Monday, 21 July 2025

ನಕ್ಷತ್ರಗಳ ಬಗ್ಗೆ ಅಧ್ಯಯನ


ಹರಿಃ  ಓಂ
ಶ್ರೀ ಗಣೇಶಾಯ ನಮಃ
ಶ್ರೀ ಗುರುಭ್ಯೋನಮಃ

ನಕ್ಷತ್ರಗಳ  ಬಗ್ಗೆ .ಅಧ್ಯಯನ
ಮುಂದುವರೆದ  ಭಾಗ.............
Picture source: Internet/ social media
ನಕ್ಷತ್ರಾಧಿಪತಿಗಳು :---
         ನಕ್ಷತ್ರಗಳು                                                         ಅಧಿಪತಿ
ಆಶ್ವಿನಿ   ಮಖಾ    ಮೂಲ                                          ಕೇತು ಆಧಿಪತಿ
ಭರಣಿ   ಪುಬ್ಬ     ಪೂ.ಷಾಢ                                       ಶುಕ್ರ ಅಧಿಪತಿ
ಕೃತಿಕ    ಉತ್ತರ   ಉ. ಷಾಢ                                     ರವಿ ಅಧಿಪತಿ
ರೋಹಿಣಿ   ಹಸ್ತ     ಶ್ರವಣ                                         ಚಂದ್ರ  ಅಧಿಪತಿ
ಮೃಗಶಿರ   ಚಿತ್ತ       ಧನಿಷ್ಠ                                       ಕುಜ  ಅಧಿಪತಿ
ಆರಿದ್ರ      ಸ್ವಾತಿ    ಶತಭಿಷ.                                     ರಾಹು  ಅಧಿಪತಿ
ಪುನರ್ವಸು  ವಿಶಾಖ ಪೂ.ಬಾದ್ರ                                  ಗುರು ಅಧಿಪತಿ
ಪುಷ್ಯ.     ಅನುರಾಧ  ಉ. ಬಾದ್ರ                                 ಶನಿ ಅಧಿಪತಿ
ಆಶ್ಲೇಷ   ಜ್ಯೇಷ್ಠ    ರೇವತಿ.                                        ಬುದ ಅಧಿಪತಿ

           ದಶಾಭುಕ್ತಿ ಗಳು  ಸಹ ಜನ್ಮ ನಕ್ಷತ್ರದ  ಆಧಾರದ  ಮೇಲೆ  ನಿರ್ಧಾರವಾಗುತ್ತದೆ.
ನಕ್ಷತ್ರಗಳಿಂದ ಸೂಚಿತವಾದ  ದೇಹದ  ಭಾಗಗಳು ಯಾವುದು  ಎಂಬುವುದನ್ನು ತಿಳಿಯೋಣ

ನಕ್ಷತ್ರಗಳು.            ಸೂಚಿತ  ದೇಹದ  ಭಾಗಗಳು
ಕೃತಿಕಾ                   ತಲೆ
ರೋಹಿಣಿ.               ಮುಂದಲೇ
ಮೃಗಶಿರ                ಕಣ್ಣ ರೆಪ್ಪೆಗಳು
ಆರಿದ್ರ.                   ಕಣ್ಣುಗಳು
ಪುನರ್ವಸು              ಮೂಗು
ಪುಷ್ಯ                      ಮುಖ
ಆಶ್ಲೇಷ                   ಕಿವಿ
ಮಖಾ.                   ತುಟಿ ಹಾಗೂ  ಕೆನ್ನೆ
ಪುಬ್ಬ                      ಬಲಗೈ
ಉತ್ತರ                   ಎಡಗೈ
ಹಸ್ತ                       ಕೈಬೆರಳುಗಳು
ಚಿತ್ತ                       ಕತ್ತು/ ಕೊರಳು
ಸ್ವಾತಿ                    ಎದೆಯ  ಭಾಗ
ವಿಶಾಖ                  ಹೃದಯ
ಅನೂರಾಧ             ಹೊಟ್ಟೆ
ಜ್ಯೇಷ್ಠ                    ಸೊಂಟದ ಬಲಭಾಗ
ಮೂಲ                   ಸೊಂಟದ  ಎಡಭಾಗ
ಪೂರ್ವಾಷಾಢ         ಬೆನ್ನು
ಉತ್ತರಾಷಾಢ         ಸೊಂಟ / ಕಟಿಪ್ರದೇಶ
ಶ್ರವಣ                   ಜನನಾಂಗಗಳು
ಧನಿಷ್ಠ                   ಗುದದ್ವಾರ
ಶತಭಿಷ                ಬಲತೊಡೆ
ಪೂರ್ವಾಬಾದ್ರ.      ಎಡತೊಡೆ
ಉತ್ತರಾಬಾದ್ರ        ಮೊಣಕಾಲು
ರೇವತಿ                  ಕಣಕಾಲು
ಆಶ್ವಿನಿ                   ಮಂಡಿ
ಭರಣಿ                   ಪಾದಗಳು
     ಈ  ನಕ್ಷತ್ರಗಳು  ಶರೀರದ  ಯಾವಭಾಗವನ್ನು  ಸೂಚಿಸುತ್ತದೆ ಯೋ  ಆ ಭಾಗಕ್ಕೆ  ಉಂಟಾಗಬಹುದಾದ  ಊನ,  ರೋಗ, ದೋಷಗಳನ್ನ ತಿಳಿಯಲು ಸಹಕಾರಿಯಾಗುತ್ತದೇ.   ಮೆಧಿನಿ  ಜ್ಯೋತಿಷ್ಯದಲ್ಲೂ  ಇದು  ಉಪಯೋಗಕ್ಕೆ  ಬರುತ್ತದೆ.

