ಹರಿಃ ಓಂ
ಓಂ ಶ್ರೀ ಮಹಾಗಣಪತಯೇ ನಮಃ
ಓಂ ಶ್ರೀ ಗುರುಭ್ಯೋನಮಃ
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಂದೆತಾಯಿಗಳು, ಮಕ್ಕಳಿಗೆ ಉತ್ತಮ ಆಹಾರ, ಉತ್ತಮ ಗುಣಮಟ್ಟದ ಶಾಲೆ, ಓದಿನಲ್ಲಿ ಅನುಕೂಲವಾಗುವಂತಹ ಪರಿಕರಗಳು, ಜೊತೆಗೆ ಮನೇಪಾಠ, ಹಾಗೂ ಇನ್ನಿತರೆ ಅನುಕೂಲತೆಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಾರೆ, ಆದಾಗ್ಯೂ.ಮಕ್ಕಳ ಮನಸ್ಸು ಓದಿನಲ್ಲಿ ತೊಡಗುವುದಿಲ್ಲ. ಅಧಿಕ ಪರಿಶ್ರಮ ಪಟ್ಟರೂ ಅಪೇಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಆದರೆ ಕೆಲವು ಮಕ್ಕಳು ಕಡಿಮೆ ಪರಿಶ್ರಮದಿಂದಲೇ ಉತ್ತಮ ಫಲಿತಾಂಶ ಪಡೆಯುತ್ತಾರೆ.... ಇದು ಹೇಗೆ?....
ಈ ಪ್ರಶ್ನೆಗೆ ವಾಸ್ತು ಶಾಸ್ತ್ರದಲ್ಲಿ ಉತ್ತರ ದೊರೆಯುತ್ತದೆ.
ಕೆಲವು ಮಕ್ಕಳಿಗೆ ಪ್ರಾಕೃತಿಕ ಶಕ್ತಿಗಳು ಸಮ ಪ್ರಮಾಣದಲ್ಲಿ ದೊರೆಯುವುದಿಲ್ಲ. ಇಂಥ ಮಕ್ಕಳು ಓದುತ್ತಿರುವ ಕೋಣೆಯಲ್ಲಿ ಪ್ರಾಕೃತಿಕ ಶಕ್ತಿ ಸಮತೋಲನದಲ್ಲಿರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಓದಿನಲ್ಲಿ ಸಾಕಷ್ಟು ಪರಿಶ್ರಮ ವಹಿಸಿದರೂ ಅವರಿಗೆ ಅಪೇಕ್ಷಿತ ಫಲಿತಾಂಶ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಸ್ತುಶಾಸ್ತ್ರದ ಪ್ರಕಾರ ಅಧ್ಯಯನದ ಕೋಣೆಯಲ್ಲಿ ಪ್ರಾಕೃತಿಕ ಶಕ್ತಿ ಸಮತೋಲನವಾಗುವಂತೆ ಕ್ರಮ ಕೈಗೊಳ್ಳುವುದು ಅಗತ್ಯ.
ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಅಂಶಗಳು.....
💠 ವಿದ್ಯಾರ್ಥಿಗಳು ಓದುವ ಕೋಣೆ ಈಶಾನ್ಯ ದಿಕ್ಕಿನಲ್ಲಿರಬೇಕು. ಅಥವಾ ಪೂರ್ವ ದಿಕ್ಕಾದರೂ ಸರಿ.
💠 ಓದುವ ಸಮಯದಲ್ಲಿ ವಿದ್ಯಾರ್ಥಿಗಳ ಮುಖ ಈಶಾನ್ಯ ಉತ್ತರ ಅಥವಾ ಪೂರ್ವ ದಿಕ್ಕಿಗೆ ಇರಬೇಕು. ಇದರಿಂದ ಒಳ್ಳೆಯ ಪರಿಣಾಮ ಕಾಣಬಹುದು.
ಪೂರ್ವ ದಿಕ್ಕಿಗೆ ಮುಖಮಾಡಿ ಓದುವುದರಿಂದ ಸೂರ್ಯನ ಶಕ್ತಿ ದೊರೆಯುತ್ತದೆ, ಇದರಿಂದ. ಜ್ಞಾನ ಹಾಗೂ ಚಿಂತನೆಯ ಸಾಮರ್ಥ್ಯ ಹೆಚ್ಚುತ್ತದೆ.
