Monday, 16 March 2026

ಕ್ರೀಡೆ ಮತ್ತು ಜ್ಯೋತಿಷ್ಯ

                             ಹರಿಃ ಓಂ 

             ಓಂ ಶ್ರೀ ಮಹಾಗಣಪತಯೇ ನಮಃ 

                  ಓಂ ಶ್ರೀ ಗುರುಭ್ಯೋ ನಮಃ 

     ಕ್ರೀಡೆ ಮತ್ತು ಜ್ಯೋತಿಷ್ಯ:---


     ಕಳೆದ ಲೇಖನದಲ್ಲಿ  ಕ್ರೀಡಾಪಟುವಾಗಲು ಹಾಗೂ ಕ್ರೀಡಾಕ್ಷೇತ್ರದಲ್ಲಿ ಯಶಸ್ವಿಯಾಗಲು  ಗ್ರಹಗಳ ಪಾತ್ರ, ಕ್ರೀಡಾಭಾವಗಳು, ರಾಶಿಗಳ ಪಾತ್ರ, ಯಾವ ಗ್ರಹಗಳು ಯಾವ ಕ್ರೀಡೆಯನ್ನು ಪ್ರಚೋದಿಸುತ್ತವೆ ಎಂಬುದನ್ನು ವಿವರವಾಗಿ ತಿಳಿದುಕೊಂಡೆವು. 

      ಈಗ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ  ತಿಳಿದುಕೊಳ್ಳೋಣ.

        ಕ್ರೀಡೆಯಲ್ಲಿನ ಯಶಸ್ಸಿಗೆ  ನಕ್ಷತ್ರಗಳೂ ಸಹ ಕಾರಣವಾಗುತ್ತವೆ. ಗ್ರಹಗಳು ಎಲ್ಲಿವೆ ಅನ್ನುವುದಕ್ಕಿಂತ ಅವು ಯಾವ ನಕ್ಷತ್ರದಲ್ಲಿದೆ ಎಂಬುದು, ಕ್ರೀಡಾಪಟುವಿನ ಶೈಲಿಯನ್ನು  ನಿರ್ಧರಿಸುತ್ತವೆ.

ಕೇತುವಿನ ನಕ್ಷತ್ರಗಳಲ್ಲಿ( ಅಶ್ವಿನಿ, ಮಖ, ಮೂಲ)ಗ್ರಹಗಳಿದ್ದರೆ ಆಟಗಾರ ಅತೀ ವೇಗವಾಗಿರ್ತಾನೆ , ಉದಾಹರಣೆಗೆ fast ಬೋಲರ್ಸ್,  ರವಿಯ ನಕ್ಷತ್ರಗಳು  ಆಕ್ರಮಣಕಾರಿ ಸ್ವಭಾವವನ್ನು ಕೊಡುತ್ತದೆ.  ಸೋಲನ್ನು ಒಪ್ಪದ ಹಠ ಇವರಲ್ಲಿ ಹೆಚ್ಚಾಗಿರುತ್ತೆಚಂದ್ರನ ನಕ್ಷತ್ರಗಳು,(ರೋಹಿಣಿ, ಹಸ್ತ, ಶ್ರವಣ) ಆಟಗಾರನಿಗೆ  ಉತ್ತಮವಾದ ಟೈಮಿಂಗ್ ಕೊಡುತ್ತವೆ. ಇದು ಬ್ಯಾಟ್ಸಮನ್ಗಳಿಗೆ ವರದಾನ. ಕುಜನ ನಕ್ಷತ್ರಗಳು (ಮೃಗಶಿರಾ, ಚಿತ್ತ, ಧನಿಷ್ಟ), ಇವು ಜಾತಕರಿಗೆ ಧೈರ್ಯ ಹಾಗೂ ಬಲವನ್ನು ತುಂಬುತ್ತವೆ. ಆರ್ದ್ರ ನಕ್ಷತ್ರ ತಂತ್ರಗಾರಿಕೆ ಕೊಟ್ಟರೆ,  ಪೂರ್ವ ಫಲ್ಗುಣಿ ಫಿಟ್ನೆಸ್ಗಾಗಿ  ಉತ್ತಮ ನಕ್ಷತ್ರ. ವಿಶಾಖ, ಜೇಷ್ಠ, ಪೂರ್ವಾಷಾಢ ವಿಶೇಷವಾಗಿ ಜಲಕ್ರೀಡೆಯನ್ನು ಪ್ರಚೋದಿಸುವ ನಕ್ಷತ್ರವಾಗಿದೆ. ತ್ತರಾಷಾಢ  ಕುದುರೆ ಸವಾರಿ ಆಟಕ್ಕೆ ಉತ್ತಮ ನಕ್ಷತ್ರವಾಗಿದೆ. ರೇವತಿ ನಕ್ಷತ್ರ ಕೂಡ ಕ್ರೀಡೆಯನ್ನು ಪ್ರಚೋದಿಸುವ ನಕ್ಷತ್ರವಾಗಿದೆ.

ಕ್ರೀಡಾ ಜ್ಯೋತಿಷ್ಯದ ಪ್ರಮುಖ ಅಂಶಗಳು:--

     ಕ್ರೀಡಾಪಟುತ್ವಕ್ಕೆ ಮುಖ್ಯವಾಗಿ ತನುಸ್ಥಾನ, ವಿಕ್ರಮಸ್ಥಾನ, 5,6,10,11 ರ  ಜೊತೆ ಜೊತೆಗೆ  ಸಪ್ತಮ ಸ್ಥಾನವನ್ನು ಪರಿಶೀಲಿಸಬೇಕಾಗುತ್ತದೆ .  7ನೆ ಭಾವವನ್ನೂ ಸಹ ಕ್ರೀಡಾ ಸ್ಥಾನವೆಂದೂ ಜ್ಯೋತಿಷ್ಯ ದಲ್ಲಿ ಹೇಳಿದೆ. ಜಾತಕ ಕಲಾನಿಧಿ   ಗ್ರಂಥದಲ್ಲಿ  "ಕಳತ್ರ ಕ್ರೀಡಾ ಭೋಗ ಕಾಮ - ಶೃಂಗಾರಕೇಳೀಭೋಜನ ವಿಹಾರ ಸಂಸಾರಕಾರಕಮ್ ಸಪ್ತಮಮ್ " ಎಂದು 7 ನೇ ಮನೆಯನ್ನು ವಿವರಿಸಿದ್ದಾರೆ.    ಹಾಗೆಯೇ ಕ್ರೀಡೆಗಳಿಂದ  ಸುಖ, ಅದೃಷ್ಟ, ಭಾಗ್ಯವಿದೆಯೇ ಎಂದು ತಿಳಿಯಲು ಪೋಷಕ ಭಾವಗಳಾದ  ಸುಖ ಸ್ಥಾನ, ಭಾಗ್ಯಸ್ಥಾನಗಳನ್ನೂ ಪರಿಶೀಲಿಸಬೇಕಾಗುತ್ತೆ,.

   ಅತ್ಯುತ್ತಮ  ಕ್ರಿಕೆಟ್ ಆಟಗಾರ (ಬ್ಯಾಟ್ಸ್‌ಮನ್) ಆಗಬೇಕಾದರೆ , 3 ನೇ ಮನೆ ಬಲಿಷ್ಠವಾಗಿರಬೇಕು  ಏಕೆಂದರೆ ಅದು ನಮ್ಮ ದೇಹದ ತೋಳುಗಳನ್ನು ಪ್ರತಿನಿಧಿಸುತ್ತದೆ. 

     ಫುಟ್ಬಾಲ್ ಆಟಗಾರನಿಗೆ 11 ನೇ ಮನೆ ಕಾಲುಗಳನ್ನು ಪ್ರತಿನಿಧಿಸುವುದರಿಂದ 11ನೇ ಮನೆ ಬಲವಾಗಿರಬೇಕು

   ಧನು ರಾಶಿಯು ಯೋಧನಂತಹ ಮನೋಭಾವವನ್ನು ಸೂಚಿಸುತ್ತದೆ ಮತ್ತು ಈ  ರಾಶಿಯಲ್ಲಿರುವ ಗ್ರಹಗಳು ಕ್ರಿಕೆಟಿ ಆಟಗಾರರಿಗೆ ಮುಖ್ಯವಾಗಿವೆ.  

   ಚದುರಂಗದ ಆಟಕ್ಕೆ ಬುಧ, ಶನಿ ಮತ್ತು ಚಂದ್ರನೊಂದಿಗೆ ಬುದ್ಧಿಮತ್ತೆಯನ್ನು ಪ್ರತಿನಿಧಿಸುವ 5 ನೇ ಮನೆ ಬಲವಾಗಿರಬೇಕು.

   ಗುರುವು ನಿಯಮಗಳನ್ನು ಪಾಲಿಸುವ ಮೂಲಕ ಆಡಲು ವ್ಯವಸ್ಥಿತ, ನಿಯಂತ್ರಿತ ಮನೋಭಾವವನ್ನು ನೀಡುತ್ತದೆ. ಕ್ರೀಡಾ ಮನೋಭಾವವೂ ಗುರುವಿನಿಂದ ಉಂಟಾಗುತ್ತದೆ.

   ಗುಂಪು ಚಟುವಟಿಕೆಗಳಿಗೆ ಶನಿ ಪ್ರಮುಖ ಪಾತ್ರ ವಹಿಸುತ್ತದೆ. ಇದು 'ತಂಡ ಮನೋಭಾವ'ವನ್ನು ನೀಡುತ್ತದೆ.

  6ನೇ ಮತ್ತು 10ನೇ ಭಾವಗಳು ವಿಶೇಷವಾಗಿ ಬಲಿಷ್ಠವಾಗಿದ್ರೆ ಜಾತಕರು ಆಟವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರ್ತಾರೆ.

  ಲಗ್ನದಲ್ಲಿ ಬಲವಾದ ತೃತೀಯಾಧಿಪತಿ ಇದ್ದರೆ, ಆ ವ್ಯಕ್ತಿ ಕ್ರೀಡಾ ಐಕಾನ್ ಆಗಬಹುದು.

   ಪಂಚಮಾಧಿಪತಿ ಬಲವಾಗಿದ್ರೆ ಆಟಗಾರನು ಸ್ಮಾರ್ಟ್ ಪ್ಲೇಯರ್ ಎನಿಸಿಕೊಳ್ಳುತ್ತಾನೆ.

   ಸೂರ್ಯನು ಕ್ರೀಡೆಯಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಸಹಾಯ ಮಾಡುತ್ತಾನೆ.

   ಬುಧ, ಶುಕ್ರ ಮತ್ತು ಕುಜ ಗ್ರಹಗಳು ಐದನೇ ಮನೆಯೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಯೋಜನೆಗೊಂಡರೆ, ಕಲೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಮತ್ತು ಇಚ್ಛೆಯನ್ನು ಹುಟ್ಟುಹಾಕುತ್ತದೆ ಮತ್ತು ವಿಜೇತರಾಗಲು ಸಹಾಯ ಮಾಡುತ್ತದೆ. ಇಂತಹ ಸಂಯೋಜನೆ ಇರುವ ಜಾತಕರು ಕ್ರೀಡೆಯ ಜೊತೆ ಜೊತೆಗೆ ಮಾಡೆಲ್ ಆಗಿ  ಸಹ  ಮಿಂಚುತ್ತಾರೆ.

   ಬಲವಾದ ಮಂಗಳ ಜೊತೆಗೆ ಬೆಂಬಲಿತ ಸೂರ್ಯ/ಚಂದ್ರ/ಬುಧ ಮತ್ತು ಶಿಸ್ತಿನ ಶನಿ/ಗುರು ಹೊಂದಿರುವ ಚಾರ್ಟ್ ಉತ್ತಮ ಅಥ್ಲೆಟಿಕ್ ಆಗುವ ಯೋಗವನ್ನು ಹೊಂದಿದೆ..

   ಕ್ರೀಡೆಗೆ ಬೇಕಾದ ಎಲ್ಲ ರೀತಿಯ  ಸಂಯೋಜನೆಗಳು ಜಾತಕರಿಗೆ ಜನ್ಮದಿಂದಲೇ ಬಂದಿದ್ದರೂ ಸಹ ಕ್ರೀಡಾಕ್ಷೇತ್ರಕ್ಕೆ ಪದಾರ್ಪಣೆ ಮಾಡುವ ಹಾಗೂ ಯಶಸ್ಸನ್ನು ಪಡೆಯುವ ಸಮಯ ಯಾವುದು ಅಂತ ನೋಡೋದಾದ್ರೆ.....

     ಕ್ರೀಡಾಪಟುಗಳು  ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಯಶಸ್ಸು ಪಡೆಯಲು 1,3,5,6,10, ನೇ ಅಧಿಪತಿಗಳ ದಶಕಾಲಗಳು ಅಥವಾ  ಕುಜ, ಶನಿ, ರಾಹು, ಗುರು ರವಿಯ ದಶ ಕಾಲಗಳು ಉತ್ತಮವಾಗಿರುತ್ತೆ.
 
    ಕ್ರೀಡಾಪಟುವಿನ  ಯೌವನದಲ್ಲಿ ಕುಜ, ರಾಹು, ಶುಕ್ರನ ಮಹರ್ದೆಶೆಗಳು  ನಡೆದರೆ  ಅತೀ ವೇಗವಾಗಿ ಯಶಸ್ಸನ್ನು ಪಡೆಯುತ್ತಾರೆ.

    ವೇಗದ, ಆಕ್ರಮಣಕಾರಿ ಕ್ರೀಡಾಪಟುಗಳ ಲಗ್ನದಲ್ಲಿ ಅಥವಾ 10 ನೇ ಸ್ಥಾನದಲ್ಲಿ ಮೇಷ/ವೃಶ್ಚಿಕದಲ್ಲಿ ಬಲವಾದ ಮಂಗಳ ಸ್ಥಿತ  ಅಥವಾ ಸಂಚಾರ ಸಮಯದಲ್ಲಿ ಕ್ರೀಡೆಯಲ್ಲಿ ಉತ್ತಮ ಕಾರ್ಯಕ್ಷಮತೆ ಇರುತ್ತೆ.

  ಕ್ರೀಡಾ ಭಾವಗಳ  ಮೇಲೆ,ಮಂಗಳ/ಶನಿ/ಗುರು/ರಾಹುವಿನ ಸಂಚಾರ ಕಾಲದಲ್ಲಿ ಹೆಚ್ಚಾಗಿ ಕ್ರೀಡಾಪಟುಗಳು ಉತ್ತುಂಗಕ್ಕೇರುತ್ತಾರೆ., 

   ಬಲವಾದ ಸೂರ್ಯ ಮತ್ತು ಶನಿಯ ಸ್ಥಾನಗಳು ಸಹಿಷ್ಣುತೆ ಮತ್ತು ಶಿಸ್ತನ್ನು ಒದಗಿಸುತ್ತವೆ.

    ಮಂಗಳ ಮತ್ತು ಚಂದ್ರನನ್ನು ಬೆಂಬಲಿಸುವ ಬಲವಾದ ಬುಧನಿದ್ದಾಗ ಆಟಗಾರರು  ತಾಂತ್ರಿಕವಾಗಿ ಕೌಶಲ್ಯಪೂರ್ಣರಾಗಿರುತ್ತಾರೆ.   

   ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಯಶಸ್ವಿಯಾಗಲು ಯೋಗಗಳ ಪಾತ್ರವೂ ಸಹ ಇದೆ.
ಪಂಚ ಮಹಾಪುರುಷ ಯೋಗಗಳಲ್ಲಿ  ರುಚಕಯೋಗ, ಭದ್ರಯೋಗ, ಹಂಸ ಹಾಗೂ ಶಶಯೋಗಗಳು ಕ್ರೀಡೆಯಲ್ಲಿ ಆಸಕ್ತಿ ಹಾಗೂ ಯಶಸ್ಸನ್ನು ನೀಡುತ್ತವೆ.
 ಗಜಕೇಸರಿ ಯೋಗ, ನೀಚಭಂಗ ರಾಜಯೋಗ ಕೂಡಾ ಸಹಕಾರಿಯಾಗುತ್ತೆ. ಹಾಗೆಯೇ ವಿಪರೀತ ರಾಜಯೋಗ ಇದ್ದರೆ ಸೋಲುವ ಹಂತದಲ್ಲಿರುವ ಪಂದ್ಯವನ್ನೂ ಅನಿರೀಕ್ಷಿತವಾಗಿ ಗೆಲುವಿನತ್ತ ತಿರುಗಿಸುವ ಶಕ್ತಿ ಆಟಗಾರನಿಗೆ ಇರುತ್ತೆ.

      ಕ್ರೀಡಾ ವೃತ್ತಿಜೀವನದ ಅವಧಿ:--
    
      ಕೆಲವರು ಕ್ರೀಡೆಯಿಂದ ಬಹುಬೇಗ ನಿವೃತ್ತಿ ಹೊಂದುತ್ತಾರೆ. ಕೆಲವರು ಧೀರ್ಘವಾಗಿ  ಆಟ ಆಡ್ತಾ ಇರ್ತಾರೆ. ಇದಕ್ಕೆ ಕಾರಣ ಶನಿ ಗ್ರಹದ ಸ್ಥಿತಿ..! ಶನಿ ಅಂದ್ರೇನೇ ಸ್ಥಿರತೆ...ಶುಭನಾದ ಶನಿಗ್ರಹ ಜಾತಕದಲ್ಲಿ ಕೇಂದ್ರ ತ್ರಿಕೋಣದಲ್ಲಿದ್ಸರೆ  ಆಟಗಾರನಿಗೆ ಸುಧೀರ್ಘ ವೃತ್ತಿಜೀವನ ಇರುತ್ತೆ.
     ಮಾರಕ ದಶಗಳು,  ಹಾಗೂ ದಶ ಸಂಧಿ ಕಾಲ  ಆಟಗಾರನನ್ನು ಬೇಗ ನಿವೃತ್ತಿ ಮಾಡಿಸಿಬಿಡುತ್ತೆ.

