  ದ್ಯಾನಭಂಗವಾಗಿ ಹನುಮಂತನು ಎಚ್ಚರಗೊಂಡು,  ನನ್ನ  ಧ್ಯಾನಕ್ಕೆ  ಭಂಗ  ತರಬೇಡ  ಎಂದು  ಹೇಳಿದರೂ, ಚೇಷ್ಟೆಯನ್ನು  ಮುಂದುವರೆಸಿದ  ಶನಿದೇವನ  ಮೇಲೆ  ಅತೀವ  ಕುಪಿತಗೊಂಡ  ಹನುಮ  ತನ್ನ ಬಾಲದಿಂದ  ಶನಿಯನ್ನು ಬಿಗಿಯಾಗಿ  ಸುತ್ತಿ  ಅಷ್ಟ ದಿಕ್ಕುಗಳಲ್ಲೂ  ಗರ ಗರ  ತಿರುಗಿಸಿ  ದೂರ ಬಿಸಾಡಿದನು,  ಆಗ  ತುಂಬಾ  ಮೇಲಿನಿಂದ  ಬಿದ್ದಿದ್ದರಿಂದ  ಶನಿದೇವರಿಗೆ  ಮೈತುಂಬಾ  ಗಾಯಗಳಾಗಿ ದೇಹದಲ್ಲೆಲ್ಲಾ  ರಕ್ತ  ಸೋರಹತ್ತಿತು.   ಆಗ  ತನ್ನ ತಪ್ಪಿನ  ಅರಿವಾಗಿ  ಹನುಮನ  ಬಳಿ ಬಂದು ವಿನಮ್ರತೆಯಿಂದ  ಕೈ  ಮುಗಿದು  ಕ್ಷಮೆ  ಯಾಚಿಸಿದನು,  ಶನಿದೇವನ  ಮುಗ್ಧತೆಗೆ  ಪ್ರಸನ್ನನಾದ ಹನುಮನು  ತನ್ನನ್ನು  ಯಾರು  ಭಕ್ತಿಯಿಂದ  ಪೂಜಿಸುತ್ತಾರೋ  ಅವರನ್ನು  ನೀನು  ಕಾಡಬಾರದು ಎಂದು  ಭಾಷೆ  ತೆಗೆದುಕೊಂಡನು,  ಇದಕ್ಕೊಪ್ಪಿದ  ಶನಿದೇವನು  ಈಗ  ಈ  ನನ್ನ  ನೋವನ್ನು ನಿವಾರಿಸು  ಎಂದು  ಕೇಳುತ್ತಾನೆ,  ನೋವಿನಿಂದ  ನರಳುತ್ತಿದ್ದ  ಶನಿದೇವನಿಗೆ  ಹನುಮಂತನು ಮೈಗೆಲ್ಲಾ  ಎಳ್ಳೆಣ್ಣೆ  ಹಚ್ಚಿ  ಮೈಮೇಲಿದ್ದ  ಗಾಯಗಳನ್ನು  ವಾಸಿಮಾಡಿದನು,  ಗಾಯದಿಂದ ನೊಂದಿದ್ದ  ದೇಹ  ಮತ್ತೆ  ಹುರುಪಾಯಿತು,  ಶನಿದೇವನಿಗೆ  ಆನಂದವಾಯಿತು,  ಹಾಗಾಗಿ  ಎಳ್ಳೆಣ್ಣೆ ಅಭಿಷೇಕ  ಶನಿದೇವನಿಗೆ  ಪ್ರಿಯವಾಯಿತು.

       ದೇವತಾರಾಧನೆ,  ಗ್ರಹಪೂಜೆ,  ಹಿರಿಯರ  ಸೇವೆಯಿಂದ  ವಿಮುಖರಾದ  ಜನರಿಗೆ  ಸಂಕಟವನ್ನು ಕೊಡುವನಾದ್ದರಿಂದಲೇ  ಶನೇಶ್ವರನು  ಹೆಚ್ಚು ಪ್ರಚಾರದಲ್ಲಿದ್ದಾನೆ.

