Monday, 21 July 2025

ನಕ್ಷತ್ರಗಳ ಬಗೆಗೆ ಅಧ್ಯಯನ

          ಹರಿಃ ಓಂ
              ಶ್ರೀ ಗಣೇಶಾಯ ನಮಃ
                --: ಕ್ಷತ್ರಗಳ   ಬಗೆಗೆ  ಅಧ್ಯಯನ :--
               ಮುಂದುವರೆದ ಭಾಗ..........

Picture source: Internet/ social media
          ಪ್ರತಿಯೊಂದೂ  ಪಂಚಭೂತಾತ್ಮಕ ವಾಗಿರುವುದರಿಂದಲೇ  ಈ  ಜಗತ್ತಿಗೆ  ಪ್ರಪಂಚ ಎಂಬ ಹೆಸರು  ಬಂದಿರುವುದು.
ಭೂಮಿ ಅಥವಾ ಪೃಥ್ವಿತತ್ವ
ಜಲತತ್ವ
ತೇಜೋತತ್ವ ಅಥವಾ ಅಗ್ನಿತತ್ವ
ವಾಯುತತ್ವ
ಆಕಾಶತತ್ವ...
ಇವು   ಪಂಚತತ್ವಗಳು.
          ನಕ್ಷತ್ರಗಳೂ  ಸಹ ತತ್ವ ಪ್ರಧಾನವಾಗಿವೆ.   ಪ್ರತಿ ನಕ್ಷತ್ರವೂ ಒಂದಲ್ಲ  ಒಂದು  ತತ್ವಕ್ಕೆ  ಸೇರಿದವಾಗಿದೆ.  ಇವುಗಳ  ಪ್ರಭಾವವು  ಸದಾ  ಭೂಮಿಯ  ಜೀವಿಗಳ ಮೇಲಾಗುವುದರಿಂದ  ಆಯಾ ತತ್ವದ  ಪ್ರಭಾವಕ್ಕನುಸಾರವಾಗಿ  ವ್ಯಕ್ತಿತ್ವವನ್ನು  ಹೇಗೆ ರೂಪಿಸಿಕೊಳ್ಳಬೇಕು  ಹಾಗೂ  ಯಾವ  ಕಾರಣದಿಂದ  ರೋಗಗಳು  ಭಾಧಿಸಬಹುದೆಂದು  ತಿಳಿಯಲು  ಅನುಕೂಲವಾಗುತ್ತದೆ.  ವಿಶೇಷವಾಗಿ  ಪ್ರಶ್ನಾಶಾಸ್ತ್ರದಲ್ಲಿ   ಕಳವು/ಸಾವು  ಇತ್ಯಾದಿಗಳ  ವಿಷಯಕ್ಕೆ  ಸಂಬಂಧಿಸಿದಂತೆ  ತಿಳಿಯಬಹುದು.  ಏಕತತ್ವ  ಗ್ರಹಗಳು  ಸ್ವನಕ್ಷತ್ರದಲ್ಲಿದ್ದಾಗ  ಅವುಗಳಿಗೆ  ಸಂಬಂಧಿಸಿದ  ತತ್ವಗುಣಗಳು  ವೃದ್ಧಿಸುತ್ತದೆ. ಹಾಗೂ ವಿವಾಹಕ್ಕೆ  ಸಂಬಂಧಿಸಿದಂತೆ  ವಧೂವರರ  ಸಾಲಾವಳಿ ಯನ್ನು  ನೋಡುವಾಗ  ತತ್ವಗಳಿಂದಲೂ  ಹೊಂದಾಣಿಕೆ  ಮಾಡಬಹುದು.
        ಈಗ  ನಕ್ಷತ್ರಗಳ  ತತ್ವಗಳನ್ನು  ತಿಳಿಯೋಣ.

ಪೃಥ್ವಿ/ ಭೂತತ್ವ  :-- ಆಶ್ವಿನಿ,  ಭರಣಿ, ಕೃತ್ತಿಕ,  ರೋಹಿಣಿ  , ಮೃಗಶಿರ .
   ಗ್ರಹಗಳಲ್ಲಿ  ಬುಧ  ಭೂತತ್ವ  ಗ್ರಹ.

ಜಲತತ್ವ :-- ಆರಿದ್ರ,  ಪುನರ್ವಸು,  ಪುಷ್ಯ,  ಆಶ್ಲೇಷ,  ಮಖಾ, ಪುಬ್ಬ.
    ಗ್ರಹಗಳಲ್ಲಿ  ಚಂದ್ರ,  ಶುಕ್ರ  ಜಲತತ್ವ  ಗ್ರಹಗಳು.

ತೇಜೋ/ ಅಗ್ನಿತತ್ವ :--  ಉತ್ತರ,  ಹಸ್ತ, ಚಿತ್ತ, ಸ್ವಾತಿ,  ವಿಶಾಖ,  ಅನೂರಾಧ.
     ಗ್ರಹಗಳಲ್ಲಿ  ರವಿ  ಕುಜ  ಅಗ್ನಿತತ್ವ  ಗ್ರಹಗಳು.

ವಾಯುತತ್ವ  :--  ಜ್ಯೇಷ್ಠ,  ಮೂಲ,  ಪೂರ್ವಾಷಾಢ, ಉತ್ತರಾಷಾಢ,  ಶ್ರವಣ.
     ಗ್ರಹಗಳಲ್ಲಿ   ಶನಿ  ವಾಯುತತ್ವ  ಗ್ರಹ.

ಆಕಾಶತತ್ವ :--  ಧನಿಷ್ಠ,  ಶತಭಿಷ,  ಪೂರ್ವಾಬಾದ್ರ,  ಉತ್ತರಾಬಾದ್ರ,  ರೇವತಿ.
     ಗ್ರಹಗಳಲ್ಲಿ  ಗುರು  ಆಕಾಶತತ್ವ  ಗ್ರಹ.

          ಗ್ರಹ,  ರಾಶಿಗಳಲ್ಲಿ   ಚಾತುರ್ವರ್ಣಗಳಾದ  ಬ್ರಾಹ್ಮಣ,  ಕ್ಷತ್ರಿಯ, ವೈಶ್ಯ, ಶೂದ್ರ  ವೆಂಬ ಜಾತಿ  ವಿಭಾಗಗಳಿರುವಂತೆ  ನಕ್ಷತ್ರಗಳಲ್ಲಿಯೂ ಕಾಣಬಹುದಾಗಿದೆ.

ಚಾತುರ್ವಣ್ಯಂ ಮಯಾ  ದೃಷ್ಠ್ಯಮ್ ಗುಣಕರ್ಮ  ವಿಭಾಗಶಃ"  ಎನ್ನುವಂತೆ ಜಾತಿಯು  ಗುಣಧರ್ಮಗಳನ್ನು  ಸೂಚಿಸುತ್ತದೆ.

ಈ  ದಿಸೆಯಲ್ಲಿ  ನಕ್ಷತ್ರಗಳ  ಜಾತಿಯು  ಈ  ಕೆಳಕಂಡಂತೆ ಇದೆ.

ಬ್ರಾಹ್ಮಣ  ಜಾತಿ  :--  ಕೃತಿಕಾ,  ಪುಬ್ಬ,  ಪೂರ್ವಾಷಾಢ,  ಪೂರ್ವಾಬಾದ್ರ.
ಕ್ಷತ್ರಿಯ ಜಾತಿ  :--  ಪುಷ್ಯ,  ಉತ್ತರ,  ಉತ್ತರಾಷಾಢ,  ಉತ್ತರಾಬಾದ್ರ.
ವೈಶ್ಯಜಾತಿ :--  ಆಶ್ವಿನಿ,  ಪುನರ್ವಸು,  ಹಸ್ತ, 
ಶೂದ್ರಜಾತಿ. :-- ಮಖಾ,  ಅನೂರಾಧ,  ರೇವತಿ.
ಸಂಕರ ಜಾತಿ  :--  ಚಿತ್ತ,  ಮೃಗಶಿರ,  ಧನಿಷ್ಠ.
ಕಂಟಕ ಜಾತಿ  :--  ಆರಿದ್ರ,  ಸ್ವಾತಿ,  ಶತಭಿಷ,  ಮೂಲ
ಚಾಂಡಾಲ  ಜಾತಿ  :--  ಭರಣಿ,  ಅಶ್ಲೇಷ, ವಿಶಾಖ,  ಶ್ರವಣ.

ನಕ್ಷತ್ರ ಗಳಿಗೆ  ಕ್ಷಿಪ್ರಾದಿ  ಸಂಜ್ಞೆಗಳಿದ್ದು  ಆಯಾ  ಸಂಜ್ಞೆಗಳಿಗೆ  ಅನುಸಾರವಾಗಿ  ಫಲಗಳನ್ನು  ಕೊಡುತ್ತದೆ.

ಕ್ಷಿಪ್ರ ನಕ್ಷತ್ರ  :--   ಆಶ್ವಿನಿ,  ಹಸ್ತ,  ಪುಷ್ಯ.
    ಇವು ತ್ವರಿತವಾಗಿ  ಫಲಕೊಡುತ್ತದೆ.
ದಾರುಣ  ನಕ್ಷತ್ರ :--  ಮೂಲ,  ಆರಿದ್ರ, ಜ್ಯೇಷ್ಠ, ಆಶ್ಲೇಷ
     ಇವು ಕಾರ್ಯಗಳಲ್ಲಿ  ಭಯವನ್ನುಂಟು ಮಾಡುತ್ತದೆ.
ಮೃದು ನಕ್ಷತ್ರ  :--   ಚಿತ್ತ,  ರೇವತಿ,  ಮೃಗಶಿರ,  ಅನೂರಾಧ.
     ಮಂದ ಗತಿಯಲ್ಲಿ  ಅಂದ್ರೆ ನಿಧಾನವಾಗಿ ಫಲಕೊಡುತ್ತವೆ.
ಉಗ್ರ ನಕ್ಷತ್ರ :-- ಭರಣಿ,  ಮಖಾ, ಪುಬ್ಬ, ಪೂರ್ವಾಷಾಢ,  ಪೂರ್ವಾಬಾದ್ರ.
     ಇವು ಘೋರ ಫಲಗಳನ್ನು  ಕೊಡುತ್ತದೇ.
ಸಾಧಾರಣ  ನಕ್ಷತ್ರ  :-- ಕೃತಿಕಾ,  ವಿಶಾಖ.
     ಹೆಸರಿನಂತೆಯೇ  ಸಾಧಾರಣ  ಫಲಗಳನ್ನು  ಕೊಡುತ್ತದೆ.
ಚರ ನಕ್ಷತ್ರ  :-- ಸ್ವಾತಿ, ಪುನರ್ವಸು,  ಶ್ರವಣ, ಧನಿಷ್ಠ, ಶತಭಿಷ.
     ಇವು  ಶಾಶ್ವತವಲ್ಲದ  ಚಂಚಲ ಫಲವನ್ನುಂಟುಮಾಡುತ್ತದೆ.
ಸ್ಥಿರ ನಕ್ಷತ್ರ :---  ರೋಹಿಣಿ,  ಉತ್ತರ,  ಉತ್ತರಾಷಾಢ, ಉತ್ತರಾಬಾದ್ರ.
      ಇವು  ಶಾಶ್ವತ ಫಲವನ್ನುಂಟು  ಮಾಡುತ್ತವೆ.
        ಪ್ರತಿಯೊಂದಕ್ಕೂ  ರವಿಯೇ  ಕೇಂದ್ರವಾಗಿರುವುದರಿಂದ  ಸೂರ್ಯನ ಚಲನೆಯನ್ನೇ  ಅನುಸರಿಸಿ  ಕೆಲವು ನಕ್ಷತ್ರಗಳು ಜೀವ  ಹಾಗೂ  ನಿರ್ಜೀವವಾಗುತ್ತದೆ.
      ಅದು  ಹೇಗೆ  ಎಂದು ತಿಳಿಯೋಣ.....
       ಸೂರ್ಯನಿರುವ  ನಕ್ಷತ್ರ  ಹಾಗೂ ಸೂರ್ಯನಿರುವ  ನಕ್ಷತ್ರ ದ ಹಿಂದಿನ  ಹಾಗೂ  ಮುಂದಿನ ಮೂರು  ನಕ್ಷತ್ರಗಳು  ನಿರ್ಜೀವ  ನಕ್ಷತ್ರಗಳಾಗುತ್ತವೆ.
        ನಂತರದ  ಏಳು  ನಕ್ಷತ್ರ ಗಳು  ಅರ್ಧ ಜೀವ  ನಕ್ಷತ್ರಗಳು.
         ನಂತರದ ಒಂದು ನಕ್ಷತ್ರ  ಮೃತನಕ್ಷತ್ರ
ಮತ್ತು  ನಂತರದ  8 ನಕ್ಷತ್ರಗಳು ಪೂರ್ಣಜೀವ ವಿರುವ ನಕ್ಷತ್ರಗಳು. ಹಾಗೂ  ನಂತರದ  ನಕ್ಷತ್ರಗಳು  ಪಾದ  ಜೀವವಿರುವ   ನಕ್ಷತ್ರಗಳು.
          ದುಷ್ಟ  ನಕ್ಷತ್ರದ ಬಗೆಗೆ  ವಿಚಾರ ಮಾಡಿದಾಗ  ಮೊದಲು ಎದುರಾಗುವುದೇ " ವೈನಾಶಿಕ  ನಕ್ಷತ್ರ " .
ವೈನಾಶಿಕವೆಂದರೆ  ನಾಶ  ಮಾಡುವುದೆಂದು. ಅರ್ಥವಾಗುತ್ತದೆ. ಅಂದರೆ  ಈ  ನಕ್ಷತ್ರಗಳಲ್ಲಿ  ಯಾವುದೇ. ಶುಭ ಕೆಲಸಗಳನ್ನು  ಮಾಡಬಾರದು.
ಇದರಲ್ಲಿ,
ಕರ್ಮಸಂಜ್ಞೆ,  ಸಾಮುದಾಯಿಕ,  ವಿನಾಶ, ಹಾಗೂ  ಮಾನಸ ಎಂಬ ನಾಲ್ಕು  ವಿಭಾಗಗಳಿವೆ.
ಇವುಗಳ  ಎಣಿಕೆಯಲ್ಲಿ  ಪ್ರತಿಯೊಂದೂ  ಜನ್ಮಲಗ್ನವನ್ನು ಆಧರಿಸುತ್ತಿರುತ್ತದೆ  ಅಂದರೆ  ಜನ್ಮ ಲಗ್ನ ನಕ್ಷತ್ರದಿಂದಲೇ  ಎಣಿಸಬೇಕು.
     ಜನ್ಮ  ಲಗ್ನ ನಕ್ಷತ್ರದಿಂದ  ಹತ್ತನೇ  ನಕ್ಷತ್ರವು  ಕರ್ಮಸಂಜ್ಞೆ  --  ಅಂದರೆ  ಯಾವುದೇ ರೀತಿಯಾದ  ಕರ್ಮ  ಮಾಡಲೂ  ಸಹ  ಈ  ನಕ್ಷತ್ರವು  ನಿಷಿದ್ಧ.
     ಜನ್ಮ ಲಗ್ನ  ನಕ್ಷತ್ರದಿಂದ  16 ನೆ  ನಕ್ಷತ್ರವು  ಸಾಂಘಿಕ --  ಸಮುದಾಯದಲ್ಲಿ,  ಸಾರ್ವಜನಿಕರ  ಹಿತಕ್ಕಾಗಿ ಮಾಡುವ  ಕೆಲಸಗಳಿಗೆ  ನಿಷಿದ್ಧ.
     ಜನ್ಮ ಲಗ್ನ ನಕ್ಷತ್ರದಿಂದ  23 ನೆ  ನಕ್ಷತ್ರವು  ವಿನಾಶ---   ಮಾಡುವ  ಕಾರ್ಯಕ್ಕೆ  ವಿಘ್ನಗಳನ್ನು  ತಂದೊಡ್ಡಿ  ನಾಶಮಾಡುತ್ತದೆ.
     ಜನ್ಮ ಲಗ್ನ ನಕ್ಷತ್ರದಿಂದ  25 ನೇ  ನಕ್ಷತ್ರವು  ಮಾನಸ  --  ಪ್ರತಿ  ಕೆಲಸಗಳನ್ನು  ನಿರ್ವಹಿಸಲು  ಇರಬೇಕಾದ  ಮಾನಸಿಕ  ಸ್ಥಿತಿಯನ್ನೇ  ಹಾಳುಮಾಡುತ್ತದೇ.
ಸೃಷ್ಟಿ  ಸ್ಥಿತಿ  ಲಯ  ನಕ್ಷತ್ರಗಳು  :--  ಸೃಷ್ಟಿ,  ಸ್ಥಿತಿ,  ಲಯಗಳಿಗೂ  ನಕ್ಷತ್ರವೇ  ಕಾರಣವಾಗಿದೆ.
ವೃದ್ಧಿಯಾಗಬೇಕಾದ  ಕೆಲಸಗಳಿಗೆ  ಸೃಷ್ಟಿ ನಕ್ಷತ್ರವನ್ನೂ,  ಮಾಡಿದ  ಕೆಲಸವು ಮುಂದಿನ  ತಲೆಮಾರಿಗೂ  ಉಳಿಯುವಂತೆ  ಮಾಡಬೇಕಾದ  ಕೆಲಸಗಳಿಗೆ ಸ್ಥಿತಿ  ನಕ್ಷತ್ರಗಳನ್ನೂ,  ಹಳೆಯ  ಕೆಲಸ  ಮುಗಿದು  ಹೊಸ  ಕೆಲಸದ  ಪ್ರಾರಂಭಕ್ಕೆ ಲಯ ನಕ್ಷತ್ರವನ್ನೂ  ಉಪಯೋಗಿಸ  ಬೇಕು.

ಹಾಗಾದರೆ  ಈ  ನಕ್ಷತ್ರ ಗಳಾವುವು  ತಿಳಿಯೋಣ  ಬನ್ನಿ...
     ಸೃಷ್ಟಿ  ನಕ್ಷತ್ರಗಳು  :--  ಆಶ್ವಿನಿ,  ರೋಹಿಣಿ,  ಪುನರ್ವಸು,  ಮಖಾ,  ಹಸ್ತ,  ವಿಶಾಖ,  ಮೂಲ,  ಶ್ರವಣ,  ಪೂರ್ವಾಬಾದ್ರ.
     ಸ್ಥಿತಿ ನಕ್ಷತ್ರಗಳು  :--  ಭರಣಿ,  ಮೃಗಶಿರ,  ಪುಷ್ಯ,  ಪುಬ್ಬ, ಚಿತ್ತ,  ಅನೂರಾಧ,  ಪೂರ್ವಾಷಾಢ, ಧನಿಷ್ಠ, ಉತ್ತರಾಬಾದ್ರ.
     ಲಯ ನಕ್ಷತ್ರಗಳು  :--  ಕೃತಿಕಾ,  ಆರಿದ್ರ,  ಆಶ್ಲೇಷ,  ಉತ್ತರ,  ಸ್ವಾತಿ,  ಜ್ಯೇಷ್ಠ,  ಉತ್ತರಾಷಾಢ,  ಶತಭಿಷ,  ರೇವತಿ.
     ದುರಿತಾಂಶ  ನಕ್ಷತ್ರಗಳು  :--  ಲಯ  ನಕ್ಷತ್ರಗಳೆಂದು  ಗುರುತಿಸಿರುವ  ನಕ್ಷತ್ರಗಳ  ಮೂರು  ಮತ್ತು  ನಾಲ್ಕನೇ  ಪಾದಗಳನ್ನು  ದುರಿತಾಂಶ  ಎನ್ನುತ್ತಾರೆ.  ಇದು  ಅತ್ಯಂತ  ಅಶುಭ ಫಲವನ್ನು  ನೀಡುವುದಾಗಿದ್ದು,  ಎಲ್ಲಾ  ಶುಭ ಕಾರ್ಯಗಳಿಗೂ  ವ್ಯರ್ಜ್ಯ.  ವಿಶೇಷವಾಗಿ  ಮಹೂರ್ತ ಲಗ್ನಗಳಲ್ಲಿ  ಪರಿಗಣಿಸಲೇ  ಬೇಕು.  ಜನನವು ನಮ್ಮ  ಕೈಯಲ್ಲಿರುವುದಿಲ್ಲವಾದ್ದರಿಂದ  ಜನನಕ್ಕೆ  ಮಾತ್ರ  ಸೂಕ್ತವಾದ  ಶಾಂತಿ ಪರಿಹಾರಗಳನ್ನು  ಮಾಡಬೇಕಾಗುತ್ತದೆ.

ನಕ್ಷತ್ರಗಳ  ದಿಕ್ಕು  :--  
ದಿಕ್ಕುಗಳು  ಎಂಟು  ಎಂದು ನಮ್ಮ ಪ್ರಾಜ್ಞರಾದ  ಋಷಿಗಳು  ಗುರುತಿಸಿರುತ್ತಾರೆ.
ಅವುಗಳು ,   ಪೂರ್ವ , ಪಶ್ಚಿಮ, ಉತ್ತರ  ದಕ್ಷಿಣ
ಈಶಾನ್ಯ,  ಆಗ್ನೇಯ,  ನೈಋತ್ಯ ಮತ್ತು  ವಾಯುವ್ಯ.
ಇವುಗಳಿಗೆ  ಅನುಸಾರವಾಗಿ....
ಕೃತಿಕಾ,  ರೋಹಿಣಿ, ಮೃಗಶಿರ  --  ಕೇಂದ್ರ  ಅಥವಾ  ಮದ್ಯಭಾಗ.
ಆರಿದ್ರ, ಪುನರ್ವಸು, ಪುಷ್ಯ,  --  ಪೂರ್ವ
ಆಶ್ಲೇಷ,  ಮಖಾ,  ಪುಬ್ಬ   --  ಆಗ್ನೇಯ
ಉತ್ತರ ,  ಹಸ್ತ,  ಚಿತ್ತ.  --  ದಕ್ಷಿಣ
ಸ್ವಾತಿ,  ವಿಶಾಖ,  ಅನೂರಾಧ --  ನೈಋತ್ಯ
ಜ್ಯೇಷ್ಠ,  ಮೂಲ,  ಪೂರ್ವಾಷಾಢ  --  ಪಶ್ಚಿಮ
ಉತ್ತರಾಷಾಢ,  ಶ್ರವಣ  ಧನಿಷ್ಠ  --  ವಾಯುವ್ಯ
ಶತಭಿಷ,  ಪೂರ್ವಾಬಾದ್ರ,  ಉತ್ತರಾಬಾದ್ರ  -- ಉತ್ತರ
ರೇವತಿ,  ಆಶ್ವಿನಿ,  ಭರಣಿ. --  ಈಶಾನ್ಯ
ಮುಂದಿನ  ಭಾಗದಲ್ಲಿ ನಕ್ಷತ್ರಗಳ  ಬಗ್ಗೆ  ಇನ್ನೂ  ಹೆಚ್ಚಿನ  ಮಾಹಿತಿಯನ್ನು  ತಿಳಿಯೋಣ....
ಮುಂದುವರೆಯುತ್ತದೇ...........  
✍  ಡಾ :  B N  ಶೈಲಜಾ ರಮೇಶ್........