ದುಷ್ಟನಕ್ಷತ್ರ ಜನನ :--      
         ಅಶ್ವಿನಿ,  ರೋಹಿಣಿ,  ಪುಷ್ಯ,  ಆಶ್ಲೇಷ,  ಮಖಾ, ಉತ್ತರ,  ಚಿತ್ತ,  ಜ್ಯೇಷ್ಠ,  ಮೂಲ,  ಪೂರ್ವಾಷಾಢ,  ರೇವತಿ  ಪೂರ್ಣವಾಗಿ  ದೋಷ ಪೂರಿತವಾದ್ದರಿಂದ,  ಹಾಗೂ  ಭರಣಿ, ಕೃತಿಕಾ,  ಆರಿದ್ರ,  ಪುಬ್ಬ,  ವಿಶಾಖ,  ಪೂರ್ವಾಬಾದ್ರ  ಭಾಗಶಃ  ದೋಷವಿರುವುದರಿಂದ  ಶಾಂತಿಯನ್ನು  ಮಾಡಿಕೊಳ್ಳಬೇಕಾಗುತ್ತದೇ.
         ಜೇಷ್ಠ  ನಕ್ಷತ್ರದ ಕೊನೆಯ ಪಾದ,  ಮೂಲಾ ನಕ್ಷತ್ರದ  ಮೊದಲ ಪಾದವೂ ಸಹ ಅಶುಭ  ಫಲಗಳನ್ನೇ  ನೀಡುವುದಾಗಿದೆ.   ಈ  ಪಾದಗಳಲ್ಲಿ  ಜನನವಾದರೆ,  ಮಗು /  ತಂದೆ  ತಾಯಿಗಳಿಗೆ, ಒಟ್ಟಾರೆಯಾಗಿ  ಕುಟುಂಬದ   ಏಳಿಗೆಗೆ  ಹಾನಿಯಾಗುತ್ತದೆ.
          ವಿಶೇಷವಾಗಿ  ಜನ್ಮಕ್ಕೆ ಸಂಬಂಧಿಸಿದಂತೆ  ಆಶ್ವಿನಿ,  ಮಖಾ, ಮೂಲ  ನಕ್ಷತ್ರಗಳ  1  2  ನೆ  ಪಾದಗಳು  ಹಾಗೂ  ಆಶ್ಲೇಷ,  ಜ್ಯೇಷ್ಠ,  ರೇವತಿ 3, 4 ನೆ  ಪಾದಗಳಲ್ಲಿ ದೋಷವಿರುತ್ತದೆ. ಅದು  ಋಕ್ಷ ಸಂದಿ ಯಾಗುತ್ತದೆ.
          ಜ್ಯೇಷ್ಠಅಂತ್ಯದ  ಎರಡು  ಗಳಿಗೆ  ಮತ್ತು  ಮೂಲ  ನಕ್ಷತ್ರದ  ಮೊದಲೆರಡು ಗಳಿಗೆಯಲ್ಲಿ  ಶಿಶು  ಜನನವಾದರೆ  ಅಭುಕ್ತ ಮೂಲವೆನಿಸುತ್ತದೆ.  ಇಲ್ಲಿಯೂ ಸಹ  ಮಗು / ತಂದೆ ತಾಯಿ / ಕುಟುಂಬದ  ಏಳಿಗೆಗೆ  ಹಾನಿಯಾಗುವುದರಿಂದ  ಗೋಮುಖ  ಪ್ರಸವ  ಶಾಂತಿ ಹಾಗೂ  ನವಗ್ರಹಕ್ಕೆ  ಸಂಬಂಧಿಸಿದ    ಧಾನ್ಯಗಳನ್ನು  ದಾನ  ಮಾಡುವುದರಿಂದ  ಸ್ವಲ್ಪ  ಮಟ್ಟಿನ ಪರಿಹಾರವನ್ನು  ಕಂಡುಕೊಳ್ಳಬಹುದು.
          ಸ್ತ್ರೀ ಶಿಶುವನ  ಜನನಕ್ಕೆ  ಸಂಬಂಧಿಸಿದಂತೆ   ,  ಮೂಲಾನಕ್ಷತ್ರದಲ್ಲಿ ಹುಟ್ಟಿದರೆ  ಮಾವನಿಗೂ  ಆಶ್ಲೇಷಾದಲ್ಲಿ  ಹುಟ್ಟಿದರೆ  ಅತ್ತೆಗೂ  ಅಶುಭವೆಂದು  ಪ್ರತೀತಿಯಿದೆ.     ಆದರೆ  ಒಟ್ಟಾರೆ   ನಕ್ಷತ್ರವನ್ನು  ಪರಿಗಣಿಸದೆ  ಮೂಲಾನಕ್ಷತ್ರದ 4  ನೇ  ಪಾದ  ಹಾಗೂ.   ಆಶ್ಲೇಷಾದ  1  ನೆ  ಪಾದ  ಅಶುಭವೆಂದು  ಕೆಲವರ  ಅಭಿಪ್ರಾಯವಿದೆ.     ವಿಶಾಖ  ನಕ್ಷತ್ರದ  4  ನೇ  ಪಾದ  ಮೈದುನನಿಗೂ( ಗಂಡನ  ತಮ್ಮ ) ,  ಜ್ಯೇಷ್ಠ  ನಕ್ಷತ್ರದ  4  ನೆ  ಪಾದ  ಭಾವನಿಗೂ (  ಗಂಡನ  ಅಣ್ಣ )  ಅಶುಭವಾಗುತ್ತದೆ.  ಈ  ದೋಷವನ್ನು  ಕೇವಲ  ಸ್ತ್ರೀಯರ  ಜಾತಕದಲ್ಲಿ  ಮಾತ್ರ  ಪರಿಗಣಿಸಬೇಕು.
        ಶುಭಗ್ರಹಗಳ  ಸಂಯೋಗ,  ಶುಭದೃಷ್ಟಿ  ಇತ್ಯಾದಿಗಳು  ಜಾತಕದಲ್ಲಿದ್ದರೆ  ದೋಷವು  ಪರಿಣಾಮಕಾರಿಯಾಗುವುದಿಲ್ಲ.

