Monday, 21 July 2025

ನಕ್ಷತ್ರಗಳ ಬಗೆಗೆ ಅಧ್ಯಯನ

                            -ಹರಿಃ ಓಂ
                  ಶ್ರೀ ಗಣೇಶಾಯ ನಮಃ
                   ಶ್ರೀ ಗುರುಭ್ಯೋನಮಃ
Picture source: Internet/ social media
---:  ನಕ್ಷತ್ರಗಳ  ಬಗೆಗೆ  ಅಧ್ಯಯನ  :---
        ಜ್ಯೋತಿಷ ಶಾಸ್ತ್ರದ  ಅಧ್ಯಯನದಲ್ಲಿ  ಮುಖ್ಯ  ಪಾತ್ರವನ್ನು  ವಹಿಸುವ  ರಾಶಿಗಳು  ಗ್ರಹಗಳ  ಗುಣಧರ್ಮದ  ಬಗ್ಗೆ  ಅಧ್ಯಯನವನ್ನು  ಪೂರೈಸಿ  ಈಗ  ನಕ್ಷತ್ರಗಳೆಡೆಗೆ  ಸಾಗುತ್ತಿದ್ಸೇವೆ.
         ನಕ್ಷತ್ರಗಳು,  ಗ್ರಹಗಳು,  ರಾಶಿಗಳು  ಜ್ಯೋತಿಶ್ಶ್ಶಾಸ್ತ್ರದ  ಜೀವಾಳವೆ  ಆಗಿದೆ.  ಇವುಗಳ
ಬಗೆಗಿನ  ಅಧ್ಯಯನ  ಆಮೂಲಾಗ್ರವಾಗಿ  ಎಷ್ಟರಮಟ್ಟಿಗೆ  ಮಾಡಿರುತ್ತೇವೆಯೋ  ಆ  ಮಟ್ಟದಲ್ಲಿ  ನಿಖರವಾದ  ಫಲ  ನಿರೂಪಣೆಗೆ  ಸಹಕಾರಿ ಯಾಗುತ್ಯದೆ.
         ಆದ್ದರಿಂದ  ಈ  ಮಾರ್ಗದಲ್ಲಿ  ನಕ್ಷತ್ರಗಳ  ಬಗೆಗೆ  ತಿಳಿದುಕೊಳ್ಳೋಣ........
ನಕ್ಷತ್ರ  :--   ನ   -  ಕ್ಷತ್ರ  =  ಕ್ಷೇತ್ರವಿಲ್ಲ ದಿರುವುದು,  ಚಲನೆಯಿಲ್ಲದಿರುವುದು, ಎಂದರ್ಥ.
        ಸ್ವಯಂ ಪ್ರಕಾಶವಾಗಿ  ಆಕಾಶದಲ್ಲಿ ಮಿನುಗುತ್ತಿರುವುದೇ ನಕ್ಷತ್ರಗಳು,  ಇವು  ತಮ್ಮ  ಶಾಖ ಮತ್ತು  ಬೆಳಕನ್ನು  ಎಲ್ಲಾ ಕಡೆಗೂ  ಹೊರಸೂಸುತ್ತಾ  ಆಕಾಶದಲ್ಲಿ ಚಿಕ್ಕಿಗಳಂತೆ  ಕಾಣುತ್ತವೆ.  ಧಗದಗಿಸುವ  ವಿಪರೀತ  ಕಾವಿನ  ಅನಿಲಗಳುಳ್ಳ  ಬಹಳ  ದೊಡ್ಡ  ಗೋಳಗಳೇ  ನಕ್ಷತ್ರಗಳು.