     ಕ್ರೀಡಾಪಟುಗಳು ಯಶಸ್ಸಿನ ಉತ್ತುಂಗದಲ್ಲಿದ್ದಾಗ  ಹಠಾತ್ತಾಗಿ ಫಾರ್ಮ್ ಕಳೆದುಕೊಂಡುಬಿಡ್ತಾರೆ. ಇದಕ್ಕೆ ಜ್ಯೋತಿಷ್ಯ ಕಾರಣ, ಸಾಡೆಸಾತಿ, ಶನಿಯ ಅಶುಭ ಪ್ರಭಾವ ಹೆಚ್ಚಾದಾಗ ಆಟಗಾರ ಎಷ್ಟೇ ಪ್ರಯತ್ನಿಸಿದರೂ  ಫಲ ಸಿಗುವುದಿಲ್ಲ, ಅವರ ಶಿಸ್ತನ್ನು ಪರೀಕ್ಷಿಸುವ ಸಮಯ ಆಗಿರುತ್ತೆ. ಅಷ್ಟಮ ಶನಿಯ ಕಾಲದಲ್ಲಿ injuries ಮತ್ತು ಕಾಂಟ್ರಾವರ್ಸಿ  ಆಗುವ ಸಂಭವವೇ ಹೆಚ್ಚು. ಅಶುಭ ರಾಹು /ಕೇತುಗಳ  ಸಂಚಾರ ಕಾಲದಲ್ಲಿ ಕೂಡ  ಆಟಗಾರರು ಮಾನಸಿಕ ಒತ್ತಡಕ್ಕೆ ಒಳಗಾಗಿ  ತಪ್ಪು ನಿರ್ಧಾರ ತೊಗೋತಾರೆ.

   6ನೇ ಮನೆ ಅಪಘಾತಗಳನ್ನು ಸೂಚಿಸುತ್ತೆ, 6th lord ಕುಜನ ಜೊತೆಗೆ ಅಶುಭ ಸಂಪರ್ಕದಲ್ಲಿದ್ದಾಗ  ಆಟಗಾರ ಪದೇ ಪದೇ  ಗಾಯಕ್ಕೆ ಒಳಗಾಗುತ್ತಾನೆ.

    8ನೇ ಮನೆ ಧೀರ್ಘಕಾಲದ ನೋವು ಮತ್ತು ಸರ್ಜರಿಯನ್ನು ಸೂಚಿಸುತ್ತೆ. ಶನಿ ಮತ್ತು ರಾಹುವಿನ ಅಶುಭ ಪ್ರಭಾವ  8 ನೇ ಮನೆಯ ಮೇಲಿದ್ದರೆ.. ನೋವು ಮತ್ತು ಶಸ್ತ್ರಚಿಕಿತ್ಸೆಯ ಕಾರಣದಿಂದ ವೃತ್ತಿ ಜೀವನಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತೆ.

ಗೆಲುವಿನ ಕ್ಷಣ :--

       ಕ್ರೀಡಾoಗಣದಲ್ಲಿ ಒಬ್ಬ ಆಟಗಾರನ ಪ್ರದರ್ಶನವು ಆತನ ಕಠಿಣ ಪರಿಶ್ರಮದ ಮೇಲೆ ನಿರ್ಧಾರಿತವಾಗಿರುತ್ತವೆ ಎನ್ನುವುದು ಸತ್ಯವಾದರೂ... ಅದೇ ಆಟಗಾರ ಅನಿರೀಕ್ಷಿತವಾಗಿ ಜಯಗಳಿಸುವುದು ಹಾಗೂ ಅಂತಿಮ ಕ್ಷಣದಲ್ಲಿ ಸೋಲಾಗುವುದರ ಹಿನ್ನೆಲೆಯಲ್ಲಿ ಗ್ರಹಗಳ ಪಾತ್ರವೂ ಇದೆ..!

       ಆಟಗಾರ ಎಷ್ಟೇ ಶ್ರೇಷ್ಠನಾಗಿದ್ದರೂ ಪಂದ್ಯ ನಡೆಯುವ ದಿನದ ಚಂದ್ರನ ಸ್ಥಿತಿ ಆತನ ಪ್ರದರ್ಶನವನ್ನು ನಿರ್ಧರಿಸುತ್ತದೆ. ಪಂದ್ಯದ ದಿನ ಆಟಗಾರನ ಜನ್ಮರಾಶಿಯಿಂದ ಉಪಚಯ 
ಸ್ಥಾನಗಳಾದ... 3,  6,  10, 11ನೇ ಭಾವಗಳಲ್ಲಿದ್ದರೆ  ಆ ದಿನ ಆ ಆಟಗಾರನಿಗೆ ಅದೃಷ್ಟದ ದಿನವಾಗಿರುತ್ತೆ.

    ಒಂದುವೇಳೆ  ಚಂದ್ರ 8,12ನೇ ಮನೆಯಲ್ಲಿದ್ದರೆ ಎಷ್ಟೇ ಪ್ರಯತ್ನ ಪಟ್ಟರೂ ಅಂತಿಮ ಕ್ಷಣದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತೆ..

ಸಂಖ್ಯಾ ಶಾಸ್ತ್ರ ಮತ್ತು ಕ್ರೀಡೆ :--

      ಪ್ರತಿಯೊಂದು ಸಂಖ್ಯೆಯೂ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತೆ, ಯಾವ ಗ್ರಹದ ಸಂಖ್ಯೆ ಯಾವ ಕ್ರೀಡಾಪಟುವಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ಹುಟ್ಟಿದ ದಿನಾಂಕದ ಆಧಾರದ ಮೇಲೆ ತಿಳಿಯಬಹುದು. ಯಾವ ಸಂಖ್ಯೆ ಅನುಕೂಲಕರವೋ ಆ ಸಂಖ್ಯೆಯ ಜೆರ್ಸಿಯನ್ನು ಕ್ರೀಡಾಪಟುಗಳು ಆಯ್ಕೆ ಮಾಡಿಕೊಳ್ಳುತ್ತಾರೆ.

      ಸಂಖ್ಯೆ 7 :-- ಭಾರತದ  ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಹಾಗೂ ವಿಕೆಟ್ ಕೀಪರ್ ಆಗಿದ್ದ ಧೋನಿ ಯವರ ಜೆರ್ಸಿ ಸಂಖ್ಯೆ 7. ಇದು ಕೇತುವಿನ ಸಂಖ್ಯೆ, ಇದು ಅಧ್ಯತ್ಮಿಕತೆ  ಮತ್ತು ಅಂತಃಪ್ರಜ್ಞೆಯನ್ನು ಸೂಚಿಸುತ್ತದೆ,  ಧೋನಿಯವರ ಕ್ಯಾಪ್ಟನ್ ಕೂಲ್  ಸ್ವಭಾವ ಮತ್ತು ಕೊನೆಯ  ಕ್ಷಣದ ನಿರ್ಧಾರಗಳಿಗೆ  ಈ ಸಂಖ್ಯೆಯ ಬಲವೂ ಕಾರಣ.

ಸಂಖ್ಯೆ 10 :---10 ಎನ್ನುವುದು ಸೂರ್ಯನ ಸಂಖ್ಯೆ, ಸೂರ್ಯನು  ಪ್ರಭುತ್ವ ಮತ್ತು ರಾಜತ್ವವನ್ನು ಪ್ರತಿನಿಧಿಸುತ್ತಾನೆ.  ಕ್ರಿಕೆಟ್ ದೇವರೆಂದೇ ಹೆಸರಾದ ಸಚಿನ್ ಟೆಂಡೂಲ್ಕರ್ ಅವರ ಜೆರ್ಸಿ ಸಂಖ್ಯೆ 10, ಸಚಿನ್ ರವರು ಕ್ರೀಡಾಕ್ಷೇತ್ರದಲ್ಲಿ ರಾಜನಂತೆ ಮಿಂಚಲು ಈ ಸಂಖ್ಯೆಯೂ ಒಂದು ಕಾರಣವಿರಬಹುದು..

ತಂಡದ ನಾಯಕತ್ವ :--

      ಒಳ್ಳೆಯ ಆಟಗಾರರೆಲ್ಲರೂ ಒಳ್ಳೆಯ ನಾಯಕರಾಗಲು ಸಾಧ್ಯವಿಲ್ಲ. ನಾಯಕತ್ವಕ್ಕೆ ಕೆಲವು ವಿಶೇಷ ಶಕ್ತಿಗಳಿರಬೇಕು.
     ಕ್ರೀಡಾಪಟುವಿನ ಜಾತಕದಲ್ಲಿ  ಸಿಂಹರಾಶಿಯ ಪ್ರಭಾವವಿರಬೇಕು. ಸೂರ್ಯ ಮತ್ತು  ಸಿಂಹರಾಶಿ ಪ್ರಭಲವಾಗಿದ್ದರೆ  ಅಂತಹವರು ನೂರಾರು ಜನರನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ.
    ವಿವೇಕವನ್ನು ನೀಡುವ ಗುರುಗ್ರಹದ ದೃಷ್ಟಿಯು ಸೋಲಿನ ಸಮಯದಲ್ಲಿರುವ  ತಂಡವನ್ನು ಕುಗ್ಗದಂತೆ ಸರಿಯಾದ ತಂತ್ರ ರೂಪಿಸಲು ಸಹಾಯಮಾಡುತ್ತದೆ.

ವಿಶ್ವ ಚಾoಪಿಯನ್ ಆಗಲು ವಿಷೇಶ ಅಂಶಗಳು :--
 
    ಆಟಗಾರರು ಸ್ಥಳೀಯವಾಗಿ ಆಟವಾಡುವುದಕ್ಕೂ.. ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೂ  ವ್ಯತ್ಯಾಸವಿದೆ.   
    ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ  ಕೌಶಲ್ಯವನ್ನು ಆಟಗಾರನಿಗೆ ಕೊಡುವುದು ರಾಹು, ರವಿ ಹಾಗೂ ಗುರು ಗ್ರಹಗಳು.
    ಆಟಗಾರನಿಗೆ ರಾಹುವಿನ ಶುಭಪ್ರಭಾವ  ಅತೀ ಮುಖ್ಯ, ರಾಹುವು 3 ಅಥವಾ 11ನೇ ಮನೆಯಲ್ಲಿದ್ದರೆ ಜಾತಕರು ಯಾರೂ ಊಹಿಸಲಾಗದ ತಂತ್ರಗಳನ್ನು ಬಳಸಿ ಗೆಲ್ಲುತ್ತಾರೆ. 
   ಸೂರ್ಯನು ಪ್ರಭಲವಾಗಿದ್ದರೆ ಮಾತ್ರ ಒಬ್ಬ ಆಟಗಾರ ಸಾವಿರಾರು ಜನಗಳ ಮುಂದೆ ಒತ್ತಡಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಆಡಬಲ್ಲ.
   ಗುರುವಿನ ಅನುಗ್ರಹವು ಭಾಗ್ಯದ ಸಂಕೇತ, ಎಷ್ಟೇ ಕಷ್ಟಪಟ್ಟರೂ ಅಂತಿಮ ಕ್ಷಣದಲ್ಲಿ ಅದೃಷ್ಟ ಕೈಹಿಡಿಯಬೇಕಾದರೆ  ಗುರುವಿನ ದೃಷ್ಟಿ ಇರಲೇಬೇಕು.

ಬಣ್ಣಗಳು ಹಾಗೂ ತಂಡದ ಯಶಸ್ಸು:--

   ಕ್ರೀಡಾ ತಂಡಗಳ ಜೆರ್ಸಿ ಬಣ್ಣದ ಹಿಂದೆ ಕೂಡ ಬಲವಾದ ಜ್ಯೋತಿಷ್ಯ ಅಂಶವಿದೆ.
   ನೀಲಿ ಬಣ್ಣ :--  ಈ ಬಣ್ಣ  ಶನಿಗ್ರಹದ್ದು,  ಇದು ಸ್ಥಿರತೆ ಮತ್ತು ಗಾಂಭೀರ್ಯದ ಸಂಕೇತ.  ಭಾರತದ ಕ್ರಿಕೆಟ್ ತಂಡದ ಈ ಬಣ್ಣವು  ತಂಡಕ್ಕೆ ಒಂದು ರೀತಿಯ ಕೂಲ್ ಮತ್ತು ಸ್ಟೇಬಲ್  ಶಕ್ತಿಯನ್ನು ನೀಡುತ್ತದೆ.
   ಹಳದಿ ಬಣ್ಣ :--  ಇದು ಗುರುಗ್ರಹದ ಬಣ್ಣ, ಈ ಬಣ್ಣವು  ಜ್ಞಾನ, ತಂತ್ರ, ಮತ್ತು ಅದೃಷ್ಟವವನ್ನು ಪ್ರತಿನಿಧಿಸುತ್ತದೆ. (CSK ತಂಡದ ಬಣ್ಣ ಹಳದಿ)
   ಕೆಂಪು ಬಣ್ಣ :-- ಕುಜನ ಈ ಬಣ್ಣ  ಆಕ್ರಮಣ ಕಾರಿ ಆಟಕ್ಕೆ ಪ್ರಚೋದಿಸುತ್ತದೆ

ಕ್ರೀಡಾ ಫಲಿತಾಂಶ ಹಾಗೂ ಗ್ರಹಣ :--

       ವಿಶ್ವ ಕಪ್ ನಂತಹ ದೊಡ್ಡ ಮಟ್ಟದ ಪಂದ್ಯಾವಳಿಗಳು ನಡೆಯುವಾಗ, ಸೂರ್ಯ ಅಥವಾ ಚಂದ್ರ ಗ್ರಹಣಗಳು ಸಂಭವಿಸಿದರೆ, ಅದು ಕ್ರೀಡಾ ಲೋಕದಲ್ಲಿ ದೊಡ್ಡ ಮಟ್ಟದ ಬೇಸರ, ಅಸಮಾಧಾನಕ್ಕೆ  ಕಾರಣವಾಗುತ್ತದೆ.  ಬಲಿಷ್ಠವಾದ ತಂಡಗಳು ಅನಿರೀಕ್ಷಿತವಾಗಿ ಸೋಲುವುದು,  ಹೆಸರೇ ಇಲ್ಲದ ತಂಡಗಳು  ಇದ್ದಕ್ಕಿದ್ದಂತೆ ಗೆದ್ದು ಚಾoಪಿಯನ್ ಆಗುವುದು.. ಇದೆಲ್ಲ ಗ್ರಹಣದ ಪ್ರಭಾವವೇ ಎಂದು ಊಹಿಸಬಹುದು, ಗ್ರಹಣವು ನಾಯಕರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಲ್ಲದು.

 ಹಸ್ತಾಕ್ಷರ ಮತ್ತು ಜ್ಯೋತಿಷ್ಯ:--

    ಆಟಗಾರರ ಸಹಿ ಕೂಡ ಅವರ ಗ್ರಹಗತಿಗಳನ್ನು ಪ್ರತಿಬಿಂಬಿಸುತ್ತವೆ,  ಯಾರು ತಮ್ಮ ಹೆಸರಿನ ಕೆಳಗೆ  ಮೇಲ್ಮುಖ ವಾಗಿ ಗೆರೆ ಎಳೆಯುತ್ತಾರೋ ಅವರು ಅತೀವ ಆತ್ಮವಿಶ್ವಾಸ ಮತ್ತು ಹೋರಾಟದ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಬಹುದು.
    ಸಹಿ ಮಾಡುವಾಗ ಅಕ್ಷರಗಳು ದೊಡ್ಡದಾಗಿದ್ದರೆ, ಅವರು ಮೈದಾನದಲ್ಲಿ ಡಾಮಿನೇಟ್ ಮಾಡಲು ಇಷ್ಟಪಡುತ್ತಾರೆ, ಅದು ಅವರ ಜಾತಕದ  ಸೂರ್ಯನ ಪ್ರಭಾವವನ್ನು ತೋರಿಸುತ್ತದೆ.

    ಅದೃಷ್ಟ ಮಹೂರ್ತ :--

    ಟಾಸ್ ಗೆಲ್ಲುವುದೂ ಕೂಡ ಒಂದು ಅದೃಷ್ಟವೇ..!! ಪಂದ್ಯರಂಭ ಸಮಯದಲ್ಲಿ ತಂಡದ ನಾಯಕನಿಗೆ  ಶುಭಹೋರೆ ಅಥವಾ ಅಮೃತ ಘಳಿಗೆ  ನಡೆಯುತ್ತಿದ್ದರೆ ಟಾಸ್ ಗೆಲ್ಲುವ ಮತ್ತು ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಪಂದ್ಯ  ನಡೆಯುವ ಸಮಯದ ಗೋಚಾರ ಮತ್ತು ಕ್ರೀಡಾoಗಣ ಇರುವ ದಿಕ್ಕು ಕೂಡ ಪ್ರಭಾವ ಬೀರುತ್ತೆ.