ನಕ್ಷತ್ರಗಳ ಬಗ್ಗೆ ಅಧ್ಯಯನ


ಹರಿಃ  ಓಂ
ಶ್ರೀ ಗಣೇಶಾಯ ನಮಃ
ಶ್ರೀ ಗುರುಭ್ಯೋನಮಃ

ನಕ್ಷತ್ರಗಳ  ಬಗ್ಗೆ .ಅಧ್ಯಯನ
ಮುಂದುವರೆದ  ಭಾಗ.............
Picture source: Internet/ social media
ನಕ್ಷತ್ರಾಧಿಪತಿಗಳು :---
         ನಕ್ಷತ್ರಗಳು                                                         ಅಧಿಪತಿ
ಆಶ್ವಿನಿ   ಮಖಾ    ಮೂಲ                                          ಕೇತು ಆಧಿಪತಿ
ಭರಣಿ   ಪುಬ್ಬ     ಪೂ.ಷಾಢ                                       ಶುಕ್ರ ಅಧಿಪತಿ
ಕೃತಿಕ    ಉತ್ತರ   ಉ. ಷಾಢ                                     ರವಿ ಅಧಿಪತಿ
ರೋಹಿಣಿ   ಹಸ್ತ     ಶ್ರವಣ                                         ಚಂದ್ರ  ಅಧಿಪತಿ
ಮೃಗಶಿರ   ಚಿತ್ತ       ಧನಿಷ್ಠ                                       ಕುಜ  ಅಧಿಪತಿ
ಆರಿದ್ರ      ಸ್ವಾತಿ    ಶತಭಿಷ.                                     ರಾಹು  ಅಧಿಪತಿ
ಪುನರ್ವಸು  ವಿಶಾಖ ಪೂ.ಬಾದ್ರ                                  ಗುರು ಅಧಿಪತಿ
ಪುಷ್ಯ.     ಅನುರಾಧ  ಉ. ಬಾದ್ರ                                 ಶನಿ ಅಧಿಪತಿ
ಆಶ್ಲೇಷ   ಜ್ಯೇಷ್ಠ    ರೇವತಿ.                                        ಬುದ ಅಧಿಪತಿ

           ದಶಾಭುಕ್ತಿ ಗಳು  ಸಹ ಜನ್ಮ ನಕ್ಷತ್ರದ  ಆಧಾರದ  ಮೇಲೆ  ನಿರ್ಧಾರವಾಗುತ್ತದೆ.
ನಕ್ಷತ್ರಗಳಿಂದ ಸೂಚಿತವಾದ  ದೇಹದ  ಭಾಗಗಳು ಯಾವುದು  ಎಂಬುವುದನ್ನು ತಿಳಿಯೋಣ

ನಕ್ಷತ್ರಗಳು.            ಸೂಚಿತ  ದೇಹದ  ಭಾಗಗಳು
ಕೃತಿಕಾ                   ತಲೆ
ರೋಹಿಣಿ.               ಮುಂದಲೇ
ಮೃಗಶಿರ                ಕಣ್ಣ ರೆಪ್ಪೆಗಳು
ಆರಿದ್ರ.                   ಕಣ್ಣುಗಳು
ಪುನರ್ವಸು              ಮೂಗು
ಪುಷ್ಯ                      ಮುಖ
ಆಶ್ಲೇಷ                   ಕಿವಿ
ಮಖಾ.                   ತುಟಿ ಹಾಗೂ  ಕೆನ್ನೆ
ಪುಬ್ಬ                      ಬಲಗೈ
ಉತ್ತರ                   ಎಡಗೈ
ಹಸ್ತ                       ಕೈಬೆರಳುಗಳು
ಚಿತ್ತ                       ಕತ್ತು/ ಕೊರಳು
ಸ್ವಾತಿ                    ಎದೆಯ  ಭಾಗ
ವಿಶಾಖ                  ಹೃದಯ
ಅನೂರಾಧ             ಹೊಟ್ಟೆ
ಜ್ಯೇಷ್ಠ                    ಸೊಂಟದ ಬಲಭಾಗ
ಮೂಲ                   ಸೊಂಟದ  ಎಡಭಾಗ
ಪೂರ್ವಾಷಾಢ         ಬೆನ್ನು
ಉತ್ತರಾಷಾಢ         ಸೊಂಟ / ಕಟಿಪ್ರದೇಶ
ಶ್ರವಣ                   ಜನನಾಂಗಗಳು
ಧನಿಷ್ಠ                   ಗುದದ್ವಾರ
ಶತಭಿಷ                ಬಲತೊಡೆ
ಪೂರ್ವಾಬಾದ್ರ.      ಎಡತೊಡೆ
ಉತ್ತರಾಬಾದ್ರ        ಮೊಣಕಾಲು
ರೇವತಿ                  ಕಣಕಾಲು
ಆಶ್ವಿನಿ                   ಮಂಡಿ
ಭರಣಿ                   ಪಾದಗಳು
     ಈ  ನಕ್ಷತ್ರಗಳು  ಶರೀರದ  ಯಾವಭಾಗವನ್ನು  ಸೂಚಿಸುತ್ತದೆ ಯೋ  ಆ ಭಾಗಕ್ಕೆ  ಉಂಟಾಗಬಹುದಾದ  ಊನ,  ರೋಗ, ದೋಷಗಳನ್ನ ತಿಳಿಯಲು ಸಹಕಾರಿಯಾಗುತ್ತದೇ.   ಮೆಧಿನಿ  ಜ್ಯೋತಿಷ್ಯದಲ್ಲೂ  ಇದು  ಉಪಯೋಗಕ್ಕೆ  ಬರುತ್ತದೆ.

ದುಷ್ಟನಕ್ಷತ್ರ ಜನನ :--      
         ಅಶ್ವಿನಿ,  ರೋಹಿಣಿ,  ಪುಷ್ಯ,  ಆಶ್ಲೇಷ,  ಮಖಾ, ಉತ್ತರ,  ಚಿತ್ತ,  ಜ್ಯೇಷ್ಠ,  ಮೂಲ,  ಪೂರ್ವಾಷಾಢ,  ರೇವತಿ  ಪೂರ್ಣವಾಗಿ  ದೋಷ ಪೂರಿತವಾದ್ದರಿಂದ,  ಹಾಗೂ  ಭರಣಿ, ಕೃತಿಕಾ,  ಆರಿದ್ರ,  ಪುಬ್ಬ,  ವಿಶಾಖ,  ಪೂರ್ವಾಬಾದ್ರ  ಭಾಗಶಃ  ದೋಷವಿರುವುದರಿಂದ  ಶಾಂತಿಯನ್ನು  ಮಾಡಿಕೊಳ್ಳಬೇಕಾಗುತ್ತದೇ.
         ಜೇಷ್ಠ  ನಕ್ಷತ್ರದ ಕೊನೆಯ ಪಾದ,  ಮೂಲಾ ನಕ್ಷತ್ರದ  ಮೊದಲ ಪಾದವೂ ಸಹ ಅಶುಭ  ಫಲಗಳನ್ನೇ  ನೀಡುವುದಾಗಿದೆ.   ಈ  ಪಾದಗಳಲ್ಲಿ  ಜನನವಾದರೆ,  ಮಗು /  ತಂದೆ  ತಾಯಿಗಳಿಗೆ, ಒಟ್ಟಾರೆಯಾಗಿ  ಕುಟುಂಬದ   ಏಳಿಗೆಗೆ  ಹಾನಿಯಾಗುತ್ತದೆ.
          ವಿಶೇಷವಾಗಿ  ಜನ್ಮಕ್ಕೆ ಸಂಬಂಧಿಸಿದಂತೆ  ಆಶ್ವಿನಿ,  ಮಖಾ, ಮೂಲ  ನಕ್ಷತ್ರಗಳ  1  2  ನೆ  ಪಾದಗಳು  ಹಾಗೂ  ಆಶ್ಲೇಷ,  ಜ್ಯೇಷ್ಠ,  ರೇವತಿ 3, 4 ನೆ  ಪಾದಗಳಲ್ಲಿ ದೋಷವಿರುತ್ತದೆ. ಅದು  ಋಕ್ಷ ಸಂದಿ ಯಾಗುತ್ತದೆ.
          ಜ್ಯೇಷ್ಠಅಂತ್ಯದ  ಎರಡು  ಗಳಿಗೆ  ಮತ್ತು  ಮೂಲ  ನಕ್ಷತ್ರದ  ಮೊದಲೆರಡು ಗಳಿಗೆಯಲ್ಲಿ  ಶಿಶು  ಜನನವಾದರೆ  ಅಭುಕ್ತ ಮೂಲವೆನಿಸುತ್ತದೆ.  ಇಲ್ಲಿಯೂ ಸಹ  ಮಗು / ತಂದೆ ತಾಯಿ / ಕುಟುಂಬದ  ಏಳಿಗೆಗೆ  ಹಾನಿಯಾಗುವುದರಿಂದ  ಗೋಮುಖ  ಪ್ರಸವ  ಶಾಂತಿ ಹಾಗೂ  ನವಗ್ರಹಕ್ಕೆ  ಸಂಬಂಧಿಸಿದ    ಧಾನ್ಯಗಳನ್ನು  ದಾನ  ಮಾಡುವುದರಿಂದ  ಸ್ವಲ್ಪ  ಮಟ್ಟಿನ ಪರಿಹಾರವನ್ನು  ಕಂಡುಕೊಳ್ಳಬಹುದು.
          ಸ್ತ್ರೀ ಶಿಶುವನ  ಜನನಕ್ಕೆ  ಸಂಬಂಧಿಸಿದಂತೆ   ,  ಮೂಲಾನಕ್ಷತ್ರದಲ್ಲಿ ಹುಟ್ಟಿದರೆ  ಮಾವನಿಗೂ  ಆಶ್ಲೇಷಾದಲ್ಲಿ  ಹುಟ್ಟಿದರೆ  ಅತ್ತೆಗೂ  ಅಶುಭವೆಂದು  ಪ್ರತೀತಿಯಿದೆ.     ಆದರೆ  ಒಟ್ಟಾರೆ   ನಕ್ಷತ್ರವನ್ನು  ಪರಿಗಣಿಸದೆ  ಮೂಲಾನಕ್ಷತ್ರದ 4  ನೇ  ಪಾದ  ಹಾಗೂ.   ಆಶ್ಲೇಷಾದ  1  ನೆ  ಪಾದ  ಅಶುಭವೆಂದು  ಕೆಲವರ  ಅಭಿಪ್ರಾಯವಿದೆ.     ವಿಶಾಖ  ನಕ್ಷತ್ರದ  4  ನೇ  ಪಾದ  ಮೈದುನನಿಗೂ( ಗಂಡನ  ತಮ್ಮ ) ,  ಜ್ಯೇಷ್ಠ  ನಕ್ಷತ್ರದ  4  ನೆ  ಪಾದ  ಭಾವನಿಗೂ (  ಗಂಡನ  ಅಣ್ಣ )  ಅಶುಭವಾಗುತ್ತದೆ.  ಈ  ದೋಷವನ್ನು  ಕೇವಲ  ಸ್ತ್ರೀಯರ  ಜಾತಕದಲ್ಲಿ  ಮಾತ್ರ  ಪರಿಗಣಿಸಬೇಕು.
        ಶುಭಗ್ರಹಗಳ  ಸಂಯೋಗ,  ಶುಭದೃಷ್ಟಿ  ಇತ್ಯಾದಿಗಳು  ಜಾತಕದಲ್ಲಿದ್ದರೆ  ದೋಷವು  ಪರಿಣಾಮಕಾರಿಯಾಗುವುದಿಲ್ಲ.

ಬಾಲಾರಿಷ್ಠ  ನಕ್ಷತ್ರಗಳು :--
          ಆಶ್ವಿನಿ            2,  4 ನೇ  ಪಾದ
          ಭರಣಿ.            2 ನೇ  ಪಾದ
          ಚಿತ್ತ.               2 ನೇ  ಪಾದ
          ವಿಶಾಖ           4 ನೇ  ಪಾದ
          ಕೃತಿಕಾ           3 ನೇ  ಪಾದ
          ರೋಹಿಣಿ         1, 4 ನೇ  ಪಾದ
          ಮೃಗಶಿರ.       1 ನೇ  ಪಾದ
          ಪುಷ್ಯ.            1 ನೇ ಪಾದ
          ಮಖಾ.           2 ನೇ ಪಾದ
          ಉತ್ತರ           2 ನೇ ಪಾದ
          ಹಸ್ತ.              3, 4 ನೇ ಪಾದ
          ಅನುರಾಧ       3 ನೇ ಪಾದ
          ಜ್ಯೇಷ್ಠ             3,  4 ನೇ ಪಾದ
          ಮೂಲ            2  3  ನೇ  ಪಾದ
          ಉತ್ತರಾಷಾಢ   2 ನೇ  ಪಾದ
          ಧನಿಷ್ಠ.              2 ನೇ  ಪಾದ
          ಶತಭಿಷ.           ನಾಲ್ಕೂ  ಪಾದಗಳು
          ಉತ್ತರಾಬಾದ್ರ.  4 ನೇ  ಪಾದ
         ಇವುಗಳು  ಬಾಲಾರಿಷ್ಟವನ್ನು  ತರುತ್ತದೆ.
ಇನ್ನು. ಮರಣದಲ್ಲಿ  ನಕ್ಷತ್ರಗಳನ್ನು  ಹೇಗೆ.ಪರಿಗಣಿಸಬೇಕು  ಎಂಬುದನ್ನು  ನೋಡೋಣ
          ಧನಿಷ್ಠ  ಪಂಚಕವೆಂದು ಖ್ಯಾತಿಯಾಗಿರುವ  ಧನಿಷ್ಠ,  ಶತಭಿಷ, ಪೂರ್ವಾಬಾದ್ರ,  ಉತ್ತರಾಬಾದ್ರ,  ರೇವತಿ,   ಈ  ಐದೂ  ನಕ್ಷತ್ರಗಳಲ್ಲಿ ಮೃತಿ ಹೊಂದಿದರೆ,  ಮೃತಿ ಹೊಂದಿದ ಸ್ಥಳವನ್ನು  5  ತೊಂಗಳ ಕಾಲ  ಬಿಡಬೇಕು.
           ಇನ್ನು  ತ್ರಿಪಾದಿ  ನಕ್ಷತ್ರಗಳಾದ. ಕೃತಿಕಾ, ಪುನರ್ವಸು,  ಉತ್ತ ರ  ವಿಶಾಖ, ಉತ್ತರಾಷಾಢ,  ಪೂರ್ವಾಬಾದ್ರ  ನಕ್ಷತ್ರಗಳಲ್ಲಿ,  ಪೂರ್ವಾಬಾದ್ರ ವೊಂದನ್ನು  ಬಿಟ್ಟು  ಉಳಿದ  ನಕ್ಷತ್ರಗಳಲ್ಲಿ  ಮೃತರಾದರೆ,  ಮೃತಸ್ಥಳವನು 3  ತಿಂಗಳುಗಳ  ಕಾಲ  ಬಿಡಬೇಕು.( ಪೂರ್ವಾಬಾದ್ರ  ನಕ್ಷತ್ರವು  ಪಂಚಕ  ನಕ್ಷತ್ರಗಳಲ್ಲಿ  ಸೇರುತ್ತದೆ.)

ತಾರಾಬಲ  :--
         ಪ್ರತಿಯೋಂದು  ಕಾರ್ಯದಲ್ಲಿ. ತಾರಾಬಲವು  ಪ್ರಮುಖ ಪಾತ್ರವನ್ನು  ವಹಿಸುತ್ತದೆ.   ಜನನ  ನಕ್ಷತ್ರಕ್ಕೆ  ಸಂಭಂಧಿಸಿದಂತೆ  ಯಾವ ನಕ್ಷತ್ರಗಳಲ್ಲಿ ಯಾವ ಫಲ  ಉಂಟಾಗುತ್ತದೆ  ಎಂದು  ನೋಡಿದಾಗ.....
          ನಮ್ಮ  ಪ್ರಾಜ್ಞರಾದ  ಮಹಾಮುನಿಗಳು  ಗುರುತಿಸಿರುವಂತೆ  9  ರೀತಿಯಾದ  ತಾರಾಬಲವು ಇರುತ್ತದೆ.
1,  ಜನ್ಮತಾರೆ
2,  ಸಂಪತ್ ತಾರೆ
3, ವಿಪತ್ ತಾರೆ
4,  ಕ್ಷೇಮ ತಾರೆ
5, ಪ್ರತ್ಯಕ್ ತಾರೆ
6, ಸಾಧನ ತಾರೆ
7, ನೈಧನ ತಾರೆ ( ವಧ ತಾರೆ)
8, ಮಿತ್ರತಾರೆ
9, ಅತಿಮಿತ್ರ ತಾರೆ ( ಪರಮ ಮಿತ್ರ ತಾರೆ)
    