ಬಾಲಾರಿಷ್ಠ  ನಕ್ಷತ್ರಗಳು :--
          ಆಶ್ವಿನಿ            2,  4 ನೇ  ಪಾದ
          ಭರಣಿ.            2 ನೇ  ಪಾದ
          ಚಿತ್ತ.               2 ನೇ  ಪಾದ
          ವಿಶಾಖ           4 ನೇ  ಪಾದ
          ಕೃತಿಕಾ           3 ನೇ  ಪಾದ
          ರೋಹಿಣಿ         1, 4 ನೇ  ಪಾದ
          ಮೃಗಶಿರ.       1 ನೇ  ಪಾದ
          ಪುಷ್ಯ.            1 ನೇ ಪಾದ
          ಮಖಾ.           2 ನೇ ಪಾದ
          ಉತ್ತರ           2 ನೇ ಪಾದ
          ಹಸ್ತ.              3, 4 ನೇ ಪಾದ
          ಅನುರಾಧ       3 ನೇ ಪಾದ
          ಜ್ಯೇಷ್ಠ             3,  4 ನೇ ಪಾದ
          ಮೂಲ            2  3  ನೇ  ಪಾದ
          ಉತ್ತರಾಷಾಢ   2 ನೇ  ಪಾದ
          ಧನಿಷ್ಠ.              2 ನೇ  ಪಾದ
          ಶತಭಿಷ.           ನಾಲ್ಕೂ  ಪಾದಗಳು
          ಉತ್ತರಾಬಾದ್ರ.  4 ನೇ  ಪಾದ
         ಇವುಗಳು  ಬಾಲಾರಿಷ್ಟವನ್ನು  ತರುತ್ತದೆ.
ಇನ್ನು. ಮರಣದಲ್ಲಿ  ನಕ್ಷತ್ರಗಳನ್ನು  ಹೇಗೆ.ಪರಿಗಣಿಸಬೇಕು  ಎಂಬುದನ್ನು  ನೋಡೋಣ
          ಧನಿಷ್ಠ  ಪಂಚಕವೆಂದು ಖ್ಯಾತಿಯಾಗಿರುವ  ಧನಿಷ್ಠ,  ಶತಭಿಷ, ಪೂರ್ವಾಬಾದ್ರ,  ಉತ್ತರಾಬಾದ್ರ,  ರೇವತಿ,   ಈ  ಐದೂ  ನಕ್ಷತ್ರಗಳಲ್ಲಿ ಮೃತಿ ಹೊಂದಿದರೆ,  ಮೃತಿ ಹೊಂದಿದ ಸ್ಥಳವನ್ನು  5  ತೊಂಗಳ ಕಾಲ  ಬಿಡಬೇಕು.
           ಇನ್ನು  ತ್ರಿಪಾದಿ  ನಕ್ಷತ್ರಗಳಾದ. ಕೃತಿಕಾ, ಪುನರ್ವಸು,  ಉತ್ತ ರ  ವಿಶಾಖ, ಉತ್ತರಾಷಾಢ,  ಪೂರ್ವಾಬಾದ್ರ  ನಕ್ಷತ್ರಗಳಲ್ಲಿ,  ಪೂರ್ವಾಬಾದ್ರ ವೊಂದನ್ನು  ಬಿಟ್ಟು  ಉಳಿದ  ನಕ್ಷತ್ರಗಳಲ್ಲಿ  ಮೃತರಾದರೆ,  ಮೃತಸ್ಥಳವನು 3  ತಿಂಗಳುಗಳ  ಕಾಲ  ಬಿಡಬೇಕು.( ಪೂರ್ವಾಬಾದ್ರ  ನಕ್ಷತ್ರವು  ಪಂಚಕ  ನಕ್ಷತ್ರಗಳಲ್ಲಿ  ಸೇರುತ್ತದೆ.)