ಕ್ರೀಡಾಪಟುಗಳಿಗೆ ಜ್ಯೋತಿಷ್ಯ ಸಲಹೆ:--

   ಕ್ರೀಡೆಯಲ್ಲಿ ಏಕಾಗ್ರತೆ ಹೆಚ್ಚಿಸಲು ಮತ್ತು ದೈಹಿಕ ಪೆಟ್ಟುಗಳಿಂದ ಪಾರಾಗಲು ಕೆಲವು ಸಲಹೆಗಳು ಹೀಗಿವೆ.
   ಧ್ಯಾನ ಮತ್ತು ಪ್ರಾಣಾಯಾಮ, ಇದು ಬುಧ ಮತ್ತು ಚಂದ್ರನನ್ನು  ಬಲಪಡಿಸಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
   ಮಾನಸಿಕ ಶಾಂತಿಗಾಗಿ ಬೆಳ್ಳಿ ಆಭರಣವನ್ನು ಧರಿಸುವುದು ಕೂಡ ಕೆಲವರಿಗೆ ಸಹಕಾರಿ.
   ಕುಜನ ಅನುಗ್ರಹಕ್ಕಾಗಿ ಅಭ್ಯಾಸದ ಸಮಯದಲ್ಲಿ  ಕೆಂಪು ಬಣ್ಣದ ವಸ್ತ್ರ ಅಥವಾ ಕರವಸ್ತ್ರ ಬಳಸುವುದ್ರಿಂದ ಆತ್ಮವಿಶ್ವಾಸ ಹೆಚ್ಚುತ್ತೆ.
         
      ಜಾತಕದಲ್ಲಿ ಅಡೆತಡೆಗಳಿದ್ದರೆ ಜ್ಯೋತಿಷ್ಯದ ಪರಿಹಾರಗಳೆಂದರೆ.....
      ಕುಜನ ದೋಷವಿದ್ದರೆ, ಅಥವಾ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹನುಮಂತನ ಆರಾಧನೆ, ಹನುಮಾನ್ ಚಾಲೀಸ ಪಠನೆ  ಶ್ರೇಷ್ಠ.
      ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ಕುಗ್ಗಿದಾಗ ಸೂರ್ಯ ನಮಸ್ಕಾರ ಮತ್ತು ಸೂರ್ಯನ ಆರಾಧನೆ ಉತ್ತಮ.
      ಜಾತಕ ವಿಶ್ಲೇಷಣೆಯ  ನಂತರ  ಹವಳ  ಅಥವಾ ಪಚ್ಚೆ ರತ್ನಧಾರಣೆ ಮಾಡುವುದು ಸಹ ಕ್ರೀಡೆಯಲ್ಲಿ ಸಹಕಾರಿಯಾಗಬಲ್ಲದು.
      ಶನಿ ಮತ್ತು ರಾಹುವಿನ ಅಶುಭ ಪ್ರಭಾವದಿಂದ ವೃತ್ತಿಜೀವನಕ್ಕೆ ಸಮಸ್ಯೆಯಾದರೆ, ಹನುಮಂತ ದೇವರಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚುವುದು ಮತ್ತು ಶನಿ ಶಾಂತಿ ಮಾಡಿಸುವುದು ಉತ್ತಮ.
       
       ಒಟ್ಟಿನಲ್ಲಿ  ಕ್ರೀಡೆಯಲ್ಲಿ ಯಶಸ್ವೀಯಾಗಬೇಕೆಂದರೆ,  ಜಾತಕದ  1,3,5,6,10,11,ನೇ ಸ್ಥಾನಗಳ ಜೊತೆಗೆ ಚತುರ್ಥ, ಸಪ್ತಮ, ಭಾಗ್ಯ ಸ್ಥಾನಗಳು, ರವಿ, ಕುಜ, ಬುಧ, ಗುರು, ಶುಕ್ರ, ಚಂದ್ರ, ಶನಿಗ್ರಹಗಳ ಜೊತೆ ಜೊತೆಗೆ ರಾಹು ಕೇತುಗಳೂ ಬಲಾಢ್ಯವಾಗಿರಬೇಕಾಗುತ್ತದೆ.
-------------
ಈಗ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ  ಮಹಿಳಾ ಕ್ರೀಡಾಪಟುಗಳ ಜಾತಕವನ್ನು ನೋಡೋಣ :--

ಭಾರತದ ಪ್ರಮುಖ ಮಹಿಳಾ ಕ್ರೀಡಾಪಟುಗಳು 

ಹರ್ಮನ್‌ಪ್ರೀತ್ ಕೌರ್ :-- ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕಿ:--
 ಆಕ್ರಮಣಕಾರಿ ಬ್ಯಾಟರ್.
ಹರ್ಮನ್ಪ್ರೀತ್ ಕೌರ್ ಭುಲ್ಲರ್ (ಜನನ 8 ಮಾರ್ಚ್ 1989) ಒಬ್ಬ ಭಾರತೀಯ ಕ್ರಿಕೆಟ್ ಆಟಗಾರ್ತಿ , ಅವರು ಆಲ್-ರೌಂಡರ್ ಆಗಿ ಆಡುತ್ತಾರೆ ಮತ್ತು ಭಾರತ ಮಹಿಳಾ ರಾಷ್ಟ್ರೀಯ ತಂಡದ ನಾಯಕಿಯಾಗಿದ್ದಾರೆ . ಅವರು ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್-ಸ್ಪಿನ್ ಬೌಲರ್. ಅವರು 2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್ , 2012 ರಲ್ಲಿ ಮಹಿಳಾ ಏಷ್ಯಾ ಕಪ್ ,  2016 ಮತ್ತು 2022 ರಲ್ಲಿ ಮತ್ತು 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತೀಯ ತಂಡವನ್ನು ಮುನ್ನಡೆಸಿದರು . ಅವರ ನಾಯಕತ್ವದಲ್ಲಿ, ಭಾರತೀಯ ಮಹಿಳಾ ತಂಡವು 1999 ರಿಂದ 2022 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ದ್ವಿಪಕ್ಷೀಯ ಮಹಿಳಾ ಏಕದಿನ ಅಂತರರಾಷ್ಟ್ರೀಯ (WODI) ವಿದೇಶ ಸರಣಿ ಗೆಲುವು , 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆಲುವು ಮತ್ತು 2025 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಮಹಿಳಾ ಟ್ವೆಂಟಿ20 ಅಂತರರಾಷ್ಟ್ರೀಯ (WT20I) ಸರಣಿ ಗೆಲುವು ಸಾಧಿಸಿತು . ಅವರು 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು . 2017 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇದುವರೆಗೂ 131 ಪಂದ್ಯಗಳನ್ನು ಮುನ್ನಡೆಸಿದ್ದು 77 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಅದ್ಭುತ ನಾಯಕಿ ಅಂತಲೇ ಹೇಳಬಹುದು.

ಗೂಗಲ್ ನಲ್ಲಿ ಸಿಕ್ಕ ಜನ್ಮವಿವರಗಳ ಆದಾರದ ಮೇರೆಗೆ
ಹರ್ಮಂಪ್ರೀತ್ ಕೌರ್ ರವರ 
* ಲಗ್ನ  -ವೃಶ್ಚಿಕ
* ಪೂರ್ವಬಾದ್ರ 2 ನೇ ಪಾದ ಕುಂಭರಾಶಿ
* ಲಗ್ನಾಧಿಪತಿ ಕುಜ 6 ನೇ ಅಧಿಪತಿಯೂ ಆಗಿ ಕೃತಿಕಾ 3 ನೆ ಪಾದ ವೃಶಭ ರಾಶಿಯಲ್ಲಿ ಪಂಚಮಾಧಿಪತಿ ಗುರುವಿನೊಂದಿಗೆ ಸ್ಥಿತನಾಗಿದ್ದು ಲಗ್ನವನ್ನು ದೃಷ್ಟಿಸುತ್ತಿರುವುದು... ಲಗ್ನ ಬಲಯುತವಾಗಿದೆ ಎಂದು ತಿಳಿಸುತ್ತೆ. 
* ಕುಜ ಕೂಡ ಗುರುವಿನೊಂದಿಗಿದ್ದು ಮಿತ್ರ ರವಿಯ ನಕ್ಷತ್ರ ದಲ್ಲಿರುವುದರಿಂದ, ಸಪ್ತಮ ಕೇಂದ್ರದಲ್ಲಿರುವುದರಿಂದ ಕುಜ ಸಹ ಸ್ಟ್ರಾಂಗ್ ಅಂತ ಹೇಳಬಹುದು. 
* ವಿಕ್ರಮ ಸ್ಥಾನಾಧಿಪತಿ ಶನಿಗ್ರಹ  ಧನಸ್ಸಿನಲ್ಲಿ ಸ್ಥಿತನಿದ್ದು ಜಾತಕರಿಗೆ ಮತ್ತಷ್ಟು ಧೈರ್ಯವನ್ನು ತುಂಬಿ ನ್ಯಾಯಯುತವಾದ ಆಕ್ರಮಣಕಾರಿ ಆಟಗಾರಳನ್ನಾಗಿ ಮಾಡಿದೆ, ಜೊತೆಗೆ ಗುರುವಿನ ದೃಷ್ಟಿಯೂ ವಿಕ್ರಮಸ್ಥಾನಕ್ಕಿದೆ.
* ಪ್ರತಿಭೆಯನ್ನು ಸೂಚಿಸುವ ಪಂಚಮಧಿಪತಿಯು, ಲಗ್ನ - 6ನೇ ಅಧಿಪತಿಯಾದ ಕುಜನೊಟ್ಟಿಗೆ  ಸಪ್ತಮ ಕೇಂದ್ರದಲ್ಲಿದ್ದು,  ಇವರಿಗೆ ಕ್ರಿಕೆಟ್ನಲ್ಲಿ ಆಸಕ್ತಿ ಹಾಗೂ ಯಶಸ್ಸನ್ನು ಕೊಟ್ಟಿದೆ.
* 10th ಅಧಿಪತಿಯಾದ ರವಿಗೆ 7th, 9th, 11th  ಅಧಿಪತಿಗಳ ಸಂಯೋಜನೆ ಚತುರ್ಥ ಕೇಂದ್ರವಾದ ಕುಂಭದಲ್ಲಿ ಇದ್ದು ತನ್ನ ಸ್ವಕ್ಷೇತ್ರ 10 ನೇ ಸ್ಥಾನವನ್ನು ವೀಕ್ಷಿಸುತ್ತಿರುವುದರಿಂದ, ಲಗ್ನಾಧಿಪತಿ ಕುಜನ ದೃಷ್ಟಿ ಕೂಡ 10 ರ ಮೇಲಿರುವುದರಿಂದ 10ನೆ ಭಾವ ಕೂಡ ಬಲವಾಯ್ತು. ಇದರಿಂದ ಇವರು  ತಂಡದ ನಾಯಕಿ ಆಗುವ ಯೋಗ ಉಂಟಾಯ್ತು. ಜೊತೆಗೆ ರಾಹುವಿನ ಬಾಹುಬಲವೂ ಸೇರಿ ಪ್ರಚಂಡ ವಿಜಯವನ್ನು ಸಾಧಿಸುವ ಯೋಗ  ಉಂಟಾಯ್ತು.
* ದಶಮಾಧಿಪತಿಗೆ  11 ನೇ ಅಧಿಪತಿಯ ಸಂಬಂಧ ಅನೇಕ ಪ್ರಶಸ್ತಿಗಳು, ಧನಲಾಭ ಎಲ್ಲವೂ ಸಿಕ್ಕಿದೆ.
ದಶಮ ಸ್ಥಾನದಲ್ಲಿರುವ ಕೇತು ಇವರಿಗೆ ಕೀರ್ತಿಯನ್ನು ತಂದುಕೊಟ್ಟಿದೆ.
 * 3rd ಅಧಿಪತಿ  ಶನಿದಶೆ ಶುಕ್ರಭುಕ್ತಿಯಲ್ಲಿ, ಇವರು ತಮ್ಮ 20 ನೆ ವರ್ಷದಲ್ಲಿ, 2009 ನೆ ಇಸವಿಯಲ್ಲಿ ಕ್ರಿಕೆಟ್ ಆಟಕ್ಕೆ ಪಾದಾರ್ಪಣೆ ಮಾಡಿದರು.
* ಪ್ರಸ್ತುತ 11th ಅಧಿಪತಿ ಬುಧನ ದೆಶೆ ನಡೆಯುತ್ತಿದ್ದು, ಈ ದಶ ಕೂಡ ಅವರನ್ನು ಕ್ರೀಡೆಯಲ್ಲಿ ಉನ್ನತಿ  ತಂದುಕೊಡಲಿದೆ.
ಇವರ ಕುಂಡಲಿಯಲ್ಲಿ ಕ್ರೀಡೆಗೆ ಪ್ರಮುಖವಾದ ಗ್ರಹಗಳೆಲ್ಲರೂ ಕೇಂದ್ರಸ್ಥಾನದಲ್ಲಿ ಸ್ಥಿತರಾಗಿ ಇವರನ್ನು ಅಪ್ರತಿಮ ಕ್ರಿಕೆಟ್ ಕ್ರೀಡಾಪಟುವನ್ನಾಗಿ ಮಾಡಿದೆ.


ಸ್ಮೃತಿ ಮಂಧಾನ:---
ತಂಡದ ಸ್ಟಾರ್ ಆರಂಭಿಕ ಬ್ಯಾಟರ್.

ಸ್ಮೃತಿ ಮಂಧಾನ (ಜನನ 18 ಜುಲೈ 1996) ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಮತ್ತು ಭಾರತೀಯ ಮಹಿಳಾ ರಾಷ್ಟ್ರೀಯ ತಂಡದ ಉಪನಾಯಕಿ . ಅವರು 2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್ , 2016 ಮತ್ತು 2022 ರಲ್ಲಿ ಮಹಿಳಾ ಏಷ್ಯಾ ಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು . ಅವರು 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಗೆದ್ದರು.

ಮಂಧಾನಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಅವರು ಅಂತರರಾಷ್ಟ್ರೀಯ ಶತಕಗಳ
 ದಾಖಲೆ ಮೆಗ್ ಲ್ಯಾನಿಂಗ್ ಅವರೊಂದಿಗೆ ಹಂಚಿಕೊಂಡಿದ್ದಾರೆ) ಮತ್ತು ಮಹಿಳಾ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ( WODI) ಎರಡನೇ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಅವರು ಮಹಿಳಾ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ( WT20I) ಎರಡನೇ ಅತಿ ಹೆಚ್ಚು ರನ್ ಮತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ . ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ - WTests , WODIs ಮತ್ತು WT20Is ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ ಮತ್ತು ಯಾವುದೇ ಭಾರತೀಯ ಬ್ಯಾಟ್ಸ್‌ಮನ್‌ನಿಂದ ODI ಸ್ವರೂಪದಲ್ಲಿ ವೇಗದ ಶತಕದ ದಾಖಲೆಯನ್ನು ಹೊಂದಿದ್ದಾರೆ .

ದೇಶೀಯ ಕ್ರಿಕೆಟ್‌ನಲ್ಲಿ, ಮಂಧಾನ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ . ಅವರು ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿದ್ದಾರೆ ಮತ್ತು 2024 ಮತ್ತು 2026 ರ ಋತುಗಳಲ್ಲಿ WPL ಪ್ರಶಸ್ತಿಗಳನ್ನು ಗೆಲ್ಲಲು ಕಾರಣರಾಗಿದ್ದರು.