         ಈ  ತಾರೆಗಳಲ್ಲಿ. 2,  4,  6,  8 ನೆ  ತಾರೆಗಳು  ಶುಭವೆಂದೂ,  ಉಳಿದವು  ಅಶುಭವೆಂದೂ, 9  ನೆ  ತಾರೆಯಾದ ಅತಿಮಿತ್ರ ತಾರೆ  ಸಂದರ್ಭಾನುಸಾರ  ಶುಭವೆಂತಲೂ  ಪರಿಗಣಿಸಲಾಗಿದೆ.
          ತಾರಾಬಲವು  ವಧೂವರರ  ಸಾಲಾವಳಿಯಲ್ಲಿ  ಪ್ರಾಮುಖ್ಯತೆಯನ್ನು  ಪಡೆಯುತ್ತದೆ.  ಮಹೂರ್ತ  ವಿಚಾರದಲ್ಲಿ  ಲಗ್ನಕ್ಕೆ  ತಾರಾಬಲ ವಿಲ್ಲದಾಗ  ಅನಿವಾರ್ಯ  ಸಂದರ್ಭಗಳಲ್ಲಿ  ತಾರಾಶಾಂತಿ  ದಾನದ  ಮೂಲಕ ಪರಿಹಾರ ಮಾಡಿಕಳ್ಳ್ಲಬಹುದು  ಎಂದು  ತಿಳಿಸಲಾಗಿದೆ.   ತಾರಾಬಲವು   ಜನ್ಮ  ನಕ್ಷತ್ರ  ಸಂಭಂದಿಯಾಗಿರುತ್ತದೆ.  ಅಂದರೆ  ಯಾವ  ನಕ್ಷತ್ರದಲ್ಲಿ  ಜನನವಾಗಿರುತ್ತೇವೆಯೋ  ಅದೇ  ಜನ್ಮ ತಾರೆ,  ಮುಂದಿನದು  ಸಂಪತ್ ತಾರೆ.....
ಈ  ರೀತಿಯಾಗಿ  ಮುಂದುವರೆಯುತ್ತದೆ.
           ಪ್ರತಿಯೊಂದು  ನಕ್ಷತ್ರವೂ ನಾಲ್ಕು ಪಾದಗಳನ್ನು  ಹೊಂದಿರುತ್ತದೆ  ಎಂಬುದನ್ನು  ತಿಳಿದಿದ್ದೇವೆ ,  ಕೆಲವು ನಕ್ಷತ್ರದಲ್ಲಿ  ಹುಟ್ಟಿದರೆ  ದೋಷ ಎಂಬುದನ್ನೂ  ಅರಿತಾಯ್ತು,   ಆದರೆ  ದೋಷವಿರುವ  ನಕ್ಷತ್ರಗಲ್ಲಿ  ಎಲ್ಲಾ  ಪಾದಗಳೂ  ದೋಷವನ್ನು  ಹೊಂದಿರುವುದಿಲ್ಲ,  ಆದ್ದರಿಂದ  ಅದರ ಬಗೆಗೆ  ತಿಳಿಯಲು  ಪ್ರಯತ್ನಿಸೋಣ......
1) ಆಶ್ವಿನಿ :--  1 ನೆ ಪಾದ  ಮಗು ಮತ್ತು  ತಂದೆಗೆ  ದೋಷ,  4 ನೇ ಪಾದ  ಸಾಮಾನ್ಯ ದೋಷ.
2)ಭರಣಿ :--  1ನೆ ಪಾದ .ಸಾಮಾನ್ಯ  ದೋಷ,  ಗಂಡು ಮಗುವಾದರೆ  ತಂದೆಗೆ,  ಹೆಣ್ಣುಮಗುವಾದರೆ  ತಾಯಿಗೆ  ದೋಷ.
3) ಕೃತಿಕಾ  :-- 3 ನೇ ಪಾದವಾದರೆ, ಗಂಡಾದರೆ  ತಂದೆಗೆ,  ಹೆಣ್ಣಾದರೆ .ತಾಯಿಗೆ .ದೋಷ,  4  ನೇ  ಪಾದ  ತಾಯಿಗೆ  ಮಾತ್ರ  ದೋಷ.
4) ರೋಹಿಣಿ  :--  1 ನೇ  ಪಾದ ಸೋದರ ಮಾವನ  ತಾಯಿ( ಅಜ್ಜಿ),  2 ನೆ ಪಾದ  ಸೋದರ ಮಾವನ  ತಂದೆ ( ಅಜ್ಜ) , ಉಳಿದವು  ಸೋದರ ಮಾವನಿಗೆ  ತೊಂದರೆ.
5) ಮೃಗಶಿರ :--  ಯಾವುದೇ  ದೋಷವಿಲ್ಲ
6) ಆರಿದ್ರ :-- 4 ನೆ ಪಾದವಾದರೆ  ತಾಯಿಗೆ  ದೋಷ
7) ಪುನರ್ವಸು :--  ಯಾವುದೇ  ದೋಷವಿಲ್ಲ
8) ಪುಷ್ಯ:-- 1 , 4, ಸಾಮಾನ್ಯ  ದೋಷ.  2,  3,  ನೇ  ಪಾದ ಹಗಲಾದರೆ ತಂದೆಗೆ,  ರಾತ್ರಿಯಾದರೆ .ತಾಯಿಗೆ   ದೋಷ.
9) ಆಶ್ಲೇಷ :-- 2 ನೇ ಪಾದ ಹಣಕಾಸು,  ಮಗು,  3  ನೆ  ಪಾದ ತಾಯಿ,  4 ನೇ  ಪಾದ ತಂದೆಗೆ  ದೋಷ.
10) ಮಖಾ :-- 1  ನೇ  ಪಾದ ತಂದೆ,  ಮಗು,  2  3  ನೇ ಪಾದ  ಗಂಡಾದರೆ  ತಂದೆಗೆ ,  ಹೆಣ್ಣಾದರೆ  ತಾಯಿಗೆ ದೋಷ.
11)  ಪುಬ್ಬ  :--  4 ನೇ  ಪಾದ  ತಾಯಿಗೆ  ದೋಷ
12) ಉತ್ತರ :-- 1,  4  ನೇ  ಪಾದ  ಗಂಡಾದರೆ  ತಂದೆಗೆ,  ಹೆಣ್ಣಾದರೆ  ತಾಯಿಗೆ  ದೋಷ.
13) ಹಸ್ತ :--  3 ನೇ  ಪಾದವಾದರೆ  ಗಂಡಾದರೆ  ತಂದೆಗೆ,  ಹೆಣ್ಣಾದರೆ  ತಾಯಿಗೆ  ದೋಷ
14)  ಚಿತ್ತ :-- 1 ನೆ ಪಾದ , ಹೆಣ್ಣಾದರೆ ತಾಯಿಗೆ,  ಗಂಡಾದರೆ  ತಂದೆಗೆ,  4 ನೆ ಪಾದ  ಸಾಮಾನ್ಯ  ದೋಷ.
15)  ಸ್ವಾತಿ :--  ಯಾವುದೇ  ದೋಷವಿಲ್ಲ.
16 )  ವಿಶಾಖ :-- 4 ನೇ ಪಾದ  ಹೆಣ್ಣಾದರೆ ಗಂಡನ  ತಮ್ಮನಿಗೆ  ದೋಷ.
17)  ಅನೂರಾಧ  :--  ಯಾವುದೇ  ದೋಷವಿಲ್ಲ.
18) ಜ್ಯೇಷ್ಠ :--  1ನೇ  ಪಾದ ತಾಯಿಯ  ಸೌಖ್ಯಕ್ಕೆ  ಹಾನಿ, 2ನೇಪಾದ ಸೋದರ ಮಾವನಿಗೆ .ಅರಿಷ್ಠ,  3 ನೇ  ಪಾದ  ತಾಯಿ ಮತ್ತು  ದೊಡ್ಡಪ್ಪನಿಗೆ  ಹಾನಿ,  4 ನೇ  ಪಾದ ತಂದೆ ಮತ್ತು  ದೊಡ್ಡಪ್ಪನಿಗೆ  ಹಾನಿ.
ಹೆಣ್ಣಾದರೆ  4  ನೇ  ಪಾದ ಗಂಡನ  ಅಣ್ಣನಿಗೆ  ಹಾನಿ.
19) ಮೂಲ :-- 1 ನೇ  ಪಾದ  ತಂದೆಗೆ, 2 ನೇ ಪಾದ  ತಾಯಿಗೆ,  3 ನೇ ಪಾದ  ಹಣಕಾಸಿಗೆ  4 ನೇ  ಪಾದ  ಹೆಣ್ಣಾದರೆ  ಗಂಡನ  ತಂದೆಗೆ .ದೋಷ.
20) ಪೂರ್ವಾಷಾಢ  :--  3  ನೆ  ಪಾದ  ಗಂಡಾದರೆ. ತಂದೆಗೆ  ಹೆಣ್ಣಾದರೆ  ತಾಯಿಗೆ  ದೋಷ.
21) ಉತ್ತರಾಷಾಢ :--  ಯಾವುದೇ  ದೋಷವಿಲ್ಲ
22) ಶ್ರವಣ :-- ಯಾವುದೇ ದೋಷವಿಲ್ಲ
23) ಧನಿಷ್ಠ :--  ಯಾವುದೇ ದೋಷವಿಲ್ಲ
24) ಶತಭಿಷ :--  ಯಾವುದೇ ದೋಷವಿಲ್ಲ
25) ಪೂರ್ವಾಬಾದ್ರ :--  4ನೇ ಪಾದ  ಮಗುವಿಗೆ ತೊಂದರೆ
26)ಉತ್ತರಾಬಾದ್ರ :--  ದೋಷವಿಲ್ಲ
27) ರೇವತಿ :-- 4ನೇ  ಪಾದವಾದರೆ  ತಂದೆಗೆ  ದೋಷ.
          ಮೇಲ್ಕಂಡ  ದೋಷಗಳಿಗೆ ಯುಕ್ತವಾಗ  ಶಾಂತಿ  ಕರ್ಮಾದಿಗಳನ್ನು  ಆಚರಿಸಿಕೊಂಡರೆ  ಸ್ವಲ್ಪ ಮಟ್ಟಿನ ದೋಶ  ಪರಿಹಾರವಾಗುತ್ತದೆ.
           ಉತ್ತರ ನಕ್ಷತ್ರಕ್ಕೆ 2  ತಿಂಗಳು,  ಪುಷ್ಯನಕ್ಷತ್ರಕ್ಕೆ  3  ತಿಂಗಳು,  ಚಿತ್ತಕ್ಕೆ  6  ತಿಂಗಳು,  ಜ್ಯೇಷ್ಠ ನಕ್ಷತ್ರಕ್ಕೆ  ಒಂದು ವರ್ಷ  ನಾಲ್ಕು ತಿಂಗಳು,  ಪೂರ್ವಾಷಾಡಕ್ಕೆ  8 ತಿಂಗಳು,   ಆಶ್ಲೇಷ ನಕ್ಷತ್ರಕ್ಕೆ  9  ತಿಂಗಳು,  ಮೂಲ ನಕ್ಷತ್ರಕ್ಕೆ  9  ತಿಂಗಳು   ದೋಷವನ್ನುಂಟು ಮಾಡುವ  ಕಾಲವಾಗಿರುತ್ತದೆ.
            ವಿಶೇಷವಾಗಿ  ಸೋದರ ಮಾವಂದಿರಿಗೆ  ದೋಷವೆಂದು ನಮೂದಿಸಿರುವ  ವಿಷಯದಲ್ಲಿ  ಯಾವದಿನ  ಅಷ್ಟಮಿ  ತಿಥಿಯಲ್ಲಿ  ರೋಹಿಣಿ  ನಕ್ಷತ್ರ  ಬರುತ್ತದೋ  ಆ ದಿನಗಳಲ್ಲಿ  ಮಾತ್ರ  ದೋಷಪ್ರದವಾಗಿರುತ್ತದೆ.
ಪುರಾಣಗಳಲ್ಲಿ  ನಕ್ಷತ್ರಗಳು :--

            ಪುರಾಣದ  ಪ್ರಕಾರ  ದಕ್ಷನು ತನ್ನ  27  ಜನ  ಹೆಣ್ಣುಮಕ್ಕಳನ್ನು  ಚಂದ್ರನಿಗೆ  ವಿವಾಹ  ಮಾಡಿಕೊಡುತ್ತಾನೆ,  ತನ್ನ  ಮಕ್ಕಳನ್ನು  ಚಂದ್ರನು  ಪತ್ನಿಯರನ್ನಾಗಿ  ಸ್ವೀಕರಿಸಿದ  ನಂತರ  ಎಲ್ಲರನ್ನೂ  ಸಮನಾಗಿ  ಕಾಣಬೇಕೆಂದು  ದಕ್ಷನು  ಚಂದ್ರನಿಗೆ   ಶರತ್ತನ್ನು  ವಿಧಿಸುತ್ತಾನೆ.  ಆದರೂ  ಚಂದ್ರನು  ರೋಹಿಣಿಯನ್ನು  ಹೆಚ್ಚು  ಪ್ರೀತಿಸಿ  ಉಳಿದ  ಪತ್ನಿಯರನ್ನು  ಕಡೆಗಣಿಸುತ್ತಾನೆ.   ಇದರಿಂದ  ಕೋಪಗೊಂಡ  ಚಂದ್ರನ  ಪತ್ನಿಯರು  ತಂದೆಯಾದ  ದಕ್ಷನಲ್ಲಿ  ತಮ್ಮ  ದುಃಖವನ್ನು  ತೋಡಿಕೊಳ್ಳುತ್ತಾರೆ.    ಕ್ರೋಧಿತನಾದ  ದಕ್ಷನು  ಚಂದ್ರನನ್ನು .ಶಪಿಸುತ್ತಾನೆ.   ಇದರಿಂದ  ಚಂದ್ರನು  ತನ್ನ  ಹೊಳಪನ್ನು  ಕಳೆದುಕೊಳ್ಳುತ್ತಾನೆ.   ಇದುವೇ  ಚಂದ್ರನ   ಕಳೆಗುಂಡಿದ  ಮತ್ತು  ಪ್ರಕಾಶ ರಹಿತ  ನೋಟದ  ಹಿನ್ನೆಲೆಯಾಗಿದೆ.
           ಶಾಸ್ತ್ರದ  ಪ್ರಕಾರ  ಚಂದ್ರನು  ಪ್ರತಿದಿನ  ತನ್ನ  ಪತ್ನಿಯರನ್ನು  ಭೇಟಿ  ಮಾಡಲು  ಹೋಗುತ್ತಾನೆ( ಪ್ರತಿದಿನ  ಒಂದೊಂದು  ನಕ್ಷತ್ರದಲ್ಲಿ  ಸಂಚಾರ).  ಆದರೆ  ನಕ್ಷತ್ರಗಳು  ತಮ್ಮ  ಜಾಗವನ್ನು  ಬಿಟ್ಟು  ಕದಲುವುದಿಲ್ಲ.  ಕ್ಷರ  ಎಂದರೆ  ಚಲಿಸದ  ಎಂಬರ್ಥವನ್ನು  ನೀಡುತ್ತಿದ್ದು,  ಚಲಿಸದೇ  ಇರುವಂತವುಗಳು  ನಕ್ಷತ್ರಗಳು  ಎಂದಾಗಿದೆ.   ಹಿಂದೂ ಗ್ರಂಥಗಳ  ಪ್ರಕಾರ   ನಕ್ಷತ್ರವು  ಕಡಲದೇ  ನಿಂತಲ್ಲೇ  ಇರುವಂತಹವುಗಳಾಗಿದ್ದು  ತಮ್ಮ  ಪತಿ  ಚಂದ್ರನಿಗಾಗಿ   ತಾಳ್ಮೆಯಿಂದ  ಕಾಯುತ್ತಿವೆ  ಎಂದಾಗಿದೆ.
ವೈಜ್ಞಾನಿಕ ವಾಗಿ  ನಕ್ಷತ್ರಗಳು :--
           ವಿಜ್ಞಾನದ  ಪ್ರಕಾರ,  ನಕ್ಷತ್ರಗಳು  ಗ್ರಹಗಳಂತೆ  ಸೂರ್ಯಮಂಡಲದಲ್ಲಿ  ಇಲ್ಲ. ಅಥವಾ  ಪ್ರಭಾವ  ಬೀರುವಷ್ಟು  ಹತ್ತಿರದಲ್ಲೂ  ಇಲ್ಲ.  ಅನೇಕ  ಕೋಟಿ ಕೋಟಿ  ಮೈಲುಗಳ  ದೂರದಲ್ಲಿದೇ.  ಅವುಗಳಿಂದ  ಹೊರಟ  ಬೆಳಕು  ಭೂಮಿಯನ್ನು  ತಲುಪಲು  ಅನೇಕ  ಕೋಟಿ  ವರ್ಷಗಳು  ಬೇಕು.  ಮೂಲಾ  ನಕ್ಷತ್ರದಿಂದ  ಹೊರಟ  ಬೆಳಕು  ಭೂಮಿಯನ್ನು  ತಲುಪಲು  70  ವರ್ಷಗಳು ಬೇಕಂತೆ !!!!
             ಇಂದಿನ  ವಿಜ್ಞಾನದ  ಪ್ರಕಾರ  ನಕ್ಷತ್ರಗಳು  ನಿರ್ಜೀವ,  ಅಗಾಧ  ಗಾತ್ರದ ಬೆಂಕಿಯ  ಉಂಡೆಗಳು, ಇದು  ಮಾನವನ  ಜೀವಿತದ  ಮೇಲೆ   ಪರಿಮಾಣ  ಬೀರುವ  ಸಾಧ್ಯತೆ  ಇಲ್ಲ  ಎನ್ನುತ್ತದ.ೆ
          ಈ  ವಿಶ್ವದ. ಸೃಷ್ಟಿ 1200 -- 2000  ಕೋಟಿ ವರ್ಷಗಳ  ಹಿಂದೆ  ಪ್ರಾರಂಭವಾಗಿರಬೇಕೆಂದು  ವಿಜ್ಞಾನಿಗಳು  ತರ್ಕಿಸಿದ್ದಾರೆ.  ಈ  ಆರಂಭದ   ಕ್ಷಣಗಳನ್ನು  " ಮಹಾಸ್ಫೋಟ "  ಎಂದು  ಕರೆದಿದ್ದಾರೆ.  ಆ  ಸೂಕ್ಸ್ಮಾತಿ ಸೂಕ್ಷ್ಮ  ಉಪಕಣ ಪ್ರಭಾನು  ಫೋಟಾನ್ ( ಕ್ರೋಟಾನಿ ನ  ಒಳಗಿನ  ಬೀಜಗಳಲ್ಲೊಂದು)  ಸ್ಪೋಟಗೊಂದು  ಕೆಲವೇ  ಸೆಕೆಂಡಿನಲ್ಲಿ. ಅಗಾಧ .ಶಾಖದಿಂದ ಕುದಿದು  30  ನಿಮಿಷಗಳಲ್ಲಿ  ಕುದಿಯುತ್ತಿರುವ   ದೊಡ್ಡ  ಪ್ಲಾಸ್ಮಾದ  ಉಂಡೇಯಾಗಿ  ಕ್ರಮೇಣ  ಶಾಖವನ್ನು  ಕಡಿಮೆ ಮಾಡಿಕೊಳ್ಳುತ್ತಾ  ಈ  ವಿಶಾಲ  ವಿಶ್ವದ  ಮತ್ತು  ಅದರಲ್ಲಿ ತುಂಬಿರುವ  ಕೋಟಿ ಕೋಟಿ  ಬ್ರಹ್ಮಾ0ಡಗಳ  ರಚನೆಗೆ  ಕಾರಣವಾಯ್ತು  ಒಂದೊಂದು  ಬ್ರಹ್ಮಾ0ಡದಲ್ಲೂ  ಕೋಟಿ ಕೋಟಿ  ನಕ್ಷತ್ರಗಳಿವೆ.  ನಾವಿರುವ  ಅಂದರೆ ನಮ್ಮ  ಸೂರ್ಯ ಅಥವಾ  ಸೌರಮಂಡಲ  ವಿರುವ  ಈ  ಬ್ರಹ್ಮಾ0ಡಕ್ಕೆ ಆಕಾಶ ಗ0ಗೆ   ಅಥವಾ  ಕ್ಷೀರ ಪಥ ಎಂದು  ಕರೆಯುವರು.    ಈ  ನಮ್ಮ ಕ್ಷೀರ ಪಥವೆಂಬೋ  ಬ್ರಹ್ಮಾ0ಡದಲ್ಲಿ  ಸುಮಾರು  200  ರಿಂದ 400  ಶತಕೋಟಿಗಳ  ನಡುವಿನ  ಸಂಖ್ಯೆಯ  ನಕ್ಷತ್ರಗಳಿವೆ.
           ನಕ್ಷತ್ರವೊಂದು  ಹುಟ್ಟುವುದು  ಅನೇಕ  ಸಹಸ್ತ್ರ  ಸಂವತ್ಸರದ  ಕ್ರಿಯೆ. ಸೂರ್ಯನೇ  ಭೂಮಿಗೆ  ಹತ್ತಿರದ  ನಕ್ಷತ್ರ.  ಒಂದು  ಮಧ್ಯಮ  ಗಾತ್ರದ,  ತಾನೇ  ತನ್ನ ಗುರುತ್ವ ದಿಂದಲೇ  ಒಟ್ಟುಗೂಡಿದ. ಪ್ಲಾಸ್ಮಾದ  ಹೊಳೆಯುವ  ಗೋಲ.   ಇತರ ಅನೇಕ  ನಕ್ಷತ್ರಗಳು  ಭೂಮಿಯಿಂದ  ಬರಿಗಣ್ಣಿಗೆ. ರಾತ್ರಿ  ಸಮಯದಲ್ಲಿ. ಅಪಾರ  ವೇಗದ  ಚಲನೆ ಇದ್ದರೂ. ಹೊಳೆಯುವ ಆಕಾಶದಲ್ಲಿ ಸ್ಥಿರ  ಬಿಂದುಗಳಂತೆ  ಕಾಣಿಸುತ್ತದ.ೆ.  ಹಾಗೂ ಅವು  ಭೂಮಿನಿಂದ  ಅತೀವ  ದೂರ  ಇದೆ......
                         ✍   Dr|| B N ಶೈಲಜಾ  ರಮೇಶ್