ಶನಿದೇವನನ್ನು  ಸ್ತುತಿಸುವ  ಸ್ತೋತ್ರ  ಹೀಗಿದೆ

" ನೀಲಾಂಜನ  ಸಮಾಭಾಸ0  ರವಿಪುತ್ರಂ  ಯಮಾಗ್ರಜಮ್
ಛಾಯಾ ಮಾರ್ಥಾ0ಡ  ಸಂಭೂತಮ್ ತಂ  ನಮಾಮಿ  ಶನೈಶ್ಚರ0"

ಶ್ರೀಮದ್  ವಾದಿರಾಜ  ವಿರಚಿತ  ಶನಿ  ಸ್ತೋತ್ರ

"  ಶನೇ ದಿನಮಣೇಃ ಸೂನೂಹ್ಯನೆಕಾಗುಣಸನ್ಮಣೇ
ಅರಿಷ್ಟ0ಹರಮೇ ಭೀಷ್ಟಮ್ ಕುರು ಮಾ ಕುರು ಸಂಕಟ0 "

ಶನಿ ಗಾಯತ್ರಿ ಮಂತ್ರ :--

"ಓಂ  ನೀಲಾಂಬರಾಯ  ವಿದ್ಮಹೇ
ಸೂರ್ಯ  ಪುತ್ರಾಯ  ಧೀಮಹಿ
ತನ್ನೋ  ಸೌರಿಃ  ಪ್ರಚೋದಯಾತ್ "

ಶನಿ  ಪೀ ಡಾ  ಪರಿಹಾರ  ಸ್ತೋತ್ರ :--

" ಸೂರ್ಯ ಪುತ್ರೋ  ಧೀರ್ಘದೇಹೋ  ವಿಶಾಲಾಕ್ಷ  ಶಿವಪ್ರಿಯಃ
ಧೀರ್ಘಚಾರ  ಪ್ರಸನ್ನಾತ್ಮಾ ಪೀಡಾ0  ಹರತು  ಮೇ  ಶನಿಃ "

ಶ್ರೀ  ಶನೇಶ್ವರ  ಮೂಲ ಮಂತ್ರ :--

ನಮಸ್ತೇ ಕೋಣ ಸಂಸ್ಥಾಯ ಪಿಂಗಳಾಯ ನಮೋಸ್ತುತೆ
ನಮಸ್ತೇ ವಿಷ್ಣು ರೂಪಾಯ ಕೃಷ್ಣಾಯ ಚ  ನಮೋಸ್ತುತೆ
ನಮಸ್ತೇ ರೌದ್ರ ದೇಹಾಯ  ನಮಸ್ತೇ ಕಾಲ  ಕಾಲಾಯ ಚ
ನಮಸ್ತೇ  ಯಮ ಸಂಜ್ಞಾಯ ಶನೇಶ್ವರ  ನಮೋಸ್ತುತೆ
ಪ್ರಸೀದ ಕುರು ದೇವೇಶ  ದೀನಸ್ಯ ಪ್ರಣತಸ್ಯ ಚ
( ಜಪಸಂಖ್ಯೆ 23,000  , 19 ದಿನಗಳಲ್ಲಿ)

ಏಕಾಕ್ಷರಿ ಬೀಜಮಂತ್ರ :--

ಓಂ  ಶಂ  ಶನೈಶ್ಚರಾಯ  ನಮಃ

ಅನುಕೂಲ  ಮಂತ್ರ :-- 

ಐಮ್  ಕ್ಲೀಮ್ ಹ್ರೀಂ ಶ್ರೀಮ್ ಸೌಃ  ( ಜಪ  ಸಂಖ್ಯೆ  ಒಂದೂ ಕಾಲು  ಲಕ್ಷ)

ತಾಂತ್ರಿಕ  ವಿಧಾನ  ಮಂತ್ರ  :--

ಓಂ  ಪ್ರಾಂ ಪ್ರೀ0 ಪ್ರೌ0 ಸಃ  ಶನೈಶ್ಚರಾಯ ನಮಃ
( ಜಪಸಂಖ್ಯೆ  23,000)

ಶನಿ  ಲತ್ತಾ ಕಾಲದಲ್ಲಿ :--

ದೇಹಪೀಡೆ , ಜೆಸ್ಟಬ್ರಾತೃ ವಿನಿಂದ  ತೊಂದರೆಗಳುಂಟಾಗುತ್ತದೆ.

ಲತ್ತಾಶಾಂತಿ :-- ಕಬ್ಬಿಣ  ಮತ್ತು  ಎಳ್ಳು  ದಾನ,  ಅಶ್ವತ್ಥ  ಪ್ರದಕ್ಷಿಣೆ  ಮಾಡಬೇಕು.