ತಾರಾಬಲ  :--
         ಪ್ರತಿಯೋಂದು  ಕಾರ್ಯದಲ್ಲಿ. ತಾರಾಬಲವು  ಪ್ರಮುಖ ಪಾತ್ರವನ್ನು  ವಹಿಸುತ್ತದೆ.   ಜನನ  ನಕ್ಷತ್ರಕ್ಕೆ  ಸಂಭಂಧಿಸಿದಂತೆ  ಯಾವ ನಕ್ಷತ್ರಗಳಲ್ಲಿ ಯಾವ ಫಲ  ಉಂಟಾಗುತ್ತದೆ  ಎಂದು  ನೋಡಿದಾಗ.....
          ನಮ್ಮ  ಪ್ರಾಜ್ಞರಾದ  ಮಹಾಮುನಿಗಳು  ಗುರುತಿಸಿರುವಂತೆ  9  ರೀತಿಯಾದ  ತಾರಾಬಲವು ಇರುತ್ತದೆ.
1,  ಜನ್ಮತಾರೆ
2,  ಸಂಪತ್ ತಾರೆ
3, ವಿಪತ್ ತಾರೆ
4,  ಕ್ಷೇಮ ತಾರೆ
5, ಪ್ರತ್ಯಕ್ ತಾರೆ
6, ಸಾಧನ ತಾರೆ
7, ನೈಧನ ತಾರೆ ( ವಧ ತಾರೆ)
8, ಮಿತ್ರತಾರೆ
9, ಅತಿಮಿತ್ರ ತಾರೆ ( ಪರಮ ಮಿತ್ರ ತಾರೆ)
    
