ಹರಿಃ ಓಂ
ಓಂ ಶ್ರೀ ಗಣೇಶಾಯ ನಮಃ
ಓಂ ಶ್ರೀ ಗುರುಭ್ಯೋನಮಃ
ದಿನದ 24 ಗಂಟೆಗಳಲ್ಲಿ
ಪ್ರಾತಃಕಾಲ
ಅಪರಾಹ್ನ
ಮಧ್ಯಾಹ್ನ
ಸಾಯಂಕಾಲ
ರಾತ್ರಿ..... ಹೀಗೆ ಸಮಯವನ್ನು ವಿಂಗಡಿಸಿಕೊಂಡು .. ಯಾವ ಯಾವ ಸಮಯದಲ್ಲಿ ಜನನವಾದಾಗ, ಯಾವ ರೀತಿಯ ಫಲಗಳು ಸಿಗುತ್ತದೆ ಎಂಬುದನ್ನು ತಿಳಿಯೋಣ.
1. ಪ್ರಾತಃಕಾಲ : ( ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ )
ಈ ಸಮಯದಲ್ಲಿ ಜನಿಸಿದ ಜಾತಕರು ಕರ್ತವ್ಯ ಪ್ರಜ್ಞೆ ಉಳ್ಳವರು, .ಶ್ರಮಜೀವಿಗಳು, ಉತ್ತಮ ಕಾರ್ಯಗಳಲ್ಲಿ ಆಸಕ್ತಿ, ನಿರ್ಣಯದಲ್ಲಿ ಪರಿಪೂರ್ಣತೆ, ಉತ್ತಮ ಗುರಿ ಹೊಂದಿದವರು, ನ್ಯಾಯ ನೀತಿ ಧರ್ಮದಿಂದ ನಡೆದುಕೊಂಡು ಜನಪ್ರಿಯರಾಗುತ್ತಾರೆ. ಮೃಧು ಮಧುರ ಮಾತು, ಸುಖಜೀವನ, ಇವರಿಗೆ ಕಷ್ಟ , ತೊಂದರೆಗಳು ಬಂದರೂ ಅದು ತಾತ್ಕಾಲಿಕ. ದೈವಬಲದಿಂದ ತೊಂದರೆಗಳು ಶೀಘ್ರ ಪರಿಹಾರವಾಗುತ್ತವೆ.
ಅಪರಾಹ್ನ : ( ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರ ವರೆಗೆ )
ಈ ವೇಳೆಯಲ್ಲಿ ಜನನವಾದವರು ಭಾಗ್ಯವಂತರು, ವಿಚಾರವಂತರು, ಎಲ್ಲಾ ಕಾರ್ಯಗಳಲ್ಲಿಯೂ ವಿಜಯಿಗಲಾಗ್ತಾರೆ.. ಅನೇಕ ರೀತಿಯ ದುಡಿಮೆಯ ಮಾರ್ಗವನ್ನು ಬಲ್ಲವರು. ಜನಸಂಪರ್ಕವನ್ನು, ಅಧಿಕಾರವನ್ನು ಹೊಂದಿರುತ್ತಾರೆ. ಶೃಂಗಾರಪ್ರಿಯರು, ಹಠವಾದಿಗಳೂ ಸಹ, ಇವರು ಇತರರ ಮೋಸ ವಂಚನೆಗೆ.ಗುರಿಯಾಗಿ ಹಣವನ್ನು ಕಳೆದುಕೊಳ್ಳಬಹುದು. ಇವರು ಧೈರ್ಯ, ಸಹನೆ, ಶಾಂತಿಯನ್ನು ಹೆಚ್ಚಾಗಿ ಮೈಗೂಡಿಸಿಕೊಳ್ಳಬೇಕು.