ಶನಿಗ್ರಹದ  ಸ್ವಕ್ಷೇತ್ರವಾದ ಮಕರ ಲಗ್ನದವರು ಪೂಜಿಸಿ  ಧರಿಸ ಬಹುದಾದ ಯಂತ್ರ


ಪಂಚದಶಾಯಂತ್ರ

8
1
6
3
5
7
4
9
2

ಬೀಸಾಯಂತ್ರ

12
7
14
13
11
9
8
15
10

ಓಂ  ಐಮ್ ಕ್ಲೀಮ್ ಹ್ರೀಂ  ಶ್ರೀಮ್ ಸೌಃ

 ಶನಿಯ  ಸ್ವಕ್ಷೇತ್ರವಾದ  ಕುಂಬ  ಲಗ್ನದವರು  ಪೂಜಿಸಿ  ಧರಿಸಬಹುದಾದ  ಯಂತ್ರ

ಪಂಚದಶಾಯಂತ್ರ

2
7
6
9
5
1
4
3
8

ಬೀಸಾಯಂತ್ರ

12
7
14
13
11
9
8
15
10

ಓಂ  ಹ್ರೀಂ  ಐಮ್ ಕ್ಲೀಮ್ ಶ್ರೀಮ್


                        
--:   ವೈಜ್ಞಾನಿಕವಾಗಿ  ಶನಿ ಗ್ರಹ :--

Picture source: Internet/ social media
  ಸೂರ್ಯನಿಂದ  6 ನೇ  ಗ್ರಹ,  ಅನಿಲ ರೂಪಿಯಾದ  ಶನಿಯು  ಗುರು ಗ್ರಹದ  ನಂತರ ಸೌರಮಂಡಲದಲ್ಲಿ  ಎರಡನೇ  ಅತಿ ದೊಡ್ಡ  ಗ್ರಹ.   ಶನಿಯು  ಎದ್ದು ಕಾಣುವಂತ  ಉಂಗುರ ವ್ಯವಸ್ಥೆಯನ್ನು  ಹೊಂದಿದೆ.   ಈ  ಉಂಗುರಗಳು  ಮುಖ್ಯವಾಗಿ  ಮಂಜಿನ  ಪುಡಿಯಿಂದ ರಚಿತವಾಗಿದ್ದು,  ಸ್ವಲ್ಪ  ಕಲ್ಲಿನ  ಚೂರುಗಳು  ಮತ್ತು  ಧೂಳು ಸಹ   ಇವುಗಳಲ್ಲಿ  ಕಂಡುಬರುತ್ತದೆ.

   ಶನಿಯು  ಭೂಮಿಯಂತೆಯೇ  ದೃವಾಗಳಲ್ಲಿ ಸ್ವಲ್ಪ  ಚಪ್ಪಟೆಯಾಗಿದ್ದು,  ಸಮ ಭಾಜಕದಲ್ಲಿ ಉಬ್ಬಿಕೊಂಡಿದೆ.  ಅದರ  ಸಮಭಾಜಕ  ಮತ್ತು  ದೃವಗಳ  ಮೂಲಕ  ವ್ಯಾಸಗಳು  ಸುಮಾರು 10% ವ್ಯತ್ಯಾಸವನ್ನು  ಹೊಂದಿದೆ.  (120.536km  ಮತ್ತು 108.728 km ) .   ಶನಿಯ  ಈ  ಆಕಾರಕ್ಕೆ  ಅದರ ಅನಿಲ ರೂಪ  ಮತ್ತು  ತ್ವರಿತವಾದ  ಅಕ್ಷೀಯ  ಪರಿಭ್ರಮಣಗಳು ಕಾರಣ.  ಉಳಿದ  ಅನಿಲರೂಪಿ ಗ್ರಹಗಳು  ಈ ರೀತಿಯ  ಆಕಾರವನ್ನು  ಹೊಂದಿದ್ದರೂ  ಶನಿಯಲ್ಲಿ  ಇದು  ಎದ್ದು ಕಾಣುತ್ತದೆ . ಸೌರಮಂಡಲದಲ್ಲಿ   ನೀರಿಗಿಂತ  ಕಡಿಮೆ  ಸಾಂದ್ರತೆಯುಳ್ಳ  ಏಕೈಕ  ಗ್ರಹ  ಶನಿ.   ಶನಿಯ  ಸರಾಸರಿ ಸಾಂದ್ರತೆಯು  ನೀರಿನ  69% ರಷ್ಟಿದೆ.  ಇದು  ಕೇವಲ  ಸರಾಸರಿ  ಪ್ರಮಾಣ,  ಶನಿಯ ವಾಯುಮಂಡಲವು  ನೀರಿಗಿಂತ  ಹಗುರವಾಗಿದೆ  ಮತ್ತು  ಗ್ರಹದ  ಒಳಭಾಗವು  ಗಮನಾರ್ಹವಾಗಿ ಹೆಚ್ಚು  ಸಾಂದ್ರತೆಯನ್ನು  ಹೊಂದಿದೆ.  ಶನಿಯು  ಸುಮಾರು  56  ಉಪಗ್ರಹಗಳನ್ನು  ಹೊಂದಿದೆ.