ಉತ್ತರಕ್ಕೆ ಮುಖಮಾಡಿ ಓದುವುದರಿಂದ ಏಕಾಗ್ರತೆ ಹೆಚ್ಚುತ್ತದೆ, ವಿಮರ್ಶಾತ್ಮಕ ಶಕ್ತಿ ಹೆಚ್ಚುತ್ತದೆ.
💠 ಓದುವ ಮೇಜಿನ ಮೇಲೆ ಪಿರಮಿಡ್, ಮಿನಾರ್, ಅಥವಾ " ಫೀನಿಕ್ಸ್ " ಹಕ್ಕಿಯ ಚಿತ್ರವನ್ನು ಇಡುವುದರಿಂದ ವಿದ್ಯಾರ್ಥಿಗಳ ಕಲ್ಪನಾ ಶಕ್ತಿ ವೃದ್ಧಿಯಾಗುತ್ತದೆ. ಹೆಚ್ಚು ಕಲಿಯಲು ಪ್ರೇರೇಪಿಸುತ್ತದೆ.
💠 ಓದುವ ಮೇಜಿನ ಮೇಲೆ ಗ್ಲೋಬ್ ಕೂಡಾ ಇಡಬಹುದು. ಗ್ಲೋಬನ್ನು ಪ್ರತಿನಿತ್ಯ ತಿರುಗಿಸುವುದರಿಂದ ಮಕ್ಕಳಿಗೆ ಪ್ರಪಂಚದೊಡನೆ ಸಂಪರ್ಕ ಬೆಳೆಯುತ್ತದೆ. ಏನಾದರೂ ಸಾಧಿಸಬೇಕೆಂಬ ಪ್ರೇರಣೆ ದೊರೆಯುತ್ತದೆ.
💠 ಅಧ್ಯಯನ ಸ್ಥಳದಲ್ಲಿ ಮೇಲ್ಬಾಗದಲ್ಲಿ ಅಟ್ಟ( ಬೇಡದ ವಸ್ತುಗಳನ್ನು ಸಂಗ್ರಹಿಸುವ ಸ್ಥಳ ) , ಬೀಮ್ ( ತೊಲೆಗಳು ) ಇರಬಾರದು. ಹಾಗೇನಾದರೂ ಇದ್ದರೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬರುವುದಿಲ್ಲ.
💠 ಅಧ್ಯಯನದ ಕೋಣೆ ನೈಋತ್ಯ ಅಥವಾ ಆಗ್ನೇಯ ಭಾಗದಲ್ಲಿ ಇರಬಾರದು.
💠 ವಿದ್ಯಾರ್ಥಿಗಳು ಓದಲು ಬಾಗಿಲಿನತ್ತ ಬೆನ್ನುಮಾಡಿ ಓದಲು ಕುಳಿತುಕೊಳ್ಳಬಾರದು.
💠 ಅಧ್ಯಯನದ ಕೋಣೆಯಲ್ಲಿ ದೊಡ್ಡದಾದ ಕನ್ನಡಿ, ಅಕ್ವೇರಿಯಂ, ಟೆಲಿಫೋನ್ ಮುಂತಾದ ಕ್ರಿಯಾಶೀಲ ವಸ್ತುಗಳು ಇರಬಾರದು. ಇದರಿಂದ ಏಕಾಗ್ರತೆ ಕೊರತೆ ಉಂಟಾಗುತ್ತದೆ.
💠 ವಿದ್ಯಾರ್ಥಿಗಳು ಕಂಪ್ಯೂಟರ್ ಉಪಯೋಗಿಸುತ್ತಿದ್ದರೆ, .ಅದನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು, ಅವಶ್ಯಕತೆಗೆ ಅನುಸಾರವಾಗಿ ನೈಋತ್ಯ ದ ಭಾಗದಲ್ಲಿಯೂ ಕೂಡ ಇಡಬಹುದು.
💠 ಓದುವ ಕೋಣೆಯ ಬಾಗಿಲು ಈಶಾನ್ಯ, ಪೂರ್ವ, ದಕ್ಷಿಣ ಆಗ್ನೇಯ, ಪಶ್ಚಿಮ ವಾಯುವ್ಯ, ಹಾಗೂ ಉತ್ತರದಲ್ಲಿ ಇರಬಹುದು.
💠 ಪೂರ್ವ ಆಗ್ನೇಯ, ದಕ್ಷಿಣ ನೈಋತ್ಯ,. ಪಶ್ಚಿಮ ನೈಋತ್ಯ, ಉತ್ತರ ವಾಯುವ್ಯದ ದಿಕ್ಕಿನಲ್ಲಿ ಓದುವ ಕೋಣೆಯ ಬಾಗಿಲುಗಳು ಇರಬಾರದು.