● ಸ್ಮೃತಿ ಮಂದಾನ ರವರ ಜನ್ಮ ಲಗ್ನ ಮೀನ, ಭಾವನಾತ್ಮಕ ಆಟಗಾರ್ತಿ.
● ಲಗ್ನಾಧಿಪತಿ ತನ್ನ ಸ್ವಕ್ಷೇತ್ರ ಧನಸ್ಸುವಿನಲ್ಲಿ ದಶಮಸ್ಥಾನಸ್ಥಿತನಾದ್ದರಿಂದ ಲಗ್ನಾಧಿಪತಿ ಬಲಯುತ. ಜೊತೆಗೆ ಕ್ರೀಡಾ ಜ್ಯೋತಿಷ್ಯ ದಲ್ಲಿ ಪ್ರಮುಖವಾದ ಗ್ರಹ ಕುಜ ಹಾಗೂ ಗುರುವು ಪರಸ್ಪರ ದೃಷ್ಟಿಯಿಂದ ಇವರಿಗೆ ಕ್ರಿಕೆಟ್ ಕ್ರೀಡೆಯಲ್ಲಿ ಆಸಕ್ತಿ ಬಂದಿದೆ.
● ಲಗ್ನದಲ್ಲಿನ ಶನಿ, ಕೇತುವಿನಿಂದ ತಾರ್ಕಿಕವಾಗಿ,  ಶಿಸ್ತುಬದ್ಧವಾಗಿ ಆಟವಾಡ್ತಾರೆ, ಸಪ್ತಮದ ರಾಹು ಲಗ್ನವನ್ನು ದೃಷ್ಟಿಸಿ, ಬಲ ಪರಾಕ್ರಮವನ್ನು ಕೊಟ್ಟು ಆಕ್ರಮಣಕಾರಿ ಆಟವಾಡಲು ಪ್ರಚೋದಿಸುತ್ತೆ.
● 3rd ಲಾರ್ಡ್ ಶುಕ್ರ 3ರಲ್ಲೇ ಇದ್ದು  ಬಲಯುತನಾಗಿದ್ದಾನೆ. ರಾಹುವಿನ ಪಂಚಮ ದೃಷ್ಟಿ ಶುಕ್ರನ ಮೇಲಿದ್ದು, ಆಟದ ಮೈದಾನದಲ್ಲಿ  ತನ್ನ ಪರಾಕ್ರಮ ಮೆರೆಯುವಂತೆ ಮಾಡಿದ್ದಾನೆ.
● ಪಂಚಮಾಧಿಪತಿ ಚಂದ್ರ ಪಂಚಮದಲ್ಲಿಯೇ ಇದ್ದು  ಜಾತಕಿಗೆ ಸಹಾನುಭೂತಿ, ರಕ್ಷಣಾತ್ಮಕ ಮನೋಭಾವ, ಊಹಾತ್ಮಕ ಶಕ್ತಿ, ಜನರೊಡನೆ ಭಾವನಾತ್ಮಕ ಸಂಪರ್ಕ ಸಾಧಿಸುವ, ನಿಭಾಯಿಸುವ, ಸಾಮರ್ಥ್ಯವನ್ನು ಕೊಟ್ಟಿದೆ.
● 5th ಲಾರ್ಡ್ ಚಂದ್ರನು  ಬುಧನ ನಕ್ಷತ್ರದಲ್ಲಿ  ಬುಧನೊಟ್ಟಿಗೆ ಇದ್ದು, ಚುರುಕುತನದ ಜೊತೆಗೆ  ಕ್ರಿಯಾತ್ಮಕವಾಗಿ ಯೋಚಿಸಿ ಕಾರ್ಯರೂಪಕ್ಕಿಳಿವ ಗುಣವನ್ನು ಕೊಟ್ಟಿದೆ.
 • 6th ಲಾರ್ಡ್ ರವಿ 5th ಲ್ಲಿ ಚಂದ್ರ ಬುದರ ಜೊತೆಗೆ ಇದ್ದು ಜಾತಕಿಗೆ ಸ್ಥಿತಿಸ್ಥಾಪಕತ್ವ, ಅಂತಃಪ್ರಜ್ಞೆ ಮತ್ತು ಇತರರಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯ ಕೊಟ್ಟಿದೆ. ಈ ಗುಣಗಳು ಮೈದಾನದಲ್ಲಿ ಅವರ ಸ್ಥಿರ ಪ್ರದರ್ಶನ ಮತ್ತು ನಾಯಕತ್ವದಲ್ಲಿ ಪ್ರತಿಫಲಿಸುತ್ತವೆ.
 • ಧನ,  ಭಾಗ್ಯಾಧಿಪತಿಯಾದ ಕುಜ ಚತುರ್ಥ ಕೇಂದ್ರದಲ್ಲಿ ಸ್ಥಿತನಾಗಿ, ಗುರುವಿನ ವೀಕ್ಷಣೆಯಲ್ಲಿ, ಇವರಿಗೆ, ಧೈರ್ಯ ಹಣ, ಕ್ರೀಡಾ ಜೀವನದ ಸುಖ, ಭಾಗ್ಯವನ್ನು ಕೊಟ್ಟು ಯಶಸ್ವೀ ಕ್ರೀಡಾತಾರೆಯನ್ನಾಗಿ ಮಾಡಿದೆ.
• 10th ಲಾರ್ಡ್, ಗುರು 10 ರಲ್ಲೇ ಇದ್ದು, ಕುಜನ ದೃಷ್ಟಿ ಪಡೆದು ಕೀರ್ತಿ, ಪ್ರಶಸ್ತಿ ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಕೊಡುವಲ್ಲಿ ಸಹಕಾರಿಯಾಗಿದೆ.
• 11th ಲಾರ್ಡ್ ಶನಿಯು ಲಗ್ನದಲ್ಲೇ ಕೇತುವಿನೊಂದಿಗಿದ್ದು, ಇವರಿಗೆ ಸಲ್ಲಬೇಕಾದ ಮಾನಸಮ್ಮಾನ, ಲಾಭ ಪ್ರಶಸ್ತಿ ಎಲ್ಲವನ್ನೂ ಕೊಟ್ಟು  ಕೀರ್ತಿ ಪತಾಕೆಯನ್ನು ಹಾರಿಸಿದೆ.
• ಕೇತುದೆಶೆ ರಾಹುಭುಕ್ತಿಯಲ್ಲಿ  ಇವರು ತಮ್ಮ 9 ನೆ ವಯಸ್ಸಿಸಲ್ಲಿ ಕ್ರಿಕೆಟ್ ಸ್ಪರ್ಧೆ ಯಲ್ಲಿ ಭಾಗವಹಿಸಿದರು, 
• ಪ್ರಸ್ತುತ 3 ನೆ ಅಧಿಪತಿ ಶುಕ್ರದೆಶೆ ನಡೆಯುತ್ತಿದ್ದು,  ಶುಕ್ರದೆಶೆ ಶನಿ ಭುಕ್ತಿಯಲ್ಲಿ ಕಳೆದ ವರ್ಷ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತದ ಪರವಾಗಿ ಗೆದ್ದು ದೇಶದ ಗೌರವವನ್ನು ಎತ್ತಿ ಹಿಡಿದಿದ್ದಾರೆ.
ಇವರ ಜಾತಕದಲ್ಲಿ  ಕ್ರೀಡಾಗ್ರಹಗಳು ಕೇಂದ್ರ ತ್ರಿಕೋಣದಲ್ಲಿದ್ದು ಇವರನ್ನು ಉತ್ತಮ ಕ್ರಿಕೆಟ್ ಪಟುವನ್ನಾಗಿ ಮಾಡಿದೆ.

          ✍️ಡಾ: B. N. ಶೈಲಜಾ ರಮೇಶ್


Tuesday, 10 March 2026

ಕ್ರೀಡೆ ಮತ್ತು ಜ್ಯೋತಿಷ್ಯ

                         ಹರಿಃ ಓಂ
        ಓಂ ಶ್ರೀ ಮಹಾಗಣಪತಯೇ ನಮಃ
              ಓಂ ಶ್ರೀ ಗುರುಭ್ಯೋನಮಃ

ಕ್ರೀಡೆ ಮತ್ತು ಜ್ಯೋತಿಷ್ಯ
(Picture source: internet /social media)

             ಕ್ರೀಡೆ ಮತ್ತು ಜ್ಯೋತಿಷ್ಯಕ್ಕೆ ಸಂಬಂಧವಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.  ಜ್ಯೋತಿಷ್ಯ ಶಾಸ್ತ್ರವು ಒಂದು ಮಹಾ ಸಾಗರವಿದ್ದಂತೆ,  ಅದರಲ್ಲಿ ಅನೇಕ ವಿಷಯಗಳು ಅಡಕವಾಗಿವೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಭಾಗಗಳಿವೆ. ಅದರಲ್ಲಿ ಕ್ರೀಡಾ ಜ್ಯೋತಿಷ್ಯವೂ ಒಂದು.  ಕ್ರೀಡೆ ಮತ್ತು ಜ್ಯೋತಿಷ್ಯದ ನಡುವಿನ ಸಂಬಂಧವು ತುಂಬಾ ಆಳವಾದುದು. ಕೇವಲ ದೈಹಿಕ ಶ್ರಮ ಮತ್ತು ಪ್ರತಿಭೆ ಮಾತ್ರವಲ್ಲದೆ, ಒಬ್ಬ ಕ್ರೀಡಾಪಟುವಿನ ಯಶಸ್ಸಿನಲ್ಲಿ ಅವರ ಜಾತಕದಲ್ಲಿರುವ ಗ್ರಹಗತಿಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದು ಕುತೂಹಲಕಾರಿ ವಿಷಯ. ​ಕ್ರೀಡಾ ಲೋಕದಲ್ಲಿ ಯಶಸ್ವಿಯಾಗಲು ಕೇವಲ ಸ್ನಾಯುಬಲವಿದ್ದರೆ ಸಾಲದು, ಅದಕ್ಕೆ ಬೇಕಾದ ಮನೋಬಲ ಮತ್ತು ಅದೃಷ್ಟದ ಬೆಂಬಲವೂ ಮುಖ್ಯ. 
ವೈದಿಕ ಜ್ಯೋತಿಷ್ಯದಲ್ಲಿ ಕ್ರೀಡೆಗಳು ನಂಬಿಕೆ, ವೃತ್ತಿ, ಹವ್ಯಾಸ, ಐಷಾರಾಮಿ, ಆದಾಯದ ಮೂಲ, ಗಮನ(attention) ಇತ್ಯಾದಿಗಳ ಅಡಿಯಲ್ಲಿ ಬರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಸಹಾಯದಿಂದ ಒಬ್ಬ ಮನುಷ್ಯ ಯಾವ ಯಾವ  ಕ್ರೀಡೆಗಳಲ್ಲಿ ಮುಂದೆ ಬರುತ್ತಾನೆ,  ಯಾವ ಯಾವ ಗ್ರಹಗಳು ಯಾವ ಯಾವ ಕ್ರೀಡೆಗಳಿಗೆ ಕಾರಕರಾಗುತ್ತಾರೆ,  ಯಾವ ಯಾವ ರಾಶಿಯವರು ಯಾವ ಯಾವ ಕ್ರೀಡೆಗಳನ್ನ ಬಯಸುತ್ತಾರೆ, ಎನ್ನುವುದನ್ನು ತಿಳಿಯಬಹುದು.

         ಕ್ರೀಡೆಗಳಲ್ಲಿ ನಾನಾ ವಿಭಾಗಗಳಿದ್ದರೂ ಅವುಗಳನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ವಿಭಾಗಿಸಬಹುದು.

     1.  ಹೊರಾಂಗಣ ಕ್ರೀಡೆ
     2.  ಒಳಾಂಗಣ ಕ್ರೀಡೆ

          ಹೊರಾಂಗಣ  ಕ್ರೀಡೆ  ಎಂದರೆ ಮನೆಯಿಂದ ಹೊರಗೆ ಆಡುವ ಆಟಗಳಾದ
 ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಹಾಕಿ, ಟೆನ್ನಿಸ್, ಬ್ಯಾಸ್ಕೆಟ್ ಬಾಲ್ ಮುಂತಾದವು.

        ಒಳಾಂಗಣ ಕ್ರೀಡೆ ಎಂದರೆ  ಮನೆಯ ಒಳಗೆ ಆಡುವ ಆಟಗಳು.  ಅವುಗಳೆಂದರೆ, ಚೆಸ್, ಕೇರಮ್,  ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್, ಇಸ್ಪೀಟ್  ಮುಂತಾದವು.

          ಇವಲ್ಲದೆ ನಾನಾ ರೀತಿಯ ಜಲಕ್ರೀಡೆಗಳು  ಜನಪ್ರಿಯವಾಗಿವೆ. ಉದಾಹರಣೆಗೆ, ಈಜುವುದು, ವಾಟರ್ಪೋಲೋ, ನೀರಿನಲ್ಲಿ ಚೆಂಡಾಟ ಆಡುವುದು ಜಲಕ್ರೀಡೆಯಾದರೆ... ಕರಾಟೆ, ಕುಸ್ತಿ, ಜಿಮ್ನಾಸ್ಟಿಕ್  ಇವು ಇನ್ನೊಂದು ವಿಭಾಗಕ್ಕೆ ಸೇರುತ್ತವೆ.

ಕ್ರೀಡೆಯಲ್ಲಿ ಜ್ಯೋತಿಷ್ಯದ ಪ್ರಮುಖ ಅಂಶಗಳು ಯಾವುವು ಎಂದು ನೋಡುವುದಾದರೆ... ಮೊದಲಿಗೆ 

ಗ್ರಹಗಳ ಪಾತ್ರ:  ಯಾವ ಗ್ರಹಗಳು ದೈಹಿಕ ಸಾಮರ್ಥ್ಯ ಮತ್ತು ತ್ರಾಣವನ್ನು (stamina) ಪ್ರತಿನಿಧಿಸುತ್ತದೆ, ಎಂದು ತಿಳಿಯುವುದು. ಇದು ಕ್ರೀಡೆಯಲ್ಲಿ  ಅತಿ ಮುಖ್ಯ ಅಂಶ.

ನಂತರ.......
ಜಾತಕದ ಮನೆಗಳು: ಯಾವ ಯಾವ ಭಾವಗಳು ಕ್ರೀಡೆಗೆ ಧೈರ್ಯ, ಸಾಹಸ ಪ್ರತಿಭೆ  ಮತ್ತು ಸ್ಪರ್ಧೆಯ ವಿಜಯಕ್ಕೆ ಬಲವಾಗಿರಬೇಕು ಅನ್ನೋದನ್ನ ತಿಳ್ಕೊಬೇಕು.

ಚೆಸ್‌ನಂತಹ ಮಾನಸಿಕ  ಆಟಗಳಿಗೆ ಯಾವ ಗ್ರಹಗಳು ಬಲವಾಗಿ ಇರಬೇಕು.
ಮತ್ತು ...

ಯಶಸ್ಸು:  ಯಾವ ಯಾವ ಭಾವಗಳು ಹಾಗೂ ಗ್ರಹಗಳು  ಉತ್ತಮ ಸಂಬಂಧ ಹೊಂದಿದ್ದರೆ ಕ್ರೀಡೆಯಲ್ಲಿ ಜನಪ್ರಿಯತೆ, ಉನ್ನತ ಸ್ಥಾನ ಮತ್ತು ಯಶಸ್ಸು ಲಭಿಸುತ್ತದೆ. ಎಂಬುದನ್ನು ಅವಲೋಕಿಸಬೇಕಾಗುತ್ತದೆ. 

     ಈಗ , ಮೊದಲಿಗೆ  ಯಾವ ಯಾವ ಕ್ರೀಡೆಗೆ ಯಾವ ಯಾವ ಗ್ರಹರು ಕಾರಕರಾಗುತ್ತಾರೆ ಎಂಬುದನ್ನು ತಿಳಿಯೋಣ.

ಗ್ರಹಗಳು -- ಕ್ರೀಡೆಗಳು
************************
    1. ರವಿ   -- ಹೊರಾಂಗಣ, ಸಾಹಸ ಕ್ರೀಡೆಗಳಿಗೆ ಕಾರಕನಾದರೆ
    2. ಚಂದ್ರ -- ಎಲ್ಲಾ ರೀತಿಯ ಜಲ ಕ್ರೀಡೆಗಳನ್ನು ಪ್ರತಿನಿಧಿಸುತ್ತಾನೆ.
    3. ಕುಜ -- ಹೊರಾಂಗಣ ಕ್ರೀಡೆ, ಸಾಹಸ ಕ್ರೀಡೆಗಳಿಗೆ ಪ್ರತಿನಿಧಿಯಾದರೆ
    4. ಬುಧ -- ಹೊರಾಂಗಣ ಕ್ರೀಡೆ. ಬುದ್ಧಿಮತ್ತೆ ಉಪಯೋಗಿಸಿ ಆಡುವ  ಆಟಗಳನ್ನು ನಿಯಂತ್ರಿಸುತ್ತಾನೆ.
    5. ಗುರು -- ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳ ಜ್ಞಾನವನ್ನು ಕೊಟ್ಟರೆ
    6. ಶುಕ್ರ -- ಎಲ್ಲಾ ರೀತಿಯ ಜಲ ಕ್ರೀಡೆಗಳ ಕಾರಕತ್ವವನ್ನು ವಹಿಸುತ್ತಾನೆ.
    7. ಶನಿ  -- ಜೂಜು ( ರೇಸು, ಇಸ್ಪೀಟು, ಮಟ್ಕಾ ) ಇಂಥ ಆಟಗಳಿಗೆ ಮನಸ್ಸು ಕೊಟ್ಟರೆ
         ರಾಹು ಕೇತುಗಳು ಯಾವ ಯಾವ ಗ್ರಹದ ರಾಶಿಯಲ್ಲಿರುತ್ತಾರೋ ಆ ಗ್ರಹಗಳ ಸ್ಥಾನ ಬಲದಂತೆ ಕಾರಕರಾಗುತ್ತಾರೆ.      

        ಕ್ರೀಡೆಗಳಲ್ಲಿ  ಮಿಂಚಲು ಯಾವುದೇ ವ್ಯಕ್ತಿಗೆ ಲಗ್ನ, ತೃತೀಯ ,  5 ನೇ, 6ನೇ  ಮತ್ತು ಹತ್ತನೇ ಭಾವಗಳು ಹಾಗೂ  ಭಾವಾಧಿಪತಿಯನ್ನು ಪರಿಗಣಿಸಬೇಕು. . 
  