         ಈ  ತಾರೆಗಳಲ್ಲಿ. 2,  4,  6,  8 ನೆ  ತಾರೆಗಳು  ಶುಭವೆಂದೂ,  ಉಳಿದವು  ಅಶುಭವೆಂದೂ, 9  ನೆ  ತಾರೆಯಾದ ಅತಿಮಿತ್ರ ತಾರೆ  ಸಂದರ್ಭಾನುಸಾರ  ಶುಭವೆಂತಲೂ  ಪರಿಗಣಿಸಲಾಗಿದೆ.
          ತಾರಾಬಲವು  ವಧೂವರರ  ಸಾಲಾವಳಿಯಲ್ಲಿ  ಪ್ರಾಮುಖ್ಯತೆಯನ್ನು  ಪಡೆಯುತ್ತದೆ.  ಮಹೂರ್ತ  ವಿಚಾರದಲ್ಲಿ  ಲಗ್ನಕ್ಕೆ  ತಾರಾಬಲ ವಿಲ್ಲದಾಗ  ಅನಿವಾರ್ಯ  ಸಂದರ್ಭಗಳಲ್ಲಿ  ತಾರಾಶಾಂತಿ  ದಾನದ  ಮೂಲಕ ಪರಿಹಾರ ಮಾಡಿಕಳ್ಳ್ಲಬಹುದು  ಎಂದು  ತಿಳಿಸಲಾಗಿದೆ.   ತಾರಾಬಲವು   ಜನ್ಮ  ನಕ್ಷತ್ರ  ಸಂಭಂದಿಯಾಗಿರುತ್ತದೆ.  ಅಂದರೆ  ಯಾವ  ನಕ್ಷತ್ರದಲ್ಲಿ  ಜನನವಾಗಿರುತ್ತೇವೆಯೋ  ಅದೇ  ಜನ್ಮ ತಾರೆ,  ಮುಂದಿನದು  ಸಂಪತ್ ತಾರೆ.....
ಈ  ರೀತಿಯಾಗಿ  ಮುಂದುವರೆಯುತ್ತದೆ.
           ಪ್ರತಿಯೊಂದು  ನಕ್ಷತ್ರವೂ ನಾಲ್ಕು ಪಾದಗಳನ್ನು  ಹೊಂದಿರುತ್ತದೆ  ಎಂಬುದನ್ನು  ತಿಳಿದಿದ್ದೇವೆ ,  ಕೆಲವು ನಕ್ಷತ್ರದಲ್ಲಿ  ಹುಟ್ಟಿದರೆ  ದೋಷ ಎಂಬುದನ್ನೂ  ಅರಿತಾಯ್ತು,   ಆದರೆ  ದೋಷವಿರುವ  ನಕ್ಷತ್ರಗಲ್ಲಿ  ಎಲ್ಲಾ  ಪಾದಗಳೂ  ದೋಷವನ್ನು  ಹೊಂದಿರುವುದಿಲ್ಲ,  ಆದ್ದರಿಂದ  ಅದರ ಬಗೆಗೆ  ತಿಳಿಯಲು  ಪ್ರಯತ್ನಿಸೋಣ......
1) ಆಶ್ವಿನಿ :--  1 ನೆ ಪಾದ  ಮಗು ಮತ್ತು  ತಂದೆಗೆ  ದೋಷ,  4 ನೇ ಪಾದ  ಸಾಮಾನ್ಯ ದೋಷ.
2)ಭರಣಿ :--  1ನೆ ಪಾದ .ಸಾಮಾನ್ಯ  ದೋಷ,  ಗಂಡು ಮಗುವಾದರೆ  ತಂದೆಗೆ,  ಹೆಣ್ಣುಮಗುವಾದರೆ  ತಾಯಿಗೆ  ದೋಷ.
3) ಕೃತಿಕಾ  :-- 3 ನೇ ಪಾದವಾದರೆ, ಗಂಡಾದರೆ  ತಂದೆಗೆ,  ಹೆಣ್ಣಾದರೆ .ತಾಯಿಗೆ .ದೋಷ,  4  ನೇ  ಪಾದ  ತಾಯಿಗೆ  ಮಾತ್ರ  ದೋಷ.
4) ರೋಹಿಣಿ  :--  1 ನೇ  ಪಾದ ಸೋದರ ಮಾವನ  ತಾಯಿ( ಅಜ್ಜಿ),  2 ನೆ ಪಾದ  ಸೋದರ ಮಾವನ  ತಂದೆ ( ಅಜ್ಜ) , ಉಳಿದವು  ಸೋದರ ಮಾವನಿಗೆ  ತೊಂದರೆ.
5) ಮೃಗಶಿರ :--  ಯಾವುದೇ  ದೋಷವಿಲ್ಲ
6) ಆರಿದ್ರ :-- 4 ನೆ ಪಾದವಾದರೆ  ತಾಯಿಗೆ  ದೋಷ
7) ಪುನರ್ವಸು :--  ಯಾವುದೇ  ದೋಷವಿಲ್ಲ
8) ಪುಷ್ಯ:-- 1 , 4, ಸಾಮಾನ್ಯ  ದೋಷ.  2,  3,  ನೇ  ಪಾದ ಹಗಲಾದರೆ ತಂದೆಗೆ,  ರಾತ್ರಿಯಾದರೆ .ತಾಯಿಗೆ   ದೋಷ.
9) ಆಶ್ಲೇಷ :-- 2 ನೇ ಪಾದ ಹಣಕಾಸು,  ಮಗು,  3  ನೆ  ಪಾದ ತಾಯಿ,  4 ನೇ  ಪಾದ ತಂದೆಗೆ  ದೋಷ.
10) ಮಖಾ :-- 1  ನೇ  ಪಾದ ತಂದೆ,  ಮಗು,  2  3  ನೇ ಪಾದ  ಗಂಡಾದರೆ  ತಂದೆಗೆ ,  ಹೆಣ್ಣಾದರೆ  ತಾಯಿಗೆ ದೋಷ.
11)  ಪುಬ್ಬ  :--  4 ನೇ  ಪಾದ  ತಾಯಿಗೆ  ದೋಷ