💠 ಆದಷ್ಟೂ ಓದುವ ಕೋಣೆಯ ಬಾಗಿಲು, ಕಿಟಕಿಗಳು ಪೂರ್ವ, ಈಶಾನ್ಯ, ಉತ್ತರ ದಿಕ್ಕಿನಲ್ಲಿದ್ದರೆ... ಪ್ರಾತಃಕಾಲದಲ್ಲಿ ಸೂರ್ಯನ ಉಷ್ಣತೆಯ ಲಾಭ ಸಾಕಷ್ಟು ಮಕ್ಕಳಿಗೆ ಸಿಗುತ್ತದೆ, ಮಕ್ಕಳ ಆರೋಗ್ಯ ವೃದ್ಧಿಯಾಗುತ್ತದೆ.
💠 ಅಧ್ಯಯನದ ಕೋಣೆಯಲ್ಲೇ ಮಲಗುವ ವ್ಯವಸ್ಥೆ ಇದ್ದರೆ, ಮಂಚದ ತಲೆಯ ಭಾಗ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಇರಬೇಕು.
💠 ಅಧ್ಯಯನದ ಕೋಣೆಯಲ್ಲಿ ನೀರನ್ನು ಈಶಾನ್ಯದಲ್ಲಿ ಇರಿಸಬೇಕು.
💠 ಅಧ್ಯಯನ ಕೋಣೆಯ ಗೋಡೆಗಳಿಗೆ ತಿಳಿ ನೀಲಿ, ತಿಳಿ ಹಳದಿ, ಬಾದಾಮಿ ಬಣ್ಣಗಳನ್ನೇ ಬಳಿದಿರಬೇಕು.
💠 ಅಧ್ಯಯನ ಕೋಣೆಯಲ್ಲಿ ಪುಸ್ತಕ ಹಾಗೂ ಬಟ್ಟೆಯ ಕಪಾಟು ದಕ್ಷಿಣ ಅಥವಾ ಪಶ್ಚಿಮದ..ಮಧ್ಯದಲ್ಲಿರಬೇಕು. ಪುಸ್ತಕಗಳನ್ನು ನೈರುತ್ಯ ದಲ್ಲಿಟ್ಟರೆ ಮಕ್ಕಳು ಅವನ್ನು ತೆರೆದೂ ಕೂಡ ನೋಡುವುದಿಲ್ಲ, ಹಾಗೂ ವಾಯುವ್ಯದಲ್ಲಿಟ್ಟ ಪುಸ್ತಕಗಳು ಕಳುವಾಗುವ ಸಾಧ್ಯತೆಗಳಿವೆ.
💠 ಅಧ್ಯಯನ ಕೋಣೆಯ ಗೋಡೆಯ ಮೇಲೆ, ಮನಸ್ಸನ್ನು ಕೆರಳಿಸುವಂತಹ ಚಿತ್ರಗಳು, ನಟನಟಿಯರ ಚಿತ್ರಗಳು ಹಾಕಿರಬಾರದು.
💠 ಅಧ್ಯಯನ ಕೋಣೆಯ ಗೋಡೆಗೆ ಪ್ರೇರಣಾತ್ಮಕ ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿದ್ದರೆ ( ಸ್ವಾಮಿ ವಿವೇಕಾನಂದರು ) , ವಿದ್ಯಾರ್ಹತಾ ಪತ್ರಗಳು ಇದ್ದರೆ ಓದುವುದಕ್ಕೆ ಪ್ರೇರಣಾದಾಯಕವಾಗಿರುತ್ತದೆ.
💠 ತೆರೆದಿಟ್ಟ ಪುಸ್ತಕದಿಂದ ನಕಾರಾತ್ಮಕ ಶಕ್ತಿ ಬಿಡುಗಡೆಯಾಡುತ್ತದೆ.. ಹಾಗಾಗಿ, ಪುಸ್ತಕಗಳನ್ನು ಅಂದವಾಗಿ , ಸುವ್ಯವಸ್ಥಿತವಾಗಿ ಮೇಜಿನ ಮೇಲೆ ಜೋಡಿಸಿಟ್ಟಿರಬೇಕು.