         ಗ್ರಹಗಳಷ್ಟು  ಗಾತ್ರವಿರುವ  ನಕ್ಷತ್ರಗಳನ್ನು  ಕುಬ್ಜ  ನಕ್ಷತ್ರಗಳು  ಎನ್ನುತ್ತಾರೆ.  ಗ್ರಹಗಳಿಗಿಂತಲೂ  ಬಹಳ  ದೊಡ್ಡದಾದ  ನಕ್ಷತ್ರಗಳನ್ನು  ಜೇಷ್ಠ  ನಕ್ಷತ್ರಗಳು ಎನ್ನುತ್ತಾರೆ,  ಸೂರ್ಯನಿಗಿಂತಲೂ  ದೊಡ್ಡದಾದ  ನಕ್ಷತ್ರಗಳನ್ನು ದೈತ್ಯ ನಕ್ಷತ್ರಗಳು  ಎನ್ನುತ್ತಾರೆ. (  ರೋಹಿಣಿ ನಕ್ಷತ್ರ  ಸೂರ್ಯನಿಗಿಂತ 36 ಪಟ್ಟು  ದೊಡ್ಡದಿದೇ)
          ಆಕಾಶದಲ್ಲಿ  ಅಪಾರವಾದ , ಅಸಂಖ್ಯಾತ ನಕ್ಷತ್ರಗಳನ್ನು ಕಾಣುತ್ತೇವೆಯಾದರೂ,  ಜ್ಯೋತಿಷ್ಯ ಶಾಸ್ತ್ರದ ಲ್ಲಿ 27  ನಕ್ಷತ್ರಗಳನ್ನು  ಗುರುತಿಸಿದ್ದಾರೆ.
ಅವುಗಳೆಂದರೆ......
ಆಶ್ವಿನಿ
ಭರಣಿ
ಕೃತಿಕಾ
ರೋಹಿಣಿ
ಮೃಗಶಿರ
ಆರಿದ್ರ
ಪುನರ್ವಸು
ಪುಷ್ಯ
ಆಶ್ಲೇಷ
ಮಖಾ 
ಪುಬ್ಬ
ಉತ್ತರ
ಹಸ್ತ
ಚಿತ್ತ
ಸ್ವಾತಿ
ವಿಶಾಖ
ಅನುರಾಧ
ಜ್ಯೇಷ್ಠ
ಮೂಲ
ಪೂರ್ವಾಷಾಢ
ಉತ್ತರಾಷಾಢ
ಶ್ರವಣ
ಧನಿಷ್ಠ
ಶತಭಿಷ
ಪೂರ್ವಾಬಾದ್ರ
ಉತ್ತರಾಬಾದ್ರ
ರೇವತಿ...
          27 ನಕ್ಷತ್ರವೆಂದು  ಗುರುತಿಸಿರುವುದು ನಕ್ಷತ್ರಗಳ  ಒಂದೊಂದು  ಸಮೂಹ .ಅಥವಾ  ಗುಂಪನ್ನೇ  ಹೊರತು , ಒಂದು ನಕ್ಷತ್ರವನ್ನಲ್ಲ.   ನಿದರ್ಶನವಾಗಿ  ನೋಡಿದಾಗ ಕ್ರಮವಾಗಿ  ನಕ್ಷತ್ರ  ಹಾಗೂ. ಅವುಗಳು  ಹೊಂದಿರುವ  ನಕ್ಷತ್ರಗಳ  ಸಂಖ್ಯೆ  ಹೀಗಿದೆ...
ಆಶ್ವಿನಿ ---------- ----- 3
ಭರಣಿ ----------------- 3
ಕೃತಿಕಾ ----------------6
ರೋಹಿಣಿ -------------5
ಮೃಗಶಿರ -------------3
ಆರಿದ್ರ  ----------------1
ಪುನರ್ವಸು -----------5
ಪುಷ್ಯ ------------------3
ಆಶ್ಲೇಷ ----------------೬
ಮಖಾ ----------------೫
ಪುಬ್ಬ ------------------4
ಉತ್ತರ ----------------4
ಹಸ್ತ --------------------5
ಚಿತ್ತ ------------------- 1
ಸ್ವಾತಿ. ----------------1
ವಿಶಾಖ  --------------5
ಅನುರಾಧ  ----------6
ಜ್ಯೇಷ್ಠ. ----------------3
ಮೂಲ  ---------------6
ಪೂರ್ವಾಷಾಢ -----4
ಉತ್ತರಾಷಾಢ ------4
ಶ್ರವಣ ----------------೩
ಧನಿಷ್ಠ  ----------------4
ಶತಭಿಷ  ----------- 100
ಪೂರ್ವಾಬಾದ್ರ ---- 4
ಉತ್ತರಾಬಾದ್ರ  ---- ೪
ರೇವತಿ  ---------------೩೨
          ನಮ್ಮ  ಪ್ರತಿಯೊಂದು  ಅಧ್ಯಯನಕ್ಕೆ  ಭೂಮಿಯೇ  ಕೇಂದ್ರವಾಗಿರುವುದರಿಂದ  ಭೂಮಿಯ ಮೇಲೆ  ಪ್ರಭಾವವನ್ನುಂಟು  ಮಾಡುವ  ನಕ್ಷತ್ರಗಳ  ಸಮೂಹವನ್ನು ಮಾತ್ರ  ನಮ್ಮ  ಸನಾತನ  ಮುನಿಗಳು  ಗುರ್ತಿಸಿ,  ಅವುಗಳ  ಗುಣ ಸ್ವಭಾವವನ್ನು  ಅಧ್ಯಯನ  ಮಾಡಿರುತ್ತಾರೆ.