1 ನೇ ಮನೆ ಮತ್ತು ಅದರ ಅಧಿಪತಿ:  ಲಗ್ನ, ಹಾಗೂ ಲಗ್ನಾಧಿಪತಿ  ಜಾತಕರ ವ್ಯಕ್ತಿತ್ವ ಮತ್ತು  ದೇಹವನ್ನು ಪ್ರತಿನಿಧಿಸುತ್ತದೆ. ಸ್ಟ್ರಾಂಗ್ ಆಗಿದ್ರೆ ಸದೃಢ ದೇಹ ಹಾಗೂ ಬಲ ಹೊಂದಿದ್ದು ಕ್ರೀಡೆಯಲ್ಲಿ ಚೈತನ್ಯ ತುಂಬುತ್ತೆ. ಒಟ್ಟಾರೆ ಅಥ್ಲೆಟಿಕ್ ಸಾಮರ್ಥ್ಯವನ್ನು ಲಗ್ನ ಪ್ರತಿನಿಧಿಸುತ್ತೆ.  ಒಂದುವೇಳೆ ಲಗ್ನ ಹಾಗೂ ಲಗ್ನಧಿಪತಿ  ಬಾಧಿತವಾಗಿದ್ದರೆ  ಆಗಾಗ್ಗೆ ಗಾಯಗಳು ಮತ್ತು ಆಟವಾಡಲು ನಿತ್ರಾಣ ಉಂಟಾಗುತ್ತದೆ

3 ನೇ ​​ಮನೆ: ಕ್ರೀಡೆಯಲ್ಲಿ ಯಶಸ್ಸು, ಶಕ್ತಿ, ಪರಾಕ್ರಮ ಸಾಹಸ ಮತ್ತು ವಿಜಯವನ್ನು ಕುಂಡಲಿಯ 3ನೇ ಮನೆಯಿಂದ ನೋಡಬೇಕು.   ಧೈರ್ಯ, ಪರಾಕ್ರಮ, ಅಲ್ಪಾವಧಿಯ ಶಕ್ತಿ, ಅಪಾಯಗಳು - ಸ್ಪರ್ಧಾತ್ಮಕ ಮನೋಭಾವ ಮತ್ತು ಯಾವುದೇ ರೀತಿಯ ಪ್ರಯತ್ನಕ್ಕೆ ಮೂರನೇ ಸ್ಥಾನ ಸಂಬಂಧಿಸಿದೆ. ಈ 3ನೇ  ಮನೆಯ ಮೇಲೆ ಪ್ರಭಾವ ಬೀರುವ ಗ್ರಹಗಳು, ಜಾತಕರ  ಆಸಕ್ತಿಯ ಮಟ್ಟಗಳು ಮತ್ತು ನಡವಳಿಕೆಯ ಮಾದರಿಗಳನ್ನು ಹಾಗೂ  ಗುರಿಗಳನ್ನು ತಲುಪಲು ಧೈರ್ಯವನ್ನು ಹೊಂದುವ  ಇಚ್ಛೆಯನ್ನು ನಿಯಂತ್ರಿಸುತ್ತವೆ.

5 ನೇ ಮನೆ: ಪ್ರತಿಭೆ, ಊಹಾತ್ಮಕ ಅಪಾಯ, ಗುರುತಿಸುವಿಕೆ, ಊಹಾತ್ಮಕ ಆಟಗಳು, ಮಕ್ಕಳ ಕ್ರೀಡೆಗಳಿಗೆ 5ನೇ ಭಾವ ಸಂಬಂಧಿಸಿದೆ. ಈ ಮನೆಯು  ಸೃಜನಶೀಲತೆ, ಪ್ರತಿಭೆಗಳು, ಯೋಜನೆಗಳನ್ನು ಪ್ರಾಯೋಜಿಸುವ, ಪ್ರಕಟಿಸುವ  ಸಾಮರ್ಥ್ಯ ಮತ್ತು  ಆಕಾಂಕ್ಷೆಗಳನ್ನು ಕಾರ್ಯರೂಪಕ್ಕೆ ತರುವ  ಉತ್ಸಾಹಕ್ಕೆ ಕಾರಣವಾಗಿದೆ.

6 ನೇ ಮನೆ:  ಸ್ಪರ್ಧೆ ಶತ್ರುಜಯ,   ವಿರೋಧಿಗಳು, ದೈನಂದಿನ ತರಬೇತಿ, ದಿನಚರಿ, ಸೇವೆ, ಗಾಯಗಳು, ಅನಾರೋಗ್ಯದಿಂದ ರಕ್ಷಣೆಯನ್ನು ಮತ್ತು ಗೆಲುವಿಗೆ ಹಾಗೂ ಪುನರ್ವಸತಿ ಕೂಡ 6ನೇ ಮನೆಯಿಂದ ನೋಡಬೇಕು. ಆರನೇ ಅಧಿಪತಿ ಶತ್ರುಗಳ ಬಗ್ಗೆ ಹೇಳುತ್ತಾದ್ದರಿಂದ ಆರರ ಅಧಿಪತಿ ಉತ್ತಮ ಸ್ಥಾನದಲ್ಲಿದ್ದರೆ  ಎದುರಾಳಿಗಳನ್ನು ಸೋಲಿಸಬಹುದು

 10 ನೇ ಮನೆ:  ಸಾರ್ವಜನಿಕ ಚಿತ್ರಣ, ವೃತ್ತಿ - ವೃತ್ತಿಪರ ಕ್ರೀಡಾಪಟುವಿನ ಸಾಮರ್ಥ್ಯ ಮತ್ತು ವೃತ್ತಿಜೀವನದ ಕೀರ್ತಿ-ಪ್ರತಿಷ್ಠೆಯನ್ನು, ಯಶಸ್ಸನ್ನು ಸೂಚಿಸುತ್ತದೆ. 
               ಹಾಗೆಯೇ....
11ನೇ ಮನೆ ಲಾಭ/ಪ್ರಶಸ್ತಿಗಳನ್ನು ಸೂಚಿಸುತ್ತದೆ.

      ಕ್ರೀಡೆಗಳಲ್ಲಿನ ಪರಿಣಿತಿಗಾಗಿ  ಪ್ರಮುಖ ಗ್ರಹಗಳು ಯಾವುದೆಂದು ನೋಡುವುದಾದರೆ, ದೈಹಿಕ ಶಕ್ತಿ ಮತ್ತು ತ್ರಾಣಕ್ಕಾಗಿ ಮಂಗಳ ಅತ್ಯಂತ ಮುಖ್ಯವಾದ ಗ್ರಹ . ಕೀರ್ತಿ ಮತ್ತು ಜನಪ್ರಿಯತೆಗಾಗಿ ಸೂರ್ಯ ಗ್ರಹ , ಮತ್ತು ತಾಂತ್ರಿಕ ಕೌಶಲ್ಯಕ್ಕಾಗಿ ಬುಧಗ್ರಹ ಅಗತ್ಯ.

    ಕ್ರೀಡಾ ಜ್ಯೋತಿಷ್ಯದಲ್ಲಿ , ಜಾತಕದಲ್ಲಿ ಶಕ್ತಿ ತ್ರಾಣವನ್ನು ನೀಡುವ  ಮಂಗಳ ,  ತರ್ಕ ಮಾನಸಿಕ ಆಟಕ್ಕಾಗಿ ಬುಧ, ಮತ್ತು  ಖ್ಯಾತಿಯನ್ನು ನೀಡುವ ರವಿ ಗ್ರಹಗಳ ಬಲದ ಆಧಾರದ ಮೇಲೆ ಕ್ರೀಡಾಪಟುವಿನ ಯಶಸ್ಸು, ಶಕ್ತಿ ಮತ್ತು ವಿಜಯವನ್ನು 3, 5 ಮತ್ತು 6ನೇ ಮನೆಗಳ ಮೂಲಕ ವಿಶ್ಲೇಷಿಸಬೇಕಾಗುತ್ತದೆ. ದೈಹಿಕ ಬಲಕ್ಕೆ ಮಂಗಳ, ಮಾನಸಿಕ ಸ್ಥಿರತೆಗಾಗಿ ಚಂದ್ರ ಉತ್ತಮನಾಗಿರಲೇ ಬೇಕು ,  ಮಾನಸಿಕ ಚುರುಕುತನಕ್ಕೆ ಬುಧ ಮತ್ತು ಗೆಲುವಿಗೆ 6ನೇ ಮನೆ ಪ್ರಮುಖವಾಗಿದೆ.

ಕ್ರೀಡೆಯಲ್ಲಿ ಜ್ಯೋತಿಷ್ಯದ ಪ್ರಮುಖ ಅಂಶಗಳು:

     ನಾವು ಇದುವರೆವಿಗೂ  ತಿಳಿದುಕೊಂಡ ಹಾಗೇ 
         ವೈದಿಕ ಜ್ಯೋತಿಷ್ಯದಲ್ಲಿ, ಮಂಗಳ ಕ್ರೀಡೆ, ದೈಹಿಕ ಚಟುವಟಿಕೆ ಮತ್ತು ಸ್ಪರ್ಧಾತ್ಮಕ ಶಕ್ತಿಗೆ ಸಂಬಂಧಿಸಿದ ಪ್ರಾಥಮಿಕ ಗ್ರಹವಾಗಿದೆ. ದೈಹಿಕ ಶಕ್ತಿ, ಧೈರ್ಯ, ಆಕ್ರಮಣಶೀಲತೆ, ಸಹಿಷ್ಣುತೆ, ತ್ವರಿತ ಪ್ರತಿವರ್ತನ (Action and reaction) ಮತ್ತು ಸ್ಪರ್ಧಾತ್ಮಕ ಚಾಲನೆಯನ್ನು ಕುಜಗ್ರಹ ನಿಯಂತ್ರಿಸುತ್ತದೇ.

      ಬಲವಾದ, ಉತ್ತಮ ಸ್ಥಾನದಲ್ಲಿರುವ ಮಂಗಳ ತನ್ನ ಸ್ವಕ್ಷೇತ್ರ, ಉಚ್ಚಕ್ಷೇತ್ರ, ಮಿತ್ರಕ್ಷೇತ್ರ ದಲ್ಲಿದ್ದರೆ, ಉನ್ನತಿ,  ಅಥ್ಲೆಟಿಕ್ ಸಾಮರ್ಥ್ಯ, ಸಂಪರ್ಕ ಅಥವಾ ಹೆಚ್ಚಿನ  ಕ್ರೀಡೆಗಳಲ್ಲಿ ಹೆಚ್ಚಿನ ಯಶಸ್ಸು,  ನಾಯಕತ್ವ ಗುಣ ಮತ್ತು ತ್ವರಿತ ಪ್ರತಿಕ್ರಿಯೆ ಕೌಶಲ್ಯಗಳನ್ನು  ಬೆಂಬಲಿಸುತ್ತಾನೆ.
 
   ಉತ್ತಮ  ಸ್ಥಾನದಲ್ಲಿರುವ ಮಂಗಳನು ​​ ಲಗ್ನದ ಕಡೆಗೆ ದೃಷ್ಟಿ ನೆಟ್ಟರೆ ಅದು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ತೃತೀಯ ಸ್ಥಾನದಲ್ಲಿರುವ ಮಂಗಳನು ​​ಧೈರ್ಯ ಮತ್ತು ಸ್ಪರ್ಧೆಯ ಕಡೆಗೆ ಗಮನ ಹರಿಸುತ್ತಾನೆ. . ಆರನೇ ಅಧಿಪತಿ ಶತ್ರುಗಳ ಬಗ್ಗೆ  ತಿಳಿಸುತ್ತಾದ್ದರಿಂದ, 6 ರ ಅಧಿಪತಿ   ಉತ್ತಮ ಸ್ಥಾನದಲ್ಲಿದ್ದರೆ  ಎದುರಾಳಿಗಳನ್ನು ಸೋಲಿಸಬಹುದು. ಹತ್ತನೇ ಭಾವ   ಕರ್ಮಸ್ಥಾನವಾಗಿದ್ದು, 10 ರ ಅಧಿಪತಿ ಬಲವಾಗಿದ್ದು, ಕುಜ ಕೂಡ 10ರಲ್ಲಿದ್ದು ಅಥವಾ ಉತ್ತಮ ಸ್ಥಾನದಲ್ಲಿದ್ದರೆ ಕ್ರೀಡಾಪಟುಗಳು ತಮ್ಮ ಕ್ರೀಡೆಯನ್ನೇ   ವೃತ್ತಿಯಾಗಿ ತೆಗೆದುಕೊಳ್ಳುತ್ತಾರೆ. ಲಗ್ನ, 3, 5, 6, 10 ರ ಸ್ಥಾನಾಧಿಪತಿಗಳು, ಕ್ರೀಡಾ ಜ್ಯೋತಿಷ್ಯದಲ್ಲಿ  ಶುಭಗ್ರಹಗಳಾದ ಮಂಗಳ ಮತ್ತು ಗುರುಗಳಿಂದ ಉತ್ತಮ ಸಂಪರ್ಕ ಹೊಂದಿರಬೇಕು ಮತ್ತು ದೃಷ್ಟಿ ಹೊಂದಿರಬೇಕು, ಆಗ ಜಾತಕರು ಉತ್ತಮ ಕ್ರೀಡಾಪಟು  ಆಗ್ತಾರೆ.

        ಬಾಧಿತ ಮಂಗಳನ ದುರ್ಬಲ  ಸ್ಥಾನದಿಂದ  ಗಾಯಗಳು, ಹಠಾತ್ ಪ್ರವೃತ್ತಿ ಅಥವಾ ಅಸಮಂಜಸ ನಡವಳಿಕೆ, ಮತ್ತು ಕ್ಷೀಣ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ.

        ಕ್ರೀಡಾ ಜ್ಯೋತಿಷ್ಯದಲ್ಲಿ  ಬಲಯುತ ಕುಜನ ಜೊತೆಗೆ ಉಳಿದ ಗ್ರಹಗಳು ಯಾವರೀತಿ  ಸಹಾಯಕರು ಎಂಬುದನ್ನು ನೋಡೋಣ...

ಕ್ರೀಡೆ ಮತ್ತು ಗ್ರಹಗಳು           

ಸೂರ್ಯ: ಚೈತನ್ಯ, ಸಹಿಷ್ಣುತೆ, ನಾಯಕತ್ವ, ಇಚ್ಛಾಶಕ್ತಿ, ಅಧಿಕಾರ ಪಾತ್ರಗಳು (ನಾಯಕತ್ವ); ಕ್ರೀಡೆಯಲ್ಲಿ ಸಹಿಷ್ಣುತೆ ಮತ್ತು ಕಾರ್ಯಕ್ಷಮತೆ ಅತ್ಯಂತ ಮುಖ್ಯವಾದದ್ದು. ಜಾತಕದಲ್ಲಿ ಸೂರ್ಯ ಬಲವಾಗಿದ್ದರೆ, ಅಥವಾ ಕ್ರೀಡಾ ಭಾವಗಳಲ್ಲಿದ್ದರೆ,  ನಾಯಕತ್ವ ವಹಿಸಿ ಗುಂಪನ್ನು ಉತ್ತಮವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಕೊಡುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಂಡು ಸರಿಯಾದ ಮಾರ್ಗದರ್ಶನ ನೀಡುವ ಶಕ್ತಿಯನ್ನು ಸೂರ್ಯ ಕೊಡುತ್ತಾನೆ.

ಚಂದ್ರ: ಮಾನಸಿಕ ಸ್ಥಿರತೆ, ಭಾವನಾತ್ಮಕ ನಿಯಂತ್ರಣ, ಒತ್ತಡದಲ್ಲಿ ಗಮನ, ಆಟದಲ್ಲಿ ಏರಿಳಿತಗಳು ಇವನ್ನು ಸೂಚಿಸುತ್ತೆ. ಸ್ಥಿರ ಕಾರ್ಯಕ್ಷಮತೆಗೆ ನಿರ್ಣಾಯಕ ಗ್ರಹ ಚಂದ್ರನೇ ಆಗಿರ್ತಾನೆ . ಚಂದ್ರನು  ಮನಸ್ಸು ಮತ್ತು ದೇಹದ ಸಂಬಂಧವನ್ನು ಸೂಚಿಸುವುದರಿಂದ ಚಂದ್ರನೂ ಸಹ ಉತ್ತಮ ಸ್ಥಾನದಲ್ಲಿರಬೇಕು. ಬಲಯುತವಾದ ಚಂದ್ರ ಕ್ರೀಡಾಭಾವಗಳಲ್ಲಿದ್ದಾಗ  ಒತ್ತಡ ರಹಿತವಾಗಿ, ಸ್ಥಿರವಾಗಿ ಆಟವಾಡುವ ಕ್ಷಮತೆಯನ್ನು ಚಂದ್ರ ಕೊಡುತ್ತಾನೆ.

 ಗುರು: ಶಿಸ್ತು, ತರಬೇತಿ, ನೈತಿಕ ನಡವಳಿಕೆ, ದೀರ್ಘಕಾಲೀನ ತರಬೇತಿ, ತಂತ್ರದ ಅಗತ್ಯವಿರುವ ಕ್ರೀಡೆಗಳು, ನೈತಿಕ ಆಟಕ್ಕೆ ಕಾರಕನಾಗುತ್ತಾನೆ. ಶುಭನಾದ ಗುರುವು ಕ್ರೀಡಾಭಾವಗಳಲ್ಲಿದ್ದರೆ, ನ್ಯಾಯಯುತವಾಗಿ,  ಶಿಸ್ತುಬದ್ದವಾಗಿ, ತಂತ್ರಗಾರಿಕೆ ಹೆಣಿದು ಆಟದಲ್ಲಿ ಯಶಸ್ವಿಯಾಗುವ ಯೋಗವನ್ನು ಕೊಡುತ್ತದೆ.

ಬುಧ: ಸಮನ್ವಯ, ಚುರುಕುತನ, ತಂತ್ರ, ಯುದ್ಧತಂತ್ರದಲ್ಲಿ ಬುದ್ಧಿವಂತಿಕೆ, ತ್ವರಿತ ನಿರ್ಧಾರ ತೆಗೆದುಕೊಳ್ಳುವುದು, ಸಮನ್ವಯ ಮತ್ತು ಸಂವಹನ ಅಗತ್ಯವಿರುವ ಆಟಗಳಿಗೆ ಒಲವು ತೋರುತ್ತದೆ. ಚಾಣಾಕ್ಷತನದಿಂದ ಎದುರಾಳಿಗಳನ್ನು ಮಣಿಸುವ ಬುದ್ಧಿವಂತಿಕೆಯನ್ನು, ಸಾಮರ್ಥ್ಯವನ್ನು ನೀಡುತ್ತದೆ.