💠 ಅಧ್ಯಯನದ ಕೋಣೆಯಲ್ಲಿ ಅನಗತ್ಯ ಸಾಮಾನುಗಳು, ಹಳೆಯ ಪುಸ್ತಕಗಳು, ಅನಗತ್ಯ ಕಸಕಡ್ಡಿ ಇರದಂತೆ ನೋಡಿಕೊಳ್ಳಬೇಕು, ಇವುಗಳೂ ಕೂಡ ನಕಾರಾತ್ಮಕ ಶಕ್ತಿಯನ್ನು.ಬಿಡುಗಡೆ ಮಾಡುತ್ತದೆ, ಹಾಗೂ ಆರೋಗ್ಯ ಮತ್ತು ಅಧ್ಯಯನದ ಮೇಲೆ ಪ್ರಭಾವವನ್ನು ಬೀರುತ್ತದೆ.
💠 ಅಧ್ಯಯನದ ಕೋಣೆಯಲ್ಲಿ ಆಕಾಶ ನೀಲಿ, ತಿಳಿನೀಲಿ, ತಿಳಿ ಹಸಿರು ಹಾಗೂ ಬಾದಾಮಿ ಬಣ್ಣದ ಪರದೆ ( ಕರ್ಟನ್) ಗಳನ್ನು ಉಪಯೋಗಿಸಬೇಕು.
💠 ಅಧ್ಯಯನದ ಕೋಣೆಯಲ್ಲಿ ಶೌಚಾಲಯ ಇದ್ದರೆ ಸದಾಕಾಲ ಬಾಗಿಲನ್ನು ಮುಚ್ಚಿರಬೇಕು, ಇಲ್ಲದಿದ್ದರೆ ಶೌಚಾಲಯ ದ ಮೂಲಕ ನಕಾರಾತ್ಮಕ ಶಕ್ತಿ ಹೊರಹೊಮ್ಮುತ್ತದೆ.
💠 ಬಿಚ್ಚಿಟ್ಟ, ಮಲಿನವಾದ ಬಟ್ಟೆಯನ್ನು ಅಧ್ಯಯನದ ಕೋಣೆಯಲ್ಲಿ ಎಲ್ಲೆಂದರಲ್ಲಿ ಎಸೆಯಬಾರದು. ಶೌಚಾಲಯ ದಲ್ಲಿ ಮಾತ್ರವೇ ಹಾಕಬೇಕು.
💠 ಶೌಚಾಲಯ ಸದಾ ಶುದ್ಧವಾಗಿರಬೇಕು.
💠 ಅಧ್ಯಯನ ಕೋಣೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಕ್ಕಳು ಓದುತ್ತಿದ್ದರೆ, ಕೋಣೆಯ ಗೋಡೆಗಳಿಗೆ ಮಿತ್ರತ್ವವನ್ನು ಬಿಂಬಿಸುವಂತಹ ಫೋಟೋಗಳನ್ನು ಹಾಕಿದರೆ ಉತ್ತಮ, ಇದರಿಂದ ಮಕ್ಕಳು ಸಾಮರಸ್ಯದಿಂದ ಬೆರೆತು, ಒಟ್ಟಿಗೇ ಕಲೆತು ಅಭ್ಯಾಸ ಮಾಡುತ್ತಾರೆ. ಅವರಲ್ಲಿ ಜಗಳ ಉಂಟಾಗುವುದಿಲ್ಲ.
💠 ವಿದ್ಯಾರ್ಥಿಗಳ ಅಧ್ಯಯನದ ಮೇಜಿನ ಮೇಲೆ ಸ್ಪಟಿಕದ ಗೋಲ ವನ್ನು ತೂಗಿಬಿಡಬೇಕು, ಇಲ್ಲವೇ ಮರದಿಂದ ಮಾಡಿದ ಪಿರಮಿಡ್ ಅನ್ನು ತೂಗಿಬಿಡಬೇಕು.
ಸ್ಪಟಿಕದ ಗೋಲವು ನಕಾರಾತ್ಮಕ ಶಕ್ತಿ ಸಂಚಯವಾಗುವುದನ್ನು ತಡೆಯುತ್ತದೆ. ಪಿರಮಿಡ್ ಶಕ್ತಿಯನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ.. ಇದರಿಂದ ಏಕಾಗ್ರತೆ ಹೆಚ್ಚಾಗಿ.ಮಕ್ಕಳು ಅಧ್ಯಯನದಲ್ಲಿ ತೊಡಗುತ್ತಾರೆ.
✍️ ಡಾ : B.N. ಶೈಲಜಾ ರಮೇಶ್