ನಕ್ಷತ್ರಗಳ ಬಗೆಗೆ ಅಧ್ಯಯನ

                            -ಹರಿಃ ಓಂ
                  ಶ್ರೀ ಗಣೇಶಾಯ ನಮಃ
                   ಶ್ರೀ ಗುರುಭ್ಯೋನಮಃ
Picture source: Internet/ social media
---:  ನಕ್ಷತ್ರಗಳ  ಬಗೆಗೆ  ಅಧ್ಯಯನ  :---
        ಜ್ಯೋತಿಷ ಶಾಸ್ತ್ರದ  ಅಧ್ಯಯನದಲ್ಲಿ  ಮುಖ್ಯ  ಪಾತ್ರವನ್ನು  ವಹಿಸುವ  ರಾಶಿಗಳು  ಗ್ರಹಗಳ  ಗುಣಧರ್ಮದ  ಬಗ್ಗೆ  ಅಧ್ಯಯನವನ್ನು  ಪೂರೈಸಿ  ಈಗ  ನಕ್ಷತ್ರಗಳೆಡೆಗೆ  ಸಾಗುತ್ತಿದ್ಸೇವೆ.
         ನಕ್ಷತ್ರಗಳು,  ಗ್ರಹಗಳು,  ರಾಶಿಗಳು  ಜ್ಯೋತಿಶ್ಶ್ಶಾಸ್ತ್ರದ  ಜೀವಾಳವೆ  ಆಗಿದೆ.  ಇವುಗಳ
ಬಗೆಗಿನ  ಅಧ್ಯಯನ  ಆಮೂಲಾಗ್ರವಾಗಿ  ಎಷ್ಟರಮಟ್ಟಿಗೆ  ಮಾಡಿರುತ್ತೇವೆಯೋ  ಆ  ಮಟ್ಟದಲ್ಲಿ  ನಿಖರವಾದ  ಫಲ  ನಿರೂಪಣೆಗೆ  ಸಹಕಾರಿ ಯಾಗುತ್ಯದೆ.
         ಆದ್ದರಿಂದ  ಈ  ಮಾರ್ಗದಲ್ಲಿ  ನಕ್ಷತ್ರಗಳ  ಬಗೆಗೆ  ತಿಳಿದುಕೊಳ್ಳೋಣ........
ನಕ್ಷತ್ರ  :--   ನ   -  ಕ್ಷತ್ರ  =  ಕ್ಷೇತ್ರವಿಲ್ಲ ದಿರುವುದು,  ಚಲನೆಯಿಲ್ಲದಿರುವುದು, ಎಂದರ್ಥ.
        ಸ್ವಯಂ ಪ್ರಕಾಶವಾಗಿ  ಆಕಾಶದಲ್ಲಿ ಮಿನುಗುತ್ತಿರುವುದೇ ನಕ್ಷತ್ರಗಳು,  ಇವು  ತಮ್ಮ  ಶಾಖ ಮತ್ತು  ಬೆಳಕನ್ನು  ಎಲ್ಲಾ ಕಡೆಗೂ  ಹೊರಸೂಸುತ್ತಾ  ಆಕಾಶದಲ್ಲಿ ಚಿಕ್ಕಿಗಳಂತೆ  ಕಾಣುತ್ತವೆ.  ಧಗದಗಿಸುವ  ವಿಪರೀತ  ಕಾವಿನ  ಅನಿಲಗಳುಳ್ಳ  ಬಹಳ  ದೊಡ್ಡ  ಗೋಳಗಳೇ  ನಕ್ಷತ್ರಗಳು.
         ಗ್ರಹಗಳಷ್ಟು  ಗಾತ್ರವಿರುವ  ನಕ್ಷತ್ರಗಳನ್ನು  ಕುಬ್ಜ  ನಕ್ಷತ್ರಗಳು  ಎನ್ನುತ್ತಾರೆ.  ಗ್ರಹಗಳಿಗಿಂತಲೂ  ಬಹಳ  ದೊಡ್ಡದಾದ  ನಕ್ಷತ್ರಗಳನ್ನು  ಜೇಷ್ಠ  ನಕ್ಷತ್ರಗಳು ಎನ್ನುತ್ತಾರೆ,  ಸೂರ್ಯನಿಗಿಂತಲೂ  ದೊಡ್ಡದಾದ  ನಕ್ಷತ್ರಗಳನ್ನು ದೈತ್ಯ ನಕ್ಷತ್ರಗಳು  ಎನ್ನುತ್ತಾರೆ. (  ರೋಹಿಣಿ ನಕ್ಷತ್ರ  ಸೂರ್ಯನಿಗಿಂತ 36 ಪಟ್ಟು  ದೊಡ್ಡದಿದೇ)
          ಆಕಾಶದಲ್ಲಿ  ಅಪಾರವಾದ , ಅಸಂಖ್ಯಾತ ನಕ್ಷತ್ರಗಳನ್ನು ಕಾಣುತ್ತೇವೆಯಾದರೂ,  ಜ್ಯೋತಿಷ್ಯ ಶಾಸ್ತ್ರದ ಲ್ಲಿ 27  ನಕ್ಷತ್ರಗಳನ್ನು  ಗುರುತಿಸಿದ್ದಾರೆ.
ಅವುಗಳೆಂದರೆ......
ಆಶ್ವಿನಿ
ಭರಣಿ
ಕೃತಿಕಾ
ರೋಹಿಣಿ
ಮೃಗಶಿರ
ಆರಿದ್ರ
ಪುನರ್ವಸು
ಪುಷ್ಯ
ಆಶ್ಲೇಷ
ಮಖಾ 
ಪುಬ್ಬ
ಉತ್ತರ
ಹಸ್ತ
ಚಿತ್ತ
ಸ್ವಾತಿ
ವಿಶಾಖ
ಅನುರಾಧ
ಜ್ಯೇಷ್ಠ
ಮೂಲ
ಪೂರ್ವಾಷಾಢ
ಉತ್ತರಾಷಾಢ
ಶ್ರವಣ
ಧನಿಷ್ಠ
ಶತಭಿಷ
ಪೂರ್ವಾಬಾದ್ರ
ಉತ್ತರಾಬಾದ್ರ
ರೇವತಿ...
          27 ನಕ್ಷತ್ರವೆಂದು  ಗುರುತಿಸಿರುವುದು ನಕ್ಷತ್ರಗಳ  ಒಂದೊಂದು  ಸಮೂಹ .ಅಥವಾ  ಗುಂಪನ್ನೇ  ಹೊರತು , ಒಂದು ನಕ್ಷತ್ರವನ್ನಲ್ಲ.   ನಿದರ್ಶನವಾಗಿ  ನೋಡಿದಾಗ ಕ್ರಮವಾಗಿ  ನಕ್ಷತ್ರ  ಹಾಗೂ. ಅವುಗಳು  ಹೊಂದಿರುವ  ನಕ್ಷತ್ರಗಳ  ಸಂಖ್ಯೆ  ಹೀಗಿದೆ...
ಆಶ್ವಿನಿ ---------- ----- 3
ಭರಣಿ ----------------- 3
ಕೃತಿಕಾ ----------------6
ರೋಹಿಣಿ -------------5
ಮೃಗಶಿರ -------------3
ಆರಿದ್ರ  ----------------1
ಪುನರ್ವಸು -----------5
ಪುಷ್ಯ ------------------3
ಆಶ್ಲೇಷ ----------------೬
ಮಖಾ ----------------೫
ಪುಬ್ಬ ------------------4
ಉತ್ತರ ----------------4
ಹಸ್ತ --------------------5
ಚಿತ್ತ ------------------- 1
ಸ್ವಾತಿ. ----------------1
ವಿಶಾಖ  --------------5
ಅನುರಾಧ  ----------6
ಜ್ಯೇಷ್ಠ. ----------------3
ಮೂಲ  ---------------6
ಪೂರ್ವಾಷಾಢ -----4
ಉತ್ತರಾಷಾಢ ------4
ಶ್ರವಣ ----------------೩
ಧನಿಷ್ಠ  ----------------4
ಶತಭಿಷ  ----------- 100
ಪೂರ್ವಾಬಾದ್ರ ---- 4
ಉತ್ತರಾಬಾದ್ರ  ---- ೪
ರೇವತಿ  ---------------೩೨
          ನಮ್ಮ  ಪ್ರತಿಯೊಂದು  ಅಧ್ಯಯನಕ್ಕೆ  ಭೂಮಿಯೇ  ಕೇಂದ್ರವಾಗಿರುವುದರಿಂದ  ಭೂಮಿಯ ಮೇಲೆ  ಪ್ರಭಾವವನ್ನುಂಟು  ಮಾಡುವ  ನಕ್ಷತ್ರಗಳ  ಸಮೂಹವನ್ನು ಮಾತ್ರ  ನಮ್ಮ  ಸನಾತನ  ಮುನಿಗಳು  ಗುರ್ತಿಸಿ,  ಅವುಗಳ  ಗುಣ ಸ್ವಭಾವವನ್ನು  ಅಧ್ಯಯನ  ಮಾಡಿರುತ್ತಾರೆ.
          ಜ್ಯೋತಿಷ್ಯ  ಶಾಸ್ತ್ರದ ಲ್ಲಿ  ಮೊದಲ ಸ್ಥಾನ  ನಕ್ಷತ್ರಗಳದ್ದಾಗಿದ್ದು,  ಸಕಲ  ಜೀವ ಜಂತುಗಳಿಗೂ  ಬಲಾಬಲಗಳನ್ನು  ನೀಡುವ  ಪ್ರಮುಖ  ಸಾಧನವಾಗಿದೆ.  ಜೀವಿಯು  ಜನಿಸುವ  ಸಮಯಕ್ಕೆ  ಇರುವ  ನಕ್ಷತ್ರದ  ಆಧಾರದ ಮೇಲೆ ಆತನ  ಜೀವಿತದಲ್ಲಿ  ಆಗುವ  ಸುಖ - ದುಃಖ,  ಕಷ್ಟ -  ನಷ್ಟಗಳು  ಮತ್ತು .ಆಗುಹೋಗುಗಳು  ವ್ಯಕ್ತವಾಗುತ್ತದೆ.
          ಈ  27 ನಕ್ಷತ್ರಗಳು  ಭಚಕ್ರದಲ್ಲಿ  ಯಾವ ರೀತಿಯಲ್ಲಿ  ಹಂಚಿಕೆಯಾಗಿವೆ  ಎಂಬುದನ್ನು  ತಿಳಿದುಕೊಳ್ಳೋಣ.
        ಕಾಂತಿವೃತ್ತ (  ಭಚಕ್ರ ) ವು 360°  ಗಳಿದ್ದು,  ನಕ್ಷತ್ರಗಳ  ಸಂಖ್ಯೆ  27 ರಿಂದ  ಭಾಗಿಸಿದರೆ  13 °-1/3,  ಅಂದರೆ  13°  - 20 ನಿಮಿಷ  ಒಂದು ನಕ್ಷತ್ರದ  ಪ್ರಮಾಣವಾಗುತ್ತದೆ.    ಪ್ರತಿ  ನಕ್ಷತ್ರವೂ  ನಾಲ್ಕು  ಪಾದಗಳನ್ನು  ಹೊಂದಿದ್ದು,  13° - 20
ನಿಮಿಷವನ್ನು  ಪುನಃ  ನಾಲ್ಕು ಭಾಗ  ಮಾಡಿದಾಗ  3°-20'  ವು  ನಕ್ಷ್ಟ್ರತ್ರದ  ಒಂದು  ಪಾದವಾಗುತ್ತದೆ.  ನಕ್ಷತ್ರಗಳು  27
ಪಾದಗಳು  4  ... ಇವುಗಳನ್ನು  ಗುಣಿಸಿದಾಗ
         27 × 4 =  108  ----  ಪಾದಗಳು
    ಚಂದ್ರನು  ಪ್ರತಿದಿನ  ಸುಮಾರು  ಒಂದು ನಕ್ಷತ್ರದಂತೆ  ಒಂದು  ತಿಂಗಳಲ್ಲಿ ( 28/29.5 ದಿನ)  ಈ 27  ನಕ್ಷತ್ರದಲ್ಲಿ ಸಂಚರಿಸುತ್ತಾನೆ.
      ಚಂದ್ರನು ನಕ್ಷತ್ರದ  ಒಂದು ಪಾದದಲ್ಲಿ  ಸುಮಾರು  6 ರಿಂದ  6 1/4  ಗಂಟೆಗಳ  ಕಾಲ  ಇರುತ್ತಾನೆ.
          ಕಾಂತಿವೃತ್ತದ  360° ಗಳಲ್ಲಿ  12  ರಾಶಿಗಳಿದ್ದು ಒಂದೊಂದು  ರಾಶಿಯೂ  30°  ಉಳ್ಳದ್ದಾಗಿರುತ್ತದೆ.
          27  ನಕ್ಷತ್ರಗಳ  108  ಪಾದಗಳನ್ನು  360° ಗಳ  12  ರಾಶಿಗಳಲ್ಲಿ  ಒಂದೊಂದು  ರಾಶಿಯಲ್ಲಿ (30°)  9  ಪಾದಗಳಂತೆ  ವಿಂಗಡಿಸಲಾಗಿದೆ.
          ಭಚಕ್ರದ  ಮೊದಲ ರಾಶಿಯಾದ  ಮೇಶದಲ್ಲಿ
ಆಶ್ವಿನಿ  ನಕ್ಷತ್ರದ  4  ಪಾದಗಳು    13° - ೨0'
ಭರಣಿ ನಕ್ಷತ್ರದ  4   ಪಾದಗಳು.    13° - 20'
ಕೃತಿಕಾ ನಕ್ಷತ್ರದ  ಒಂದು ಪಾದ.     3°  -  20'
                                                 ----------------
                                   ಒಟ್ಟು.      30°  ಗಳು  
  
          ಭಚಕ್ರದ  ಎರಡನೇ  ರಾಶಿಯಾದ  ವೃಷಭದಲ್ಲಿ 
ಕೃತಿಕಾ ನಕ್ಷತ್ರದ 3 ಪಾದಗಳು           10° -- 00
ರೋಹಿಣಿ  ನಕ್ಷತ್ರದ ನಾಲ್ಕು ಪಾದಗಳು13° - 20'
ಮೃಗಶಿರ ನಕ್ಷತ್ರದ  ಎರಡು ಪಾದಗಳು  6° -- 40'
                                                   -----------------   
                                   ಒಟ್ಟು.            30° ಗಳು
ಭಚಕ್ರದ  ಮೂರನೇ ರಾಶಿಯಾದ  ಮಿಥುನ ದಲ್ಲಿ
ಮೃಗಶಿರ ದ  ಎರಡು ಪಾದಗಳು    6°  - 40'
ಆರಿದ್ರ  ದ  ನಾಲ್ಕು ಪಾದಗಳು     13°   20'
ಪುನರ್ವಸುವಿನ ಮೂರು ಪಾದಗಳು10°- 00
                                               ------------------
                                         ಒಟ್ಟು       30° ಗಳು
ಭಚಕ್ರದ  ನಾಲ್ಕನೇ ರಾಶಿಯಾದ  ಕಟಕ  ದಲ್ಲಿ
ಪುನರ್ವಸುವಿನ  ಒಂದು ಪಾದ.      3° - ೨೦'
ಪುಷ್ಯಾದ  ನಾಲ್ಕು ಪಾದಗಳು.      13°- 20'
ಆಶ್ಲೇಷದ ನಾಲ್ಕು ಪಾದಗಳು        13° - ೨0'
                                            --------------------
                                            ಒಟ್ಟು  30°  ಗಳು
ಭಚಕ್ರದ ಐದನೇ ರಾಶಿಯಾದ  ಸಿಂಹದಲ್ಲಿ
ಮಖ ನಕ್ಷತ್ರದ ನಾಲ್ಕು  ಪಾದಗಳು  13 ° - 20'
ಪುಬ್ಬ ನಕ್ಷತ್ರಡ ನಾಲ್ಕು ಪಾದಗಳು.  13° -- 20'
ಉತ್ತರ  ನಕ್ಷತ್ರದ  ಒಂದು ಪಾದ.      3°  --  20"
-                                                  -------------------
                                             ಓಟ್ಟು   30°  ಗಳು
      
ಭಚಕ್ರದ ಆರನೇ  ರಾಶಿಯಾದ  ಕನ್ಯಾದಲ್ಲಿ
ಉತ್ತರ  ನಕ್ಷತ್ರದ ಉಳಿದ 3 ಪಾದಗಳು 10° -- 00
ಹಸ್ತ ನಕ್ಷತ್ರದ  ನಾಲ್ಕು ಪಾದಗಳು.        13° --20'
ಚಿತ್ತ ನಕ್ಷತ್ರದ ಎರಡು ಪಾದಗಳು            6° -- 40'
                                                      -------------------
                                               ಒಟ್ಟು   30°  ಗಳು
ಭಚಕ್ರದ  ಏಳನೇ  ರಾಶಿಯಾದ  ತುಲಾದಲ್ಲಿ
ಚಿತ್ತ  ನಕ್ಷತ್ರದ ಉಳಿದ 2 ಪಾದಗಳು.      6° -- 40'
ಸ್ವಾತಿ ನಕ್ಷತ್ರದ ನಾಲ್ಕು  ಪಾದಗಳು       13°-- 20'
ವಿಶಾಖ ನಕ್ಷತ್ರದ 3  ಪಾದಗಳು.            10°--00
-                                                   ---------------------
                                            ಒಟ್ಟು.     30°  ಗಳು
ಭಚಕ್ರದ  ಎಂಟನೇ ರಾಶಿಯಾದ ವೃಶ್ಚಿಕ ದಲ್ಲಿ
ವಿಶಾಖ ನಕ್ಷತ್ರದ ಉಳಿದ ಒಂದು ಪಾದ   3° -- 20'
ಅನುರಾಧ ನಕ್ಷತ್ರದ ನಾಲ್ಕು ಪಾದಗಳು  13°-- 20'
ಜೇಷ್ಠ ನಕ್ಷತ್ರದ  ನಾಲ್ಕು  ಪಾದಗಳು.       13°--20'
                                                    ---------------------
                                             ಒಟ್ಟು.      30°  ಗಳು
ಭಚಕ್ರದ ಒಂಭತ್ತನೇ ರಾಶಿಯಾದ  ಧನಸ್ಸುವಿನಲ್ಲಿ
ಮೂಲ ನಕ್ಷತ್ರದ ನಾಲ್ಕು  ಪಾದಗಳು.      13° -- 20'
ಪೂ.ಷಾಢ ನಕ್ಷತ್ರದ ನಾಲ್ಕು  ಪಾದಗಳು. 13° --20'
ಉ. ಷಾಢ ನಕ್ಷತ್ರದ  ಒಂದು  ಪಾದ.         3° -- 20'
                                                   ----------------------
                                           ಒಟ್ಟು.        30 °  ಗಳು
 
ಭಚಕ್ರದ ಹತ್ತನೇ ರಾಶಿಯಾದ ಮಕರದಲ್ಲಿ
ಉ.ಷಾಢ ದ  ಉಳಿದ 3  ಪಾದಗಳು.     10° --೦೦
ಶ್ರವಣ  ನಕ್ಷತ್ರದ ನಾಲ್ಕು ಪಾದಗಳು.     13°--  20'
ಧನಿಷ್ಠ ನಕ್ಷತ್ರ  ದ ಎರಡು ಪಾದಾಗಳು.    6° -- ೪0"
                                                   ---------------------
                                              ಒಟ್ಟು    30°    ಗಳು
ಭಚಕ್ರದ ಹನ್ನೊಂದನೇ ರಾಶಿಯಾದ ಕುಂಭದಲ್ಲಿ
ಧನಿಷ್ಠ ನಕ್ಷತ್ರದ ಉಳಿದ ಎರಡು ಪಾದಗಳು  6° - 40'
ಶತಭಿಷ ನಕ್ಷತ್ರದ  ನಾಲ್ಕು ಪಾದಗಳು.       13°- 20'
ಪೂ.ಬಾದ್ರ ನಕ್ಷತ್ರದ ಮೂರು ಪಾದಗಳು     10°--00
                                                      --------------------
                                                  ಒಟ್ಟು    30°  ಗಳು
ಭಚಕ್ರದ ಕೊನೆಯ ರಾಶಿಯಾದ ಮೀನದಲ್ಲಿ
ಪೂ.ಬಾದ್ರ ದ  ಉಳಿದ  ಒಂದು ಪಾದ   3°  -- 20'
ಉ.ಬಾದ್ರ ದ ನಾಲ್ಕು ಪಾದಗಳು.        13° -- 20'
ರೇವತಿ ನಕ್ಷತ್ರದ ನಾಲ್ಕು ಪಾದಗಳು      13° --20'
                                                    --------------------
                                                 ಒಟ್ಟು  30°  ಗಳು
ಹೀಗೆ 12 ರಾಶಿಗಳಲ್ಲಿ 108  ಪಾದಗಳನ್ನು  ಹಂಚಲಾಗಿದೆ.
          27  ನಕ್ಷತ್ರಗಳ  ಗುಣಧರ್ಮಗಳು ಒಂದರಿಂದೊಂದು ಭಿನ್ನವಾಗಿವೆ.   ಭಾರತೀಯ  ಜ್ಯೋತಿಷ್ಯವು  ನಕ್ಷತ್ರ ಪ್ರಧಾನವಾಗಿರುವುದರಿಂದ  ಎಲ್ಲಾ  ಸಂದರ್ಭದಲ್ಲಿಯೂ ನಿರ್ಣಾಯಕ ಪಾತ್ರವನ್ನು  ವಹಿಸುತ್ತದೆ.  ಪ್ರತಿಯೊಂದು  ಕಾರ್ಯವನ್ನು  ನಿರ್ವಹಿಸುವಾಗಲೂ  ಆಯಾ  ಸಂದರ್ಭಕ್ಕೆ  ತಕ್ಕಂತೆ  ಸರಿಯಾಗಿ  ಶುಭಫಲಗಳನ್ನು   ಕೊಡುವ  ನಕ್ಷತ್ರಗಳನ್ನೇ  ಉಪಯೋಗಿಸಬೇಕೆಂಬುದನ್ನು  ಜ್ಯೋತಿಷ  ದಾರ್ಶನಿಕರು  ತಿಳಿಸಿರುತ್ತಾರೆ.
          ಹಾಗಾಗಿ  ಈ  ನಕ್ಷತ್ರಗಳ  ಬಗೆಗೆ  ಹಂತ ಹಂತವಾಗಿ  ತಿಳಿಯಲು  ಪ್ರಯತ್ನಿಸೋಣ.
ಚತುರ್ವಿಧ ಫಲ  ಪುರುಷಾರ್ಥ  ನಕ್ಷತ್ರಗಳು :--
( ಧರ್ಮ,  ಅರ್ಥ,  ಕಾಮ,  ಮೋಕ್ಷ ನಕ್ಷತ್ರಗಳು)
ಧರ್ಮ ನಕ್ಷತ್ರಗಳು :--   ಆಶ್ವಿನಿ,  ಪುಷ್ಯ,  ಆಶ್ಲೇಷ,  ವಿಶಾಖ,  ಅನೂರಾಧ, ಧನಿಷ್ಠ,  ಶತಭಿಷ.
ಅರ್ಥ ನಕ್ಷತ್ರಗಳು :--  ಭರಣಿ , ಪುನರ್ವಸು,  ಮಖಾ, ಸ್ವಾತಿ,  ಜ್ಯೇಷ್ಠ,  ಶ್ರವಣ,  ಪೂರ್ವಾಬಾದ್ರ.
ಕಾಮ ನಕ್ಷತ್ರಗಳು  :-- ಕೃತಿಕಾ,  ಆರಿದ್ರ,  ಪುಬ್ಬ, ಚಿತ್ತ, ಮೂಲ , ಉತ್ತರಾಬಾದ್ರ.
ಮೋಕ್ಷ ನಕ್ಷತ್ರಗಳು :--  ರೋಹಿಣಿ,  ಮೃಗಶಿರ, ಉತ್ತರ, ಹಸ್ತ,  ಪೂರ್ವಾಬಾದ್ರ,  ಉತ್ತರಾಷಾಢ,  ರೇವತಿ.
        ಮೇಲಿನ  ಈ  ನಕ್ಷತ್ರಗಳಲ್ಲಿ  ಜನಿಸಿದಾಗ  ಅಥವಾ  ಗ್ರಹಗಳು  ಸ್ಥಿತರಾದಾಗ  ಯಾವ  ಉದ್ದೇಶ  ನೆರವೇರುತ್ತದೆ  ಎಂದು  ತಿಳಿಯಬಹುದು
          ನಕ್ಷತ್ರಗಳಲ್ಲಿ  ಲಿಂಗಗಳು  :--
ಪುರುಷ  ನಕ್ಷತ್ರ :--  ಆಶ್ವಿನಿ,  ಪುನರ್ವಸು,  ಪುಷ್ಯ,  ಹಸ್ತ,  ಶ್ರವಣ,  ಅನೂರಾಧ,  ಪೂರ್ವಾಬಾದ್ರ,  ಉತ್ತರಾಬಾದ್ರ  ನಕ್ಷತ್ರಗಳು.
ಸ್ತ್ರೀ  ನಕ್ಷತ್ರಗಳು  :--  ಭರಣಿ,  ಕೃತಿಕಾ,  ರೋಹಿಣಿ,  ಆರಿದ್ರ,  ಆಶ್ಲೇಷ,  ಮಖಾ,  ಪುಬ್ಬ,  ಉತ್ತರ  ಚಿತ್ತ,  ಸ್ವಾತಿ,  ವಿಶಾಖ,  ಜ್ಯೇಷ್ಠ,  ಪೂರ್ವಾಷಾಢ,  ಉತ್ತರಾಷಾಢ,  ಧನಿಷ್ಠ,  ರೇವತಿ.
ನಪುಂಸಕ  ನಕ್ಷತ್ರಗಳು  :--  ಮೃಗಶಿರ,  ಮೂಲ,  ಶತಭಿಷ.
           ಪ್ರತಿ ಜೀವಿಯಲ್ಲೂ  ಗುಣವೇ  ಪ್ರಧಾನವಾಗಿರುತ್ತದೆ.  ಇದು  ಮನುಷ್ಯನ  ವ್ಯಕ್ತಿತ್ವವನ್ನು  ರೂಪಿಸುವುದಾಗಿದೆ,  ಆದ್ದರಿಂದಲೇ  ಸಾತ್ವಿಕ,  ರಾಜಸಿಕ, ತಾಮಸಿಕ,  ಎಂಬ  ಹೆಸರನ್ನು  ಪಡೆದುಕೊಳ್ಳುತ್ತದೆ.
      ಸಾತ್ವಿಕ  ನಕ್ಷತ್ರಗಳು  :--  ಪುನರ್ವಸು,  ಆಶ್ಲೇಷ, ವಿಶಾಖ,  ಜ್ಯೇಷ್ಠ,  ಪೂರ್ವಾಬಾದ್ರ,  ರೇವತಿ.
      ರಾಜಸಿಕ  ನಕ್ಷತ್ರಗಳು  :--  ಭರಣಿ ,  ಕೃತಿಕಾ,  ರೋಹಿಣಿ,  ಪುಬ್ಬ,  ಉತ್ತರ,  ಹಸ್ತ, ಪೂರ್ವಾಷಾಢ,  ಉತ್ತರಾಷಾಢ,
     ತಾಮಸಿಕ ನಕ್ಷತ್ರಗಳು  :--  ಆಶ್ವಿನಿ ,  ಮೃಗಶಿರ,  ಆರಿದ್ರ,  ಪುಷ್ಯ,  ಮಖಾ,  ಚಿತ್ತ, ಸ್ವಾತಿ,  ಅನೂರಾಧ, ಮೂಲ,  ಧನಿಷ್ಠ,  ಉತ್ತರಾಬಾದ್ರ.
ಮುಂದುವರೆಯುವುದು................
✍. Dr :   B N   ಶೈಲಜಾ ರಮೇಶ್

Friday, 8 November 2024

ವೃಷಭ ಲಗ್ನ ( ರಾಶಿ )

                   ಹರಿಃ  ಓಂ
           ಶ್ರೀ  ಗುರುಭ್ಯೋ ನಮಃ
        ಶ್ರೀ ಮಹಾಗಣಪತಯೇ ನಮಃ

         ರಾಶಿ  ಎಂದರೆ ಎಲ್ಲರಿಗೂ   ತಿಳಿದಿರುವಂತೆ  ಇದೊಂದು  ಸಮೂಹ,  ಸಾಮಾನ್ಯವಾಗಿ  ಯಾವುದೇ ಗುಂಪನ್ನು  ನಿರ್ದೇಶಿಸಲು  ರಾಶಿ ಅನ್ನುವ ಪದವನ್ನು ನಾವು  ಬಳಸುತ್ತೇವೆ.