ಮಧ್ಯಾಹ್ನ :-- ( 3 ಗಂಟೆಯಿಂದ ಸಂಜೆ 6 ರ ವರೆಗೆ )
ಈ ಸಮಯದಲ್ಲಿ ಜನಿಸಿದ ಜಾತಕರು ಗಡಿಬಿಡಿಯ ಸ್ವಭಾವದವರು, ಮುಂದೆ ನಿಂತು ಮುಂದಾಳುವಿನಂತೆ ಕಾರ್ಯ ತತ್ಪರರಾಗಿರುತ್ತಾರೆ. ಜನಸೇವಾಗುಣಗಳನ್ನು ಹೊಂದಿರುತ್ತಾರೆ. ಇವರ ಹಣಕಾಸಿನ ವ್ಯವಹಾರಗಳು ಏರಿಳಿತದಿಂದ ಕೂಡಿರುತ್ತದೆ. ಅತಿಯಾದ ಸ್ನೇಹ, ಹಾಗೂ ಅತೀ ಪರೋಪಕಾರ ಬುದ್ಧಿಯಿಂದ ತೊಂದರೆ ಹಾಗೂ ಕೆಟ್ಟ ಹೆಸರನ್ನೂ ಅನುಭವಿಸಬೇಕಾಗುತ್ತೆ. ಇವರು ತಮ್ಮ ಹಾಗೂ ತಮ್ಮ ಕುಟುಂಬದ ಕಡೆಗೂ ಗಮನ ಹರಿಸಿದರೆ ಒಳ್ಳೆಯದು.
ಸಾಯಂಕಾಲ :-- ( ಸಂಜೆ 6 ರಿಂದ ರಾತ್ರಿ 10 ರ ವರೆಗೆ )
ಈ ವೇಳೆಯಲ್ಲಿ ಜನಿಸಿದವರು ಭೋಗಪ್ರಿಯರು. ಸುಗಂಧ, ಶೃಂಗಾರ ಪ್ರಿಯರು. ಸ್ವಾರ್ಥ ಗುಣವಿರುವವರು. ಜೀವನದಲ್ಲಿ ಅನೇಕ ಏರಿಳಿತಗಳನ್ನು ಬದಲಾವಣೆಯನ್ನು ಹೊಂದುತ್ತಾರೆ. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಸುಖವನ್ನು ಕಾಣುತ್ತಾರೆ. ಇವರು ಏಕಾಂತ ಪ್ರಿಯರು, ಬೋಧನೆಯಲ್ಲಿ ಆಸಕ್ತಿ, ಪ್ರಕೃತಿ ಆರಾಧಕರು. ಇವರು ತಮ್ಮ ಅತಿಕೋಪ, ಸಂಶಯಗುಣಗಳನ್ನು ಕಡಿಮೆ ಮಾಡಿಕೊಂಡರೆ ಒಳಿತು.
ರಾತ್ರಿ :-- ( 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ವರೆಗೆ )
ಈ ವೇಳೆಯಲ್ಲಿ ಜನಿಸಿದವರು ಅನೇಕ ವಿಷಯಗಳ ಬಗ್ಗೆ ಅರಿತವರೂ... ವ್ಯವಹಾರ ಜ್ಞಾನವುಳ್ಳವರೂ, ಸ್ನೇಹಜೀವಿಗಳು, ಸುಖಿಗಳೂ ಆಗುತ್ತಾರೆ. ಇವರು ರಸಿಕರು , ಹೆಸರುಗಳಿಸುವವರೂ ಆಗುತ್ತಾರೆ. ಇವರಿಗೆ ಜೀವನದಲ್ಲಿ ಕೊರತೆ , ಸಮಸ್ಯೆಗಳು ಕಂಡುಬಂದರೂ ದೈವಶಕ್ತಿಯಿಂದ ಅದೆಲ್ಲವೂ ನಿವಾರಣೆ ಆಗುತ್ತದೆ. ಅತೀ ಸಿಟ್ಟು, ದುದುಕುತನ, ಸಂಶಯ ಸ್ವಭಾವ, ಆಸೆ ಗಳಿಂದ ತೊಂದರೆಗಳು ಬರಬಹುದು. ಹಾಗಾಗಿ ನೋವು ಅನುಭವಿಸುತ್ತಾರೆ. ಇವರು ಯೋಗ್ಯತರ ವಿಚಾರ ಮಂಥನ ಮಾಡಬೇಕು, ಉತ್ತಮ ನಿರ್ಣಯದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳಿತು.
ಇವುಗಳು ಜನ್ಮ ಸಮಯದ ಆಧಾರದ.ಮೇಲಿನ ಫಲಗಳಷ್ಟೇ. ಸಂಪೂರ್ಣ ಗುಣಾವಾಗುಣಗಳು ಜಾತಕದ ಗ್ರಹಸ್ಥಿತಿಗಳಿಂದ ತಿಳಿಯಬೇಕು.
✍️ ಡಾ || B.N. ಶೈಲಜಾ ರಮೇಶ್
Super madam
ReplyDeleteThank you so much 🙏🙏😊
Delete