ಶನಿ: ಶಿಸ್ತು, ಪರಿಶ್ರಮ, ದೀರ್ಘಕಾಲೀನ ಸಹಿಷ್ಣುತೆ, ತರಬೇತಿ ಕಟ್ಟುಪಾಡು, ತಡವಾಗಿ ಬೆಳಕಿಗೆ ಬಂದರೂ ಸ್ಥಿರವಾಗಿ ಉಳಿಯುವ, ಮಿಂಚಿನಂತೆ ಬಂದು ಹೋಗುವ ಬದಲು ಸ್ಥಿರತೆಯನ್ನು ಕಾಪಾಡಿಕೊಳ್ಳುವ ಕ್ರಮಬದ್ಧ ಸುಧಾರಣೆ ಕಡೆಗೆ ಶನಿಯು ಸಹಾಯಕನಾಗುತ್ತಾನೆ.

ರಾಹು/ಕೇತು: ರಾಹು ಅನಿರೀಕ್ಷಿತ ಯಶಸ್ಸು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ನೀಡುತ್ತಾನೆ. ಹಠಾತ್ ಪ್ರಗತಿಗಳು, ರಾಕ್ಷಸೀ ಶಕ್ತಿಗೆ ಕಾರಕನಾದ ರಾಹು ಆಗಾಧ ಅತ್ಯುತ್ತಮ ಶಕ್ತಿಯನ್ನು ಆಟಗಾರರಿಗೆ ನೀಡುತ್ತಾನೆ. ಜಾತಕದಲ್ಲಿ  ನೆಗೆಟಿವ್ ರಾಹು ಇದ್ರೆ ಅಸಾಂಪ್ರದಾಯಿಕ ವಿಧಾನಗಳು, ಅಪಾಯಕಾರಿ ನಡವಳಿಕೆಯನ್ನು  ಕೊಡುತ್ತಾನೆ. (ರಾಹು/ಕೇತು ಪ್ರಭಾವವು ಅನಿರೀಕ್ಷಿತ ಅಥವಾ ತೀವ್ರ ಕ್ರೀಡಾ ವೃತ್ತಿಜೀವನವನ್ನು ಉಂಟುಮಾಡಬಹುದು).

ಯಾವ ಯಾವ ಗ್ರಹಗಳು ಯಾವ ಆಟವನ್ನು ಪ್ರತಿನಿಧಿಸುತ್ತದೆ ಎಂದು ನೋಡುವುದಾದರೆ....

ಸಾಮಾನ್ಯವಾಗಿ  ಯಾವುದೇ ರೀತಿಯ ಹೊರಾಂಗಣ ಕ್ರೀಡೆಗಳಿಗೆ ರವಿ, ಕುಜ ಮತ್ತು ಗುರು ಕಾರಕರಾಗುತ್ತಾರೆ,  ಹೇಗೆಂದರೆ ... ರವಿಯು ಆತ್ಮಕಾರಕ,  ಕುಜ ಹಾಗೂ ಗುರುಗಳು ದೇಹಪುಷ್ಠಿಗೆ ಕಾರಕರಾಗುತ್ತಾರೆ.  ಯಾವುದೇ ಆಟವನ್ನು ಆಡಬೇಕೆಂದರೂ ದೇಹಪುಷ್ಟಿಯೂ ಇರಬೇಕು ಆರೋಗ್ಯವೂ ಇರಬೇಕು.  ಜನ್ಮ ಜಾತಕದಲ್ಲಿ ರವಿ, ಕುಜರ ನಂತರ ಗುರು ಬಲಿಷ್ಠರಾಗಿದ್ದರೆ,  ಆ ಜಾತಕರು ಕ್ರಿಕೆಟ್ ಆಟದಲ್ಲಿ ಉನ್ನತಿಯನ್ನು ಪಡೆಯುವುದಕ್ಕೆ ಅವಕಾಶ ಇರುತ್ತದೆ.  

        ಯಾವುದೇ ರೀತಿಯ  ಒಳಾಂಗಣ  ಕ್ರೀಡೆಗಳಿಗೆ  ಸಾಮಾನ್ಯವಾಗಿ ಬುಧ ಮತ್ತು ಗುರು ಗ್ರಹರು ಕಾರಕರಾಗುತ್ತಾರೆ.  ಈ ಗ್ರಹಗಳ ನಂತರ ರವಿ, ಕುಜರು ಸ್ವಲ್ಪ ಮಟ್ಟಿಗೆ ಕಾರಕರಾಗುತ್ತಾರೆ.  ಜನಪ್ರಿಯ  ಒಳಾಂಗಣ  ಆಟವಾದ ಚದುರಂಗ ( ಚೆಸ್)  ಆಟವನ್ನು ತೆಗೆದುಕೊಂಡಾಗ...  ಈ ಆಟವನ್ನು ಆಡಬೇಕಾದ್ರೆ  ಅತೀ ಚರುಕಾದ ಬುದ್ಧಿವಂತಿಕೆ ಅಗತ್ಯ,  ಹಾಗಾಗಿ... ವಿದ್ಯಾಕಾರಕ, ಬುದ್ಧಿಕಾರಕ,  ಜ್ಞಾನಕಾರಕ ಗ್ರಹರಾದ ಬುಧ, ಗುರುಗಳು ಜಾತಕದಲ್ಲಿ ಬಲಿಷ್ಠರಾಗಬೇಕು.  ಯಾರ ಜಾತಕದಲ್ಲಿ  ಬುಧ, ಗುರುಗಳು ಬಲಿಷ್ಟರಾಗಿರುತ್ತಾರೋ  ಆ ಜಾತಕರು ಒಳಾಂಗಣ ಕ್ರೀಡೆಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ.  ಅದೂ ಅಲ್ಲದೆ ಚದುರಂಗವನ್ನು " ಬುದ್ಧಿವಂತರ ಆಟ " ಎಂದೇ ಕರೆಯುತ್ತಾರೆ, ಇದಲ್ಲದೆ ಕೇರಂ ಆಗಲೀ ಇಸ್ಪೀಟ್ ಆಟವನ್ನಾಗಲಿ ಆಡಲು ಬುದ್ಧಿವಂತಿಕೆ ಬೇಕು.

       ಸಾಹಸ ಕ್ರೀಡೆಗಳನ್ನು  ಆಡಬೇಕೆಂದರೂ ಸಹ ರವಿ ಕುಜರು ಬಲಿಷ್ಠರಾಗಿರಬೇಕು.  ಸಾಹಸದ ಆಟಗಳೆಂದರೆ   ಕುಸ್ತಿ, ಕರಾಟೆ, ಮೋಟಾರ್ ರೇಸ್, ಪರ್ವತಾರೋಹಣ, ಇತ್ಯಾದಿಗಳು.  ರವಿ, ಕುಜರೊಟ್ಟಿಗೆ ಗುರುವೂ ಬಲಿಷ್ಠರಾಗಿದ್ದರೆ ಇನ್ನೂ ಉತ್ತಮ.

         ಯಾವುದೇ ರೀತಿಯ ಜಲಕ್ರೀಡೆಗಳಿಗೆ  ಚಂದ್ರ, ಶುಕ್ರರು ಪ್ರಮುಖ ಕಾರಕರಾಗುತ್ತಾರೆ.  ಚಂದ್ರ ಶುಕ್ರರು ಜಲಗ್ರಹಗಳಾದ್ದರಿಂದ,  ಯಾರ ಜಾತಕದಲ್ಲಿ  ಈ ಗ್ರಹಗಳು ಬಲಿಷ್ಟರಾಗಿರುತ್ತಾರೋ ಆ ಜಾತಕರು ಜಲಪ್ರಿಯರಾಗಿರುತ್ತಾರೆ.  ಚಂದ್ರ, ಶುಕ್ರರು ಜಾತಕದಲ್ಲಿ  ಶುಭ ಸ್ಥಾನದಲ್ಲಿ.  ಒಟ್ಟಿಗಿದ್ದರೆ   ಅಂತಹ ವ್ಯಕ್ತಿಗಳು ಸಾಮಾನ್ಯ ವಾಗಿ ಯಾವಾಗ್ಲೂ ನೀರಿನ ಸಮೀಪವನ್ನು  ಬಯಸುತ್ತಾರೆ. ಶುಕ್ರ ಚಂದ್ರರೊಟ್ಟಿಗೆ , ಬುಧ ಸೂರ್ಯ, ಮಂಗಳ ಗ್ರಹಗಳ ಬೆಂಬಲ ಕೂಡ ಸ್ವಿಮ್ಮಿಂಗ್ ಮುಂತಾದ ಜಲಕ್ರೀಡೆಗಳಲ್ಲಿ ಯಶಸ್ವೀಯಾಗಲು ಬೇಕೇಬೇಕು.

   ದೈಹಿಕ ಕ್ರೀಡೆಗಳಾದ ಫುಟ್ಬಾಲ್, ಬಾಕ್ಸಿಂಗ್,  ಹಾಕಿ ಮುಂತಾದ ಕ್ರೀಡೆಗಳಿಗೆ ಚಂದ್ರ, ಮಂಗಳ ಮತ್ತು ಸೂರ್ಯ ಜವಾಬ್ದಾರರಾಗಿರುತ್ತಾರೆ. ಜೊತೆಗೆ ರಾಹುವಿನ ಬಲವೂ ಕಾರಣವಾಗುತ್ತದೆ.

     ಮಾನಸಿಕ ಆಟಗಳಾದ ಚೆಸ್, ಬಿಲಿಯರ್ಡ್ಸ್, ಕ್ಯಾರಮ್ ನಂತಹ ಕ್ರೀಡೆಗಳು ಮುಖ್ಯವಾಗಿ ಬುಧ,  ತರ್ಕಕ್ಕೆ ಕೇತು  ಹಾಗೂ ಚಂದ್ರ,  ಗುರು ಗ್ರಹಗಳನ್ನು ಅವಲಂಬಿಸಿವೆ,

     ರೇಸಿಂಗ್‌ಗೆ ಸಂಬಂಧಿಸಿದ ಕ್ರೀಡೆಗಳು ಶನಿ, ಮಂಗಳ, ಸೂರ್ಯ, ಚಂದ್ರರನ್ನು ಅವಲಂಬಿಸಿವೆ.

   ಇಸ್ಪೀಟ್, ಕುದುರೆ ರೇಸು, ಮಟ್ಕಾ ಇತ್ಯಾದಿ... ಆಟಗಳೆಲ್ಲವೂ ಜೂಜಿಗೆ ಸಂಬಂಧಪಟ್ಟದ್ದು.  ಯಾರ ಜಾತಕದಲ್ಲಿ ಶನಿಯು ಬಲಿಷ್ಟ ನಾಗಿರುತ್ತಾನೋ,  ಆ ಜಾತಕರು ಜೂಜಿನಲ್ಲಿ ಆಸಕ್ತಿ ಹೊಂದಿದ್ದು, ಜೊತೆಗೆ ಅದೃಷ್ಟವೂ ಚನ್ನಾಗಿದ್ದರೆ  ಅದರಲ್ಲೇ ಅಧಿಕ ಹಣವನ್ನೂ ಗಳಿಸುತ್ತಾರೆ.. 

ಯಾವ ಯಾವ ರಾಶಿಗಳು ಯಾವಯಾವ ಕ್ರೀಡೆಗಳನ್ನು ಪ್ರಚೋದಿಸುತ್ತವೆ ಎಂಬುದನ್ನು ತಿಳಿಯೋಣ.

      ರಾಶಿಗಳು  -- ಕ್ರೀಡೆಗಳು      

ಮೇಷ ರಾಶಿ:--     ಮೇಷ ರಾಶಿಯವರಲ್ಲಿ ಕ್ರೀಡಾ ಸ್ಫೂರ್ತಿ ಉತ್ತಮವಾಗಿರುತ್ತದೆ. ಇವರಲ್ಲಿ ಸ್ಫರ್ಧಾತ್ಮಕ ಮನೋಭಾವ ಹುಟ್ಟಿನಿಂದಲೇ ಬಂದಿರುತ್ತದೆ. ಅದು ಅವರನ್ನು ಅಸಾಧಾರಣ ಕ್ರೀಡಾಪಟುಗಳನ್ನಾಗಿ ಮಾಡುತ್ತದೆ. ಇವರು ಬಲವಾದ ಇಚ್ಛಾಶಕ್ತಿಯುಳ್ಳವರು, ಅಥ್ಲೆಟಿಕ್, ಉತ್ಸಾಹಭರಿತ ಮತ್ತು ಸ್ಪರ್ಧಾತ್ಮಕರು. ಅವರು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ನಾಯಕರಾಗಿದ್ದಾರೆ.  ಅವರ ಅಪರಿಮಿತ ಶಕ್ತಿ ಮತ್ತು ನಿರ್ಣಯವು ಟ್ರ್ಯಾಕ್ ಮತ್ತು ಫೀಲ್ಡ್‌ನಿಂದ ಸಮರ ಕಲೆಗಳವರೆಗೆ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲು ಅವರಿಗೆ ಅನುವು ಮಾಡಿಕೊಡುತ್ತದೆ. ಖಂಡಿತ ಮೇಷ ರಾಶಿಯವರು ಕ್ರೀಡಾ ಕ್ಷೇತ್ರದಲ್ಲಿ ಒಂದಲ್ಲ ಒಂದು ಸಾಧನೆ ಮಾಡಿಯೇ ತೀರುತ್ತಾರೆ. ಹಾಗೂ ಇತರರನ್ನು ಕೂಡ ಪ್ರೇರೇಪಿಸುವ ಗುಣ ಇವರಲ್ಲಿದೆ  ಸಮರ ಕಲೆಗಳು, ಫುಟ್ಬಾಲ್, ಕಾರ್ಟಿಂಗ್ ಕಿಕ್ ಬಾಕ್ಸಿಂಗ್, ಕರಾಟೆ, ಕಾರ್ ರೇಸಿಂಗ್ ಮತ್ತು ಸೈಕ್ಲಿಂಗ್   ಈ ರಾಶಿಯವರ ನೆಚ್ಚಿನ ಆಟಗಳಾಗಿರುತ್ತವೆ.

ವೃಷಭ ರಾಶಿ: ವ್ಯಾಯಾಮವನ್ನು ಮಾಡಲು ಇಷ್ಟಪಡುತ್ತಾರೆ. ನಿಯಮಿತ ದೈಹಿಕ ಚಟುವಟಿಕೆಯೊಂದಿಗೆ ಜೊತೆಗೆ ಇಂದ್ರಿಯಗಳ ನಿಯಂತ್ರಣದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ  ನೃತ್ಯ,  ಜಿಮ್ನಾಸ್ಟಿಕ್ಸ್, ದೇಹದಾರ್ಢ್ಯ  ಇವರಿಗೆ ಇಷ್ಟವಾಗುತ್ತೆ.

ಮಿಥುನ:  ಬ್ಯಾಸ್ಕೆಟ್‌ಬಾಲ್, ಟೆನ್ನಿಸ್ ಮತ್ತು ವಾಲಿಬಾಲ್‌ನಂತಹ  ತಂಡದ ಕ್ರೀಡೆಗಳು, ಓಟ, ಅಥ್ಲೆಟಿಕ್ಸ್, ಓರಿಯಂಟರಿಂಗ್.
 ಆಡಲು ಇಷ್ಟ ಆಗುತ್ತೆ ಮಿಥುನ ರಾಶಿಯವರಿಗೆ.

ಕಟಕ: ಕ್ರೀಡೆ ಅಥವಾ ಫಿಟ್‌ನೆಸ್ ದಿನಚರಿಗಳಿಗೆ ಅಂಟಿಕೊಳ್ಳಲು ಇವರು ಹೆಚ್ಚು ಒಲವು ತೋರುತ್ತಾರೆ. ಜಲ ಕ್ರೀಡೆಗಳಾದ   ಈಜು, ಡೈವಿಂಗ್,  ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ

ಸಿಂಹ ರಾಶಿ:  ಸಿಂಹ ರಾಶಿಯವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಈ ರಾಶಿಯವರು ಮನರಂಜನೆಯನ್ನು ಇಷ್ಟಪಡುತ್ತಾರೆ.ಈ ರಾಶಿಯವರಲ್ಲಿರುವ ಆತ್ಮವಿಶ್ವಾಸ ಮತ್ತು ಕೌಶಲ್ಯವು ಜಿಮ್ನಾಸ್ಟಿಕ್ಸ್, ಸ್ಕೇಟಿಂಗ್ ಫುಟ್ಬಾಲ್, ದೇಹದಾರ್ಢ್ಯ  ಮತ್ತು ತಂಡ ಆಧಾರಿತ ಸ್ಪರ್ಧೆಗಳಂತಹ ಕ್ರೀಡೆಗಳಲ್ಲಿ ಅವರನ್ನು ಆಕರ್ಷಿಸುವಂತೆ ಮಾಡುತ್ತದೆ. ಇವರು ಒಂದಲ್ಲ ಒಂದು ದಿನ ಕ್ರೀಡಾ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿ ದೇಶ ಹೆಮ್ಮೆ ಪಡುವಂತೆ ಮಾಡುತ್ತಾರೆ. ಆ ಶಕ್ತಿ ಇವರಲ್ಲಿರುತ್ತದೆ.