      ಜ್ಯೋತಿಷ್ಯ ಶಾಸ್ತ್ರದಲ್ಲಿ,  ನಮ್ಮ ಋಷಿಮುನಿಗಳು  ತಮ್ಮ  ಆಳವಾದ ಅಧ್ಯಯನ  ಹಾಗೂ  ತಪಸ್ಸಿನ  ಮೂಲಕ  ರಾಶಿಗಳು  12  ಎಂದು  ಕಂಡುಕೊಂಡಿದ್ದಾರೆ,  ಅದೇ  ಅಲ್ಲದೆ  ಪ್ರತಿ   ರಾಶಿಗೂ  ಸಂಬಂದಿಸಿದಂತೆ   ವಿಶಿಷ್ಟವಾದ  ಗುಣಧರ್ಮಗಳನ್ನು  ಹೇಳಿರುತ್ತಾರೆ.   ಭಚಕ್ರದಲ್ಲಿ  ಈ  ಪ್ರಕಾರವಾಗಿ  ನೋಡಿದಾಗ   ಹನ್ನೆರಡು  ರಾಶಿಗಳು  ಕ್ರಮವಾಗಿ  ಮೇಷ,  ವೃಷಭ,  ಮಿಥುನ,  ಕಟಕ,  ಸಿಂಹ,  ಕನ್ಯಾ,  ತುಲಾ,  ವೃಶ್ಚಿಕ,  ಧನಸ್ಸು,  ಮಕರ,  ಕುಂಭ,  ಮೀನಾ ಎಂಬ  ಹೆಸರಿನಿಂದ  ಪ್ರಖ್ಯಾತಿ  ಆಗಿದೆ,  ಜಾತಕದಲ್ಲಿ  ಇದನ್ನೇ  ಕುಂಡಲಿ  ಎನ್ನುತ್ತಾರೆ.
 ವೃತ್ತಾಕಾರದ  ಭಚಕ್ರದ  ವ್ಯಾಪ್ತಿಯು 360° ಗಳಾಗಿದ್ದು,  ಇದನ್ನು  ಕ್ರಮವಾಗಿ  ಹನ್ನೆರಡು  ಮನೆಗಳಿಗೆ  ಹಂಚಿದಾಗ...
 360÷12= 30° ಗಳಾಗುತ್ತದೆ. 

    ಈ ಭಚಕ್ರದಲ್ಲಿ  ಸೂರ್ಯನು  ಕೇಂದ್ರ   ಬಿಂದುವಾಗಿದ್ದಾನೆ.   ಭೂಮಿ, ಚಂದ್ರ  ಸಕಲ  ಗ್ರಹಗಳು  ಸೂರ್ಯನ  ಸುತ್ತಲೂ ನಿರ್ಧಿಷ್ಟವಾದ  ಮತ್ತು  ನಿಖರವಾದ  ಪಥಗಳಲ್ಲಿ  ಚಲಿಸುತ್ತವೆ.    ನಾವು  ಭೂಮಿಯಿಂದ   ನಿಂತು ನೋಡಿದರೆ  ಸೂರ್ಯ, ಚಂದ್ರ, ಸಕಲ  ಗ್ರಹಗಳು  ಈ  ರಾಶಿ  ಚಕ್ರದಲ್ಲಿನ  ವಿವಿಧ  ನಕ್ಷತ್ರ  ಮತ್ತು  ನಕ್ಷತ್ರಪುಂಜಗಳ  ಆಕಾರದ ಮೇಲೆ  ಹಾದು ಹೋಗುವಂತೆ  ಕಾಣುತ್ತದೆ,   ಈ  ಆಕಾರಗಳು  ಕೆಲವು  ಪ್ರಾಣಿಗಳ  ಆಕಾರವನ್ನು  ಮತ್ತು  ಕೆಲವು  ವಿಶೇಷ  ಚಿಹ್ನೆಗಳ  ಆಕಾರವನ್ನು  ಹೋಲುವುದರಿಂದ,  ನಮ್ಮ  ಋಷಿಮುನಿಗಳು ಆಯಾ  ರಾಶಿಯಲ್ಲಿನ  ನಕ್ಷತ್ರಗಳ  ಗುಂಪಿನ  ಆಕೃತಿಯನ್ನು  ಗಮನಿಸಿ  ರಾಶಿಗಳಿಗೆ ಅದೇ  ಹೆಸರುಗಳನ್ನು ಕೊಟ್ಟಿರುತ್ತಾರೆ. ಅದೇ......
ಮೇಷ,  ವೃಷಭ,  ಮಿಥುನ,  ಕಟಕ,  ಸಿಂಹ,  ಕನ್ಯಾ,  ತುಲಾ,  ವೃಶ್ಚಿಕ,  ಧನಸ್ಸು,  ಮಕರ,  ಕುಂಭ,  ಮೀನಾ.

ಇನ್ನೊಂದು  ರೀತಿಯಲ್ಲಿ  ಅರ್ಥೈಸಿದಾಗ...........
     ಸೂರ್ಯ,  ಚಂದ್ರ  ಮತ್ತು  ಭೂಮಿ  ಒಂದೇ  ಸರಳ ರೇಖೆಯಲ್ಲಿ  ಬಂದಾಗ  ಅಮಾವಾಸ್ಯೆ  ಆಗುತ್ತೆ,  ಇದನ್ನು  ಪ್ರಾರಂಭದ  ಬಿಂದುವನ್ನಾಗಿ ಗುರ್ತಿಸಿದರೆ,  ಇಲ್ಲಿಂದ ಭೂಮಿ ಮತ್ತು ಚಂದ್ರರು  ತಮ್ಮದೇ  ಆದ  ವೇಗದಲ್ಲಿ  ಚಲಿಸುತ್ತಾ ತಮ್ಮ  ಪಥದಲ್ಲಿ ಮುಂದುವರಿಯುವರು.   ಹೀಗೇ  ಚಲಿಸುವಾಗ  ಮತ್ತೆ ಮತ್ತೆ ಸೂರ್ಯ  ಚಂದ್ರ  ಮತ್ತು  ಭೂಮಿಗಳು  ಒಂದೇ  ಸರಳ  ರೇಖೆಯಲ್ಲಿ  ಸೇರಿ  ಅಮವಾಸ್ಯೆಯನ್ನು  ಉಂಟುಮಾಡುವುವು,  ಹೀಗೆ  ವರ್ಷದಲ್ಲಿ  ಅಥವಾ  360°ಗಳ  ಧೀರ್ಘ ವೃತ್ತದ  ಚಲನೆಯಲ್ಲಿ  12  ಅಮಾವಾಸ್ಯೆಗಳು  ಉಂಟಾಗುತ್ತವೆ.  ಒಂದು  ಅಮಾವಾಸ್ಯೆ ಯಿಂದ  ಮತ್ತೊಂದು  ಅಮಾವಾಸ್ಯೆಯ  ಅಂತರ 30°ಗಳು ಆಗುತ್ತವೆ.  ಇದನ್ನೇ  ಜ್ಯೋತಿಶಾಸ್ತ್ರದಲ್ಲಿ  ರಾಶಿ  ಎಂದು  ಕರೆಯುತ್ತಾರೆ..  
   
            ಜ್ಯೋತಿಷ್ಯ  ಶಾಸ್ತ್ರದ  ಫಲಜ್ಯೋತಿಷ್ಯ  ವಿಭಾಗಕ್ಕೆ ಸಂಬಂಧಿಸಿದಂತೆ,  ಫಲವಿಮರ್ಶೆಯಲ್ಲಿ  ರಾಶಿ,  ಗ್ರಹ  ಹಾಗೂ  ನಕ್ಷತ್ರಗಳು ಬಹು ಮುಖ್ಯ  ಪಾತ್ರವನ್ನು  ವಹಿಸುತ್ತದಾದ್ದರಿಂದ  ಇವುಗಳ  ಗುಣ  ಸ್ವಭಾವ,  ಹಾಗೂ   ಕಾರಕತ್ವಗಳು  ನಿರ್ಣಾಯಕವಾಗಿರುತ್ತದೆ.  ಆದ್ದರಿಂದ  ರಾಶಿಗಳ ಗುಣಧರ್ಮಗಳತ್ತ  ಗಮನ ಹರಿಸೋಣ
          
ಈಗ ನಾವು ವೃಷಭ ರಾಶಿಯ ಬಗ್ಗೆ ತಿಳಿಯೋಣ...

ನಮ್ಮ ಋಷಿಮುನಿಗಳು ಕಂಡಂತೆ...
          ವೃಷಭವೆಂದರೆ , ಎತ್ತು,  ಗೂಳಿ, ವೃಷ  ಎಂದರೆ  ಮಾನವನ ಬಯಕೆಗಳನ್ನೆಲ್ಲ  ಪೂರೈಸುವ  ಸಂಕೇತ,  ಇದು  ರಾಶಿ ಚಕ್ರದ  ಎರಡನೆಯ  ರಾಶಿ. ವೃಷಭ ರಾಶಿಯು  ಭಚಕ್ರದಲ್ಲಿ    30° ಯಿಂದ 60°  ವರೆಗೆ  ವ್ಯಾಪಿಸಿದೆ.  ಕೃತಿಕಾ ನಕ್ಷತ್ರದ ಕೊನೆಯ ಮೂರು ಪಾದಗಳು, ರೋಹಿಣಿ ನಕ್ಷತ್ರದ ನಾಲ್ಕೂ ಪಾದಗಳು, ಮೃಗಶಿರ ನಕ್ಷತ್ರದ ಮೊದಲ ಎರಡು ಪಾದಗಳನ್ನು ಒಳಗೊಂಡಿದೆ.  ಇದು  ಕಾಲಪುರುಷನ  ಗಂಟಲು,  ಮುಖವನ್ನು  ಸೂಚಿಸುತ್ತದೆ. ಇದು  ಸ್ಥಿರರಾಶಿ,  ಪೃಷ್ಟೋದಯ ರಾಶಿ,  ಸಮರಾಶಿ,  ಪೃತ್ವಿ ತತ್ವರಾಶಿ,  ದಕ್ಷಿಣದಿಕ್ಕನ್ನು ಸೂಚಿಸುತ್ತೆ, ಸ್ತ್ರೀ ರಾಶಿ,  ಶೂದ್ರ ಜಾತಿ,  ಅರ್ಧ ಜಲರಾಶಿ, ರಾತ್ರಿ ಬಲರಾಶಿ,  ಬಿಳಿಬಣ್ಣ,  ಕಫಪ್ರಕೃತಿ,  ಮೂಲರಾಶಿ,  ಸಸ್ಯರಾಶಿ,  ರಜೋಗುಣ  ಪ್ರಧಾನ, ಯುಗಗಳಲ್ಲಿ  ತ್ರೇತಾಯುಗವನ್ನ  ಸೂಚಿಸುತ್ತದೆ.  ಧಾರಣರಾಶಿ,   ಸ್ನೇಹಪರ ರಾಶಿ,  ಸಾಧಾರಣ  ಎತ್ತರ,  ಸ್ತ್ರೀ ಸಂತಾನ  ಅಧಿಕ,  ಸುಖ/ ಭೋಗರಾಶಿ,  ಕೃಷಿ ಮತ್ತು ಧನ  ಶೇಖರಣೆಯ  ರಾಶಿ,  ಈ  ರಾಶಿಗೆ ಶುಕ್ರ ಅಧಿಪತಿ,  ಚಂದ್ರನಿಗೆ  ಉಚ್ಚಸ್ಥಾನ,    3°ಯಲ್ಲಿ ಚಂದ್ರನು ಪರಮೋಚ್ಚನಾಗುತ್ತಾನೆ, 10° ಯಿಂದ 20°ಯು ಚಂದ್ರನಿಗೆ ಮೂಲತ್ರಿಕೋನ, 14°ಯು ವೃಷಭರಾಶಿಯ ಪುಷ್ಕರಭಾಗ .ಕೆಲವರ  ಪ್ರಕಾರ  ರಾಹುವಿಗೂ ಕೂಡ  ಉಚ್ಚಕ್ಷೇತ್ರ,  ಕೇತುವಿಗೆ  ನೀಚಕ್ಷೇತ್ರ,  ಈ  ರಾಶಿ  ಕಾಲಪುರುಷನ  ಬಲಗಣ್ಣನ್ನು  ಸೂಚಿಸುತ್ತದೆ. 

ವೈಜ್ಞಾನಿಕವಾಗಿ....ವೃಷಭರಾಶಿ..

       ಆಕಾಶಕ್ಕೆ ಒಳಮುಚ್ಚಿಗೆ ಅಥವಾ ಚತ್ತು ಅಥವಾ ಚಾದರ ಹೊದೆಸಿರುವಂತೆ ಭಾಸವಾಗುವ ಅಸಂಖ್ಯ ನಕ್ಷತ್ರಗಳ ಚಿತ್ರಗಳನ್ನು ಖಗೋಳವಿಜ್ಞಾನಿಗಳು 88 ವಿವಿಧ ನಕ್ಷತ್ರಪುಂಜಗಳಾಗಿ ವಿಭಾಗಿಸಿದ್ದಾರೆ. ಈ ಪೈಕಿ ಒಂದು ವೃಷಭರಾಶಿ (ಟಾರಸ್)
ಸುಮಾರು 200 ಬಿಡಿ ನಕ್ಷತ್ರಗಳ ವಿಸ್ತಾರ ಒಕ್ಕೂಟ ವೃಷಭ ರಾಶಿಯಲ್ಲಿದೆ. ಇದಕ್ಕೆ. ಹಯಡಿಸ್ ಎಂದು ಹೆಸರು.
     ಬಿಡಿ ಬಿಡಿಯಾಗಿ ಎಣಿಸಬಲ್ಲ ಸೆವೆನ್ ಸಿಸ್ಟರ್ಸ್ ಎಂದು ಕರೆಯಲ್ಪಡುವ 7 ನಕ್ಷತ್ರಗಳ  ಒಕ್ಕೂಟ ಕೃತ್ತಿಕಾಗುಚ್ಛ (ಪ್ಲಿಯಡಿಸ್)  ವೃಷಭರಾಶಿಯಲ್ಲಿದೆ. ಪುಟ್ಟ ಸೌಟಿನಂತೆ ಇದರ ಆಕಾರ. 
       ಮಾಣಿಕ್ಯದಂತ ಕೆಂಪು ಬಣ್ಣದ   ನಕ್ಷತ್ರ  ರೋಹಿಣಿ (ಆಲ್ಡೆಬರಾನ್). ಇದೊಂದು ರಕ್ತದೈತ್ಯ ನಕ್ಷತ್ರ (ರೆಡ್ ಜೆಯಿಂಟ್ ಸ್ಟಾರ್) ವೃಷಭ ರಾಶಿಯಲ್ಲಿದೆ.
       ವೃಷಭರಾಶಿಯ ಇನ್ನೊಂದು ಮುಖ್ಯ ನಕ್ಷತ್ರ ಅಗ್ನಿ (ಎಲ್ನಾಥ್),  ನೀಲದೈತ್ಯ (ಬ್ಲೂ ಜೆಯಿಂಟ್)) (ಬಹುಶಃ ಇದು ಮೃಗಶಿರ ಇರಬಹುದು.)                                                ಈ ರಾಶಿಚಕ್ರದ ನಕ್ಷತ್ರ ಪುಂಜಗಳಲ್ಲಿ ಒಂದಾದ
ವೃಷಭರಾಶಿಯು ಉತ್ತರ ಖಗೋಳ ಗೋಲಾರ್ಧದಲ್ಲಿ 797 ಚದುರಡಿ ವಿಸ್ತೀರ್ಣ ವನ್ನು ಹೊಂದಿರುವ,  17ನೇ  ಒಂದು ಅತಿ ದೊಡ್ಡ ಮತ್ತು ಪ್ರಮುಖ ನಕ್ಷತ್ರಪುಂಜವಾಗಿದೆ. ಇದು ಅತ್ಯಂತ ಹಳೆಯ ನಕ್ಷತ್ರಪುಂಜಗಳಲ್ಲಿ ಒಂದಾಗಿದೆ. ಇದು ಆರಂಭಿಕ ಕಂಚಿನ ಯುಗದಷ್ಟು ಹಿಂದಿನದು. ಇದು ವಸಂತ ವಿಷುವತ್ ಸಂಕ್ರಾಂತಿ ಸಮಯದಲ್ಲಿ ಸೂರ್ಯನ ಸ್ಥಳವನ್ನು ಗುರುತಿಸುತ್ತದೆ. ಇದು ಖಗೋಳ ಚಿಹ್ನೆ ಗೂಳಿಯ ತಲೆಯನ್ನು ಹೋಲುತ್ತದೆ.  
ಮೇ ತಿಂಗಳ ಮದ್ಯದ ಅವದಿಯಿಂದ ಜೂನ್ ತಿಂಗಳ ಮದ್ಯದ ಅವಧಿಯನ್ನು ವೃಷಭ ಮಾಸ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಸೂರ್ಯ ವೃಷಭ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ.

ಗ್ರೀಕ್ ಪುರಾಣದ ಪ್ರಕಾರ....
      ವೃಷಭ ರಾಶಿಯು ಸಾಂಪ್ರದಾಯಿಕವಾಗಿ ಜೀಯಸ್‌ನೊಂದಿಗೆ ಸಂಪರ್ಕ ಹೊಂದಿದ್ದು, , ಫೀನಿಷಿಯನ್ ರಾಜ ಅಜೆನೋರ್‌ನ ಸುಂದರ ಮಗಳಾದ ಯುರೋಪಾವನ್ನು ಮೋಹಿಸಲು ಮತ್ತು ಕದಿಯಲು ಗೂಳಿಯ ರೂಪವನ್ನು ಪಡೆದನು ಎಂದು ಹೇಳಲಾಗುತ್ತದೆ, ಅದೇ ಮುಂದೆ ವೃಷಭ ರಾಶಿ (Taurus) ಆಯ್ತು ಎಂದು ಹೇಳಲಾಗುತ್ತದೆ.