12) ಉತ್ತರ :-- 1,  4  ನೇ  ಪಾದ  ಗಂಡಾದರೆ  ತಂದೆಗೆ,  ಹೆಣ್ಣಾದರೆ  ತಾಯಿಗೆ  ದೋಷ.
13) ಹಸ್ತ :--  3 ನೇ  ಪಾದವಾದರೆ  ಗಂಡಾದರೆ  ತಂದೆಗೆ,  ಹೆಣ್ಣಾದರೆ  ತಾಯಿಗೆ  ದೋಷ
14)  ಚಿತ್ತ :-- 1 ನೆ ಪಾದ , ಹೆಣ್ಣಾದರೆ ತಾಯಿಗೆ,  ಗಂಡಾದರೆ  ತಂದೆಗೆ,  4 ನೆ ಪಾದ  ಸಾಮಾನ್ಯ  ದೋಷ.
15)  ಸ್ವಾತಿ :--  ಯಾವುದೇ  ದೋಷವಿಲ್ಲ.
16 )  ವಿಶಾಖ :-- 4 ನೇ ಪಾದ  ಹೆಣ್ಣಾದರೆ ಗಂಡನ  ತಮ್ಮನಿಗೆ  ದೋಷ.
17)  ಅನೂರಾಧ  :--  ಯಾವುದೇ  ದೋಷವಿಲ್ಲ.
18) ಜ್ಯೇಷ್ಠ :--  1ನೇ  ಪಾದ ತಾಯಿಯ  ಸೌಖ್ಯಕ್ಕೆ  ಹಾನಿ, 2ನೇಪಾದ ಸೋದರ ಮಾವನಿಗೆ .ಅರಿಷ್ಠ,  3 ನೇ  ಪಾದ  ತಾಯಿ ಮತ್ತು  ದೊಡ್ಡಪ್ಪನಿಗೆ  ಹಾನಿ,  4 ನೇ  ಪಾದ ತಂದೆ ಮತ್ತು  ದೊಡ್ಡಪ್ಪನಿಗೆ  ಹಾನಿ.
ಹೆಣ್ಣಾದರೆ  4  ನೇ  ಪಾದ ಗಂಡನ  ಅಣ್ಣನಿಗೆ  ಹಾನಿ.
19) ಮೂಲ :-- 1 ನೇ  ಪಾದ  ತಂದೆಗೆ, 2 ನೇ ಪಾದ  ತಾಯಿಗೆ,  3 ನೇ ಪಾದ  ಹಣಕಾಸಿಗೆ  4 ನೇ  ಪಾದ  ಹೆಣ್ಣಾದರೆ  ಗಂಡನ  ತಂದೆಗೆ .ದೋಷ.
20) ಪೂರ್ವಾಷಾಢ  :--  3  ನೆ  ಪಾದ  ಗಂಡಾದರೆ. ತಂದೆಗೆ  ಹೆಣ್ಣಾದರೆ  ತಾಯಿಗೆ  ದೋಷ.
21) ಉತ್ತರಾಷಾಢ :--  ಯಾವುದೇ  ದೋಷವಿಲ್ಲ
22) ಶ್ರವಣ :-- ಯಾವುದೇ ದೋಷವಿಲ್ಲ
23) ಧನಿಷ್ಠ :--  ಯಾವುದೇ ದೋಷವಿಲ್ಲ
24) ಶತಭಿಷ :--  ಯಾವುದೇ ದೋಷವಿಲ್ಲ
25) ಪೂರ್ವಾಬಾದ್ರ :--  4ನೇ ಪಾದ  ಮಗುವಿಗೆ ತೊಂದರೆ
26)ಉತ್ತರಾಬಾದ್ರ :--  ದೋಷವಿಲ್ಲ
27) ರೇವತಿ :-- 4ನೇ  ಪಾದವಾದರೆ  ತಂದೆಗೆ  ದೋಷ.
          ಮೇಲ್ಕಂಡ  ದೋಷಗಳಿಗೆ ಯುಕ್ತವಾಗ  ಶಾಂತಿ  ಕರ್ಮಾದಿಗಳನ್ನು  ಆಚರಿಸಿಕೊಂಡರೆ  ಸ್ವಲ್ಪ ಮಟ್ಟಿನ ದೋಶ  ಪರಿಹಾರವಾಗುತ್ತದೆ.
           ಉತ್ತರ ನಕ್ಷತ್ರಕ್ಕೆ 2  ತಿಂಗಳು,  ಪುಷ್ಯನಕ್ಷತ್ರಕ್ಕೆ  3  ತಿಂಗಳು,  ಚಿತ್ತಕ್ಕೆ  6  ತಿಂಗಳು,  ಜ್ಯೇಷ್ಠ ನಕ್ಷತ್ರಕ್ಕೆ  ಒಂದು ವರ್ಷ  ನಾಲ್ಕು ತಿಂಗಳು,  ಪೂರ್ವಾಷಾಡಕ್ಕೆ  8 ತಿಂಗಳು,   ಆಶ್ಲೇಷ ನಕ್ಷತ್ರಕ್ಕೆ  9  ತಿಂಗಳು,  ಮೂಲ ನಕ್ಷತ್ರಕ್ಕೆ  9  ತಿಂಗಳು   ದೋಷವನ್ನುಂಟು ಮಾಡುವ  ಕಾಲವಾಗಿರುತ್ತದೆ.
            ವಿಶೇಷವಾಗಿ  ಸೋದರ ಮಾವಂದಿರಿಗೆ  ದೋಷವೆಂದು ನಮೂದಿಸಿರುವ  ವಿಷಯದಲ್ಲಿ  ಯಾವದಿನ  ಅಷ್ಟಮಿ  ತಿಥಿಯಲ್ಲಿ  ರೋಹಿಣಿ  ನಕ್ಷತ್ರ  ಬರುತ್ತದೋ  ಆ ದಿನಗಳಲ್ಲಿ  ಮಾತ್ರ  ದೋಷಪ್ರದವಾಗಿರುತ್ತದೆ.
ಪುರಾಣಗಳಲ್ಲಿ  ನಕ್ಷತ್ರಗಳು :--