          ಜ್ಯೋತಿಷ್ಯ  ಶಾಸ್ತ್ರದ ಲ್ಲಿ  ಮೊದಲ ಸ್ಥಾನ  ನಕ್ಷತ್ರಗಳದ್ದಾಗಿದ್ದು,  ಸಕಲ  ಜೀವ ಜಂತುಗಳಿಗೂ  ಬಲಾಬಲಗಳನ್ನು  ನೀಡುವ  ಪ್ರಮುಖ  ಸಾಧನವಾಗಿದೆ.  ಜೀವಿಯು  ಜನಿಸುವ  ಸಮಯಕ್ಕೆ  ಇರುವ  ನಕ್ಷತ್ರದ  ಆಧಾರದ ಮೇಲೆ ಆತನ  ಜೀವಿತದಲ್ಲಿ  ಆಗುವ  ಸುಖ - ದುಃಖ,  ಕಷ್ಟ -  ನಷ್ಟಗಳು  ಮತ್ತು .ಆಗುಹೋಗುಗಳು  ವ್ಯಕ್ತವಾಗುತ್ತದೆ.
          ಈ  27 ನಕ್ಷತ್ರಗಳು  ಭಚಕ್ರದಲ್ಲಿ  ಯಾವ ರೀತಿಯಲ್ಲಿ  ಹಂಚಿಕೆಯಾಗಿವೆ  ಎಂಬುದನ್ನು  ತಿಳಿದುಕೊಳ್ಳೋಣ.
        ಕಾಂತಿವೃತ್ತ (  ಭಚಕ್ರ ) ವು 360°  ಗಳಿದ್ದು,  ನಕ್ಷತ್ರಗಳ  ಸಂಖ್ಯೆ  27 ರಿಂದ  ಭಾಗಿಸಿದರೆ  13 °-1/3,  ಅಂದರೆ  13°  - 20 ನಿಮಿಷ  ಒಂದು ನಕ್ಷತ್ರದ  ಪ್ರಮಾಣವಾಗುತ್ತದೆ.    ಪ್ರತಿ  ನಕ್ಷತ್ರವೂ  ನಾಲ್ಕು  ಪಾದಗಳನ್ನು  ಹೊಂದಿದ್ದು,  13° - 20
ನಿಮಿಷವನ್ನು  ಪುನಃ  ನಾಲ್ಕು ಭಾಗ  ಮಾಡಿದಾಗ  3°-20'  ವು  ನಕ್ಷ್ಟ್ರತ್ರದ  ಒಂದು  ಪಾದವಾಗುತ್ತದೆ.  ನಕ್ಷತ್ರಗಳು  27
ಪಾದಗಳು  4  ... ಇವುಗಳನ್ನು  ಗುಣಿಸಿದಾಗ
         27 × 4 =  108  ----  ಪಾದಗಳು
    ಚಂದ್ರನು  ಪ್ರತಿದಿನ  ಸುಮಾರು  ಒಂದು ನಕ್ಷತ್ರದಂತೆ  ಒಂದು  ತಿಂಗಳಲ್ಲಿ ( 28/29.5 ದಿನ)  ಈ 27  ನಕ್ಷತ್ರದಲ್ಲಿ ಸಂಚರಿಸುತ್ತಾನೆ.