ಕನ್ಯಾರಾಶಿ: ಇವರು ಹೆಚ್ಚು ದೈಹಿಕವಾಗಿ ಸಮರ್ಥರಾಗಿದ್ದಾರೆ. ಇವರು ಫಿಟ್ನೆಸ್​ಗಾಗಿ ಉತ್ಸಾಹವನ್ನು ಹೊಂದಿರುತ್ತಾರೆ   ಏರೋಬಿಕ್ಸ್, ಸೈಕ್ಲಿಂಗ್, ರೋಯಿಂಗ್‌ಗೆ ಸೂಕ್ತವಾಗಿದೆ. ರನ್ನಿಂಗ್​ ಮತ್ತು ಕುದುರೆ ಸವಾರಿ ಇವರ ಎರಡು ನೆಚ್ಚಿನ ಕ್ರೀಡೆಗಳಾಗಿವೆ

ತುಲಾ: ಸಾಮಾನ್ಯವಾಗಿ, ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾರೆ. ಟೆನ್ನಿಸ್, ಸ್ಕ್ವಾಷ್, ಬಾಸ್ಕೆಟ್‌ಬಾಲ್, ಗಾಲ್ಫ್, ವಾಲಿಬಾಲ್, ನೃತ್ಯ, ಜೋಡಿ ಕ್ರೀಡೆಗಳು, ಜಿಮ್ನಾಸ್ಟಿಕ್ಸ್, ಸಿಂಕ್ರೊನೈಸ್ ಮಾಡಿದ ಈಜು. ಮತ್ತು ರೋಯಿಂಗ್‌ನಂತಹ ಚಟುವಟಿಕೆಗಳಿಗೆ ಈ ರಾಶಿಯವರಿಗೆ ಆಸಕ್ತಿ ಮೂಡಿಸುತ್ತದೆ.

ವೃಶ್ಚಿಕ ರಾಶಿ: ಈ ರಾಶಿಯವರು ಅಪಾಯಕಾರಿ ಕ್ರೀಡೆಗಳಲ್ಲಿ ತೊಡಗುತ್ತಾರೆ. ಜಿಮ್ನಾಸ್ಟಿಕ್ಸ್   ಸಮರ ಕಲೆಗಳು ಮತ್ತು ಪರ್ವತಾರೋಹಣ, ಸ್ಕೇಯಿಂಗ್​ ಇವರಿಗೆ ಹೆಚ್ಚು ಆಕರ್ಷಣೆಯಾಗುತ್ತದೆ

ಧನು ರಾಶಿ:  ಧನು ರಾಶಿಯವರು ಸಾಹಸಿ ಮನೋಭಾವದವರಾಗಿರುತ್ತಾರೆ. ಇವರು ದೈಹಿಕ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇವರಲ್ಲಿರುವ ಅಪರಿಮಿತ ಉತ್ಸಾಹವು ಇವರನ್ನು ರಾಕ್ ಕ್ಲೈಂಬಿಂಗ್, ಕುದುರೆ  ಸವಾರಿ   ಬ್ಯಾಸ್ಕೆಟ್‌ಬಾಲ್, ಶೂಟಿಂಗ್, ಸೈಕ್ಲಿಂಗ್, ಕ್ರಿಕೆಟ್ ಜೊತೆಗೆ ಉಳಿದ  ಹೊರಾಂಗಣ  ಕ್ರೀಡೆಗಳಲ್ಲಿ ಉತ್ಕೃಷ್ಟ ಸಾಧನೆಗೆ ಕಾರಣವಾಗುತ್ತದೆ. ಧನು ರಾಶಿ ಕ್ರೀಡಾಪಟುಗಳು ಸಾಹಸದ ಮನೋಭಾವವನ್ನು ಹೊಂದಿರುತ್ತಾರೆ. ನಿರ್ಭಯವಾಗಿ ಇವರು ಸವಾಲುಗಳನ್ನು ಸ್ವೀಕರಿಸಲು ಸಿದ್ಧರಿರುತ್ತಾರೆ. 

ಮಕರ ರಾಶಿ:  ಮಕರ ರಾಶಿಯವರು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ಹೊಂದಿರುತ್ತಾರೆ. ಹೀಗಾಗಿ ಇವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತದೆ. ಇವರಲ್ಲಿರುವ ಗಮನ ಮತ್ತು ಪರಿಶ್ರಮವು ಓಟ, ಪರ್ವತಾರೋಹಣ, ಸೈಕ್ಲಿಂಗ್ ಮತ್ತು ಈಜು ಮುಂತಾದ ಸಹಿಷ್ಣುತೆಯ ಕ್ರೀಡೆಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಮಕರ ರಾಶಿಯವರು ಕ್ರೀಡೆಯಲ್ಲಿ ಸತತ ಪ್ರಯತ್ನದ ಮೂಲಕ ಶ್ರೇಷ್ಠತೆಯನ್ನು ಸಾಧಿಸಲು ಪ್ರಯತ್ನಿಸುತ್ತಾರೆ.

ಕುಂಭ: ಮಿದುಳನ್ನು ಚುರುಕುಗೊಳಿಸುವ ಆಟಗಳತ್ತ ಇವರು ಆಸಕ್ತಿ ಹೊಂದಿರುತ್ತಾರೆ. ಕೇರಂ, ಚೆಸ್​, ಬಿಲಿಯರ್ಡ್ಸ್​​ ನಂತಹ ಆಟ, ಎಲ್ಲಾ ತಂಡದ ಕ್ರೀಡೆಗಳು  ಇವರಿಗೆ ಗಮನ ಸೆಳೆಯುತ್ತದೆ

ಮೀನ ರಾಶಿ:  ಮೀನ  ರಾಶಿಯವರು ನೃತ್ಯ, ಈಜು ಮತ್ತು ಸ್ಕೇಟಿಂಗ್  ಯೋಗ, ಪೈಲೇಟ್ಸ್, ಸರ್ಫಿಂಗ್, ಬಯಾಥ್ಲಾನ್ ನಂತಹ ಚಟುವಟಿಕೆಳಲ್ಲಿ ಹೆಸರು ಮಾಡುತ್ತಾರೆ. ಮೀನ ರಾಶಿಯವರು ತಮ್ಮಲ್ಲಿರುವ ಕಲೆಯಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಸತತ ಪ್ರಯತ್ನದ ಜೊತೆಗೆ ಇವರೊಳಗಿರುವ ಕಿಚ್ಚು ಕ್ರೀಡಾ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡೋದಕ್ಕೆ ಕಾರಣವಾಗುತ್ತದೆ.

       ಮೇಷ, ಸಿಂಹ, ಧನಸ್ಸು ರಾಶಿ ಅಥವಾ ಲಗ್ನದವರು ಸಾಹಸ ಕಾರ್ಯ ಪ್ರವೃತ್ತಿಯುಳ್ಳವರಾಗಿರುತ್ತಾರೆ,  ಏಕೆಂದರೆ ಈ ರಾಶಿಗಳು ಅಗ್ನಿತತ್ವ ಮತ್ತು  ಕ್ಷತ್ರಿಯ ರಾಶಿಗಳು. Speed and action ಗೆ ಈ ರಾಶಿಗಳು  ಸಹಾಯಮಾಡುತ್ತವೆ.

       ವೃಷಭ, ಕನ್ಯಾ, ಮಕರ ರಾಶಿಗಳು ಭೂತತ್ವ ರಾಶಿಯಾಗಿದ್ದು  ತಂತ್ರಗಾರಿಕೆ ಮೆರೆಯುವಲ್ಲಿ  ಸಹಾಯ ಮಾಡುತ್ತದೆ.

       ವೃಷಭ, ತುಲಾ ಮತ್ತು ಕಟಕ ರಾಶಿಗಳು ಜಲಕ್ರೀಡೆಯನ್ನು ಪ್ರಚೋದಿಸುತ್ತವೆ.. ಕಾರಣ , ಈ ರಾಶಿಗಳ ಅಧಿಪತಿಗಳು ಜಲಗ್ರಹಗಳು.

       ಕಟಕ, ವೃಶ್ಚಿಕ, ಮೀನ ಈ ರಾಶಿಗಳು ಜಲ ರಾಶಿಗಳಾದ್ದರಿಂದ , ಜಲಕ್ರೀಡೆಗಳನ್ನು ಪ್ರಚೋದಿಸುತ್ತವೆ.  ಮರುಜೋಡಣೆ ( resilliance), ಚೇತರಿಕೆಗೆ ಕಾರಕ ರಾಶಿಗಳು.

       ಮಿಥುನ , ತುಲಾ ಕುಂಭ ಈ ರಾಶಿಗಳು ವಾಯುತತ್ವವಾದ್ದರಿಂದ ಈ ರಾಶಿಯವರು ವಾಯುವಿಹಾರವನ್ನು ಬಯಸುತ್ತಾರೆ. ಹಾಗೆಯೇ ಚುರುಕುತನಕ್ಕೆ ಈ ರಾಶಿಗಳ ಜಾತಕರು  ಹೆಸರುವಾಸಿಯಾಗುತ್ತಾರೆ.

       ಮಿಥುನ ಮತ್ತು ಕನ್ಯಾ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ವ್ಯವಹಾರದಲ್ಲಿ ಮತ್ತು ಮಾತಿನಲ್ಲಿ ನಿಪುಣರಾಗಿರುತ್ತಾರೆ. 
      
      ಕ್ರೀಡಾಪಟುಗಳು ಸಾಮಾನ್ಯವಾಗಿ  ಅಗ್ನಿತತ್ವ ರಾಶಿಗಳಾದ - ಮೇಷ, ಸಿಂಹ ಅಥವಾ ಧನು ರಾಶಿಯ ಲಗ್ನ ಅಥವಾ ರಾಶಿ ಉಳ್ಳವರಾಗಿರ್ತಾರೆ..  ಅಗ್ನಿ ಅಂಶವು ಅವರಿಗೆ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ನೀಡುತ್ತದೆ ಮತ್ತು ಸ್ಪರ್ಧೆಯ ಮನೋಭಾವ ಮತ್ತು ಗೆಲ್ಲುವ ಬಯಕೆಯನ್ನು ಹುಟ್ಟುಹಾಕುತ್ತದೆ ಎಂಬ ಅಂಶ ಇದಕ್ಕೆ ಕಾರಣ. ಬಹಳ ಹಠಮಾರಿ ಮತ್ತು ಕಠಿಣ ಪರಿಶ್ರಮಿಯಾಗಿರ್ತಾರೆ.. ಬಲವಾದ ಲಗ್ನೇಶ ಮುಖ್ಯವಾಗಿದೆ, ಏಕೆಂದರೆ ಅದು ವ್ಯಕ್ತಿಯ ಆರೋಗ್ಯದ ಸ್ಥಿತಿ, ಅವರ ದೈಹಿಕ ಸಂಪನ್ಮೂಲ ಮತ್ತು ಚೇತರಿಸಿಕೊಳ್ಳುವ ಸಾಮರ್ಥ್ಯಕ್ಕೆ ಕಾರಣವಾಗಿದೆ.

    ಕ್ರೀಡಾಪಟುವಿಗೆ ಮಂಗಳ ಮತ್ತು ಸೂರ್ಯ ಬಹಳ ಮುಖ್ಯ. ವ್ಯಕ್ತಿಯ ಜೀವ ಶಕ್ತಿ ಮತ್ತು ಆತ್ಮಶಕ್ತಿ, ಹಾಗೂ ವ್ಯಕ್ತಿತ್ವ, ಒಬ್ಬ ವ್ಯಕ್ತಿಯು ಹೊರಗಿನ ಪ್ರಪಂಚದಲ್ಲಿ ಹೇಗೆ ಪ್ರಕಟಗೊಳ್ಳುತ್ತಾನೆ ಮತ್ತು ಅದರಲ್ಲಿ ಅವನು ಯಾವ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾನೆ ಎಂಬುದಕ್ಕೆ ಸೂರ್ಯನು ಕಾರಣ. ಕುಜನು ಸಹಿಷ್ಣುತೆ, ದೃಢನಿಶ್ಚಯ ಮತ್ತು ಗೆಲ್ಲುವ ಇಚ್ಛೆ. ಈ ಎಲ್ಲಾ ಗುಣಗಳು ಕ್ರೀಡಾ ಸಾಧನೆಗಳಿಗೆ ಮುಖ್ಯವಾಗಿವೆ ಮತ್ತು ಈ ಗ್ರಹಗಳು ಬಲಶಾಲಿಯಾಗಿದ್ದರೆ ಮತ್ತು ಕೇಂದ್ರಗಳಲ್ಲಿದ್ದರೆ ಮತ್ತು ಅವುಗಳಲ್ಲಿ ಒಂದು ಆತ್ಮ ಕಾರಕವಾಗಿದ್ದರೆ ಕ್ರೀಡಾ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

             ಮುಂದುವರೆಯುತ್ತದೆ.......

✍️ ಡಾ: B. N. ಶೈಲಜಾ ರಮೇಶ್ 

ಕ್ರೀಡೆ ಮತ್ತು ಜ್ಯೋತಿಷ್ಯದ ಬಗ್ಗೆ  ಇನ್ನೂ ಹೆಚ್ಚಿನ ವಿಚಾರಗಳು ಮುಂದಿನ ಲೇಖನದಲ್ಲಿ....

        ನಿರೀಕ್ಷಿಸಿ.....

Thursday, 26 February 2026

ಕ್ರೀಡೆ ಮತ್ತು ಜ್ಯೋತಿಷ್ಯ

ಹರಿಃ ಓಂ
        ಓಂ ಶ್ರೀ ಮಹಾಗಣಪತಯೇ ನಮಃ
              ಓಂ ಶ್ರೀ ಗುರುಭ್ಯೋನಮಃ

ಕ್ರೀಡೆ ಮತ್ತು ಜ್ಯೋತಿಷ್ಯ

(Picture source: internet /social media)

             ಕ್ರೀಡೆ ಮತ್ತು ಜ್ಯೋತಿಷ್ಯಕ್ಕೆ ಸಂಬಂಧವಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.  ಜ್ಯೋತಿಷ್ಯ ಶಾಸ್ತ್ರವು ಒಂದು ಮಹಾ ಸಾಗರವಿದ್ದಂತೆ,  ಅದರಲ್ಲಿ ಅನೇಕ ವಿಷಯಗಳು ಅಡಕವಾಗಿವೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಭಾಗಗಳಿವೆ. ಅದರಲ್ಲಿ ಕ್ರೀಡಾ ಜ್ಯೋತಿಷ್ಯವೂ ಒಂದು.  ಜ್ಯೋತಿಷ್ಯ ಶಾಸ್ತ್ರದ ಸಹಾಯದಿಂದ ಒಬ್ಬ ಮನುಷ್ಯ ಯಾವ ಯಾವ  ಕ್ರೀಡೆಗಳಲ್ಲಿ ಮುಂದೆ ಬರುತ್ತಾನೆ,  ಯಾವ ಯಾವ ಗ್ರಹಗಳು ಯಾವ ಯಾವ ಕ್ರೀಡೆಗಳಿಗೆ ಕಾರಕರಾಗುತ್ತಾರೆ,  ಯಾವ ಯಾವ ರಾಶಿಯವರು ಯಾವ ಯಾವ ಕ್ರೀಡೆಗಳನ್ನ ಬಯಸುತ್ತಾರೆ, ಎನ್ನುವುದನ್ನು ತಿಳಿಯಬಹುದು.

           ಕ್ರೀಡೆಗಳಲ್ಲಿ ನಾನಾ ವಿಭಾಗಗಳಿದ್ದರೂ ಅವುಗಳನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ವಿಭಾಗಿಸಬಹುದು.

     1.  ಹೊರಾಂಗಣ ಕ್ರೀಡೆ
     2.  ಒಳಾಂಗಣ ಕ್ರೀಡೆ

          ಹೊರಾಂಗಣ  ಕ್ರೀಡೆ  ಎಂದರೆ ಮನೆಯಿಂದ ಹೊರಗೆ ಆಡುವ ಆಟಗಳು.
ಉದಾ:-- ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಹಾಕಿ, ಟೆನ್ನಿಸ್, ಬ್ಯಾಸ್ಕೆಟ್ ಬಾಲ್ ಮುಂತಾದವು.

          ಒಳಾಂಗಣ ಕ್ರೀಡೆ ಎಂದರೆ  ಮನೆಯ ಒಳಗೆ ಆಡುವ ಆಟಗಳು.  ಅವುಗಳೆಂದರೆ, ಚೆಸ್, ಕೆರಮ್,  ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್, ಇಸ್ಪೀಟ್  ಮುಂತಾದವು.

          ಇವಲ್ಲದೆ ನಾನಾ ರೀತಿಯ ಜಲಕ್ರೀಡೆಗಳು  ಜನಪ್ರಿಯವಾಗಿವೆ. ಉದಾಹರಣೆಗೆ, ಈಜುವುದು, ವಾಟರ್ಪೋಲೋ, ನೀರಿನಲ್ಲಿ ಚೆಂಡಾಟ ಆಡುವುದು, ಕರಾಟೆ, ಕುಸ್ತಿ, ಜಿಮ್ನಾಸ್ಟಿಕ್  ಇವು ಇನ್ನೊಂದು ವಿಭಾಗಕ್ಕೆ ಸೇರುತ್ತವೆ.

     ಈಗ , ಮೊದಲಿಗೆ  ಯಾವ ಯಾವ ಕ್ರೀಡೆಗೆ ಯಾವ ಯಾವ ಗ್ರಹರು ಕಾರಕರಾಗುತ್ತಾರೆ ಎಂಬುದನ್ನು ತಿಳಿಯೋಣ.