            ಪುರಾಣದ  ಪ್ರಕಾರ  ದಕ್ಷನು ತನ್ನ  27  ಜನ  ಹೆಣ್ಣುಮಕ್ಕಳನ್ನು  ಚಂದ್ರನಿಗೆ  ವಿವಾಹ  ಮಾಡಿಕೊಡುತ್ತಾನೆ,  ತನ್ನ  ಮಕ್ಕಳನ್ನು  ಚಂದ್ರನು  ಪತ್ನಿಯರನ್ನಾಗಿ  ಸ್ವೀಕರಿಸಿದ  ನಂತರ  ಎಲ್ಲರನ್ನೂ  ಸಮನಾಗಿ  ಕಾಣಬೇಕೆಂದು  ದಕ್ಷನು  ಚಂದ್ರನಿಗೆ   ಶರತ್ತನ್ನು  ವಿಧಿಸುತ್ತಾನೆ.  ಆದರೂ  ಚಂದ್ರನು  ರೋಹಿಣಿಯನ್ನು  ಹೆಚ್ಚು  ಪ್ರೀತಿಸಿ  ಉಳಿದ  ಪತ್ನಿಯರನ್ನು  ಕಡೆಗಣಿಸುತ್ತಾನೆ.   ಇದರಿಂದ  ಕೋಪಗೊಂಡ  ಚಂದ್ರನ  ಪತ್ನಿಯರು  ತಂದೆಯಾದ  ದಕ್ಷನಲ್ಲಿ  ತಮ್ಮ  ದುಃಖವನ್ನು  ತೋಡಿಕೊಳ್ಳುತ್ತಾರೆ.    ಕ್ರೋಧಿತನಾದ  ದಕ್ಷನು  ಚಂದ್ರನನ್ನು .ಶಪಿಸುತ್ತಾನೆ.   ಇದರಿಂದ  ಚಂದ್ರನು  ತನ್ನ  ಹೊಳಪನ್ನು  ಕಳೆದುಕೊಳ್ಳುತ್ತಾನೆ.   ಇದುವೇ  ಚಂದ್ರನ   ಕಳೆಗುಂಡಿದ  ಮತ್ತು  ಪ್ರಕಾಶ ರಹಿತ  ನೋಟದ  ಹಿನ್ನೆಲೆಯಾಗಿದೆ.
           ಶಾಸ್ತ್ರದ  ಪ್ರಕಾರ  ಚಂದ್ರನು  ಪ್ರತಿದಿನ  ತನ್ನ  ಪತ್ನಿಯರನ್ನು  ಭೇಟಿ  ಮಾಡಲು  ಹೋಗುತ್ತಾನೆ( ಪ್ರತಿದಿನ  ಒಂದೊಂದು  ನಕ್ಷತ್ರದಲ್ಲಿ  ಸಂಚಾರ).  ಆದರೆ  ನಕ್ಷತ್ರಗಳು  ತಮ್ಮ  ಜಾಗವನ್ನು  ಬಿಟ್ಟು  ಕದಲುವುದಿಲ್ಲ.  ಕ್ಷರ  ಎಂದರೆ  ಚಲಿಸದ  ಎಂಬರ್ಥವನ್ನು  ನೀಡುತ್ತಿದ್ದು,  ಚಲಿಸದೇ  ಇರುವಂತವುಗಳು  ನಕ್ಷತ್ರಗಳು  ಎಂದಾಗಿದೆ.   ಹಿಂದೂ ಗ್ರಂಥಗಳ  ಪ್ರಕಾರ   ನಕ್ಷತ್ರವು  ಕಡಲದೇ  ನಿಂತಲ್ಲೇ  ಇರುವಂತಹವುಗಳಾಗಿದ್ದು  ತಮ್ಮ  ಪತಿ  ಚಂದ್ರನಿಗಾಗಿ   ತಾಳ್ಮೆಯಿಂದ  ಕಾಯುತ್ತಿವೆ  ಎಂದಾಗಿದೆ.
ವೈಜ್ಞಾನಿಕ ವಾಗಿ  ನಕ್ಷತ್ರಗಳು :--
           ವಿಜ್ಞಾನದ  ಪ್ರಕಾರ,  ನಕ್ಷತ್ರಗಳು  ಗ್ರಹಗಳಂತೆ  ಸೂರ್ಯಮಂಡಲದಲ್ಲಿ  ಇಲ್ಲ. ಅಥವಾ  ಪ್ರಭಾವ  ಬೀರುವಷ್ಟು  ಹತ್ತಿರದಲ್ಲೂ  ಇಲ್ಲ.  ಅನೇಕ  ಕೋಟಿ ಕೋಟಿ  ಮೈಲುಗಳ  ದೂರದಲ್ಲಿದೇ.  ಅವುಗಳಿಂದ  ಹೊರಟ  ಬೆಳಕು  ಭೂಮಿಯನ್ನು  ತಲುಪಲು  ಅನೇಕ  ಕೋಟಿ  ವರ್ಷಗಳು  ಬೇಕು.  ಮೂಲಾ  ನಕ್ಷತ್ರದಿಂದ  ಹೊರಟ  ಬೆಳಕು  ಭೂಮಿಯನ್ನು  ತಲುಪಲು  70  ವರ್ಷಗಳು ಬೇಕಂತೆ !!!!
             ಇಂದಿನ  ವಿಜ್ಞಾನದ  ಪ್ರಕಾರ  ನಕ್ಷತ್ರಗಳು  ನಿರ್ಜೀವ,  ಅಗಾಧ  ಗಾತ್ರದ ಬೆಂಕಿಯ  ಉಂಡೆಗಳು, ಇದು  ಮಾನವನ  ಜೀವಿತದ  ಮೇಲೆ   ಪರಿಮಾಣ  ಬೀರುವ  ಸಾಧ್ಯತೆ  ಇಲ್ಲ  ಎನ್ನುತ್ತದ.ೆ