      ಚಂದ್ರನು ನಕ್ಷತ್ರದ  ಒಂದು ಪಾದದಲ್ಲಿ  ಸುಮಾರು  6 ರಿಂದ  6 1/4  ಗಂಟೆಗಳ  ಕಾಲ  ಇರುತ್ತಾನೆ.
          ಕಾಂತಿವೃತ್ತದ  360° ಗಳಲ್ಲಿ  12  ರಾಶಿಗಳಿದ್ದು ಒಂದೊಂದು  ರಾಶಿಯೂ  30°  ಉಳ್ಳದ್ದಾಗಿರುತ್ತದೆ.
          27  ನಕ್ಷತ್ರಗಳ  108  ಪಾದಗಳನ್ನು  360° ಗಳ  12  ರಾಶಿಗಳಲ್ಲಿ  ಒಂದೊಂದು  ರಾಶಿಯಲ್ಲಿ (30°)  9  ಪಾದಗಳಂತೆ  ವಿಂಗಡಿಸಲಾಗಿದೆ.
          ಭಚಕ್ರದ  ಮೊದಲ ರಾಶಿಯಾದ  ಮೇಶದಲ್ಲಿ
ಆಶ್ವಿನಿ  ನಕ್ಷತ್ರದ  4  ಪಾದಗಳು    13° - ೨0'
ಭರಣಿ ನಕ್ಷತ್ರದ  4   ಪಾದಗಳು.    13° - 20'
ಕೃತಿಕಾ ನಕ್ಷತ್ರದ  ಒಂದು ಪಾದ.     3°  -  20'
                                                 ----------------
                                   ಒಟ್ಟು.      30°  ಗಳು  
  
          ಭಚಕ್ರದ  ಎರಡನೇ  ರಾಶಿಯಾದ  ವೃಷಭದಲ್ಲಿ 
ಕೃತಿಕಾ ನಕ್ಷತ್ರದ 3 ಪಾದಗಳು           10° -- 00
ರೋಹಿಣಿ  ನಕ್ಷತ್ರದ ನಾಲ್ಕು ಪಾದಗಳು13° - 20'
ಮೃಗಶಿರ ನಕ್ಷತ್ರದ  ಎರಡು ಪಾದಗಳು  6° -- 40'
                                                   -----------------   
                                   ಒಟ್ಟು.            30° ಗಳು
ಭಚಕ್ರದ  ಮೂರನೇ ರಾಶಿಯಾದ  ಮಿಥುನ ದಲ್ಲಿ
ಮೃಗಶಿರ ದ  ಎರಡು ಪಾದಗಳು    6°  - 40'
ಆರಿದ್ರ  ದ  ನಾಲ್ಕು ಪಾದಗಳು     13°   20'
ಪುನರ್ವಸುವಿನ ಮೂರು ಪಾದಗಳು10°- 00
                                               ------------------
                                         ಒಟ್ಟು       30° ಗಳು
ಭಚಕ್ರದ  ನಾಲ್ಕನೇ ರಾಶಿಯಾದ  ಕಟಕ  ದಲ್ಲಿ
ಪುನರ್ವಸುವಿನ  ಒಂದು ಪಾದ.      3° - ೨೦'
ಪುಷ್ಯಾದ  ನಾಲ್ಕು ಪಾದಗಳು.      13°- 20'
ಆಶ್ಲೇಷದ ನಾಲ್ಕು ಪಾದಗಳು        13° - ೨0'
                                            --------------------
                                            ಒಟ್ಟು  30°  ಗಳು
ಭಚಕ್ರದ ಐದನೇ ರಾಶಿಯಾದ  ಸಿಂಹದಲ್ಲಿ
ಮಖ ನಕ್ಷತ್ರದ ನಾಲ್ಕು  ಪಾದಗಳು  13 ° - 20'
ಪುಬ್ಬ ನಕ್ಷತ್ರಡ ನಾಲ್ಕು ಪಾದಗಳು.  13° -- 20'
ಉತ್ತರ  ನಕ್ಷತ್ರದ  ಒಂದು ಪಾದ.      3°  --  20"
-                                                  -------------------
                                             ಓಟ್ಟು   30°  ಗಳು
      
ಭಚಕ್ರದ ಆರನೇ  ರಾಶಿಯಾದ  ಕನ್ಯಾದಲ್ಲಿ
ಉತ್ತರ  ನಕ್ಷತ್ರದ ಉಳಿದ 3 ಪಾದಗಳು 10° -- 00
ಹಸ್ತ ನಕ್ಷತ್ರದ  ನಾಲ್ಕು ಪಾದಗಳು.        13° --20'
ಚಿತ್ತ ನಕ್ಷತ್ರದ ಎರಡು ಪಾದಗಳು            6° -- 40'
                                                      -------------------