ಕಕ್ಷೆಯ  ಗುಣಗಳು

ಧೀರ್ಘಅರ್ಧ ಅಕ್ಷ.  ---   1,426,725,413 km
Orbital  ಪರಿಧಿ    ---  8.958 ×10^12
ಕಕ್ಷೀಯ  ಕೇಂದ್ರ  ಚ್ಯುತಿ   ---  0.054 150 60
ಸೂರ್ಯನಿಂದ  ಕನಿಷ್ಠ  ದೂರ  ---  1,349,467,375 km
ಸೂರ್ಯನಿಂದ  ಗರಿಷ್ಠ  ದೂರ   ---  1,503, 983,449 km
ಕಕ್ಷೀಯ  ಪರಿಭ್ರಮನ  ಕಾಲ   ---     10,756.1995  ದಿನ
ಸರಾಸರಿ  ಕಕ್ಷಾವೇಗ   ---   9.639 km/ ಪ್ರತಿಕ್ಷಣ 
ಓರೆ   ---  2.484 46°
ನೈಸರ್ಗಿಕ  ಉಪಗ್ರಹಗಳ  ಸಂಖ್ಯೆ.  ---  56                        

ಭೌತಿಕ  ಗುಣಲಕ್ಷಣಗಳು

ಸಮಭಾಜಕ  ರೇಖೆಯ  ವ್ಯಾಸ  ---   120,536 km
ದ್ರುವಗಳ  ಮೂಲಕ  ವ್ಯಾಸ  ---  108,728 km
ಮೇಲ್ಮೈ  ವಿಸ್ತೀರ್ಣ  ---  4.27×10^10 km
ಗಾತ್ರ  ---   8.27×10^14 km
ದ್ರವ್ಯರಾಶಿ  --- 5.6846×10^27 k gram
ಸರಾಸರಿ  ಸಾಂದ್ರತೆ  ---  0.6873 ಗ್ರಾಮ್/ ಪ್ರತಿ  ಸೆ.ಮೀ
ಸಮಭಾಜಕದ ಬಳಿ  ಗುರುತ್ವ  ---  8.96 ಮೀ/ಕ್ಷಣ
ಮುಕ್ತಿವೇಗ  --- 35.49 km/ಪ್ರತಿಕ್ಷಣ
ಅಕ್ಷೀಯ  ಪರಿಭ್ರಮಣ ಕಾಲ --- 0.449 375 ದಿನ
ಅಕ್ಷೀಯ  ಪರಿಭ್ರಮಣ  ವೇಗ  ---  9.87km/ಪ್ರತಿಕ್ಷಣ
ಅಕ್ಷದ  ಓರೆ  ---  26.73°
ಪ್ರತಿಫಲನಾಂಶ  ---  0.47
ಮೇಲ್ಮೈ  ತಾಪಮಾನ  
-----------------------------
   min  ---  82 K
   mean  ---  143 K
   max   ---   N/A

ಮೋಡದ  ಪರದೆಯ ಮೇಲೆ  ಸರಾಸರಿ  ತಾಪಮಾನ  ---  93K

ವಾಯುಮಂಡಲದ  ಗುಣಲಕ್ಷಣಗಳು

ವಾತಾವರಣದ  ಒತ್ತಡ  --- 140k P a
ಜಲಜನಕ  ---  >93%
ಹೀಲಿಯಂ  --- >5%
ಮೀಥೇನ್  --- 0.2%
ನೀರಾವಿ  ---  0.1%
ಅಮೋನಿಯಾ  ---  0.01%
ಈಥೇನ್  ---  0.0005%
ಫಾಸ್ಪೀನ್  ---  0.0001%

**********
✍ ಡಾ: B. N.  ಶೈಲಜಾ ರಮೇಶ್