         ನಮ್ಮ ವೈದಿಕ ಜ್ಯೋತಿಷ್ಯದ ಪ್ರಕಾರ,  ವೃಷಭ ರಾಶಿಯನ್ನು ಶುಕ್ರನು ಆಳುವನು. ಈ ಗ್ರಹವು ಸೌಂದರ್ಯ ಹಾಗೂ ಪ್ರೀತಿಯನ್ನು ಪ್ರತಿನಿಧಿಸುವುದು. ವೃಷಭ ರಾಶಿಯವರು ಪ್ರೀತಿ, ಐಷಾರಾಮಿ ಮತ್ತು ಸೌಂದರ್ಯದ ವಿಷಯದಲ್ಲಿ ಬಹಳ ಸೂಕ್ಷ್ಮಪ್ರವೃತ್ತಿಯನ್ನು ಹೊಂದಿರುತ್ತಾರೆ. ಆಹಾರದಿಂದ ಹಿಡಿದು ಫ್ಯಾಷನ್ ವರೆಗೂ ಹೊಸತನವನ್ನು ಬಯಸುವರು. ಶುಕ್ರನ ಆಡಳಿತದಿಂದಾಗಿ ಜೀವನವನ್ನು ಒಂದು ಸುಂದರ ಪಯಣದಂತೆ ಸಾಗಬೇಕು ಎನ್ನುವ ಮನೋಭಾವವನ್ನು ಹೊಂದಿರುತ್ತಾರೆ. ವೃಷಭ ರಾಶಿಯ ವ್ಯಕ್ತಿಗಳು ಸಕಲ ಕಲಾವಲ್ಲಭರು ಅಂದರೆ ತಪ್ಪಾಗಲ್ಲ, ಈ ಲಗ್ನ ಅಥವಾ ರಾಶಿಯವರಿಗೆ ಸಂಗೀತ, ಸಾಹಿತ್ಯ, ಕವಿತ್ವ, ಬರವಣಿಗೆ, ನೃತ್ಯವೇ ಮೊದಲಾದ ಕಲೆಗಳು ಒಲಿಯುತ್ತವೆ, ಇವರು ಉತ್ತಮ ದಾರ್ಶನಿಕರು, ಜ್ಯೋತಿಷಿಗಳೂ ಆಗುತ್ತಾರೆ. ಇವರು ಪ್ರಕೃತಿ ಪ್ರಿಯರು.
          ವೃಷಭ ರಾಶಿಯು  ಭೂತತ್ವ ರಾಶಿ, 
ವಿಷಯ  ಸುಖಗಳನ್ನು  ಅನುಭವಿಸುವುದಕ್ಕಾಗಿಯೇ  ಇರುವುದು  ಈ  ಭೂ  ತತ್ವ...... ಅಂದರೆ ತಪ್ಪಾಗಲ್ಲ..
ಹಾಗಾಗಿ,  ಪ್ರಾಪಂಚಿಕ  ವಿಷಯಗಳಿಗೆ  ಭೂತತ್ವ  ಕೇಂದ್ರವಾಗಿದೆ,  ಅಂದರೆ  ಅಧಿಕಾರ,  ಅಂತಸ್ತು,  ಗೌರವ  ಪಡೆಯುವುದು, ಈ ರಾಶಿಯವರು ಬೇಗ ಎಲ್ಲರೊಡನೆ ಬೆರೆಯೋದಿಲ್ಲ,  ಸಂಶಯಾಸ್ಪದ  ಸ್ವಭಾವ,  ವಿಮರ್ಶಾತ್ಮಕ ದೃಷ್ಟಿಯಿಂದ  ಆಲೋಚಿಸಿ  ನಿರ್ಣಯಿಸುವುದೇ  ಭೂತತ್ವದ  ವಿಶೇಷ,  ಬಡಪಟ್ಟಿಗೆ  ಸೋಲನ್ನೊಪ್ಪದ  ಸ್ವಭಾವ,  ಶ್ರಮಪಡದೇ  ಜೀವನ  ನಡೆಸುವವರು,  ಯಾವುದನ್ನು  ಬೇಡದೆನ್ನದಿರುವ  ಸ್ವಭಾವ,  ಸಮಯಕ್ಕೆ ತಕ್ಕಂತೆ  ಹೊಂದಿಕೊಳ್ಳುವವರು,  ಹೇಗಾದರೂ  ಸುಖಪಡಬೇಕೆಂಬ  ಛಲ,  ಮಾನವ ಜನ್ಮ ಬಂದಿರುವುದೇ  ಪೂರ್ವಪುಣ್ಯ  ವಿಶೇಷವೆಂದು  ತಿಳಿದು  ಎಲ್ಲಾ  ಸುಖವನ್ನು  ಅನುಭವಿಸಲು  ಹಾತೊರೆಯುತ್ತಾರೆ, ಈ ರಾಶಿಯವರು ಸಾಮಾನ್ಯವಾಗಿ ಪ್ರಾಮಾಣಿಕರು, ಮತ್ತು ಮೊಂಡು ಸ್ವಭಾವದವರು, ಸಹನಾಶೀಲರು, ವೈಯಕ್ತಿಕ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಬಯಸುವ ಸಭ್ಯ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ.  

          ವೃಷಭ ಲಗ್ನದಲ್ಲಿ ಹುಟ್ಟಿದವರು ವಿಶಾಲವಾದ ಹಣೆಯುಳ್ಳವರೂ, ಸ್ಥೂಲವಾದ ತುಟಿಯುಳ್ಳವರೂ, ಉಬ್ಬಿದ ಕೆನ್ನೆಗಳುಳ್ಳವರೂ ಆಗಿರುತ್ತಾರೆ. ಅವರಿಗೆ ಶರೀರದಲ್ಲಿ ಶೀತ, ವಾತ ಧಾತುಗಳೇ ಅಧಿಕ. ಉದಾರ ಗುಣವುಳ್ಳವರೂ, ಸಮಯ ಬಿದ್ದರೆ ಯಾರ ಲಂಗು ಲಗಾಮು ಇಲ್ಲದೇ ಖರ್ಚು ಮಾಡುವ ಜನ ಇವರು. ಇವರಿಗೆ ಅಲ್ಪ ಪುತ್ರ ಸಂತಾನ ಇರುತ್ತದೆ. ಸ್ತ್ರೀ ಸಂತತಿ ಅಧಿಕವಾಗಿರುತ್ತದೆ. ತಂದೆ ತಾಯಿಗಳಿಂದ ದೂರವಾಗಿರುವವರೂ, ಧರ್ಮ ಕಾರ್ಯಗಳಲ್ಲಿ ತೊಡಗಿ ದ್ರವ್ಯಾರ್ಜನೆ ಮಾಡ ತಕ್ಕವರೂ ಆಗಿರುತ್ತಾರೆ ವೃಷಭ ರಾಶಿಯವರು ಸಾಮಾನ್ಯವಾಗಿ ಹಣ ಮತ್ತು ಆಸ್ತಿಯನ್ನು ಇಷ್ಟಪಡುತ್ತಾರೆ. ಅದರ ಗಳಿಕೆಗಾಗಿ ಸಾಕಷ್ಟು ಶ್ರಮ ಪಡುತ್ತಾರೆ. . ವಿಶ್ವಾಸಾರ್ಹ ವರ್ತನೆ, ಕಠಿಣ ಪರಿಶ್ರಮ, ತಾಳ್ಮೆ, ಸೂಕ್ತ ಹೊಂದಾಣಿಕೆ ಹಾಗೂ ಸ್ನೇಹಪರ ವರ್ತನೆ ಇವರ ಉತ್ತಮ ಗುಣ. ಈ ಲಗ್ನದವರು  ಡೌನ್ ಟು ಅರ್ಥ್ ಅಂಥ ಹೇಳಬಹುದು, ಎಲ್ಲರನ್ನು ಗೌರವದಿಂದ ಕಾಣುವುದರಿಂದ ಹಿಡಿದು, ಎಲ್ಲರ,  ಎಲ್ಲ ಕೆಲಸವನ್ನು ಜವಾಬ್ದಾರಿಯಿಂದ ಎತ್ತಿನ ತರಹ ತಮ್ಮ ಹೆಗಲ ಮೇಲೆ ಹೊತ್ತು ಮಾಡುತ್ತಾರೆ.   ಕೈಗೆತ್ತಿಕೊಂಡಿರುವ ಕೆಲಸ ಮುಗಿಯುವವರೆಗೂ  ಛಲದಿಂದ ಕೆಲಸ ಮಾಡುತ್ತಾರೆ,    ಕೆಲಸ ಮುಗಿದ ನಂತರ ಸುಧೀರ್ಘ ವಿಶ್ರಾಂತಿ ಪಡೆಯುತ್ತಾರೆ. ಇವರು ಒಮ್ಮೊಮ್ಮೆ ಸೋಮಾರಿಗಳೂ ಆಗುತ್ತಾರೆ.

       ಸಾಧಾರಣವಾಗಿ ಈ  ಲಗ್ನದವರು ಎತ್ತರ ಕಡಿಮೆ ಇದ್ದು ಸ್ವಲ್ಪ ದಪ್ಪ ಗಾತ್ರದ ದೇಹ ಪ್ರಕೃತಿ ಹೊಂದಿರುತ್ತಾರೆ, ಅಭ್ಯಾಸವಿಲ್ಲದ ಹೊಸ ಸ್ನೇಹಿತರೊಂದಿಗೆ  ಅತಿಥಿಗಳೊಂದಿಗೆ ದಿಢೀರ್ ಎಂದು ಬೆರೆವವರಲ್ಲ ,ಇವರು ಸೆಟೆದು ಎದೆಯುಬ್ಬಿಸಿ ನಡೆಯುತ್ತಾರೆ. ಅಗಲವಾದ ಎದೆಯುಳ್ಳವರು, ಮಾತಿನಲ್ಲಿ ದೃಢತೆ ಇರುವುದು, ಬುದ್ಧಿವಂತಿಕೆ ಉಳ್ಳವರು , ಹೆಚ್ಚಾದ ಜ್ಞಾಪಕ ಶಕ್ತಿ ಉಳ್ಳವರು , ಇವರಿಗೆ ಉತ್ತಮವಾದ ಅಂಗ ಲಕ್ಷಣಗಳಿರುತ್ತವೆ.

        ಈ ಲಗ್ನದವರು ಇತರರ ಮೇಲೆ ಅಧಿಕಾರ ಚಲಾಯಿಸುವುದನ್ನು ಬಯಸುವುದಿಲ್ಲ, ಇತರರನ್ನು ವಶಪಡಿಸಿ ಕೊಂಡು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂಬ ಆಸೆಯೂ ಇಲ್ಲ, ಇವರು ಮುಖಸ್ತುತಿಗೆ  ಮರುಳಾಗುವುದಿಲ್ಲ , ದಿಢೀರ್ ಎಂದು ರೋಷಾವೇಶಕ್ಕೆ ಒಳಗಾಗದವರು , ಹೆಚ್ಚಿನ ಸಹನೆ ಉಳ್ಳವರು, ಹಾಗೆಯೇ... ಸ್ವಲ್ಪ ಹಟಮಾರಿಗಳೂ ಹೌದು, ಕಾರ್ಯಕ್ಕೆ ಇಳಿಯುವುದು ನಿಧಾನವೇ ಆದರೂ ಪೂರ್ಣಗೊಳಿಸದೆ ವಿಶ್ರಾಂತಿ ಬಯಸುವುದಿಲ್ಲ.

       ಈ ಲಗ್ನದವರು, ಎಣ್ಣೆಗೆಂಪು ಬಣ್ಣ ಉಳ್ಳವರು, ಎತ್ತುಗಳಂತೆ ನಡೆಯುವವರೂ, ಕಷ್ಟವನ್ನು ಸಹಿಸುವವರೂ ಆಗಿರುತ್ತಾರೆ. ಅವಸರವೂ ಚುರುಕು ಇವರಲ್ಲಿರುವುದಿಲ್ಲ... ಆದರೆ ಸದಾಕಾಲವೂ ತನಗಾಗಲಿ ಇತರರಿಗಾಗಲೀ ದುಡಿಯುತ್ತಲೇ ಇರುತ್ತಾರೆ. ಈ ಲಗ್ನದವರು ಯಾವುದನ್ನು ಎಲ್ಲಿ, ಯಾವಾಗ, ಬೇಕಾದರೂ ಊಟ ಮಾಡುವವರಲ್ಲ... ಹಸಿವಾದಾಗಲೂ  ಅವಶ್ಯಕತೆಯಿರುವಾಗಲೂ.. ಇವರು ತಮಗೆ ಹಿಡಿಸಿದ್ದನ್ನು ಮಾತ್ರ ಊಟ ಮಾಡುವರು. ಆದರೆ ನೀರು ಕಾಫಿ ಟೀ ಮುಂತಾದ ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ ಅವಸರವಾಗಿ ಊಟ ಮಾಡುವ ಸ್ವಭಾವ ಉಳ್ಳವರಾದರೂ ಆಹಾರದ ಸ್ವಾದವನ್ನು ಅನುಭವಿಸುತ್ತಾ ತಿನ್ನುತ್ತಾರೆ. ಇವರು ಆಡಂಬರ ಪ್ರಿಯರಲ್ಲದಿದ್ದರೂ ಹೆಚ್ಚು ಆಕರ್ಷಕವಾಗಿ ಇರ್ತಾರೆ ಹಾಗೆಯೇ ಆಕರ್ಷಕ ವಸ್ತುಗಳನ್ನು ಧರಿಸುವುದರಲ್ಲಿ ಆಸಕ್ತಿ ಉಳ್ಳವರು, ಸ್ವಲ್ಪ ಕೊಳೆಯಾದರೂ ಒಡನೆಯೇ ಬದಲಾಯಿಸುತ್ತಾರೆ,  ಹೆಚ್ಚು ಸ್ವಚ್ಛತೆಗೆ ಆದ್ಯತೆ ಕೊಡುತ್ತಾರೆ. 

        ತಾಯಿಗೆ ಇವರ ಮೇಲೆ ಅತೀವ ಪ್ರೀತಿ, ಹಾಗೆಯೇ ಈ ಜಾತಕರಿಗೂ ತಾಯಿಯೆಂದರೆ ಪ್ರಾಣ.  ತನ್ನನ್ನು ಪ್ರೀತಿಸುವ ಯಾವುದೇ ವ್ಯಕ್ತಿ ಹಾಗೂ ಸಂಬಂಧಕ್ಕೆ ಇವರು ನಿಷ್ಠರು. ವಿಷಯಾಸಕ್ತಿ ಹೆಚ್ಚಾಗಿ ಉಳ್ಳವರು, ಕುಟುಂಬದಲ್ಲಿ ನೆಮ್ಮದಿ ವಾತಾವರಣ ಅಷ್ಟಾಗಿ ಇರುವುದಿಲ್ಲ. ಖರ್ಚು ಮಾಡುವುದರಲ್ಲಿ ಬಹಳ ಧಾರಾಳವಾದರೂ....ಅಳೆದು ತೂಗಿ ಖರ್ಚು ಮಾಡುತ್ತಾರೆ. ವೃಷಭ ಲಗ್ನದಲ್ಲಿ ಹುಟ್ಟಿದವರು ಬಂಧು ಬಾಂಧವರ ಜತೆ ತುಂಬಾ  ವಿಶ್ವಾಸವಿಟ್ಟುಕೊಳ್ಳುತ್ತಾರೆ, ಗೌರವಿಸುತ್ತಾರೆ, ಇವರಿಗೆ ಕ್ಷಮಾಗುಣ ಇರುತ್ತೆ,  ಕ್ಷಮೆಗೆ ಅರ್ಹರಲ್ಲದರನ್ನೂ ಕ್ಷಮಿಸುವ ಉದಾರಿಗಳು ಇವರು, ತೀರಾ ಸಂಕಷ್ಟಕ್ಕೆ ಗುರಿಯಾದಾಗ ಮಾತ್ರ  ಗೂಳಿಯಂತೆ ಸಿಡಿದೇಳುತ್ತಾರೆ. ಈ ಲಗ್ನದವರು  ಬಹುಶಃ ಶ್ರೀಮಂತ  ವರ್ಗಕ್ಕೆ ಸೇರಿದವರಾಗುತ್ತಾರೆ. ಇವರಿಗೆ ಎಲ್ಲ ರೀತಿಯ ಅನುಕೂಲ ಇರುತ್ತದೆ. ತಮ್ಮ ಬುದ್ಧಿಯಿಂದಲೇ ಕೆಲಸ ಮಾಡುತ್ತಾರೆ. ತಪ್ಪು ದಾರಿ ಹಿಡಿಯುವುದಿಲ್ಲ. ವಕೀಲರಾದರೆ ಇವರ ವಾದ ಪ್ರಖರವಾಗಿರುತ್ತದೆ. ಡಾಕ್ಟರ್ ಆದರೆ ರೋಗಿಗಳು ಬಹುಬೇಗ ಗುಣಮುಖರಾಗುತ್ತಾರೆ, ( ರಾಶ್ಯಾಧಿಪತಿ ಸಂಜೀವಿನಿ ವಿದ್ಯೆಯನ್ನು ಬಲ್ಲ  ಶುಕ್ರ ನಾದ್ದರಿಂದ, ಈ ಲಗ್ನದವ್ರಿಗೆ ಹೀಲಿಂಗ್ ಕೆಪಾಸಿಟಿ ಇರುತ್ತೆ)   ಈ  ಲಗ್ನದಲ್ಲಿ ಹುಟ್ಟಿದವರಿಗೆ ಅನಾರೋಗ್ಯ ಇದ್ದರೂ ಇತರರಿಗೆ ತೋರಿಸಿಕೊಳ್ಳುವುದಿಲ್ಲ. ಕಲೆ, ಸಂಗೀತ, ನತ್ಯದಲ್ಲಿ ವಿಶೇಷ ಆಸಕ್ತಿ ಇರುತ್ತದೆ.

       ಶುಕ್ರಗ್ರಹದ ಅಧಿಪತ್ಯವಿರುವ ಈ ರಾಶಿಯವರು ಕಲೋಪಾಸನೆಯ ಆರಾಧಕರು. ಅತ್ಯುತ್ಸಾಹಿಗಳು ಮತ್ತು ತಾವು ಮಾಡುವ ಪ್ರತಿ ಕೆಲಸಕ್ಕೂ ತಮ್ಮ ಹೃನ್ಮನಗಳನ್ನೂ ಅರ್ಪಿಸಬಲ್ಲವರು. ಲಾಲಿತ್ಯ ಮತ್ತು ಲಾವಣ್ಯದ ಮೂರ್ತರೂಪವಾಗಿರುವ ಇವರು ತಮ್ಮ ಇಷ್ಟಸಾಧನೆಗಾಗಿ ಮನಸ್ಸಿಟ್ಟು ಶ್ರಮಿಸಬಲ್ಲರು. ಗಾಂಭಿರ್ಯವೇ ಇವರ ಸಹಜ ಗುಣವಾದರೂ ಅತಿ ಸರಳ ಮತ್ತು ಸಹೃದಯ ಮನೋಭಾವದವರು, ಹಾಗೂ ಅತ್ಯಂತ ಉದಾರಿಗಳೂ ಆಗಿರುತ್ತಾರೆ.

       ಪರೋಪಕಾರವೂ ತಾರ್ಕಿಕತೆಯೂ ಮೇಳೈಸಿದ ಅಪರೂಪದ ವ್ಯಕ್ತಿತ್ವ. ಉತ್ಸಾಹ, ಉನ್ಮಾದಗಳ ಕಾರಣದಿಂದ ಇವರ ರೀತಿಗಳು ಗೊಂದಲಕಾರಿಯಾಗಿಯೂ, ಅವ್ಯವಸ್ತಿತವಾಗಿಯೂ ತೋರಿದರೂ ಇವರು ವಾಸ್ತವದಲ್ಲಿ ವ್ಯವಸ್ಥೆಯ ರೂವಾರಿಗಳು ಹಾಗೂ ಸರ್ವ ಸ್ವತಂತ್ರರು. ಇವರು ತಾವು ಅಂದುಕೊಂಡ ಏನನ್ನಾದರೂ ಸಾಧಿಸಬಲ್ಲ ಸಾಮರ್ಥ್ಯವುಳ್ಳವರಾಗಿರುತ್ತಾರೆ


        ಈ ಲಗ್ನಕ್ಕೆ ಗುರು, ಚಂದ್ರರಿಂದ ಅಶುಭ ಫಲ. ರವಿ-ಶನಿ ಶುಭ ಫಲ ಕೊಡುತ್ತಾರೆ. ಈ ಲಗ್ನಕ್ಕೆ ಶನಿ ಮಾತ್ರ ರಾಜಯೋಗಕರ. ಈ ಲಗ್ನಕ್ಕೆ ನವಮ ಮತ್ತು ದಶಮ ಸ್ಥಾನಗಳ ಅಧಿಪತಿಯು ಶನಿ.  ಧರ್ಮ ಕರ್ಮಾಧಿಪತಿಯಾದ ಶನಿದೇವ ಪ್ರಚಂಡ ರಾಜಯೋಗವನ್ನು ಕೊಡುತ್ತಾನೆ. ವೃಷಭ ಲಗ್ನಕ್ಕೆ ನಾಲ್ಕನೆಯ ಸ್ಥಾನದ ಅಧಿಪತಿಯು ರವಿ. ರವಿಯು ಅಶುಭ ಗ್ರಹವಾದರೂ ಕೇಂದ್ರಾಧಿಪತಿಯಿರುವುದರಿಂದ ಶುಭ ಫಲದಾಯಕನಾಗುವನು. ಅಷ್ಟಮ ಮತ್ತು ಏಕಾದಶ ಸ್ಥಾನಗಳ ಅಧಿಪತಿಯು ಗುರು. ತೃತೀಯ ಸ್ಥಾನದ ಅಧಿಪತಿ ಚಂದ್ರ. ಪಷ್ಟ , ತೃತೀಯ, ಅಷ್ಟಮ, ದ್ವಾದಶ  ಈ ಸ್ಥಾನಗಳು ಅಶುಭ ಸ್ಥಾನಗಳು, ಈ ಸ್ಥಾನಾಧಿಪತಿಗಳು ಈ ಲಗ್ನಕ್ಕೆ ಶುಭಫಲ ಕೊಡುವುದಿಲ್ಲ. 

        ಈ ಲಗ್ನದಲ್ಲಿ ಹುಟ್ಟಿದವರಿಗೆ 10ನೇ ಸ್ಥಾನ ಕುಂಭ. ಇದರ ಅಧಿಪತಿ ಶನಿ.  ಇದರಿಂದ ಇವರಿಗೆ ವ್ಯವಸಾಯದಲ್ಲಿ ಆಸಕ್ತಿ ಇರುತ್ತದೆ. ಇವರು ಆಸ್ತಿ ಪಾಸ್ತಿಯ ವಿಷಯದಲ್ಲಿ ಲಾಭ ಗಳಿಸುತ್ತಾರೆ. ಇವರು ಹಣಕಾಸಿನ ಸಂಸ್ಥೆ ಮಾಡಿದರೆ ಲಾಭ ಬರುತ್ತದೆ. ಇವರು ಶಂಗಾರ ಸಾಧನಗಳಾದ ಬೆಳ್ಳಿ, ಬಂಗಾರ ವ್ಯಾಪಾರದಲ್ಲಿ ಲಾಭ ಗಳಿಸುತ್ತಾರೆ. ಇವರು ಉನ್ನತ ವ್ಯಾಸoಗ ಅಂದರೆ ಐ.ಎ.ಎಸ್. ಅಧಿಕಾರಿಯಾಗುಬಹುದು ರಾಜಕೀಯದಲ್ಲೂ ಸ್ಥಾನಮಾನ ಗಳಿಸುವ ಯೋಗ ಇರುತ್ತೆ. ಯಾವುದೇ ಕೆಲಸದಲ್ಲಾದರೂ ಸೂಕ್ತ ನಿರ್ವಹಣೆಯನ್ನು ಕೈಗೊಳ್ಳುವ ಇವರಿಗೆ ಉದ್ಯೋಗಗಳು, ಕೃಷಿ, ಬ್ಯಾಂಕ್ ಕೆಲಸ, ಕಲೆ, ಪಾಕಶಾಲೆಗೆ (ಹೋಟೆಲ್ ಗೆ)  ಸಂಬಂಧಿಸಿದಂತಹ ವೃತ್ತಿಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣುವರು.