                                               ಒಟ್ಟು   30°  ಗಳು
ಭಚಕ್ರದ  ಏಳನೇ  ರಾಶಿಯಾದ  ತುಲಾದಲ್ಲಿ
ಚಿತ್ತ  ನಕ್ಷತ್ರದ ಉಳಿದ 2 ಪಾದಗಳು.      6° -- 40'
ಸ್ವಾತಿ ನಕ್ಷತ್ರದ ನಾಲ್ಕು  ಪಾದಗಳು       13°-- 20'
ವಿಶಾಖ ನಕ್ಷತ್ರದ 3  ಪಾದಗಳು.            10°--00
-                                                   ---------------------
                                            ಒಟ್ಟು.     30°  ಗಳು
ಭಚಕ್ರದ  ಎಂಟನೇ ರಾಶಿಯಾದ ವೃಶ್ಚಿಕ ದಲ್ಲಿ
ವಿಶಾಖ ನಕ್ಷತ್ರದ ಉಳಿದ ಒಂದು ಪಾದ   3° -- 20'
ಅನುರಾಧ ನಕ್ಷತ್ರದ ನಾಲ್ಕು ಪಾದಗಳು  13°-- 20'
ಜೇಷ್ಠ ನಕ್ಷತ್ರದ  ನಾಲ್ಕು  ಪಾದಗಳು.       13°--20'
                                                    ---------------------
                                             ಒಟ್ಟು.      30°  ಗಳು
ಭಚಕ್ರದ ಒಂಭತ್ತನೇ ರಾಶಿಯಾದ  ಧನಸ್ಸುವಿನಲ್ಲಿ
ಮೂಲ ನಕ್ಷತ್ರದ ನಾಲ್ಕು  ಪಾದಗಳು.      13° -- 20'
ಪೂ.ಷಾಢ ನಕ್ಷತ್ರದ ನಾಲ್ಕು  ಪಾದಗಳು. 13° --20'
ಉ. ಷಾಢ ನಕ್ಷತ್ರದ  ಒಂದು  ಪಾದ.         3° -- 20'
                                                   ----------------------
                                           ಒಟ್ಟು.        30 °  ಗಳು
 
ಭಚಕ್ರದ ಹತ್ತನೇ ರಾಶಿಯಾದ ಮಕರದಲ್ಲಿ
ಉ.ಷಾಢ ದ  ಉಳಿದ 3  ಪಾದಗಳು.     10° --೦೦
ಶ್ರವಣ  ನಕ್ಷತ್ರದ ನಾಲ್ಕು ಪಾದಗಳು.     13°--  20'
ಧನಿಷ್ಠ ನಕ್ಷತ್ರ  ದ ಎರಡು ಪಾದಾಗಳು.    6° -- ೪0"
                                                   ---------------------
                                              ಒಟ್ಟು    30°    ಗಳು
ಭಚಕ್ರದ ಹನ್ನೊಂದನೇ ರಾಶಿಯಾದ ಕುಂಭದಲ್ಲಿ
ಧನಿಷ್ಠ ನಕ್ಷತ್ರದ ಉಳಿದ ಎರಡು ಪಾದಗಳು  6° - 40'
ಶತಭಿಷ ನಕ್ಷತ್ರದ  ನಾಲ್ಕು ಪಾದಗಳು.       13°- 20'
ಪೂ.ಬಾದ್ರ ನಕ್ಷತ್ರದ ಮೂರು ಪಾದಗಳು     10°--00
                                                      --------------------
                                                  ಒಟ್ಟು    30°  ಗಳು
ಭಚಕ್ರದ ಕೊನೆಯ ರಾಶಿಯಾದ ಮೀನದಲ್ಲಿ
ಪೂ.ಬಾದ್ರ ದ  ಉಳಿದ  ಒಂದು ಪಾದ   3°  -- 20'
ಉ.ಬಾದ್ರ ದ ನಾಲ್ಕು ಪಾದಗಳು.        13° -- 20'
ರೇವತಿ ನಕ್ಷತ್ರದ ನಾಲ್ಕು ಪಾದಗಳು      13° --20'
                                                    --------------------
                                                 ಒಟ್ಟು  30°  ಗಳು
ಹೀಗೆ 12 ರಾಶಿಗಳಲ್ಲಿ 108  ಪಾದಗಳನ್ನು  ಹಂಚಲಾಗಿದೆ.