          ಈ  ವಿಶ್ವದ. ಸೃಷ್ಟಿ 1200 -- 2000  ಕೋಟಿ ವರ್ಷಗಳ  ಹಿಂದೆ  ಪ್ರಾರಂಭವಾಗಿರಬೇಕೆಂದು  ವಿಜ್ಞಾನಿಗಳು  ತರ್ಕಿಸಿದ್ದಾರೆ.  ಈ  ಆರಂಭದ   ಕ್ಷಣಗಳನ್ನು  " ಮಹಾಸ್ಫೋಟ "  ಎಂದು  ಕರೆದಿದ್ದಾರೆ.  ಆ  ಸೂಕ್ಸ್ಮಾತಿ ಸೂಕ್ಷ್ಮ  ಉಪಕಣ ಪ್ರಭಾನು  ಫೋಟಾನ್ ( ಕ್ರೋಟಾನಿ ನ  ಒಳಗಿನ  ಬೀಜಗಳಲ್ಲೊಂದು)  ಸ್ಪೋಟಗೊಂದು  ಕೆಲವೇ  ಸೆಕೆಂಡಿನಲ್ಲಿ. ಅಗಾಧ .ಶಾಖದಿಂದ ಕುದಿದು  30  ನಿಮಿಷಗಳಲ್ಲಿ  ಕುದಿಯುತ್ತಿರುವ   ದೊಡ್ಡ  ಪ್ಲಾಸ್ಮಾದ  ಉಂಡೇಯಾಗಿ  ಕ್ರಮೇಣ  ಶಾಖವನ್ನು  ಕಡಿಮೆ ಮಾಡಿಕೊಳ್ಳುತ್ತಾ  ಈ  ವಿಶಾಲ  ವಿಶ್ವದ  ಮತ್ತು  ಅದರಲ್ಲಿ ತುಂಬಿರುವ  ಕೋಟಿ ಕೋಟಿ  ಬ್ರಹ್ಮಾ0ಡಗಳ  ರಚನೆಗೆ  ಕಾರಣವಾಯ್ತು  ಒಂದೊಂದು  ಬ್ರಹ್ಮಾ0ಡದಲ್ಲೂ  ಕೋಟಿ ಕೋಟಿ  ನಕ್ಷತ್ರಗಳಿವೆ.  ನಾವಿರುವ  ಅಂದರೆ ನಮ್ಮ  ಸೂರ್ಯ ಅಥವಾ  ಸೌರಮಂಡಲ  ವಿರುವ  ಈ  ಬ್ರಹ್ಮಾ0ಡಕ್ಕೆ ಆಕಾಶ ಗ0ಗೆ   ಅಥವಾ  ಕ್ಷೀರ ಪಥ ಎಂದು  ಕರೆಯುವರು.    ಈ  ನಮ್ಮ ಕ್ಷೀರ ಪಥವೆಂಬೋ  ಬ್ರಹ್ಮಾ0ಡದಲ್ಲಿ  ಸುಮಾರು  200  ರಿಂದ 400  ಶತಕೋಟಿಗಳ  ನಡುವಿನ  ಸಂಖ್ಯೆಯ  ನಕ್ಷತ್ರಗಳಿವೆ.
           ನಕ್ಷತ್ರವೊಂದು  ಹುಟ್ಟುವುದು  ಅನೇಕ  ಸಹಸ್ತ್ರ  ಸಂವತ್ಸರದ  ಕ್ರಿಯೆ. ಸೂರ್ಯನೇ  ಭೂಮಿಗೆ  ಹತ್ತಿರದ  ನಕ್ಷತ್ರ.  ಒಂದು  ಮಧ್ಯಮ  ಗಾತ್ರದ,  ತಾನೇ  ತನ್ನ ಗುರುತ್ವ ದಿಂದಲೇ  ಒಟ್ಟುಗೂಡಿದ. ಪ್ಲಾಸ್ಮಾದ  ಹೊಳೆಯುವ  ಗೋಲ.   ಇತರ ಅನೇಕ  ನಕ್ಷತ್ರಗಳು  ಭೂಮಿಯಿಂದ  ಬರಿಗಣ್ಣಿಗೆ. ರಾತ್ರಿ  ಸಮಯದಲ್ಲಿ. ಅಪಾರ  ವೇಗದ  ಚಲನೆ ಇದ್ದರೂ. ಹೊಳೆಯುವ ಆಕಾಶದಲ್ಲಿ ಸ್ಥಿರ  ಬಿಂದುಗಳಂತೆ  ಕಾಣಿಸುತ್ತದ.ೆ.  ಹಾಗೂ ಅವು  ಭೂಮಿನಿಂದ  ಅತೀವ  ದೂರ  ಇದೆ......
                         ✍   Dr|| B N ಶೈಲಜಾ  ರಮೇಶ್

4 comments:

  1. ನಿಮ್ಮ ಎಲ್ಲ ಹಳೆಯ ಲೇಖನಗಳಂತೆಯೇ ಇದು ಕೂಡ ಚೆನ್ನಾಗಿ ಮೂಡಿಬಂದಿದ್ದು ಎಲ್ಲರಿಗೂ ಉಪಯುಕ್ತವಾಗಿವೆ. ಧನ್ಯವಾದಗಳು.

    ReplyDelete
  2. ನಿಮ್ಮ ಎಲ್ಲ ಹಳೆಯ ಲೇಖನಗಳಂತೆಯೇ ಇದು ಕೂಡ ಚೆನ್ನಾಗಿ ಮೂಡಿಬಂದಿದ್ದು ಎಲ್ಲರಿಗೂ ಉಪಯುಕ್ತವಾಗಿವೆ. ಧನ್ಯವಾದಗಳು.

    ReplyDelete
  3. ಧನ್ಯವಾದಗಳು ಸರ್

    ReplyDelete
  4. Excellent information madam.....Incredible knowledge

    ReplyDelete