         ಇವರಿಗೆ ಒಳ್ಳೆಯ ಮಕ್ಕಳು ಹುಟ್ಟುತ್ತಾರೆ. ಈ ಲಗ್ನದವರಿಗೆ ಶುಕ್ರವಾರ, ಬುಧವಾರ, ಶನಿವಾರ ಒಳ್ಳೆಯ ವಾರ. ಇವರ ಅದೃಷ್ಟ ಸಂಖ್ಯೆ 5, 6, 8. ಅದೃಷ್ಟದ ಹರಳು ನೀಲ, ಪಚ್ಚೆ, ವಜ್ರ. ಉಪಯೋಗಿಸಬೇಕಾದ   ಬಣ್ಣಗಳು ಹಸಿರು, ಬಿಳುಪು ಮತ್ತು ತಿಳಿಗೆಂಪು.  ಇವಿಷ್ಟೂ ವೃಷಭ ಲಗ್ನವಾದಾಗಿನ ಫಲಗಳು.

          ವೃಷಭ ರಾಶಿ ಎರಡನೇ ಭಾವವಾದಾಗ:--
         ಎರಡನೇ ಭಾವವನ್ನು ವಾಕ್ ಸ್ಥಾನ, ಧನ ಸ್ಥಾನ, ಕುಟುಂಬ ಸ್ಥಾನ ಅಂತ ಕರೀತೀವಿ. ವೃಷಭ ರಾಶಿಯು ನೈಸರ್ಗಿಕವಾಗಿಯೇ ಧನಸ್ಥಾನ, ಧನಾಧಿಪತಿ ಅಥವಾ ಯಾವುದೇ ಶುಭಗ್ರಹ ಇದ್ದಾಗ  ಶ್ರೀಮಂತಿಕೆಗೆ ಕೊರತೆ ಇರಲ್ಲ, ಮೃಧು ಮಧುರ ಮಾತು, ಕುಟುಂಬದವರೊಡನೆ ಹೆಚ್ಚಿನ ಸಾಮರಸ್ಯ ಇರುತ್ತೆ, ಪ್ರಾಥಮಿಕ ವಿದ್ಯೆ ಚೆನ್ನಾಗಿರುತ್ತೆ, ಜಾತಕರಿಗೆ ಕಲೆಗಳಲ್ಲಿ ಆಸಕ್ತಿ ಇರುತ್ತೆ. ಉತ್ತಮ ಮಾತುಗಾರಿಕೆ, ಸೌಂದರ್ಯ, ಕುಟುಂಬಸೌಖ್ಯ, ಉತ್ತಮ ಧನ ಸಂಪತ್ತು ಇರುತ್ತೆ

       ವೃಷಭ ರಾಶಿ ಮೂರನೇ ಭಾವವಾದಾಗ:----
        ಸಹೋದರಿಯರು ಇರ್ತಾರೆ, ಬರವಣಿಗೆ ಚೆನ್ನಾಗಿರುತ್ತೆ, ಅಕ್ಷರಗಳು ದುಂಡಾಗಿ ಇರುತ್ತೆ. ಸಂವಹನ ಕಲೆ ಚೆನ್ನಾಗಿರುತ್ತೆ. ದೂಷಿತ ಗ್ರಹಗಳು ಏನಾದ್ರೂ ಈ ಭಾವದಲ್ಲಿದ್ರೆ ಧೀರ್ಘ ಕಾಲದ ವ್ಯಾಧಿಗಳು ಇರುತ್ತೆ.  ಭಾಗ್ಯಪ್ರಾಪ್ತಿಗೊಸ್ಕರ ಸತತ ಪ್ರಯತ್ನದಿಂದ ಅಭಿವೃದ್ಧಿ ಹೊಂದುತ್ತಾರೆ. ಭಾವಾಧಿಪತಿಯೇ ಸ್ಥಿತರಿದ್ದರೆ, ಧೈರ್ಯ, ಸಾಹಸ, ಪರಾಕ್ರಮಕ್ಕೇನೂ ಕೊರತೆ ಇರಲ್ಲ. ಉತ್ತಮ ಸಹೋದರಿಯರು, ಆಕರ್ಷಕವಾದ ದೇಹಸಂಪತ್ತು ಇರುತ್ತೆ.

       ವೃಷಭರಾಶಿ ನಾಲ್ಕನೇ ಭಾವವಾದಾಗ:---
  ಭಾವಾಧಿಪತಿಯೇ ಸ್ಥಿತವಿದ್ದರೆ ಯಾವುದಕ್ಕೂ ಕೊರತೆಯೇ ಇರಲ್ಲ, ತಾಯಿ, ಆಸ್ತಿ, ಅಂತಸ್ತು, ಐಷಾರಾಮಿ ವಾಹನ, ಐಷಾರಾಮಿ ಮನೆ, ಭೂಸಂಪತ್ತು, ವಿದ್ಯೆ, ಎಲ್ಲಾ ವಿಷಯದಲ್ಲೂ ಜಾತಕರು ಅದೃಷ್ಟವಂತರು ಅಂತಲೇ ಹೇಳಬಹುದು,  ಗೂಢ ವಿದ್ಯೆಯಲ್ಲಿ ಆಸಕ್ತಿ ಇರುತ್ತೆ. ಮಾತೃಸೌಖ್ಯ, ಗೃಹ, ವಾಹನ, ವಸ್ತ್ರ, ಆಭರಣ ಮೊದಲಾದಂತೆ ಅಷ್ಟಭೋಗಭಾಗ್ಯಗಳು ಇರುತ್ತದೆ
 ಇವರು ಕಲಾವಿದರಾಗಿರುತ್ತಾರೆ. 

       ವೃಷಭರಾಶಿ  ಪಂಚಮ ಭಾವವಾದಾಗ:---
    
         ಬಲವಾದ ಪೂರ್ವಪುಣ್ಯಸ್ಥಾನ.
   ಸ್ತ್ರೀ ಸಂತಾನ ಅಧಿಕವಿರುತ್ತೆ, ಮಂತ್ರ - ರಹಸ್ಯ ವಿದ್ಯೆಗಳನ್ನು ಬಲ್ಲವರಾಗಿರ್ತಾರೆ. ಸ್ಮರಣಶಕ್ತಿ  ಹೆಚ್ಚಾಗಿ ಇರುತ್ತೆ. ಕಲೆಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತೆ, ಉತ್ತಮ ವಿದ್ಯಾವಂತರಾಗಿರ್ತಾರೆ.( ವಿದ್ಯುನ್ಮಾನ ಕ್ಷೇತ್ರದಲ್ಲಿ),
 ಒಳ್ಳೆ ಹೀಲರ್ ಆಗಿರ್ತಾರೆ, ವಿವೇಕಯುತವಾದ ಸಂವಹನ ಶಕ್ತಿ ಇರುತ್ತೆ, ಭವಿಷ್ಯದಲ್ಲಿ ಸಂಭವಿಸಬಹುದಾದ ವಿಷಯದ ಬಗ್ಗೆ ಜ್ಞಾನವಿರುತ್ತೆ.( Intuition )  ಪಂಚಮ ಭಾವ ಪ್ರೀತಿ ಪ್ರೇಮ ಪ್ರಣಯವನ್ನೂ ಸೂಚಿಸುತ್ತಾದ್ದರಿಂದ ಜಾತಕರು ಪ್ರೀತಿ ಪ್ರೇಮದಲ್ಲಿ ಬೀಳಬಹುದು. , 

        ವೃಷಭರಾಶಿ  ಷಷ್ಟ ಭಾವವಾದಾಗ:---

      ಆರನೇ ಮನೆ ರಹಸ್ಯ ಶತ್ರುಗಳು, ತೀವ್ರ ರೋಗಗಳು ಮತ್ತು ಸಾಲಗಳನ್ನು ಪ್ರತಿನಿಧಿಸುತ್ತದೆ. ಶುಕ್ರನ ಆಳ್ವಿಕೆಯ ಷಷ್ಟ ಭಾವಕ್ಕೆ  ಶತೃಗಳ ಕಾಟವಿರುವುದಿಲ್ಲ, ಆರೋಗ್ಯ ಕೆಟ್ಟರೂ ಬೇಗ ಸುಧಾರಣೆಯಾಗುತ್ತದೆ.
    ಶುಕ್ರನು ಸಹೋದ್ಯೋಗಿಗಳು ಮತ್ತು  ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು  ಸೂಚಿಸಬಹುದು. ಇದು ಕೆಲಸದ ಸ್ಥಳದಲ್ಲಿ  ಸೌಂದರ್ಯದ ಮೇಲೆ ಪ್ರಭಾವ ಬೀರಬಹುದು.
ಆರನೇ ಮನೆಯಲ್ಲಿ ಶುಕ್ರನು ದುರ್ಬಲನಾಗಿದ್ದರೆ,  ವ್ಯಕ್ತಿಯು ಸಂತಾನೋತ್ಪತ್ತಿ ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ಎದುರಿಸಬಹುದು.

ವೃಷಭರಾಶಿಯು ಸಪ್ತಮ ಭಾವವಾದಾಗ:--

       -ಸಪ್ತಮ ಭಾವದಲ್ಲಿ ಶುಕ್ರಗ್ರಹವಿದ್ದರೆ ಒಳ್ಳೆಯ ಸಂಗಾತಿಯನ್ನು ಪಡೆದು ಅದರ್ಶ ದಾಂಪತ್ಯವನ್ನು ನಡೆಸುತ್ತಾರೆಂದು ಹೇಳಲಾಗುತ್ತದೆ. ಉತ್ತಮ ಸಂಗಾತಿ, ಸುರೂಪಿಯಾದ ಸಂಗಾತಿ, ಉತ್ತಮ ವೈವಾಹಿಕ ಜೀವನ ಎಲ್ಲ ಇರುತ್ತೆ. ಸಪ್ತಮಾಧಿಪತಿಯಾದ ಶುಕ್ರ ಸ್ವರಾಶಿ ಅಥವಾ ಉಚ್ಚರಾಶಿಯಲ್ಲಿದ್ದರೆ ಸ್ತ್ರೀ ಸುಖವು ಸಂಪೂರ್ಣವಾಗಿರುತ್ತದೆ. ಶುಕ್ರನು ಬಲಿಷ್ಠನಾಗಿದ್ದು, ಶುಭಗ್ರಹಗಳಿಂದ ಯುಕ್ತ ಅಥವಾ ದೃಷ್ಟವಾಗಿದ್ದರೆ ಜಾತಕನು ಸೌಭಾಗ್ಯವಂತ, ಸಮರ್ಥ, ಧನವಂತ, ಮಾನವಂತನಾಗಿ ಸ್ತ್ರೀಸುಖ ಸಂಪನ್ನನಾಗಿರುತ್ತಾನೆ.

.ವೃಷಭರಾಶಿ ಅಷ್ಟಮ ಭಾವವಾದಾಗ:---

          ಲಗ್ನಾಧಿಪತಿಯು ಕೂಡಾ ಶುಕ್ರನೇ ಆಗುವುದರಿಂದ,  ಶುಕ್ರನು  ಅಷ್ಟಮದಲ್ಲೇ ಇದ್ದರೆ,    ಶಾರೀರಿಕ ಪೀಡೆ, ಅಲ್ಪಾಯಸ್ಸು, ಮಾತೃಗಂಡ ಇರುತ್ತೆ , ಜಾತಕರು ಸ್ವೇಚ್ಛಾಚಾರಿ ಆಗುವ ಸಾಧ್ಯತೆ. ಜನನೇಂದ್ರಿಯ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತೆ. 

ವೃಷಭ ರಾಶಿ ಭಾಗ್ಯಭಾವವಾದಾಗ:---

         ಎಲ್ಲ ರೀತಿಯ ಸುಖಭೋಗಗಳೂ ಲಭಿಸುತ್ತವೆ, ದ್ವಿತೀಯ ಹಾಗೂ ಭಾಗ್ಯಾಧಿಪತಿಯಾದ ಶುಕ್ರ ಐಷಾರಾಮಿ ಸವಲತ್ತುಗಳನ್ನು ಕೊಡುತ್ತಾನೆ, ಜಾತಕರು ಆಚಾರವಂತರು, ಸ್ವಮತಾಭಿಮಾನಿ ಆಗಿರ್ತಾರೆ, ಸಕಲಕಲಾ ವಲ್ಲಭರೂ ಆಗಿರ್ತಾರೆ.
  ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣಯೋಗ, ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ, ದೇಶ ಭಕ್ತರಾಗಿರುತ್ತಾರೆ. 
         
 ವೃಷಭ ರಾಶಿ ದಶಮ ಭಾವವಾದಾಗ :--
 
         ಚಿನ್ನಾಭರಣಗಳ ವ್ಯಾಪಾರ ವ್ಯವಹಾರದಲ್ಲಿ ಗಳಿಕೆ, ಹೋಟೆಲ್ ಉದ್ಯಮ, ಕೃಷಿ,  ಶೃಂಗಾರ ಸಾಧನಗಳ, ವಸ್ತ್ರಾಭರಣಗಳ ಉದ್ಯಮದಲ್ಲಿ ಯಶಸ್ಸು, ಕಲೆಗೆ ಸಂಬಂಧಪಟ್ಟ ಯಾವುದೇ ರೀತಿಯ ಉದ್ಯೋಗ ಯಶಸ್ಸನ್ನು ಲಾಭವನ್ನು ತಂದುಕೊಡುತ್ತೆ. ವಾಹನ ವ್ಯಾಪಾರಿಗಳಾಗಿರುತ್ತಾರೆ, ಕಲಾವಿದರಾಗಿರುತ್ತಾರೆ, ವಿದ್ಯುನ್ಮಾನ ಕ್ಷೇತ್ರದಲ್ಲಿ ಅಥವಾ ಮಾಧ್ಯಮಗಳಲ್ಲಿ ವೃತ್ತಿಯನ್ನು ನಿರ್ವಹಿಸುತ್ತಾರೆ. ಕಾರ್ಯಕ್ಷೇತ್ರದಲ್ಲಿ ಗೌರವವನ್ನೂ, ಕೀರ್ತಿಯನ್ನೂ ಸಂಪಾದಿಸುತ್ತಾರೆ.  ವಿದ್ಯಾಭಂಗವಾಗುತ್ತೆ.

ವೃಷಭರಾಶಿ ಲಾಭಭಾವವಾದಾಗ:--

        ಸ್ತ್ರೀಯರಿಂದಲೇ  ತೊಂದರೆ, ಜಾತಕರು ಹಣವಂತರು,  ಪಂಡಿತರು,  ಕೃಷಿಯಿಂದ ಕೂಡ ಲಾಭ, ಜಾತಕರಿಗೆ ಹಿರಿಯ ಸಹೋದರಿ ಇರ್ತಾರೆ, ವಾಹನ ಲಾಭ, ಉತ್ತಮ ಸ್ನೇಹಿತರು ಇರ್ತಾರೆ, ಶತೃಗಳ ಮೇಲೆ ವಿಜಯ, ಶುಕ್ರನೂ ಅಲ್ಲೇ ಸ್ಥಿತನಾಗಿದ್ದರೆ  ಕಲೆಯಿಂದ ಲಾಭ, ಸೌಂದರ್ಯ ವರ್ಧಕಗಳಿಂದ ಲಾಭ. 
ಸಜ್ಜನರ ಸ್ನೇಹ, ಪುಣ್ಯ ಸಂಪಾದನೆ, ಯಾವುದೇ ವ್ಯಾಪಾರ ಮಾಡಿದರೂ ಲಾಭ, ಮುಖ್ಯವಾಗಿ ರತ್ನಪಡಿ ವ್ಯಾಪಾರ, ವಾಹನ ವ್ಯಾಪಾರ, ವಿದ್ಯುನ್ಮಾನ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪಾರ, ಅಲಂಕಾರಿಕ ವಸ್ತುಗಳ ವ್ಯಾಪಾರ, ಹೂವು -  ಸುಗಂಧ ದ್ರವ್ಯ ವ್ಯಾಪಾರ ಮೊದಲಾದವುಗಳಲ್ಲಿ ಅಧಿಕ ಲಾಭಗಳಿಸುತ್ತಾರೆ

ವೃಷಭರಾಶಿ ವ್ಯಯ ಭಾವವಾದಾಗ:---

          ಐಷಾರಾಮಿ ವಸ್ತುಗಳಿಗಾಗಿ ಖರ್ಚು ಮಾಡುತ್ತಾರೆ.  ಭೋಗವಸ್ತುಗಳಿಗಾಗಿ ಧನವ್ಯಯಿಸುತ್ತಾರೆ, ಶಯನಸುಖೀಗಳಾಗಿರುತ್ತಾರೆ. ಐಷಾರಾಮಿಗಳಾಗಿ ಜೀವಿಸುತ್ತಾರೆ. ವೃಷಭ  ರಾಶಿಯಲ್ಲಿರುವ  ಶುಕ್ರನಿಗೆ ಪಾಪ ಸಂಬಂಧವೇನಾದ್ರೂ ಬಂದ್ರೆ ಜಾತಕರು ವ್ಯಭಿಚಾರಿಯಾಗುವ ಸಂಭವವೂ ಉಂಟು.

ವೃಷಭ ರಾಶಿಯಲ್ಲಿ  ಗ್ರಹಗಳು ಸ್ಥಿತರಾದಾಗ:--

ಸೂರ್ಯ:--  ಜಾತಕರು ತೀಕ್ಷ್ಣ ಬುದ್ಧಿಯುಳ್ಳವರು, ಚಾಣಾಕ್ಷರು, ಆಕರ್ಷಕ ವ್ಯಕ್ತಿತ್ವ, ವೈಭವೋಪೇತ ಜೀವನ ನಡೆಸುವವರು, ರಚನಾತ್ಮಕ ಕೆಲಸ ಮಾಡುವವರು, ರಾಜ ಸಮಾನರು, ಉನ್ನತ ಪದವಿಯಲ್ಲಿರುವವರು, ಸಂಶೋಧಕರು, ಸದಾ ಹೊಸತನ್ನು ಹುಡುಕುವ ಸ್ವಭಾವ, ಕವಿಗಳೂ ಕಲಾಕಾರರೂ ಆಗುತ್ತಾರೆ.

ಚಂದ್ರ:-- ಸುಂದರರೂ, ಆಕರ್ಷಕ ವ್ಯಕ್ತಿತ್ವ, ಮನಃಶಾಸ್ತ್ರಜ್ಞರು, ಸಂಗೀತ ಬಲ್ಲವರು,  ಆತ್ಮ ಶುದ್ಧಿ ಉಳ್ಳವರು, ತಾಯಿಯನ್ನು ಕಂಡರೆ ಪ್ರೀತಿ ಗೌರವ,  ಆಶ್ರಯದಾತರು,  ಉತ್ತಮ ತುಂಬಿದ ಸಂಸಾರ ಉಳ್ಳವರು, ಐಷಾರಾಮಿ ಮನೆ ವಾಹನಗಳನ್ನು ಹೊಂದಿರುವವರು, ಪ್ರಯಾಣ ಪ್ರಿಯರೂ, ರಚನಾತ್ಮಕ ಸ್ವಭಾವ, ಅಲಂಕಾರಿಕ ವಸ್ತುಗಳಲ್ಲಿ ಆಸಕ್ತಿ, ಸಂಶೋಧನೆ,  ಅನ್ವೇಷಣೆಯಲ್ಲಿ ಆಸಕ್ತಿ.

ಕುಜ:-- ಉತ್ತಮ ಸೇವಾ ನಾಯಕರು, ಕ್ರೀಡಾಪಟುಗಳು, ಆಕ್ರಮಣಕಾರಿ ಪ್ರವೃತ್ತಿ ಉಳ್ಳವರು, ಅಹಂಕಾರಿಗಳು, ಕಲಹಪ್ರಿಯರು, ಸಹೋದರರೊಡನೆ ಕಲಹ,  ಉನ್ನತ ಪದವಿ , ಸ್ವಯಂಪ್ರೇರಿತವಾಗಿ ಕೆಲಸ ಮಾಡುವವರು,  ಶಕ್ತಿಶಾಲಿಗಳು ಆಗಿರ್ತಾರೆ.

ಬುಧ:--  ಗಣಿತಜ್ಞರು, ಹಣಕಾಸಿನ ವಿಚಾರದಲ್ಲಿ ಉತ್ತಮ ಜ್ಞಾನಉಳ್ಳವರು, ಕಾರ್ಯಕೌಶಲ್ಯತೆ ಇರುತ್ತೆ, ಬರಹಗಾರರು, ಉತ್ತಮ ಸಂಪಾದಕರೂ ಆಗಿರ್ತಾರೆ,  ಲಘುಹಾಸ್ಯ ಇರುತ್ತೆ, ಸಂಶೋಧನೆಯಲ್ಲಿ ಆಸಕ್ತಿ, ಉತ್ತಮ  ಶಿಕ್ಷಣ ಪಡೆದವರೂ,  ಶಿಕ್ಷಕರೂ ಆಗಿರುತ್ತಾರೆ, ಹಣ ಹೂಡಿಕೆಗಳಲ್ಲಿ  ಆಸಕ್ತಿ, ಸಾಮಾಜಿಕ ಜಾಲತಾಣದಲ್ಲಿ ಉತ್ತಮ ನಿರ್ವಹಣಾಕಾರರೂ, ಬ್ಯಾಂಕಿಂಗ್ ವ್ಯವಹಾರ ಚತುರರೂ ಆಗಿರುತ್ತಾರೆ.

ಗುರು:-- ಜ್ಞಾನಿಗಳು, ಧಾರ್ಮಿಕ ವ್ಯಕ್ತಿಗಳು, ಆಕರ್ಷಕ ಹಾಗೂ ಧಾರ್ಮಿಕ ಪ್ರವೃತ್ತಿಯ ಸಂಗಾತಿ ಇರುತ್ತಾರೆ,  ಸುಂದರ ಸುಶೀಲ ಮಕ್ಕಳಿರ್ತಾರೆ, ಕೃಷಿ ಚಟುವಟಿಕೆಯನ್ನೂ ಇಷ್ಟಪಡ್ತಾರೆ. ಸಂಗೀತ ಕಲಾ ಪ್ರೇಮಿಗಳೂ ಆಗಿರ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧರಾಗಿರ್ತಾರೆ. ಭೂಮಿ ವ್ಯವಹಾರದ ಮದ್ಯವರ್ತಿಗಳೂ ಆಗುವ ಸಂಭವ ಇರುತ್ತೆ.