          27  ನಕ್ಷತ್ರಗಳ  ಗುಣಧರ್ಮಗಳು ಒಂದರಿಂದೊಂದು ಭಿನ್ನವಾಗಿವೆ.   ಭಾರತೀಯ  ಜ್ಯೋತಿಷ್ಯವು  ನಕ್ಷತ್ರ ಪ್ರಧಾನವಾಗಿರುವುದರಿಂದ  ಎಲ್ಲಾ  ಸಂದರ್ಭದಲ್ಲಿಯೂ ನಿರ್ಣಾಯಕ ಪಾತ್ರವನ್ನು  ವಹಿಸುತ್ತದೆ.  ಪ್ರತಿಯೊಂದು  ಕಾರ್ಯವನ್ನು  ನಿರ್ವಹಿಸುವಾಗಲೂ  ಆಯಾ  ಸಂದರ್ಭಕ್ಕೆ  ತಕ್ಕಂತೆ  ಸರಿಯಾಗಿ  ಶುಭಫಲಗಳನ್ನು   ಕೊಡುವ  ನಕ್ಷತ್ರಗಳನ್ನೇ  ಉಪಯೋಗಿಸಬೇಕೆಂಬುದನ್ನು  ಜ್ಯೋತಿಷ  ದಾರ್ಶನಿಕರು  ತಿಳಿಸಿರುತ್ತಾರೆ.
          ಹಾಗಾಗಿ  ಈ  ನಕ್ಷತ್ರಗಳ  ಬಗೆಗೆ  ಹಂತ ಹಂತವಾಗಿ  ತಿಳಿಯಲು  ಪ್ರಯತ್ನಿಸೋಣ.
ಚತುರ್ವಿಧ ಫಲ  ಪುರುಷಾರ್ಥ  ನಕ್ಷತ್ರಗಳು :--
( ಧರ್ಮ,  ಅರ್ಥ,  ಕಾಮ,  ಮೋಕ್ಷ ನಕ್ಷತ್ರಗಳು)
ಧರ್ಮ ನಕ್ಷತ್ರಗಳು :--   ಆಶ್ವಿನಿ,  ಪುಷ್ಯ,  ಆಶ್ಲೇಷ,  ವಿಶಾಖ,  ಅನೂರಾಧ, ಧನಿಷ್ಠ,  ಶತಭಿಷ.
ಅರ್ಥ ನಕ್ಷತ್ರಗಳು :--  ಭರಣಿ , ಪುನರ್ವಸು,  ಮಖಾ, ಸ್ವಾತಿ,  ಜ್ಯೇಷ್ಠ,  ಶ್ರವಣ,  ಪೂರ್ವಾಬಾದ್ರ.
ಕಾಮ ನಕ್ಷತ್ರಗಳು  :-- ಕೃತಿಕಾ,  ಆರಿದ್ರ,  ಪುಬ್ಬ, ಚಿತ್ತ, ಮೂಲ , ಉತ್ತರಾಬಾದ್ರ.
ಮೋಕ್ಷ ನಕ್ಷತ್ರಗಳು :--  ರೋಹಿಣಿ,  ಮೃಗಶಿರ, ಉತ್ತರ, ಹಸ್ತ,  ಪೂರ್ವಾಬಾದ್ರ,  ಉತ್ತರಾಷಾಢ,  ರೇವತಿ.