    ಗ್ರಹಗಳು -- ಕ್ರೀಡೆಗಳು
************************
    1. ರವಿ   -- ಹೊರಾಂಗಣ, ಸಾಹಸ ಕ್ರೀಡೆಗಳು
    2. ಚಂದ್ರ -- ಎಲ್ಲಾ ರೀತಿಯ ಜಲ ಕ್ರೀಡೆಗಳು
    3. ಕುಜ -- ಹೊರಾಂಗಣ ಕ್ರೀಡೆ, ಸಾಹಸ ಕ್ರೀಡೆಗಳು.
    4. ಬುಧ -- ಹೊರಾಂಗಣ ಕ್ರೀಡೆ.
    5. ಗುರು -- ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆ.
    6. ಶುಕ್ರ -- ಎಲ್ಲಾ ರೀತಿಯ ಜಲ ಕ್ರೀಡೆಗಳು.
    7. ಶನಿ  -- ಜೂಜು ( ರೇಸು, ಇಸ್ಪೀಟು, ಮಟ್ಕಾ )
         ರಾಹು ಕೇತುಗಳು ಯಾವ ಯಾವ ಗ್ರಹದ ರಾಶಿಯಲ್ಲಿರುತ್ತಾರೋ ಆ ಗ್ರಹಗಳ ಸ್ಥಾನ ಬಲದಂತೆ ಕಾರಕರಾಗುತ್ತಾರೆ.

        ಯಾವ ಯಾವ ರಾಶಿಗಳು ಯಾವಯಾವ ಕ್ರೀಡೆಗಳನ್ನು ಪ್ರಚೋದಿಸುತ್ತವೆ ಎಂಬುದನ್ನು ತಿಳಿಯೋಣ.

      ರಾಶಿಗಳು  -- ಕ್ರೀಡೆಗಳು

      ಮೇಷ, ಸಿಂಹ, ಧನಸ್ಸು ರಾಶಿ ಅಥವಾ ಲಗ್ನದವರು ಸಾಹಸ ಕಾರ್ಯ ಪ್ರವೃತ್ತಿಯುಳ್ಳವರಾಗಿರುತ್ತಾರೆ,  ಏಕೆಂದರೆ ಈ ರಾಶಿಗಳು  ಕ್ಷತ್ರಿಯ ರಾಶಿಗಳು.

       ವೃಷಭ, ತುಲಾ ಮತ್ತು ಕಟಕ ರಾಶಿಗಳು ಜಲಕ್ರೀಡೆಯನ್ನು ಪ್ರಚೋದಿಸುತ್ತವೆ.. ಕಾರಣ , ಈ ರಾಶಿಗಳ ಅಧಿಪತಿಗಳು ಜಲಗ್ರಹಗಳು.

       ಕಟಕ, ವೃಶ್ಚಿಕ, ಮೀನ ಈ ರಾಶಿಗಳು ಜಲ ರಾಶಿಗಳಾದ್ದರಿಂದ , ಜಲಕ್ರೀಡೆಗಳನ್ನು ಪ್ರಚೋದಿಸುತ್ತವೆ.

       ಮಿಥುನ , ತುಲಾ ಕುಂಭ ಈ ರಾಶಿಗಳು ವಾಯುತತ್ವವಾದ್ದರಿಂದ ಈ ರಾಶಿಯವರು ವಾಯುವಿಹಾರವನ್ನು ಬಯಸುತ್ತಾರೆ.

       ಮಿಥುನ ಮತ್ತು ಕನ್ಯಾ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ವ್ಯವಹಾರದಲ್ಲಿ ಮತ್ತು ಮಾತಿನಲ್ಲಿ ನಿಪುಣರಾಗಿರುತ್ತಾರೆ. 

        ಕ್ರೀಡೆ ಮತ್ತು ಗ್ರಹ
       ****************
      ಸಾಮಾನ್ಯವಾಗಿ  ಯಾವುದೇ ರೀತಿಯ ಹೊರಾಂಗಣ ಕ್ರೀಡೆಗಳಿಗೆ ರವಿ, ಕುಜ ಮತ್ತು ಗುರು ಕಾರಕರಾಗುತ್ತಾರೆ,  ಹೇಗೆಂದರೆ ... ರವಿಯು ಆತ್ಮಕಾರಕ,  ಕುಜ ಹಾಗೂ ಗುರುಗಳು ದೇಹಪುಷ್ಠಿಗೆ ಕಾರಕರಾಗುತ್ತಾರೆ.  ಯಾವುದೇ ಆಟವನ್ನು ಆಡಬೇಕೆಂದರೂ ದೇಹಪುಷ್ಟಿಯೂ ಇರಬೇಕು ಆರೋಗ್ಯವೂ ಇರಬೇಕು.  ಜನ್ಮ ಜಾತಕದಲ್ಲಿ ರವಿ, ಕುಜರ ನಂತರ ಗುರು ಬಲಿಷ್ಠರಾಗಿದ್ದರೆ,  ಆ ಜಾತಕರು ಕ್ರಿಕೆಟ್ ಆಟದಲ್ಲಿ ಉನ್ನತಿಯನ್ನು ಪಡೆಯುವುದಕ್ಕೆ ಅವಕಾಶ ಇರುತ್ತದೆ.  ಉದಾಹರಣೆಗೆ  ಕ್ರಿಕೆಟ್ ದೇವರು ಎಂದೇ ಪ್ರಖ್ಯಾತರಾದ, ವಿಶ್ವದ ಖ್ಯಾತ ಆಟಗಾರ  "ಸಚಿನ್ ತೆಂಡೂಲ್ಕರ್" ಜಾತಕದಲ್ಲಿ  ರವಿ, ಕುಜರು ಉಚ್ಚಸ್ಥಾನದಲ್ಲಿದ್ದಾರೆ,  ಹಾಗಾಗಿ  ಸಚಿನ್ ತೆಂಡೂಲ್ಕರ್ ಅತೀ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಆಟದಲ್ಲಿ ವಿಶ್ವ ವಿಖ್ಯಾತರಾದರು.

        ಯಾವುದೇ ರೀತಿಯ  ಒಳಾಂಗಣ  ಕ್ರೀಡೆಗಳಿಗೆ  ಸಾಮಾನ್ಯವಾಗಿ ಬುಧ ಮತ್ತು ಗುರು ಗ್ರಹರು ಕಾರಕರಾಗುತ್ತಾರೆ.  ಈ ಗ್ರಹಗಳ ನಂತರ ರವಿ, ಕುಜರು ಸ್ವಲ್ಪ ಮಟ್ಟಿಗೆ ಕಾರಕರಾಗುತ್ತಾರೆ.  ಜನಪ್ರಿಯ  ಒಳಾಂಗಣ  ಆಟವಾದ ಚದುರಂಗ ( ಚೆಸ್)  ಆಟವನ್ನು ತೆಗೆದುಕೊಂಡಾಗ...  ಈ ಆಟವನ್ನು ಆಡಬೇಕಾದ್ರೆ  ಅತೀ ಚರುಕಾದ ಬುದ್ಧಿವಂತಿಕೆ ಅಗತ್ಯ,  ಹಾಗಾಗಿ... ವಿದ್ಯಾಕಾರಕ, ಬುದ್ಧಿಕಾರಕ,  ಜ್ಞಾನಕಾರಕ ಗ್ರಹರಾದ ಬುಧ, ಗುರುಗಳು ಜಾತಕದಲ್ಲಿ ಬಲಿಷ್ಠರಾಗಬೇಕು.  ಯಾರ ಜಾತಕದಲ್ಲಿ  ಬುಧ, ಗುರುಗಳು ಬಲಿಸ್ಥರಾಗಿರುತ್ತಾರೋ  ಆ ಜಾತಕರು ಒಳಾಂಗಣ ಕ್ರೀಡೆಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ.  ಅದೂ ಅಲ್ಲದೆ ಚದುರಂಗವನ್ನು " ಬುದ್ಧಿವಂತರ ಆಟ " ಎಂದೇ ಕರೆಯುತ್ತಾರೆ, ಇದಲ್ಲದೆ ಕೇರಂ ಆಗಲೀ ಇಸ್ಪೀಟ್ ಆಟವನ್ನಾಗಲಿ ಆಡಲು ಬುದ್ಧಿವಂತಿಕೆ ಬೇಕು.

       ಸಾಹಸ ಕ್ರೀಡೆಗಳನ್ನು  ಆಡಬೇಕೆಂದರೂ ಸಹ ರವಿ ಕುಜರು ಬಲಿಷ್ಠರಾಗಿರಬೇಕು.  ಸಾಹಸದ ಕಾರ್ಯಗಳೆಂದರೆ  ಕುಸ್ತಿ, ಕರಾಟೆ, ಮೋಟಾರ್ ರೇಸ್, ಪರ್ವತಾರೋಹಣ, ಇತ್ಯಾದಿಗಳು.  ರವಿ, ಕುಜರೊಟ್ಟಿಗೆ ಗುರುವೂ ಬಲಿಷ್ಠರಾಗಿದ್ದರೆ ಇನ್ನೂ ಉತ್ತಮ.

         ಯಾವುದೇ ರೀತಿಯ ಜಲಕ್ರೀಡೆಗಳಿಗೆ  ಚಂದ್ರ, ಶುಕ್ರರು ಪ್ರಮುಖ ಕಾರಕರಾಗುತ್ತಾರೆ.  ಚಂದ್ರ ಶುಕ್ರರು ಜಲಗ್ರಹಗಳಾದ್ದರಿಂದ,  ಯಾರ ಜಾತಕದಲ್ಲಿ  ಈ ಗ್ರಹಗಳು ಬಲಿಸ್ಥರಾಗಿರುತ್ತಾರೋ ಆ ಜಾತಕರು ಜಲಪ್ರಿಯರಾಗಿರುತ್ತಾರೆ.  ಚಂದ್ರ, ಶುಕ್ರರು ಜಾತಕದಲ್ಲಿ  ಶುಭ ಸ್ಥಾನದಲ್ಲಿ.  ಒಟ್ಟಿಗಿದ್ದರೆ   ಅಂತಹ ವ್ಯಕ್ತಿಗಳು ಸಾಮಾನ್ಯ ವಾಗಿ ಯಾವಾಗ್ಲೂ ನೀರಿನ ಸಮೀಪವನ್ನು  ಬಯಸುತ್ತಾರೆ.

           ಇನ್ನು ಶನಿಯು,  ಯಾವ ಕ್ರೀಡೆಗೂ ಕಾರಕನಲ್ಲವೇ ? ..    ಹೌದು, ಶನಿಯೂ ಸಹ ಜೂಜಿಗೆ  ಪ್ರಮುಖ ಕಾರಕನಾಗುತ್ಯಾನೆ.  ಜೂಜು ಎಂದರೆ ಹಣ ಪಣಕ್ಕಿಟ್ಟು ಆಡುವ ಆಟ ಎಂದರ್ಥ.  ಉದ್ಸಹರಣೆಗೆ :-- ಇಸ್ಪೀಟ್, ಕುದುರೆ ರೇಸು, ಮಟ್ಕಾ ಇತ್ಯಾದಿ... ಆಟಗಳೆಲ್ಲವೂ ಜೂಜಿಗೆ ಸಂಬಂಧಪಟ್ಟದ್ದು.  ಯಸ್ರ ಜಾತಕದಲ್ಲಿ ಶನಿಯು ಬಲಿಷ್ಟ ನಾಗಿರುತ್ತಾನೋ,  ಆ ಜಾತಕರು ಜೂಜಿನಲ್ಲಿ ಆಸಕ್ತಿ ಹೊಂದಿದ್ದು, ಜೊತೆಗೆ ಅದೃಷ್ಟವೂ ಚನ್ನಾಗಿದ್ದರೆ  ಅದರಲ್ಲೇ ಅಧಿಕ ಹಣವನ್ನೂ ಗಳಿಸುತ್ಯಾರೆ.  ಜೂಜಿನಿಂದ  ಒಬ್ಬ ಮನುಷ್ಯ ಆಕಾಶದೆತ್ತರಕ್ಕೂ ಏರಬಹುದು.  ಅದಃಪತನಕ್ಕೂ ಇಳಿಯಬಹುದು (  ಮಹಾಭಾರತದ ಪಾಂಡವರು ಜೂಜಿನಿಂದ ಪಟ್ಟ ಅನೇಕ ಕಷ್ಟಗಳನ್ನು ಇಲ್ಲಿ ಸ್ಮರಿಸಬಹುದು) 

           ಜಾತಕದಲ್ಲಿ ಕ್ರೀಡೆಗೆ ಯಾವ ಸ್ಥಾನ..?

          ಕ್ರೀಡಾಪಟುವಾಗುವ ಯೋಗ ಜಾತಕದ ಯಾವ ಯಾವ ಸ್ಥಾನದಿಂದ ತಿಳಿಯಬಹುದು ಎಂಬುದನ್ನು.ತಿಳಿಯೋಣ.
ಕ್ರೀಡಾಪಟುತ್ವಕ್ಕೆ ಮುಖ್ಯವಾಗಿ ತನುಸ್ಥಾನ ಮತ್ತು ಸಪ್ತಮ ಸ್ಥಾನವನ್ನು ಪರಿಶೀಲಿಸಬೇಕು.  7ನೆ ಭಾವವು ಕ್ರೀಡಾ ಸ್ಥಾನವೆಂದೂ ಜ್ಯೋತಿಷ್ಯ ದಲ್ಲಿ ಹೇಳಿದೆ. ಜಾತಕ ಕಲಾನಿಧಿ   ಗ್ರಂಥದಲ್ಲಿ  "ಕಳತ್ರ ಕ್ರೀಡಾ ಭೋಗ ಕಾಮ - ಶೃಂಗಾರಕೇಳೀಭೋಜನ ವಿಹಾರ ಸಂಸಾರಕಾರಕಮ್ ಸಪ್ತಮಮ್ " ಎಂದು 7 ನೇ ಮನೆಯನ್ನು ವಿವರಿಸಿದ್ದಾರೆ.    

           ಯಾರ ಜಾತಕದಲ್ಲಿ ಸಪ್ತಮ.ಸ್ಥಾನವು ಬಲಿಷ್ಟವಾಗಿರುತ್ತದೋ ಅವರು ಕ್ರೀಡೆಯಲ್ಲಿ,  ಶೃಂಗಾರದಲ್ಲಿ,  ಭೋಜನದಲ್ಲಿ ನಿಪುನರಾಗಿರುತ್ತಾರೆ ಮತ್ತು ಸಪ್ತಮ ಸ್ಥಾನದಲ್ಲಿ ಶುಭಗ್ರಹಗಳಿದ್ದು, ಸಪ್ತಮಾಧಿಪತಿ ಬಲಿಷ್ಠನಾಗಿದ್ದರೆ,  ಅವರ ಸಂಸಾರವೂ ಚೆನ್ನಾಗಿರುತ್ತದೆ.  ಸಪ್ತಮ ಸ್ಥಾನದ ಜೊತೆಗೆ ತನುಸ್ಥಾನವನ್ನೂ ಪರಿಶೀಲಿಸಬೇಕು,  ಏಕೆಂದರೆ ಸಪ್ತಮ ಸ್ಥಾನವು ಸಂಪೂರ್ಣ ದೃಷ್ಟಿಯಿಂದ ತನು  ಸ್ಥಾನವನ್ನು ದೃಷ್ಠಿಸುತ್ತದೆ.  ಅಲ್ಲದೆ ತನುಸ್ಥಾನದಿಂದ ಜಾಟಕರ ದೇಹ, ದೇಹದ ಸ್ಥಿತಿ - ಗತಿ, ಆರೋಗ್ಯವನ್ನೂ ತಿಳಿಯಬಹುದು.  ಲಗ್ನದಲ್ಲಿ ಶುಭಗ್ರಹರಿದ್ದರೆ ಎಲ್ಲಾ ರೀತಿಯಲ್ಲೂ ಒಳ್ಳೆಯದು.  ಲಗ್ನದಲ್ಲಿ ರವಿ ಅಥವಾ ಕುಜರಿದ್ದಾರೆ ಅವರು ಸಾಹಸಕಾರ್ಯಗಳನ್ನು ಮಾಡಲಿಚ್ಚುಸುತ್ತಾರೆ.  ಈ ಎರಡೂ ಭಾವಗಳ ಜೊತೆಗೆ ಚತುರ್ಥ ಸ್ಥಾನ, ನವಮ ಸ್ಥಾನವನ್ನೂ ( ಭಾಗ್ಯ ಸ್ಥಾನ )  ಪರಿಶೀಲಿಸಬೇಕು ಏಕೆಂದರೆ ಜಾಟಕನಿದೆ ಅದೃಷ್ಟವಿಲ್ಲದೆ ಇದ್ದರೆ ಯಾವುದೇ  ವಿಷಯದಲ್ಲೂ, ಕೀರ್ತಿ ಗಳಿಸಲು ಸಾಧ್ಯವಿಲ್ಲ.

             ಒಟ್ಟಿನಲ್ಲಿ  ಕ್ರೀಡೆಯಲ್ಲಿ ಯಶಸ್ವೀಯಾಗಬೇಕೆಂದರೆ,  ಜಾತಕದ ತನುಸ್ಥಾನ, ಚತುರ್ಥ, ಸಪ್ತಮ, ಭಾಗ್ಯ ಸ್ಥಾನಗಳು, ರವಿ, ಕುಜ, ಗುರು, ಶುಕ್ರ, ಚಂದ್ರ, ಶನಿಗ್ರಹಗಳು  ಬಲಾಢ್ಯವಾಗಿರಬೇಕಾಗುತ್ತದೆ.

✍️ ಡಾ : B. N. ಶೈಲಜಾ ರಮೇಶ್