ಶುಕ್ರ:--  ಆಕರ್ಷಕ ಸಂಗಾತಿಯನ್ನು ಹೊಂದಿರುತ್ತಾರೆ,  ಐಷಾರಾಮಿ ಜೀವನ, ಉತ್ತಮ ಆಹಾರವಸ್ತುಗಳನ್ನು ಇಷ್ಟಪಡ್ತಾರೆ, ಪ್ರಸಿದ್ಧ ಸ್ಥಳಗಳನ್ನು ಇಷ್ಟಪಡ್ತಾರೆ,  ಸಾಮೂಹಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೀತಾರೆ, ಗೃಹಾಲಂಕಾರ, ಚಿತ್ರಕಲೆಗಳಲ್ಲಿ ಆಸಕ್ತಿ, ಆಭರಣಗಳು ಹಾಗೂ ವಸ್ತ್ರಗಳಲ್ಲಿ ವಿಶೇಷ ಆಸಕ್ತಿ,  ತುಂಬಾ ಕನಸ್ಸುಗಳುಳ್ಳವರು,  ಉತ್ತಮ ಯೋಜನೆಗಳನ್ನು ರೂಪಿಸುವುದರಲ್ಲಿ ಆಸಕ್ತರು ಆಗಿರ್ತಾರೆ. ಕೃತಿಕಾ ನಕ್ಷತ್ರದಲ್ಲಿ ಶುಕ್ರ ಸ್ಥಿತನಾಗಿದ್ದರೆ, ವೈವಾಹಿಕ ಜೀವನದಲ್ಲಿ ಕಲಹ ಇರುತ್ತೆ.

ಶನೈಶ್ಚರ:--  ಉತ್ತಮ ಕೆಲಸಗಾರರು, ನಿಧಾನ ಫಲಿತಾಂಶ.! ಕಷ್ಟಜೀವಿಗಳು, ತಾಳ್ಮೆ ಕಡಿಮೆ, ಕಷ್ಟಪಟ್ಟು ಸಂಪಾದಿಸಿದರೂ ಹಣಕಾಸಿನ ವಿಷಯದಲ್ಲಿ ತೊಂದರೆ, ಮಾನಸಿಕವಾಗಿಯೂ ಕಷ್ಟ ಅನುಭವಿಸುತ್ತಾರೆ. ಕಡಿಮೆ ಮಾತು, ನಿಧಾನವಾಗಿ ಅಭಿವೃದ್ಧಿ. ಕೆಲಸಕಾರ್ಯಗಳಲ್ಲಿ ಅಡೆತಡೆ,  ಸಂತಾನವಾಗುವುದೂ ಕೂಡ ನಿಧಾನ.

ರಾಹು:--  ಜಾತಕರು  ಸಿಡುಕರು, ಆಕ್ರಮಣಕಾರಿ ಪ್ರವೃತ್ತಿ ಉಳ್ಳವರು, ಶಕ್ತಿಶಾಲಿಗಳು, ಆಸ್ತಿಪಾಸ್ತಿ ಉಳ್ಳವರು, ಶ್ರೀಮಂತರೂ ಆಗಿರ್ತಾರೆ, ಕುಟುಂಬದಲ್ಲಿ ಕಲಹ ಉಳ್ಳವರು, ವಿದೇಶದಿಂದ ಹಣದ ಆಗಮನ, ಭೂತಪ್ರೇತದ ಬಗ್ಗೆ ಆಸಕ್ತಿ, ಮಂತ್ರ ತಂತ್ರವಿದ್ಯೆಗಳಲ್ಲಿ ಆಸಕ್ತಿ ಇರುತ್ತೆ, ಇಂದ್ರಜಾಲ, ಮ್ಯಾಜಿಕ್ ಮಾಡಲು ಇಷ್ಟಪಡುತ್ತಾರೆ, ಹೊಸತರ ಹುಡುಕಾಟದಲ್ಲಿ ಆಸಕ್ತಿ, ಹಾಗೆಯೇ ಗುರಿ ತಲುಪುವುದರಲ್ಲಿ ಶಕ್ತರಾಗ್ತಾರೆ.

ಕೇತು:--  ತೀಕ್ಷ್ಣಬುದ್ಧಿ ಉಳ್ಳವರು ಉತ್ತಮ ಸಂಶೋಧಕರು, ಜ್ಞಾನಿಗಳು, ಸೂಕ್ಷ್ಮ ತಪ್ಪುಗಳನ್ನೂ ಹುಡುಕುವ ಜಾಣ್ಮೆ ಇರುತ್ತೆ,  ಆಧ್ಯಾತ್ಮಿಕ ಚಿಂತನೆ ಇರುತ್ತೆ,   ಕುಟುಂಬದಲ್ಲಿ ಕಲಹ, ತಾಯಿಯಿಂದ ಬೇರ್ಪಡುವ ಸಂಭವವೂ ಬರಬಹುದು , ಪೂರ್ವಜನ್ಮದ ನೆನಪುಗಳು ಬರಬಹುದು, ಮೋಕ್ಷದ ಬಗ್ಗೆ ಚಿಂತನೆ ಇರುತ್ತೆ, ಭೌತಿಕ ಪ್ರಪಂಚದಲ್ಲಿ ನಿರಾಸಕ್ತಿ, ಹಣ ಐಷಾರಾಮಿ ವಸ್ತುಗಳಲ್ಲಿ ನಿರಾಸಕ್ತಿ,  ಒಂಟಿಯಾಗಿರಲು ಬಯಸ್ತಾರೆ, 

ವೃಷಭ ರಾಶಿಯಲ್ಲಿ ಹುಟ್ಟಿದ ಮಹಾನ್ ವ್ಯಕ್ತಿಗಳ ಜಾತಕವನ್ನು ಪರಿಶೀಲಿಸೋಣ

ಮೊದಲಿಗೆ ಭಗವಾನ್ ಶ್ರೀಕೃಷ್ಣ ಪರಮಾತ್ಮ

          ಭಗವಾನ್ ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಬುಧವಾರ ರೋಹಿಣಿ ನಕ್ಷತ್ರದಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಜನಿಸಿದನು. ಭಗವಾನ್ ಶ್ರೀಕೃಷ್ಣನು  ಮೂರು ಗುಣಗಳಾದ ಸದ್ಗುಣ, ರಜೋಗುಣ ಮತ್ತು ತಮೋಗುಣಗಳ ಪ್ರತೀಕವಾಗಿದ್ದಾನೆ.

 ಪರಿತ್ರಾಣಾಯ ಸಾಧೂನಾಮ್, 
ವಿನಾಶಯ ಚ ದುಷ್ಕೃತಾಮ್, 
ಧರ್ಮ-ಸಂಸ್ಥಾಪನಾರ್ಥಾಯ 
ಸಂಭವಾಮಿ ಯುಗೇ, ಯುಗೇ

ಅಂತಲೇ, ಅಧರ್ಮವ ಅಳಿಸಿ ಧರ್ಮ ಸಂಸ್ಥಾಪನೆಗೋಸ್ಕರವೇ ಭುವಿಗಿಳಿದ ಭಗವಂತ ಶ್ರೀಕೃಷ್ಣ ಪರಮಾತ್ಮ ಹುಟ್ಟಿದ್ದು ವೃಷಭರಾಶಿ ಹಾಗೂ ವೃಷಭ ಲಗ್ನದಲ್ಲೇ..!

ಹುಟ್ಟಿದ ದಿನಾಂಕ:  ಕ್ರಿಸ್ತಪೂರ್ವ 3229ನೇ ಇಸವಿ ಆಗಸ್ಟ್ ತಿಂಗಳ  17/18 ಮಧ್ಯರಾತ್ರಿ. ಜನ್ಮಸ್ಥಳ ಮಥುರಾ
ಶ್ರಾವಣ ಮಾಸದ ಕೃಷ್ಣ ಅಷ್ಟಮಿ ತಿಥಿ
ವೃಷಭ ಲಗ್ನ
ರೋಹಿಣಿ ನಕ್ಷತ್ರದಲ್ಲಿ ದೇವಕಿ ವಸುದೇವರ ಅಷ್ಟಮ ಪುತ್ರನಾಗಿ ಜನನ.


              ಚಂದ್ರನು ವೃಷಭರಾಶಿಯಲ್ಲಿ ಉಚ್ಚನಾಗಿ ಜನ್ಮ ಲಗ್ನದಲ್ಲಿದ್ದಾನೆ, ಶ್ರೀಕೃಷ್ಣ ಅತ್ಯಂತ ಸುಂದರ, ಇತರರನ್ನು ಸಮ್ಮೋಹನ ಗೊಳಿಸುವಂಥ ಆಕರ್ಷಕ ರೂಪ ಕೃಷ್ಣನದ್ದು. ಉದಾತ್ತ ಮತ್ತು ಉದಾರಿ, ಮತ್ತು ರಾಜ ಸೌಕರ್ಯಗಳನ್ನು ಅನುಭವಿಸುತ್ತಾನೆ. ಕೃಷ್ಣ ಸಕಲ ಕಲಾವಲ್ಲಭ,  ಗೋವುಗಳಾದಿಯಾಗಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸುವಂಥ ಅದ್ಭುತ ವೇಣು ವಾದಕ..!  ಜೊತೆಗೆ ಅದ್ಭುತ ನೃತ್ಯಪಟುವೂ ಹೌದು.
ಲಗ್ನಾತ್ ವ್ಯಯಾಧಿಪತಿ ಮಂಗಳ ಉಚ್ಚನಾಗಿ ವ್ಯಯಸ್ಥಾನವನ್ನು ನಾಲ್ಕನೇ ದೃಷ್ಟಿಯಲ್ಲಿ ನೋಡಿರುವುದರಿಂದ ಕಾರಾಗೃಹದಲ್ಲಿ ಜನನ. ಜೊತೆಗೆ ತಂದೆತಾಯಿಗಳಿಂದ ದೂರವಾಗಬೇಕಾಯ್ತು. ಸಿಂಹದ  ರವಿಗೆ ಕುಜನ ವಿಶೇಷ ಅಷ್ಟಮ  ದೃಷ್ಟಿ ಇದೆ. ಕೃಷ್ಣನ ತಂದೆ ಅನೇಕ ಸಂಕಷ್ಟ ಅನುಭವಿಸಿರುತ್ತಾರೆ
 ಲಾಭಾಧಿಪತಿಯಾದ ಗುರು ತೃತೀಯದಲ್ಲಿ  ಉಚ್ಛನಾಗಿರುವುದರಿಂದ ಸೋದರ ಬಲರಾಮ ವೀರಾಗ್ರೇಸರ ಪರಾಕ್ರಮಿ. . ಅಷ್ಟಮದಲ್ಲಿನ ರಾಹುವಿನಿಂದ ಜೀವನದಲ್ಲಿ ಕೃಷ್ಣ ಭಾರೀ ಕಷ್ಟ ಅನುಭವಿಸಿದ್ದಾನೆ.  ಲಗ್ನಾಧಿಪತಿ ಶುಕ್ರ 6 ನೇ ಮನೆಯಲ್ಲಿ, ಶುಕ್ರ- ಶನಿ ಯೋಗದಲ್ಲಿ ಅನೇಕ ಪತ್ನಿಯರು ಈತನಿಗಿದ್ದು, ಶ್ಯಾಮಲ ವರ್ಣದವನಾಗಿರುತ್ತಾನೆ. ಪಂಚಮದ ಕನ್ಯಾದಲ್ಲಿ ಬುಧ ಉಚ್ಛ, ದೈವಸ್ವರೂಪಿ, ಅನೇಕ ಅವತಾರ ಎತ್ತಿದವನಾಗಿರುತ್ತಾನೆ. 
ತಾಳ್ಮೆ, ಸಂಯಮ ಮತ್ತು ಕ್ಷಮಾಗುಣ ಕೃಷ್ಣನ ವ್ಯಕ್ತಿತ್ವದ ವಿಶೇಷ.. ಅನೇಕಬಾರಿ ಕ್ಷಮಿಸಿದರೂ.. ಬುದ್ಧಿ ಕಲಿಯದ ಮೇಲೆಯೇ ಆತ ಶತ್ರುದಮನಕ್ಕೆ ನಿಂತದ್ದು.

        ಮಹಾಭಾರತದ  ಪಾಂಡವರಲ್ಲಿ ಒಬ್ಬನಾದ ಭೀಮಸೇನ ಕೂಡ ರೋಹಿಣಿ ನಕ್ಷತ್ರ ವೃಷಭರಾಶಿಯಲ್ಲಿಯೇ ಹುಟ್ಟಿದ್ದು.  ದೇಹದಾರ್ಢ್ಯತೆ, ಒಳ್ಳೆಯ ಮನಃಸ್ಥೈರ್ಯ, ಶತ್ರುದಮನ,  ಯಾವುದೇ ಕಷ್ಟದ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸುವ ಕಲೆಗೆ ಭೀಮ ಹೆಸರುವಾಸಿ.

         ವೃಷಭರಾಶಿಯಲ್ಲಿ ಹುಟ್ಟಿದ ಇನ್ನೊಬ್ಬ ಪ್ರತಿಷ್ಠಿತ ವ್ಯಕ್ತಿ ಬರಾಕ್ ಒಬಾಮ
ಈತ  ಹುಟ್ಟಿದ್ದು
4 ನೇ ಆಗಸ್ಟ್ 1961ರಲ್ಲಿ
ಸಮಯ ಸಂಜೆ  7 - 24 ಗಂಟೆ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಹವಾಯ್ ನಲ್ಲಿ
ಜನ್ಮ  ನಕ್ಷತ್ರ ಕೃತಿಕಾ 3ನೇ ಪಾದ  ವೃಷಭರಾಶಿ
    ಇವರು ಅಮೆರಿಕ ಸಂಯುಕ್ತ ಸಂಸ್ಥಾನದ 44 ನೆ ರಾಷ್ಟ್ರಪತಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಸಮರ್ಥವಾಗಿ ಆಡಳಿತ ನಡೆಸಿದರು, 48 ರ ಚಿಕ್ಕ ಪ್ರಾಯದಲ್ಲಿಯೇ ಪ್ರತಿಷ್ಠಿತ ನೊಬೆಲ್ ಶಾಂತಿಪ್ರಶಸ್ತಿ ಯನ್ನು ಪಡೆದವರು. ಇವರ ಜಾತಕದಲ್ಲಿ, ಉಚ್ಚರಾಶಿಯಲ್ಲಿನ ಚಂದ್ರ ಶಿಸ್ತಿನ ಉನ್ನತ ಮಟ್ಟದ ಆಲೋಚನೆ ಜೊತೆಗೆ ಒಳ್ಳೆಯ ಚಿಂತನೆಯನ್ನು ಕೊಟ್ಟು, ಬಲವಾದ ಮನಸ್ಸಿನೊಂದಿಗೆ ಪಕ್ಷಪಾತವಿಲ್ಲದ ಉತ್ತಮ ನಿರ್ಧಾರಗಳನ್ನು ಕೈಗೊಂಡು, ಯೋಜಿಸಿ, ವಿಮರ್ಶಿಸಿ ಆಡಳಿತವನ್ನು ನಡೆಸುವ ಸಾಮರ್ಥ್ಯವನ್ನು ಕೊಟ್ಟಿದೆ.

      20ನೇ  ಶತಮಾನದ ಪ್ರಸಿದ್ಧ ಜ್ಯೋತಿಷಿ,    ಜ್ಯೋತಿಷ್ಯ ಶಾಸ್ತ್ರದ ಭೀಷ್ಮ ಪಿತಾಮಹರೆನಿಸಿರುವ, ಜ್ಯೋತಿಷ್ಯ ಒಂದು ವಿಜ್ಞಾನ ಎಂದು ಪ್ರತಿಪಾದಿಸಿರುವ  ಶ್ರೀಮಾನ್ B.V.ರಾಮನ್ ಸರ್  ರವರು ಹುಟ್ಟಿದ್ದೂ ಸಹ ವೃಷಭರಾಶಿಯಲ್ಲೇ..

ಜನ್ಮದಿನಾಂಕ  8 ನೇ ಆಗಸ್ಟ್ 1912
ಸಮಯ 7 - 40 pm
ಬೆಂಗಳೂರು

ಮೃಗಶಿರ ನಕ್ಷತ್ರ ಪ್ರಥಮ ಚರಣ, ವೃಷಭರಾಶಿ ಯಲ್ಲಿ ಹುಟ್ಟಿದ ಇವರು ಎಂಥಹ ಮಹಾನ್ ಜ್ಯೋತಿಷಿಗಳು ಅಂತ ಜ್ಯೋತಿಷ್ಯ ಶಾಸ್ತ್ರ ಅಭ್ಯಾಸ ಮಾಡುವ ಎಲ್ಲರಿಗೂ ಗೊತ್ತೇ ಇದೆ.
ಇವರು ವೈದಿಕ ಜ್ಯೋತಿಷ್ಯ ( ಪರಾಶರ ಪದ್ಧತಿ) ಅಥವಾ ಹಿಂದೂ ಜ್ಯೋತಿಷ್ಯ ಶಾಸ್ತ್ರವನ್ನು  ಭಾರತದಾದ್ಯಂತ ಹಾಗೂ ಪ್ರಪಂಚದಾದ್ಯಂತ ತಿಳಿಯ ಪಡಿಸುವಲ್ಲಿ ಮತ್ತು ಗೌರವಿಸುವಲ್ಲಿ   ಪ್ರಮುಖ ಪಾತ್ರ ವಹಿಸಿದ್ದರು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಜ್ಞಾನವನ್ನು ಉತ್ತೇಜಿಸಲು ರಾಮನ್ ಮತ್ತು ರಾಜೇಶ್ವರಿ ರಿಸರ್ಚ್ ಫೌಂಡೇಶನ್ ಹಾಗೂ "ದಿ ಆಸ್ಟ್ರೋಲಾಜಿಕಲ್ ಮ್ಯಾಗಜೀನ್" ಅನ್ನು ಸಹ ಪ್ರಾರಂಭಿಸಿದರು.  
       B.V ರಾಮನ್ ರವರು ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ ನಡೆದ ಜ್ಯೋತಿಷ್ಯ  ಮತ್ತು ನ್ಯೂಯಾರ್ಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದರು.
     B.V ರಾಮನ್ ಒಬ್ಬ ಧೈರ್ಯವಂತ, ಅಂತಃಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿ,  ಉತ್ತಮ ಓದುಗ, ಆಳವಾದ ಅಧ್ಯಯನದಿಂದ ಅನೇಕ ವಿಷಯಗಳ ಬಗ್ಗೆ ವಿಶೇಷವಾದ ಜ್ಞಾನ ಹೊಂದಿದ್ದರು, ಕಾನೂನು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದರು.  ಇವರಿಗೆ ಅತೀಂದ್ರಿಯ ಶಕ್ತಿ       ( intuition) ಇತ್ತು. ಇವರು ಮಹಾನ್ ಬುದ್ಧಿಜೀವಿಗಳು. ಹಾಗೆಯೇ ಇವರು ಅತ್ಯುತ್ತಮ ಬರಹಗಾರರೂ ಕೂಡ ಹೌದು, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ಅವುಗಳೆಂದರೆ....
★ಮಾನವ ವ್ಯವಹಾರಗಳ ಮೇಲೆ ಗ್ರಹಗಳ ಪ್ರಭಾವ
★ಹಿಂದೂ ಜ್ಯೋತಿಷ್ಯದ ಕೈಪಿಡಿ
★ಮುನ್ನೂರು ಪ್ರಮುಖ ಸಂಯೋಜನೆಗಳು
★ಜಾತಕವನ್ನು ಹೇಗೆ ನಿರ್ಣಯಿಸುವುದು (2 ಸಂಪುಟಗಳಲ್ಲಿ)
★ಹಿಂದೂ ಭವಿಷ್ಯ ಹೇಳುವ ಜ್ಯೋತಿಷ್ಯ
★ಆರಂಭಿಕರಿಗಾಗಿ ಜ್ಯೋತಿಷ್ಯ
★ಗ್ರಹ ಮತ್ತು ಭಾವ ಬಲಗಳು
★ಪ್ರಶ್ನ ತಂತ್ರ (ಹೋರಾರಿ ಜ್ಯೋತಿಷ್ಯ)-ಬಿವಿ ರಾಮನ್ ಅನುವಾದಿಸಿದ್ದಾರೆ
★ಅಷ್ಟಕವರ್ಗ ಮುನ್ಸೂಚನೆ ವ್ಯವಸ್ಥೆ
★ಹಿಂದೂ ಜ್ಯೋತಿಷ್ಯ ಮತ್ತು ಪಶ್ಚಿಮ
ಹವಾಮಾನ ಮತ್ತು ಭೂಕಂಪಗಳನ್ನು ಊಹಿಸುವಲ್ಲಿ ಜ್ಯೋತಿಷ್ಯ
★ಜ್ಯೋತಿಷ್ಯದಲ್ಲಿ ನನ್ನ ಅನುಭವಗಳು
★ವರ್ಷಫಲ್ ಅಥವಾ ಹಿಂದೂ ಪ್ರಗತಿಯ ಜಾತಕ
★ಭಾವಾರ್ಥ ರತ್ನಾಕರ
★ಜ್ಯೋತಿಷ್ಯಶಾಸ್ತ್ರದ ಕ್ಯಾಟೆಕಿಸಂ
★ಮುಹೂರ್ತ (ಚುನಾವಣಾ ಜ್ಯೋತಿಷ್ಯ)
★ಗಮನಾರ್ಹ ಜಾತಕಗಳು
★ಜೈಮಿನಿ ಜ್ಯೋತಿಷ್ಯದಲ್ಲಿ ಅಧ್ಯಯನ
★ಪ್ರಶ್ನ ಮಾರ್ಗ (2 ಸಂಪುಟಗಳಲ್ಲಿ)-ಹೊರರಿ ಜ್ಯೋತಿಷ್ಯದ ಅನುವಾದ
        ಇಂತಹ  ಅದ್ಭುತ ಜ್ಯೋತಿಷ್ಯ ಶಾಸ್ತ್ರದ  ಗ್ರಂಥಗಳನ್ನು ಬರೆದ B.V.ರಾಮನ್ ಸರ್ ಹುಟ್ಟಿದ್ದು ವೃಷಭರಾಶಿಯಲ್ಲಿಯೇ.

        ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ವಿದ್ವನ್ಮಣಿಗಳು, ದಾರ್ಶನಿಕರು, ಕವಿಗಳು, ವೃಷಭರಾಶಿಯಲ್ಲಿ ಹುಟ್ಟಿದ್ದಾರೆ.

       ಡಾ: B. N ಶೈಲಜಾ ರಮೇಶ್