        ಮೇಲಿನ  ಈ  ನಕ್ಷತ್ರಗಳಲ್ಲಿ  ಜನಿಸಿದಾಗ  ಅಥವಾ  ಗ್ರಹಗಳು  ಸ್ಥಿತರಾದಾಗ  ಯಾವ  ಉದ್ದೇಶ  ನೆರವೇರುತ್ತದೆ  ಎಂದು  ತಿಳಿಯಬಹುದು
          ನಕ್ಷತ್ರಗಳಲ್ಲಿ  ಲಿಂಗಗಳು  :--
ಪುರುಷ  ನಕ್ಷತ್ರ :--  ಆಶ್ವಿನಿ,  ಪುನರ್ವಸು,  ಪುಷ್ಯ,  ಹಸ್ತ,  ಶ್ರವಣ,  ಅನೂರಾಧ,  ಪೂರ್ವಾಬಾದ್ರ,  ಉತ್ತರಾಬಾದ್ರ  ನಕ್ಷತ್ರಗಳು.
ಸ್ತ್ರೀ  ನಕ್ಷತ್ರಗಳು  :--  ಭರಣಿ,  ಕೃತಿಕಾ,  ರೋಹಿಣಿ,  ಆರಿದ್ರ,  ಆಶ್ಲೇಷ,  ಮಖಾ,  ಪುಬ್ಬ,  ಉತ್ತರ  ಚಿತ್ತ,  ಸ್ವಾತಿ,  ವಿಶಾಖ,  ಜ್ಯೇಷ್ಠ,  ಪೂರ್ವಾಷಾಢ,  ಉತ್ತರಾಷಾಢ,  ಧನಿಷ್ಠ,  ರೇವತಿ.
ನಪುಂಸಕ  ನಕ್ಷತ್ರಗಳು  :--  ಮೃಗಶಿರ,  ಮೂಲ,  ಶತಭಿಷ.
           ಪ್ರತಿ ಜೀವಿಯಲ್ಲೂ  ಗುಣವೇ  ಪ್ರಧಾನವಾಗಿರುತ್ತದೆ.  ಇದು  ಮನುಷ್ಯನ  ವ್ಯಕ್ತಿತ್ವವನ್ನು  ರೂಪಿಸುವುದಾಗಿದೆ,  ಆದ್ದರಿಂದಲೇ  ಸಾತ್ವಿಕ,  ರಾಜಸಿಕ, ತಾಮಸಿಕ,  ಎಂಬ  ಹೆಸರನ್ನು  ಪಡೆದುಕೊಳ್ಳುತ್ತದೆ.
      ಸಾತ್ವಿಕ  ನಕ್ಷತ್ರಗಳು  :--  ಪುನರ್ವಸು,  ಆಶ್ಲೇಷ, ವಿಶಾಖ,  ಜ್ಯೇಷ್ಠ,  ಪೂರ್ವಾಬಾದ್ರ,  ರೇವತಿ.
      ರಾಜಸಿಕ  ನಕ್ಷತ್ರಗಳು  :--  ಭರಣಿ ,  ಕೃತಿಕಾ,  ರೋಹಿಣಿ,  ಪುಬ್ಬ,  ಉತ್ತರ,  ಹಸ್ತ, ಪೂರ್ವಾಷಾಢ,  ಉತ್ತರಾಷಾಢ,
     ತಾಮಸಿಕ ನಕ್ಷತ್ರಗಳು  :--  ಆಶ್ವಿನಿ ,  ಮೃಗಶಿರ,  ಆರಿದ್ರ,  ಪುಷ್ಯ,  ಮಖಾ,  ಚಿತ್ತ, ಸ್ವಾತಿ,  ಅನೂರಾಧ, ಮೂಲ,  ಧನಿಷ್ಠ,  ಉತ್ತರಾಬಾದ್ರ.
ಮುಂದುವರೆಯುವುದು................
✍. Dr :   B N   ಶೈಲಜಾ ರಮೇಶ್

3 comments:

  1. ಸರಳ,ಸ್ಪಷ್ಟ ನಿರೂಪಣೆ. ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸುಲಭ ಹಂತಗಳಲ್ಲಿ ಸಮಗ್ರ ವಿವರಣೆ.
    ಧನ್ಯವಾದಗಳು ಮೇಡಂ

    ReplyDelete
  2. ಧನ್ಯವಾದಾಗಳು ಸರ್💐💐

    ReplyDelete